ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ 30 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು: ಇನ್ನೂ 15 ಪ್ರಕರಣಗಳು ಬಾಕಿ – Kannada News | Kudremukh: 30 Acres of Forest Land Reclaimed in Major Anti Encroachment Drive; 15 More Cases Pending

ಅತಿಕ್ರಮಣವಾಗಿದ್ದ 30 ಎಕರೆ ಅರಣ್ಯ ಭೂಮಿ ಮರುಸ್ವಾಧೀನ

Image Credit source: new indian express

ಚಿಕ್ಕಮಗಳೂರು, ಜೂನ್​​ 30: ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ 13 ಅತಿಕ್ರಮಣಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ತೆರವುಗೊಳಿಸಿ ಸುಮಾರು 30 ಎಕರೆ ಅರಣ್ಯ ಭೂಮಿಯನ್ನು ಮರುಸ್ವಾಧೀನಪಡಿಸಿಕೊಂಡಿದೆ. ಮೂಲಗಳ ಪ್ರಕಾರ, ಈ ಅತಿಕ್ರಮಣ ಪ್ರಕರಣಗಳನ್ನು 2001ರಿಂದ ವಿವಿಧ ಹಂತಗಳಲ್ಲಿ ಗುರುತಿಸಲಾಗಿತ್ತು. 2015ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಭೂಮಿ ತೆರವುಗೊಳಿಸುವಂತೆ ಆದೇಶಿಸಿದ್ದರು. ಬಳಿಕ ಕೆಲವರು ಮೇಲ್ಮನವಿ ಸಲ್ಲಿಸಿದ್ದರಿಂದ, 2019ರಲ್ಲಿ ಅಂತಿಮ ತೆರವು ಆದೇಶ ಹೊರಡಿಸಲಾಗಿತ್ತು.

ಇನ್ನೂ ವನ್ಯಜೀವಿ ವಿಭಾಗದ ಈ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಅರಣ್ಯ ಭೂಮಿ ಅತಿಕ್ರಮಣ ಪ್ರಕರಣಗಳು ತೆರವುಗೊಳ್ಳಬೇಕಿವೆ ಎಂದು ಮೂಲಗಳು ತಿಳಿಸಿವೆ. ಅತಿಕ್ರಮಣದಾರರು ಹೆಚ್ಚಿನ ಭೂಮಿಯಲ್ಲಿ ಅಡಿಕೆ ಹಾಗೂ ಕಾಫಿ ಬೆಳೆ ಬೆಳೆದಿದ್ದು, ಕೆಲವರು ವಾಸಿಸಲು ಕಟ್ಟಡಗಳನ್ನೂ ನಿರ್ಮಿಸಿದ್ದರು. ಆ ಪೈಕಿ ಬಹುತೇಕರು ಸಣ್ಣ ರೈತ ಕುಟುಂಬಗಳಾಗಿದ್ದು, ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಇನ್ನೆರಡು ಪ್ರಕರಣಗಳಲ್ಲಿ ಹೋಂಸ್ಟೇ ನಡೆಸಲಾಗುತ್ತಿದ್ದು, ಅವು ನ್ಯಾಯಾಲಯದ ವಿಚಾರಣೆಯಲ್ಲಿವೆ ಎಂದು ಕುದುರೆಮುಖ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಎಂ. ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅರೇ ಇದೇನಿದು! ರೈತರ ಭೂಮಿಯನ್ನೇ ಒತ್ತುವರಿ ಮಾಡಿದ ಅರಣ್ಯ ಇಲಾಖೆ; ಅಚ್ಚರಿ ಎನ್ನಿಸಿದ್ರೂ ಸತ್ಯ

ಅತಿಕ್ರಮಣ ಮಾಡಿದ ಜಾಗದಲ್ಲಿದ್ದ ಅಡಿಕೆ ಮತ್ತು ಕಾಫಿ ತೋಟಗಳನ್ನು ತೆರವುಗೊಳಿಸಲಾಗಿದೆ. ಸಾಮಾನ್ಯವಾಗಿ ರಾಷ್ಟ್ರೀಯ ಉದ್ಯಾನವನದ ಒಳಭಾಗದಲ್ಲಿ ಹೊಸ ಗಿಡಗಳನ್ನು ನೆಡುವುದಿಲ್ಲ. ಬದಲಾಗಿ, ಮರು ಅತಿಕ್ರಮಣ ತಡೆಯಲು ಜಾನುವಾರು ನಿರೋಧಕ ಕಂದಕ ನಿರ್ಮಿಸಿ, ಭೂಮಿ ಅರಣ್ಯ ಇಲಾಖೆಯ ವಶದಲ್ಲಿದೆ ಎಂಬ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ಶಿವರಾಮ್ ವಿವರಿಸಿದ್ದಾರೆ. ಅರಣ್ಯ ಭೂಮಿಯ ಅತಿಕ್ರಮಣ ಪತ್ತೆಗೆ ಇಲಾಖೆ ಉಪಗ್ರಹ ಚಿತ್ರಗಳ ಮೂಲಕ ಭೂಬಳಕೆ ಬದಲಾವಣೆಗಳನ್ನು ಪರಿಶೀಲಿಸುತ್ತಿದೆ. ಜೊತೆಗೆ, ಸಿಬ್ಬಂದಿ ಪ್ರತಿ ತಿಂಗಳು ಎರಡು ಬಾರಿ ಇ-ಗಸ್ತು ಆ್ಯಪ್ ಬಳಸಿ ಅರಣ್ಯ ಪ್ರದೇಶವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬೀಟ್ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ರಕ್ಷಕರು ಗಡಿ ಪ್ರದೇಶಗಳಲ್ಲಿ ನಿರಂತರ ಗಸ್ತು ನಡೆಸಿ ಅತಿಕ್ರಮಣ ಮತ್ತು ವನ್ಯಜೀವಿ ಸಂರಕ್ಷಣೆಗೆ ನಿಗಾ ವಹಿಸುತ್ತಿದ್ದಾರೆ ಎಂದು ಡಿಸಿಎಫ್ ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:04 pm, Tue, 30 June 26

Source link

ವಿಶ್ವದ ನಂ. 1 ಶಿಪ್ಪಿಂಗ್ ಕಂಪನಿಯಿಂದ ಭಾರತದ ವಿಳಿಂಜಮ್ ಪೋರ್ಟ್​ನಲ್ಲಿ ಭಾರೀ ಹೂಡಿಕೆ; ಅದಾನಿ ಸಂಸ್ಥೆಯಿಂದ ಶೇ. 49 ಪಾಲು ಮಾರಾಟ – Kannada News | Adani Ports to sell its 49pc stake in its Transshipment port at Vizhinjam to MSC

ಮುಂಬೈ, ಜೂನ್ 30: ಅದಾನಿ ಗ್ರೂಪ್​ನ ಬಹಳ ಮುಖ್ಯ ಕಂಪನಿ ಎನಿಸಿರುವ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ (APSEZ) ಕೇರಳದ ವಿಳಿಂಜಮ್​ನಲ್ಲಿರುವ ಬಂದರಿನಲ್ಲಿನ (Vizhinjam Port) ಶೇ. 49ರಷ್ಟು ತನ್ನ ಪಾಲನ್ನು ಮಾರಲಿದೆ. ವರದಿಗಳ ಪ್ರಕಾರ, ವಿಶ್ವದ ನಂಬರ್ ಒನ್ ಶಿಪ್ಪಿಂಗ್ ಕಂಪನಿಯಾದ ಮೆಡಿಟರೇನಿಯನ್ ಶಿಪ್ಪಿಂಗ್​ಗೆ (MSC) 1.4 ಬಿಲಿಯನ್ ಡಾಲರ್​ಗೆ ಮಾರಾಟ ಮಾಡಲಾಗುತ್ತದೆ. 1.4 ಬಿಲಿಯನ್ ಡಾಲರ್ ಎಂದರೆ ಸುಮಾರು 13,000 ಕೋಟಿ ರೂಗೂ ಅಧಿಕ ಮೊತ್ತ. ವಿಳಿಂಜಮ್​ನಲ್ಲಿರುವ ಬಂದರು ಭಾರತದ ಮೊದಲ ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್ ಆಗಿದೆ.

ಅದಾನಿ ಪೋರ್ಟ್ಸ್ ಮತ್ತು ಎಂಎಸ್​ಸಿ ಒಪ್ಪಂದದಲ್ಲೇನಿದೆ?

ಸ್ವಿಟ್ಜರ್​ಲ್ಯಾಂಡ್ ಮೂಲದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿಯ (MSC) ಅಂಗಸಂಸ್ಥೆಯಾದ ‘ಟರ್ಮಿನಲ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್’, ಅದಾನಿ ವಿಳಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ (AVPPL) ಶೇ. 49 ಪಾಲು ಪಡೆಯಲು ಮೊದಲಿಗೆ 539 ಮಿಲಿಯನ್ ಡಾಲರ್ ಪಾವತಿಸಲಿದೆ. 2028ರ ಡಿಸೆಂಬರ್ ವೇಳೆಗೆ ಹೆಚ್ಚುವರಿಯಾಗಿ 858 ಮಿಲಿಯನ್ ಡಾಲರ್ ಪಾವತಿಸುತ್ತದೆ. ಈ ಹೆಚ್ಚುವರಿ ಹಣವು ವಿಳಿಂಜಮ್ ಬಂದರು ಸಾಮರ್ಥ್ಯ ವಿಸ್ತರಣೆಗೆ ಮಾಡಲಾಗಿರುವ 1.75 ಬಿಲಿಯನ್ ಡಾಲರ್ ಯೋಜನೆಯ ಭಾಗವಾಗಿರುತ್ತದೆ.

ಇದನ್ನೂ ಓದಿ: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್

ಬಂದರು ವಿಸ್ತರಣೆ: ಪ್ರಸ್ತುತ 1.6 ಮಿಲಿಯನ್ ಸ್ಟ್ಯಾಂಡರ್ಡ್ ಕಂಟೈನರ್‌ಗಳ ಸಾಮರ್ಥ್ಯ ಹೊಂದಿರುವ ಈ ಬಂದರನ್ನು, ವಿಸ್ತರಣೆಯ ನಂತರ 4.1 ಮಿಲಿಯನ್ ಸಾಮರ್ಥ್ಯಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಭವಿಷ್ಯದಲ್ಲಿ ಇದನ್ನು 5.7 ಮಿಲಿಯನ್‌ಗೆ ಹೆಚ್ಚಿಸುವ ಯೋಜನೆಯೂ ಇದೆ.

ವಿಳಿಂಜಮ್​ನಲ್ಲಿರುವ ಈ ಟ್ರಾನ್ಸ್​ಶಿಪ್ಮೆಂಟ್ ಪೋರ್ಟ್​ನಲ್ಲಿ ಅದಾನಿ ಗ್ರೂಪ್ ನೂರಕ್ಕೆ ನೂರು ಪಾಲು ಹೊಂದಿದೆ. ಈಗ ಎಂಎಸ್​ಸಿಗೆ ಶೇ. 49 ಪಾಲು ಹೋದರೂ ಶೇ. 51ರಷ್ಟು ಪಾಲು ಅದಾನಿ ಗ್ರೂಪ್ ಬಳಿಯೇ ಇರುತ್ತದೆ.

ಭಾರತಕ್ಕೆ ಈ ಒಪ್ಪಂದದ ಪ್ರಯೋಜನಗಳು

  • ಸರಕು ಸಾಗಣೆ ವೃದ್ಧಿ: ಜಾಗತಿಕ ಶಿಪ್ಪಿಂಗ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದರಿಂದ, ಬಂದರಿಗೆ ಬರುವ ಸರಕುಗಳ ಪ್ರಮಾಣ (Cargo volume) ಹೆಚ್ಚಾಗಲಿದೆ ಮತ್ತು ಬಂದರಿನ ದಕ್ಷತೆ ಸುಧಾರಿಸಲಿದೆ.
  • ಅಂತರರಾಷ್ಟ್ರೀಯ ಮಾರುಕಟ್ಟೆ: ಈ ಒಪ್ಪಂದವು ವಿಳಿಂಜಂ ಬಂದರನ್ನು ಜಾಗತಿಕ ಮಟ್ಟದ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ ಆಗಿ ಬಲಪಡಿಸಲಿದೆ. ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳ ಸರಕುಗಳನ್ನು ನಿರ್ವಹಿಸಲು ಈ ಬಂದರು ಪ್ರಮುಖ ಕೇಂದ್ರವಾಗಲಿದೆ.
  • ವೇಗದ ಸಾಧನೆ: ವಿಳಿಂಜಂ ಬಂದರು ಕಾರ್ಯಾರಂಭ ಮಾಡಿದ ಕೇವಲ 18 ತಿಂಗಳಲ್ಲಿ 2 ಮಿಲಿಯನ್ TEUs (ಕಂಟೈನರ್‌ಗಳು) ನಿರ್ವಹಿಸುವ ಮೂಲಕ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್​ಲೈನ್​ಗಳಿವೆ, ಗಮನಿಸಿ

ಅದಾನಿ ಪೋರ್ಟ್ಸ್‌ನ ಸಿಇಒ ಅಶ್ವನಿ ಗುಪ್ತಾ ಅವರು, ಈ ಪಾಲುದಾರಿಕೆಯು ಪೂರೈಕೆ ಸರಪಳಿಯ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಭಾರತದ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಹೊಸ ಬಲ ನೀಡಲಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ! – Kannada News | CM Shivakumar on Guarantees for Non Voters and Karnataka SIR Drive

ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಚರ್ಚೆ ಮುಂದುವರಿದಿರುವ ನಡುವೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತದಾರರಲ್ಲದವರಿಗೆ ಈ ಸೌಲಭ್ಯಗಳನ್ನು ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಇತರೆ ರಾಜ್ಯಗಳಾದ ಬಿಹಾರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತಿರುವುದನ್ನು ಉಲ್ಲೇಖಿಸಿ, ಮತದಾರರಲ್ಲದವರಿಗೆ ಆರ್ಥಿಕ ನೆರವು ನೀಡುವುದನ್ನು ರಾಜ್ಯವೂ ಪರಿಗಣಿಸಬಹುದು ಎಂದು ಸೂಚಿಸಿದ್ದಾರೆ.

ಮತದಾರರು ರಾಜ್ಯದಲ್ಲಿ ವಾಸವಾಗಿದ್ದರೆ ಮಾತ್ರ ಗ್ಯಾರಂಟಿ ಯೋಜನೆಗಳಿಗೆ ಅರ್ಹರಾಗಬೇಕು ಎಂಬುದು ಅವರ ಅಭಿಪ್ರಾಯ. ಒಂದು ವೇಳೆ ಅರ್ಜಿ ಸಲ್ಲಿಸದೆ ಮತದಾನದ ಹಕ್ಕನ್ನು ಕಳೆದುಕೊಂಡರೆ, ಭವಿಷ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಸರ್ಕಾರದ ಯಾವುದೇ ಗ್ಯಾರಂಟಿ ಯೋಜನೆಗಳು ಹಾಗೂ ಪೆನ್ಷನ್ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಮುನ್ನೆಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಪರಾಶಕ್ತಿ’ ತಂಡದವರು ಸಂಭಾವನೆ ನೀಡಿಲ್ಲ; ಕೋರ್ಟ್ ಮೆಟ್ಟಿಲೇರಿದ ನಿರ್ದೇಶಕಿ ಸುಧಾ ಕೊಂಗರ – Kannada News | Sudha Kongara Sues Dawn Pictures: Parashakthi Remuneration Dispute and Hrudayam Murali Halted

ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಅವರು ‘ಡಾನ್ ಪಿಕ್ಚರ್ಸ್’ (Dawn Pictures) ನಿರ್ಮಾಣ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ. ‘ಪರಾಶಕ್ತಿ’ ಸಿನಿಮಾದಲ್ಲಿ ತಮಗೆ ಮೋಸವಾಗಿದೆ ಎಂದು ಅವರು ಹೇಳಿದ್ದಾರೆ. ತಮಗೆ ಬರಬೇಕಾದ ಸಂಭಾವನೆ ವಿಚಾರವಾಗಿ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದಾಗಿ ಡಾನ್ ಪಿಕ್ಚರ್ಸ್ ಸಂಸ್ಥೆಗೆ ದೊಡ್ಡ ತಲೆನೋವು ಶುರುವಾಗಿದೆ.

ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಸಿನಿಮಾವನ್ನು ಡಾನ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿದೆ. ಈ ಚಿತ್ರಕ್ಕೆ ಸುಧಾ ಕೊಂಗರ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಜನವರಿಯಲ್ಲಿ ತೆರೆಗೆ ಬಂತು. ಆದರೆ ತಮಗೆ ಬರಬೇಕಾದ ಬರೋಬ್ಬರಿ 8.39 ಕೋಟಿ ರೂಪಾಯಿ ಸಂಭಾವನೆಯನ್ನು ಇನ್ನು ನೀಡಿಲ್ಲ ಎಂದು ಸುಧಾ ಕೊಂಗರ ಕೋರ್ಟ್‌ನಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 8ರವರೆಗೆ ಚಿತ್ರವನ್ನು ದೂರದರ್ಶನದಲ್ಲಿ ಬಿಡುಗಡೆ ಮಾಡಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ.

‘ಹೃದಯಂ ಮುರಳಿ’ ಚಿತ್ರದ ರಿಲೀಸ್‌ಗೆ ಬ್ರೇಕ್?

ಸುಧಾ ಕೊಂಗರ ಅವರ ಈ ಕಾನೂನು ಹೋರಾಟ ಡಾನ್ ಪಿಕ್ಚರ್ಸ್‌ನ ಮತ್ತೊಂದು ಸಿನಿಮಾ ಮೇಲೂ ಪ್ರಭಾವ ಬೀರಿದೆ. ಆಕಾಶ್ ಭಾಸ್ಕರನ್ ನಿರ್ದೇಶನ ಹಾಗೂ ನಿರ್ಮಾಣದ ‘ಹೃದಯಂ ಮುರಳಿ’ ಸಿನಿಮಾ ಜುಲೈ 10ರಂದು ಬಿಡುಗಡೆಯಾಗಬೇಕಿತ್ತು. ಅಥರ್ವ ಮುರಳಿ, ಫಹಾದ್ ಫಾಸಿಲ್, ಪ್ರೀತಿ ಮುಕುಂಧನ್ ಮತ್ತು ಕಯಾದಯ ಲೋಹರ್ ನಟಿಸಿರುವ ಈ ರೋಮ್ಯಾಂಟಿಕ್ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ಸುಧಾ ಕೊಂಗರ ಕೋರಿದ್ದಾರೆ. ಈ ಚಿತ್ರಕ್ಕೆ ತಮನ್ ಸಂಗೀತ ನೀಡಿದ್ದು, ಅವರು ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿಹಾರಿಕಾ ಎನ್‌ಎಮ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಹಿಟ್ ಆಗಿಲ್ಲ

ಇಷ್ಟೆಲ್ಲಾ ವಿವಾದಗಳಿಗೆ ಕಾರಣವಾಗಿರುವ ಶಿವಕಾರ್ತಿಕೇಯನ್ ಅಭಿನಯದ ‘ಪರಾಶಕ್ತಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿಲ್ಲ. ಚಿತ್ರವು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಹಿಟ್ ಲಿಸ್ಟ್ ಸೇರಿಲ್ಲ. 150 ಕೋಟಿ ರೂಪಾಯಿ ಬಜೆಟ್ ಇದಕ್ಕೆ ಖರ್ಚಾಗಿದ್ದು, ಅರ್ಧದಷ್ಟು ಹಣ ಮರಳಿಲ್ಲ. ಈಗ ಸಿನಿಮಾ ಯಶಸ್ವಿಯಾಗದ ಬೆನ್ನಲ್ಲೇ ಈಗ ನಿರ್ದೇಶಕಿ ಮತ್ತು ನಿರ್ಮಾಪಕರ ನಡುವಿನ ಸಂಭಾವನೆ ಜಗಳ ಕೋರ್ಟ್ ಮೆಟ್ಟಿಲೇರಿರುವುದು ತಮಿಳು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Amarnath Yatra 2026: ಜು. 3 ರಿಂದ ಪವಿತ್ರ ಅಮರನಾಥ ಯಾತ್ರೆ ಆರಂಭ; ಈ ವಸ್ತುಗಳನ್ನು ಮರೆತು ಸಹ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಡಿ! – Kannada News | Amarnath Yatra 2026 Guide: Essential Packing List and Safety Tips for a Sacred Journey

ಲಕ್ಷಾಂತರ ಶಿವಭಕ್ತರು ವರ್ಷಪೂರ್ತಿ ಕಾತರದಿಂದ ಕಾಯುವ ಪವಿತ್ರ ಅಮರನಾಥ ಯಾತ್ರೆಗೆ ದಿನಗಣನೆ ಆರಂಭವಾಗಿದೆ. ಜುಲೈ 3 ರಂದು ಅಧಿಕೃತವಾಗಿ ಆರಂಭವಾಗಲಿರುವ ಈ ಪವಿತ್ರ ಯಾತ್ರೆಯು ಆಗಸ್ಟ್ 28ರಂದು ಮುಕ್ತಾಯಗೊಳ್ಳಲಿದೆ. ಯಾತ್ರೆ ಆರಂಭಕ್ಕೂ ಮುನ್ನವೇ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜ್ಯೇಷ್ಠ ಪೌರ್ಣಮಿಯ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕ ಪ್ರಥಮ ಪೂಜೆಯನ್ನು ನೆರವೇರಿಸಿ, ಬಾಬಾ ಬರ್ಫಾನಿ ಯಾತ್ರೆಯನ್ನು ಉದ್ಘಾಟಿಸಿದ್ದಾರೆ.

ದೇಶಾದ್ಯಂತದ ಲಕ್ಷಾಂತರ ಭಕ್ತರು ಈಗಾಗಲೇ ಈ ಹಿಮಾಲಯದ ದುರ್ಗಮ ಹಾದಿಯ ಪಯಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಒಂದು ವೇಳೆ ನೀವು ಸಹ ಈ ಬಾರಿ ಅಮರನಾಥ ಯಾತ್ರೆಗೆ ಹೋಗಲು ಯೋಜಿಸುತ್ತಿದ್ದರೆ, ಮುಂಚಿತವಾಗಿ ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ. ಏಕೆಂದರೆ, ಎತ್ತರದ ಪ್ರದೇಶಗಳಲ್ಲಿ ಹವಾಮಾನವು ಕೆಲವೇ ಸೆಕೆಂಡುಗಳಲ್ಲಿ ಬದಲಾಗುತ್ತದೆ. ಹೀಗಾಗಿ ಪ್ರಯಾಣದ ವೇಳೆ ನಿಮ್ಮ ಬ್ಯಾಗ್‌ನಲ್ಲಿ ಏನಿರಬೇಕು ಮತ್ತು ಏನಿರಬಾರದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ಯಾಗ್‌ನಲ್ಲಿ ಪ್ಯಾಕ್ ಮಾಡಲೇಬೇಕಾದ ಪ್ರಮುಖ ವಸ್ತುಗಳು:

ಚಳಿಯಿಂದ ರಕ್ಷಿಸುವ ಬೆಚ್ಚಗಿನ ಬಟ್ಟೆಗಳು:

ಅಮರನಾಥದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನವು ಹಠಾತ್ ಆಗಿ ತೀವ್ರ ಕುಸಿತ ಕಾಣುತ್ತದೆ. ಆದ್ದರಿಂದ ನಿಮ್ಮ ಚೀಲದಲ್ಲಿ ಥರ್ಮಲ್ ಒಳ ಉಡುಪು (Thermal Inners), ಉಣ್ಣೆ ಸ್ವೆಟರ್ ಹಾಗೂ ಕೈಗವಸುಗಳು, ಜಲನಿರೋಧಕ (Waterproof) ಅಥವಾ ವಿಂಡ್ ಬ್ರೇಕರ್ ಜಾಕೆಟ್, ಉಣ್ಣೆಯ ಟೋಪಿ, ಮಫ್ಲರ್ ಮತ್ತು ಹೆಚ್ಚುವರಿ ಉಣ್ಣೆಯ ಸಾಕ್ಸ್, ರೇನ್ ಕೋಟ್ ಈ ವಸ್ತುಗಳನ್ನು ಪ್ಯಾಕ್ ಮಾಡಲು ಮರೆಯದಿರಿ.

ಅಗತ್ಯ ಔಷಧಿಗಳ ಕಿಟ್:

ಬಿಪಿ, ಮಧುಮೇಹ, ಆಸ್ತಮಾ ಅಥವಾ ಇತರ ದೀರ್ಘಕಾಲದ ಕಾಯಿಲೆಗಳಿಗೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುವವರು ಸಾಕಷ್ಟು ಪ್ರಮಾಣದ ಬ್ಯಾಕಪ್ ಮಾತ್ರೆಗಳನ್ನು ಕೊಂಡೊಯ್ಯಬೇಕು. ಇದರೊಂದಿಗೆ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿ ಸಾಮಾನ್ಯ ಜ್ವರ, ಮೈಕೈ ನೋವು, ವಾಂತಿ ಮತ್ತು ಗಾಯಗಳಿಗೆ ಬಳಸುವ ಮುಲಾಮುಗಳನ್ನು ಇಟ್ಟುಕೊಳ್ಳಿ.

ಈ ಪ್ರಮುಖ ದಾಖಲೆಗಳು ಕಡ್ಡಾಯ:

ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ಈ ಕೆಳಗಿನ ದಾಖಲೆಗಳ ಹಾರ್ಡ್ ಕಾಪಿ (Printout) ಮತ್ತು ಮೊಬೈಲ್‌ನಲ್ಲಿ ಡಿಜಿಟಲ್ ಪ್ರತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ:

  • ಅಮರನಾಥ ಯಾತ್ರೆ ನೋಂದಣಿ ಚೀಟಿ (Yatra Permit)
  • ಕಡ್ಡಾಯ ಆರೋಗ್ಯ ಪ್ರಮಾಣಪತ್ರ (Compulsory Health Certificate – CHC)
  • ಆಧಾರ್ ಕಾರ್ಡ್ ಅಥವಾ ಇತರ ಮಾನ್ಯವಾದ ಸರ್ಕಾರಿ ಫೋಟೋ ಗುರುತಿನ ಚೀಟಿ
  • ತುರ್ತು ಸಂಪರ್ಕ ಸಂಖ್ಯೆಗಳ ಪಟ್ಟಿ (Emergency Contacts)

ಪ್ರಯಾಣಕ್ಕೆ ಉಪಯುಕ್ತವಾಗುವ ಇತರೆ ಸಾಮಗ್ರಿಗಳು:

ಎತ್ತರದ ಬೆಟ್ಟಗಳ ಮೇಲೆ ಸೂರ್ಯನ ಕಿರಣಗಳ ತೀವ್ರತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸನ್ ಗ್ಲಾಸ್, ಸನ್‌ಸ್ಕ್ರೀನ್ ಲೋಶನ್ ಮತ್ತು ಲಿಪ್ ಬಾಮ್ ಬಳಸಿ. ಇದರೊಂದಿಗೆ ಟಾರ್ಚ್ ಲೈಟ್, ಪವರ್ ಬ್ಯಾಂಕ್, ಮೊಬೈಲ್ ಚಾರ್ಜರ್, ನೀರಿನ ಬಾಟಲ್, ಡ್ರೈ ಫ್ರೂಟ್ಸ್, ಎನರ್ಜಿ ಬಾರ್‌ಗಳು ಹಾಗೂ ಗ್ಲೂಕೋಸ್ ಪ್ಯಾಕೆಟ್‌ಗಳನ್ನು ಜೊತೆಯಲ್ಲಿಟ್ಟುಕೊಳ್ಳಿ.

ಈ ವಸ್ತುಗಳನ್ನು ಮರೆತು ಸಹ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಡಿ:

ದುರ್ಗಮ ಹಾದಿಯಲ್ಲಿ ಸಾಗುವಾಗ ಲಗೇಜ್ ತೂಕ ಕಡಿಮೆ ಇದ್ದಷ್ಟು ಪ್ರಯಾಣ ಸುಲಭವಾಗುತ್ತದೆ. ಆದ್ದರಿಂದ ಈ ಕೆಳಗಿನ ವಸ್ತುಗಳನ್ನು ಕೊಂಡೊಯ್ಯಬೇಡಿ:

  • ದುಬಾರಿ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳು.
  • ದೊಡ್ಡ ಪ್ರಮಾಣದ ನಗದು ಹಣ (ಡಿಜಿಟಲ್ ಪೇಮೆಂಟ್ ಅಥವಾ ಲಿಮಿಟೆಡ್ ಕ್ಯಾಶ್ ಬಳಸಿ).
  • ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ತ್ಯಾಜ್ಯಗಳು.
  • ಮದ್ಯ, ತಂಬಾಕು ಮತ್ತು ಯಾವುದೇ ರೀತಿಯ ಮಾದಕ ವಸ್ತುಗಳು.
  • ವೈದ್ಯರ ಅಧಿಕೃತ ಸಲಹೆಯಿಲ್ಲದೆ ಆಮ್ಲಜನಕ ಸಿಲಿಂಡರ್‌ಗಳು ಅಥವಾ ಪ್ರತ್ಯೇಕ ಔಷಧಿಗಳು.

ಪ್ರಯಾಣದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು:

ಅಮರನಾಥ ಯಾತ್ರೆಯು ಸಮುದ್ರ ಮಟ್ಟದಿಂದ ಗಣನೀಯ ಎತ್ತರದಲ್ಲಿ ನಡೆಯುವುದರಿಂದ ಅಲ್ಲಿ ಆಮ್ಲಜನಕದ (Oxygen) ಮಟ್ಟ ಕಡಿಮೆಯಿರುತ್ತದೆ. ಇದು ದೈಹಿಕ ತೊಂದರೆಗಳನ್ನು ಉಂಟುಮಾಡಬಹುದು. ಆದ್ದರಿಂದ ಭಕ್ತರು ಈ ನಿಯಮಗಳನ್ನು ಪಾಲಿಸಬೇಕು. ಬೆಟ್ಟ ಹತ್ತುವಾಗ ವೇಗವಾಗಿ ನಡೆಯಬೇಡಿ, ನಿಧಾನವಾಗಿ ಮತ್ತು ಸ್ಥಿರವಾಗಿ ಪ್ರಯಾಣಿಸಿ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ನಿಯಮಿತವಾಗಿ ನೀರು ಕುಡಿಯುತ್ತಿರಿ. ನಿರಂತರವಾಗಿ ನಡೆಯುವ ಬದಲು, ಮಧ್ಯೆ ಮಧ್ಯೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಸ್ಥಳೀಯ ಆಡಳಿತ ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ಉಸಿರಾಟದ ತೊಂದರೆ, ತಲೆತಿರುಗುವಿಕೆ ಅಥವಾ ಎದೆ ನೋವು ಮುಂತಾದ ಲಕ್ಷಣಗಳು ಕಂಡುಬಂದರೆ, ತಕ್ಷಣ ಹತ್ತಿರದ ವೈದ್ಯಕೀಯ ಕೇಂದ್ರವನ್ನು ಸಂಪರ್ಕಿಸಿ.

ನೆನಪಿಡಿ: ಅಮರನಾಥ ಯಾತ್ರೆ ಕೇವಲ ಆಧ್ಯಾತ್ಮಿಕ ಪ್ರಯಾಣವಲ್ಲ, ದೈಹಿಕವಾಗಿಯೂ ಅತ್ಯಂತ ಸವಾಲಿನ ಪಯಣವಾಗಿದೆ. ಸರಿಯಾದ ಯೋಜನೆ, ಸೂಕ್ತ ಸಿದ್ಧತೆ ಮತ್ತು ಆರೋಗ್ಯ ಮುನ್ನೆಚ್ಚರಿಕೆಗಳೊಂದಿಗೆ ಈ ಪವಿತ್ರ ಪ್ರಯಾಣವನ್ನು ಕೈಗೊಂಡರೆ ದೇವರ ದರ್ಶನವನ್ನು ಸುರಕ್ಷಿತವಾಗಿ ಹಾಗೂ ಶಾಂತಿಯುತವಾಗಿ ಪಡೆಯಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG ಟಿ20 ಸರಣಿ ಎಷ್ಟು ಗಂಟೆಗೆ ಶುರು? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? – Kannada News | IND vs ENG T20Is: Schedule, Timings and Live Streaming Details

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಟಿ20 ಸರಣಿಯು ನಾಳೆಯಿಂದ (ಜುಲೈ 1 ) ಶುರುವಾಗಲಿದೆ. ಇಂಗ್ಲೆಂಡ್​ನಲ್ಲಿ ಜರುಗಲಿರುವ ಐದು ಮ್ಯಾಚ್​ಗಳ ಈ ಸರಣಿಯ ಸಂಪೂರ್ಣ ವೇಳಾಪಟ್ಟಿ, ಪಂದ್ಯ ಆರಂಭವಾಗುವ ಸಮಯ ಮತ್ತು ನೇರ ಪ್ರಸಾರದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ?

ಭಾರತದಲ್ಲಿ ಈ ಸರಣಿಯ ಅಧಿಕೃತ ನೇರ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿದೆ. ಅದರಂತೆ ಈ ಕೆಳಗಿನ ಚಾನೆಲ್​ಗಳಲ್ಲಿ ಈ ಸರಣಿಯ ಪಂದ್ಯಗಳನ್ನು ವೀಕ್ಷಿಸಬಹುದು.

  • ಸೋನಿ ಸ್ಪೋರ್ಟ್ಸ್ ಟೆನ್ 1, ಟೆನ್ 3 (ಹಿಂದಿ), ಟೆನ್ 4 (ತಮಿಳು/ತೆಲುಗು), ಟೆನ್ 5 ಮತ್ತು ಸೋನಿ ಮ್ಯಾಕ್ಸ್ ಚಾನೆಲ್‌ಗಳಲ್ಲಿ ನೀವು ಪಂದ್ಯಗಳನ್ನು ಲೈವ್ ವೀಕ್ಷಿಸಬಹುದು.
  •  ಸೋನಿ ಲಿವ್ (Sony LIV) ಆ್ಯಪ್​ ಹಾಗೂ ವೆಬ್‌ಸೈಟ್‌ನಲ್ಲಿ ಈ ಪಂದ್ಯವನ್ನು ಲೈವ್ ವೀಕ್ಷಿಸಬಹುದು.

 ಎಷ್ಟು ಗಂಟೆಗೆ ಆರಂಭ?

ಈ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಎರಡು ವಿಭಿನ್ನ ಸಮಯಗಳಲ್ಲಿ ಆರಂಭವಾಗಲಿವೆ.

  •  ವಾರದ ದಿನಗಳಲ್ಲಿ (ಬುಧವಾರ, ಮಂಗಳವಾರ, ಗುರುವಾರ) ನಡೆಯುವ ಪಂದ್ಯಗಳು ರಾತ್ರಿ 10:00 ಗಂಟೆಗೆ ಆರಂಭವಾಗಲಿವೆ.
  •  ವಾರಾಂತ್ಯದಲ್ಲಿ (ಶನಿವಾರ) ನಡೆಯುವ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಶುರುವಾಗಲಿವೆ.

ಈ ಸರಣಿಯ ವೇಳಾಪಟ್ಟಿ:

ಈ ಸರಣಿಯಲ್ಲಿ ಮೊದಲಿಗೆ 5 ಮ್ಯಾಚ್​ಗಳ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ಇಂಗ್ಲೆಂಡ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಕ್ರೀಡಾಂಗಣ / ಸ್ಥಳ ಸಮಯ (IST)
1ನೇ ಟಿ20 ಪಂದ್ಯ ಜುಲೈ 01, ಬುಧವಾರ ರಿವರ್ಸೈಡ್ ಗ್ರೌಂಡ್, ಚೆಸ್ಟರ್-ಲೆ-ಸ್ಟ್ರೀಟ್ ರಾತ್ರಿ 10:00 ಗಂಟೆಗೆ
2ನೇ ಟಿ20 ಪಂದ್ಯ ಜುಲೈ 04, ಶನಿವಾರ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ ಸಂಜೆ 7:00 ಗಂಟೆಗೆ
3ನೇ ಟಿ20 ಪಂದ್ಯ ಜುಲೈ 07, ಮಂಗಳವಾರ ಟ್ರೆಂಟ್ ಬ್ರಿಡ್ಜ್, ನಾಟಿಂಗ್‌ಹ್ಯಾಮ್ ರಾತ್ರಿ 10:00 ಗಂಟೆಗೆ
4ನೇ ಟಿ20 ಪಂದ್ಯ ಜುಲೈ 09, ಗುರುವಾರ ಬ್ರಿಸ್ಟಲ್ ಕೌಂಟಿ ಗ್ರೌಂಡ್, ಬ್ರಿಸ್ಟಲ್ ರಾತ್ರಿ 10:00 ಗಂಟೆಗೆ
5ನೇ ಟಿ20 ಪಂದ್ಯ ಜುಲೈ 11, ಶನಿವಾರ ರೋಸ್ ಬೌಲ್, ಸೌತಾಂಪ್ಟನ್ ಸಂಜೆ 7:00 ಗಂಟೆಗೆ
1ನೇ ಏಕದಿನ ಪಂದ್ಯ ಜುಲೈ 14, ಮಂಗಳವಾರ ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್ ಮಧ್ಯಾಹ್ನ 3:30ಕ್ಕೆ
2ನೇ ಏಕದಿನ ಪಂದ್ಯ ಜುಲೈ 16, ಗುರುವಾರ ಸೋಫಿಯಾ ಗಾರ್ಡನ್ಸ್, ಕಾರ್ಡಿಫ್ ಸಂಜೆ 5:30ಕ್ಕೆ
3ನೇ ಏಕದಿನ ಪಂದ್ಯ ಜುಲೈ 19, ಭಾನುವಾರ ಲಾರ್ಡ್ಸ್ ಕ್ರಿಕೆಟ್ ಮೈದಾನ, ಲಂಡನ್ ಮಧ್ಯಾಹ್ನ 3:30ಕ್ಕೆ

ಉಭಯ ತಂಡಗಳು:

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ಗೆ ಭಾರತ ಮಹಿಳಾ ತಂಡ ಪ್ರಕಟ

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಫಿಲ್ ಸಾಲ್ಟ್, ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್, ಆದಿಲ್ ರಶೀದ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ಲ್ಯೂಕ್ ವುಡ್, ಸೋನಿ ಬೇಕರ್.

Published On – 12:14 pm, Tue, 30 June 26

Source link

ವಿವಾದ ಎಬ್ಬಿಸಿದ ಜೂ ಎನ್​​ಟಿಆರ್ ಹೊಸ ಸಿನಿಮಾ ಪೋಸ್ಟರ್ – Kannada News | Jr NTR and Trivikram Shrinivas’s movie poster dace criticism

ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿರುವ ಜೂ ಎನ್​​ಟಿಆರ್ (Jr NTR), ಇದೀಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ಅವರ ಆಪ್ತ ಗೆಳೆಯರಲ್ಲಿ ಒಬ್ಬರಾಗಿರುವ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಯುದ್ಧಗಳ ದೇವತೆ ಎಂದು ಕರೆಯಲಾಗುವ ಮುರುಗನ್ ಅಥವಾ ಸುಬ್ರಹ್ಮಣ್ಯ ಸ್ವಾಮಿಯನ್ನು ಆಧರಿಸಿದ ಕತೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಿನಿಮಾದ ಪೋಸ್ಟರ್ ಅನ್ನು ಸಹ ಇದೇ ವಿಷಯದ ಆಧಾರದ ಮೇಲೆ ಮಾಡಲಾಗಿದೆ. ಆದರೆ ಪೋಸ್ಟರ್ ಇದೀಗ ವಿವಾದಕ್ಕೆ ಕಾರಣವಾಗಿದೆ.

ಈಗ ಬಿಡುಗಡೆ ಆಗಿರುವ ಪೋಸ್ಟರ್ ಬಗ್ಗೆ ತಮಿಳುನಾಡಿನ ಸಿನಿಮಾ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಡುಗಡೆ ಆಗಿರುವ ಪೋಸ್ಟರ್​​ನಲ್ಲಿ ಸಂಸ್ಕೃತದ ಶ್ಲೋಕವನ್ನು ಬಳಸಲಾಗಿದೆ. ಮುರುಗನ್ ತಮಿಳರ ಆರಾಧ್ಯ ದೈವವಾಗಿದ್ದು, ಅವರ ಕುರಿತಾದ ಸಿನಿಮಾನಲ್ಲಿ ತಮಿಳಿನ ಬದಲಿಗೆ ಸಂಸ್ಕೃತ ಶ್ಲೋಕ ಬಳಸಿರುವ ಬಗ್ಗೆ ಕೆಲವು ಟೀಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ಸಿನಿಮಾದ ನಿರ್ಮಾಪಕ ನಾಗವಂಶಿ, ಹಿಂದಿನ ಸಂದರ್ಶನವೊಂದರಲ್ಲಿ, ಮುರುಗನ್ ಅಥವಾ ಸುಬ್ರಹ್ಮಣ್ಯ ಸ್ವಾಮಿ ಉತ್ತರ ಭಾರತೀಯರು ಎಂದು ಹೇಳಿದ್ದು ಸಹ ವಿವಾದಕ್ಕೆ ಕಾರಣವಾಗಿದೆ.

ಇದೀಗ ಬಿಡುಗಡೆ ಆಗಿರುವ ಪೋಸ್ಟರ್​​ನಲ್ಲಿ ಮುರುಗನ್ ಆಯುಧವಾದ ತ್ರಿಶೂಲದ ಚಿತ್ರವಿದೆ. ಆದರೆ ತ್ರಿಶೂಲದ ಮಧ್ಯ ಭಾಗದಲ್ಲಿ ಡಿಎನ್​​ಎ ಅನ್ನು ಚಿತ್ರಿಸಲಾಗಿದೆ. ಇದನ್ನು ಸಹ ಕೆಲವರು ಟೀಕೆ ಮಾಡಿದ್ದಾರೆ. ತಮಿಳು ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಮುರುಗನ್ ದೇವರಿಗೆ ವಿಶೇಷ ಸ್ಥಾನವಿರುವುದರಿಂದ, ಈ ವಿಷಯವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುವಂತೆ ಅನೇಕರು ಚಿತ್ರತಂಡವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:100 ಕೋಟಿ ರೂಪಾಯಿ ಸನಿಹದಲ್ಲಿ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಕಲೆಕ್ಷನ್

ತ್ರಿವಿಕ್ರಮ್ ಅವರು ತೆಲುಗು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ‘ಅತಡು’, ‘ಜಲ್ಸಾ’, ‘ಅತ್ತಾರಿಂಟಿಕಿ ದಾರೇದಿ’, ‘ಖಲೇಜ’, ‘ಜುಲಾಯ್’, ‘ಸನ್ ಆಫ್ ಸತ್ಯಮೂರ್ತಿ’, ‘ಅಲಾ ವೈಕುಂಟಪುರಂಲೋ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಜೂ ಎನ್​​ಟಿಆರ್ ಜೊತೆಗೆ ಈ ಹಿಂದೆ ‘ಅರವಿಂದ ಸಮೇತ ವೀರ ರಾಘವ’ ಹೆಸರಿನ ಸಿನಿಮಾ ಮಾಡಿದ್ದು, ಅದು ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಎರಡನೇ ಭಾರಿ ಜೂ ಎನ್​​ಟಿಆರ್ ಜೊತೆಗೆ ತ್ರಿವಿಕ್ರಮ್ ಕೈ ಜೋಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:32 pm, Tue, 30 June 26

Source link

ಬಿಎಂಟಿಸಿ ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸು! ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ – Kannada News | Bengaluru BMTC Bus Shortage: MP Tejaswi Surya Slams Congress Government Over Passenger Ordeal

ತೇಜಸ್ವಿ ಸೂರ್ಯImage Credit source: Tejaswi Surya X account

ಬೆಂಗಳೂರು, ಜೂನ್ 30: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ಸೋಮವಾರ ಖುದ್ದು ಬಿಎಂಟಿಸಿ ಬಸ್ಸಿನಲ್ಲಿ ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಪ್ರಯಾಣಿಸುವ ಸಂದರ್ಭದಲ್ಲಿ ಪ್ರಯಾಣಿಕರ ಅಳಲು ಆಲಿಸಿದ್ದರು. ಇದೀಗ ಬಿಎಂಟಿಸಿ ಬಸ್​ ಸ್ಟ್ಯಾಂಡ್​ ಒಂದರಲ್ಲಿ ಪ್ರಯಾಣಿಕರೊಂದಿಗೆ ಮಾತನಾಡಿ ಅಲ್ಲಿನ ದುಸ್ಥಿತಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಎಂಟಿಸಿ ಪ್ರಯಾಣಿಕರ ದೈನಂದಿನ ಪರದಾಟವನ್ನು ತಪಸ್ಸಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.

ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ!

ಉತ್ತಮ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಿಲ್ಲದೆ ಯಾವುದೇ ಸಾರಿಗೆ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಬಸ್‌ಗಳ ಸಂಖ್ಯೆಯನ್ನು ಕನಿಷ್ಠ 15,000 ಕ್ಕೆ ಹೆಚ್ಚಿಸಬೇಕು. ನಗರದ ಯಾವುದೇ ಭಾಗದಲ್ಲಾದರೂ ಸರಿ, ಪ್ರತಿ ಪ್ರಜೆಗೆ ಐದು ನಿಮಿಷಗಳಲ್ಲಿ ಬಸ್ ಸಿಗುವಂತಾಗಲು ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕು ಎಂದು ತೇಜಸ್ವಿ ಸೂರ್ಯ ಅವರು ಈ ಹಿಂದೆ ಮಾಡಿದ್ದ ಹಳೆಯ ಪೋಸ್ಟ್ ಅನ್ನು ನೆನಪಿಸಿಕೊಂಡಿದ್ದಾರೆ. ಆ ಪೋಸ್ಟ್ ಮಾಡಿ ಎಂಟು ತಿಂಗಳು ಕಳೆದಿದ್ದು, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ, ಹೊಸ ಉಪಮುಖ್ಯಮಂತ್ರಿ ಹಾಗೂ ಹೊಸ ಸಾರಿಗೆ ಸಚಿವರು ಅಧಿಕಾರಕ್ಕೆ ಬಂದಿದ್ದರೂ ಬೆಂಗಳೂರಿನ ಬಿಎಂಟಿಸಿ ಸ್ಥಿತಿ ಮಾತ್ರ ಹಳೇ ಕಥೆಯನ್ನೇ ಮುಂದುವರಿಸಿದೆ ಎಂದು ಅವರು ಟೀಕಿಸಿದ್ದಾರೆ.

ಜನರು ಕೆಲಸ ಮಾಡಬೇಕೋ ಅಥವಾ ರಸ್ತೆಯಲ್ಲಿ ಕಾಯಬೇಕೋ? ಸಿಎಂಗೆ ಪ್ರಶ್ನೆ

“ನಾನು ಈ ವಿಷಯವನ್ನು ಕೆಲವು ತಿಂಗಳ ಹಿಂದೆಯೇ ಪ್ರಸ್ತಾಪಿಸಿದ್ದೆ. ಆದರೆ ಇಂದಿಗೂ ಬಿಎಂಟಿಸಿ ಪ್ರಯಾಣಿಕರು ಬಸ್‌ಗಳಿಗಾಗಿ ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯುವಂತಾಗಿದೆ. ಬಿಎಂಟಿಸಿ ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸಿನಂತಾಗಿದೆ” ಎಂದು X ಪೋಸ್ಟ್ ಮೂಲಕ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರ ದೈನಂದಿನ ಕಷ್ಟವನ್ನು ಉಲ್ಲೇಖಿಸಿ, ಪ್ರಯಾಣಿಕರ ನಿತ್ಯದ ಗೋಳು ಹೀಗಿದ್ದರೆ, ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕೋ ಅಥವಾ ರಸ್ತೆ ಬದಿಯಲ್ಲೇ ನಿಂತು ಸಮಯ ವ್ಯರ್ಥ ಮಾಡಬೇಕೋ? ಗೌರವಾನ್ವಿತ ಮುಖ್ಯಮಂತ್ರಿಗಳೇ ಉತ್ತರಿಸಿ! ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂಓದಿ ಕೇಂದ್ರದ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲವೇಕೆ: ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ

ಬೆಂಗಳೂರಿನಲ್ಲಿ ನಂಬಿಕಸ್ಥ ಮತ್ತು ನಿರಂತರ ಸಾರ್ವಜನಿಕ ಸಾರಿಗೆಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಸದರು ಆಗ್ರಹಿಸಿದ್ದಾರೆ. ಬಿಎಂಟಿಸಿ ಬಸ್ ಗಾಗಿ ಕಾಯುವುದೇ ಒಂದು ದೊಡ್ಡ ತಪಸ್ಸು ! ಎಂದು ಅವರು ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Brain Teaser: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಹರಿದ ಅಂಗಿಯಲ್ಲಿ ಎಷ್ಟು ರಂಧ್ರಗಳಿವೆ ಎಂದು ಹೇಳಬಲ್ಲಿರಾ? – Kannada News | Brain Teaser: Can you spot the holes in this torn shirt

ಆಪ್ಟಿಕಲ್‌ ಇಲ್ಯೂಷನ್‌ (optical illusion), ಬ್ರೈನ್ ಟೀಸರ್ ನಂತಹ ಒಗಟಿನ ಆಟಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಪ್ರಶ್ನೆ ಬಿಡಿಸುವುದು ಖುಷಿಕೊಟ್ಟರೂ ಕೆಲವೊಮ್ಮೆ ಉತ್ತರ ಸಿಗಲ್ಲ. ಆದರೆ, ಕೆಲವರು ನೀರು ಕುಡಿದಂತೆ ಸಲೀಸಾಗಿ ಒಗಟು ಬಿಡಿಸುvlfli  ಇದೀಗ ಈ ಬ್ರೈನ್ ಟೀಸರ್ ನಲ್ಲಿ ಚಿತ್ರವಿದ್ದು, ಈ ಹರಿದ ಅಂಗಿಯಲ್ಲಿರುವ ರಂಧ್ರಗಳನ್ನು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ನೀವು ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಸೀನ್ ಹೇಡಾನ್ (Sean Heydon) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಬ್ರೈನ್ ಟೀಸರ್ ಒಗಟನ್ನು ಹಂಚಿಕೊಳ್ಳಲಾಗಿದೆ. ಹರಿದ ಅಂಗಿಯಲ್ಲಿ ಮೊದಲ ನೋಟಕ್ಕೆ ನಿಮಗೆ ಎರಡು ರಂಧ್ರಗಳು ಮಾತ್ರ ಕಾಣಿಸುತ್ತದೆ. ಆದರೆ ಈ ಟೀ ಶರ್ಟ್‌ನಲ್ಲಿ ಎರಡಕ್ಕಿಂತ ಹೆಚ್ಚು ರಂಧ್ರಗಳಿವೆ. ಆದರೆ ಶೇಕಡಾ 99 ರಷ್ಟು ಜನರು ಈ ರಂಧ್ರಗಳನ್ನು ಪತ್ತೆ ಹಚ್ಚುವಲ್ಲಿ ಸೋಲುತ್ತಾರೆ. ನೀವು ಈ ಒಗಟು ಬಿಡಿಸಿ ಸರಿಯಾದ ಉತ್ತರ ನೋಡಲು ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.

 ವೈರಲ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಕೋಳಿ ಮರಿಗಳ ನಡುವೆ ಇದೆ ಐದು ನಿಂಬೆ ಹಣ್ಣು; ಜಸ್ಟ್ 10 ಸೆಕೆಂಡುಗಳಲ್ಲಿ ಹುಡುಕಿ

ಸರಿಯಾದ ಉತ್ತರ ಹೇಳಲು ಸಾಧ್ಯವಾಯಿತೇ?

ತಲೆಗೆ ಹುಳ ಬಿಡುವ ಒಗಟಿನ ಚಿತ್ರಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಈ ಹರಿದ ಟೀ ಶರ್ಟ್ ನಲ್ಲಿ ಎಷ್ಟು ರಂಧ್ರಗಳಿವೆ ಎಂದು ಹುಡುಕುವಲ್ಲಿ ನೀವು ಸೋತಿದ್ದೀರಾ. ಈ ಟೀ ಶರ್ಟ್ ನ ಮಧ್ಯದಲ್ಲಿರುವ ಎರಡು ರಂಧ್ರಗಳು ನಮ್ಮ ಕಣ್ಣಿಗೆ ಕಾಣಿಸುತ್ತದೆ. ಮುಂಭಾಗದಲ್ಲಿ ಕಾಣುವ ಎರಡು ರಂಧ್ರಗಳ ಜತೆಗೆ ಅದರ ಹಿಂದಿನ ಬಟ್ಟೆಯಲ್ಲಿ ಇನ್ನೂ ಎರಡು ರಂಧ್ರಗಳಿವೆ. ಇನ್ನು ಕುತ್ತಿಗೆ ಭಾಗಕ್ಕೆ ಒಂದು, ದೇಹವನ್ನು ಹಾಕುವ ಶರ್ಟ್ ಕೆಳಭಾಗದಲ್ಲಿ ಒಂದು ಹಾಗೂ ಎರಡು ತೋಳುಗಳ ತುದಿಯಲ್ಲಿ ಎರಡು ರಂಧ್ರಗಳಿವೆ. ನಿಮ್ಮ ಕಣ್ಣಿಗೆ ಕಾಣುವ ಎರಡು ರಂಧ್ರಗಳನ್ನು ಸೇರಿಸಿ ಒಟ್ಟು ಎಂಟು ರಂಧ್ರಗಳಿವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು: ನಾಳೆಯಿಂದಲೇ ಶುರುವಾಗಲಿದೆ ತೆರವು ಕಾರ್ಯ – Kannada News | Bengaluru Footpath Encroachment Drive Begins Tomorrow: GBA to Clear 2000 KM of Roads Starting July 1

ಬೆಂಗಳೂರು, ಜೂನ್ 30: ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಲು ಇಂದು ಅಂತಿಮ ಗಡುವು ನೀಡಲಾಗಿದೆ. ಜುಲೈ 1 ರಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮತ್ತು ಐದು ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬೃಹತ್ ಕಾರ್ಯಾಚರಣೆ ಆರಂಭವಾಗಲಿದೆ. ಸಚಿವ ಕೃಷ್ಣ ಭೈರೇಗೌಡರು ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಕಾರ್ಯಾಚರಣೆಯನ್ನು ನಿಲ್ಲಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಲೈಸೆನ್ಸ್ ಹೊಂದಿರುವ ವ್ಯಾಪಾರಿಗಳನ್ನು ಹೊರತುಪಡಿಸಿ, ಉಳಿದ ಅತಿಕ್ರಮಣಗಳನ್ನು ತೆರವುಗೊಳಿಸಲಾಗುತ್ತದೆ. ಫುಟ್‌ಪಾತ್‌ಗಳು ಜನಸಾಮಾನ್ಯರ ಹಕ್ಕು ಮತ್ತು ಪಾದಚಾರಿಗಳ ಓಡಾಟಕ್ಕೆ ಮಾತ್ರ ಮೀಸಲಾಗಿವೆ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಪಾರ್ಕಿಂಗ್, ಬೀದಿಬದಿ ವ್ಯಾಪಾರ, ಕಟ್ಟಡ ಸಾಮಗ್ರಿಗಳ ಸಂಗ್ರಹ ಮತ್ತು ಬಿಡಾಡಿ ವಾಹನ ನಿಲುಗಡೆಯಂತಹ ಹಲವು ವಿಧದ ಅತಿಕ್ರಮಣಗಳನ್ನು ತೆರವುಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಮತ್ತೊಂದೆಡೆ, ಬೀದಿಬದಿ ವ್ಯಾಪಾರಿಗಳು ಸರ್ಕಾರದಿಂದ ಪರ್ಯಾಯ ವ್ಯವಸ್ಥೆ ಕೇಳುತ್ತಿದ್ದಾರೆ. ಆದರೆ, ಜಿಬಿಎ ಯಾವುದೇ ರಾಜಿ ಮಾಡಿಕೊಳ್ಳದೆ, 2,000 ಕಿಲೋಮೀಟರ್ ಪ್ರಮುಖ ರಸ್ತೆಗಳಲ್ಲಿನ ಫುಟ್‌ಪಾತ್‌ಗಳನ್ನು ಮುಕ್ತಗೊಳಿಸಲು ದೃಢ ನಿರ್ಧಾರ ಕೈಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version