ವಿಗ್ ಧರಿಸಿದ್ದರಿಂದಲೇ ಕೇತನ್​ನನ್ನು ಕೊಂದಳಾ ಸಿಯಾ?; ಮಹಾರಾಷ್ಟ್ರ ಸಿಎಂ ಭೇಟಿ ಬಳಿಕ ತಂದೆಯ ಶಾಕಿಂಗ್ ಹೇಳಿಕೆ – Kannada News | Did Siya Goyal Killed Ketan Agarwal Because He Wore Wig know what Father said After Meeting Maharashtra CM

ಮುಂಬೈ, ಜೂನ್ 26: ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೇತನ್ ಅಗರ್​ವಾಲ್ (Ketan Agarwal) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸದೊಂದು ಆಘಾತಕಾರಿ ತಿರುವು ಸಿಕ್ಕಿದೆ. ಮೃತ ಕೇತನ್ ಅಗರ್​ವಾಲ್ ಅವರ ತಂದೆ ಮಹಾರಾಷ್ಟ್ರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಎದುರು ಅತ್ಯಂತ ಭಯಾನಕ ಮತ್ತು ಆತಂಕಕಾರಿ ಆರೋಪ ಮಾಡಿದ್ದಾರೆ. “ಆರೋಪಿ ಸಿಯಾ ಗೋಯಲ್, ನನ್ನ ಮಗ ಕೇತನ್ ತಲೆಗೆ ವಿಗ್ ಧರಿಸುತ್ತಿದ್ದ ಎಂಬ ಕಾರಣಕ್ಕಾಗಿಯೇ ಆತನನ್ನು ಹತ್ಯೆ ಮಾಡಿದಳೇ?” ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವು ಕೇವಲ ವೈಯಕ್ತಿಕ ದ್ವೇಷವೋ ಅಥವಾ ಇದರ ಹಿಂದೆ ಬೇರೆ ಏನಾದರೂ ಆಳವಾದ ಕಾರಣವಿದೆಯೇ ಎಂಬ ತನಿಖೆ ನಡೆಯುತ್ತಿರುವಾಗಲೇ ತಂದೆಯ ಈ ಹೇಳಿಕೆ ತಲ್ಲಣ ಮೂಡಿಸಿದೆ. ಕೇತನ್ ಅವರ ತಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಪ್ರಕರಣದ ತುರ್ತು ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದರು. ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೇತನ್ ಕೊಲೆಗೂ ಮುನ್ನ ಲವರ್ ಜೊತೆ ಕೆಫೆಯಲ್ಲಿ ಕುಳಿತು ಪ್ಲಾನ್ ಮಾಡಿದ್ದಳು ಸಿಯಾ ಗೋಯಲ್!

“ನನ್ನ ಮಗ ಕೇತನ್ ತಲೆಕೂದಲಿನ ಸಮಸ್ಯೆಯಿಂದಾಗಿ ಸಣ್ಣ ಹೇರ್ ಪ್ಯಾಚ್ (ವಿಗ್) ಧರಿಸುತ್ತಿದ್ದ. ಈ ವಿಷಯ ಆರೋಪಿ ಸಿಯಾ ಗೋಯಲ್‌ಗೆ ತಿಳಿದ ತಕ್ಷಣ ಆಕೆ ತೀವ್ರ ಅಸಮಾಧಾನಗೊಂಡಿದ್ದಳು. ಇದೇ ಒಂದು ಸಣ್ಣ ಕಾರಣಕ್ಕಾಗಿ ಆಕೆ ನನ್ನ ಮಗನ ಜೀವ ತೆಗೆಯುವಷ್ಟು ಕ್ರೂರಿಯಾದಳೇ ಎಂಬ ಸಂಶಯ ನಮಗೆ ಕಾಡುತ್ತಿದೆ” ಎಂದು ಕೇತನ್​ನ ತಂದೆ ಕಣ್ಣೀರು ಹಾಕಿದ್ದಾರೆ.

ಈ ಕೊಲೆಯ ಹಿಂದೆ ಕೇವಲ ಸಿಯಾ ಮಾತ್ರವಲ್ಲದೆ ಇನ್ನೂ ಕೆಲವರ ಕೈವಾಡ ಇರುವ ಸಾಧ್ಯತೆ ಇದೆ. ಇದು ವ್ಯವಸ್ಥಿತವಾಗಿ ನಡೆದ ಪಿತೂರಿಯಾಗಿದ್ದು, ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಪ್ಪಿತಸ್ಥಳೆಂದು ಸಾಬೀತಾದರೆ ಮಗಳನ್ನು ಕೂಡ ಅದೇ ಕೋಟೆಯಿಂದ ತಳ್ಳಿ, ಸಿಯಾ ಬಗ್ಗೆ ತಂದೆಯ ಭಾವುಕ ಮಾತು

ಸಿಎಂ ಫಡ್ನವೀಸ್ ಭರವಸೆ:

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವಹಿಸುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ: ಮಾಹಿತಿ ಇಲ್ಲಿದೆ – Kannada News | BDAs Ambitious 1.5 Million Tree Plantation Drive to Green Bengaluru

ಬೆಂಗಳೂರು, ಜೂನ್​​ 26: ಒಂದು ಕಾಲದಲ್ಲಿ ಕೂಲ್ ಸಿಟಿ ಎಂದೇ ಖ್ಯಾತವಾಗಿದ್ದ ಬೆಂಗಳೂರು ಈಗ ಹಾಟ್ ಸಿಟಿಯಾಗುತ್ತಿದೆ. ಈ ವಾತಾವರಣದ ಬದಲಾವಣೆಯನ್ನು ಗಮನಿಸಿರುವ ಬಿಡಿಎ, ನಗರವನ್ನು ಮತ್ತೆ ಹಸಿರಾಗಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೆಂಪೇಗೌಡ ಜಯಂತಿ ದಿನದಂದು ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ. ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್​​ ಮತ್ತು ಆಯುಕ್ತ ಮಣಿವಣ್ಣನ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಹ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅಭಿಯಾನ ಹೇಗೆ ನಡೆಯಲಿದೆ ಮತ್ತು ಎಷ್ಟು ಜನ ಭಗಿಯಾಗಲಿದ್ದಾರೆ ಎಂಬ ಬಗ್ಗೆ ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್ ಪಿ. ಅವರು ನೀಡಿರುವ ಮಾಹಿತಿ ಈ ವಿಡಿಯೋದಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೈಕೋರ್ಟ್​​ನಲ್ಲಿ ‘ಬಾಸ್’: ಜೂನ್ 30ಕ್ಕೆ ಭವಿಷ್ಯ ನಿರ್ಧಾರ – Kannada News | Boss Movie controversy, High court to hear case on June 30

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಕೊಲೆ ಕುರಿತು ಪ್ರಕರಣ ವಿಚಾರಣೆ ಹಂತದಲ್ಲಿದೆ. ಇತ್ತೀಚೆಗೆ ನಟ ದರ್ಶನ್ ಹಾಗೂ ರೇಣುಕಾ ಸ್ವಾಮಿ ಕೊಲೆ ಕುರಿತಾದದ್ದು ಎನ್ನಲಾಗುತ್ತಿರುವ ‘ಬಾಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿತ್ತು, ಆದರೆ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಿನಿಮಾದ ಬಿಡುಗಡೆ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಸಿನಿಮಾ ಬಿಡುಗಡೆಗೆ ತಾತ್ಕಾಲಿಕ ತಡೆ ತರುವಲ್ಲಿ ಯಶಸ್ವಿ ಆಗಿದ್ದರು.

ಮಾರ್ಚ್ 27ರಂದು ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ದೊರಕಿತ್ತು, ಆದರೆ ಮೇ 2 ರಂದು ನಡೆದ ವಿಚಾರಣೆಯಲ್ಲಿ ತಡೆಯನ್ನು ತೆರವು ಮಾಡಲಾಗಿತ್ತು. ಬಳಿಕ ವಿಜಯಲಕ್ಷ್ಮಿ ದರ್ಶನ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ನಿನ್ನೆ (ಜೂನ್ 25) ಹೈಕೋರ್ಟ್​​ನಲ್ಲಿ ಅರ್ಜಿ ವಿಚಾರಣೆಗೆ ಬಂದಿದ್ದು, ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಲಾಗಿದೆ. ಅಲ್ಲದೆ, ನ್ಯಾಯಾಲಯದಲ್ಲಿ ‘ಬಾಸ್’ ಸಿನಿಮಾದ ನಿರ್ಮಾಪಕರ ಪರ ಹಾಜರಾಗಿದ್ದ ವಕೀಲರು, ‘ಬಾಸ್’ ಸಿನಿಮಾವನ್ನು ಜೂನ್ 30ರ ವರೆಗೆ ಬಿಡುಗಡೆ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ವಾಗ್ದಾನ ನೀಡಿದ್ದಾರೆ.

‘ಬಾಸ್’ ಹೆಸರಿನ ಸಿನಿಮಾ ನಿರ್ಮಾಣವಾಗಿದ್ದು, ಸಿನಿಮಾ, ರೇಣುಕಾ ಸ್ವಾಮಿ ಪ್ರಕರಣದ ಮೇಲೆ ಆಧರಿತವಾಗಿದೆ ಎಂಬ ಆರೋಪವಿದೆ. ಆದರೆ ಚಿತ್ರತಂಡ ಇದನ್ನು ನಿರಾಕರಿಸುತ್ತಲೇ ಬಂದಿದೆ. ನಮ್ಮ ಸಿನಿಮಾ ದರ್ಶನ್ ಕುರಿತಾದದ್ದು ಅಲ್ಲವೆಂದೇ ಹೇಳುತ್ತಿದೆ. ಇದೀಗ ನ್ಯಾಯಾಲಯದಲ್ಲಿಯೂ ಇದೇ ವಿಷಯದ ಮೇಲೆ ವಾದಗಳು ನಡೆಯುತ್ತಿವೆ. ಆದರೆ ದರ್ಶನ್ ಪರ ವಕೀಲರು, ‘ಸಿನಿಮಾದ ಟೀಸರ್, ಟ್ರೈಲರ್​ನಲ್ಲಿ ತೋರಿಸಲಾಗಿರುವ ಸಾಕಷ್ಟು ಅಂಶಗಳು ರೇಣುಕಾ ಸ್ವಾಮಿ ಪ್ರಕರಣದೊಟ್ಟಿಗೆ ಸಾಮ್ಯತೆ ಹೊಂದಿವೆ ಹಾಗೂ ಸಿನಿಮಾದ ಪ್ರಚಾರದ ಸಂದರ್ಭ ‘ನಿಜ ಘಟನೆಗಳ ಆಧಾರಿತ’ ಎಂದು ಸಹ ಹೇಳಲಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಸುಳ್ಳು ಸಾಕ್ಷ್ಯ ಆರೋಪಕ್ಕೆ ಎಸ್​​ಪಿಪಿ ಪ್ರಸನ್ನ ತಿರುಗೇಟು

‘ಬಾಸ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ತೋರಿಸುವ ಅಂಶಗಳು, ರೇಣುಕಾ ಸ್ವಾಮಿ ಕೊಲೆ ಪ್ರಕರಣದೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿವೆ. ಮೋರಿಯಲ್ಲಿ ಶವ ದೊರೆಕಿದ್ದು, ‘ನನ್ನ ಪತ್ನಿ ಗರ್ಭಿಣಿ, ತಂದೆ-ತಾಯಿಗೆ ವಯಸ್ಸಾಗಿದೆ’ ಎಂಬ ಸಂಭಾಷಣೆ. ಲಾರಿಯ ಚಕ್ರದ ಬಳಿ ಹೊಡೆಯುವುದು, ಶವ ಮೋರಿಗೆ ಎಸೆಯುವುದು, ನಟನ ಬಂಧನ, ಅಭಿಮಾನಿಗಳ ಜೈಕಾರ ಇನ್ನೂ ಹಲವು ವಿಷಯಗಳಲ್ಲಿ ಸಾಮ್ಯತೆ ಇದೆ. ಆದರೆ ಚಿತ್ರತಂಡ, ಇದು ಕಾಕತಾಲೀಯ ಅಷ್ಟೆ, ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದ ಸಿನಿಮಾ ಇದಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ’: ನಮ್ಮ ನಡತೆಯೇ ಸಮುದಾಯದ ರಕ್ಷಣೆ ಎಂದ ಕೆ.ಎನ್. ರಾಜಣ್ಣ – Kannada News | K.N. Rajannas Journey: From Community Obscurity to Three Time MLA

ತುಮಕೂರು, ಜೂ.26: ಕೆ.ಎನ್. ರಾಜಣ್ಣ ಅವರು ತಮ್ಮ ರಾಜಕೀಯ ಜೀವನದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಮೀಸಲಾತಿಯನ್ನು ನಂಬಿಕೊಂಡು ರಾಜಕಾರಣ ಮಾಡಿದ್ದರೆ ನಾನು ಶಾಸಕನೇ ಆಗ್ತಿರಲಿಲ್ಲ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ರಾಜಕೀಯಕ್ಕೆ ಬರುವ ಮುನ್ನ ತಮ್ಮ ಸಮುದಾಯದ ಬಗ್ಗೆ ಹಲವರಿಗೆ ತಿಳಿದಿರಲಿಲ್ಲ. ಈ ವೇಳೆ ರಾಜಣ್ಣ ಅವರು ತಮ್ಮ ಸಮುದಾಯದ ಹಿಂದಿನ ಶಾಸಕರಾದ ಕೆ.ಎಲ್. ನರಸಿಂಹಯ್ಯ, ಸಾಲಿಂಗಯ್ಯ ಮತ್ತು ವೀರಣ್ಣ ಅವರ ಕೊಡುಗೆಗಳನ್ನು ನೆನಪಿಸಿಕೊಂಡರು. ಒಬ್ಬ ವ್ಯಕ್ತಿ ಅಧಿಕಾರಕ್ಕೆ ಬಂದಾಗ, ಅವರ ಕೆಟ್ಟ ಹೆಸರು ವೈಯಕ್ತಿಕವಾಗಿ ಮಾತ್ರವಲ್ಲದೆ, ಇಡೀ ಸಮುದಾಯಕ್ಕೂ ಅನ್ವಯಿಸುತ್ತದೆ. ಸಮುದಾಯದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ನಾಯಕನ ಜವಾಬ್ದಾರಿ. ನಮ್ಮ ಸಮುದಾಯಕ್ಕೆ ರಕ್ಷಣೆ ಇರುವುದು ನಮ್ಮ ನಡತೆ ಮತ್ತು ನಾವು ಮಾಡುವ ಕೆಲಸದಲ್ಲಿಯೇ ಹೊರತು ಬೇರೊಂದರಲ್ಲಿ ಅಲ್ಲ. ನಾನು ಜನರಲ್ ಸೀಟ್‌ನಲ್ಲಿ ಸ್ಪರ್ಧಿಸಿ, ಎಲ್ಲಾ ಸಮುದಾಯಗಳ ಆಶೀರ್ವಾದದಿಂದ ಮೂರು ಬಾರಿ ಶಾಸಕ ಹಾಗೂ ಒಂದು ಬಾರಿ ಎಂಎಲ್‌ಸಿ ಆಗಿದ್ದೇನೆ ಎಂದು ಹೇಳಿದ್ದಾರೆ. 1998ರಲ್ಲಿ ಕಾಂಗ್ರೆಸ್ ಅಲ್ಪಮತದಲ್ಲಿದ್ದಾಗಲೂ ಜನರು ತಮಗೆ ಭಾರೀ ಬಹುಮತದಿಂದ ಗೆಲುವು ನೀಡಿದ್ದನ್ನು ಅವರು ಸ್ಮರಿಸಿದರು. ಕೇವಲ ಕಾಂಗ್ರೆಸ್ ಮತಗಳಿಂದ ಗೆಲ್ಲಲು ಸಾಧ್ಯವಿರಲಿಲ್ಲ, ಎಲ್ಲಾ ಸಮುದಾಯಗಳ ಬೆಂಬಲ ನಿರ್ಣಾಯಕವಾಗಿತ್ತು ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದ ಬೊಕ್ಕಸ ತುಂಬಿಸುವ ಇಲಾಖೆಗಳಿಗೆ ಬಿಸಿ ಮುಟ್ಟಿಸಿದ ಡಿಕೆಶಿ: ಅಧಿಕಾರಿಗಳಿಗೆ ನೀಡಿದ ಸೂಚನೆಗಳೇನು? – Kannada News | DK Shivakumar Reviews Commercial Taxes and Excise Department, Issues Key Directives

ಸಿಎಂ ಡಿಕೆ ಶಿವಕುಮಾರ್​ ಸಭೆImage Credit source: x.com/DKShivakumar

ಬೆಂಗಳೂರು, ಜೂನ್​​ 26: ಸಿಎಂ ಡಿಕೆ‌ ಶಿವಕುಮಾರ್ (DK Shivakumar) ತಮ್ಮ ಸರ್ಕಾರ ಆಡಳಿತ ಯಂತ್ರಕ್ಕೆ ಮತ್ತಷ್ಟು ವೇಗ ನೀಡುತ್ತಿದ್ದಾರೆ. ಕಳೆದ ವಾರ ಜಿಲ್ಲಾ ಡಿಸಿ, ಎಸ್​ಪಿಗಳ ಜೊತೆ ಸಭೆ ಮಾಡಿದ್ದ ಡಿಕೆ ಶಿವಕುಮಾರ್​ ಇಂದು ಇಲಾಖಾವಾರು ಮೀಟಿಂಗ್ ಮಾಡಿದರು. ಅದರಲ್ಲೂ ಸರ್ಕಾರದ ಖಜಾನೆ ತುಂಬುವ ಇಲಾಖೆಗಳು ಅಂದರೆ ಆದಾಯ ತೆರಿಗೆ ಇಲಾಖೆ ಮತ್ತು ಅಬಕಾರಿ. ಹೀಗಾಗಿ ಇವಗಳನ್ನ ಅರ್ಥ ಮಾಡಿಕೊಳ್ಳೋಕೆ ಸಿಎಂ ಹೆಜ್ಜೆ ಇಟ್ಟಿದ್ದರು. ಅದಕ್ಕಾಗಿ ವಿಧಾನಸೌಧದಲ್ಲಿ ಎರಡೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.

ತೆರಿಗೆ ಸೋರಿಕೆಯನ್ನು ತಡೆಯಬೇಕು ಎಂದ ಸಿಎಂ

ತೆರಿಗೆ ರಿಟರ್ನ್‌ಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸದವರನ್ನು ಗುರುತಿಸಿ, ಅವರಿಂದ ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಸಲ್ಲಿಕೆ ಮಾಡಿಸಲು ಜಂಟಿ ಆಯುಕ್ತರುಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಮಸ್ಯೆಗಳನ್ನು ಆನ್‌ಲೈನ್ ಮೂಲಕವೇ ತ್ವರಿತವಾಗಿ ಬಗೆಹರಿಸಿ, ಘನತೆಯಿಂದ ನಡೆಸಿಕೊಳ್ಳಬೇಕು ಎಂದಿದ್ದಾರೆ.

ಸಿಎಂ ಡಿಕೆ‌ ಶಿವಕುಮಾರ್ ಟ್ವೀಟ್​

ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿದರೆ ಗುರಿ ತಲುಪಲು ಸಾಧ್ಯ, ಆದರೆ ತೆರಿಗೆ ವಂಚನೆಗೆ ಮಾತ್ರ ಯಾವುದೇ ಅವಕಾಶ ಇರಬಾರದು. ತೆರಿಗೆ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನಾನು ನೀಡಿರುವ ಪ್ರತಿಯೊಂದು ಸೂಚನೆಯೂ ಜಾರಿಯಾಗಿರಬೇಕು. ಮುಂದಿನ ಸಭೆಯಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ.

ದಾಖಲೆ ಇಲ್ಲದ ವಾಹನಗಳಿಗೆ ಗಡಿಯಲ್ಲೇ ತಡೆ

ಯಾವುದೇ ಸರಕು ಸಾಗಣೆ ವಾಹನಗಳು ಸೂಕ್ತ ಲೆಕ್ಕಪತ್ರ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಚೆಕ್‌ಪೋಸ್ಟ್‌ ಅಥವಾ ರಾಜ್ಯದ ಗಡಿಯನ್ನು ದಾಟುವಂತಿಲ್ಲ. ತೆರಿಗೆ ವಂಚನೆ ಹಾಗೂ ಬೋಗಸ್ ಕಂಪನಿಗಳ ಸೃಷ್ಟಿಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನು ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ, ಮಾಹಿತಿ ಹಂಚಿಕೆಯ ಮೂಲಕ ತೆರಿಗೆ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವಂತೆ ಸಿಎಂ ಡಿಕೆ ಶಿವಕುಮಾರ್​ ಸೂಚಿಸಿದರು.

ಇದನ್ನೂ ಓದಿ: 25 ರಿಂದ 30 ಹೊಸ ಜನಪ್ರಿಯ ಯೋಜನೆಗಳ ಘೋಷಣೆಗೆ ಡಿಕೆಶಿ ಸರ್ಕಾರ ಚಿಂತನೆ, ಎಚ್ಚರಿಕೆ ಕೊಟ್ಟ ಆರ್ಥಿಕ ತಜ್ಞರು!

ಇನ್ನು ಇದಾದ್ಮೇಲೆ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಕೂಡ ನಡೆಯಿತು. ಈ ವೇಳೆ ಅಧಿಕಾರಿಗಳಿಗೆ ಸಿಎಂ ಡಿಕೆ ಶವಕುಮಾರ್​ ಖಡಕ್ ಸೂಚನೆ ನೀಡಿದ್ದಾರೆ. ನೀವುಗಳು ಘನತೆ ಉಳಿಸಿಕೊಂಡರೆ ಸರ್ಕಾರದ ಘನತೆ ಹೆಚ್ಚುತ್ತದೆ. ನೀವು ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ನೋಡುತ್ತಾ ಕೂರುವುದಿಲ್ಲ. ಅಬಕಾರಿ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡುವುದಕ್ಕೆ ಆಗುವುದಿಲ್ಲ ಎಂದುಕೊಳ್ಳಬೇಡಿ. ಅಗತ್ಯಬಿದ್ದರೆ ವರ್ಗಾವಣೆ ಮಾಡಲು ಅಗತ್ಯವಾದ ಕಾನೂನು ಬದಲಾವಣೆಯನ್ನೂ ತರಲು ಅಕಾಶಗಳಿವೆ ಎಂದಿದ್ದಾರೆ. ಆ ಮೂಲಕ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಇಲಾಖೆ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ: ಡಿಕೆ ಶಿವಕುಮಾರ್​

ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾರನ್ನೂ, ಯಾವ ಪ್ರಯತ್ನವನ್ನೂ ನಾನು ಸಹಿಸುವುದಿಲ್ಲ. ಇಲಾಖೆಯಲ್ಲಿ ಹೊಸದಾಗಿ ಎಐಬಿ ಪದ್ಧತಿ ಜಾರಿಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಆಗಿದೆ. ಹೊಸದಾಗಿ 574 ಸನ್ನದುಗಳನ್ನು ಇ-ಹರಾಜು ಹಾಕಲು ನಿರ್ಧರಿಸಲಾಗಿದೆ. ಪರವಾನಗಿ ನವೀಕರಣ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಿ ಎಂದರು. ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲಾಖೆ ಹೇಗೆ ನಡೆಯುತ್ತಿದೆ ಎನ್ನುವ ವರದಿ ನೋಡಿದ್ದೇನೆ. ಇಲಾಖೆಗೆ ಕೊಟ್ಟಿರುವ ಗುರಿ ತಲುಪಲು ಶ್ರಮಿಸಬೇಕು. ನೀವುಗಳು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ. ಇಲಾಖೆ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ. ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ, ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಶಾಸಕರ ಲಾಬಿ: ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ

ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿಕೆ ಶಿವಕುಮಾರ್, ಎಲ್ಲಾ ಇಲಾಖೆಯ ಆಳ ಮತ್ತು ಅಗಲ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಆರ್ಥಿಕ ಇಲಾಖೆ, ಅಬಕಾರಿ ಮತ್ತು ಆದಾಯ ತೆರಿಗೆ ಇಲಾಖೆ ಸರ್ಕಾರದ ಬೊಕ್ಕಸವನ್ನ ತುಂಬುವ ಅಕ್ಷಯ ಪಾತ್ರೆ. ಹೀಗಾಗಿ ಸಭೆ ಕರೆದು ಅಧಿಕಾರಿಗಳಿಗೆ ತಮ್ಮ ಆಡಳಿತ ವೈಖರಿಯನ್ನ ತಿಳಿಸುತ್ತಿದ್ದಾರೆ. ಅಲ್ಲದೆ ನೀವು ಹೀಗೇ ಕೆಲಸ ಮಾಡಬೇಕು ಅಂತ ಸೂಚನೆ ನೀಡಿದ್ದಾರೆ.

ವರದಿ: ಈರಣ್ಣಾ ಬಸವಾ ಟಿವಿ9 ಬೆಂಗಳೂರು. 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs IRE: ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ವೈಭವ್ ಆಡುವ ಬಗ್ಗೆ ಹೇಳಿದ್ದೇನು? – Kannada News | India vs Ireland T20: Shreyas Iyer Captaincy Debut, Sooryavanshi Benched in Belfast

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಐರ್ಲೆಂಡ್‌ನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆರಂಭವಾಗಿದೆ. ನಾಯಕನಾಗಿ ಶ್ರೇಯಸ್ ಅಯ್ಯರ್​ಗೆ ಇದು ಮೊದಲ ಪಂದ್ಯವಾಗಿದೆ. ಚೊಚ್ಚಲ ಪಂದ್ಯದಲ್ಲೇ ಟಾಸ್ ಗೆದ್ದ ಶ್ರೇಯಸ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಟಾಸ್​ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಅದರಂತೆ ಕೋಟ್ಯಾಂತರಿ ಕ್ರಿಕೆಟ್ ಅಭಿಮಾನಿಗಳ ಏಕೈಕ ಪ್ರಶ್ನೆಯಾದ ವೈಭವ್ ಸೂರ್ಯವಂಶಿ ಮೊದಲ ಟಿ20 ಪಂದ್ಯವನ್ನು ಆಡುತ್ತಾರಾ ಎಂಬುದಕ್ಕೆ ಉತ್ತರ ಸಿಕ್ಕಿದೆ. ಅಭಿಮಾನಿಗಳಿಗೆ ಟೀಂ ಇಂಡಿಯಾದಿಂದ ನಿರಾಶೆಯ ಉತ್ತರ ಎದುರಾಗಿದ್ದು, ಮೊದಲ ಟಿ20 ಪಂದ್ಯದಲ್ಲಿ ವೈಭವ್ ಆಡುತ್ತಿಲ್ಲ.

ಶ್ರೇಯಸ್ ಹೇಳಿದ್ದೇನು?

ಟಾಸ್ ಗೆದ್ದ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, ಸೂರ್ಯವಂಶಿ ಈ ಪಂದ್ಯದಲ್ಲಿ ಏಕೆ ಆಡುತ್ತಿಲ್ಲ ಎಂಬುದನ್ನು ವಿವರಿಸಿದರು. ‘ಸೂರ್ಯವಂಶಿ ಒಬ್ಬ ಅದ್ಭುತ ಆಟಗಾರ, ಆದರೆ ಅವರು ಈ ಪಂದ್ಯದಲ್ಲಿ ಬೆಂಚ್ ಕಾಯಬೇಕಾಗುತ್ತದೆ. ನಾವು ನಮ್ಮ ಅನುಭವಿ ಆಟಗಾರರನ್ನೇ ತಂಡದಲ್ಲಿ ಮುಂದುವರೆಸಲು ನಿರ್ಧರಿಸಿದ್ದೇವೆ. ಹೀಗಾಗಿ ಈ ಪಂದ್ಯದಲ್ಲಿ ವೈಭವ್ ಆಡುತ್ತಿಲ್ಲ. ಸಮಯ ಬಂದಾಗ ಸೂರ್ಯವಂಶಿಗೆ ಅವಕಾಶ ಸಿಗುತ್ತದೆ’ ಎಂದರು

ಈ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಕೂಡ ಸೂರ್ಯವಂಶಿಯನ್ನು ಈ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಲಾಗುವುದಿಲ್ಲ ಎಂದು ಸುಳಿವು ನೀಡಿದ್ದರು. ಸೂರ್ಯವಂಶಿಗೆ ಅವಕಾಶ ನೀಡಿದರೆ, ಈಗಾಗಲೇ ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಆಟಗಾರರು ಅವಕಾಶ ವಂಚಿತರಾಗುತ್ತಾರೆ ಎಂದಿದ್ದರು.

ಭಾರತ ಮೂಲದ ಆಟಗಾರನಿಗೆ ಅವಕಾಶ

ವೈಭವ್ ಸೂರ್ಯವಂಶಿ ಅವರಿಗೆ ಚೊಚ್ಚಲ ಪ್ರವೇಶಕ್ಕೆ ಅವಕಾಶ ಸಿಗದಿದ್ದರೂ, ಐರ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಭಾರತೀಯ ಮೂಲದ ವೇಗದ ಬೌಲರ್​ಗೆ ಅವಕಾಶ ನೀಡಿದೆ. ರಾಜಸ್ಥಾನ ಮೂಲದ ಎಡಗೈ ವೇಗದ ಬೌಲರ್ ಜೈ ಮುಂದ್ರಾಗೆ ಈ ಪಂದ್ಯದಲ್ಲಿ ಅವಕಾಶ ಸಿಕ್ಕಿದೆ. 24 ನೇ ವಯಸ್ಸಿನಲ್ಲಿ ಐರ್ಲೆಂಡ್‌ಗೆ ತೆರಳಿದ ಮುಂದ್ರಾ, ಈಗ ಐರ್ಲೆಂಡ್ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಉಭಯ ತಂಡಗಳು

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ.

ಐರ್ಲೆಂಡ್‌ ತಂಡ: ಟಿಮ್ ಟೆಕ್ಟರ್, ರಾಯ್ ಅಡೈರ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆಂಜಮಿನ್ ಕ್ಯಾಲಿಟ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಲಿಯಾಮ್ ಮೆಕಾರ್ಥಿ, ಮ್ಯಾಥ್ಯೂ ಹಂಫ್ರೀಸ್, ಜೇ ಮುಂದ್ರಾ, ಮ್ಯಾಥ್ಯೂ ಹೊಲ್ಲಾರ್ಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:01 pm, Fri, 26 June 26

Source link

ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ: ಮೆಟ್ರೋನಲ್ಲಿ ತಾಂತ್ರಿಕ ದೋಷಕ್ಕೆ ಸ್ಫೋಟಕ ಕಾರಣ ಬಯಲು – Kannada News | BMRCL Finally Finds Out reasons for Again And Again Technical Issues In cubbon park metro station

ಬೆಂಗಳೂರು, ಜೂನ್ 26):  ‘ನಮ್ಮ ಮೆಟ್ರೋ’  (Namma Metro) ಸೇವೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೊಬ್ಬರಿ 21 ಬಾರಿ ತಾಂತ್ರಿಕ ದೋಷ ಕಂಡುಬಂದಿದ್ದು, ಪ್ರಯಾಣಿಕರಲ್ಲಿ ಭಾರಿ ಆತಂಕ ಮೂಡಿಸಿದೆ. ಪೀಕ್ ಅವರ್ಸ್ ನಲ್ಲೇ ನಮ್ಮ ಮೆಟ್ರೋಗಳು ಕೈ ಕೊಡುತ್ತಿವೆ. ಮುಖ್ಯವಾಗಿ ಕಳೆದ 3 ವರ್ಷಗಳಲ್ಲಿ 11 ಬಾರಿ ನೇರಳೆ ಮಾರ್ಗದಲ್ಲಿ ಮೆಟ್ರೋನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅದರಲ್ಲೂ ಮುಖ್ಯವಾಗಿ ಮೊನ್ನೇ ಕಬ್ಬನ್ ಪಾರ್ಕ್​ ಮೆಟ್ರೋ ನಿಲ್ದಾಣದಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡುಬರುತ್ತಿರುವುದರಿಂದ ತಲೆ ಗಂಭೀರವಾಗಿ ಪರಿಗಣಿಸಿದ್ದ ಬಿಎಂಆರ್​​ಸಿಎಲ್ ಕೊನೆಗೆ ಕಾರಣವನ್ನು ಪತ್ತೆ ಮಾಡಿದೆ. ಅದೇಕೆ ಮೇಲಿಂದ ಮೇಲೆ ಸಮಸ್ಯೆಗಳು ಆಗುತ್ತಿವೆ ಎಂದು ಟೆಕ್ನಿಕಲ್ ಟೀಮ್ ನಡೆಸಿದ ಪರಿಶೀಲನೆಯಲ್ಲಿ ಮಹತ್ವದ ಕಾರಣ ಪತ್ತೆಯಾಗಿದೆ. ತಾಂತ್ರಿಕ ದೋಷ ಕಂಡುಬರುತ್ತಿರುವುದಕ್ಕೆ ಕಾರಣವೇನು ಎನ್ನುವುದನ್ನು ಕೊನೆಗೂ ಟೆಕ್ನಿಕಲ್ ತಂಡ ಪತ್ತೆ ಮಾಡಿ ಬಿಎಂಆರ್​​​ಸಿಎಲ್ ವರದಿ ನೀಡಿದ್ದು, ಈ ಹಿಂದೆ ನಮ್ಮ ಮೆಟ್ರೋದಲ್ಲಿ ಇಂತಹ ಘಟನೆ ನಡೆದಿರಲಿಲ್ವಂತೆ‌. ಇನ್ನು ಒಂದು ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎನ್ನುವುದು ವರದಿ ತಿಳಿಸಿದೆ.

ತಾಂತ್ರಿಕ ದೋಷಕ್ಕೆ ಕಾರಣವೇನು? ವರದಿಯಲ್ಲೇನಿದೆ?

ಮೊನ್ನೇ ಕಬ್ಬನ್ ಪಾರ್ಕ್​ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ಸಮಸ್ಯೆ ಸಂಬಂಧ ಬಿಎಂಆರ್​​ಸಿಎಲ್, ಪ್ರಾಥಮಿಕ ತನಿಖೆಯ ವರದಿ ಬಿಡುಗಡೆ ಮಾಡಿದ್ದು,  ಅಂದು ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತವಾಗ್ತಿತಂತೆ. ಎಂಜಿ ರೋಡ್ ನಿಂದ ಕಬ್ಬನ್ ಪಾರ್ಕ್ ಮಧ್ಯದ ಟನಲ್ ನಲ್ಲೇ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಅನಿಲ್ ಕುಂಬ್ಳೆ ಸರ್ಕಲ್ ನಿಂದ ಕಬ್ಬನ್ ಪಾರ್ಕ್‌ ನಿಲ್ದಾಣದ ವರೆಗೆ ರೈಲು ವಿದ್ಯುತ್ ಸಂಪರ್ಕವಿಲ್ಲದೇ ಸಂಚಾರ ಮಾಡಿದೆ. ಅನಿಲ್ ಕುಂಬ್ಳೆ ಸರ್ಕಲ್ ಬಳಿಕ ಸುರಂಗ ಮಾರ್ಗ ಆರಂಭವಾಗುತ್ತದೆ. ಈ ಮಾರ್ಗದಲ್ಲಿ ತಿರುವು ಸಿಗುತ್ತದೆ. ಇಲ್ಲಿ ಹಳಿಯ ಪಕ್ಕದಲ್ಲಿ ಥರ್ಡ್ ರೈಲ್ ಸಂಪರ್ಕ ಇದೆ. ಆದರೆ,ಇಲ್ಲಿದ್ದ ಫೈಬರ್ ಕವರ್ ಮುಂದಕ್ಕೆ ಪಾಸ್ ಆಗಿದ್ಯಂತೆ. ಹೀಗಾಗಿ ರೈಲು ಹಳಿ ಮತ್ತು ವಿದ್ಯುತ್ ಹಳಿಯ ನಡುವೆ ಅಂತರ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ 3 ವರ್ಷದಲ್ಲಿ 21 ಬಾರಿ ಯಡವಟ್ಟು: ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ, ತನಿಖೆಗೆ ಪತ್ರ

ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ

ವೈರ್ ಶಾರ್ಟ್ ಸಕ್ಯೂರ್ಟ್ ಆಗಿ ಈ ಸಮಸ್ಯೆಯಿಂದಾಗಿ ರೈಲಿಗೆ ಪವರ್ ಸಪ್ಲೈ ಆಗಿಲ್ಲವಂತೆ. ಇದರಿಂದಾಗಿ ಥರ್ಡ್ ರೈಲ್ ಮತ್ತು ಸಿಸಿಡಿಗೂ ಹಾನಿ ಉಂಟಾಗಿತ್ತು. ಇಷ್ಟಾದರೂ ತಕ್ಷಣಕ್ಕೆ ರೈಲು ಸ್ಟಾಪ್ ಆಗಿಲ್ಲ. ಮುಂದಿನ ಸ್ಟೇಷನ್ ಕಬ್ಬನ್ ಪಾರ್ಕ್‌ ವರೆಗೂ ರೈಲು ಬಂದಿದೆ. ರೈಲು ಏನಾದರೂ ಟನಲ್ ಒಳಗೆ ಸ್ಟಾಪ್ ಆಗಿದ್ರೆ ದೊಡ್ಡಮಟ್ಟದಲ್ಲಿ ಅನಾಹುತವಾಗ್ತಿತ್ತು ಎಂದು ಬಿಎಂಆರ್​​ಸಿಎಲ್ ಬಿಡುಗಡೆ ಮಾಡಿದ ಪ್ರಾಥಮಿಕ ವರದಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:55 pm, Fri, 26 June 26

Source link

ಮನೆಗೆ ಪ್ರವೇಶಿಸುವಾಗ ಈ ಲಕ್ಷಣಗಳು ಕಂಡುಬಂದರೆ ಎಚ್ಚರ: ಇದು ನಕಾರಾತ್ಮಕ ಶಕ್ತಿ ಮತ್ತು ವಾಸ್ತು ದೋಷದ ಸಂಕೇತ ಇರಬಹುದು! – Kannada News | Vastu Shastra: 5 Signs of Negative Energy at Home & How to Remove It

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯು ನಮ್ಮ ಜೀವನದಲ್ಲಿ ಪ್ರಗತಿ ಮತ್ತು ಸಂತೋಷವನ್ನು ತರುತ್ತದೆ. ಆದರೆ, ಕೆಲವೊಮ್ಮೆ ಮನೆಯಲ್ಲಿ ನಕಾರಾತ್ಮಕ ಶಕ್ತಿ (Negative Energy) ಅಥವಾ ವಾಸ್ತು ದೋಷಗಳು ಆವರಿಸಿಕೊಂಡಾಗ ನಮಗೆ ಅರಿವಿಲ್ಲದೆಯೇ ಕೆಲವು ಅಸಾಮಾನ್ಯ ಬದಲಾವಣೆಗಳು ಕಂಡುಬರಲು ಪ್ರಾರಂಭಿಸುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ಪ್ರವೇಶಿಸಿದ ತಕ್ಷಣ ನಿಮಗೆ ಈ ಕೆಳಗಿನ ಅಸಾಮಾನ್ಯ ಅನುಭವಗಳಾದರೆ, ಅದನ್ನು ನಿರ್ಲಕ್ಷಿಸಬೇಡಿ. ಅದು ಮನೆಯಲ್ಲಿರುವ ನಕಾರಾತ್ಮಕತೆಯ ಸ್ಪಷ್ಟ ಸೂಚನೆಯಾಗಿರಬಹುದು.

ನಿರಂತರ ಕೆಟ್ಟ ವಾಸನೆ ಬರುವುದು:

ನೀವು ಹೊರಗಿನಿಂದ ಮನೆಗೆ ಪ್ರವೇಶಿಸುವಾಗ ಸ್ವಚ್ಛಗೊಳಿಸಿದ ನಂತರವೂ ಆಗಾಗ್ಗೆ ಕೆಟ್ಟ ಅಥವಾ ವಿಚಿತ್ರವಾದ ವಾಸನೆ ಅನುಭವಕ್ಕೆ ಬಂದರೆ, ಅದನ್ನು ವಾಸ್ತು ಶಾಸ್ತ್ರದಲ್ಲಿ ಶುಭವೆಂದು ಪರಿಗಣಿಸಲಾಗುವುದಿಲ್ಲ. ಯಾವುದೇ ಕಾರಣವಿಲ್ಲದೆ ಬರುವ ಇಂತಹ ವಾಸನೆಯು ಮನೆಯಲ್ಲಿ ತೀವ್ರ ವಾಸ್ತು ದೋಷ ಅಥವಾ ನಕಾರಾತ್ಮಕ ಶಕ್ತಿ ಆವರಿಸಿರುವುದರ ಪ್ರಮುಖ ಸಂಕೇತವಾಗಿದೆ.

ದಿಢೀರ್ ಭಯ ಮತ್ತು ಗಾಬರಿ ಉಂಟಾಗುವುದು:

ಹೊರಗಡೆ ಹೋದಾಗ ಸಮಾಧಾನವಾಗಿರುವ ಮನಸ್ಸು, ಸ್ವಂತ ಮನೆಗೆ ಕಾಲಿಡುತ್ತಿದ್ದಂತೆ ಇದ್ದಕ್ಕಿದ್ದಂತೆ ಭಯ, ಆತಂಕ ಅಥವಾ ಗಾಬರಿಯನ್ನು ಅನುಭವಿಸಿದರೆ ಅದು ಗಂಭೀರವಾದ ಲಕ್ಷಣವಾಗಿದೆ. ಮನೆಯ ಒಳಾಂಗಣದಲ್ಲಿ ಧನಾತ್ಮಕ ಶಕ್ತಿಯ ಕೊರತೆಯಿದ್ದಾಗ ಅಲ್ಲಿನ ವಾತಾವರಣವು ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಬಾವಲಿಗಳ ಆಗಮನ:

ವಾಸ್ತು ಶಾಸ್ತ್ರದ ಪ್ರಕಾರ, ಬಾವಲಿಗಳು ಆಗಾಗ್ಗೆ ಮನೆಗೆ ಬರಲು ಪ್ರಾರಂಭಿಸಿದರೆ ಅಥವಾ ಮನೆಯ ಯಾವುದಾದರೂ ಮೂಲೆಯಲ್ಲಿ ಗೂಡು ಕಟ್ಟಿದರೆ ಅದನ್ನು ಅತ್ಯಂತ ದೊಡ್ಡ ನಕಾರಾತ್ಮಕತೆಯ ಸೂಚಕವೆಂದು ಪರಿಗಣಿಸಲಾಗುತ್ತದೆ. ಬಾವಲಿಗಳ ವಾಸ್ತವ್ಯವು ಮನೆಯಲ್ಲಿ ಸುಖ-ಶಾಂತಿಯನ್ನು ಕಸಿದುಕೊಂಡು, ಆರ್ಥಿಕ ನಷ್ಟ ಮತ್ತು ದೋಷಗಳಿಗೆ ಕಾರಣವಾಗಬಹುದು ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಅಪರಿಚಿತ ಧ್ವನಿಗಳು ಕೇಳಿಸಿದಂತಾಗುವುದು:

ಮನೆಗೆ ಪ್ರವೇಶಿಸುವಾಗ ಅಥವಾ ಮನೆಯಲ್ಲಿ ಒಂಟಿಯಾಗಿರುವಾಗ ಯಾರೋ ಅಪರಿಚಿತರು ನಿಮ್ಮನ್ನು ಹೆಸರು ಹಿಡಿದು ಕರೆಯುತ್ತಿರುವಂತೆ ಅಥವಾ ಯಾರೋ ಮಾತನಾಡುತ್ತಿರುವಂತೆ ಭಾಸವಾದರೆ, ಅದನ್ನು ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯ ಪ್ರಭಾವವೆಂದು ಪರಿಗಣಿಸಬಹುದು. ಇದು ಮನೆಯಲ್ಲಿನ ಶಕ್ತಿಯ ಸಮತೋಲನ ತಪ್ಪಿರುವುದನ್ನು ಸೂಚಿಸುತ್ತದೆ.

ವಸ್ತುಗಳು ತನ್ನಷ್ಟಕ್ಕೆ ತಾನೇ ಜಾಗ ಬದಲಾಯಿಸುವುದು:

ನೀವು ಇಟ್ಟ ವಸ್ತುಗಳು ಅದೇ ಸ್ಥಳದಲ್ಲಿಲ್ಲದೆ ಸ್ವಲ್ಪ ಚಲಿಸಿದಂತೆ ತೋರಿದರೆ ಅಥವಾ ನಿರಂತರವಾಗಿ ಕಳೆದುಹೋಗುತ್ತಿದ್ದರೆ, ಅದು ಕೇವಲ ನಿಮ್ಮ ಮರೆಗುಳಿತನವಾಗಿರದೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯ ಪ್ರಭಾವದೊಂದಿಗೆ ಸಂಬಂಧ ಹೊಂದಿರಬಹುದು ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.

ನಿಮ್ಮ ಮನೆಯಲ್ಲೂ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಮನೆಯನ್ನು ಉಪ್ಪಿನ ನೀರಿನಿಂದ ಸ್ವಚ್ಛಗೊಳಿಸುವುದು, ಪ್ರತಿದಿನ ಸಂಜೆ ಕರ್ಪೂರ ಉರಿಸುವುದು, ಗಂಟೆ ಅಥವಾ ಶಂಖನಾದ ಮಾಡುವುದು ಮತ್ತು ಹಿರಿಯ ವಾಸ್ತು ತಜ್ಞರ ಸಲಹೆಗಳನ್ನು ಪಡೆಯುವ ಮೂಲಕ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

India vs Ireland Live Score: ಐರ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ – Kannada News | India vs ireland live score ind vs ire 1st t20i match at belfast latest scorecard updates in kannada

LIVE NEWS & UPDATES

  • 26 Jun 2026 05:44 PM (IST)

    India vs Ireland Live Score: ಟಾಸ್ ಗೆದ್ದ ಭಾರತ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರರ್ಥ ಹೊಸ ನಾಯಕ ಲೋರ್ಕನ್ ಟಕರ್ ನೇತೃತ್ವದ ಆತಿಥೇಯ ಐರ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲಿದೆ.

ಭಾರತ ಮತ್ತು ಐರ್ಲೆಂಡ್ ನಡುವಿನ 2 ಪಂದ್ಯಗಳ ಟಿ20ಸರಣಿ ಇಂದಿನಿಂದ ಪ್ರಾರಂಭವಾಗಿದೆ. ಸರಣಿಯ ಮೊದಲ ಪಂದ್ಯ ಐರ್ಲೆಂಡ್‌ನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರರ್ಥ ಹೊಸ ನಾಯಕ ಲೋರ್ಕನ್ ಟಕರ್ ನೇತೃತ್ವದ ಆತಿಥೇಯ ಐರ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲಿದೆ. ಇಂದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಚೊಚ್ಚಲ ಪ್ರವೇಶ ಮಾಡುವುದಿಲ್ಲ ಎಂದು ಭಾರತೀಯ ನಾಯಕ ಅಯ್ಯರ್ ಸ್ಪಷ್ಟಪಡಿಸಿದ್ದಾರೆ.

Published On – Jun 26,2026 5:43 PM

Source link

ವೋಕ್ಸ್‌ವ್ಯಾಗನ್ ಶಾಕ್; ಒಂದು ಲಕ್ಷ ಉದ್ಯೋಗ ಕಡಿತ; ಪ್ರಮುಖ ಕಾರ್ಖಾನೆಗಳನ್ನೇ ಮುಚ್ಚಲುಹೊರಟ ವಾಹನ ತಯಾರಕ ಸಂಸ್ಥೆ – Kannada News | Volkswagen to layoff 1 lakh employees, close 4 factories to stay competitive

ನವದೆಹಲಿ, ಜೂನ್ 26: ಜರ್ಮನಿಯ ಪ್ರಸಿದ್ಧ ವಾಹನ ತಯಾರಿಕಾ ದೈತ್ಯ ಸಂಸ್ಥೆಯಾದ ವೋಕ್ಸ್‌ವ್ಯಾಗನ್ (Volkswagen AG) ಜಾಗತಿಕ ಮಟ್ಟದಲ್ಲಿ ಭಾರಿ ಪ್ರಮಾಣದ ಉದ್ಯೋಗ ಕಡಿತ ಮತ್ತು ಕಾರ್ಖಾನೆಗಳ ಮುಚ್ಚುವಿಕೆಗೆ ಮುಂದಾಗಿದೆ ಎಂದು ಜರ್ಮನ್ ಮೂಲದ ಪ್ರಮುಖ ವರದಿಗಳು ತಿಳಿಸಿವೆ. ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಉಂಟಾಗಿರುವ ತೀವ್ರ ಪೈಪೋಟಿ ಮತ್ತು ಲಾಭದಲ್ಲಿನ ಕುಸಿತದ ಹಿನ್ನೆಲೆಯಲ್ಲಿ, ವೋಕ್ಸ್‌ವ್ಯಾಗನ್ ಸಂಸ್ಥೆಯ ಸಿಇಒ ಆಲಿವರ್ ಬ್ಲೂಮ್ (Oliver Blume) ಅವರು ಕಂಪನಿಯನ್ನು ಸಂಪೂರ್ಣವಾಗಿ ಪುನರ್ರಚಿಸಲು (Company Restructuring) ಮುಂದಾಗಿದ್ದಾರೆ. ಇದರ ಭಾಗವಾಗಿ ಒಂದು ಲಕ್ಷ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಯೋಜನೆ ಹಾಕಿದ್ದಾರೆ ಎಂದು ಮ್ಯಾನೇಜರ್ ಮ್ಯಾಗಝಿನ್ (Manager Magazin) ವರದಿ ಮಾಡಿದೆ.

ಲಕ್ಷ ಉದ್ಯೋಗ ಕಡಿತ, ಹಲವು ಫ್ಯಾಕ್ಟರಿಗಳೂ ಬಂದ್

ವೋಕ್ಸ್‌ವ್ಯಾಗನ್ ಕಂಪನಿಯು ಈ ಹಿಂದೆ ಯೋಜಿಸಿದ್ದ 50,000 ಉದ್ಯೋಗ ಕಡಿತದ ಗುರಿಯನ್ನು ಈಗ ದುಪ್ಪಟ್ಟುಗೊಳಿಸಿದೆ. ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕವಾಗಿ ಸುಮಾರು 1,00,000 ಉದ್ಯೋಗಗಳನ್ನು ಕಡಿತಗೊಳಿಸಲು ಸಿಇಒ ಯೋಜಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜರ್ಮನಿಯಲ್ಲಿರುವ ನಾಲ್ಕು ಪ್ರಮುಖ ವಾಹನ ತಯಾರಕ ಘಟಕಗಳನ್ನು ಮುಚ್ಚಲೂ ಕೂಡ ಕಂಪನಿ ಆಲೋಚಿಸುತ್ತಿದೆ. ಹ್ಯಾನೋವರ್ (Hanover), ಜ್ವಿಕಾವೊ (Zwickau) ಮತ್ತು ಎಮಡೆನ್​ನಲ್ಲಿರುವ (Emden) ವೋಕ್ಸ್‌ವ್ಯಾಗನ್ ಘಟಕಗಳು, ಹಾಗು ನೆಕಾರ್ಸಲ್ಮ್‌ನಲ್ಲಿರುವ (Neckarsulm) ಆಡಿ (Audi) ಘಟಕ, ಈ ನಾಲ್ಕು ಫ್ಯಾಕ್ಟರಿಗಳನ್ನು ಮುಚ್ಚಲಾಗುತ್ತಿದೆ.

ಇದನ್ನೂ ಓದಿ: ಆಫ್ರಿಕಾ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳ ಅಬ್ಬರ; ಸ್ಥಳೀಯ ಉತ್ಪಾದನೆಗೂ ಮುಂದು

ಪ್ರಸ್ತುತ ಈ ಕಾರ್ಖಾನೆಗಳಲ್ಲಿ ತಯಾರಾಗುತ್ತಿರುವ ವಾಹನಗಳ ಮಾಡೆಲ್‌ಗಳ ಉತ್ಪಾದನೆ ಮುಗಿದ ತಕ್ಷಣ, ಈ ಘಟಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆಡಿ, ಪೋರ್ಷೆ, ಲಂಬೋರ್ಗಿನಿ ಮೊದಲಾದ ವಾಹನಗಳ ತಯಾರಕರು

ಜರ್ಮನಿಯ ವೋಕ್ಸ್‌ವ್ಯಾಗನ್ ಎಜಿ ವಿಶ್ವದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದು. ಇದು ಕಾರು, ಬಸ್ಸು, ಬೈಕುಗಳನ್ನು ತಯಾರಿಸುತ್ತದೆ. ಆಡಿ, ಪೋರ್ಷೆ, ಬೆಂಟ್ಲೀ, ಕುಪ್ರಾ, ಜೆಟ್ಟಾ, ಸೀಟ್, ಸ್ಕೋಡಾ, ವೋಕ್ಸ್‌ವ್ಯಾಗನ್, ಡುಕಾಟಿನಂತಹ ಜನಪ್ರಿಯ ಬ್ರ್ಯಾಂಡ್​ಗಳ ವಾಹನಳನ್ನು ಇದು ಮ್ಯಾನುಫ್ಯಾಕ್ಚರ್ ಮಾಡುತ್ತದೆ.

ಹೂಡಿಕೆಯಲ್ಲಿ 15% ಕಡಿತಗೊಳಿಸಲಿರುವ ವೋಕ್ಸ್‌ವ್ಯಾಗನ್

ವೋಕ್ಸ್‌ವ್ಯಾಗನ್ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ತನ್ನ ಒಟ್ಟು ಹೂಡಿಕೆಯನ್ನು ಶೇ. 15 ರಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದು, ಹೂಡಿಕೆಯನ್ನು ಅಂದಾಜು €130 ಬಿಲಿಯನ್​ಗೆ (ಸುಮಾರು 1.40 ಲಕ್ಷ ಕೋಟಿ ರೂಪಾಯಿ) ಸೀಮಿತಗೊಳಿಸಲಿದೆ.

ಇದನ್ನೂ ಓದಿ: ರಾಜ್ಯಗಳ ಆರ್ಥಿಕ ಆರೋಗ್ಯಕ್ಕೆ ಉರುಳಾಗುತ್ತಿರುವ ಉಚಿತ ಕೊಡುಗೆಗಳು; ಕರ್ನಾಟಕಕ್ಕೆ ಅತಿಹೆಚ್ಚು ಬಾಧೆ; ಬೆಚ್ಚಿಬೀಳಿಸಿದೆ ಸಿಎಜಿ ವರದಿ

ವೋಕ್ಸ್‌ವ್ಯಾಗನ್​ನ ಇಷ್ಟೊಂದು ದೊಡ್ಡ ನಿರ್ಧಾರಕ್ಕೆ ಕಾರಣವೇನು?

ಯೂರೋಪಿನ ಅತಿ ದೊಡ್ಡ ವಾಹನ ತಯಾರಿಕಾ ಸಂಸ್ಥೆಯಾದ ವೋಕ್ಸ್‌ವ್ಯಾಗನ್ ಇತ್ತೀಚಿನ ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ:

  • ಚೀನಾದ ಪೈಪೋಟಿ: ಇವಿ (ಎಲೆಕ್ಟ್ರಿಕ್ ವೆಹಿಕಲ್) ಮಾರುಕಟ್ಟೆಯಲ್ಲಿ ಚೀನಾದ ಬಿವೈಡಿ (BYD) ನಂತಹ ಕಂಪನಿಗಳಿಂದ ಜಾಗತಿಕವಾಗಿ ತೀವ್ರ ಪೈಪೋಟಿ ಎದುರಾಗಿದೆ. ದಶಕಗಳಿಂದ ಚೀನಾದ ಮಾರುಕಟ್ಟೆಯಲ್ಲಿ ವಿಜೃಂಬಿಸಿದ್ದ ವೋಕ್ಸ್‌ವ್ಯಾಗನ್ ಕಳೆದ ಕೆಲ ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಿದೆ.
  • ದುಬಾರಿ ಇವಿ ಬದಲಾವಣೆ: ಸಾಂಪ್ರದಾಯಿಕ ಇಂಧನ ವಾಹನಗಳಿಂದ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನಕ್ಕೆ ಬದಲಾಗಲು ಕಂಪನಿಗೆ ಭಾರಿ ವೆಚ್ಚವಾಗುತ್ತಿದೆ.
  • ತೆರಿಗೆ ಮತ್ತು ಸುಂಕಗಳು: ಅಮೆರಿಕ ಮತ್ತು ಇತರ ದೇಶಗಳು ವಿಧಿಸುತ್ತಿರುವ ಹೊಸ ಆಮದು ಸುಂಕಗಳು ಕಂಪನಿಯ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 4:28 pm, Fri, 26 June 26

Source link

Exit mobile version