ವಿಪತ್ತು ನಿರ್ವಹಣಾ ಸಭೆಗೆ ಗೈರಾದ ಹೆಸ್ಕಾಂ ಅಧಿಕಾರಿ ವಿರುದ್ಧ ಎಂ.ಬಿ. ಪಾಟೀಲ್ ಗರಂ – Kannada News | Minister M.B. Patil Pulls Up HESCOM Officials for Skipping Bagalkot Disaster Management Meeting

ಬಾಗಲಕೋಟೆ, ಜೂನ್​​ 30: ಸಚಿವ ಎಂ.ಬಿ. ಪಾಟೀಲ್ ಅವರು ಬಾಗಲಕೋಟೆಯಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಸಭೆಗೆ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ (EE) ಗೈರಾದ ವಿಚಾರ ಗಮನಕ್ಕೆ ಬಂದ ಕೂಡಲೇ, ನಿಮ್ಮ ಅಧಿಕಾರಿ ಯಾಕೆ ಸಭೆಗೆ ಬಂದಿಲ್ಲ ಎಂದು ಪ್ರಶ್ನಿಸಿ ಸಚಿವರು ಸಿಟ್ಟಾಗಿದ್ದಾರೆ. ಬಾಗಲಕೋಟೆ ‌ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ನೀರು ಸರಬರಾಜಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆ ಹೆಸ್ಕಾಂ ಅಧಿಕಾರಿಗಳನ್ನು ಸಚಿವರು ತರಾಟೆಗೆ ಪಡೆದಿದ್ದು, ಒಂದೂವರೆ ತಿಂಗಳಾದರೂ ಆರ್‌. ‌ಆರ್‌. ನಂಬರ್​​ ಕೊಟ್ಟಿಲ್ಲ. ಒಂದೂವರೆ ವರ್ಷದಿಂದ ಹೀಗೆ ಕೆಲಸ ಮಾಡ್ತಿದಿರಾ ಎಂದು ಹೇಳಿದ ಎಂ.ಬಿ. ಪಾಟೀಲ್​​, ಈ ಸಂಬಂಧ ಅಧಿಕಾರಿಗಳಿಗೆ ಖಡಕ್​​ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ – Kannada News | Minister KJ George clarify about power distribution privatization

ಶಿವಮೊಗ್ಗ, (ಜೂನ್ 30): ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಈ ಸಂಬಂಧ ಈಗಾಗಲೇ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರವಾಗಿ ನಾನೊಬ್ಬನೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ, ನಿಮ್ಮ ಅಭಿಪ್ರಾಯದ ಮೇರೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದೀಗ ಶಿವಮೊಗ್ಗದಲ್ಲಿಂದು ಇಂಧನ ಸಚಿವ ಕೆ ಜೆ ಜಾರ್ಜ್ ಕೂಡಾ ಮಾತನಾಡಿದ್ದು, ವಿದ್ಯುತ್ ಖಾಸಗೀಕರಣ ವಿಚಾರದಲ್ಲಿ ಆತಂಕ ಬೇಡ. 2003ರಲ್ಲಿ ಬಿಜೆಪಿ ಅಧಿಕಾರ ಇದ್ದಾಗ ಖಾಸಗೀಕರಣಕ್ಕೆ ತಿದ್ದುಪಡಿ ತಂದರು. ಆದ್ರೆ ಇಷ್ಟರೊಳಗೆ ಕರ್ನಾಟಕದಲ್ಲಿ ಆಗಿಲ್ಲ. ಈಗ ಮತ್ತೆ ವಿದ್ಯುತ್ ಖಾಸಗೀಕರಣಕ್ಕೆ KERCಗೆ  ಪ್ರಸ್ತಾವನೆ‌ಸಲ್ಲಿಸಿದಾರೆ. ನಮ್ಮ ವಿದ್ಯುತ್ ನಿಗಮಗಳಿಗೆ ಅಬ್ಜೆಕ್ಷನ್ ಫೈಲ್ ಮಾಡಲು ಹೇಳಿದ್ದೇವೆ. ಫೈನಲ್ ಆರ್ಡರ್ ಬಂದಮೇಲೆ ನಾವು ಏನ್ ಮಾಡ್ಬೇಕು ಯೋಚಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲೂ 43°C, ಯೂರೋಪ್​ನಲ್ಲೂ 43°C; ಯೂರೋಪಿಯನ್ನರಿಗೆ ಯಾಕೆ ವಿಪರೀತ ಶೆಖೆ? ಇಲ್ಲಿವೆ ಅಚ್ಚರಿಯ ಕಾರಣಗಳು – Kannada News | Interesting reasons why body feels more heat in Europe than in India with same temperature

ಈ ಬೇಸಿಗೆಯಲ್ಲಿ ಯೂರೋಪ್​ನಲ್ಲಿ ಭಾರೀ ಬಿಸಿಗಾಳಿಗೆ ಜನರು ಹೈರಾಣಾಗಿ ಹೋಗಿದ್ದಾರೆ. ಶೆಖೆ ತಡೆಯಲಾಗದೆ ಯೂರೋಪಿಯನ್ನರು ತತ್ತರಿಸುತ್ತಿದ್ದಾರೆ. ಎಲ್ಲೆಡೆ ಜನರು ಎಸಿಗಳ ಮೊರೆ ಹೋಗುತ್ತಿದ್ದಾರೆ. ಇಷ್ಟೊಂದು ಶೆಖೆ ತಮ್ಮ ಜೀವಮಾನದಲ್ಲಿ ಅನುಭವಿಸಿಲ್ಲ ಎಂದು ಅಳುತ್ತಿದ್ದಾರೆ. ಅನೇಕ ಕಡೆ ಉಷ್ಣಾಂಶ 43 ಡಿಗ್ರಿವರೆಗೂ ಹೋಗಿದೆ. ಯೂರೊಪಿಯನ್ನರು ಶೆಖೆ ತಾಳಲಾಗದೆ ಅಲವತ್ತುಕೊಳ್ಳುತ್ತಿರುವುದು ಆನ್​ಲೈನ್​ನಲ್ಲಿ ಟ್ರೆಂಡ್ ಆಗುತ್ತಿದೆ. ಆದರೆ, ಭಾರತದಲ್ಲಿ ಅನೇಕರಿಗೆ ಇದು ಅಚ್ಚರಿ ತಂದಿರಬಹುದು. ಭಾರತದಲ್ಲಿ ಉಷ್ಣಾಂಶ 48 ಡಿಗ್ರಿವರೆಗೂ ಹೋಗುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಉಷ್ಣಾಂಶ 40 ಡಿಗ್ರಿ ದಾಟುವುದು ತೀರಾ ಸಾಮಾನ್ಯವಾಗಿದೆ. ಬೆಂಗಳೂರಿನಲ್ಲೇ ಕೆಲ ಬಾರಿ 40 ಡಿಗ್ರಿ ಮೀರಿ ಹೋಗುವುದುಂಟು. ಆದರೆ, ಭಾರತ ಹಾಗೂ ಯೂರೋಪ್​ನಲ್ಲಿ ಒಂದೇ ತಾಪಮಾನ ಇದ್ದರೂ ವಾಸ್ತವಿಕ ತಾಪಮಾನದಲ್ಲಿ ವ್ಯತ್ಯಾಸ ಇರುತ್ತದಂತೆ. ಉದಾಹರಣೆಗೆ, ಭಾರತದಲ್ಲಿ 48°C ಉಷ್ಣಾಂಶದ ಅನುಭವಕ್ಕೂ ಯೂರೋಪ್​ನಲ್ಲಿ 48°C ಉಷ್ಣಾಂಶದ ಅನುಭವಕ್ಕೂ ವ್ಯತ್ಯಾಸ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಕುತೂಹಲಕಾರಿ ಕಾರಣಗಳು ಇವೆ:

1. ಯೂರೋಪ್​ನಲ್ಲಿ ಚಳಿಗಾಲಕ್ಕಾಗಿ ನಿರ್ಮಿಸಲಾದ ಮನೆಗಳು

ಯುರೋಪ್‌ನ ಬಹುತೇಕ ದೇಶಗಳಲ್ಲಿ ವರ್ಷದ ಹೆಚ್ಚು ದಿನಗಳು ವಿಪರೀತ ಚಳಿ ಇರುತ್ತದೆ. ಹಾಗಾಗಿ, ಅಲ್ಲಿನ ಮನೆಗಳನ್ನು ಒಳಗಿನ ಶಾಖ (Heat) ಹೊರಗೆ ಹೋಗದಂತೆ ದಪ್ಪ ಗೋಡೆಗಳು, ಸಣ್ಣ ಕಿಟಕಿಗಳು ಮತ್ತು ಕಟ್ಟುನಿಟ್ಟಾದ ಇನ್ಸುಲೇಶನ್ (Insulation) ಬಳಸಿ ನಿರ್ಮಿಸಲಾಗಿರುತ್ತದೆ. ಚಳಿಗಾಲದಲ್ಲಿ ನೆರವಾಗುವ ಇದೇ ತಂತ್ರಜ್ಞಾನ, ಬೇಸಿಗೆಯಲ್ಲಿ ಮಾರಕವಾಗುತ್ತದೆ. ಒಳಗೆ ಬಂದ ಬಿಸಿ ಗಾಳಿ ಹೊರಗೆ ಹೋಗಲು ದಾರಿಯಿಲ್ಲದೆ ಮನೆಗಳು ‘ಓವನ್’ ತರಹ ಬಿಸಿಯಾಗುತ್ತವೆ. ಭಾರತದಲ್ಲಿ ಮನೆಗಳನ್ನು ಗಾಳಿ-ಬೆಳಕು ಚೆನ್ನಾಗಿ ಆಡುವಂತೆ ಮತ್ತು ತಂಪಾಗಿರುವಂತೆ (Cross-ventilation) ಕಟ್ಟಲಾಗುತ್ತದೆ.

ಇದನ್ನೂ ಓದಿ: WhatsApp Username: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್

2. ಯೂರೋಪ್​ನಲ್ಲಿ ಎಸಿ ಮತ್ತು ಫ್ಯಾನ್‌ಗಳ ಕೊರತೆ

ಭಾರತದ ಹೆಚ್ಚಿನ ಮನೆ, ಕಚೇರಿಗಳು ಮತ್ತು ಮೆಟ್ರೋಗಳಲ್ಲಿ ಫ್ಯಾನ್ ಅಥವಾ ಏರ್ ಕಂಡೀಷನರ್ (AC) ವ್ಯವಸ್ಥೆ ಇರುತ್ತದೆ. ಆದರೆ ಯುರೋಪ್‌ನಲ್ಲಿ ಐತಿಹಾಸಿಕವಾಗಿ ತಂಪಾದ ಹವಾಮಾನ ಇರುವುದರಿಂದ ಶೇ. 90 ಕ್ಕೂ ಹೆಚ್ಚು ಮನೆಗಳಲ್ಲಿ ಎಸಿ ಇರಲಿ, ಕನಿಷ್ಠ ಸೀಲಿಂಗ್ ಫ್ಯಾನ್‌ಗಳೂ ಇರುವುದಿಲ್ಲ. ಅಲ್ಲಿನ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸುರಕ್ಷತೆಯ ಕಾರಣಕ್ಕೆ ಕಿಟಕಿಗಳನ್ನು ಕೇವಲ 10 ಡಿಗ್ರಿಯಷ್ಟು ಮಾತ್ರ ತೆರೆಯಲು ಅವಕಾಶವಿರುತ್ತದೆ. ಇದರಿಂದಾಗಿ ಮನೆಯೊಳಗೆ ಹವಾನಿಯಂತ್ರಣ ಅಸಾಧ್ಯವಾಗುತ್ತದೆ.

3. ಹಗಲಿನ ಅವಧಿ ಹೆಚ್ಚು

ಭೂಮಿಯ ಭೌಗೋಳಿಕ ಸ್ಥಾನದ ಕಾರಣದಿಂದಾಗಿ, ಯುರೋಪ್‌ನಲ್ಲಿ ಬೇಸಿಗೆಯ ದಿನಗಳು ಬಹಳ ದೀರ್ಘವಾಗಿರುತ್ತವೆ. ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ (ಸುಮಾರು 16-17 ಗಂಟೆಗಳು) ಸೂರ್ಯನ ಬೆಳಕು ಇರುತ್ತದೆ. ಇದರಿಂದಾಗಿ ಭೂಮಿ, ರಸ್ತೆ ಮತ್ತು ಕಟ್ಟಡಗಳು ದಿನವಿಡೀ ಬಿಸಿಲನ್ನು ಹೀರಿಕೊಳ್ಳುತ್ತವೆ. ರಾತ್ರಿಯ ಅವಧಿ ಕಡಿಮೆಯಿರುವುದರಿಂದ ವಾತಾವರಣ ತಂಪಾಗಲು ಸಮಯವೇ ಸಿಗುವುದಿಲ್ಲ. ಭಾರತದಲ್ಲಿ ರಾತ್ರಿಯಾಗುತ್ತಿದ್ದಂತೆ ತಾಪಮಾನ ಗಣನೀಯವಾಗಿ ಇಳಿಕೆಯಾಗಿ ಕೊಂಚ ಉಪಶಮನ ನೀಡುತ್ತದೆ.

4. ಬಹಳ ಅಧಿಕ ಹ್ಯೂಮಿಡಿಟಿ

ತಾಪಮಾನ ಹೆಚ್ಚಾದಾಗ ಮಾನವನ ದೇಹವು ಬೆವರಿನ ಮೂಲಕ ತನ್ನನ್ನು ತಾನು ತಂಪಾಗಿಸಿಕೊಳ್ಳುತ್ತದೆ. ಯುರೋಪ್‌ನ ಹಲವು ಭಾಗಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಹವಾಮಾನವು ವಿಪರೀತ ಆರ್ದ್ರತೆಯಿಂದ (Humidity) ಕೂಡಿರುತ್ತದೆ. ಗಾಳಿಯಲ್ಲಿ ತೇವಾಂಶ ಹೆಚ್ಚಿದ್ದಾಗ ಮೈ ಬೆವರು ಬೇಗನೆ ಒಣಗುವುದಿಲ್ಲ. ಬೆವರು ಆವಿಯಾಗದಿದ್ದಾಗ ದೇಹದ ಉಷ್ಣಾಂಶ ಕಡಿಮೆಯಾಗದೆ, ಒಳಗೆ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್​ಲೈನ್​ಗಳಿವೆ, ಗಮನಿಸಿ

ಉದಾಹರಣೆಗೆ, ಬೆಂಗಳೂರಿನಲ್ಲಿ 35°C ಉಷ್ಣಾಂಶವು ದೆಹಲಿಯ 35°C ಉಷ್ಣಾಂಶಕ್ಕಿಂತ ಹೆಚ್ಚು ಶೆಖೆ ತರುತ್ತದೆ. ಇದಕ್ಕೆ ಬೆಂಗಳೂರಿನಲ್ಲಿ ಹೆಚ್ಚು ಇರುವ ಆರ್ದ್ರತೆ ಅಥವಾ ಹ್ಯೂಮಿಡಿಟಿ.

5. ಬಿಸಿಲಿಗೆ ಹೊಂದಿಕೊಂಡಿರುವ ಭಾರತೀಯರು

ಭಾರತೀಯರು ತಲೆಮಾರುಗಳಿಂದಲೂ ಕಠಿಣವಾದ ಬಿಸಿಲಿಗೆ ಒಗ್ಗಿಕೊಂಡಿದ್ದಾರೆ (Acclimatized). ಬಿಸಿಲಿಗೆ ತಕ್ಕಂತಹ ಹತ್ತಿ ಬಟ್ಟೆ ಧರಿಸುವುದು, ಸಾಕಷ್ಟು ನೀರು, ಮಜ್ಜಿಗೆ ಕುಡಿಯುವುದು ನಮಗೆ ರೂಢಿಯಾಗಿದೆ. ಆದರೆ ಯುರೋಪಿಯನ್ನರ ದೇಹವು ಹಠಾತ್ ಆಗಿ ಬರುವ ಇಂತಹ ತೀವ್ರ ಬಿಸಿಲನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಇದರಿಂದಾಗಿ ಅವರಿಗೆ 43°C ತಾಪಮಾನವು ಭಾರತದ 55°C ನಷ್ಟೇ ಭೀಕರವಾಗಿ ಅನುಭವಕ್ಕೆ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Dhiraj Seth ಭಾರತದ ನೂತನ ಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಅಧಿಕಾರ ಸ್ವೀಕಾರ – Kannada News | General Dhiraj Seth takes charge as Indias New Army Chief replaced General Upendra Dwivedi

ನವದೆಹಲಿ, ಜೂನ್ 30: ಭಾರತೀಯ ಭೂಸೇನೆಯಲ್ಲಿ (Indian Army) 4 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಜನರಲ್ ಉಪೇಂದ್ರ ದ್ವಿವೇದಿ ಅವರ ಉತ್ತರಾಧಿಕಾರಿಯಾಗಿ ಜನರಲ್ ಧೀರಜ್ ಸೇಠ್ ಇಂದು (ಮಂಗಳವಾರ) ಭಾರತದ 31ನೇ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಜನರಲ್ ಧೀರಜ್ ಸೇಠ್ (Dhiraj Seth) ಭೂಸೇನೆಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಮರ್ಡ್ ಕಾರ್ಪ್ಸ್ (ಟ್ಯಾಂಕ್ ರೆಜಿಮೆಂಟ್) ವಿಭಾಗದ ಅಧಿಕಾರಿಯಾಗಿರುವ ಇವರು, 1997ರಲ್ಲಿ ನಿವೃತ್ತರಾದ ಜನರಲ್ ಶಂಕರ್ ರಾಯ್ ಚೌಧರಿ ಅವರ ನಂತರ ಕಳೆದ ಮೂರು ದಶಕಗಳಲ್ಲಿ ಈ ಅತ್ಯುನ್ನತ ಹುದ್ದೆಗೇರಿದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿದ್ದಾರೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಇಂದ ಪದವಿ ಪಡೆದು ಡಿಸೆಂಬರ್ 1986ರಲ್ಲಿ ಸೇನೆಗೆ ಸೇರಿದ ಜನರಲ್ ಧೀರಜ್ ಸೇಠ್ ಅವರಿಗೆ ಸುಮಾರು 40 ವರ್ಷಗಳ ಮಿಲಿಟರಿ ಅನುಭವವಿದೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ದೇಶಾದ್ಯಂತ ಹಲವು ಪ್ರಮುಖ ಕಾರ್ಯಾಚರಣೆ, ಕಮಾಂಡ್ ಮತ್ತು ಸ್ಟಾಫ್ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರು ಆರ್ಮರ್ಡ್ ರೆಜಿಮೆಂಟ್, ಆರ್ಮರ್ಡ್ ಬ್ರಿಗೇಡ್, ಸ್ಟ್ರೈಕ್ ಕಾರ್ಪ್ಸ್ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾದ ಪಡೆಗಳ ನೇತೃತ್ವ ವಹಿಸಿದ್ದರು. ಅಲ್ಲದೆ, ಭಾರತದ ಪಶ್ಚಿಮ ಗಡಿಯ ರಕ್ಷಣೆಯ ಜವಾಬ್ದಾರಿ ಹೊಂದಿರುವ ಕಾರ್ಯತಂತ್ರದ ಪ್ರಮುಖ ಕಮಾಂಡ್‌ಗಳಾದ ಸದರ್ನ್ ಕಮಾಂಡ್ ಮತ್ತು ಸೌತ್ ವೆಸ್ಟರ್ನ್ ಕಮಾಂಡ್ ಎರಡನ್ನೂ ಮುನ್ನಡೆಸಿದ್ದಾರೆ.

ಇದನ್ನೂ ಓದಿ: ಪೆರೇಡ್‌ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಪುಷ್ಅಪ್‌; ವಿಡಿಯೋ ವೈರಲ್

4 ದಶಕಗಳ ಕಾಲ ಸೇವೆ ಸಲ್ಲಿಸಿರುವ ಇವರು, ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಜೈಪುರ ಮೂಲದ ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಪುಣೆ ಮೂಲದ ಸದರ್ನ್ ಕಮಾಂಡ್ ಹೀಗೆ ಎರಡು ಪ್ರಮುಖ ಕಾರ್ಯಾಚರಣೆಯ ಕಮಾಂಡ್‌ಗಳ ನೇತೃತ್ವ ವಹಿಸಿದ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ವಿಶಿಷ್ಟ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ (PVSM), ಉತ್ತಮ ಯುದ್ಧ ಸೇವಾ ಪದಕ (UYSM) ಮತ್ತು ಅತಿ ವಿಶಿಷ್ಟ ಸೇವಾ ಪದಕಗಳನ್ನು (AVSM) ನೀಡಿ ಗೌರವಿಸಲಾಗಿದೆ.

ಧೀರಜ್ ಸೇಠ್ ಅವರ ತಂದೆ ಕೃಷ್ಣ ಮೋಹನ್ ಸೇಠ್ ಕೂಡ ಭಾರತೀಯ ಸೇನೆಯಲ್ಲಿ ಅಡ್ಜುಟೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು. ಇವರ ಕಿರಿಯ ಸಹೋದರ ರವನೀಶ್ ಸೇಠ್ ಭಾರತೀಯ ನೌಕಾಸೇನೆಯಲ್ಲಿ ರಿಯರ್ ಅಡ್ಮಿರಲ್ ಆಗಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಧೀರಜ್ ಸೇಠ್ ನೇಮಕ

ಸಾಮರ್ಥ್ಯ ವೃದ್ಧಿ ಮತ್ತು ಮಿಲಿಟರಿ ಸುಧಾರಣೆಗಳಲ್ಲಿ ಜನರಲ್ ಸೇಠ್ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತೀಯ ಸೇನೆಯು ಆಧುನೀಕರಣ, ತಂತ್ರಜ್ಞಾನದ ಮೇಲ್ದರ್ಜೀಕರಣ ಮತ್ತು ಭಾರತದ ಗಡಿಗಳಲ್ಲಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಕಾಯ್ದುಕೊಳ್ಳುವತ್ತ ಗಮನಹರಿಸುತ್ತಿರುವ ಸಮಯದಲ್ಲಿ ಈ ನಾಯಕತ್ವದ ಬದಲಾವಣೆ ನಡೆದಿದೆ.

ಪ್ರಸ್ತುತ ನಡೆಯುತ್ತಿರುವ ಹಲವು ಸುಧಾರಣೆಗಳನ್ನು ಅವರ ಪೂರ್ವಾಧಿಕಾರಿ ಜನರಲ್ ಉಪೇಂದ್ರ ದ್ವಿವೇದಿ ಅವರ ಅವಧಿಯಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಈ ಯೋಜನೆಗಳನ್ನು ವಾಸ್ತವ ರೂಪಕ್ಕೆ ತರುವ ಜವಾಬ್ದಾರಿ ಜನರಲ್ ಸೇಠ್ ಅವರ ಮೇಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:11 pm, Tue, 30 June 26

Source link

ಮೊಬೈಲ್‌ ನೋಡುತ್ತಾ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು? – Kannada News | What are the problems caused by using mobile while eating

ಇಂದಿನ ಈ ಡಿಜಿಟಲ್ ಯುಗದಲ್ಲಿ, ಮೊಬೈಲ್ ಫೋನ್‌ಗಳು (mobile phone) ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಬಹುತೇಕ ಹೆಚ್ಚಿನವರು ಬೆಳಿಗ್ಗೆ ಎದ್ದ ಕ್ಷಣದಿಂದ ಹಿಡಿದು ರಾತ್ರಿ ಮಲಗುವವರೆಗೆ, ಹೆಚ್ಚಿನ ಸಮಯ ಮೊಬೈಲ್‌ ಫೋನ್‌ನಲ್ಲಿಯೇ ಕಳೆಯುತ್ತಾರೆ. ಅಷ್ಟೇ ಅಲ್ಲದೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಊಟ ಮಾಡುವಾಗಲೂ ಮೊಬೈಲ್‌ ನೋಡುತ್ತಾರೆ. ಈ ಅಭ್ಯಾಸವು ಸಾಮಾನ್ಯದಂತೆ ತೋರಿದರೂ, ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಮಗಳನ್ನು ಬೀರುತ್ತವೆ. ನೀವು ಕೂಡ ಊಟ ಮಾಡುವಾಗ ಮೊಬೈಲ್‌ ಫೋನ್‌ ನೋಡ್ತೀರಾ, ಈ ಒಂದು ಅಭ್ಯಾಸ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಊಟ ಮಾಡುವಾಗ ಮೊಬೈಲ್‌ ಫೋನ್‌ ನೋಡಿದರೆ ಏನಾಗುತ್ತದೆ?

ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ನೀವು ಮೊಬೈಲ್ ನೋಡುತ್ತಾ ಊಟ ಮಾಡುವಾಗ, ನಿಮ್ಮ ಪೂರ್ಣ ಗಮನ ಫೋನ್‌ ಮೇಲೆಯೇ ಇರುತ್ತದೆ ಹೊರತು ಆಹಾರದ ಮೇಲೆ ಇರುವುದಿಲ್ಲ. ಇದರಿಂದ ಆಹಾರವನ್ನು ಸರಿಯಾಗಿ ಜಗಿಯಲು ಸಾಧ್ಯವಾಗುವುದಿಲ್ಲ, ಈ ರೀತಿ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಇದು ಗ್ಯಾಸ್, ಅಜೀರ್ಣ ಮತ್ತು ಆಮ್ಲೀಯತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ಜೀರ್ಣಕ್ರಿಯೆಯ ಮೇಲೆಯೂ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ.

ಅತಿಯಾಗಿ ತಿನ್ನುವ ಅಪಾಯ: ಊಟ ಮಾಡುವಾಗ ಟಿವಿ ಅಥವಾ ಮೊಬೈಲ್ ಫೋನ್ ನೋಡುವುದರಿಂದ ಆಹಾರದ ಮೇಲಿನ ಗಮನ ಕಡಿಮೆಯಾಗುತ್ತದೆ, ಇದರಿಂದಾಗಿ ಜನರು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾರೆ. ಅತಿಯಾಗಿ ಊಟ ಮಾಡುವ ಅಭ್ಯಾಸ  ಇದು ತೂಕ ಹೆಚ್ಚಾಗುವ ಮತ್ತು ಬೊಜ್ಜುತನದ ಅಪಾಯವನ್ನು ಹೆಚ್ಚಿಸುತ್ತದೆ.

ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು: ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಆಹಾರವನ್ನು ಎಚ್ಚರಿಕೆಯಿಂದ ಸೇವನೆ ಮಾಡುವುದು ಅತ್ಯಗತ್ಯ. ಊಟ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ಕರುಳು ಮತ್ತು ಮೆದುಳಿನ ನಡುವಿನ ಸಮನ್ವಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಜೀರ್ಣಕ್ರಿಯೆಯ ಸಮಸ್ಯೆಗಳು ಹೆಚ್ಚಾಗಬಹುದು.

ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ:  ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್‌ ಫೋನ್‌ ತೋರಿಸುತ್ತಾ ಊಟ ಮಾಡಿಸುತ್ತಾರೆ. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಸರಿಯಾದ ಆಹಾರ ಪದ್ಧತಿ ಬೆಳೆಯುವುದಿಲ್ಲ. ಇದು ಪೌಷ್ಟಿಕಾಂಶದ ಕೊರತೆ, ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಒಂದು ತಿಂಗಳ ಕಾಲ ಚಹಾ ಸೇವಿಸದಿದ್ದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ?

ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ: ಮೊಬೈಲ್‌ ನೋಡುತ್ತಾ ಊಟ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದೆ ಮತ್ತು ಇದು ವ್ಯಕ್ತಿಯು ಆಹಾರವನ್ನು ಆನಂದಿಸುತ್ತಾ ಸವಿಯುವುದನ್ನು ತಡೆಯುತ್ತದೆ.

ಸೋಂಕಿನ ಅಪಾಯ ಹೆಚ್ಚಾಗಬಹುದು: ಮೊಬೈಲ್ ಫೋನ್‌ಗಳಲ್ಲಿ ಹಲವು ರೀತಿಯ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಅಂಟಿಕೊಂಡಿರುತ್ತವೆ. ಊಟ ಮಾಡುವಾಗ ಫೋನ್ ಅನ್ನು ಪದೇ ಪದೇ ಸ್ಪರ್ಶಿಸುವ ಮೂಲಕ ಈ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸಬಹುದು. ಇದು ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

ಆಹಾರ ಸೇವಿಸುವಾಗ ಪಾಲಿಸಬೇಕಾದ ಪ್ರಮುಖ ನಿಯಮಗಳೇನು?

  • ಊಟ ಮಾಡುವಾಗ ಮೊಬೈಲ್ ಮತ್ತು ಟಿವಿಯಿಂದ ದೂರವಿರಿ.
  •  ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿರಿ. ಈ ರೀತಿ ಮಾಡುವುದರಿಂದ ಲಾಲಾರಸವು ಆಹಾರದೊಂದಿಗೆ ಚೆನ್ನಾಗಿ ಬೆರೆಯುತ್ತದೆ. ಮತ್ತು ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ.
  • ಯಾವಾಗಲೂ ಶಾಂತ ಮತ್ತು ಆಹ್ಲಾದಕರ ವಾತಾವರಣದಲ್ಲಿ ಕುಳಿತು ಊಟ ಮಾಡಿ.
  •  ಸಾಧ್ಯವಾದರೆ ಕುಟುಂಬದೊಂದಿಗೆ ಕುಳಿತು ಒಟ್ಟಿಗೆ  ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಲ್ಯ ವಿವಾಹ ತಡೆದದ್ದೇ ತಪ್ಪಾಯ್ತು!: ಕೋಲಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕುತ್ತಿಗೆಗೆ ವೇಲ್ ಬಿಗಿದು ಕೊಲೆಗೆ ಯತ್ನಿಸಿದ ಅಪ್ರಾಪ್ತ ಬಾಲಕಿ – Kannada News | Mulbagal Child Marriage Revenge: Minor Girl Attacks Anganwadi Worker Padmavathi

ಕೋಲಾರ, ಜೂ.30: ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹವನ್ನು ತಡೆದು ಇಲಾಖೆಗೆ ಮಾಹಿತಿ ನೀಡಿದ್ದಕ್ಕಾಗಿ, ಆಕ್ರೋಶಗೊಂಡ ಅಪ್ರಾಪ್ತ ಬಾಲಕಿಯೊಬ್ಬಳು ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಯ ಕುತ್ತಿಗೆಗೆ ವೇಲ್ (ದುಪಟ್ಟಾ) ಬಿಗಿದು ಕೊಲೆ ಮಾಡಲು ಯತ್ನಿಸಿರುವ ಭೀಕರ ಘಟನೆ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮುಳಬಾಗಿಲು ತಾಲೂಕಿನ ಜೆ.ಕುರುಬರಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಹಲ್ಲೆಗೊಳಗಾದ ಮಹಿಳೆ, ಸದ್ಯ ತೀವ್ರ ಗಾಯಗೊಂಡಿದ್ದು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆ.ಕುರುಬರಹಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಕೆಯ ತಂದೆ-ತಾಯಿ ಕೆಲವು ತಿಂಗಳುಗಳ ಹಿಂದೆ ಮದುವೆ ನಿಶ್ಚಯಿಸಿದ್ದರು. ಈ ವಿಷಯ ತಿಳಿದ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅವರು, 18 ವರ್ಷ ತುಂಬುವ ಮುನ್ನ ಮದುವೆ ಮಾಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ ಎಂದು ಪೋಷಕರಿಗೆ ಬುದ್ಧಿವಾದ ಹೇಳಿದ್ದರು. ಅದರೂ ಪೋಷಕರು ಕೇಳದಿದ್ದಾಗ, ಪದ್ಮಾವತಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳಿಗೆ ಅಧಿಕೃತ ಮಾಹಿತಿ ನೀಡಿದ್ದರು.

ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಲ್ಯ ವಿವಾಹವನ್ನುತಡೆದು, ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಕೆಜಿಎಫ್ (KGF) ಮಸ್ಕಾಂ ಬಳಿ ಇರುವ ಬಾಲ ಮಂದಿರಕ್ಕೆ ಸೇರಿಸಿದ್ದರು. ಬಾಲ ಮಂದಿರದಲ್ಲಿದ್ದ ಬಾಲಕಿಯನ್ನು ಇತ್ತೀಚೆಗಷ್ಟೇ ಪೋಷಕರು ವಾಪಸ್ ಮನೆಗೆ ಕರೆತಂದಿದ್ದರು. ತನ್ನ ಮದುವೆ ಮುರಿಯಲು ಅಂಗನವಾಡಿ ಕಾರ್ಯಕರ್ತೆಯೇ ಕಾರಣ ಎಂದು ದ್ವೇಷ ಸಾಧಿಸುತ್ತಿದ್ದ ಬಾಲಕಿ, ಪದ್ಮಾವತಿ ಅವರು ದೇವಸ್ಥಾನದಲ್ಲಿದ್ದ ವೇಳೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾಳೆ. ತನ್ನ ವೇಲ್‌ನಿಂದ ಪದ್ಮಾವತಿ ಅವರ ಕುತ್ತಿಗೆಯನ್ನು ಬಲವಾಗಿ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲದೆ ತಲೆಯನ್ನು ಗೋಡೆಗೆ ಚಚ್ಚಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಒಂದು ಗಿಡಕ್ಕೆ 3,300 ರೂ., ಗುಂಡಿ ತೋಡಲು 300 ರೂ.!: ನೀವು ಹಣ ದುರ್ಬಳಕೆ ಮಾಡ್ತಿದ್ದೀರಾ? ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸಿದ ಕೃಷ್ಣಭೈರೇಗೌಡ

ಈ ಹಲ್ಲೆಯ ಹಿಂದೆ ಬಾಲಕಿಯ ತಂದೆ ಮತ್ತು ತಾಯಿಯ ನೇರ ಕುಮ್ಮಕ್ಕಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ದಾಳಿಯಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡ ಪದ್ಮಾವತಿ ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸದ್ಯ ತೀವ್ರ ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಘಟನೆ ನಡೆದು ದೂರು ನೀಡಿದ್ದರೂ ಮುಳಬಾಗಿಲು ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ವಿವಿಧ ದಲಿತ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖ್ಯಾತ ಚಿತ್ರ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ. ಶಿವಪ್ರಸಾದ್ ನಿಧನ – Kannada News | International Artist KT Shivaprasad passes away In Bengaluru

ಹಾಸನ, (ಜೂನ್ 30): ಕಲಾ ಪ್ರಪಂಚದಲ್ಲಿ ಜಾಗತಿಕ ಮಟ್ಟದ ಐಕಾನ್ ಆಗಿ ಗುರುತಿಸಿಕೊಂಡಿದ್ದ, ಗ್ರಾಮೀಣ ಸೊಗಡಿನ ಜೊತೆಗೆ ಆಧುನಿಕ ಕಲೆಯನ್ನು ಬೆಸೆದ ಕರ್ನಾಟಕದ ಹೆಮ್ಮೆಯ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ (KT Shivaprasad) ಅವರು ನಿಧನರಾಗಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೆ.ಟಿ.ಶಿವಪ್ರಸಾದ್ ಅವರು ಇಂದು (ಜೂನ್ 30) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ತಳಸಮುದಾಯಗಳ, ರೈತರ ಧ್ವನಿಯಾಗಿ ಕಲೆಯ ಮೂಲಕವೇ ಕ್ರಾಂತಿ ಸೃಷ್ಟಿಸಿದ್ದ ಈ ಅಪರೂಪದ ಪ್ರತಿಭೆ ನಿಧನದಿಂದಾಗಿ ಭಾರತೀಯ ಕಲಾ ರಂಗದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಂತಾಗಿದೆ.

1947ರಲ್ಲಿ ಕೊಡಗಿನ ಮಡಿಕೇರಿ (ಮರ್ಕಾರ) ತಾಲೂಕಿನ ಬಡ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಶಿವಪ್ರಸಾದ್ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯತ್ತ apparel ಆಸಕ್ತಿ ಇತ್ತು. ಆದರೆ ಆ ಕಾಲದಲ್ಲಿ ಚಿತ್ರಕಲೆಗೆ ಅಷ್ಟಾಗಿ ಮನ್ನಣೆ ಇರದ ಕಾರಣ, ಕುಟುಂಬದ ಇಚ್ಛೆಯಂತೆ ಅವರು ಇಂಜಿನಿಯರಿಂಗ್ ಕಾಲೇಜು ಸೇರಬೇಕಾಯಿತು. ಆದರೆ ಕಲೆಯ ಮೇಲಿದ್ದ ಅದಮ್ಯ ಒಲವಿನಿಂದಾಗಿ ಇಂಜಿನಿಯರಿಂಗ್ ಅಧ್ಯಯನವನ್ನು ಅರ್ಧಕ್ಕೆ ಬಿಟ್ಟು, ಮುಂಬೈನ ಪ್ರತಿಷ್ಠಿತ ‘ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್’ ಸೇರಿದ್ದು, ಅಲ್ಲಿ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ.

ಬಳಿಕ ಕೇವಲ ಕೂತು ಬಣ್ಣ ಹಚ್ಚುವ ಕಲಾವಿದರಾಗದೇ, ಕರ್ನಾಟಕದ ಶೋಷಿತ, ಬಡ ಕೃಷಿ ಕಾರ್ಮಿಕರ ಸಬಲೀಕರಣಕ್ಕಾಗಿ ಸೋಷಿಯಲಿಸ್ಟ್, ದಲಿತ ಮತ್ತು ರೈತ ಸಂಘಟನೆಗಳ ಮೂಲಕ ದೀರ್ಘಕಾಲ ಸಕ್ರಿಯ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಈ ಸಾಮಾಜಿಕ ಕಳಕಳಿ ಅವರ ಕಲಾಕೃತಿಗಳಲ್ಲೂ ಅರಳುತ್ತಿದ್ದವು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ

ಶಿವಪ್ರಸಾದ್ ಅವರ ಚಿತ್ರಕಲೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿವವೆ.
ಬ್ರಿಟನ್‌ನ ಶ್ರೇಷ್ಠ ಮಾಡರ್ನಿಸ್ಟ್ ಲುಸಿಯನ್ ಫ್ರಾಯ್ಡ್ ಅವರಿಗೆ ಹೋಲಿಸಲ್ಪಡುತ್ತಿದ್ದ ಕೆ.ಟಿ. ಶಿವಪ್ರಸಾದ್ ಅವರ ಕಲಾಕೃತಿಗಳು ದೇಶ-ವಿದೇಶಗಳಲ್ಲಿ ಅಪಾರ ಪ್ರಶಂಸೆ ಗಳಿಸಿವೆ. ಇಂಜಿನಿಯರಿಂಗ್‌ನ ಅಲ್ಪಾವಧಿಯ ಅನುಭವದಿಂದಾಗಿ ಅವರು ಅತ್ಯುತ್ತಮ ಛಾಯಾಗ್ರಾಹಕ ಹಾಗೂ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿದ್ದರು.

1976 ರಿಂದ ಬೆಂಗಳೂರು, ಮೈಸೂರು, ಮುಂಬೈ ಮತ್ತು ನವದೆಹಲಿಗಳಲ್ಲಿ ಇವರ ಹಲವು ಏಕವ್ಯಕ್ತಿ ಪ್ರದರ್ಶನಗಳು ನಡೆದಿವೆ. ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ ಹಾಗೂ ನವದೆಹಲಿಯ ಆರ್ಟ್ ಟುಡೇಗಳಲ್ಲಿ ಇವರ ಕಲಾ ಪ್ರದರ್ಶನಗಳು ಕಲಾ ರಸಿಕರ ಮನಗೆದ್ದಿದ್ದವು. ಜೊತೆಗೆ ಭೋಪಾಲ್ ಬಿನ್ನಾಲೆ (1988), ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ (1989) ಹಾಗೂ ಹಾಂಗ್‌ಕಾಂಗ್ ಗ್ಯಾಲರಿಗಳಲ್ಲೂ (1996) ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು. 1996ರಲ್ಲೇ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಸಮಕಾಲೀನ ಭಾರತೀಯ ಕಲಾವಿದರ ಪ್ರದರ್ಶನದಲ್ಲೂ ಭಾಗವಹಿಸಿದ್ದರು.

ಇನ್ನು ಕಲಾ ಜಗತ್ತಿಗೆ ಇವರು ನೀಡಿದ ಕೊಡುಗೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Hindu Rituals: ಯಾವುದೇ ಶುಭ ಕಾರ್ಯಕ್ಕೂ ಮುನ್ನ ತೆಂಗಿನಕಾಯಿ ಒಡೆಯುವುದೇಕೆ? ಅಸಲಿ ರಹಸ್ಯ ಇಲ್ಲಿದೆ! – Kannada News | Hindu Rituals: Why We Break Coconuts Spiritual Meaning and Benefits

ಹಿಂದೂ ಧರ್ಮ ಮತ್ತು ಸಂಪ್ರದಾಯದಲ್ಲಿ, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮುನ್ನ ತೆಂಗಿನಕಾಯಿ ಒಡೆಯುವುದನ್ನು ಅತ್ಯಂತ ಪವಿತ್ರ ಆಚರಣೆ ಎಂದು ಪರಿಗಣಿಸಲಾಗುತ್ತದೆ. ಹೊಸ ಮನೆ ಕಟ್ಟುವುದು, ಗೃಹಪ್ರವೇಶ, ಹೊಸ ವ್ಯವಹಾರವನ್ನು ಪ್ರಾರಂಭಿಸುವುದು, ವಾಹನ ಖರೀದಿಸುವುದು ಮತ್ತು ಮದುವೆಯಂತಹ ಪ್ರತಿಯೊಂದು ಶುಭ ಸಂದರ್ಭದಲ್ಲಿಯೂ ಈ ಪದ್ಧತಿಯನ್ನು ನಾವು ಕಾಣಬಹುದು. ಆದರೆ, ಇದು ಕೇವಲ ಒಂದು ಸಂಪ್ರದಾಯ ಮಾತ್ರವಲ್ಲ. ಶಾಸ್ತ್ರಗಳು ಮತ್ತು ಪುರಾಣಗಳ ಪ್ರಕಾರ, ಈ ಆಚರಣೆಯ ಹಿಂದೆ ಆಳವಾದ ಆಧ್ಯಾತ್ಮಿಕ ಸಂದೇಶ ಮತ್ತು ಜೀವನದ ದೊಡ್ಡ ತತ್ವಶಾಸ್ತ್ರ ಅಡಗಿದೆ. ಹೊಸ ಕೆಲಸವನ್ನು ಪ್ರಾರಂಭಿಸುವ ಮುನ್ನ ತೆಂಗಿನಕಾಯಿ ಏಕೆ ಒಡೆಯಬೇಕು? ಅದರ ವಿಶೇಷತೆಗಳೇನು ಎಂಬುದನ್ನು ಇಲ್ಲಿ ವಿವರವಾಗಿ ತಿಳಿದುಕೊಳ್ಳಿ.

ಅಡೆತಡೆಗಳನ್ನು ನಿವಾರಿಸುವ ದೃಢನಿಶ್ಚಯ:

ಹಿಂದೂ ಸಂಪ್ರದಾಯದ ಪ್ರಕಾರ, ಯಾವುದೇ ಶುಭ ಸಮಾರಂಭಕ್ಕೂ ಮೊದಲು ಪ್ರಥಮ ಪೂಜಿತನಾದ ವಿಘ್ನನಿವಾರಕ ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶನಿಗೆ ತೆಂಗಿನಕಾಯಿಯನ್ನು ಅರ್ಪಿಸಿ ಒಡೆಯುವುದರಿಂದ ಕೆಲಸದಲ್ಲಿ ಎದುರಾಗಬಹುದಾದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ಸಿಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ದೇವರ ಆಶೀರ್ವಾದದಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಹೊಸ ಆರಂಭಗಳು ಸುಖಮಯವಾಗಿ ಸಾಗುತ್ತವೆ ಎಂಬುದು ಭಕ್ತರ ಆಶಯವಾಗಿದೆ.

ತೆಂಗಿನಕಾಯಿ ಒಡೆಯುವುದರ ಹಿಂದಿನ ಆಧ್ಯಾತ್ಮಿಕ ಅರ್ಥಗಳು:

ಅಹಂಕಾರ ಮತ್ತು ಹೆಮ್ಮೆಯನ್ನು ತ್ಯಜಿಸುವ ಸಂಕೇತ:

ತೆಂಗಿನಕಾಯಿಯ ಹೊರಗಿನ ಗಟ್ಟಿಯಾದ ಚಿಪ್ಪನ್ನು ಮನುಷ್ಯನಲ್ಲಿರುವ ಹೆಮ್ಮೆ, ದುರಹಂಕಾರ ಮತ್ತು ಸ್ವಾರ್ಥದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವರ ಮುಂದೆ ಆ ಗಟ್ಟಿ ಚಿಪ್ಪನ್ನು ಮುರಿಯುವುದು ಎಂದರೆ, ನಾವು ನಮ್ಮ ಅಹಂಕಾರವನ್ನು ತ್ಯಜಿಸಿ ನಮ್ರತೆಯಿಂದ ಭಗವಂತನಿಗೆ ಶರಣಾಗುತ್ತಿದ್ದೇವೆ ಎಂದರ್ಥ. ನಿಜವಾದ ಯಶಸ್ಸು ನಮ್ರತೆಯಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಈ ಆಚರಣೆ ನೀಡುತ್ತದೆ.

ಮನಸ್ಸು ಮತ್ತು ಆತ್ಮದ ಶುದ್ಧೀಕರಣ:

ತೆಂಗಿನಕಾಯಿ ಒಡೆದಾಗ ಹೊರಬರುವ ನೀರನ್ನು ಅತ್ಯಂತ ಪವಿತ್ರ ಮತ್ತು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ನಮ್ಮೊಳಗಿನ ನಕಾರಾತ್ಮಕ ಭಾವನೆಗಳು, ಅಸೂಯೆ, ಕೋಪ ಮತ್ತು ಕೆಟ್ಟ ಆಲೋಚನೆಗಳನ್ನು ಹೊರಹಾಕಿ, ಶುದ್ಧ ಮನಸ್ಸಿನಿಂದ ಹೊಸ ಜೀವನ ಅಥವಾ ಪ್ರಯಾಣವನ್ನು ಪ್ರಾರಂಭಿಸಬೇಕು ಎಂಬುದನ್ನು ಸೂಚಿಸುತ್ತದೆ.

ಕಠಿಣತೆಯಿಂದ ಶುದ್ಧತೆಯೆಡೆಗೆ ಪಯಣ:

ತೆಂಗಿನಕಾಯಿ ಹೊರಗೆ ಎಷ್ಟೇ ಗಟ್ಟಿಯಾಗಿದ್ದರೂ, ಒಳಗೆ ಬಿಳಿ ಮತ್ತು ಮೃದುವಾದ ಶುದ್ಧ ತಿರುಳನ್ನು ಹೊಂದಿರುತ್ತದೆ. ಇದನ್ನು ಮಾನವ ಜೀವನಕ್ಕೆ ಹೋಲಿಸಲಾಗುತ್ತದೆ. ನಮ್ಮ ಹೊರಗಿನ ನಡೆ ಕಠಿಣವೆನಿಸಿದರೂ, ನಮ್ಮ ಒಳಮನಸ್ಸಿನಲ್ಲಿ ಶುದ್ಧತೆ, ದಯೆ, ಪ್ರೀತಿ ಮತ್ತು ಪ್ರಾಮಾಣಿಕತೆ ಇರಬೇಕು ಎಂಬುದನ್ನು ಇದು ನೆನಪಿಸುತ್ತದೆ. ತೆಂಗಿನಕಾಯಿ ತಿರುಳನ್ನು ಪ್ರಸಾದವಾಗಿ ವಿತರಿಸುವ ಮೂಲಕ, ಅದು ಇತರರೊಂದಿಗೆ ಒಳ್ಳೆಯತನ ಮತ್ತು ಶಾಂತಿಯನ್ನು ಹಂಚಿಕೊಳ್ಳುವ ಸಂದೇಶವನ್ನು ನೀಡುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಹಿಂದೂ ಧರ್ಮದಲ್ಲಿ ‘ಶ್ರೀಫಲಂ’ ಮಹತ್ವ:

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ‘ಶ್ರೀಫಲಂ’ ಎಂಬ ವಿಶೇಷ ಹೆಸರಿದೆ. ಇದನ್ನು ಸಮೃದ್ಧಿ, ಸಂಪತ್ತು ಮತ್ತು ದೈವಿಕ ಅನುಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ತೆಂಗಿನಕಾಯಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ತ್ರಿಮೂರ್ತಿಗಳನ್ನು ಸಂಕೇತಿಸುತ್ತದೆ. ಮತ್ತೊಂದು ಪೌರಾಣಿಕ ನಂಬಿಕೆಯ ಪ್ರಕಾರ, ಮಹಾವಿಷ್ಣುವು ಲಕ್ಷ್ಮಿ ದೇವಿಯೊಂದಿಗೆ ಭೂಮಿಗೆ ಬಂದಾಗ, ಮಾನವಕುಲದ ಕಲ್ಯಾಣಕ್ಕಾಗಿ ತೆಂಗಿನ ಮರ ಮತ್ತು ಕಾಮಧೇನುವನ್ನು ತಂದನು ಎಂದು ಹೇಳಲಾಗುತ್ತದೆ. ಆದ್ದರಿಂದ, ತೆಂಗಿನಕಾಯಿಯಲ್ಲಿ ಲಕ್ಷ್ಮಿ-ನಾರಾಯಣರ ದೈವಿಕ ಅನುಗ್ರಹವಿದ್ದು, ಇದನ್ನು ಅರ್ಪಿಸುವುದರಿಂದ ಸಂಪತ್ತು ಮತ್ತು ಅದೃಷ್ಟ ಒಲಿಯುತ್ತದೆ.

ಪ್ರಾಣಿ ಬಲಿಗೆ ಪರ್ಯಾಯವಾಗಿ ಬಂದ ಆಚರಣೆ:

ಪುರಾಣಗಳ ಪ್ರಕಾರ, ಹಿಂದೆ ಯಾಗ ಹಾಗೂ ದೇವಾಲಯಗಳಲ್ಲಿ ಮುಗ್ಧ ಪ್ರಾಣಿಗಳನ್ನು ಬಲಿ ನೀಡುವ ಪದ್ಧತಿ ಇತ್ತು. ಆದರೆ ಒಬ್ಬ ರಾಜನು ಇದನ್ನು ವಿರೋಧಿಸಿ, ಪ್ರಾಣಿ ಬಲಿಗೆ ಅಹಿಂಸಾತ್ಮಕ ಪರ್ಯಾಯವನ್ನು ಸೂಚಿಸುವಂತೆ ಋಷಿಗಳಲ್ಲಿ ವಿನಂತಿಸಿದನು. ಆಗ ಋಷಿಗಳು ಮನುಷ್ಯನ ತಲೆಯನ್ನು ಹೋಲುವ (ಮೂರು ಕಣ್ಣುಗಳಿರುವ) ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಲು ಸೂಚಿಸಿದರು. ವ್ಯಕ್ತಿಯು ತನ್ನ ಅಹಂಕಾರವನ್ನು ದೇವರಿಗೆ ಬಲಿ ಕೊಡುವುದರ ಸಂಕೇತವಾಗಿ ಇದು ಆರಂಭವಾಯಿತು. ಅಂದಿನಿಂದ, ರಕ್ತರಹಿತ ಯಾಗ ಹಾಗೂ ಸಂಪೂರ್ಣ ಭಕ್ತಿಯ ಸಂಕೇತವಾಗಿ ಶುಭ ಸಮಾರಂಭಗಳಲ್ಲಿ ತೆಂಗಿನಕಾಯಿ ಒಡೆಯುವ ಪದ್ಧತಿ ಜಾರಿಗೆ ಬಂದಿತು ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ! – Kannada News | Ketan Agarwal Death Case 2 Lawyers For Siya Goyal Rs 10 Crore Defamation Notice For her Brother Sahil

ಪುಣೆ, ಜೂನ್ 30: ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯೆ (Ketan Agarwal Case) ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ (Siya Goyal) ಪರವಾಗಿ ನ್ಯಾಯಾಲಯದಲ್ಲಿ ಯಾರು ವಾದ ಮಂಡಿಸಲಿದ್ದಾರೆ ಎಂಬ ಪ್ರಶ್ನೆ ಈಗ ತೀವ್ರ ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಈ ಗೊಂದಲದ ನಡುವೆಯೇ, ಪುಣೆ ಮೂಲದ ವಕೀಲ ಅಶುತೋಷ್ ಶ್ರೀವಾಸ್ತವ ಅವರು ಸಿಯಾ ಗೋಯಲ್ ಸಹೋದರ ಸಾಹಿಲ್ ಗೋಯಲ್‌ಗೆ 10 ಕೋಟಿ ರೂ.ಗಳ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.

ವಡಗಾಂವ್ ಮಾವಳ್ ನ್ಯಾಯಾಲಯದಲ್ಲಿ ಸಿಯಾ ಗೋಯಲ್ ಅವರ ರಿಮಾಂಡ್ ವಿಚಾರಣೆ ನಡೆಯುತ್ತಿದ್ದಾಗ ಸಾರ್ವಜನಿಕವಾಗಿ ಈ ವಿವಾದ ಭುಗಿಲೆದ್ದಿತು. ವಕೀಲ ಅಶುತೋಷ್ ಶ್ರೀವಾಸ್ತವ ಅವರು ನ್ಯಾಯಾಲಯಕ್ಕೆ ಹಾಜರಾಗಿ, ಸಿಯಾ ತಮಗೆ ಸಹಿ ಮಾಡಿದ ‘ವಕಾಲತ್ನಾಮಾ’ (ಅಧಿಕಾರ ಪತ್ರ) ನೀಡಿದ್ದಾರೆ ಎಂದು ವಾದಿಸಲು ಮುಂದಾದರು. ಆದರೆ, ಮ್ಯಾಜಿಸ್ಟ್ರೇಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಪಿ ಸಿಯಾ ಗೋಯಲ್, “ಅಶುತೋಷ್ ಶ್ರೀವಾಸ್ತವ ನನ್ನ ವಕೀಲರಲ್ಲ. ವಿಪುಲ್ ದುಶಿಂಗ್ ನನ್ನನ್ನು ಪ್ರತಿನಿಧಿಸುತ್ತಿದ್ದಾರೆ” ಎಂದು ನೇರವಾಗಿ ಹೇಳಿದರು.

ಇದನ್ನೂ ಓದಿ: ವಿಗ್ ಧರಿಸಿದ್ದರಿಂದಲೇ ಕೇತನ್​ನನ್ನು ಕೊಂದಳಾ ಸಿಯಾ?; ಮಹಾರಾಷ್ಟ್ರ ಸಿಎಂ ಭೇಟಿ ಬಳಿಕ ತಂದೆಯ ಶಾಕಿಂಗ್ ಹೇಳಿಕೆ

ಇದರಿಂದ ನ್ಯಾಯಾಲಯದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊನೆಗೆ, ಸಿಯಾ ಹೇಳಿಕೆಯ ನಂತರ ಅಶುತೋಷ್ ಶ್ರೀವಾಸ್ತವ ಅವರು ವಾದ ಮುಂದುವರಿಸಲಾಗದೆ ನ್ಯಾಯಾಲಯದಿಂದ ಹೊರನಡೆದರು. ಸಿಯಾ ಕುಟುಂಬದವರು ತಾವು ವಿಪುಲ್ ದುಶಿಂಗ್ ಅವರನ್ನು ಮಾತ್ರ ನೇಮಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಮುಜುಗರಕ್ಕೀಡಾದ ವಕೀಲ ಅಶುತೋಷ್ ಶ್ರೀವಾಸ್ತವ ಸಿಯಾ ಕುಟುಂಬಸ್ಥರು ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಿಯಾಳ ಸಹೋದರ ಸಾಹಿಲ್ ಗೋಯಲ್‌ಗೆ 10 ಪುಟಗಳ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.

ಶ್ರೀವಾಸ್ತವ ಅವರ ವಾದವೇನು?:

ಸಿಯಾ ಗೋಯಲ್ ವಯಸ್ಕಳಾಗಿದ್ದು, ಸ್ವಇಚ್ಛೆಯಿಂದ ತಮಗೆ ವಕಾಲತ್ನಾಮಾಗೆ ಸಹಿ ಹಾಕಿಕೊಟ್ಟಿದ್ದಾರೆ. ಕುಟುಂಬದ ಅನುಮತಿ ಇಲ್ಲದೆಯೂ ಆಕೆಗೆ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕಿದೆ ಎಂದು ಅಶುತೋಷ್ ಅವರ ವಾದ. ಹೀಗಾಗಿ, ಸಾಹಿಲ್ ಗೋಯಲ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು 48 ಗಂಟೆಗಳಲ್ಲಿ ಹಿಂಪಡೆದು ಬೇಷರತ್ ಕ್ಷಮೆಯಾಚಿಸಬೇಕು ಮತ್ತು 7 ದಿನಗಳಲ್ಲಿ 10 ಕೋಟಿ ರೂ. ಪರಿಹಾರ ನೀಡಬೇಕು ಎಂದು ಅವರು ನೋಟಿಸ್ ನೀಡಿದ್ದಾರೆ.

ಸಾಹಿಲ್ ಗೋಯಲ್ ಹೇಳಿದ್ದೇನು?:

ಗೋಯಲ್ ಕುಟುಂಬವು ಅಶುತೋಷ್ ಶ್ರೀವಾಸ್ತವ ಅವರ ಕಾನೂನು ಸೇವೆಯನ್ನು ಪಡೆದಿಲ್ಲ ಎಂದು ಸಾಹಿಲ್ ಗೋಯಲ್ ಮಾಧ್ಯಮಗಳ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ, ವಕೀಲ ಅಶುತೋಷ್ ಶ್ರೀವಾಸ್ತವ ಅವರು ಸಿಯಾ ಗೋಯಲ್ ಕೈಯಿಂದ ಕೆಲವು ಕಾನೂನು ಪತ್ರಗಳಿಗೆ ವಂಚನೆಯಿಂದ ಸಹಿ ಪಡೆದಿರಬಹುದು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ವಕೀಲ ಶ್ರೀವಾಸ್ತವ ಅವರು ಸಾಹಿಲ್‌ಗೆ ಕಾನೂನು ನೋಟಿಸ್ ಕಳುಹಿಸಿದ್ದು, ತಮ್ಮ ತಂಡವು ಸ್ವಇಚ್ಛೆಯಿಂದ ಸಿಯಾ ಗೋಯಲ್ ಅವರನ್ನು ಭೇಟಿ ಮಾಡಿತ್ತು. ತಮ್ಮನ್ನು ವಕೀಲರನ್ನಾಗಿ ನೇಮಿಸಿಕೊಳ್ಳಲು ಆಕೆಯ ಒಪ್ಪಿಗೆ ಪಡೆದಿತ್ತು ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಕೇತನ್ ಅಗರ್ವಾಲ್ ಕೊಲೆ ಪ್ರಕರಣ; ಸಿಯಾ ಗೋಯಲ್, ಚೇತನ್‌ ಜುಲೈ 3ರವರೆಗೆ ಪೊಲೀಸ್ ವಶಕ್ಕೆ

ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ:

ಕೇತನ್ ಅಗರ್ವಾಲ್ ಪುಣೆಯ ಉದ್ಯಮಿ. ಜೂನ್ 18ರಂದು ಪುಣೆಯ ಲೋಹಗಢ ಕೋಟೆಗೆ ಟ್ರೆಕಿಂಗ್ ಹೋಗಿದ್ದ ಕೇತನ್ ಅಗರ್ವಾಲ್ ತಾನು ಮದುವೆಯಾಗಬೇಕಿದ್ದ ಹುಡುಗಿ ಸಿಯಾಳಿಂದ ಬರ್ಬವಾಗಿ ಹತ್ಯೆಗೀಡಾಗಿದ್ದರು. ಕೇತನ್​ನನ್ನು ತನ್ನ ಪ್ರೇಮಿ ಚೇತನ್ ಸಹಾಯದಿಂದ 350 ಅಡಿ ಆಳದ ಪ್ರಪಾತಕ್ಕೆ ತಳ್ಳಿದ ಸಿಯಾ ಗೋಯಲ್ ಬಳಿಕ ಆತ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಗಿ ಕತೆ ಕಟ್ಟಿದ್ದಳು.

ಪೊಲೀಸರು ಇಬ್ಬರು ಆರೋಪಿಗಳ ಕಸ್ಟಡಿಯನ್ನು ಇನ್ನೂ 5 ದಿನಗಳ ಕಾಲ ವಿಸ್ತರಿಸಿದ್ದು, ಕ್ರೈಮ್ ಸೀನ್ ಮರುಸೃಷ್ಟಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಸಿಯಾ, ಕೇತನ್ ಅವರ ಪಾಸ್‌ಪೋರ್ಟ್ ಅನ್ನು ಹರಿದು ಸುಟ್ಟುಹಾಕಿದ್ದಾರೆ ಎನ್ನಲಾಗಿದ್ದು, ಅದರ ಅವಶೇಷಗಳ ಪತ್ತೆಗೆ ತನಿಖೆ ಮುಂದುವರಿದಿದೆ. ಈ ಹೈಪ್ರೊಫೈಲ್ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲು ಪ್ರಸಿದ್ಧ ವಕೀಲ ಉಜ್ವಲ್ ನಿಕಮ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನೇಮಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಸೆಮಿಕಂಡಕ್ಟರ್ ಕ್ರಾಂತಿ; ದೇಶೀಯ ಚಿಪ್ ಉತ್ಪಾದನೆಗೆ ಪುಷ್ಟಿ ಕೊಡುತ್ತಿರುವ ಐಎಸ್​ಎಂ – Kannada News | India’s Semiconductor Revolution – A Major Step Towards Technological Sovereignty and Economic Self Reliance

ಮೈಕ್ರೋನ್ ಸಿಇಒ ಸಂಜಯ್ ಮೆಹರೋತ್ರ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿImage Credit source: PTI

ಸೆಮಿಕಂಡಕ್ಟರ್‌ಗಳಲ್ಲಿ (ಅರೆವಾಹಕಗಳು) ದೇಶಿ ಸಾಮರ್ಥ್ಯಗಳನ್ನು ನಿರ್ಮಿಸಲು ಮತ್ತು ಆಮದುಗಳ ಮೇಲಿನ ದೀರ್ಘಕಾಲದ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವು ತನ್ನ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದನ್ನು ಪ್ರಾರಂಭಿಸಿದೆ. ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಭದ್ರತೆ ಮತ್ತು ಭವಿಷ್ಯದ ತಂತ್ರಜ್ಞಾನಗಳಿಗೆ ಸೆಮಿಕಂಡಕ್ಟರ್‌ಗಳು ನಿರ್ಣಾಯಕವಾಗಿರುವ ಈ ಯುಗದಲ್ಲಿ, ಭಾರತದ ತಾಂತ್ರಿಕ ಸಾರ್ವಭೌಮತ್ವವನ್ನು ಭದ್ರಪಡಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ರಾಷ್ಟ್ರೀಯ ಪ್ರಯತ್ನ ಇದಾಗಿದೆ.

‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಆರಂಭವು ಭಾರತದ ಕೈಗಾರಿಕಾ ನೀತಿಯಲ್ಲಿ ಭಾರಿ ಬದಲಾವಣೆಯನ್ನು ಸೂಚಿಸುತ್ತದೆ. ಮೊದಲ ಬಾರಿಗೆ, ದೇಶವು ಚಿಪ್ ವಿನ್ಯಾಸ ಮತ್ತು ಫ್ಯಾಬ್ರಿಕೇಶನ್‌ನಿಂದ ಹಿಡಿದು ಸುಧಾರಿತ ಪ್ಯಾಕೇಜಿಂಗ್ ಮತ್ತು ಕ್ರಿಟಿಕಲ್ ಕಾಂಪೊನೆಂಟ್​ಗಳವರೆಗೆ ಸಂಪೂರ್ಣ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸಲು ಸಮಗ್ರವಾದ, ಮಿಷನ್-ಮಾದರಿಯ ವಿಧಾನವನ್ನು ಅಳವಡಿಸಿಕೊಂಡಿದೆ.

ಒಂದು ಕಾಲದಲ್ಲಿ ಅಸಾಧ್ಯವಾದ ಕನಸು ಎಂದು ಪರಿಗಣಿಸಲ್ಪಟ್ಟಿದ್ದು ಇಂದು ನನಸಾಗಿದೆ. ಬಹು ರಾಜ್ಯಗಳಲ್ಲಿ ಹರಡಿರುವ ₹1.64 ಲಕ್ಷ ಕೋಟಿಗೂ ಅಧಿಕ ಸಂಚಿತ ಹೂಡಿಕೆಯ ಬದ್ಧತೆಯನ್ನು ಹೊಂದಿರುವ ಸೆಮಿಕಂಡಕ್ಟರ್ ಯೋಜನೆಗಳನ್ನು ಸರ್ಕಾರವು ಅನುಮೋದಿಸಿದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0: ತಳಹದಿ ಕ್ರಮಗಳು ಮತ್ತು ಸಾಧನೆಗಳು

ಸೆಮಿಕಂಡಕ್ಟರ್‌ಗಳ ಎಷ್ಟು ಪ್ರಾಮುಖ್ಯ ಎಂಬುದನ್ನು ಗುರುತಿಸಿ, ಸರ್ಕಾರವು ಗಣನೀಯ ಆರ್ಥಿಕ ವೆಚ್ಚದೊಂದಿಗೆ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಅನ್ನು ಪ್ರಾರಂಭಿಸಿತು. ಇದು ದೇಶದೊಳಗೆ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಡಿಸೈನ್ ಕೆಪಾಸಿಟಿಯನ್ನು ಅಭಿವೃದ್ಧಿಪಡಿಸುವ ರಚನಾತ್ಮಕ ರಾಷ್ಟ್ರೀಯ ಪ್ರಯತ್ನದ ಆರಂಭವಾಗಿದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕಗಳು, ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಸೌಲಭ್ಯಗಳು, ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ATMP) ಘಟಕಗಳು ಹಾಗೂ ಕಾಂಪೌಂಡ್ ಸೆಮಿಕಂಡಕ್ಟರ್ ಯೋಜನೆಗಳನ್ನು ಸ್ಥಾಪಿಸಲು ಬೃಹತ್ ಹೂಡಿಕೆಗಳನ್ನು ಆಕರ್ಷಿಸುವತ್ತ ಗಮನಹರಿಸಿದೆ. ಇದು ವಿನ್ಯಾಸ ಸಂಯೋಜಿತ ಪ್ರೋತ್ಸಾಹಕ ಯೋಜನೆಯ (Design Linked Incentive Scheme) ಮೂಲಕ ಸೆಮಿಕಂಡಕ್ಟರ್ ಚಿಪ್ ವಿನ್ಯಾಸವನ್ನು ಸಹ ಬೆಂಬಲಿಸಿದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಅಡಿಯಲ್ಲಿ, ಭಾರತದ ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆ ಮಾಡಲು ದೇಶೀಯ ಮತ್ತು ಜಾಗತಿಕ ಕಂಪನಿಗಳನ್ನು ಪ್ರೋತ್ಸಾಹಿಸಲು ಸರ್ಕಾರವು ಸ್ಪಷ್ಟವಾದ ಪ್ರೋತ್ಸಾಹಕ ಚೌಕಟ್ಟು ಮತ್ತು ಸಾಂಸ್ಥಿಕ ಕಾರ್ಯವಿಧಾನವನ್ನು ರಚಿಸಿದೆ.

ಇದನ್ನೂ ಓದಿ: AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ ‘AI ಏಜೆಂಟ್‌ಗಳು’; ಏನಿದು ಹೊಸ ಟೆಕ್ನಾಲಜಿ?

ಅನುಮೋದಿತ ಈ ಯೋಜನೆಗಳಲ್ಲಿ ಸಿಲಿಕಾನ್ ವೇಫರ್ ಫ್ಯಾಬ್ರಿಕೇಶನ್ ಸೌಲಭ್ಯಗಳು, ಸುಧಾರಿತ ಪ್ಯಾಕೇಜಿಂಗ್ ಘಟಕಗಳು, ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಸೌಲಭ್ಯಗಳು ಮತ್ತು ಕಾಂಪೌಂಡ್ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು ಸೇರಿವೆ. ಇದು ದೇಶದಲ್ಲಿ ವೈವಿಧ್ಯಮಯ ಸೆಮಿಕಂಡಕ್ಟರ್ ಉತ್ಪಾದನಾ ನೆಲೆಯನ್ನು ನಿರ್ಮಿಸಲು ಸಹಾಯ ಮಾಡಿದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಅಡಿಯಲ್ಲಿ ಅತ್ಯಂತ ಮಹತ್ವದ ಸಾಧನೆಗಳೆಂದರೆ ಗುಜರಾತ್‌ನ ಮೈಕ್ರಾನ್ (Micron) ಟೆಕ್ನಾಲಜಿ ಘಟಕದಲ್ಲಿ ಕಮರ್ಷಿಯಲ್ ಪ್ರೊಡಕ್ಷನ್ ಆರಂಭ. ಇದು ಈ ಮಿಷನ್‌ನ ಮೊದಲ ಪ್ರಮುಖ ಕಾರ್ಯಾಚರಣೆಯ ಯಶಸ್ಸಾಗಿ ನಿಂತಿದೆ.

ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಕೇನ್ಸ್ ಸೆಮಿಕಾನ್ ಸೇರಿದಂತೆ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಅಡಿಯಲ್ಲಿ ಅನುಮೋದಿಸಲಾದ ಹಲವಾರು ಇತರ ಯೋಜನೆಗಳು ನಿರ್ಮಾಣದ ಸುಧಾರಿತ ಹಂತಗಳಿಗೆ ಕಾಲಿಟ್ಟಿವೆ ಮತ್ತು ಪ್ರಸ್ತುತ ವರ್ಷದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಅಡಿಯಲ್ಲಿ ಅನುಮೋದಿಸಲಾದ ಗುಜರಾತ್‌ನ ಧೋಲೇರಾದಲ್ಲಿರುವ ಟಾಟಾ-ಪಿಎಸ್‌ಎಂಸಿ (Tata-PSMC) ಯೋಜನೆಯು ಉತ್ತಮವಾಗಿ ಪ್ರಗತಿಯಲ್ಲಿದೆ ಮತ್ತು ಭಾರತದ ಮೊದಲ ಸಿಲಿಕಾನ್ ವೇಫರ್ ಫ್ಯಾಬ್ರಿಕೇಶನ್ ಸೌಲಭ್ಯವನ್ನು ಸ್ಥಾಪಿಸುವ ನಿರೀಕ್ಷೆಯಿದೆ.

ಗುಜರಾತ್‌ನಲ್ಲಿ ಅನುಮೋದಿಸಲಾದ ಹೊಸ ಸೆಮಿಕಂಡಕ್ಟರ್ ಯೋಜನೆಗಳು ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಅಡಿಯಲ್ಲಿ ರಾಜಸ್ಥಾನದಲ್ಲಿ ಅನುಮೋದಿಸಲಾದ ಮೊದಲ ಸೆಮಿಕಂಡಕ್ಟರ್ ಯೋಜನೆಯು ದೇಶದ ವಿವಿಧ ಪ್ರದೇಶಗಳಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯನ್ನು ವಿಸ್ತರಿಸುವ ಸರ್ಕಾರದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ಉತ್ಪಾದನೆಗೆ ಸಮಾನಾಂತರವಾಗಿ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಅಡಿಯಲ್ಲಿರುವ ವಿನ್ಯಾಸ ಸಂಯೋಜಿತ ಪ್ರೋತ್ಸಾಹಕ ಯೋಜನೆಯು ಬಹು ಚಿಪ್ ವಿನ್ಯಾಸ ಯೋಜನೆಗಳನ್ನು ಬೆಂಬಲಿಸಿದೆ. ಇದು ಯಶಸ್ವಿ ಟೇಪ್-ಔಟ್‌ಗಳು, ಫ್ಯಾಬ್ರಿಕೇಟೆಡ್ ಚಿಪ್‌ಗಳು, ಪೇಟೆಂಟ್‌ಗಳ ಸಲ್ಲಿಕೆ ಮತ್ತು ಸಾವಿರಕ್ಕೂ ಹೆಚ್ಚು ವಿಶೇಷ ಎಂಜಿನಿಯರ್‌ಗಳಿಗೆ ತರಬೇತಿ ನೀಡಲು ಕಾರಣವಾಗಿದೆ.

ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಒಟ್ಟಾರೆ ಪ್ರಯತ್ನದ ಭಾಗವಾಗಿ, ನಿರ್ಣಾಯಕ ಘಟಕಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಸ್ಪಷ್ಟ ಕ್ರಮಗಳನ್ನು ತೆಗೆದುಕೊಂಡಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಜೇವಾರ್‌ನಲ್ಲಿ 6,750 ಕೋಟಿ ರೂಪಾಯಿ ಮೌಲ್ಯದ ಸುಧಾರಿತ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (PCB) ಉತ್ಪಾದನಾ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ.

ಈ ಸೌಲಭ್ಯಗಳು 20-22 ಲೇಯರ್‌ಗಳವರೆಗಿನ ಸುಧಾರಿತ ಆವೃತ್ತಿಗಳನ್ನು ಒಳಗೊಂಡಂತೆ ಹೆಚ್ಚಿನ ಸಾಂದ್ರತೆಯ, ಬಹು-ಪದರದ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳನ್ನು (PCB) ತಯಾರಿಸುತ್ತವೆ. ಭಾರತವು ಪ್ರತಿವರ್ಷ ಸುಮಾರು 40,000 ಕೋಟಿ ರೂಪಾಯಿ ಮೌಲ್ಯದ ಇಂತಹ ಘಟಕಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ದೇಶೀಯ ಉತ್ಪಾದನೆಯು ಆಮದುಗಳ ಮೇಲಿನ ಈ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೇವಾರ್ ಯೋಜನೆಗಳು ಆಳವಾದ ಉತ್ಪಾದನೆಯತ್ತ ಒಂದು ಪ್ರಮುಖ ಹೆಜ್ಜೆಯನ್ನು ಗುರುತಿಸುತ್ತವೆ. ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳು, ರಕ್ಷಣಾ ಉಪಕರಣಗಳು ಮತ್ತು ಸುಧಾರಿತ ತಂತ್ರಜ್ಞಾನಗಳಿಗೆ ಅಗತ್ಯವಾದ ನಿರ್ಣಾಯಕ ಘಟಕಗಳನ್ನು ಉತ್ಪಾದಿಸುವ ಮೂಲಕ ಅವು ವಿಶಾಲವಾದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತವೆ.

ಸೆಮಿಕಂಡಕ್ಟರ್ ಮಿಷನ್ 2.0: ಚಿಪ್ ಮೌಲ್ಯ ಸರಪಳಿಯಲ್ಲಿ ಆಳದ ಅಳವಡಿಕೆ

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಮೂಲಕ ಆರಂಭಿಕ ಅಡಿಪಾಯವನ್ನು ಹಾಕಿದ ನಂತರ, ಸರ್ಕಾರವು ಈಗ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಘೋಷಿಸಿದೆ. ಈ ಹೊಸ ಹಂತವು ಭಾರತದ ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಅಭಿವೃದ್ಧಿಯ ಮುಂದಿನ ಹಂತವನ್ನು ಪ್ರತಿನಿಧಿಸುತ್ತದೆ.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಪ್ರಾಥಮಿಕವಾಗಿ ಫ್ಯಾಬ್ರಿಕೇಶನ್, ಅಸೆಂಬ್ಲಿ, ಟೆಸ್ಟಿಂಗ್ ಮತ್ತು ಪ್ಯಾಕೇಜಿಂಗ್ ಘಟಕಗಳಿಗೆ ಹೂಡಿಕೆಗಳನ್ನು ಆಕರ್ಷಿಸುವತ್ತ ಗಮನಹರಿಸಿದ್ದರೆ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಮೌಲ್ಯ ಸರಪಳಿಯ ಆಳಕ್ಕೆ ಇಳಿಯುವ ಗುರಿಯನ್ನು ಹೊಂದಿದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಸೆಮಿಕಂಡಕ್ಟರ್ ಉತ್ಪಾದನಾ ಉಪಕರಣಗಳು, ವಿಶೇಷ ವಸ್ತುಗಳು ಮತ್ತು ರಾಸಾಯನಿಕಗಳು, ಸುಧಾರಿತ ಪ್ಯಾಕೇಜಿಂಗ್ ತಂತ್ರಜ್ಞಾನಗಳು, ಕಾಂಪೌಂಡ್ ಸೆಮಿಕಂಡಕ್ಟರ್‌ಗಳು (Compount Semiconductors) ಮತ್ತು ದೇಶಿ ಸೆಮಿಕಂಡಕ್ಟರ್ ಬೌದ್ಧಿಕ ಆಸ್ತಿಯಲ್ಲಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಸಂಶೋಧನೆ ಮತ್ತು ತರಬೇತಿ ಮೂಲಸೌಕರ್ಯಗಳನ್ನು ನಿರ್ಮಿಸಲು ಸಹ ಒತ್ತು ನೀಡುತ್ತದೆ.

ಕೇಂದ್ರ ಬಜೆಟ್ 2026-27 ರಲ್ಲಿ ಮೀಸಲಾದ ಆರ್ಥಿಕ ಹಂಚಿಕೆಯೊಂದಿಗೆ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ರ ಘೋಷಣೆಯು, ಸೆಮಿಕಂಡಕ್ಟರ್ ಮಿಷನ್ ಅನ್ನು ಹಂತ ಹಂತವಾಗಿ ಮತ್ತು ಕಾರ್ಯತಂತ್ರದ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಮೊದಲ ಹಂತದ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಆಧರಿಸಿದೆ. ಆಮದು ಮಾಡಿಕೊಂಡ ಉಪಕರಣಗಳು ಮತ್ತು ಸಾಮಗ್ರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತಹ, ಸಮಗ್ರ ಸ್ವಾವಲಂಬನೆಯನ್ನು ಸಾಧಿಸಲು ಹೆಚ್ಚಿನ ಗಮನ ಅಗತ್ಯವಿರುವ ಕ್ಷೇತ್ರಗಳನ್ನು ಪರಿಹರಿಸಲು ಇದು ಪ್ರಯತ್ನಿಸುತ್ತದೆ.

ಇದನ್ನೂ ಓದಿ: ಚಿನ್ನದ ಬೆಲೆ ಕಡಿಮೆ ಆಗಲು ಕಾರಣಗಳೇನು? ಬಂಗಾರ ಈಗ ಸುರಕ್ಷಿತ ಸರಕಾಗಿ ಉಳಿದಿಲ್ಲವಾ?

ರಕ್ಷಣಾ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ (AI), ಐದನೇ ತಲೆಮಾರಿನ ದೂರಸಂಪರ್ಕ (5G), ಎಲೆಕ್ಟ್ರಿಕ್ ವಾಹನಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳಿಗೆ ಸೆಮಿಕಂಡಕ್ಟರ್‌ಗಳು ಅತ್ಯಗತ್ಯವಾಗಿವೆ. ಈ ವಲಯದಲ್ಲಿ ಬಲವಾದ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಭಾರತದ ದೀರ್ಘಕಾಲೀನ ಕಾರ್ಯತಂತ್ರದ ಸ್ವಾಯತ್ತತೆ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯ.

ಸೆಮಿಕಂಡಕ್ಟರ್‌ ಉತ್ತೇಜನವು ಆಮದುಗಳ ಮೇಲಿನ ವಿಪರೀತ ಅವಲಂಬನೆಯಿಂದ ಉಂಟಾಗುವ ದುರ್ಬಲತೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ತಾಯ್ನಾಡಿನಲ್ಲಿ ಉತ್ಪಾದನೆ ಮತ್ತು ವಿನ್ಯಾಸ ಸಾಮರ್ಥ್ಯಗಳನ್ನು ನಿರ್ಮಿಸುವ ಮೂಲಕ, ಭಾರತವು ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ಮತ್ತು ನಂಬಿಕಸ್ತ ಆಟಗಾರನಾಗಿ ತನ್ನನ್ನು ತಾನು ಇರಿಸಿಕೊಳ್ಳುತ್ತಿದೆ.

ಯುನೈಟೆಡ್ ಸ್ಟೇಟ್ಸ್, ತೈವಾನ್, ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ಪ್ರಮುಖ ಕಂಪನಿಗಳೊಂದಿಗಿನ ಅಂತರರಾಷ್ಟ್ರೀಯ ಸಹಯೋಗಗಳನ್ನು ಈ ಮಿಷನ್‌ಗಳ ಅಡಿಯಲ್ಲಿ ಅನುಸರಿಸಲಾಗುತ್ತಿದೆ. ಈ ಪಾಲುದಾರಿಕೆಗಳು ಸುಧಾರಿತ ತಂತ್ರಜ್ಞಾನ ಮತ್ತು ಹೂಡಿಕೆಯನ್ನು ತರುತ್ತಿವೆ ಮತ್ತು ಕಾಲಾನಂತರದಲ್ಲಿ ಭಾರತವು ತನ್ನದೇ ಆದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತಿವೆ.

ಭಾರತೀಯ ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಸೆಮಿಕಂಡಕ್ಟರ್ ಎಷ್ಟು ಮಹತ್ವ?

ಇದುವರೆಗೆ ತೆಗೆದುಕೊಂಡ ಸೆಮಿಕಂಡಕ್ಟರ್ ಉಪಕ್ರಮಗಳು ನೀತಿ ರಚನೆ ಮತ್ತು ಬೃಹತ್-ಪ್ರಮಾಣದ ಯೋಜನೆಗಳ ಅನುಮೋದನೆಯಿಂದ ಹಿಡಿದು ತಳಮಟ್ಟದ ಅನುಷ್ಠಾನ ಮತ್ತು ಉತ್ಪಾದನೆಯ ಪ್ರಾರಂಭದವರೆಗೆ ಪ್ರಗತಿಯ ಸ್ಪಷ್ಟ ಸರಪಳಿಯನ್ನು ಸೃಷ್ಟಿಸಿವೆ. ಇದು ದೃಷ್ಟಿಕೋನದ ಸ್ಪಷ್ಟತೆ ಮತ್ತು ಅನುಷ್ಠಾನದಲ್ಲಿನ ಸ್ಥಿರತೆ ಎರಡನ್ನೂ ಪ್ರತಿಬಿಂಬಿಸುತ್ತದೆ.

ಅನುಮೋದಿಸಲಾದ ಪ್ರತಿಯೊಂದು ಯೋಜನೆಯು ಮತ್ತು ಸ್ಥಾಪಿತವಾದ ಪ್ರತಿಯೊಂದು ಸೌಲಭ್ಯವು ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಉದ್ಯೋಗವನ್ನು ಸೃಷ್ಟಿಸಲು, ನುರಿತ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸಲು ಮತ್ತು ಜಾಗತಿಕ ತಂತ್ರಜ್ಞಾನ ಪೂರೈಕೆ ಸರಪಳಿಗಳಲ್ಲಿ (Supply Chain) ಭಾರತದ ಸ್ಥಾನವನ್ನು ಬಲಪಡಿಸಲು ಕೊಡುಗೆ ನೀಡುತ್ತದೆ.

ಸೆಮಿಕಂಡಕ್ಟರ್ ಮಿಷನ್ ಅನ್ನು ಹಂತ ಹಂತವಾಗಿ ಮುಂದಕ್ಕೆ ಕೊಂಡೊಯ್ಯಲು ಸರ್ಕಾರವು ಬದ್ಧವಾಗಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 1.0 ಮೂಲಕ ಅಡಿಪಾಯವನ್ನು ಸ್ಥಾಪಿಸಿದ ನಂತರ, ದೀರ್ಘಕಾಲೀನ ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸಲು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಮೂಲಕ ಸಾಮರ್ಥ್ಯಗಳನ್ನು ಆಳಗೊಳಿಸುವುದರ ಮೇಲೆ ಈಗ ಗಮನಹರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Tue, 30 June 26

Source link

Exit mobile version