ಜೈಲಿನಲ್ಲಿದ್ದ ಇಮ್ರಾನ್ ಖಾನ್ ನಿಜವಾಗಿಯೂ ಸತ್ತಿದ್ದಾರಾ? ಕೊನೆಗೂ ಮೌನ ಮುರಿದ ಪಾಕಿಸ್ತಾನ – Kannada News | Pakistan Army clarification on Former PM Imran Khan’s Death Rumour

ಇಸ್ಲಮಾಬಾದ್, ಆಗಸ್ಟ್ 12: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕ ಇಮ್ರಾನ್ ಖಾನ್ (Imran Khan) ಜೈಲಿನಲ್ಲೇ ನಿಧನರಾಗಿದ್ದಾರೆ ಎಂಬ ವರದಿಗಳನ್ನು ಪಾಕಿಸ್ತಾನ ಮಿಲಿಟರಿ ಸಂಪೂರ್ಣವಾಗಿ ತಳ್ಳಿಹಾಕಿದೆ. ಪತ್ರಕರ್ತ ವಜಾಹತ್ ಸಯೀದ್ ಖಾನ್ ಅವರು ಈ ಹಿಂದೆ ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂದು ಪ್ರತಿಪಾದಿಸಿದ್ದು, ಬಳಿಕ ತಮ್ಮ ಮೂಲಗಳು ಈ ಸುದ್ದಿಯನ್ನು ದೃಢಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಪಾಕ್ ಸೇನೆಯಿಂದ ಈ ಪ್ರತಿಕ್ರಿಯೆ ಬಂದಿದೆ.

ಇಮ್ರಾನ್ ಖಾನ್ ಬಗ್ಗೆ ಪಾಕಿಸ್ತಾನ ಸೇನೆಯ ಪ್ರತಿಕ್ರಿಯೆ:

ಪಾಕಿಸ್ತಾನಿ ಮಿಲಿಟರಿಯ ಮಾಧ್ಯಮ ವಿಭಾಗವಾದ ಐಎಸ್‌ಪಿಆರ್, ಇಮ್ರಾನ್ ಖಾನ್ ಅವರ ಸಾವಿನ ಹೇಳಿಕೆಗಳನ್ನು ಸಂಪೂರ್ಣವಾಗಿ ಕಟ್ಟುಕಥೆ ಮತ್ತು ಸುಳ್ಳು ಎಂದು ತಳ್ಳಿಹಾಕಿದೆ. ಪಾಕಿಸ್ತಾನಿ ಪತ್ರಕರ್ತ ವಜಾಹತ್ ಖಾನ್ ಅವರು ಕೂಡ ಸೇನಾ ಪ್ರಧಾನ ಕಚೇರಿಯು ಇಮ್ರಾನ್ ಖಾನ್ ಅವರ ಸಾವನ್ನು ನೇರವಾಗಿ ದೃಢಪಡಿಸಿಲ್ಲ, ಆದರೆ ಮಿಲಿಟರಿಯೊಳಗೆ ಹರಡಿರುವ ಭಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕುತ್ತು ತಂದಿದ್ದ ಅಸಲಿ ರಹಸ್ಯ ದಾಖಲೆ ಬಯಲು

“ಇಮ್ರಾನ್ ಖಾನ್ ನಿಧನರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಿಲ್ಲ. ನನ್ನ ಮೂಲಗಳು ಕೂಡ ಪಾಕಿಸ್ತಾನದ ಜೈಲಿನಲ್ಲಿ ಭಯಾನಕ ಘಟನೆ ನಡೆದಿರಬಹುದು ಎಂಬ ಭಯವನ್ನು ವ್ಯಕ್ತಪಡಿಸಿವೆ. ಈ ಭಯಕ್ಕೆ ಪಾಕಿಸ್ತಾನ ಸೇನೆಯ ಈ ಸಮಯದಲ್ಲಿ ಅತಿಯಾದ ಮೌನವೇ ಕಾರಣ. ಈ ವಿಷಯದ ಬಗ್ಗೆ ಪಾಕಿಸ್ತಾನ ಕೊನೆಗೂ ಮೌನ ಮುರಿದಿದೆ” ಎಂದು ತಮ್ಮ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನಿ ಪತ್ರಕರ್ತ ಹೇಳಿದ್ದಾರೆ.

ಇದಕ್ಕೂ ಮೊದಲು ಆಗಸ್ಟ್ 11ರಂದು ಪತ್ರಕರ್ತ ವಜಾಹತ್ ಸಯೀದ್ ಖಾನ್ ಅವರು ‘ಇಮ್ರಾನ್ ಖಾನ್ ಇನ್ನೂ ಜೀವಂತವಾಗಿದ್ದಾರೆಯೇ?’ (Is Khan still with us) ಮತ್ತು ‘ಖಾನ್ ಅವರಿಗೆ ಏನಾಯಿತು?’ (What happens after Khan) ಎಂಬ ಎರಡು ಭಾಗಗಳ ವಿಡಿಯೋ ಸರಣಿಯನ್ನು ಹಂಚಿಕೊಂಡಿದ್ದರು. ಪಾಕಿಸ್ತಾನ ಸೇನೆಯ ಜನರಲ್ ಹೆಡ್‌ಕ್ವಾರ್ಟರ್ಸ್‌ನ ಹೆಸರು ಹೇಳಲಿಚ್ಛಿಸದ ಮೂಲವೊಂದು ಇಮ್ರಾನ್ ಖಾನ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಾರೆ ಎಂದು ತಮಗೆ ತಿಳಿಸಿದೆ ಎಂದು ಅವರು ಪ್ರಾರಂಭದಲ್ಲಿ ಪ್ರತಿಪಾದಿಸಿದ್ದರು.

ಇದನ್ನೂ ಓದಿ: ಇಮ್ರಾನ್ ಖಾನ್ ಬದುಕಿಲ್ಲವೇ?; ಮಾಜಿ ಪ್ರಧಾನಿಯ ಕುರಿತು ಪಾಕಿಸ್ತಾನಿ ಪತ್ರಕರ್ತನ ಶಾಕಿಂಗ್ ಹೇಳಿಕೆ

ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿದೆ. ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಅವರ ಕುಟುಂಬ ಸದಸ್ಯರು ಮತ್ತು ವೈಯಕ್ತಿಕ ವೈದ್ಯರು ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದೆ. 2025ರ ನವೆಂಬರ್‌ನಲ್ಲಿ ಇಮ್ರಾನ್ ಖಾನ್ ಅವರ ಸಾವಿನ ಬಗ್ಗೆ ಇದೇ ರೀತಿಯ ವದಂತಿಗಳು ಹರಡಿತ್ತು. ನಂತರ ಅವರ ಸಹೋದರಿ ಉಜ್ಮಾ ಖಾನಮ್ ಡಿಸೆಂಬರ್ 2ರಂದು ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿ ಅವರು ಚೆನ್ನಾಗಿದ್ದಾರೆ ಎಂದು ದೃಢಪಡಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 9:11 pm, Wed, 12 August 26

Source link

ಪ್ರಜ್ವಲ್ ರೇವಣ್ಣ ಸೆಲ್​​​​​​​ನಲ್ಲಿ ಸಿಕ್ಕ ಮೊಬೈಲ್, ಪೆನ್​​​​ಡ್ರೈವ್​​​​​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ – Kannada News | Obscene videos Found In Mobile And Pen drive at Jail: Prajwal revanna Shifted to Prison cell From VIP

ಬೆಂಗಳೂರು, ಆಗಸ್ಟ್ 12): ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (parappana agrahara central Jail) ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna)  ಬಳಿ ಮೊಬೈಲ್ ಹಾಗೂ ಪೆನ್​​​​​ಡ್ರೈವ್ ಪತ್ತೆಯಾಗಿದೆ. ಇದು ಕಾರಾಗೃಹ ಇಲಾಖೆಯಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಮೊಬೈಲ್ ಹಾಗೂ ಪೆನ್​​​ಡ್ರೈವ್​​​​ನಲ್ಲಿ ಏನೇನಿದೆ ಎನ್ನುವುದು ಪರಿಶೀಲನೆ ನಡೆಸಿದಾಗ ಪೊಲೀಸ್ ಅಧಿಕಾರಿಗಳು ಶಾಕ್ ಆಗಿದ್ದಾರೆ. ಹೌದು….ಪ್ರಜ್ವಲ್ ಬಳಿ ಇದ್ದ ಮೊಬೈಲ್ ಹಾಗೂ ಪೆನ್​​​ಡ್ರೈವ್​​​ನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿವೆ.ಅಲ್ಲದೇ ಯುವತಿಯರ ಅಶ್ಲೀಲ ಫೋಟೋಗಳ ಕಟ್ಟಿಂಗ್ ಗಳು ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರಜ್ವಲ್ ರೇವಣ್ಣನನ್ನು ವಿಐಪಿ ಸೆಲ್​​​​​​​​​​ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್​​​​ಗೆ ಶಿಫ್ಟ್ ಮಾಡಲಾಗಿದೆ.

ಪ್ರಜ್ವಲ್​​​​​​​​ಗೆ ಮೊಬೈಲ್ ಕೊಟ್ಟಿದ್ಯಾರು?

ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ನೀಲಿ ಬಣ್ಣದ Redmi 5g ಮೊಬೈಲ್ ಫೋನ್ , ಒಂದು ಚಾರ್ಜರ್ , ಒಂದು ನೀಲಿ ಪಾಕೆಟ್ ನೋಟ್‌ಬುಕ್ ಹಾಗೂ ಒಂದು ಕಪ್ಪು ಬಣ್ಣದ ಸ್ಯಾಂಡಿಸ್ಕ್ ಪೆನ್‌ಡ್ರೈವ್ ಸಿಕ್ಕಿದೆ. ಆದ್ರೆ, ಮೊಬೈಲ್ ಹಾಗೂ ಪೆನ್​​​​ಡ್ರೈವ್​​​ನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಕಂಡುಬಂದಿದ್ದು, ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ, ಪ್ರಜ್ವಲ್ ರೇವಣ್ಣಗೆ ಮೊಬೈಲ್, ಪೆನ್​​​ಡ್ರೈವ್ ಕೊಟ್ಟವರು ಯಾರು? ಅದರಲ್ಲಿ ಅಶ್ಲೀಲ ವಿಡಿಯೋಗಳು ಹೇಗೆ ಬಂದವು ಎನ್ನುವುದನ್ನು ಪ್ರಜ್ವಲ್ ರೇವಣ್ಣ ಬಾಯಿ ಬಿಡುತ್ತಿಲ್ಲ. ಹೀಗಾಗಿ ಇದು ನಿಗೂಢವಾಗಿದ್ದು, ಈ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲು ಸುಪರಿಡೆಂಟ್​​​​ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಸಿಸಿಬಿ ದಾಳಿ: ಪ್ರಜ್ವಲ್ ರೇವಣ್ಣ​ ಬ್ಯಾರಕ್​ನಲ್ಲಿದ್ದ ಫೋನ್​​​​ನಲ್ಲಿ ಏನೇನು ಸಿಕ್ತು? ಸ್ಫೋಟಕ ಅಂಶ ಬಿಚ್ಚಿಟ್ಟ ಅಲೋಕ್​​ ಕುಮಾರ್

ಸಾಮಾನ್ಯ ಸೆಲ್​​​ಗೆ ಶಿಫ್ಟ್, ಲೈಬ್ರರಿ ಕೆಲಸ ಮಾಡುವಂತೆ ತಾಕೀತು

ಇನ್ನು ಮೊಬೈಲ್ ಸಿಕ್ಕ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರಜ್ವಲ್​​​ನ್ನು ವಿಐಪಿಯಿಂದ ಸಮಾನಾ್ಯ ಸಜಾ ಬಂಧಿ ಖೈದಿಗಳ ಸೆಲ್​​​​ಗೆ ಶಿಫ್ಟ್ ಮಾಡಲಾಗಿದೆ. ವಿಐಪಿ ಸೆಲ್​​​​​​ನಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಮತ್ತೋರ್ವ ವಿಚಾರಣಾ ಖೈದಿ ಪ್ರತಾಪ್ ರಾಯ್ ಇದ್ದರು. ಪೊಕ್ಸೋ ಕೇಸ್ ನಲ್ಲಿ ಬಂಧಿತ ಪ್ರತಾಪ್ ರಾಯ್, ಪ್ರಜ್ವಲ್ ರೇವಣ್ಣಗೆ ಅಸಿಸ್ಟೆಂಟ್ ರೀತಿ ಇದ್ದ ಎಂದು ತಿಳಿದುಬಂದಿದೆ. ಇದೀಗ ಪ್ರಜ್ವಲ್​​​​ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಇರೋ ಸೆಲ್​​​​​​​​​​​​​​​​​​​​​​​ ಗತಿಯಾಗಿದೆ. ಇನ್ನು ಇಪ್ಪತ್ತು ಖೈದಿಗಳಿಗೆ ಇರುವುದು ಒಂದೇ ಟಾಯ್ಲೆಟ್. ಹೀಗಾಗಿ ಪ್ರಜ್ವಲ್ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಬಳಸಬೇಕಿದೆ. ಅಲ್ಲದೆ ಯೂನಿಫಾರ್ಮ್ ಹಾಕಿ ಲೈಬ್ರರಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಕಠಿಣ ಶಿಕ್ಷೆ ಹಿನ್ನೆಲೆ ಜೈಲಿನ ಕಡ್ಡಾಯ ಸಮವಸ್ತ್ರ ಧರಿಸಿ ಲೈಬ್ರರಿ ಕೆಲಸ ಮಾಡಲು ತಿಳಿಸಲಾಗಿದೆ.

ತನಿಖೆಗೆ ಸೂಚನೆ

ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರರನ್ನು ಅಮಾನತುಗೊಳಿಸಲಾಗಿದೆಅಷ್ಟೇ ಅಲ್ಲದೆ, ಜೈಲು ಎಸ್.ಪಿ ಅನ್ಶುಕುಮಾರ್ ಗೂ ಜೈಲು ಡಿಜಿಪಿ ಅಲೋಕ್ ಕುಮಾರ್ ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯ ಲೋಪಕ್ಕೆ ಕಾರಣ ನೀಡುವಂತೆ ಸೂಚಿಸಿದ್ದಾರೆ. ಕಳೆದ 6ರಂದು ಜೈಲಾಧಿಕಾರಿಗಳು ನಡೆಸಿದ್ದ ತಪಾಸಣೆಯಲ್ಲಿ ಸಿಗದ ಮೊಬೈಲ್ ಈಗ ಹೇಗೆ ಬಂತು, ಪ್ರಜ್ವಲ್‌ಗೆ ಮೊಬೈಲ್ ಕೊಟ್ಟವರು ಯಾರು ಎಂಬುದನ್ನು ತಕ್ಷಣವೇ ತನಿಖಡ ನಡೆಸಿ ಮಾಹಿತಿ ಕೊಡಿ ಎಂದು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:15 pm, Wed, 12 August 26

Source link

ಜನ್ಮ ದಿನದಂದು ವಿಶ್ವ ದಾಖಲೆಯ ಶತಕ ಬಾರಿಸಿದ ಸೇದಿಕುಲ್ಲಾ ಅಟಲ್ – Kannada News | Sediqullah Atal Creates History with Birthday Century as Afghanistan Sweeps Ireland ODI Series

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಐರ್ಲೆಂಡ್ (Afghanistan vs Ireland) ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ತಂಡ ಈಗಾಗಲೇ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇಂದು ನಡೆದ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 343 ರನ್ ಕಲೆಹಾಕಿತು. ತಂಡದ ಪರ ಇಬ್ರಾಹಿಂ ಜದ್ರಾನ್ 107 ರನ್​ಗಳ ಇನ್ನಿಂಗ್ಸ್ ಆಡಿದರೆ, ಸೇದಿಕುಲ್ಲಾ ಅಟಲ್ (Sediqullah Atal) ಕೂಡ ಅತ್ಯಧಿಕ 143 ರನ್​ಗಳ ಇನ್ನಿಂಗ್ಸ್ ಆಡಿದರು. ಇಂದು ಸೇದಿಕುಲ್ಲಾ ಅಟಲ್ ಅವರ ಜನ್ಮ ದಿನವಾಗಿದ್ದು, ಈ ಶತಕ ಮತ್ತಷ್ಟು ವಿಶೇಷವಾಗಿದೆ. ಅಷ್ಟೇ ಇಲ್ಲದೆ ತಮ್ಮ ಜನ್ಮ ದಿನದಂದೇ ಈ ಶತಕದ ಇನ್ನಿಂಗ್ಸ್ ಆಡುವ ಮೂಲಕ ಸೇದಿಕುಲ್ಲಾ ಅಟಲ್ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

2ನೇ ವಿಕೆಟ್​ಗೆ ದ್ವಿಶತಕದ ಜೊತೆಯಾಟ

ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಹ್ಮಾನುಲ್ಲಾ ಗುರ್ಬಾಜ್ 12 ರನ್​ಗಳಿಗೆ ಔಟಾದರು. ಆ ನಂತರ ಜೊತೆಯಾದ ಇಬ್ರಾಹಿಂ ಜದ್ರಾನ್ ಮತ್ತು ಸೇದಿಕುಲ್ಲಾ ಅಟಲ್ ಎರಡನೇ ವಿಕೆಟ್​ಗೆ ದಾಖಲೆಯ ದ್ವಿಶತಕದ ಜೊತೆಯಾಟ ಕಟ್ಟಿದರು. ಇದೇ ಹಂತದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅದ್ಭುತ ಶತಕಗಳನ್ನು ಬಾರಿಸಿದರು. ಅದರಲ್ಲೂ ಬರ್ತ್​ ಡೇ ಬಾಯ್ ಸೇದಿಕುಲ್ಲಾ ಅಟಲ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ (143) ಅನ್ನು ದಾಖಲಿಸಿದರು.

ವಿಶ್ವ ದಾಖಲೆ ಬರೆದ ಸೇದಿಕುಲ್ಲಾ ಅಟಲ್

ಈ ಶತಕದೊಂದಿಗೆ ಸೇದಿಕುಲ್ಲಾ ಅಟಲ್ ವಿಶ್ವ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು 143 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಹುಟ್ಟುಹಬ್ಬದಂದು ಅತಿದೊಡ್ಡ ಇನ್ನಿಂಗ್ಸ್ ಆಡಿದ ಆಟಗಾರನೆಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ 140 ರನ್ ಬಾರಿಸಿದ್ದ ನ್ಯೂಜಿಲೆಂಡ್​ನ ಟಾಮ್ ಲೇಥಮ್ ಅವರ ಹೆಸರಿನಲ್ಲಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಜನ್ಮ ದಿನದಂದು 134 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಇತಿಹಾಸದ ಪುಟಗಳಲ್ಲಿ ದಾಖಲಾಯ್ತು ಸ್ಕಾಟ್ಲೆಂಡ್ vs ಕೆನಡಾ ಏಕದಿನ ಪಂದ್ಯ

7ನೇ ಶತಕ ಬಾರಿಸಿದ ಇಬ್ರಾಹಿಂ ಜದ್ರಾನ್

ಇನ್ನು ಆರಂಭಿಕ ಇಬ್ರಾಹಿಂ ಜದ್ರಾನ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ತಮ್ಮ ವೃತ್ತಿಜೀವನದ ಏಳನೇ ಶತಕವನ್ನು ಬಾರಿಸಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಅಫ್ಘಾನ್ ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಶಹಜಾದ್ ಅವರನ್ನು ಹಿಂದಿಕ್ಕಿದರು. ಒಂಬತ್ತು ಶತಕಗಳನ್ನು ಬಾರಿಸಿರುವ ರಹಮಾನಲ್ಲಾ ಗುರ್ಬಾಜ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಈ ಇನ್ನಿಂಗ್ಸ್ ಮೂಲಕ ಇಬ್ರಾಹಿಂ ಜದ್ರಾನ್ 2,000 ಏಕದಿನ ರನ್‌ಗಳನ್ನು ಪೂರೈಸಿದರು. ಜದ್ರಾನ್ ಕೇವಲ 45 ಏಕದಿನ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ಈ ಹೆಬ್ಬಯಕೆಯನ್ನು ಈಡೇರಿಸಿಕೊಂಡು ವಿದಾಯ ಹೇಳಬೇಕು’; ಡೇವಿಡ್ ಮಿಲ್ಲರ್

Source link

‘ಬಿಗ್ ಬಾಸ್ 20’ ಟ್ರೇಲರ್: ಈ ಬಾರಿ ಸಲ್ಮಾನ್ ಖಾನ್ ಕೊಡ್ತಾರೆ ‘ಎಕ್ಸ್‌ಟ್ರಾ ಜೀವನ್ ದಾನ್’ – Kannada News | Salman Khan reveals Extra Jeevan Daan Twist in Bigg Boss 20 Trailer

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss) ಹಿಂದಿಯ 20ನೇ ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಾರಿ ಆಟದಲ್ಲಿ ವಿಶೇಷ ತಿರುವೊಂದನ್ನು ನೀಡಲಾಗಿದೆ. ಹೊಸ ಸೀಸನ್‌ನ ಟ್ರೇಲರ್ ಬಿಡುಗಡೆಯಾಗಿದ್ದು, ನಿರೂಪಕ ಸಲ್ಮಾನ್ ಖಾನ್ (Salman Khan) ‘ಎಕ್ಸ್‌ಟ್ರಾ ಜೀವನ್ ದಾನ್’ (Extra Jeevan Daan) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ಈ ಹೊಸ ನಿಯಮವು ಸ್ಪರ್ಧಿಗಳ ಆಟದ ರೀತಿ ಹಾಗೂ ಅವರು ತೆಗೆದುಕೊಳ್ಳುವ ನಿರ್ಧಾರಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆಯಿದೆ.

ಟ್ರೇಲರ್‌ನ ಆರಂಭದಲ್ಲಿ ಇಬ್ಬರು ಯೋಧರು ತೀವ್ರವಾಗಿ ಕಾದಾಡುತ್ತಿರುತ್ತಾರೆ. ಈ ವೇಳೆ ಪ್ರವೇಶಿಸುವ ಸಲ್ಮಾನ್ ಖಾನ್, ಆ ಕಾಳಗವನ್ನು ತಡೆದು, ‘ಬಿಗ್ ಬಾಸ್‌ನಲ್ಲಿ ಸಿಗಲಿದೆ ಮೇರಿ ಜಾನ್… ಎಕ್ಸ್‌ಟ್ರಾ ಜೀವನ್ ದಾನ್’ ಎಂದು ಹೇಳಿ ತಮ್ಮದೇ ಶೈಲಿಯಲ್ಲಿ ‘ತಥಾಸ್ತು’ (Tathas-two) ಎನ್ನುತ್ತಾರೆ. ಆ ಮೂಲಕ ಅವರು ಹೊಸ ಥೀಮ್ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

ಸ್ಪರ್ಧಿಗಳಿಗೆ ಆಟದಲ್ಲಿ ಮತ್ತೊಂದು ಅವಕಾಶ (ಎರಡನೇ ಜೀವನ) ಸಿಗಲಿದೆ ಎಂಬುದನ್ನು ಟ್ರೇಲರ್ ಖಚಿತಪಡಿಸಿದೆಯಾದರೂ, ಈ ‘ಎಕ್ಸ್‌ಟ್ರಾ ಜೀವನ್ ದಾನ್’ ನಿಯಮವು ಹೇಗೆ ಮತ್ತು ಯಾವಾಗ ಉಪಯೋಗಕ್ಕೆ ಬರಲಿದೆ ಎಂಬ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ ನಂತರವೇ ಈ ಸಸ್ಪೆನ್ಸ್ ಹೊರಬೀಳಲಿದೆ. ಸದ್ಯದ ಮಟ್ಟಿಗೆ, ಈ ಸೀಸನ್‌ನಲ್ಲಿ ಸೇಫ್ ಗೇಮ್ ಆಡಲು ಅವಕಾಶವಿಲ್ಲ ಎಂಬುದು ಸ್ಪಷ್ಟವಾಗಿದೆ.

‘ಬಿಗ್ ಬಾಸ್ 20’ ಟ್ರೇಲರ್:

ಹೊಸ ಥೀಮ್ ಬಗ್ಗೆ ಮಾತನಾಡಿರುವ ಸಲ್ಮಾನ್ ಖಾನ್, ‘ಬಿಗ್ ಬಾಸ್‌ನಲ್ಲಿ ಪ್ರತಿ ವರ್ಷ ಆಟ ಬದಲಾಗುತ್ತದೆ. ಆದರೆ ಈ ಬಾರಿ ಬರೀ ಆಟ ಮಾತ್ರವಲ್ಲ, ಆಡುವ ರೀತಿಯೂ ಬದಲಾಗಲಿದೆ. ಜೀವನ್ ದಾನ್ ಎಂಬುದು ಕೇಳಲು ಎಷ್ಟು ಸರಳವಾಗಿದೆಯೋ, ಅಷ್ಟೊಂದು ಸರಳವಾಗಿರುವುದಿಲ್ಲ. ಬಾಕಿ ವಿಷಯಗಳು ಮನೆ ಒಳಗೆ ಹೋದ ಮೇಲೆಯೇ ತಿಳಿಯಲಿವೆ’ ಎಂದು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ಶುರುವಾಗಲಿದೆ 6 ಭಾಷೆಗಳ ‘ಬಿಗ್ ಬಾಸ್’ ಹೊಸ ಶೋ

‘ಯಾವುದೇ ಮನರಂಜನಾ ಫ್ರಾಂಚೈಸಿಗೆ 20 ಸೀಸನ್‌ಗಳನ್ನು ಪೂರೈಸುವುದು ದೊಡ್ಡ ಸಾಧನೆ. ಈ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವಾಗ, ಸ್ಪರ್ಧಿಗಳು ಮತ್ತು ಪ್ರೇಕ್ಷಕರಿಗೆ ಹೊಸತನ, ಅಚ್ಚರಿ ಹಾಗೂ ರೋಮಾಂಚನ ನೀಡುವಂತೆ ಆಟವನ್ನು ಮರುರೂಪಿಸಲು ನಾವು ಬಯಸಿದ್ದೆವು’ ಎಂದು ಬಿಗ್ ಬಾಸ್ ಶೋ ಆಯೋಜಕರು ಹೇಳಿದ್ದಾರೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Independence Day 2026: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ – Kannada News | Independence Day 2026; Story of Pingali Venkayya the National Flag Designer and decode of National Flag Specialities in Kannada taken

ಬೆಂಗಳೂರು, ಆಗಸ್ಟ್​​ 12: ಭಾರತವು 80ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮದಲ್ಲಿದೆ. ಸ್ವತಂತ್ರ ಭಾರತದ ಆಗಸದಲ್ಲಿ ಹೆಮ್ಮೆಯಿಂದ ಹಾರಾಡುವ ನಮ್ಮ ರಾಷ್ಟ್ರಧ್ವಜ ‘ತಿರಂಗಾ’ ಕೋಟ್ಯಂತರ ಭಾರತೀಯರ ಸ್ವಾಭಿಮಾನ, ಒಗ್ಗಟ್ಟು ಮತ್ತು ಶೌರ್ಯದ ಪ್ರತೀಕ. ಈ ಶುಭ ಸಂದರ್ಭದಲ್ಲಿ ಧ್ವಜವನ್ನು ವಿನ್ಯಾಸಗೊಳಿಸಿದ ಮಹಾನ್ ದೇಶಭಕ್ತ ಪಿಂಗಳಿ ವೆಂಕಯ್ಯ ಅವರ ಜೀವನ ಪಯಣ ಹಾಗೂ ನಮ್ಮ ರಾಷ್ಟ್ರಧ್ವಜದ (National Flag) ಮಹತ್ವವನ್ನು ತಿಳಿಯುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ.

ಜನನ ಮತ್ತು ಹಿನ್ನೆಲೆ

ಪಿಂಗಳಿ ವೆಂಕಯ್ಯ 1876ರ ಆಗಸ್ಟ್ 2ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಭಟ್ಲಪೆನುಮರ್ರು ಗ್ರಾಮದಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ತೀವ್ರ ದೇಶಭಕ್ತರಾಗಿದ್ದು, ತಮ್ಮ 19ನೇ ವಯಸ್ಸಿನಲ್ಲಿ ಬ್ರಿಟಿಷ್ ಭಾರತೀಯ ಸೈನ್ಯಕ್ಕೆ ಸೇರಿ ಆಫ್ರಿಕಾದಲ್ಲಿ ನಡೆದ ಬೋಯರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ  ಮಹಾತ್ಮ ಗಾಂಧಿಯನ್ನ ಭೇಟಿಯಾದರು. ಬಳಿಕ ವೆಂಕಯ್ಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಇದನ್ನೂ ಓದಿ: Independence Day 2026: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು

ಬೋಯರ್ ಯುದ್ಧದ ಸಮಯದಲ್ಲಿ ಬ್ರಿಟಿಷ್ ಯೂನಿಯನ್ ಜ್ಯಾಕ್ ಧ್ವಜಕ್ಕೆ ಭಾರತೀಯ ಸೈನಿಕರು ಗೌರವ ಸಲ್ಲಿಸುವುದನ್ನು ಕಂಡಿದ್ದ ವೆಂಕಯ್ಯರಿಗೆ, ಭಾರತಕ್ಕೂ ಒಂದು ಪ್ರತ್ಯೇಕ ರಾಷ್ಟ್ರಧ್ವಜವಿರಬೇಕೆಂಬ ಆಲೋಚನೆ ಮೂಡಿತ್ತು. ದಿನಗಳು ಕಳೆದಂತೆ ರಾಷ್ಟ್ರಧ್ವಜ ವಿನ್ಯಾಸಗೊಳಿಸುವುದು ಕೇವಲ ಒಂದು ಆಸಕ್ತಿಯ ವಿಷಯವಾಗಿ ಉಳಿಯದೆ, ಅದೊಂದು ಮಹತ್ತರವಾದ ಧ್ಯೇಯವಾಗಿ ಪರಿವರ್ತನೆಗೊಂಡಿತು.

30ಕ್ಕೂ ಹೆಚ್ಚು ದೇಶಗಳ ರಾಷ್ಟ್ರಧ್ವಜಗಳ ಅಧ್ಯಯನ

ಪಿಂಗಳಿ ವೆಂಕಯ್ಯ ಕೇವಲ ಒಂದೇ ಒಂದು ಧ್ವಜದ ವಿನ್ಯಾಸವನ್ನು ಸಿದ್ಧಪಡಿಸಿ ಸುಮ್ಮನಾಗಲಿಲ್ಲ. ಬದಲಿಗೆ 1916ರಿಂದ 1921ರವರೆಗೆ ವಿವಿಧ ದೇಶಗಳ ಧ್ವಜಗಳಲ್ಲಿ ಬಳಸಲಾದ ಬಣ್ಣ ಹಾಗೂ ಸಂಕೇತ ಹೇಗೆ ಆಯಾ ರಾಷ್ಟ್ರಗಳ ಅನನ್ಯ ಗುರುತನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಆಳವಾಗಿ ತಿಳಿಯಲು ಸುಮಾರು 30ಕ್ಕೂ ಹೆಚ್ಚು ರಾಷ್ಟ್ರಗಳ ಧ್ವಜಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ್ದರು. ಈ ಸುದೀರ್ಘ ಸಂಶೋಧನೆಯ ಫಲವಾಗಿ ಅವರು ಭಾರತಕ್ಕೊಂದು ಪ್ರತ್ಯೇಕ ರಾಷ್ಟ್ರಧ್ವಜದ ಕುರಿತು ವೈವಿಧ್ಯಮಯ ಪರಿಕಲ್ಪನೆಗಳನ್ನೊಳಗೊಂಡ ‘ಎ ನ್ಯಾಷನಲ್ ಫ್ಲ್ಯಾಗ್ ಫಾರ್ ಇಂಡಿಯಾ’ ಎಂಬ ವಿಶೇಷ ಕಿರುಹೊತ್ತಗೆಯನ್ನು ಹೊರತಂದರು. ತಮ್ಮ ಈ ಪ್ರಸ್ತಾವನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರತಿಯೊಂದು ಅಧಿವೇಶನಕ್ಕೂ ಸತತವಾಗಿ ತೆಗೆದುಕೊಂಡು ಹೋಗುವ ಮೂಲಕ, ರಾಷ್ಟ್ರಧ್ವಜದ ಅಗತ್ಯತೆಯನ್ನು ಎತ್ತಿ ತೋರಿಸಿದರು.

ಅಂತಿಮ ಮಾನ್ಯತೆ

1921ರಲ್ಲಿ ವಿಜಯವಾಡದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ವೆಂಕಯ್ಯ ಅವರು ತಾವು ವಿನ್ಯಾಸಗೊಳಿಸಿದ ಧ್ವಜವನ್ನು ಮಹಾತ್ಮ ಗಾಂಧೀಜಿಯವರಿಗೆ ನೀಡಿದರು. ಗಾಂಧೀಜಿಯವರ ಸಲಹೆಯಂತೆ ಧ್ವಜದ ಮಧ್ಯದಲ್ಲಿ ಸ್ವಾವಲಂಬನೆಯ ಸಂಕೇತವಾಗಿ ‘ಚರಕ’ವನ್ನು ಸೇರಿಸಲಾಯಿತು. ಈ ವಿನ್ಯಾಸವೇ ಮುಂದೆ 1947ರ ಜುಲೈ 22ರಂದು ಸಂವಿಧಾನ ಸಭೆಯಿಂದ ಅಲ್ಪಸ್ವಲ್ಪ ಮಾರ್ಪಾಡುಗಳೊಂದಿಗೆ ಅಂದರೆ ಚರಕದ ಬದಲು ಅಶೋಕ ಚಕ್ರವನ್ನು ಸೇರಿಸುವ ಮೂಲಕ ಭಾರತದ ಅಧಿಕೃತ ರಾಷ್ಟ್ರಧ್ವಜವಾಗಿ ಅಂಗೀಕರಿಸಲ್ಪಟ್ಟಿತು.

ತ್ರಿವರ್ಣ ಧ್ವಜದ ವಿಶೇಷತೆ ಮತ್ತು ಸಂಕೇತ

ನಮ್ಮ ರಾಷ್ಟ್ರಧ್ವಜವು ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಹಾಗೂ ಕೆಳಭಾಗದಲ್ಲಿ ಹಸಿರು ಬಣ್ಣದ ಸಮಾನ ಅನುಪಾತದ ಪಟ್ಟಿಗಳನ್ನು ಹೊಂದಿದೆ.

  • ಕೇಸರಿ: ಧೈರ್ಯ, ತ್ಯಾಗ ಮತ್ತು ಸಮರ್ಪಣಾ ಮನೋಭಾವದ ಸಂಕೇತ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಲು ಇದು ಪ್ರೇರೇಪಿಸುತ್ತದೆ.
  • ಬಿಳಿ: ಶಾಂತಿ, ಸತ್ಯ ಮತ್ತು ಪರಿಶುದ್ಧತೆಯ ಸಂಕೇತ. ನಮ್ಮ ಚಿಂತನೆ ಮತ್ತು ನಡವಳಿಕೆ ಸತ್ಯದ ಹಾದಿಯಲ್ಲಿರಬೇಕು ಎಂಬುದನ್ನು ನೆನಪಿಸುತ್ತದೆ.
  • ಹಸಿರು: ನಂಬಿಕೆ, ಫಲವತ್ತತೆ ಮತ್ತು ದೇಶದ ಸಮೃದ್ಧಿಯ ಸಂಕೇತ. ಇದು ಭಾರತದ ಪ್ರಾಕೃತಿಕ ಸೌಂದರ್ಯ ಹಾಗೂ ಕೃಷಿ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.
  • ಅಶೋಕ ಚಕ್ರ: ಬಿಳಿ ಪಟ್ಟಿಯ ಮಧ್ಯದಲ್ಲಿರುವ ನೀಲಿ ಬಣ್ಣದ ಅಶೋಕ ಚಕ್ರವು ಚಲನೆ ಮತ್ತು ನೈತಿಕತೆಯ ಸಂಕೇತವಾಗಿದೆ. ಅಶೋಕ ಚಕ್ರದಲ್ಲಿರುವ 24 ರೇಖೆಗಳು ದಿನದ 24 ಗಂಟೆಗಳನ್ನು ಪ್ರತಿನಿಧಿಸುತ್ತದೆ. ದೇಶವು ನಿರಂತರವಾಗಿ ಪ್ರಗತಿಯತ್ತ ಚಲಿಸುತ್ತಿರಬೇಕು ಎಂಬುದನ್ನು ಇದು ಸೂಚಿಸುತ್ತದೆ.
  • ನೀಲಿ ಬಣ್ಣ: ಆಕಾಶ ಮತ್ತು ಸಾಗರದಂತೆ ವಿಶಾಲವಾದ ಮನೋಭಾವವನ್ನು ಪ್ರತಿನಿಧಿಸುತ್ತದೆ.

ಧ್ವಜದ ಪ್ರಮುಖ ನಿಯಮಗಳು 

  • ರಾಷ್ಟ್ರಧ್ವಜವು ಯಾವಾಗಲೂ ಆಯತಾಕಾರದಲ್ಲೇ ಇರಬೇಕು. ಅದರ ಉದ್ದ ಮತ್ತು ಅಗಲದ ಅನುಪಾತ 3:2 ಇರತಕ್ಕದ್ದು.
  • ಧ್ವಜವನ್ನು ಹಾರಿಸುವಾಗ ಕೇಸರಿ ಬಣ್ಣದ ಪಟ್ಟಿಯು ಯಾವಾಗಲೂ ಮೇಲ್ಭಾಗದಲ್ಲೇ ಇರಬೇಕು.
  • ಹರಿದ ಅಥವಾ ಬಣ್ಣಗೆಟ್ಟ ಧ್ವಜವನ್ನು ಹಾರಿಸುವುದು ಕಾನೂನುಬಾಹಿರ.

ಇದನ್ನೂ ಓದಿ: Independence Day 2026: 1947 ಆಗಸ್ಟ್ 14-15ರ ಆ 24 ಗಂಟೆಗಳು: ಭಾರತದಲ್ಲಿ ನಡೆದ ರೋಮಾಂಚಕಾರಿ ಕ್ಷಣಗಳು

ಪ್ರತಿಯೊಬ್ಬ ಭಾರತೀಯನಿಗೂ ದೇಶಪ್ರೇಮದ ಸ್ಪೂರ್ತಿ ನೀಡುವ ನಮ್ಮ ತ್ರಿವರ್ಣ ಧ್ವಜ ಮತ್ತು ಅದನ್ನು ನೀಡಿದ ಪಿಂಗಳಿ ವೆಂಕಯ್ಯನವರ ತ್ಯಾಗ ಚಿರಸ್ಮರಣೀಯ.

ಮತ್ತಷ್ಟು ಜೀವನಶೈಲಿ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ; ರಾಜ್ಯಸಭೆಯಲ್ಲಿ ಭಾರೀ ಗದ್ದಲ – Kannada News | Called Me LungiWala CPM MP John Brittas Accuses BJP MP Sushmita Dev In Rajya Sabha

ನವದೆಹಲಿ, ಆಗಸ್ಟ್ 12: ರಾಜ್ಯಸಭೆಯಲ್ಲಿ ತಾವು ಮಾತನಾಡುತ್ತಿದ್ದಾಗ ಬಿಜೆಪಿ (BJP) ಸಂಸದೆ ಸುಶ್ಮಿತಾ ದೇವ್ ತಮ್ಮ ಉಡುಪಿನ ಬಗ್ಗೆ ಅಪಹಾಸ್ಯಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಇಂದು ಆರೋಪಿಸಿದ್ದು, ಈ ವಿಚಾರ ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿ ಕಲಾಪವನ್ನು ಮುಂದೂಡಲಾಯಿತು. ಬಿಜೆಪಿ ಸಂಸದೆ ತಮ್ಮನ್ನು ಲುಂಗಿವಾಲಾ ಎಂದು ಕರೆದಿದ್ದಾರೆ ಎಂದು ಆರೋಪಿಸಿದ ಬ್ರಿಟಾಸ್, ಈ ಹೇಳಿಕೆಯು ತಮ್ಮ ಪ್ರಾದೇಶಿಕ ಅಸ್ಮಿತೆಯನ್ನು ತಾರತಮ್ಯದಿಂದ ನೋಡುವಂತಿದೆ ಎಂದು ಹೇಳಿದರು.

ಬ್ರಿಟಾಸ್ ಅವರ ಆರೋಪದ ನಂತರ, ಈ ಘಟನೆಗೆ ಸಂಬಂಧಿಸಿದಂತೆ ಸುಶ್ಮಿತಾ ದೇವ್ ಅವರಿಗೂ ತಮ್ಮ ವಿವರಣೆ ನೀಡಲು ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತನಾಡಿ, ಬ್ರಿಟಾಸ್ ಅವರ ಹೇಳಿಕೆ ಈಗ ದಾಖಲಾಗಿದೆ ಮತ್ತು ಯಾರ ವಿರುದ್ಧ ಆರೋಪ ಮಾಡಲಾಗಿದೆಯೋ ಆ ಸದಸ್ಯರಿಗೂ ಉತ್ತರಿಸಲು ಅವಕಾಶ ನೀಡಬೇಕು ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಯಸ್ಸಾದರೂ ಮಸಲ್ಸ್‌ ಸ್ಟ್ರಾಂಗ್‌ ಆಗಿರಬೇಕು ಅಂದ್ರೆ ಈ ಆಹಾರ ಮತ್ತು ವ್ಯಾಯಾಮ ತಪ್ಪದೇ ಮಾಡಿ – Kannada News | Build Stronger Muscles Naturally: Best Foods, Exercises and Lifestyle Tips

ವಯಸ್ಸು ಹೆಚ್ಚಾದಂತೆ ಮಸಲ್ಸ್‌ಗಳ ಶಕ್ತಿ ನಿಧಾನವಾಗಿ ಕಡಿಮೆಯಾಗಬಹುದು. ಇದರಿಂದ ದೈನಂದಿನ ಕೆಲಸಗಳನ್ನು ಮಾಡುವ ಸಾಮರ್ಥ್ಯ, ದೇಹದ ಸಮತೋಲನ ಮತ್ತು ಚಲನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮಸಲ್ಸ್‌ಗಳನ್ನು ಬಲವಾಗಿ ಹಾಗೂ ಆರೋಗ್ಯಕರವಾಗಿ ಇಟ್ಟುಕೊಳ್ಳಲು ಕೇವಲ ವ್ಯಾಯಾಮ ಮಾಡಿದರೆ ಸಾಲದು, ಸರಿಯಾದ ಆಹಾರ, ಸಾಕಷ್ಟು ಪ್ರೋಟೀನ್‌, ಉತ್ತಮ ನಿದ್ರೆ ಮತ್ತು ನಿಯಮಿತ ದೈಹಿಕ ಚಟುವಟಿಕೆ ಕೂಡ ಮುಖ್ಯವಾಗುತ್ತದೆ. ವಿಶೇಷವಾಗಿ ಮಸಲ್ಸ್‌ಗಳ ಬೆಳವಣಿಗೆ ಮತ್ತು ವ್ಯಾಯಾಮದ ನಂತರ ಅವುಗಳ ರಿಪೇರಿಗೆ ಪ್ರೋಟೀನ್‌ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಪ್ರೋಟೀನ್‌ ಒಂದನ್ನೇ ಅವಲಂಬಿಸುವ ಬದಲು ವಿವಿಧ ಪೋಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರ ಸೇವಿಸುವುದು ಉತ್ತಮ. ಹಾಗಾದರೆ ಮಸಲ್ಸ್‌ ಬಲಪಡಿಸಲು ಯಾವ ಆಹಾರಗಳನ್ನು ಡಯಟ್‌ನಲ್ಲಿ ಸೇರಿಸಬೇಕು ಮತ್ತು ಯಾವ ವ್ಯಾಯಾಮಗಳು ಸಹಕಾರಿ ಎಂಬುದನ್ನು ತಿಳಿದುಕೊಳ್ಳಿ.

ಮಸಲ್ಸ್‌ ಬಲಪಡಿಸಲು ಡಯಟ್‌ನಲ್ಲಿ ಇರಲಿ ಈ ಆಹಾರಗಳು

ಆರೋಗ್ಯಕರ ಮಸಲ್ಸ್‌ಗಳಿಗೆ ದೇಹಕ್ಕೆ ಸಾಕಷ್ಟು ಪ್ರೋಟೀನ್‌ ಅಗತ್ಯ. ಮೊಟ್ಟೆ, ಚಿಕನ್‌, ಮೀನು, ಹಾಲು, ಮೊಸರು ಮತ್ತು ಪನೀರ್‌ ಉತ್ತಮ ಪ್ರೋಟೀನ್‌ ಮೂಲಗಳಾಗಿವೆ. ವ್ಯಾಯಾಮದ ನಂತರ ಮಸಲ್ಸ್‌ಗಳ ಬೆಳವಣಿಗೆಗೆ ಇವು ಸಹಾಯ ಮಾಡಬಹುದು.

ಸಸ್ಯಾಹಾರಿಗಳು ಬೇಳೆ, ರಾಜ್ಮಾ, ಕಡಲೆ, ಸೋಯಾ ಮತ್ತು ಟೋಫುಗಳನ್ನು ಆಹಾರದಲ್ಲಿ ಸೇರಿಸಬಹುದು. ಇವುಗಳಿಂದಲೂ ಉತ್ತಮ ಪ್ರಮಾಣದ ಪ್ರೋಟೀನ್‌ ಪಡೆಯಬಹುದು.

ಇದರ ಜೊತೆಗೆ ಬಾದಾಮಿ, ಕಡಲೆಕಾಯಿ ಮತ್ತು ಇತರ ನಟ್ಸ್‌ಗಳಿಂದ ಪ್ರೋಟೀನ್‌ ಜೊತೆಗೆ ಆರೋಗ್ಯಕರ ಕೊಬ್ಬು ದೊರೆಯುತ್ತದೆ. ಓಟ್ಸ್‌, ಕ್ವಿನೋವಾ ಸೇರಿದಂತೆ ಸಂಪೂರ್ಣ ಧಾನ್ಯಗಳು ಹಾಗೂ ಹಣ್ಣು-ತರಕಾರಿಗಳನ್ನು ಕೂಡ ಆಹಾರದ ಭಾಗವಾಗಿಸಿಕೊಳ್ಳುವುದು ಉತ್ತಮ.

ಪ್ರೋಟೀನ್‌ ಮಾತ್ರ ತಿಂದರೆ ಮಸಲ್ಸ್‌ ಬಲವಾಗುತ್ತವೆಯೇ?

ಇಲ್ಲ. ಮಸಲ್ಸ್‌ಗಳನ್ನು ಬಲಪಡಿಸಲು ಆಹಾರದ ಜೊತೆಗೆ ಸ್ಟ್ರೆಂಥ್‌ ಟ್ರೈನಿಂಗ್‌ ಕೂಡ ಮುಖ್ಯ. ವೆಯ್ಟ್‌ ಲಿಫ್ಟಿಂಗ್‌, ಸ್ಕ್ವಾಟ್‌, ಪುಷ್‌ಅಪ್‌, ಲಂಜ್‌ ಮತ್ತು ರೆಸಿಸ್ಟೆನ್ಸ್‌ ಬ್ಯಾಂಡ್‌ ವ್ಯಾಯಾಮಗಳು ಮಸಲ್ಸ್‌ಗಳ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಬಹುದು.

ವಾಕಿಂಗ್‌, ಸೈಕ್ಲಿಂಗ್‌ ಮತ್ತು ಈಜು ಕೂಡ ದೇಹವನ್ನು ಸಕ್ರಿಯವಾಗಿಡಲು ಉತ್ತಮ ಚಟುವಟಿಕೆಗಳಾಗಿವೆ. ಹೊಸದಾಗಿ ವ್ಯಾಯಾಮ ಆರಂಭಿಸುವವರು ಸ್ವಲ್ಪ ಸ್ವಲ್ಪವಾಗಿಯೇ ಆರಂಭಿಸಿ ನಿಧಾನವಾಗಿ ಹೆಚ್ಚಿಸುವುದು ಉತ್ತಮ.

ಮಸಲ್ಸ್‌ ಆರೋಗ್ಯಕ್ಕೆ ನಿದ್ರೆ ಕೂಡ ಮುಖ್ಯ

ವ್ಯಾಯಾಮ ಮತ್ತು ಆಹಾರದಷ್ಟೇ ಸರಿಯಾದ ನಿದ್ರೆ ಹಾಗೂ ವಿಶ್ರಾಂತಿ ಕೂಡ ಮಸಲ್ಸ್‌ ರಿಕವರಿಗೆ ಮುಖ್ಯವಾಗುತ್ತದೆ. ಪ್ರತಿದಿನ ಸಮತೋಲಿತ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಅತಿಯಾಗಿ ಪ್ರೊಸೆಸ್ಡ್‌ ಹಾಗೂ ಹೆಚ್ಚು ಸಕ್ಕರೆ ಇರುವ ಆಹಾರಗಳನ್ನು ಕಡಿಮೆ ಮಾಡುವುದು ಸಹಕಾರಿ. ವ್ಯಾಯಾಮ ಮಾಡುವಾಗ ನಿಮ್ಮ ದೇಹದ ಸಾಮರ್ಥ್ಯವನ್ನು ಗಮನಿಸಿ. ಏಕಾಏಕಿ ಹೆಚ್ಚು ತೂಕ ಎತ್ತುವುದನ್ನು ತಪ್ಪಿಸಿ. ದೀರ್ಘಕಾಲದಿಂದ ವ್ಯಾಯಾಮ ಮಾಡದಿದ್ದರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಹೊಸ ವರ್ಕೌಟ್‌ ಆರಂಭಿಸುವ ಮೊದಲು ವೈದ್ಯರು ಅಥವಾ ಫಿಟ್ನೆಸ್‌ ತಜ್ಞರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ, ದೇಶಪಾಂಡೆಗೆ ಸಂಪುಟ ದರ್ಜೆ ಸ್ಥಾನಮಾನ – Kannada News | Congress MLA Ponnanna appointed as CM Political Secretary And RV Deshpande chairman of administrative reforms commission

ಬೆಂಗಳೂರು, (ಆಗಸ್ಟ್ 12): ಡಿಕೆ ಶಿವಕುಮಾರ್ ಸರ್ಕಾರ ಬರುತ್ತಿದ್ದಂತೆಯೇ ಪಕ್ಷದಲ್ಲಿ ಒಂದಲ್ಲ ಒಂದು ಗೊಂದಲಗಳು ಉದ್ಭವಿಸುತ್ತಲೇ ಇವೆ. ಮೊನ್ನೆ ಅಷ್ಟೇ ಸಚಿವ ಸಂಪುಟ ಪುನಾರಚನೆಯಲ್ಲಿ ಹೈಕಮಾಂಡ್ ಕಳುಹಿಸಿದ್ದ ಪಟ್ಟಿ ಬೆಂಗಳೂರಿನಲ್ಲಿ ಬದಲಾಗಿತ್ತು. ಹೌದು…ಇನ್ನೇನು ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಬೇಕೆನ್ನುವಷ್ಟರಲ್ಲೇ ಪಟ್ಟಿಯಲ್ಲಿದ್ದ ಮಾಂಕಾಳ ವೈದ್ಯ ಹೆಸರನ್ನು ಕೈಬಿಟ್ಟು ಎಸ್​​​ಎಸ್​ ಮಲ್ಲಿಕಾರ್ಜುನ ಹೆಸರು ಸೇರ್ಪಡೆ ಮಾಡಲಾಗಿತ್ತು. ಇನ್ನು ಹೈಕಮಾಂಡ್ ಪಟ್ಟಿಯಲ್ಲಿ ಎಂಎಲ್​​ಸಿ ಗಾಯತ್ರಿ ಹೆಸರು ಸಹ ಇತ್ತು. ಅವರಿಗೂ ಸಹ ಬ್ರೇಕ್ ಹಾಕಲಾಗಿತ್ತು. ಇದೀಗ ಡೆಪ್ಯೂಟಿ ಸ್ಪೀಕರ್​​​​​​ಗೆ ಶಿಫಾರಸ್ಸು ಮಾಡಲಾಗಿದ್ದ ಹೆಸರನ್ನು ಸಹ ಬಲಾವಣೆ ಮಾಡಲಾಗಿದೆ. ಡೆಪ್ಯೂಟಿ ಸ್ಪೀಕರ್ ಆಗಬೇಕಿದ್ದ ಪೊನ್ನಣ್ಣ ಅವರನ್ನು ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ. ಇನ್ನು ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಮಾಂಕಾಳ ವೈದ್ಯ ಅವರನ್ನ ಆಯ್ಕೆ ಮಾಡಲಾಗಿದೆ.

ಇನ್ನುಕಾಂಗ್ರೆಸ್ ಹಿರಿಯ ಶಾಸಕ ಆರ್​​​ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲೂ ಸಚಿವ ಸ್ಥಾನ ಕೈತಪ್ಪಿದ್ದು, ಈ ಬಾರಿ ಡಿಕೆ ಶಿವಕುಮಾರ್ ಸರ್ಕಾರದಲ್ಲೂ ಸಹ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಂತರ್ ಮಂತರ್ ಸೀಸನ್ 2 ಶೀಘ್ರದಲ್ಲೇ ಆರಂಭ; ಹೊಸ ಪ್ರತಿಭಟನೆಯ ಸುಳಿವು ನೀಡಿದ ಸಿಜೆಪಿ ನಾಯಕ ದಿಪ್ಕೆ – Kannada News | Jantar Mantar Season 2 to start soon CJP Leader Abhijeet Dipke hints new protest

ನವದೆಹಲಿ, ಆಗಸ್ಟ್ 12: ಕಾಕ್ರೋಚ್ ಜನತಾ ಪಾರ್ಟಿ (CJP) ಶೀಘ್ರದಲ್ಲೇ ಮತ್ತೊಂದು ಬೃಹತ್ ಪ್ರತಿಭಟನಾ ಆಂದೋಲನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಇದನ್ನು “ಜಂತರ್ ಮಂತರ್‌ನ ಸೀಸನ್ 2” ಎಂದು ಕರೆದಿದ್ದಾರೆ. ದೆಹಲಿಯ ನಾರಾಯಣದಲ್ಲಿ ಆಯೋಜಿಸಲಾಗಿದ್ದ ಸಿಜೆಪಿ ಕಾರ್ಯಕರ್ತರ ಸಭೆಯ ಬುಕ್ಕಿಂಗ್ ಅನ್ನು ಬ್ಯಾಂಕ್ವೆಟ್ ಹಾಲ್ ಮಾಲೀಕರು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ ನಂತರ ಈ ಘೋಷಣೆ ಹೊರಬಿದ್ದಿದೆ. ಬಿಜೆಪಿ ನೀಡಿದ ಒತ್ತಡದಿಂದಾಗಿ ಬ್ಯಾಂಕ್ವೆಟ್ ಹಾಲ್ ಮಾಲೀಕರು ಈ ರೀತಿ ಮಾಡಿದ್ದಾರೆ ಎಂದು ದಿಪ್ಕೆ ಆರೋಪಿಸಿದ್ದಾರೆ.

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭಿಜೀತ್ ದಿಪ್ಕೆ, ಜಂತರ್ ಮಂತರ್ ಪ್ರತಿಭಟನೆಯ 2ನೇ ಹಂತ ಯಾವಾಗ ಪ್ರಾರಂಭವಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ನಿರಂತರವಾಗಿ ಕೇಳುತ್ತಿದ್ದಾರೆ ಎಂದು ಹೇಳಿದರು. “ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಜನರು ಜಂತರ್-ಮಂತರ್ ಸೀಸನ್ 2 ಯಾವಾಗ ಪ್ರಾರಂಭವಾಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದರು. ಜಂತರ್-ಮಂತರ್ ಸೀಸನ್ 2 ಅತ್ಯಂತ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಾನು ಅವರಿಗೆ ತಿಳಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಭಟನಾಕಾರರ ಕಾನೂನು ನೆರವಿಗೆ ಸಿಜೆಪಿಯಿಂದ ವೆಬ್​ಸೈಟ್ ಆರಂಭ; 1 ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್

ಸಿಜೆಪಿ ಸಭೆಗಾಗಿ ಹಾಲ್ ಬುಕ್ ಮಾಡಲಾಗಿತ್ತು. ಆದರೆ ಸಂಘಟಕರು ಸ್ಥಳಕ್ಕೆ ತಲುಪಿದಾಗ ಪ್ರವೇಶ ನಿರಾಕರಿಸಲಾಯಿತು. ಮೇಲಿಂದ ಒತ್ತಡವಿದೆ ಎಂದು ಹಾಲ್ ಮಾಲೀಕರು ಹೇಳಿರುವುದಾಗಿ ದಿಪ್ಕೆ ಆರೋಪಿಸಿದ್ದಾರೆ. ಪ್ರದೇಶದ ಇತರ ಸಭಾಂಗಣಗಳ ಮಾಲೀಕರೂ ಸಭೆಗೆ ಜಾಗ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಬುಕ್ ಮಾಡಲಾಗಿದ್ದ ಹಾಲ್ ಮಾಲೀಕರಿಗೆ ಇಂದು ಬೆಳಿಗ್ಗೆ ಬೆದರಿಕೆ ಹಾಕಲಾಗಿತ್ತು ಎಂದು ದಿಪ್ಕೆ ಹೇಳಿದ್ದಾರೆ.

ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ, “ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳಲು ಸಿಜೆಪಿ ದೇಶಾದ್ಯಂತ ‘ಲಿಸನಿಂಗ್ ಟೂರ್’ ಆರಂಭಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನದಿಂದ ಶಿಕ್ಷಣದ ವಿಷಯಕ್ಕೆ ಆದ್ಯತೆ ನೀಡಿ ಅಭಿಯಾನ ನಡೆಸಲಿದ್ದೇವೆ. ಇಂತಹ ಅಸಮರ್ಥ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದೇ ಸೀಸನ್ 2 ಆಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ

ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಸಿಜೆಪಿ ದೆಹಲಿಯ ಜಂತರ್ ಮಂತರ್‌ನಲ್ಲಿ 36 ದಿನಗಳ ಸುದೀರ್ಘ ಪ್ರತಿಭಟನೆ ನಡೆಸಿತ್ತು. ಈ ಆಂದೋಲನಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು, ಯುವ ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಬೆಂಬಲ ನೀಡಿದ್ದರು. ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಜೂನ್ 28ರಂದು ಪ್ರತಿಭಟನೆಗೆ ಸೇರಿಕೊಂಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ನಂತರ ಅವರ ಆರೋಗ್ಯ ಕ್ಷೀಣಿಸಿದಾಗ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜುಲೈ 20ರಂದು ಪ್ರತಿಭಟನಾಕಾರರು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸ್ ಕ್ರಮ ಎದುರಿಸಬೇಕಾಯಿತು. ಅಂತಿಮವಾಗಿ ಜುಲೈ 25ರಂದು ಸರ್ಕಾರದೊಂದಿಗೆ ನಡೆದ ಮಾತುಕತೆ ಮತ್ತು ಪ್ರಮುಖ ಬೇಡಿಕೆಗಳಿಗೆ ಭರವಸೆ ಸಿಕ್ಕ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೊಂದು ಪ್ರತಿಭಟನೆಗೆ ಸಿಜೆಪಿ ಮುಂದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version