ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ; ರಾಜ್ಯಸಭೆಯಲ್ಲಿ ಭಾರೀ ಗದ್ದಲ – Kannada News | Called Me LungiWala CPM MP John Brittas Accuses BJP MP Sushmita Dev In Rajya Sabha

ನವದೆಹಲಿ, ಆಗಸ್ಟ್ 12: ರಾಜ್ಯಸಭೆಯಲ್ಲಿ ತಾವು ಮಾತನಾಡುತ್ತಿದ್ದಾಗ ಬಿಜೆಪಿ (BJP) ಸಂಸದೆ ಸುಶ್ಮಿತಾ ದೇವ್ ತಮ್ಮ ಉಡುಪಿನ ಬಗ್ಗೆ ಅಪಹಾಸ್ಯಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಇಂದು ಆರೋಪಿಸಿದ್ದು, ಈ ವಿಚಾರ ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿ ಕಲಾಪವನ್ನು ಮುಂದೂಡಲಾಯಿತು. ಬಿಜೆಪಿ ಸಂಸದೆ ತಮ್ಮನ್ನು ಲುಂಗಿವಾಲಾ ಎಂದು ಕರೆದಿದ್ದಾರೆ ಎಂದು ಆರೋಪಿಸಿದ ಬ್ರಿಟಾಸ್, ಈ ಹೇಳಿಕೆಯು ತಮ್ಮ ಪ್ರಾದೇಶಿಕ ಅಸ್ಮಿತೆಯನ್ನು ತಾರತಮ್ಯದಿಂದ ನೋಡುವಂತಿದೆ ಎಂದು ಹೇಳಿದರು.

ಬ್ರಿಟಾಸ್ ಅವರ ಆರೋಪದ ನಂತರ, ಈ ಘಟನೆಗೆ ಸಂಬಂಧಿಸಿದಂತೆ ಸುಶ್ಮಿತಾ ದೇವ್ ಅವರಿಗೂ ತಮ್ಮ ವಿವರಣೆ ನೀಡಲು ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತನಾಡಿ, ಬ್ರಿಟಾಸ್ ಅವರ ಹೇಳಿಕೆ ಈಗ ದಾಖಲಾಗಿದೆ ಮತ್ತು ಯಾರ ವಿರುದ್ಧ ಆರೋಪ ಮಾಡಲಾಗಿದೆಯೋ ಆ ಸದಸ್ಯರಿಗೂ ಉತ್ತರಿಸಲು ಅವಕಾಶ ನೀಡಬೇಕು ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಯಸ್ಸಾದರೂ ಮಸಲ್ಸ್‌ ಸ್ಟ್ರಾಂಗ್‌ ಆಗಿರಬೇಕು ಅಂದ್ರೆ ಈ ಆಹಾರ ಮತ್ತು ವ್ಯಾಯಾಮ ತಪ್ಪದೇ ಮಾಡಿ – Kannada News | Build Stronger Muscles Naturally: Best Foods, Exercises and Lifestyle Tips

ವಯಸ್ಸು ಹೆಚ್ಚಾದಂತೆ ಮಸಲ್ಸ್‌ಗಳ ಶಕ್ತಿ ನಿಧಾನವಾಗಿ ಕಡಿಮೆಯಾಗಬಹುದು. ಇದರಿಂದ ದೈನಂದಿನ ಕೆಲಸಗಳನ್ನು ಮಾಡುವ ಸಾಮರ್ಥ್ಯ, ದೇಹದ ಸಮತೋಲನ ಮತ್ತು ಚಲನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮಸಲ್ಸ್‌ಗಳನ್ನು ಬಲವಾಗಿ ಹಾಗೂ ಆರೋಗ್ಯಕರವಾಗಿ ಇಟ್ಟುಕೊಳ್ಳಲು ಕೇವಲ ವ್ಯಾಯಾಮ ಮಾಡಿದರೆ ಸಾಲದು, ಸರಿಯಾದ ಆಹಾರ, ಸಾಕಷ್ಟು ಪ್ರೋಟೀನ್‌, ಉತ್ತಮ ನಿದ್ರೆ ಮತ್ತು ನಿಯಮಿತ ದೈಹಿಕ ಚಟುವಟಿಕೆ ಕೂಡ ಮುಖ್ಯವಾಗುತ್ತದೆ. ವಿಶೇಷವಾಗಿ ಮಸಲ್ಸ್‌ಗಳ ಬೆಳವಣಿಗೆ ಮತ್ತು ವ್ಯಾಯಾಮದ ನಂತರ ಅವುಗಳ ರಿಪೇರಿಗೆ ಪ್ರೋಟೀನ್‌ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಪ್ರೋಟೀನ್‌ ಒಂದನ್ನೇ ಅವಲಂಬಿಸುವ ಬದಲು ವಿವಿಧ ಪೋಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರ ಸೇವಿಸುವುದು ಉತ್ತಮ. ಹಾಗಾದರೆ ಮಸಲ್ಸ್‌ ಬಲಪಡಿಸಲು ಯಾವ ಆಹಾರಗಳನ್ನು ಡಯಟ್‌ನಲ್ಲಿ ಸೇರಿಸಬೇಕು ಮತ್ತು ಯಾವ ವ್ಯಾಯಾಮಗಳು ಸಹಕಾರಿ ಎಂಬುದನ್ನು ತಿಳಿದುಕೊಳ್ಳಿ.

ಮಸಲ್ಸ್‌ ಬಲಪಡಿಸಲು ಡಯಟ್‌ನಲ್ಲಿ ಇರಲಿ ಈ ಆಹಾರಗಳು

ಆರೋಗ್ಯಕರ ಮಸಲ್ಸ್‌ಗಳಿಗೆ ದೇಹಕ್ಕೆ ಸಾಕಷ್ಟು ಪ್ರೋಟೀನ್‌ ಅಗತ್ಯ. ಮೊಟ್ಟೆ, ಚಿಕನ್‌, ಮೀನು, ಹಾಲು, ಮೊಸರು ಮತ್ತು ಪನೀರ್‌ ಉತ್ತಮ ಪ್ರೋಟೀನ್‌ ಮೂಲಗಳಾಗಿವೆ. ವ್ಯಾಯಾಮದ ನಂತರ ಮಸಲ್ಸ್‌ಗಳ ಬೆಳವಣಿಗೆಗೆ ಇವು ಸಹಾಯ ಮಾಡಬಹುದು.

ಸಸ್ಯಾಹಾರಿಗಳು ಬೇಳೆ, ರಾಜ್ಮಾ, ಕಡಲೆ, ಸೋಯಾ ಮತ್ತು ಟೋಫುಗಳನ್ನು ಆಹಾರದಲ್ಲಿ ಸೇರಿಸಬಹುದು. ಇವುಗಳಿಂದಲೂ ಉತ್ತಮ ಪ್ರಮಾಣದ ಪ್ರೋಟೀನ್‌ ಪಡೆಯಬಹುದು.

ಇದರ ಜೊತೆಗೆ ಬಾದಾಮಿ, ಕಡಲೆಕಾಯಿ ಮತ್ತು ಇತರ ನಟ್ಸ್‌ಗಳಿಂದ ಪ್ರೋಟೀನ್‌ ಜೊತೆಗೆ ಆರೋಗ್ಯಕರ ಕೊಬ್ಬು ದೊರೆಯುತ್ತದೆ. ಓಟ್ಸ್‌, ಕ್ವಿನೋವಾ ಸೇರಿದಂತೆ ಸಂಪೂರ್ಣ ಧಾನ್ಯಗಳು ಹಾಗೂ ಹಣ್ಣು-ತರಕಾರಿಗಳನ್ನು ಕೂಡ ಆಹಾರದ ಭಾಗವಾಗಿಸಿಕೊಳ್ಳುವುದು ಉತ್ತಮ.

ಪ್ರೋಟೀನ್‌ ಮಾತ್ರ ತಿಂದರೆ ಮಸಲ್ಸ್‌ ಬಲವಾಗುತ್ತವೆಯೇ?

ಇಲ್ಲ. ಮಸಲ್ಸ್‌ಗಳನ್ನು ಬಲಪಡಿಸಲು ಆಹಾರದ ಜೊತೆಗೆ ಸ್ಟ್ರೆಂಥ್‌ ಟ್ರೈನಿಂಗ್‌ ಕೂಡ ಮುಖ್ಯ. ವೆಯ್ಟ್‌ ಲಿಫ್ಟಿಂಗ್‌, ಸ್ಕ್ವಾಟ್‌, ಪುಷ್‌ಅಪ್‌, ಲಂಜ್‌ ಮತ್ತು ರೆಸಿಸ್ಟೆನ್ಸ್‌ ಬ್ಯಾಂಡ್‌ ವ್ಯಾಯಾಮಗಳು ಮಸಲ್ಸ್‌ಗಳ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಬಹುದು.

ವಾಕಿಂಗ್‌, ಸೈಕ್ಲಿಂಗ್‌ ಮತ್ತು ಈಜು ಕೂಡ ದೇಹವನ್ನು ಸಕ್ರಿಯವಾಗಿಡಲು ಉತ್ತಮ ಚಟುವಟಿಕೆಗಳಾಗಿವೆ. ಹೊಸದಾಗಿ ವ್ಯಾಯಾಮ ಆರಂಭಿಸುವವರು ಸ್ವಲ್ಪ ಸ್ವಲ್ಪವಾಗಿಯೇ ಆರಂಭಿಸಿ ನಿಧಾನವಾಗಿ ಹೆಚ್ಚಿಸುವುದು ಉತ್ತಮ.

ಮಸಲ್ಸ್‌ ಆರೋಗ್ಯಕ್ಕೆ ನಿದ್ರೆ ಕೂಡ ಮುಖ್ಯ

ವ್ಯಾಯಾಮ ಮತ್ತು ಆಹಾರದಷ್ಟೇ ಸರಿಯಾದ ನಿದ್ರೆ ಹಾಗೂ ವಿಶ್ರಾಂತಿ ಕೂಡ ಮಸಲ್ಸ್‌ ರಿಕವರಿಗೆ ಮುಖ್ಯವಾಗುತ್ತದೆ. ಪ್ರತಿದಿನ ಸಮತೋಲಿತ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಅತಿಯಾಗಿ ಪ್ರೊಸೆಸ್ಡ್‌ ಹಾಗೂ ಹೆಚ್ಚು ಸಕ್ಕರೆ ಇರುವ ಆಹಾರಗಳನ್ನು ಕಡಿಮೆ ಮಾಡುವುದು ಸಹಕಾರಿ. ವ್ಯಾಯಾಮ ಮಾಡುವಾಗ ನಿಮ್ಮ ದೇಹದ ಸಾಮರ್ಥ್ಯವನ್ನು ಗಮನಿಸಿ. ಏಕಾಏಕಿ ಹೆಚ್ಚು ತೂಕ ಎತ್ತುವುದನ್ನು ತಪ್ಪಿಸಿ. ದೀರ್ಘಕಾಲದಿಂದ ವ್ಯಾಯಾಮ ಮಾಡದಿದ್ದರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಹೊಸ ವರ್ಕೌಟ್‌ ಆರಂಭಿಸುವ ಮೊದಲು ವೈದ್ಯರು ಅಥವಾ ಫಿಟ್ನೆಸ್‌ ತಜ್ಞರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ, ದೇಶಪಾಂಡೆಗೆ ಸಂಪುಟ ದರ್ಜೆ ಸ್ಥಾನಮಾನ – Kannada News | Congress MLA Ponnanna appointed as CM Political Secretary And RV Deshpande chairman of administrative reforms commission

ಬೆಂಗಳೂರು, (ಆಗಸ್ಟ್ 12): ಡಿಕೆ ಶಿವಕುಮಾರ್ ಸರ್ಕಾರ ಬರುತ್ತಿದ್ದಂತೆಯೇ ಪಕ್ಷದಲ್ಲಿ ಒಂದಲ್ಲ ಒಂದು ಗೊಂದಲಗಳು ಉದ್ಭವಿಸುತ್ತಲೇ ಇವೆ. ಮೊನ್ನೆ ಅಷ್ಟೇ ಸಚಿವ ಸಂಪುಟ ಪುನಾರಚನೆಯಲ್ಲಿ ಹೈಕಮಾಂಡ್ ಕಳುಹಿಸಿದ್ದ ಪಟ್ಟಿ ಬೆಂಗಳೂರಿನಲ್ಲಿ ಬದಲಾಗಿತ್ತು. ಹೌದು…ಇನ್ನೇನು ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಬೇಕೆನ್ನುವಷ್ಟರಲ್ಲೇ ಪಟ್ಟಿಯಲ್ಲಿದ್ದ ಮಾಂಕಾಳ ವೈದ್ಯ ಹೆಸರನ್ನು ಕೈಬಿಟ್ಟು ಎಸ್​​​ಎಸ್​ ಮಲ್ಲಿಕಾರ್ಜುನ ಹೆಸರು ಸೇರ್ಪಡೆ ಮಾಡಲಾಗಿತ್ತು. ಇನ್ನು ಹೈಕಮಾಂಡ್ ಪಟ್ಟಿಯಲ್ಲಿ ಎಂಎಲ್​​ಸಿ ಗಾಯತ್ರಿ ಹೆಸರು ಸಹ ಇತ್ತು. ಅವರಿಗೂ ಸಹ ಬ್ರೇಕ್ ಹಾಕಲಾಗಿತ್ತು. ಇದೀಗ ಡೆಪ್ಯೂಟಿ ಸ್ಪೀಕರ್​​​​​​ಗೆ ಶಿಫಾರಸ್ಸು ಮಾಡಲಾಗಿದ್ದ ಹೆಸರನ್ನು ಸಹ ಬಲಾವಣೆ ಮಾಡಲಾಗಿದೆ. ಡೆಪ್ಯೂಟಿ ಸ್ಪೀಕರ್ ಆಗಬೇಕಿದ್ದ ಪೊನ್ನಣ್ಣ ಅವರನ್ನು ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ. ಇನ್ನು ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಮಾಂಕಾಳ ವೈದ್ಯ ಅವರನ್ನ ಆಯ್ಕೆ ಮಾಡಲಾಗಿದೆ.

ಇನ್ನುಕಾಂಗ್ರೆಸ್ ಹಿರಿಯ ಶಾಸಕ ಆರ್​​​ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲೂ ಸಚಿವ ಸ್ಥಾನ ಕೈತಪ್ಪಿದ್ದು, ಈ ಬಾರಿ ಡಿಕೆ ಶಿವಕುಮಾರ್ ಸರ್ಕಾರದಲ್ಲೂ ಸಹ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಂತರ್ ಮಂತರ್ ಸೀಸನ್ 2 ಶೀಘ್ರದಲ್ಲೇ ಆರಂಭ; ಹೊಸ ಪ್ರತಿಭಟನೆಯ ಸುಳಿವು ನೀಡಿದ ಸಿಜೆಪಿ ನಾಯಕ ದಿಪ್ಕೆ – Kannada News | Jantar Mantar Season 2 to start soon CJP Leader Abhijeet Dipke hints new protest

ನವದೆಹಲಿ, ಆಗಸ್ಟ್ 12: ಕಾಕ್ರೋಚ್ ಜನತಾ ಪಾರ್ಟಿ (CJP) ಶೀಘ್ರದಲ್ಲೇ ಮತ್ತೊಂದು ಬೃಹತ್ ಪ್ರತಿಭಟನಾ ಆಂದೋಲನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಇದನ್ನು “ಜಂತರ್ ಮಂತರ್‌ನ ಸೀಸನ್ 2” ಎಂದು ಕರೆದಿದ್ದಾರೆ. ದೆಹಲಿಯ ನಾರಾಯಣದಲ್ಲಿ ಆಯೋಜಿಸಲಾಗಿದ್ದ ಸಿಜೆಪಿ ಕಾರ್ಯಕರ್ತರ ಸಭೆಯ ಬುಕ್ಕಿಂಗ್ ಅನ್ನು ಬ್ಯಾಂಕ್ವೆಟ್ ಹಾಲ್ ಮಾಲೀಕರು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ ನಂತರ ಈ ಘೋಷಣೆ ಹೊರಬಿದ್ದಿದೆ. ಬಿಜೆಪಿ ನೀಡಿದ ಒತ್ತಡದಿಂದಾಗಿ ಬ್ಯಾಂಕ್ವೆಟ್ ಹಾಲ್ ಮಾಲೀಕರು ಈ ರೀತಿ ಮಾಡಿದ್ದಾರೆ ಎಂದು ದಿಪ್ಕೆ ಆರೋಪಿಸಿದ್ದಾರೆ.

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭಿಜೀತ್ ದಿಪ್ಕೆ, ಜಂತರ್ ಮಂತರ್ ಪ್ರತಿಭಟನೆಯ 2ನೇ ಹಂತ ಯಾವಾಗ ಪ್ರಾರಂಭವಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ನಿರಂತರವಾಗಿ ಕೇಳುತ್ತಿದ್ದಾರೆ ಎಂದು ಹೇಳಿದರು. “ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಜನರು ಜಂತರ್-ಮಂತರ್ ಸೀಸನ್ 2 ಯಾವಾಗ ಪ್ರಾರಂಭವಾಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದರು. ಜಂತರ್-ಮಂತರ್ ಸೀಸನ್ 2 ಅತ್ಯಂತ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಾನು ಅವರಿಗೆ ತಿಳಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಭಟನಾಕಾರರ ಕಾನೂನು ನೆರವಿಗೆ ಸಿಜೆಪಿಯಿಂದ ವೆಬ್​ಸೈಟ್ ಆರಂಭ; 1 ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್

ಸಿಜೆಪಿ ಸಭೆಗಾಗಿ ಹಾಲ್ ಬುಕ್ ಮಾಡಲಾಗಿತ್ತು. ಆದರೆ ಸಂಘಟಕರು ಸ್ಥಳಕ್ಕೆ ತಲುಪಿದಾಗ ಪ್ರವೇಶ ನಿರಾಕರಿಸಲಾಯಿತು. ಮೇಲಿಂದ ಒತ್ತಡವಿದೆ ಎಂದು ಹಾಲ್ ಮಾಲೀಕರು ಹೇಳಿರುವುದಾಗಿ ದಿಪ್ಕೆ ಆರೋಪಿಸಿದ್ದಾರೆ. ಪ್ರದೇಶದ ಇತರ ಸಭಾಂಗಣಗಳ ಮಾಲೀಕರೂ ಸಭೆಗೆ ಜಾಗ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಬುಕ್ ಮಾಡಲಾಗಿದ್ದ ಹಾಲ್ ಮಾಲೀಕರಿಗೆ ಇಂದು ಬೆಳಿಗ್ಗೆ ಬೆದರಿಕೆ ಹಾಕಲಾಗಿತ್ತು ಎಂದು ದಿಪ್ಕೆ ಹೇಳಿದ್ದಾರೆ.

ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ, “ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳಲು ಸಿಜೆಪಿ ದೇಶಾದ್ಯಂತ ‘ಲಿಸನಿಂಗ್ ಟೂರ್’ ಆರಂಭಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನದಿಂದ ಶಿಕ್ಷಣದ ವಿಷಯಕ್ಕೆ ಆದ್ಯತೆ ನೀಡಿ ಅಭಿಯಾನ ನಡೆಸಲಿದ್ದೇವೆ. ಇಂತಹ ಅಸಮರ್ಥ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದೇ ಸೀಸನ್ 2 ಆಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ

ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಸಿಜೆಪಿ ದೆಹಲಿಯ ಜಂತರ್ ಮಂತರ್‌ನಲ್ಲಿ 36 ದಿನಗಳ ಸುದೀರ್ಘ ಪ್ರತಿಭಟನೆ ನಡೆಸಿತ್ತು. ಈ ಆಂದೋಲನಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು, ಯುವ ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಬೆಂಬಲ ನೀಡಿದ್ದರು. ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಜೂನ್ 28ರಂದು ಪ್ರತಿಭಟನೆಗೆ ಸೇರಿಕೊಂಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ನಂತರ ಅವರ ಆರೋಗ್ಯ ಕ್ಷೀಣಿಸಿದಾಗ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜುಲೈ 20ರಂದು ಪ್ರತಿಭಟನಾಕಾರರು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸ್ ಕ್ರಮ ಎದುರಿಸಬೇಕಾಯಿತು. ಅಂತಿಮವಾಗಿ ಜುಲೈ 25ರಂದು ಸರ್ಕಾರದೊಂದಿಗೆ ನಡೆದ ಮಾತುಕತೆ ಮತ್ತು ಪ್ರಮುಖ ಬೇಡಿಕೆಗಳಿಗೆ ಭರವಸೆ ಸಿಕ್ಕ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೊಂದು ಪ್ರತಿಭಟನೆಗೆ ಸಿಜೆಪಿ ಮುಂದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

40 ವರ್ಷಗಳ ನಂತರ ಶ್ರೀನಗರದಲ್ಲಿ ಪ್ರಮುಖ ಕ್ರಿಕೆಟ್ ಪಂದ್ಯ – Kannada News | Irani Cup Returns to Srinagar After 4 Decades: J&K Domestic Cricket Season Begins

ದುಲೀಪ್ ಟ್ರೋಫಿ (Duleep Trophy) ಆರಂಭದೊಂದಿಗೆ ಭಾರತದಲ್ಲಿ ದೇಶೀ ಕ್ರಿಕೆಟ್ ಸೀಸನ್ ಕೂಡ ಆರಂಭವಾಗಲಿದೆ. ದುಲೀಪ್ ಟ್ರೋಫಿ ಇದೇ ತಿಂಗಳು ಅಂದರೆ ಆಗಸ್ಟ್ 23 ರಿಂದ ಆರಂಭವಾಗಿ​ ಸೆಫ್ಟೆಂಬರ್ 10ರವರೆಗೆ ನಡೆಯಲಿದೆ. ಇದಾದ ಬಳಿಕ ಹಾಲಿ ರಣಜಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ (Jammu Kashmir) ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವೆ ಇರಾನಿ ಕಪ್ (Irani Cup) ಅಕ್ಟೋಬರ್ 1 ರಿಂದ ಶುರುವಾಗಲಿದೆ. ಈ ಟೂರ್ನಿಯ ವಿಶೇಷತೆ ಏನೆಂದರೆ, ಸುಮಾರು ನಾಲ್ಕು ದಶಕಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಟೂರ್ನಿಯ ಪಂದ್ಯಗಳು ನಡೆಯಲಿವೆ. ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಅಕ್ಟೋಬರ್ 1 ರಿಂದ 5 ರವರೆಗೆ ಇರಾನಿ ಕಪ್ ನಡೆಯಲಿದೆ.

ಇರಾನಿ ಕಪ್ ಪಂದ್ಯ

1980 ರ ದಶಕದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಅತಿದೊಡ್ಡ ಕ್ರಿಕೆಟ್ ಪಂದ್ಯ ಇದಾಗಲಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕೋಚ್ ಅಜಯ್ ಶರ್ಮಾ ಗೆ ತಿಳಿಸಿದ್ದಾರೆ, ‘ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರೀಡಾಂಗಣವು ಅಕ್ಟೋಬರ್ 1 ರಿಂದ 5 ರವರೆಗೆ ರಣಜಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವಿನ ಇರಾನಿ ಕಪ್ ಪಂದ್ಯವನ್ನು ಆಯೋಜಿಸಲಿದೆ.

ಜಮ್ಮು ಮತ್ತು ಕಾಶ್ಮೀರ 2025-26ರ ರಣಜಿ ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು. ತಂಡವು ಫೈನಲ್‌ನಲ್ಲಿ ಕರ್ನಾಟಕವನ್ನು ಸೋಲಿಸಿ ತನ್ನ ಮೊದಲ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ಇರಾನಿ ಕಪ್‌ನಲ್ಲಿ ದೇಶದ ಅಗ್ರ ಆಟಗಾರರನ್ನು ಒಳಗೊಂಡ ತಂಡವಾದ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಜಮ್ಮು ಕಾಶ್ಮೀರ ಪಂದ್ಯವನ್ನಾಡಲಿದೆ.

1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ

ಇನ್ನು ಇರಾನಿ ಕಪ್​ಗೆ ಆತಿಥ್ಯವಹಿಸುತ್ತಿರುವ ಶೇರ್-ಎ-ಕಾಶ್ಮೀರ್ ಕ್ರೀಡಾಂಗಣ ತನ್ನದೇಯಾದ ಇತಿಹಾಸವನ್ನು ಹೊಂದಿದೆ. ಈ ಮೈದಾನದಲ್ಲಿ ಟೀಂ ಇಂಡಿಯಾ 1983 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು 1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳನ್ನು ಆಡಿತ್ತು. ಆದರೆ ಇದಾದ ಬಳಿಕ ಭದ್ರತಾ ಕಾಳಜಿ ಮತ್ತು ಇತರ ಸಂದರ್ಭಗಳಿಂದಾಗಿ, ಪ್ರಮುಖ ಕ್ರಿಕೆಟ್ ಪಂದ್ಯಗಳನ್ನು ಈ ಮೈದಾನದಲ್ಲಿ ನಡೆಸಲಾಗಲಿಲ್ಲ.

Duleep Trophy 2025: ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

ಕಳೆದ ಕೆಲವು ವರ್ಷಗಳಿಂದ ಕ್ರೀಡಾಂಗಣವನ್ನು ನವೀಕರಿಸಲಾಗಿದ್ದು, ದೇಶೀಯ ಕ್ರಿಕೆಟ್ ಮರಳಿದೆ. ಇರಾನಿ ಕಪ್ ಅನ್ನು ಆಯೋಜಿಸುವುದು ಈಗ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ಗೆ ಐತಿಹಾಸಿಕ ಕ್ಷಣವಾಗಿದೆ. ಪಂದ್ಯವು ವೇಳಾಪಟ್ಟಿಯ ಪ್ರಕಾರ ನಡೆದರೆ, ಶ್ರೀನಗರ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಕ್ಯಾಲೆಂಡರ್‌ನ ಅತ್ಯಂತ ಪ್ರತಿಷ್ಠಿತ ದೇಶೀಯ ಈವೆಂಟ್‌ಗಳಲ್ಲಿ ಸೇರ್ಪಡೆಯಾಗಲಿದೆ ಮತ್ತು ಸ್ಥಳೀಯ ಕ್ರಿಕೆಟ್ ಅಭಿಮಾನಿಗಳಿಗೆ ದೀರ್ಘ ಕಾಯುವಿಕೆಯ ನಂತರ ದೊಡ್ಡ ಪಂದ್ಯವನ್ನು ವೀಕ್ಷಿಸುವ ಅವಕಾಶ ಸಿಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ ಟ್ರೇಲರ್‌ ನನ್ನನ್ನು ಇಂಪ್ರೆಸ್ ಮಾಡಿಲ್ಲ: ‘ಮಹಾಭಾರತ’ ಖ್ಯಾತಿಯ ಗಜೇಂದ್ರ ಚೌಹಾಣ್ ಪ್ರತಿಕ್ರಿಯೆ – Kannada News | Gajendra Chauhan not impressed with Ranbir Kapoor Ramayana Trailer criticises Kaikeyi Look

ಬಿ.ಆರ್. ಚೋಪ್ರಾ ಅವರ ಪ್ರಸಿದ್ಧ ‘ಮಹಾಭಾರತ’ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಗಜೇಂದ್ರ ಚೌಹಾಣ್ (Gajendra Chauhan) ಅವರು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಕುರಿತು ತಮ್ಮ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಗೆಟಪ್ ಚೆನ್ನಾಗಿದೆ ಎಂದಿರುವ ಅವರು, ಟ್ರೇಲರ್‌ನ ಕೆಲವು ಭಾಗಗಳು ತಮಗೆ ಸಂಪೂರ್ಣ ತೃಪ್ತಿ ನೀಡಿಲ್ಲ ಎಂದು ಹೇಳಿದ್ದಾರೆ.

‘ಹಿಂದಿ ರಶ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಗಜೇಂದ್ರ ಚೌಹಾಣ್, ಚಿತ್ರದಲ್ಲಿ ನಟಿ ಲಾರಾ ದತ್ತಾ ನಿರ್ವಹಿಸಿರುವ ಕೈಕೇಯಿ ಪಾತ್ರದ ಚಿತ್ರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀರಾಮನನ್ನು ವನವಾಸಕ್ಕೆ ಕಳುಹಿಸುವಂತೆ ದಶರಥ ಮಹಾರಾಜನ ಬಳಿ ಕೈಕೇಯಿ ಕೇಳುವ ದೃಶ್ಯವನ್ನು ತೋರಿಸಿದ ರೀತಿ ಅವರಿಗೆ ಇಷ್ಟವಾಗಿಲ್ಲ. ‘ನಾನು ರಾಮಾಯಣ ಟ್ರೇಲರ್ ನೋಡಿದೆ. ವೈಯಕ್ತಿಕವಾಗಿ ಹೇಳಬೇಕೆಂದರೆ, ನನಗೇನೂ ಇಂಪ್ರೆಸ್ ಆಗಿಲ್ಲ. ಶ್ರೀರಾಮನ ವನವಾಸವನ್ನು ಕೋರುವ ಕೈಕೇಯಿಯ ದೃಶ್ಯ ನನ್ನನ್ನು ಸೆಳೆಯಲಿಲ್ಲ. ಆಕೆಯ ವೇಷಭೂಷಣ ತುಂಬಾ ಆಧುನಿಕವಾಗಿದೆ. ಅವರಿಗೆ ಆಧುನಿಕ ಶೈಲಿಯ ಸೀರೆಯನ್ನು ನೀಡಲಾಗಿದೆ’ ಎಂದು ಚೌಹಾಣ್ ಹೇಳಿದ್ದಾರೆ.

2002ರಲ್ಲಿ ರವಿ ಚೋಪ್ರಾ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ದಶರಥನಾಗಿ ಅಭಿನಯಿಸಿದ ಅನುಭವವನ್ನು ನೆನಪಿಸಿಕೊಂಡ ಅವರು, ಮಂಥರೆಯ ಮಾತಿಗೆ ಮರುಳಾಗಿ ಕೈಕೇಯಿ ವನವಾಸ ಕೇಳುವ ಘಟನೆಯು ಇಡೀ ಕುಟುಂಬ ಒಡೆಯುವ ಪ್ರಮುಖ ಭಾವನಾತ್ಮಕ ತಿರುವು. ಹಾಗಾಗಿ ಅಂತಹ ದೃಶ್ಯಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಭಾವನಾತ್ಮಕವಾಗಿ ಸೆರೆಹಿಡಿಯಬೇಕಿತ್ತು ಎಂದಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೇಲರ್:

ಆದಾಗ್ಯೂ, ರಣಬೀರ್ ಕಪೂರ್ ಅವರ ಶ್ರೀರಾಮನ ಗೆಟಪ್​ ಅನ್ನು ಗಜೇಂದ್ರ ಚೌಹಾಣ್ ಶ್ಲಾಘಿಸಿದ್ದಾರೆ. ‘ರಣಬೀರ್ ಕಪೂರ್ ಅವರಿಗೆ ಸ್ಟಾರ್ ಆಗಿ ತಮ್ಮದೇ ಆದ ಇಮೇಜ್ ಇದೆ. ಅವರು ದೊಡ್ಡ ನಟ. ಈಗ ರಾಮನ ಪಾತ್ರ ಮಾಡುತ್ತಿದ್ದಾರೆ. ಆ ಗೆಟಪ್‌ನಲ್ಲಿ ಅವರು ನಿಜಕ್ಕೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಪಾತ್ರದ ವಸ್ತ್ರಗಳ ಬಗೆಗಿನ ಟೀಕೆಗೆ ಸ್ಪಷ್ಟನೆ ನೀಡಿದ ವಿನ್ಯಾಸಕರು

‘ನಮ್ಮ ಸಂಸ್ಕೃತಿ ಮತ್ತು ಹಿಂದಿನ ಸಿನಿಮಾಗಳಿಂದಾಗಿ ಜನರ ಮನಸ್ಸಿನಲ್ಲಿ ಶ್ರೀರಾಮನ ಬಗ್ಗೆ ನಿರ್ದಿಷ್ಟವಾದ ದೈವಿಕ ಕಲ್ಪನೆ ಆಳವಾಗಿ ಬೇರೂರಿದೆ. ಹಾಗಾಗಿ ಅಂತಹ ನಿರೀಕ್ಷೆಗಳನ್ನು ತಲುಪುವುದು ಯಾವುದೇ ನಟನಿಗೂ ಸವಾಲಿನ ಕೆಲಸ. ಆದರೂ ಕೇವಲ ಟ್ರೇಲರ್ ನೋಡಿ ನಟನೆಯನ್ನು ನಿರ್ಣಯಿಸುವುದು ಸರಿಯಲ್ಲ. ಸಂಪೂರ್ಣ ಸಿನಿಮಾ ಬಿಡುಗಡೆಯಾದ ಮೇಲೆಯೇ ಅಂತಿಮ ಅಭಿಪ್ರಾಯಕ್ಕೆ ಬರಬಹುದು’ ಎಂದು ಗಜೇಂದ್ರ ಚೌಹಾಣ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್​ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ? – Kannada News | Good investment options in deposits smb vs corporate fd know which one suits you

ನಿಶ್ಚಿತ ಆದಾಯ ನೀಡುವ ಹೂಡಿಕೆಗಳಲ್ಲಿ ಹಲವು ಆಯ್ಕೆಗಳಿವೆ. ಬ್ಯಾಂಕ್ ಡೆಪಾಸಿಟ್, ಡೆಟ್ ಫಂಡ್, ಸರ್ಕಾರಿ ಬಾಂಡ್, ಕಾರ್ಪೊರೇಟ್ ಎಫ್​ಡಿ, ಕಾರ್ಪೊರೇಟ್ ಬಾಂಡ್ ಮೊದಲಾದವಿವೆ. ಫಿಕ್ಸೆಡ್ ಡೆಪಾಸಿಟ್ ಎಂದು ಬಂದರೆ ಬ್ಯಾಂಕ್ ಡೆಪಾಸಿಟ್, ಕಾರ್ಪೊರೇಟ್ ಎಫ್​ಡಿ ಆಯ್ಕೆಗಳಿವೆ. ಹೂಡಿಕೆದಾರರಿಗೆ ಸುರಕ್ಷಿತ ಆದಾಯ ನೀಡುವ ಫಿಕ್ಸ್ಡ್ ಡೆಪಾಸಿಟ್ (FD) ವಲಯದಲ್ಲಿ ಈಗ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಒಂದೆಡೆ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು (SFB) ಮತ್ತು ಇನ್ನೊಂದೆಡೆ ಕಾರ್ಪೊರೇಟ್ ಕಂಪನಿಗಳು (Corporate FDs) ಹೂಡಿಕೆದಾರರನ್ನು ಸೆಳೆಯಲು ಶೇಕಡಾ 8 ಕ್ಕಿಂತಲೂ ಹೆಚ್ಚಿನ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿವೆ. ಆದರೆ, ಎರಡರಲ್ಲೂ ಉತ್ತಮ ಬಡ್ಡಿ ಸಿಗುತ್ತಿದ್ದರೂ, ನಿಮ್ಮ ಹಣ ಹೂಡಿಕೆ ಮಾಡುವ ಮುನ್ನ ಸುರಕ್ಷತೆ ಮತ್ತು ಅಪಾಯದ (Risk) ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ – ಸುರಕ್ಷತೆಗೆ ಮೊದಲ ಆದ್ಯತೆ

ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳಲ್ಲಿ (SFB) ಹೂಡಿಕೆ ಮಾಡುವುದು ಸಾಮಾನ್ಯ ವಾಣಿಜ್ಯ ಬ್ಯಾಂಕ್‌ಗಳಷ್ಟೇ ಸುರಕ್ಷಿತ.

  • DICGC ಗ್ಯಾರಂಟಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಡಿಯಲ್ಲಿ ಬರುವ ‘ಡೆಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್’ (DICGC) ನಿಯಮಾವಳಿಯಂತೆ, ಪ್ರತಿ ಬ್ಯಾಂಕ್ ಖಾತೆದಾರರ ₹5 ಲಕ್ಷದವರೆಗಿನ ಡೆಪಾಸಿಟ್‌ಗೆ (ಅಸಲು + ಬಡ್ಡಿ) ಪೂರ್ಣ ಸುರಕ್ಷತೆ ಮತ್ತು ವಿಮೆ ಇರುತ್ತದೆ.
  • ಬಡ್ಡಿದರ: ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಜ್ಜೀವನ್, ಸೂರ್ಯೋದಯ್ ಮುಂತಾದ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ 8.5% ರಿಂದ 9% ರವರೆಗೆ ಬಡ್ಡಿದರ ನೀಡುತ್ತಿವೆ.

ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೂ ₹5 ಲಕ್ಷದವರೆಗಿನ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್​ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ

ಕಾರ್ಪೊರೇಟ್ ಎಫ್‌ಡಿ – ಹೆಚ್ಚಿನ ಆದಾಯ, ಆದರೆ ಆಪತ್ತು ಹೆಚ್ಚು

ಕಾರ್ಪೊರೇಟ್ ಅಥವಾ ಕಂಪನಿ ಎಫ್‌ಡಿಗಳನ್ನು (Corporate FDs) ಆರ್ಥಿಕವಾಗಿ ಸೌಂಡ್ ಆಗಿರುವ ಕಂಪನಿಗಳು ಮತ್ತು ಎನ್‌ಬಿಎಫ್‌ಸಿಗಳು (NBFC) ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ನೀಡುತ್ತವೆ.

  • ಕ್ರೆಡಿಟ್ ರೇಟಿಂಗ್ ಮುಖ್ಯ: ಈ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವ ಮುನ್ನ CRISIL, ICRA ನಂತಹ ಸಂಸ್ಥೆಗಳು ನೀಡುವ ರೇಟಿಂಗ್ ನೋಡಬೇಕು. ‘AAA’ ಅಥವಾ ‘AA+’ ರೇಟಿಂಗ್ ಇರುವ ಕಂಪನಿಗಳು ಸುರಕ್ಷಿತ ಎನಿಸಿಕೊಳ್ಳುತ್ತವೆ.
  • ಯಾವುದೇ DICGC ವಿಮೆ ಇಲ್ಲ: ಬ್ಯಾಂಕ್‌ಗಳಂತೆ ಕಂಪನಿ ಎಫ್‌ಡಿಗಳಿಗೆ ಆರ್‌ಬಿಐನ ₹5 ಲಕ್ಷದ ವಿಮಾ ಸುರಕ್ಷತೆ ಇರುವುದಿಲ್ಲ. ಕಂಪನಿ ನಷ್ಟಕ್ಕೆ ಸಿಲುಕಿದರೆ ಅಥವಾ ದಿವಾಳಿಯಾದರೆ ಹೂಡಿಕೆದಾರರು ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ.
  • ಬಡ್ಡಿದರ: ಉತ್ತಮ ರೇಟಿಂಗ್ ಹೊಂದಿರುವ ಕಂಪನಿಗಳು 8% ರಿಂದ 8.75% ರವರೆಗೆ ಬಡ್ಡಿ ನೀಡುತ್ತವೆ. ಕಡಿಮೆ ರೇಟಿಂಗ್ ಇರುವ ಕಂಪನಿಗಳು ಹೆಚ್ಚು ಬಡ್ಡಿ ನೀಡುತ್ತವಾದರೂ ರಿಸ್ಕ್ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ಟಾಟಾ ಸನ್ಸ್ ಉನ್ನತ ಸ್ಥಾನ ತೊರೆದ ಎನ್ ಚಂದ್ರಶೇಖರನ್ ಅವರ ವೇತನ, ಕಮಿಷನ್ ಇತ್ಯಾದಿ ವರಮಾನ ಎಷ್ಟು ಗೊತ್ತಾ?

ಹೂಡಿಕೆದಾರರು ಹೇಗೆ ಆಯ್ಕೆ ಮಾಡಬೇಕು?

ಸುರಕ್ಷತೆ ಬಯಸುವವರಿಗೆ: ನೀವು ಹಿರಿಯ ನಾಗರಿಕರಾಗಿದ್ದು, ನಿಮ್ಮ ಬಂಡವಾಳಕ್ಕೆ ಯಾವುದೇ ಅಪಾಯವಿರಬಾರದು ಎಂದರೆ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ ಅತ್ಯುತ್ತಮ. ಹೆಚ್ಚು ಹಣ ಇದ್ದಾಗ, ಬೇರೆ ಬೇರೆ SFB ಬ್ಯಾಂಕ್‌ಗಳಲ್ಲಿ ತಲಾ ₹5 ಲಕ್ಷದಂತೆ ಹೂಡಿಕೆ ಮಾಡುವುದರಿಂದ ಸಂಪೂರ್ಣ ಹಣಕ್ಕೆ ವಿಮಾ ಸುರಕ್ಷತೆ ಪಡೆಯಬಹುದು.

ಸ್ವಲ್ಪ ರಿಸ್ಕ್ ತೆಗೆದುಕೊಳ್ಳುವವರಿಗೆ: ಹೆಚ್ಚಿನ ಆದಾಯದ ಜೊತೆಗೆ ಉತ್ತಮ ಕ್ರೆಡಿಟ್ ರೇಟಿಂಗ್ (AAA ರೇಟಿಂಗ್) ಹೊಂದಿರುವ ಪ್ರತಿಷ್ಠಿತ ಕಂಪನಿಗಳ ಎಫ್‌ಡಿಗಳಲ್ಲಿ ಒಟ್ಟು ಹೂಡಿಕೆಯ ಸಣ್ಣ ಭಾಗವನ್ನು ಮಾತ್ರ ಇಡಬಹುದು.

ಅಂತಿಮವಾಗಿ, ಕೇವಲ ಹೆಚ್ಚಿನ ಬಡ್ಡಿದರವನ್ನು ನೋಡಿ ನಿರ್ಧಾರ ಕೈಗೊಳ್ಳುವ ಬದಲು, ನಿಮ್ಮ ಆರ್ಥಿಕ ಗುರಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ಹೂಡಿಕೆ ಮಾಡುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೀದರ್​ನಲ್ಲಿ ಶೂಟೌಟ್​ ಮಾಡಿ 83 ಲಕ್ಷ ಹಣ ದರೋಡೆ ಕೇಸ್: 19 ತಿಂಗಳ ಬಳಿಕ‌ ಆರೋಪಿಗಳ ಬಂಧನ – Kannada News | Bidar 83 Lakh ATM Robbery: Accused Arrested After 19 Months in Bihar

ಬೀದರ್, ಆಗಸ್ಟ್​​ 12: 2025ರ ಜನವರಿ 16ರಂದು ಬೀದರ್​ (bidar) ನಗರದಲ್ಲಿ ಹಾಡಹಗಲೇ ನಡೆದಿದ್ದ ಎಟಿಎಂ ದರೋಡೆ (ATM Robbery) ಮತ್ತು ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ದರೋಡೆಕೋರರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಬರೋಬ್ಬರಿ 19 ತಿಂಗಳ ಬಳಿಕ‌ ಖಾಕಿ ಪಡೆ ಪ್ರಕರಣವನ್ನು ಭೇದಿಸಿದೆ. ಅಲೋಕ್ ಹಾಗೂ ಅಮನ್ ಬಂಧಿತರು. ಸದ್ಯ ಬೀದರ್ ಪೊಲೀಸರು ಆರೋಪಿಗಳನ್ನು ಬಿಹಾರದಿಂದ ಕರೆತರುತ್ತಿದ್ದಾರೆ.

ಪಟಾಕಿ ಸಿಡಿಸಿ ಜನರ ಸಂಭ್ರಮಾಚರಣೆ

ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಅವರ ಮಾರ್ಗದರ್ಶನದಲ್ಲಿ, 50 ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಪೊಲೀಸ್ ಪಡೆ ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಅತ್ತ ದರೋಡೆಕೋರರ ಬಂಧನವಾಗುತ್ತಿದ್ದಂತೆ ಇತ್ತ ನಗರದಲ್ಲಿ ಪಟಾಕಿ ಸಿಡಿಸಿ ಜನರು ಸಂಭ್ರಮಾಚರಣೆ ಮಾಡಿದರು.

ಪ್ರಕರಣ ಹಿನ್ನೆಲೆ

2025ರ ಜನವರಿ 16ರ ಬೆಳಿಗ್ಗೆ 11 ಗಂಟೆಗೆ ಹಾಡಹಗಲೇ ಬೀದರ್‌ನ ಶಿವಾಜಿ ವೃತ್ತದ ಬಳಿ ಇರುವ ಎಸ್‌ಬಿಐ ಎಟಿಎಂಗೆ ನಗದು ತುಂಬಿಸಲು ಸಿಬ್ಬಂದಿ ವಾಹನದಲ್ಲಿ ಬಂದಿದ್ದಾಗ, ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿ 83 ಲಕ್ಷ ರೂಪಾಯಿ ನಗದನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು.

ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್‌ ATM ದರೋಡೆ ಕೇಸ್‌ಗೆ 1 ವರ್ಷ: ಆರೋಪಿಗಳ ಸುಳಿವೇ ಇಲ್ಲ

ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ದರೋಡೆಕೋರರ ದಾಳಿಗೆ ಬೀದರ್​ನ ನಿವಾಸಿ ಗಿರಿ ವೆಂಕಟೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶಿವಕುಮಾರ್ ಎಂಬ ಮತ್ತೊಬ್ಬ ಸಿಬ್ಬಂದಿ ಗಾಯಗೊಂಡಿದ್ದರು. ದರೋಡೆಯಲ್ಲಿ ಭಾಗವಹಿಸಿದ ಗ್ಯಾಂಗ್ ದರೋಡೆಗೂ ಮುನ್ನ ಪಕ್ಕಾ ಪ್ಲ್ಯಾನ್ ಮಾಡಿತ್ತು. ದರೋಡೆ ಮಾಡುವ ಎರಡು ದಿನ ಮುನ್ನ ಬೀದರ್​ನಲ್ಲಿ ದರೋಡೆಕೋರರು ಉಳಿದುಕೊಂಡಿದ್ದರು.

ಇದನ್ನೂ ಓದಿ: ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್​ ದರೋಡೆಕೋರರು ಎಸ್ಕೇಪ್

ದರೋಡೆ ಮಾಡಿಕೊಂಡು ಯಾವ ಮಾರ್ಗದಲ್ಲಿ ಹೋಗಬೇಕು ಎನ್ನುವುದನ್ನು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಗ್ಯಾಂಗ್, ಆ ಪ್ರಕಾರವೇ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಇದೀಗ ಸುದೀರ್ಘ ಕಾರ್ಯಚರಣೆ ಬಳಿಕ ಅಂದರೆ ಒಂದು ವರ್ಷ 7 ತಿಂಗಳ ನಂತರ ಆರೋಪಿಗಳನ್ನು ಬೀದರ್ ಪೊಲೀಸರು ಸೆರೆಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಳೆಗಾಲದಲ್ಲಿ ಮನೆಯಲ್ಲಿ ಜರ್ಮ್ಸ್‌ ಹೆಚ್ಚಾಗದಂತೆ ತಡೆಯುವುದು ಹೇಗೆ? ಈ ಟಿಪ್ಸ್‌ ಪಾಲಿಸಿ – Kannada News | Germs Increase During Monsoon: How to Keep Your Home Clean and Dry

ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಗಳಲ್ಲಿ ತೇವಾಂಶ ಹೆಚ್ಚಾಗುತ್ತದೆ. ಇದರಿಂದ ಕಿಚನ್‌, ಬಾತ್‌ರೂಮ್‌, ನೆಲ, ಗೋಡೆಗಳು ಸೇರಿದಂತೆ ಹಲವು ಜಾಗಗಳು ಹೆಚ್ಚು ಹೊತ್ತು ತೇವವಾಗಿರುವ ಸಾಧ್ಯತೆ ಇರುತ್ತದೆ. ಇಂತಹ ವಾತಾವರಣದಲ್ಲಿ ಜರ್ಮ್ಸ್‌, ಬ್ಯಾಕ್ಟೀರಿಯಾ ಮತ್ತು ಫಂಗಸ್‌ ಬೆಳೆಯಬಹುದು. ಇದರಿಂದ ಕೆಲವರಿಗೆ ಸೋಂಕು, ಅಲರ್ಜಿ, ಚರ್ಮದ ಸಮಸ್ಯೆ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ಮನೆಯ ಸ್ವಚ್ಛತೆ ಎಂದರೆ ಕಣ್ಣಿಗೆ ಕಾಣುವ ಧೂಳು ಮತ್ತು ಕೊಳೆಯನ್ನು ತೆಗೆಯುವುದಷ್ಟೇ ಅಲ್ಲ. ಪದೇಪದೆ ಕೈಗೆ ತಾಗುವ ವಸ್ತುಗಳು, ಕಿಚನ್‌ ಸಿಂಕ್‌, ಡಿಶ್‌ಕ್ಲಾತ್‌, ಸ್ಪಾಂಜ್‌, ಬಾತ್‌ರೂಮ್‌ ಮತ್ತು ತೇವವಾಗಿರುವ ಸ್ಥಳಗಳನ್ನು ಸರಿಯಾಗಿ ಸ್ವಚ್ಛವಾಗಿಡುವುದು ಕೂಡ ಮುಖ್ಯ. ಹಾಗಾದರೆ ಮಳೆಗಾಲದಲ್ಲಿ ಮನೆಯನ್ನು ಜರ್ಮ್ಸ್‌ಗಳಿಂದ ಸುರಕ್ಷಿತವಾಗಿಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಕೆಲವು ಸರಳ ಸಲಹೆಗಳು.

ಪದೇಪದೆ ಮುಟ್ಟುವ ಸ್ಥಳಗಳನ್ನು ಸ್ವಚ್ಛಗೊಳಿಸಿ

ಬಾಗಿಲಿನ ಹ್ಯಾಂಡಲ್‌, ಲೈಟ್‌ ಸ್ವಿಚ್‌, ಮೆಟ್ಟಿಲಿನ ರೈಲಿಂಗ್‌, ಟೇಬಲ್‌, ಕೌಂಟರ್‌ ಸೇರಿದಂತೆ ಪದೇಪದೆ ಕೈಗೆ ತಾಗುವ ಸ್ಥಳಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಈ ಜಾಗಗಳಲ್ಲಿ ಕೊಳಕು ಮತ್ತು ಜರ್ಮ್ಸ್‌ ಸಂಗ್ರಹವಾಗುವ ಸಾಧ್ಯತೆ ಇರುತ್ತದೆ. ಮನೆಯ ಮೇಲ್ಮೈಗೆ ಸೂಕ್ತವಾದ ಕ್ಲೀನರ್‌ ಅಥವಾ ಸಾಬೂನು ಮತ್ತು ನೀರನ್ನು ಬಳಸಿ ಸ್ವಚ್ಛಗೊಳಿಸಬಹುದು.

ಕಿಚನ್‌ ಸ್ವಚ್ಛತೆಗೆ ಹೆಚ್ಚು ಗಮನ ಕೊಡಿ

ಮಳೆಗಾಲದಲ್ಲಿ ಕಿಚನ್‌ನ ಕೌಂಟರ್‌, ಸಿಂಕ್‌, ಗ್ಯಾಸ್‌ ಸ್ಟೌವ್‌ ಮತ್ತು ಇತರ ಮೇಲ್ಮೈಗಳನ್ನು ಸ್ವಚ್ಛವಾಗಿಡುವುದು ಮುಖ್ಯ. ಬಳಸಿದ ಪಾತ್ರೆಗಳನ್ನು ಹೆಚ್ಚು ಹೊತ್ತು ಹಾಗೆಯೇ ಬಿಡದೆ ತೊಳೆಯಿರಿ. ಡಿಶ್‌ಕ್ಲಾತ್‌ ಮತ್ತು ಸ್ಪಾಂಜ್‌ಗಳನ್ನು ಒದ್ದೆಯಾಗಿಯೇ ಇಡಬೇಡಿ. ಅವುಗಳನ್ನು ತೊಳೆದು ಚೆನ್ನಾಗಿ ಹಿಂಡಿ, ಗಾಳಿ ಬೀಸುವ ಜಾಗದಲ್ಲಿ ಒಣಗಿಸಿ. ಹಸಿ ಮಾಂಸ ಮತ್ತು ತರಕಾರಿಗಳನ್ನು ಕತ್ತರಿಸಲು ಒಂದೇ ಕಟಿಂಗ್‌ ಬೋರ್ಡ್‌ ಬಳಸುವುದನ್ನು ತಪ್ಪಿಸುವುದು ಕೂಡ ಆಹಾರದಲ್ಲಿ ಜರ್ಮ್ಸ್‌ ಹರಡುವುದನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಬಾತ್‌ರೂಮ್‌ ಒದ್ದೆಯಾಗಿರದಂತೆ ನೋಡಿಕೊಳ್ಳಿ

ಮಳೆಗಾಲದಲ್ಲಿ ಬಾತ್‌ರೂಮ್‌ನಲ್ಲಿ ತೇವಾಂಶ ಹೆಚ್ಚಾಗುವುದರಿಂದ ಫಂಗಸ್‌ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಸ್ನಾನ ಮಾಡಿದ ನಂತರ ನೆಲ ಮತ್ತು ಹೆಚ್ಚು ಒದ್ದೆಯಾಗಿರುವ ಮೇಲ್ಮೈಗಳನ್ನು ಸಾಧ್ಯವಾದಷ್ಟು ಬೇಗ ಒರೆಸಿ. ಬಾತ್‌ರೂಮ್‌ನಲ್ಲಿ ಗಾಳಿಯ ಸಂಚಾರ ಉತ್ತಮವಾಗಿರುವಂತೆ ನೋಡಿಕೊಳ್ಳಿ. ಟಾಯ್ಲೆಟ್‌, ಸಿಂಕ್‌ ಮತ್ತು ಇತರ ಮೇಲ್ಮೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಕೂಡ ಮುಖ್ಯ.

ಮನೆಯಲ್ಲಿ ಧೂಳು ಮತ್ತು ಕೊಳೆ ಸಂಗ್ರಹವಾಗದಂತೆ ನೋಡಿಕೊಳ್ಳಿ

ಕಿಟಕಿ, ಫರ್ನಿಚರ್‌, ಶೆಲ್ಫ್‌ ಮತ್ತು ಇತರ ಸ್ಥಳಗಳಲ್ಲಿ ಸಂಗ್ರಹವಾಗುವ ಧೂಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಮೊದಲು ಮೇಲ್ಮೈಯಲ್ಲಿರುವ ಧೂಳನ್ನು ತೆಗೆದುಹಾಕಿ. ನಂತರ ಅಗತ್ಯವಿದ್ದರೆ ವ್ಯಾಕ್ಯೂಮ್‌ ಅಥವಾ ಗುಡಿಸಿ, ಬಳಿಕ ನೆಲ ಒರೆಸಬಹುದು. ಮನೆಯಲ್ಲಿರುವ ಧೂಳು ಕಡಿಮೆಯಾಗುವುದರಿಂದ ಅಲರ್ಜಿಯನ್ನು ಉಂಟುಮಾಡುವ ಕಣಗಳ ಪ್ರಮಾಣವನ್ನು ನಿಯಂತ್ರಿಸಲು ಸಹಾಯವಾಗಬಹುದು.

ಸ್ವಚ್ಛತಾ ಬಟ್ಟೆ ಮತ್ತು ಸ್ಪಾಂಜ್‌ಗಳನ್ನು ಸ್ವಚ್ಛವಾಗಿಡಿ

ಡಿಶ್‌ ಸ್ಪಾಂಜ್‌, ಡಿಶ್‌ಕ್ಲಾತ್‌, ನೆಲ ಒರೆಸುವ ಬಟ್ಟೆ ಮತ್ತು ಇತರ ಕ್ಲೀನಿಂಗ್‌ ಬಟ್ಟೆಗಳಲ್ಲಿ ಜರ್ಮ್ಸ್‌ ಸಂಗ್ರಹವಾಗಬಹುದು. ಬಳಕೆ ಮಾಡಿದ ನಂತರ ಅವುಗಳನ್ನು ಚೆನ್ನಾಗಿ ತೊಳೆದು, ನೀರನ್ನು ಹಿಂಡಿ, ಸಂಪೂರ್ಣ ಒಣಗುವಂತೆ ಇಡಿ. ಕಿಚನ್‌ ಮತ್ತು ಬಾತ್‌ರೂಮ್‌ಗೆ ಪ್ರತ್ಯೇಕ ಬಟ್ಟೆಗಳನ್ನು ಬಳಸುವುದು ಉತ್ತಮ. ಟಾಯ್ಲೆಟ್‌ ಸ್ವಚ್ಛಗೊಳಿಸಲು ಬಳಸಿದ ಬಟ್ಟೆಯನ್ನು ಕಿಚನ್‌ ಕೌಂಟರ್‌ ಅಥವಾ ಊಟದ ಸ್ಥಳದಲ್ಲಿ ಬಳಸಬಾರದು.

ಮನೆ ಸ್ವಚ್ಛಗೊಳಿಸುವಾಗ ಈ ತಪ್ಪು ಮಾಡಬೇಡಿ

ಸ್ವಚ್ಛತೆ ಮಾಡುವಾಗ ಮೊದಲು ವಸ್ತುಗಳನ್ನು ಸರಿಯಾದ ಜಾಗದಲ್ಲಿಡಿ. ನಂತರ ಮೇಲಿನ ಭಾಗಗಳಲ್ಲಿರುವ ಧೂಳನ್ನು ತೆಗೆದುಹಾಕಿ. ಅಗತ್ಯವಿದ್ದರೆ ವ್ಯಾಕ್ಯೂಮ್‌ ಅಥವಾ ಗುಡಿಸಿ, ನಂತರ ನೆಲ ಒರೆಸಿ. ಒದ್ದೆಯಾದ ಜಾಗಗಳನ್ನು ಹೆಚ್ಚು ಹೊತ್ತು ಹಾಗೆಯೇ ಬಿಡಬೇಡಿ. ಮನೆಯಲ್ಲಿ ಗಾಳಿ ಮತ್ತು ಬೆಳಕಿನ ಸಂಚಾರ ಇರುವಂತೆ ನೋಡಿಕೊಳ್ಳಿ. ಒಣ ಮತ್ತು ಉತ್ತಮ ಗಾಳಿಯಾಡುವ ವಾತಾವರಣವು ತೇವಾಂಶ ಮತ್ತು ಫಂಗಸ್‌ ನಿಯಂತ್ರಿಸಲು ಸಹಾಯ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು ಗರಂ

ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ತಿಕ್ಕಾಟ ನಡೆಯುತ್ತಿದೆ. ಸದ್ಯಕ್ಕೆ ಮಳೆ ಆಗಿರುವುದರಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೆ ಪ್ರತಿ ಬಾರಿ ನೀರಿನ ಸಲುವಾಗಿ ರೈತರು ಪ್ರತಿಭಟನೆ ಮಾಡಿದಾಗ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸೂಕ್ತವಾಗಿ ಬೆಂಬಲ ನೀಡುವುದಿಲ್ಲ ಎಂಬ ಮಾತಿದೆ. ಈ ಬಗ್ಗೆ ಸಾರಾ ಗೋವಿಂದು (Sa Ra Govindu) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಬೆಂಬಲ ನೀಡುತ್ತೇವೆ ಎಂದು ವಾಣಿಜ್ಯ ಮಂಡಳಿ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ. ಅದು ಎಲ್ಲರ ಧ್ವನಿ. ನೈತಿಕತೆ ಇದ್ದರೆ ಎಲ್ಲ ಸ್ಟಾರ್ ನಟರು ಬರಬೇಕು. ಅವರಿಗೆ ಆಹ್ವಾನ ನೀಡೋಕೆ ಆಗಲ್ಲ. ಒಂದು ವೇಳೆ ಯಾರಾದರೂ ಹೋರಾಟಕ್ಕೆ ಬಾರದೇ ಇದ್ದರೆ ಅಂಥವರ ಸಿನಿಮಾ ನಿಷೇಧ ಮಾಡಿ. ಏನಾಗುತ್ತೆ ನೋಡೋಣ. ಆಗ ಅವರಿಗೆ ಬುದ್ಧಿ ಬರುತ್ತದೆ’ ಎಂದು ಸಾರಾ ಗೋವಿಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version