Banke Bihari Temple: ಈ ದೇವಸ್ಥಾನದಲ್ಲಿ ಗಂಟೆ ಬಾರಿಸುವಂತಿಲ್ಲ; ವೃಂದಾವನ ವಿಶಿಷ್ಟ ದೇವಾಲಯದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ – Kannada News | Banke Bihari Temple: Why No Bells and Mysterious Jhanki Darshan Explained

ಈ ದೇವಸ್ಥಾನದಲ್ಲಿ ಗಂಟೆ ಬಾರಿಸುವಂತಿಲ್ಲ; ವೃಂದಾವನ ವಿಶಿಷ್ಟ ದೇವಾಲಯದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ
Image Credit source: Getty Images

ಭಾರತದ ಪ್ರಾಚೀನ ದೇವಾಲಯಗಳು ತಮ್ಮ ವಿಶಿಷ್ಟ ಆಚರಣೆಗಳು ಮತ್ತು ನಿಗೂಢ ಸಂಪ್ರದಾಯಗಳಿಂದಲೇ ಜಗತ್ಪ್ರಸಿದ್ಧಿ ಪಡೆದಿವೆ. ಸಾಮಾನ್ಯವಾಗಿ ಯಾವುದೇ ದೇವಸ್ಥಾನಕ್ಕೆ ಹೋದರೂ ಆರತಿಯ ಸಮಯದಲ್ಲಿ ಗಂಟೆ ಜಾಗಟೆಗಳ ಸದ್ದು, ತಾಳವಾದ್ಯಗಳ ನಿನಾದ ಮುಗಿಲು ಮುಟ್ಟುತ್ತದೆ. ಆದರೆ, ಉತ್ತರ ಪ್ರದೇಶದ ಪವಿತ್ರ ವೃಂದಾವನದಲ್ಲಿರುವ ಪ್ರಸಿದ್ಧ ‘ಬಂಕೆ ಬಿಹಾರಿ ದೇವಾಲಯ’ದಲ್ಲಿ ಮಾತ್ರ ಗಂಟೆಗಳನ್ನು ಬಾರಿಸುವಂತಿಲ್ಲ. ಇದರೊಂದಿಗೆ ದೇವರಿಗೆ ದರ್ಶನ ನೀಡುವಾಗ ಪದೇ ಪದೇ ಪರದೆ ಹಾಕುವ ವಿಚಿತ್ರ ಪದ್ಧತಿಯೂ ಇಲ್ಲಿದೆ. ಈ ರೋಚಕ ಸಂಪ್ರದಾಯಗಳ ಹಿಂದಿನ ಆಧ್ಯಾತ್ಮಿಕ ಹಿನ್ನೆಲೆ ಇಲ್ಲಿದೆ.

ಬಾಲಕೃಷ್ಣನ ನಿದ್ರೆಗೆ ಭಂಗ ಬರಬಾರದೆಂಬ ಮಮಕಾರ:

ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯವು ಶ್ರೀಕೃಷ್ಣನಿಗೆ ಅರ್ಪಿತವಾದ ಅತ್ಯಂತ ಪವಿತ್ರ ಧಾಮಗಳಲ್ಲಿ ಒಂದಾಗಿದೆ. ಇಲ್ಲಿ ಜಗದೊಡೆಯನಾದ ಶ್ರೀಕೃಷ್ಣನು ಕೇವಲ ಭಗವಂತನಾಗಿ ಮಾತ್ರವಲ್ಲದೆ, ಪುಟ್ಟ ‘ಬಾಲಕೃಷ್ಣ’ನ ರೂಪದಲ್ಲಿ ನೆಲೆಸಿದ್ದಾನೆ ಎಂಬುದು ಭಕ್ತರ ಅಚಲ ನಂಬಿಕೆ. ಅದಕ್ಕಾಗಿಯೇ ಈ ದೇವಾಲಯದಲ್ಲಿ ನಡೆಯುವ ಪ್ರತಿಯೊಂದು ಸೇವೆ, ಪೂಜೆ ಮತ್ತು ಆಚರಣೆಗಳನ್ನು ಒಬ್ಬ ಪುಟ್ಟ ಮಗುವನ್ನು ಉಪಚರಿಸುವ ಮಾದರಿಯಲ್ಲೇ ಅತ್ಯಂತ ಮಮಕಾರದಿಂದ ನಡೆಸಲಾಗುತ್ತದೆ.

ದೇವಾಲಯದ ಸಂಪ್ರದಾಯದ ಪ್ರಕಾರ, ಆರತಿಯ ಸಮಯದಲ್ಲಿ ಜೋರಾಗಿ ಗಂಟೆ ಬಾರಿಸಿದರೆ ಅಥವಾ ಶಂಖನಾದ ಮಾಡಿದರೆ ಪುಟ್ಟ ಬಾಲಕೃಷ್ಣನ ವಿಶ್ರಾಂತಿಗೆ ಮತ್ತು ಆತನ ನಿದ್ರೆಗೆ ಭಂಗ ಬರುತ್ತದೆ ಎಂದು ಭಾವಿಸಲಾಗುತ್ತದೆ. ಮಗುವಿಗೆ ತೊಂದರೆಯಾಗಬಾರದು ಎಂಬ ಅಪಾರ ಪ್ರೀತಿಯಿಂದಾಗಿ, ಇಲ್ಲಿ ಗಂಟೆಗಳನ್ನು ಬಾರಿಸದೆ ಅತ್ಯಂತ ನಿಶ್ಯಬ್ದವಾಗಿ, ಭಕ್ತಿಪೂರ್ವಕವಾಗಿ ಕೇವಲ ಕರ್ಪೂರದ ಆರತಿಯನ್ನು ಬೆಳಗಲಾಗುತ್ತದೆ.

ಭಕ್ತನ ಹಿಂದೆ ಓಡಿ ಹೋಗ್ತಾನೆ ಕೃಷ್ಣ! ಏನಿದು ‘ಝಾಂಕಿ ದರ್ಶನ’ದ ರಹಸ್ಯ?

ಬಂಕೆ ಬಿಹಾರಿ ದೇವಾಲಯದಲ್ಲಿ ಭಕ್ತರನ್ನು ಅತ್ಯಂತ ಹೆಚ್ಚು ಆಕರ್ಷಿಸುವ ಮತ್ತೊಂದು ವಿಶೇಷವೆಂದರೆ ದೇವರ ವಿಗ್ರಹದ ಮುಂದೆ ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಪರದೆ (ಪರ್ದಾ) ಎಳೆಯುವುದು. ಭಕ್ತರು ಕಣ್ಣು ತುಂಬಿಕೊಳ್ಳುವಾಗಲೇ ಅರ್ಚಕರು ದಿಢೀರನೆ ಪರದೆ ಹಾಕಿ, ಮತ್ತೆ ಕೆಲ ಕ್ಷಣಗಳ ನಂತರ ಪರದೆ ತೆಗೆದು ದರ್ಶನ ನೀಡುತ್ತಾರೆ. ಇದನ್ನು “ಝಾಂಕಿ ದರ್ಶನ” ಎಂದು ಕರೆಯಲಾಗುತ್ತದೆ.

ಸ್ಥಳೀಯ ಇತಿಹಾಸ ಮತ್ತು ಕಥೆಗಳ ಪ್ರಕಾರ, ಬಂಕೆ ಬಿಹಾರಿ ಸ್ವಾಮಿಯು ತನ್ನ ಭಕ್ತರ ನಿಷ್ಕಲ್ಮಷ ಭಕ್ತಿಗೆ ಬೇಗನೇ ಒಲಿಯುತ್ತಾನೆ. ಯಾವುದೇ ಒಬ್ಬ ಭಕ್ತನು ಭಗವಂತನ ಕಣ್ಣುಗಳನ್ನು ರೆಪ್ಪೆ ಮುಚ್ಚದೆ ನಿರಂತರವಾಗಿ ನೋಡುತ್ತಾ ನಿಂತರೆ, ಕೃಷ್ಣನು ಆ ಭಕ್ತನ ಪ್ರೀತಿಗೆ ಮೋಹಗೊಂಡು ಆತನ ಹಿಂದೆಯೇ ಗುಡಿಯಿಂದ ಹೊರಟು ಹೋಗುತ್ತಾನೆ ಎಂಬ ನಂಬಿಕೆ ಇದೆ. ಈ ಹಿಂದೆ ಇಂತಹ ಕೆಲವು ಪವಾಡಗಳು ನಡೆದಿವೆ ಎಂಬ ಐತಿಹ್ಯವೂ ಇದೆ. ಹಾಗಾಗಿ, ಸ್ವಾಮಿಯು ಗರ್ಭಗುಡಿ ಬಿಟ್ಟು ಕದಲದಂತೆ ತಡೆಯಲು ಅರ್ಚಕರು ಪದೇ ಪದೇ ಪರದೆ ಹಾಕುವ ವಿಶಿಷ್ಟ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಶತಮಾನಗಳ ಇತಿಹಾಸವಿರುವ ಲೀಲಾ ಕ್ಷೇತ್ರ:

ಬಂಕೆ ಬಿಹಾರಿ ದೇವಾಲಯವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ, ಇದು ಶತಮಾನಗಳಿಂದ ಕೋಟ್ಯಂತರ ಭಕ್ತರ ನಂಬಿಕೆಯ ದಾರಿದೀಪವಾಗಿದೆ. ಮಹಾವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನು ತನ್ನ ಬಾಲ್ಯದ ದಿವ್ಯ ಲೀಲೆಗಳನ್ನು ತೋರಿದ ಪವಿತ್ರ ವೃಂದಾವನ ಭೂಮಿಯಲ್ಲಿ ಈ ಕ್ಷೇತ್ರವಿದೆ. ಇಲ್ಲಿಗೆ ಬಂದು ಬಂಕೆ ಬಿಹಾರಿಯ ದರ್ಶನ ಪಡೆದು ಪ್ರಾರ್ಥಿಸುವ ಭಕ್ತರ ಇಷ್ಟಾರ್ಥಗಳು ಶೀಘ್ರದಲ್ಲೇ ಈಡೇರುತ್ತವೆ ಮತ್ತು ಅವರ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂಬುದು ಭಕ್ತರ ಅನುಭವದ ನುಡಿಗಳಾಗಿವೆ.

ಪರಮ ಭಕ್ತಿಯ ಪ್ರತೀಕ:

ಬಂಕೆ ಬಿಹಾರಿ ದೇವಸ್ಥಾನದಲ್ಲಿ ನಡೆಯುವ ಈ ವಿಭಿನ್ನ ಆಚರಣೆಗಳು ಕೇವಲ ಯಾಂತ್ರಿಕ ಸಂಪ್ರದಾಯಗಳಲ್ಲ. ಇವು ಭಕ್ತ ಮತ್ತು ಭಗವಂತನ ನಡುವಿನ ಅತ್ಯಂತ ಆಪ್ತವಾದ, ವಾತ್ಸಲ್ಯ ಭರಿತ ಆಧ್ಯಾತ್ಮಿಕ ಬಾಂಧವ್ಯದ ಸಂಕೇತಗಳಾಗಿವೆ. ದೇವನನ್ನು ದೇವರಾಗಿ ನೋಡದೆ ಸ್ವಂತ ಮಗುವಿನಂತೆ ಪ್ರೀತಿಸುವ ಈ ಮಧುರ ಭಕ್ತಿಯನ್ನು ಕಣ್ಣಾರೆ ಸವಿಯಲೆಂದೇ ಪ್ರತಿ ವರ್ಷ ಜಗತ್ತಿನಾದ್ಯಂತದ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:43 pm, Fri, 26 June 26

Source link

ಮಲೆನಾಡಿನಲ್ಲಿ ಕೈಕೊಟ್ಟ ಮುಂಗಾರು: ಆತಂಕದಲ್ಲಿ ಬೆಳೆಗಾರರು, ಪ್ರವಾಸಿಗರಿಲ್ಲದೆ ಕಳೆಗುಂದಿದ ಕಾಫಿನಾಡು – Kannada News | Monsoon Failure Worries Coffee and Areca Growers as Tourist Footfall Declines

ಚಿಕ್ಕಮಗಳೂರು, ಜೂನ್​​ 26: ಮಳೆಯನಾಡು ಹಾಗೂ ಕಾಫಿನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು (chikkamagaluru) ಈ ಸಂದರ್ಭದಲ್ಲಿ ಹಚ್ಚಹಸಿರು, ಮೋಡ ಕವಿದ ವಾತಾವರಣದಿಂದ ಕಂಗೊಳಿಸುವ ಸಮಯ. ಆದರೆ ಪ್ರಕೃಯ ಮುಸಿಗೆ ಈ ಬಾರಿ ಮುಂಗಾರು ಮಳೆ (Rain) ಸಂಪೂರ್ಣ ಕೈಕೊಟ್ಟಿದೆ. ಮಳೆ ಬದಲಿಗೆ ಸುಡುಬಿಸಿಲು ಆವರಿಸಿಕೊಂಡಿದ್ದು, ಜೂನ್ ತಿಂಗಳಿನಲ್ಲೇ ಬೇಸಿಗೆಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಪ್ರವಾಸಿಗರ ಸುಳಿವಿಲ್ಲ, ಮತ್ತೊಂದೆಡೆ ಅಡಿಕೆ, ಕಾಫಿ, ಮೆಣಸು ಬೆಳೆ ಕುಂಠಿತವಾಗುವ ಆತಂಕ ಬೆಳೆಗಾರರಿಗೆ ಎದುರಾಗಿದೆ.

ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆ: ಬೆಳೆಗಾರರಲ್ಲಿ ಆತಂಕ 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಸುರಿಯಬೇಕಿದ್ದ ಸಮಯದಲ್ಲಿ ಸುಡು ಬಿಸಿಲು ಆವರಿಸಿಕೊಂಡಿದೆ. ಇದರಿಂದ ಕಾಫಿ, ಮೆಣಸು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದೆ. ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿತ್ತು‌. ಮುಂಗಾರು ಪ್ರವೇಶವಾದ ದಿನದಿಂದ ಜಿಲ್ಲೆಯ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲು ಸೇರಿದಂತೆ ಜಿಲ್ಲೆಯಾದ್ಯಂತ ಸರಿಯಾದ ಮಳೆಯಾಗಿಲ್ಲ. ಹೀಗಾಗಿ ಕಾಫಿ ಹೂವಿನ ಮೇಲೆ ಭಾರೀ ಪರಿಣಾಮ ಬೀರಿದೆ. ಇನ್ನು ಅಡಿಕೆ, ತೆಂಗು ಬೆಳೆಗೆ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು

ಕಪ್ಪು ಬಂಗಾರ ಎಂದು ಕರೆಸಿಕೊಳ್ಳುವ ಕರಿ ಮೆಣಸಿಗೆ ಚಿಕ್ಕಮಗಳೂರು ಹೆಸರುವಾಸಿಯಾಗಿದೆ. ಆದರೆ ಮಳೆಯಾದ ಪರಿಣಾಮ ಮೆಣಸಿನ ಬಳ್ಳಿಗಳು ಒಣಗಲು ಆರಂಭಿಸಿದೆ. ಜೊತೆಗೆ ರೋಗ ಕೂಡ ಕಾಣಿಸಿಕೊಳ್ಳುತ್ತಿದೆ. ಹೂ ಬಿಡುವ ಸಮಯದಲ್ಲಿ ಬೇಕಾದಷ್ಟು ಮಳೆ ಆಗುತ್ತಿಲ್ಲ. ಹೀಗಾಗಿ ಮೆಣಸು, ಕಾಫಿಗೆ ಭಾರೀ ಹೊಡೆತ ನೀಡಿದೆ. ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ಅರ್ಧದಷ್ಟು ಬೆಳೆ ಕುಂಠಿತವಾಗಿದ್ದು, ಇಳುವರಿ ಕೂಡ ಕಡಿಮೆಯಾಗಲಿದೆ.

ರೋಗದಿಂದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲು

ಇನ್ನು ಜಿಲ್ಲೆಯಲ್ಲಿ ಕಾಫಿ ಜೊತೆಗೆ ಮೆಣಸು, ಅಡಿಕೆ, ತೆಂಗು ಪ್ರಮುಖ ಬೆಳೆಯಾಗಿದೆ. ಆದರೆ ಬೆಳೆಗಳ ಫಸಲಿಗೆ ಬೇಕಾದಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದರಿಂದ ಫಸಲು ಕುಂಠಿತವಾಗುವುದರ ಜೊತೆಗೆ ಕಾಣಿಸಿಕೊಳ್ಳುತ್ತಿರುವ ರೋಗದಿಂದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.

ಪ್ರವಾಸಿಗರಿಲ್ಲದೇ ಕಳೆಗುಂದಿದ ಪ್ರವಾಸಿ ತಾಣಗಳು

ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಧೋ ಎಂದು ಸುರಿಯುವ ಮಳೆ ಹಾಗೂ ಕಣ್ಣು ಹಾಯಿಸಿದಷ್ಟೂ ಕಾಣುವ ಹಚ್ಚಹಸಿರಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಚಿಕ್ಕಮಗಳೂರಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದರು. ಈ ಸಮಯದಲ್ಲಿ ಪ್ರವಾಸಿ ತಾಣಗಳೆಲ್ಲಾ ಜನರಿಂದ ತುಂಬಿ ತುಳುಕಬೇಕಿತ್ತು. ಆದರೆ, ಈ ಬಾರಿ ಮಳೆಯೇ ಇಲ್ಲದ ಕಾರಣ ಮಲೆನಾಡಿನ ಹಚ್ಚಹಸಿರಿನ ಸೌಂದರ್ಯ ಸಂಪೂರ್ಣ ಮಾಯವಾಗಿದೆ. ಹಸಿರು ಮಾಯವಾಗಿ ಒಣ ಹವೆ ಮೂಡಿರುವುದರಿಂದ ಪ್ರವಾಸಿಗರು ಇತ್ತ ತಲೆಹಾಕುತ್ತಿಲ್ಲ. ಪ್ರವಾಸಿಗರ ಸುಳಿವಿಲ್ಲದೆ ತಾಣಗಳು ಕಳೆಗುಂದಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆ್ಯಪ್​​ ಮೂಲಕ ಕಸ ಸಂಗ್ರಹಣೆ ವಾಹನಗಳ ಮೇಲೆ ನಿಗಾಕ್ಕೆ ಮುಂದಾದ ಜಿಬಿಎ: ಕಾರ್ಯನಿರ್ವಹಣೆ ಹೇಗೆ? – Kannada News | GBA Launches ‘MATRA’ App to Live Track Garbage Vehicles and Eliminate Black Spots in Bengaluru

ಬೆಂಗಳೂರು, ಜೂನ್​​ 26: ನಗರದಲ್ಲಿ ಕಸ ಸಂಗ್ರಹಣೆ ಹಾಗೂ ವಿಲೇವಾರಿಯೇ ಜಿಬಿಎಗೆ ದೊಡ್ಡ ಸವಾಲಾಗಿದೆ. ಇತ್ತ ಬ್ಲಾಕ್ ಸ್ಪಾಟ್ಗಳೂ ನಗರದಲ್ಲಿ ಹೆಚ್ಚಾಗಿದ್ದು, ಮನೆ ಹತ್ತಿರ ಕಸದ ವಾಹನಗಳೇ ಬರೋದಿಲ್ಲ ಅನ್ನೋ ಆರೋಪವೂ ಮೇಲಿಂದ ಮೇಲೆ ಕೆಳಿಬರತೊಡಗಿದೆ. ಹೀಗಾಗಿ ಈ ಸಮಸ್ಯೆಯನ್ನ ಬಗೆಹರಿಸಲು ಜಿಬಿಎ ಹೊಸ ಐಡಿಯಾ ಮಾಡಿದ್ದು, ನಿಗದಿತ ಮಾರ್ಗದಲ್ಲಿ ಕಸದ ವಾಹನಗಳ ಓಡಾಟ ಕಡ್ಡಾಯಗೊಳಿಸಿದೆ. ತಂತ್ರಜ್ಞಾನ ಬಳಸಿಕೊಂಡು ವ್ಯವಸ್ಥೆ ಸುಧಾರಣೆಗೆ ಕಾರ್ಯತಂತ್ರ ರೂಪಿಸಿದೆ.

ಬೆಂಗಳೂರಿನ ಎಲ್ಲ ಮನೆಗಳಿಂದಲೂ ಕಸ ಸಂಗ್ರಹ ಕಾರ್ಯ ಸರಿಯಾಗಿ ನಡೆಯದ ಕಾರಣ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಏನೇ ಕಠಿಣ ಕ್ರಮ ಕೈಗೊಂಡರೂ ಇವುಗಳನ್ನು ತಡೆಯೋದು ಕಷ್ಟ ಎನ್ನುವ ಹಂತಕ್ಕೆ ಪರಿಸ್ಥಿತಿ ತಲುಪಿದೆ. ಹೀಗಾಗಿ ನಿಗದಿತ ಮಾರ್ಗಗಳಲ್ಲಿ ತೆರಳದ ಕಸದ ವಾಹನಗಳ ಮೇಲೆ ನಿಗಾ ಇಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮುಂದಾಗಿದ್ದು, ‘ಮಾತ್ರ’ ಎಂಬ ಆ್ಯಪ್ ಮೂಲಕ ಕಸದ ವಾಹನಗಳ ಚಲನವಲನ ಗಮನಿಸಿಲು ನಿರ್ಧರಿಸಿದೆ.

ಇದನ್ನೂ ಓದಿ: ಕಸ್ತೂರಿ ನಗರ ಪಾರ್ಕ್ ಉಳಿಸಲು ಸ್ಥಳೀಯರ ಹೋರಾಟ; ಜಿಬಿಎ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಕಸದ ವಾಹನಗಳ ಚಾಲಕರ ಮೊಬೈಲ್​​ನಲ್ಲಿ ‘ಮಾತ್ರ’ ಆ್ಯಪ್ ಇನ್ಸ್ಟಾಲ್ ಮಾಡಲಾಗಿದ್ದು, ಅವರು ಕಸ ಸಂಗ್ರಹಣೆ ಮಾಡುವ ಮಾರ್ಗ ತಪ್ಪಿಸಿದರೆ ಈ ಆ್ಯಪ್ ಮೂಲಕ ಅಧಿಕಾರಿಗಳು ತಿಳಿದುಕೊಳ್ಳಬಹುದಾಗಿದೆ. ಈ ವ್ಯವಸ್ಥೆ ಕ್ಲಿಕ್ ಆದರೆ ಉಳಿದ ನಾಲ್ಕೂ ನಗರ ಪಾಲಿಕೆಗಳಿಗೂ ಈ ವ್ಯವಸ್ಥೆಯನ್ನ ವಿಸ್ತರಿಸುವ ಚಿಂತನೆ ಕೂಡ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇನ್ನಾದರೂ ಮನೆ ಮನೆಗಳಿಂದ ಕಸ ಸಂಗ್ರಹ ಸರಿಯಾಗಿ ನಡೆದು, ನಗರ ಗಾರ್ಬೆಜ್ ಸಿಟಿ ಆಗ್ತಿರೋದಕ್ಕೆ ಬ್ರೇಕ್​​ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ.​​

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಬ್ಯಾಟ್ಸ್‌ಮನ್ ಈತ; ಎಬಿ ಡಿವಿಲಿಯರ್ಸ್ – Kannada News | Virat Kohli is Best Ever: AB de Villiers Reveals Top 3 Batsmen and Kohli’s Chase Prowess

ನಿವೃತ್ತಿ ಘೋಷಿಸಿದ ಬಳಿಕ ಕಾಮೆಂಟಟರಿಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಡಿವಿಲಿಯರ್ಸ್, ತಮ್ಮ ಅಭಿಪ್ರಾಯದಲ್ಲಿ ವಿಶ್ವದ ಟಾಪ್ 3 ಬ್ಯಾಟ್ಸ್‌ಮನ್‌ಗಳು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಜೀವನದಲ್ಲಿ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಬಣ್ಣಿಸಿರುವ ಎಬಿ ಡಿವಿಲಿಯರ್ಸ್, ಕೊಹ್ಲಿಯ ಶಾಂತತೆ, ವಿಶೇಷವಾಗಿ ಒತ್ತಡದ ರನ್ ಚೇಸ್‌ಗಳಲ್ಲಿ, ಗುರಿಯನ್ನು ತಲುಪುವಲ್ಲಿ ಅವರ ಕೌಶಲ್ಯ ಮತ್ತು ಇನ್ನಿಂಗ್ಸ್ ಅನ್ನು ನಿಯಂತ್ರಿಸುವ ಅವರ ಸಾಮರ್ಥ್ಯವನ್ನು ಅಸಾಧಾರಣ ಎಂದು ಶ್ಲಾಘಿಸಿದ್ದಾರೆ (PC-PTI).

Source link

‘ನನ್ನ ಗಂಡನಿಗಿಂತ ನಿಮ್ಮನ್ನು ಹೆಚ್ಚು ಪ್ರೀತಿಸುವೆ’ ಎಂದ ಮಹಿಳಾ ಅಭಿಮಾನಿ; ಶಾರುಖ್ ಖಾನ್ ಉತ್ತರ ಏನು? – Kannada News | Shah Rukh Khan witty reply to female fan in Mangalore event Video goes viral

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ (Shah Rukh Khan) ಅವರ ಸಮಯಪ್ರಜ್ಞೆ ಮತ್ತು ಹಾಸ್ಯ ಪ್ರಜ್ಞೆ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ಮಂಗಳೂರಿನಲ್ಲಿ (Mangalore) ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರು ಅನಿರೀಕ್ಷಿತವಾಗಿ ವ್ಯಕ್ತಪಡಿಸಿದ ಪ್ರೀತಿಯ ಮಾತು, ಇಡೀ ಸಂಜೆಯ ಅತ್ಯಂತ ತಮಾಷೆಯ ಕ್ಷಣವಾಗಿ ಬದಲಾಯಿತು. ಆ ಅಭಿಮಾನಿ, ‘ನಾನು ನನ್ನ ಗಂಡನಿಗಿಂತಲೂ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತೇನೆ’ ಎಂದು ವೇದಿಕೆ ಮೇಲಿದ್ದ ಶಾರುಖ್ ಅವರಿಗೆ ಹೇಳಿದರು. ಇದಕ್ಕೆ ಕಿಂಚಿತ್ತೂ ತಡಮಾಡದ ಶಾರುಖ್, ‘ಇದನ್ನೆಲ್ಲಾ ನೀವು ನನಗೆ ಖಾಸಗಿಯಾಗಿ ಹೇಳಬೇಕಿತ್ತು’ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಇಡೀ ಸಭಿಕರು ನಗೆಗಡಲಲ್ಲಿ ತೇಲುವಂತೆ ಮಾಡಿದರು.

ರಿಯಲ್ ಎಸ್ಟೇಟ್ ಕಂಪನಿಯೊಂದು ಮಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾರುಖ್ ಖಾನ್ ಅವರು ಕರ್ನಾಟಕದ ಕರಾವಳಿ ನಗರಿಗೆ ಆಗಮಿಸಿದ್ದರು. ತಮ್ಮ ಸೂಪರ್ ಹಿಟ್ ಹಾಡುಗಳಿಗೆ ಭರ್ಜರಿ ಹೆಜ್ಜೆ ಹಾಕಿದ ಕಿಂಗ್ ಖಾನ್, ನೆರೆದಿದ್ದ ಪ್ರೇಕ್ಷಕರೊಂದಿಗೆ ಸಖತ್ ಆಗಿ ಸಂವಾದ ನಡೆಸಿದರು. ಆ ಸಂದರ್ಭದ ವಿಡಿಯೋಗಳು ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ರಮದ ಹಲವು ವಿಡಿಯೋಗಳು ಹರಿದಾಡುತ್ತಿವೆ. ಅದರಲ್ಲಿ ಮಹಿಳಾ ಅಭಿಮಾನಿಯೊಬ್ಬರು ತಮಗಿರುವ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದಾಗ, ಶಾರುಖ್ ಖಾನ್ ತಮ್ಮದೇ ಆದ ಸಿಗ್ನೇಚರ್ ಸ್ಟೈಲ್‌ನಲ್ಲಿ ನಗುತ್ತಾ, ‘ಯೇ ಸಬ್ ಅಕೇಲೆ ಮೇ ಬತಾನಾ ಚಾಹಿಯೇ ನಾ (ಇದೆಲ್ಲವನ್ನೂ ರಹಸ್ಯವಾಗಿ ಒಂಟಿಯಾಗಿ ಇದ್ದಾಗ ಹೇಳಬೇಕಿತ್ತು)’ ಎಂದು ಹಿಂದಿಯಲ್ಲಿ ಕಾಲೆಳೆದರು.

ನಂತರ ಗಂಭೀರವಾಗಿ ಮಾತನಾಡಿದ ಅವರು, ‘ಇದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಎಂದು ನನಗೆ ಗೊತ್ತು. ನಿಮ್ಮ ಭಾವನೆಗಳು ನನಗೆ ಅರ್ಥವಾಗುತ್ತವೆ. ನಿಮ್ಮ ಪತಿಗೂ ಇದು ಖಂಡಿತ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಿಮ್ಮ ಪತಿ ಹಾಗೂ ನಿಮ್ಮ ಇಡೀ ಕುಟುಂಬಕ್ಕೆ ನನ್ನ ಪ್ರೀತಿ. ತುಂಬಾ ಧನ್ಯವಾದಗಳು’ ಎಂದು ಅಭಿಮಾನಿಯ ಗೌರವವನ್ನು ಹೆಚ್ಚಿಸಿದರು.

ಇದನ್ನೂ ಓದಿ: ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ

ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ‘ನಮಸ್ಕಾರ’ ಎಂದು ಮಾತು ಆರಂಭಿಸಿದ ಶಾರುಖ್, ಕರಾವಳಿ ಜನರ ಪ್ರೀತಿಗೆ ಮನಸೋತರು. ‘ಧನ್ಯವಾದಗಳು ಮಂಗಳೂರು! ನಾನು ಇಲ್ಲಿಗೆ ಬರುವಾಗ ಯಾವ ರೀತಿಯ ಪ್ರತಿಕ್ರಿಯೆ ಸಿಗಬಹುದು ಎಂದು ತಿಳಿದಿರಲಿಲ್ಲ. ಆದರೆ ಏರ್‌ಪೋರ್ಟ್‌ನಿಂದ ಹಿಡಿದು ಇಲ್ಲಿಯವರೆಗೆ ನೀವು ತೋರಿದ ಪ್ರೀತಿ, ಉತ್ಸಾಹ ಮತ್ತು ಒಳ್ಳೆಯತನ ನಿಜಕ್ಕೂ ಅದ್ಭುತವಾಗಿತ್ತು’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಟ್ಟ ಹತ್ತುವಾಗ ಉಸಿರಾಡಲು ಕಷ್ಟವಾದರೆ ಈ ಸರಳ ಕ್ರಮ ನಿಮಗೆ ಸಹಾಯ ಮಾಡಬಹುದು – Kannada News | Safe Hill Station Travel: How To Handle Low Oxygen Levels

ಬೆಟ್ಟ ಪ್ರದೇಶಗಳಿಗೆ ಪ್ರವಾಸ (Travel) ಹೋಗುವುದು ಬಹುತೇಕರಿಗೆ ಇಷ್ಟ. ಆದರೆ ಎತ್ತರದ ಪ್ರದೇಶಗಳಿಗೆ ಹೋದ ನಂತರ ಕೆಲವರಿಗೆ ಉಸಿರಾಟದ ತೊಂದರೆ, ಆಯಾಸ, ತಲೆಸುತ್ತು ಅಥವಾ ದೌರ್ಬಲ್ಯ ಕಾಣಿಸಬಹುದು. ಎತ್ತರ ಹೆಚ್ಚಾದಂತೆ ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದರಿಂದ ದೇಹವು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಕೆಲವರು ಇದಕ್ಕೆ ಹೆದರಿ ಏನು ಮಾಡಬೇಕು ಎಂದು ತಿಳಿಯದೆಯೇ ಪ್ಯಾನಿಕ್ ಆಗುತ್ತಾರೆ. ಹಾಗಾಗಿ ಉಸಿರಾಟದ ತೊಂದರೆ (Breathing Problems) ಉಂಟಾದರೆ ಏನು ಮಾಡಬೇಕು, ಈ ಸಮಯದಲ್ಲಿ ಏನನ್ನು ಮಾಡಬಾರದು ಎಂಬುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಉಸಿರಾಟದ ತೊಂದರೆ ಉಂಟಾದರೆ ಏನು ಮಾಡಬೇಕು?

ಬೆಟ್ಟ ಪ್ರದೇಶದಲ್ಲಿ ಉಸಿರಾಟದ ತೊಂದರೆ ಕಂಡುಬಂದರೆ ಮೊದಲು ಆತಂಕಪಡಬೇಡಿ. ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ. ವೇಗವಾಗಿ ನಡೆಯುವುದು, ಓಡುವುದು ಅಥವಾ ಹೆಚ್ಚು ದೈಹಿಕ ಶ್ರಮ ಮಾಡುವುದನ್ನು ತಪ್ಪಿಸಿ. ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಲು ಪ್ರಯತ್ನಿಸಿ. ಸಾಕಷ್ಟು ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿರಿಸಿ. ಸಾಧ್ಯವಾದರೆ ಅಲ್ಲಲ್ಲಿ ಕುಳಿತು ವಿಶ್ರಾಂತಿ ಪಡೆಯಿರಿ.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಉಸಿರಾಟದ ತೊಂದರೆಯೊಂದಿಗೆ ಎದೆನೋವು, ತೀವ್ರ ಆಯಾಸ, ತುಟಿ ಅಥವಾ ಉಗುರುಗಳು ನೀಲಿ ಬಣ್ಣಕ್ಕೆ ತಿರುಗುವುದು, ತೀವ್ರ ತಲೆನೋವು, ಗೊಂದಲ, ನಿರಂತರ ತಲೆಸುತ್ತು ಅಥವಾ ನಡೆಯಲು ಕಷ್ಟವಾಗುವುದು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಇವು ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು.

ಇದನ್ನೂ ಓದಿ: ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ

ಪ್ರವಾಸಕ್ಕೆ ಹೋಗುವಾಗ ಏನನ್ನು ಮಾಡಬಾರದು

ಬೆಟ್ಟ ಪ್ರದೇಶಗಳಿಗೆ ಯಾವುದೇ ಸಿದ್ಧತೆ ಇಲ್ಲದೆ ಹೋಗುವುದು, ಒಂದೇ ದಿನದಲ್ಲಿ ಹೆಚ್ಚಿನ ಎತ್ತರಕ್ಕೆ ಏರುವುದು, ಸಾಕಷ್ಟು ನೀರು ಕುಡಿಯದೇ ಇರುವುದು ಹಾಗೂ ಊಟ ಬಿಟ್ಟು ಹೋಗುವುದು ಸಮಸ್ಯೆಯನ್ನು ಹೆಚ್ಚಿಸಬಹುದು. ಮದ್ಯಪಾನ ಮತ್ತು ಧೂಮಪಾನ ಕೂಡ ದೇಹದಲ್ಲಿನ ಆಮ್ಲಜನಕದ ಲಭ್ಯತೆಯನ್ನು ಕಡಿಮೆ ಮಾಡುತ್ತವೆ.

ಸುರಕ್ಷಿತ ಪ್ರವಾಸಕ್ಕಾಗಿ ಸಲಹೆಗಳು

ಮಕ್ಕಳು, ವಯೋವೃದ್ಧರು ಹಾಗೂ ಹೃದಯ ಅಥವಾ ಶ್ವಾಸಕೋಶದ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ದೇಹದ ಸೂಚನೆಗಳನ್ನು ಗಮನಿಸಿ, ಅಗತ್ಯವಿದ್ದರೆ ವಿಶ್ರಾಂತಿ ಪಡೆದು ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ ಪ್ರಯಾಣಕ್ಕೆ ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಗೆ ಲಗ್ಗೆ ಇಟ್ಟ ರಿತೇಶ್ ದೇಶ್‌ಮುಖ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ರಾಜಾ ಶಿವಾಜಿ’ – Kannada News | Raja Shivaji Riteish Deshmukh Marathi movie Netflix OTT release date where to watch

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ನಂತರ, ರಿತೇಶ್ ದೇಶ್‌ಮುಖ್ (Riteish Deshmukh) ನಟನೆಯ ಐತಿಹಾಸಿಕ ಕಥಾಹಂದರ ಆ್ಯಕ್ಷನ್ ಡ್ರಾಮಾ ಚಿತ್ರ ‘ರಾಜಾ ಶಿವಾಜಿ’ (Raja Shivaji) ಕೊನೆಗೂ ಡಿಜಿಟಲ್ ಜಗತ್ತಿಗೆ ಪಾದಾರ್ಪಣೆ ಮಾಡಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಅವರ ಭವ್ಯ ಇತಿಹಾಸವನ್ನು ಬಿಂಬಿಸುವ ಈ ಚಿತ್ರವನ್ನು ಈಗ ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಈ ಚಿತ್ರವನ್ನು ಯಾವ ಒಟಿಟಿಯಲ್ಲಿ (OTT) ನೋಡಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಶುಕ್ರವಾರ (ಜೂನ್ 26) ಪ್ರಮುಖ ಒಟಿಟಿ ಸಂಸ್ಥೆಯಾದ ನೆಟ್‌ಫ್ಲಿಕ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಬಿಡುಗಡೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್, ‘ಬಂಡಾಯ ಏಳಲು ಬರುತ್ತಿದ್ದಾರೆ ರಾಜೇ… ರಾಜಾ ಶಿವಾಜಿ ಚಿತ್ರವನ್ನು ಈಗ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿ’ ಎಂದು ಬರೆದುಕೊಂಡಿದೆ. ಪ್ರಸ್ತುತ ಈ ಸಿನಿಮಾ ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ.

ಸ್ವತಃ ರಿತೇಶ್ ದೇಶ್‌ಮುಖ್ ಅವರೇ ನಿರ್ದೇಶಿಸಿರುವ ಈ ಚಿತ್ರವನ್ನು ‘ಮುಂಬೈ ಫಿಲ್ಮ್ ಕಂಪನಿ’ ಮತ್ತು ‘ಜಿಯೋ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಜೆನಿಲಿಯಾ ದೇಶ್‌ಮುಖ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಿತೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇವರೊಂದಿಗೆ ಸಂಜಯ್ ದತ್, ಅಭಿಷೇಕ್ ಬಚ್ಚನ್, ಮಹೇಶ್ ಮಂಜ್ರೇಕರ್, ಸಚಿನ್ ಖೇಡೇಕರ್, ಭಾಗ್ಯಶ್ರೀ, ಫರ್ದೀನ್ ಖಾನ್, ಜಿತೇಂದ್ರ ಜೋಶಿ, ಅಮೋಲ್ ಗುಪ್ತೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸುಮಾರು 75 ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 117 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಭರ್ಜರಿ ಗಳಿಕೆಯೊಂದಿಗೆ ‘ರಾಜಾ ಶಿವಾಜಿ’ ಚಿತ್ರವು ‘ಸೈರಾಟ್’ ಸಿನಿಮಾದ ಲೈಫ್​ ಟೈಮ್ ಕಲೆಕ್ಷನ್ (110 ಕೋಟಿ ರೂಪಾಯಿ) ದಾಖಲೆಯನ್ನು ಮುರಿದು, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಮರಾಠಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿದೇಶಗಳಲ್ಲಿ ಬಿಡುಗಡೆಯಾಗದಿದ್ದರೂ ಈ ಮಟ್ಟದ ಯಶಸ್ಸು ಗಳಿಸಿರುವುದು ಚಿತ್ರರಂಗವನ್ನು ಬೆರಗುಗೊಳಿಸಿದೆ.

ಇದನ್ನೂ ಓದಿ: ಶಿವಾಜಿ ಚಿತ್ರವಿರುವ ಟಿ-ಶರ್ಟ್ ಧರಿಸಿ ರಿತೇಶ್ ದೇಶ್‌ಮುಖ್ ಪಾರ್ಟಿ; ಕ್ಷಮೆ ಕೇಳಿದ ನಟ

ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ರಿತೇಶ್ ದೇಶ್‌ಮುಖ್, ‘ಚಿತ್ರವು ಪ್ರೇಕ್ಷಕರೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಜನರು ತಮ್ಮ ಇಡೀ ಕುಟುಂಬ, ಅಜ್ಜ-ಅಜ್ಜಿಯಂದಿರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದ್ದಾರೆ. ಅನೇಕರು ತಮ್ಮ ಪುಟ್ಟ ಮಕ್ಕಳ ಮೊದಲ ಸಿನಿಮಾ ‘ರಾಜಾ ಶಿವಾಜಿ’ ಆಗಿರಬೇಕು ಎಂದು ಬಯಸುತ್ತಿದ್ದಾರೆ. ಚಿತ್ರಮಂದಿರದಿಂದ ಹೊರಬಂದ ನಂತರ ಪ್ರತಿಯೊಬ್ಬರೂ ಭಾವುಕರಾಗಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ನಾಳೆಯಿಂದ 2 ದಿನ ಕರ್ನಾಟಕದ ಉತ್ತರ ಭಾಗದಲ್ಲೂ ಮಳೆಯಬ್ಬರ – Kannada News | Karnataka Weather Forecast: Rain Likely in North and Kalyana Karnataka Districts From Tomorrow

ಬೆಂಗಳೂರು, ಜೂನ್​​ 26: ಕರ್ನಾಟಕದಲ್ಲಿ ಮುಂಗಾರು ಮತ್ತೆ ಬಿರುಸು ಪಡೆದಿದ್ದು, ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಮುಂಗಾರು ಚಟುವಟಿಕೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಜನರು ಎಚ್ಚರಿಕೆಯಿಂದಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಸೂಚಿಸಿದ್ದಾರೆ.

ಕರ್ನಾಟಕದ ಉತ್ತರ ಭಾಗದಲ್ಲಿ ಮಳೆ

ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಉತ್ತರ ಭಾಗಕ್ಕೂ ವ್ಯಾಪಿಸುವ ಮುನ್ಸೂಚನೆ ಸಿಕ್ಕಿದೆ. ಜೂನ್​​ 27ರಂದು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿ ಹಲವೆಡೆ ವರ್ಷಧಾರೆಯನ್ನು ನಿರೀಕ್ಷಿಸಲಾಗಿದೆ. ಬೀದರ್​​, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಮಳೆ ಮುನ್ಸೂಚನೆ ನೀಡಲಾಗಿದೆ. ಈ ಭಾಗದಲ್ಲಿ ಮುಂದಿನ 2 ದಿನಗಳ ಕಾಲ ಇದೇ ರೀತಿಯ ವಾತಾವರಣ ಅಂದಾಜಿಸಲಾಗಿದೆ.

ಇದನ್ನೂ ಓದಿ: ಬರಿದಾದ ಮೂರು ರಾಜ್ಯಗಳ ಜೀವನಾಡಿ; ಹೊಸ ಕ್ರಸ್ಟ್​​ಗೇಟ್​​ಗಳನ್ನು ಕಂಡ ತುಂಗಭದ್ರಾ ಜಲಾಶಯವೀಗ ಭಣಭಣ

ಚಡಚಣದಲ್ಲಿ ಅತ್ಯಧಿಕ ಮಳೆ

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಜೂನ್​​ 25ರ ಬೆಳಿಗ್ಗೆ 8.30ರಿಂದ ಜೂನ್​​ 26 ಬೆಳಿಗ್ಗೆ ಅದೇ ಸಮಯದವರೆಗೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ 72.2 ಮಿಲಿ ಮೀಟರ್​​ ಮಳೆಯಾಗಿದ್ದು, ರಾಜ್ಯದಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಜಲವಳ್ಳಿಯಲ್ಲಿ 70.5 ಮಿಲಿ ಮೀಟರ್​​, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ 50.5 ಮಿಲಿ ಮೀಟರ್ ಹಾಗೆಯೇ ಉಡುಪಿ ಜಿಲ್ಲೆಯ ಕಾರ್ಕಳದ ಇನ್ನಾದಲ್ಲಿ 46 ಮಿಲಿ ಮೀಟರ್​​ ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:54 pm, Fri, 26 June 26

Source link

ಜಾಗತಿಕ ವ್ಯಾಪಾರ ವರ್ಷಕ್ಕೆ ಶೇ. 5 ಏರುತ್ತದೆ, ನೀವು ಶೇ. 5-10 ಹೆಚ್ಚಳಕ್ಕೆ ತೃಪ್ತರಾಗಬೇಡಿ: ಭಾರತೀಯ ಉದ್ಯಮಗಳಿಗೆ ಪಿಯೂಶ್ ಗೋಯಲ್ ಕರೆ – Kannada News | Don’t be satisfied with 5 10pc export growth, Piyush Goyal tells Indian industry to scale up

ಲಂಡನ್, ಜೂನ್ 26: ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತದ ರಫ್ತು ವಲಯವು ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ, ಕಾರ್ಪೊರೇಟ್ ಕಂಪನಿಗಳ ರಫ್ತು ಪ್ರಗತಿ ಬಗ್ಗೆ ಸರ್ಕಾರಕ್ಕೆ ಹೆಚ್ಚು ಸಮಾಧಾನ ಇದ್ದಂತಿಲ್ಲ. ಲಂಡನ್​ನಲ್ಲಿ ವಾಣಿಜ್ಯ ಸಮಾವೇಶವೊಂದರಲ್ಲಿ (Business Plenary Session) ಮಾತನಾಡುತ್ತಿದ್ದ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ (Piyush Goyal) ಪ್ರಕಾರ, ಶೇ. 5-10 ರಫ್ತು ಸಾಧಾರಣ ಏರಿಕೆಯಷ್ಟೇ. ‘ಭಾರತೀಯ ಉದ್ಯಮಗಳು ಕೇವಲ ಶೇಕಡಾ 5 ರಿಂದ 10 ರಷ್ಟು ವಾರ್ಷಿಕ ರಫ್ತು ಬೆಳವಣಿಗೆಯನ್ನು ಕಂಡು “ಆರಾಮವಾಗಿ” (Comfortable) ಇರಬಾರದು; ಬದಲಿಗೆ ಇನ್ನೂ ದೊಡ್ಡ ಗುರಿಗಳನ್ನು ಹೊಂದಬೇಕು’ ಎಂದು ಸಚಿವರು ಆಗ್ರಹಿಸಿದ್ದಾರೆ.

ಜಾಗತಿಕ ವ್ಯಾಪಾರ ವಹಿವಾಟು ವಾರ್ಷಿಕವಾಗಿ ಶೇ. 4-5ರ ದರದಲ್ಲಿ ಹೆಚ್ಚುತ್ತದೆ. ಹೀಗಿರುವ ಭಾರತದ ಉದ್ದಿಮೆಗಳು ಐದು, ಏಳು, ಹತ್ತು ಪ್ರತಿಶತ ರಫ್ತು ಹೆಚ್ಚಳಕ್ಕೆ ತೃಪ್ತಿ ಪಟ್ಟುಕೊಂಡರೆ ಹೇಗೆ? ಇಷ್ಟು ಸಣ್ಣ ಮೊತ್ತಕ್ಕೆ ತೃಪ್ತಿ ಪಟ್ಟುಕೊಂಡರೆ ದೇಶದ ಸಾಮರ್ಥ್ಯಕ್ಕೆ ತಕ್ಕಂತಹ ಸಾಧನೆ ಬರಲು ಆಗುವುದಿಲ್ಲ ಎನ್ನುವುದು ಗೋಯಲ್ ಅವರ ಅನಿಸಿಕೆ. ಭಾರತವು ಪ್ರಸ್ತುತ ವರ್ಷದಲ್ಲಿ $1 ಟ್ರಿಲಿಯನ್ ರಫ್ತು ಗುರಿಯನ್ನು ತಲುಪಲು ಯತ್ನಿಸುತ್ತಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಇದನ್ನು $2 ಟ್ರಿಲಿಯನ್ ಜಾಗತಿಕ ರಫ್ತು ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಇದನ್ನು ಸಾಧಿಸಲು ಉದ್ಯಮಗಳು ತಮ್ಮ ವೇಗವನ್ನು ಹೆಚ್ಚಿಸಬೇಕು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರಿಯಾದ ಶೇರು ಮಾರುಕಟ್ಟೆ ಧೂಳೀಪಟ; ಮಹಾಕುಸಿತಕ್ಕೆ ಕೋಸ್ಪಿ ಕಕ್ಕಾಬಿಕ್ಕಿ; ಜಪಾನ್, ಚೀನಾ ಮಾರುಕಟ್ಟೆಗಳೂ ತತ್ತರ

ಪ್ರಸ್ತುತ ಭಾರತದ ರಫ್ತು ಪ್ರಗತಿ

ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್ 1 ರಿಂದ ಜೂನ್ 14 ರವರೆಗಿನ ಅವಧಿಯಲ್ಲಿ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಸರಕು ರಫ್ತು (Merchandise Exports) ಶೇ. 15 ರಷ್ಟು ಭಾರಿ ಬೆಳವಣಿಗೆ ದಾಖಲಿಸಿದೆ. ಮೇ ತಿಂಗಳಿನಲ್ಲಿ ರಫ್ತು ಆರು ತಿಂಗಳ ಗರಿಷ್ಠ ಮಟ್ಟವಾದ 18% ಕ್ಕೆ ($45.2 ಬಿಲಿಯನ್) ತಲುಪಿತ್ತು.

ಸ್ವದೇಶಿ ಮತ್ತು ಆಮದು ಪರ್ಯಾಯ

ಭಾರತದಲ್ಲಿ ಮಧ್ಯಮ ವರ್ಗದ ವಿಸ್ತರಣೆಯಿಂದಾಗಿ ಬಳಕೆ (Consumption) ವೇಗವಾಗಿ ಬೆಳೆಯುತ್ತಿದೆ. ದೇಶದ ಉದ್ಯಮಗಳು ಈ ಬೇಡಿಕೆಯನ್ನು ಸ್ಥಳೀಯವಾಗಿಯೇ ಪೂರೈಸದಿದ್ದರೆ ಆಮದು ಹೆಚ್ಚಾಗಲಿದೆ. ಹೀಗಾಗಿ, ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಮತ್ತು ಪ್ರಸ್ತುತ ಆಮದು ಮಾಡಿಕೊಳ್ಳುತ್ತಿರುವ ಬಂಡವಾಳ ಸರಕುಗಳನ್ನು (Capital Goods) ಭಾರತದಲ್ಲೇ ತಯಾರಿಸಲು ಮುಂದಾಗಬೇಕು ಎಂದು ವಾಣಿಜ್ಯ ಸಚಿವರು ಕರೆ ನೀಡಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದಗಳ (FTA) ಲಾಭ

ಕಳೆದ ಮೂರೂವರೆ ವರ್ಷಗಳಲ್ಲಿ ಭಾರತವು ಸುಮಾರು 38 ಮುಂದುವರಿದ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆ ನಡೆಸಿದೆ. ಇದು ಭಾರತೀಯ ರಫ್ತುದಾರರಿಗೆ ಕಡಿಮೆ ಆಮದು ಸುಂಕದೊಂದಿಗೆ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ದೊಡ್ಡ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಪಿಯೂಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವೋಕ್ಸ್‌ವ್ಯಾಗನ್ ಶಾಕ್; ಒಂದು ಲಕ್ಷ ಉದ್ಯೋಗ ಕಡಿತ; ಪ್ರಮುಖ ಕಾರ್ಖಾನೆಗಳನ್ನೇ ಮುಚ್ಚಲುಹೊರಟ ವಾಹನ ತಯಾರಕ ಸಂಸ್ಥೆ

ಜಾಗತಿಕ ಮಾರುಕಟ್ಟೆಯನ್ನು ಆಳಬೇಕಾದರೆ ಭಾರತೀಯ ಉತ್ಪನ್ನಗಳ ಗುಣಮಟ್ಟ (Quality), ಪ್ಯಾಕೇಜಿಂಗ್ ಮತ್ತು ಉತ್ಪಾದಕತೆ (Productivity) ಅತ್ಯುತ್ತಮ ಮಟ್ಟದಲ್ಲಿರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಗುಣಮಟ್ಟದ ಮಾನದಂಡಗಳಿಗೆ ಒತ್ತು ನೀಡುತ್ತಾರೆ ಎಂಬುದನ್ನು ಸಚಿವರು ನೆನಪಿಸಿದ್ದಾರೆ.

ಕೃಷಿ ಮತ್ತು ನವೋದ್ಯಮಗಳ ಪಾತ್ರ

ಭಾರತದ ಕೃಷಿ ಮತ್ತು ಮತ್ಸ್ಯೋದ್ಯಮ (Fisheries) ರಫ್ತು ಈಗಾಗಲೇ ಸುಮಾರು ₹5 ಲಕ್ಷ ಕೋಟಿ ದಾಟಿದೆ. ಆದರೆ, ಇದರಲ್ಲಿ ಮೌಲ್ಯವರ್ಧನೆ (Value Addition) ಕಡಿಮೆಯಿದೆ. ಯುವ ಉದ್ಯಮಿಗಳು ಮತ್ತು ನವೋದ್ಯಮಗಳು (Startups) ಆಹಾರ ಸಂಸ್ಕರಣಾ (Food Processing) ಘಟಕಗಳನ್ನು ಸ್ಥಾಪಿಸುವ ಮೂಲಕ ಈ ವಲಯದಲ್ಲಿ ದೊಡ್ಡ ಕ್ರಾಂತಿ ಮಾಡಬಹುದು ಎಂದು ಗೋಯಲ್ ಆಶಯ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:40 pm, Fri, 26 June 26

Source link

‘ಒಂದು ಚಾನ್ಸ್ ಕೊಡಿ’: ಬಿಗ್​​ಬಾಸ್​​ ಎಂಟ್ರಿಗೆ ಅವಕಾಶ ಕೇಳಿದ ಪೊಲೀಸ್ ಅಧಿಕಾರಿ – Kannada News | Police officer asks chance to participate in Telugu Bigg Boss 10

ಕನ್ನಡ ಬಿಗ್​​ಬಾಸ್ (Kannada Bigg Boss) ಮತ್ತು ಪೊಲೀಸರಿಗೆ ಬಲು ಆಪ್ತ ನಂಟು. ಆಗೊಮ್ಮೆ, ಈಗೊಮ್ಮೆ ಪೊಲೀಸರು ಬಿಗ್​​ಬಾಸ್​​ ಶೋಗೆ ನೊಟೀಸ್ ನೀಡುವುದು, ಬಿಗ್​​ಬಾಸ್ ಮನೆ ಪ್ರವೇಶಿಸಿ ಸ್ಪರ್ಧಿಯ ಬಂಧಿಸುವುದು ಸಹ ನಡೆದಿದೆ. ಸೀಸನ್​​ ಒಂದರಲ್ಲಿ ಸ್ಪರ್ಧಿ ಆಗಿದ್ದ ವರ್ತೂರು ಸಂತೋಶ್ ಅನ್ನು ಬಂಧಿಸಿದ್ದರು, ಕೆಲ ಸಮಯದಲ್ಲಿ ನೊಟೀಸ್​​ಗಳನ್ನು ಸಹ ನೀಡಿದ್ದರು. ಆದರೆ ಇದೀಗ ಪೊಲೀಸ್ ಅಧಿಕಾರಿಯೊಬ್ಬರು, ತನ್ನನ್ನು ಈ ಬಾರಿ ಬಿಗ್​​ಬಾಸ್ ಸ್ಪರ್ಧಿಯಾಗಿ ಸೇರಿಸಿಕೊಳ್ಳಿ, ನನಗೆ ಬಿಗ್​​ಬಾಸ್ ಸ್ಪರ್ಧಿಯಾಗಿ ಹೋಗಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸಮವಸ್ತ್ರ ಧರಿಸಿಕೊಂಡು ವಿಡಿಯೋ ಸಹ ಮಾಡಿ ಹಂಚಿಕೊಂಡಿದ್ದಾರೆ. ಆದರೆ ಇದು ನಡೆದಿರುವುದು ಕರ್ನಾಟಕದಲ್ಲಿ ಅಲ್ಲ ಬದಲಿಗೆ ನೆರೆಯ ಆಂಧ್ರ ಪ್ರದೇಶದಲ್ಲಿ.

ತೆಲುಗು ಬಿಗ್​​ಬಾಸ್​​ನ ಹೊಸ ಸೀಸನ್ ಆರಂಭವಾಗುತ್ತಿದೆ. ಇದೀಗ ಸ್ಪರ್ಧಿಗಳ ಆಯ್ಕೆ ಚಾಲ್ತಿಯಲ್ಲಿದೆ. ಕನ್ನಡದಲ್ಲಿ ಈ ಬಾರಿ ಜನ ಸಾಮಾನ್ಯರನ್ನು ಬಿಗ್​​ಬಾಸ್ ಮನೆಗೆ ಸ್ಪರ್ಧಿಗಳಾಗಿ ಕಳಿಸಲಾಗುತ್ತಿದೆ, ಅಂತೆಯೇ ತೆಲುಗು ಬಿಗ್​​ಬಾಸ್​​ನಲ್ಲಿ ಸಹ ಸೆಲೆಬ್ರಿಟಿಗಳಲ್ಲದವರಿಗೂ ಅವಕಾಶ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರು, ತಮ್ಮನ್ನು ಬಿಗ್​​ಬಾಸ್ ಮನೆಗೆ ಕಳಿಸಿ ಎಂದು ಮನವಿ ಮಾಡುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆ, ಗದಿವೇಮುಲದ ಪೊಲೀಸ್ ಠಾಣೆಯ ಎಸ್​​ಐ ಆಗಿರುವ ನಾಗಾರ್ಜುನ ರೆಡ್ಡಿ ಎಂಬುವರು ಇದೀಗ ತೆಲುಗು ಬಿಗ್​​ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಅವಕಾಶ ನೀಡಬೇಕು ಎಂದು ಬಿಗ್​​ಬಾಸ್ ಆಯೋಜಕರಲ್ಲಿ ಕೇಳಿ ಕೊಂಡಿದ್ದಾರೆ. ಸಮವಸ್ತ್ರ ಧರಿಸಿ ವಿಡಿಯೋ ಮಾಡಿರುವ ನಂದೀಶ್ ರೆಡ್ಡಿ, ‘ಬಿಗ್​​ಬಾಸ್ ಮನೆಗೆ ಹೋಗಿ, ನನ್ನ ನಿಜ ವ್ಯಕ್ತಿತ್ವ, ನನ್ನಲ್ಲಿರುವ ಪ್ರತಿಭೆಯನ್ನು ಜನರಿಗೆ ತೋರಿಸಬೇಕು ಎಂಬುದು ನನ್ನ ಆಸೆ, ಹಾಗಾಗಿ ನನಗೆ ಒಂದು ಅವಕಾಶ ಕೊಡಬೇಕು’ ಎಂದು ಆಯೋಜಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು

‘ತೆಲುಗು ಬಿಗ್​​ಬಾಸ್ ಕೇವಲ ಸಿನಿಮಾ ಸೆಲೆಬ್ರಿಟಿಗಳಿಗೆ ಮಾತ್ರವೇ ಅಲ್ಲದೆ ಗ್ರಾಮೀಣ ಪ್ರತಿಭಾವಂತರಿಗೂ ಸಹ ಅವಕಾಶ ನೀಡುತ್ತಾ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ. ನಾನೂ ಸಹ ಗ್ರಾಮೀಣ ಭಾಗದವನಾಗಿದ್ದು, ನನಗೆ ಅವಕಾಶ ಕೊಟ್ಟಲ್ಲಿ, ನನ್ನ ಧೈರ್ಯ, ಆತ್ಮವಿಶ್ವಾಸ ಮತ್ತು ಪ್ರತಿಭೆಯಿಂದ ನಾನು ಆಟವಾಡಿ ರಾಜ್ಯದ ಜನರ ಗಮನ ಸೆಳೆಯುತ್ತೇನೆ. ವಿಜೇತನಾಗುವ ವಿಶ್ವಾಸವೂ ನನ್ನಲ್ಲಿದೆ’ ಎಂದಿದ್ದಾರೆ.

ಇದೀಗ ಈ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ಕೆಲವರು ಈ ಅಧಿಕಾರಿಗೆ ಅವಕಾಶ ಕೊಡಬೇಕು ಎಂದು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಹೀಗೆ ಸಮವಸ್ತ್ರ ಧರಿಸಿ ವಿಡಿಯೋ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳು ಹೀಗೆ ಖಾಸಗಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಪ್ರಶ್ನೆಯನ್ನು ಸಹ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version