ಅಪರೂಪದ ಪ್ರಾಣಿಯೊಂದಿಗೆ ನಟ ವಿಕ್ರಮ್ ವಿಡಿಯೋ: ಅರಣ್ಯ ಇಲಾಖೆಯಿಂದ ತನಿಖೆ – Kannada News | Actor Chiyaan Vikram Lar Gibbon Video Controversy Tamil Nadu Forest Department Probe

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ (Vikram) ಅವರು ಆಗ್ನೇಯ ಏಷ್ಯಾ ಮೂಲದ ಅತ್ಯಂತ ಅಪರೂಪದ ‘ಲಾರ್ ಗಿಬ್ಬನ್’ (Lar Gibbon) ಎಂಬ ವಿದೇಶಿ ತಳಿಯ ಪ್ರಾಣಿಯೊಂದಿಗೆ ಆಟವಾಡುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ವನ್ಯಜೀವಿ ಪ್ರೇಮಿಗಳು ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಿಡಿಯೋಗೆ ಸಂಬಂಧಿಸಿದಂತೆ ತನಿಖೆ ಕೂಡ ಆರಂಭ ಆಗಿದೆ.

ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ, ತಮಿಳುನಾಡು ಅರಣ್ಯ ಇಲಾಖೆಯು ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಈ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ವನ್ಯಜೀವಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲು ಮತ್ತು ಅದನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಅಧಿಕೃತ ಅನುಮತಿ ಪತ್ರಗಳು ಹಾಗೂ ದಾಖಲೆಗಳನ್ನು ಪಡೆಯಲಾಗಿದೆಯೇ ಎಂಬುದನ್ನು ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಸರ್ಕಾರದ ಅನುಮತಿ ಅಗತ್ಯ:

ಲಭ್ಯವಿರುವ ವರದಿಗಳ ಪ್ರಕಾರ, ಈ ವಿಡಿಯೋವನ್ನು ವಿಕ್ರಮ್ ಅವರ ಸಂಬಂಧಿಕರೊಬ್ಬರ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಲಾರ್ ಗಿಬ್ಬನ್ ತಳಿಯ ಪ್ರಾಣಿಗಳು ಅಂತಾರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ಪ್ರಾಣಿಗಳಾಗಿದ್ದು, ಇವುಗಳನ್ನು ಸಾಕುಪ್ರಾಣಿಯಾಗಿ ಅಥವಾ ಖಾಸಗಿಯಾಗಿ ಇಟ್ಟುಕೊಳ್ಳಲು ಅತ್ಯಂತ ಕಠಿಣ ನಿಯಮಗಳು ಮತ್ತು ಸರ್ಕಾರದ ಅನುಮತಿ ಅಗತ್ಯವಿರುತ್ತದೆ.

ಸಿನಿಮಾ ತಾರೆಯರು ಮತ್ತು ಗಣ್ಯರು ಇಂತಹ ಅಪರೂಪದ ಪ್ರಾಣಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರದರ್ಶಿಸುವುದರಿಂದ, ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುವುದರ ಜೊತೆಗೆ ಅಕ್ರಮ ವಿದೇಶಿ ಸಾಕುಪ್ರಾಣಿಗಳ ದಂಧೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬುದು ವನ್ಯಜೀವಿ ತಜ್ಞರ ಕಳವಳವಾಗಿದೆ.

ಇದನ್ನೂ ಓದಿ: ಚಿಯಾನ್ ವಿಕ್ರಮ್ ಸಿನಿಮಾಗೆ ನಾಯಕಿಯಾದ ಸಂಯುಕ್ತಾ ಹೆಗಡೆ 

ವಿಡಿಯೋ ಡಿಲೀಟ್ ಮಾಡಿದ ವಿಕ್ರಮ್:

ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ನಟ ವಿಕ್ರಮ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಪ್ರಸ್ತುತ ಅವರು ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲವಾದರೂ, ತನಿಖೆ ಮುಂದುವರಿದಿದೆ. ಈ ಘಟನೆಯು ಅಪರೂಪದ ಪ್ರಾಣಿಗಳ ಸಂರಕ್ಷಣೆ ಮತ್ತು ಪ್ರಸಿದ್ಧ ವ್ಯಕ್ತಿಗಳು ವನ್ಯಜೀವಿಗಳ ವಿಚಾರದಲ್ಲಿ ವಹಿಸಬೇಕಾದ ಹೊಣೆಗಾರಿಕೆಯ ಕುರಿತು ಮತ್ತೊಮ್ಮೆ ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇವಸ್ಥಾನದ ಜಾಗದಲ್ಲಿ ಚರ್ಚ್ ನಿರ್ಮಾಣ ಆರೋಪ: ಎರಡು ಗುಂಪುಗಳ ಮಧ್ಯೆ ಮಾರಾಮಾರಿ, ನಿಷೇಧಾಜ್ಞೆ ಜಾರಿ! – Kannada News | Bichali camp clash temple church land dispute escalates section 144 imposed

ರಾಯಚೂರು, ಆಗಸ್ಟ್​​ 12: ರಾಯಚೂರು (raichur) ತಾಲೂಕಿನ ಬಿಚ್ಚಾಲಿ ಕ್ಯಾಂಪ್‌ನಲ್ಲಿ ದೇವಸ್ಥಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಚರ್ಚ್ ನಿರ್ಮಿಸಲಾಗಿದೆ ಎನ್ನುವ ಆರೋಪ ತಾರಕಕ್ಕೇರಿದ್ದು, ಎರಡು ಗುಂಪುಗಳ ನಡುವೆ ಭಾರಿ ಮಾರಾಮಾರಿ (Clash) ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಿವಾದಿತ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಡೆದಿದ್ದೇನು?

2009ರ ಪ್ರವಾಹದಲ್ಲಿ ಸಂತ್ರಸ್ತರಾದ ಬಿಚ್ಚಾಲಿ ಕ್ಯಾಂಪ್‌ನ ಜನರಿಗಾಗಿ ಸರ್ವೇ ನಂಬರ್ 322ರ ಜಾಗದಲ್ಲಿ ಖಾಸಗಿ ಕಂಪನಿಯೊಂದು 132 ಮನೆಗಳನ್ನು ನಿರ್ಮಿಸಿತ್ತು. ಅವುಗಳಲ್ಲಿ 131 ಮನೆಗಳು ಅಲಾಟ್ ಆಗಿದ್ದರೂ, ಮನೆಗಳು ಚಿಕ್ಕದಾಗಿದ್ದ ಕಾರಣ ಯಾರೂ ಅಲ್ಲಿಗೆ ವಾಸಕ್ಕೆ ಹೋಗಿರಲಿಲ್ಲ. ಅದೇ ವೇಳೆಯಲ್ಲಿ ಆ ಮನೆಗಳ ಬಳಿ ಗಾರ್ಡನ್ ಹಾಗೂ ದೇವಾಲಯ ನಿರ್ಮಾಣಕ್ಕಾಗಿ ಸರ್ಕಾರ ಸ್ಥಳ ಮೀಸಲಿಟ್ಟಿತ್ತು. ಆದರೆ, ಗ್ರಾಮಸ್ಥರ ವಿರೋಧದ ನಡುವೆಯೂ ಈ ಜಾಗದಲ್ಲಿ 2024ರಲ್ಲಿ ಚರ್ಚ್ ನಿರ್ಮಿಸಲಾಗಿದೆ ಎಂಬುದು ಒಂದು ಗುಂಪಿನ ಆರೋಪವಾಗಿದೆ. ಆದರೆ, ಮತ್ತೊಂದು ಗುಂಪಿನವರು ಕಾನೂನುಬದ್ಧವಾಗಿಯೇ ಚರ್ಚ್ ನಿರ್ಮಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ.

ಆಂಜನೇಯನ ಮೂರ್ತಿ ತೆರವಿಗೆ ಯತ್ನ: ಎರಡು ಗುಂಪುಗಳ ಮಧ್ಯೆ ಜಗಳ

ಈ ವಿವಾದ ಬುಗಿಲೆದ್ದ ಬಳಿಕ ಇತ್ತೀಚೆಗೆ ಒಂದು ಗುಂಪಿನವರು ಚರ್ಚ್ ಎದುರಿಗಿನ ದೇವಸ್ಥಾನದ ಜಾಗದಲ್ಲಿ ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಅಮವಾಸ್ಯೆ ಇದ್ದ ಹಿನ್ನೆಲೆ ಪೂಜೆ ಹಾಗೂ ಅನ್ನದಾನ ನಡೆಸಲು ಕೆಲಸ ಕಾರ್ಯಗಳು ನಡೆಯುತ್ತಿದ್ದಾಗ, ಕೆಲವರು ಪ್ರತಿಷ್ಠಾಪಿಸಲಾಗಿದ್ದ ಆಂಜನೇಯನ ಮೂರ್ತಿಯನ್ನು ತೆರವುಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ.

ಇದನ್ನೂ ಓದಿ: ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿಗನ ಜೊತೆ ಸಂಪರ್ಕ: ರಾಯಚೂರಲ್ಲಿ ಯುವಕನ ಬಂಧನ

ಈ ಹಿಂದೆಂದೂ ಇಂತಹ ಘಟನೆಗೆ ಸಾಕ್ಷಿಯಾಗದ ಗ್ರಾಮದಲ್ಲಿ ಈ ರೀತಿ ಹೊಡೆದಾಟ ನಡೆದಿರುವುದಕ್ಕೆ ಗ್ರಾಮದ ಹಿರಿಯರು ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಎರಡೂ ಗುಂಪಿನವರನ್ನು ಕರೆಸಿ ಮಾತುಕತೆ ಮೂಲಕ ವಿವಾದ ಬಗೆಹರಿಸಲು ನಿರ್ಧರಿಸಲಾಗಿತ್ತು. ಅಷ್ಟರಲ್ಲೇ ಈ ಗಲಾಟೆ ಸಂಭವಿಸಿದೆ. ಇನ್ನು ಅಕ್ರಮ ಚರ್ಚ್ ತೆರವುಗೊಳಿಸುವಂತೆ ಗ್ರಾಮಸ್ಥರು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ.

ಪ್ರಕರಣ ದಾಖಲು

ಸದ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಗ್ರಾಮದಲ್ಲಿ ಸದ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಟೋ, ಕ್ಯಾಬ್ ಬಳಸುವ ಗ್ರಾಹಕರಿಗೆ ಒಳ್ಳೆ ಸುದ್ದಿ; ಟ್ರಿಪ್ ಪೂರ್ಣಗೊಳ್ಳುವ ಮುನ್ನ ಟಿಪ್ ಕೋರುವಂತಿಲ್ಲ ಎಂದ ಸರ್ಕಾರ – Kannada News | Big relief for constomers government asks ride Booking apps to stop advance tip feature

ನವದೆಹಲಿ, ಆಗಸ್ಟ್ 12: ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಆನ್‌ಲೈನ್ ಟ್ಯಾಕ್ಸಿ ಹಾಗೂ ಆಟೋ ಬುಕಿಂಗ್ ಆ್ಯಪ್‌ಗಳನ್ನು (Online Booking App) ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೈಡ್ ಬುಕ್ ಮಾಡುವಾಗಲೇ ಚಾಲಕರಿಗೆ ‘ಅಡ್ವಾನ್ಸ್ ಟಿಪ್’ ನೀಡುವಂತೆ ಕೋರುವ ಫೀಚರ್ ಅನ್ನು ತಕ್ಷಣವೇ ಬಂದ್ ಮಾಡುವಂತೆ ಗ್ರಾಹಕರ ಹಿತರಕ್ಷಣೆ ಪ್ರಾಧಿಕಾರವು (CCPA) ಈ ಕಂಪನಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಇತ್ತೀಚಿನ ದಿನಗಳಲ್ಲಿ ಆ್ಯಪ್‌ಗಳಲ್ಲಿ ರೈಡ್ ಬುಕ್ ಮಾಡುವಾಗ, ಚಾಲಕರು ಬೇಗನೆ ರೈಡ್ ಸ್ವೀಕರಿಸಲಿ ಎಂಬ ಕಾರಣಕ್ಕೆ 20ರಿಂದ 100 ರೂ.ವರೆಗೆ ಮುಂಗಡವಾಗಿ ಟಿಪ್ಸ್ ನೀಡುವ ಆಯ್ಕೆಯನ್ನು ಆ್ಯಪ್‌ಗಳು ನೀಡುತ್ತಿದ್ದವು. ಟಿಪ್ ನೀಡದಿದ್ದರೆ ಚಾಲಕರು ಬುಕಿಂಗ್ ಕ್ಯಾನ್ಸಲ್ ಮಾಡುವುದು ಅಥವಾ ರೈಡ್ ಸ್ವೀಕರಿಸದೇ ಇರುವುದು ಹೆಚ್ಚಾಗಿತ್ತು. ಇದಕ್ಕೆಲ್ಲ ಸರ್ಕಾರ ಕಡಿವಾಣ ಹಾಕಿದೆ.

ಗ್ರಾಹಕರ ಹಕ್ಕುಗಳ ಉಲ್ಲಂಘನೆ:

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) ಇದನ್ನು ‘ಅನುಚಿತ ವ್ಯಾಪಾರ ಪ್ರಕ್ರಿಯೆ’ ಮತ್ತು ‘ಡಾರ್ಕ್ ಪ್ಯಾಟರ್ನ್’ ಎಂದು ಬಣ್ಣಿಸಿದೆ. ಸೇವೆಯ ಗುಣಮಟ್ಟವನ್ನು ನೋಡಿ ಸವಾರಿ ಮುಗಿದ ನಂತರ ಗ್ರಾಹಕರು ಸ್ವಇಚ್ಛೆಯಿಂದ ಟಿಪ್ಸ್ ನೀಡುವುದು ನಿಯಮ. ಆದರೆ, ಬುಕಿಂಗ್ ಆರಂಭದಲ್ಲೇ ಟಿಪ್ಸ್ ಕೇಳುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆ್ಯಪ್​​ ಮೂಲಕ ಕಸ ಸಂಗ್ರಹಣೆ ವಾಹನಗಳ ಮೇಲೆ ನಿಗಾಕ್ಕೆ ಮುಂದಾದ ಜಿಬಿಎ: ಕಾರ್ಯನಿರ್ವಹಣೆ ಹೇಗೆ?

ಕೆಲವು ರೈಡ್ ಅಗ್ರಿಗೇಟರ್ ಆ್ಯಪ್‌ಗಳು ಗ್ರಾಹಕರಿಗೆ ರೈಡ್ ಕಾಯ್ದಿರಿಸುವಾಗಲೇ “ಅಡ್ವಾನ್ಸ್ ಟಿಪ್”ನಂತಹ ಆಯ್ಕೆಗಳನ್ನು ಪ್ರದರ್ಶಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದೆ.

ಆ್ಯಪ್ ಆಪರೇಟರ್‌ಗಳಿಗೆ ಖಡಕ್ ಎಚ್ಚರಿಕೆ:

ಕೇಂದ್ರ ನಗರಾಭಿವೃದ್ಧಿ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಎಲ್ಲ ಪ್ರಮುಖ ಆ್ಯಪ್ ಆಪರೇಟರ್‌ಗಳಿಗೆ ತಮ್ಮ ಆಲ್ಗಾರಿದಮ್ ಮತ್ತು ಆ್ಯಪ್ ವಿನ್ಯಾಸದಲ್ಲಿ ಬದಲಾವಣೆ ಮಾಡಲು ಸೂಚಿಸಿದೆ. ಬುಕಿಂಗ್ ಸಮಯದಲ್ಲಿ ‘ಅಡ್ವಾನ್ಸ್ ಟಿಪ್’ ಸೇರಿಸುವ ಆಯ್ಕೆಯನ್ನು ತೆರವುಗೊಳಿಸಬೇಕು, ಸವಾರಿ ಪೂರ್ಣಗೊಂಡ ನಂತರವೇ ಈ ಆಯ್ಕೆ ಇರಬೇಕು ಎಂದು ಹೇಳಿದೆ.

ಇದನ್ನೂ ಓದಿ: ಏರ್‌ಪೋರ್ಟ್ ಪ್ರಯಾಣಿಕರೇ ಎಚ್ಚರ: ಬೆಂಗಳೂರಿನಲ್ಲಿ ರೈಡರ್‌ಗಳ ವಂಚಿಸಲು ನಕಲಿ ಕ್ಯಾಬ್ ಆ್ಯಪ್ ಬಳಸ್ತಿದ್ದಾರೆ ಚಾಲಕರು!

ಗ್ರಾಹಕರಿಗೆ ಏನು ಲಾಭ?:

ಸರ್ಕಾರದ ಈ ನಿರ್ಧಾರದಿಂದಾಗಿ ಗ್ರಾಹಕರು ಅನಗತ್ಯ ಹೆಚ್ಚುವರಿ ಹಣ ಪಾವತಿಸುವುದರಿಂದ ಮುಕ್ತಿ ಪಡೆಯಲಿದ್ದಾರೆ. ಬುಕಿಂಗ್ ಕ್ಯಾನ್ಸಲೇಷನ್ ದರ ಕಡಿಮೆಯಾಗಲಿದ್ದು, ರೈಡ್ ಪಡೆಯಲು ಟಿಪ್ಸ್ ನೀಡುವುದು ಕಡ್ಡಾಯವಲ್ಲ ಎಂಬ ವಾತಾವರಣ ಸೃಷ್ಟಿಯಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್, ಆಡಿಯೋನಲ್ಲೇನಿದೆ ಗೊತ್ತಾ? – Kannada News | Prajwal Revanna Found With Phone Inside parappana Agrahara jail And Audio viral

ಬೆಂಗಳೂರು, (ಆಗಸ್ಟ್ 12): ಪ್ರಜ್ವಲ್ ರೇವಣ್ಣ ಸೆಲ್​​​​ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್ ಹಾಗೂ ಪೆನ್​​​ ಡ್ರೈವ್​​​​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹಾಗೇ ಪ್ರಜ್ವಲ್ ಪರಿಚಿತರೊಂದಿಗೆ ಮಾತನಾಡಿದ ಆಡೀಯೋ ರೆಕಾರ್ಡ್​​​​​​​​ಗ ಸಹ ಕಂಡುಬಂದಿದೆ. ಹೌದು…ಜೈಲಿನಲ್ಲಿ ಸಿಕ್ಕ ಮೊಬೈಲ್​​​​ ಮೂಲಕ ಪ್ರಜ್ವಲ್ ರೇವಣ್ಣ ಅಪರಿಚಿತ ವ್ಯಕ್ತಿಯೊಂದಿಗಿನ ಸಂಭಾಷಣೆ ಸಿಕ್ಕಿದೆ. ಹೊರಗಡೆ ಬಾ, ನಾನು ಅವರಿಗೆ ಪೋನ್ ಮಾಡಿಲ್ಲ. ನೀನು ಹೇಳಿದ ಮೇಲೆ ಮೊನ್ನೆ ಮಾಡಿದ್ದೆ. ಅತ್ತುಕೊಂಡು ಕೂತ್ತಿದ್ರು ನೀನು ಪೋನ್ ಮಾಡಿಲ್ಲ. ಏನ್ ಮಾಡ್ತಿದ್ದೆ, ಎಂದು ಅಪರಿಚಿತರೊಂದಿಗೆ ಮಾತನಾಡಿದ ಪೋನ್ ಸಂಭಾಷಣೆ ಸಿಕ್ಕಿದೆ. ಆದರೆ, ಯಾರ ಜೊತೆ ಮಾತನಾಡಿದ್ದು ಎನ್ನುವುದು ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸೆಲ್​​​​​​​ನಲ್ಲಿ ಸಿಕ್ಕ ಮೊಬೈಲ್, ಪೆನ್​​​​ಡ್ರೈವ್​​​​​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ

Source link

ICC Rankings: ಏಕದಿನ, ಟೆಸ್ಟ್, ಟಿ20 ಮಾದರಿಯಲ್ಲೂ ಭಾರತೀಯರದ್ದೇ ಪಾರುಪತ್ಯ – Kannada News | ICC Rankings: India Dominates Test, ODI, T20; Bumrah, Gill, Kishan Top Charts

ಹಾಗೆಯೇ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ, ಇಶಾನ್ ಕಿಶನ್ ನಂ. 1, ಅಭಿಷೇಕ್ ಶರ್ಮಾ ನಂ. 3 ಮತ್ತು ತಿಲಕ್ ವರ್ಮಾ ನಂ. 6 ಸ್ಥಾನದಲ್ಲಿದ್ದಾರೆ. ಹದಿನೈದು ವರ್ಷದ ವೈಭವ್ ಸೂರ್ಯವಂಶಿ ಕೂಡ 48 ನೇ ಸ್ಥಾನ ಪಡೆದು ಅಗ್ರ 50 ರಲ್ಲಿ ಮುಂದುವರೆದಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 24 ನೇ ಸ್ಥಾನದಲ್ಲಿದ್ದರೆ, ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ನಂ. 19 ನೇ ಸ್ಥಾನದಲ್ಲಿದ್ದಾರೆ(PC-PTI).

Source link

ಜೂನಿಯರ್ ಎನ್‌ಟಿಆರ್ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ; ಸ್ವತಃ ಅಪ್‌ಡೇಟ್ ನೀಡಿದ ನಟ – Kannada News | Jr NTR undergoes successful Shoulder Surgery Health Update Dragon Movie

ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ (Jr NTR) ಅವರ ಭುಜದ ಶಸ್ತ್ರಚಿಕಿತ್ಸೆ (Shoulder Surgery) ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನೆರವೇರಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಜೂನಿಯರ್ ಎನ್‌ಟಿಆರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಶಸ್ತ್ರಚಿಕಿತ್ಸೆಯ ನಂತರ ತಮ್ಮ ಆರೋಗ್ಯದ ಕುರಿತು ಅಭಿಮಾನಿಗಳಿಗೆ ಮಾಹಿತಿ (Health Update) ನೀಡಿದ್ದಾರೆ. ಅವರು ಕ್ಷೇಮವಾಗಿದ್ದಾರೆ ಎಂಬುದನ್ನು ತಿಳಿದು ಅಭಿಮಾನಿಗಳಿಗೆ ಸಮಾಧಾನ ಆಗಿದೆ.

ಎನ್‌ಟಿಆರ್ ನೀಡಿದ ಅಪ್‌ಡೇಟ್:

ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಬುಧವಾರ (ಆಗಸ್ಟ್ 12) ಸಂಜೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಎನ್‌ಟಿಆರ್, ‘ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗೆ ನಾನು ಆಭಾರಿಯಾಗಿದ್ದೇನೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದ್ದು, ನಾನು ಆರಾಮವಾಗಿದ್ದೇನೆ. ಕಿಮ್ಸ್ ಆಸ್ಪತ್ರೆಯ ವೈದ್ಯರ ತಂಡಕ್ಕೆ ನನ್ನ ಧನ್ಯವಾದಗಳು. ನನ್ನ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳ ಬೆಂಬಲವೇ ನನಗೆ ಪ್ರತಿದಿನ ಶಕ್ತಿ ನೀಡುತ್ತದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಆಸ್ಪತ್ರೆಯ ಹೆಲ್ತ್ ಬುಲೆಟಿನ್:

ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯ ಮೂಳೆ ರೋಗ ತಜ್ಞರು ಈ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದಾರೆ. ‘ಎನ್‌ಟಿಆರ್ ಅವರ ಭುಜಕ್ಕೆ ಗಾಯವಾಗಿತ್ತು. ತಜ್ಞ ವೈದ್ಯರ ಸಮಾಲೋಚನೆಯ ನಂತರ, ಅವರು ಶೀಘ್ರವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳಲು ಆರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಅಗತ್ಯವೆಂದು ನಿರ್ಧರಿಸಲಾಯಿತು. ಸರ್ಜರಿ ಸಂಪೂರ್ಣ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ 2ರಿಂದ 3 ತಿಂಗಳ ಕಾಲ ಸೂಕ್ತ ವೈದ್ಯಕೀಯ ಮಾರ್ಗದರ್ಶನದಲ್ಲಿ ಪುನಶ್ಚೇತನ ಪ್ರಕ್ರಿಯೆಗೆ ಒಳಗಾಗಲಿದ್ದು, ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿದ್ದಾರೆ’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಜುಲೈ ಕೊನೆಯ ವಾರದಲ್ಲಿ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಾಗ ಜೂನಿಯರ್ ಎನ್‌ಟಿಆರ್ ಅವರಿಗೆ ಗಾಯವಾಗಿತ್ತು. ಆ ಸಮಯದಲ್ಲಿ ಈ ವಿಷಯವನ್ನು ಅಧಿಕೃತವಾಗಿ ದೃಢಪಡಿಸಿದ್ದ ಸಿನಿಮಾ ತಂಡ, ‘ಎನ್‌ಟಿಆರ್ ಅವರಿಗೆ ಭುಜಕ್ಕೆ ದುರದೃಷ್ಟವಶಾತ್ ಗಾಯವಾಗಿದೆ ಎಂಬುದನ್ನು ತಿಳಿಸಲು ವಿಷಾದಿಸುತ್ತೇವೆ. ವೈದ್ಯಕೀಯ ತಪಾಸಣೆಯ ನಂತರ, ಅವರು ಸಂಪೂರ್ಣವಾಗಿ ಹಾಗೂ ಸುಲಭವಾಗಿ ಚೇತರಿಸಿಕೊಳ್ಳಲು ತಜ್ಞ ವೈದ್ಯರ ತಂಡವು 6ರಿಂದ 8 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದೆ’ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.

ಇದನ್ನೂ ಓದಿ: ಲಾರ್ಡ್ ಮುರುಗನ್ ಕಥೆಯಲ್ಲಿ ಜೂನಿಯರ್ ಎನ್‌ಟಿಆರ್; ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ

ಅಭಿಮಾನಿಗಳಿಗೆ ಧೈರ್ಯ ತುಂಬಿದ್ದ ಚಿತ್ರತಂಡ:

ಎನ್‌ಟಿಆರ್ ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಅಭಿಮಾನಿಗಳು ತೀವ್ರ ಆತಂಕಕ್ಕೊಳಗಾಗಿದ್ದಾಗ, ಚಿತ್ರತಂಡ ಮತ್ತೊಂದು ಹೇಳಿಕೆ ನೀಡಿ ಧೈರ್ಯ ತುಂಬಿತ್ತು. ‘ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ನಾವು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇವೆ. ಅವರ ಆರೋಗ್ಯ ಮತ್ತು ಚೇತರಿಕೆಯ ಕುರಿತು ಸೂಕ್ತ ಸಮಯದಲ್ಲಿ ಅಧಿಕೃತ ಅಪ್‌ಡೇಟ್‌ಗಳನ್ನು ನಾವು ಹಂಚಿಕೊಳ್ಳುತ್ತಿರುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು’ ಎಂದು ಆ ಸಂದರ್ಭದಲ್ಲಿ ತಿಳಿಸಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾಳೆಯಿಂದ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳ ಬಳಿ ಇರುವ ಅಸ್ತ್ರಗಳೇನು? – Kannada News | Karnataka Legislature Session Begins August 13: Opposition’s Weapons to Target Government

ಬೆಂಗಳೂರು, ಆಗಸ್ಟ್​​ 12: ನಾಳೆಯಿಂದ (ಆ.13) ವಿಧಾನಮಂಡಲ ಅಧಿವೇಶನ (Assembly Session) ಆರಂಭವಾಗಲಿದೆ. ಸಿಎಂ  ಆದ ಬಳಿಕ ಡಿ.ಕೆ ಶಿವಕುಮಾರ್​ಗೆ (DK Shivakumar) ಇದು ಮೊದಲ ಅಧಿವೇಶನ. ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಅಧಿವೇಶನ ವೇದಿಕೆಯಾಗುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್​ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಮುಗಿಬೀಳಲು ವಿಪಕ್ಷಗಳು ಕಾಯುತ್ತಿವೆ.

ವಿಪಕ್ಷಗಳ ದಾಳಿಗೆ ಪ್ರಮುಖ ಅಸ್ತ್ರಗಳು ಸಿದ್ಧ

ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರವೂ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದರ ಜೊತೆಗೆ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ರೈತರ ಸಮಸ್ಯೆ, ಕಾವೇರಿ ನೀರು, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಕಾಂಗ್ರೆಸ್ ಸರ್ಕಾರ ತನ್ನ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲು ಸಿದ್ಧವಾಗಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿವೆ.

ಅಧಿವೇಶನದಲ್ಲಿ ಬಿಜೆಪಿ ಪ್ರಸ್ತಾಪಿಸಬಹುದಾದ ವಿಚಾರಗಳೇನು?

  • KPSC ಪರೀಕ್ಷಾ ಅಕ್ರಮ
  • ಪೊಲೀಸ್ ಪರೀಕ್ಷೆಯ ಗೊಂದಲ
  • ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರ
  • ಭ್ರಷ್ಟಾಚಾರದ ಆರೋಪ ಪ್ರಸ್ತಾಪ
  • ಗೊಬ್ಬರ, ಬರಗಾರ, ಬೆಳೆನಾಶ ಸೇರಿ ರೈತರ ಹಲವು ಸಮಸ್ಯೆ ಬಗ್ಗೆ ಚರ್ಚೆ
  • ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವ ಕುರಿತು ಪ್ರಶ್ನೆ
  • ಕಾನೂನು ಸುವ್ಯವಸ್ಥೆ
  • ಅಭಿವೃದ್ಧಿ ಕಾಮಗಾರಿ ಕುಂಟಿತ
  • ಅನುದಾನ ಬಿಡುಗಡೆ ವಿಚಾರದಲ್ಲಿ ಸ್ವಜನಪಕ್ಷಪಾತ

ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿನ ಗೊಂದಲ, ಇಲಾಖೆಗಳ ಹಂಚಿಕೆ ಹಾಗೂ ಸರ್ಕಾರದ ಒಳಗಿನ ರಾಜಕೀಯ ಬೆಳವಣಿಗೆಗಳು ಕೂಡ ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಬಹುದು. ಇನ್ನೂ ಖಾತೆ ಹಂಚಿಕೆ ವಿಚಾರ ಸಂಪೂರ್ಣವಾಗಿ ಅಂತಿಮವಾಗದಿದ್ದರೆ, ಅದನ್ನೇ ಅಸ್ತ್ರವಾಗಿಸಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ. ಭ್ರಷ್ಟಾಚಾರದ ಆರೋಪಗಳೂ ಅಧಿವೇಶನದಲ್ಲಿ ಪ್ರಮುಖ ವಿಚಾರವಾಗುವ ಸಾಧ್ಯತೆ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿರುವ ವಿಚಾರವನ್ನು ಬಿಜೆಪಿ ಪ್ರಸ್ತಾಪಿಸಲಿದೆ. ಸರ್ಕಾರದ ಆಡಳಿತ ವೈಫಲ್ಯ, ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳ ನಿಧಾನಗತಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಉತ್ತರಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

ಇದರ ಜೊತೆಗೆ ರೈತರ ಸಮಸ್ಯೆಗಳು ಕೂಡ ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ. ಕಾವೇರಿ ನೀರು ಹಂಚಿಕೆ ವಿಚಾರ, ತಮಿಳುನಾಡಿಗೆ ನೀರು ಹರಿಸುವಂತೆ ಬಂದಿರುವ ಶಿಫಾರಸುಗಳು, ರಾಜ್ಯದ ಜಲಸಂಪನ್ಮೂಲ ಸ್ಥಿತಿ ಸೇರಿದಂತೆ ನೀರಿನ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬ ಪ್ರಶ್ನೆಯೂ ಎದುರಾಗಲಿದೆ. ರೈತರಿಗೆ ನೀರು, ಬೆಳೆ ನಷ್ಟ, ನೀರಾವರಿ ಯೋಜನೆಗಳು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಬಹುದು. ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳ ಅಭಿವೃದ್ಧಿ, ರಸ್ತೆ, ಮೂಲಸೌಕರ್ಯ, ಕಾನೂನು ಸುವ್ಯವಸ್ಥೆ, ಸರ್ಕಾರಿ ನೇಮಕಾತಿ ಹಾಗೂ ಜನಸಾಮಾನ್ಯರಿಗೆ ಸಂಬಂಧಿಸಿದ ಹಲವು ವಿಚಾರಗಳು ಕೂಡ ಚರ್ಚೆಗೆ ಬರಲಿವೆ.

ವಿಪಕ್ಷಗಳು ಆರೋಪಕ್ಕೆ ಸರ್ಕಾರದ ತಿರುಗೇಟು ಏನು?

  • ವಿಪಕ್ಷಗಳಿಗೆ ಅಭಿವೃದ್ಧಿ ಕಾಣುತ್ತಿಲ್ಲ, ರಾಜಕೀಯ ಮಾತ್ರ ಕಾಣುತ್ತಿದೆ
  • ಸರ್ಕಾರದ ಸಾಧನೆಗಳ ಬಗ್ಗೆ ದಾಖಲೆ ಸಮೇತ ಉತ್ತರ
  • ಭ್ರಷ್ಟಾಚಾರದ ಆರೋಪ ಮಾಡೋ ಮೊದಲು ಹಿಂದಿನ ಸರ್ಕಾರದ ದಾಖಲೆ ನೋಡಲಿ
  • ನಾಗೇಂದ್ರ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತಿದೆ
  • ಸಿಬಿಐ ತನಿಖೆ ನಡೆಯುತ್ತಿದೆ, ಸರ್ಕಾರ ಹಸ್ತಕ್ಷೇಪ ಮಾಡಿಲ್ಲ
  • ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧ
  • ನೀರಾವರಿ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ
  • ಬೆಂಗಳೂರಿನ ಅಭಿವೃದ್ಧಿಗೆ ದಾಖಲೆ ಪ್ರಮಾಣದ ಅನುದಾನ ನೀಡಲಾಗಿದೆ
  • ಖಾಲಿ ಹುದ್ದೆಗಳ ಭರ್ತಿಗೆ ಹಂತ ಹಂತವಾಗಿ ಕ್ರಮ
  • ಜನಪರ ಗ್ಯಾರಂಟಿ ಯೋಜನೆಗಳೇ ಸರ್ಕಾರದ ಪ್ರಮುಖ ಸಾಧನೆ
  • ವಿಪಕ್ಷಗಳಿಗೆ ಟೀಕೆ ಮಾಡುವುದಷ್ಟೇ ಗೊತ್ತು, ಪರಿಹಾರ ಸೂಚಿಸುವುದಿಲ್ಲ

ಇದನ್ನೂ ಓದಿ: ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ, ದೇಶಪಾಂಡೆಗೆ ಸಂಪುಟ ದರ್ಜೆ ಸ್ಥಾನಮಾನ

ಒಟ್ಟಿನಲ್ಲಿ ನಾಳೆಯಿಂದ ವಿಧಾನಮಂಡಲದಲ್ಲಿ ಕಾವೇರಲಿರುವ ರಾಜಕೀಯ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾವ ವಿಚಾರಕ್ಕೆ ಸರ್ಕಾರ ಉತ್ತರ ನೀಡಲಿದೆ, ಯಾವ ಅಸ್ತ್ರದ ಮೂಲಕ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೈಲಿನಲ್ಲಿದ್ದ ಇಮ್ರಾನ್ ಖಾನ್ ನಿಜವಾಗಿಯೂ ಸತ್ತಿದ್ದಾರಾ? ಕೊನೆಗೂ ಮೌನ ಮುರಿದ ಪಾಕಿಸ್ತಾನ – Kannada News | Pakistan Army clarification on Former PM Imran Khan’s Death Rumour

ಇಸ್ಲಮಾಬಾದ್, ಆಗಸ್ಟ್ 12: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕ ಇಮ್ರಾನ್ ಖಾನ್ (Imran Khan) ಜೈಲಿನಲ್ಲೇ ನಿಧನರಾಗಿದ್ದಾರೆ ಎಂಬ ವರದಿಗಳನ್ನು ಪಾಕಿಸ್ತಾನ ಮಿಲಿಟರಿ ಸಂಪೂರ್ಣವಾಗಿ ತಳ್ಳಿಹಾಕಿದೆ. ಪತ್ರಕರ್ತ ವಜಾಹತ್ ಸಯೀದ್ ಖಾನ್ ಅವರು ಈ ಹಿಂದೆ ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂದು ಪ್ರತಿಪಾದಿಸಿದ್ದು, ಬಳಿಕ ತಮ್ಮ ಮೂಲಗಳು ಈ ಸುದ್ದಿಯನ್ನು ದೃಢಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಪಾಕ್ ಸೇನೆಯಿಂದ ಈ ಪ್ರತಿಕ್ರಿಯೆ ಬಂದಿದೆ.

ಇಮ್ರಾನ್ ಖಾನ್ ಬಗ್ಗೆ ಪಾಕಿಸ್ತಾನ ಸೇನೆಯ ಪ್ರತಿಕ್ರಿಯೆ:

ಪಾಕಿಸ್ತಾನಿ ಮಿಲಿಟರಿಯ ಮಾಧ್ಯಮ ವಿಭಾಗವಾದ ಐಎಸ್‌ಪಿಆರ್, ಇಮ್ರಾನ್ ಖಾನ್ ಅವರ ಸಾವಿನ ಹೇಳಿಕೆಗಳನ್ನು ಸಂಪೂರ್ಣವಾಗಿ ಕಟ್ಟುಕಥೆ ಮತ್ತು ಸುಳ್ಳು ಎಂದು ತಳ್ಳಿಹಾಕಿದೆ. ಪಾಕಿಸ್ತಾನಿ ಪತ್ರಕರ್ತ ವಜಾಹತ್ ಖಾನ್ ಅವರು ಕೂಡ ಸೇನಾ ಪ್ರಧಾನ ಕಚೇರಿಯು ಇಮ್ರಾನ್ ಖಾನ್ ಅವರ ಸಾವನ್ನು ನೇರವಾಗಿ ದೃಢಪಡಿಸಿಲ್ಲ, ಆದರೆ ಮಿಲಿಟರಿಯೊಳಗೆ ಹರಡಿರುವ ಭಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕುತ್ತು ತಂದಿದ್ದ ಅಸಲಿ ರಹಸ್ಯ ದಾಖಲೆ ಬಯಲು

“ಇಮ್ರಾನ್ ಖಾನ್ ನಿಧನರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಿಲ್ಲ. ನನ್ನ ಮೂಲಗಳು ಕೂಡ ಪಾಕಿಸ್ತಾನದ ಜೈಲಿನಲ್ಲಿ ಭಯಾನಕ ಘಟನೆ ನಡೆದಿರಬಹುದು ಎಂಬ ಭಯವನ್ನು ವ್ಯಕ್ತಪಡಿಸಿವೆ. ಈ ಭಯಕ್ಕೆ ಪಾಕಿಸ್ತಾನ ಸೇನೆಯ ಈ ಸಮಯದಲ್ಲಿ ಅತಿಯಾದ ಮೌನವೇ ಕಾರಣ. ಈ ವಿಷಯದ ಬಗ್ಗೆ ಪಾಕಿಸ್ತಾನ ಕೊನೆಗೂ ಮೌನ ಮುರಿದಿದೆ” ಎಂದು ತಮ್ಮ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನಿ ಪತ್ರಕರ್ತ ಹೇಳಿದ್ದಾರೆ.

ಇದಕ್ಕೂ ಮೊದಲು ಆಗಸ್ಟ್ 11ರಂದು ಪತ್ರಕರ್ತ ವಜಾಹತ್ ಸಯೀದ್ ಖಾನ್ ಅವರು ‘ಇಮ್ರಾನ್ ಖಾನ್ ಇನ್ನೂ ಜೀವಂತವಾಗಿದ್ದಾರೆಯೇ?’ (Is Khan still with us) ಮತ್ತು ‘ಖಾನ್ ಅವರಿಗೆ ಏನಾಯಿತು?’ (What happens after Khan) ಎಂಬ ಎರಡು ಭಾಗಗಳ ವಿಡಿಯೋ ಸರಣಿಯನ್ನು ಹಂಚಿಕೊಂಡಿದ್ದರು. ಪಾಕಿಸ್ತಾನ ಸೇನೆಯ ಜನರಲ್ ಹೆಡ್‌ಕ್ವಾರ್ಟರ್ಸ್‌ನ ಹೆಸರು ಹೇಳಲಿಚ್ಛಿಸದ ಮೂಲವೊಂದು ಇಮ್ರಾನ್ ಖಾನ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಾರೆ ಎಂದು ತಮಗೆ ತಿಳಿಸಿದೆ ಎಂದು ಅವರು ಪ್ರಾರಂಭದಲ್ಲಿ ಪ್ರತಿಪಾದಿಸಿದ್ದರು.

ಇದನ್ನೂ ಓದಿ: ಇಮ್ರಾನ್ ಖಾನ್ ಬದುಕಿಲ್ಲವೇ?; ಮಾಜಿ ಪ್ರಧಾನಿಯ ಕುರಿತು ಪಾಕಿಸ್ತಾನಿ ಪತ್ರಕರ್ತನ ಶಾಕಿಂಗ್ ಹೇಳಿಕೆ

ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿದೆ. ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಅವರ ಕುಟುಂಬ ಸದಸ್ಯರು ಮತ್ತು ವೈಯಕ್ತಿಕ ವೈದ್ಯರು ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದೆ. 2025ರ ನವೆಂಬರ್‌ನಲ್ಲಿ ಇಮ್ರಾನ್ ಖಾನ್ ಅವರ ಸಾವಿನ ಬಗ್ಗೆ ಇದೇ ರೀತಿಯ ವದಂತಿಗಳು ಹರಡಿತ್ತು. ನಂತರ ಅವರ ಸಹೋದರಿ ಉಜ್ಮಾ ಖಾನಮ್ ಡಿಸೆಂಬರ್ 2ರಂದು ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿ ಅವರು ಚೆನ್ನಾಗಿದ್ದಾರೆ ಎಂದು ದೃಢಪಡಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 9:11 pm, Wed, 12 August 26

Source link

ಪ್ರಜ್ವಲ್ ರೇವಣ್ಣ ಸೆಲ್​​​​​​​ನಲ್ಲಿ ಸಿಕ್ಕ ಮೊಬೈಲ್, ಪೆನ್​​​​ಡ್ರೈವ್​​​​​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ – Kannada News | Obscene videos Found In Mobile And Pen drive at Jail: Prajwal revanna Shifted to Prison cell From VIP

ಬೆಂಗಳೂರು, ಆಗಸ್ಟ್ 12): ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (parappana agrahara central Jail) ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna)  ಬಳಿ ಮೊಬೈಲ್ ಹಾಗೂ ಪೆನ್​​​​​ಡ್ರೈವ್ ಪತ್ತೆಯಾಗಿದೆ. ಇದು ಕಾರಾಗೃಹ ಇಲಾಖೆಯಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಮೊಬೈಲ್ ಹಾಗೂ ಪೆನ್​​​ಡ್ರೈವ್​​​​ನಲ್ಲಿ ಏನೇನಿದೆ ಎನ್ನುವುದು ಪರಿಶೀಲನೆ ನಡೆಸಿದಾಗ ಪೊಲೀಸ್ ಅಧಿಕಾರಿಗಳು ಶಾಕ್ ಆಗಿದ್ದಾರೆ. ಹೌದು….ಪ್ರಜ್ವಲ್ ಬಳಿ ಇದ್ದ ಮೊಬೈಲ್ ಹಾಗೂ ಪೆನ್​​​ಡ್ರೈವ್​​​ನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿವೆ.ಅಲ್ಲದೇ ಯುವತಿಯರ ಅಶ್ಲೀಲ ಫೋಟೋಗಳ ಕಟ್ಟಿಂಗ್ ಗಳು ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರಜ್ವಲ್ ರೇವಣ್ಣನನ್ನು ವಿಐಪಿ ಸೆಲ್​​​​​​​​​​ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್​​​​ಗೆ ಶಿಫ್ಟ್ ಮಾಡಲಾಗಿದೆ.

ಪ್ರಜ್ವಲ್​​​​​​​​ಗೆ ಮೊಬೈಲ್ ಕೊಟ್ಟಿದ್ಯಾರು?

ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ನೀಲಿ ಬಣ್ಣದ Redmi 5g ಮೊಬೈಲ್ ಫೋನ್ , ಒಂದು ಚಾರ್ಜರ್ , ಒಂದು ನೀಲಿ ಪಾಕೆಟ್ ನೋಟ್‌ಬುಕ್ ಹಾಗೂ ಒಂದು ಕಪ್ಪು ಬಣ್ಣದ ಸ್ಯಾಂಡಿಸ್ಕ್ ಪೆನ್‌ಡ್ರೈವ್ ಸಿಕ್ಕಿದೆ. ಆದ್ರೆ, ಮೊಬೈಲ್ ಹಾಗೂ ಪೆನ್​​​​ಡ್ರೈವ್​​​ನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಕಂಡುಬಂದಿದ್ದು, ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ, ಪ್ರಜ್ವಲ್ ರೇವಣ್ಣಗೆ ಮೊಬೈಲ್, ಪೆನ್​​​ಡ್ರೈವ್ ಕೊಟ್ಟವರು ಯಾರು? ಅದರಲ್ಲಿ ಅಶ್ಲೀಲ ವಿಡಿಯೋಗಳು ಹೇಗೆ ಬಂದವು ಎನ್ನುವುದನ್ನು ಪ್ರಜ್ವಲ್ ರೇವಣ್ಣ ಬಾಯಿ ಬಿಡುತ್ತಿಲ್ಲ. ಹೀಗಾಗಿ ಇದು ನಿಗೂಢವಾಗಿದ್ದು, ಈ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲು ಸುಪರಿಡೆಂಟ್​​​​ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಸಿಸಿಬಿ ದಾಳಿ: ಪ್ರಜ್ವಲ್ ರೇವಣ್ಣ​ ಬ್ಯಾರಕ್​ನಲ್ಲಿದ್ದ ಫೋನ್​​​​ನಲ್ಲಿ ಏನೇನು ಸಿಕ್ತು? ಸ್ಫೋಟಕ ಅಂಶ ಬಿಚ್ಚಿಟ್ಟ ಅಲೋಕ್​​ ಕುಮಾರ್

ಸಾಮಾನ್ಯ ಸೆಲ್​​​ಗೆ ಶಿಫ್ಟ್, ಲೈಬ್ರರಿ ಕೆಲಸ ಮಾಡುವಂತೆ ತಾಕೀತು

ಇನ್ನು ಮೊಬೈಲ್ ಸಿಕ್ಕ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರಜ್ವಲ್​​​ನ್ನು ವಿಐಪಿಯಿಂದ ಸಮಾನಾ್ಯ ಸಜಾ ಬಂಧಿ ಖೈದಿಗಳ ಸೆಲ್​​​​ಗೆ ಶಿಫ್ಟ್ ಮಾಡಲಾಗಿದೆ. ವಿಐಪಿ ಸೆಲ್​​​​​​ನಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಮತ್ತೋರ್ವ ವಿಚಾರಣಾ ಖೈದಿ ಪ್ರತಾಪ್ ರಾಯ್ ಇದ್ದರು. ಪೊಕ್ಸೋ ಕೇಸ್ ನಲ್ಲಿ ಬಂಧಿತ ಪ್ರತಾಪ್ ರಾಯ್, ಪ್ರಜ್ವಲ್ ರೇವಣ್ಣಗೆ ಅಸಿಸ್ಟೆಂಟ್ ರೀತಿ ಇದ್ದ ಎಂದು ತಿಳಿದುಬಂದಿದೆ. ಇದೀಗ ಪ್ರಜ್ವಲ್​​​​ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಇರೋ ಸೆಲ್​​​​​​​​​​​​​​​​​​​​​​​ ಗತಿಯಾಗಿದೆ. ಇನ್ನು ಇಪ್ಪತ್ತು ಖೈದಿಗಳಿಗೆ ಇರುವುದು ಒಂದೇ ಟಾಯ್ಲೆಟ್. ಹೀಗಾಗಿ ಪ್ರಜ್ವಲ್ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಬಳಸಬೇಕಿದೆ. ಅಲ್ಲದೆ ಯೂನಿಫಾರ್ಮ್ ಹಾಕಿ ಲೈಬ್ರರಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಕಠಿಣ ಶಿಕ್ಷೆ ಹಿನ್ನೆಲೆ ಜೈಲಿನ ಕಡ್ಡಾಯ ಸಮವಸ್ತ್ರ ಧರಿಸಿ ಲೈಬ್ರರಿ ಕೆಲಸ ಮಾಡಲು ತಿಳಿಸಲಾಗಿದೆ.

ತನಿಖೆಗೆ ಸೂಚನೆ

ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರರನ್ನು ಅಮಾನತುಗೊಳಿಸಲಾಗಿದೆಅಷ್ಟೇ ಅಲ್ಲದೆ, ಜೈಲು ಎಸ್.ಪಿ ಅನ್ಶುಕುಮಾರ್ ಗೂ ಜೈಲು ಡಿಜಿಪಿ ಅಲೋಕ್ ಕುಮಾರ್ ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯ ಲೋಪಕ್ಕೆ ಕಾರಣ ನೀಡುವಂತೆ ಸೂಚಿಸಿದ್ದಾರೆ. ಕಳೆದ 6ರಂದು ಜೈಲಾಧಿಕಾರಿಗಳು ನಡೆಸಿದ್ದ ತಪಾಸಣೆಯಲ್ಲಿ ಸಿಗದ ಮೊಬೈಲ್ ಈಗ ಹೇಗೆ ಬಂತು, ಪ್ರಜ್ವಲ್‌ಗೆ ಮೊಬೈಲ್ ಕೊಟ್ಟವರು ಯಾರು ಎಂಬುದನ್ನು ತಕ್ಷಣವೇ ತನಿಖಡ ನಡೆಸಿ ಮಾಹಿತಿ ಕೊಡಿ ಎಂದು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:15 pm, Wed, 12 August 26

Source link

ಜನ್ಮ ದಿನದಂದು ವಿಶ್ವ ದಾಖಲೆಯ ಶತಕ ಬಾರಿಸಿದ ಸೇದಿಕುಲ್ಲಾ ಅಟಲ್ – Kannada News | Sediqullah Atal Creates History with Birthday Century as Afghanistan Sweeps Ireland ODI Series

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಐರ್ಲೆಂಡ್ (Afghanistan vs Ireland) ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ತಂಡ ಈಗಾಗಲೇ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇಂದು ನಡೆದ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 343 ರನ್ ಕಲೆಹಾಕಿತು. ತಂಡದ ಪರ ಇಬ್ರಾಹಿಂ ಜದ್ರಾನ್ 107 ರನ್​ಗಳ ಇನ್ನಿಂಗ್ಸ್ ಆಡಿದರೆ, ಸೇದಿಕುಲ್ಲಾ ಅಟಲ್ (Sediqullah Atal) ಕೂಡ ಅತ್ಯಧಿಕ 143 ರನ್​ಗಳ ಇನ್ನಿಂಗ್ಸ್ ಆಡಿದರು. ಇಂದು ಸೇದಿಕುಲ್ಲಾ ಅಟಲ್ ಅವರ ಜನ್ಮ ದಿನವಾಗಿದ್ದು, ಈ ಶತಕ ಮತ್ತಷ್ಟು ವಿಶೇಷವಾಗಿದೆ. ಅಷ್ಟೇ ಇಲ್ಲದೆ ತಮ್ಮ ಜನ್ಮ ದಿನದಂದೇ ಈ ಶತಕದ ಇನ್ನಿಂಗ್ಸ್ ಆಡುವ ಮೂಲಕ ಸೇದಿಕುಲ್ಲಾ ಅಟಲ್ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

2ನೇ ವಿಕೆಟ್​ಗೆ ದ್ವಿಶತಕದ ಜೊತೆಯಾಟ

ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಹ್ಮಾನುಲ್ಲಾ ಗುರ್ಬಾಜ್ 12 ರನ್​ಗಳಿಗೆ ಔಟಾದರು. ಆ ನಂತರ ಜೊತೆಯಾದ ಇಬ್ರಾಹಿಂ ಜದ್ರಾನ್ ಮತ್ತು ಸೇದಿಕುಲ್ಲಾ ಅಟಲ್ ಎರಡನೇ ವಿಕೆಟ್​ಗೆ ದಾಖಲೆಯ ದ್ವಿಶತಕದ ಜೊತೆಯಾಟ ಕಟ್ಟಿದರು. ಇದೇ ಹಂತದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅದ್ಭುತ ಶತಕಗಳನ್ನು ಬಾರಿಸಿದರು. ಅದರಲ್ಲೂ ಬರ್ತ್​ ಡೇ ಬಾಯ್ ಸೇದಿಕುಲ್ಲಾ ಅಟಲ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ (143) ಅನ್ನು ದಾಖಲಿಸಿದರು.

ವಿಶ್ವ ದಾಖಲೆ ಬರೆದ ಸೇದಿಕುಲ್ಲಾ ಅಟಲ್

ಈ ಶತಕದೊಂದಿಗೆ ಸೇದಿಕುಲ್ಲಾ ಅಟಲ್ ವಿಶ್ವ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು 143 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಹುಟ್ಟುಹಬ್ಬದಂದು ಅತಿದೊಡ್ಡ ಇನ್ನಿಂಗ್ಸ್ ಆಡಿದ ಆಟಗಾರನೆಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ 140 ರನ್ ಬಾರಿಸಿದ್ದ ನ್ಯೂಜಿಲೆಂಡ್​ನ ಟಾಮ್ ಲೇಥಮ್ ಅವರ ಹೆಸರಿನಲ್ಲಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಜನ್ಮ ದಿನದಂದು 134 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಇತಿಹಾಸದ ಪುಟಗಳಲ್ಲಿ ದಾಖಲಾಯ್ತು ಸ್ಕಾಟ್ಲೆಂಡ್ vs ಕೆನಡಾ ಏಕದಿನ ಪಂದ್ಯ

7ನೇ ಶತಕ ಬಾರಿಸಿದ ಇಬ್ರಾಹಿಂ ಜದ್ರಾನ್

ಇನ್ನು ಆರಂಭಿಕ ಇಬ್ರಾಹಿಂ ಜದ್ರಾನ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ತಮ್ಮ ವೃತ್ತಿಜೀವನದ ಏಳನೇ ಶತಕವನ್ನು ಬಾರಿಸಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಅಫ್ಘಾನ್ ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಶಹಜಾದ್ ಅವರನ್ನು ಹಿಂದಿಕ್ಕಿದರು. ಒಂಬತ್ತು ಶತಕಗಳನ್ನು ಬಾರಿಸಿರುವ ರಹಮಾನಲ್ಲಾ ಗುರ್ಬಾಜ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಈ ಇನ್ನಿಂಗ್ಸ್ ಮೂಲಕ ಇಬ್ರಾಹಿಂ ಜದ್ರಾನ್ 2,000 ಏಕದಿನ ರನ್‌ಗಳನ್ನು ಪೂರೈಸಿದರು. ಜದ್ರಾನ್ ಕೇವಲ 45 ಏಕದಿನ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version