ಮೂವರು ಭಾರತೀಯರನ್ನು ಫಾಲೋ ಮಾಡುತ್ತಿರುವ ‘ಅಬ್ಸೆಷನ್’ ಸಿನಿಮಾ ನಿರ್ದೇಶಕ – Kannada News | Obsession director Curry Barker follows Kartik Aaryan Riccha Sinha Kushaal Chawla on Instagram

ತಮ್ಮ ಇತ್ತೀಚಿನ ಸೈಕಲಾಜಿಕಲ್ ಹಾರರ್ ಹಿಟ್ ಸಿನಿಮಾ ‘ಅಬ್ಸೆಷನ್’ (Obsession) ಮೂಲಕ ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡಿರುವ 26 ವರ್ಷದ ಪ್ರತಿಭಾವಂತ ಹಾಲಿವುಡ್ ನಿರ್ದೇಶಕ ಕರಿ ಬಾರ್ಕರ್ (Curry Barker) ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಕರಿ ಬಾರ್ಕರ್ ಅವರ ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಲಿಸ್ಟ್ ಗಮನಿಸಿದರೆ, ಅವರಿಗೆ ಭಾರತದ ಚಿತ್ರರಂಗದೊಂದಿಗೆ ಇರುವ ಒಂದು ವಿಶೇಷ ನಂಟಿನ ಬಗ್ಗೆ ಗೊತ್ತಾಗಿದೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ ಮೂವರು ಭಾರತೀಯ ಸೆಲೆಬ್ರಿಟಿಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ಇಬ್ಬರು ನಟರಾದರೆ, ಮತ್ತೊಬ್ಬರು ಸಿನಿಮಾ ನಿರ್ದೇಶಕರಾಗಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್:

ಹಿಂದಿ ಚಿತ್ರರಂಗದ ಖ್ಯಾತ ನಟ ಕಾರ್ತಿಕ್ ಆರ್ಯನ್ ಅವರನ್ನು ಕರಿ ಬಾರ್ಕರ್ ಫಾಲೋ ಮಾಡುತ್ತಿರುವುದು ಅಷ್ಟೇನೂ ಆಶ್ಚರ್ಯ ತಂದಿಲ್ಲ. ಏಕೆಂದರೆ, ಕರಿ ಬಾರ್ಕರ್ ಅವರ ‘ಅಬ್ಸೆಷನ್’ ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್‌ನಿಂದ ಅದಕ್ಕೆ ಮೊದಲ ಬಾರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು ಇದೇ ಕಾರ್ತಿಕ್ ಆರ್ಯನ್. ಈ ಚಿತ್ರದ ಬಗ್ಗೆ ಇಂಟರ್ನೆಟ್‌ನಲ್ಲಿ ತಮಗಿರುವ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದ ಕಾರ್ತಿಕ್, ‘ಬಹಳ ದಿನಗಳ ನಂತರ ಬಂದ ಅತ್ಯುತ್ತಮ ಹಾರರ್ ಚಿತ್ರಗಳಲ್ಲಿ ಇದು ಒಂದು. ನಾನು ನಿಜಕ್ಕೂ ‘ಅಬ್ಸೆಷನ್’ ಚಿತ್ರಕ್ಕೆ ಫಿದಾ ಆಗಿದ್ದೇನೆ. ಯಾರೂ ಇದನ್ನು ಮಿಸ್ ಮಾಡಬೇಡಿ’ ಎಂದು ಬರೆದುಕೊಂಡಿದ್ದರು.

ಉದಯೋನ್ಮುಖ ನಟಿ ರಿಚ್ಚಾ ಸಿನ್ಹಾ:

ಲಕ್ನೋ ಮೂಲದ ಉದಯೋನ್ಮುಖ ನಟಿ ರಿಚ್ಚಾ ಸಿನ್ಹಾ ಅವರು ಕರಿ ಬಾರ್ಕರ್ ಫಾಲೋ ಮಾಡುತ್ತಿರುವ ಎರಡನೇ ಭಾರತೀಯ ನಟಿ. ರಿಚ್ಚಾ ಅವರು ಸದ್ಯ ಬ್ರಿಟಿಷ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದರಲ್ಲಿ ಅನ್ಯಾ ಎಂಬ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸಿದ್ಧ ಪೈನ್‌ವುಡ್ ಸ್ಟುಡಿಯೋಸ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು, ಹೊಸ ದೇಶಕ್ಕೆ ತೆರಳುವ ಯುವತಿಯೊಬ್ಬಳು ಅಲ್ಲಿ ಎದುರಿಸುವ ಭಾವುಕ ಹಾಗೂ ರೋಮಾಂಚನಕಾರಿ ಸನ್ನಿವೇಶಗಳ ಸುತ್ತ ಸಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಸೂಪರ್ ಹಿಟ್ ಆದ ಹಾಲಿವುಡ್ ಸಿನಿಮಾ ‘ಅಬ್ಸೆಷನ್’ ಒಟಿಟಿಗೆ ಬರೋದು ಯಾವಾಗ?

ಯುವ ನಿರ್ದೇಶಕ ಕುಶಾಲ್ ಚಾವ್ಲಾ:

ಕರಿ ಬಾರ್ಕರ್ ಲಿಸ್ಟ್‌ನಲ್ಲಿರುವ ಮೂರನೇ ಭಾರತೀಯ ಅಂದರೆ ಅದು ನಿರ್ದೇಶಕ ಕುಶಾಲ್ ಚಾವ್ಲಾ. ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಮತ್ತು ಇಂಡಿ ಸಿನಿಮಾ ವಲಯದಲ್ಲಿ ಕುಶಾಲ್ ದೊಡ್ಡ ಹೆಸರು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ನಿರ್ದೇಶಿಸಿದ ‘ಅನದರ್ ಟೈಮ್’ ಸಿನಿಮಾ ಲಾಸ್ ಏಂಜಲೀಸ್‌ನ ಪ್ರಖ್ಯಾತ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್‌ನಲ್ಲಿ ಪ್ರೀಮಿಯರ್ ಆಗುವ ಮೂಲಕ ದೊಡ್ಡ ಮೈಲಿಗಲ್ಲು ಸ್ಥಾಪಿಸಿತ್ತು. ಈ ಚಿತ್ರವು ನ್ಯೂಯಾರ್ಕ್ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸೇರಿದಂತೆ ಜಾಗತಿಕವಾಗಿ 15ಕ್ಕೂ ಹೆಚ್ಚು ಗೌರವಗಳನ್ನು ಮುಡಿಗೇರಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs IRE: 34 ರನ್​ಗಳಿಂದ ಹೀನಾಯವಾಗಿ ಸೋಲಿಸಿ ಟೀಂ ಇಂಡಿಯಾದ ಅಹಂ ಮುರಿದ ಐರ್ಲೆಂಡ್

ಕ್ರಿಕೆಟ್​ನಲ್ಲಿ ಯಾವುದೇ ದುರ್ಬಲ ತಂಡವನ್ನು ಯಾವುದೇ ಹಂತದಲ್ಲಿ ಕಡೆಗಣಿಸಬಾರದು ಎಂಬುದಕ್ಕೆ ಇಂದು ನಡೆದ ಭಾರತ ಹಾಗೂ ಐರ್ಲೆಂಡ್ ನಡುವಿನ ಪಂದ್ಯವೇ ಸಾಕ್ಷಿ. ವಿಶ್ವ ಕ್ರಿಕೆಟ್​ನ ಸಾಮ್ರಾಟರಾಗಿ ಮೆರೆಯುತ್ತಿರುವ ಟೀಂ ಇಂಡಿಯಾಕ್ಕೆ, ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುವ ಐರ್ಲೆಂಡ್ ಸರಿಯಾದ ಪಾಠ ಕಲಿಸಿದೆ. ಐಪಿಎಲ್‌ನ ಜನಪ್ರಿಯತೆಯಲ್ಲಿ ಕಳೆದುಹೋಗಿದ್ದ ಟೀಂ ಇಂಡಿಯಾ ಆಟಗಾರರು, ಇಂದು ಐರ್ಲೆಂಡ್ ಆಟಗಾರರ ಕೆಚ್ಚೆದೆಯ ಆಟದ ಎದುರು ಅಕ್ಷರಶಃ ಶರಣಾಗಿ ಹೋದರು. ಜನಪ್ರಿಯತೆಯ ಅಮಲಿನಲ್ಲಿ ಕ್ಯಾಚ್ ಹಿಡಿಯುವುದನ್ನೇ ಮರೆತಿರುವಂತೆ ವರ್ತಿಸಿದ ಟೀಂ ಇಂಡಿಯಾ ಆಟಗಾರರಿಗೆ ಅಸಾಧ್ಯವಾದಂತಹ ಕ್ಯಾಚ್​ಗಳನ್ನು ಹಿಡಿಯುವುದು ಹೇಗೆ ಎಂಬುದನ್ನು ಐರ್ಲೆಂಡ್ ಆಟಗಾರರು ಕಲಿಸಿಕೊಟ್ಟರು. ಈ ಪಂದ್ಯದಲ್ಲಿ ಭಾರತ ಕೈಚೆಲ್ಲಿದ್ದು ಬರೋಬ್ಬರಿ 3 ಕ್ಯಾಚ್​ಗಳು ಇದಕ್ಕೆ ಪ್ರತಿಫಲವಾಗಿ ಸಿಕ್ಕಿದ್ದು ಹೀನಾಯ ಸೋಲು. ಇತ್ತ ಸ್ಮರಣೀಯ ಪ್ರದರ್ಶನ ನೀಡಿದ ಐರ್ಲೆಂಡ್​ಗೆ ಸಿಕ್ಕಿದ್ದು, ಭಾರತದ ವಿರುದ್ಧ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಜಯ.

Source link

ಡ್ರಗ್ಸ್ ಮುಕ್ತ ಭಾರತಕ್ಕೆ ಮಾಸ್ಟರ್ ಪ್ಲಾನ್; 3 ವರ್ಷದ ‘ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಿದ ಅಮಿತ್ ಶಾ – Kannada News | Amit Shah launches 3 year Vision Document for drugs Control

ನವದೆಹಲಿ, ಜೂನ್ 26: ಭಾರತದಲ್ಲಿ ಮಾದಕ ದ್ರವ್ಯಗಳ ಜಾಲವನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಕೇಂದ್ರ ಸರ್ಕಾರವು ದೊಡ್ಡ ಪ್ಲಾನ್ ಸಿದ್ಧಪಡಿಸಿದೆ. ನವದೆಹಲಿಯಲ್ಲಿ ನಡೆದ 10ನೇ NCORD ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ 3 ವರ್ಷಗಳ ಅವಧಿಯ ‘ಮಾದಕ ದ್ರವ್ಯ ನಿಯಂತ್ರಣ ವಿಷನ್ ಡಾಕ್ಯುಮೆಂಟ್’ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ದೇಶಾದ್ಯಂತ ಜಪ್ತಿ ಮಾಡಲಾಗಿದ್ದ ಬರೋಬ್ಬರಿ 6,000 ಕೋಟಿ ರೂ. ಮೌಲ್ಯದ 2,09,500 ಕೆಜಿ ಮಾದಕ ಪದಾರ್ಥಗಳನ್ನು ಏಕಕಾಲದಲ್ಲಿ ನಾಶಪಡಿಸುವ ‘ಡ್ರಗ್ ವಿಲೇವಾರಿ ಪಾಕ್ಷಿಕ ಅಭಿಯಾನ’ಕ್ಕೆ ಚಾಲನೆ ನೀಡುವ ಮೂಲಕ ಡ್ರಗ್ಸ್ (Drugs) ಮಾಫಿಯಾಗೆ ಕಠಿಣ ಸಂದೇಶ ರವಾನಿಸಿದರು.

“ಮಾದಕ ದ್ರವ್ಯದ ಪಿಡುಗು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಲ್ಲ. ಅದು ದೇಶದ ರಾಷ್ಟ್ರೀಯ ಭದ್ರತೆ, ಸಾಮಾಜಿಕ ಸ್ಥಿರತೆ, ಆರ್ಥಿಕ ಹಿತಾಸಕ್ತಿ ಹಾಗೂ ಕೋಟ್ಯಂತರ ಯುವ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗಿದೆ” ಎಂದು ಅಮಿತ್ ಶಾ ಆತಂಕ ವ್ಯಕ್ತಪಡಿಸಿದರು. “ಈ ಪಿಡುಗಿನ ವಿರುದ್ಧ ಜಯ ಸಾಧಿಸಲು ಆಧ್ಯಾತ್ಮಿಕ ನಾಯಕರು, ಯುವಕರು, ಶಿಕ್ಷಕರು ಮತ್ತು ತಾಯಂದಿರು ಒಂದೇ ವೇದಿಕೆಗೆ ಬಂದು ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: ಈಗ ಉಳಿದಿರುವುದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ; ಉದ್ಧವ್ ಠಾಕ್ರೆಗೆ ಅಮಿತ್ ಶಾ ಟಾಂಗ್

ಸಿಂಥೆಟಿಕ್ ಡ್ರಗ್ಸ್ ಜಪ್ತಿಯಲ್ಲಿ ಭಾರಿ ಏರಿಕೆ:

“ಹಿಂದಿನ ಸರ್ಕಾರಗಳ ಅವಧಿಗೆ ಹೋಲಿಸಿದರೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಡ್ರಗ್ಸ್ ಹಾವಳಿಯನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಅಂಕಿ-ಅಂಶಗಳನ್ನು ನೀಡಿದರು. 2004ರಿಂದ 2014ರ ನಡುವೆ ದೇಶದಲ್ಲಿ ಕೇವಲ 26 ಲಕ್ಷ ಕೆಜಿ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಆದರೆ 2014ರಿಂದ 2026ರ ಅವಧಿಯಲ್ಲಿ ಈ ಪ್ರಮಾಣವು ಬರೋಬ್ಬರಿ 1.18 ಕೋಟಿ ಕೆಜಿಗೆ (11.8 ಮಿಲಿಯನ್ ಕೆಜಿ) ಏರಿಕೆಯಾಗಿದೆ. ಇದು ಸರ್ಕಾರದ ನಿರಂತರ ಕಾರ್ಯಾಚರಣೆಯ ಯಶಸ್ಸನ್ನು ತೋರಿಸುತ್ತದೆ” ಎಂದರು.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ

ಡ್ರಗ್ಸ್ ಅಪರಾಧಗಳ ತನಿಖೆಯನ್ನು ಚುರುಕುಗೊಳಿಸಲು ಎನ್‌ಸಿಬಿ (NCB) ಹಲವು ಅತ್ಯಾಧುನಿಕ ಆನ್‌ಲೈನ್ ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಿದೆ. ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು (DGPs) ತಮ್ಮ ರಾಜ್ಯಗಳಲ್ಲಿ ದಾಖಲಾಗುವ ಡ್ರಗ್ಸ್ ಪ್ರಕರಣಗಳ ಇಂಚಿಂಚೂ ಮಾಹಿತಿಯನ್ನು ನಿಗದಿತ ಸಮಯದೊಳಗೆ ಈ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಮಾಹಿತಿ ಹಂಚಿಕೆ ಸುಲಭವಾಗಿ, ತನಿಖೆ ವೇಗವಾಗಿ ನಡೆಯಲು ಸಾಧ್ಯವಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ಮಾದಕ ಮುಕ್ತ ಭಾರತ’ದ ಸಂಕಲ್ಪವನ್ನು 2047ರ ವೇಳೆಗೆ ಸಾಕಾರಗೊಳಿಸಲು ಈ 3 ವರ್ಷಗಳ ವಿಷನ್ ಡಾಕ್ಯುಮೆಂಟ್ ಅತ್ಯಂತ ಪ್ರಮುಖ ತಳಹದಿಯಾಗಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs IRE: ಪಾದಾರ್ಪಣೆ ಪಂದ್ಯದ ಮೊದಲ ಎಸೆತದಲ್ಲೇ ಸಂಜು ವಿಕೆಟ್ ಕಿತ್ತ ಭಾರತೀಯ – Kannada News | Jai Mundhra’s Dream T20 Debut: First Ball Wicket Stuns India vs Ireland

ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್ ನಿಯಮಿತ ಅಂತರದಲ್ಲಿ ವಿಕಟ್ ಕಳೆದುಕೊಂಡರೂ, ಬಂದ ಬಂದವರೆಲ್ಲ ಹೊಡಿಬಡಿ ಆಟವನ್ನು ಪ್ರದರ್ಶಿಸಿದರು. ಇದರ ಫಲವಾಗಿ ಭಾರತದ ಬಲಿಷ್ಠ ಬೌಲಿಂಗ್​ನೆಂದರು ಐರ್ಲೆಂಡ್ 20 ಓವರ್​ಗಳಲ್ಲಿ 183 ರನ್ ಕಲೆಹಾಕಿತು. ಭಾರತದ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ನೋಡಿದವರು ಇದು ಸುಲಭ ಗುರಿಯಾಗುತ್ತದೆ ಎಂದೇ ಭಾವಿಸಿದ್ದರು. ಆದರೆ ಇದಕ್ಕೆ ಐರ್ಲೆಂಡ್ ಅವಕಾಶ ಮಾಡಿಕೊಡಲಿಲ್ಲ. ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಭಾರತದ ಮೂಲದ ಜೈ ಮುಂಧ್ರಾ ತಾವು ಬೌಲ್ ಮಾಡಿದ ಮೊದಲ ಓವರ್ ಮೊದಲ ಎಸೆತದಲ್ಲೇ ಭಾರತಕ್ಕೆ ಶಾಕ್ ನೀಡಿದರು.

ರಾಜಸ್ಥಾನ ಮೂಲದ ಬೌಲಿಂಗ್‌ ಆಲ್‌ರೌಂಡರ್ ಜೈ ಮುಂಧ್ರಾ ತಮ್ಮ ಮೊದಲ ಎಸೆತದಲ್ಲೇ ಇತಿಹಾಸ ನಿರ್ಮಿಸಿ ಭಾರತದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿದರು. ಇನ್ನಿಂಗ್ಸ್‌ನ ಎರಡನೇ ಓವರ್ ಮತ್ತು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಓವರ್ ಬೌಲಿಂಗ್ ಮಾಡಲು ಬಂದ ಜೈ ಮುಂಧ್ರಾ, ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆದು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ವಿಕೆಟ್​ಗಳ ಖಾತೆಯನ್ನು ತೆರೆದರು.

ಇದರೊಂದಿಗೆ, ಜೈ ಮುಂಧ್ರಾ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಎರಡನೇ ಐರಿಶ್ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು, ಮ್ಯಾಥ್ಯೂ ಹಂಫ್ರೀಸ್ ಈ ಸಾಧನೆ ಮಾಡಿದ್ದರು. ಪಂಜಾಬ್ ಮೂಲದ ಸಿಮಿ ಸಿಂಗ್ ನಂತರ ಐರ್ಲೆಂಡ್ ಪರ ಆಡಿದ ಎರಡನೇ ಭಾರತೀಯ ಮೂಲದ ಕ್ರಿಕೆಟಿಗ ಜೈ ಮುಂಧ್ರಾ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

ಜನವರಿ 10, 1997 ರಂದು ರಾಜಸ್ಥಾನದ ಟೋಂಕ್‌ನಲ್ಲಿ ಜನಿಸಿದ ಜೇ ಮುಂಧ್ರಾ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದರು. ಹೀಗಾಗಿ ಅವರು ರಾಜಸ್ಥಾನ ಪರ 14 ವರ್ಷದೊಳಗಿನವರ ಕ್ರಿಕೆಟ್ ಕೂಡ ಆಡಿದ್ದು, ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿದ್ದರು. ನಂತರ ತಮ್ಮ ಎಂ.ಟೆಕ್ ಅನ್ನು ಮುಂದುವರಿಸಲು ವಿದ್ಯಾರ್ಥಿ ವೀಸಾದಲ್ಲಿ ಐರ್ಲೆಂಡ್‌ಗೆ ತೆರಳಿದ ಜೇ ಮುಂಧ್ರಾ ಅಲ್ಲಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದರು. ಡಬ್ಲಿನ್‌ನಲ್ಲಿರುವ ಪ್ರಸಿದ್ಧ ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್‌ ಪರ ಆಡಲು ಪ್ರಾರಂಭಿಸಿದ ಜೇ ಮುಂಧ್ರಾ 2023 ರಲ್ಲಿ ಐರಿಶ್ ಸೀನಿಯರ್ ಕಪ್ ವಿಜೇತ ತಂಡದ ಭಾಗವಾಗಿದ್ದರು.

Source link

ತಾವರೆಕೆರೆ ಮೆಟ್ರೋ ನಿಲ್ದಾಣದ ಕೆಳಗಿನ ರಸ್ತೆ ಅದ್ವಾನ: ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ! – Kannada News | Tavarekere Metro Pothole Menace: Newly Laid Road Turns Hazardous for Commuters

ಬೆಂಗಳೂರು, ಜೂನ್​​ 26: ಮೇಲೆ ಮೆಟ್ರೋ (Namma Metro), ಕೆಳಗೆ ಗುಂಡಿ ರಸ್ತೆ (potholes). ಅಭಿವೃದ್ಧಿಯ ಹೆಸರಿನಲ್ಲಿ ನಿರ್ಮಿಸಿದ ಹೊಸ ರಸ್ತೆ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಾವರೆಕೆರೆ ಮೆಟ್ರೋ ನಿಲ್ದಾಣದ ಕೆಳಭಾಗದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಲಿಗಾಗಿ ಬಾಯಿ ತೆರೆದಿದ್ದು, ಪ್ರತಿನಿತ್ಯ ಸಾವಿರಾರು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳಪೆ ಕಾಮಗಾರಿಯ ಬಂಡವಾಳ ಬಯಲು

ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿ ಹೊಸದಾಗಿ ನಿರ್ಮಾಣವಾದ ರಸ್ತೆಯಲ್ಲೇ ಇಂತಹ ಅವ್ಯವಸ್ಥೆ ಕಂಡು ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಿದ ಕೆಲವೇ ದಿನಗಳಲ್ಲಿ ಗುಂಡಿಗಳು ಬಿದ್ದಿರುವುದು ಕಳಪೆ ಕಾಮಗಾರಿಯ ಬಂಡವಾಳ ಬಯಲಾಗಿದೆ. ಪ್ರತಿದಿನ ಸಾವಿರಾರು ಜನ ಸಂಚರಿಸುವ ರಸ್ತೆ ಹಾಳಾಗಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಸರಣಿ ಸಮಸ್ಯೆ ಮಧ್ಯೆ ಮತ್ತೊಂದು ದುರಂತ: ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕ​ ಸಾವು

ಇನ್ನು ಸ್ವಲ್ಪ ಮಳೆ ಬಂದರೂ ಸಾಕು, ಈ ರಸ್ತೆಯ ದೊಡ್ಡ ದೊಡ್ಡ ಗುಂಡಿಗಳು ನೀರಿನಿಂದ ತುಂಬಿ ಕೆರೆಯಂತಾಗುತ್ತವೆ. ಪರಿಣಾಮ, ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಗುಂಡಿಗಳ ಆಳ ತಿಳಿಯದೆ ಆಕಸ್ಮಿಕವಾಗಿ ಬಿದ್ದು ಆಪತ್ತು ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಬಾರಿ ಮಳೆಯಾದಾಗಲೂ ಇಡೀ ಮೆಟ್ರೋ ನಿಲ್ದಾಣದ ಕೆಳಭಾಗ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಇದರೊಂದಿಗೆ, ಮೆಟ್ರೋ ಬ್ರಿಡ್ಜ್‌ನಿಂದಾಗಿ ಹಗಲಿನಲ್ಲೇ ಕತ್ತಲೆಯ ವಾತಾವರಣ ಸೃಷ್ಟಿಯಾಗುತ್ತಿದ್ದು, ವಾಹನ ಸವಾರರು ಕಡ್ಡಾಯವಾಗಿ ಹೆಡ್‌ಲೈಟ್ ಆನ್ ಮಾಡಿಕೊಂಡೇ ಬರಬೇಕಾದ ಅನಿವಾರ್ಯತೆ ಇದೆ.

ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಆಕ್ರೋಶ

ಒಂದು ವೇಳೆ ಬೆಳಕಿನಲ್ಲೇ ಹೆಡ್‌ಲೈಟ್ ಹಾಕದಿದ್ದರೆ, ವಾಹನಗಳು ನೇರವಾಗಿ ಗುಂಡಿಗೆ ಬೀಳುವುದು ಗ್ಯಾರಂಟಿ ಎನ್ನುವಂತಾಗಿದೆ. ಕಣ್ಣೆದುರೇ ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಕಣ್ಮುಚ್ಚಿ ಕುಳಿತಿರುವ ಜಿಬಿಎ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ: ಮೆಟ್ರೋನಲ್ಲಿ ತಾಂತ್ರಿಕ ದೋಷಕ್ಕೆ ಸ್ಫೋಟಕ ಕಾರಣ ಬಯಲು

ದೊಡ್ಡ ದೊಡ್ಡ ಗುಂಡಿಗಳನ್ನ ಮುಚ್ಚಿ, ಅಪಘಾತ ಸಂಭವಿಸುವ ಮುನ್ನವೇ ರಸ್ತೆ ಸರಿ ಮಾಡಬೇಕು. ಇಲ್ಲವಾದರೆ ಜನರಿಗೆ ಮತ್ತಷ್ಟು ಸಮಸ್ಯೆ ಉಂಟಾಗುವುದು ಗ್ಯಾರಂಟಿ.

ವರದಿ: ನಟರಾಜ್ ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs IRE: ಐರ್ಲೆಂಡ್ ವಿರುದ್ಧ ಅತಿ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ

Source link

ಒತ್ತಡದಿಂದಲೇ ಕೂದಲು ಬೇಗ ಬಿಳಿಯಾಗುತ್ತದೆಯೇ? ತಜ್ಞರು ಹೇಳಿರುವ ಸತ್ಯ ಇಲ್ಲಿದೆ! – Kannada News | Premature Gray Hair: Does Stress Really Turn Your Hair White?

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ಕೂದಲು ಬಿಳಿಯಾಗುವುದು (Premature Gray Hair) ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಕೇವಲ ವಯಸ್ಸಿನ ಪ್ರಭಾವ ಎಂದು ಭಾವಿಸುವುದು ಸರಿಯಲ್ಲ. ಒತ್ತಡ, ಪೌಷ್ಟಿಕಾಂಶದ ಕೊರತೆ, ಅನುವಂಶೀಯ ಕಾರಣಗಳು ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗಬಹುದು. ಹಾಗಾದರೆ ಮಾನಸಿಕ ಒತ್ತಡದಿಂದ (Stress) ನಿಜವಾಗಿಯೂ ಕೂದಲು ಬೇಗ ಬಿಳಿಯಾಗುತ್ತದೆಯೇ, ಇದರ ಹೊರತಾಗಿ ಕೂದಲು ಬಿಳಿಯಾಗುವುದಕ್ಕೆ ಕಾರಣಗಳೇನು ಮತ್ತು ಯಾವಾಗ ವೈದ್ಯರ ಸಲಹೆ ತೆಗೆದುಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಒತ್ತಡದ ನಿಜವಾಗಿಯೂ ಕೂದಲನ್ನು ಬಿಳಿಯಾಗಿಸುತ್ತದೆಯೇ?

ಕೆಲವು ಅಧ್ಯಯನಗಳ ಪ್ರಕಾರ, ನಿರಂತರ ಮಾನಸಿಕ ಒತ್ತಡವು ಕೂದಲಿಗೆ ಬಣ್ಣ ನೀಡುವ ಮೆಲನೋಸೈಟ್ ಕೋಶಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆಲನಿನ್ ಉತ್ಪಾದನೆ ಕಡಿಮೆಯಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಾಧ್ಯತೆ ಹೆಚ್ಚಾಗಬಹುದು. ಆದರೆ ಎಲ್ಲರಲ್ಲೂ ಒತ್ತಡ ಒಂದೇ ಕಾರಣ ಎಂದು ಹೇಳಲಾಗುವುದಿಲ್ಲ.

ಕೂದಲು ಬೇಗ ಬಿಳಿಯಾಗುವುದಕ್ಕೆ ಮೊತ್ತೊಂದಿಷ್ಟು ಕಾರಣಗಳು;

  • ಅನುವಂಶೀಯ (ಜೆನೆಟಿಕ್) ಕಾರಣಗಳು
  • ವಿಟಮಿನ್ ಬಿ12, ಕಬ್ಬಿಣ, ಫೋಲೇಟ್ ಕೊರತೆ
  • ಥೈರಾಯ್ಡ್ ಸಮಸ್ಯೆಗಳು
  • ಕೆಲವು ಆಟೋಇಮ್ಯೂನ್ ಕಾಯಿಲೆಗಳು
  • ಧೂಮಪಾನ ಮತ್ತು ಅನಾರೋಗ್ಯಕರ ಜೀವನಶೈಲಿ

ಇದನ್ನೂ ಓದಿ: ಪದೇ ಪದೇ ತಲೆಸುತ್ತು ಬರುತ್ತಿದೆಯೇ? ಇದು ವಿಟಮಿನ್ ಕೊರತೆಯ ಲಕ್ಷಣವಾಗಿರಬಹುದು!

ಕೂದಲ ಆರೋಗ್ಯ ಕಾಪಾಡುವುದು ಹೇಗೆ?

ಸಾಮಾನ್ಯವಾಗಿ ಕೂದಲು ಆರೋಗ್ಯವಾಗಿರಲು ಸಮತೋಲಿತ ಆಹಾರ ಸೇವಿಸಿ. ಹಸಿರು ತರಕಾರಿ, ಹಣ್ಣು, ಪ್ರೋಟೀನ್ ಹಾಗೂ ಅಗತ್ಯ ವಿಟಮಿನ್‌ಗಳಿರುವ ಆಹಾರವನ್ನು ಸೇರಿಸಿಕೊಳ್ಳಿ. ಪ್ರತಿದಿನ ಸಮರ್ಪಕ ನಿದ್ರೆ ಪಡೆಯಿರಿ. ಯೋಗ, ಧ್ಯಾನ ಹಾಗೂ ನಿಯಮಿತ ವ್ಯಾಯಾಮದ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಧೂಮಪಾನದಿಂದ ದೂರವಿರಿ ಮತ್ತು ಕೂದಲಿಗೆ ಅತಿಯಾದ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ.

ಕಡಿಮೆ ವಯಸ್ಸಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಬಿಳಿಯಾಗುತ್ತಿದ್ದರೆ ಅಥವಾ ಕೂದಲು ಉದುರುವುದು, ಆಯಾಸ, ಇತರ ಆರೋಗ್ಯ ಸಮಸ್ಯೆಗಳೂ ಕಾಣಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಗಮನಿಸಿ: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿರಂತರವಾಗಿ ಕೂದಲು ಬಿಳಿಯಾಗುತ್ತಿದ್ದರೆ ಅಥವಾ ಇತರ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಲ್ಕತ್ತಾದ ಗೋದಾಮು ಕುಸಿತದ 6 ಆರೋಪಿಗಳ ಬಂಧನ; ಆರ್ಕಿಟೆಕ್ಟ್ ಕಪ್ಪುಪಟ್ಟಿಗೆ ಸೇರಿಸಲು ಸಿಎಂ ಆದೇಶ – Kannada News | CM Suvendu Adhikari says 6 arrested in Kolkata warehouse collapse case

ಕೊಲ್ಕತ್ತಾ, ಜೂನ್ 26: ಪಶ್ಚಿಮ ಬಂಗಾಳದ ಕೊಲ್ಕತ್ತಾದ ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮು ಕುಸಿತಗೊಂಡು 5 ಜನ ಬಲಿಯಾದ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಪ್ರಕರಣದ ಪರಾಮರ್ಶೆ ನಡೆಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಮುಖ ಪ್ರಕರಣದ ತನಿಖೆಯನ್ನು ಲಾಲ್‌ಬಜಾರ್ ಅಪರಾಧ ವಿಭಾಗ ಕೈಗೆತ್ತಿಕೊಂಡಿದ್ದು, ಕೊಲ್ಕತ್ತಾ ಪೊಲೀಸ್ ಕಮಿಷನರ್ ಅವರೇ ಖುದ್ದಾಗಿ ಇದರ ಉಸ್ತುವಾರಿ ವಹಿಸಿದ್ದಾರೆ. ಪ್ರಾಥಮಿಕ ಆರೋಪಗಳ ಹಿನ್ನೆಲೆಯಲ್ಲಿ ಕಾಳಿ ಬ್ಯಾನರ್ಜಿ ಹಾಗೂ ಇದರಲ್ಲಿ ಭಾಗಿಯಾಗಿದ್ದ ಬ್ರೋಕರ್ ಅನ್ನು ಬಂಧಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಲಂಚದ ವಿರುದ್ಧ ಸಿಎಂ ಗರಂ:

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ಕುರಿತು ಮಾತನಾಡಿದ್ದು, “ಈ ಕಟ್ಟಡದ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿದ್ದ ಮತ್ತು ತಪ್ಪು ಯೋಜನೆ ರೂಪಿಸಿದ್ದ ಆರ್ಕಿಟೆಕ್ಟ್ ಅನ್ನು ಕಪ್ಪುಪಟ್ಟಿಗೆ ಸೇರಿಸಲು ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ನಿರ್ಧರಿಸಿದೆ. ಕಚೇರಿಗಳು ಮರುಪ್ರಾರಂಭಗೊಂಡ ತಕ್ಷಣ ಆಡಳಿತಾಧಿಕಾರಿಗಳು ಇದನ್ನು ಅಧಿಕೃತಗೊಳಿಸಲಿದ್ದಾರೆ. ಇಂತಹ ಬೇಜವಾಬ್ದಾರಿ ವ್ಯಕ್ತಿಗಳು ಭವಿಷ್ಯದಲ್ಲಿ ಅಧಿಕೃತವಾಗಿ ಕೆಲಸ ಮಾಡಲು ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ನನಗಿಂತ ಕೆಟ್ಟವರು ಯಾರೂ ಇರುವುದಿಲ್ಲ; ಬಂಗಾಳದಲ್ಲಿ ಹಿಂಸಾಚಾರ ನಡೆಸುವವರಿಗೆ ಸಿಎಂ ಸುವೇಂದು ಅಧಿಕಾರಿ ಎಚ್ಚರಿಕೆ

ಬುಧವಾರ ಸಂಜೆ ಪೊಲೀಸರು ಮೂವರನ್ನು ಬಂಧಿಸಿದ್ದರು. ಬಂಧಿತರನ್ನು ಪ್ರಾಜೆಕ್ಟ್ ಮೇಲ್ವಿಚಾರಕ ಸೈಯದ್ ಮೊಹಮ್ಮದ್ ಗುಲ್ಜಾರ್ ಮತ್ತು ಕಾರ್ಮಿಕರ ಸರಬರಾಜುದಾರರಾದ ಮೊಹಮ್ಮದ್ ಅತಾವುಲ್ ಹಾಗೂ ಸುಭಾಸ್ ಚೌಧರಿ ಎಂದು ಗುರುತಿಸಲಾಗಿದೆ. ಮೃತ ಕಾರ್ಮಿಕರೊಬ್ಬರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಇವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಂತೆ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೀಕರ ವಿರುದ್ಧ ಎಫ್‌ಐಆರ್:

ಗೋದಾಮಿನ ಮಾಲೀಕರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಈ ಜಾಗವು ಶ್ಯಾಮ ಪ್ರಸಾದ್ ಮುಖರ್ಜಿ ಪೋರ್ಟ್ ಅಥಾರಿಟಿಗೆ ಸೇರಿದ್ದು, ಇದನ್ನು ಬೇಹ್ರಾ ಬ್ರದರ್ಸ್‌ನ ಪಾಲುದಾರರಾದ ಶಂಭೂನಾಥ್ ಬೇಹ್ರಾ ಎಂಬುವವರಿಗೆ ಗುತ್ತಿಗೆ ನೀಡಲಾಗಿತ್ತು. ಗೋದಾಮಿನ ನಿರ್ಮಾಣಕ್ಕೆ ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅನುಮೋದನೆ ಸಿಕ್ಕಿತ್ತು. ಆದರೆ, ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಕಟ್ಟಡವನ್ನು ಹೇಗೆ ನಿರ್ಮಿಸಲಾಯಿತು ಮತ್ತು ಅದಕ್ಕೆ ಅಧಿಕಾರಿಗಳು ಹೇಗೆ ಅನುಮತಿ ನೀಡಿದರು ಎಂಬ ಕೋನದಲ್ಲಿ ಕೊಲ್ಕತ್ತಾ ಪೊಲೀಸರ ಪತ್ತೇದಾರಿ ವಿಭಾಗದ ಹೋಮಿಸೈಡ್ ಸೆಕ್ಷನ್ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಭವಾನಿಪುರ ಕ್ಷೇತ್ರ ಉಳಿಸಿಕೊಂಡು ನಂದಿಗ್ರಾಮದ ಶಾಸಕ ಸ್ಥಾನಕ್ಕೆ ಬಂಗಾಳದ ಸಿಎಂ ಸುವೇಂದು ಅಧಿಕಾರಿ ರಾಜೀನಾಮೆ

ಅಧಿಕಾರಿಗಳಿಗೆ ಸಂಕಷ್ಟ:

ಈ ಅಕ್ರಮ ಕಟ್ಟಡಕ್ಕೆ ಮಂಜೂರಾತಿ ನೀಡಿದ ಮತ್ತು ಇದರ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗಿಯಾದ ಮುನ್ಸಿಪಲ್ ಅಧಿಕಾರಿಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಅವರೆಲ್ಲರಿಗೂ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುಬೈನಲ್ಲಿ ‘ರಾಮಾಯಣ’ ಪ್ರೀಮಿಯರ್? ಯಶ್, ರಣಬೀರ್ ಚಿತ್ರತಂಡದಿಂದ ಬಿಗ್ ಪ್ಲಾನ್ – Kannada News | Ranbir Kapoor Yash Sai Pallavi Ramayana movie grand Dubai premiere plans revived

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಜೆಟ್ ಚಿತ್ರವಾಗಿ ಮೂಡಿಬರುತ್ತಿರುವ ‘ರಾಮಾಯಣ’ (Ramayana) ಸಿನಿಮಾ ಈಗ ಮತ್ತೊಂದು ಮಹತ್ತರ ಯೋಜನೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯ ವೈಭವದ ಚಿತ್ರಕ್ಕೆ ದುಬೈನಲ್ಲಿ ಅತ್ಯಂತ ಅದ್ಧೂರಿಯಾದ ಅಂತಾರಾಷ್ಟ್ರೀಯ ಪ್ರೀಮಿಯರ್ ಶೋ (Ramayana Premiere Show) ಆಯೋಜಿಸಲು ಚಿತ್ರತಂಡ ಮಾತುಕತೆ ಪುನರಾರಂಭಿಸಿದೆ ಎಂದು ‘ಮಿಡ್-ಡೇ’ ವರದಿ ಮಾಡಿದೆ. ಈ ಪ್ರೀಮಿಯರ್ ಶೋವನ್ನು ಅಕ್ಟೋಬರ್ 28ರಂದು ನಡೆಸಲು ಯೋಜಿಸಲಾಗುತ್ತಿದ್ದು, ಚಿತ್ರತಂಡದವರು ಇದಕ್ಕೆ ‘ಡೆಸರ್ಟ್ ಪ್ರೀಮಿಯರ್’ ಎಂಬ ಕೋಡ್ ನೇಮ್ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ನಿರ್ದೇಶಕ ನಿತೇಶ್ ತಿವಾರಿ ಮತ್ತು ಪ್ರಸಿದ್ಧ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಆರಂಭದಲ್ಲೇ ದುಬೈನಲ್ಲಿ ಚಿತ್ರದ ಪ್ರೀಮಿಯರ್ ನಡೆಸಲು ಉದ್ದೇಶಿಸಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಮಿಡಲ್ ಈಸ್ಟ್ ಭಾಗದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಈಗ ಅಲ್ಲಿನ ಪರಿಸ್ಥಿತಿ ತಿಳಿಗೊಂಡಿರುವುದರಿಂದ, ಚಿತ್ರತಂಡವು ದುಬೈನಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮರುಪರಿಶೀಲನೆ ನಡೆಸುತ್ತಿದೆ.

‘ದೊಡ್ಡ ಪ್ರಮಾಣದ ಈವೆಂಟ್‌ಗಳನ್ನು ಆಯೋಜಿಸಲು ದುಬೈ ಸೂಕ್ತ ಜಾಗವಾಗಿದೆ. ಅಲ್ಲದೆ ಅಲ್ಲಿ ಅಪಾರ ಸಂಖ್ಯೆಯ ಭಾರತೀಯರಿದ್ದಾರೆ. ಹೀಗಾಗಿ ಚಿತ್ರತಂಡದ ಮೊದಲ ಆದ್ಯತೆ ದುಬೈ ಆಗಿದೆ’ ಎಂದು ಸಿನಿಮಾದ ಆಪ್ತ ಮೂಲವೊಂದು ತಿಳಿಸಿರುವುದಾಗಿ ವರದಿ ಆಗಿದೆ. ಒಂದು ವೇಳೆ ಈ ಪ್ರೀಮಿಯರ್ ಅಧಿಕೃತಗೊಂಡರೆ, ಚಿತ್ರದ ಮುಖ್ಯ ತಾರಾಗಣವಾದ ಬಾಲಿವುಡ್ ನಟ ರಣಬೀರ್ ಕಪೂರ್, ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಅಬ್ಬರಿಸಲಿರುವ ‘ರಾಕಿಂಗ್ ಸ್ಟಾರ್’ ಯಶ್ ಈ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’, ‘ವಾರಣಾಸಿ’ ಚಿತ್ರಗಳ ಬಜೆಟ್ ಒಂದು ಗಿಮಿಕ್ ಎಂದ ಮನೋಜ್ ಬಾಜಪೇಯಿ

ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸಂಸ್ಥೆ ‘ಡಿಎನ್‌ಇಜಿ’ ಈ ಚಿತ್ರದ ದೃಶ್ಯ ವೈಭವವನ್ನು ರೂಪಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಸದ್ಯಕ್ಕೆ ಚಿತ್ರತಂಡದಿಂದ ಈ ದುಬೈ ಪ್ರೀಮಿಯರ್ ಬಗ್ಗೆ ಅಧಿಕೃತ ಪ್ರಕಟಣೆ ಬಾಕಿ ಇದ್ದರೂ, ಈ ಸುದ್ದಿ ಮಾತ್ರ ದೊಡ್ಡ ಮಟ್ಟದಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರಣಿ ಸಮಸ್ಯೆ ಮಧ್ಯೆ ಮತ್ತೊಂದು ದುರಂತ: ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕ​ ಸಾವು – Kannada News | Metro Pillar Tragedy: Worker Dies of Electric Shock at Trinity Station

ಬೆಂಗಳೂರು, ಜೂನ್​​ 26: ನಮ್ಮ ಮೆಟ್ರೋ (Namma Metro) ಪಿಲ್ಲರ್​ಗೆ ಲೈಟಿಂಗ್ಸ್​​​ ಅಳವಡಿಸುವಾಗ ದುರಂತವೊಂದು ಸಂಭವಿಸಿದ್ದು, ವಿದ್ಯುತ್​ ಪ್ರವಹಿಸಿ ಕಾರ್ಮಿಕ​​ ಸಾವನ್ನಪ್ಪಿದ್ದಾರೆ (death). ಗುರಪ್ಪ(70) ಮೃತ ಕಾರ್ಮಿಕ. ವೈಟ್‌ಫೀಲ್ಡ್​ ಟು ಚಲ್ಲಘಟ್ಟ ಮಾರ್ಗದ ನೇರಳೆ ಮಾರ್ಗದ ಟ್ರಿನಿಟಿ ಮೆಟ್ರೋ ನಿಲ್ದಾಣದ 153ನೇ ಪಿಲ್ಲರ್​​ ಬಳಿ ಘಟನೆ ನಡೆದಿದೆ. ಘಟನೆ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಎಂಆರ್​ ಎಲೆಕ್ಟ್ರಿಕಲ್ಸ್ ಎಂಬ ಸಂಸ್ಥೆ ಬಿಎಂಆರ್​ಸಿಎಲ್​​ನಿಂದ ಲೈಟಿಂಗ್ಸ್ ಹಾಕುವ ಟೆಂಡರ್ ಪಡೆದಿತ್ತು. ಹಾಗಾಗಿ ಸಂಸ್ಥೆಯ ಕಾರ್ಮಿಕ ಗುರಪ್ಪ ಮೆಟ್ರೋ ಪಿಲ್ಲರ್​ಗೆ ಲೈಟಿಂಗ್ಸ್ ಅಳವಡಿಸುತ್ತಿದ್ದರು. ಲೈಟಿಂಗ್​​ಗಾಗಿ ಅರ್ಥಿಂಗ್ ಗುಂಡಿ ಅಗೆಯಲಾಗುತಿತ್ತು. ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಗುಂಡಿ ಅಗೆಯುವಾಗ ಅಡಿಯಲ್ಲಿದ್ದ ಕೇಬಲ್​​ಗೆ ಡ್ರಿಲ್ಲಿಂಗ್ ಮಿಷನ್​ ತಾಗಿದೆ.​

ಇದನ್ನೂ ಓದಿ: ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ: ಮೆಟ್ರೋನಲ್ಲಿ ತಾಂತ್ರಿಕ ದೋಷಕ್ಕೆ ಸ್ಫೋಟಕ ಕಾರಣ ಬಯಲು

ಈ ವೇಳೆ ವಿದ್ಯುತ್ ಶಾಕ್​ನಿಂದ ಗುರಪ್ಪ ಅಸ್ವಸ್ಥರಾಗಿದ್ದಾರೆ. ತಕ್ಷಣ ಸ್ಥಳಿಯರು ಸೇಂಟ್ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಗುರಪ್ಪ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.

ವಿದ್ಯುತ್​ ಪ್ರವಹಿಸಿ ಯುವಕ ದುರ್ಮರಣ

ಮತ್ತೊಂದು ಪ್ರಕರಣದಲ್ಲಿ ವಿದ್ಯುತ್​ ಪ್ರವಹಿಸಿ ಯುವಕ ದುರ್ಮರಣ ಹೊಂದಿರುವಂತ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಕ್ಕುಂದ ಗ್ರಾಮದಲ್ಲಿ ನಡೆದಿದೆ. ಅಭಿಷೇಕ್​ ಶೆಟ್ಟಿ(32) ಮೃತ ವ್ಯಕ್ತಿ. ಸದ್ಯ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ಬಾಗಿಲು ಲಾಕ್ ಆಗದೇ ಇದ್ದುದರ ಅಸಲಿ ಕಾರಣ ಬಯಲು

ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿ ಅಭಿಷೇಕ್​​, ಪತ್ರೊಡೆ ಎಲೆ ಕೀಳಲು ಮರವೇರಿದ್ದಾರೆ. ಈ ವೇಳೆ ಆಕಸ್ಮಿಕವಾಗಿ 11 ಕೆವಿ ವಿದ್ಯುತ್ ತಂತಿ ಸ್ಪರ್ಶಿಸಿ ಶಾಕ್​​ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವಿವಾಹಿತನಾಗಿದ್ದ ಅಭಿಷೇಕ್ ಶೆಟ್ಟಿಗೆ ತಂದೆ-ತಾಯಿ ಇರಲಿಲ್ಲ. ತನ್ನ ಚಿಕ್ಕಮನ ಮಗಳ ಮನೆಯಲ್ಲಿ ವಾಸವಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version