IND vs IRE: ಶೇ. 70 ರಷ್ಟು ಮಳೆ..! ಸರಣಿ ಸೋಲುವ ಆತಂಕದಲ್ಲಿ ಟೀಂ ಇಂಡಿಯಾ – Kannada News | India Ireland 2nd T20: Rain Threat Looms Over Decisive Match. Pitch Report and Teams

ಟಿ20 ಚಾಂಪಿಯನ್ ಎಂಬ ಪಟ್ಟದೊಂದಿಗೆ ಐರ್ಲೆಂಡ್‌ ಪ್ರವಾಸ ಮಾಡಿದ್ದ ಟೀಂ ಇಂಡಿಯಾ (India-Ireland) ತನ್ನ ಮೊದಲ ಪಂದ್ಯದಲ್ಲಿಯೇ ಹೀನಾಯ ಸೋಲನ್ನು ಎದುರಿಸಿತು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧ 34 ರನ್‌ಗಳ ಅಂತರದಿಂದ ಐತಿಹಾಸಿಕ ಸೋಲನ್ನು ಅನುಭವಿಸಿತ್ತು. ಇದೀಗ ಉಭಯ ತಂಡಗಳ ಎರಡನೇ ಪಂದ್ಯ ಜೂನ್ 28 ರಂದು ನಡೆಯಲಿದೆ. ಈ ಪಂದ್ಯವನ್ನು ಐರ್ಲೆಂಡ್ ಗೆದ್ದರೆ, ಸರಣಿ ಅದರ ಪಾಲಾಗಲಿದೆ. ಇತ್ತ ಭಾರತ ಗೆದ್ದರೆ ಸರಣಿ 1-1 ರ ಸಮಬಲದೊಂದಿಗೆ ಅಂತ್ಯವಾಗಲಿದೆ. ಹೀಗಾಗಿ ಎರಡು ತಂಡಗಳು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಆದಾಗ್ಯೂ ನಾಳೆಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಟೀಂ ಇಂಡಿಯಾವನ್ನು ಚಿಂತಿಗೀಡು ಮಾಡಿದೆ.

ಹವಾಮಾನ ವರದಿ

ಹವಾಮಾನ ವರದಿಯ ಪ್ರಕಾರ, ಪಂದ್ಯ ದಿನದಂದು ಬೆಲ್‌ಫಾಸ್ಟ್​ನಲ್ಲಿ ಭಾರಿ ಮಳೆಯಾಗಲಿದೆ ಎಂದು ವರದಿಯಾಗಿದೆ. ಈ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಿದೆ. ಆದರೆ ಟಾಸ್ ನಡೆಯುವುದಕ್ಕೂ ಮುನ್ನವೇ ಮಳೆ ಬೀಳಲಿದೆ ಎಂದು ವರದಿಯಾಗಿದೆ. ಅಲ್ಲದೆ ಮುಂದಿನ ಎರಡು ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಯುಕೆ ಹವಾಮಾನ ಇಲಾಖೆಯ ಪ್ರಕಾರ, ಭಾರತೀಯ ಕಾಲಮಾನ ಸಂಜೆ 5.30 ಕ್ಕೆ ಟಾಸ್ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ. 70 ರಷ್ಟು ಇದೆ. ಅದಕ್ಕೂ ಒಂದು ಗಂಟೆ ಮೊದಲು ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಟಾಸ್ ನಂತರ ಒಂದು ಗಂಟೆಯಲ್ಲಿ ಮಳೆಯಾಗುವ ಸಾಧ್ಯತೆ ಶೇ. 60 ರಷ್ಟು ಇದೆ.

ರಾತ್ರಿ 8:30 ರ ನಂತರ ಮಳೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಪಂದ್ಯವನ್ನು ಕಡಿಮೆ ಓವರ್‌ಗಳಿಗೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ ಪಂದ್ಯವು ಮಳೆಯಿಂದ ರದ್ದಾದರೆ, ಐರ್ಲೆಂಡ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಸರಣಿಯನ್ನು ಗೆದ್ದ ಇತಿಹಾಸ ನಿರ್ಮಿಸಲಿದೆ.

ಪಿಚ್ ವರದಿ

ಐರ್ಲೆಂಡ್‌ನ ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿರುವ ಪಿಚ್ ಸಾಮಾನ್ಯವಾಗಿ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಆರಂಭಿಕ ಓವರ್‌ಗಳ ನಂತರ, ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಬ್ಯಾಟ್ಸ್‌ಮನ್‌ಗಳು ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಕ್ರೀಸ್‌ನಲ್ಲಿ ಸಮಯ ಕಳೆದರೆ, ರನ್ ಗಳಿಸುವುದು ಸುಲಭವಾಗುತ್ತದೆ.

IND vs IRE: ಇಬ್ಬರು ಇನ್, ಇಬ್ಬರು ಔಟ್; ವೈಭವ್​ಗೆ ಸಿಗುತ್ತಾ ಅವಕಾಶ? ಹೀಗಿದೆ ಪ್ಲೇಯಿಂಗ್ 11

ಉಭಯ ತಂಡಗಳು

ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕೌಲ್ಟಿಡ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೈಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮ ಹೇಗಾಯ್ತು? ಏನೆಲ್ಲಾ ವಿಶೇಷ? – Kannada News | DK Shivakumar participate In Kempegowda Jayanti And SM Krish Road inaugurated, here Is CM Full Day event details

ಬೆಂಗಳೂರು, (ಜೂನ್ 27): ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಇಂದು (ಜೂನ್ 27) ನಾಡಪ್ರಭು ಕೆಂಪೇಗೌಡರ ಜಯಂತಿ (Kempegowda Jayanti) ಅಂಗವಾಗಿ ಬೆಂಗಳೂರಿನ (Bengaluru) ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಲ್ಲದೇ ಇದರೊಂದಿಗೆ ಬೆಂಗಳೂರಿನ ವಾಹನ ಸವಾರರ ಬಹು ನಿರೀಕ್ಷಿತ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆ ಸಂಪರ್ಕಿಸುವ ಎಸ್ ಎಂ ಕೃಷ್ಣ ದಶ ಪಥ ರಸ್ತೆ ಸಿಎಂ ಡಿಕೆ ಶಿವಕುಮಾರ್ ಉದ್ಘಾಟನೆ ಮಾಡಿದ್ದಾರೆ. ಹೀಗೆ ಡಿಕೆ ಶಿವಕುಮಾರ್ ಅವರು ಇಂದು ಒಂದೇ ದಿನ ಸಾಲ ಸಾಲು ಕಾರ್ಯಕ್ರಮಗಳಲ್ಲಿ ಭಾಗಹಿಸಿದ್ದು, ಇದರೊಂದಿಗೆ ಅವರು ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮವಾಗಿದೆ.

ಎಸ್ ಎಂ ಕೃಷ್ಣ ದಶ ಪಥ ರಸ್ತೆ ಉದ್ಘಾಟನೆ

ಬೆಂಗಳೂರಿನ ವಾಹನ ಸವಾರರ ಬಹು ನಿರೀಕ್ಷಿತ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆ ಸಂಪರ್ಕಿಸುವ ಎಸ್ ಎಂ ಕೃಷ್ಣ ದಶ ಪಥ ರಸ್ತೆ ಸಿಎಂ ಡಿಕೆ ಶಿವಕುಮಾರ್ ಉದ್ಘಾಟನೆ ಮಾಡಿದ್ದಾರೆ. ಕಡಬಗೆರೆ ಕ್ರಾಸ್ ನಲ್ಲಿ ರಸ್ತೆಯನ್ನು ರಿಬ್ಬನ್ ಕಟ್ ಮಾಡುವ ಮೂಲಕ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು. ನಾಡಪ್ರಭು ಕೆಂಪೇಗೌಡರ ಜಯಂತಿಯ ದಿನದಂದು, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಹೆಸರಿನ ನೂತನ ದಶಪಥ ರಸ್ತೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಕಡಬಗೆರೆ ಕ್ರಾಸ್‌ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಈ ಭವ್ಯ ರಸ್ತೆಯು ಸಂಪೂರ್ಣವಾಗಿ ಟೋಲ್‌ ಮುಕ್ತವಾಗಿದೆ. ಬೆಂಗಳೂರಿನ ಮೂಲಸೌಕರ್ಯಕ್ಕೆ ದೊಡ್ಡ ಕೊಡುಗೆಯಾಗಿರುವ ಈ ರಸ್ತೆ, ನಗರದ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸಲಿದೆ.

ಎಸ್ ಎಂ ಕೃಷ್ಣ ದಶ ಪಥ ರಸ್ತೆ  ಬಗ್ಗೆ ಮಾಹಿತಿ

ಕಡಬಗೆರೆಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ನಡುವಿನ ನೂತನ ಹೆದ್ದಾರಿಯು 10.7 ಕಿ.ಮೀ. ಉದ್ದ ಹಾಗೂ 100 ಮೀಟರ್ ಅಗಲದ ಕಾರಿಡಾರ್ ಇದಾಗಿದೆ. ಸಿಗ್ನಲ್ ಫ್ರೀ ಮತ್ತು ಟೋಲ್ ಮುಕ್ತವಾಗಿದೆ. ಸುಮಾರು 631 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ರಸ್ತೆಯನ್ನು ನಿರ್ಮಿಸಿದೆ. ರಸ್ತೆಯ ಎರಡು ಬದಿಗಳಲ್ಲಿ 27 ಮೀಟರ್ ಹಸಿರು ವನಸಿರಿ ನಿರ್ಮಿಸಲಾಗಿದೆ. ಭವಿಷ್ಯದ ಮೆಟ್ರೋ ಯೋಜನೆಗಾಗಿ 3 ಮೀಟರ್ ಮಧ್ಯದ ವಿಭಜಕ ಹೊಂದಲಾಗಿದೆ. ಕಡಬಗೆರೆ ಕ್ರಾಸ್​ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಕ್ಕೆ ನೇರ ಸಂಪರ್ಕವಿದೆ. ನಾಡಪ್ರಭು ಕೆಂಪೇಗೌಡ ಲೇಔಟ್ ಎಲ್ಲಾ 9 ಬ್ಲಾಕ್​ಗಳನ್ನ ಜೋಡಿಸುವ ರಸ್ತೆ ಇದಾಗಿದೆ. ಈ ಮಾರ್ಗದಲ್ಲಿ 3 ಅಂಡರ್ ಪಾಸ್, 11 ಸೇತುವೆಗಳು ಮತ್ತು 270 ಮೀಟರ್ ಸುರಂಗ ಮಾರ್ಗವಿದೆ. ಸುಸಜ್ಜಿತ ಸರ್ವೀಸ್ ರಸ್ತೆಗಳು ಹಾಗೂ ಸ್ಲೈಕ್ಲಿಂಗ್​ಗಾಗಿ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಲಾಗಿದೆ.

ಮ್ಯಾರಥಾನ್ ಆಯೋಜನೆ

ಕಾರ್ಯಕ್ರಮದಲ್ಲಿ ಎಸ್ ಎಂ ಕೃಷ್ಣ ಪತ್ನಿ ಪ್ರೇಮಾ ಕೃಷ್ಣ, ಡಿಸಿಎಂ ಜಿ ಪರಮೇಶ್ವರ್, ಸಚಿವರಾದ ಕೃಷ್ಣ ಬೈರೇಗೌಡ, ಮುನಿಯಪ್ಪ, ಶಾಸಕರಾದ ಎನ್ ಎ ಹ್ಯಾರಿಸ್, HC ಬಾಲಕೃಷ್ಣ, ST ಸೋಮಶೇಖರ್ ಸೇರಿ ಹಲವು ಗಣ್ಯರು ಉಪಸ್ಥಿತಿತರಿದ್ದರು. ಇನ್ನು ರಸ್ತೆ ಉದ್ಘಾಟನೆಗೆ ಮಾತ್ರ ಕಾರ್ಯಕ್ರಮ ಸೀಮಿತವಾಗಿರಲಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ 10 k ಹಾಗೂ 5 k ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಂದಿ ಸಕತ್ ಜೋಶ್ ನೊಂದಿಗೆ ಮ್ಯಾರಥಾನ್ ನಲ್ಲಿ ಭಾಗಿಯಾಗಿದ್ದರು.

15 ಲಕ್ಷ ಸಸಿಗಳನ್ನು ನೆಡುವ ಕಾರ್ಯ

ಮತ್ತೊಂದು ಮಹತ್ವದ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೇ ಬರೋಬ್ಬರಿ 15 ಲಕ್ಷ ಸಸಿಗಳನ್ನು ನೆಡುವ ಕಾರ್ಯ. ಕೆಂಪೇಗೌಡ ಲೇಔಟ್ ನ 17 ಕಡೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಉಳಿದಂತೆ ಬಿಡಿಎ ಗೆ ಸೇರಿದ ಹಲವು ಲೇಔಟ್ ಗಳಲ್ಲೂ ಲಕ್ಷಾಂತರ ಸಸಿಗಳನ್ನು ನೆಡಲಾಗಿದೆ. ಕಾಲೇಜು ಯುವಕ ಯುವತಿಯರು, ಮಕ್ಕಳು, ಬಿಬಿಎಂಪಿ ಪೌರಕಾರ್ಮಿಕರು, ಸ್ವಯಂ ಸೇವಕರು ಸೇರಿ 50 ಸಾವಿರಕ್ಕೂ ಹೆಚ್ಚು ಮಂದಿ ಈ ಪರಿಸರ ಉಳಿಸುವ ಮಹತ್ಕಾರ್ಯಕ್ಕೆ ಸಾಕ್ಷಿಯಾದರು.

ಇನ್ನು ದಶ ಪಥ ರಸ್ತೆಗೆ ಯಾವುದೇ ತಕರಾರು ಇಲ್ಲದೆ ಭೂಮಿ ಕೊಟ್ಟ ಸ್ಥಳೀಯರ ಸಹಾಯವನ್ನು ನೆನೆಯುವ ಕೆಲಸ ಕೂಡ ಬಿಡಿಎ ಮಾಡಿದೆ. ರಸ್ತೆಯ ಜಂಕ್ಷನ್ ಗಳಲ್ಲಿ ವಾಲ್ ಆಫ್ ಗ್ರಾಟಿಟ್ಯುಡ್ ಮೂಲಕ ಅವರ ಹೆಸರನ್ನು ಹಾಕಿ ಕೃತಜ್ಞತೆ ಸಲ್ಲಿಸಿದೆ. ಒಟ್ಟಾರೆ ಡಿಕೆ ಶಿವಕುಮಾರ್ ಅವರು ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮ ಇದು ಅಂತಲೇ ಹೇಳಬಹುದು. ಒಟ್ಟಾರೆ ಎಸ್ ಎಂ ಕೃಷ್ಣ ರಸ್ತೆ ನಗರದ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡುವುದರಲ್ಲಿ ಅನುಮಾನ ಇಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ನಿರ್ಮಾಪಕರಿಗೆ ಪ್ರಮುಖ ಜವಾಬ್ದಾರಿ ವಹಿಸಿದ ಸಿಎಂ ವಿಜಯ್ – Kannada News | Producer K Venkat Narayan appointed as TN government’s special representative at New Delhi

ದಳಪತಿ ವಿಜಯ್ (Thalapathy Vijay) ಅವರು ಸಿಎಂ ಆದ ಬಳಿಕ ಕೆಲವು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ವಿವಿಧ ಹುದ್ದೆಗೆ ಕೆಲವು ಪ್ರತಿಭಾವಂತರನ್ನು, ಗೌರವಾನ್ವಿತರನ್ನು, ತಮ್ಮ ಆಪ್ತರಗಳನ್ನು ನೇಮಿಸುವ ಕಾರ್ಯವನ್ನೂ ಸಹ ಜೊತೆ-ಜೊತೆಯಾಗಿ ಮಾಡುತ್ತಿದ್ದಾರೆ. ಇದೀಗ ನಟ ವಿಜಯ್ ಅವರ ನಿರ್ಣಯವೊಂದು ಹಲವರಿಗೆ ಅಚ್ಚರಿ ತಂದಿದೆ. ವಿಜಯ್ ಅವರು ತಮ್ಮ ಕೊನೆಯ ಸಿನಿಮಾ, ಇನ್ನೂ ಬಿಡುಗಡೆ ಆಗದ ‘ಜನ ನಾಯಗನ್’ನ ನಿರ್ಮಾಪಕರಿಗೆ ಸರ್ಕಾರದ ಪ್ರಮುಖ ಜವಾಬ್ದಾರಿಯೊಂದನ್ನು ವಹಿಸಿದ್ದಾರೆ.

ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾದ ನಿರ್ಮಾಪಕ, ಕೆವಿಎನ್ ಪ್ರೊಡಕ್ಷನ್​​ನ ಮಾಲೀಕ ಕೆ ವೆಂಕಟ್ ನಾರಾಯಣ ಅವರಿಗೆ ವಿಜಯ್ ಅವರು ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ವೆಂಕಟ್ ಅವರನ್ನು ನವದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನೇಮಕಾತಿಯು ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿದೆ. ಚರ್ಚೆಗೂ ಸಹ ಕಾರಣವಾಗಿದೆ.

ತಮಿಳುನಾಡು ಸರ್ಕಾರವು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವೆಂಕಟ್ ನಾರಾಯಣ ಅವರು ತಮ್ಮ ಹೊಸ ಹುದ್ದೆಯ ಮೂಲಕ ನವದೆಹಲಿಯಲ್ಲಿ ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ಈ ಹುದ್ದೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಪರ್ಕವನ್ನು ಬಲಪಡಿಸುವ ಹುದ್ದೆಯಾಗಿರಲಿದೆ. ವೆಂಕಟ್ ಅವರ ಆಡಳಿತಾತ್ಮಕ ಅನುಭವ ಮತ್ತು ರಾಜಕೀಯ ಸಂಪರ್ಕಗಳನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಕೆ ವೆಂಕಟ್ ನಾರಾಯಣ್ ಅವರು ಉದ್ಯಮಿ ಆಗಿದ್ದವರು. ಬಳಿಕ ಸಿನಿಮಾ ನಿರ್ಮಾಣಕ್ಕೆ ಇಳಿದರು. ಈಗ ಅವರು ಸಿನಿಮಾ ರಂಗದಿಂದ ನೇರವಾಗಿ ಸರ್ಕಾರದ ಆಡಳಿತಾತ್ಮಕ ಮಟ್ಟಕ್ಕೆ ಏರಿದ್ದಾರೆ. ಚಿತ್ರರಂಗದ ವ್ಯಕ್ತಿಗಳು ರಾಜಕೀಯದಲ್ಲಿ ಸಕ್ರಿಯರಾಗುವುದು ಹೊಸದೇನಲ್ಲ. ಇಂತಹ ಉನ್ನತ ಸರ್ಕಾರಿ ಹುದ್ದೆಯಲ್ಲಿ ನಿರ್ಮಾಪಕರೊಬ್ಬರು ನೇಮಕವಾಗಿರುವುದು ತಮಿಳುನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ನೇಮಕಾತಿಯ ಕುರಿತು ಪ್ರತಿಕ್ರಿಯಿಸಿರುವ ವೆಂಕಟ ನಾರಾಯಣ, ಸರ್ಕಾರ ತಮಗೆ ನೀಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದಾಗಿ ಮತ್ತು ತಮಿಳುನಾಡಿನ ಅಭಿವೃದ್ಧಿಗಾಗಿ ದೆಹಲಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಅವರ ಈ ಹೊಸ ಪ್ರಯಾಣವು ಯಶಸ್ವಿಯಾಗಲಿ ಎಂದು ಸಿನಿಮಾ ಉದ್ಯಮದ ಕೆಲ ಗಣ್ಯರು ಶುಭ ಹಾರೈಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ- ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಕದನ; ಹರ್ಮನ್ ಪಡೆ ಗೆದ್ದರಷ್ಟೇ ಸೆಮೀಸ್ ಆಸೆ ಜೀವಂತ – Kannada News | India Women vs Australia T20 World Cup: Semifinal Decider! Match Details and Squads

2026 ರ ಮಹಿಳಾ ಟಿ20 ವಿಶ್ವಕಪ್‌ನ (2026 Women’s T20 World Cup) ಕೊನೆಯ ಗುಂಪು ಪಂದ್ಯದಲ್ಲಿ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ಮಹಿಳಾ (India Women vs Australia Women) ತಂಡವನ್ನು ಎದುರಿಸಲಿದೆ. ಈ ಸುತ್ತಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದು, ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇತ್ತ ಆಸ್ಟ್ರೇಲಿಯಾ ತಂಡ ಆಡಿರುವ ನಾಲ್ಕು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸೆಮಿಫೈನಲ್‌ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೆ ಬಹುಮುಖ್ಯವಾಗಿದೆ. ಅದರಲ್ಲೂ ಈಗಾಗಲೇ ಒಂದು ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದರಷ್ಟೇ ಸೆಮಿಫೈನಲ್‌ ರೇಸ್​ನಲ್ಲಿ ಉಳಿಯಲಿದೆ. ಇಲ್ಲದಿದ್ದರೆ ಸೆಮಿಫೈನಲ್‌ ರೇಸ್​ನಿಂದ ಹೊರಬೀಳಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಜೂನ್ 28 ರಂದು ನಡೆಯಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್​ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗುತ್ತದೆ.

ಒಂದೇ ಒಂದು ಪಂದ್ಯ ಗೆದ್ದು ಟಿ20 ವಿಶ್ವಕಪ್​ನಿಂದ ಹೊರಬಿದ್ದ ಪಾಕಿಸ್ತಾನ

ಉಭಯ ತಂಡಗಳು

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಪ್ರೇಮಾ ರಾವತ್, ರಾಧಾ ಯಾದವ್.

ಆಸ್ಟ್ರೇಲಿಯಾ ಮಹಿಳಾ ತಂಡ: ಬೆತ್ ಮೂನಿ, ಜಾರ್ಜಿಯಾ ವೋಲ್, ಎಲಿಸ್ ಪೆರ್ರಿ, ಆಶ್ಲೀ ಗಾರ್ಡ್ನರ್, ಜಾರ್ಜಿಯಾ ವೇರ್‌ಹ್ಯಾಮ್, ನಿಕೋಲಾ ಕ್ಯಾರಿ, ಅನ್ನಾಬೆಲ್ ಸದರ್ಲ್ಯಾಂಡ್, ಸೋಫಿ ಮೊಲಿನಿಯಕ್ಸ್ (ನಾಯಕಿ), ಅಲಾನಾ ಕಿಂಗ್, ಕಿಮ್ ಗಾರ್ತ್, ಲೂಸಿ ಹ್ಯಾಮಿಲ್ಟನ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಮೇಗನ್ ಶುಟ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರ: ಬೈಕ್​ಗೆ ಟ್ರ್ಯಾಕ್ಟರ್​ ಡಿಕ್ಕಿ; ಮಗಳು ಸೇರಿ ತಂದೆ-ತಾಯಿ ಸ್ಥಳದಲ್ಲೇ ದುರ್ಮರಣ – Kannada News | Road Accident: Three Family Members death in Bike Tractor Collision

ಕೋಲಾರ, ಜೂನ್​ 27: ಟ್ರ್ಯಾಕ್ಟರ್​ ಡಿಕ್ಕಿ (accident) ಹೊಡೆದ ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ದಂಪತಿ ಹಾಗೂ  ಪುತ್ರಿ ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಿ.ಗುಟ್ಟಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತ ಉಂಟಾಗಿದೆ. ಎನ್.ಚಮಕಲಹಳ್ಳಿ ಗ್ರಾಮದ ನಿವಾಸಿ ಅಬೂಬಕರ್(38), ಪತ್ನಿ ಸಾಬೀರಾ(37), ಪುತ್ರಿ ಜೋಯಾ(16) ಮೃತರು. ಕಲ್ಲು ಕೆಲಸಕ್ಕೆ ಹೋಗಿ ವಾಪಸ್ಸಾಗುವ ವೇಳೆ ದುರ್ಘಟನೆ ಸಂಭವಿಸಿದೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಓರ್ವ ಸವಾರ ಸಾವು

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಶಿಡ್ಲೆ ಬಳಿ ನಡೆದಿದೆ. ಕೊಟ್ಟಿಗೆಹಾರ ನಿವಾಸಿ ಅಭಿಷೇಕ್ (26) ಮೃತ ದುರ್ದೈವಿ. ಗಂಭೀರ ಗಾಯಗೊಂಡಿದ್ದ ಸಂಕೇತ್‌ಗೆ ಶೃಂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಂಜನಾದ್ರಿಗೆ ಹೋಗುವಾಗ ಬೈಕ್​ ಅಪಘಾತ: ಸವಾರ ಸಾವು

ಬೈಕ್​​ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವಂತಹ ಘಟನೆ ಕೊಪ್ಪಳ ತಾಲೂಕಿನ ಶಿವಪುರ ಬಳಿ ನಡೆದಿದೆ. ಜಿಲ್ಲೆಯ ಯಲಬುರ್ಗಾ ಪಟ್ಟಣದ ನಿವಾಸಿ ಪ್ರಕಾಶ್ (28) ಮೃತ ವ್ಯಕ್ತಿ. ಶನಿವಾರ ಹಿನ್ನೆಲೆ ಹನುಮನ ದರ್ಶನಕ್ಕೆ ಅಂಜನಾದ್ರಿಗೆ ಪ್ರಕಾಶ್ ಹಾಗೂ ಸ್ನೇಹಿತ ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಚಿರತೆ ಸಾವು

ಅಪರಿಚಿತ ವಾಹನ ಡಿಕ್ಕೆ ಹೊಡೆದಿದ್ದಕ್ಕೆ ಸ್ಥಳದಲ್ಲೇ ಚಿರತೆ ಸಾವನ್ನಪ್ಪಿರುವಂತಹ ಘಟನೆ ಮೈಸೂರು–ಹುಣಸೂರು ಹೆದ್ದಾರಿಯ ಅರಬ್ಬಿತಿಟ್ಟು ವನ್ಯಧಾಮದ ಬಳಿ ನಡೆದಿದೆ. ಅರಬ್ಬಿತಿಟ್ಟು ಸಂರಕ್ಷಿತ ಅರಣ್ಯದಿಂದ ಎದುರಿನ ಅರಣ್ಯದತ್ತ ಆಹಾರ ಅರಸಿ ರಸ್ತೆ ದಾಟುತ್ತಿದ್ದ ವೇಳೆ ಚಿರತೆಗೆ ವಾಹನ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಚಿರತೆ ಮೃತಪಟ್ಟಿದೆ.

ಇದನ್ನೂ ಓದಿ: ಕೊಪ್ಪಳ: ಭಾನಾಪೂರ ಬಳಿ ಭೀಕರ ಅಪಘಾತ, ನಾಲ್ವರು ಸಾವು

ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಿಳಿಕೆರೆ ಠಾಣೆ ಪೊಲೀಸರಿಂದಲೂ ಪರಿಶೀಲನೆ ಮಾಡಲಾಗಿದ್ದು, ಅಪರಿಚಿತ ವಾಹನ ಪತ್ತೆಗೆ ಕಾರ್ಯಾಚರಣೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

12 ಶಾಸಕರು ಅಡ್ಡಮತದಾನ, ಕೋಡ್ ವರ್ಡ್ ಪಾಲಿಸದೇ ಎಡವಟ್ಟು: ಸತ್ಯಶೋಧನಾ ಸಮಿತಿ ವರದಿಯ ಸ್ಫೋಟಕ ಅಂಶ ಬಹಿರಂಗ – Kannada News | Cross voting In MLC Elections: Karnataka BJP Fact Finding Committee Submits Report, here Is highlights

ಬೆಂಗಳೂರು, (ಜೂನ್ 27): ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ (karnataka MLC Elections 2026) ಬಿಜೆಪಿ ಹಾಗೂ ಮಿತ್ರ ಪಕ್ಷ ಜೆಡಿಎಸ್ (BJP And JDS)  ಶಾಸಕರು ಅಡ್ಡಮತದಾನ (Cross Voting) ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅದರಲ್ಲೂ ಮುಖ್ಯವಾಗಿ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಇದನ್ನು ಹೈಕಮಾಂಡ್ ನಾಯಕರು ಸಹ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ನು ಈ ಸಂಬಂಧ ರಾಜ್ಯ ಬಿಜೆಪಿ ರಚಿಸಿದ್ದ ಸತ್ಯಶೋಧನಾ ಸಮಿತಿ ಮಧ್ಯಂತರ ವರದಿ ನೀಡಿದೆ. ಸಿಟಿ ರವಿ ನೇತೃತ್ವದ ಸಮಿತಿ ಇಂದು (ಜೂನ್ 27) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ನೀಡಿದ್ದು, ಎನ್‌ಡಿಎ ಮೈತ್ರಿಗೆ ಸೇರಿದ್ದ 12 ಮತಗಳಲ್ಲಿ ಒಂದು ಅಸಿಂಧುವಾಗಿದೆ. ಇನ್ನುಳಿದ ಮೂರು ಮತಗಳು ಕ್ರಾಸ್ ವೋಟಿಂಗ್ ಆಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

3 ಪುಟಗಳ ಮಧ್ಯಂತರ ವರದಿ ಸಲ್ಲಿಕೆ

ಮೈತ್ರಿ ಅಭ್ಯರ್ಥಿಗೆ ನಿರೀಕ್ಷಿತ ಮತಗಳು ಸಿಗದ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಿ.ಟಿ. ರವಿ, ಮಾಜಿ ಸಚಿವ ಎನ್. ಮಹೇಶ್, ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದ ತ್ರಿಸದಸ್ಯ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದರು. ನಾಲ್ಕು ದಿನಗಳ ಕಾಲ ಪಕ್ಷದ ಶಾಸಕರು, ಮುಖಂಡರು ಹಾಗೂ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಸಮಿತಿ, ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಮುಚ್ಚಿದ ಲಕೋಟೆಯಲ್ಲಿ ಸುಮಾರ 3 ಪುಟಗಳ ಮಧ್ಯಂತರ ವರದಿಯನ್ನು ವಿಜಯೇಂದ್ರ ಅವರಿಗೆ ಸಲ್ಲಿಸಿದೆ.

ಇದನ್ನೂ ಓದಿ: ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ವರದಿ ಸಲ್ಲಿಕೆ ಮುನ್ನವೇ ಸ್ಫೋಟಕ ಮಾಹಿತಿ ಬಹಿರಂಗ

ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಸಿ.ಟಿ. ರವಿ, ಪಕ್ಷದ ಅಧ್ಯಕ್ಷರ ಸೂಚನೆಯಂತೆ ಆಂತರಿಕ ತನಿಖೆ ನಡೆಸಿ ವರದಿ ನೀಡಿದ್ದೇವೆ ಎಂದರು. ಮಾಧ್ಯಮಗಳಲ್ಲಿ ಬಂದ ಮಾಹಿತಿ, ವಿವಿಧ ನಾಯಕರ ಅಭಿಪ್ರಾಯ ಹಾಗೂ ಲಭ್ಯ ಮಾಹಿತಿಯ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ. ಇದು ಸಂಪೂರ್ಣ ಆಂತರಿಕ ವರದಿಯಾಗಿರುವುದರಿಂದ ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಎನ್‌ಡಿಎ ಮೈತ್ರಿಗೆ ಸೇರಿದ್ದ 12 ಮತಗಳಲ್ಲಿ ಒಂದು ಅಸಿಂಧುವಾಗಿದ್ದು, ಮೂರು ಮತಗಳು ಕ್ರಾಸ್ ವೋಟಿಂಗ್ ಆಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸಮಿತಿ ನೀಡಿದ ವರದಿಯ ಪ್ರಮುಖ ಅಂಶಗಳೇನು?

  • ಮೈತ್ರಿ ಪಕ್ಷದಿಂದ ಒಟ್ಟು 12 ಶಾಸಕರಿಂದ ಅಡ್ಡ ಮತದಾನ ಮಾಡಿರುವ ಅನುಮಾನ
  • ಈ ಪೈಕಿ ಬಿಜೆಪಿಯಿಂದ ಒಂದು ಅಸಿಂಧು ಮತ
  •  ಒಟ್ಟು ನಾಲ್ಕು ಅಡ್ಡ ಮತಗಳ ಲೆಕ್ಕಾಚಾರ
  • ಅಡ್ಡ ಮತದಾನ ಮಾಡಿದ ಶಾಸಕರ ಹೆಸರುಗಳನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ
  •  ಬದಲಾಗಿ ಅಡ್ಡ ಮತಗಳ ಸಂಖ್ಯೆಯನ್ನು ಮಾತ್ರ ದಾಖಲಿಸಿದೆ
  •  ಅನುಮಾನ ಇರುವ ಶಾಸಕರ ಮೇಲೆ ತೀವ್ರ ನಿಗಾ ಇಡುವಂತೆ ಸಮಿತಿ ಶಿಫಾರಸು

ಬೆಳಗಾವಿ ಮೂಲದ ಹಿರಿಯ ಶಾಸಕರಿಂದಲೇ ಅಡ್ಡ ಮತದಾನ

ಮಾಹಿತಿಯ ಪ್ರಕಾರ, ಬೆಳಗಾವಿ ಮೂಲದ ಹಿರಿಯ ಶಾಸಕರಿಂದಲೇ ಅಡ್ಡ ಮತದಾನ ನಡೆದಿದೆ ಎಂಬ ಶಂಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಸಮಿತಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದ್ದು, ಆಂತರಿಕವಾಗಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಕೇಂದ್ರ ನಾಯಕತ್ವದ ಮುಂದೆಯೂ ಬೆಳಗಾವಿ ರಾಜಕಾರಣ ಮತ್ತು ಅಡ್ಡ ಮತದಾನ ಪ್ರಕರಣ ಪ್ರಸ್ತಾಪವಾಗಿದ್ದು, ಕುತೂಹಲ ಹೆಚ್ಚಿಸಿದೆ. ಇದೀಗ ಕೇಂದ್ರ ನಾಯಕರು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ರಾಜ್ಯ ನಾಯಕರಿಗೆ ಸೂಕ್ತ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಕೋಡ್ ವರ್ಡ್ ಸಲಹೆ ಪಾಲಿಸದೆಯೇ ಎಡವಟ್ಟು

ವಿಧಾನ ಪರಿಷತ್ ಚುನಾವಣೆಯ ಮತದಾನದ ಸಂದರ್ಭದಲ್ಲಿ ಶಾಸಕರಿಗೆ ವಿನೂತನ ಮಾದರಿಯ ಕೋಡ್ ವರ್ಡ್ ಸಲಹೆ ನೀಡಲಾಗಿತ್ತು. ಈ ಹಿಂದೆ ರಾಜ್ಯಸಭಾ ಮತ್ತು ಪರಿಷತ್ ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಫಾರ್ಮೆಟ್ ರೆಡಿ ಮಾಡಿದ್ದರು. ಆ ಫಾರ್ಮೆಟ್ ಅನುಗುಣವಾಗಿ ಶಾಸಕರಿಗೆ ಇಂತಹ ವ್ಯಕ್ತಿಗೆ ಮತಹಾಕಲು ಕೋಡ್ ರೆಡಿ ಮಾಡುತ್ತಿದ್ದರು. ಆದ್ರೆ ರಾಜ್ಯ ನಾಯಕರು ಇದನ್ನ ಕಡಗಣಿಸಿರುವ ಆರೋಪ ಕೇಳಿ ಬರ್ತಿದೆ.

ಹಿರಿಯ ನಾಯಕರು ಅಸಮಾಧಾನ

ಪರಿಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಸಂಖ್ಯೆ ಕಡಿಮೆ ಇದ್ದರು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಪ್ಲ್ಯಾನ್ ಮಾಡಿಲ್ಲ. ಮತದಾನದ ಬೆಳಗ್ಗೆ ವಿಪ್ ಜಾರಿ ಮಾಡಿದ್ದಾರೆಂದು ಬಿಜೆಪಿ ಹಿರಿಯ ನಾಯಕರು ಬೇಸರಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ 28 ಮತಗಳು ಅಗತ್ಯ. ಆದ್ರೆ 30 ಮತಗಳು ಹಾಕಿಸಿದ್ದಾರೆ. 29 ಮತದಾನ ಹಾಕಿದ್ರು ಪರವಾಗಿಲ್ಲ. ಆದ್ರೆ 30 ಮತ ಹಾಕಿಸಿ NDA ಅಭ್ಯರ್ಥಿಗೆ ಮತ ಕೊರತೆ ಉಂಟಾಗಿತ್ತು. ಹಿರಿಯರ ಸಲಹೆ ಪರಿಗಣಿಸುತ್ತಿಲ್ಲ ಎಂಬ ಆರೋಪಗಳು, ಅಸಮಾಧಾನವೂ ಜೋರಾಗಿಯೇ ಕೇಳಿ ಬರ್ತಿದೆ‌.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದು, ವರದಿ ರಾಜ್ಯಾಧ್ಯಕ್ಷರಿಗೆ ಸಲ್ಲಿಕೆಯಾಗಿದೆ. ಮುಂದಿನ ಹಂತದಲ್ಲಿ ಅದನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ವರದಿ ಆಂತರಿಕ ತನಿಖೆಯ ಭಾಗವಾಗಿರುವುದರಿಂದ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಅಡ್ಡ ಮತದಾನ ಮಾಡಿದವರ ಸಂಖ್ಯೆ ಬಗ್ಗೆ ಊಹಾಪೋಹ ನಡೆಸಬಾರದು ಎಂದು ಹೇಳಿದ ಅವರು, ಮುಂದಿನ ಕ್ರಮವನ್ನು ಪಕ್ಷದ ನಾಯಕರೇ ನಿರ್ಧರಿಸಲಿದ್ದಾರೆಂದು ಸ್ಪಷ್ಟಪಡಿಸಿದರು.

ಸದ್ಯಕ್ಕೆ ಸತ್ಯ ಶೋಧನಾ ವರದಿಯ ಆಧಾರದ ಮೇಲೆ ಕೋರ್ ಕಮಿಟಿ ಹಾಗೂ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತೆ ಅಂತ ಹೇಳಲಾಗ್ತಿದೆ. ಮತ್ತೊಂದೆಡೆ ಕೇಂದ್ರದ ನಾಯಕರು ಚುನಾವಣೆ ವೇಳೆ ನೀಡಿದ್ದ ಮಾದರಿಯ ಕೋಡ್ ವರ್ಡ್ ರಾಜ್ಯದ ನಾಯಕರು ಕಡಿಗಣಿಸಿದ್ದು ಮತ್ತೊಂದು ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್ ವಿರುದ್ಧ ಸಿನಿಮಾ, ಪ್ರಾಜೆಕ್ಟ್​​ನಿಂದ ಹೊರನಡೆದ ನಟ – Kannada News | Actor Sonu Mishra out from Kaala Hiran movie which is about Salman Khan

ಸಲ್ಮಾನ್ ಖಾನ್ (Salman Khan) ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಜೊತೆಗೆ ವಿರೋಧಿಸುವವರೂ ಸಹ ಇದ್ದಾರೆ. ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಒಂದು ದೊಡ್ಡ ತಂಡವೇ ಪ್ರಯತ್ನಿಸುತ್ತಿದೆ. ಇನ್ನು ಕೆಲವರು ಸಲ್ಮಾನ್ ಖಾನ್ ಅವರ ವಿರುದ್ಧ ಪೋಸ್ಟ್​ಗಳನ್ನು ಹಾಕುತ್ತಾ, ಅವರ ಬಗ್ಗೆ ಸಂದರ್ಶನಗಳಲ್ಲಿ ಋಣಾತ್ಮಕವಾಗಿ ಮಾತನಾಡುತ್ತಾ ಅವರ ವ್ಯಕ್ತಿಕತ್ವವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬರು, ಸಲ್ಮಾನ್ ಖಾನ್ ಅವರ ವಿವಾದಗಳಲ್ಲಿ ಒಂದಾಗಿರುವ ಕೃಷ್ಣ ಮೃಗ ಭೇಟೆಯ ವಿಷಯವಾಗಿ ಸಿನಿಮಾ ಮಾಡಲು ಮುಂದಾಗಿದ್ದರು. ಸಿನಿಮಾಕ್ಕೆ ‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ’ ಎಂದು ಹೆಸರಿಡಲಾಗಿತ್ತು. ಆದರೆ ಇದೀಗ ಸಿನಿಮಾದ ನಟರೊಬ್ಬರು ಸಿನಿಮಾದಿಂದ ಹೊರ ಬಂದಿದ್ದಾರೆ.

‘ಕಾಲಾ ಹಿರನ್’ ಸಿನಿಮಾನಲ್ಲಿ ಸೋನು ಮಿಶ್ರಾ ಮುಖ್ಯ ಪಾತ್ರದಲ್ಲಿ ನಟಿಸುವವರಿದ್ದರು. ಅವರ ಪೋಸ್ಟರ್​​ಗಳು ಸಹ ಬಿಡುಗಡೆ ಆಗಿದ್ದವು. ಆದರೆ ಇದೀಗ ಸೋನು ಮಿಶ್ರಾ, ಆ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಟ, ‘ಆರಂಭದಲ್ಲಿ ಈ ಯೋಜನೆಯು ಸಲ್ಮಾನ್ ಖಾನ್ ಅವರ ಪರವಾದ ನಿರೂಪಣೆಯನ್ನು ಹೊಂದಿರುತ್ತದೆ ಎಂದು ತಾವು ನಂಬಿದ್ದಾಗಿ ತಿಳಿಸಿದ್ದಾರೆ. ಆದರೆ ಚಿತ್ರವು ಸಾಗುತ್ತಿರುವ ದಿಕ್ಕನ್ನು ಅರಿತಾಗ ಅವರ ಅಭಿಪ್ರಾಯ ಬದಲಾಯಿತು. ಸೋನು ಮಿಶ್ರಾ, ‘ನಾನು ಸಲ್ಮಾನ್ ಖಾನ್ ಅವರ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ, ಈ ಚಿತ್ರವನ್ನು ಒಬ್ಬ ಸೂಪರ್‌ಸ್ಟಾರ್‌ನ ಹೆಸರನ್ನು ಕೆಡಿಸಲು ಮತ್ತು ರಾಜಸ್ಥಾನದ ಸಂಸ್ಕೃತಿಯ ಪ್ರತಿಷ್ಠೆಗೆ ಧಕ್ಕೆ ತರಲು ಮಾಡಲಾಗಿದೆ ಎಂದು ಅರಿವಾದಾಗ, ಸಿನಿಮಾದ ಭಾಗವಾಗಲು ನನ್ನ ನೈತಿಕತೆ ಒಪ್ಪಲಿಲ್ಲ. ಚಿತ್ರತಂಡದೊಂದಿಗೆ ಉಂಟಾದ ಸೃಜನಶೀಲ ಭಿನ್ನಾಭಿಪ್ರಾಯಗಳ ನಂತರ, ನಾನು ಚಿತ್ರದಿಂದ ದೂರ ಸರಿಯಲು ನಿರ್ಧರಿಸಿದೆ’ ಎಂದು ಹೇಳಿದರು.

ಸಿನಿಮಾದ ಒಪ್ಪಂದ, ಚಿತ್ರೀಕರಣದ ಸಂದರ್ಭದಲ್ಲಿ ನಿರ್ಮಾಪಕರು ತಮ್ಮೊಂದಿಗೆ ಸ್ಕ್ರಿಪ್ಟ್ ಅನ್ನು ಎಂದಿಗೂ ಹಂಚಿಕೊಂಡಿರಲಿಲ್ಲ ಎಂದು ನಟ ಆರೋಪಿಸಿದ್ದಾರೆ. ಜೊತೆಗೆ, ಬಿಷ್ಣೋಯ್ ಸಮುದಾಯದಿಂದ ಯಾವುದೇ ಬೆದರಿಕೆ ಬಂದಿಲ್ಲ. ಅದು ನನ್ನದೇ ಸಮುದಾಯ. ಸಮಾಜದ ಕಲ್ಯಾಣಕ್ಕಾಗಿ ಸಮುದಾಯವು ಮಾಡಿದ ವಿವಿಧ ಪ್ರಯತ್ನಗಳ ಮೇಲೆ ಸಿನಿಮಾಗಳನ್ನು ಮಾಡಬೇಕು ಎಂದು ನಾನು ನಂಬುತ್ತೇನೆ. ಅಂತಹ ವಿಷಯಗಳಿದ್ದರೆ ನಾನು ಸಂತೋಷದಿಂದ ಮಾಡುತ್ತಿದ್ದೆ’ ಎಂದು ಸೋನು ಹೇಳಿದ್ದಾರೆ. ಈಗ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಬಗ್ಗೆ ಉಲ್ಲೇಖಿಸಿದ ಮಿಶ್ರಾ, ವಿಷಯವನ್ನು ಈಗ ನ್ಯಾಯಾಲಯಕ್ಕೆ ಬಿಡಬೇಕು ಎಂದರು. ‘ತಡೆಗಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯು ಜುಲೈ 1 ರಂದು ನಿಗದಿಯಾಗಿದೆ. ನಾವು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು’ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಗ್ ಬಜೆಟ್ ಐತಿಹಾಸಿಕ ಸಿನಿಮಾಗಾಗಿ ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್?

‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ’ ಚಿತ್ರದ ಚಿತ್ರೀಕರಣ, ಪ್ರಚಾರ ಮತ್ತು ಬಿಡುಗಡೆಯನ್ನು ತಡೆಯುವಂತೆ ಕೋರಿ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. 1998ರ ಕೃಷ್ಣಮೃಗ ಭೇಟೆಯ ಪ್ರಕರಣದಿಂದ ಪ್ರೇರಿತವಾಗಿದೆ ಎನ್ನಲಾದ ಈ ಚಿತ್ರವು, ಸಲ್ಮಾನ್ ಖಾನ್ ಅವರ ವ್ಯಕ್ತಿತ್ವ ಮತ್ತು ಪ್ರಚಾರದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಹಾಗೂ ಅವರ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂದು ನಟನ ಕಾನೂನು ತಂಡ ವಾದಿಸಿದೆ.

ಈ ತಿಂಗಳ ಆರಂಭದಲ್ಲಿ, ಚಲನಚಿತ್ರ ನಿರ್ಮಾಪಕರ ಪರ ವಕೀಲರು ಸಲ್ಮಾನ್ ಖಾನ್ ಅವರ ಮನವಿಗೆ ಪ್ರತಿಕ್ರಿಯಿಸಲು ಹೆಚ್ಚಿನ ಸಮಯ ಕೋರಿದ ನಂತರ ದೆಹಲಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಸಲ್ಮಾನ್ ಖಾನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ನಿರ್ಮಾಪಕರು ಸಲ್ಮಾನ್ ಅವರ ಅನುಮತಿಯಿಲ್ಲದೆ ಅವರ ಜೀವನವನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾದಿಸಿ, ತಕ್ಷಣದ ಮಧ್ಯಂತರ ರಕ್ಷಣೆಯನ್ನು ಕೋರಿದರು. ಈ ವಿಷಯವು ಈಗ ಜುಲೈ 1 ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಒಂದು ಪಂದ್ಯ ಗೆದ್ದು ಟಿ20 ವಿಶ್ವಕಪ್​ನಿಂದ ಹೊರಬಿದ್ದ ಪಾಕಿಸ್ತಾನ – Kannada News | Pakistan Women’s T20 World Cup 2026: Group Exit, Wins Final Match vs Netherlands

2026 ರ ಮಹಿಳಾ ಟಿ20 ವಿಶ್ವಕಪ್​ನಲ್ಲಿ (Women’s T20 World Cup 2026) ಎ ಗುಂಪಿನಲ್ಲಿ ಸ್ಥಾನ ಪಡೆದು ಅಖಾಡಕ್ಕಿಳಿದಿದ್ದ ಪಾಕಿಸ್ತಾನ ಮಹಿಳಾ ತಂಡ ಕೊನೆಗೂ ತನ್ನ ಗೆಲುವಿನ ಖಾತೆ ತೆರೆದಿದೆ. 6 ತಂಡಗಳನ್ನೊಳಗೊಂಡಿರುವ ಈ ಗುಂಪಿನಲ್ಲಿ ಮೊದಲ 4 ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ ತಂಡ ಲೀಗ್ ಸುತ್ತಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಪಂದ್ಯಾವಳಿಗೆ ವಿದಾಯ ಹೇಳಿದೆ. ಮೇಲೆ ಹೇಳಿದಂತೆ ಗುಂಪು ಹಂತದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋತು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದ ಪಾಕಿಸ್ತಾನ, ಅಂತಿಮ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ತಂಡವನ್ನು 37 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು.

ವಿಶ್ವಕಪ್​ನಿಂದ ಹೊರಬಿದ್ದ ಪಾಕಿಸ್ತಾನ

ಸನಾ ಫಾತಿಮಾ ನಾಯಕತ್ವದ ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ, ಪ್ರಶಸ್ತಿ ಗೆಲ್ಲುವುದಂತೂ ಕನಸಿನ ಮಾತು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೂ, ಈ ತಂಡವು ಭಾರತ ಮತ್ತು ಆಸ್ಟ್ರೇಲಿಯಾದಂತಹ ತಂಡಗಳ ವಿರುದ್ಧ ಹೋರಾಟ ನೀಡುತ್ತದೆ ಎಂಬ ಭರವಸೆ ಇತ್ತು. ಆದರೆ ಪಾಕಿಸ್ತಾನಕ್ಕೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾವಿರಲ್ಲಿ, ಬಾಂಗ್ಲಾದೇಶವನ್ನು ಸೋಲಿಸುವುದು ಕಷ್ಣವಾಯಿತು. ಆ ಪಂದ್ಯದಲ್ಲೂ ಪಾಕಿಸ್ತಾನ 23 ರನ್‌ಗಳಿಂದ ಸೋತಿತು. ಹೀಗಾಗಿ, ತಂಡವು ಮತ್ತೊಮ್ಮೆ ಗುಂಪು ಹಂತದಿಂದ ಹೊರಬಿತ್ತು.

126 ರನ್ ಕಲೆಹಾಕಿದ ಪಾಕಿಸ್ತಾನ

ಲೀಗ್ ಸುತ್ತಿನಲ್ಲಿ ತನ್ನ ಕೊನೆಯ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಆಡಿದ ಪಾಕಿಸ್ತಾನ ಈ ಪಂದ್ಯ ಗೆಲ್ಲುವುದಕ್ಕೂ ಸಾಕಷ್ಟು ಬೆವರು ಹರಿಸಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ ಕೇವಲ 126 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಪರ, ಆರಂಭಿಕ ಆಟಗಾರ್ತಿ ಗುಲ್ ಫಿರೋಜಾ ಅರ್ಧಶತಕ ಬಾರಿಸಿದರು. ಫಿರೋಜಾ 52 ಎಸೆತಗಳಲ್ಲಿ ಅಜೇಯ 63 ರನ್ ಬಾರಿಸಿದರೆ, ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಆಯೇಷಾ ಜಾಫರ್ 32 ರನ್ ಗಳಿಸಿದರು. ಪಾಕಿಸ್ತಾನದ ಅಗ್ರ ಮೂವರು ಆಟಗಾರ್ತಿಯರು ಮಾತ್ರ ಎರಡಂಕಿಯನ್ನು ತಲುಪುವಲ್ಲಿ ಯಶಸ್ವಿಯಾದರು. ಉಳಿದ ಐವರಿಗೆ ಒಂದಂಕಿ ದಾಟಲು ಸಾಧ್ಯವಾಗಲಿಲ್ಲ. ನೆದರ್ಲ್ಯಾಂಡ್ಸ್ ಪರ, 24 ವರ್ಷದ ವೇಗಿ ಐರಿಸ್ ಜ್ವಿಲ್ಲಿಂಗ್ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್‌ಗಳಿಗೆ ಎರಡು ವಿಕೆಟ್ ಪಡೆದರು.

IND vs BAN: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್; ದಾಖಲೆ ಬರೆದ ಶ್ರೀ ಚರಣಿ

89 ರನ್​ಗಳಿಗೆ ಆಲೌಟ್

ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಸೋಲಿಗೆ ಶರಣಾಗಲಿಲ್ಲ. ಮೊದಲ 10 ಓವರ್‌ಗಳಲ್ಲಿ, ನೆದರ್ಲ್ಯಾಂಡ್ಸ್ 54 ರನ್ ಗಳಿಸಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ ಪಾಕಿಸ್ತಾನಿ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಡದೆ ನೆದರ್ಲ್ಯಾಂಡ್ಸ್ ತಂಡದ ಒತ್ತಡ ಹೆಚ್ಚಿಸಿದರು. ಅಂತಿಮವಾಗಿ ನೆದರ್ಲ್ಯಾಂಡ್ಸ್ 18 ಓವರ್‌ಗಳಲ್ಲಿ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಾಕಿಸ್ತಾನ 37 ರನ್‌ಗಳ ಏಕೈಕ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಮುಗಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಫ್ಘಾನಿಸ್ತಾನದಲ್ಲಿ ಭೂಕಂಪನ: ದೆಹಲಿ, ಜಮ್ಮು ಸೇರಿ ಇಡೀ ಉತ್ತರ ಭಾರತದಲ್ಲೂ ನಡುಗಿದ ಭೂಮಿ! – Kannada News | Delhi NCR, North India Jolted by 6.2 Magnitude Earthquake; Epicentre in Afghanistan’s Hindu Kush

ಪ್ರಾತಿನಿಧಿಕ ಚಿತ್ರImage Credit source: Getty images

ನವದೆಹಲಿ, ಜೂನ್​​ 27: ಈಶಾನ್ಯ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ (Earthquake) ಭೀಕರತೆಗೆ ಭಾರತದ ರಾಜಧಾನಿ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತದಾದ್ಯಂತ ಶನಿವಾರ ಸಂಜೆ ತೀವ್ರ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.2 ರಷ್ಟು ತೀವ್ರತೆ ದಾಖಲಾಗಿದೆ. ದೆಹಲಿ, ಎನ್‌ಸಿಆರ್ ವ್ಯಾಪ್ತಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ತೀವ್ರವಾಗಿ ಕಂಪಿಸಿದೆ. ಇದರಿಂದ ಆತಂಕಗೊಂಡ ಜನರು ತಕ್ಷಣ ಮನೆಯಿಂದ ಆಚೆ ಓಡಿಬಂದಿದ್ದಾರೆ.

ಭೂಮಿಯ 215 ಕಿ.ಮೀ ಆಳದಲ್ಲಿ ಭೂಕಂಪನ

ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ (NCS) ಮಾಹಿತಿ ಪ್ರಕಾರ, ಭೂಕಂಪನದ ಕೇಂದ್ರಬಿಂದು ಈಶಾನ್ಯ ಅಫ್ಘಾನಿಸ್ತಾನದ ಕಲಾಫ್ಗನ್‌ನಿಂದ ಸುಮಾರು 81 ಕಿ.ಮೀ ದೂರದಲ್ಲಿದ್ದು, ಭೂಮಿಯ ಆಳದಲ್ಲಿ ಅಂದರೆ ಸುಮಾರು 215 ಕಿ.ಮೀ ಆಳದಲ್ಲಿ ಸೃಷ್ಟಿಯಾಗಿದೆ.

ಎಎನ್​ಐ ಟ್ವೀಟ್​

ಭೂಕಂಪನದ ತೀವ್ರತೆ ಹೆಚ್ಚಿದ್ದು ಮತ್ತು ಭೂಮಿಯ ಆಳದಲ್ಲಿ ಸಂಭವಿಸಿದರ ಪರಿಣಾಮ ಭಾರತ ಮಾತ್ರವಲ್ಲದೆ ನೆರೆಯ ಪಾಕಿಸ್ತಾನ, ಚೀನಾ, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ತುರ್ಕಮೆನಿಸ್ತಾನ ಸೇರಿದಂತೆ ಒಟ್ಟು ಎಂಟು ದೇಶಗಳ ವ್ಯಾಪ್ತಿಯಲ್ಲಿ ಭೂಕಂಪನದ ತೀವ್ರ ಅನುಭವವಾಗಿದೆ.

ಕಟ್ಟಡಗಳ ಕಂಪನಕ್ಕೆ ಹೆದರಿದ ಜನರು 

ಇನ್ನು ಜಮ್ಮು ಕಾಶ್ಮೀರ ಹಾಗೂ ದೆಹಲಿಯ ಹಲವೆಡೆ ಕಟ್ಟಡಗಳ ಕಂಪನ ಕಂಡು ಜನರು ಗಾಬರಿಗೊಂಡರು. ಸದ್ಯದ ಪ್ರಾಥಮಿಕ ವರದಿಗಳ ಪ್ರಕಾರ, ಉತ್ತರ ಭಾರತದ ಯಾವುದೇ ಭಾಗದಲ್ಲಿ ಪ್ರಾಣಾಪಾಯ ಅಥವಾ ಭಾರೀ ಆಸ್ತಿಪಾಸ್ತಿ ನಷ್ಟ ಸಂಭವಿಸಿದ ಕುರಿತು ವರದಿ ಆಗಿಲ್ಲ. ಆದಾಗ್ಯೂ, ದೆಹಲಿ ಮತ್ತು ಜಮ್ಮು ಕಾಶ್ಮೀರದ ವಿಪತ್ತು ನಿರ್ವಹಣಾ ತಂಡಗಳು ಹಾಗೂ ಸ್ಥಳೀಯ ಆಡಳಿತ ಹೈ ಅಲರ್ಟ್ ಆಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಗಣಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RSS ನೋಂದಾಣಿ ಮಾಡಿಸಿದ್ರೆ ಒಳ್ಳೆದು ಅಂತ ಪೇಜಾವರಶ್ರೀಗಳೇ ಹೇಳಿದ್ದಾರೆ: ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್ – Kannada News | KPCC President BK Hariprasad Hits Back at BJP Leaders With pejawar swamiji Statement about RSS registration

ಬೆಂಗಳೂರು, (ಜೂನ್ 27): ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯನ್ನು (ಆರ್‌ಎಸ್ಎಸ್) ನೋಂದಣಿ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ ಆರ್​ಎಸ್​ಎಸ್​ ನೋಂದಣಿ ವಿಚಾರಕ್ಕೆ ಬಿಜೆಪಿ ನಾಯಕರು ಸಹ ತಿರುಗೇಟು ನೀಡುತ್ತಿದ್ದಾರೆ. ಇನ್ನು ಆರೆಸ್ಸೆಸ್ ಅನ್ನು ಕಾನೂನು ಪ್ರಕಾರ ನೋಂದಣಿ ಮಾಡಬೇಕು ಎಂಬ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಆಗ್ರಹದ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ (Pejawar Shree) ಪ್ರವೇಶಿಸಿ, ನೋಂದಣಿ ಮಾಡಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ ಎಂದಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಪೇಜಾವರಶ್ರೀಗಳ ಹೇಳಿಕೆ ಪ್ರಸ್ತಾಪಿಸಿ, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Source link

Exit mobile version