ರಾಹುಲ್​​ ಗಾಂಧಿ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು? – Kannada News | Karnataka high court grants permission for bike taxis riders reveal rahul gandhis assurance

ಬೆಂಗಳೂರು, ಜನವರಿ 23: ಬೈಕ್​​ ಟ್ಯಾಕ್ಸಿಗೆ ಕರ್ನಾಟಕ ಹೈಕೋರ್ಟ್​​ ಗ್ರೀನ್​​ ಸಿಗ್ನಲ್​​ ನೀಡಿರುವ ಹಿನ್ನೆಲೆ ಅದನ್ನೇ ನಂಬಿ ಜೀವನ ನಡೆಸುತ್ತಿದ್ದವರು ಕೇಕ್​​ ಕತ್ತರಿಸಿ ಸಂಭ್ರಮಿಸಿದ್ದಾರೆ. ನಮ್ಮ ಹೋರಾಕ್ಕೆ ಫಲ ಸಿಕ್ಕಿದೆ, ಕೋರ್ಟ್​​ ಹೇಳಿರುವಂತೆ ರೂಲ್ಸ್​​ ಫ್ರೇಮ್​​ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಬೇಕಿದೆ. ಬೈಕ್​​ ಟ್ಯಾಕ್ಸಿ ವಿಚಾರವಾಗಿ ಈ ಹಿಂದೆ ರಾಹುಲ್​​ ಗಾಂಧಿ ಅವರನ್ನು ಭೇಟಿ ಮಾಡಿದ್ದೆವು. ಆ ವೇಳೆ ಅಗತ್ಯ ಪ್ರಯತ್ನ ಮಾಡೋದಾಗಿ ಅವರು ಹೇಳಿದ್ದರು. ಅದರಂತೆ ಈಗ ನಮ್ಮ ಪರ ತೀರ್ಪು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವೈಟ್​​ ನಂಬರ್​​ ಪ್ಲೇಟ್​​ನಲ್ಲೇ ಬೈಕ್​​ ಟ್ಯಾಕ್ಸಿ ಸೇವೆ ಮುಂದುವರಿಯಬೇಕು, ಟ್ಯಾಕ್ಸ್​​ ಪಾವತಿಸಲು ನಾವು ರೆಡಿ ಇದ್ದೇವೆ. 15 ರಾಜ್ಯಗಳಲ್ಲಿ ವೈಟ್​​ ಪ್ಲೇಟ್​​ ಬೈಕ್​ ಟ್ಯಾಕ್ಸಿಗಳಿಗೆ ಈಗಾಲೇ ಅನುಮತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಸಾರಿಗೆ ಸಚಿವರಿಗೆ, ಕೋರ್ಟ್​​ಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Best Investments: ಚಿನ್ನ, ಬೆಳ್ಳಿ ಮತ್ತು ಷೇರು- ಹೂಡಿಕೆಗೆ ಈ ಮೂರರಲ್ಲಿ ಯಾವುದು ಉತ್ತಮ? – Kannada News | Gold, Silver and Sensex, Rudra Murthy explains investment strategy in a podcast with TV9 Kannada

ಬೆಂಗಳೂರು, ಜನವರಿ 23: ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ಸ್ ಸಿಗುತ್ತದೆ? ಚಿನ್ನವೋ, ಬೆಳ್ಳಿಯೋ ಅಥವಾ ಷೇರುಗಳೋ ಎಂದು ಯಾರಾದರೂ ಕೇಳಿದರೆ ಏನು ಹೇಳಬಹುದು? ಕಳೆದ ಒಂದು ವರ್ಷದಿಂದ ಮಾತ್ರವೇ ಮಾರುಕಟ್ಟೆಯನ್ನು ಗಮನಿಸುತ್ತಿರುವವರು ಯಾರಾದರೂ ಇದ್ದರೆ ಅವರು ಥಟ್ಟನೆ ಹೇಳುವ ಹೆಸರು ಬೆಳ್ಳಿ ಅಥವಾ ಚಿನ್ನ. ಆದರೆ, ದೀರ್ಘಾವಧಿಯಲ್ಲಿ, ಅಂದರೆ ಐದಾರು ದಶಕಗಳಿಂದ ಮಾರುಕಟ್ಟೆಗಳಲ್ಲಿ ಇನ್ವೆಸ್ಟ್​ಮೆಂಟ್ ಮಾಡುತ್ತಿರುವವರನ್ನು ಕೇಳಿದಾಗ ಷೇರುಪೇಟೆಯ ಹೆಸರು ಸೂಚಿಸುತ್ತಾರೆ. ಟಿವಿ9 ಪಾಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಹೂಡಿಕೆ ತಜ್ಞ ರುದ್ರಮೂರ್ತಿ (Rudra Murthy) ಅವರು ಅಂಕಿ ಅಂಶ ಸಮೇತ ಯಾವ್ಯಾವ ಹೂಡಿಕೆಗೆ ಎಷ್ಟು ರಿಟರ್ನ್ ಬಂದಿದೆ ಎಂಬುದರ ಮಾಹಿತಿ ನೀಡಿದ್ದಾರೆ.

1986ರಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ 100 ಅಂಕಗಳೊಂದಿಗೆ ಆರಂಭವಾಯಿತು. ಇವತ್ತು ಅದು 88,000 ಅಂಕಗಳನ್ನು ದಾಟಿದೆ. ಈ 40 ವರ್ಷದಲ್ಲಿ ಅದು ಕೊಟ್ಟಿರುವ ರಿಟರ್ನ್ ಶೇ. 82,000. ಇದೇ ವೇಳೆ, ಚಿನ್ನದ ಬೆಲೆ 1986ರಲ್ಲಿ 10 ಗ್ರಾಮ್​ಗೆ 2,150 ರೂ ಇತ್ತು. ಇವತ್ತು ಅದು 1,50,000 ರೂ ದಾಟಿದೆ. ಬೆಳ್ಳಿ 1986ರಲ್ಲಿ ಒಂದು ಕಿಲೋಗೆ 4,000 ರೂ ಇತ್ತು. ಇವತ್ತು ಅದರ ಬೆಲೆ 3.60 ಲಕ್ಷ ರೂ ಆಗಿದೆ. ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಶೇ. 7,000 ಮತ್ತು ಶೇ. 8,000 ರಿಟರ್ನ್ಸ್ ಕೊಟ್ಟಿವೆ. ಅಂದರೆ ಚಿನ್ನ ಮತ್ತು ಬೆಳ್ಳಿ ಕೊಟ್ಟಿರುವುದಕ್ಕಿಂತ ಸೆನ್ಸೆಕ್ಸ್ ಹತ್ತು ಪಟ್ಟು ಹೆಚ್ಚು ಲಾಭ ಕೊಟ್ಟಿದೆ ಎನ್ನುವ ಅಂಶವನ್ನು ರುದ್ರಮೂರ್ತಿ ತಿಳಿಸಿದ್ದಾರೆ.

ಹೂಡಿಕೆ ಮಾಡಬೇಕೆನ್ನುವವರು ದೀರ್ಘಾವಧಿಯಲ್ಲಿ ಯಾವ ಸರಕು ಎಷ್ಟು ಉತ್ತಮ ಸಾಧನೆ ತೋರಿದೆ ಎಂಬುದನ್ನು ಗಮನಿಸಿ ಹೂಡಿಕೆ ಮಾಡಬೇಕು ಎಂಬುದು ರುದ್ರ ಮೂರ್ತಿ ಅವರ ಸಲಹೆ.

ಇದನ್ನೂ ಓದಿ: Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 5,400 ರೂ ಏರಿಕೆ

ಚಿನ್ನ, ಬೆಳ್ಳಿ ಬೆಲೆ ಏರಲು ಏನು ಕಾರಣ?

ರುದ್ರಮೂರ್ತಿ ಅವರ ಪ್ರಕಾರ ಚಿನ್ನದ ಬೆಲೆ ಏರಲು ಪ್ರಮುಖ ಕಾರಣಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ನೀತಿ ಒಂದು. ಜಾಗತಿಕ ಅನಿಶ್ಚಿತ ಸ್ಥಿತಿ ಮತ್ತೊಂದು ಕಾರಣ. ಸೆಂಟ್ರಲ್ ಬ್ಯಾಂಕುಗಳು ಹೆಚ್ಚೆಚ್ಚು ಚಿನ್ನ ಖರೀದಿಸುತ್ತಿರುವುದೂ ಮಗದೊಂದು ಕಾರಣ.

ಬೆಳ್ಳಿ ಬೆಲೆ ಇನ್ನೂ ಹೆಚ್ಚಿನ ವೇಗದಲ್ಲಿ ಏರಲು ಕಾರಣ ಎಂದರೆ ಅದರ ಕೈಗಾರಿಕೆ ಬಳಕೆ. ಎಐ ಪೋಷಿಸಲು ಬೇಕಾದ ಸರ್ವರ್, ಇವಿ ವಾಹನ, ಸೋಲಾರ್ ಪ್ಯಾನಲ್ ಇತ್ಯಾದಿಗಳ ತಯಾರಿಕೆಗೆ ಸಿಲ್ವರ್ ಅಗತ್ಯ. ಹೀಗಾಗಿ, ಬೆಳ್ಳಿ ಬೆಲೆ ಒಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ ರುದ್ರಮೂರ್ತಿ.

ದೇಶದ ಜಿಡಿಪಿಗಿಂತ ಹೆಚ್ಚಿನ ಮೌಲ್ಯದ ಚಿನ್ನ ಹೊಂದಿದ್ದಾರೆ ಸಾಮಾನ್ಯ ಜನರು

ರುದ್ರಮೂರ್ತಿ ಮತ್ತೊಂದು ಕುತೂಹಲಕಾರಿ ಅಂಶವನ್ನು ಎತ್ತಿ ತೋರಿಸಿದ್ದಾರೆ. ಭಾರತದ ಸೆಂಟ್ರಲ್ ಬ್ಯಾಂಕ್ ಆದ ಆರ್​ಬಿಐ ಬಳಿ 880 ಟನ್ ಚಿನ್ನ ಇದೆ. ಆದರೆ, ಸಾಮಾನ್ಯ ಭಾರತೀಯ ಜನರ ಬಳಿ 34,500 ಟನ್ ಚಿನ್ನ ಇದೆ. ಇದನ್ನು ಇವತ್ತಿನ ಬೆಲೆಗೆ ಹೋಲಿಸಿದರೆ ಇವುಗಳ ಒಟ್ಟು ಮೌಲ್ಯ 5.7 ಟ್ರಿಲಿಯನ್ ಡಾಲರ್ ಆಗುತ್ತದೆ. ಭಾರತದ ಷೇರು ಮಾರುಕಟ್ಟೆಯ ಒಟ್ಟು ಗಾತ್ರ ಸುಮಾರು 4 ಟ್ರಿಲಿಯನ್ ಡಾಲರ್​ಗಿಂತ ತುಸು ಹೆಚ್ಚಿರಬಹುದು. ಜನರ ಬಳಿ ಇದಕ್ಕೂ ಹೆಚ್ಚಿನ ಮೌಲ್ಯದ ಚಿನ್ನ ಇದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಗೆ 11 ವರ್ಷ; ಈವರೆಗೆ ಶುರುವಾಗಿದ್ದು ನಾಲ್ಕೂವರೆ ಕೋಟಿ ಅಕೌಂಟ್; ಸ್ಕೀಮ್ ಲಾಭಗಳೇನು?

ಕಾಪರ್, ಅಲೂಮಿನಿಯಮ್ ಮೇಲೆ ಹೂಡಿಕೆ ಮಾಡಬಹುದಾ?

ಕಾಪರ್ ಮತ್ತು ಅಲೂಮಿಯಮ್​ಗಳು ಭವಿಷ್ಯದ ಬೆಳ್ಳಿ ಎಂದು ರುದ್ರಮೂರ್ತಿ ಬಣ್ಣಿಸುತ್ತಾರೆ. ಚಿನ್ನ ಮತ್ತು ಸಿಲ್ವರ್​ಗಳಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಬಹುದು. ಆದರೆ, ಕಾಪರ್ ಮತ್ತು ಅಲೂಮಿನಿಯಮ್​ಗೆ ಇಟಿಎಫ್​ಗಳಿಲ್ಲ. ತಾಮ್ರದ ಮೇಲೆ ಹೂಡಿಕೆ ಮಾಡಬೇಕೆನ್ನುವವರು ಹಿಂದೂಸ್ತಾನ್ ಕಾಪರ್ ಎನ್ನುವ ತಾಮ್ರ ತಯಾರಕ ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಬಹುದು. ನಾಲ್ಕೋ, ಹಿಂಡಾಲ್ಕೋ ಇತ್ಯಾದಿ ಅಲೂಮಿನಿಯಂ ತಯಾರಕ ಕಂಪನಿಗಳ ಷೇರುಗಳ ಮೇಲೆ ಬೇಕಾದರೆ ಹೂಡಿಕೆ ಮಾಡಬಹುದು. ಅಥವಾ ನಿಫ್ಟಿ ಮೆಟಲ್ ಇಂಡೆಕ್ಸ್​ನಲ್ಲಿ ಹೂಡಿಕೆ ಮಾಡಬಹುದು ಎಂದು ರುದ್ರ ಮೂರ್ತಿ ಅವರು ಟಿವಿ9 ಪಾಡ್​ಕ್ಯಾಸ್ಟ್​ನಲ್ಲಿ ಸಲಹೆ ಕೊಡುತ್ತಾರೆ.

ಮಾಲತೇಶ್ ಅವರೊಂದಿಗಿನ ಪಾಡ್​ಕ್ಯಾಸ್ಟ್​ನ ವಿಡಿಯೋ ಲಿಂಕ್ ಇಲ್ಲಿದೆ:

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಇಂದಿರಾ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಟೈಟಲ್ ಬಗ್ಗೆ ಸ್ಪಷ್ಟನೆ ನೀಡಿದ ಚಿತ್ರತಂಡ – Kannada News | New Kannada movie titled Indira But not a political film

ಇಂದಿನ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ‘ಇಂದಿರಾ’ ಸಿನಿಮಾ (Indira Movie) ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಜೆನ್ ಜೀ (Gen Z) ಜೀವನ ಶೈಲಿಯ ಕುರಿತ ಕಥೆ ಇರಲಿದೆ. ಈ ತಲೆಮಾರಿನ ಯುವಕರ ಅಂಗೈಯಲ್ಲಿ ಯಾವಾಗಲೂ ಸ್ಮಾರ್ಟ್‌ ಪೋನ್‌ ಇರುತ್ತದೆ. ಈ ತಂತ್ರಜ್ಞಾನವನ್ನು ಹೇಗೆಲ್ಲ ಬಳಸಿಕೊಳ್ಳಲಾಗುತ್ತಿದೆ? ಹೇಗೆಲ್ಲ ಬಳಸಿಕೊಳ್ಳಬಹುದು ಎಂಬ ಕಥೆಯನ್ನು ‘ಇಂದಿರಾ’ ಸಿನಿಮಾ ಮೂಲಕ ಹೇಳಲಾಗುವುದು. ಈ ಹಿಂದೆ ‘ರಾವೆನ್‌’ ಸಿನಿಮಾ ನಿರ್ದೇಶಿಸಿದ್ದ ವೇದ್‌ ಅವರು ಈಗ ‘ಇಂದಿರಾ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

‘ಕಿರಣ್‌ ಫಿಲ್ಮ್ಸ್’ ಮೂಲಕ ಕಿರಣ್‌ ಕುಮಾರ್‌ ಎಂ. ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಟೈಟಲ್ ಬಗ್ಗೆ ಅವರು ಸ್ಪಷ್ಟನೆ ನೀಡಿದರು. ‘ಇಂದಿರಾ ಎಂಬ ಶೀರ್ಷಿಕೆ ಇದ್ದರೂ ಕೂಡ ಈ ಸಿನಿಮಾಕ್ಕೂ ಇಂದಿರಾ ಗಾಂಧಿಯವರಿಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯ ಕಥೆಯಾಧಾರಿತ ಸಿನಿಮಾವಲ್ಲ. ಆದರೆ ಸಿನಿಮಾದ ಕಥೆಯಲ್ಲಿ ಇಂದಿನ ಹಲವು ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಸಿನಿಮಾದ ಕಥೆಗೆ ತಕ್ಕಂತೆ ಪವರ್‌ಫುಲ್‌ ಟೈಟಲ್‌ ಇರಬೇಕೆಂಬ ಕಾರಣಕ್ಕೆ ಈ ಹೆಸರಿಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಇಂದಿನ ಜೆನ್‌ ಜೀ ಪ್ರೇಕ್ಷಕರಿಗೆ ಕನೆಕ್ಟ್‌ ಆಗುವ ಸಿನಿಮಾ ಇದಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ಸಿನಿಮಾ ನಿರ್ಮಿಸುತ್ತಿದ್ದೇವೆ. ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ. ಈಗಾಗಲೇ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೇ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದ್ದೇವೆ’ ಎಂದು ನಿರ್ಮಾಪಕರು ಹೇಳಿದರು.

‘ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ಹಾಗಾಗಿ ಸಿನಿಮಾಕ್ಕೆ ಇಂದಿರಾ ಎಂದು ಹೆಸರಿಟ್ಟಿದ್ದೇವೆ. ಈ ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ಕೂಡ ಇರಲಿದೆ’ ಎಂದು ನಿರ್ದೇಶಕ ವೇದ್‌ ಅವರು ಹೇಳಿದ್ದಾರೆ. ರವಿವರ್ಮ ಅವರು ಛಾಯಾಗ್ರಹಣ ಹಾಗೂ ಧನುಶ್‌ ಅವರು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ‘ಮಾರ್ಕ್‌’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ

‘ಇಂದಿರಾ’ ಸಿನಿಮಾದ ಮುಖ್ಯ ಪಾತ್ರಕ್ಕೆ ಕನ್ನಡದ ಜನಪ್ರಿಯ ನಟಿಯೊಬ್ಬರನ್ನು ಕರೆತರುವ ಪ್ಲ್ಯಾನ್ ಚಿತ್ರತಂಡಕ್ಕೆ ಇದೆ. ಅದು ಯಾರು ಎಂಬುದು ನಂತರದ ದಿನಗಳಲ್ಲಿ ತಿಳಿಯಲಿದೆ. ಮಾರ್ಚ್‌ ತಿಂಗಳ ಕೊನೆಯೊಳಗೆ ಕಲಾವಿದರು ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸಿ, ಶೂಟಿಂಗ್ ಆರಂಭಿಸಲಾಗುವುದು. ಟೈಟಲ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾ.ಮ. ಹರೀಶ್‌, ಟಿ.ಪಿ. ಸಿದ್ಧರಾಜು, ನಿತ್ಯಾನಂದ ಪ್ರಭು, ಭಾ.ಮ. ಗಿರೀಶ್‌, ದೇವ್ ದೇವಯ್ಯ ಮುಂತಾದವರು ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್​​​ ಹೋಗಬಹುದು!: KSTDC ವಿಶೇಷ ಪ್ಯಾಕೇಜ್ – Kannada News | Escape City Rush: Affordable KSTDC One Day Trip to Bangalore Rural Temples and Forts

ನಾಳೆಯಿಂದ ಸಾಲು ಸಾಲು ರಜೆಗಳು ಇದೆ. ಈ ರಜೆಯಲ್ಲಿ ಎಲ್ಲಿಗೆ ಹೋಗುವುದು ಎಂಬ ಯೋಚನೆ ಇರಬಹುದು. ಇನ್ನು ಕೆಲವರಿಗೆ ತಿಂಗಳ ಕೊನೆ, ಈ ಕೈಯಲ್ಲಿ ಕಾಸು ಇರಲ್ಲ, ಅದರೂ ಚಿಕ್ಕದಾಗಿ ಟೂರ್​​​ ಪ್ಯಾನ್​​ ಮಾಡಬೇಕೆಂದು ಅದುಕೊಂಡಿದ್ದಾರೆ. ನಿಮಗೆ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಈ ಪ್ಯಾಕೇಜ್​​ ಉತ್ತಮ. ಒಂದೇ ದಿನದಲ್ಲಿ ಇಷ್ಟು ಸ್ಥಳಗಳನ್ನು ನೋಡಬಹುದು. ಈ ಒಂದು ದಿನ ಪ್ಲಾನ್​​ ಮಾಡಿಕೊಂಡಿದ್ದರೆ,ಗಣರಾಜ್ಯೋತ್ಸವದ ದಿನ ಉತ್ತಮ. ಕಡಿಮೆ ದರದಲ್ಲಿ ಈ ಟೂರ್​​ಗೆ ಹೋಗಿ ಬರುಬಹುದು. ಬೆಳಿಗ್ಗೆ 7 ಗಂಟೆಗೆ ಹೊರಟ್ರೆ, 6 ಗಂಟೆ ಮತ್ತೆ ಮನೆಗೆ ಬರಬಹುದು. ಇದೊಂದು ವಿಶೇಷ ಪ್ಯಾಕೇಜ್​​​ನ್ನು kstdc ಘೋಷಣೆ ಮಾಡಿದೆ. ಒಂದು ದಿನದಲ್ಲಿ ಎಲ್ಲ ಕಡೆ ಸುತ್ತಿ ಬರಬಹುದು. ಜತೆಗೆ ಎಲ್ಲ ವ್ಯವಸ್ಥೆಗಳನ್ನು ಕೂಡ ಈ ಪ್ಯಾಕೇಜ್​​ನನಲ್ಲಿದೆ.

ದೇವನಹಳ್ಳಿ ಕೋಟೆ, ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ, ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ, ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನಗಳನ್ನು ಒಳಗೊಂಡ ಬೆಂಗಳೂರಿನಲ್ಲಿ ಒಂದು ದಿನದ ಗ್ರಾಮೀಣ ಪ್ರವಾಸವನ್ನು ಮಾಡಬಹುದು. ಈ ಮೂಲಕ ನಗರದ ಗದ್ದಲದಿಂದ ದೂರವಾಗಿ, ಪ್ರಕೃತಿ ಮತ್ತು ಆಧ್ಯಾತ್ಮದ ಅನುಭವ ಪಡೆಯಲು ಬಯಸುವವರಿಗೆ ಬೆಂಗಳೂರಿನ ಸುತ್ತಮುತ್ತ ಒಂದು ದಿನದ ಗ್ರಾಮೀಣ ಪ್ರವಾಸ ಅತ್ಯುತ್ತಮ ಆಯ್ಕೆ. ದೇವನಹಳ್ಳಿ ಕೋಟೆಯಿಂದ ಆರಂಭಿಸಿ ಶಿವಗಂಗೆ ಬೆಟ್ಟದವರೆಗೆ ಸಾಗುವ ಈ ಪ್ರವಾಸದಲ್ಲಿ ಇತಿಹಾಸ, ಧಾರ್ಮಿಕ ಮಹತ್ವ ಮತ್ತು ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಅನುಭವಿಸಬಹುದು.

ಪ್ರವಾಸ ಹೋಗುವ ಸ್ಥಳ ಹಾಗೂ ಸಮಯ:

ಬೆಳಿಗ್ಗೆ 7.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನ

ಬೆಳಿಗ್ಗೆ 8.30 – 9.15 ದೇವನಹಳ್ಳಿ ಕೋಟೆಗೆ ಭೇಟಿ ನೀಡಿ

ಬೆಳಿಗ್ಗೆ 10.00 – ಬೆಳಿಗ್ಗೆ 11.00 ಘಾಟಿ ಸುಬ್ರಮಣ್ಯ ದೇವಸ್ಥಾನ

ಬೆಳಿಗ್ಗೆ 11.45 – ಮಧ್ಯಾಹ್ನ 1.00 ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ

ಮಧ್ಯಾಹ್ನ 1.30 – 2.00 ಮಧ್ಯಾಹ್ನದ ಊಟ

ಮಧ್ಯಾಹ್ನ 2.30 – ಸಂಜೆ 4.30 ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನ

ಸಂಜೆ 6.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ ಹಿಂತಿರುಗಿ

ಪ್ರವಾಸದ ಪ್ಯಾಕೇಜ್​​ : 830

ಇದನ್ನೂ ಓದಿ: ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್

ದೇವನಹಳ್ಳಿ ಕೋಟೆ: ಬೆಂಗಳೂರು ನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ದೇವನಹಳ್ಳಿ ಕೋಟೆ, ಟಿಪ್ಪು ಸುಲ್ತಾನ್ ಅವರ ಜನ್ಮಸ್ಥಳವಾಗಿ ಪ್ರಸಿದ್ಧ. ಪ್ರಾಚೀನ ವಾಸ್ತುಶಿಲ್ಪ ಮತ್ತು ಇತಿಹಾಸ ಪ್ರೇಮಿಗಳಿಗೆ ಇದು ಆಕರ್ಷಕ ತಾಣ.

ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ: ದೇವನಹಳ್ಳಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಘಟ್ಟಿ ಸುಬ್ರಹ್ಮಣ್ಯ ದೇವಸ್ಥಾನ, ಕಾರ್ತಿಕೇಯ ಮತ್ತು ನರಸಿಂಹ ಸ್ವಾಮಿಯ ಅಪರೂಪದ ಮೂರ್ತಿ ಇಲ್ಲಿದೆ. ಹಾವು ದೋಷ ನಿವಾರಣೆ ಇದು ಪ್ರಸಿದ್ಧ.

ಚಿಕ್ಕ ಮಧುರೈ (ಚಿಕ್ಕಮಧುರೇಶ್ವರ ದೇವಸ್ಥಾನ): ಭಕ್ತರಿಗೆ ಅತ್ಯಂತ ಪವಿತ್ರವೆನಿಸಿರುವ ಚಿಕ್ಕ ಮಧುರೈ, ಮಧುರೈ ಮೀನಾಕ್ಷಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಿತ ದೇವಾಲಯ.

ಶನಿಮಹಾತ್ಮ ಸ್ವಾಮಿ ದೇವಸ್ಥಾನ: ಶನಿ ದೋಷ ನಿವಾರಣೆಗೆ ಪ್ರಸಿದ್ಧವಾದ ಈ ದೇವಸ್ಥಾನ ಗ್ರಾಮೀಣ ಭಕ್ತರಲ್ಲಿ ವಿಶೇಷ ನಂಬಿಕೆ ಹೊಂದಿದೆ.

ಶಿವಗಂಗೆ ಬೆಟ್ಟ: ಶಿವಗಂಗೆ, ಧಾರ್ಮಿಕ ಮತ್ತು ಟ್ರೆಕ್ಕಿಂಗ್ ಪ್ರಿಯರಿಗೆ ಜನಪ್ರಿಯ ತಾಣ. ಬೆಟ್ಟದ ಮೇಲಿನಿಂದ ಕಾಣುವ ನೈಸರ್ಗಿಕ ದೃಶ್ಯ ಮನಸ್ಸಿಗೆ ಶಾಂತಿ ನೀಡುತ್ತದೆ.

ಹೊನ್ನಾದೇವಿ ದೇವಸ್ಥಾನ: ಗ್ರಾಮೀಣ ನಂಬಿಕೆ ಮತ್ತು ಶಕ್ತಿದೇವತೆ ಆರಾಧನೆಗೆ ಪ್ರಸಿದ್ಧವಾದ ಹೊನ್ನಾದೇವಿ ದೇವಸ್ಥಾನ, ಪ್ರವಾಸಕ್ಕೆ ಶಾಂತ ಅಂತ್ಯ ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Source link

ಹುಬ್ಬಳ್ಳಿಯ ಮಾಲ್​ನಲ್ಲಿ ಅಗ್ನಿ ಅವಘಡ: ಅಕ್ಕಪಕ್ಕದ ಮನೆಗೂ ತಗುಲಿದೆ ಕಿಡಿ; ವೃದ್ಧ ದಂಪತಿ ಬಚಾವ್ – Kannada News | Hubballi Sukhasagara Mall Fire: Short Circuit Causes Lakhs in Damage

ಹುಬ್ಬಳ್ಳಿ, ಜನವರಿ 23: ಅದು ನಗರದ ಪ್ರಮುಖ ವ್ಯಾಪಾರ ಏರಿಯಾ. ಆದರೆ ರಾತ್ರಿ ಸಮಯದಲ್ಲಿ ನಾಲ್ಕು ಅಂತಸ್ತಿನ ಮಾಲ್​ನಲ್ಲಿ (Mall) ಹೊತ್ತಿಕೊಂಡ ಬೆಂಕಿ (Fire) ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು. ಮಾಲ್​ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದ್ದರೆ, ಮತ್ತೊಂದೆಡೆ ಸುತ್ತಮುತ್ತಲಿನ ವಸತಿ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಲು ಆರಂಭಿಸಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

ನಡೆದದ್ದೇನು?

ಮರಾಠ ಗಲ್ಲಿಯಲ್ಲಿರುವ ಸುಪ್ರಸಿದ್ಧ ಸುಖಸಾಗರ ಮಾಲ್​ನಲ್ಲಿ ಕಳೆದ ರಾತ್ರಿ 12 ಗಂಟೆ ಸಮಯಕ್ಕೆ ಅಗ್ನಿ ಅವಘಡ ಸಂಭವಿಸಿದೆ. ಮೊದಲಿಗೆ ವಿದ್ಯುತ್ ಹೋಗಿತ್ತಂತೆ, ಮತ್ತೆ ವಿದ್ಯುತ್​​ ಬರುತ್ತಿದ್ದಂತೆ ಮಾಲ್​ನ 4ನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಮಾಲ್​ಗೆ ಬೆಂಕಿ ಆವರಿಸಿಕೊಳ್ಳಲು ಆರಂಭವಾಗಿತ್ತು. ನಾಲ್ಕನೆ ಮಹಡಿಯಲ್ಲಿ ಪಾದರಕ್ಷೆಗಳು, ಬಟ್ಟೆ ಸೇರಿದಂತೆ ಅನೇಕ  ಮಳಿಗೆಗಳು ಇದಿದ್ದರಿಂದ ಬೆಂಕಿ ತೀವ್ರವಾಗಿ ಹೊತ್ತಿಕೊಂಡಿತ್ತು. ಅದು ಮೂರನೇ ಮಹಡಿ ಮತ್ತು ಸುತ್ತಮುತ್ತಲಿನ ಕಟ್ಟಡಕ್ಕ ಕೂಡ ವ್ಯಾಪಿಸಲು ಆರಂಭವಾಗಿತ್ತು.

ಇದನ್ನೂ ಓದಿ: ಕೆಆರ್ ಪುರಂ ಬಳಿ ಬೈಕ್ ಶೋರೂಮ್‌ನಲ್ಲಿ ಅಗ್ನಿ ಅವಘಡ: 13 ಎಲೆಕ್ಟ್ರಿಕ್ ಬೈಕ್‌ಗಳು ಭಸ್ಮ

ಜೋರಾದ ಸದ್ದು ಹಾಗೂ ಬೆಂಕಿ ಹೊತ್ತುಕೊಂಡ ಬಗ್ಗೆ ಗೊತ್ತಾಗುತ್ತಿದ್ದಂತೆ ಮಾಲ್​ನಲ್ಲಿದ್ದ ಶೆಕ್ಯೂರಿಟಿ ಗಾರ್ಡ್ ಹೊರಗೆ ಓಡಿ ಬಂದಿದ್ದ. ಅನೇಕರಿಗೆ ಮಾಹಿತಿ ನೀಡಿದ್ದ. ಕೂಡಲೇ ಸ್ಥಳೀಯರು ಮಾಲ್​ನಲ್ಲಿದ್ದ ಶೆಕ್ಯೂರಿಟಿ ಸೋಮಶೇಖರ್ ಮತ್ತು ಆತನ ಪತ್ನಿ ವೀರುಬಾಯಿಯನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಿದ್ದರು. ಅಗ್ನಿಶಾಮಕ ಸಿಬ್ಬಂದಿ ಕೂಡ ಆಗಮಿಸಿದ್ದರು. 12 ಗಂಟೆಗೆ ಹೊತ್ತಿಕೊಂಡ ಬೆಂಕಿಯನ್ನು ಸರಿಸುಮಾರು ನಸುಕಿನ ಜಾವ 4 ಗಂಟೆವರಗೆ ಕಾರ್ಯಾಚರಣೆ ನಡೆಸಿ ನಂದಿಸಲಾಗಿದೆ.

ಮಾಲ್ ಸುತ್ತಮುತ್ತ ಅನೇಕ ವಸತಿ ಕಟ್ಟಡಗಳಿದ್ದು ಅಲ್ಲಿಗೂ ಕೂಡ ಬೆಂಕಿ ಆವರಿಸಲು ಆರಂಭವಾಗಿತ್ತು. ಹೀಗಾಗಿ ಮನೆಯಲ್ಲಿದ್ದವರು ನಿದ್ರೆ ಮಂಪರಿನಿಂದ ಓಡೋಡಿ ಹೊರಗೆ ಬಂದಿದ್ದರು. ಆದರೆ ಬೆಂಕಿ ಸುತ್ತಮುತ್ತಲಿನ ಕಟ್ಟಡಕ್ಕೆ ವ್ಯಾಪಿಸುವ ಮುನ್ನವೇ ಅಗ್ನಿಶಾಮಕ ಸಿಬ್ಬಂದಿ ಜಾಗೃತಿ ವಹಿಸಿ ಬೆಂಕಿ ನಂದಿಸಿದ್ದು, ದೊಡ್ಡಮಟ್ಟದ ಅವಘಡವೊಂದು ತಪ್ಪಿದಂತಾಗಿದೆ.

ತಪ್ಪಿದ ಭಾರೀ ಅನಾಹುತ

ಇನ್ನು ಈ ಮಾಲ್​ನಲ್ಲಿ ಸರಿಸುಮಾರು 250ಕ್ಕೂ ಹೆಚ್ಚು ಬಟ್ಟೆ, ಪಾದರಕ್ಷೆ ಮತ್ತು ಕಾಸ್ಮೆಟಿಕ್ ಅಂಗಡಿಗಳಿವೆ. ಮೊದಲನೇ ಮತ್ತು ಎರಡನೇ ಮಹಡಿಯಲ್ಲಿಯೇ ಹೆಚ್ಚು ಅಂಗಡಿಗಳಿವೆ. ಒಂದು ವೇಳೆ ಅಲ್ಲಿಗೂ ಬೆಂಕಿ ಆವರಿಸಿದ್ದರೆ ದೊಡ್ಡ ಮಟ್ಟದ ಅಪಾಯವಾಗುವ ಸಾಧ್ಯತೆಯಿತ್ತು. ಈ ಕಟ್ಟಡದಲ್ಲಿ ಅಗ್ನಿ ಅವಘಡವಾಗ್ತಿರೋದು ಇದೇ ಮೊದಲೇನಲ್ಲವಂತೆ. ಈ ಹಿಂದೆ ಕೂಡ ಎರಡು ಬಾರಿ ಅಗ್ನಿ ಅವಘಡವಾಗಿತ್ತಂತೆ. ಹೀಗಿದ್ದರೂ ಮಾಲ್ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಜೊತೆಗೆ ನಾಲ್ಕನೇ ಮಹಡಿಯಲ್ಲಿ ಬೇಕಾಬಿಟ್ಟಿ ವಸ್ತುಗಳನ್ನು ಸಂಗ್ರಹಿಸಿದ್ದರಿಂದ ಹೊತ್ತಿಯುರಿದಿದೆ.

ಇದನ್ನೂ ಓದಿ: ಬೆಂಗಳೂರು: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು

ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಮಟ್ಟದ ಅಗ್ನಿ ಅವಘಡ ತಪ್ಪಿದೆ. ಆದರೆ ಇದೇ ಮಾಲ್​ನಲ್ಲಿ ವ್ಯಾಪಾರ ನಡೆಸುತ್ತಿರುವ ಅನೇಕ ಕುಟುಂಬಗಳು ಅಗ್ನಿ ಅವಘಡದಿಂದ ಕಂಗಾಲಾಗಿದ್ದು, ಮಾಲ್ ರಿಪೇರಿ ಆಗೋವರಗೆ ಉದ್ಯೋಗವಿಲ್ಲದೇ ಪರದಾಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹಿಳಾಧಿಕಾರಿಗೆ ಧಮ್ಕಿ: ಕಾಂಗ್ರೆಸ್ ನಾಯಕನಿಗೆ ಶಾಕ್ ಮೇಲೆ ಶಾಕ್, ಕೋರ್ಟ್​​ ಬಳಿಕ ಪಕ್ಷದಿಂದ ಶಾಸ್ತಿ – Kannada News | Threatening Sidlaghatta CMC commissioner: Congress Suspends Rajeev Gowda From Party

ಬೆಂಗಳೂರು/ಚಿಕ್ಕಬಳ್ಳಾಪುರ, (ಜನವರಿ 23): ಶಿಡ್ಲಘಟ್ಟ ನಗರಸಭೆ ಪಾರಾಯುಕ್ತೆ ಅಮೃತಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನನ್ನು  (Rajeev Gowda)  ಕಾಂಗ್ರೆಸ್​​ (Congress) ಪಕ್ಷದಿಂದ ಅಮಾನತು ಮಾಡಿದೆ. ಇಂದು (ಜನವರಿ 23) ನಡೆದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜೀವ್ ಗೌಡ ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಬಂದಿರುವ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಪ್ರಕರಣದ ಗಂಭೀರತೆ ಮನವರಿಕೆಯಾದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜೀವ್ ಗೌಡ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಖಡಕ್ ಮಾತು

ಈ ಬಗ್ಗೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಮಾತನಾಡಿದ್ದು, ಜನವರಿ 12ರಂದು ಸಂಜೆ ನಡೆದ ದೂರವಾಣಿ ಸಂಭಾಷಣೆಯಿಂದ ಅಧಿಕಾರಿಗಳಲ್ಲಿ ಆತಂಕ ಉಂಟಾಗಿತ್ತು. ಅವರು ದೂರು ಕೊಟ್ಟ ತಕ್ಷಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅವರ ಮೇಲೆ ದೂರು ಕೂಡ ದಾಖಲಾಗಿದೆ. ಈಗ ಉತ್ತರ ಕೊಡದ ಕಾರಣ ಪಕ್ಷದಿಂದ ಅಮಾನತು ಮಾಡಲಾಗಿದೆ. ಅಧಿಕಾರಿಗಳ ಗೌರವ ಉಳಿಸುವ ಕಾರ್ಯ ನಾವು ಮಾಡಿದ್ದೇವೆ. ಅವರು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸುವ ಕೆಲಸ ಆಗುತ್ತದೆ. ಮುನಿಯಪ್ಪ ಅವರಿಗೆ ಆತ್ಮೀಯತೆ ಇರಬಹುದು. ಆದ್ರೆ ಆಡಿಯೋ‌‌ ಕೇಳಿದ್ರೆ ನಾಗರಿಕ ಸಮಾಜ ಮೆಚ್ಚುವಂತದಲ್ಲ. ಆತ್ಮೀಯತೆ ಇದೆ ಎಂದರೆ ಅವರ ಪರವಾಗಿ ಮುನಿಯಪ್ಪ ಇದಾರೆ ಅಂತಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರು ಸೂಚನೆ ಕೊಟ್ಟಿದ್ದಾರೆ. ಕೂಡಲೇ ಅವರನ್ನು ಬಂಧಿಸುವ ಕೆಲಸ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬ್ಯಾನರ್ ವಿಚಾರಕ್ಕೆ ಮಹಿಳಾ ಅಧಿಕಾರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈದು ಧಮ್ಕಿ ಹಾಕಿದ್ದು, ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣ ಇಟ್ಟುಕೊಂಡು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಅಸ್ತ್ರವನ್ನಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಹೀಗಾಗಿ ಪಕ್ಷಕ್ಕೆ ಮಜುಗರವಾಗಿರುವುದಿರಂದ ಕಾಂಗ್ರೆಸ್ ಈ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಕೊಟ್ಟ ಹೈಕೋರ್ಟ್​​

ಅಮಾನತಿಗೆ ಶಿಫಾರಸ್ಸು ಮಾಡಿದ್ದ ಕಾರ್ಯಾಧ್ಯಕ್ಷ

ಪ್ರಕರಣ ನಡೆದ ಸಂಬಂಧ ಆರೋಪಿ ರಾಜೀವ್​ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದ್ರೆ, ನೋಟಿಸ್​​ಗೆ ಯಾವುದೇ ಉತ್ತರ, ಪ್ರತಿಕ್ರಿಯೆ ನೀಡಿರಲಿಲ್ಲ. ಇದರ ಬೆನ್ನಲ್ಲೇ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ನಿನ್ನೆ (ಜನವರಿ 22) ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸ್ಸು ಮಾಡಿದ್ದರು.

ರಾಜೀವ್ ಗೌಡ ಅವರ ನಡೆ ಮಾಧ್ಯಮಗಳಲ್ಲಿ ಪ್ರಚಾರಗೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಜ್ಯ ಮಟ್ಟದ ನಾಯಕರಿಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಅವರು ಶಿಸ್ತು ಸಮಿತಿಗೆ ಪತ್ರ ಬರೆದಿದ್ದರು. ‘ಪಕ್ಷದ ಘನತೆಗೆ ಧಕ್ಕೆ ತಂದಿರುವ ರಾಜೀವ್ ಗೌಡ ಅವರನ್ನು ತಕ್ಷಣವೇ ಪಕ್ಷದಿಂದ ಅಮಾನತುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಇಂದಿನ ಸಭೆಯಲ್ಲಿ ರಾಜೀವ್ ಗೌಡನನನ್ನು ಪಕ್ಷದಿಂದ ಸಸ್ಪೆಂಡ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಇದುವರೆಗೂ ರಾಜೀವ್ ಗೌಡನ ಬಂಧನವಾಗಿಲ್ಲ

ಬ್ಯಾನರ್ ತೆರವು ಮಾಡಿರುವ ಸಂಬಂಧ ರಾಜೀವ್ ಗೌಡ, ಶಿಡ್ಲಘಟ್ಟ ಮಹಿಳಾ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಅಮೃತಾ ಅವರು ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಪೊಲೀಸರು ಸಹ ಎಫ್​​ಐಆರ್ ದಾಖಲಿಸಿದ್ದಾರೆ. ಆದ್ರೆ, ಇದುವರೆಗೂ ರಾಜೀವ್ ಗೌಡನನ್ನು ಬಂಧಿಸಲು ಆಗಿಲ್ಲ. ಇನ್ನು ರಾಜೀವ್ ಗೌಡ ಎಲ್ಲಿದ್ದಾನೆ ಎನ್ನುವ ಸುಳಿವು ಸಹ ಸಿಕ್ಕಿಲ್ಲ. ಇನ್ನೊಂದೆಡೆ ಸಚಿವ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಬೇಕಂತಲೇ ರಾಜೀವ್ ಗೌಡನನ್ನು ಬಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಹೈಕೋರ್ಟ್​​​ನಲ್ಲೂ ಅರ್ಜಿ ವಜಾ

ಇನ್ನು ತಮ್ಮ ವಿರುದ್ಧದ ಪ್ರಕರಣ ರದ್ದುಕೋರಿ ಅಜ್ಞಾತ ಸ್ಥಳದಿಂದಲೇ ರಾಜೀವ್ ಗೌಡ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​​ ಸಹ ರಾಜೀವ್​​​​ ಗೌಡನನ್ನು ತರಾಟೆಗೆ ತೆಗೆದುಕೊಂಡು ಅರ್ಜಿ ವಜಾ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಿಲ್ಲಿಗೆ ದಪ್ಪನೆಯ ಚಿನ್ನದ ಚೈನ್ ಗಿಫ್ಟ್ ಕೊಟ್ಟ ಶರವಣ? – Kannada News | Big Boss Kannada 12: Gilli’s Gold Chain Gift from Sharavana – 20 Lakh Secret Revealed

ಗಿಲ್ಲಿಗೆ ಶರವಣ ಚಿನ್ನ ಹಾಕಿದ ಕ್ಷಣ (ಚಿತ್ರ: ಶ್ರೀಕಾಂತ್ ಗೌಡ)

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ ಆದ ಬಳಿಕ ಗಿಲ್ಲಿ ನಟನ (Gilli Nata) ಲಕ್ ಸಂಪೂರ್ಣವಾಗಿ ಬದಲಾಗಿದೆ. ಬಿಗ್ ಬಾಸ್​ನಿಂದ ಗೆಲುವು ಒಂದು ಕಡೆಯಾದರೆ, ಅವರಿಗೆ ಸಿಕ್ಕ ಜನಪ್ರಿಯತೆ ಮತ್ತೊಂದು ಕಡೆ. ಇದರ ಜೊತೆಗೆ ಧನಲಕ್ಷ್ಮೀ ಕೂಡ ಗಿಲ್ಲಿಯನ್ನು ಹುಡುಕಿ ಬರುತ್ತಿದೆ. ಹೀಗಿರುವಾಗಲೇ ಗಿಲ್ಲಿ ನಟನಿಗೆ ಶರವಣ ಅವರು ಗೋಲ್ಡ್ ಚೈನ್ ಗಿಫ್ಟ್ ಕೊಟ್ಟಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಸಂದರ್ಭದ ವಿಡಿಯೋನ ವೈರಲ್ ಆಗಿದ್ದು, ಗಮನ ಸೆಳೆಯುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ರನ್ನರ್ ಅಪ್​​ ರಕ್ಷಿತಾ ಶೆಟ್ಟಿಗೆ ಸಾಯಿ ಗೋಲ್ಡ್ ಪ್ಯಾಲೆಸ್​​​ ಮುಖ್ಯಸ್ಥ ಶರವಣ ಕಡೆಯಿಂದ 20 ಲಕ್ಷ ರೂಪಾಯಿ ವೋಚರ್ ನೀಡಲಾಗಿದೆ. ಸಾಯಿ ಗೋಲ್ಡ್ ಪ್ಯಾಲೆಸ್​​​ನಲ್ಲಿ 20 ಲಕ್ಷ ರೂಪಾಯಿವರೆಗೆ ಚಿನ್ನ ಖರೀದಿಸೋ ಅವಕಾಶ ಇದೆ. ವೇದಿಕೆಗೆ ಬಂದು ಅವರು ವೋಚರ್​​ನ ರಕ್ಷಿತಾಗೆ ನೀಡಿದ್ದರು.

ಶರವಣ ಅವರಿಗೆ ಗಿಲ್ಲಿ ಬಗ್ಗೆ ವಿಶೇಷ ಒಲವು ಇದೆ. ಫಿನಾಲೆಗೆ ತೆರಳುವುದಕ್ಕೂ ಮೊದಲು ಮಾತನಾಡಿದ್ದ ಶರವಣ ಅವರು, ‘ಗಿಲ್ಲಿನೇ ಗೆಲ್ತಾನೆ’ ಎಂದು ಭವಿಷ್ಯ ನುಡಿದಿದ್ದರು. ‘ಗಿಲ್ಲಿ ಗೆದ್ರೆ ನನ್ನ ಕಡೆಯಿಂ 20 ಲಕ್ಷ ರೂಪಾಯಿ ಕೊಡ್ತೀನಿ’ ಎಂದಿದ್ದರು. ಆದರೆ, ಬಿಗ್ ಬಾಸ್ ವೇದಿಕೆ ಮೇಲೆ ಅವರು ಈ ಹಣವನ್ನು ನೀಡಿರಲಿಲ್ಲ. ಈಗ ಶಾಪ್ ಓಪನಿಂಗ್​​ಗೆ ಬಂದ ಗಿಲ್ಲಿಗೆ ಅವರು ಚಿನ್ನದ ಚೈನ್ ಹಾಕಿದ್ದಾರೆ.

ಇದನ್ನೂ ಓದಿ: ‘ತುಂಬಾ ಗೊಂದಲದಲ್ಲಿದ್ದೇನೆ’; ಮುಂದಿನ ಪ್ಲ್ಯಾನ್ ಬಗ್ಗೆ ಕನ್​​ಫ್ಯೂಸ್ ಆದ ಗಿಲ್ಲಿ ನಟ

ಈ ವಿಡಿಯೋ ನೋಡಿದ ಅನೇಕರು, 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕೊಟ್ಟಿರಬಹುದು ಎಂದು ಊಹಿಸಿದ್ದಾರೆ. ಆದರೆ, ಹಾಗಿಲ್ಲ ಎನ್ನಲಾಗುತ್ತಿದೆ. ಏಕೆಂದರೆ ಶಾಪ್​​ ಓಪನಿಂಗ್​​​ಗೆ ಬರೋ ಸೆಲೆಬ್ರಿಟಿಗಳಿಗೆ ಚಿನ್ನದ ಸರವನ್ನು ಹಾಕೋದು ಶರವಣ ಅವರ ಸ್ಟೈಲ್. ಈ ಮೊದಲು ಕಿಚ್ಚ ಸುದೀಪ್ ಅವರು ಶರಣವಣ ಅವರ ಶಾಪ್​​ಗೆ ಬಂದಾಗ ಇದೇ ರೀತಿಯ ಚೈನ್ ಹಾಕಿದ್ದರು. ಈ ಬಗ್ಗೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

ಖಾಸಗಿ ಬಸ್​​- ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು, 8 ಮಂದಿ ಗಂಭೀರ – Kannada News | Three Killed, Eight Injured in Udupi as Private Bus Collides with Cruiser Van

ಬಸ್​​ ಮತ್ತು ಕ್ರೂಸರ್​​ ವಾಹನದ ನಡುವೆ ಅಪಘಾತ

ಉಡುಪಿ/ ರಾಯಚೂರು, ಜನವರಿ 23: ಖಾಸಗಿ ಬಸ್​​ ಮತ್ತು ಕ್ರೂಸರ್​ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟರೆ, 8 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದಿದೆ. ಗಾಯಗೊಂಡ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತದ ರಭಸಕ್ಕೆ ಕ್ರೂಸರ್​​ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

KKRTC ಬಸ್​ ಚಕ್ರಕ್ಕೆ ಸಿಲುಕಿ ಬಾಲಕಿ ಸಾವು

KKRTC ಬಸ್​ ಚಕ್ರಕ್ಕೆ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ನಡೆದಿದೆ. ದಿವ್ಯಾಶ್ರೀ ದೇವರಾಜ(5) ಮೃತ ಬಾಲಕಿಯಾಗಿದ್ದು, ರಸ್ತೆ ಪಕ್ಕದ ಮನೆ ಮುಂದೆ ಆಟವಾಡುವಾಗ ಬಸ್ ಹರಿದು ಅವಘಡ ಸಂಭವಿಸಿದೆ. ಗಬ್ಬೂರಿನಿಂದ ಗೂಗಲ್ ಗ್ರಾಮಕ್ಕೆ ಬಸ್​​ ತೆರಳುತ್ತಿತ್ತು ಎನ್ನಲಾಗಿದ್ದು, ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ದೇಗುಲಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಹೆಣವಾಗಿ ಪತ್ತೆ; ಪ್ರಾಣಿ ದಾಳಿಯೋ? ಕೊಲೆಯೋ?

ಬೈಕ್​​ಗೆ ಹಿಂಬದಿಯಿಂದ ಆಟೋ ಡಿಕ್ಕಿ

ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿ ಹಿಂಬದಿಯಿಂದ ಆಟೋ ಡಿಕ್ಕಿಯಾದ ಪರಿಣಾಮ ಬೈಕ್​​ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರನ ನಿರ್ಲಕ್ಷ್ಯ ಹಾಗೂ ಆಟೋ ಚಾಲಕನ ವೇಗವೇ ಘಟನೆಗೆ ಕಾರಣ ಎನ್ನಲಾಗಿದ್ದು, ಬೈಕ್​​ಗೆ ಆಟೋ ಗುದ್ದುವ ದೃಶ್ಯ ಅಂಬೇಡ್ಕರ್ ವೃತ್ತದಲ್ಲಿರುವ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೈಕ್​​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಕಸ್ಮಿಕ ಬೆಂಕಿಗೆ ಟಿಪ್ಪರ್ ಸುಟ್ಟು ಕರಕಲು

ಸುಟ್ಟು ಕರಕಲಾಗಿರುವ ಟಿಪ್ಪರ್​​

ತುಮಕೂರು ಜಿಲ್ಲೆ ತುರುವೇಕರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಗೆ ಟಿಪ್ಪರ್ ಲಾರಿ ಸುಟ್ಟು ಕರಕಲಾಗಿದೆ. ಗುಬ್ಬಿ ಕಡೆಯಿಂದ ತುರುವೇಕೆರೆಗೆ ಸಾಗುತ್ತಿದ್ದ ಟಿಪ್ಪರ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ತುರುವೇಕೆರೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:41 pm, Fri, 23 January 26

Source link

Weekly Love Horoscope: ಈ ರಾಶಿಯವರ ಪ್ರೀತಿಗೆ ಮನೆಯವರಿಂದ ಸಮ್ಮತಿ – Kannada News | January 25 31 Love Horoscope: Zodiac Predictions for Romance and Relationships

ಮೇಷ ರಾಶಿ :

ಈ ವಾರ ಪ್ರೇಮಿಗಳಿಗೆ ಅತ್ಯಂತ ಶುಭದಾಯಕವಾಗಿದೆ. ನಿಮ್ಮ ಪ್ರೀತಿಗೆ ಮನೆಯಲ್ಲಿ ಹಿರಿಯರ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.

ವೃಷಭ ರಾಶಿ :

ಸಂಬಂಧಗಳಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದರೂ ಪ್ರೀತಿಯಿಂದ ಬಗೆಹರಿಸಿಕೊಳ್ಳಿ. ಪ್ರಣಯ ಜೀವನದಲ್ಲಿ ಹೊಸ ಚೈತನ್ಯ ಬರಲಿದೆ.

ಮಿಥುನ ರಾಶಿ :

ಸಂಗಾತಿಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುವ ಯೋಗವಿದೆ. ನಿಮ್ಮ ಕ್ರಿಯಾಶೀಲತೆಯು ಪ್ರೇಮ ಜೀವನವನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ.

ಕರ್ಕಾಟಕ ರಾಶಿ :

ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇದು ಸೂಕ್ತ ಸಮಯ. ಸಂಗಾತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳನ್ನು ಹೇಳುವಿರಿ.

​ಸಿಂಹ ರಾಶಿ :

ಸಂಬಂಧಗಳಲ್ಲಿನ ಗೊಂದಲಗಳು ದೂರವಾಗುತ್ತವೆ. ನಿಮ್ಮ ಆಕರ್ಷಕ ಮಾತಿನಿಂದ ಸಂಗಾತಿಯ ಮನ ಗೆಲ್ಲುವಿರಿ. ಆದರೆ ಹಳೆಯ ವಿಷಯಗಳನ್ನು ಕೆದಕಬೇಡಿ.

ಕನ್ಯಾ ರಾಶಿ :

ನಿಮ್ಮ ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ನೀವು ಒಬ್ಬಂಟಿಯಾಗಿದ್ದರೆ, ಹಳೆಯ ಸ್ನೇಹಿತರ ಮೂಲಕ ಹೊಸ ಪ್ರೇಮ ಸಂಬಂಧಗಳು ಅಚಾನಕ್ಕಾಗಿ ಬೆಳೆಯಬಹುದು.

ತುಲಾ ರಾಶಿ :

ಮನಸ್ಸಿನ ಗೊಂದಲಗಳನ್ನು ಬಿಟ್ಟು ನೇರವಾಗಿ ಮಾತನಾಡಿ. ಈ ವಾರ ನಿಮ್ಮ ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಅಥವಾ ಸರ್‌ಪ್ರೈಸ್ ನಿರೀಕ್ಷಿಸಬಹುದು.

ವೃಶ್ಚಿಕ ರಾಶಿ :

ತೀವ್ರವಾದ ಭಾವನೆಗಳು ನಿಮ್ಮನ್ನು ಕಾಡಬಹುದು. ಯಾರೋ ಒಬ್ಬರ ಮೇಲೆ ವಿಶೇಷ ಆಕರ್ಷಣೆ ಉಂಟಾಗಲಿದೆ. ಸತ್ಯಕ್ಕೆ ಮತ್ತು ನೈಜತೆಗೆ ಆದ್ಯತೆ ನೀಡಿ.

​ಧನು ರಾಶಿ :

ಪ್ರೀತಿಯ ವಿಷಯದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಇದು ಸಕಾಲ.

ಮಕರ ರಾಶಿ :

ಪ್ರೀತಿಯ ವಿಷಯದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ವಾರ. ಸಂಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ನಿಮ್ಮನ್ನು ಹತ್ತಿರವಾಗಿಸುತ್ತದೆ.

​ಕುಂಭ ರಾಶಿ :

ಈ ವಾರ ದ್ವಾದಶ ರಾಶಿಯಲ್ಲಿ ಶುಕ್ರನ ಸಂಚಾರವಿರುವುದರಿಂದ, ನೀವು ಹೆಚ್ಚು ಆಕರ್ಷಕವಾಗಿ ಕಂಡರೂ ಪ್ರಯೋಜನವಾಗದು. ಹೊಸ ಪರಿಚಯಗಳು ಪ್ರೇಮವಾಗಿ ಬದಲಾಗಿ, ವಿಘ್ನವುಂಟಾಗುವುದು.

​ಮೀನ ರಾಶಿ :

ಪ್ರೀತಿ ನಿಮ್ಮ ಆಪ್ತ ವಲಯದಲ್ಲಿಯೇ ಇರಬಹುದು. ಸ್ನೇಹಿತರ ಸಹಾಯದಿಂದ ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Published On – 2:26 pm, Fri, 23 January 26

Source link

ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ‘ಮಾರ್ಕ್‌’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ – Kannada News | Mark movie on Jio Hotstar OTT streaming in 4 languages ​​from January 23

2025ರ ಬಹುನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಸಿನಿಮಾಗಳ ಪೈಕಿ ಕಿಚ್ಚ ಸುದೀಪ್‌ ನಟನೆಯ ‘ಮಾರ್ಕ್‌’ (Mark Movie) ಸಹ ಒಂದು. ಅಪಾರ ನಿರೀಕ್ಷೆಯಂತೆ, ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಡಿಸೆಂಬರ್‌ 25ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು ಈ ಸಿನಿಮಾ. ಆ್ಯಕ್ಷನ್‌ ಥ್ರಿಲ್ಲರ್‌ ಅಡ್ವೆಂಚರ್‌ ಜಾನರ್‌ನ ‘ಮಾರ್ಕ್‌’ ಸಿನಿಮಾಗೆ ಮೆಚ್ಚುಗೆಯ ಮಾತುಗಳೂ ಕೇಳಿಬಂದಿದ್ದವು. ಮಾಸ್‌ ಎಂಟರ್‌ಟೈನರ್‌ ಎಂಬಂತಹ ಪಾಸಿಟಿವ್‌ ವಿಮರ್ಶೆಗಳನ್ನೂ ಪಡೆದುಕೊಂಡಿತ್ತು ಈ ಸಿನಿಮಾ. ‘ಮಾರ್ಕ್‌’ ಸಿನಿಮಾದ ಒಟಿಟಿ (OTT) ಪ್ರಸಾರದ ಹಕ್ಕುಗಳನ್ನು ‘ಜಿಯೋ ಹಾಟ್‌ಸ್ಟಾರ್‌’ (Jio Hotstar) ಪಡೆದುಕೊಂಡಿದೆ. ಜನವರಿ 23ರ ಶುಕ್ರವಾರ ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭ ಆಗಿದೆ.

ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಪ್ರಸಾರ ಆರಂಭಿಸಿದೆ. ಥಿಯೇಟರ್‌ಗಳಲ್ಲಿ ಈ ಚಿತ್ರವನ್ನು ಮಿಸ್‌ ಮಾಡಿಕೊಂಡವರು, ಇನ್ನೊಮ್ಮೆ ಸಿನಿಮಾ ನೋಡಬೇಕೆಂದುಕೊಂಡವರಿಗೆ ಇದೀಗ ಜಿಯೋ ಹಾಟ್‌ಸ್ಟಾರ್‌ ಸರ್ಪ್ರೈಸ್‌ ನೀಡಿದೆ. ಹಾಗಾದರೆ ಮತ್ಯಾಕೆ ತಡ, ಈಗಲೇ ಜಿಯೋ ಹಾಟ್‌ಸ್ಟಾರ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು ಸಿನಿಮಾ ವೀಕ್ಷಿಸಿ.

ಮಾರ್ಕ ಸಿನಿಮಾ ಕಥೆ: ಅಜಯ್‌ ಮಾರ್ಕಂಡೇಯ ಅಲಿಯಾಸ್‌ ಮಾರ್ಕ್‌. ಕಥಾನಾಯಕ ಮಾರ್ಕ್‌ ಸಸ್ಪೆಂಡ್‌ ಆಗಿರುವ ಎಸಿಪಿ. ಪೊಲೀಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ದೊಡ್ಡ ಹೆಸರು. ಆತನ ಹೆಸರು ಕೇಳಿದ್ರೆ ಸಾಕು ರಾಜಕೀಯ ನಾಯಕರಿಂದ ಹಿಡಿದು, ರೌಡಿಗಳೂ ಗಡಗಡ! ಆ ಮಟ್ಟದ ಖಡಕ್‌ ಹಿನ್ನೆಲೆ ಇರುವಂಥ ಅಧಿಕಾರಿ. ಹೀಗಿರುವಾಗ ಇದೇ ಮಾರ್ಕ್‌ಗೆ ಒಂದು ಸಂದಿಗ್ಧ ಪರಿಸ್ಥಿತಿಗೆ ಸಿಲುಕುತ್ತಾನೆ. ಒಂದು ಕಡೆ ರಾಜಕೀಯದ ಷಡ್ಯಂತ್ರ, ಮತ್ತೊಂದು ಕಡೆ ಮಕ್ಕಳ ಟ್ರಾಫಿಕಿಂಗ್‌ (ಮಕ್ಕಳ ಕಳ್ಳ ಸಾಗಣೆ), ಇದರ ನಡುವೆ ಡ್ರಗ್ಸ್‌ ಘಾಟು.. ಹೀಗೆ ಹಲವು ಕೋನಗಳಲ್ಲಿ ಪದರಗಳಾಗಿ ಸಿನಿಮಾ ತೆರೆದುಕೊಳ್ಳುತ್ತ ಹೋಗುತ್ತದೆ. ಇದೆಲ್ಲವನ್ನು ಸಂಭಾಳಿಸಲು ಕಥಾನಾಯಕನಿಗೆ ಇರೋದು ಜಸ್ಟ್‌ 36 ಗಂಟೆ ಮಾತ್ರ. ಆ 36 ಗಂಟೆಯಲ್ಲಿ ಸಿನಿಮಾ ಹೇಗೆಲ್ಲ ಓಟಕ್ಕಿಳಿಯುತ್ತೆ ಅನ್ನೋದೇ ಈ ಸಿನಿನಮಾದ ಒಂದೆಳೆ.

ತಾರಾಗಣ ಹಾಗೂ ತಾಂತ್ರಿಕ ವರ್ಗ: ಮಾರ್ಕ್‌ ಸಿನಿಮಾದಲ್ಲಿ ಹಿರಿ-ಕಿರಿ ಕಲಾವಿದರ ದೊಡ್ಡ ಬಳಗವೇ ಇದೆ. ಅದೇ ರೀತಿ ತೆರೆ ಹಿಂದೆ ತಾಂತ್ರಿಕವಾಗಿಯೂ ಸಾಕಷ್ಟು ಮಂದಿ ದುಡಿದಿದ್ದಾರೆ. ವಿಜಯ್‌ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿ ಬಂದ ಮಾರ್ಕ್‌ ಸಿನಿಮಾವನ್ನು ಸತ್ಯಜ್ಯೋತಿ ಫಿಲಂಸ್‌ ಮತ್ತು ಕಿಚ್ಚ ಕ್ರಿಯೇಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿವೆ. ನಾಯಕನಾಗಿ ಕಿಚ್ಚ ಸುದೀಪ್‌, ಖಳನಾಯಕನಾಗಿ ಬಹುಭಾಷಾ ನಟ ನವೀನ್‌ ಚಂದ್ರ, ಮಲಯಾಳಂ ನಟ ಶೈನ್‌ ಟೊಮ್‌ ಚಾಕೊ, ವಿಕ್ರಾಂತ್‌, ಯೋಗಿ ಬಾಬು, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ, ರಘು ರಾಮನಕೊಪ್ಪ, ನಿಶ್ವಿಕಾ ನಾಯ್ಡು, ರೋಷನಿ ಪ್ರಕಾಶ್‌ ಸೇರಿ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.

ಇದನ್ನೂ ಓದಿ: 10 ಗಂಟೆಯಲ್ಲಿ ‘ಡೆವಿಲ್’ ದಾಖಲೆ ಮುರಿದ ‘ಮಾರ್ಕ್​’ ಟ್ರೇಲರ್

ಅಜನೀಶ್‌ ಲೋಕನಾಥ್‌ ಸಂಗೀತ, ಶೇಖರ್‌ ಚಂದ್ರ ಅವರ ಸಿನಿಮಾಟೋಗ್ರಾಫಿ, ಗಣೇಶ್‌ ಬಾಬು ಅವರ ಸಂಕಲನ, ಈ ಚಿತ್ರಕ್ಕಿದೆ. ಇನ್ನು ‘ಮಾರ್ಕ್’ ಸಿನಿಮಾದ ಪ್ರಮುಖ ಆಕರ್ಷಣೆ ಎಂದರೆ ಅದು ಆಕ್ಷನ್ ಸೀಕ್ವೆನ್ಸ್‌ಗಳು. ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್‌ ಡೈರೆಕ್ಟರ್ಸ್‌ಗಳಾದ ಸ್ಟಂಟ್ ಸಿಲ್ವಾ, ಸುಪ್ರೀಮ್ ಸುಂದರ್ ಹಾಗೂ ಕನ್ನಡದ ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಇದೀಗ ಇದೇ ಸಿನಿಮಾ ಜನವರಿ 23ರಂದು ಜಿಯೋ ಹಾಟ್‌ಸ್ಟಾರ್‌ ಒಟಿಟಿಗೆ ಆಗಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version