ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನ ಆರಂಭಿಕ ಹಂತಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪರಸ್ಪರ ಮುಖಾಮುಖಿಯಾಗುವುದಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ, ಈ ಇಬ್ಬರು ಸಾಂಪ್ರದಾಯಿಕ ವೈರಿಗಳು ಪರಸ್ಪರ ಸೆಣಸಾಡಬೇಕಾದರೆ ಅದು ಕೇವಲ ಪದಕದ ಸುತ್ತಿನಲ್ಲಿ ಮಾತ್ರ ಸಾಧ್ಯ. ಅಂದರೆ ಫೈನಲ್ ಅಥವಾ ಕಂಚಿನ ಪದಕದ ಪಂದ್ಯದಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ್ ತಂಡದ ಮುಖಾಮುಖಿಯನ್ನು ಎದುರು ನೋಡಬಹುದು.
ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ!
ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಏಷ್ಯಾದ ಅಗ್ರ ನಾಲ್ಕು ತಂಡಗಳಾದ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ಶ್ರೀಲಂಕಾ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ. ಉಳಿದ ದೇಶಗಳು ಕ್ವಾರ್ಟರ್ ಫೈನಲ್ ತಲುಪಲು ಪ್ರಾಥಮಿಕ ಗುಂಪು ಹಂತಗಳಲ್ಲಿ ಹೋರಾಡಬೇಕಾಗುತ್ತದೆ.
ಭಿನ್ನ ಬ್ರಾಕೆಟ್‌ಗಳಲ್ಲಿ ಉಭಯ ತಂಡಗಳು:
ಟೂರ್ನಿಯ ಡ್ರಾ ಮತ್ತು ಸೀಡಿಂಗ್ ವ್ಯವಸ್ಥೆಯು ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ನಾಕೌಟ್ ಬ್ರಾಕೆಟ್‌ನ ಸಂಪೂರ್ಣ ವಿರುದ್ಧ ಬದಿಗಳಲ್ಲಿ ಇರಿಸಿದೆ. ಭಾರತ ತಂಡವು ಕ್ವಾರ್ಟರ್ ಫೈನಲ್-2 ರಲ್ಲಿದ್ದರೆ, ಪಾಕಿಸ್ತಾನ್ ತಂಡವು ಕ್ವಾರ್ಟರ್ ಫೈನಲ್-1 ರಲ್ಲಿದೆ. ಈ ಎರಡೂ ಪಂದ್ಯಗಳು ಸೆಪ್ಟೆಂಬರ್ 28 ರಂದು ನಡೆಯಲಿದ್ದು, ಕಡಿಮೆ ಶ್ರೇಯಾಂಕದ ಕ್ವಾಲಿಫೈಯರ್ ತಂಡಗಳ ವಿರುದ್ಧ ಉಭಯ ತಂಡಗಳು ಸೆಣಸಾಡಲಿವೆ.
ಪದಕದ ಸುತ್ತಿನಲ್ಲೇ ಮುಖಾಮುಖಿ?
ಭಾರತ ಮತ್ತು ಪಾಕಿಸ್ತಾನ್ ಎರಡೂ ತಂಡಗಳು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಗೆದ್ದರೆ, ಅಕ್ಟೋಬರ್ 1 ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಬೇರೆ ಬೇರೆ ಎದುರಾಳಿಗಳ ವಿರುದ್ಧ ಆಡಲಿವೆ. ಹೀಗಾಗಿ, ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಜಯಗಳಿಸಿದರೆ ಅಕ್ಟೋಬರ್ 3 ರಂದು ನಡೆಯಲಿರುವ ‘ಚಿನ್ನದ ಪದಕ’ದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಒಂದು ವೇಳೆ ಸೆಮಿಫೈನಲ್‌ನಲ್ಲಿ ಸೋತರೆ ಅಕ್ಟೋಬರ್ 3 ರಂದು ನಡೆಯಲಿರುವ ‘ಕಂಚಿನ ಪದಕ’ದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುವುದನ್ನು ಎದುರು ನೊಡಬಹುದು. ಇದರ ಹೊರತಾಗಿ ಸಾಂಪ್ರದಾಯಿಕ ಎದುರಾಳಿಗಳು ಮೊದಲ ಸುತ್ತಿನಲ್ಲಿ ಅಥವಾ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವುದಿಲ್ಲ.
ಮಹಿಳಾ ತಂಡಕ್ಕೂ ಇದೇ ನಿಯಮ!
ವಿಶೇಷವೆಂದರೆ ಮಹಿಳಾ ಕ್ರಿಕೆಟ್ ಟೂರ್ನಿಗೂ ಇದೇ ಮಾದರಿಯ ಬ್ರಾಕೆಟ್ ನಿಯಮವನ್ನು ಅನ್ವಯಿಸಲಾಗಿದೆ. ಅಗ್ರ ಶ್ರೇಯಾಂಕದ ಭಾರತ ಮತ್ತು ನಾಲ್ಕನೇ ಶ್ರೇಯಾಂಕದ ಪಾಕಿಸ್ತಾನ್ ಮಹಿಳಾ ತಂಡಗಳು ಡ್ರಾದಲ್ಲಿ ಪ್ರತ್ಯೇಕವಾಗಿವೆ. ಹೀಗಾಗಿ ಮಹಿಳಾ ಕ್ರಿಕೆಟ್‌ನಲ್ಲೂ ಭಾರತ-ಪಾಕ್ ಜಿದ್ದಾಜಿದ್ದಿ ನೋಡಬೇಕಾದರೆ ಸೆಪ್ಟೆಂಬರ್ 22 ರ ಚಿನ್ನ ಅಥವಾ ಕಂಚಿನ ಪದಕದ ಪಂದ್ಯದವರೆಗೂ ಕಾಯಬೇಕಾಗುತ್ತದೆ.
ಬೆಂಗಳೂರು, ಆ.13: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಇಂದು (ಆಗಸ್ಟ್ 13) ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಹಾಗೂ ಬಲವಾದ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
5 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’
ಇಂದು ರಾಜ್ಯದ ಪ್ರಮುಖ 5 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ
ಉತ್ತರ ಕನ್ನಡ
ಉಡುಪಿ
ಶಿವಮೊಗ್ಗ
ಚಿಕ್ಕಮಗಳೂರು
ಬೆಳಗಾವಿ
ಈ ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ದಕ್ಷಿಣ ಒಳನಾಡು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ ಹಾಗೂ ರಾಮನಗರದಲ್ಲಿ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡು ಕೊಪ್ಪಳ, ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ದಿನವಿಡೀ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದೆ. ನಗರದ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಮೇಲ್ಮೈ ಗಾಳಿ ಬೀಸಲಿದೆ.
ಇನ್ನು ದಕ್ಷಿಣಕನ್ನಡದಲ್ಲಿ ದಿನವಿಡೀ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಸಮುದ್ರ ಗಾಳಿ ಬೀಸಲಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ. ಸಿಡಿಲು ಹಾಗೂ ಗಂಟೆಗೆ 30 ರಿಂದ 50 ಕಿ.ಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಚಿಕ್ಕಮಗಳೂರು ಮಲೆನಾಡಿನ ಈ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಗಾಳಿ ಸಹಿತ ಧಾರಾಕಾರ ಮಳೆಯಾಗುವ ಲಕ್ಷಣಗಳಿವೆ. ಮಡಿಕೇರಿಯಲ್ಲಿ ತಂಪು ಹಾಗೂ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ. ಹಾಸನದಲ್ಲಿ ವಾತಾವರಣ ತಂಪಾಗಿದ್ದು, ಜಿಲ್ಲಾದ್ಯಂತ ಗಂಟೆಗೆ 40-50 ಕಿ.ಮೀ ವೇಗದ ಮೇಲ್ಮೈ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ತಮಿಳು ನಟ ವಿಶಾಲ್ ತಮ್ಮ ಸ್ನೇಹಿತ ಉದಯನಿಧಿ ಸ್ಟಾಲಿನ್ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ತಮ್ಮ ಸ್ನೇಹ ಎಂದಿಗೂ ಬದಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಮಗುಡಂ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿಶಾಲ್ (Vishal), ಸಿನಿಮಾ ರಂಗದ ಮಹಿಳೆಯರ ವಿರುದ್ಧ ಕೆಟ್ಟದಾಗಿ ಮಾತನಾಡುವ ಯೂಟ್ಯೂಬರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ದಳಪತಿ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ.
‘ಉದಯನಿಧಿ ಸ್ಟಾಲಿನ್ ಮತ್ತು ತಮಗೆ ಸಣ್ಣ ವಯಸ್ಸಿನಿಂದಲೇ ಉತ್ತಮ ಸ್ನೇಹವಿದೆ. ರಾಜಕೀಯಕ್ಕೆ ಬಂದರೂ ನಾವಿಬ್ಬರೂ ವೈರಿಗಳಾಗುವುದಿಲ್ಲ. ನಮ್ಮ ನಡುವೆ ಆರೋಗ್ಯಕರ ಸ್ಪರ್ಧೆ ಮಾತ್ರ ಇರಲಿದೆ. ಉದಯನಿಧಿ ಅವರ ರೆಡ್ ಜೈಂಟ್ ಮೂವೀಸ್ ಸಂಸ್ಥೆಯ ಬಗ್ಗೆ ಹಿಂದೆ ನಾನು ಮಾತನಾಡಿದ್ದೆ. ನನ್ನ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಆದ ತೊಂದರೆಯಿಂದ ಹಾಗೆ ಹೇಳಿದ್ದೆ. ಆದರೆ ಉದಯನಿಧಿ ಒಬ್ಬ ಅತ್ಯುತ್ತಮ ವ್ಯಕ್ತಿ’ ಎಂದು ವಿಶಾಲ್ ಹೇಳಿದ್ದಾರೆ.
#Vishal:
“My Friend Udhayanidhi has spoke something wrong & arrested him. But he came out on Bail. Like Udhay, many YouTubers are speaking about Female actress personal life wrongly, for the sake of Money, My request to #CMVijay is that, please put a Full stop to these YouTubers…
ನಟಿ ತೃಷಾ ಕುರಿತು ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಮೇಲೆ ಉದಯನಿಧಿ ಬಂಧನಕ್ಕೊಳಗಾಗಿದ್ದರು. ಬಳಿಕ ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ. ‘ಹಿರಿಯ ನಟಿಯರು ಮತ್ತು ಮಹಿಳಾ ಕಲಾವಿದರ ಬಗ್ಗೆ ಅನೇಕ ಜನರು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಯೂಟ್ಯೂಬರ್‌ಗಳು ಹಣಕ್ಕಾಗಿ ಯಾರದೋ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಾರೆ. ಇಂತಹ ಯೂಟ್ಯೂಬರ್‌ಗಳನ್ನು ತಕ್ಷಣವೇ ಶಿಕ್ಷಿಸಬೇಕು. ಸಿಎಂ ವಿಜಯ್ ಅವರು ಈ ಬಗ್ಗೆ ಗಮನಹರಿಸಬೇಕು’ ಎಂದು ವಿಶಾಲ್ ಒತ್ತಾಯಿಸಿದ್ದಾರೆ.
‘ಇಂತಹ ವ್ಯಕ್ತಿಗಳು ಟಿವಿಯಲ್ಲಿ ಹೋಗಿ ಹೀಗೆ ಮಾತನಾಡಲು ಸಾಧ್ಯವಿಲ್ಲ. ಹಣದಾಸೆಗೆ ಯೂಟ್ಯೂಬ್‌ನಲ್ಲಿ ಹಿರಿಯ ನಟಿಯರ ತೇಜೋವಧೆ ಮಾಡುತ್ತಿದ್ದಾರೆ. ಚಿತ್ರರಂಗದ ಪ್ರತಿಯೊಬ್ಬರಿಗೂ ಗೌರವ ಸಿಗಬೇಕು. ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆಯಾಗಬೇಕು’ ಎಂದು ವಿಶಾಲ್ ಖಡಕ್ಕಾಗಿ ನುಡಿದಿದ್ದಾರೆ.
ಬೆಂಗಳೂರು, ಆಗಸ್ಟ್ 13: ಸರ್ಕಾರಿ ನಿಗದಿಪಡಿಸಿರುವ ದರ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಪ್ರಮುಖ ರೈಡ್ ಹೈಲಿಂಗ್ ಅಗ್ರಿಗೇಟರ್‌ಗಳಾದ ಓಲಾ, ಊಬರ್, ರ‍್ಯಾಪಿಡೋ ಮತ್ತು ನಮ್ಮ ಯಾತ್ರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. 2024ರ ಫೆಬ್ರವರಿ 3ರಂದು ಸರ್ಕಾರ ಅಧಿಸೂಚನೆ ಮೂಲಕ ನಿಗದಿಪಡಿಸಿದ್ದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಹಲವು ಟ್ಯಾಕ್ಸಿ ಮತ್ತು ಚಾಲಕರ ಸಂಘಟನೆಗಳು ದೂರು ನೀಡಿದ್ದವು. ಕೆಲವು ಅಗ್ರಿಗೇಟರ್‌ಗಳು ಸರ್ಕಾರ ನಿಗದಿಪಡಿಸಿರುವ ದರವನ್ನು ಪಾಲಿಸುವ ಬದಲು ಪ್ರಯಾಣದ ಅವಧಿ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಶುಲ್ಕ ಲೆಕ್ಕ ಹಾಕುತ್ತಿವೆ ಎಂದು ಸಂಘಟನೆಗಳು ಆರೋಪಿಸಿದ್ದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.
ಕ್ರಮಕ್ಕೆ ಆಗ್ರಹಿಸಿದ್ದ ವಾಹನ ಚಾಲಕರ ಸಂಘಟನೆಗಳು
ಆಗಸ್ಟ್ 4ರಂದು ನಡೆದ ಸಭೆಯಲ್ಲಿ ವಾಹನ ಚಾಲಕರ ಸಂಘಟನೆಗಳು ಅಗ್ರಿಗೇಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದವು. ಸರ್ಕಾರದ ಅಧಿಸೂಚನೆಯಂತೆ ನಿಗದಿಪಡಿಸಿದ ದರವನ್ನೇ ಪ್ರಯಾಣಿಕರಿಂದ ವಸೂಲಿ ಮಾಡುವಂತೆ ಅಗ್ರಿಗೇಟರ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದವು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಕಲ್ಯಾಣ ಸಂಘವು ಓಲಾ, ಊಬರ್ ಸೇರಿದಂತೆ ಇತರ ಅಗ್ರಿಗೇಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಕಂಪನಿಗಳು ಅಧಿಸೂಚಿತ ದರ ವ್ಯವಸ್ಥೆಯನ್ನು ಪಾಲಿಸುತ್ತಿಲ್ಲ ಹಾಗೂ ಸಮಯದ ಆಧಾರದ ಮೇಲೆ ಶುಲ್ಕ ನಿಗದಿಪಡಿಸುತ್ತಿವೆ ಎಂದು ಸಂಘ ಆರೋಪಿಸಿತ್ತು.
ನೋಟಿಸ್ ಸ್ವೀಕರಿಸಿದ ಏಳು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಕೆಗೆ ಸೂಚನೆ
ಇದೇ ವಿಚಾರವಾಗಿ ಮಾರ್ಚ್ 16ರಂದು ಕರ್ನಾಟಕ ಡ್ರೈವರ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದರು. ಓಲಾ, ಊಬರ್, ರ‍್ಯಾಪಿಡೋ ಸೇರಿದಂತೆ ಇತರ ಅಗ್ರಿಗೇಟರ್‌ಗಳು ಸರ್ಕಾರ ನಿಗದಿಪಡಿಸಿರುವ ದರದಂತೆ ಚಾಲಕರಿಗೆ ಆದಾಯ ದೊರೆಯುವುದನ್ನು ಖಚಿತಪಡಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಸಾರಿಗೆ ಇಲಾಖೆ ಜಾರಿ ಮಾಡಿರುವ ನೋಟಿಸ್‌ನಲ್ಲಿ ಸರ್ಕಾರ ನಿಗದಿಪಡಿಸಿರುವ ದರಗಳನ್ನು ಹಾಗೂ ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ ನಿಯಮಗಳು, 2016ರ ನಿಯಮ 9ರ ನಿಬಂಧನೆಗಳನ್ನು ಪಾಲಿಸುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ.
ನೋಟಿಸ್ ಸ್ವೀಕರಿಸಿದ ಏಳು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ಅಗ್ರಿಗೇಟರ್‌ಗಳಿಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಪ್ರತಿಕ್ರಿಯೆ ನೀಡದಿದ್ದರೆ, ಯಾವುದೇ ವಿವರಣೆ ಇಲ್ಲ ಎಂದು ಪರಿಗಣಿಸಲಾಗುವುದು. ಬಳಿಕ 2016ರ ನಿಯಮಗಳ ನಿಯಮ 11ರ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ, ನೋಟಿಸ್ ಜಾರಿಯಾದ ಬಳಿಕವೂ ಅಗ್ರಿಗೇಟರ್‌ಗಳಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬೆಂಗಳೂರು, ಆಗಸ್ಟ್ 13:ಕಾವೇರಿ ಜಲ ವಿವಾದ ಸಂಬಂಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಬಹುತೇಕ ಪ್ರತಿಭಟನೆಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ. ವಾಟಾಳ್ ನಾಗರಾಜ್ ನೇತೃತ್ವದ ‘ಕನ್ನಡ ಸಂಘಟನೆಗಳ ಒಕ್ಕೂಟ’, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಹಾಗೂ ಕೆಲವು ಸಣ್ಣಪುಟ್ಟ ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿರುವ ಕಾರಣ ರಾಜ್ಯಾದ್ಯಂತ ಬಹುತೇಕ ಸೇವೆಗಳು ಎಂದಿನಂತೆ ಇರಲಿವೆ. ಬೆಳಿಗ್ಗೆಯಿಂದ ಬೆಂಗಳೂರಿನ ಮಡಿವಾಳ, ಶಾಂತಿನಗರ ಸೇರಿ ವಿವಿಧೆಡೆ ಬಿಎಂಟಿಸಿ ಮತ್ತು ಖಾಸಗಿ ಬಸ್ಗಳ ಸಂಚಾರವೂ ಎಂದಿನಂತೆ ಆರಂಭವಾಗಿದೆ.
ಸಾರ್ವಜನಿಕರಿಗೆ ತೊಂದರೆ ನೀಡದಂತೆ ಪೊಲೀಸರ ಸೂಚನೆ
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುಖ್ಯವಾಗಿ ನಗರದ ಕೇಂದ್ರ ವಿಭಾಗ, ಪಶ್ಚಿಮ ವಿಭಾಗ, ವಾಯವ್ಯ ವಿಭಾಗ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ತಮಿಳು ಭಾಷಿಕರ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಲು ನಗರ ವ್ಯಾಪ್ತಿಯ ಎಲ್ಲಾ ಡಿಸಿಪಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸೂಚನೆ ನೀಡಿದ್ದಾರೆ. ಅಲ್ಲದೆ ಬಂದ್ ಹೆಸರಲ್ಲಿ ಸರ್ಕಾರಿ ಬಸ್, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಬಾರದು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು. ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಬಾರದು. ಒಂದೊಮ್ಮೆ ಆ ರೀತಿ ನಡೆದುಕೊಂಡಲ್ಲಿ ಕ್ರಮದ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದಾರೆ. ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದು, ಹೊರಗೆ ಧರಣಿ, ರ್ಯಾಲಿ ನಡೆಸಿದರೆ ವಶಕ್ಕೆ ಪಡೆಯಲು ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಸೂಚಿಸಿದ್ದಾರೆ.
ಇನ್ನು ಬಂದ್‌ಗೆ ಕರೆ ನೀಡಿರುವ ವಾಟಾಳ್ ನಾಗರಾಜ್, ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್ಗೆ ಆಗಮಿಸಲಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬರಲಿರುವ ಹೋರಾಟಗಾರರು ಬಂದ್‌ಗೆ ಬೆಂಬಲ ನೀಡುವಂತೆ KSRTC, BMTC ಸಿಬ್ಬಂದಿಗೆ ಮನವಿ ಮಾಡಲಿದ್ದಾರೆ. ನಂತರ ಟೌನ್ಹಾಲ್ ಬಳಿ ತೆರಳಿ ಅಲ್ಲಿಂದ ಫ್ರೀಡಂಪಾರ್ಕ್ವರೆಗೆ ಪ್ರತಿಭಟನಾಮೆರವಣಿಗೆಗೆ ನಿರ್ಧರಿಸಲಾಗಿದೆ. ತೆರೆದ ವಾಹನದಲ್ಲಿ ವಾಟಾಳ್ ಪ್ರತಿಭಟನಾ ರ್ಯಾಲಿ ನಡೆಸಲಿದ್ದು, ಟೌನ್ಹಾಲ್ನಿಂದ ಹಲಸೂರು ಗೇಟ್ ಪೊಲೀಸ್ ಠಾಣೆ, ಮೈಸೂರು ಬ್ಯಾಂಕ್ ಸರ್ಕಲ್, ಓಣಿ ಆಂಜನೇಯ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಫ್ರೀಡಂಪಾರ್ಕ್ ತಲುಪಲಿದೆ ಎನ್ನಲಾಗಿದೆ.
ಬೆಂಗಳೂರು, ಆ.13: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026 ರ ಆಗಸ್ಟ್ 13, ಗುರುವಾರದ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಇದು ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲಪಕ್ಷ, ಪಾಡ್ಯ, ಆಶ್ಲೇಷಾ ನಕ್ಷತ್ರ ಮತ್ತು ಮಖಾ ನಕ್ಷತ್ರ ಕೂಡ ಪ್ರಾರಂಭವಾಗುವ ಶುಭ ದಿನವಾಗಿದೆ. ಶ್ರಾವಣ ಮಾಸವು ಶಿವ ಮತ್ತು ವಿಷ್ಣು ದೇವರ ಆರಾಧನೆಗೆ ಮೀಸಲಾದ ಪವಿತ್ರ ಮಾಸವಾಗಿದೆ. ಈ ದಿನ ರಾಹುಕಾಲ 1 ಗಂಟೆ 58 ನಿಮಿಷದಿಂದ 3 ಗಂಟೆ 32 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 12 ಗಂಟೆ 24 ನಿಮಿಷದಿಂದ 1 ಗಂಟೆ 57 ನಿಮಿಷದ ತನಕ ಇರಲಿದೆ. ಗುರುವಾರವು ಗುರುಗಳ ಆಶೀರ್ವಾದ ಪಡೆಯಲು ಅತ್ಯಂತ ಶ್ರೇಷ್ಠ ದಿನವಾಗಿದೆ. ಇಂದಿನ ದಿನ, ಚಂದ್ರನು ಕರ್ಕಾಟಕ ರಾಶಿಯಲ್ಲಿ, ಆಶ್ಲೇಷಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೆ ಆರ್ಥಿಕ ವ್ಯವಹಾರಗಳು, ವೃತ್ತಿ ಜೀವನ, ಆರೋಗ್ಯ, ಕುಟುಂಬದ ವಿಷಯಗಳು ಮತ್ತು ಅದೃಷ್ಟದ ಬಣ್ಣ, ಸಂಖ್ಯೆ ಹಾಗೂ ವಿಶೇಷ ಮಂತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದು ದಶಕದಲ್ಲಿ ಅಂಗಾಂಗ ದಾನಿಗಳ (Organ Donations) ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಆದರೆ, ಅತ್ಯಂತ ಹೆಚ್ಚು ಬೇಡಿಕೆ ಇರುವ ಮೂತ್ರಪಿಂಡ (ಕಿಡ್ನಿ) ಕಸಿಗಾಗಿ ರೋಗಿಗಳು ಇಂದಿಗೂ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಮುಂದುವರಿದಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ಒಂದು ವರದಿಯನ್ನು ಮಾಡಿದೆ. ‘
ಅಂಕಿ-ಅಂಶಗಳ ಪ್ರಕಾರ, 2015 ರಲ್ಲಿ ಕೇವಲ 60 ಇದ್ದ ಅಂಗಾಂಗ ದಾನಿಗಳ ಸಂಖ್ಯೆ, 2025 ರ ವೇಳೆಗೆ 198 ಕ್ಕೆ ಏರಿಕೆಯಾಗಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ವರ್ಷ ಕರ್ನಾಟಕವು ದೇಶದಲ್ಲೇ ಅಂಗಾಂಗ ದಾನದಲ್ಲಿ 3ನೇ ಸ್ಥಾನದಲ್ಲಿತ್ತು. 2026 ರ ಜುಲೈವರೆಗೆ ರಾಜ್ಯದಲ್ಲಿ 121 ಅಂಗಾಂಗ ದಾನಗಳು ದಾಖಲಾಗಿವೆ.
ವೇಟಿಂಗ್ ಪೀರಿಯಡ್ ಎಷ್ಟು?:
ಕಿಡ್ನಿ (ಮೂತ್ರಪಿಂಡ): 2.5 ರಿಂದ 3 ವರ್ಷಗಳು.
ಲಿವರ್ (ಯಕೃತ್ತು): 1 ರಿಂದ 1.5 ವರ್ಷಗಳು.
ಹೃದಯ (ಹಾರ್ಟ್): 3 ರಿಂದ 4 ತಿಂಗಳುಗಳು.
ರಾಜ್ಯದಲ್ಲಿ ಇದುವರೆಗೆ 2,145 ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ, ಇಂದಿಗೂ 5,153 ಜನರು ಕಾಯುವಿಕೆ ಪಟ್ಟಿಯಲ್ಲಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ರಾಜ್ಯದಲ್ಲಿ ನಡೆಯುತ್ತಿರುವ ಶೇಕಡಾ 85 ರಷ್ಟು ಅಂಗಾಂಗ ದಾನಗಳು ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ನಡೆಯುತ್ತಿವೆ. ರಾಜ್ಯವು ತನ್ನ ಒಟ್ಟು ಸಾಮರ್ಥ್ಯದ ಶೇ. 1 ರಿಂದ 2 ರಷ್ಟನ್ನು ಮಾತ್ರ ಬಳಸಿಕೊಳ್ಳುತ್ತಿದೆ.
ಇತರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ‘ಬ್ರೈನ್ ಡೆಡ್’ ಕುರಿತು ಜಾಗೃತಿ ಮೂಡಿಸುವುದು ಮತ್ತು ಅವುಗಳನ್ನು ‘ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳು’ ಆಗಿ ಪರಿವರ್ತಿಸುವುದು ಅಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕುಟುಂಬದ ಒಪ್ಪಿಗೆ ಕೊರತೆ: ವ್ಯಕ್ತಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದರೂ, ಅವರ ಕುಟುಂಬದ ಜೊತೆ ಚರ್ಚಿಸದಿದ್ದರೆ ಅಂತಿಮ ಕ್ಷಣದಲ್ಲಿ ದಾನ ನಡೆಯುವುದಿಲ್ಲ.
ಬ್ರೈನ್ ಡೆಡ್ ಕುರಿತು ಅರಿವಿನ ಅಭಾವ: ಮಿದುಳು ಸತ್ತಿದ್ದರೂ ‘ಹೃದಯ ಬಡಿತ ಇದೆಯಲ್ಲ’ ಎಂಬ ಭಾವನೆಯಿಂದ ಕುಟುಂಬಸ್ಥರು ದಾನಕ್ಕೆ ಒಪ್ಪುವುದಿಲ್ಲ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಮೂಢನಂಬಿಕೆಗಳು: ದೇಹದ ವಿಕಾರವಾಗುತ್ತದೆ ಎಂಬ ಭಯ ಹಾಗೂ ಮೂಢನಂಬಿಕೆಗಳು ಅಂಗಾಂಗ ದಾನದ ದರವನ್ನು ತಗ್ಗಿಸುತ್ತಿವೆ.
ಆರೋಗ್ಯ ಇಲಾಖೆಯು ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ತರಬೇತಿ ಪಡೆದ ಕೌನ್ಸಿಲರ್‌ಗಳನ್ನು ನಿಯೋಜಿಸುವ ಮೂಲಕ ಬ್ರೈನ್ ಡೆಡ್ ರೋಗಿಗಳ ಕುಟುಂಬದವರ ಮನವೊಲಿಸಲು ಮತ್ತು ಪ್ರಕ್ರಿಯೆಯನ್ನು ಸುಲಭಗೊಳಿಸಲು ವಿಶೇಷ ಕಾರ್ಯತಂತ್ರ ರೂಪಿಸುತ್ತಿದೆ.
ಅನುಭವವುಳ್ಳ ಜನರಿಂದ ನೀವು ಸಹಕಾರ ಪಡೆಯುವಿರಿ. ಕುಟುಂಬದ ಸಂತೋಷಕ್ಕಾಗಿ ಕೆಲವನ್ನು ತ್ಯಾಗ ಮಾಡಬೇಕಾಗುವುದು. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಬಹುದು. ಕಲಾಪ್ರಪಂಚಕ್ಕೆ ನಿಮ್ಮ ಪ್ರವೇಶವಾಗಲಿದ್ದು, ಹಲವರಿಂದ ನಿಮ್ಮ ಬಗ್ಗೆ ಆಸ್ತೆಯನ್ನು ಕಾಣಬಹುದು. ವೃತ್ತಿಕ್ಷೇತ್ರದಲ್ಲಿ ಇಂದು ಅತಿಯಾದ ಉತ್ಸಾಹ ಬೇಡ. ನಿಮ್ಮ ನಿರೀಕ್ಷೆಗೆ ವಿರುದ್ಧವಾದುದು ನಡೆಯಬಹುದು. ಕ್ರೋಧಕ್ಕೆ ವಶವಾಗಬೇಕಾಗುವುದು. ಯಾವುದೇ ಅನಾಹುತಗಳು ಸಂಭವಿಸಿದಂತೆ ಎಚ್ಚರಿಕೆಯೂ ಬೇಕು.
ವೃಷಭ ರಾಶಿ:
ವೃತ್ತಿಜೀವನದಲ್ಲಿ ನಿಮ್ಮ ಪ್ರಯತ್ನವು ಫಲಕೊಡುವುದು. ನಿಮ್ಮ ನಾಯಕನಿಂದ ನಿಮಗೆ ಬೇಕಾದ ಸಂಪೂರ್ಣ ಬೆಂಬಲ ಸಿಗಲಿದೆ. ವೃತ್ತಿಜೀವನದಲ್ಲಿ ಪ್ರಭಾವ ಎಷ್ಟಿದೆ ಎಂದು ಇಂದು ತಿಳಿಯುವುದು. ಹಣಕಾಸಿನ ಬಗ್ಗೆ ಯಾರನ್ನೂ ನಂಬಿ ಹಣವನ್ನು ಕೊಡುವುದು ಬೇಡ. ವೃತ್ತಿಯಲ್ಲಿ ಉದ್ಯೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಿ. ಯಾರನ್ನೂ ಅನವಶ್ಯಕವಾಗಿ ಬದೂರಬೇಡಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಇಂದು ನಿಮಗೆ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುವುದು.
ಮಿಥುನ ರಾಶಿ:
ನಂಬಿಕೆಯ ದ್ರೋಹದಿಂದ ನಿಮಗೆ ಬೇಸರವಾಗಲಿದೆ. ಆರ್ಥಿಕವಾದ ಸಬಲತೆಯು ನಿಮಗೆ ಚೈತನ್ಯವನ್ನು ಕೊಡುವುದು. ಕಚೇರಿಯಲ್ಲಿ ಕೆಲಸದ ಒತ್ತಡ ಇಂದು ಅಧಿಕವಾಗಿರಲಿದೆ. ನಿಸ್ಪೃಹರಾಗಿ ದೇವರ ಸೇವೆಯಲ್ಲಿ ತೊಡಗುವಿರಿ. ಬರುವ ಹಣವು ಬಾರದೇ ತಾಳ್ಮೆ ಕಳೆದುಕೊಳ್ಳಬೇಕಾಗುವುದು. ನೂತನ ಗೃಹದ ನಿರ್ಮಾಣದ ಬಗ್ಗೆ ನಿಮಗೆ ಅತ್ಯಂತ ಬಲವಾದ ಬಯಕೆ ಇರಲಿದೆ. ವಿವಾಹಕ್ಕೆ ನಿಮ್ಮೆ ದೃಢವಾದ ಮನಸ್ಸು ಇರದು.
ಕರ್ಕಾಟಕ ರಾಶಿ:
ನಿಮ್ಮ ಆದಾಯದ ಮೂಲವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ದಿನ ನೀವು ಗಮನ ಕೊಡದಿದ್ದರೆ, ಅನೇಕ ಉತ್ತಮ ಅವಕಾಶಗಳು ಕಳೆದುಹೋಗಬಹುದು. ಕುಟುಂಬ ಮಹತ್ವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರ ಜೊತೆ ನಿಮ್ಮ ವ್ಯವಹಾರವನ್ನು ಇಟ್ಟುಕೊಳ್ಳಿ. ಸಮಾಜದಿಂದ ಆರ್ಥಿಕವಾದ ಟೀಕೆಗೆ ಗುರಿಯಾಗಬೇಕಾದೀತು. ಆಪ್ತರನ್ನು ಕಳೆದುಕೊಳ್ಳಬೇಕಾಗುವುದು. ಸಾಲವಾಗಿ ಪಡೆದ ಹಣವನ್ನು ತೀರಿಸುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು.
ಸಿಂಹ ರಾಶಿ:
ಸಣ್ಣ ಮೊತ್ತವಾದರೂ ಅದನ್ನು ಉಳಿಸುವ ಬಗ್ಗೆ ಯೋಚಿಸುವಿರಿ. ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಈ ದಿನ ನಿಮ್ಮ ಸಮಯವು ಬಹಳ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆದುಹೋಗುವುದು. ಅತಿಯಾದ ಆಲೋಚನೆಯಿಂದ ತಲೆನೋವು ಉಂಟಾಗಬಹುದು. ಹೊಸತನ್ನು ಪಡೆಯದಿದ್ದರೂ ಇದ್ದುದನ್ನು ರಕ್ಷಿಸುವುದು ಹೊಣೆಗಾರಿಕೆ ಆಗಿರುವುದು. ಸಂಬಂಧಿಕರ ಜೊತೆ ಮನಸ್ತಾಪ ಏಳಬಹುದು. ಈ ಕಾರಣಕ್ಕೆ ನಿಮ್ಮ ಕೆಲಸಕ್ಕೆ ಸಹಾಯವೂ ಸಿಗದೆ ಹೋಗಬಹುದು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು.
ಕನ್ಯಾ ರಾಶಿ:
ನೀವು ಮಾಡದ ಕಾರ್ಯಗಳಿಗೆ ನಿಮ್ಮ ಹಣೆಪಟ್ಟಿ ಬೀಳಬಹುದು. ಅದನ್ನು ಎದುರಿಸುವ ಚಾಕಚಕ್ಯತೆ ನಿಮ್ಮದಾಗಲಿದೆ. ಇಂದು ಜಾಣ್ಮೆಯಿಂದ ಮಾಡಿದ ಕೆಲಸಕ್ಕೆ ನಿಮಗೆ ಮೆಚ್ಚುಗೆ ಸಿಗುವುದು. ನಿಮ್ಮ ತಪ್ಪಿಗೆ ಮತ್ಯಾರನ್ನೋ ಗುರಿ ಮಾಡುವಿರಿ. ಏಕಾಂತದಿಂದ ಮನಸ್ಸು ನಿರಾಳ ಎನಿಸುವುದು. ಸಾಲವಾಗಿ ತಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಸಾಧ್ಯ ಎನಿಸಿರುವುದನ್ನು ಬಲವಂತವಾಗಿ ಮಾಡುವುದು ಬೇಡ. ಏನನ್ನೋ ಮಾತನಾಡಲು ಹೋಗಿ ಸಿಕ್ಕಿಹಾಕಿಕೊಳ್ಳಬೇಡಿ. ಮನಸ್ಸಿಗೆ ಹಿಡಿಸದ್ದನ್ನು ಪ್ರಯತ್ನ ಪೂರ್ವಕವಾಗಿ ಮಾಡುವುದು ಬೇಡ.
ತುಲಾ ರಾಶಿ:
ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ಉತ್ತಮ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಲಿದ್ದೀರಿ. ನಿಮ್ಮ ಅಡಿಯಲ್ಲಿ ಬರುವ ನೌಕರರ ನಡವಳಿಕೆಯನ್ನು ಪ್ರಶ್ನಿಸಬೇಕಾದ ಸಂದರ್ಭವು ಬರಬಹುದು. ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಪ್ರೇಮದಲ್ಲಿ ಗೊಂದಲ ಉಂಟಾಗಬಹುದು. ದಾಖಲೆಗಳ ಬಗ್ಗೆ ಎಚ್ವರಿಕೆ ಅಗತ್ಯ. ವಿರುದ್ಧ ವಂಚನೆಯ ಆರೋಪವು ಬರಬಹುದು. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ.
ವೃಶ್ಚಿಕ ರಾಶಿ:
ಇಂದು ನಿಮ್ಮ ವಿದೇಶ ಪ್ರಯಾಣವು ಸಫಲವಗುವುದುಬೆಂಬ ಭರವಸೆ ಬರಲಿದೆ. ಸ್ವಾಭಿಮಾನವನ್ನು ಮರೆತು ನೀವು ಜೀವನ ಸಾಗಿಸುವುದು ಕಷ್ಟವಾದೀತು. ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ನಿಮ್ಮ ಆರೋಗ್ಯ ಸಮಸ್ಯೆಗೆ ಕಾಳಜಿ ಅತ್ಯವಶ್ಯಕ. ವೃತ್ತಿಜೀವನದಲ್ಲಿ ಸವಾಲುಗಳು ಬರಬಹುದು. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ.
ಧನು ರಾಶಿ:
ವಿದ್ಯಾರ್ಥಿಗಳು ತಮ್ಮ ಓದಿನ ಉತ್ಸಾಹವನ್ನು ಕಳೆದುಕೊಳ್ಳುವರು. ಸಾಮಾಜಿಕ ಗೌರವವು ಸಿಗುವಂತಹ ಕೆಲಸವನ್ನು ನೀವು ಮಾಡುವಿರಿ. ವೃತ್ತಿಯ ಆಧಾರದ ಮೇಲೆ ಸಾಲ ಪಡೆಯುವಿರಿ. ಇನ್ನೊಬ್ಬರನ್ನು ಬದಲಾಯಿಸುವ ಬದಲು ನೀವೇ ಬದಲಾಗಿ. ಹೊಸ ನಿರೀಕ್ಷೆಗಳು ನಿಮಗೆ ಸಂತೋಷವನ್ನು ತರುತ್ತವೆ. ಹೊಸತನ್ನು ಏನಾದರೂ ಹುಟ್ಟುಹಾಕುವ ಹಂಬಲ ಅಧಿಕವಾಗುವುದು. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ.
ಮಕರ ರಾಶಿ:
ನಿಮಗೆ ಇಂದು ಅವ್ಯಕ್ತ ಭಯವು ಕಾಡುವುದು. ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಇಂದು ನಿಮ್ಮ ಕುಟುಂಬದಲ್ಲಿ ನೆಮ್ಮದಿ ಇರಲಿದೆ. ವೆಚ್ಚವನ್ನು ನಿಯಂತ್ರಿಸಿ, ಆರ್ಥಿಕ ಲಾಭವನ್ನು ಪಡೆಯುವಿರಿ. ಯಾಂತ್ರಿಕ ಜೀವನಕ್ಕೆ ತಿಲಾಂಜಲಿ ನೀಡುವಿರಿ. ನಿಮ್ಮ ಒಂದು ತಪ್ಪು ನಿರ್ಧಾರವು ನಿಮ್ಮ ಆರ್ಥಿಕತೆಯನ್ನು ಸಡಿಲಿಸಬಹುದು. ಉತ್ಸಾಹ ಭಗಂವು ವೃತ್ತಿಯಲ್ಲಿ ಆಗುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು.
ಕುಂಭ ರಾಶಿ:
ನಿಮ್ಮ ಇಷ್ಟದ ವಸ್ತುಗಳನ್ನು ಪಡೆಯುವ ಖುಷಿಯೇ ಬೇರೆ. ನಿಮಗೆ ಉದ್ಯೋಗದಲ್ಲಿ ಬಡ್ತಿಯಿಂದ ಸಂತೋಷವು ಇಮ್ಮಡಿಸುವುದು. ನಿಮ್ಮ ನಿರ್ಧಾರಗಳು ಇಂದು ಈಡೇರಬಹುದು. ಸವಾಲುಗಳನ್ನು ಬಹಳ ಜಾಣ್ಮೆಯಿಂದ ಸ್ವೀಕರಿಸಬೇಕು ಮತ್ತು ಎದುರಿಸಬೇಕು. ವೃತ್ತಿಜೀವನದಲ್ಲಿ ಅಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು. ನೀವು ಮಾಡಿದ ದಾನ ಇತರರಿಗೆ ಗೊತ್ತಾಗದಂತೆ ಇರುವಿರಿ. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು.
ಮೀನ ರಾಶಿ:
ನೀವು ಬಂಧುಗಳಿಂದ ಯಾವುದಾದರೂ ಸಹಾಯವನ್ನು ಬಯಸುವಿರಿ. ನೀವು ಇಂದು ವೃತ್ತಿಯನ್ನು ಬದಲಿಸುವ ನಿರ್ಧಾರ ಮಾಡಲಿದ್ದೀರಿ. ಕಛೇರಿಯಲ್ಲಿ ಏರು ದನಿಯಿಂದ ಕೆಲಸ ಮಾಡಿಸಿಕೊಳ್ಳುವಿರಿ. ನಿಮ್ಮ ವೃತ್ತಿಕ್ಷೇತ್ರದಲ್ಲಿ ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗಲಿದೆ. ಕಷ್ಟಕ್ಕೆ ಇಂದು ಫಲವು ಸಿಗಲಿದೆ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಮಘಾ, ಯೋಗ : ವರಿಯಾನ್, ಕರಣ : ತೈತಿಲ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:58 – 15:33, ಯಮಗಂಡ ಕಾಲ 06:08 – 07:42, ಗುಳಿಕ ಕಾಲ 09:16 – 10:50
ರಾಯಚೂರು, ಆಗಸ್ಟ್ 12: ರಾಯಚೂರು (raichur) ತಾಲೂಕಿನ ಬಿಚ್ಚಾಲಿ ಕ್ಯಾಂಪ್‌ನಲ್ಲಿ ದೇವಸ್ಥಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಚರ್ಚ್ ನಿರ್ಮಿಸಲಾಗಿದೆ ಎನ್ನುವ ಆರೋಪ ತಾರಕಕ್ಕೇರಿದ್ದು, ಎರಡು ಗುಂಪುಗಳ ನಡುವೆ ಭಾರಿ ಮಾರಾಮಾರಿ (Clash) ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಿವಾದಿತ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಡೆದಿದ್ದೇನು?
2009ರ ಪ್ರವಾಹದಲ್ಲಿ ಸಂತ್ರಸ್ತರಾದ ಬಿಚ್ಚಾಲಿ ಕ್ಯಾಂಪ್‌ನ ಜನರಿಗಾಗಿ ಸರ್ವೇ ನಂಬರ್ 322ರ ಜಾಗದಲ್ಲಿ ಖಾಸಗಿ ಕಂಪನಿಯೊಂದು 132 ಮನೆಗಳನ್ನು ನಿರ್ಮಿಸಿತ್ತು. ಅವುಗಳಲ್ಲಿ 131 ಮನೆಗಳು ಅಲಾಟ್ ಆಗಿದ್ದರೂ, ಮನೆಗಳು ಚಿಕ್ಕದಾಗಿದ್ದ ಕಾರಣ ಯಾರೂ ಅಲ್ಲಿಗೆ ವಾಸಕ್ಕೆ ಹೋಗಿರಲಿಲ್ಲ. ಅದೇ ವೇಳೆಯಲ್ಲಿ ಆ ಮನೆಗಳ ಬಳಿ ಗಾರ್ಡನ್ ಹಾಗೂ ದೇವಾಲಯ ನಿರ್ಮಾಣಕ್ಕಾಗಿ ಸರ್ಕಾರ ಸ್ಥಳ ಮೀಸಲಿಟ್ಟಿತ್ತು. ಆದರೆ, ಗ್ರಾಮಸ್ಥರ ವಿರೋಧದ ನಡುವೆಯೂ ಈ ಜಾಗದಲ್ಲಿ 2024ರಲ್ಲಿ ಚರ್ಚ್ ನಿರ್ಮಿಸಲಾಗಿದೆ ಎಂಬುದು ಒಂದು ಗುಂಪಿನ ಆರೋಪವಾಗಿದೆ. ಆದರೆ, ಮತ್ತೊಂದು ಗುಂಪಿನವರು ಕಾನೂನುಬದ್ಧವಾಗಿಯೇ ಚರ್ಚ್ ನಿರ್ಮಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ.
ಆಂಜನೇಯನ ಮೂರ್ತಿ ತೆರವಿಗೆ ಯತ್ನ: ಎರಡು ಗುಂಪುಗಳ ಮಧ್ಯೆ ಜಗಳ
ಈ ವಿವಾದ ಬುಗಿಲೆದ್ದ ಬಳಿಕ ಇತ್ತೀಚೆಗೆ ಒಂದು ಗುಂಪಿನವರು ಚರ್ಚ್ ಎದುರಿಗಿನ ದೇವಸ್ಥಾನದ ಜಾಗದಲ್ಲಿ ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಅಮವಾಸ್ಯೆ ಇದ್ದ ಹಿನ್ನೆಲೆ ಪೂಜೆ ಹಾಗೂ ಅನ್ನದಾನ ನಡೆಸಲು ಕೆಲಸ ಕಾರ್ಯಗಳು ನಡೆಯುತ್ತಿದ್ದಾಗ, ಕೆಲವರು ಪ್ರತಿಷ್ಠಾಪಿಸಲಾಗಿದ್ದ ಆಂಜನೇಯನ ಮೂರ್ತಿಯನ್ನು ತೆರವುಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆದಿದೆ.
ಈ ಹಿಂದೆಂದೂ ಇಂತಹ ಘಟನೆಗೆ ಸಾಕ್ಷಿಯಾಗದ ಗ್ರಾಮದಲ್ಲಿ ಈ ರೀತಿ ಹೊಡೆದಾಟ ನಡೆದಿರುವುದಕ್ಕೆ ಗ್ರಾಮದ ಹಿರಿಯರು ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಎರಡೂ ಗುಂಪಿನವರನ್ನು ಕರೆಸಿ ಮಾತುಕತೆ ಮೂಲಕ ವಿವಾದ ಬಗೆಹರಿಸಲು ನಿರ್ಧರಿಸಲಾಗಿತ್ತು. ಅಷ್ಟರಲ್ಲೇ ಈ ಗಲಾಟೆ ಸಂಭವಿಸಿದೆ. ಇನ್ನು ಅಕ್ರಮ ಚರ್ಚ್ ತೆರವುಗೊಳಿಸುವಂತೆ ಗ್ರಾಮಸ್ಥರು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ.
ಪ್ರಕರಣ ದಾಖಲು
ಸದ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಗ್ರಾಮದಲ್ಲಿ ಸದ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಹರಿದ್ವಾರ, ಆಗಸ್ಟ್ 12: ವರ್ಷಕ್ಕೊಮ್ಮೆ ನಡೆಯುವ ಕನ್ವರ್ ಯಾತ್ರೆ (Kanwar Yatra) ಪೂರ್ಣಗೊಂಡಿದ್ದು, ಉತ್ತರಾಖಂಡದ ಪವಿತ್ರ ನಗರಿ ಹರಿದ್ವಾರದಲ್ಲಿ (Haridwar) ಈಗ ಕಸದ ಬೆಟ್ಟಗಳೇ ಸೃಷ್ಟಿಯಾಗಿವೆ. ಈ ಬಾರಿಯ ಶ್ರಾವಣ ಮಾಸದಲ್ಲಿ ಗಂಗಾಜಲವನ್ನು ತೆಗೆದುಕೊಂಡು ಹೋಗಲು ಸುಮಾರು 5 ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ಶಿವರಾತ್ರಿಯ ನಂತರ ಭಕ್ತರು ತಮ್ಮ ಊರುಗಳಿಗೆ ಹಿಂತಿರುಗುವಾಗ ಹರಿದ್ವಾರದ ಗಂಗಾ ಘಾಟ್‌ಗಳಲ್ಲಿ ಅಪಾರ ಪ್ರಮಾಣದ ತ್ಯಾಜ್ಯವನ್ನು ಬಿಟ್ಟು ಹೋಗಿದ್ದಾರೆ.
ಹರಿದ್ವಾರದ ಘಾಟ್‌ಗಳಲ್ಲಿ ಟನ್ಗಟ್ಟಲೆ ಬಟ್ಟೆಗಳು, ಪ್ಲಾಸ್ಟಿಕ್ ವಸ್ತುಗಳು, ಮೂತ್ರ ತುಂಬಿದ ಬಾಟಲಿಗಳು ರಾಶಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಹರಿದ್ವಾರದ ನೂರಕ್ಕೂ ಹೆಚ್ಚು ಘಾಟ್‌ಗಳಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧವಾದ ‘ಹರ್ ಕಿ ಪೌರಿ’ ಘಾಟ್‌ನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಬಟ್ಟೆ ಬದಲಾಯಿಸುವ ಕೊಠಡಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮೂತ್ರ ತುಂಬಿ ಹಾಗೆಯೇ ಬಿಟ್ಟು ಹೋಗಿರುವುದು ಕಂಡುಬಂದಿದೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಘಟನೆಯು ಹರಿದ್ವಾರದ ಸ್ಥಳೀಯ ನಿವಾಸಿಗಳು ಮತ್ತು ಮಠಾಧೀಶರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಯಾತ್ರೆ ಮುಗಿದ ತಕ್ಷಣ ಹರಿದ್ವಾರದ ವಿವಿಧ ಪ್ರದೇಶಗಳು ಮತ್ತು ಘಾಟ್‌ಗಳಿಂದ ಕನಿಷ್ಠ 7,000 ಟನ್‌ಗಳಷ್ಟು ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸಲಾಗಿದೆ. ನಗರದ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಈಗ ಕಸದ ಬೆಟ್ಟಗಳೇ ಪ್ರತ್ಯಕ್ಷವಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ