ಹೂಡಿಕೆಗೆ ಯಾವ ಷೇರುಗಳನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲವಾ? ಗಮನಿಸಬೇಕಾದ 10 ಅಂಶಗಳಿವು – Kannada News | Important financial indicators to see before buying a stock, Ramdeo Agrawal suggestion

ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಹಣ ಸಂಪಾದಿಸಬಹುದು ಎಂದು ಬಹಳ ಜನರು ಹೇಳುವುದನ್ನು ಕೇಳಿರುತ್ತೀರಿ. ಹಾಗೆಯೇ, ಷೇರುಗಳ ಹಿಂದೆ ಹೋಗಿ ನಷ್ಟ ಮಾಡಿಕೊಂಡವರನ್ನೂ ನೋಡಿರುತ್ತೀರಿ. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಭವಿಷ್ಯ ಇದೆ ಎಂದು ಭಾವಿಸಿ ಕಣ್ಣಿಗೆ ಸಿಕ್ಕ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳ ಷೇರನ್ನು ಖರೀದಿಸಿ ಕೈಸುಟ್ಟುಕೊಂಡವರೆಷ್ಟೋ. ಹೀಗಾಗಿ, ಯಾವ ಷೇರುಗಳನ್ನು ಆಯ್ದುಕೊಳ್ಳಬೇಕು, ಯಾವ ಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಅನೇಕರಲ್ಲಿ ಇರುತ್ತದೆ. ಷೇರು ಮಾರುಕಟ್ಟೆಯ ದಿಗ್ಗಜ ಹಾಗೂ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ಸಹ-ಸ್ಥಾಪಕರಾದ ರಾಮದೇವ್ ಅಗರ್ವಾಲ್ (Raamdeo Agrawal) ಅವರು ಯಾವುದೇ ಕಂಪನಿಯ ಷೇರುಗಳನ್ನು ಖರೀದಿಸುವ ಮುನ್ನ ಪ್ರತಿಯೊಬ್ಬ ಹೂಡಿಕೆದಾರರೂ ಕಡ್ಡಾಯವಾಗಿ ಪರಿಶೀಲಿಸಬೇಕಾದ 10 ಪ್ರಮುಖ ಆರ್ಥಿಕ ಸೂಚಕಗಳನ್ನು (Financial Indicators) ತಿಳಿಸಿದ್ದಾರೆ:

1. ಮಾರಾಟದ ಬೆಳವಣಿಗೆ (Sales Growth)

ಕಂಪನಿಯ ವ್ಯವಹಾರ ಮತ್ತು ಆದಾಯವು ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆಯೇ ಎಂಬುದನ್ನು ಇದು ತೋರಿಸುತ್ತದೆ. ಮಾರಾಟದಲ್ಲಿ ಸ್ಥಿರವಾದ ಬೆಳವಣಿಗೆ ಇರುವ ಕಂಪನಿಗಳು ದೀರ್ಘಾವಧಿಯಲ್ಲಿ ಉತ್ತಮ ಲಾಭ ನೀಡುತ್ತವೆ.

2. ಲಾಭದ ಮಾರ್ಜಿನ್ (Operating Profit Margin)

ಕಂಪನಿಯು ತನ್ನ ಪ್ರಮುಖ ವ್ಯವಹಾರದಿಂದ ಎಷ್ಟು ಪರಿಣಾಮಕಾರಿಯಾಗಿ ಲಾಭ ಗಳಿಸುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಹೆಚ್ಚಿನ ಆಪರೇಟಿಂಗ್ ಮಾರ್ಜಿನ್ ಎಂದರೆ ಕಂಪನಿಯು ತನ್ನ ವೆಚ್ಚಗಳನ್ನು ಚೆನ್ನಾಗಿ ನಿಯಂತ್ರಿಸುತ್ತಿದೆ ಎಂದರ್ಥ.

3. ಲಾಭದ ಬೆಳವಣಿಗೆ (Net Profit Growth)

ಎಲ್ಲಾ ವೆಚ್ಚಗಳು, ತೆರಿಗೆಗಳು ಮತ್ತು ಬಡ್ಡಿಗಳನ್ನು ಕಳೆದ ನಂತರ ಕಂಪನಿಯ ಕೈಯಲ್ಲಿ ಉಳಿಯುವ ನಿಜವಾದ ಲಾಭದ (Net Profit) ಬೆಳವಣಿಗೆಯ ದರ ಇದಾಗಿದೆ. ಇದು ನಿರಂತರವಾಗಿ ಹೆಚ್ಚುತ್ತಿರಬೇಕು.

4. ಇಕ್ವಿಟಿ ಮೇಲಿನ ಆದಾಯ (Return on Equity – ROE)

ಹೂಡಿಕೆದಾರರು (ಷೇರುದಾರರು) ಹೂಡಿದ ಹಣವನ್ನು ಬಳಸಿ ಕಂಪನಿಯು ಎಷ್ಟು ಪ್ರಮಾಣದ ಲಾಭವನ್ನು ಸೃಷ್ಟಿಸುತ್ತಿದೆ ಎಂಬುದನ್ನು ROE ತಿಳಿಸುತ್ತದೆ. ಸಾಮಾನ್ಯವಾಗಿ 15% ಕ್ಕಿಂತ ಹೆಚ್ಚಿನ ROE ಹೊಂದಿರುವ ಕಂಪನಿಗಳನ್ನು ಉತ್ತಮ ಎನ್ನಲಾಗುತ್ತದೆ.

ಇದನ್ನೂ ಓದಿ: ಮುಂಬರುವ ವರ್ಷಗಳಲ್ಲಿ ಬಹಳ ಬಳಕೆಯಾಗುವ ಟಾಪ್-10 ತಂತ್ರಜ್ಞಾನಗಳು; ಡಬ್ಲ್ಯುಇಎಫ್​ನಿಂದ ಪಟ್ಟಿ ಬಿಡುಗಡೆ

5. ಬಂಡವಾಳದ ಮೇಲಿನ ಆದಾಯ (Return on Capital Employed – ROCE)

ಕಂಪನಿಯು ತನ್ನ ಒಟ್ಟು ಬಂಡವಾಳವನ್ನು (ಷೇರುದಾರರ ಹಣ + ಸಾಲ ಎರಡನ್ನೂ ಸೇರಿಸಿ) ಎಷ್ಟು ದಕ್ಷತೆಯಿಂದ ಬಳಸಿಕೊಂಡು ಲಾಭ ಗಳಿಸುತ್ತಿದೆ ಎಂಬುದನ್ನು ಇದು ಅಳೆಯುತ್ತದೆ. ಕಂಪನಿಯ ದಕ್ಷತೆಯನ್ನು ತಿಳಿಯಲು ಇದು ಪ್ರಮುಖವಾಗಿದೆ.

6. ಸಾಲ ಮತ್ತು ಇಕ್ವಿಟಿ ಅನುಪಾತ (Debt-to-Equity Ratio)

ಕಂಪನಿಯು ಸ್ವಂತ ಹಣಕ್ಕೆ ಹೋಲಿಸಿದರೆ ಎಷ್ಟು ಸಾಲವನ್ನು ಮಾಡಿದೆ ಎಂಬುದನ್ನು ಇದು ತೋರಿಸುತ್ತದೆ. ಅತಿಯಾದ ಸಾಲ ಇರುವ ಕಂಪನಿಗಳು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅಪಾಯಕ್ಕೆ ಸಿಲುಕಬಹುದು. ಆದ್ದರಿಂದ ಕಡಿಮೆ ಸಾಲವಿರುವ ಕಂಪನಿಗಳು ಹೆಚ್ಚು ಸುರಕ್ಷಿತ.

7. ಮುಕ್ತ ನಗದು ಹರಿವು (Free Cash Flow – FCF)

ಕಂಪನಿಯು ತನ್ನ ದಿನನಿತ್ಯದ ವೆಚ್ಚಗಳು ಮತ್ತು ಬಂಡವಾಳ ಹೂಡಿಕೆಗಳ (Capital Expenditure) ನಂತರ ಕೈಯಲ್ಲಿ ಉಳಿಸಿಕೊಳ್ಳುವ ನಿಜವಾದ ನಗದು ಹಣ ಇದಾಗಿದೆ. ಮುಕ್ತ ನಗದು ಹರಿವು ಹೆಚ್ಚಿರುವ ಕಂಪನಿಗಳು ಲಾಭಾಂಶ (Dividend) ನೀಡಲು ಮತ್ತು ಸಾಲ ತೀರಿಸಲು ಶಕ್ತವಾಗಿರುತ್ತವೆ.

8. ಪ್ರೊಮೋಟರ್​ಗಳ ಷೇರು ಅಡಮಾನ (Promoter Pledge)

ಕಂಪನಿಯ ಪ್ರವರ್ತಕರು (Promoters/Owners) ತಮ್ಮ ಬಳಿ ಇರುವ ಷೇರುಗಳನ್ನು ಬ್ಯಾಂಕುಗಳಲ್ಲಿ ಅಡಮಾನವಿಟ್ಟು ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಪ್ರವರ್ತಕರು ತಮ್ಮ ಷೇರುಗಳನ್ನು ಅತಿಯಾಗಿ ಅಡವಿಟ್ಟಿದ್ದರೆ ಅಂತಹ ಕಂಪನಿಗಳಿಂದ ದೂರವಿರುವುದು ಒಳ್ಳೆಯದು.

ಇದನ್ನೂ ಓದಿ: ಕಲ್ಪಾಕ್ಕಂನಲ್ಲಿ ವಿದ್ಯುತ್ ಬದಲು ಪರಮಾಣು ರಿಯಾಕ್ಟರ್​ನ ಶಾಖ ಬಳಸಿ ಹೈಡ್ರೋಜನ್ ಉತ್ಪಾದಿಸುವ ವಿಶ್ವದ ಮೊದಲ ಘಟಕ

9. ಪಿ/ಇ ಅನುಪಾತ (Price-to-Earnings Ratio – P/E)

ಕಂಪನಿಯ ಷೇರಿನ ಬೆಲೆ ಸದ್ಯ ದುಬಾರಿಯಾಗಿದೆಯೇ ಅಥವಾ ಅಗ್ಗವಾಗಿದೆಯೇ (Valuation) ಎಂಬುದನ್ನು ತಿಳಿಯಲು ಪಿ/ಇ ಅನುಪಾತವನ್ನು ನೋಡಲಾಗುತ್ತದೆ. ಆದರೆ, ಇದನ್ನು ಅದೇ ವಲಯದ ಇತರ ಕಂಪನಿಗಳೊಂದಿಗೆ ಹೋಲಿಸಿ ನೋಡಬೇಕು.

10. ವರ್ಕಿಂಗ್ ಕ್ಯಾಪಿಟಲ್ ಸೈಕಲ್ (Working Capital Cycle)

ಇದು ಬಂಡವಾಳ ವಾಪಸಾಗಿ ಚಕ್ರ. ಅಂದರೆ, ಕಂಪನಿಯು ಕಚ್ಚಾ ವಸ್ತುಗಳನ್ನು ಖರೀದಿಸಿ, ಉತ್ಪನ್ನವನ್ನು ಮಾರಿ, ಆ ಹಣವನ್ನು ಮರಳಿ ತನ್ನ ಕೈಗೆ ಪಡೆಯಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಈ ಚಕ್ರವು ಎಷ್ಟು ಕಡಿಮೆ ದಿನಗಳದ್ದಾಗಿದೆಯೋ, ಕಂಪನಿಯ ನಗದು ನಿರ್ವಹಣೆ ಅಷ್ಟು ಉತ್ತಮವಾಗಿದೆ ಎಂದರ್ಥ.

ರಾಮದೇವ್ ಅಗರ್ವಾಲ್ ಅವರ ಹೂಡಿಕೆ ಮಂತ್ರ (QGLP)

ರಾಮದೇವ್ ಅಗರ್ವಾಲ್ ಅವರು ತಮ್ಮ ಹೂಡಿಕೆಗೆ Quality (ಗುಣಮಟ್ಟ), Growth (ಬೆಳವಣಿಗೆ), Longevity (ದೀರ್ಘಾಯುಷ್ಯ), ಮತ್ತು Price (ಸರಿಯಾದ ಬೆಲೆ) ಎಂಬ ಸೂತ್ರವನ್ನು ಬಳಸುತ್ತಾರೆ. ಮೇಲೆ ತಿಳಿಸಿದ 10 ಸೂಚಕಗಳು ಈ ನಾಲ್ಕು ಅಂಶಗಳನ್ನು ಮೌಲ್ಯಮಾಪನ ಮಾಡಲು ಹೂಡಿಕೆದಾರರಿಗೆ ಸಹಾಯ ಮಾಡುತ್ತವೆ ಎಂಬುದು ಅವರ ಭಾವನೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು – Kannada News | Ram Mandir Donation Theft Case Bidar Man Filed Complaint against BJP MLA

ಬೀದರ್, ಜೂನ್ 28: ರಾಮಮಂದಿರದಲ್ಲಿ (Ram Mandir Theft Case) ದೇಣಿಗೆ ಲೂಟಿಗೂ ಕರ್ನಾಟಕದ ಬೀದರ್​​ಗೂ ನಂಟು ಏರ್ಪಟ್ಟಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಎಸ್​ಐಟಿಗೆ ಔರಾದ್​ನ ದೀಪಕ್ ಎಂಬುವವರು ದೂರು ದಾಖಲಿಸಿದ್ದಾರೆ. ಎಸ್ಐಟಿ ಮುಖ್ಯಸ್ಥ ವಿಜಯ್ ವಿಶ್ವಾಸ್ ಪಂತ್​ಗೆ ಅವರು ದೂರು ನೀಡಿದ್ದು, ಬಿಜೆಪಿ ಶಾಸಕ ಪ್ರಭು ಚೌಹಾಣ್, ಆರ್​ಎಸ್​ಎಸ್​ನ ಗೋಪಾಲ್ ಹಣ ಸಂಗ್ರಹಿಸಿದ್ದಾರೆ. ರಾಮಮಂದಿರದ ಹೆಸರಲ್ಲಿ ಗುತ್ತಿಗೆದಾರರಿಂದ ಮೊದಲು 5 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದು, ಯಾವುದೇ ದಾಖಲಾತಿ ನೀಡಿಲ್ಲ. ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಿದ್ದು, ಈ ಬಗ್ಗೆ ದಾಖಲೆಗಳಿವೆ. ಎಸ್​ಐಟಿ ಮುಂದೆ ದಾಖಲೆಗಳನ್ನು ಸಲ್ಲಿಸಲು ಸಿದ್ಧರಿದ್ದೇವೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಔರಾದ್ ತಾಲೂಕಿನ ದೀಪಕ್ ಎಂಬ ವ್ಯಕ್ತಿ ಬಿಜೆಪಿ ಶಾಸಕ ಪ್ರಭು ಚೌಹಾಣ್ ವಿರುದ್ಧ ಎಸ್​ಐಟಿಗೆ ದೂರು ನೀಡಿದ್ದಾರೆ. ಶಾಸಕ ಪ್ರಭು ಚೌಹಾಣ್ ಮತ್ತು ಆರ್​ಎಸ್​ಎಸ್​ ನಾಯಕ ಗೋಪಾಲ್ ಇಬ್ಬರೂ ಔರಾದ್ ತಾಲೂಕಿನ ಗುತ್ತಿಗೆದಾರರಿಂದ ರಾಮಮಂದಿರದ ಹೆಸರಿನಲ್ಲಿ ಕೋಟ್ಯಂತರ ರೂ. ದೇಣಿಗೆ ಹಣ ಸಂಗ್ರಹಿಸಿದ್ದರು. ಆ ಹಣವನ್ನು ಅವರಿಬ್ಬರೂ ರಾಮ ಮಂದಿರ ಟ್ರಸ್ಟ್​ಗೆ ನೀಡದೆ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಕೋಟ್ಯಂತರ ರೂ ಲೂಟಿ – Kannada News | PWD Department Corruption: Fraudster Allegedly Posed as Satish Jarkiholi’s Relative to Loot Crores

ರಾಯಚೂರು, ಜೂನ್​​ 28: ಇತ್ತೀಚೆಗೆ ಇಡಿ ದಾಳಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಬಾಮೈದ ಮಂಜುನಾಥ್ ಲಂಚಾವಾತಾರ (corruption) ಅನಾವರಣವಾಗಿತ್ತು. ಬರೋಬ್ಬರಿ 13 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿತ್ತು. ಇದೀಗ ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಓರ್ವ ವ್ಯಕ್ತಿ ಬರೋಬ್ಬರಿ 3.48 ಕೋಟಿ ರೂ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ. ಆ ಮೂಲಕ ಲೋಕೋಪಯೋಗಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನಲಾಗುತ್ತಿದೆ.

3 ಕೋಟಿ 48 ಲಕ್ಷ ರೂ ಹಣ ಗುಳುಂ

ರಾಯಚೂರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವೆಂಕಟೇಶ್ ಗಲಗ ವಿರುದ್ಧ ಇದೀಗ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಮಸ್ಕಿಯಿಂದ ಲಿಂಗಸುಗೂರು ರಸ್ತೆ ಕಾಮಗಾರಿಯಲ್ಲಿ ನಯಾಪೈಸೆಯಷ್ಟು ಕೆಲಸ ಮಾಡದಿದ್ದರೂ, ನಕಲಿ ದಾಖಲೆಗಳು ಸೃಷ್ಟಿಸುವ ಮೂಲಕ ಕಾಮಗಾರಿ ಆಗಿದೆ ಎಂದು ಬರೋಬ್ಬರಿ 3 ಕೋಟಿ 48 ಲಕ್ಷ ರೂ ಹಣ ಗುಳುಂ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಇಡಿ ದಾಳಿ ಮಾಡಿದ ವೈ ಮಂಜುನಾಥ ಯಾರು? ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಡಿಟೇಲ್ಸ್ ಇಲ್ಲಿದೆ

ಇನ್ನು ಈ ರಸ್ತೆ ಕಾಮಗಾರಿಯ ಅಧಿಕೃತ ಟೆಂಡರ್ ‘ಅಮ್ಮಾಪುರ ಆ್ಯಂಡ್​ ಕಂಪನಿ’ ಹೆಸರಿಗೆ ಮಂಜೂರಾಗಿತ್ತು. ಆದರೆ, ಇದೇ ಕಾಮಗಾರಿಯ ಮಧ್ಯೆ ‘ಭೀಮಾಶಂಕರ ದೋರನಹಳ್ಳಿ’ ಎಂಬ ಹೆಸರಿನಲ್ಲಿ ಮತ್ತೊಂದು ನಕಲಿ ಟೆಂಡರ್ ಹಾಗೂ ನಕಲಿ ವರ್ಕ್ ಡನ್ ದಾಖಲೆಗಳನ್ನು ಸೃಷ್ಟಿಸಿ ಈ ಬೃಹತ್ ವಂಚನೆ ಎಸಗಲಾಗಿದೆ ಎನ್ನಲಾಗುತ್ತಿದೆ. ಈ ಬ್ರಹ್ಮಾಂಡ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯಪಾಲರು ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಅಧಿಕೃತವಾಗಿ ದೂರು ಸಲ್ಲಿಕೆಯಾಗಿದೆ.

ಆರೋಪ ತಳ್ಳಿಹಾಕಿದ ಇಇ ವೆಂಕಟೇಶ ಗಲಗ

ಆರೋಪ ಕುರಿತಾಗಿ ಪ್ರತಿಕ್ರಿಯೆ ನೀಡಿರುವ PWD ಇಇ ವೆಂಕಟೇಶ ಗಲಗ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ‘ಈ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಬೇರೊಂದು ಇಲಾಖೆಯಿಂದ ಫೈಲ್ ಅಪ್ರೂವ್ ಆಗಿ ಬಂದ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ನೀಡಲಾಗಿತ್ತು. ಆದರೆ, ನಮ್ಮ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಹಣ ಆ ಆರೋಪಿತರಿಗೆ ಸಂದಾಯವಾಗಿಲ್ಲ. ಈ ಇಡೀ ಪ್ರಕರಣದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.


ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಂಥಹಾ ದೃಶ್ಯಗಳನ್ನು ಈ ವರೆಗೆ ನೋಡಿಲ್ಲ: ‘ಟಾಕ್ಸಿಕ್’ ಬಗ್ಗೆ ನಟಿ ಮಾತು – Kannada News | Huma Qureshi talks about Yash and Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇದು ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾನಲ್ಲಿ ಯಶ್ ಜೊತೆಗೆ ಐವರು ಸ್ಟಾರ್ ನಟಿಯರು ನಟಿಸಿದ್ದಾರೆ. ಕೆಲ ನಟಿಯರು ಬೇರೆ ಬೇರೆ ಸಂದರ್ಶನಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದು, ಸಿನಿಮಾವನ್ನು, ಮೇಕಿಂಗ್ ಅನ್ನು, ಸಿನಿಮಾದ ಕತೆಯನ್ನು, ಸಿನಿಮಾ ಹೊಂದಿರುವ ಸಂದೇಶವನ್ನು ಕೊಂಡಾಡುತ್ತಿದ್ದಾರೆ. ಇದೀಗ ಇದೇ ಸಿನಿಮಾದ ಭಾಗವಾಗಿರುವ ಖ್ಯಾತ ಬಾಲಿವುಡ್ ನಟಿ ಹುಮಾ ಖುರೇಷಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮತ್ತು ನಟ ಯಶ್ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರೆ ನಟಿ, ‘ಟಾಕ್ಸಿಕ್’ ಸಿನಿಮಾದ 8-9 ನಿಮಿಷದ ಕಟ್ ಸಹ ನೋಡಿದ್ದು, ಆ ಬಗ್ಗೆಯೂ ಮಾತನಾಡಿದ್ದಾರೆ.

ಹುಮಾ ಖುರೇಷಿ ನಟನೆಯ ‘ಬೇಬಿ ಡೂ ಡೈ ಡು’ ಹೆಸರಿನ ಸಿನಿಮಾ ಬಿಡುಗಡೆ ಆಗಿದ್ದು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಹುಮಾ ಖುರೇಷಿ ಭಾಗವಹಿಸಿದ್ದಾರೆ. ಈ ವೇಳೆ ಅವರಿಗೆ ‘ಟಾಕ್ಸಿಕ್’ ಸಿನಿಮಾದ ಬಗ್ಗೆಯೂ ಕೇಳಲಾಗಿದೆ. ಈ ವೇಳೆ ಸಿನಿಮಾ ಬಗ್ಗೆ ಮತ್ತು ನಟ ಯಶ್ ಬಗ್ಗೆ ಹುಮಾ ಖುರೇಷಿ ಮಾತನಾಡಿದ್ದಾರೆ. ಅಲ್ಲದೆ, ‘ಇಂಥಹಾ ಸಿನಿಮಾ ಅನ್ನು ನಾನು ಈ ವರೆಗೆ ನೋಡಿಲ್ಲ’ ಎಂದು ಕೊಂಡಾಡಿದ್ದಾರೆ.

‘ನಾನು ಯಶ್ ಜೊತೆಗೆ ನಟಿಸುವ ಮುಂಚೆ ಅವರ ಬಗ್ಗೆ ಯಾವು ಅಭಿಪ್ರಾಯವೂ ಇರಲಿಲ್ಲ. ಅಭಿಮಾನಿಗಳನ್ನು ಸಂಪಾದಿಸುವ ನಟ ಎಂದಷ್ಟೆ ಅಂದುಕೊಂಡಿದ್ದೆ, ಆದರೆ ಯಶ್ ಜೊತೆ ನಟಿಸಿದ ಬಳಿಕ, ಅವರು ಕೆಲಸ ಮಾಡುವ ರೀತಿ ನೋಡಿ, ಅವರ ಅಭಿಮಾನಿ ಆಗಿಬಿಟ್ಟೆ. ಅವರು ಕೆಲಸ ಮಾಡುವ ರೀತಿಯೇ ಅದ್ಭುತ, ನಾನು ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ’ ಎಂದಿದ್ದಾರೆ ನಟಿ ಹುಮಾ ಖುರೇಷಿ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲೇ ‘ರಾಮಾಯಣ’ ಪ್ರಚಾರ; ಯಶ್ ಮಾಸ್ಟರ್ ಪ್ಲ್ಯಾನ್

‘ನಮ್ಮ ‘ಟಾಕ್ಸಿಕ್’ ತಂಡದಲ್ಲಿ ಎಲ್ಲರ ಯೋಚನೆ ಒಂದೇ ರೀತಿ ಇದೆ. ನಾವು ಮೊದಲ ದಿನಾಂಕದಂದೇ ಬರುವುದು ನಮಗೆ ಮುಖ್ಯ ಆಗಿರಲಿಲ್ಲ. ನಮಗೆ ಒಳ್ಳೆಯ ಸಿನಿಮಾದ ಜೊತೆಗೆ ಪ್ರೇಕ್ಷಕರ ಮುಂದೆ ಬರುವುದೇ ಮುಖ್ಯವಾಗಿತ್ತು. ನಮ್ಮ ಯೋಚನೆ, ನಿರ್ದೇಶಕಿ ಗೀತು ಮೋಹನ್​​ದಾಸ್ ಯೋಚನೆ, ಯಶ್ ಯೋಚನೆ ಎಲ್ಲವೂ ಒಂದೇ ಆಗಿತ್ತು. ಹಾಗಾಗಿ ನಾವು ಚೆನ್ನಾಗಿ ಕೆಲಸ ಮಾಡಿದೆವು, ಈಗಲೂ ಸಹ ದಿನ-ರಾತ್ರಿ ಎನ್ನದೆ ಕೆಲಸ ನಡೆಯುತ್ತಿದೆ. ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವವನ್ನು ನೀಡಬೇಕು ಎಂಬುದೇ ನಮ್ಮ ಆಶಯ’ ಎಂದಿದ್ದಾರೆ ನಟಿ.

‘ಟಾಕ್ಸಿಕ್’ ಸಿನಿಮಾದ 8 9 ನಿಮಿಷದ ಕ್ಲಿಪ್ ಒಂದನ್ನು ನಾನು ನೋಡಿದ್ದೀನಿ. ಇಡೀ ಸಿನಿಮಾದ ಗ್ಲಿಂಪ್ಸ್ ಸೇರಿಸಿ ಆ ಕ್ಲಿಪ್ ಮಾಡಿದ್ದಾರೆ. ಒಬ್ಬ ನಟಿಯಾಗಿ ಹೇಳುತ್ತಿದ್ದೇನೆ, ಆ ರೀತಿಯ ದೃಶ್ಯಗಳನ್ನು ನಾನು ಹಿಂದೆಂದೂ ನೋಡಿಲ್ಲ. ಇತ್ತೀಚೆಗೆ ತಾನೆ ಸಿನಿಮಾದ ಮುಖ್ಯ ನಟ-ನಟಿಯರೆಲ್ಲ ಒಟ್ಟಿಗೆ ಊಟಕ್ಕೆ ಸೇರಿದ್ದೆವು. ನಿಜಕ್ಕೂ ನಮ್ಮ ನಡುವೆ ಬಹಳ ಆತ್ಮೀಯತೆ, ಪ್ರೀತಿ ಇತ್ತು. ಏಕೆಂದರೆ ನಮ್ಮಗಳ ನಡುವೆ ಸ್ಪರ್ಧೆ ಎಂಬುದೇ ಇರಲಿಲ್ಲ, ಸಿನಿಮಾನಲ್ಲಿ ಎಲ್ಲರಿಗೂ ಶೈನ್ ಆಗಲು ಸ್ಪೇಸ್ ಇತ್ತು, ಯಾರಿಗೂ ಹೆಚ್ಚು-ಕಡಿಮೆ ಎಂಬುದು ಇರಲಿಲ್ಲ, ಎಲ್ಲರೂ ಶೈನ್ ಆಗಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದೆ, ಯಶ್ ಅಂತೂ ಎಲ್ಲರನ್ನೂ ಮೀರಿಸಿಬಿಟ್ಟಿದ್ದಾರೆ. ಈ ಸಿನಿಮಾ ಯಶ್ ಅವರ ಅಭಿಮಾನಿಗಳಿಗೆ ಹಬ್ಬವಾಗಲಿದೆ, ನಾವು ಪ್ರಾಮಿಸ್ ಮಾಡುತ್ತೇವೆ, ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭೂತಿಯನ್ನು ಕೊಡುತ್ತೇವೆ’ ಎಂದಿದ್ದಾರೆ ನಟಿ ಹುಮಾ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:39 pm, Sun, 28 June 26

Source link

ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ – Kannada News | How To Manage Stress Naturally: Expert Tips For Better Mental Health

ಇಂದಿನ ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ (Stressed) ಸಾಮಾನ್ಯ ಸಮಸ್ಯೆಯಾಗಿದೆ. ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು, ಆರ್ಥಿಕ ಚಿಂತೆ ಹಾಗೂ ಬದಲಾಗುತ್ತಿರುವ ಜೀವನಶೈಲಿ ಒತ್ತಡವನ್ನು ಹೆಚ್ಚಿಸಬಹುದು. ದೀರ್ಘಕಾಲ ಒತ್ತಡ ಮುಂದುವರಿದರೆ ಅದು ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು. ಆದ್ದರಿಂದ ಒತ್ತಡವನ್ನು ಸಮಯಕ್ಕೆ ಗುರುತಿಸಿ ನಿಯಂತ್ರಿಸುವುದು ಅಗತ್ಯ. ಹಾಗಾದರೆ ಒತ್ತಡ ಕಡಿಮೆ ಮಾಡಲು ಯಾವ ರೀತಿಯ ಅಭ್ಯಾಸ ರೂಢಿಸಿಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ

ಒತ್ತಡ ಕಡಿಮೆ ಮಾಡಲು ಉತ್ತಮ ಅಭ್ಯಾಸಗಳು

ಪ್ರತಿದಿನ ನಿಗದಿತ ಸಮಯಕ್ಕೆ ಮಲಗಿ, ಸರಿಯಾಗಿ ನಿದ್ರೆ ಮಾಡುವುದು ಮತ್ತು ದಿನಚರಿಯನ್ನು ಸಮತೋಲನದಿಂದ ನಿರ್ವಹಿಸುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯುವುದು, ಇಷ್ಟದ ಹವ್ಯಾಸಗಳಲ್ಲಿ ತೊಡಗುವುದು, ಪುಸ್ತಕ ಓದುವುದು, ಸಂಗೀತ ಕೇಳುವುದು ಅಥವಾ ಸ್ವಲ್ಪ ಸಮಯ ನಿಮಗೆ ಖುಷಿ ನೀಡುವ ಕೆಲಸದಲ್ಲಿ ಸಮಯ ಕಳೆಯುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯಕ.

ಇದನ್ನೂ ಓದಿ: ಫುಡ್ ಪಾಯ್ಸನಿಂಗ್‌ ಆಗದಂತೆ ತಡೆಯಲು ಉಳಿದ ಆಹಾರವನ್ನು ಈ ರೀತಿ ಸಂಗ್ರಹಿಸಿಡಿ!

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ನಿರಂತರ ದುಃಖ, ಕಿರಿಕಿರಿ, ಅತಿಯಾದ ಆತಂಕ, ನಿದ್ರಾಹೀನತೆ, ದಣಿವು, ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು, ಹಸಿವಿನ ಬದಲಾವಣೆ, ಏಕಾಗ್ರತೆ ಕೊರತೆ ಅಥವಾ ಪದೇಪದೇ ತಲೆನೋವು ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಪ್ರತಿದಿನ ಸಮತೋಲಿತ ಆಹಾರ ಸೇವಿಸಿ, ನಿಯಮಿತವಾಗಿ ವ್ಯಾಯಾಮ ಮಾಡಿ. ಯೋಗ, ಧ್ಯಾನ ಹಾಗೂ ಆಳವಾದ ಉಸಿರಾಟದ ವ್ಯಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮಿತಿಗೊಳಿಸಿ. ನಿಮ್ಮ ಭಾವನೆಗಳನ್ನು ನಂಬಿಕಸ್ತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಿ. ಒತ್ತಡ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತಿದ್ದರೆ ತಡಮಾಡದೆ ತಜ್ಞರ ಸಲಹೆ ಪಡೆಯಿರಿ. ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಅಭ್ಯಾಸಗಳು ಮಾನಸಿಕ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರಾಚಿ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ದೆಹಲಿ ತಿರುಗೇಟು – Kannada News | India rejected Pakistan’s Karachi blast claims calls it baseless

ನವದೆಹಲಿ, ಜೂನ್ 28: ಪಾಕಿಸ್ತಾನದ ಕರಾಚಿಯಲ್ಲಿ ಇತ್ತೀಚೆಗೆ ಸಿಂಧ್ ರೇಂಜರ್ಸ್ ಕಾಂಪೌಂಡ್ ಮೇಲೆ ನಡೆದ ದಾಳಿಯ ಹಿಂದೆ ನವದೆಹಲಿಯ ಕೈವಾಡವಿದೆ ಎಂಬ ಪಾಕಿಸ್ತಾನದ (Pakistan) ಆರೋಪವನ್ನು ಭಾರತ ತಳ್ಳಿಹಾಕಿದೆ. ಈ ಹೇಳಿಕೆ “ಆಧಾರರಹಿತ” ಎಂದು ಕರೆದಿರುವ ಭಾರತ ಪಾಕಿಸ್ತಾನದಿಂದಲೇ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವುದರತ್ತ ಇಸ್ಲಮಾಬಾದ್ ಗಮನ ಹರಿಸಬೇಕು ಎಂದು ಭಾರತ ಒತ್ತಾಯಿಸಿದೆ.

ಕರಾಚಿ ದಾಳಿಗೆ ಭಾರತವೇ ಕಾರಣ ಎಂದು ಬಿಂಬಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ವರದಿಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, “ಕರಾಚಿಯಲ್ಲಿ ನಡೆದ ಇತ್ತೀಚಿನ ಘಟನೆಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವ ಪಾಕಿಸ್ತಾನದ ವರದಿಗಳನ್ನು ನಾವು ನೋಡಿದ್ದೇವೆ. ನಾವು ಅವುಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಪಾಕಿಸ್ತಾನವು ಇತರರತ್ತ ಬೆರಳು ತೋರಿಸುವುದನ್ನು ನಿಲ್ಲಿಸಬೇಕು. ಅದರ ಬದಲು ತನ್ನದೇ ಭೂಪ್ರದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳ ವಿರುದ್ಧ ವಿಶ್ವಾಸಾರ್ಹ ಕ್ರಮ ತೆಗೆದುಕೊಳ್ಳಬೇಕು ಎಂದು ಜೈಸ್ವಾಲ್ ಹೇಳಿದ್ದಾರೆ. “ಇತರರ ಮೇಲೆ ಗೂಬೆ ಕೂರಿಸುವ ಬದಲು ಪಾಕಿಸ್ತಾನವು ತನ್ನ ದೇಶದ ಒಳಗಡೆ ಕಣ್ಣು ಹಾಯಿಸುವುದು ಉತ್ತಮ. ತನ್ನ ಭೂಪ್ರದೇಶದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ವಿಶ್ವಾಸಾರ್ಹ ಕ್ರಮ ತೆಗೆದುಕೊಳ್ಳಬೇಕು. ಭಯೋತ್ಪಾದನೆಯನ್ನು ರಾಜ್ಯ ನೀತಿಯನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿಯಿಂದ ಮುಕ್ತಿ ಪಡೆಯಬೇಕು” ಎಂದು ವಿದೇಶಾಂಗ ಇಲಾಖೆಯ ವಕ್ತಾರ ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ರಾಂಚಿಯ ಆರ್‌ಎಸ್‌ಎಸ್ ಕಚೇರಿಯ ದಾಳಿಗೆ ಐಎಸ್‌ಐ ನಂಟು; ಭಯೋತ್ಪಾದನಾ ಕೃತ್ಯಕ್ಕೆ ಪಾಕಿಸ್ತಾನದಿಂದ ಫಂಡಿಂಗ್

ಕರಾಚಿಯಲ್ಲಿ ಭಾರೀ ಶಸ್ತ್ರಸಜ್ಜಿತ ಉಗ್ರರು ಸಿಂಧ್ ರೇಂಜರ್ಸ್ ಕಾಂಪೌಂಡ್ ಮೇಲೆ ದಾಳಿ ನಡೆಸಿ, ನಾಲ್ವರು ಅರೆಸೇನಾ ಸಿಬ್ಬಂದಿಯನ್ನು ಬಲಿಪಡೆದ ಭೀಕರ ಗುಂಡಿನ ಚಕಮಕಿ ನಡೆದ ಮರುದಿನವೇ ಭಾರತ ಈ ಹೇಳಿಕೆ ನೀಡಿದೆ. ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ, ಶನಿವಾರ ಸಂಜೆ ಕರಾಚಿಯ ಗುಲಿಸ್ತಾನ್-ಇ-ಜೌಹರ್ ಪ್ರದೇಶದಲ್ಲಿರುವ ಸಿಂಧ್ ರೇಂಜರ್ಸ್‌ನ ಭಿಟ್ಟೈ ವಿಂಗ್ ಪ್ರಧಾನ ಕಚೇರಿಗೆ ಉಗ್ರರು ನುಗ್ಗಿದಾಗ ಈ ದಾಳಿ ಸಂಭವಿಸಿದೆ. ದಾಳಿಕೋರರು ಮೊದಲು ಕಾಂಪೌಂಡ್‌ನ ಮುಖ್ಯ ಗೇಟ್‌ಗೆ ವಾಹನವನ್ನು ಡಿಕ್ಕಿ ಹೊಡೆಸಿ ನಂತರ ಒಳಗೆ ನುಗ್ಗಿ ಗ್ರೆನೇಡ್‌ಗಳನ್ನು ಎಸೆದಿದ್ದರಿಂದ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬರುವ ವರ್ಷಗಳಲ್ಲಿ ಬಹಳ ಬಳಕೆಯಾಗುವ ಟಾಪ್-10 ತಂತ್ರಜ್ಞಾನಗಳು; ಡಬ್ಲ್ಯುಇಎಫ್​ನಿಂದ ಪಟ್ಟಿ ಬಿಡುಗಡೆ – Kannada News | WEF releases list of top emerging technologies that might play important roles in near future

ತಂತ್ರಜ್ಞಾನದ ಸಾಂದರ್ಭಿಕ ಚಿತ್ರImage Credit source: Getty Images

ನವದೆಹಲಿ, ಜೂನ್ 28: ಕಳೆದ ಒಂದು ಶತಮಾನದಿಂದ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಿಂದ ಟೆಕ್ನಾಲಜಿ ಸೂಪರ್ ಫಾಸ್ಟ್ ಆಗಿ ಬದಲಾವಣೆ ಕಾಣುತ್ತಿದೆ. ಇವತ್ತು ಇದ್ದ ತಂತ್ರಜ್ಞಾನ ನಾಳೆ ಔಟ್​ಡೇಟೆಡ್ ಎನಿಸುತ್ತದೆ. ನಾಳೆಯ ದಿನಗಳಲ್ಲಿ ಯಾವ ಟೆಕ್ನಾಲಜಿ ಪ್ರವರ್ಧಮಾನಕ್ಕೆ ಬರುತ್ತದೆ ಎಂದು ಅಂದಾಜಿಸುವುದೂ ಕಷ್ಟವಾಗಿದೆ. ವರ್ಲ್ಡ್ ಎಕನಾಮಿಕ್ ಫೋರಂ ಒಂದು ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮುಂದಿನ ದಿನಗಳಲ್ಲಿ ಬಹಳ ಮುಖ್ಯ ಎನಿಸಲಿರುವ ತಂತ್ರಜ್ಞಾನಗಳ ವಿವರ ಇದೆ. ಮುಂಬರುವ 3 ರಿಂದ 5 ವರ್ಷಗಳಲ್ಲಿ ಜಗತ್ತನ್ನು ಬದಲಾಯಿಸಬಲ್ಲ ಆ 10 ತಂತ್ರಜ್ಞಾನಗಳು ಇಲ್ಲಿವೆ:

1. ಎವೆರಿಥಿಂಗ್-ಟು-ಗ್ರಿಡ್ ಎನರ್ಜಿ

ನಾವು ಬಳಸುವ ಎಲೆಕ್ಟ್ರಿಕ್ ವಾಹನಗಳು (EVs), ಕಟ್ಟಡಗಳು ಮತ್ತು ಇತರೆ ಸಾಧನಗಳು ಕೇವಲ ವಿದ್ಯುತ್ ಬಳಸುವುದಷ್ಟೇ ಅಲ್ಲದೆ, ತಮಗೆ ಬೇಡದ ಸಮಯದಲ್ಲಿ ವಿದ್ಯುತ್ ಅನ್ನು ಗ್ರಿಡ್‌ಗೆ (Grid) ಮರಳಿ ನೀಡುವ ವ್ಯವಸ್ಥೆ ಇದಾಗಿದೆ (Everything-to-grid energy). ಇದು ವಿದ್ಯುತ್ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ.

2. ಡೈರೆಕ್ಟ್ ಲಿಥಿಯಂ ಎಕ್ಸ್‌ಟ್ರಾಕ್ಷನ್

ಬ್ಯಾಟರಿ ತಯಾರಿಕೆಗೆ ಲಿಥಿಯಂ ಅತ್ಯಗತ್ಯ. ಸಾಂಪ್ರದಾಯಿಕವಾಗಿ ಲಿಥಿಯಂ ಹೊರತೆಗೆಯಲು ವರ್ಷಗಟ್ಟಲೆ ಸಮಯ ಬೇಕಾಗುತ್ತಿತ್ತು ಮತ್ತು ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿತ್ತು. ಆದರೆ ನೇರವಾಗಿ ಲಿಥಿಯಂ ಹೊರತೆಗೆಯುವ (Direct lithium extraction – DLE) ಈ ಹೊಸ ತಂತ್ರಜ್ಞಾನದ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಲಿಥಿಯಂ ಪಡೆಯಬಹುದು.

3. ಪ್ಯಾಸಿವ್ ರೇಡಿಯೇಟಿವ್ ಕೂಲಿಂಗ್ ಮೆಟೀರಿಯಲ್ಸ್

ಯಾವುದೇ ವಿದ್ಯುತ್ ಅಥವಾ ಎಸಿ (AC) ಬಳಸದೆ ಕಟ್ಟಡಗಳನ್ನು ತಂಪಾಗಿಡುವ ವಿಶೇಷ ಬಣ್ಣಗಳು ಮತ್ತು ವಸ್ತುಗಳು ಇವಾಗಿವೆ (Passive radiative cooling materials). ಇವು ಸೂರ್ಯನ ಶಾಖವನ್ನು ಶೇ. 95 ರಷ್ಟು ಪ್ರತಿಫಲಿಸಿ, ವಾತಾವರಣದ ಮೂಲಕ ನೇರವಾಗಿ ಬಾಹ್ಯಾಕಾಶಕ್ಕೆ ಕಳುಹಿಸುತ್ತವೆ.

4. ಪಿಎಫ್‌ಎಎಸ್ (PFAS) ರಾಸಾಯನಿಕಗಳ ನಾಶ

‘ಫಾರೆವರ್ ಕೆಮಿಕಲ್ಸ್’ (Forever Chemicals) ಎಂದೇ ಕರೆಯಲ್ಪಡುವ ಪಿಎಫ್‌ಎಎಸ್ (PFAS) ರಾಸಾಯನಿಕಗಳು ಪರಿಸರ ಮತ್ತು ಕುಡಿಯುವ ನೀರಿನಲ್ಲಿ ಸೇರಿ ದೊಡ್ಡ ಸಮಸ್ಯೆಯಾಗಿದ್ದವು. ಇವುಗಳನ್ನು ಸಂಪೂರ್ಣವಾಗಿ ಒಡೆದು ನಿರ್ನಾಮ ಮಾಡುವ ಹೊಸ ತಂತ್ರಜ್ಞಾನಗಳು ಈಗ ವಾಣಿಜ್ಯ ಮಟ್ಟದಲ್ಲಿ ಬಳಕೆಗೆ ಬರುತ್ತಿವೆ.

ಇದನ್ನೂ ಓದಿ: ಕಲ್ಪಾಕ್ಕಂನಲ್ಲಿ ವಿದ್ಯುತ್ ಬದಲು ಪರಮಾಣು ರಿಯಾಕ್ಟರ್​ನ ಶಾಖ ಬಳಸಿ ಹೈಡ್ರೋಜನ್ ಉತ್ಪಾದಿಸುವ ವಿಶ್ವದ ಮೊದಲ ಘಟಕ

5. ಪ್ರಿಸಿಸನ್ ಫರ್ಮೆಂಟೇಶನ್

ಭೂಮಿ, ಹವಾಮಾನ ಅಥವಾ ಜಾನುವಾರುಗಳ ಅಗತ್ಯವಿಲ್ಲದೆ, ಸೂಕ್ಷ್ಮಾಣುಜೀವಿಗಳನ್ನು (Microbes) ಬಳಸಿ ಪ್ರಯೋಗಾಲಯದಲ್ಲೇ ಪ್ರೊಟೀನ್, ಕೊಬ್ಬು ಮತ್ತು ಆಹಾರ ಪದಾರ್ಥಗಳನ್ನು ಭಾರಿ ಪ್ರಮಾಣದಲ್ಲಿ ಉತ್ಪಾದಿಸುವ ತಂತ್ರಜ್ಞಾನ ಇದಾಗಿದೆ (Precision fermentation).

6. ಎಕ್ಸೋಸೋಮ್ ಡ್ರಗ್ ಡೆಲಿವರಿ

ಮಾನವ ದೇಹದ ನೈಸರ್ಗಿಕ ಕಣಗಳಾದ ‘ಎಕ್ಸೋಸೋಮ್‌ಗಳನ್ನು’ ಬಳಸಿ, ಕ್ಯಾನ್ಸರ್ ಅಥವಾ ನರರೋಗಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ದೇಹದ ನಿರ್ದಿಷ್ಟ ಜೀವಕೋಶಗಳಿಗೆ ತಲುಪಿಸುವ ಅತ್ಯಾಧುನಿಕ ವೈದ್ಯಕೀಯ ವಿಧಾನ (Exosome drug delivery).

7. ವೈಯಕ್ತಿಕಗೊಳಿಸಿದ mRNA ಕ್ಯಾನ್ಸರ್ ಲಸಿಕೆಗಳು

ಪ್ರತಿ ರೋಗಿಯ ಕ್ಯಾನ್ಸರ್ ಗಡ್ಡೆಯ (Tumor) ಮ್ಯುಟೇಶನ್‌ಗಳನ್ನು ಆಧರಿಸಿ ಅವರಿಗಾಗಿಯೇ ವಿಶೇಷವಾಗಿ ತಯಾರಿಸುವ ಲಸಿಕೆಗಳು ಇವಾಗಿವೆ. ಇವು (Personalized mRNA cancer vaccines) ರೋಗಿಯ ರೋಗನಿರೋಧಕ ಶಕ್ತಿಯನ್ನು ಎಚ್ಚರಿಸಿ, ಕ್ಯಾನ್ಸರ್ ಕಣಗಳನ್ನು ಮಾತ್ರ ಹುಡುಕಿ ನಾಶಪಡಿಸಲು ತರಬೇತಿ ನೀಡುತ್ತವೆ.

8. ಔಷಧ ಸಂಶೋಧನೆಗಾಗಿ ಕ್ವಾಂಟಮ್ ಸಿಮ್ಯುಲೇಶನ್

ಹೊಸ ಔಷಧಿಗಳನ್ನು ಕಂಡುಹಿಡಿಯಲು ವರ್ಷಗಟ್ಟಲೆ ಸಂಶೋಧನೆ ಮಾಡುವ ಬದಲು, ಕ್ವಾಂಟಮ್ ಕಂಪ್ಯೂಟರ್‌ಗಳ ಮೂಲಕ ಅವುಗಳ ನಡವಳಿಕೆಯನ್ನು ಮೊದಲೇ ಸಿಮ್ಯುಲೇಟ್ (ಅನುಕರಣೆ) ಮಾಡುವ ತಂತ್ರಜ್ಞಾನ. ಇದು (Quantum simulation for drug discovery) ಸಂಶೋಧನೆಯ ಸಮಯ ಮತ್ತು ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.

9. ವರ್ಲ್ಡ್ ಮಾಡೆಲ್ಸ್

ಇದು ಕೃತಕ ಬುದ್ಧಿಮತ್ತೆಯ (AI) ಮುಂದಿನ ಹಂತವಾಗಿದೆ. ಈ ಎಐ ಸಿಸ್ಟಮ್‌ಗಳು (World models) ಕೇವಲ ಪಠ್ಯ ಅಥವಾ ಚಿತ್ರಗಳನ್ನಷ್ಟೇ ಅಲ್ಲದೆ, ಭೌತಿಕ ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತವೆ. ಉದಾಹರಣೆಗೆ, ಭೀಕರ ಚಂಡಮಾರುತಗಳು ಎಲ್ಲಿ ಮತ್ತು ಹೇಗೆ ಸಂಭವಿಸಬಹುದು ಎಂಬುದನ್ನು ಇವು ನಿಖರವಾಗಿ ಊಹಿಸಬಲ್ಲವು.

ಇದನ್ನೂ ಓದಿ: ಗ್ರಾಹಕರ ಹಿತರಕ್ಷಣೆಯೇ ಪ್ರಧಾನ; ಇನ್ಷೂರೆನ್ಸ್ ವಿತರಣೆಯಲ್ಲಿ ಸುಧಾರಣೆಗಳಿಗೆ ಐಆರ್​ಡಿಎಐ ಮುಂದು

10. ಲ್ಯಾಟಿಸ್-ಆಧಾರಿತ ಕ್ರಿಪ್ಟೋಗ್ರಫಿ

ಭವಿಷ್ಯದಲ್ಲಿ ಬರಲಿರುವ ಶಕ್ತಿಶಾಲಿ ಕ್ವಾಂಟಮ್ ಕಂಪ್ಯೂಟರ್‌ಗಳು ಇಂದಿನ ಡಿಜಿಟಲ್ ಭದ್ರತಾ ಕೋಡ್‌ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಲ್ಲವು. ಅದನ್ನು ತಡೆಯಲು ಮತ್ತು ಡಿಜಿಟಲ್ ಡೇಟಾವನ್ನು ಸುರಕ್ಷಿತವಾಗಿಡಲು ರೂಪಿಸಲಾಗಿರುವ ಮುಂದಿನ ಪೀಳಿಗೆಯ ಗಣಿತ ಆಧಾರಿತ ರಕ್ಷಣಾ ವ್ಯವಸ್ಥೆ ಇದಾಗಿದೆ (Lattice-based cryptography).

ಡಬ್ಲ್ಯುಇಎಫ್​ನ ವರದಿಯ ಪ್ರಕಾರ, ಈ ತಂತ್ರಜ್ಞಾನಗಳು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಆಹಾರ ಭದ್ರತೆ, ಹವಾಮಾನ ವೈಪರೀತ್ಯ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ದೊಡ್ಡ ಪರಿಹಾರವನ್ನು ನೀಡಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Important Days in July 2026: ಜುಲೈ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು – Kannada News | Important Days in July 2026: These are the important national and international days celebrated in the month of July

ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಪ್ರತಿ ತಿಂಗಳು ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಜನರಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇನ್ನೇನು ಜೂನ್‌ ಮುಗಿದು ಜುಲೈ (July) ತಿಂಗಳು ಬರುತ್ತಿದ್ದು, ವರ್ಷದ ಈ ಏಳನೇ ತಿಂಗಳಲ್ಲಿಯೂ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ವೈದ್ಯರ ದಿನ, ಕಾರ್ಗಿಲ್‌ ವಿಜಯ ದಿವಸದಿಂದ ಹಿಡಿದು ಅಂತಾರಾಷ್ಟ್ರೀಯ ಹುಲಿ ದಿನದ ವರೆಗೆ ಯಾವೆಲ್ಲಾ ಪ್ರಮುಖ ದಿನಾಚರಣೆಗಳನ್ನು ಆಚರಿಸಲಾಗುತ್ತವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಜುಲೈ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿ:

  • ಜುಲೈ 1 – ರಾಷ್ಟ್ರೀಯ ವೈದ್ಯರ ದಿನ
  • ಜುಲೈ 1 – ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನ
  • ಜುಲೈ 1 – ಚಾರ್ಟರ್ಡ್ ಅಕೌಂಟೆಂಟ್ಸ್ ದಿನ
  • ಜುಲೈ 6 – ವಿಶ್ವ ಪ್ರಾಣಿಜನ್ಯ ಕಾಯಿಲೆಗಳ ದಿನ
  • ಜುಲೈ 7 – ವಿಶ್ವ ಚಾಕೊಲೇಟ್ ದಿನ
  • ಜುಲೈ 7 – ಜಾಗತಿಕ ಕ್ಷಮೆ ದಿನ
  • ಜುಲೈ 10 – ಜಾಗತಿಕ ಇಂಧನ ಸ್ವಾತಂತ್ರ್ಯ ದಿನ
  • ಜುಲೈ 11 – ವಿಶ್ವ ಜನಸಂಖ್ಯಾ ದಿನ
  • ಜುಲೈ 12 – ಕಾಗದದ ಚೀಲ ದಿನ
  • ಜುಲೈ 12 – ಮಲಾಲಾ ದಿನ
  • ಜುಲೈ 13: ರಾಷ್ಟ್ರೀಯ ಫ್ರೆಂಚ್ ಫ್ರೈ ದಿನ
  • ಜುಲೈ 15 – ವಿಶ್ವ ಯುವ ಕೌಶಲ್ಯ ದಿನ
  • ಜುಲೈ 17 – ವಿಶ್ವ ಎಮೋಜಿ ದಿನ
  • ಜುಲೈ 18 – ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ
  • ಜುಲೈ 20 – ಅಂತಾರಾಷ್ಟ್ರೀಯ ಚೆಸ್ ದಿನ
  • ಜುಲೈ 22 – ರಾಷ್ಟ್ರೀಯ ಧ್ವಜ ದಿನ
  • ಜುಲೈ 22 – ರಾಷ್ಟ್ರೀಯ ಮಾವು ದಿನ
  • ಜುಲೈ 25 – ವಿಶ್ವ ಭ್ರೂಣಶಾಸ್ತ್ರಜ್ಞರ ದಿನ
  • ಜುಲೈ 26 – ಕಾರ್ಗಿಲ್ ವಿಜಯ್ ದಿವಸ್
  • ಜುಲೈ 26 – ರಾಷ್ಟ್ರೀಯ ಪೋಷಕರ ದಿನ (ಜುಲೈ ನಾಲ್ಕನೇ ಭಾನುವಾರ)
  • ಜುಲೈ 28 – ವಿಶ್ವ ಪ್ರಕೃತಿ ಸಂರಕ್ಷಣಾ ದಿನ
  • ಜುಲೈ 28 – ವಿಶ್ವ ಹೆಪಟೈಟಿಸ್ ದಿನ
  • ಜುಲೈ 29 – ಅಂತಾರಾಷ್ಟ್ರೀಯ ಹುಲಿ ದಿನ
  • ಜುಲೈ 30 – ಅಂತಾರಾಷ್ಟ್ರೀಯ ಸ್ನೇಹ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾತ್ರೆಗಳ ಮಧ್ಯೆ ಗೆರೆ ಏಕಿರುತ್ತವೆ? ಈ ಲೈನ್‌ನ ಮಹತ್ವವೇನು? – Kannada News | Why is there a line in the middle of pills? What is the purpose of this line?

ಜ್ವರ, ಶೀತ, ತಲೆನೋವು ಇಂತಹ ಯಾವುದೇ ಕಾಯಿಲೆಗಳು ಕಾಣಿಸಿಕೊಂಡಾಗ, ಅನಾರೋಗ್ಯಕ್ಕೆ ತುತ್ತಾದಾಗ ಮಾತ್ರೆಗಳನ್ನು (tablets) ತೆಗೆದುಕೊಳ್ಳಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಟ್ಯಾಬ್ಲೆಟ್‌ಗಳಲ್ಲಿ  ಉದ್ದವಾದ ನೇರ ರೇಖೆ ಇರುವುದನ್ನು ನೀವು ಗಮನಿಸಿರುತ್ತೀರಿ ಅಲ್ವಾ. ಹೆಚ್ಚಿನ ಜನರು ಇದನ್ನು ಮಾತ್ರೆ ವಿನ್ಯಾಸದ ಒಂದು ಭಾಗವೆಂದು ಭಾವಿಸುತ್ತಾರೆ. ಆದರೆ ನಿಜಕ್ಕೂ ಮಾತ್ರೆಗಳಲ್ಲಿ ಗೆರೆಗಳು ಏಕಿವೆ, ಅದರ ಮಹತ್ವವೇನು ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಮಾತ್ರೆಗಳಲ್ಲಿ ಆ ಗೆರೆಗಳ ಮಹತ್ವವೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಮಾತ್ರೆಗಳ ಮಧ್ಯದಲ್ಲಿ ಗೆರೆ ಏಕಿರುತ್ತವೆ?

ಮಾತ್ರೆಗಳ ಮಧ್ಯದಲ್ಲಿ ಒಂದು ನೇರ ಗೆರೆ ಇರುತ್ತದೆ. ಹೆಚ್ಚಿನ ಜನರು ಇದನ್ನು ಮಾತ್ರೆಗಳ ವಿನ್ಯಾಸದ ಒಂದು ಭಾಗವೆಂದು ಪರಿಗಣಿಸುತ್ತಾರೆ, ಆದರೆ ವಾಸ್ತವವಾಗಿ ಈ ರೇಖೆಯು ವಿಶೇಷ ಮಹತ್ವವನ್ನು ಹೊಂದಿದೆ. ಔಷಧೀಯ ಭಾಷೆಯಲ್ಲಿ, ಈ ರೇಖೆಯನ್ನು ‘ಸ್ಕೋರ್ ಲೈನ್’ ಅಥವಾ ʼಬ್ರೇಕ್‌ ಲೈನ್ʼ ಎಂದು ಕರೆಯಲಾಗುತ್ತದೆ. ಇದರ ಉದ್ದೇಶ  ಔಷಧವನ್ನು ಸಮಾನ ಭಾಗಗಳಾಗಿ ವಿಂಗಡಿಸುವುದಾಗಿದೆ.

ಮಾತ್ರೆಗಳಲ್ಲಿ ಸ್ಕೋರ್‌ ಲೈನ್‌ ಏಕಿದೆ?

ಅನೇಕ ರೋಗಿಗಳಿಗೆ ವೈದ್ಯರು ಅರ್ಧ ಮಾತ್ರೆ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸ್ಕೋರ್ ಲೈನ್ ಮಾಡಿದ ಮಾತ್ರೆಯನ್ನು ಸುಲಭವಾಗಿ ಮತ್ತು ಪ್ರಮಾಣಾನುಗುಣವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಉದಾಹರಣೆಗೆ, 500 ಮಿಗ್ರಾಂ ಟ್ಯಾಬ್ಲೆಟ್ 250 ಮಿಗ್ರಾಂ ತೂಕವಿದ್ದರೆ ಮತ್ತು ವೈದ್ಯರು 250 ಮಿಗ್ರಾಂ ಅನ್ನು ಶಿಫಾರಸು ಮಾಡಿದರೆ, ಸ್ಕೋರ್ ಲೈನ್ ಬಳಸಿ ಟ್ಯಾಬ್ಲೆಟ್ ಅನ್ನು ಸಮಾನ ಭಾಗಗಳಾಗಿ ವಿಂಗಡಿಸಬಹುದು.  ಇದು ರೋಗಿಗೆ ಅಗತ್ಯವಿರುವ ಪ್ರಮಾಣದ ಔಷಧವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಮತ್ತು ಡೋಸೇಜ್‌ನಲ್ಲಿ ಹೆಚ್ಚುಕಮ್ಮಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಹೆಣ್ಮಕ್ಳಿಗೆ ಜಿರಳೆಗಳನ್ನು ಕಂಡ್ರೆ ಅಷ್ಟೊಂದು ಭಯವೇಕೆ ಗೊತ್ತೇ?

ವೃದ್ಧರು ಮತ್ತು ಮಕ್ಕಳಿಗೂ ಸಹ ಪ್ರಯೋಜನಕಾರಿ:

ಗಾತ್ರದಲ್ಲಿ ದೊಡ್ಡದಿರುವ ಮಾತ್ರೆಗಳನ್ನು ನುಂಗುವುದು ವಿಶೇಷವಾಗಿ ವೃದ್ಧರು ಮತ್ತು ಮಕ್ಕಳಿಗೆ ಸುಲಭವಲ್ಲ. ಸ್ಕೋರ್ ಲೈನ್ ಹೊಂದಿರುವ ಟ್ಯಾಬ್ಲೆಟ್ ಅನ್ನು ಸಣ್ಣ ತುಂಡುಗಳಾಗಿ ಮುರಿಯುವುದು ಸುಲಭ. ಅದಕ್ಕಾಗಿಯೇ ಅನೇಕ ಔಷಧಿಗಳಲ್ಲಿ ಈ ವೈಶಿಷ್ಟ್ಯವನ್ನು ಒದಗಿಸಲಾಗಿದೆ. ಒಂದು ಮುಖ್ಯವಾದ ವಿಷಯವೆಂದರೆ  ಎಲ್ಲಾ ಮಾತ್ರೆಗಳನ್ನು ಹೀಗೆ ಮುರಿಯಲು ಸಾಧ್ಯವಿಲ್ಲ. ಕೆಲವು ಮಾತ್ರೆಗಳಲ್ಲಿ ಸ್ಕೋರ್‌ಲೈನ್‌ ಇರುವುದಿಲ್ಲ, ಅವುಗಳನ್ನು ಎರಡು ಭಾಗಗಳಾಗಿ ವಿಭಜಿಸಲು ಸಾಧ್ಯವಿಲ್ಲ. ಅವುಗಳನ್ನು ಸಂಪೂರ್ಣ ಮಾತ್ರೆಯಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಇದಲ್ಲದೆ ಔಷಧಿಯನ್ನು ನುಂಗಲು ಸಾಧ್ಯವಾಗದ ಅನೇಕ ಜನರು ತಮಗೆ ಇಷ್ಟ ಬಂದಂತೆ ಮಾತ್ರೆಯನ್ನು ಪುಡಿಮಾಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ಔಷಧದ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರಬಹುದು.  ಹೀಗೆ ಮಾತ್ರೆಗಳ ಬಗ್ಗೆ ಸ್ವಂತವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಬದಲು ಯಾವಾಗಲೂ ವೈದ್ಯಕೀಯ ಸಲಹೆಗಳನ್ನು ಪಾಲಿಸುವುದು ಅತ್ಯಗತ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:02 pm, Sun, 28 June 26

Source link

ಸೌದಿ ಅರೇಬಿಯಾದ ಅರಾಮ್ಕೋ ಹೆಲಿಕಾಪ್ಟರ್ ಪತನ; 14 ಜನ ಸಾವು – Kannada News | 14 people killed in Saudi Aramco helicopter crash in Ras Tanura

ನವದೆಹಲಿ, ಜೂನ್ 28: ಸೌದಿ ಅರೇಬಿಯಾದ ರಾಸ್ ತನೂರಾ (Ras Tanura) ಪ್ರದೇಶದಲ್ಲಿ ಇಂದು (ಭಾನುವಾರ) ಸೌದಿ ಅರಾಮ್ಕೋ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿದ್ದು, 14 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆ ದೇಶದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಂದು ಮುಂಜಾನೆ ಹೆಲಿಕಾಪ್ಟರ್ (Helicopter) ಪತನಗೊಂಡಿದೆ. ಅಧಿಕಾರಿಗಳು ಮೃತಪಟ್ಟವರ ಬಗ್ಗೆ ಅಥವಾ ಈ ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ಹೆಲಿಕಾಪ್ಟರ್ ಸೌದಿ ಅರೇಬಿಯಾದ ಇಂಧನ ದೈತ್ಯ ಸಂಸ್ಥೆಯಾದ ‘ಸೌದಿ ಅರಾಮ್ಕೋ’ಗೆ ಸೇರಿದ್ದಾಗಿದೆ. ಮೃತಪಟ್ಟ ಎಲ್ಲಾ 14 ಜನರೂ ಸೌದಿ ಅರೇಬಿಯಾದ ನಾಗರಿಕರಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ 14 ಜನರೂ ಸೌದಿ ಅರೇಬಿಯಾದ ನಾಗರಿಕರಾಗಿದ್ದಾರೆ ಎಂದು ಸೌದಿ ಪ್ರೆಸ್ ಏಜೆನ್ಸಿ ಧೃಡಪಡಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸೌದಿ ಇಂಧನ ಸಚಿವಾಲಯವು ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದು, ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೇಲೆ ಅಮೆರಿಕದ ಹೆಲಿಕಾಪ್ಟರ್‌ ಪತನ; ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆಂದ ಟ್ರಂಪ್

ವಿಮಾನ ಪತನಕ್ಕೆ ಕಾರಣ ಏನೆಂಬುದರ ಕುರಿತು ಅಧಿಕಾರಿಗಳು ಇನ್ನೂ ಯಾವುದೇ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಅಪಘಾತಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ನಿಖರವಾದ ಕಾರಣವನ್ನು ನಿರ್ಧರಿಸಲು ಇದು ಸೂಕ್ತ ಸಮಯವಲ್ಲ. ತನಿಖೆ ಮುಂದುವರೆದಂತೆ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೌದಿಯ ಇಂಧನ ಸಚಿವಾಲಯವು ಜೀವಹಾನಿಗೆ ತೀವ್ರ ಸಂತಾಪ ಸೂಚಿಸಿದೆ ಮತ್ತು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದೆ.

ಪಶ್ಚಿಮ ಏಷ್ಯಾ ವಲಯದಲ್ಲೇ ಅತಿ ದೊಡ್ಡ ತೈಲ ಶುದ್ಧೀಕರಣ ಘಟಕವನ್ನು ಹೊಂದಿರುವ ಮತ್ತು ಸೌದಿ ಅರಾಮ್ಕೋದ ಅತ್ಯಂತ ಪ್ರಮುಖ ಕಾರ್ಯಾಚರಣೆ ಕೇಂದ್ರಗಳಲ್ಲಿ ಒಂದಾಗಿರುವ ರಾಸ್ ತನೂರಾದಲ್ಲಿ ಈ ಅಪಘಾತ ಸಂಭವಿಸಿದೆ. ಈ ನಗರವು ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ರಫ್ತು ಟರ್ಮಿನಲ್‌ಗಳಲ್ಲಿ ಒಂದನ್ನು ಹೊಂದಿರುವುದಕ್ಕೂ ಹೆಸರುವಾಸಿಯಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version