ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಕುಂಭ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಕುಂಭ ರಾಶಿಯವರಿಗೆ 2026ರ ಗುರು ಸಂಚಾರವು ಮಿಶ್ರ ಫಲಗಳನ್ನು ನೀಡಲಿದೆ. ಶನಿಯ ಅಧಿಪತ್ಯದಲ್ಲಿರುವ ಕುಂಭ ರಾಶಿಯವರಿಗೆ ಕಡೆಯ ಸಾಡೆ ಸಾತಿ ಅವಧಿಯಿದೆ. ಗುರುವು ಐದನೇ ಮನೆಯಿಂದ ಆರನೇ ಮನೆಗೆ ಸಂಚಾರ ಮಾಡುವುದರಿಂದ ರೋಗ ಮತ್ತು ಸಾಲದ ವಿಚಾರದಲ್ಲಿ ಜಾಗ್ರತೆ ಅಗತ್ಯ.
ಆರ್ಥಿಕವಾಗಿ ಉದಾಸೀನತೆ ಮತ್ತು ದುಂದುವೆಚ್ಚವನ್ನು ತಪ್ಪಿಸಬೇಕು, ಆದರೆ ಆರ್ಥಿಕವಾಗಿ ಶುಭವಾಗುವ ಸಾಧ್ಯತೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳು, ಕ್ರೀಡೆ, ಕೃಷಿ ಮತ್ತು ಭೂ ವ್ಯವಹಾರಗಳಲ್ಲಿ ಯಶಸ್ಸು ಕಾಣಬಹುದು. ವೈಯಕ್ತಿಕವಾಗಿ, ಬೇಕಾದವರೊಂದಿಗೆ ಕಲಹ, ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಗಲಾಟೆಗಳು ಎದುರಾಗಬಹುದು. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು, ಗಾಯಗಳು ಬೇಗ ವಾಸಿಯಾಗದೆ ಇರಬಹುದು, ಆಹಾರದಲ್ಲಿ ಎಚ್ಚರವಿರಲಿ. ಉದ್ಯೋಗದಲ್ಲಿ ಕಿರಿಕಿರಿ, ಮಹಿಳೆಯರಿಗೆ ಅಪವಾದ, ಐಟಿ ಮತ್ತು ಸಾಫ್ಟ್‌ವೇರ್ ವಲಯದವರಿಗೆ ಟೆನ್ಷನ್ ಎದುರಾಗಬಹುದು. ಪ್ರತಿನಿತ್ಯ ಜಪ, ಧ್ಯಾನ, ಯೋಗಾಭ್ಯಾಸ ಮತ್ತು ದತ್ತಾತ್ರೇಯ ಮಂತ್ರ ಜಪದಿಂದ ಶುಭ ಫಲಗಳು ದೊರೆಯಲಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಬೆಂಗಳೂರು, ಮೇ 28: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜತೆ ಬೆಳಗ್ಗೆ ಉಪಾಹಾರ ಸೇವಿಸಿರುವ ಸಿದ್ದರಾಮಯ್ಯ ಡಿಕೆ ಶಿವಕುಮಾರ್ಗೆ ಅಭಿನಂದನೆ ತಿಳಿಸಿದ್ದಾರೆ. ಇಂದು ರಾಜ್ಯಪಾಲರು ಇರುವುದಿಲ್ಲವಂತೆ, ಹೋಗಿ ನೋಡುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತಾನು ಪ್ರಬಲವಾಗಿದೆ ಎಂಬ ಸಂದೇಶವನ್ನು ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರ ಹಸ್ತಾಂತರದ ಮೂಲಕ ಸ್ಪಷ್ಟಪಡಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ನಡೆದ ಗೊಂದಲಗಳಿಗೆ ಅವಕಾಶ ನೀಡದೆ, ಸಿದ್ದರಾಮಯ್ಯ ಯಾವುದೇ ಅಸಮಾಧಾನವಿಲ್ಲದೆ ಅಧಿಕಾರ ಹಸ್ತಾಂತರಿಸಲು ಒಪ್ಪಿಕೊಂಡಿದ್ದಾರೆ. ಇದು ಹೈಕಮಾಂಡ್‌ಗೆ ನಿರಾಳತೆ ತಂದಿದೆ.
ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ, ರಾಜ್ಯಪಾಲರು ಇಲ್ವಂತಲ್ಲ, ಹೋಗ್ತೀನಿ ನೋಡೋಣ” ಎಂದು ಹೇಳುವ ಮೂಲಕ, ತಮ್ಮ ನಿರ್ಧಾರ ಸ್ಪಷ್ಟವಾಗಿದೆ ಎಂದು ಸೂಚಿಸಿದರು. ಪ್ರಸ್ತುತ, ರಾಜ್ಯಪಾಲರು ವೈಯಕ್ತಿಕ ಕಾರಣಗಳಿಂದ ಇಂದೋರ್‌ನಲ್ಲಿದ್ದು, ಇಂದು ಬೆಂಗಳೂರಿಗೆ ವಾಪಸ್ ಆಗುವ ನಿರೀಕ್ಷೆಯಿದೆ. ಈ ಸುಗಮ ಪರಿವರ್ತನೆಯನ್ನು ಕಾಂಗ್ರೆಸ್‌ಗೆ ಒಳ್ಳೆಯ ಬೆಳವಣಿಗೆ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಬೆಂಗಳೂರು, ಮೇ 28: ಹಳೇ ಪ್ರೇಮದ ನೆನಪಿನಲ್ಲಿ ಮಾಜಿ ಪ್ರೇಯಸಿಯನ್ನು (Ex Lover) ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದ ಯುವಕನೊಬ್ಬ ಭೀಕರವಾಗಿ ಕೊಲೆಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೇಯಸಿಯ ಪತಿ ಹಾಗೂ ಆಕೆಯ ಕುಟುಂಬಸ್ಥರೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮುಖ್ಯಾಂಶಗಳು
ಬೆಂಗಳೂರಿನಲ್ಲಿ ಮಾಜಿ ಪ್ರೇಯಸಿ ಮನೆಗೆ ಹೋದ ಮೊಹಮ್ಮದ್ ಖಾಸಿಂ ಕೊಲೆಯಾಗಿದ್ದಾನೆ.
ಹಳೇ ಪ್ರೇಮಿಯ ಆಗಮನದಿಂದ ಕೆರಳಿದ ಪತಿ ಮತ್ತು ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊಲೀಸರಿಂದ ತನಿಖೆ ತೀವ್ರಗೊಂಡಿದೆ.
ಪರಿಚಯ ಮತ್ತು ಹಳೇ ಪ್ರೇಮ
ಮೊಹಮ್ಮದ್ ಖಾಸಿಂ ಈ ಹಿಂದೆ ಯುವತಿಯೊಬ್ಬಳ ಜೊತೆ ಪ್ರೇಮ ಸಂಬಂಧದಲ್ಲಿದ್ದ. ಆದರೆ ಕೆಲವು ಕಾರಣಗಳಿಂದಾಗಿ ಇಬ್ಬರ ಬ್ರೇಕಪ್ ಆಗಿತ್ತು. ತದನಂತರ ಯುವತಿಗೆ ಬೇರೆ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಮದುವೆಯಾಗಿ ಪತಿಯೊಂದಿಗೆ ಆಕೆ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಇತ್ತೀಚೆಗೆ ಖಾಸಿಂ ಆಕೆಯನ್ನು ಭೇಟಿಯಾಗಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಮನೆಗೆ ಹೋದಾಗ ನಡೆದಿದ್ದೇನು?
ಘಟನೆಯ ದಿನದಂದು ಖಾಸಿಂ ಯಾರಿಗೂ ತಿಳಿಸದೆ ನೇರವಾಗಿ ಬೆಂಗಳೂರಿನಲ್ಲಿರುವ ತನ್ನ ಮಾಜಿ ಪ್ರೇಯಸಿಯ ಮನೆಗೆ ಭೇಟಿ ನೀಡಿದ್ದ. ಈ ವೇಳೆ ಮನೆಯಲ್ಲಿದ್ದ ಆಕೆಯ ಪತಿ ಮತ್ತು ಕುಟುಂಬದ ಇತರ ಸದಸ್ಯರು ಆತನನ್ನು ನೋಡಿ ತೀವ್ರ ಆಕ್ರೋಶಗೊಂಡಿದ್ದರು. ಹಳೇ ಪ್ರೇಮಿಯ ಆಗಮನದಿಂದ ದಂಪತಿ ನಡುವೆ ಗಲಾಟೆ ಶುರುವಾಗಿದ್ದು, ಅದು ವಿಕೋಪಕ್ಕೆ ತಿರುಗಿತ್ತು.
ಯುವತಿಯ ಪತಿ ಮತ್ತು ಆಕೆಯ ಸಂಬಂಧಿಕರು ಕೋಪದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯ ಎಸಗಿದವರನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರು, ಮೇ 28: ರಾಜ್ಯ ರಾಜಕಾರಣದಲ್ಲಿ ದಶಕದ ದೊಡ್ಡ ಹೈಡ್ರಾಮಾ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇಂದು ನಡೆದ ಸಚಿವರ ಮಹತ್ವದ ‘ಬ್ರೇಕ್ಫಾಸ್ಟ್ ಮೀಟಿಂಗ್’ನಲ್ಲಿ ಸಿದ್ದರಾಮಯ್ಯ ಅವರು ತಾವಾಗಿಯೇ ಪದತ್ಯಾಗ ಮಾಡಲಿರುವ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ಒಂದು ವೇಳೆ ರಾಜ್ಯಪಾಲರು ಲಭ್ಯವಿಲ್ಲದಿದ್ದರೆ, ಅವರ ಕಾರ್ಯದರ್ಶಿಗೆ ಪತ್ರ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಅತ್ಯಂತ ಸೌಹಾರ್ದಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪರಸ್ಪರ ಆಲಿಂಗಿಸಿಕೊಂಡಿದ್ದಾರೆ.
ಮುಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ನಾಯಕತ್ವದ ಅಧ್ಯಾಯ ಆರಂಭವಾಗುವುದು ಬಹುತೇಕ ಖಚಿತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ 28: ಈಗಷ್ಟೇ ಕಾಲೇಜು ಮುಗಿಸಿ ಮೊದಲ ಕೆಲಸಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಶೈಕ್ಷಣಿಕ ಸಾಧನೆ ಮತ್ತು ಗ್ರೇಡ್ಗಳನ್ನು ಪರಿಶೀಲಿಸುವುದುಂಟು. ಆದರೆ, ಅನುಭವಿ ವ್ಯಕ್ತಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಆತನ ಕಾಲೇಜು ಪರೀಕ್ಷೆಗಳ ಅಂಕಗಳಿಗೆ ಸಾಮಾನ್ಯವಾಗಿ ಯಾವ ಕಂಪನಿಗಳೂ ಆದ್ಯತೆ ಕೊಡುವುದಿಲ್ಲ. ಗೂಗಲ್ನ 8 ವರ್ಷದ ಅನುಭವಿ ಉದ್ಯೋಗಿಯೊಬ್ಬರು ತಮಗಾದ ಅನುಭವವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರ್ಷಕ್ಕೆ 80 ಲಕ್ಷ ರೂಗೂ ಅಧಿಕ ಸಂಬಳ ಪಡೆಯುವ ಈ ಗೂಗಲ್ ಟೆಕ್ಕಿಯ (Google Employee) ಅರ್ಜಿಯನ್ನು ಭಾರತೀಯ ಸ್ಟಾರ್ಟಪ್ ತಿರಸ್ಕರಿಸಿತಂತೆ. ಈ ಅಪ್ಲಿಕೇಶನ್ ರಿಜೆಕ್ಟ್ ಮಾಡಲು ಸ್ಟಾರ್ಟಪ್ ನೀಡಿದ ಕಾರಣವನ್ನು ಈ ವ್ಯಕ್ತಿ ಬಹಿರಂಗಪಡಿಸಿದ್ದಾರೆ. ಈ ಕಾರಣ ಕೇಳಿ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಗೂಗಲ್ ಟೆಕ್ಕಿ (ಹೆಸರು ಹೇಳಲು ಇಚ್ಛಿಸಿಲ್ಲ) ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಉದಯೋನ್ಮುಖ ಸ್ಟಾರ್ಟ್‌ಅಪ್ ಕಂಪನಿಯೊಂದಕ್ಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಕಂಪನಿಯು ಅವರಿಗೆ ವಾಟ್ಸಾಪ್ (WhatsApp) ಮೂಲಕ ಸಂದೇಶ ಕಳುಹಿಸಿ, ಅವರ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದೆ. ಅದಕ್ಕೆ ಅವರು ನೀಡಿದ ಕಾರಣ: “ಅವರ ಕಾಲೇಜು ದಿನಗಳ CGPA ಅಂಕ 7 ಕ್ಕಿಂತ ಕಡಿಮೆ ಇತ್ತು!”. ಸಿಜಿಪಿಎ ಎಂಬುದು ವಿದ್ಯಾರ್ಥಿಯ ಎಲ್ಲಾ ಪರೀಕ್ಷೆಗಳನ್ನು ಸೇರಿಸಿ ನೀಡಲಾಗುವ ಗ್ರೇಡಿಂಗ್. ಸಾಮಾನ್ಯವಾಗಿ 10ಕ್ಕೆ ನಿರ್ದಿಷ್ಟ ಅಂಕಗಳನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಐಟಿ ಉದ್ಯಮದಲ್ಲಿ ಬರೋಬ್ಬರಿ 8 ವರ್ಷಗಳ ಸುದೀರ್ಘ ಅನುಭವವಿದೆ. ತಮಾಷೆಯೆಂದರೆ, ಸದರಿ ಎಂಜಿನಿಯರ್ ತಮ್ಮ ಬಯೋಡೇಟಾ (Resume) ದಲ್ಲಿ ಕಾಲೇಜು ಅಂಕಗಳನ್ನೇ ನಮೂದಿಸಿರಲಿಲ್ಲ. ಆದರೂ ಕಂಪನಿಯು ಹಳೆಯ ಅಂಕಗಳನ್ನು ಹುಡುಕಿ ತೆಗೆದು, ಅದರ ಆಧಾರದ ಮೇಲೆ ರಿಜೆಕ್ಟ್ ಮಾಡಿದೆ.
ಕಂಪನಿಯು ಕಳುಹಿಸಿದ ಸಂದೇಶದಲ್ಲಿ CGPA ಕೊರತೆಯನ್ನು ಬಿಟ್ಟರೆ ಅವರ ಕೌಶಲ್ಯ ಅಥವಾ ಅನುಭವದ ಬಗ್ಗೆ ಬೇರೆ ಯಾವುದೇ ಆಕ್ಷೇಪಣೆಗಳನ್ನು ಉಲ್ಲೇಖಿಸಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್
ಈ ವಿಲಕ್ಷಣ ಅನುಭವವನ್ನು ಆ ಉದ್ಯೋಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ತಕ್ಷಣವೇ ಇದು ವೈರಲ್ ಆಗಿದೆ. ಸ್ಟಾರ್ಟ್‌ಅಪ್‌ನ ಈ ಕ್ರಮಕ್ಕೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಂಟು ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ನೈಜ ಕೆಲಸದ ಅನುಭವ ಹೊಂದಿರುವ ಉದ್ಯೋಗಿಯ ಸಾಮರ್ಥ್ಯವನ್ನು ಅಳೆಯಲು ಹಳೆಯ ಪರೀಕ್ಷಾ ಅಂಕಗಳನ್ನು ಮಾನದಂಡವಾಗಿ ಬಳಸುವುದು ತರ್ಕಹೀನ ಎಂದು ಕೆಲವರು ಆಕ್ಷೇಪಿಸಿದ್ದಾರೆ.
“ಇಂತಹ ಸಣ್ಣ ಮನಸ್ಥಿತಿಯ ಕಂಪನಿಗೆ ಸೇರದೆ ಇರುವುದೇ ಒಳ್ಳೆಯದಾಯಿತು, ನೀವು ದೊಡ್ಡ ಅಪಾಯದಿಂದ ಪಾರಾಗಿದ್ದೀರಿ” (Dodged a bullet) ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.
ನವದೆಹಲಿ, ಮೇ 28: ಚಿನ್ನದ ಬೆಲೆ ಸತತವಾಗಿ ಇಳಿಮುಖವಾಗುತ್ತಿದೆ. ಬೆಳ್ಳಿ ಬೆಲೆಯೂ ಕಳೆದ ಏಳೆಂಟು ದಿನದಲ್ಲಿ ಮೊದಲ ಬಾರಿ ಇಳಿದಿದೆ. ಬಂಗಾರದ ದರ (Gold Rate) ಒಂದು ಗ್ರಾಮ್ಗೆ 200 ರೂಗಿಂತ ಹೆಚ್ಚಿನ ಮೊತ್ತದಷ್ಟು ಇಳಿಕೆಯಾಗಿದೆ. ಹಿಂದಿನ ಎರಡು ದಿನದಲ್ಲಿ 100 ರೂ ಬೆಲೆ ತಗ್ಗಿತ್ತು. ಭಾರತದಲ್ಲಿಯಷ್ಟೇ ಅಲ್ಲ ಬಹುತೇಕ ದೇಶಗಳ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ 10 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,43,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,56,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,43,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 28ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,606 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,305 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,704 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,606 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,305 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರು ಹೈದರಾಬಾದ್ ತಂಡದ ವಿರುದ್ಧ ಅಬ್ಬರಿಸಿದ್ದಾರೆ. ಕೇವಲ 28 ಬಾಲ್ಗೆ 97 ರನ್ ಹೊಡೆದು ಶತಕ ವಂಚಿತರಾಗಿದ್ದರು. ಆದಾಗ್ಯೂ ಎಲಿಮಿನೇಟರ್ ಪಂದ್ಯದಲ್ಲಿ ಆರ್ಆರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆಕ್ಷನ್ ವೇಳೆ ವೈಭವ್ ಸೂರ್ಯವಂಶಿ ಅವರನ್ನು ಖರೀದಿಸಲು ಡೆಲ್ಲಿ ಡೇರ್ಡೆವಿಲ್ಸ್ಗೆ ಅವಕಾಶ ಇತ್ತು. ಆದರೆ ಈ ಅವಕಾಶ ಕೈ ಚೆಲ್ಲಿದ್ದರು. ಒಂದೊಮ್ಮೆ ಅವರು ಆಕ್ಷನ್ ಅಲ್ಲಿ ಸೂರ್ಯವಂಶಿಯನ್ನು ಖರೀದಿಸಿದ್ದರೆ ಡೆಲ್ಲಿ ಅದೃಷ್ಟ ಬದಲಾಗಿರುತ್ತಿತ್ತು.
ವಾರದ ಪ್ರೇಮ – ಪ್ರೀತಿ ಭವಿಷ್ಯImage Credit source: Pinterest
ಮೇ 31ರಿಂದ ಜೂನ್ 06ರವರೆಗೆ ಜೂನ್ ಮೊದಲವಾರವಾಗಲಿದ್ದು, ಗುರುವಿನ ಸ್ಥಾನದ ಬದಲಾವಣೆಯಿಂದ ಪ್ರೇಮ ಜೀವನಕ್ಕೆ ಹೊಸ ಆಯಾಮ ಸಿಗಲಿದೆ. ಶುಕ್ರ ಶತ್ರುವಿನ ಸಹವಾಸದಿಂದ ಸದ್ಯ ಮುಕ್ತನಾಗುವನು. ಪ್ರೇಮದ ಫಲವನ್ನು ಕೊಡುವನು.
ಮೇಷ ರಾಶಿ:
ನಿಮ್ಮ ರಾಶಿಯಲ್ಲಿಯೇ ಮಂಗಳನಿರುವುದರಿಂದ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಆದರೆ ಸಂಗಾತಿಯೊಂದಿಗೆ ಮಾತನಾಡುವಾಗ ಹಠಮಾರಿತನ ಬಿಟ್ಟು ನಡೆದುಕೊಳ್ಳುವುದು ಒಳಿತು. ಅನಗತ್ಯ ವಾದಗಳು ದೂರವಾಗಿ ಪ್ರೀತಿ ಮೂಡುವುದು.
ವೃಷಭ ರಾಶಿ :
ನಿಮ್ಮ ರಾಶಿಯಲ್ಲಿ ಸೂರ್ಯನಿದ್ದಾನೆ. ಸಂಗಾತಿಯ ಮೇಲಿನ ಪ್ರೀತಿ ಗಾಢವಾಗಲಿದ್ದರೂ, ಅಹಂಕಾರದ ಮಾತುಗಳು ಬಾಂಧವ್ಯಕ್ಕೆ ಕದಡಬಹುದು. ತಾಳ್ಮೆಯಿಂದ ವರ್ತಿಸಿದರೆ ಈ ವಾರ ಶೃಂಗಾರದ ಕ್ಷಣಗಳನ್ನು ಕಳೆಯಬಹುದು.
ಮಿಥುನ ರಾಶಿ:
ಬುಧ ಮತ್ತು ಶುಕ್ರರು ನಿಮ್ಮ ರಾಶಿಯಲ್ಲಿ ಜಂಟಿಯಾಗಿದ್ದಾರೆ. ಪ್ರೇಮಿಗಳಿಗೆ ಅತ್ಯಂತ ಅದ್ಭುತವಾದ ಸಮಯವಿದು. ಮನಸ್ತಾಪಗಳು ದೂರವಾಗಿ ಹೊಸ ಒಡನಾಟ ಸೃಷ್ಟಿಯಾಗಲಿದೆ. ಸಂಗಾತಿಯಿಂದ ನಿಮಗಾಗಿ ವಿಶೇಷ ಉಡುಗೊರೆ ಸಿಗುವ ಸಾಧ್ಯತೆಯಿದೆ.
ಕರ್ಕಾಟಕ ರಾಶಿ:
ಗುರುವು ನಿಮ್ಮ ರಾಶಿಯಲ್ಲಿ ಉಚ್ಛಸ್ಥಿತಿಯಲ್ಲಿದ್ದಾನೆ. ಪ್ರೇಮ ಜೀವನದಲ್ಲಿ ಘನತೆ ಮತ್ತು ಪರಸ್ಪರ ಗೌರವ ಹೆಚ್ಚಾಗಲಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಹಳೆಯ ನೆನಪುಗಳು ನಿಮ್ಮಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಲಿವೆ.
ಸಿಂಹ ರಾಶಿ:
ಕೇತು ನಿಮ್ಮ ರಾಶಿಯಲ್ಲಿದ್ದಾನೆ. ಪ್ರೇಮ ಬಾಂಧವ್ಯದಲ್ಲಿ ಸ್ವಲ್ಪ ಗೊಂದಲ ಅಥವಾ ಅಸ್ಪಷ್ಟತೆ ಮೂಡಬಹುದು. ಸಂಗಾತಿಯನ್ನು ಶಂಕಿಸದೆ ಮುಕ್ತವಾಗಿ ಮಾತನಾಡಿ. ವಾರಾಂತ್ಯದ ವೇಳೆಗೆ ಪರಿಸ್ಥಿತಿ ತಿಳಿಯಾಗಿ ಸುಧಾರಣೆ ಕಂಡುಬರಲಿದೆ.
ಕನ್ಯಾ ರಾಶಿ:
ಪ್ರೇಮ ಜೀವನದಲ್ಲಿ ಈ ವಾರ ಮಿಶ್ರಫಲ ಸಿಗಲಿದೆ. ಸಂಗಾತಿಯ ಭಾವನೆಗಳಿಗೆ ಸೂಕ್ತ ಗೌರವ ನೀಡುವುದು ಮುಖ್ಯ. ನಿಮ್ಮ ಕಾರ್ಯನಿರತತೆಯ ಮಧ್ಯೆಯೂ ಪ್ರೀತಿಪಾತ್ರರಿಗಾಗಿ ಸಮಯ ಮೀಸಲಿಟ್ಟರೆ ಸಂಬಂಧವು ಮಧುರವಾಗಿರುತ್ತದೆ.
ತುಲಾ ರಾಶಿ :
ಪ್ರೇಮ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ಪರಸ್ಪರ ನಂಬಿಕೆ ಹೆಚ್ಚಾಗಲಿದ್ದು, ದೂರದ ಪ್ರಯಾಣಕ್ಕೆ ಯೋಜನೆ ರೂಪಿಸುವಿರಿ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಅವಿವಾಹಿತರಿಗೆ ಹೊಸ ಪರಿಚಯಗಳು ಪ್ರೇಮವಾಗಿ ಬದಲಾಗಬಹುದು.
ವೃಶ್ಚಿಕ ರಾಶಿ:
ಭಾವನಾತ್ಮಕವಾಗಿ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಕನೆಕ್ಟ್ ಆಗುವಿರಿ. ಪ್ರೀತಿಯ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ಪರಸ್ಪರರ ತಪ್ಪುಗಳನ್ನು ಕ್ಷಮಿಸಿ ಮುನ್ನಡೆದರೆ ಪ್ರೇಮ ಜೀವನ ಸುಖಮಯವಾಗಿರುತ್ತದೆ.
ನಿಮ್ಮ ಲಗ್ನದಲ್ಲೇ ಪೂರ್ವಷಾಢ ನಕ್ಷತ್ರದ ಪ್ರಭಾವವಿದೆ. ಸಂಗಾತಿಯ ಕಡೆಯಿಂದ ಉತ್ತಮ ಬೆಂಬಲ ದೊರೆಯಲಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಈ ವಾರ ಯೋಗ್ಯವಾಗಿದೆ. ಪರಸ್ಪರ ಆಕರ್ಷಣೆ ಹೆಚ್ಚಲಿದ್ದು, ಸಣ್ಣ ಪ್ರವಾಸದ ಯೋಗವಿದೆ.
ಮಕರ ರಾಶಿ:
ಪ್ರೇಮ ವ್ಯವಹಾರಗಳಲ್ಲಿ ಸಮಾಧಾನದಿಂದ ಇರಬೇಕು. ಸಣ್ಣ ಪುಟ್ಟ ತಪ್ಪು ಕಲ್ಪನೆಗಳು ಮೂಡುವ ಸಂಭವವಿರುವುದರಿಂದ ಮಾತು ನಿಯಂತ್ರಣದಲ್ಲಿರಲಿ. ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಡಿ, ಬಾಂಧವ್ಯ ಗಟ್ಟಿಯಾಗಿರಲಿದೆ.
ಕುಂಭ ರಾಶಿ:
ಚಂದ್ರ ಮತ್ತು ರಾಹು ಒಟ್ಟಿಗೆ ನಿಮ್ಮ ರಾಶಿಯಲ್ಲಿದ್ದಾರೆ. ಮನಸ್ಸಿನಲ್ಲಿ ಇಲ್ಲದ ಆತಂಕ ಅಥವಾ ಸಂಶಯಗಳು ಮೂಡಬಹುದು. ಸಂಗಾತಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಿ. ಗೊಂದಲಗಳನ್ನು ಬಗೆಹರಿಸಿಕೊಂಡರೆ ಪ್ರೀತಿ ಮತ್ತಷ್ಟು ಆಳವಾಗುತ್ತದೆ.
ಮೀನ ರಾಶಿ:
ನಿಮ್ಮ ರಾಶಿಯಲ್ಲಿ ಶನಿ ನೆಲೆಸಿದ್ದಾನೆ. ಪ್ರೇಮ ಸಂಬಂಧದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಸಂಗಾತಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಶ್ರಮಿಸುವಿರಿ. ಸಂಬಂಧದಲ್ಲಿ ತಾಳ್ಮೆ ಮತ್ತು ಪ್ರಬುದ್ಧತೆ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ.
ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಸದ್ಯ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದೇಶಕ ಫರ್ಹಾನ್ ಅಖ್ತರ್ ಅವರ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ಹೊರನಡೆದ ಬೆನ್ನಲ್ಲೇ ಬಿ-ಟೌನ್‌ನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ರಣವೀರ್ ಅವರ ಈ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ಗೆ ಬರೋಬ್ಬರಿ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಆಕ್ರೋಶಗೊಂಡಿರುವ ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್’ ಒಕ್ಕೂಟವು ರಣವೀರ್ ಸಿಂಗ್ ವಿರುದ್ಧ ಅಸಹಕಾರ ಚಳವಳಿ ಆರಂಭಿಸಲು ಚಿಂತನೆ ನಡೆಸಿದೆ. ಒಕ್ಕೂಟದ ಯಾವುದೇ ಸದಸ್ಯರು ರಣವೀರ್ ಜೊತೆ ಕೆಲಸ ಮಾಡಬಾರದು ಎಂಬ ಎಚ್ಚರಿಕೆಯೂ ಕೇಳಿಬರುತ್ತಿದೆ. ಈ ಭಾರಿ ವಿವಾದದ ನಡುವೆಯೇ, ರಣವೀರ್ ಸಿಂಗ್ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಅಂತರ್ಜಾಲದಲ್ಲಿ ಮುನ್ನೆಲೆಗೆ ಬಂದಿದೆ.
ಕರಣ್ ಜೋಹರ್, ರಣಬೀರ್ ಕಪೂರ್ ನನ್ನನ್ನು ಟಾರ್ಗೆಟ್ ಮಾಡಿದರು
ರಣವೀರ್ ಸಿಂಗ್ ಅವರ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ, ಅಂದರೆ 2016ರಲ್ಲಿ ನಟ ರಣಬೀರ್ ಕಪೂರ್ ಜೊತೆಯಾಗಿ ಕರಣ್ ಜೋಹರ್ ಅವರ ಪ್ರಸಿದ್ಧ ಟಾಕ್ ಶೋ ‘ಕಾಫಿ ವಿದ್ ಕರಣ್’ ಸೀಸನ್ 5 ರಲ್ಲಿ ಭಾಗವಹಿಸಿದ್ದರು. ಅಂದು ಇಬ್ಬರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಂಡ ಆ ಎಪಿಸೋಡ್ ಇಂದಿಗೂ ಸಖತ್ ಫೇಮಸ್. ಆ ಶೋನಲ್ಲಿ ಕರಣ್ ಜೋಹರ್ ಮತ್ತು ರಣಬೀರ್ ಕಪೂರ್ ಇಬ್ಬರೂ ಸೇರಿ ದೀಪಿಕಾ ಪಡುಕೋಣೆ ವಿಷಯ ಎತ್ತಿದಾಗ, ರಣವೀರ್ ಸಿಂಗ್ ಅವರು ತಮಾಷೆಯಾಗಿ “ಇವರಿಬ್ಬರು ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ನಾನು ಇಲ್ಲಿ ಸಂತ್ರಸ್ತನಾಗುತ್ತಿದ್ದೇನೆ” ಎಂದು ಕಾಲೆಳೆದಿದ್ದರು.
ದೀಪಿಕಾ ವಿಷಯಕ್ಕೆ ಮುಜುಗರಕ್ಕೊಳಗಾಗಿದ್ದ ರಣವೀರ್
ಅಂದು ರಣವೀರ್ ಮತ್ತು ದೀಪಿಕಾ ಪಡುಕೋಣೆ ಡೇಟಿಂಗ್ ಮಾಡುತ್ತಿದ್ದರು (2018ರಲ್ಲಿ ಇವರ ಮದುವೆಯಾಯಿತು). ಅದಕ್ಕೂ ಮುನ್ನ ಚಿತ್ರರಂಗದ ಆರಂಭದ ದಿನಗಳಲ್ಲಿ ದೀಪಿಕಾ ಮತ್ತು ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಶೋನಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ರಣಬೀರ್ ಕಪೂರ್, ‘ನಮ್ಮ ನಡುವೆ ಯಾವುದೇ ಮುಜುಗರವಿಲ್ಲ, ನಾವೆಲ್ಲರೂ ಒಟ್ಟಿಗೆ ಪಾರ್ಟಿ ಮಾಡುತ್ತೇವೆ. ಮುಂದೊಂದು ದಿನ ರಣವೀರ್-ದೀಪಿಕಾ ಜೋಡಿಗೆ ಹುಟ್ಟುವ ಮಕ್ಕಳು ನನ್ನನ್ನು ಒಬ್ಬ ನಟನಾಗಿ ಇಷ್ಟಪಡುವಂತಾಗಲಿ’ ಎಂದು ತಮಾಷೆ ಮಾಡಿದ್ದರು. ರಣಬೀರ್ ಅವರ ಈ ಹಠಾತ್ ಮಾತಿನಿಂದ ಮುಜುಗರಕ್ಕೊಳಗಾದ ರಣವೀರ್ ನಗುತ್ತಾ, ’ಇಂದು ರಣಬೀರ್ ಎಲ್ಲೆ ಮೀರಿ ಮಾತನಾಡುತ್ತಿದ್ದಾನೆ’ ಎಂದಿದ್ದರು.
ಅದೇ ಶೋನಲ್ಲಿ ರಣಬೀರ್ ಕಪೂರ್ ಅವರು ರಣವೀರ್ ಸಿಂಗ್ ಅವರ ನಟನಾ ಸಾಮರ್ಥ್ಯವನ್ನು ಮುಕ್ತವಾಗಿ ಹೊಗಳಿದ್ದರು. ಆ ಸಮಯದಲ್ಲಿ ರಣಬೀರ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸತತ ಸೋಲು ಕಾಣುತ್ತಿದ್ದವು. ತಮ್ಮ ಸೋಲಿನ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದ ರಣಬೀರ್, “ನನ್ನ ಸಿನಿಮಾಗಳು ಓಡದೇ ಇದ್ದಾಗ ಗೊಂದಲವಾಗುವುದು ಸಹಜ. ಆದರೆ ರಣವೀರ್ ತೆರೆಮೇಲೆ ಮಿಂಚುವುದನ್ನು ನೋಡಿದಾಗ ನನಗೆ ಬೇಸರವಾಗುವುದಿಲ್ಲ, ಬದಲಿಗೆ ಮತ್ತಷ್ಟು ಪ್ರೇರಣೆ ಸಿಗುತ್ತದೆ. ‘ರಾಮ್-ಲೀಲಾ’, ‘ದಿಲ್ ಧಡಕನೆ ದೋ’ ಮತ್ತು ‘ಬಾಜೀರಾವ್ ಮಸ್ತಾನಿ’ ಚಿತ್ರಗಳಲ್ಲಿ ಆತನ ನಟನೆ ನೋಡಿ ನಾನು ಇನ್ನೂ ಉತ್ತಮವಾಗಿ ಕೆಲಸ ಮಾಡಬೇಕು ಎನಿಸಿತು. ಈ ಹುಡುಗನ ಪ್ರತಿಭೆಗೆ ಎಲ್ಲೆಯೇ ಇಲ್ಲ, ನನಗೆ ಆತನ ಸ್ಪರ್ಧೆಯ ಬಗ್ಗೆ ಕೊಂಚ ಹೆದರಿಕೆಯೂ ಇದೆ’ ಎಂದು ಹೇಳಿದ್ದರು.
ಒಂದೆಡೆ ಅಂದು ಬಾಲಿವುಡ್‌ನ ಭವಿಷ್ಯದ ಸೂಪರ್‌ಸ್ಟಾರ್ ಎಂದು ಕೊಂಡಾಡಲ್ಪಟ್ಟ ರಣವೀರ್ ಸಿಂಗ್ ಅವರ ಹಳೆಯ ಸ್ನೇಹದ ವಿಡಿಯೋ ವೈರಲ್ ಆಗುತ್ತಿದ್ದರೆ, ಮತ್ತೊಂದೆಡೆ ‘ಡಾನ್ 3’ ವಿವಾದದಿಂದಾಗಿ ಅವರ ಸಿನಿ ಜರ್ನಿಗೆ ಭಾರಿ ಹಿನ್ನಡೆಯಾಗುವ ಆತಂಕ ಎದುರಾಗಿದೆ.
ಬೆಂಗಳೂರು, ಮೇ 28: ರಾಜ್ಯ ರಾಜಕಾರಣದಲ್ಲಿ ಬಹು ನಿರೀಕ್ಷಿತ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿಎಂ ಸಿದ್ದರಾಮಯ್ಯ ಕರೆದಿರುವ ಬ್ರೇಕ್ಫಾಸ್ಟ್ ಮೀಟಿಂಗ್ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯನವರ ಪಾದಸ್ಪರ್ಶ ಮಾಡಿ ನಂತರ ಆತ್ಮೀಯವಾಗಿ ಆಲಿಂಗಿಸಿಕೊಂಡರು. ಸಿದ್ದರಾಮಯ್ಯನವರು ನಗುಮುಖದಿಂದ ಕಾಣಿಸಿಕೊಂಡರೆ, ಡಿ.ಕೆ. ಶಿವಕುಮಾರ್ ತುಸು ಭಾವುಕರಾಗಿದ್ದಂತೆ ಕಂಡುಬಂದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಇಬ್ಬರೂ ನಾಯಕರು ಯಾವುದೇ ಸಿಬ್ಬಂದಿಯಿಲ್ಲದೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ಮಾತುಕತೆ ರಾಜ್ಯದ ರಾಜಕೀಯ ಬೆಳವಣಿಗೆಗಳು, ಅಧಿಕಾರ ಹಂಚಿಕೆ ಮತ್ತು ಮುಂದಿನ ಯೋಜನೆಗಳ ಕುರಿತು ಕೇಂದ್ರೀಕೃತವಾಗಿತ್ತು ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ