ಆಲಿಯಾ ಭಟ್ ನಟನೆಯ ‘ಆಲ್ಫಾ’ ಚಿತ್ರದ ಹಿಂಸಾತ್ಮಕ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ – Kannada News | Alia Bhatt Sharvari Spy Thriller Alpha movie gets UA 16 plus Certificate after CBFC cuts

ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಭಾರಿ ನಿರೀಕ್ಷೆ ಮೂಡಿಸಿರುವ ಸ್ಪೈ ಥ್ರಿಲ್ಲರ್ ಕಥಾಹಂದರದ ‘ಆಲ್ಫಾ’ (Alpha) ಸಿನಿಮಾದ ಪ್ರದರ್ಶನಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಚಿತ್ರದಲ್ಲಿನ ಕೆಲವು ತೀವ್ರ ಹಿಂಸಾತ್ಮಕ ದೃಶ್ಯಗಳು ಮತ್ತು ಸಂಭಾಷಣೆಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದು, ಅಂತಿಮವಾಗಿ ‘U/A 16+’ ಪ್ರಮಾಣಪತ್ರವನ್ನು ನೀಡಿದೆ. ಜೂನ್ 29ರಂದು ನೀಡಿರುವ ಪ್ರಮಾಣೀಕರಣದ ಪ್ರಕಾರ, ಇಂಗ್ಲಿಷ್ ಉಪಶೀರ್ಷಿಕೆಗಳನ್ನು ಹೊಂದಿರುವ ಚಿತ್ರದ ಹಿಂದಿ ಆವೃತ್ತಿಗೆ ಈ ಸರ್ಟಿಫಿಕೇಟ್ ಸಿಕ್ಕಿದೆ. ಮಂಡಳಿ ಸೂಚಿಸಿದ ಹಲವು ಬದಲಾವಣೆಗಳನ್ನು ಚಿತ್ರತಂಡ ಅಳವಡಿಸಿಕೊಂಡ ನಂತರವೇ ಈ ಅನುಮತಿ ನೀಡಲಾಗಿದೆ.

ಸೆನ್ಸಾರ್ ಮಂಡಳಿಯ ದಾಖಲೆಗಳ ಪ್ರಕಾರ, ‘ಆಲ್ಫಾ’ ಚಿತ್ರದಲ್ಲಿನ ಹಿಂಸಾತ್ಮಕ ದೃಶ್ಯಗಳು ಮತ್ತು ಭಾಷೆಯ ಬಳಕೆಗೆ ಪ್ರಮುಖವಾಗಿ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಚಿತ್ರದ ಯಾವುದೇ ದೃಶ್ಯವನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲಾಗಿಲ್ಲ. ಬದಲಾಗಿ, ಪರ್ಯಾಯ ದೃಶ್ಯಗಳನ್ನು ಬಳಸಲು ಮಂಡಳಿ ಅನುಮತಿ ನೀಡಿದೆ. ಚಿತ್ರದ 1 ಗಂಟೆ 36 ನಿಮಿಷ 41 ಸೆಕೆಂಡ್‌ಗಳಲ್ಲಿ ಬರುವ ಸರಣಿ ಚಾಕು ಇರಿತದ ಭೀಕರ ದೃಶ್ಯವನ್ನು ಪರ್ಯಾಯ ಶಾಟ್‌ಗಳನ್ನು ಬಳಸಿ ಅದರ ತೀವ್ರತೆ ಕಡಿಮೆ ಮಾಡಲಾಗಿದೆ.

ದೃಶ್ಯ ಮತ್ತು ಪದಗಳ ಬದಲಾವಣೆಗಳೂ ಸೂಚಿಸಲಾಗಿದೆ. ಚಿತ್ರದ 25ನೇ ನಿಮಿಷ ಹಾಗೂ 38ನೇ ನಿಮಿಷದಲ್ಲಿ ಬರುವ ಕೆಲವು ದೃಶ್ಯಗಳನ್ನು ಮಾರ್ಪಡಿಸಲಾಗಿದೆ. ಇನ್ನು 35ನೇ ನಿಮಿಷದಲ್ಲಿ ಬರುವ ಆಕ್ಷೇಪಾರ್ಹ ನಿಂದನಾತ್ಮಕ ಪದವೊಂದನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಜುಲೈ 3ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಕೇವಲ ದೃಶ್ಯಗಳಲ್ಲದೆ, ಚಿತ್ರದ ಆರಂಭದ ಡಿಸ್ಕ್ಲೈಮರ್ ಪರಿಷ್ಕರಿಸಲು ಮತ್ತು ಎಲ್ಲಾ ಹಾಡುಗಳಿಗೆ ಇಂಗ್ಲಿಷ್ ಸಬ್‌ಟೈಟಲ್‌ಗಳನ್ನು ಕಡ್ಡಾಯವಾಗಿ ಸೇರಿಸಲು ಸಿಬಿಎಫ್‌ಸಿ ಸೂಚಿಸಿದೆ. ಮದ್ಯಪಾನ ವಿರೋಧಿ ಶಾಸನಬದ್ಧ ಎಚ್ಚರಿಕೆಗಳನ್ನು ಪ್ರದರ್ಶಿಸುವುದು, ಬಾಲ ಕಲಾವಿದರ ಪೋಷಕರ ಒಪ್ಪಿಗೆ ಪತ್ರವನ್ನು ಸಲ್ಲಿಸುವುದು ಸೇರಿದಂತೆ ಕಾನೂನು ನಿಯಮಗಳನ್ನು ಪಾಲಿಸಲು ಚಿತ್ರತಂಡಕ್ಕೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ‘ಆಲ್ಫಾ’ ಟ್ರೇಲರ್ ರಿಲೀಸ್: ಲಂಕೆ ಸುಡಲು ಬಂದ ಆಧುನಿಕ ಸೀತೆ ಆಲಿಯಾ ಭಟ್

ಈ ಎಲ್ಲಾ ಬದಲಾವಣೆಗಳ ನಂತರ ‘ಆಲ್ಫಾ’ ಚಿತ್ರದ ಒಟ್ಟು ಅವಧಿ 140 ನಿಮಿಷ 48 ಸೆಕೆಂಡ್‌ಗಳು ಎಂದು ನಿಗದಿಪಡಿಸಲಾಗಿದೆ. ಅಂದರೆ ಈ ಸಿನಿಮಾ ಸುಮಾರು 2 ಗಂಟೆ 21 ನಿಮಿಷಗಳಷ್ಟು ಅವಧಿಯನ್ನು ಹೊಂದಿರಲಿದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವು ಯಶ್ ರಾಜ್ ಸ್ಪೈ ಯೂನಿವರ್ಸ್‌ನ ಅತ್ಯಂತ ಪ್ರಮುಖ ಸಿನಿಮಾವಾಗಿದ್ದು, ಸೆನ್ಸಾರ್ ಪ್ರಕ್ರಿಯೆ ಮುಗಿಯುವುದರೊಂದಿಗೆ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ – Kannada News | Sonu Srinivas Gowda talks about her old statement about Kannada people

ಸೋನು ಶ್ರೀನಿವಾಸ್ ಗೌಡ ಹಲವು ಕಾರಣಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಇವರು. ಬಿಗ್​​ಬಾಸ್​​ ಮನೆಗೂ ಹೋಗಿ ಬಂದಿದ್ದರು. ಹಿಂದೊಮ್ಮೆ ಕನ್ನಡದವರು ಬೆಂಬಲಿಸಲ್ಲ, ಬೆಳೆಸಲ್ಲ ಎಂದು ಹೇಳಿ ಸುದ್ದಿ ಆಗಿದ್ದರು. ಇದೀಗ ಸೋನು ಶ್ರೀನಿವಾಸ್ ಗೌಡ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ತಮ್ಮ ಹಳೆಯ ಹೇಳಿಕೆ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆಗ ತಾವು ಯಾವ ಕಾರಣಕ್ಕಾಗಿ ಅಂಥಹದ್ದೊಂದು ಹೇಳಿಕೆ ನೀಡಿದ್ದೆ ಎಂಬುದನ್ನು ಹೇಳಿದ್ದಾರೆ. ಹಾಗೂ ಈಗ ಮತ್ತೆ ಮರಳಿ ಬಂದಿದ್ದೇಕೆ ಎಂದು ಸಹ ಸೋನು ಶ್ರೀನಿವಾಸ್ ಗೌಡ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಡ್ರೈ ಐ ಸಮಸ್ಯೆಗೆ ಸ್ಕ್ರೀನ್ ಟೈಮ್ ಮಾತ್ರವಲ್ಲ, ಈ ಅಂಶಗಳು ಕೂಡ ಕಾರಣವಾಗಬಹುದು ಎಚ್ಚರ!

ಇತ್ತೀಚಿನ ದಿನಗಳಲ್ಲಿ ಕಣ್ಣು ಒಣಗುವ (Dry Eye) ಸಮಸ್ಯೆ ಸಾಮಾನ್ಯವಾಗಿದೆ. ಕಣ್ಣಿನಲ್ಲಿ ಸಾಕಷ್ಟು ನೀರು ಇರದಿದ್ದಾಗ ಅಥವಾ ಉತ್ಪತ್ತಿಯಾದ ಕಣ್ಣೀರು ಬೇಗ ಒಣಗಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ, ಚುಚ್ಚುವಿಕೆ, ಕೆಂಪಾಗುವುದು, ಮಬ್ಬಾಗಿ ಕಾಣುವುದು ಅಥವಾ ಕಣ್ಣಿನಲ್ಲಿ ಏನೋ ಸಿಕ್ಕಿಕೊಂಡಂತ ಅನುಭವ ಉಂಟಾಗಬಹುದು. ದೀರ್ಘಕಾಲ ನಿರ್ಲಕ್ಷಿಸಿದರೆ ದೈನಂದಿನ ಕೆಲಸಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಈ ಸಮಸ್ಯೆಗೆ ಕಾರಣವೇನು, ಸ್ಕ್ರೀನ್ ಟೈಮ್ (Screen Time) ನಿಂದ ಮಾತ್ರ ಈ ಸಮಸ್ಯೆ ಉಂಟಾಗುತ್ತದೆಯೇ ಅಥವಾ ಇದಕ್ಕೆ ಬೇರೆ ಕಾರಣಗಳಿವೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಣ್ಣು ಒಣಗುವುದಕ್ಕೆ ಕಾರಣಗಳೇನು?

ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗಳನ್ನು ಹೆಚ್ಚು ಸಮಯ ಬಳಸುವುದರಿಂದ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಕಣ್ಣಿನೊಳಗಿನ ಕಣ್ಣೀರಿನ ಪದರ ಬೇಗ ಒಣಗಬಹುದು. ಆದರೆ ಸ್ಕ್ರೀನ್ ಟೈಮ್ ಮಾತ್ರವೇ ಕಾರಣವಲ್ಲ. ವಯಸ್ಸಾಗುವುದು, ಕೆಲವು ಔಷಧಿಗಳ ಬಳಕೆ, ದೀರ್ಘಕಾಲ ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದು, ಆಟೋಇಮ್ಯೂನ್ ಕಾಯಿಲೆಗಳು, ಧೂಳು, ಹೊಗೆ, ಒಣ ವಾತಾವರಣ ಹಾಗೂ ಹಾರ್ಮೋನ್ ಬದಲಾವಣೆಗಳೂ ಈ ಸಮಸ್ಯೆಗೆ ಕಾರಣವಾಗಬಹುದು.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಏನ್ ಮಾಡ್ಬೇಕು? ನಿಮ್ಮ ದಿನಚರಿ ಆರೋಗ್ಯಕರವಾಗಿ ಆರಂಭವಾಗಲು ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಕಣ್ಣಿನಲ್ಲಿ ನಿರಂತರ ಉರಿ, ಚುಚ್ಚಿದಂತಹ ಅನುಭವ, ಕೆಂಪಾಗುವುದು, ಮಬ್ಬಾಗಿ ಕಾಣುವುದು, ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರುವುದು, ಕಣ್ಣಿನಲ್ಲಿ ಏನೋ ಸಿಕ್ಕಿಕೊಂಡಂತ ಅನುಭವ ಅಥವಾ ಅತಿಯಾಗಿ ನೀರು ಬರುವುದು ಕಂಡುಬಂದರೆ ತಕ್ಷಣ ಗಮನ ಹರಿಸಬೇಕು. ತೀವ್ರ ನೋವು ಅಥವಾ ದೃಷ್ಟಿ ಏಕಾಏಕಿ ಕಡಿಮೆಯಾದರೆ ಕಣ್ಣಿನ ತಜ್ಞರನ್ನು ಸಂಪರ್ಕಿಸುವುದು ಅಗತ್ಯ.

ಡ್ರೈ ಐ ಸಮಸ್ಯೆಯಿಂದ ಹೇಗೆ ರಕ್ಷಿಸಿಕೊಳ್ಳಬೇಕು?

ಸ್ಕ್ರೀನ್ ಬಳಸುವಾಗ ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳಿ ಮತ್ತು ಆಗಾಗ ಕಣ್ಣು ಮಿಟುಕಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ. ಧೂಳು, ಹೊಗೆ ಮತ್ತು ತೀವ್ರ ಗಾಳಿಯಿಂದ ಕಣ್ಣುಗಳನ್ನು ರಕ್ಷಿಸಿ. ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಐ ಡ್ರಾಪ್ಸ್ ಬಳಸಬಹುದು. ಸಮಸ್ಯೆ ಪದೇಪದೇ ಕಾಣಿಸಿಕೊಂಡರೆ ಅಥವಾ ದೀರ್ಘಕಾಲ ಮುಂದುವರಿದರೆ ಕಣ್ಣಿನ ತಜ್ಞರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಆರೋಗ್ಯಕರ ಅಭ್ಯಾಸಗಳು ಕಣ್ಣಿನ ಆರೋಗ್ಯ ಕಾಪಾಡಲು ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾವು ಪಾಕಿಸ್ತಾನಕ್ಕೆ ಸೇರಿದವರಲ್ಲ; ಇಸ್ಲಾಮಾಬಾದ್ ವಿರುದ್ಧ ಪಿಒಕೆ ಜನರ ಪ್ರತಿಭಟನೆ – Kannada News | POK is not part of Pakistan Protesters Warn Islamabad in rally over food blockade

ಇಸ್ಲಮಾಬಾದ್, ಜೂನ್ 30: ಪಿಒಕೆ (PoK) ವ್ಯಾಪ್ತಿಯ ಕಾಶ್ಮೀರದ ರಾವಲಾಕೋಟ್‌ನಲ್ಲಿ ಇಂದು 22ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಯಲ್ಲಿ ಸಾವಿರಾರು ಜನರು ಈ ಪ್ರದೇಶದ ಮೇಲಿನ ಪಾಕಿಸ್ತಾನದ ನಿಯಂತ್ರಣದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈದ್ಗಾ ಮೈದಾನದಲ್ಲಿ ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ ಪಿಒಕೆ ಮುಖಂಡರು, ಈ ಪ್ರದೇಶವನ್ನು ಇನ್ನು ಮುಂದೆ ಪಾಕಿಸ್ತಾನದ (Pakistan) ನಿಯಂತ್ರಣದಲ್ಲಿದೆ ಎಂದು ಪರಿಗಣಿಸಬಾರದು, ನಾವು ಪಾಕಿಸ್ತಾನದ ಭಾಗವಲ್ಲ. ನಮಗೆ ಪಾಕಿಸ್ತಾನದ ರೇಷನ್ ಅಗತ್ಯವಿಲ್ಲ, ಪಾಕಿಸ್ತಾನಕ್ಕೆ ನಮ್ಮ ಅಗತ್ಯವಿದೆ ಎಂದು ಹೇಳಿದ್ದಾರೆ. ಹಾಗೇ, ಪಾಕಿಸ್ತಾನದ ಇದೇ ವರ್ತನೆಯನ್ನು ಮುಂದುವರೆಸಿದರೆ ಭಾರತದೊಂದಿಗೆ ಬಲವಾದ ಬಾಂಧವ್ಯ ಬೆಳೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದ ಆಡಳಿತದ ವೈಫಲ್ಯ, ಆರ್ಥಿಕ ಸಂಕಷ್ಟ, ಹಣದುಬ್ಬರ ಹಾಗೂ ಸರ್ಕಾರಿ ದಬ್ಬಾಳಿಕೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಪ್ರತಿಭಟನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪುವುದನ್ನು ತಡೆಯುವ ಉದ್ದೇಶದಿಂದ ಅಧಿಕಾರಿಗಳು ಜೂನ್ 5ರಿಂದ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ನಾಗರಿಕ ಹಕ್ಕುಗಳ ಹೋರಾಟಗಾರ ಸರ್ದಾರ್ ಅಮಾನ್ ಖಾನ್ ಸೇರಿದಂತೆ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯು, ಆಹಾರ ಪೂರೈಕೆ ಮತ್ತು ಇತರ ಅಗತ್ಯ ವಸ್ತುಗಳ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಎರಡು ವಾರಗಳ ನಿರ್ಬಂಧ ಹೇರಿದ ನಂತರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ನೀವು ಅಸಲಿ ಕಾಶ್ಮೀರಿಗಳಲ್ಲ; ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆಗೆ ಪಿಒಕೆಯಲ್ಲಿ ಭಾರಿ ಆಕ್ರೋಶ

ತಮ್ಮ ಭಾಷಣದಲ್ಲಿ, ಪಾಕಿಸ್ತಾನ ಆಡಳಿತದ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ ಎಂದು ಹೇಳಿದ ಅಮಾನ್ ಖಾನ್, ಪಿಒಕೆಯು ಪಾಕಿಸ್ತಾನವನ್ನು ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ, ಪಾಕಿಸ್ತಾನಕ್ಕೇ ಈ ಪ್ರದೇಶದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಮೇಲಿನ ನಿರ್ಬಂಧಗಳು ಮುಂದುವರಿದರೆ ಈ ಪ್ರದೇಶದ ಜನರು ಸಹಾಯಕ್ಕಾಗಿ ಭಾರತದ ಕಡೆಗೆ ಮುಖ ಮಾಡಬೇಕಾಗುತ್ತದೆ ಎಂದು ಪ್ರತಿಭಟನೆಯೊಂದರಲ್ಲಿ ಅಮಾನ್ ಖಾನ್ ತಿಳಿಸಿದ್ದಾರೆ.

ವಿಡಿಯೋವೊಂದರಲ್ಲಿ ಪಾಕಿಸ್ತಾನ ಆಡಳಿತದ ಕಾಶ್ಮೀರದ ಜನರು ಈ ಪ್ರದೇಶವು ಪಾಕಿಸ್ತಾನದ ಭಾಗವಲ್ಲ ಎಂದು ಘೋಷಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ತಿರಸ್ಕರಿಸಿರುವ ಸ್ಥಳೀಯ ನಿವಾಸಿಗಳು, ತಾವು ಸರ್ವಾಧಿಕಾರಿಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಪ್ರತಿಭಟನೆಗಳು ಕೇವಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿಲ್ಲ, ವಿದೇಶಗಳಲ್ಲಿ ವಾಸಿಸುತ್ತಿರುವ ಬೆಂಬಲಿಗರು ಹಲವಾರು ದೇಶಗಳಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಗಳ ಹೊರಗಡೆಯೂ ಫಲಕಗಳನ್ನು ಹಿಡಿದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಮುಜಫರಾಬಾದ್ ಮತ್ತು ವಿಶಾಲ ಪ್ರದೇಶದ ಬಗ್ಗೆ ತಮ್ಮ ರಾಜಕೀಯ ಉದ್ದೇಶಗಳು ಈಡೇರುವವರೆಗೆ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಿಭಟನಾ ನಿರತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ

ರಾವಲಾಕೋಟ್‌ನ ಈದ್ಗಾ ಮೈದಾನದಲ್ಲಿ ನಡೆದ ಪ್ರತಿಭಟನೆಯು ಈ ಪ್ರದೇಶದ ಮೇಲಿನ ಪಾಕಿಸ್ತಾನದ ನಿಯಂತ್ರಣಕ್ಕೆ ಇಲ್ಲಿಯವರೆಗಿನ ಪ್ರಬಲ ಸವಾಲುಗಳಲ್ಲಿ ಒಂದಾಗಿದೆ. ದಶಕಗಳ ರಾಜಕೀಯ ನಿರ್ಲಕ್ಷ್ಯ, ಆರ್ಥಿಕ ಶೋಷಣೆ ಮತ್ತು ಆಡಳಿತಾತ್ಮಕ ದಬ್ಬಾಳಿಕೆಗಾಗಿ ಪಾಕಿಸ್ತಾನ ಸರ್ಕಾರ ಹಾಗೂ ಭದ್ರತಾ ಪಡೆಗಳನ್ನು ಆರೋಪಿಸಿರುವ ಪ್ರತಿಭಟನಾಕಾರರು, ಚಳುವಳಿಯನ್ನು ಹತ್ತಿಕ್ಕಲು ಅಧಿಕಾರಿಗಳು ಅಗತ್ಯ ಆಹಾರ ಪೂರೈಕೆಯ ಮೇಲೆ ದಿಗ್ಬಂಧನ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Doctors Day 2026: ಚಿಕ್ಕ ವಯಸ್ಸಿನಲ್ಲೇ ಋತುಮತಿ: ಆಹಾರ ಮತ್ತು ಜೀವನಶೈಲಿಯಲ್ಲಿ ಈ ಬದಲಾವಣೆಗಳು ಅಗತ್ಯ – Kannada News | Precocious Puberty in Girls: Understand Causes, Impact and Nurture Child’s Health

ಜುಲೈ 1ರಂದು ಆಚರಿಸಲಾಗುವ ರಾಷ್ಟ್ರೀಯ ವೈದ್ಯರ ದಿನ (Doctors Day) ಕೇವಲ ವೈದ್ಯರನ್ನು ಗೌರವಿಸುವ ದಿನ ಮಾತ್ರವಲ್ಲ, ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದಿನವೂ ಹೌದು. ಇಂದಿನ ಬದಲಾಗುತ್ತಿರುವ ಜೀವನಶೈಲಿಯಿಂದ ಮಕ್ಕಳ ಆರೋಗ್ಯದಲ್ಲಿಯೂ ಹಲವು ಹೊಸ ಸವಾಲುಗಳು ಕಾಣಿಸಿಕೊಳ್ಳುತ್ತಿವೆ. ಅವುಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಋತುಸ್ರಾವ ಆರಂಭವಾಗುತ್ತಿರುವುದು ಪ್ರಮುಖವಾಗಿದೆ. ಈ ಬಗ್ಗೆ ಪೋಷಕರು ಸರಿಯಾದ ಮಾಹಿತಿ ಹೊಂದಿದ್ದರೆ ಆತಂಕಕ್ಕೊಳಗಾಗುವ ಬದಲು ಸಮಯಕ್ಕೆ ಸರಿಯಾದ ಕ್ರಮಗಳನ್ನು ಕೈಗೊಳ್ಳಬಹುದು. ವೈದ್ಯರ ಸಲಹೆ, ಆರೋಗ್ಯಕರ ಜೀವನಶೈಲಿ ಮತ್ತು ಸಮತೋಲಿತ ಆಹಾರದ ಮೂಲಕ ಮಕ್ಕಳ ಭವಿಷ್ಯದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು.
ಇತ್ತೀಚಿನ ದಿನಗಳಲ್ಲಿ ಅನೇಕ ಪೋಷಕರು ಮಕ್ಕಳಲ್ಲಿ ಗಮನಿಸುತ್ತಿರುವ ಒಂದು ಪ್ರಮುಖ ಬದಲಾವಣೆ ಎಂದರೆ, ಹಿಂದೆ 12-14 ವರ್ಷದ ನಡುವೆ ಆರಂಭವಾಗುತ್ತಿದ್ದ ಋತುಸ್ರಾವ (ಪಿರಿಯಡ್ಸ್) ಈಗ ಕೆಲ ಮಕ್ಕಳಲ್ಲಿ 8-11 ವರ್ಷದೊಳಗೇ ಕಾಣಿಸಿಕೊಳ್ಳುತ್ತಿರುವುದು. ಕೆಲವೊಮ್ಮೆ ನಾಲ್ಕನೇ ಅಥವಾ ಐದನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರಿಗೂ ಪಿರಿಯಡ್ಸ್ ಆರಂಭವಾಗುತ್ತಿರುವ ಘಟನೆಗಳು ಕಂಡುಬರುತ್ತಿವೆ.

ಇದು ಪೋಷಕರಲ್ಲಿ ಆತಂಕ ಹುಟ್ಟಿಸುವುದು ಸಹಜ. ಆದರೆ ಇದನ್ನು ಭಯಪಡುವ ಬದಲು, ಕಾರಣಗಳನ್ನು ತಿಳಿದು ಸೂಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ. ಮಕ್ಕಳಲ್ಲಿ ಬೇಗನೆ ಪಿರಿಯಡ್ಸ್ ಆರಂಭವಾಗುವುದನ್ನು ವೈದ್ಯಕೀಯವಾಗಿ Early Puberty (Precocious Puberty) ಎಂದು ಕರೆಯಲಾಗುತ್ತದೆ. ಇದಕ್ಕೆ ಒಂದೇ ಕಾರಣ ಇರುವುದಿಲ್ಲ. ಇಂದಿನ ಜೀವನಶೈಲಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಹೆಚ್ಚುತ್ತಿರುವ ಸ್ಥೂಲಕಾಯ (ಒಬೆಸಿಟಿ), ಒತ್ತಡ, ನಿದ್ರೆಯ ಕೊರತೆ ಹಾಗೂ ಕೆಲವೊಮ್ಮೆ ಅನುವಂಶಿಕ ಕಾರಣಗಳೂ ಇದಕ್ಕೆ ಕಾರಣವಾಗಬಹುದು. ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾದಾಗ ಕೆಲವು ಹಾರ್ಮೋನ್‌ಗಳ ಬದಲಾವಣೆಯಿಂದ ಋತುಚಕ್ರ ಬೇಗ ಆರಂಭವಾಗುವ ಸಾಧ್ಯತೆ ಇರುತ್ತದೆ.

ಆಯುರ್ವೇದದ ಪ್ರಕಾರ ದೇಹದಲ್ಲಿ ದೋಷಗಳ ಅಸಮತೋಲನ, ಅಜೀರ್ಣ, ಅಸಮರ್ಪಕ ಆಹಾರ ಪದ್ಧತಿ ಹಾಗೂ ದಿನಚರಿಯಲ್ಲಿನ ವ್ಯತ್ಯಾಸಗಳು ದೇಹದ ಸಹಜ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡುವುದು ಬಹಳ ಮುಖ್ಯ.

ಚಿಕ್ಕ ವಯಸ್ಸಿನಲ್ಲೇ ಪಿರಿಯಡ್ಸ್ ಆರಂಭವಾದರೆ ಕೇವಲ ದೈಹಿಕ ಬದಲಾವಣೆಗಳಷ್ಟೇ ಅಲ್ಲ, ಮಾನಸಿಕವಾಗಿಯೂ ಮಕ್ಕಳಿಗೆ ಗೊಂದಲ ಉಂಟಾಗಬಹುದು. ಶಾಲೆಯಲ್ಲಿ ಅಥವಾ ಸ್ನೇಹಿತರ ನಡುವೆ ಮುಜುಗರ, ಆತ್ಮವಿಶ್ವಾಸದ ಕೊರತೆ, ಭಯ ಅಥವಾ ಆತಂಕ ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಎತ್ತರದ ಬೆಳವಣಿಗೆ ಬೇಗ ನಿಲ್ಲುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಪೋಷಕರು ಮಕ್ಕಳನ್ನು ಗದರಿಸುವ ಅಥವಾ ಹೆದರಿಸುವ ಬದಲು, ಪ್ರೀತಿಯಿಂದ ಈ ಸಹಜ ಬದಲಾವಣೆಯ ಬಗ್ಗೆ ತಿಳಿಸಬೇಕು.

ಇಂತಹ ಸಂದರ್ಭಗಳಲ್ಲಿ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ. ಮಕ್ಕಳಿಗೆ ಸಾತ್ವಿಕ ಹಾಗೂ ಸಮತೋಲಿತ ಆಹಾರ ನೀಡಬೇಕು. ಜಂಕ್ ಫುಡ್, ಅತಿಯಾದ ಸಕ್ಕರೆ, ತಂಪು ಪಾನೀಯಗಳು ಹಾಗೂ ಅತಿಯಾಗಿ ಸಂಸ್ಕರಿಸಿದ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳಿತು. ದೇಹದ ಸರಿಯಾದ ಜೀರ್ಣಕ್ರಿಯೆ ಆರೋಗ್ಯಕರ ಹಾರ್ಮೋನ್ ಸಮತೋಲನಕ್ಕೆ ಸಹಕಾರಿ. ಆದ್ದರಿಂದ ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ, ಆಟ ಅಥವಾ ಯೋಗಾಭ್ಯಾಸ ಮಾಡುವ ಅಭ್ಯಾಸ ಬೆಳೆಸಬೇಕು. ಇದರಿಂದ ದೇಹದ ತೂಕ ಸಮತೋಲನದಲ್ಲಿದ್ದು, ಹಾರ್ಮೋನ್‌ಗಳ ಕಾರ್ಯವೂ ಸುಧಾರಿಸುತ್ತದೆ. ಜೊತೆಗೆ ಮಕ್ಕಳಿಗೆ ಸಾಕಷ್ಟು ನಿದ್ರೆ ಅತ್ಯಗತ್ಯ. ಮೊಬೈಲ್ ಮತ್ತು ಟಿವಿ ಬಳಕೆಯನ್ನು ನಿಯಂತ್ರಿಸಿ, ಸಮಯಕ್ಕೆ ಸರಿಯಾಗಿ ಮಲಗುವ ಅಭ್ಯಾಸ ಬೆಳೆಸಬೇಕು. ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯ. ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಒತ್ತಡದಿಂದ ದೂರವಿಡುವುದು ಪೋಷಕರ ಜವಾಬ್ದಾರಿಯಾಗಿದೆ.

ಇದನ್ನೂ ಓದಿ: ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ

ಸರಿಯಾದ ಸಮಯದಲ್ಲಿ ಆರೋಗ್ಯಕರವಾಗಿ ಋತುಮತಿಯಾಗಲು ಕೆಲವು ಮನೆಮದ್ದುಗಳಂತಿರುವ ಆರೋಗ್ಯಕರ ಆಹಾರ ಪದ್ಧತಿಗಳನ್ನೂ ಅನುಸರಿಸಬಹುದು. ಪ್ರತಿದಿನ ನೆನೆಸಿದ ಬಾದಾಮಿ, ಖರ್ಜೂರ, ಒಣದ್ರಾಕ್ಷಿ, ಋತುಮಾನಕ್ಕೆ ತಕ್ಕ ತಾಜಾ ಹಣ್ಣುಗಳು, ಮಿತ ಪ್ರಮಾಣದಲ್ಲಿ ತುಪ್ಪ, ವಿವಿಧ ಸೊಪ್ಪು-ತರಕಾರಿಗಳು, ಬೇಳೆ-ಕಾಳುಗಳು ಆಹಾರದಲ್ಲಿ ಇರಬೇಕು. ಇವು ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ದೇಹವನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗುತ್ತವೆ.

ಆದರೆ 8 ವರ್ಷಕ್ಕಿಂತ ಮೊದಲೇ ಪಿರಿಯಡ್ಸ್ ಆರಂಭವಾದರೆ ಅಥವಾ ಸ್ತನಗಳ ಬೆಳವಣಿಗೆ, ದೇಹದಲ್ಲಿ ಬೇಗನೆ ಇತರ ಪ್ರೌಢಾವಸ್ಥೆಯ ಲಕ್ಷಣಗಳು ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸದೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಅಗತ್ಯವಿದ್ದರೆ ಕೆಲವು ಪರೀಕ್ಷೆಗಳ ಮೂಲಕ ನಿಖರ ಕಾರಣವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡಬಹುದು.

ಪಿರಿಯಡ್ಸ್ ಎನ್ನುವುದು ಹೆಣ್ಣು ಮಗುವಿನ ಬೆಳವಣಿಗೆಯ ಸಹಜ ಹಂತ. ಆದರೆ ಅದು ಅತೀ ಚಿಕ್ಕ ವಯಸ್ಸಿನಲ್ಲೇ ಆರಂಭವಾಗುವುದು ಗಮನಿಸಬೇಕಾದ ವಿಷಯ. ಸರಿಯಾದ ಆಹಾರ, ಉತ್ತಮ ಜೀವನಶೈಲಿ, ಸಾಕಷ್ಟು ನಿದ್ರೆ, ದೈಹಿಕ ಚಟುವಟಿಕೆ ಹಾಗೂ ಮಾನಸಿಕ ಆರೋಗ್ಯದ ಕಡೆ ಗಮನ ಕೊಟ್ಟರೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಬಹುದು. ಪೋಷಕರ ಅರಿವು ಮತ್ತು ಸಮಯೋಚಿತ ವೈದ್ಯಕೀಯ ಸಲಹೆಯೇ ಮಕ್ಕಳ ಆರೋಗ್ಯವನ್ನು ಕಾಪಾಡುವ ಮೊದಲ ಹೆಜ್ಜೆಯಾಗಿದೆ.

ಡಾ. ಸುಮಾ ಸಿ. BAMS

Mob: 9483207324

(ಹೆಚ್ಚಿನ ಮಾಹಿತಿ, ಆನ್‌ಲೈನ್ ಸಮಾಲೋಚನೆಗಾಗಿ ಅಥವಾ ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ ಮೇಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸ್ಆಪ್ ಮೂಲಕ ಸಂಪರ್ಕಿಸಬಹುದು.)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಕೆಮಿಕಲ್ ಉದ್ಯಮ ನಿರಾಳ; ಪ್ರಮುಖ ಕಚ್ಛಾವಸ್ತುಗಳ ಆಮದಿಗೆ ಜುಲೈ 15ರವರೆಗೆ ಕಸ್ಟಮ್ಸ್ ಡ್ಯೂಟಿ ವಿನಾಯಿತಿ – Kannada News | Govt continues to give Customs Duty exemption on critical petrochemicals till July 15th

ನವದೆಹಲಿ, ಜೂನ್ 30: ಭಾರತ ಸರ್ಕಾರವು ಪ್ರಮುಖ ಪೆಟ್ರೋಕೆಮಿಕಲ್ ಕಚ್ಚಾ ವಸ್ತುಗಳ (Petrochemicals) ಆಮದಿನ ಮೇಲಿನ ಕಸ್ಟಮ್ಸ್ ಸುಂಕದ (Zero Customs Duty) ವಿನಾಯಿತಿಯನ್ನು ಜುಲೈ 15 ರವರೆಗೆ ವಿಸ್ತರಿಸಿದೆ. ದೇಶೀಯ ಕೈಗಾರಿಕೆಗಳಿಗೆ ಮತ್ತು ಪೆಟ್ರೋಕೆಮಿಕಲ್ ವಲಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ, ಮತ್ತು ಸರಬರಾಜು ವ್ಯವಸ್ಥೆಯಲ್ಲಿ ಸ್ಥಿರತೆ ತರುವ ಉದ್ದೇಶದಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕಂದಾಯ ಇಲಾಖೆಯು ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹಿಂದೆ ಇದ್ದ ಗಡುವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಯಾವ ರಾಸಾಯನಿಕಗಳಿಗೆ ವಿನಾಯಿತಿ?: ಪ್ಲಾಸ್ಟಿಕ್, ಜವಳಿ (Textiles), ಫಾರ್ಮಾ, ವಾಹನ, ರಾಸಾಯನಿಕ ಹಾಗೂ ಇತರ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ಗಳಲ್ಲಿ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿ ಬಳಸಲಾಗುವ ನಿರ್ದಿಷ್ಟ ಪೆಟ್ರೋಕೆಮಿಕಲ್ ಆಮದುಗಳಿಗೆ ಈ ತೆರಿಗೆ ವಿನಾಯಿತಿ ಅನ್ವಯಿಸಲಿದೆ. ಒಟ್ಟು 40 ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ (Critical Petrochemicals) ಆಮದಿಗೆ ಈ ವಿನಾಯಿತಿ ಇದೆ.

ಇದನ್ನೂ ಓದಿ: ಒಂದೇ ಲಿಕ್ಕರ್ ಲೈಸೆನ್ಸ್, ಹೆಲ್ತ್ ಟ್ರೇಡ್ ಲೈಸೆನ್ಸ್ ಸಾಕು; ಈಟಿಂಗ್ ಹೌಸ್ ಲೈಸೆನ್ಸ್ ಬೇಡ: ನೀತಿ ಆಯೋಗ್ ಸಲಹೆಗಳು

ಉದ್ಯಮ ಮತ್ತು ಗ್ರಾಹಕರಿಗೆ ಅನುಕೂಲ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಈ ಸಮಯದಲ್ಲಿ, ಸರ್ಕಾರದ ಈ ನಿರ್ಧಾರವು ದೇಶೀಯ ಉತ್ಪಾದಕರಿಗೆ ಉತ್ಪಾದನಾ ವೆಚ್ಚವನ್ನು (Input Costs) ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಉತ್ಪಾದನಾ ವೆಚ್ಚ ಕಡಿಮೆಯಾಗುವುದರಿಂದ, ಈ ರಾಸಾಯನಿಕಗಳನ್ನು ಬಳಸಿ ತಯಾರಾಗುವ ದೈನಂದಿನ ಬಳಕೆಯ ಪ್ಲಾಸ್ಟಿಕ್ ಹಾಗೂ ಇತರ ಕೈಗಾರಿಕಾ ಉತ್ಪನ್ನಗಳ ಬೆಲೆಗಳು ಸ್ಥಿರವಾಗಿರಲು ಇದು ಸಹಕಾರಿಯಾಗಲಿದೆ. ಇದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ.

ಇದನ್ನೂ ಓದಿ: ಬ್ಯಾಂಕುಗಳ ಮಿಸ್-ಸೆಲ್ಲಿಂಗ್​ನಿಂದ ಹಿಡಿದು ಇಪಿಎಫ್​ಒವರೆಗೆ, ಜುಲೈನಿಂದ ಬದಲಾಗಲಿರುವ 8 ಹಣಕಾಸು ನಿಯಮಗಳು

ಬಜೆಟ್ ಮಂಡನೆಗೆ ಮುನ್ನ ಸರ್ಕಾರ ಕೈಗೊಂಡಿರುವ ಈ ತಾತ್ಕಾಲಿಕ ಕ್ರಮವು, ದೇಶದ ಪ್ರಮುಖ ಉತ್ಪಾದನಾ ವಲಯಗಳಿಗೆ ಜಾಗತಿಕ ಪೈಪೋಟಿಯನ್ನು ಎದುರಿಸಲು ದೊಡ್ಡ ಮಟ್ಟದ ಆರ್ಥಿಕ ನಿರಾಳತೆಯನ್ನು ತಂದುಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Viral: 45 ಲಕ್ಷ ರೂ ಸಂಬಳ ಇದ್ರೂ ತಿಂಗಳ ಕೊನೆಯಲ್ಲಿ ನಾನು ದಿವಾಳಿ ಎಂದ ಬೆಂಗಳೂರಿನ ಟೆಕ್ಕಿ – Kannada News | Bengaluru: A techie from Bengaluru says he doesn’t have a single rupee in his pocket despite earning Rs 45 lakhs.

ಬೆಂಗಳೂರು, ಜೂನ್ 30: ಯುವಕ ಯುವತಿಯರು ಗುಣಮಟ್ಟದ ಜೀವನ, ಹೆಚ್ಚು ಸಂಬಳ ಸಿಗುವ ಕೆಲಸಕ್ಕಾಗಿ ಓದು ಮುಗಿಯುತ್ತಿದ್ದಂತೆ ಹಳ್ಳಿ ಬಿಟ್ಟು ನಗರಕ್ಕೆ ಬರ್ತಾರೆ. ಆದರೆ ತಿಂಗಳ ಸಂಬಳದಲ್ಲಿ ನಗರದಲ್ಲಿ ಜೀವನ ನಡೆಸೋದು ಹೇಳಿದ್ದಷ್ಟು ಸುಲಭವಲ್ಲ. ತಿಂಗಳ ಪ್ರಾರಂಭದಲ್ಲಿ ಕೈ ತುಂಬಾ ದುಡ್ಡು ಇದ್ರು, ತಿಂಗಳ ಕೊನೆಯಲ್ಲಿ ಒಂದೇ ಒಂದು ರೂಪಾಯಿ ಉಳಿಯಲ್ಲ. ಇದೀಗ ಬೆಂಗಳೂರಿನ (Bengaluru) ಟೆಕ್ಕಿಯ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್‌ ವೈರಲ್ ಆಗಲು ಕಾರಣವಾಗಿದ್ದೇ ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಬಿಡಿ ಒಂದೇ ಒಂದು ರೂಪಾಯಿಯೂ ಇರಲ್ಲ ಎಂದು ಹೇಳಿರುವುದು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಬೆಂಗಳೂರು ಮೂಲದ ಸಾಫ್ಟ್‌ವೇರ್ ಸಲಹೆಗಾರರೊಂದಿಗಿನ ಮಾತನಾಡಿದ ಒಂದು ವರ್ಷ ಹಳೆಯ ಸಂದರ್ಶನದ ತುಣುಕನ್ನು ಮತ್ತೆ ಎಕ್ಸ್ (viprabuddhi) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮ್ಯೂಚುವಲ್ ಫಂಡ್ ಸಲಹೆಗಾರರಾದ ಅಂಶುಮಾನ್ ಶರ್ಮಾರವರ ಜತೆಗೆ ಸೂರ್ಯಯವರು ವೆಚ್ಚಗಳು ಮತ್ತು ಜೀವನಶೈಲಿಯ ಹಣದುಬ್ಬರದ ಬಗ್ಗೆ ಮಾತನಾಡುತ್ತಾ ಹೂಡಿಕೆಗಳನ್ನು ಗರಿಷ್ಠಗೊಳಿಸುವ ಬಗ್ಗೆ ಸಲಹೆ ಪಡೆದಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್ ಇಲ್ಲಿದೆ

ಈ ಸಂದರ್ಶನದ ಕ್ಲಿಪಿಂಗ್ ನಲ್ಲಿ ಐಟಿ ಉದ್ಯೋಗಿ ಸೂರ್ಯರವರು, ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದು, ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ ಪ್ಯಾಕೇಜ್ 45 ಲಕ್ಷ ರೂಪಾಯಿಗಳು. ಎಲ್ಲಾ ತೆರಿಗೆಗಳು ಕಡಿತಗೊಂಡ ಬಳಿಕ ಕೈಗೆ ಸುಮಾರು 2.45 ಲಕ್ಷ ರೂ ಎಂದು ಹೇಳಿದ್ದಾರೆ. ಆದರೆ, ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ಮೊತ್ತದ ಆದಾಯವಾಗಿ ಕಾಣಿಸುವುದು ಸಹಜ. ಆದರೆ ಲಕ್ಷ ಸಂಪಾದನೆ ಇದ್ರೂ ನನಗೆ ಉಳಿತಾಯ ಮಾಡುವುದು ಕಷ್ಟವಾಗುತ್ತಿದೆ. ತಿಂಗಳ ಕೊನೆ ಹತ್ತಿರ ಬರುತ್ತಿದ್ದಂತೆ ಕೈಯಲ್ಲಿದ್ದ ಅಷ್ಟು ಹಣ ಎಲ್ಲಿಗೆ ಹೋಗುತ್ತದೆ ಎಂದು ತಿಳಿಯುವುದಿಲ್ಲ. ಮದುವೆಯಾಗಿ ತಂದೆಯಾದ ಬಳಿಕವಂತೂ ಆರ್ಥಿಕ ಪರಿಸ್ಥಿತಿ ಮತ್ತು ಜವಾಬ್ದಾರಿಗಳು ಡಬಲ್‌ ಆಯ್ತು ಎಂದಿದ್ದಾರೆ.

ತಮ್ಮ ಮಾಸಿಕ ಖರ್ಚುಗಳ ಬಹಿರಂಗಪಡಿಸಿದ್ದು, ತಮ್ಮ ಆದಾಯದ ಹೆಚ್ಚು ಹಣವು ಇಎಂಐ ಪಾವತಿಸುವುದರಲ್ಲೇ ಮುಗಿದುಹೋಗುತ್ತದೆ. ಮನೆ ಸಾಲದ ಇಎಂಐ 63,000 ರೂ,  ಮೂರುವರೆ ವರ್ಷದ ಮಗನ ಶಾಲಾ ಶುಲ್ಕ ತಿಂಗಳಿಗೆ 11,000 ರೂ,
ಆಹಾರ ಹಾಗೂ ದಿನಸಿ ಸಾಮಗ್ರಿಗಳಿಗೆ 12,000 ರೂ ಖರ್ಚು ಆಗುತ್ತದೆ. ಇತರ ಅನಿವಾರ್ಯ ವೆಚ್ಚಗಳು 20,000 ರೂ, ಶಾಪಿಂಗ್, ಪ್ರವಾಸ ಹಾಗೂ ರೆಸ್ಟೋರೆಂಟ್ ಊಟ 32,000 ರೂ ಎಂದಿದ್ದಾರೆ.

ಇದನ್ನೂ ಓದಿ: ಮೇ ತಿಂಗಳ ಖರ್ಚು ವೆಚ್ಚ ರಿವೀಲ್ ಮಾಡಿದ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್

ಈ ಪೋಸ್ಟ್ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಳ್ಳಲಾಗಿದೆ. ಒಬ್ಬ ಬಳಕೆದಾರ, ಖರ್ಚು ವೆಚ್ಚಗಳು ಇತಿಮಿತಿಯಲ್ಲಿದ್ದರೆ ಉಳಿತಾಯ ಮಾಡೋದು ಸುಲಭ ಎಂದಿದ್ದಾರೆ. ಇನ್ನೊಬ್ಬರು, ಸಂಬಳ ಹೆಚ್ಚಾದಂತೆಲ್ಲಾ ಮನುಷ್ಯನ ಖರ್ಚುಗಳು ಹೆಚ್ಚಾಗುತ್ತದೆ. ಹೀಗಾಗಿ ಸಂಬಳ ಎಷ್ಟಿದ್ದರೂ ಸಾಲಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಖರ್ಚು ವೆಚ್ಚಗಳನ್ನು ಸರಿಯಾಗಿ ತೂಗಿಸಿಕೊಂಡು ಬಜೆಟ್ ರೂಪಿಸಿಕೊಂಡರೆ ಉಳಿತಾಯ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಬಳಿಕ ಮತ್ತೊಬ್ಬ ತಮಿಳು ಸ್ಟಾರ್ ನಟ ರಾಜಕೀಯಕ್ಕೆ? – Kannada News | Suriya fans club gave clarification about him joining politics

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ವಿಜಯ್ (Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸಿ ಎದುರಿಸಿದ ಮೊದಲ ಚುನಾವಣೆಯಲ್ಲೇ ಅಭೂತಪೂರ್ವ ಜಯ ಸಾಧಿಸಿರುವ ವಿಜಯ್ ಇದೀಗ ಹಲವು ಚಿತ್ರರಂಗದ ಸಿನಿಮಾ ನಟರಿಗೆ ಸ್ಪೂರ್ತಿ ನೀಡಿದ್ದಾರೆ ರಾಜಕೀಯಕ್ಕೆ ಎಂಟ್ರಿ ನೀಡಲು. ಇದೀಗ ವಿಜಯ್ ಬೆನ್ನಲ್ಲೆ ಮತ್ತೊಬ್ಬ ತಮಿಳುನಾಡಿನ ಸ್ಟಾರ್ ನಟರೊಬ್ಬರು ರಾಜಕೀಯಕ್ಕೆ ಬರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಆ ಸ್ಟಾರ್ ನಟ ರಜನೀಕಾಂತ್ ಅಲ್ಲ, ಇನ್ಯಾರು?

ವಿಜಯ್ ರಾಜಕೀಯಕ್ಕೆ ಬಂದ ಬಳಿಕ ಅವರ ಸ್ಥಾನ ತುಂಬುವ ನಟ ಯಾರೆಂಬ ಚರ್ಚೆ ನಡೆಯುತ್ತಿದ್ದು, ನಟ ಸೂರ್ಯ ಅವರು ವಿಜಯ್ ಸ್ಥಾನ ತುಂಬಬಲ್ಲ ನಟ ಎನ್ನಲಾಗುತ್ತಿದೆ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯಂತೆ, ವಿಜಯ್ ರೀತಿ ನಟ ಸೂರ್ಯ ಸಹ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಈ ಕುರಿತು ವಿಡಿಯೋ ಒಂದು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸೂರ್ಯ ಅವರ ಅಭಿಮಾನಿ ಸಂಘದ ಸದಸ್ಯರೊಬ್ಬರು ಹರಿಬಿಟ್ಟಿರುವ ವಿಡಿಯೋನಲ್ಲಿ, ಸೂರ್ಯ ರಾಜಕೀಯಕ್ಕೆ ಬರಲಿದ್ದಾರೆ ಎಂದಿದ್ದಾರೆ. ‘ಸಮಯ ನಿರ್ಣಯಿಸಿದರೆ, ಜನ ನಾಯಕ ಆಗುವುದನ್ನು ಯಾರೂ ಸಹ ತಡೆಯಲು ಆಗುವುದಿಲ್ಲ’ ಎಂದು ಸೂರ್ಯ ಹೇಳಿದ್ದಾರೆಂದು ಅಭಿಮಾನಿ, ವಿಡಿಯೋನಲ್ಲಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ, ಸೂರ್ಯ ಸಹ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿವೆ.

ಇದನ್ನೂ ಓದಿ:‘ಕರಾವಳಿ’ ಸಿನಿಮಾ ಸೆಟ್​​ನಲ್ಲಿ ಪ್ರಜ್ವಲ್ ದೇವರಾಜ್ ಕ್ರಿಕೆಟ್ ಆಟ: ವಿಡಿಯೋ

ಆದರೆ ಆ ಬಳಿಕ ಸೂರ್ಯ ಅವರ ಅಭಿಮಾನಿ ಸಂಘಟನೆಯು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದು, ಸೂರ್ಯ ಅವರು ರಾಜಕೀಯಕ್ಕೆ ಬರುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ವಿಡಿಯೋನಲ್ಲಿ ಸೂರ್ಯ ಅವರ ರಾಜಕೀಯ ಪ್ರವೇಶಿಸಿದ ಬಗ್ಗೆ ಹೇಳಿರುವ ವ್ಯಕ್ತಿ ತನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅದು ಅಭಿಮಾನಿ ಸಂಘಟನೆಯ ಅಭಿಪ್ರಾಯವಾಗಲಿ, ನಟ ಸೂರ್ಯ ಅವರ ಅಭಿಪ್ರಾಯ ಆಗಲಿ ಅಲ್ಲ ಎಂದು ಹೇಳಿದ್ದಾರೆ.

ಸೂರ್ಯ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರಲ್ಲೂ ವಿಜಯ್ ಅವರ ಸಿನಿಮಾರಂಗದಿಂದ ದೂರಾಗಿ ರಾಜಕೀಯದಲ್ಲಿ ತೊಡಗಿಕೊಂಡ ಬಳಿಕ ಅವರಿಗೆ ಹೆಚ್ಚು ಸಿನಿಮಾಗಳು ಸಿಗಲಿವೆ ಎನ್ನಲಾಗುತ್ತಿದೆ. ವಿಜಯ್ ಅವರ ಸ್ಥಾನವನ್ನು ಸೂರ್ಯ ತುಂಬಬಲ್ಲರು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೇಗಿದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ ‘ರಕ್ಕಿ’ ಚಿತ್ರದ ಟ್ರೇಲರ್? – Kannada News | Rakky Suresh starrer Rakky Kannada movie trailer released by Ashwini Puneeth Rajkumar

ರಾಜ್ಯ ಪ್ರಶಸ್ತಿ ಪುರಸ್ಕೃತ ‘ಕೆಂಪಿರ್ವೆ’ ಖ್ಯಾತಿಯ ವೆಂಕಟ್ ಭಾರದ್ವಾಜ್ ಅವರು ‘ರಕ್ಕಿ’ (Rakky) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸುರೇಶ್ ಸಾಲಿಗ್ರಾಮ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ರಕ್ಕಿ ಸುರೇಶ್ (Rakky Suresh) ಅವರು ಹೀರೋ ಆಗಿ ನಟಿಸಿದ್ದಾರೆ. ಬಿ. ಸುರೇಶ, ರಮೇಶ್ ಪಂಡಿತ್, ಸಂಪತ್ ಮೈತ್ರೇಯ, ಬಾಲರಾಜ್ ವಾಡಿ, ರೇಖಾ ವಸಂತ್, ಹರಿಣಿ, ಹರ್ಷಾರ್ಜುನ್ ಮುಂತಾದವರು ನಟಿಸಿದ್ದಾರೆ.

ಗ್ಯಾಂಗ್‌ಸ್ಟರ್ ಕ್ರೈಮ್ ಕಥಾಹಂದರ, ಕಮರ್ಷಿಯಲ್ ಅಂಶಗಳು, ಭಾವನಾತ್ಮಕ ಕ್ಷಣಗಳು ಹಾಗೂ ಉತ್ತಮ ತಾಂತ್ರಿಕ ನಿರ್ವಹಣೆಯೊಂದಿಗೆ ‘ರಕ್ಕಿ’ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಟ್ರೇಲರ್ ನೋಡಿದ ಬಳಿಕ ಸಿನಿಪ್ರಿಯರಿಗೆ ಕೌತುಕ ಮೂಡಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದರಿಂದ ಚಿತ್ರತಂಡದ ಬಲ ಹೆಚ್ಚಿದೆ.

ಇದೊಂದು ಗ್ಯಾಂಗ್‌ಸ್ಟರ್ ಕ್ರೈಂ ಡ್ರಾಮಾ ಇರುವ ಸಿನಿಮಾ ಎಂಬುದನ್ನು ‘ರಕ್ಕಿ’ ಚಿತ್ರತಂಡ ಮೊದಲಿನಿಂದಲೂ ಸೂಚಿಸುತ್ತಲೇ ಇದೆ. ಟ್ರೇಲರ್​ನಲ್ಲಿ ಅದು ಖಚಿತವಾಗಿದೆ. ಒಬ್ಬ ಎಂಎಲ್‌ಎ ಅಭ್ಯರ್ಥಿಯನ್ನು ಕೊಲ್ಲುವ ಆದೇಶದಿಂದ ಆರಂಭವಾಗುವ ಟ್ರೇಲರ್​ನಲ್ಲಿ ಸಾಕಷ್ಟು ಎಲಿಮೆಂಟ್ಸ್ ಕಾಣಿಸಿದೆ. ಪ್ರೇಕ್ಷಕರನ್ನು ಅಪರಾಧ ಮತ್ತು ಸಂಘರ್ಷದ ಲೋಕಕ್ಕೆ ಕರೆದೊಯ್ಯುತ್ತದೆ.

‘ರಕ್ಕಿ’ ಸಿನಿಮಾದ ಟ್ರೇಲರ್:

‘ರಕ್ಕಿ’ ಸಿನಿಮಾ ತಾಂತ್ರಿಕವಾಗಿ ಉತ್ತಮವಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಐಸಾಕ್ ಪ್ರಭಾಕರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಲೋಕಿ ತಾವಸ್ಯ ಅವರು ಸಂಗೀತ ನೀಡಿದ್ದಾರೆ. ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಹ-ನಿರ್ದೇಶಕರಾಗಿ ಲಾರೆನ್ಸ್ ಪ್ರೀತಂ ಅವರು ಕೆಲಸ ಮಾಡಿದ್ದಾರೆ. ಈ ಟ್ರೇಲರ್ ಮೂಲಕ ಹಲವು ಪಾತ್ರಗಳ ಪರಿಚಯ ಮಾಡಿಕೊಡಲಾಗಿದೆ.

ಇದನ್ನೂ ಓದಿ: ‘ರಗಡೋ ರಕ್ಕಿ’ ಹಾಡಿನಲ್ಲಿ ಹೀರೋ ಮಾಸ್ ಎಂಟ್ರಿ; ‘ಪಿಆರ್​ಕೆ ಆಡಿಯೋ’ ಮೂಲಕ ರಿಲೀಸ್

ಹೀರೋ ರಕ್ಕಿ ಸುರೇಶ್ ಅವರು ಡ್ಯಾನ್ಸ್, ಆ್ಯಕ್ಷನ್, ನಟನೆ ಹಾಗೂ ಆತ್ಮವಿಶ್ವಾಸದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರ ತಯಾರಿ ಮತ್ತು ಶ್ರಮದ ಫಲ ಟ್ರೇಲರ್​ನಲ್ಲಿ ಕಾಣಿಸುತ್ತಿದೆ. ಯುವಜನತೆ ಮತ್ತು ಕೌಟುಂಬಿಕ ಪ್ರೇಕ್ಷಕರನ್ನೂ ಕೂಡ ಈ ಸಿನಿಮಾ ಸೆಳೆದುಕೊಳ್ಳಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಸಿನಿಮಾದ ಕಥೆಯ ಸುಳಿವನ್ನು ಈ ಟ್ರೇಲರ್ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 6:53 pm, Tue, 30 June 26

Source link

ಹೂಕೋಸಿನಲ್ಲಿರುವ ಹುಳ, ಕೀಟಗಳನ್ನು ತೆಗೆದುಹಾಕಲು ಈ ಟಿಪ್ಸ್‌ ಅನುಸರಿಸಿ – Kannada News | You can easily remove mites and insects from cauliflower by following these method

ತರಕಾರಿಗಳಲ್ಲಿ ಹುಳ, ಕೀಟಗಳು ಇರುವುದು ಸಾಮಾನ್ಯ. ಆದ್ದರಿಂದ, ತಜ್ಞರು ಅವುಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕೆಂದು ಶಿಫಾರಸು ಮಾಡುತ್ತಾರೆ. ಆದರೆ ಹೂಕೋಸನ್ನು (cauliflower) ಎಷ್ಟೇ ಸ್ವಚ್ಛಗೊಳಿಸಿದರೂ ಬಿಳಿ ಬಣ್ಣದ ಸಣ್ಣ ಸಣ್ಣ ಹುಳಗಳು ಹಾಗೆಯೇ ಉಳಿದು ಬಿಡುತ್ತವೆ. ಕೆಲವೊಂದು ಬಾರಿ ಇವುಗಳು ಕಣ್ಣಿಗೂ ಸಹ ಕಾಣಿಸೊಲ್ಲ. ಹಾಗಾಗಿ ಕಾಲಿಫ್ಲವರ್‌ ಕ್ಲೀನ್‌ ಮಾಡೀದು ಹಲವರಿಗೆ ತಲೆ ನೋವಿನ ಕೆಲಸ. ಇನ್ನೂ ಹೂಕೋಸಿನಲ್ಲಿರುವ ಈ ಹುಳಗಳು ದೇಹ ಪ್ರವೇಶಿಸಿದರೆ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೂಕೋಸುಗಳನ್ನು ಸ್ವಚ್ಛಗೊಳಿಸುವಾಗ ವಿಶೇಷ ಕಾಳಜಿಯನ್ನು ವಹಿಸಬೇಕು, ಬರೀ ನೀರಿನ ಬದಲು ಈ ಕೆಲವೊಂದು ಸರಳ ವಿಧಾನಗಳನ್ನು ಪಾಲಿಸುವ ಮೂಲಕ ಹೂಕೋಸಿನಲ್ಲಿ ಅಂಟಿರುವ ಹುಳಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹೂಕೋಸಿನಿಂದ ಹುಳಗಳನ್ನು ತೆಗೆದುಹಾಕುವುದು ಹೇಗೆ?

ಉಪ್ಪು, ಅರಿಶಿನ ಮತ್ತು ಬೆಚ್ಚಗಿನ ನೀರು: ಈ ವಿಧಾನ ಹೂಕೋಸಿನಲ್ಲಿರುವ ಹುಳಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಹಾಯ ಮಾಡುತ್ತದೆ. ಮೊದಲು, ಹೂಕೋಸನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ, ಒಂದು ದೊಡ್ಡ ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ತುಂಬಿಸಿ ಎರಡು ಟೀ ಚಮಚ ಉಪ್ಪು ಮತ್ತು ಒಂದು ಟೀ ಚಮಚ ಅರಿಶಿನವನ್ನು ಸೇರಿಸಿ. ಈ ದ್ರಾವಣದಲ್ಲಿ ಹೂಕೋಸು ತುಂಡುಗಳನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ಉಪ್ಪು ಮತ್ತು ಅರಿಶಿನವು ಹೂಕೋಸಿನಿಂದ ಕೀಟ, ಹುಳಗಳು ಹೊರಬರುವಂತೆ ಮಾಡುತ್ತವೆ. ನಂತರ, ಹೂಕೋಸನ್ನು ಮತ್ತೆ ಶುದ್ಧ ನೀರಿನಿಂದ ತೊಳೆಯಿರಿ.

ವಿನೆಗರ್ ಮತ್ತು ಅಡಿಗೆ ಸೋಡಾ: ನೀವು ಹೂಕೋಸನ್ನು ಸ್ವಚ್ಛಗೊಳಿಸಲು ವಿನೆಗರ್ ಮತ್ತು ಅಡಿಗೆ ಸೋಡಾ ಸಹ ಬಳಸಬಹುದು. ಒಂದು ಪಾತ್ರೆಯಲ್ಲಿ ತಣ್ಣೀರನ್ನು ತುಂಬಿಸಿ, ಅದಕ್ಕೆ ಅರ್ಧ ಕಪ್ ಬಿಳಿ ವಿನೆಗರ್ ಮತ್ತು ಒಂದು ಟೀಚಮಚ ಅಡಿಗೆ ಸೋಡಾ ಸೇರಿಸಿ. ಎಲೆಕೋಸು ತುಂಡುಗಳನ್ನು ಸುಮಾರು 10 ನಿಮಿಷಗಳ ಕಾಲ ಆ ನೀರಿನಲ್ಲಿ ನೆನೆಸಲು ಬಿಡಿ. ನಂತರ, ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದು ಯಾವುದೇ ಮೇಲ್ಮೈ ಕೊಳೆಯನ್ನು ಹಾಗೂ ಹುಳಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ.

ಬಿಸಿ ನೀರು: ನೀವು ಎಲೆಕೋಸನ್ನು ಬಿಸಿ ನೀರಿನಲ್ಲಿ ಕುದಿಸಿ ಸ್ವಚ್ಛಗೊಳಿಸಬಹುದು. ಇದನ್ನು ಮಾಡಲು, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಮತ್ತು ಕುದಿಯುವ ನೀರಿಗೆ ಹೂಕೋಸು ಸೇರಿಸಿ. ಕೆಲವು ಸೆಕೆಂಡುಗಳಲ್ಲಿ, ಎಲೆಕೋಸಿನೊಳಗೆ ಅಡಗಿರುವ ಎಲ್ಲಾ ಕೊಳಕು, ಹುಳ ಮತ್ತು ಕೀಟಗಳು ಹೊರಬರಲು ಪ್ರಾರಂಭಿಸುತ್ತವೆ. ಬಯಸಿದಲ್ಲಿ, ನೀವು ಕುದಿಯುವ ನೀರಿಗೆ ಉಪ್ಪನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: ಹಣ್ಣು-ತರಕಾರಿಗಳನ್ನು ಸ್ವಚ್ಛಗೊಳಿಸುವ ಸರಿಯಾದ ವಿಧಾನ ಯಾವುದು?

ಅಡಿಗೆ ಸೋಡಾ ಮತ್ತು ನಿಂಬೆಹಣ್ಣು: ಹೂಕೋಸು ಮಾತ್ರವಲ್ಲ, ಎಲೆಕೋಸು ಎಲೆಗಳಲ್ಲಿಯೂ ಕೀಟಗಳು ಇರುತ್ತವೆ. ಆದ್ದರಿಂದ, ನೀವು ಎರಡೂ ತರಕಾರಿಗಳನ್ನು ತೊಳೆಯಲು ಈ ವಿಧಾನವನ್ನು ಬಳಸಬಹುದು. ಮೊದಲು, ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ಅಡಿಗೆ ಸೋಡಾ ಮತ್ತು ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಈಗ, ಈ ನೀರಿಗೆ ಹೂಕೋಸು ಸೇರಿಸಿ ಮತ್ತು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಎಲ್ಲಾ ಹುಳಗಳನ್ನು ತೆಗೆದುಹಾಕುತ್ತದೆ ಮತ್ತು ಎಲೆಕೋಸನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ.

ಈ ಎಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ಹೂಕೋಸಿನಲ್ಲಿರುವ ಹುಳ, ಕೊಳೆ, ಕೀಟಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version