ನಷ್ಟ ಮಾಡಿ ಡಿಸ್ಕೌಂಟ್ ಕೇಳಿದ ರಣವೀರ್ ಸಿಂಗ್; ಸಂಧಾನ ಸಭೆಯಲ್ಲಿ ನಡೆದಿದ್ದೇನು?

ಬಾಲಿವುಡ್‌ನ ‘ಡಾನ್ 3’ ಸಿನಿಮಾ ವಿವಾದ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಟ ರಣವೀರ್ ಸಿಂಗ್ ಮತ್ತು ‘ಎಕ್ಸೆಲ್ ಎಂಟರ್‌ಟೇನ್‌ಮೆಂಟ್’ ನಿರ್ಮಾಣ ಸಂಸ್ಥೆ ನಡುವಿನ ಮುನಿಸು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇತ್ತೀಚೆಗೆ ನಡೆದ ಸಂಧಾನ ಸಭೆಯೊಂದರ ಆಸಕ್ತಿದಾಯಕ ಮಾಹಿತಿ ಈಗ ಹೊರಬಿದ್ದಿದೆ. ಚಿತ್ರದಿಂದ ಹೊರನಡೆದ ಕಾರಣ ಎಕ್ಸೆಲ್ ಸಂಸ್ಥೆಗೆ ಉಂಟಾಗಿದ್ದ 45 ಕೋಟಿ ರೂಪಾಯಿ ನಷ್ಟಕ್ಕೆ ಪರಿಹಾರವಾಗಿ ರಣವೀರ್ ಸಿಂಗ್ 10 ಕೋಟಿ ರೂಪಾಯಿ ನೀಡಲು ಒಪ್ಪಿದ್ದರು ಮತ್ತು ಬಾಕಿ ಹಣದಲ್ಲಿ ಡಿಸ್ಕೌಂಟ್ ಕೇಳಿದ್ದರು ಎಂದು ವರದಿಯಾಗಿದೆ.

ವಿಷಯ ಗಂಭೀರ ಸ್ವರೂಪ ಪಡೆಯುವ ಮುನ್ನವೇ, ಮಾರ್ಚ್ ಮೊದಲ ವಾರದಲ್ಲಿ ಬಾಲಿವುಡ್​ನ ಪ್ರಮುಖರಾದ ಆಮಿರ್ ಖಾನ್, ಕರಣ್ ಜೋಹರ್ ಮತ್ತು ಸಾಜಿದ್ ನಾಡಿಯಾಡ್ವಾಲಾ ಅವರ ಸಮ್ಮುಖದಲ್ಲಿ ಒಂದು ಮಹತ್ವದ ಸಭೆ ನಡೆದಿತ್ತು. ಈ ಸಭೆಯಲ್ಲಿ ರಣವೀರ್ ಸಿಂಗ್ ತಂಡವು ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರಿಗೆ ಒಂದು ವಿಶೇಷ ಆಫರ್ ನೀಡಿತ್ತು.

ರಣವೀರ್ ನೀಡಿದ್ದ ಆಫರ್ ಏನು?

45 ಕೋಟಿ ರೂಪಾಯಿ ಪರಿಹಾರ ಮೊತ್ತದಲ್ಲಿ ಎಕ್ಸೆಲ್ ಸಂಸ್ಥೆಗೆ ತಕ್ಷಣವೇ 10 ಕೋಟಿ ರೂಪಾಯಿ ನಗದು ಪರಿಹಾರ ನೀಡಲು ರಣವೀರ್ ಒಪ್ಪಿದ್ದರು. ಇದರ ಜೊತೆಗೆ, ಮುಂದಿನ ದಿನಗಳಲ್ಲಿ ಎಕ್ಸೆಲ್ ಸಂಸ್ಥೆ ಮಾಡುವ ಯಾವುದಾದರೂ ಹೊಸ ಸಿನಿಮಾದಲ್ಲಿ ರಣವೀರ್ ನಟಿಸುವ ಭರವಸೆ ನೀಡಿದ್ದರು. ತಮ್ಮ ಸಂಭಾವನೆಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಡಿಸ್ಕೌಂಟ್ ನೀಡೋದಾಗಿ ಹೇಳಿದ್ದರು. ಈ ಮೂಲಕ ಒಟ್ಟು 35 ಕೋಟಿ ರೂಪಾಯಿ ಹಂತ-ಹಂತವಾಗಿ ಸರಿದೂಗಿಸಿ, ವೃತ್ತಿಪರ ಬಾಂಧವ್ಯವನ್ನು ಮುಂದುವರಿಸುವುದು ರಣವೀರ್ ಅವರ ಆಲೋಚನೆಯಾಗಿತ್ತು.

ಆಫರ್ ತಿರಸ್ಕರಿಸಿದ ಫರ್ಹಾನ್ ಅಖ್ತರ್ ತಂಡ:

ಆದರೆ ರಣವೀರ್ ಸಿಂಗ್ ಅವರ ಈ ಡಿಸ್ಕೌಂಟ್ ಆಫರ್ ಅನ್ನು ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ನೇರವಾಗಿ ತಿರಸ್ಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಿನಿಮಾದ ಡೇಟ್ಸ್ ಮತ್ತು ಗೊಂದಲಗಳಿಂದಾಗಿ ತಮಗೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಅವರು ವಾದಿಸಿದ್ದಾರೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ರಣವೀರ್ ಜೊತೆ ಮತ್ತೆ ಕೆಲಸ ಮಾಡುವ ಯಾವುದೇ ಉದ್ದೇಶ ತಮಗಿಲ್ಲದ ಕಾರಣ, ಮುಂದಿನ ಚಿತ್ರದಲ್ಲಿ ಡಿಸ್ಕೌಂಟ್ ಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅವರ ವಾದ ಆಗಿತ್ತು. ಏನೇ ಇದ್ದರೂ ತಮಗೆ ತಕ್ಷಣವೇ ಸಂಪೂರ್ಣ ನಗದು ಪರಿಹಾರ ಸಿಗಬೇಕು ಎಂದು ಎಕ್ಸೆಲ್ ಸಂಸ್ಥೆ ಪಟ್ಟು ಹಿಡಿದಿತ್ತು.

ರಣವೀರ್ ಸಿಂಗ್ ಅಸಮಾಧಾನಕ್ಕೆ ಕಾರಣವೇನು?

ಮತ್ತೊಂದೆಡೆ, ರಣವೀರ್ ಸಿಂಗ್ ಆಪ್ತರ ಪ್ರಕಾರ ಅವರದ್ದೇ ಆದ ಬೇರೆ ವಾದವಿದೆ. ರಣವೀರ್ ಅವರ ಕೆರಿಯರ್ ಕೊಂಚ ಡಲ್ ಆಗಿದ್ದ ಸಮಯದಲ್ಲಿ ಎಕ್ಸೆಲ್ ಸಂಸ್ಥೆಯು ಅವರ ಬದಲಿಗೆ ಹೃತಿಕ್ ರೋಷನ್ ಸೇರಿದಂತೆ ಇತರ ನಟರನ್ನು ಸಂಪರ್ಕಿಸಲು ಪ್ರಯತ್ನಿಸಿತ್ತು, ಇದು ರಣವೀರ್‌ಗೆ ಬೇಸರ ತರಿಸಿತ್ತು. ನಿರ್ಮಾಣ ಸಂಸ್ಥೆಗೆ ತಮ್ಮ ಮೇಲೆ ಸಂಪೂರ್ಣ ಭರವಸೆ ಇಲ್ಲ ಮತ್ತು ಚಿತ್ರದ ಸ್ಕ್ರಿಪ್ಟ್ ಕೂಡ ಅಷ್ಟೊಂದು ಬಲಿಷ್ಠವಾಗಿಲ್ಲದ ಕಾರಣ ಅವರು ಚಿತ್ರದಿಂದ ಹೊರನಡೆಯುವ ತೀರ್ಮಾನ ತಗೆದುಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ರಣವೀರ್ ವಿವಾದ ಬಳಿಕ ‘ಡಾನ್ 3’ ಚಿತ್ರಕ್ಕೆ ಮರಳಲು ಶಾರುಖ್ ರೆಡಿ; ಹಾಕಿದ ಷರತ್ತೇನು?

ಸದ್ಯ’ಎಫ್‌ಡಬ್ಲ್ಯೂಐಸಿಇ’ ಒಕ್ಕೂಟವು ರಣವೀರ್ ವಿರುದ್ಧ ಅಸಹಕಾರ ಆದೇಶ ಹೊರಡಿಸಿರುವುದರಿಂದ ಈ ವಿವಾದ ಮತ್ತಷ್ಟು ಕಠಿಣ ಸ್ವರೂಪ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Trupti Bhatt IPS: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಅನೇಕರ ಕನಸಾದ ಯುಪಿಎಸ್‌ಸಿ (UPSC) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸುವುದು ಸುಲಭದ ಮಾತಲ್ಲ. ವರ್ಷಗಳ ಕಾಲ ಸತತ ಪರಿಶ್ರಮ ಪಟ್ಟರೂ ಹಲವರಿಗೆ ಈ ಕನಸು ಕೈಗೂಡುವುದಿಲ್ಲ. ಆದರೆ ಉತ್ತರಾಖಂಡದ ಅಲ್ಮೋರಾ ಮೂಲದ ತೃಪ್ತಿ ಭಟ್ ತಮ್ಮ ಅಸಾಧಾರಣ ಪ್ರತಿಭೆ, ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮದ ಮೂಲಕ ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿ IPS ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಇನ್ನೂ ವಿಶೇಷವೆಂದರೆ, ನಾಗರಿಕ ಸೇವೆಯ ಗುರಿಗಾಗಿ ಅವರು ISRO ಸೇರಿ ಒಟ್ಟು 16 ಸರ್ಕಾರಿ ಉದ್ಯೋಗಗಳ ಆಫರ್‌ಗಳನ್ನು ತಿರಸ್ಕರಿಸಿದ್ದರು.

ಶಿಕ್ಷಕರ ಕುಟುಂಬದಿಂದ ಬಂದ ಪ್ರತಿಭಾವಂತ ಯುವತಿ:

ತೃಪ್ತಿ ಭಟ್ ಶಿಕ್ಷಕರ ಕುಟುಂಬದಲ್ಲಿ ಜನಿಸಿ ಬೆಳೆದವರು. ತಂದೆ-ತಾಯಿ ಇಬ್ಬರೂ ಶಿಕ್ಷಣ ಕ್ಷೇತ್ರದಲ್ಲಿದ್ದ ಕಾರಣ ಬಾಲ್ಯದಿಂದಲೇ ಮನೆಯಲ್ಲಿ ಓದಿನ ವಾತಾವರಣವಿತ್ತು. ನಾಲ್ಕು ಸಹೋದರ-ಸಹೋದರಿಯರಲ್ಲಿ ಹಿರಿಯರಾದ ತೃಪ್ತಿ, ಅಲ್ಮೋರಾದ ಬಿರ್ಶೆಬಾ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ಬಳಿಕ ಕೇಂದ್ರೀಯ ವಿದ್ಯಾಲಯದಲ್ಲಿ ಪಿಯುಸಿ ಮುಗಿಸಿ, ಪ್ರತಿಷ್ಠಿತ ಪಂತನಗರ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಇಂಜಿನಿಯರಿಂಗ್ ನಂತರ ಅವರು ಎನ್‌ಟಿಪಿಸಿ (NTPC) ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು.

ಡಾ. ಎಪಿಜೆ ಅಬ್ದುಲ್ ಕಲಾಂ ಭೇಟಿಯಿಂದ ಬದಲಾದ ಬದುಕು:

ತೃಪ್ತಿ ಭಟ್ ಅವರ ಜೀವನದಲ್ಲಿ ಮಹತ್ವದ ತಿರುವು ತಂದದ್ದು ಭಾರತದ ಮಾಜಿ ರಾಷ್ಟ್ರಪತಿ ಹಾಗೂ “ಮಿಸೈಲ್ ಮ್ಯಾನ್” ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಭೇಟಿ. 9ನೇ ತರಗತಿಯಲ್ಲಿ ಇದ್ದಾಗ ತೃಪ್ತಿಗೆ ಡಾ. ಕಲಾಂ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆ ವೇಳೆ ಅವರು ನೀಡಿದ ಕೈಬರಹದ ಪ್ರೇರಣಾದಾಯಕ ಪತ್ರ ತೃಪ್ತಿ ಅವರ ಮನಸ್ಸಿನಲ್ಲಿ ದೇಶಸೇವೆಯ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿತು. ಆ ಕ್ಷಣದಿಂದಲೇ ಅವರು ದೇಶಕ್ಕೆ ದೊಡ್ಡ ಮಟ್ಟದಲ್ಲಿ ಸೇವೆ ಸಲ್ಲಿಸುವ ಗುರಿ ಹೊಂದಿದರು.

ISRO ಸೇರಿ 16 ಸರ್ಕಾರಿ ಉದ್ಯೋಗ ತಿರಸ್ಕಾರ:

ನಾಗರಿಕ ಸೇವೆಗೆ ಸೇರುವ ಕನಸನ್ನು ಸಾಕಾರಗೊಳಿಸಲು ತೃಪ್ತಿ ಭಟ್ ಹಲವು ಆಕರ್ಷಕ ಸರ್ಕಾರಿ ಉದ್ಯೋಗಗಳನ್ನು ತಿರಸ್ಕರಿಸಿದರು. ವರದಿಗಳ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ ಅವರಿಗೆ 16 ಸರ್ಕಾರಿ ಉದ್ಯೋಗಗಳ ಆಫರ್ ಬಂದಿದ್ದವು. ಆದರೆ IPS ಅಧಿಕಾರಿಯಾಗಬೇಕೆಂಬ ಏಕೈಕ ಗುರಿ ಹೊಂದಿದ್ದ ತೃಪ್ತಿ, ಎಲ್ಲ ಅವಕಾಶಗಳನ್ನು ಬದಿಗಿಟ್ಟು UPSC ತಯಾರಿಯತ್ತ ಸಂಪೂರ್ಣ ಗಮನ ಹರಿಸಿದರು.

ಮೊದಲ ಪ್ರಯತ್ನದಲ್ಲೇ UPSC ಕ್ಲಿಯರ್:

ತಮ್ಮ ಕಠಿಣ ಪರಿಶ್ರಮದ ಫಲವಾಗಿ, ತೃಪ್ತಿ ಭಟ್ 2013ರ UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಾದ್ಯಂತ 165ನೇ ರ‍್ಯಾಂಕ್ ಪಡೆದು ಭಾರತೀಯ ಪೊಲೀಸ್ ಸೇವೆಗೆ (IPS) ಆಯ್ಕೆಯಾದರು. ವಿಶೇಷವೆಂದರೆ, ಅವರಿಗೆ ತಮ್ಮದೇ ತವರು ರಾಜ್ಯವಾದ ಉತ್ತರಾಖಂಡ ಕೇಡರ್ ದೊರಕಿತು. ಮೊದಲ ಪ್ರಯತ್ನದಲ್ಲೇ ಸಾಧಿಸಿದ ಈ ಯಶಸ್ಸು ಅನೇಕ ಯುವಕರಿಗೆ ಪ್ರೇರಣೆಯಾಗಿದೆ.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಮುಖ ಹುದ್ದೆಗಳಲ್ಲಿ ಸೇವೆ:

IPS ಅಧಿಕಾರಿಯಾದ ಬಳಿಕ ತೃಪ್ತಿ ಭಟ್ ಉತ್ತರಾಖಂಡದಲ್ಲಿ ಹಲವು ಪ್ರಮುಖ ಮತ್ತು ಸವಾಲಿನ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರು ವಹಿಸಿದ್ದ ಪ್ರಮುಖ ಹುದ್ದೆಗಳು:

  • ಡೆಹ್ರಾಡೂನ್ ಪೊಲೀಸ್ ಸೂಪರಿಂಟೆಂಡೆಂಟ್ (SP)
  • ಚಮೋಲಿ ಪೊಲೀಸ್ ಸೂಪರಿಂಟೆಂಡೆಂಟ್ (SP)
  • ತೆಹ್ರಿ ಗರ್ವಾಲ್ SDRF ಕಮಾಂಡೆಂಟ್
  • ಡೆಹ್ರಾಡೂನ್ ಗುಪ್ತಚರ ಮತ್ತು ಭದ್ರತಾ ವಿಭಾಗದ SP

ಯುವ ಪೀಳಿಗೆಗೆ ಪ್ರೇರಣೆ:

ತೃಪ್ತಿ ಭಟ್ ಅವರ ಯಶೋಗಾಥೆ ಇಂದಿನ ಯುವ ಪೀಳಿಗೆಗೆ, ವಿಶೇಷವಾಗಿ ಮಹಿಳೆಯರಿಗೆ ದೊಡ್ಡ ಪ್ರೇರಣೆ. ಸ್ಪಷ್ಟ ಗುರಿ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಇದ್ದರೆ ಯಾವುದೇ ಕನಸನ್ನಾದರೂ ನನಸಾಗಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪವರ್ ಕೇಬಲ್ ಕದಿಯಲು ಹೋಗಿ ಕಳ್ಳನಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ

ತನ್ನನ್ನು ತಾನು ತುಂಬಾ ಬುದ್ಧಿವಂತ ಎಂದುಕೊಳ್ಳುತ್ತಿದ್ದ ಕಳ್ಳ. ತಡರಾತ್ರಿ ಯಾರೂ ಇಲ್ಲದ ಸಮಯ ನೋಡಿ, ರಸ್ತೆಯ ಪಕ್ಕದಲ್ಲಿದ್ದ ದಪ್ಪನೆಯ ವಿದ್ಯುತ್ ಕೇಬಲ್‌ಗಳನ್ನು ಕತ್ತರಿಸಿ, ಅವುಗಳನ್ನು ಮಾರಿ ಭಾರಿ ಹಣ ಗಳಿಸುವುದು ಅವನ ಪ್ಲಾನ್ ಆಗಿತ್ತು. ತನ್ನ ಯೋಜನೆಯಂತೆ, ಆತ ಕತ್ತರಿ ಮತ್ತು ಉಪಕರಣಗಳೊಂದಿಗೆ ಕಂಬದ ಮೇಲಿದ್ದ ಪವರ್ ಕೇಬಲ್ ಏರಿ ಅದನ್ನು ಕತ್ತರಿಸಲು ಶುರು ಮಾಡಿದ್ದ. ತನ್ನ ಕೆಲಸದಲ್ಲಿ ಎಷ್ಟು ಮಗ್ನನಾಗಿದ್ದ ಎಂದರೆ ತಾನು ನಿಂತಿರುವ ತಂತಿಯನ್ನೇ ಕತ್ತರಿಸಿರುವುದರ ಬಗ್ಗೆ ಅರಿವಿರಲಿಲ್ಲ. ಕೇಬಲ್ ಕತ್ತರಿಸಿದ ತಕ್ಷಣ ದೊಪ್ಪೆಂದು ಕೆಳಗೆ ಬಿದ್ದಿದ್ದಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಚಿರಂಜೀವಿ ಬಗ್ಗೆ ಸುಳ್ಳು ಸುದ್ದಿ ಯೂಟ್ಯೂಬ್ ವಿರುದ್ಧ ದೂರು ದಾಖಲು

ಸಿನಿಮಾ (Cinema) ನಟ-ನಟಿಯರ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ ಸುಳ್ಳು ಸುದ್ದಿಗಳು ಬಹು ಬೇಗ ಹರಡುತ್ತವೆ. ಕೆಲವು ಯೂಟ್ಯೂಬ್ ಚಾನೆಲ್​​ಗಳಂತೂ ವೀವ್ಸ್​ಗಾಗಿ ಸಿನಿಮಾ ನಟ-ನಟಿಯರಿಗೆ ಸಂಬಂಧಿಸಿದ ಅತಿ ರಂಜಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತವೆ. ಹಲವು ಸಿನಿಮಾ ನಟ-ನಟಿಯರು ಇಂಥಹಾ ಚಾನೆಲ್​​ಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಿದೆ. ಆದರೆ ಈ ಕುಕೃತ್ಯ ದಕ್ಷಿಣ ಭಾರತದಲ್ಲಿ ತುಸು ಕಡಿಮೆ ಇತ್ತು. ಆದರೆ ಇದೀಗ ಮೆಗಾಸ್ಟಾರ್ ಚಿರಂಜೀವಿ ಕುರಿತು ಸುಳ್ಳು ಸುದ್ದಿ ಮತ್ತು ತಿರುಚಿದ ವಿಡಿಯೋಗಳನ್ನು ಯೂಟ್ಯೂಬ್ ಚಾನೆಲ್ ಒಂದು ಹಂಚಿಕೊಂಡಿದ್ದು, ಚಾನೆಲ್ ವಿರುದ್ಧ ದೂರು ದಾಖಲಾಗಿದೆ.

ಯೂಟ್ಯೂಬ್ ಚಾನೆಲ್ ಒಂದು ಚಿರಂಜೀವಿ ಅವರ ತಿದ್ದಿದ ಚಿತ್ರಗಳನ್ನು ಬಳಸಿ ನಟನ ಬಗ್ಗೆ ಸುಳ್ಳು ಸುದ್ದಿ ಹರಿಡಿಸುತ್ತಿರುವ ಕುರಿತಾಗಿ ವಕೀಲರೊಬ್ಬರು ಪೊಲೀಸರಿಗೆ ದೂರು ದಾಖಲಿಸಿದ್ದು, ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ಚಾನೆಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಯೂಟ್ಯೂಬ್ ಚಾನೆಲ್​​ಗೆ ಸಂಬಂಧಿಸಿದ ಮಾಹಿತಿ ಜೊತೆಗೆ ಕೆಲವು ಸ್ಕ್ರೀನ್ ಶಾಟ್​​ಗಳು ಮತ್ತು ವಿಡಿಯೋಗಳನ್ನು ವಕೀಲ ರಾಮಕೃಷ್ಣ ಮಿರಿಯಾಲ ಅವರು ಪೊಲೀಸರಿಗೆ ನೀಡಿದ್ದಾರೆ. ವಕೀಲರ ದೂರು ಆಧರಿಸಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾ ರಿಲೀಸ್​​ಗೆ ಕೆಲವೇ ದಿನ ಬಾಕಿ ಇರುವಾಗ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

ಮೆಗಾಸ್ಟಾರ್ ಚಿರಂಜೀವಿ ಭಾರತದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿದ್ದು, ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಆಸ್ತಿ, ಸಿನಿಮಾ, ಕುಟುಂಬದ ಬಗ್ಗೆ ಹಾಗೂ ವ್ಯಕ್ತಿತ್ವದ ಬಗ್ಗೆ ಸುಳ್ಳು ಸುದ್ದಿಗಳನ್ನು ಯೂಟ್ಯೂಬ್ ಚಾನೆಲ್​​ನಲ್ಲಿ ಹರಿಬಿಡಲಾಗಿತ್ತಂತೆ. ಈ ಬಗ್ಗೆ ಚಿರಂಜೀವಿ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ಇದೀಗ ಕಾನೂನಾತ್ಮಕವಾಗಿ ಯೂಟ್ಯೂಬ್ ಚಾನೆಲ್ ಅನ್ನು ಬಂದ್ ಮಾಡುವ ಪ್ರಯತ್ನ ಚಾಲ್ತಿಯಲ್ಲಿದೆ.

ಚಿರಂಜೀವಿ ನಟನೆಯ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಇದೇ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ‘ವಿಶ್ವಂಭರ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ನಿರ್ದೇಶಕ ಬಾಬಿ ಜೊತೆಗೆ ಒಂದು ಸಿನಿಮಾನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಒದೆಲ ನಿರ್ದೇಶನ ಮಾಡಲಿರುವ ಮತ್ತೊಂದು ಸಿನಿಮಾನಲ್ಲಿ ಚಿರಂಜೀವಿ ನಟಿಸುತ್ತಿದ್ದು ಆ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡುತ್ತಿದೆ. ಇನ್ನೂ ಕೆಲವು ಸಿನಿಮಾಗಳು ಚಿರಂಜೀವಿ ಕೈಯಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟವೀಗ ನಿರಾಳ: ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​

ಬೆಂಗಳೂರು, ಮೇ 27: ಎಬೋಲಾ ವೈರಸ್ ಶಂಕಿತ ಪ್ರಕರಣವೊಂದು ಬೆಂಗಳೂರಲ್ಲಿ ಪತ್ತೆಯಾಗಿರೋದು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಉಗಾಂಡಾ ಮೂಲದ ಮಹಿಳೆಯ ಎಬೋಲಾ ಪರೀಕ್ಷೆಯ ರಿಪೋರ್ಟ್​​ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಸೇರಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ರಾಜ್ಯಕ್ಕೂ ಎಬೋಲಾ ಮಾರಿ ಕಾಲಿಟ್ಟಿತಾ ಎಂಬ ಆತಂಕದಲ್ಲಿದ್ದ ಇಲಾಖೆ ನಿಟ್ಟುಸಿರು ಬಿಟ್ಟಿದೆ.

ಮುಖ್ಯಾಂಶಗಳು

  • ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟಕಕ್ಕೆ ಬಿಗ್​​ ರಿಲೀಫ್​​
  • ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​
  • ನಿಟ್ಟುಸಿರು ಬಿಟ್ಟ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಉಗಾಂಡಾ ದೇಶದ ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ (28) ಎಂಬ ಮಹಿಳೆ ಕಳೆದ ಮೇ 23ರಂದು ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿನ ‘ರಾಯಲ್ ಏಸ್ ಬೂಟಿಕ್’ ಹೋಟೆಲ್‌ನ ರೂಮ್ ನಂಬರ್ 303ರಲ್ಲಿ ತಂಗಿದ್ದ ಆಕೆಗೆ ಎಬೋಲಾ ಮಾದರಿಯ ಆರೋಗ್ಯ ಸಮಸ್ಯೆಗಳು ಇರುವುದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ, ತಕ್ಷಣವೇ ಆದೇಶ ಹೊರಡಿಸಿ ಆಂಬುಲೆನ್ಸ್ ಮೂಲಕ ಅವರನ್ನು ಐಸೋಲೇಷನ್​​ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿತ್ತು. ಜೊತೆಗೆ ಶಂಕಿತ ಮಹಿಳೆಯಿಂದ ರಕ್ತ ಹಾಗೂ ಇತರ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ, ಈ ಸ್ಯಾಂಪಲ್‌ಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟಿತಾ ಎಬೋಲಾ? ಉಗಾಂಡಾದಿಂದ ಬೆಂಗಳೂರಿಗೆ ಬಂದ ಮಹಿಳೆಯಲ್ಲಿ ವೈರಸ್​​​ ಪತ್ತೆ ಶಂಕೆ

ಉಗಾಂಡಾದ ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ಹೀಗಾಗಿ ಐಸೋಲೇಷನ್​​ನಲ್ಲಿ ಇಡಲಾಗಿದ್ದ ಅವರನ್ನು ಆಸ್ಪತ್ರೆಯಿಂದ ಹೋಟೆಲ್​ಗೆ ಸ್ಥಳಾಂತರ ಮಾಡಲಾಗಿದೆ. ಆದರೂ 21 ದಿನಗಳ ಕಾಲ ನಾಗಿರೆ ಲತಿಫಾ ಕ್ವಾರಂಟೈನ್ ಆಗಬೇಕಿದ್ದು, ಈ ಅವಧಿಯಲ್ಲಿ ಆರೋಗ್ಯ ಇಲಾಖೆ ನಿರಂತರವಾಗಿ ಮಾನಿಟರ್ ಮಾಡಲಿದೆ. ಮತ್ತೆ ರೋಗ ಲಕ್ಷಣ ಕಂಡುಬರದಿದ್ದರೆ ಕ್ಯಾರಂಟೈನ್​ನಿಂದ ಬಿಡುಗಡೆ ಮಾಡಲಾಗುತ್ತದೆ. ಒಂದುವೇಳೆ ರೋಗಲಕ್ಷಣ ಕಂಡುಬಂದ್ರೆ 2ನೇ ಹಂತದಲ್ಲಿ ಪುಣೆಯ NIV ಲ್ಯಾಬ್​ನಲ್ಲಿ ಸ್ಯಾಂಪಲ್ ಪರಿಶೀಲನೆ ನಡೆಯಲಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

254 ರನ್​​ಗಳನ್ನು ನೋಡಿ ಸೋಲೊಪ್ಪಿಕೊಂಡ್ರಾ? ಕಿಡಿಕಾರಿದ ಗ್ಲೆನ್ ಫಿಲಿಪ್ಸ್​

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಚಂಡ ಜಯ ಸಾಧಿಸಿದೆ. ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಗುಜರಾತ್ ಟೈಟಾನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಬರೋಬ್ಬರಿ 254 ರನ್ ಕಲೆಹಾಕಿದ್ದರು.

ಈ ಕಠಿಣ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್​ಗಳಲ್ಲಿ 162 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಬರೋಬ್ಬರಿ 92 ರನ್​ಗಳ ಅಂತರದಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. ಈ ಸೋಲಿನ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​​ಮನ್ ಗಿಲ್ ಆಗಲಿ ಅಥವಾ ಮುಖ್ಯ ಕೋಚ್ ಆಶಿಶ್ ನೆಹ್ರಾ ಕಾಣಿಸಿಕೊಂಡಿರಲಿಲ್ಲ. ಬದಲಿಗೆ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿರ ಗ್ಲೆನ್ ಫಿಲಿಪ್ಸ್ ಅವರನ್ನು ಕಳುಹಿಸಲಾಗಿತ್ತು.

ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಗ್ಲೆನ್ ಫಿಲಿಪ್ಸ್​​ಗೆ ವರದಿಗಾರರೊಬ್ಬರು, ಆರ್​ಸಿಬಿ ನೀಡಿದ 254 ರನ್​ಗಳ ಕಠಿಣ ಗುರಿ ನೋಡಿ ಗುಜರಾತ್ ಟೈಟಾನ್ಸ್ ಆಟಗಾರರು ಮಾನಸಿಕವಾಗಿಯೇ ಸೋಲು ಒಪ್ಪಿಕೊಂಡ್ರಾ? ಎಂದು ಪ್ರಶ್ನೆ ಮುಂದಿಟ್ಟಿದ್ದರು.

ಈ ಪ್ರಶ್ನೆ ಕೇಳುತ್ತಿರುವಂತೆ ಅಸಮಾಧಾನ ಹೊರಹಾಕಿದ ಗ್ಲೆನ್ ಫಿಲಿಪ್ಸ್, ಇದು ತಂಡದ ವೃತ್ತಿಪರತೆಗೆ ಧಕ್ಕೆ ತರುವಂತಹ ಪ್ರಶ್ನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನೀವು ಕೇಳಿರುವುದು ಅತ್ಯಂತ ಮೂರ್ಖತನದ ಪ್ರಶ್ನೆ. ನಿಜಕ್ಕೂ ಇಂತಹ ಪ್ರಶ್ನೆಗಳೇ ಮೂರ್ಖತನದ್ದು! ಯಾವೊಬ್ಬರ ವೃತ್ತಿಪರ ಕ್ರಿಕೆಟಿಗನೂ ಕೂಡ ಹೀಗೆ ಯೋಚಿಸಲ್ಲ. ಯಾರೂ ಸಹ ಸ್ಕೋರ್ ನೋಡಿ, ಈ ಪಂದ್ಯವನ್ನು ಇಲ್ಲೇ ಕೈ ಬಿಡುತ್ತಿದ್ದೇವೆ ಎಂದು ಮೈದಾನಕ್ಕೆ ಇಳಿಯುವುದಿಲ್ಲ. ಪಂದ್ಯವಾಡಲು ಬಂದವರು ಹಾಗೆ ಏಕೆ ಯೋಚಿಸುತ್ತಾರೆ ಹೇಳಿ”.

“250 ಕ್ಕೂ ಹೆಚ್ಚಿನ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ಪ್ರತಿ ಹಂತದಲ್ಲೂ ನಾವು ಪಾಸಿಟಿವ್ ಆಗಿಯೇ ಯೋಚಿಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ನಮ್ಮ ಪ್ಲ್ಯಾನ್​ಗಳು ವರ್ಕ್​ ಆಗಲ್ಲ. ಅದೇ ರೀತಿ ಈ ಮ್ಯಾಚ್​ನಲ್ಲಿ ನಾವು ಅಂದುಕೊಂಡಂತೆ ನಡೆದಿಲ್ಲ ಅಷ್ಟೇ” ಎಂದು ಗ್ಲೆನ್ ಫಿಲಿಪ್ಸ್ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪ್ರದರ್ಶನವನ್ನು ಸಮರ್ಥಿಸಿಕೊಂಡಿದ್ದಾರೆ.

ಫೈನಲ್​ ಮೇಲೆ ಗುಜರಾತ್ ಕಣ್ಣು:

ಈ ಬಾರಿಯ ಐಪಿಎಲ್​ನ ಫೈನಲ್ ಪಂದ್ಯ ನಡೆಯುವುದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ. ಈ ಸ್ಟೇಡಿಯಂ ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನ. ಹೀಗಾಗಿ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಜಯಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಫೈನಲ್​ಗೇರಲು ಪ್ಲ್ಯಾನ್ ರೂಪಿಸುತ್ತಿದೆ.

ಇದನ್ನೂ ಓದಿ: ಈ ಸಲನೂ ಕಪ್ ನಮ್ದೆ: ಈ ಲೆಕ್ಕಾಚಾರಕ್ಕಿದೆ ಬಲವಾದ ಕಾರಣ!

ಇಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮುಂದಿನ ಎದುರಾಳಿಯಾಗಿ ಸನ್​ರೈಸರ್ಸ್ ಹೈದರಾಬಾದ್ ಅಥವಾ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್​ನಲ್ಲಿ ಗೆಲ್ಲುವ ಮೂಲಕ ಗುಜರಾತ್ ಟೈಟಾನ್ಸ್​ ತಂಡಕ್ಕೆ ಫೈನಲ್​ಗೇರಲು ಅವಕಾಶವಿದೆ.

 

Source link

ಡಿಕೆ ಶಿವಕುಮಾರ್​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ

ರಾಮನಗರ, ಮೇ 27: ಡಿಕೆ ಶಿವಕುಮಾರ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಂಬಿಕೆಯೊಂದಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಅಧಿಕೃತ ಘೋಷಣೆಗೆ ಮೊದಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಅಧಿಕಾರ ಹಂಚಿಕೆ ಸಂಬಂಧ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೂ, ಸಿದ್ದರಾಮಯ್ಯ ನಾಯಕತ್ವ ಬದಲಾವಣೆಗೆ ಒಪ್ಪಿಕೊಂಡಿದ್ದಾರೆ ಮತ್ತು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಬಲವಾದ ನಂಬಿಕೆ ಕಾರ್ಯಕರ್ತರಲ್ಲಿದೆ. ಈ ನಂಬಿಕೆಯ ಹಿನ್ನಲೆಯಲ್ಲಿ, ರಾಮನಗರದಲ್ಲಿ ಸಡಗರ ಮತ್ತು ಸಂಭ್ರಮ ಮುಗಿಲುಮುಟ್ಟಿದೆ. ಪಕ್ಷದ ಕಾರ್ಯಕರ್ತರು ‘ಡಿಕೆ ಶಿವಕುಮಾರ್ ಕೀ ಜೈ, ಮುಖ್ಯಮಂತ್ರಿ ಡಿಕೆ ಶಿವಕುಮಾರ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Guru Sanchara 2026: ಗುರು ಸಂಚಾರ ಮಕರ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಮಕರ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮಕರ ರಾಶಿಯವರಿಗೆ 2026ರ ಗುರು ಸಂಚಾರವು ಶುಭಕರವಾಗಿದೆ. ರಾಶ್ಯಾಧಿಪತಿ ಶನಿಯಾಗಿದ್ದು, ಗುರುವು ಕರ್ಕಾಟಕದಿಂದ ಸಪ್ತಮ ದೃಷ್ಟಿಯಲ್ಲಿ ಮಕರ ರಾಶಿಯನ್ನು ನೋಡುತ್ತಿದ್ದಾರೆ. ಜೂನ್ 2 ರಿಂದ ಗುರುಬಲ ಪ್ರಾರಂಭವಾಗುವುದರಿಂದ ಉತ್ತರಾಷಾಡ, ಶ್ರವಣ, ಧನಿಷ್ಠ ನಕ್ಷತ್ರದವರಿಗೆ ಅದೃಷ್ಟ ಕೂಡಿಬರಲಿದೆ.

ಆರ್ಥಿಕ ಪ್ರಗತಿ, ವಿವಾಹ ಯೋಗ, ಮನೆ ಮತ್ತು ಆಸ್ತಿ ಖರೀದಿ, ಭೂಮಿ ಯೋಗಗಳು ಪ್ರಾಪ್ತವಾಗುತ್ತವೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ದೂರಾಗಿ ಅನ್ಯೋನ್ಯತೆ ಹೆಚ್ಚಲಿದೆ. ಮಕ್ಕಳಿಂದ ಕೀರ್ತಿ ಪ್ರತಿಷ್ಠೆ ಲಭಿಸುತ್ತದೆ. ಉದ್ಯೋಗದಲ್ಲಿ ಬಡ್ತಿ, ರಾಜಕೀಯದಲ್ಲಿ ಯಶಸ್ಸು, ವ್ಯಾಪಾರಸ್ಥರಿಗೆ ಲಾಭವಿರುತ್ತದೆ. ಪೂರ್ವಿಕರ ಆಸ್ತಿಯ ವಿಚಾರದಲ್ಲಿ ಶುಭ ಫಲಗಳು ದೊರೆಯುತ್ತವೆ. ರೈತಾಪಿ ವರ್ಗದವರಿಗೆ ಉತ್ತಮ ಬೆಳೆ ಹಾಗೂ ಬೆಲೆ ಸಿಗಲಿದೆ. ಬಿಲ್ಡರ್ಸ್, ರಿಯಲ್ ಎಸ್ಟೇಟ್, ಕಾನೂನು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಮಯ. ಶಿಕ್ಷಣ ಕ್ಷೇತ್ರ, ಧಾರ್ಮಿಕ ಚಟುವಟಿಕೆಗಳಲ್ಲಿರುವವರಿಗೂ ಶುಭ. ಕೋಪತಾಪಗಳ ವಿಚಾರದಲ್ಲಿ ಎಚ್ಚರ ವಹಿಸಬೇಕು. ತಾಳ್ಮೆ ಮತ್ತು ಸಹನೆ ಕಾಪಾಡಿಕೊಳ್ಳುವುದು ಅಗತ್ಯ. ಮಹಿಳೆಯರಿಗೆ ಗೌರವ ನೀಡುವುದು ಶುಭಕಾರಿ. ಪ್ರತಿನಿತ್ಯ ಓಂ ಶಿವದತ್ತಾಯ ನಮಃ ಮಂತ್ರ ಜಪಿಸುವುದು ಮತ್ತು ಗುರು ಶಾಂತಿ ಮಾಡಿಸುವುದು ಒಳಿತು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ – Kannada News | Shobha Karandlaje Slams Karnataka Government Over CM Change Debate Amid Public Crisis

ದೇವನಹಳ್ಳಿ, ಮೇ 27: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಬಿಕ್ಕಟ್ಟು ಮತ್ತು ಆಡಳಿತದ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಕೆಐಎಬಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಆಡಳಿತದಲ್ಲಿ ಎರಡುವರೆ ವರ್ಷ ಕೇವಲ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ಚರ್ಚೆ ನಡೆಸಿದೆ. ಬರಗಾಲ, ನೆರೆಹಾವಳಿ, ಬೆಂಗಳೂರಿನಲ್ಲಿ ತ್ಯಾಜ್ಯ ಹಗರಣದಂತಹ ಗಂಭೀರ ಸಮಸ್ಯೆಗಳಿದ್ದರೂ, ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡದಿರುವುದು, ಇಲಾಖೆಗಳು ಕೆಲಸ ಮಾಡದಿರುವುದು ಮತ್ತು ಇಲಾಖೆಗಳಿಗೆ ಹಣಕಾಸಿನ ಕೊರತೆ ಇರುವುದು ರಾಜ್ಯದ ದುಸ್ಥಿತಿಗೆ ಕಾರಣ ಎಂದು ಕರಂದ್ಲಾಜೆ ಹೇಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಖಚಿತತೆ ಇಲ್ಲ, ಏಕೆಂದರೆ ಅವರು ಹಳೆಯ ಹುಲಿಯಾಗಿದ್ದು, ಯಾವಾಗ ಯಾವ ಆಟ ಆಡುತ್ತಾರೆಂದು ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಕುರ್ಚಿ ಹೋರಾಟವನ್ನು ನಿಲ್ಲಿಸಿ, ಜನರ ಸಮಸ್ಯೆಗಳ ಕಡೆ ತಕ್ಷಣ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೆಲಮಂಗಲ: ಸ್ನಾಪ್‌ಚಾಟಲ್ಲಿ ಪ್ರೀತಿಸಿ ಮದುವೆ, ಎರಡೇ ತಿಂಗಳಿಗೆ ಬ್ರೇಕ್‌ಅಪ್! ಗಂಡ ಬೇಕೆಂದು ಠಾಣೆ ಮೆಟ್ಟಿಲೇರಿದ ಯುವತಿ – Kannada News | Nelamangala: Snapchat Love Story Ends in Just Two Months of Marriage; Nursing Woman Files Police Complaint

ನೆಲಮಂಗಲ, ಮೇ 27: ಸಾಮಾಜಿಕ ಜಾಲತಾಣಗಳ ಪರಿಚಯ ಮತ್ತು ಪ್ರೀತಿ ಎಷ್ಟೊಂದು ಬೇಗ ಹಳಿತಪ್ಪಬಹುದು ಎಂಬುದಕ್ಕೆ ನೆಲಮಂಗಲ (Nelamangala) ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸ್ನಾಪ್‌ಚಾಟ್ (Snapchat) ಆ್ಯಪ್‌ನಲ್ಲಿ ಪರಿಚಯವಾಗಿ, ಒಂದೂವರೆ ವರ್ಷಗಳ ಕಾಲ ಪ್ರೀತಿಸಿ, ಕೇವಲ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಈಗ ಎರಡೇ ತಿಂಗಳಲ್ಲಿ ವಿಚ್ಛೇದನದ ಹಂತಕ್ಕೆ ಬಂದು ನಿಂತಿದೆ. ಮದುವೆಯಾದ ಎರಡೇ ತಿಂಗಳಿಗೆ ಪತಿರಾಯ ‘ನೀನು ನನಗೆ ಬೇಡ’ ಎಂದು ಹೆಂಡತಿಯನ್ನು ಕೈಬಿಟ್ಟಿದ್ದು, ಹತಾಶಳಾದ ನೊಂದ ಯುವತಿ ತನಗೆ ನ್ಯಾಯ ಬೇಕು, ಗಂಡನೇ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ.

ಮುಖ್ಯಾಂಶಗಳು

  • ಸ್ನಾಪ್‌ಚಾಟ್‌ನಲ್ಲಿ ಶುರುವಾದ ಪರಿಚಯ ಪ್ರೀತಿಗೆ ತಿರುಗಿ, ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಚೇತನ್ ಮತ್ತು ನರ್ಸಿಂಗ್ ಯುವತಿ.
  • ತಂದೆ-ತಾಯಿ ಇಲ್ಲದ ತಬ್ಬಲಿ ಯುವತಿಯನ್ನು ಪ್ರೀತಿಸಿ ವರಿಸಿದ್ದ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿ ಚೇತನ್.
  • ‘ಮನೆಯಲ್ಲಿ ತಂದೆ-ತಾಯಿಗೆ ಗೌರವ ನೀಡುತ್ತಿಲ್ಲ’ ಎಂಬ ಸಣ್ಣ ಕಾರಣಕ್ಕೆ ಜಗಳವಾಗಿ ಹೆಂಡತಿಯನ್ನು ತೊರೆದ ಪತಿ; ಮಾದನಾಯಕನಹಳ್ಳಿ ಠಾಣೆಗೆ ದೂರು.

ತಬ್ಬಲಿ ಯುವತಿಗೆ ಕೈಕೊಟ್ಟ ಪತಿರಾಯ

ನೊಂದ ಸಂತ್ರಸ್ತ ಯುವತಿ ನರ್ಸಿಂಗ್ ಮುಗಿಸಿಕೊಂಡಿದ್ದು, ಆಕೆಗೆ ತಂದೆ-ತಾಯಿ ಯಾರೂ ಇಲ್ಲದ ತಬ್ಬಲಿಯಾಗಿದ್ದಳು. ಸುಮಾರು ಒಂದೂವರೆ ವರ್ಷದ ಹಿಂದೆ ಈಕೆಗೆ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿಯಾದ ಚೇತನ್ ಎಂಬಾತನ ಪರಿಚಯ ಸ್ನಾಪ್‌ಚಾಟ್‌ನಲ್ಲಿ ಆಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಮತ್ತು ಯುವತಿಯ ಪರಿಚಯ ದಿನ ಕಳೆದಂತೆ ಗಾಢ ಪ್ರೀತಿಗೆ ತಿರುಗಿತ್ತು. ಆಕೆಯ ಅನಾಥ ಸ್ಥಿತಿಯನ್ನು ಅರಿತೂ ಚೇತನ್ ಪ್ರೀತಿಯಿಂದ ಎರಡು ತಿಂಗಳ ಹಿಂದೆ ಸಪ್ತಪದಿ ತುಳಿದು ತನ್ನ ಮನೆಗೆ ಕರೆತಂದಿದ್ದ.

ಆದರೆ, ಇವರ ಸಂಸಾರ ಸುಖವಾಗಿ ಸಾಗಿದ್ದು ಕೇವಲ ಕೆಲವೇ ದಿನಗಳು ಮಾತ್ರ. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಕೌಟುಂಬಿಕ ಕಲಹಗಳು ಆರಂಭವಾಗಿದ್ದವು. ‘ನನ್ನ ತಂದೆ-ತಾಯಿಗೆ ನೀನು ಮನೆಯಲ್ಲಿ ಸರಿಯಾಗಿ ಗೌರವ ಕೊಡುತ್ತಿಲ್ಲ’ ಎಂದು ಚೇತನ್ ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದ ಎನ್ನಲಾಗಿದೆ. ದಿನಕಳೆದಂತೆ ಈ ಕೌಟುಂಬಿಕ ಜಗಳ ತಾರಕಕ್ಕೇರಿದ್ದು, ಚೇತನ್ ತನ್ನ ಹೆಂಡತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ‘ನೀನು ನನಗೆ ಬೇಡವೇ ಬೇಡ’ ಎಂದು ದೂರ ತಳ್ಳಿದ್ದಾನೆ.

ಇದನ್ನೂ ಓದಿ: ದಿನಕ್ಕೆ 400 ರೂ. ಆಸೆ ತೋರಿಸಿ 13 ಸಾವಿರ ಜನರನ್ನು ಲೂಟಿ ಮಾಡಿದ ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್

ತಬ್ಬಲಿಯಾಗಿದ್ದ ತನಗೆ ಈಗ ಗಂಡನೂ ಇಲ್ಲದೆ ಆಸರೆಯೇ ಇಲ್ಲದಂತಾಗಿದೆ ಎಂದು ಕಣ್ಣೀರಿಟ್ಟಿರುವ ಯುವತಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ಕರೆಸಿ ಕೌನ್ಸೆಲಿಂಗ್ ನಡೆಸಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version