ಬೆಂಗಳೂರು ಟು ಚೆನ್ನೈ ಜಸ್ಟ್ 73 ನಿಮಿಷ, ಹೈದರಾಬಾದ್‌ಗೆ 2 ಗಂಟೆ: ದೇಶದ 7 ಹೊಸ ಬುಲೆಟ್ ಟ್ರೈನ್ ಮಾರ್ಗಗಳ ಕಂಪ್ಲೀಟ್ ಟ್ರಾವೆಲ್ ಟೈಮ್ ಇಲ್ಲಿದೆ – Kannada News | High Speed Rail in India: 7 New Bullet Train Corridors to Transform Travel

ದೆಹಲಿ, ಜೂ.26: ಭಾರತೀಯ ರೈಲ್ವೆ ಇತಿಹಾಸದಲ್ಲೇ ಮಹತ್ತರ ಸಾಧನೆ ಮಾಡಲಿರುವ ಹೈ-ಸ್ಪೀಡ್ ರೈಲು ಜಾಲ ವಿಸ್ತರಣೆಗೆ ಕೇಂದ್ರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ. ದೇಶದ ಪ್ರಮುಖ ಆರ್ಥಿಕ, ಕೈಗಾರಿಕಾ, ತಂತ್ರಜ್ಞಾನ ಮತ್ತು ಪ್ರವಾಸಿ ಹಬ್‌ಗಳನ್ನು ಪರಸ್ಪರ ಜೋಡಿಸುವ ನಿಟ್ಟಿನಲ್ಲಿ 7 ಹೊಸ ಬುಲೆಟ್ ಟ್ರೈನ್ ಕಾರಿಡಾರ್‌ಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ.

ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಯಾದ ಮುಂಬೈ-ಅಹಮದಾಬಾದ್ (508 ಕಿ.ಮೀ) ಕಾರಿಡಾರ್‌ನ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ. 2017 ರಿಂದ ಈ ಯೋಜನೆಯ ಕೆಲಸಗಳು ಹಂತ-ಹಂತವಾಗಿ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಭಾರತದ ಸಾರಿಗೆ ವ್ಯವಸ್ಥೆಯ ಇತಿಹಾಸವನ್ನೇ ಬದಲಾಯಿಸಲಿದೆ. ಈ ಮೂಲಕ ರಾಷ್ಟ್ರೀಯ ಬುಲೆಟ್ ಟ್ರೈನ್ ನೆಟ್‌ವರ್ಕ್‌ಗೆ ಅಡಿಪಾಯ ಹಾಕಿದೆ.

ಅನುಮೋದನೆ ಪಡೆದ 7 ಹೊಸ ಕಾರಿಡಾರ್‌ಗಳು:

ದೇಶದ ಪಶ್ಚಿಮ, ದಕ್ಷಿಣ, ಉತ್ತರ ಹಾಗೂ ಪೂರ್ವ ಭಾಗಗಳನ್ನು ಒಳಗೊಂಡಂತೆ ಗುರುತಿಸಲಾದ 7 ಪ್ರಮುಖ ಮಾರ್ಗಗಳು ಇಲ್ಲಿವೆ:

ಮುಂಬೈ – ಪುಣೆ

ಪುಣೆ – ಹೈದರಾಬಾದ್

ಹೈದರಾಬಾದ್ – ಬೆಂಗಳೂರು

ಹೈದರಾಬಾದ್ – ಚೆನ್ನೈ

ಚೆನ್ನೈ – ಬೆಂಗಳೂರು

ದೆಹಲಿ – ವಾರಣಾಸಿ

ವಾರಣಾಸಿ – ಸಿಲಿಗುರಿ

ಬದಲಾಗಲಿದೆ ಪ್ರಯಾಣದ ಸಮಯ; ಗಂಟೆಗಳ ಜಾಗದಲ್ಲಿ ನಿಮಿಷಗಳ ಲೆಕ್ಕಾಚಾರ

ಹೊಸ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಜಾರಿಗೆ ಬಂದ ಬಳಿಕ ಮೆಟ್ರೋ ನಗರಗಳ ನಡುವಿನ ಪ್ರಯಾಣದ ಸಮಯ ಊಹಿಸಲಾಗದಷ್ಟು ತಗ್ಗಲಿದೆ. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ ನಿರೀಕ್ಷಿತ ವಿವರಗಳು ಹೀಗಿವೆ.

ಬೆಂಗಳೂರು – ಚೆನ್ನೈ: ಕೇವಲ 1 ಗಂಟೆ 13 ನಿಮಿಷ (73 ನಿಮಿಷ)!

ಬೆಂಗಳೂರು – ಹೈದರಾಬಾದ್: ಕೇವಲ 2 ಗಂಟೆ 10 ನಿಮಿಷ!

ಮುಂಬೈ – ಪುಣೆ: ಕೇವಲ 48 ನಿಮಿಷ!

ಮುಂಬೈ – ಅಹಮದಾಬಾದ್: ಕೇವಲ 1 ಗಂಟೆ 57 ನಿಮಿಷ!

ಪುಣೆ – ಹೈದರಾಬಾದ್: ಕೇವಲ 2 ಗಂಟೆ 8 ನಿಮಿಷ!

ದೆಹಲಿ – ಲಕ್ನೋ: ಕೇವಲ 2 ಗಂಟೆ!

ದೆಹಲಿ – ವಾರಣಾಸಿ: ಕೇವಲ 3 ಗಂಟೆ 15 ನಿಮಿಷ!

ದೆಹಲಿ – ಸಿಲಿಗುರಿ: ಸುಮಾರು 6 ಗಂಟೆ!

ಇದನ್ನೂ ಓದಿ: ವನ್ಯಜೀವಿ ಪ್ರಿಯರಿಗೆ ಗುಡ್​​ನ್ಯೂಸ್​​: ಬಂಡೀಪುರ, ನಾಗರಹೊಳೆ ಸಫಾರಿ ಪೂರ್ಣ ಪ್ರಮಾಣದಲ್ಲಿ ಪುನರಾರಂಭ

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಈ ಮೆಗಾ ಯೋಜನೆಯಿಂದ ಬಿಹಾರ ರಾಜ್ಯಕ್ಕೆ ಭಾರಿ ಲಾಭವಾಗಲಿದೆ. ದೆಹಲಿ-ವಾರಣಾಸಿ-ಪಟ್ನಾ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಮಂಜೂರಾತಿ ಸಿಕ್ಕಿದ್ದು, ಇದು ಕಾರ್ಯರೂಪಕ್ಕೆ ಬಂದಲ್ಲಿ ಪಟ್ನಾದಿಂದ ದೆಹಲಿಗೆ ಕೇವಲ 4 ಗಂಟೆ 41 ನಿಮಿಷಗಳಲ್ಲಿ ತಲುಪಬಹುದಾಗಿದೆ. ಅಷ್ಟೇ ಅಲ್ಲದೆ, ಪೂರ್ವ ಭಾರತದ ಕನೆಕ್ಟಿವಿಟಿಯನ್ನು ಮತ್ತಷ್ಟು ಬಲಪಡಿಸಲು ಈ ಕಾರಿಡಾರ್ ಅನ್ನು ಬಿಹಾರದ ಮೂಲಕ ಪಶ್ಚಿಮ ಬಂಗಾಳದ ಸಿಲಿಗುರಿವರೆಗೂ ವಿಸ್ತರಿಸುವ ಆಲೋಚನೆಯಲ್ಲಿ ಸರ್ಕಾರ ತೊಡಗಿದೆ. ಈ ಹೈ-ಸ್ಪೀಡ್ ರೈಲುಗಳು ರಸ್ತೆ ಮತ್ತು ವಾಯು ಸಾರಿಗೆಯ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಮಂತಾ ಸಿನಿಮಾಕ್ಕೆ ನಿರ್ಮಾಪಕರೇ ಇರಲಿಲ್ಲ, ಈಗ ಕೋಟಿಗಳಲ್ಲಿ ಗಳಿಕೆ – Kannada News | Producers backed out from Samantha Ruth Prabhu’s Maa Inti Bangaram movie

ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣ ಭಾರತದ ಬಲು ಬೇಡಿಕೆಯ ನಟಿಯಾಗಿದ್ದವರು. ಆದರೆ ಕಳೆದ ಕೆಲ ವರ್ಷಗಳಿಂದ ಅವರಿಗೆ ಬೇಡಿಕೆ ಕಡಿಮೆ ಆಗಿದೆ. ಈ ಬಗ್ಗೆ ಕೆಲ ಬಾರಿ ಅವರೇ ಹೇಳಿಕೊಂಡಿದ್ದರು. ಇತ್ತೀಚೆಗೆ ಅವಕಾಶಗಳು ಕಡಿಮೆ ಆಗಿವೆ ಎಂದು. ಇತ್ತೀಚೆಗಷ್ಟೆ ಅವರ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ಒಂದು ವಾರದ ಒಳಗೆ 50 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಸಿನಿಮಾ ಅನ್ನು ಕುಟುಂಬ ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಗುಂಪು-ಗುಂಪಾಗಿ ಬಂದು ಸಿನಿಮಾ ನೋಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಕ್ಕೆ ನಿರ್ಮಾಪಕರೇ ಸಿಕ್ಕಿರಲಿಲ್ಲಿವಂತೆ. ಈ ಬಗ್​ಗೆ ಖುದ್ದು ಸಮಂತಾರ ಪತಿ ರಾಜ್ ನಿಧಿಮೋರು ಹೇಳಿಕೊಂಡಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾಕ್ಕೆ ಯಾವುದೇ ಬೆಂಬಲ ಇರಲಿಲ್ಲ. ವಾಸ್ತವವಾಗಿ, ಕೆಲ ನಿರ್ಮಾಪಕರು ನಮ್ಮ ಚಿತ್ರದಿಂದ ಹಿಂದೆ ಸರಿದಿದ್ದರು. ಈ ಚಿತ್ರವು ಒಂದು ರೀತಿಯಲ್ಲಿ ಸ್ವಂತ ದುಡ್ಡಿನಿಂದ ನಿರ್ಮಾಣ ಆಗಿರುವ ಸಿನಿಮಾ. ಏಕೆಂದರೆ ಯಾರೂ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಆದರೆ ನನ್ನ ವೃತ್ತಿ ಜೀವನದಲ್ಲಿ ಇಂಥಹಾ ರಿಸ್ಕ್​​ಗಳನ್ನು ನಾನು ತೆಗೆದುಕೊಂಡೇ ಬಂದಿದ್ದೀನಿ, ಹಾಗಾಗಿ ನಾವು ಖುದ್ದು ಈ ಸಿನಿಮಾ ನಿರ್ಮಾಣ ಮಾಡಿದೆವು’ ಎಂದು ರಾಜ್ ನಿಧಿಮೋರು ಹೇಳಿದ್ದಾರೆ.

ಸಿನಿಮಾದ ಸಹ ಚಿತ್ರಕತೆಗಾರರೂ ಆಗಿರುವ ರಾಜ್ ನಿಧಿಮೋರು, ಈ ಸಿನಿಮಾಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಬಹಳ ಮಿತವ್ಯಯದಲ್ಲಿ ಮಾಡಲಾಗಿದೆ. ದೊಡ್ಡ ಬಜೆಟ್ ಎಂದರೆ ತಮಗೆ ಭಯವಾಗುತ್ತದೆ. ಸ್ವತಂತ್ರ ನಿರ್ಮಾಪಕನಾಗಿ, ನಾನು ಯಾವಾಗಲೂ ಬಜೆಟ್ ಮಿತವಾಗಿರಬೇಕು ಎಂದು ನಂಬುತ್ತೇನೆ. ಬಜೆಟ್ ಸರಿಹೊಂದದ ಚಿತ್ರವನ್ನು ನಾವು ಎಂದಿಗೂ ಮಾಡಿಲ್ಲ. ದೊಡ್ಡ ಬಜೆಟ್‌ಗಳು ನಮಗೆ ಭಯ ತರುತ್ತವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸಮಂತಾ ಮೇಲೆ ವೈಯಕ್ತಿಕ ದಾಳಿ ಮಾಡಿದವರಿಗೆ ಕಾಲವೇ ಕೊಟ್ಟಿತು ತಕ್ಕ ಉತ್ತರ

‘ಚಿತ್ರವನ್ನು ಸ್ವತಃ ನಿರ್ಮಾಣ ಮಾಡುವುದು ದೊಡ್ಡ ರಿಸ್ಕ್ ಎಂದು ಎನಿಸಿದರೂ, ಈಗ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತು ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿಯನ್ನು ನೋಡುತ್ತಿದ್ದರೆ ಖುಷಿಯಾಗುತ್ತಿದೆ. ವಾಸ್ತವವಾಗಿ, ಮಹಿಳಾ ಪ್ರಧಾನ ಚಿತ್ರಗಳಿಗೆ ಆರಂಭಿಕ ಗಳಿಕೆ ಇರುವುದಿಲ್ಲ ಮತ್ತು ಅವು ಕೇವಲ ಪ್ರಚಾರದಿಂದ ನಂತರ ಯಶಸ್ವಿಯಾಗುತ್ತವೆ ಎಂಬ ಮಿಥ್ಯೆಯನ್ನು ಈ ಚಿತ್ರವು ಮುರಿದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರವು ದಾಖಲೆಗಳನ್ನು ಮುರಿಯುತ್ತಿರುವುದನ್ನು ಕಂಡು, ಅವರು ಮುಂದಿನ ಚಿತ್ರದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳನ್ನೇ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾ ಹಿಟ್ ಆದ ಬೆನ್ನಲ್ಲೆ, ಸಮಂತಾ ತಾವು ತಾಯಿ ಆಗುತ್ತಿರುವ ಘೋಷಣೆಯನ್ನೂ ಸಹ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಳಚರಂಡಿ ಮಾಡಲು ರಸ್ತೆ ಅಗೆದು ಕಾಮಗಾರಿ ಬಳಿಕ ಹಾಗೇ ಬಿಟ್ಟ ಅಧಿಕಾರಿಗಳ ನಡೆಗೆ ಆಕ್ರೋಶ: ರಸ್ತೆ ತಡೆದು ಪ್ರತಿಭಟನೆ – Kannada News | Hubballi Civic Apathy: Angry Residents Block Highway After Authorities Dig Up Newly Built CC Road for Drains and Leave It Unrepaired

ಒಳಚರಂಡಿ ಕಾಮಗಾರಿಯಿಂದಾಗಿ ಸಂಪೂರ್ಣ ಹಾಳಾಗಿರುವ ರಸ್ತೆImage Credit source: Tv9 Kannada

ಹುಬ್ಬಳ್ಳಿ, ಜೂನ್​ 26: ಸ್ಮಾರ್ಟ್ ಸಿಟಿ ಯೋಜನೆಯಡಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸಾಕಷ್ಟು ಹಣ ಹರಿದು ಬಂದಿದೆ. ಆದ್ರೆ ನಗರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಹಣ ಪೋಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ನಗರದ ಮಂಗಳ ಓಣಿಯಲ್ಲಿ ನಡೆಸಿರುವ ಕಾಮಗಾರಿಗಳು. ಒಳಚರಂಡಿ ನಿರ್ಮಾಣ ಮಾಡಿದ ನಂತರ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಜನಸಾಮಾನ್ಯರಿಗೂ ಗೊತ್ತಿರುವ ವಿಚಾರ. ಆದರೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ನಿರ್ಮಿಸಿದ್ದ ರಸ್ತೆಯನ್ನೇ ಚರಂಡಿ ಮಾಡಲೆಂದು ಇಲ್ಲಿ ಅಗೆಯಲಾಗಿದೆ. ಬಳಿಕ ರಸ್ತೆ ದುರಸ್ತಿಯನ್ನೂ ಮಾಡದೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿರೋದು ಸ್ಥಳೀಯ ನಿವಾಸಿಗಳನ್ನು ಕೆರಳಿಸಿದೆ.

ಈ ಹಿಂದೆ ಮಂಗಳ ಓಣಿ ಮೂಲ ಸೌಕರ್ಯಗಳನ್ನು ಕಂಡಿರಲಿಲ್ಲ. ಚರಂಡಿ, ರಸ್ತೆ ಸೇರಿದಂತೆ ಕುಡಿಯುವ ನೀರಿಗೂ ಸಮಸ್ಯೆಯಿತ್ತು. ಕೊನೆಗೂ ಇಲ್ಲಿನ ನಿವಾಸಿಗಳ ಬೆಡಿಕೆ ಸ್ಪಂದಿಸಿದ್ದ ಆಡಳಿತ ಎರಡು ವರ್ಷದ ಹಿಂದಷ್ಟೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿಸಿ ರಸ್ತೆ ನಿರ್ಮಾಣ ಮಾಡಿತ್ತು. ಆದರೆ ಚರಂಡಿ ನಿರ್ಮಿಸೋದನ್ನು ಅಧಿಕಾರಿಗಳು ಮರೆತಿದ್ದರು. ಹೀಗಾಗಿ ಮನೆಗೆ ನೀರು ನುಗ್ಗಲು ಆರಂಭವಾದ ಕಾರಣ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಚರಂಡಿ ಮಾಡಲು ಹೊರಟ ಅಧಿಕಾರಿಗಳು, ನಿರ್ಮಾಣ ಮಾಡಿದ್ದ ರಸ್ತೆಯನ್ನೇ ಅಗೆದು ಕೆಲ ತಿಂಗಳ ಹಿಂದೆ ಕಾಮಗಾರಿ ನಡೆಸಿದ್ದಾರೆ. ಕೆಲಸ ಮುಗಿದ ಮೇಲೆ ಕನಿಷ್ಠ ರಸ್ತೆ ರಿಪೇರಿಯನ್ನೂ ಮಾಡದೆ ಹಾಗೆಯೇ ಬಿಟ್ಟ ಕಾರಣ ಬಡಾವಣೆಯಲ್ಲಿ ಓಡಾಡಲೂ ಜನ ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ:  ದಲಿತರಿಗೆ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಹಿಂದೇಟು; ಕಾರಣವೇನು ಗೊತ್ತಾ?

ರಸ್ತೆ ತಡೆದು ಪ್ರತಿಭಟನೆ

ಅಧಿಕಾರಿಗಳ ನಡೆ ವಿರುದ್ಧ ಸಿಡಿದೆದ್ದಿರುವ ಸ್ಥಳೀಯ ನಿವಾಸಿಗಳು, ನಗರದಿಂದ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸುಮಾರು ಒಂದು ಗಂಟೆಗಳ ಕಾಲ ತಡೆದು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಮನವೊಲಿಸಲು ಸ್ಥಳಕ್ಕೆ ಬಂದ ಪೊಲೀಸರು, ಅಧಿಕಾರಿಗಳ ವಿರುದ್ಧವೇ ಪ್ರತಿಭಟನಾಕಾರರು ಗರಂ ಆದ ಪ್ರಸಂಗವೂ ನಡೆದಿದೆ. ಉಂಟಾಗಿರುವ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹತ್ತಾರು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಸ್ತೆ ದುರಾವಸ್ತೆ ಕಾರಣ ಅನೇಕರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ. ಹೀಗಾಗಿಯೇ ನಾವು ಹೋರಾಟದ ಹಾದಿ ತುಳಿದಿದ್ದೇವೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:30 pm, Fri, 26 June 26

Source link

ನಂಬಿಕೆಯೊಂದಿಗೆ ಆಟವಾಡುವುದನ್ನು ಒಪ್ಪಲಾಗದು; ರಾಮ ಮಂದಿರದ ದೇಣಿಗೆ ಕಳ್ಳತನದ ಕುರಿತು ಸಿಎಂ ಯೋಗಿ ಆಕ್ರೋಶ – Kannada News | Uttar Pradesh CM Yogi Adityanath first Reaction After Arrests In Ram Temple Donation Theft Case

ಲಕ್ನೋ, ಜೂನ್ 26: ಅಯೋಧ್ಯೆಯ ರಾಮ ಮಂದಿರದ (Ram Mandir) ದೇಣಿಗೆ ನಿಧಿಯ ದುರುಪಯೋಗ ಮತ್ತು ಕಳ್ಳತನದ ಆರೋಪದ ಮೇಲೆ ಕೆಲವರನ್ನು ಬಂಧಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. “ಕೋಟಿಗಟ್ಟಲೆ ಭಕ್ತರ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಯೊಂದಿಗೆ ಆಟವಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾರ್ವಜನಿಕರು ನೀಡಿದ ಕಾಣಿಕೆಯಲ್ಲಿ ಅವ್ಯವಹಾರ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯೋಗಿ ಸ್ಪಷ್ಟಪಡಿಸಿದ್ದಾರೆ.

ನಂಬಿಕೆಗೆ ದ್ರೋಹ ಬಗೆದರೆ ಕಠಿಣ ಶಿಕ್ಷೆ:

ಈ ಪ್ರಕರಣದ ಕುರಿತು ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, “ರಾಮ ಮಂದಿರವು ಕೇವಲ ಒಂದು ಧಾರ್ಮಿಕ ರಚನೆಯಲ್ಲ, ಅದು ವಿಶ್ವದಾದ್ಯಂತ ಇರುವ ಸನಾತನ ಧರ್ಮೀಯರ ಆಳವಾದ ನಂಬಿಕೆಯ ಸಂಕೇತವಾಗಿದೆ. ಭಕ್ತರು ತಮ್ಮ ಕಷ್ಟದ ಗಳಿಕೆಯನ್ನು ಮಂದಿರದ ನಿಧಿಗೆ ಸಮರ್ಪಿಸುತ್ತಾರೆ. ಇಂತಹ ಪವಿತ್ರ ನಿಧಿಯ ಮೇಲೆ ಕಣ್ಣು ಹಾಕುವ ಅಥವಾ ಭಕ್ತರ ನಂಬಿಕೆಗೆ ದ್ರೋಹ ಬಗೆಯುವ ಯಾವುದೇ ಪ್ರಯತ್ನವನ್ನು ಸರ್ಕಾರವು ಸಹಿಸುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ: ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಸಹಾಯಕ ಸೇರಿ 8 ಮಂದಿ ಬಂಧನ

ತಪ್ಪಿತಸ್ಥರ ವಿರುದ್ಧ ಕಠಿಣ ಕಾಯ್ದೆಗಳಡಿ ಕ್ರಮ:

ಈ ಹಗರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನಿನ ಮುಂದೆ ನಿಲ್ಲಿಸಲಾಗುವುದು. ಕಳ್ಳತನ ಹಾಗೂ ವಂಚನೆ ನಡೆಸಿರುವ ಆರೋಪಿಗಳ ವಿರುದ್ಧ ಕೇವಲ ಸಾಮಾನ್ಯ ಪ್ರಕರಣ ಮಾತ್ರವಲ್ಲದೆ, ಅಗತ್ಯ ಬಿದ್ದರೆ ಗ್ಯಾಂಗ್‌ಸ್ಟರ್ ಕಾಯ್ದೆ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕ್ರಮಗಳನ್ನು ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಅವರು ಸೂಚಿಸಿದ್ದಾರೆ.

ಪಾರದರ್ಶಕತೆಗೆ ಆದ್ಯತೆ:

ರಾಮ ಮಂದಿರದ ವ್ಯವಸ್ಥೆ ಹಾಗೂ ದೇಣಿಗೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸುರಕ್ಷಿತ ಮತ್ತು ಪಾರದರ್ಶಕವಾಗಿಡಲು ಸರ್ಕಾರ ಮತ್ತು ಟ್ರಸ್ಟ್ ಬದ್ಧವಾಗಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಲೋಪದೋಷಗಳು ಮರುಕಳಿಸದಂತೆ ತಾಂತ್ರಿಕ ಹಾಗೂ ಭದ್ರತಾ ಆಡಿಟ್‌ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ರಾಮ ಮಂದಿರದ ದೇಣಿಗೆ ಪೆಟ್ಟಿಗೆಗಳು ಹಾಗೂ ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲಿ ಕೆಲವು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬ್ಯಾಂಕ್ ನೌಕರರು ಅಥವಾ ಮಧ್ಯವರ್ತಿಗಳು ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿಯವರ ಈ ಹೇಳಿಕೆಯು ಕಾನೂನು ಸುವ್ಯವಸ್ಥೆಯ ಕಟ್ಟುನಿಟ್ಟಿನ ಸಂದೇಶವನ್ನು ರವಾನಿಸಿದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣಕ್ಕೆ ಭಾರಿ ತಿರುವು, ಎಸ್‌ಐಟಿಯಿಂದ 15 ಪುಟಗಳ ವರದಿ ಸಲ್ಲಿಕೆ, ಏನೇನಿದೆ?

“ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಯಾವಾಗಲೂ ವಿರೋಧಿಸುತ್ತಿದ್ದ ಮತ್ತು ಶ್ರೀರಾಮನ ಅಸ್ತಿತ್ವವನ್ನೇ ನಿರಾಕರಿಸಿದ್ದವರೇ ಈಗ ರಾಮ ಮಂದಿರದ ದೇಣಿಗೆಯ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಅವರು ಶ್ರೀರಾಮನೇ ಇರಲಿಲ್ಲ ಎಂದು ವಾದಿಸಿದ್ದರು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮಂದಿರದ ವಿರುದ್ಧ ನಿರಂತರವಾಗಿ ಹೋರಾಡಿದ್ದರು. ಅವರು ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದರು ಮತ್ತು ರಾಮನವಮಿಯಂದು ನಡೆದ ದಲಭೆಗಳಿಗೂ ಅವರೇ ಕಾರಣವಾಗಿದ್ದರು. ಅವರ ಬಳಿ ಪುರಾವೆಗಳಿದ್ದರೆ, ಅದನ್ನು ಎಸ್‌ಐಟಿಗೆ ಹಸ್ತಾಂತರಿಸಲಿ. ಈ ವಿಷಯವನ್ನು ರಾಜಕೀಯಗೊಳಿಸುವುದರಿಂದ ಅವರು ದೂರವಿರಬೇಕು” ಎಂದು ಸಿಎಂ ಆಕ್ರೋಶ ಹೊರಹಾಕಿದ್ದಾರೆ.

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಪ್ರಮುಖ ಸಹಾಯಕ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ 8 ಮಂದಿ ಆರೋಪಿಗಳನ್ನು ಎಸ್‌ಐಟಿ ವರದಿಯ ಆಧಾರದ ಮೇಲೆ ಬಂಧಿಸಿದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಶೀಘ್ರದಲ್ಲೇ ಮತ್ತಷ್ಟು ಬಂಧನಗಳಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಆಫ್ರಿಕಾ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳ ಅಬ್ಬರ; ಸ್ಥಳೀಯ ಉತ್ಪಾದನೆಗೂ ಮುಂದು – Kannada News | Indian FMCG giants turn Africa as their growth engine, and not mere export market

ಶಾಪಿಂಗ್ ಮಾಡುತ್ತಿರುವ ಮಹಿಳೆಯ ಚಿತ್ರImage Credit source: bymuratdeniz/E+/Getty Images

ನವದೆಹಲಿ, ಜೂನ್ 26: ಭಾರತದ ಎಫ್​ಎಂಸಿಜಿ (FMCG) ಕಂಪನಿಗಳಿಗೆ ಈಗ ಆಫ್ರಿಕಾ ಒಂದು ಮಾರುಕಟ್ಟೆ ಮಾತ್ರವೇ ಆಗಿ ಉಳಿದಿಲ್ಲ. ಅದು ಈ ಕಂಪನಿಗಳ ಬ್ಯುಸಿನೆಸ್​ಗೆ ಗ್ರೋತ್ ಎಂಜಿನ್ ಆಗಿದೆ. ಅಲ್ಲಿ ಭಾರತೀಯ ಕಂಪನಿಗಳು ನೆಲೆ ಭದ್ರಪಡಿಸಿಕೊಳ್ಳುತ್ತಿರುವುದು ಎಕನಾಮಿಕ್ ಟೈಮ್ಸ್ ವರದಿಯೊಂದರಿಂದ ತಿಳಿದುಬಂದಿದೆ. ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ಮ್ಯಾರಿಕೋ, ಡಾಬರ್ ಮತ್ತು ವರುಣ್ ಬೆವರೇಜಸ್​ನಂತಹ ಭಾರತದ ದೈತ್ಯ ಕಂಪನಿಗಳು ಆಫ್ರಿಕಾವನ್ನು ಕೇವಲ ರಫ್ತು ಮಾಡುವ ದೇಶವನ್ನಾಗಿ ನೋಡದೆ, ತಮ್ಮ ದೀರ್ಘಕಾಲದ ಪ್ರಮುಖ ಬೆಳವಣಿಗೆಯ ಕೇಂದ್ರವನ್ನಾಗಿ (Growth Engine) ಪರಿಗಣಿಸುತ್ತಿವೆಯಂತೆ. ಆಫ್ರಿಕಾದಲ್ಲಿನ ಯುವ ಜನಸಂಖ್ಯೆ ಮತ್ತು ಶರವೇಗದ ನಗರೀಕರಣವು ಇವರ ಈ ದೊಡ್ಡ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.

ಭಾರತದ ಎಫ್​ಎಂಸಿಜಿ ಕಂಪನಿಗಳ ಪಾಲಿಗೆ ಆಫ್ರಿಕನ್ ದೇಶಗಳು ಉತ್ಪನ್ನಗಳ ಮಾರಾಟ ಕೇಂದ್ರಗಳಂತಿದ್ದವು. ಇಲ್ಲಿ ಮಾರುಕಟ್ಟೆ ಪ್ರವೇಶ ಮಾಡುವುದು ಈ ಕಂಪನಿಗಳ ಪ್ರಯತ್ನವಾಗಿತ್ತು. ಈಗ ಬದಲಾದ ಸನ್ನಿವೇಶದಲ್ಲಿ ದೊಡ್ಡ ಮಟ್ಟದ ಬ್ಯುಸಿನೆಸ್ ವಿಸ್ತರಣೆಯ ಅವಕಾಶ ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಬಹಳ ವಿಸ್ತಾರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣಕ್ಕೆ ಭಾರತೀಯ ಕಂಪನಿಗಳು ಆಫ್ರಿಕಾದಲ್ಲಿ ಮ್ಯಾನುಫ್ಯಾಕ್ಚರಿಂಗ್, ಡಿಸ್ಟ್ರಿಬ್ಯೂಶನ್ ಜಾಲಕ್ಕೆ ಭರ್ಜರಿ ಹೂಡಿಕೆ ಮಾಡುತ್ತಿವೆ. ಸ್ಥಳೀಯ ಬ್ರ್ಯಾಂಡ್​ಗಳನ್ನು ಕಟ್ಟಿ ವ್ಯಾಪಾರಾವಕಾಶ ಹೆಚ್ಚಿಸಲು ಯೋಜಿಸಿವೆ.

ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್ (GCPL) ಭರ್ಜರಿ ಬ್ಯುಸಿನೆಸ್

ಆಫ್ರಿಕಾದಲ್ಲಿ ಈಗಾಗಲೇ ಭದ್ರವಾಗಿ ನೆಲೆಸಿರುವ ಗೋದ್ರೇಜ್ ಕಂಪನಿಯ ಹೇರ್ ಕೇರ್ ಮತ್ತು ಏರ್ ಕೇರ್ ಉತ್ಪನ್ನಗಳು ಶೇ. 20 ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುತ್ತಿವೆ. ಕಂಪನಿಯು ಮುಂದಿನ ದಿನಗಳಲ್ಲೂ ಇಲ್ಲಿ ದೊಡ್ಡ ಹೂಡಿಕೆಯನ್ನು ಮುಂದುವರಿಸಲು ಯೋಜಿಸಿದೆ.

ಇದನ್ನೂ ಓದಿ: ರಾಜ್ಯಗಳ ಆರ್ಥಿಕ ಆರೋಗ್ಯಕ್ಕೆ ಉರುಳಾಗುತ್ತಿರುವ ಉಚಿತ ಕೊಡುಗೆಗಳು; ಕರ್ನಾಟಕಕ್ಕೆ ಅತಿಹೆಚ್ಚು ಬಾಧೆ; ಬೆಚ್ಚಿಬೀಳಿಸಿದೆ ಸಿಎಜಿ ವರದಿ

ವರುಣ್ ಬೆವರೇಜಸ್ (VBL) ಸಾಮ್ರಾಜ್ಯ ವಿಸ್ತರಣೆ

ಪೆಪ್ಸಿಕೋ ಉತ್ಪನ್ನಗಳ ಪ್ರಮುಖ ಬಾಟ್ಲಿಂಗ್ ಕಂಪನಿಯಾದ ವರುಣ್ ಬೆವರೇಜಸ್ ಮೊರಾಕೊ, ಜಿಂಬಾಬ್ವೆ, ಜಾಂಬಿಯಾ, ಕಾಂಗೋ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಸಾಫ್ಟ್ ಡ್ರಿಂಕ್ಸ್ ಕಂಪನಿಯಾದ ‘ಟ್ವಿಜ್ಜಾ’ (Twizza) ಅನ್ನು ಖರೀದಿಸಿರುವುದು ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಕಂಪನಿಯು ಕೀನ್ಯಾದಲ್ಲಿ ಡೈರಿ (ಡೈರಿ ಉತ್ಪನ್ನಗಳು) ವ್ಯವಹಾರವನ್ನೂ ನಡೆಸುತ್ತಿದೆ.

ಸಹಾರ ಪ್ರದೇಶದಲ್ಲಿ ಡಾಬರ್ ಇಂಡಿಯಾ ಬ್ಯುಸಿನೆಸ್ ಹೆಚ್ಚಳ

ಇತ್ತೀಚಿನ ತ್ರೈಮಾಸಿಕದಲ್ಲಿ ಡಾಬರ್‌ನ ಅಂತರರಾಷ್ಟ್ರೀಯ ವ್ಯವಹಾರವು ಉತ್ತಮ ಪ್ರಗತಿ ಕಂಡಿದ್ದು, ವಿಶೇಷವಾಗಿ ಉಪ-ಸಹಾರನ್ ಆಫ್ರಿಕಾ (Sub-Saharan Africa) ವಲಯದಲ್ಲಿ ಶೇ. 20 ರಷ್ಟು ಭಾರಿ ಬೆಳವಣಿಗೆ ದಾಖಲಿಸಿದೆ.

ಮ್ಯಾರಿಕೋದ ಹೇರ್ ಕೇರ್ ಬ್ಯುಸಿನೆಸ್ ಆಫ್ರಿಕಾದಲ್ಲಿ ಹೆಚ್ಚಳ

ದಕ್ಷಿಣ ಆಫ್ರಿಕಾದಲ್ಲಿ ಮ್ಯಾರಿಕೋ ಕಂಪನಿಯ (Marico) ಕೂದಲಿನ ಆರೈಕೆ ಉತ್ಪನ್ನಗಳ ವ್ಯವಹಾರವು ಶೇ. 8 ರಷ್ಟು ಬೆಳವಣಿಗೆ (ಸ್ಥಿರ ಕರೆನ್ಸಿಯಲ್ಲಿ – Constant Currency Growth) ಕಂಡಿದೆ.

ಇದನ್ನೂ ಓದಿ: ಎಐ ‘ಕಿಲ್ ಸ್ವಿಚ್’ ಕಡ್ಡಾಯ: ಬ್ಯಾಂಕುಗಳಿಗೆ ಆರ್​ಬಿಐ ಹೊಸ ಪ್ರಸ್ತಾಪಿತ ನಿಯಮ

ರಫ್ತು ಮಾದರಿಯಿಂದ ಸ್ಥಳೀಯ ಉತ್ಪಾದನೆಯತ್ತ ಬದಲಾವಣೆ

ಭಾರತೀಯ ಕಂಪನಿಗಳು ಈ ಹಿಂದೆ ಆಫ್ರಿಕಾಕ್ಕೆ ಕೇವಲ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದವು. ಆದರೆ ಈಗ ಆಫ್ರಿಕಾದಲ್ಲೇ ಸ್ಥಳೀಯ ಉತ್ಪಾದನಾ ಘಟಕಗಳನ್ನು (Local Manufacturing) ಸ್ಥಾಪಿಸುತ್ತಿವೆ ಮತ್ತು ಅಲ್ಲಿನ ಸಾಂಪ್ರದಾಯಿಕ ರೀಟೇಲ್ ಸೇಲ್ಸ್ ನೆಟ್ವರ್ಕ್ ಬಳಸಿಕೊಂಡು ಡಿಸ್ಟ್ರಿಬ್ಯೂಶನ್ ಸಿಸ್ಟಂ ಅನ್ನು ಬಲಪಡಿಸುತ್ತಿವೆ. ಇಥಿಯೋಪಿಯಾ, ರುವಾಂಡಾ, ಟಾಂಜಾನಿಯಾ ಮತ್ತು ಉಗಾಂಡಾದಂತಹ ದೇಶಗಳು ಸ್ಥಿರವಾಗಿ ಶೇ. 6-7 ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತಿರುವುದು ಇವರಿಗೆ ಹೆಚ್ಚಿನ ಅನುಕೂಲ ತಂದಿಕೊಟ್ಟಿದೆ.

ಭಾರತೀಯ ಕಂಪನಿಗಳಿಗೆ ಎದುರಾಗಲಿರುವ ಸವಾಲುಗಳೇನು?

ಆಫ್ರಿಕಾದಲ್ಲಿ ವ್ಯವಹಾರ ನಡೆಸಲು ದೊಡ್ಡ ಅವಕಾಶಗಳಿದ್ದರೂ ಸವಾಲುಗಳೂ ಕಡಿಮೆ ಇಲ್ಲ. ಪ್ರಮುಖವಾಗಿ ಆಫ್ರಿಕಾದ ವಿವಿಧ ದೇಶಗಳ ಕರೆನ್ಸಿ ಮೌಲ್ಯದಲ್ಲಿ ಆಗಾಗ ಉಂಟಾಗುವ ಭಾರಿ ಏರಿಳಿತಗಳು (Currency Volatility) ಮತ್ತು ಅಲ್ಲಿನ ಹಣದುಬ್ಬರ (Inflation) ಕಂಪನಿಗಳ ಲಾಭದ ಮೇಲೆ ಪರಿಣಾಮ ಬೀರುತ್ತಿವೆ. ಆದರೆ, ಭಾರತೀಯ ಕಂಪನಿಗಳು ಹೊಂದಿರುವ ದಶಕಗಳ ಅನುಭವ ಮತ್ತು ಬ್ರಾಂಡ್ ಮೇಲಿನ ನಂಬಿಕೆ ಈ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಯಾಣಿಕರ ಗಮನಕ್ಕೆ: ಶನಿವಾರ ಬೆಳಿಗ್ಗೆ 4 ಗಂಟೆಯಿಂದಲೇ ಮೆಟ್ರೋ ಸೇವೆ, ವಿಶೇಷ ಏನು ಗೊತ್ತಾ? – Kannada News | Bangaluru Metro Saturday Timings | BMRCL Announces Special Early Metro Services for Bengaluru BDA Tree Planting and Walkathon on June 27

ಬೆಂಗಳೂರು, ಜೂನ್​​ 26: ಬಿಡಿಎ ಸಹಯೋಗದಲ್ಲಿ ನಾಳೆ ಅಂದರೆ ಜೂನ್​​ 27ರಂದು ಬೆಂಗಳೂರಿನ ಹಲವೆಡೆ ಸಸಿ ನೆಡುವ ಹಾಗೂ ವಾಕ್‌ಥಾನ್​​ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಿನಜಾವ 4 ಗಂಟೆಯಿಂದಲೇ ನಗರದಲ್ಲಿ ನಮ್ಮ ಮೆಟ್ರೋ (Namma Metro) ಸೇವೆ ಆರಂಭಗೊಳ್ಳಲಿದೆ. ಈ ವಿಶೇಷ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮನವಿ ಮಾಡಿದೆ.

ಬಿಎಂಆರ್​ಸಿಎಲ್​ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಬಿಎಂಆರ್​ಸಿಎಲ್​ ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊಡಿಸಿದೆ. ಬಿಡಿಎ ವತಿಯಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್‌ಥಾನ್‌ನಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಜೂನ್ 27ರ ಶನಿವಾರ ವಿಶೇಷ ಮುಂಜಾನೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ.

ನಮ್ಮ ಮೆಟ್ರೋ ಟ್ವೀಟ್​

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಸುಲಭವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪುವ ಉದ್ದೇಶದಿಂದ, ನಮ್ಮ ಮೆಟ್ರೋ ಎಲ್ಲಾ ಮಾರ್ಗಗಳ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 4 ಗಂಟೆಗೆ ರೈಲು ಸಂಚಾರವನ್ನು ಆರಂಭಿಸುತ್ತಿದೆ. ಇದು ಸಾಮಾನ್ಯ ಶನಿವಾರದ ಬೆಳಿಗ್ಗೆ 5 ಗಂಟೆಯ ಸೇವೆಗಿಂತ ಒಂದು ಗಂಟೆ ಮುಂಚಿತವಾಗಿ ರೈಲು ಸಂಚಾರ ಆರಂಭವಾಗಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ 3 ವರ್ಷದಲ್ಲಿ 21 ಬಾರಿ ಯಡವಟ್ಟು: ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ, ತನಿಖೆಗೆ ಪತ್ರ

ಸಾರ್ವಜನಿಕರು ಈ ವಿಶೇಷ ಮುಂಜಾನೆ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಂಡು, ಬಿಡಿಎ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್‌ಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಹಾಗೂ ಸುರಕ್ಷಿತ, ಸುಗಮ ಮತ್ತು ಪರಿಸರ ಸ್ನೇಹಿ ಮೆಟ್ರೋ ಸೇವೆಯನ್ನು ಬಳಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಇನ್ನು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:11 pm, Fri, 26 June 26

Source link

ಆಪರೇಷನ್ ಸಿಂಧೂರ್​​ ಕಾರ್ಯಾಚರಣೆ ವೇಳೆ ಹುತಾತ್ಮರಾದ ವೀರ ಯೋಧರ ಹೆಸರು ಪ್ರಕಟ – Kannada News | Operation Sindhoor Martyrs: India Reveals 6 Heroes’ Names at National War Memorial

ನವದೆಹಲಿ, ಜೂನ್ 26: ಶತ್ರು ರಾಷ್ಟ್ರದ ನೆಲದಲ್ಲಿದ್ದ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲು ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ್ದ ರಹಸ್ಯ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ನಲ್ಲಿ (Operation Sindhoor) ದೇಶಕ್ಕಾಗಿ ತ್ಯಾಗ ಮಾಡಿದ ಆರು ವೀರ ಸೈನಿಕರ ಹೆಸರುಗಳನ್ನು ಭಾರತ ಸರ್ಕಾರ ಮೊದಲ ಬಾರಿಗೆ ಅಧಿಕೃತವಾಗಿ ಸಾರ್ವಜನಿಕಗೊಳಿಸಿದೆ. ಈ ಧೈರ್ಯಶಾಲಿ ಯೋಧರ ಹೆಸರುಗಳನ್ನು ನವದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದ (National War Memorial) ಗೌರವ ಪಟ್ಟಿಯಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ.

ಏನಿದು ‘ಆಪರೇಷನ್ ಸಿಂಧೂರ್’?
ಏಪ್ರಿಲ್ 2025 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಕ್ರೂರ ದಾಳಿ ನಡೆಸಿದ್ದರು. ಮಹಿಳೆಯರ ಕಣ್ಣೆದುರೇ ಅವರ ಪತಿಯಂದಿರನ್ನು ಕೊಂದು 26 ನಾಗರಿಕರ ಪ್ರಾಣ ತೆಗೆದಿದ್ದರು.

ಮಹಿಳೆಯರ ಈ ಆಘಾತ ಮತ್ತು ಭಾವನಾತ್ಮಕ ನೋವಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಪಡೆಗಳು ಮೇ 6 ಮತ್ತು 7, 2025 ರ ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ 9 ಪ್ರಮುಖ ಉಗ್ರರ ಅಡಗುತಾಣಗಳ ಮೇಲೆ ನಿಖರವಾದ ಹಾಗೂ ಭೀಕರ ದಾಳಿ ನಡೆಸಿದವು. ಇದಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿತ್ತು. ಭಾರತದ ಹೊಡೆತಕ್ಕೆ ನಡುಗಿದ ಪಾಕಿಸ್ತಾನವು ದಾಳಿ ನಿಲ್ಲಿಸುವಂತೆ ಬೇಡಿಕೊಂಡ ಬಳಿಕ ಮೇ 10 ರಂದು ಕಾರ್ಯಾಚರಣೆ ಮುಕ್ತಾಯವಾಗಿತ್ತು.

ಮತ್ತಷ್ಟು ಓದಿ: Operation Sindoor: ಆಪರೇಷನ್ ಸಿಂಧೂರ್, ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ

ಈ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಭಾರತೀಯ ಭೂಸೇನೆಯ ಐವರು ಮತ್ತು ವಾಯುಸೇನೆಯ ಒಬ್ಬ ಸಾರ್ಜೆಂಟ್ ಸೇರಿದಂತೆ ಒಟ್ಟು ಆರು ಜನ ಧೀರರು ವೀರಮರಣ ಅಪ್ಪಿದ್ದರು. ಅವರ ಅಧಿಕೃತ ವಿವರಗಳು ಇಲ್ಲಿವೆ:

ಸುಬೇದಾರ್ ಮೇಜರ್ ಪವನ್ ಕುಮಾರ್
ರೈಫಲ್‌ಮ್ಯಾನ್ ಸುನಿಲ್ ಕುಮಾರ್
ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್
ಅಗ್ನಿವೀರ್ ಮೂಡ್ ಮುರಳಿ ನಾಯಕ್
ಹವಾಲ್ದಾರ್ ಸುನಿಲ್ ಕುಮಾರ್ ಸಿಂಗ್
ಸಾರ್ಜೆಂಟ್ ಸುರೇಂದ್ರ ಕುಮಾರ್

ದೇಹ ತ್ಯಾಗ ಮಾಡಿದ ಈ ಸೈನಿಕರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ‘ವಾಲ್ 3D’ ಯ 2025 ರ ವಿಶೇಷ ವಿಭಾಗದಲ್ಲಿ, ಗ್ರಾನೈಟ್ ಇಟ್ಟಿಗೆಗಳ ಮೇಲೆ ಕೆತ್ತಲಾಗಿದೆ. ಇನ್ಮುಂದೆ ಸ್ಮಾರಕಕ್ಕೆ ಭೇಟಿ ನೀಡುವ ಲಕ್ಷಾಂತರ ಸಂದರ್ಶಕರು ಹಾಗೂ ದೇಶದ ನಾಗರಿಕರು ಈ ಆರು ಯೋಧರ ಅಪ್ರತಿಮ ಶೌರ್ಯ ಮತ್ತು ದೇಶಭಕ್ತಿಯ ಸಾಹಸಗಾಥೆಯನ್ನು ಇಲ್ಲಿ ಓದುವುದರ ಜೊತೆಗೆ ಅವರಿಗೆ ಗೌರವ ನಮನ ಸಲ್ಲಿಸಬಹುದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:07 pm, Fri, 26 June 26

Source link

ಸಾಲು ಸಾಲು ರಜೆ ಎಫೆಕ್ಟ್: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ – Kannada News | Heavy Rush of Tourists and Devotees at Himavad Gopalaswamy Betta in Chamarajanagar Due to Long Weekend Holidays

ಚಾಮರಾಜನಗರ, ಜೂನ್ 26: ವಾರಾಂತ್ಯದ ಸಾಲು ರಜೆಗಳ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರ ದಂಡು ಕಾಣಿಸಿಕೊಂಡಿದೆ. ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ತಾಣವಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಶುಕ್ರವಾರವೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಹರಿದುಬಂದಿದ್ದಾರೆ. ಹಚ್ಚ ಹಸಿರಿನ ಪ್ರಕೃತಿಯ ಮಡಿಲಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದಲೂ ಸಾವಿರಾರು ಪ್ರವಾಸಿಗರು ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಬೆಟ್ಟದ ಮೇಲೆ ಬಿಳಿ ಹೊದಿಕೆಯಂತೆ ಆವರಿಸಿರುವ ಹಿಮ ಮತ್ತು ಅಲ್ಲಿನ ತಂಪಾದ, ಆಹ್ಲಾದಕರ ವಾತಾವರಣ ಪ್ರವಾಸಿಗರ ಮನ ಸೆಳೆಯುತ್ತಿದೆ. ಆಗಮಿಸಿದ ಭಕ್ತರು ಶ್ರೀ ಸಂತಾನ ಗೋಪಾಲಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನಂತರ ಬೆಟ್ಟದ ಅದ್ಭುತ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು ಆನಂದಿಸುತ್ತಿದ್ದಾರೆ.

ಒಂದೇ ಬಾರಿಗೆ ಭಕ್ತರು ಹಾಗೂ ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುವುದರಿಂದ ದೇವಾಲಯದ ಆವರಣ ಹಾಗೂ ಬೆಟ್ಟಕ್ಕೆ ಸಾಗುವ ಮಾರ್ಗದಲ್ಲಿ ವಾಹನಗಳ ಸಂಚಾರ ಗಣನೀಯವಾಗಿ ಹೆಚ್ಚಾಗಿದೆ. ಶನಿವಾರ ಮತ್ತು ಭಾನುವಾರ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ರಿಟ್ಸ್ ಶತಕ, ಆಫ್ರಿಕಾಗೆ ಬೃಹತ್ ಜಯ; ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ – Kannada News | Women’s T20 WC: Brits’ Heroics and SA’s Huge Win Intensify Semifinal Battle with India

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್​ನಲ್ಲಿ (Women’s T20 World Cup 2026) ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಶತಕಗಳು ಮಾತ್ರ ದಾಖಲಾಗಿವೆ, ಆದರೆ ಪ್ರತಿ ಶತಕವೂ ಒಂದಲ್ಲ ಒಂದು ಕಾರಣಕ್ಕೆ ಐತಿಹಾಸಿಕವಾಗಿದೆ. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಟಾಜ್ಮಿನ್ ಬ್ರಿಟ್ಸ್ ಅಂತಹ ಒಂದು ಶತಕವನ್ನು ಬಾರಿಸುವ ಮೂಲಕ ತನ್ನ ತಂಡಕ್ಕೆ ದಾಖಲೆಯ ಗೆಲುವು ತಂದುಕೊಟ್ಟರು. ಲೀಗ್ ಹಂತದ ನಾಲ್ಕನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಿದ್ದ ದಕ್ಷಿಣ ಆಫ್ರಿಕಾಕ್ಕೆ ಸೆಮಿಫೈನಲ್​ ದೃಷ್ಟಿಯಿಂದ ದೊಡ್ಡ ಗೆಲುವಿನ ಅಗತ್ಯವಿತ್ತು. ಅಂತಹ ಸಂದರ್ಭದಲ್ಲಿ ತಂಡದ ಪರ ಸ್ಮರಣೀಯ ಇನ್ನಿಂಗ್ಸ್ ಆಡಿದ ಟಾಜ್ಮಿನ್ ಬ್ರಿಟ್ಸ್ ಶತಕ ಬಾರಿಸುವ ಮೂಲಕ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು.

ಎ ಗುಂಪಿನಲ್ಲಿ ಸೆಮಿಫೈನಲ್​ಗೇರಲು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಭಯ ತಂಡಗಳು ಉಳಿದಿರುವ ಪಂದ್ಯಗಳನ್ನು ಗೆದ್ದರೂ ನೆಟ್ ರನ್​ ರೇಟ್ ಆದಾರದ ಮೇಲೆ ಸೆಮಿಫೈನಲ್​ಗೇರುವ ತಂಡವನ್ನು ನಿರ್ಧರಿಸಲಾಗುತ್ತದೆ. ಪ್ರಸ್ತುತ ನೆಟ್ ರನ್ ರೇಟ್ ವಿಚಾರದಲ್ಲಿ ಭಾರತ, ದಕ್ಷಿಣ ಆಫ್ರಿಕಾಕ್ಕಿಂತ ಮುಂದಿದೆ. ಅದರಲ್ಲೂ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಜಯಗಳಿಸಿದ ನಂತರ, ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲುವುದು ದಕ್ಷಿಣ ಆಫ್ರಿಕಾಕ್ಕೆ ಇನ್ನಷ್ಟು ನಿರ್ಣಾಯಕವಾಗಿತ್ತು.

ಬ್ರಿಟ್ಸ್ ಅಜೇಯ ಶತಕ

ಅದರಂತೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ 208 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ತಂಡದ ಪರ ಇನ್ನಿಂಗ್ಸ್ ಪ್ರಾರಂಭಿಸಿದ ಬ್ರಿಟ್ಸ್ ಈ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ಅನುಭವಿ ಬ್ಯಾಟರ್ ನೆದರ್‌ಲ್ಯಾಂಡ್ಸ್‌ನ ದುರ್ಬಲ ಬೌಲಿಂಗ್​ನ ಲಾಭ ಪಡೆದು ಕೇವಲ 63 ಎಸೆತಗಳಲ್ಲಿ ಶತಕ ಬಾರಿಸಿದರು.

ಬ್ರಿಟ್ಸ್ ಇನ್ನಿಂಗ್ಸ್‌ನ ವಿಶೇಷವೆಂದರೆ ಅದು ಅವರ ಟಿ20 ಅಂತರರಾಷ್ಟ್ರೀಯ ಪಂದ್ಯದ ಮೊದಲ ಶತಕವಾಗಿತ್ತು. ಅವರು ಈ ಹಿಂದೆ ಆಡಿದ 81 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 15 ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದರು, ಆದರೆ ಎಂದಿಗೂ ಶತಕ ತಲುಪಿರಲಿಲ್ಲ. ಆದರೆ ಈ ಬಾರಿ ಬ್ರಿಟ್ಸ್ 69 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 114 ರನ್ ಬಾರಿಸಿ ಅಜೇಯರಾಗಿ ಉಳಿದರು.

88 ರನ್​ಗಳಿಂದ ಸೋತ ನೆದರ್ಲ್ಯಾಂಡ್ಸ್

ಈ ಗುರಿ ಬೆನ್ನಟ್ಟಿದ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ ಫೆಬೆ ಮೊಲ್ಕೆನ್‌ಬೋಯರ್ ಮತ್ತು ಸನ್ಯಾ ಖುರಾನಾ ಅವರೊಂದಿಗೆ ಸ್ಥಿರ ಆರಂಭ ಪಡೆಯಿತು. ಇವರಿಬ್ಬರು ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟವನ್ನಾಡಿದರು. ಇವರಿಬ್ಬರ ವಿಕೆಟ್​ಗಳ ನಂತರ ನೆದರ್ಲ್ಯಾಂಡ್ಸ್ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ತಂಡಕ್ಕೆ 100 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ಆಫ್ರಿಕಾ ತಂಡ 88 ರನ್​ಗಳಿಂದ ಪಂದ್ಯವನ್ನು ಗೆದ್ದು ತನ್ನ ನೆಟ್ ರನ್ ರೇಟ್​ ಅನ್ನು ಸುಧಾರಿಸಿಕೊಂಡಿತು.

 ಟೀಂ ಇಂಡಿಯಾ ಗೆಲ್ಲಲೇಬೇಕು

88 ರನ್‌ಗಳ ಬೃಹತ್ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್​​ಗೆ ಮತ್ತಷ್ಟು ಸನಿಹವಾಗಿದೆ. ಪ್ರಸ್ತುತ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಲಾ ಆರು ಅಂಕಗಳನ್ನು ಹೊಂದಿವೆ. ಆದರೆ ಭಾರತದ ನೆಟ್ ರನ್ ರೇಟ್​ ಆಫ್ರಿಕಾಕ್ಕಿಂತ ಹೆಚ್ಚಿರುವ ಕಾರಣ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದ ನೆಟ್ ರನ್ ರೇಟ್ +2.268 ಆಗಿದ್ದರೆ, ಆಫ್ರಿಕಾದ ನೆಟ್ ರನ್ ರೇಟ್ +0.734 ಆಗಿದೆ. ಹೀಗಾಗಿ ಉಭಯ ತಂಡಗಳಲ್ಲಿ ಯಾವ ತಂಡ ಮುಂದಿನ ಪಂದ್ಯವನ್ನು ಗೆಲ್ಲುತ್ತದೋ ಆ ತಂಡಕ್ಕೆ ಸೆಮಿಸ್ ಟಿಕೆಟ್ ಸಿಗಲಿದೆ.

ಆದರೆ ಭಾರತದ ಮುಂದಿನ ಪಂದ್ಯ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧವಿದೆ. ಇತ್ತ ದಕ್ಷಿಣ ಆಫ್ರಿಕಾ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಹೀಗಾಗಿ ಭಾರತ ತನ್ನ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕು. ಅದು ಸಾಧ್ಯವಾಗದಿದ್ದರೆ, ಇತ್ತ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧ ಸೋಲಲಿ ಎಂದು ಪ್ರಾರ್ಥಿಸಬೇಕು. ಒಂದು ವೇಳೆ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತು, ಇತ್ತು ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ ವಿರುದ್ಧ ಗೆದ್ದರೆ, ಭಾರತ ಸೆಮಿಫೈನಲ್ ರೇಸ್​ನಿಂದ ಹೊರಬೀಳಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:51 pm, Fri, 26 June 26

Source link

ಬೆಂಗಳೂರಿನಲ್ಲಿ ಜೀ ತೆಲುಗು ‘ಸರಿಗಮಪ’ ಆಡಿಷನ್; ಯುವ ಗಾಯಕರಿಗೆ ಸುವರ್ಣಾವಕಾಶ – Kannada News | Zee Telugu SaReGaMaPa Bengaluru Auditions: Your Path to Singing Stardom

ಸಂಗೀತಕ್ಕೆ ಭಾಷೆಯ ಮಿತಿ ಇಲ್ಲ. ಪರಭಾಷೆಯ ಅನೇಕ ಗಾಯಕರು ಕನ್ನಡ ಹಾಡನ್ನು ಹಾಡಿದ್ದು ಇದೆ. ಅದೇ ರೀತಿ ಅನೇಕ ಕನ್ನಡದ ಕಲಾವಿದರು ಪರಭಾಷೆಯಲ್ಲಿ ಮಿಂಚಿದ್ದಾರೆ. ಈಗ ಜೀ ತೆಲುಗು ವಾಹಿನಿಯವರು ಪ್ರತಿಭೆಗಳನ್ನು ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ. ‘ಸರಿಗಮಪ’ ತೆಲುಗು ಆಡಿಷನ್ಸ್ ಬೆಂಗಳೂರಿನಲ್ಲ ನಡೆಯಲಿದೆ. ಈ ಬಾರಿ ‘ಸರಿಗಮ ಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್’ ಎಂಬ ಹೊಸ ಶೀರ್ಷಿಕೆಯೊಂದಿಗೆ ಕಾರ್ಯಕ್ರಮ ಮೂಡಿಬರಲಿದ್ದು, ದೇಶದ ವಿವಿಧೆಡೆ ಆಡಿಷನ್‌ಗಳು ಆರಂಭವಾಗಿವೆ. ತೆಲುಗು ರಾಜ್ಯಗಳ ಜೊತೆಗೆ ದೇಶದ ಇತರೆ ಭಾಗಗಳಲ್ಲಿರುವ ಪ್ರತಿಭಾವಂತ ಗಾಯಕರನ್ನು ಗುರುತಿಸಲು ಈ ವೇದಿಕೆ ಸಹಕಾರಿ ಆಗಲಿದೆ.

ಬೆಂಗಳೂರಿನಲ್ಲಿಯೂ ಆನ್-ಗ್ರೌಂಡ್ ಆಡಿಷನ್ ಹಮ್ಮಿಕೊಳ್ಳಲಾಗಿದೆ. ಜೂನ್ 28ರ ಭಾನುವಾರದಂದು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ (ಮಧು ಆರ್ಟ್ ಸ್ಟುಡಿಯೋ) ಆಡಿಷನ್ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಡಿಷನ್ ನಡೆಯಲಿದೆ. ಈ ಆಡಿಷನ್​​ ಅಲ್ಲಿ ಪಾಲ್ಗೊಳ್ಳುವವರಿಗೆ ಕೆಲವು ಷರತ್ತುಗಳು ಕೂಡ ಇವೆ.

ಈ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿ ಇದೆ. 18 ರಿಂದ 35 ವರ್ಷದೊಳಗಿನವರು ಮಾತ್ರ ಇದರಲ್ಲಿ ಭಾಗಿ ಆಗಬಹುದು. ಸಂಗೀತ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಆಸಕ್ತ ಗಾಯಕರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಆಡಿಷನ್ ಸ್ಥಳಕ್ಕೆ ತಲುಪಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ವೀಕ್ಷಕರು ಜೀ ತೆಲುಗು ವಾಹಿನಿಯ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಗಮನಿಸಬಹುದು.

ಇದನ್ನೂ ಓದಿ: ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್​ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು?

ಬೆಂಗಳೂರಿನಲ್ಲಿ ತೆಲುಗು ಭಾಷಿಕರು ಕೂಡ ಇದ್ದಾರೆ. ಅನೇಕರಿಗೆ ತೆಲುಗು ಹಾಗೂ ಕನ್ನಡ ಎರಡನ್ನೂ ಮಾತನಾಡುವವರು ಇದ್ದಾರೆ. ಕೆಲವರು ಕನ್ನಡ ಸರಿಗಮಪ ಶೋ ಆಡಿಷನ್ ಕೊಟ್ಟು ಅವಕಾಶ ಪಡೆದುಕೊಳ್ಳಲು ವಿಫಲರಾಗಿರಬಹುದು. ಅಂಥವರಿಗೆ ‘ಸರಿಗಮಪ ತೆಲುಗು’ ವೇದಿಕೆ ಒಳ್ಳೆಯ ವೇದಿಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version