Headlines

ಮಲ್ಟಿ ಅಸೆಟ್ ಫಂಡ್​ಗಳಿಗೆ ಹೂಡಿಕೆ ಒಳಹರಿವು ಶೇ. 22 ಹೆಚ್ಚಳ; ಏನಿದು ಈ ರೀತಿಯ ಫಂಡ್? – Kannada News | Multi Asset Funds get 22pc increase in investment flow in June, know what are these funds

ಮ್ಯೂಚುವಲ್ ಫಂಡ್Image Credit source: jayk7/Moment/Getty Images ನವದೆಹಲಿ, ಜುಲೈ 12: ಷೇರು ಮಾರುಕಟ್ಟೆಯಲ್ಲಿನ ತೀವ್ರ ಏರಿಳಿತಗಳ (Volatility) ನಡುವೆ, ಹೂಡಿಕೆದಾರರು ಸುರಕ್ಷಿತ ಮತ್ತು ವೈವಿಧ್ಯಮಯ ಹೂಡಿಕೆಗೆ ಒಲವು ತೋರುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಮಲ್ಟಿ-ಅಸೆಟ್ ಅಲೋಕೇಷನ್ ಫಂಡ್‌ಗಳಿಗೆ (Multi-Asset Allocation Funds) ಬರುವ ಹೂಡಿಕೆಯು ತಿಂಗಳಿನಿಂದ ತಿಂಗಳಿಗೆ (MoM) ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಾರತೀಯ ಮ್ಯೂಚುವಲ್ ಫಂಡ್ ಸಂಘಟನೆಯ (AMFI) ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜೂನ್ ತಿಂಗಳಿನಲ್ಲಿ ಮಲ್ಟಿ-ಅಸೆಟ್ ಅಲೋಕೇಷನ್ ಫಂಡ್‌ಗಳಿಗೆ ₹4,810.76 ಕೋಟಿ…

Read More

ಆ ಒಬ್ಬ ನಟಿಗಾಗಿ ಹಾಡು ಹಾಡುವುದಿಲ್ಲ ಎಂದು ಶಪಥ ಮಾಡಿದ್ದ ಎಸ್ ಜಾನಕಿ – Kannada News | S Janaki refuse to sing for legendary actress Savitri

ಖ್ಯಾತ ಗಾಯಕಿ ಎಸ್‌ ಜಾನಕಿ (S Janaki) ನಿಧನರಾಗಿದ್ದಾರೆ. ಹಲವಾರು ಚಿತ್ರರಂಗದ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕೋಟ್ಯಂತರ ಅಭಿಮಾನಿಗಳು ಜಾನಕಿ ಅವರ ಅಗಲಿಕೆಗೆ ಕಂಬನಿ ಮಿಡಿದ್ದಾರೆ. ಸುಮಾರು 70 ವರ್ಷಗಳ ವೃತ್ತಿ ಬದುಕಿನಲ್ಲಿ ನೂರಾರು ಕಲಾವಿದರಿಗಾಗಿ ಎಸ್ ಜಾನಕಿ ಹಾಡು ಹಾಡಿದ್ದಾರೆ. ದೊಡ್ಡ ನಟಿಯಾಗಿರಲಿ, ಬಾಲ ನಟಿ ಆಗಿರಲಿ, ಹೊಸಬರಾಗಿರಲಿ, ಹಳಬರಲಾಗಿಲಿ, ನಾಯಕಿ ಆಗಿರಲಿ, ಪೋಷಕ ನಟಿ ಆಗಿರಲಿ ಯಾರಿಗೂ ಸಹ ಇಲ್ಲ ಎನ್ನದೆ ಧ್ವನಿ ನೀಡಿದ್ದಾರೆ. ಆದರೆ ಒಮ್ಮೆ ಮಾತ್ರ ತೆಲುಗಿನ ಲಿಜೆಂಡರಿ ನಟಿಯೊಬ್ಬರಿಗೆ ತಾವು…

Read More

ನಿನ್ನೆ ಕೆಂಪು ಕೋಟೆ, ಇವತ್ತು ತಾಜ್ ಹೋಟೆಲ್; ಎರಡು ದಿನದಲ್ಲಿ ಎರಡು ಹುಸಿ ಬಾಂಬ್ ಬೆದರಿಕೆ – Kannada News | Hoax bomb threat at Mumbai Taj Hotel, a day after similar threat at Delhi Red Fort

ತಾಜ್ ಮಹಲ್ ಪ್ಯಾಲೇಸ್ ಹೋಟೆಲ್Image Credit source: PTI ಮುಂಬೈ, ಜುಲೈ 12: ನಿನ್ನೆ ದೆಹಲಿಯ ಕೆಂಪು ಕೋಟೆಯ ಮೇಲೆ ಹುಸಿ ಬಾಂಬ್ ಬೆದರಿಕೆ ಬಂದಂತೆ ಇವತ್ತು ಮುಂಬೈನ ಐತಿಹಾಸಿಕ ಮತ್ತು ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೂ (Taj Mahal Palace Hotel) ಭಾನುವಾರ ಮಧ್ಯರಾತ್ರಿ ಬಾಂಬ್ ಬೆದರಿಕೆ ಕರೆ ಬಂದು, ಭಾರಿ ಆತಂಕ ಸೃಷ್ಟಿಸಿತ್ತು. ಆದರೆ, ಪೊಲೀಸರು ನಡೆಸಿದ ತೀವ್ರ ತಪಾಸಣೆಯ ನಂತರ ಇದು ಹುಸಿ (Hoax) ಬೆದರಿಕೆ ಕರೆ ಎಂದು ತಿಳಿದುಬಂದಿದೆ. ಭಾನುವಾರ…

Read More

ಬಾಝ್ ಬಾಲ್ ಯುಗಾಂತ್ಯ; ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆಗೆ ಮೆಕಲಮ್ ರಾಜೀನಾಮೆ

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿದ್ದ ಇಂಗ್ಲೆಂಡ್‌ ತಂಡದಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ತರಬೇತಿ ನೀಡುತ್ತಿದ್ದ ನ್ಯೂಜಿಲೆಂಡ್​ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2012 ರಲ್ಲಿ ಇಂಗ್ಲೆಂಡ್‌ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದ ಮೆಕಲಮ್ ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಟೆಸ್ಟ್ ಕ್ರಿಕೆಟ್​ಗೂ ಹೊಡಿಬಡಿ ಆಟವನ್ನು ಪರಿಚಯಿಸಿದ್ದ ಮೆಕಲಮ್ ಇಂಗ್ಲೆಂಡ್‌ ಟೆಸ್ಟ್ ತಂಡವನ್ನು…

Read More

IND vs ENG: 341 ರನ್​ಗಳಿಗೆ ಡಿಕ್ಲೇರ್ ಘೋಷಿಸಿದ ಭಾರತ; ಇಂಗ್ಲೆಂಡ್ ಗೆಲುವಿಗೆ 456 ರನ್ ಗುರಿ

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ತನ್ನ ಎರಡನೇ ಇನ್ನಿಂಗ್ಸ್​ ಅನ್ನು 341 ರನ್​​ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆತಿಥೇಯ ಇಂಗ್ಲೆಂಡ್‌ ಮಹಿಳಾ ತಂಡದ ಗೆಲುವಿಗೆ 457 ರನ್​ಗಳ ಬೃಹತ್ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಪರ ಯಾಸ್ತಿಕಾ ಭಾಟಿಯಾ ಸ್ಮರಣೀಯ ಶತಕ ಸಿಡಿಸಿದರೆ, ಉಪನಾಯಕಿ ಸ್ಮೃತಿ ಮಂಧಾನ ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇತ್ತ ಇಂಗ್ಲೆಂಡ್‌ ಪರ ಸೋಫಿ ಎಕ್ಲೆಸ್ಟೋನ್ ಸತತ ಎರಡನೇ ಇನ್ನಿಂಗ್ಸ್​ನಲ್ಲೂ…

Read More

Grapes Cleaning Tips: ದ್ರಾಕ್ಷಿ ಹಣ್ಣನ್ನು ಸ್ವಚ್ಛಗೊಳಿಸಲು ಈ ಕ್ರಮಗಳನ್ನು ಅನುಸರಿಸಿ – Kannada News | The correct way to clean grapes

ಇಂದಿನ ಕಾಲದಲ್ಲಿ ಹೆಚ್ಚು ರಾಸಾಯನಿಕ ಮತ್ತು ಕೀಟನಾಶಗಳನ್ನು ಬಳಸಿಯೇ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಿಂದ ತಂದಂತಹ ಹಣ್ಣು ಮತ್ತು ತರಕಾರಿಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಿಯೇ ಬಳಸಬೇಕು ಎಂದು ತಜ್ಞರು ಸಲಹೆ ನೀಡುವುದು. ಆದರೆ ದ್ರಾಕ್ಷಿ ಹಣ್ಣಿನ (grapes) ವಿಚಾರಕ್ಕೆ ಬಂದ್ರೆ ಇದನ್ನು ಬರೀ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ, ಇದನ್ನು ಸ್ವಚ್ಛಗೊಳಿಸಲು ಸರಿಯಾದ ಕ್ರಮಗಳನ್ನು ಪಾಲಿಸಬೇಕಾಗುವುದು ತುಂಬಾನೇ ಮುಖ್ಯ. ಹೌದು ಇದರ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ, ರಾಸಾಯನಿಕಗಳನ್ನು ಅಂಟಿರುವುದರಿಂದ ಅವನ್ನು ಸಂಪೂರ್ಣವಾಗಿ ಹೋಗಲಾಡಿಸಲು, ದ್ರಾಕ್ಷಿ ಕ್ಲೀನ್‌…

Read More

ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಪ್ರಿಯಾಂಕ್ ಖರ್ಗೆಗೆ ಪ್ರಲ್ಹಾದ್​ ಜೋಶಿ ತಿರುಗೇಟು – Kannada News | Pralhad Joshi Sparks Priyank Kharge Over RSS Riot Claims

ಬಾಗಲಕೋಟೆ, ಜುಲೈ 12: ‘‘RSS ಬೈದಿದ್ದಕ್ಕೆ ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಮಾಧ್ಯಮಗಳಲ್ಲಿ ಜಾಗ ಸಿಗುತ್ತಿದೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದ್ದೇನೆ. ಬಾಲಿಶತನದ ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ’’ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ. ಆ ಮೂಲಕ RSS​ ಸಭೆ ನಂತರ ಗಲಭೆಗಳಾಗುತ್ತವೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್​ ಜೋಶಿ, ‘‘ಅದರ ಬಗ್ಗೆ ಕ್ರಮಕೈಗೊಳ್ಳಲು ಹೇಳಿ ಯಾರು ಬೇಡ ಅಂದಿದ್ದಾರೆ. ಪೆಡ್ಲರ್​ಗಳನ್ನು ಯಾಕೆ ಬಂಧಿಸಿಲ್ಲ ಅಂತಾ…

Read More

ತಮಿಳು ಸ್ಟಾರ್ ನಟನ ವಿರುದ್ಧ ವಂಚನೆ ಪ್ರಕರಣ ದಾಖಲು – Kannada News | Cheating Case registered against Tamil actor Arya

ಇತ್ತೀಚೆಗೆ ತಮಿಳು ಚಿತ್ರರಂಗದ (Kollywood) ನಾಯಕ ನಟರುಗಳು ಕೆಟ್ಟ ಕಾರಣಗಳಿಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ರವಿ ಮೋಹನ್, ಧನುಶ್ ತಮ್ಮ ವಿಚ್ಛೇದನ ಮತ್ತು ಅಫೇರ್​​ಗಳ ಕಾರಣಕ್ಕೆ ಸುದ್ದಿ ಆದರು. ನಟ ವಿಶಾಲ್ ಹಣಕಾಸು ವಂಚನೆ ಕಾರಣಕ್ಕೆ ಸುದ್ದಿ ಆದರು. ಇದೆಲ್ಲದರ ನಡುವೆ ಇದೀಗ ತಮಿಳಿನ ಜನಪ್ರಿಯ ನಾಯಕ ನಟನೊಬ್ಬನ ವಿರುದ್ಧ ಹೈದರಾಬಾದ್​​ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ತಮಿಳು ಮಾತ್ರವೆ ಅಲ್ಲದೆ ತೆಲುಗು ಭಾಷೆಗಳಲ್ಲಿ ನಟಿಸಿರುವ ನಟ ಆರ್ಯ ವಿರುದ್ಧ ಈಗ ಹೈದರಾಬಾದ್​​ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ…

Read More

IND vs ENG: ಲಾರ್ಡ್ಸ್‌ನಲ್ಲಿ ಶತಕ ಬಾರಿಸದಿದ್ದರೂ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ – Kannada News | Smriti Mandhana Dominates Lord’s Test: India’s Star Breaks Records and Outshines Sachin Kohli

ಲಾರ್ಡ್ಸ್‌ನಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಸಚಿನ್ ಕೇವಲ 195 ರನ್ ಗಳಿಸಿದರೆ, ಮತ್ತೊಂದೆಡೆ ಕೊಹ್ಲಿಗೆ, ಈ ಒಂದು ಪಂದ್ಯದಲ್ಲಿ ಮಂಧಾನ ಗಳಿಸಿದಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಲಾರ್ಡ್ಸ್‌ನಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 127 ರನ್ ಗಳಿಸಿದರೆ, ಮಂಧಾನ ಕೇವಲ ಒಂದು ಪಂದ್ಯದಲ್ಲಿ 153 ರನ್ ಕಲೆಹಾಕಿದರು (PC- Mint). Source link

Read More

ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಮುಂದಾದ ಶಿಕ್ಷಣ ಇಲಾಖೆ – Kannada News | Education Department Plans to Reintroduce Public Style Assessment Exams Across the State

ಪ್ರಾತಿನಿಧಿಕ ಚಿತ್ರImage Credit source: Getty images ಬೆಂಗಳೂರು, ಜುಲೈ 12: ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಶಿಕ್ಷಣ ಇಲಾಖೆ (education department) ಮುಂದಾಗಿದೆ. 5, 7, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ಮೌಲ್ಯಮಾಪನ ಪರೀಕ್ಷೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ. ಆದರೆ ಈ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆ ಎಂದು ಕರೆಯದೇ, ಮೌಲ್ಯಮಾಪನ ಪರೀಕ್ಷೆ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಎರಡು ವರ್ಷಗಳ ಹಿಂದೆ ಇದೇ ವಿಚಾರಕ್ಕೆ…

Read More