ಜೂ.27ರಂದು ಕೆಂಪೇಗೌಡ ಜಯಂತಿ: ಬೆಂಗಳೂರಿನ ಈ ಭಾಗದಲ್ಲಿ ವಾಹನ ಸಂಚಾರ ಮಾರ್ಪಾಡು – Kannada News | Traffic diversions In Magadi Road And kengeri Police Station Limits over kempegowda jayanti On June 27, here Is Details

ಬೆಂಗಳೂರು, (ಜೂನ್ 25): ಇದೇ ಜೂನ್ 27ರಂದು ಕೆಂಪೇಗೌಡ ಜಯಂತಿಯನ್ನು (kempegowda jayanti 2026) ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರಿನ ಕೆಂಗೇರಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ನಿರ್ಧರಿಸಲಾಗಿದೆ. ಹೀಗಾಗಿ ಕಾರ್ಯಕ್ರಮ ಸ್ಥಳ ಸುತ್ತ ಮುತ್ತ ಮೈಸೂರು ರಸ್ತೆ, ಕೊಮ್ಮಘಟ್ಟ ಮುಖ್ಯರಸ್ತೆ, ಕೆಂಗೇರಿ ಉಪನಗರ, ಮಾಗಡಿ ಮುಖ್ಯರಸ್ತೆ ಹಾಗೂ ಕೆಂಗೇರಿ ವ್ಯಾಪ್ತಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ 40 ರಿಂದ 50 ಸಾವಿರ ಜನ ಸೇರುವ ನಿರೀಕ್ಷೆ

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸುಮಾರು 40 ರಿಂದ 50 ಸಾವಿರ ಸಾರ್ವಜನಿಕರು ಭಾಗಿ ಸಾಧ್ಯತೆ ಇದೆ. ಹೀಗಾಗಿ ಮುಂಜಾತ್ರಾ ಕ್ರಮವಾಗಿ ಜೂನ್ 27ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 4ರವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಇದಕ್ಕೆ ಪರ್ಯಾಯ ಮಾರ್ಗಗಳನ್ನು ಸಹ ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿಷೇಧ ಹಾಗೂ ಪರ್ಯಾಯ ಮಾರ್ಗದ ವಿವರ

  • ಸಂಚಾರ ನಿರ್ಬಂಧ: (ಜೂ.27ರಂದು ಬೆಳಗ್ಗೆ 06:00 ರಿಂದ ಸಂಜೆ 04:00 ಗಂಟೆಯವರೆಗೆ) ಮೈಸೂರು ರಸ್ತೆಯ ಮಾರಿಗೋಲ್ಡ್ ಶಾಲೆಯ ಜಂಕ್ಷನ್ ನಿಂದ ಭೀಮನಕುಪ್ಪೆ ಜಂಕ್ಷನ್ ವರೆಗೆ ಸರಕು ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
  • ಪರ್ಯಾಯ ಮಾರ್ಗ: ಮೈಸೂರು ಮುಖ್ಯ ರಸ್ತೆಯ ಮುಖಾಂತರ ಚಲ್ಲಘಟ್ಟ ಮೆಟ್ರೋ ಸ್ಟೇಷನ್ ಕಡೆಗೆ ಸಾಗಿನೈಸ್ ರಸ್ತೆಯ ಮುಖಾಂತರ ಸರಕು ವಾಹನ ಚಲಿಸಲು ಸೂಚನೆ ನೀಡಿದ್ದಾರೆ.
  • ಕೊಮ್ಮಘಟ್ಟ ಜಂಕ್ಷನ್(ಕೆಂಗೇರಿ ಕ್ಲಬ್) ಕಡೆಯಿಂದ ಹೊಸಕೆರೆ ಗ್ರಾಮದ ಜಂಕ್ಷನ್ ವರೆಗೆ ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ಪರ್ಯಾಯ ಮಾರ್ಗ ವಾಗಿ ಪೆರಿಫೆರಲ್ ರಸ್ತೆವರೆಗೆ ಸಂಚರಿಸುವ ಎಲ್ಲಾ ಸರಕು ಸಾಗಾಣಿಕೆ ವಾಹನಗಳು ವಿಶ್ವೇಶ್ವರಯ್ಯ ಲೇಔಟ್ ರಿಂಗ್ ರಸ್ತೆಯ ಉಲ್ಲಾಳು ಮೂಲಕ ಮಾಗಡಿ ರಸ್ತೆಗೆ ಸಂಚರಿಸಬಹುದು.
  • ಮೈಸೂರು ರಸ್ತೆಯ ಮಧು ಜಂಕ್ಷನ್ ನಿಂದ ಕುಂಬಳಗೋಡು ಜಂಕ್ಷನ್‌ ವರೆಗೆ, ನೈಸ್ ರಸ್ತೆಯ ಸೋಂಪುರ ಟೋಲ್ ನಿಂದ ಮಾಗಡಿ ಮುಖ್ಯರಸ್ತೆಯ ಜಂಕ್ಷನ್ ವರೆಗೆ, ಚಲ್ಲಘಟ್ಟ ಮುಖ್ಯರಸ್ತೆ ಹಾಗೂ ಕೆಂಗೇರಿ ಉಪನಗರ ರೈನ್ಬೋ ಬ್ರಿಡ್ಜ್ ನಿಂದ ಕೊಮ್ಮಘಟ್ಟ ಕಡೆಗೆ ಬೆಳಿಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ನಿಧಾನಗತಿಯ ಸಂಚಾರವಿರುತ್ತೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮುನ್ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಾವಸ್ಥೆಯಲ್ಲಿ ಯೋಗ, ಸ್ಟ್ರೆಚಿಂಗ್ ಸುರಕ್ಷಿತವೇ? ತಜ್ಞರು ನೀಡಿರುವ ಮಾಹಿತಿ ನಿಮಗಾಗಿ – Kannada News | Yoga During Pregnancy: What Every Expecting Mother Should Know

ಗರ್ಭಾವಸ್ಥೆ (Pregnancy) ಮಹಿಳೆಯರ ಜೀವನದ ಅತ್ಯಂತ ವಿಶೇಷ ಹಂತ. ಈ ಅವಧಿಯಲ್ಲಿ ದೇಹದಲ್ಲಿ ಹಲವು ರೀತಿಯ ಹಾರ್ಮೋನಲ್ ಮತ್ತು ದೈಹಿಕ ಬದಲಾವಣೆಗಳು ನಡೆಯುತ್ತವೆ. ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ, ವಿಶ್ರಾಂತಿ ಹಾಗೂ ಸುರಕ್ಷಿತ ದೈಹಿಕ ಚಟುವಟಿಕೆಗಳು ಅಗತ್ಯವಾಗಿವೆ. ಆದರೆ ಗರ್ಭಿಣಿಯರು ಯೋಗ ಮತ್ತು ಸ್ಟ್ರೆಚಿಂಗ್ ಮಾಡಬಹುದೇ, ಇದರಿಂದ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರ ಜೊತೆಗೆ ಯೋಗ ಮಾಡುವಾಗ ಗಮನಿಸಬೇಕಾದ ಅಂಶಗಳು ಮತ್ತು ಯಾರಿಗೆ ವೈದ್ಯರ ಸಲಹೆ ಬೇಕು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ತಜ್ಞರ ಪ್ರಕಾರ, ಗಂಭೀರ ಆರೋಗ್ಯ ಸಮಸ್ಯೆಗಳು ಅಥವಾ ಹೈ- ರಿಸ್ಕ್ ಗರ್ಭಧಾರಣೆ ಇಲ್ಲದ ಮಹಿಳೆಯರು ವೈದ್ಯರ ಸಲಹೆಯೊಂದಿಗೆ ಯೋಗ, ಸ್ಟ್ರೆಚಿಂಗ್ ಮತ್ತು ಲಘು ವ್ಯಾಯಾಮಗಳನ್ನು ಮಾಡಬಹುದು. ಇಂತಹ ಚಟುವಟಿಕೆಗಳು ದೇಹವನ್ನು ಚುರುಕಾಗಿಡಲು, ಬೆನ್ನುನೋವು ಮತ್ತು ದಣಿವು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಮನಸ್ಸಿಗೆ ಶಾಂತಿ ನೀಡುವುದರೊಂದಿಗೆ ಹೆರಿಗೆಗೆ ದೇಹವನ್ನು ಸಿದ್ಧಗೊಳಿಸಲು ನೆರವಾಗಬಹುದು. ಆದರೆ ಪ್ರತಿಯೊಬ್ಬ ಮಹಿಳೆಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುವುದರಿಂದ ಯಾವುದೇ ಹೊಸ ವ್ಯಾಯಾಮವನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ದೇಹದ ಅಗತ್ಯತೆಗಳು ಬದಲಾಗುವುದರಿಂದ ಅದಕ್ಕೆ ಅನುಗುಣವಾಗಿ ವ್ಯಾಯಾಮದಲ್ಲಿಯೂ ಬದಲಾವಣೆ ಮಾಡಬೇಕು.

ಯೋಗ ಮಾಡುವಾಗ ಗಮನಿಸಬೇಕಾದ ಅಂಶಗಳು:

ಸಾಮಾನ್ಯವಾಗಿ ಯೋಗ ಮತ್ತು ಸ್ಟ್ರೆಚಿಂಗ್ ಅನ್ನು ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ಮಾಡುವುದು ಉತ್ತಮ. ಆರಂಭದಲ್ಲಿ ಸರಳ ವ್ಯಾಯಾಮಗಳಿಂದ ಪ್ರಾರಂಭಿಸಿ, ದೇಹಕ್ಕೆ ಹೆಚ್ಚು ಒತ್ತಡ ನೀಡಬಾರದು. ಸಾಕಷ್ಟು ನೀರು ಕುಡಿಯುವುದು ಮತ್ತು ಆರಾಮದಾಯಕವಾಗಿರುವ ಉಡುಪು ಧರಿಸುವುದು ಮುಖ್ಯ. ಹೊಟ್ಟೆಯ ಮೇಲೆ ಒತ್ತಡ ಬೀರುವ ಅಥವಾ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಇರುವ ಆಸನಗಳನ್ನು ತಪ್ಪಿಸಬೇಕು. ವ್ಯಾಯಾಮದ ವೇಳೆ ತಲೆಸುತ್ತು, ಉಸಿರಾಟದ ತೊಂದರೆ, ನೋವು, ರಕ್ತಸ್ರಾವ ಅಥವಾ ಅಸಹಜ ಲಕ್ಷಣಗಳು ಕಂಡುಬಂದರೆ ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ಮೆನೋಪಾಸ್ ಎಂದರೇನು? ಈ ಹಂತದ ನಂತರ ಮಹಿಳೆಯರು ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು?

ಯಾರಿಗೆ ವೈದ್ಯರ ಸಲಹೆ ಅಗತ್ಯ?

ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆ, ತೀವ್ರ ರಕ್ತಹೀನತೆ, ಗರ್ಭಾವಸ್ಥೆಯ ರಕ್ತಸ್ರಾವ, ಪ್ಲಾಸೆಂಟಾ ಸಮಸ್ಯೆಗಳು ಅಥವಾ ಅವಧಿಗೂ ಮುನ್ನ ಹೆರಿಗೆಯ ಅಪಾಯ ಇರುವ ಮಹಿಳೆಯರು ಯೋಗ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಅವಳಿ ಗರ್ಭಧಾರಣೆ, ಹಿಂದಿನ ಗರ್ಭಪಾತದ ಇತಿಹಾಸ ಅಥವಾ ಹೈ- ರಿಸ್ಕ್ ಗರ್ಭಧಾರಣೆ ಇರುವವರು ಸ್ವಯಂಪ್ರೇರಿತವಾಗಿ ಹೊಸ ವ್ಯಾಯಾಮಗಳನ್ನು ಆರಂಭಿಸಬಾರದು. ಸರಿಯಾದ ಮಾರ್ಗದರ್ಶನದಲ್ಲಿ ಯೋಗ ಮತ್ತು ಸ್ಟ್ರೆಚಿಂಗ್ ಮಾಡಿದರೆ ಗರ್ಭಾವಸ್ಥೆಯನ್ನು ಹೆಚ್ಚು ಆರೋಗ್ಯಕರ ಹಾಗೂ ಆರಾಮದಾಯಕವಾಗಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ- ಐರ್ಲೆಂಡ್ ಮೊದಲ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? – Kannada News | India vs Ireland 1st T20: Shreyas Iyer Leads India; Match Date, Time, Venue, Stream

ಭಾರತ ಟಿ20 ತಂಡ ಪ್ರಸ್ತುತ ಐರ್ಲೆಂಡ್ (India vs Ireland) ಪ್ರವಾಸದಲ್ಲಿದೆ. ಈ ಎರಡೂ ತಂಡಗಳ ನಡುವಿನ ಟಿ20 ಸರಣಿ ಜೂನ್ 26 ರಿಂದ ಪ್ರಾರಂಭವಾಗಲಿದೆ. ನಾಯಕನಾಗಿ ಮೊದಲ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ ಸರಣಿ ಗೆಲುವಿನ ಇರಾದೆಯಲ್ಲಿದ್ದಾರೆ. ಇನ್ನು ಉಭಯ ತಂಡಗಳ ಮುಖಾಮುಖಿ ನೋಡಿದರೆ ಐರ್ಲೆಂಡ್, ಭಾರತದ ವಿರುದ್ಧ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಗೆದ್ದಿಲ್ಲ. ಭಾರತ ಮತ್ತು ಐರ್ಲೆಂಡ್ 2009 ರಿಂದ ಟಿ20 ಪಂದ್ಯಗಳನ್ನು ಆಡುತ್ತಿದ್ದು, ಎರಡೂ ತಂಡಗಳ ನಡುವೆ ಒಟ್ಟು ಎಂಟು ಪಂದ್ಯಗಳನ್ನು ಆಡಲಾಗಿದೆ. ಈ ಎಂಟು ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಆಶ್ಚರ್ಯಕರವೆಂದರೆ, ಆ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಐರಿಶ್ ನೆಲದಲ್ಲಿ ಆಡಲಾಗಿದೆ. ಇನ್ನು ಉಭಯ ತಂಡಗಳ ಮೊದಲ ಟಿ20 ಪಂದ್ಯದ ಬಗ್ಗೆಗಿನ ಉಳಿದ ಮಾಹಿತಿ ಇಲ್ಲಿದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಜೂನ್ 26 ರಂದು ನಡೆಯಲಿದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಬೆಲ್‌ಫಾಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನಲ್ಲಿ ವೀಕ್ಷಿಸಬಹುದು.

IND vs IRE: ಭಾರತ-ಐರ್ಲೆಂಡ್ ನಡುವಿನ ಟಿ20 ಸರಣಿಯ ಸಮಯ ಬದಲಾವಣೆ

ಉಭಯ ತಂಡಗಳು

ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕೌಲ್ಟಿಡ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೈಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಊಟ ಮಾಡಿದ ತಕ್ಷಣ ಚಹಾ ಕುಡಿಯುವ ಅಭ್ಯಾಸ ನಿಮಗಿದ್ಯಾ? ಇದು ಆರೋಗ್ಯಕ್ಕೆ ಒಳ್ಳೆಯದಾ, ಕೆಟ್ಟದಾ? – Kannada News | Tea After Dinner: Hidden Health Risks You Should Know

ಭಾರತದಲ್ಲಿ ಅನೇಕರ ದಿನ ಚಹಾದಿಂದಲೇ ಆರಂಭವಾಗುತ್ತದೆ. ಚಹಾ (Tea) ಕೇವಲ ಒಂದು ಪಾನೀಯವಲ್ಲ ಅದೊಂದು ರೀತಿಯ ದಿನವನ್ನು ಆರಂಭಿಸುವ ಕೀಲಿ ಕೈ. ಆದರೆ ಕೆಲರು ಮಾತ್ರ ಇದನ್ನು ಯಾವಾಗ ಮನಸ್ಸಿಗೆ ಬರುತ್ತದೆಯೋ ಆಗ ಮಾಡಿ ಕುಡಿಯುತ್ತಾರೆ. ಇನ್ನು ಕೆಲವರು ಊಟವಾದ ಕೂಡಲೇ ಒಂದು ಕಪ್ ಚಹಾ ಕುಡಿಯುತ್ತಾರೆ. ಹಾಗಾದರೆ ಈ ಒಂದು ಅಭ್ಯಾಸ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಅಥವಾ ಇದು ಒಳ್ಳೆಯ ಅಭ್ಯಾಸವೋ, ಅಲ್ಲವೋ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಊಟದ ಬಳಿಕ ಚಹಾ ಕುಡಿದರೆ ಏನಾಗುತ್ತದೆ?

ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣ (Iron), ಕ್ಯಾಲ್ಸಿಯಂ, ಜಿಂಕ್ ಸೇರಿದಂತೆ ಹಲವು ಪ್ರಮುಖ ಖನಿಜಾಂಶಗಳು ಇರುತ್ತವೆ. ಚಹಾದಲ್ಲಿ ಕಂಡುಬರುವ ಟ್ಯಾನಿನ್‌ಗಳು (Tannins) ಮತ್ತು ಪಾಲಿಫಿನಾಲ್‌ಗಳು (Polyphenols) ಈ ಖನಿಜಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಟ್ಯಾನಿನ್‌ಗಳು ಕಬ್ಬಿಣ ಅಂಶದೊಂದಿಗೆ ಸೇರಿಕೊಂಡು ಅದರ ಪೋಷಣೆಯನ್ನು ತಡೆಯುತ್ತವೆ. ಇದರಿಂದ ದೀರ್ಘಾವಧಿಯಲ್ಲಿ ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯ ಅಪಾಯ ಹೆಚ್ಚಾಗಬಹುದು. ಜೊತೆಗೆ ಜಿಂಕ್ ಹಾಗೂ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಸಹ ಅಡ್ಡಿಯಾಗಬಹುದು.

ಇದನ್ನೂ ಓದಿ:ಪ್ರತಿದಿನ ತಪ್ಪದೆ ಬೀಟ್ರೂಟ್ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರಬಹುದು:

ಊಟ ಮಾಡಿದ ತಕ್ಷಣ ಚಹಾ ಕುಡಿಯುವುದರಿಂದ ಕೆಲವರಿಗೆ ಹೊಟ್ಟೆ ಉಬ್ಬರ (Bloating), ಎದೆ ಉರಿ ಹಾಗೂ ಆಸಿಡ್ ರಿಫ್ಲಕ್ಸ್ ಸಮಸ್ಯೆಗಳು ಹೆಚ್ಚಾಗಬಹುದು. ಚಹಾದಲ್ಲಿರುವ ಕ್ಯಾಫಿನ್ ಕೂಡ ಕೆಲವರಲ್ಲಿ ಜೀರ್ಣಕ್ರಿಯೆಯ ಅಸಮತೋಲನಕ್ಕೆ ಕಾರಣವಾಗಬಹುದು. ಅದರ ಜೊತೆಗೆ ಹೆಚ್ಚು ಚಹಾ ಸೇವನೆ ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಚಹಾ ಕುಡಿಯಲು ಸರಿಯಾದ ಸಮಯ ಯಾವುದು?

ತಜ್ಞರ ಪ್ರಕಾರ, ಊಟ ಮಾಡಿದ ತಕ್ಷಣ ಚಹಾ ಕುಡಿಯುವುದನ್ನು ತಪ್ಪಿಸುವುದು ಉತ್ತಮ. ಕನಿಷ್ಠ ಒಂದು ಗಂಟೆಯ ಬಳಿಕ ಚಹಾ ಸೇವಿಸಿದರೆ ದೇಹಕ್ಕೆ ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ತೊಂದರೆ ಆಗುವುದಿಲ್ಲ. ಅಷ್ಟೇಅಲ್ಲ, ಚಹಾದ ಜೊತೆಗೆ ಎಣ್ಣೆ ಅಥವಾ ಹೆಚ್ಚು ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದು ಆಸಿಡಿಟಿ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಹೆಚ್ಚಿಸಬಹುದು. ಚಹಾ ಕುಡಿಯುವ ಮೊದಲು ಸ್ವಲ್ಪ ನೀರು ಕುಡಿಯುವುದು ಕೆಲವರಿಗೆ ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಆರೋಗ್ಯಕರ ಜೀವನಶೈಲಿಗಾಗಿ ಊಟ ಮತ್ತು ಚಹಾ ನಡುವೆ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ನಿವಾಸ ಹಂಚಿಕೆ: 3 ವರ್ಷ ಬಳಿಕ ಮನೆ ಕೊಟ್ಟರೂ ಅಶೋಕ್​​ ಬಯಸಿದ್ದು ಸಿಗಲೇ ಇಲ್ಲ! – Kannada News | Allocated government residence to Ministers, Finally R Ashoka gets after 3 Years

ಬೆಂಗಳೂರು, (ಜೂನ್ 25): ಡಿಕೆ ಶಿವಕುಮಾರ್ (DK Shivakumar) ಸಂಪುಟದ ಸಚಿವರಿಗೆ ಇಂದು (ಜೂನ್ 25) ಸರ್ಕಾರಿ ವಸತಿ ಗೃಹಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವರ ಜೊತೆಗೆ ಮೂರು ವರ್ಷಗಳ ಬಳಿಕ ವಿರೋಧ ಪಕ್ಷದ ನಾಯಕ ಆರ್ ಅಶೋಕ್  (R Ashok) ಅವರಿಗೂ ಸರ್ಕಾರಿ ನಿವಾಸವನ್ನು ನೀಡಲಾಗಿದೆ. ಆದ್ರೆ, ಅಶೋಕ್ ಬಯಸಿದ್ದು ಮಾತ್ರ ಸಿಕಿಲ್ಲ. ಹೌದು…ಆರ್​.ಅಶೋಕ್​ ಕೇಳಿದ್ದ ಕುಮಾರಕೃಪಾ ಪೂರ್ವ ನಂ.1 ನಿವಾಸವನ್ನು ಆರೋಗ್ಯ ಸಚಿವ ಯುಟಿ ಖಾದರ್ ಅವರಿಗೆ ನೀಡಲಾಗಿದೆ. ಇದರಿಂದ ಅಶೋಕ್ ಅವರಿಗೆ ಮೂರು ವರ್ಷಗಳ ನಂತರ ನಿವಾಸ ನೀಡಿದರೂ ಸಹ ಅವರು ಬಯಸಿದ್ದು ಮಾತ್ರ ಕೊಟ್ಟಿಲ್ಲ. ಬದಲಾಗಿ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು ಅಶೋಕ್ ಗೆ ನೀಡಲಾಗಿದೆ.

ಯಾರ್ಯಾರಿಗೆ ಯಾವ್ಯಾವ ನಿವಾಸ?

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೇಳಿದ್ದ ಸರ್ಕಾರಿ ನಿವಾಸ ಆರೋಗ್ಯ ಸಚಿವ ಯು.ಟಿ. ಖಾದರ್ ಗೆ ಹಂಚಿಕೆ ಮಾಡಲಾಗಿದೆ. ಇನ್ನು ಖಾದರ್ ಸ್ಪೀಕರ್ ಆಗಿದ್ದ ವೇಳೆ ನೀಡಲಾಗಿದ್ದ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು  ಇದೀಗ ಅಶೋಕ್ ಅವರಿಗೆ ನೀಡಲಾಗಿದೆ. ಇನ್ನು M.B.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ನೀಡಲಾಗಿದ್ದ ಮನೆಯನ್ನೇ ಕೇಳಿದ್ದರು. ಅದರಂತೆ ಇದೀಗ ಅವೇ ನಿವಾಸಗಳನ್ನು ಅವರಿಗೆ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟದ 13 ಸಚಿವರಿಗೆ ಕೊಠಡಿ ಹಂಚಿಕೆ, ರಾಮಲಿಂಗಾರೆಡ್ಡಿಗೆ ಬಂಪರ್

3 ವರ್ಷದ ನಂತ್ರ ಕೊಟ್ಟರೂ ಅಶೋಕ್​​ ಬಯಸಿದ್ದು ಸಿಗಲೇ ಇಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ್ದರೂ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರಿಗೆ ಇನ್ನುವರೆಗೂ ಅಧಿಕೃತ ಸರ್ಕಾರಿ ನಿವಾಸವನ್ನು ಮಂಜೂರು ಮಾಡಿರಲಿಲ್ಲ. ಹೀಗಾಗಿ ಅಶೋಕ್ ಅವರು ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ಮನೆ ಅಶೋಕ್​ಗೆ ಹಂಚಿಕೆ ಮಾಡಲಾಗಿದೆ. ಆದ್ರೆ, ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿದ್ದಾಗ ಇದ್ದ ಕುಮಾರಕೃಪಾ ಪೂರ್ವ ನಂ.1 ನಿವಾಸ, M.B.ಪಾಟೀಲ್ ಅಥವಾ ಪ್ರಿಯಾಂಕ್ ಖರ್ಗೆ ಅವರಿದ್ದ ನಿವಾಸ ಬೇಕೆಂದು ಮನವಿ ಮಾಡಿದ್ದರು. ಆದ್ರೆ, ಅಶೋಕ್ ಕೇಳಿದ್ದ ಯಾವುದೇ ನಿವಾಸವನ್ನು ನೀಡಿಲ್ಲ. ಬದಲಾಗಿ ಈ ಹಿಂದೆ ಖಾದರ್ ಸ್ಪೀಕರ್ ಆಗಿದ್ದ ವೇಳೆ ನೀಡಲಾಗಿದ್ದ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು ನೀಡಲಾಗಿದೆ. ಆದ್ರೆ, ಇದನ್ನು ಅಶೋಕ್ ಸ್ವೀಕಾರ ಮಾಡುತ್ತಾರೋ ಇಲ್ವಾ ಎನ್ನುವುದನ್ನು ಕಾದುನೋಡಬೇಕಿದೆ.

ವಿಧಾನಸಭೆ, ಪರಿಷತ್​​ ವಿಪಕ್ಷ ನಾಯಕರಿಗೆ ಸಿಕ್ಕಿರಲಿಲ್ಲ ಸರ್ಕಾರಿ ಗೃಹ

ಹೌದು.. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಆದ್ರೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸರ್ಕಾರಿ ನಿವಾಸ ಇನ್ನೂ ಸಿಕ್ಕಿರಲಿಲ್ಲ. ಈ ಬಗ್ಗೆ ಐದಾರು ಬಾರಿ ಪತ್ರವನ್ನು ಬರೆದರೂ ಸರ್ಕಾರ ಸ್ಪಂದಿಸಿರಲಿಲ್ಲ. ಈ ಸಂಬಂಧ ಉಭಯ ನಾಯಕರು ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸರ್ಕಾರ, ಕೊನೆಗೂ ಛಲವಾದಿ ನಾರಾಯಣಸ್ವಾಮಿ ಹಾಗೂ ಅಶೋಕ್ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಿದೆ.

ಅಶೋಕ್ ಬಯಸಿದ್ದ ನಿವಾಸಗಳಾವುವು?

ಸರ್ಕಾರಿ ನಿವಾಸ ಒದಗಿಸುವಂತೆ ಮನವಿ ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ನಿರ್ದಿಷ್ಟ ಮೂರು ಸರ್ಕಾರಿ ಬಂಗಲೆ ಕೇಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಗೆ ಮತ್ತು ಇಬ್ಬರು ಸಚಿವರಿಗೆ ಈಗಾಗಲೇ ಹಂಚಿಕೆಯಾಗಿರುವ ನಿವಾಸಗಳಿಗೆ ಆರ್.ಅಶೋಕ್ ಬೇಡಿಕೆ ಇಟ್ಟಿದ್ದರು. ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ ಮನವಿ ಮಾಡಿದ್ದರು. ಆದರೆ, ಸದ್ಯ ಈ ನಿವಾಸ ಡಿಸಿಎಂ ಡಿಕೆ‌ ಶಿವಕುಮಾರ್​​ ಗೆ ಹಂಚಿಕೆಯಾಗಿತ್ತು. ಇದೇ ನಿವಾಸದಲ್ಲಿದ್ದು ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದರು. ಸದ್ಯ ರೇಸ್ ವ್ಯೂ ಕಾಟೇಜ್​​ನ ನಂಬರ್ 1 ನಿವಾಸ ಸಚಿವ ಎಂಬಿ ಪಾಟೀಲ್ ​​ಗೆ ಹಂಚಿಕೆ ಮಾಡಿದ್ದರೆ, ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆ ಮಾಡಲಾಗಿತ್​ತು. ಹೀಗಾಗಿ ಅಶೋಕ್​​ ಅವರಿಗೆ ಯಾವುದೇ ನಿವಾಸ ಸಿಕ್ಕಿರಲಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:37 pm, Thu, 25 June 26

Source link

ವೈಶಾಖ್ ಅಂತ್ಯಕ್ರಿಯೆಯಲ್ಲಿ ಹೈಡ್ರಾಮಾ, ನಟಿ ಕೃಷಿ ವಿರುದ್ಧ ಕುಟುಂಬಸ್ಥರ ಆಕ್ರೋಶ – Kannada News | Krishi Thapanda’s Shocking Funeral Drama: Vaishakh’s Family Outrage After Death

ನಟಿ ಕೃಷಿ ತಾಪಂಡ (Krishi Thapanda) ಅವರ ಜೀವನದಲ್ಲಿ ಕಳೆದ ಕೆಲ ತಿಂಗಳಿಂದ ಸಾಕಷ್ಟು ಸಂಕಷ್ಟಗಳು ಎದುರಾಗಿವೆ. ಮೊದಲಿಗೆ ಉದ್ಯಮಿ ಅರವಿಂದ್ ರೆಡ್ಡಿ ಜೊತೆಗೆ ವಿವಾದ ಎದ್ದಿತ್ತು. ಅರವಿಂದ್ ರೆಡ್ಡಿ ವಿರುದ್ಧ ದೂರು ಸಹ ಕೃಷಿ ದಾಖಲಿಸಿದ್ದರು. ಆ ಬಳಿಕ ಅರವಿಂದ್ ರೆಡ್ಡಿ, ಕೃಷಿ ಮತ್ತು ಈಗ ಮೃತರಾಗಿರುವ ವೈಶಾಖ್ ವಿರುದ್ಧ ದೂರು ನೀಡಿದ್ದರು. ಇದೀಗ ವೈಶಾಖ್ ನಿಧನ ಹೊಂದಿದ್ದಾರೆ. ಕೃಷಿ ತಾಪಂಡ ಅವರ ಅಪಾರ್ಟ್​​ಮೆಂಟ್​​ನಲ್ಲಿಯೇ ಉದ್ಯಮಿ ವೈಶಾಖ್ ನಿಧನ ಹೊಂದಿದ್ದು, ಇದೀಗ ಗೆಳೆಯನ ಅಂತ್ಯಕ್ರಿಯೆಗೂ ಹೋಗದ ಪರಿಸ್ಥಿತಿ ಕೃಷಿ ಅವರಿಗೆ ಎದುರಾಗಿದೆ.

ವೈಶಾಖ್ ಅವರ ಅಂತ್ಯಕ್ರಿಯೆ ಇಂದು (ಜೂನ್ 25) ಚಾಮರಾಜನಗರದ ಚಿತಾಗಾರದಲ್ಲಿ ಅಂತ್ಯಕ್ರಿಯ ನಡೆಯಿತು. ನಟಿ ಕೃಷಿ ತಾಪಂಡ ಅಂತಿಮ ದರ್ಶನ ಪಡೆಯಲು ಬರುತ್ತಿದ್ದಂತೆ ಸ್ಥಳದಲ್ಲಿ ಹೈಡ್ರಾಮಾ ನಡೆಯಿತು. ವೈಶಾಖ್ ಕುಟುಂಬದವರು ನಟಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ವೈಶಾಖ್ ಅವರ ಮಾವ ಇನ್ನಿತತರರು ಸೇರಿ ನಟಿಯನ್ನು ಅಂತಿಮ ದರ್ಶನ ಪಡೆಯುವುದರಿಂದ ತಡೆದುದ್ದಲ್ಲದೆ, ನಟಿಯನ್ನು ಅಲ್ಲಿಂದ ಹೊರಗೆ ಕಳಿಸಿದರು. ಗೆಳೆಯನ ಅಂತಿಮ ದರ್ಶನ ಪಡೆಯಲಾಗದೆ, ಅಂತಿಮ ಸಂಸ್ಕಾರದಲ್ಲಿ ಭಾಗಿ ಆಗಲಾರದೆ ನಟಿ ಅಲ್ಲಿಂದ ಹೊರನಡೆದರು.

ಕೃಷಿ ತಾಪಂಡ ಮತ್ತು ವೈಶಾಖ್ ಲಿವಿನ್ ರಿಲೇಷನ್​​ನಲ್ಲಿದ್ದರು ಎನ್ನಲಾಗಿದೆ. ವೈಶಾಖ್​​ಗೆ ಅದಾಗಲೆ ಮದುವೆ ಆಗಿತ್ತು. ಕಾರು, ಆಟೊಮೊಬೈಲ್, ಗ್ಯಾರೇಜ್, ಸ್ಪೇರ್ ಪಾರ್ಟ್ಸ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ವೈಶಾಖ್, ಪತ್ನಿಯೊಂದಿಗೆ ವೈಮನಸ್ಯ ಮಾಡಿಕೊಂಡಿದ್ದರು. ವೈಶಾಖ್, ಬಹುತೇಕ ಕೃಷಿ ಅವರ ಆರ್​​ಆರ್ ನಗರದ ಅಪಾರ್ಟ್​​ಮೆಂಟ್​​ ಫ್ಲ್ಯಾಟ್​​ನಲ್ಲಿಯೇ ಇರುತ್ತಿದ್ದರು. ಇಬ್ಬರ ನಡುವೆ ‘ಆತ್ಮೀಯ ಸಂಬಂಧ’ ಇತ್ತು.

ಇದನ್ನೂ ಓದಿ:ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?

ಈ ಹಿಂದೆ ಕೃಷಿ ತಾಪಂಡ, ಉದ್ಯಮಿ ಅರವಿಂದ್ ರೆಡ್ಡಿ ನಡುವೆ ವಿವಾದ ಉಂಟಾದಾಗ, ವೈಶಾಖ್, ಉದ್ಯಮಿ ಅರವಿಂದ್ ರೆಡ್ಡಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು ಎನ್ನಲಾಗಿತ್ತು. ಈ ಕುರಿತಾಗಿ ಅರವಿಂದ್ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ವೈಶಾಖ್ ಅವರನ್ನು ಬಂಧಿಸಲಾಗಿತ್ತು. ಆ ಬಳಿಕವೂ ವೈಶಾಖ್ ಹಾಗೂ ಕೃಷಿ ಜೊತೆಗೇ ಇದ್ದರು.

ಉದ್ಯಮದಲ್ಲಿ ಹಿನ್ನಡೆ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಇನ್ನಿತರೆಗಳಿಂದ ಬೇಸತ್ತು ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ಕೃಷಿ ಅವರ ಫ್ಲ್ಯಾಟ್​​ಗೆ ಬಂದ ವೈಶಾಖ್, ಕೃಷಿ ಅವರಿಗೆ ಕೊನೆಯ ಸಂದೇಶ ಕಳಿಸಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದಾಗ ಕೃಷಿ ಅವರು ನೆಲಮಂಗಲಕ್ಕೆ ಹೋಗಿದ್ದರಂತೆ. ಕೃಷಿ ಅವರು ವೈಶಾಖ್ ಮನೆಯವರಿಗೆ ಮಾಹಿತಿ ನೀಡಿದ್ದರಾದರೂ ಅವರು ಬರುವುದಷ್ಟರಲ್ಲಿ ವೈಶಾಖ್ ಮೃತಪಟ್ಟಿದ್ದರು. ಇದೀಗ ಪ್ರಕರಣ ಕುರಿತಾಗಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs BAN: ತಂಡದಿಂದ ಹೊರಗಿಟ್ಟಿದ್ದವರಿಗೆ ಮೊದಲ ಓವರ್​ನಲ್ಲೇ ಉತ್ತರ ನೀಡಿದ ರೇಣುಕಾ – Kannada News | Renuka Singh’s Fiery Comeback: Wicket in First Over vs Bangladesh | 2026 T20 World Cup

2026 ರ ಮಹಿಳಾ ಟಿ20 ವಿಶ್ವಕಪ್‌ನ ( Women’s T20 World Cup 2026) 23 ನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು (India vs Bangladesh) ಎದುರಿಸಿತ್ತು. ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳ ನಾಲ್ಕನೇ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಇತ್ತ ಟಾಸ್ ಸೋತ ಟೀಂ ಇಂಡಿಯಾ ಈ ಪಂದ್ಯಕ್ಕೆ ಎರಡು ಬದಲಾವಣೆಗಳನ್ನು ಮಾಡಿತ್ತು. ಅದರಂತೆ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದ ಅನುಭವಿ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ (Renuka Singh Thakur) ಬೌಲ್ ಮಾಡಿದ ಮೊದಲ ಓವರ್​ನಲ್ಲೇ ವಿಕೆಟ್ ಉರುಳಿಸಿ, ಮೊದಲ ಮೂರು ಪಂದ್ಯಗಳಲ್ಲಿ ತನ್ನನ್ನು ಬೆಂಚ್ ಕಾಯಿಸಿದವರಿಗೆ ತಕ್ಕ ತಿರುಗೇಟು ನೀಡಿದರು.

ಮೊದಲ ಓವರ್​ನಲ್ಲೇ ವಿಕೆಟ್

ಈ ಪಂದ್ಯಾವಳಿಯಲ್ಲಿ ನಡೆದ ಮೂರು ಪಂದ್ಯಗಳಲ್ಲಿ ರೇಣುಕಾಗೆ ಅವಕಾಶ ನೀಡಿರಲಿಲ್ಲ. ಆದರೆ ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ರೇಣುಕಾ ತಂಡದ ಪರ ಎರಡನೇ ಓವರ್ ಬೌಲ್ ಮಾಡಿದರು. ಈ ಓವರ್​ನಲ್ಲಿ ಕಳಪೆ ಆರಂಭ ಪಡೆದಿದ್ದ ರೇಣುಕಾ ಮೂರು ವೈಡ್‌ಗಳನ್ನು ಎಸೆದಿದ್ದರು. ಆದಾಗ್ಯೂ ಓವರ್‌ನ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶದ ಆರಂಭಿಕ ಆಟಗಾರ್ತಿ ದಿಲಾರಾ ಅಖ್ತರ್ ಅವರನ್ನು ಔಟ್ ಮಾಡಿ ಬಾಂಗ್ಲಾದೇಶಕ್ಕೆ ಮೊದಲ ಹೊಡೆತ ನೀಡಿದರು.

ವಾಸ್ತವವಾಗಿ ಕಳೆದ ಕೆಲವು ಸಮಯದಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ರೇಣುಕಾ, ಆಡುವ ಹನ್ನೊಂದರಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆದಾಗ್ಯೂ, ಅವರ ಬದಲಿಗೆ ಬಂದ ವೇಗದ ಬೌಲರ್‌ಗಳು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದರಿಂದಾಗಿ ರೇಣುಕಾ ತಂಡಕ್ಕೆ ಅನಿವಾರ್ಯವಾಗಿತ್ತು. ಏಕೆಂದರೆ, ಭಾರತ ತಂಡವು ಟೂರ್ನಮೆಂಟ್‌ನ ಕೊನೆಯ ಮೂರು ಪಂದ್ಯಗಳಲ್ಲಿ ತೆಗೆದುಕೊಂಡ 24 ವಿಕೆಟ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ವೇಗದ ಬೌಲರ್‌ಗಳು (ಎರಡೂ ನಂದಿನಿ ಶರ್ಮಾ) ಪಡೆದರೆ, 21 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಪಡೆದಿದ್ದರು. ವೇಗದ ಬೌಲರ್ ಪಡೆದ ಈ ಎರಡು ವಿಕೆಟ್​ಗಳು ಆರಂಭಿಕ ಓವರ್‌ಗಳಲ್ಲಿ ಬಿದ್ದಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಂಡದ ಪರ ಆಡುವ ಅವಕಾಶ ಸಿಕ್ಕ ಕೂಡಲೇ ತಮ್ಮ ಪ್ರಾಮುಖ್ಯತೆಯನ್ನು ಸಾಭೀತುಪಡಿಸಿದ ರೇಣುಕಾ ಆರು ಎಸೆತಗಳಲ್ಲಿ ವಿಕೆಟ್ ಪಡೆದರು.

IND vs BAN: ಇದೆಂಥಾ ಫಿಲ್ಡಿಂಗ್​..? 10 ಎಸೆತಗಳಲ್ಲಿ 4 ಕ್ಯಾಚ್ ಕೈಚೆಲ್ಲಿದ ಟೀಂ ಇಂಡಿಯಾ..!

21 ರನ್ ನೀಡಿ 1 ವಿಕೆಟ್

ಇನ್ನು ಈ ಪಂದ್ಯದಲ್ಲಿ ಮೂರು ಓವರ್​ಗಳನ್ನು ಬೌಲ್ ಮಾಡಿದ ರೇಣುಕಾ 21 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ಈ ಪಂದ್ಯದಲ್ಲೂ ಸ್ಪಿನ್ನರ್‌ಗಳೇ ಪಾರುಪತ್ಯ ಮೆರೆದರು. ರಾಧಾ ಯಾದವ್ 3 ವಿಕೆಟ್ ಪಡೆದರೆ, ಶ್ರೀ ಚರಣಿ 2 ವಿಕೆಟ್ ಪಡೆದರು. ಆದಾಗ್ಯೂ ಶ್ರೀ ಚರಣಿ ಅವರ ಒಂದೇ ಓವರ್​ನಲ್ಲಿ 3 ಕ್ಯಾಚ್‌ಗಳನ್ನು ಕೈಬಿಡಲಾಯಿತು. ಇಲ್ಲದಿದ್ದರೆ, ಈ ಪಂದ್ಯದಲ್ಲೂ ಅವರ ವಿಕೆಟ್​ಗಳ ಸಂಖ್ಯೆ ಹೆಚ್ಚಿರುತ್ತಿದ್ದವು. ಇತ್ತ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾ 8 ವಿಕೆಟ್‌ಗಳನ್ನು ಕಳೆದುಕೊಂಡು 136 ರನ್ ಕಲೆಹಾಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:54 pm, Thu, 25 June 26

Source link

ಮತ್ತೆ ಕೈಕೊಟ್ಟ ನಮ್ಮ ಮೆಟ್ರೋ: ಬಾಗಿಲು ಲಾಕ್ ಆಗದೇ ನಿಂತಲ್ಲೇ ನಿಂತ ರೈಲು – Kannada News | Cubbon Park Metro Technical Glitch: Namma Metro Services Disrupted Due to Door Malfunction

ಬೆಂಗಳೂರು, ಜೂನ್​​ 25: ನಿನ್ನೆ ಪೀಕ್ ಅವರ್​​ನಲ್ಲೇ ನಮ್ಮ ಮೆಟ್ರೊ (Namma Metro) ರೈಲು ಇದ್ದಕ್ಕಿದ್ದಂತೆ ಕೆಟ್ಟು ನಿಂತು ಬಿಟ್ಟಿತ್ತು. ಪ್ರಯಾಣ ಮಾಡುತ್ತಿದ್ದ ಸಾವಿರಾರು ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ನಮ್ಮ ಮೆಟ್ರೊ ರೈಲು ಮತ್ತೆ ಕೈ ಕೊಟ್ಟಿದೆ. ಬಾಗಿಲು ಲಾಕ್ ಆಗದೇ ರೈಲು ನಿಂತಲ್ಲೇ ನಿಂತ್ತಿದೆ. ಹೀಗಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ನಡೆದಿದ್ದೇನು?

ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೊಮ್ಮೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಲಾಕ್ ಆಗದ ಕಾರಣ, ಮೆಟ್ರೋ ರೈಲು ನಿಂತಲ್ಲೇ ನಿಂತಿತ್ತು. ಈ ಘಟನೆಯಿಂದಾಗಿ ಮೆಟ್ರೋ ಇಲ್ಲದೆ ಪ್ರಯಾಣಿಕರು ನಿಲ್ದಾಣದ ಹೊರಗಡೆ ಕೆಲಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮೆಟ್ರೋ ಸಂಚಾರ ಪುನಾರಂಭ

ಘಟನೆ ನಡೆದ ತಕ್ಷಣ ಬಿಎಂಆರ್‌ಸಿಎಲ್ ಸಿಬ್ಬಂದಿ ಹಾಗೂ ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಾಗಿಲು ಲಾಕ್ ಆಗದಿರುವ ಸಮಸ್ಯೆಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದರು. ಸಿಬ್ಬಂದಿ ಕಾರ್ಯಚರಣೆ ಬಳಿಕ ಸದ್ಯ ಡೋರ್ ಲಾಕ್ ಸಮಸ್ಯೆಯನ್ನು ಯಶಸ್ವಿಯಾಗಿ ಸರಿಪಡಿಸಲಾಗಿದ್ದು, ವೈಟ್​ಫೀಲ್ಡ್-ಚಲ್ಲಘಟ್ಟ ನೇರಳೆ ಮಾರ್ಗದಲ್ಲಿ ಸಂಚಾರ ಪುನಾರಂಭವಾಗಿದೆ.

ಇದನ್ನೂ ಓದಿ: ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಅಧಿಕಾರಿಗಳು ಸಕಾಲದಲ್ಲಿ ಸ್ಪಂದಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದ್ದು, ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಸಂಚಾರ ಇದೀಗ ಯಥಾಸ್ಥಿತಿಗೆ ಮರಳಿದೆ.

ಇದ್ದಕ್ಕಿದ್ದಂತೆ ನಿಂತುಬಿಟ್ಟಿದ್ದ ಮೆಟ್ರೋ ರೈಲು

ಇನ್ನು ಮೊನ್ನೆ ಕೂಡ ಇದೇ ಮಾರ್ಗದಲ್ಲಿ ಮೆಟ್ರೋ ಕೆಟ್ಟುನಿಂತಿತ್ತು. ಸಂಜೆ 6.30ರ ಪೀಕ್‌ ಅವರ್‌ನಲ್ಲಿ ನೇರಳೆ ಮಾರ್ಗದ ಮೆಟ್ರೋ ರೈಲು ಬೈಯಪ್ಪನಹಳ್ಳಿ ಕಡೆಯಿಂದ ಮೆಜೆಸ್ಟಿಕ್‌ಗೆ ಹೊರಟಿತ್ತು. ಆದರೆ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದ ಕಡೆ ಬರ್ತಿದ್ದಂತೆ ರೈಲು ಇದ್ದಕ್ಕಿದ್ದಂತೆ ನಿಂತುಬಿಟ್ಟಿತ್ತು. ಪ್ರಯಾಣಿಕರು ಇದೇನಾಯ್ತು ಅಂತಾ ಗಾಬರಿಯಾಗಿದ್ದರು. ಎಷ್ಟು ಹೊತ್ತಾದರೂ ರೈಲು ಕದಲಲಿಲ್ಲ. ತಾಂತ್ರಿಕ ಸಮಸ್ಯೆ ಬಗೆಹರಿಯಲೇ ಇಲ್ಲ. ಹೀಗಾಗಿ, ಪ್ರಯಾಣಿಕರನ್ನ ಸುರಕ್ಷಿತವಾಗಿ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಲ್ಲಿ ಬಿಎಂಆರ್‌ಸಿಎಲ್‌ ಸಿಬ್ಬಂದಿ ಇಳಿಸಿದ್ದರು. ಮೆಟ್ರೋ ಸಮಸ್ಯೆಯಿಂದಾಗಿ ಸಾವಿರಾರು ಜನರು ಪರದಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:49 pm, Thu, 25 June 26

Source link

Chanakya Niti: ಶ್ರೀಮಂತಿಕೆ ಗಳಿಸಲು ಬಯಸುವವರು ಈ ಗೋಲ್ಡನ್‌ ರೂಲ್ಸ್‌ಗಳನ್ನು ತಪ್ಪದೇ ಪಾಲಿಸಿ – Kannada News | Chanakya Niti: If you follow these three principles of Chanakya, you can become rich

ಜೀವನದಲ್ಲಿ ಯಶಸ್ಸನ್ನು  (Success) ಸಾಧಿಸಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು, ಸಮಾಜದಲ್ಲಿ ಗೌರವದಿಂದ ಬಾಳಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಅನೇಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನಮ್ಮಲ್ಲಿ ಅನೇಕರಿಗೆ ಕಷ್ಟಪಟ್ಟು ಕೆಲಸ ಮಾಡಿದರೂ ಸಾಕಷ್ಟು ಹಣ ಗಳಿಸಲು ಸಾಧ್ಯವಾಗುವುದೇ ಇಲ್ಲ. ನಿಮಗೂ  ಹೀಗೆ ಹಗಲಿರುಳು ಶ್ರಮಿಸಿದರೂ ಹೆಚ್ಚಿನ ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತಿಲ್ಲವೇ, ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಿದ್ರೆ ಆಚಾರ್ಯ ಚಾಣಕ್ಯರು ತಿಳಿಸಿರುವ ಈ ಕೆಲವೊಂದು ಗೋಲ್ಡನ್‌ ರೂಲ್ಸ್‌ಗಳನ್ನು ಪಾಲಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನ ಸಕಾರಾತ್ಮಕವಾಗಿ ಬದಲಾಗುತ್ತದೆ.

ಶ್ರೀಮಂತಿಕೆ ಗಳಿಸಲು ಈ ತತ್ವಗಳನ್ನು ಪಾಲಿಸಿ:

ಹಣ ವ್ಯರ್ಥ ಮಾಡುವುದನ್ನು ತಪ್ಪಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಹಣವನ್ನು ಉಳಿಸುವ ಬಗ್ಗೆ ಯೋಚಿಸಬೇಕು. ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುವುದು ಬಡತನಕ್ಕೆ ಕಾರಣವಾಗಬಹುದು. ಆದ್ದರಿಂದ ಹಣವನ್ನು ಖರ್ಚು ಮಾಡುವ ಮೊದಲು ಹತ್ತು ಬಾರಿ ಯೋಚಿಸಿ. ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತಿನಂತೆ, ಸಣ್ಣ ಮೊತ್ತದ ನಿರಂತರ ಉಳಿತಾಯದಿಂದಲೂ ಸಹ ಸಂಪತ್ತು ಹೆಚ್ಚಾಗುತ್ತದೆ ಮತ್ತು ಈ ಉಳಿತಾಯದ ಅಭ್ಯಾಸವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹಾಗಾಗಿ ವ್ಯರ್ಥ ಖರ್ಚುಗಳನ್ನು ತಪ್ಪಿಸಿ, ಆ ಹಣವನ್ನು ಉಳಿತಾಯ ಮಾಡಿ. ಉಳಿತಾಯದ ಜೊತೆಗೆ ಜಾಣತನದಿಂದ ಹೂಡಿಕೆಯನ್ನೂ ಮಾಡಬೇಕು.

ಬಹು ಆದಾಯದ ಮೂಲಗಳನ್ನು ರಚಿಸಿ: ಆರ್ಥಿಕವಾಗಿ ಸ್ಥಿತಿವಂತರಾಗಲು, ಶ್ರೀಮಂತಿಕೆಯನ್ನು ಗಳಿಸಲು ಬಯಸುವವರು ಬಹು ಆದಾಯದ ಮೂಲಗಳನ್ನು ರಚಿಸಬೇಕು. ಒಂದೇ ಆದಾಯದ ಮೂಲದಿಂದ ಶ್ರೀಮಂತಿಕೆಯನ್ನು ಗಳಿಸಲು ಎಂದಿಗೂ ಸಾಧ್ಯವಿಲ್ಲ. ಆರ್ಥಿಕ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಬಹು ಆದಾಯದ ಮೂಲವನ್ನು ಅವಲಂಬಿಸುವುದು ಅತ್ಯಗತ್ಯ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಚಿಕ್ಕ ವಯಸ್ಸಿನಿಂದಲೇ ಈ ದಿಕ್ಕಿನಲ್ಲಿ ಶ್ರಮಿಸುವವರು ಭವಿಷ್ಯದಲ್ಲಿ ಹೆಚ್ಚು ಸುರಕ್ಷಿತ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.

ಇದನ್ನೂ ಓದಿ: ಶ್…‌ ನಿಮ್ಮ ವೈಯಕ್ತಿಕ ವಿಚಾರಗಳನ್ನು ಯಾರ ಬಳಿಯೂ ಶೇರ್‌ ಮಾಡಿಕೊಳ್ಳಬೇಡಿ

ಸೋಮಾರಿತನವನ್ನು ಶಾಶ್ವತವಾಗಿ ತ್ಯಜಿಸಿ: ಚಾಣಕ್ಯ ತತ್ವದ ಪ್ರಕಾರ, ಶ್ರೀಮಂತನಾಗಲು, ಒಬ್ಬ ವ್ಯಕ್ತಿಯು ಸೋಮಾರಿತನವನ್ನು ತ್ಯಜಿಸಿ ಕಠಿಣ ಪರಿಶ್ರಮಿಯಾಗಿರಬೇಕು. ಏಕೆಂದರೆ ನೀವು ಸೋಮಾರಿತನವನ್ನು ಬಿಡದಿದ್ದರೆ, ನಿಮ್ಮ ಗುರಿಯನ್ನು ಸಮಯಕ್ಕೆ ತಲುಪಲು ನಿಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಗುರಿಗಳನ್ನು ಸಾಧಿಸಲು ನೀವು ಶ್ರಮಿಸಬೇಕು. ಈ ಆಲೋಚನೆಯು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು.

ಕೆಟ್ಟ ಸಹವಾಸದಿಂದ ದೂರವಿರಿ: ಕೆಟ್ಟವರ ಸಹವಾಸ, ದುರಾಭ್ಯಾಸ ಇವೆರಡೂ ಸಹ ನೀವು ಶ್ರೀಮಂತರಾಗುವುದನ್ನು ತಡೆಯುತ್ತದೆ.  ಕೆಟ್ಟ ಸಹವಾಸದಿಂದ ದೂರವಿರಿ. ಚಾಣಕ್ಯ ನೀತಿಯ ಪ್ರಕಾರ, ಕೆಟ್ಟ ಸಹವಾಸವು ವಿನಾಶಕ್ಕೆ ಕಾರಣವಾಗುತ್ತದೆ ಮತ್ತು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನೀವು ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೈಗಾರಿಕೆ, ಹೋಟೆಲ್‌ಗಳಿಗೆ ಬಿಗ್ ರಿಲೀಫ್; ಕಮರ್ಷಿಯಲ್ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಸರ್ಕಾರ – Kannada News | Government Removes all restrictions on commercial LPG supply as West Asia crisis improves

ನವದೆಹಲಿ, ಜೂನ್ 25: ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರವು ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ತಿಳಿಯಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG) ಸರಬರಾಜಿನ ಮೇಲಿದ್ದ ಎಲ್ಲಾ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ಹಿಂಪಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮತ್ತು ಗ್ಯಾಸ್ ಪೂರೈಕೆ ಸರಪಳಿ ಯಥಾಸ್ಥಿತಿಗೆ ಮರಳುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇಂದು ಈ ನಿರ್ಧಾರವನ್ನು ಪ್ರಕಟಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಪಶ್ಚಿಮ ಏಷ್ಯಾ (ಇಸ್ರೇಲ್, ಇರಾನ್ ಮತ್ತು ಸುತ್ತಮುತ್ತಲಿನ ದೇಶಗಳು) ವಲಯದಲ್ಲಿ ನಡೆದ ಸರಣಿ ಸಂಘರ್ಷಗಳಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಮುನ್ನೆಚ್ಚರಿಕೆಯಿಂದಾಗಿ, ದೇಶೀಯ ಮಾರುಕಟ್ಟೆಯಲ್ಲಿ ಕೊರತೆಯಾಗದಂತೆ ತಡೆಯಲು ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ವಿತರಣೆಯ ಮೇಲೆ ಕೆಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿತ್ತು.

ಇದನ್ನೂ ಓದಿ: ಅಡುಗೆ ಮಾಡುವಾಗ ಎಲ್​ಪಿಜಿ ಉಳಿಸಬೇಕಾ? ಹೀಗೆ ಮಾಡಿದರೆ 15 ದಿನ ಹೆಚ್ಚು ಗ್ಯಾಸ್ ಬಳಸಬಹುದು!

ಇತ್ತೀಚಿನ ದಿನಗಳಲ್ಲಿ ಅಮೆರಿಕ ಹಾಗೂ ಇಸ್ಲಾಮಿಕ್ ದೇಶಗಳ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಮಾತುಕತೆಗಳ ಫಲವಾಗಿ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಗಣನೀಯವಾಗಿ ಸುಧಾರಿಸಿದೆ. ತೈಲ ಸಾಗಣೆಯ ಪ್ರಮುಖ ಸಮುದ್ರ ಮಾರ್ಗಗಳು ಈಗ ಸುರಕ್ಷಿತವಾಗಿದ್ದು, ಭಾರತಕ್ಕೆ ಆಗಮಿಸುವ ಗ್ಯಾಸ್ ಮತ್ತು ತೈಲದ ಹರಿವು ಯಥಾಸ್ಥಿತಿಗೆ ತಲುಪಿದೆ. ಹೀಗಾಗಿ ನಿರ್ಬಂಧಗಳನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.

ಮುಕ್ತ ಮಾರುಕಟ್ಟೆ ಪೂರೈಕೆ ಆರಂಭ:

ಈ ಆದೇಶದ ನಂತರ, ತೈಲ ಮಾರಾಟ ಕಂಪನಿಗಳು (IOCL, BPCL, HPCL) ವಾಣಿಜ್ಯ ಸಂಸ್ಥೆಗಳಿಗೆ ಯಾವುದೇ ಮಿತಿ ಇಲ್ಲದೆ ಎಷ್ಟು ಬೇಕಾದರೂ ಸಿಲಿಂಡರ್‌ಗಳನ್ನು ಪೂರೈಸಲು ಅವಕಾಶ ಪಡೆದಿವೆ. ಹೋಟೆಲ್ ಉದ್ಯಮಿಗಳು, ಕ್ಯಾಟರರ್ಸ್ ಮತ್ತು ವಾಣಿಜ್ಯ ಬಳಕೆದಾರರು ಇನ್ಮುಂದೆ ಯಾವುದೇ ಮುಂಗಡ ಕೋಟಾ ಮಿತಿ ಇಲ್ಲದೆ ಗ್ಯಾಸ್ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

ಉದ್ಯಮ ವಲಯಕ್ಕೆ ಲಾಭ:

ಸರ್ಕಾರದ ಈ ಕ್ರಮದಿಂದಾಗಿ ಮುಂಬರುವ ಹಬ್ಬದ ಸೀಸನ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆಯಾಗುವ ಭೀತಿ ದೂರಾಗಿದೆ. ಮಾರುಕಟ್ಟೆಯಲ್ಲಿ ಸರಬರಾಜು ಹೆಚ್ಚಾಗುವುದರಿಂದ ಮುಂಬರುವ ದಿನಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯೂ ಕೂಡ ಕೊಂಚ ಇಳಿಕೆಯಾಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version