CET 2026: NEET ರಿಸಲ್ಟ್ ಲೇಟ್​​; ಈ ಸಲ ಆಪ್ಷನ್ ಎಂಟ್ರಿ ಹೇಗೆ? KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು? – Kannada News | KEA Executive Director H. Prasanna Clarifies CET Option Entry Amid NEET Delays

ನೀಟ್ ಪರೀಕ್ಷೆಗಳು ವಿಳಂಬವಾಗಿರುವುದರಿಂದ, ಮೆಡಿಕಲ್, ಡೆಂಟಲ್ ಮತ್ತು ಆಯುಷ್ ಕೋರ್ಸ್‌ಗಳ ಸೀಟು ಹಂಚಿಕೆ ಎರಡನೇ ಸುತ್ತಿನಲ್ಲಿ ನಡೆಯಲಿದೆ. ಎಂಸಿಸಿ ಮತ್ತು ಮೆಡಿಕಲ್ ಎಜುಕೇಶನ್ ವಿಭಾಗದಿಂದ ಸೀಟ್ ಮ್ಯಾಟ್ರಿಕ್ಸ್ ಲಭ್ಯವಾದ ನಂತರ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ

ವೈದ್ಯಕೀಯ ಸೀಟು ಮಾತ್ರ ಬಯಸುವ ವಿದ್ಯಾರ್ಥಿಗಳು ಎರಡನೇ ಸುತ್ತಿಗಾಗಿ ಕಾಯಬಹುದು. ಆದರೆ, ವೈದ್ಯಕೀಯ ಸೀಟು ದೊರೆಯದಿದ್ದಲ್ಲಿ ಇಂಜಿನಿಯರಿಂಗ್ ಅಥವಾ ಇತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲ ಸುತ್ತಿನ ಆಪ್ಷನ್ ಎಂಟ್ರಿಯಲ್ಲಿ ಭಾಗವಹಿಸಬೇಕು ಎಂದು ಪ್ರಸನ್ನ ಅವರು ಸ್ಪಷ್ಟಪಡಿಸಿದ್ದಾರೆ. ಹೀಗೆ ಭಾಗವಹಿಸಿದ ವಿದ್ಯಾರ್ಥಿಗಳು ಎರಡನೇ ಸುತ್ತಿನಲ್ಲಿ ವೈದ್ಯಕೀಯ ಆಯ್ಕೆಗಳನ್ನು ಸೇರಿಸಿ ಪುನರ್ವ್ಯವಸ್ಥೆ ಮಾಡಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. ಕೆಇಎ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವ್ಯವಸ್ಥೆಯನ್ನು ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Source link

ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA ಕಾರ್ಯನಿರ್ವಾಹಕ ನಿರ್ದೇಶಕ – Kannada News | KCET 2026 Rank Issue Explained: KEA’s H. Prasanna on Missing Ranks and CBSE Result Delays

ಬೆಂಗಳೂರು, ಜೂನ್​​ 24: ಪಿಯು ಬೋರ್ಡ್ ರಿಜಿಸ್ಟರ್ ಸಂಖ್ಯೆ ತಪ್ಪು ನಮೂದಿಸಿದ ಅಥವಾ ಸಿಬಿಎಸ್‌ಇ ಫಲಿತಾಂಶದ ಡೇಟಾ ಸರಿಯಾಗಿ ಲಭಿಸದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಲಭಿಸಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಹೇಳಿದರು. ಸಿಇಟಿ ರ‍್ಯಾಂಕ್ ಬಂದಿಲ್ಲ ಎಂಬ ವಿದ್ಯಾರ್ಥಿಗಳು ದೂರಿನ ವಿಚಾರವಾಗಿ ಮಾತನಾಡಿದ ಅವರು, ರಿಸಲ್ಟ್ ಪ್ರಕಟಿಸಿದಾಗ ವಿದ್ಯಾರ್ಥಿಗಳಿಗೆ ತಮ್ಮ ಸಿಇಟಿ ಅಂಕಗಳು ಮತ್ತು ಪಿಯುಸಿ ಅಂಕಗಳನ್ನು ನೋಡಲು ಅವಕಾಶವಿತ್ತು. ಪಿಯು ಬೋರ್ಡ್‌ನ ರಿಜಿಸ್ಟರ್ ಸಂಖ್ಯೆಗಳನ್ನು ತಪ್ಪಾಗಿ ನಮೂದಿಸಿದ ಕಾರಣ ಅಥವಾ ಸಿಬಿಎಸ್‌ಇ ವಿದ್ಯಾರ್ಥಿಗಳ ಡೇಟಾ ಕೆಇಎಗೆ ಲಭ್ಯವಾಗದ ಕಾರಣ ರ‍್ಯಾಂಕ್ ದೊರೆತಿಲ್ಲ. ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಿದ್ದರೂ, ಕೆಲವರು ಮಾಡಿಲ್ಲ ಅಥವಾ ಇಂಗ್ಲಿಷ್ ಅಂಕಪಟ್ಟಿ ಡೌನ್‌ಲೋಡ್ ಆಗಿಲ್ಲ. ಈ ತಪ್ಪುಗಳನ್ನು ಸರಿಪಡಿಸಲು ವಿದ್ಯಾರ್ಥಿಗಳ ರಿಸಲ್ಟ್ ಲಾಗಿನ್‌ನಲ್ಲಿ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿತ್ತು. ತಪ್ಪಾದ ಅಂಕಗಳನ್ನು ನಮೂದಿಸಿದರೆ ದಾಖಲಾತಿ ಸಮಯದಲ್ಲಿ ಸಿಕ್ಕಿಬಿದ್ದು ಪ್ರವೇಶ ರದ್ದಾಗಬಹುದು ಎಂದು ಕೆಇಎ ಎಚ್ಚರಿಕೆ ನೀಡಿದೆ. ಸರಿಯಾದ ಅಂಕಗಳನ್ನು ನಮೂದಿಸಿದವರಿಗೆ ಸ್ಪಾಟ್ ರ‍್ಯಾಂಕ್ ನೀಡಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಆಸ್ತಿಗಾಗಿ ತಂದೆ ಕಥೆಯನ್ನೇ ಮುಗಿಸಿದ್ರಾ ಮಕ್ಕಳು?: ದೂರು, ಪ್ರತಿದೂರಿನ ಹಿನ್ನೆಲೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ – Kannada News | Property Dispute Turns Grim: 75 Year Old Father’s Body Exhumed for Autopsy in Haveri Amid Children’s Allegations

ಮೃತ ಗುರುಬಸಪ್ಪ ಬಸಾಪುರ Image Credit source: Tv9 Kannada

ಹಾವೇರಿ, ಜೂನ್​​ 24: ಎಂತಹ ಕಷ್ಟ ಕಾಲದಲ್ಲೂ ಇವರು ತಮ್ಮ ಕೈಬಿಡಲ್ಲ ಎಂಬ ನಂಬಿಕೆ ಇಟ್ಟುಕೊಂಡು ಸರ್ವಸ್ವವನ್ನೂ ತ್ಯಾಗ ಮಾಡಿ ಮಕ್ಕಳನ್ನು ಹೆತ್ತವರು ಬೆಳೆಸುತ್ತಾರೆ. ಆದರೆ ಹೀಗೆ ಸಾಕಿ ಸಲಹಿದ ತಂದೆಯ ಜೀವವನ್ನು ಕೇವಲ ಆಸ್ತಿಗಾಗಿ ಮಕ್ಕಳೇ ತೆಗೆದಿರುವ ಆರೋಪ ಹಾವೇರಿ ಜಿಲ್ಲೆ ಸವಣೂರು ತಾಲೂಕು ಶಿರಬಡಗಿ ಗ್ರಾಮದಲ್ಲಿ ಕೇಳಿಬಂದಿದೆ. ಆಸ್ತಿಗಾಗಿ ಹೆತ್ತ ತಂದೆಯನ್ನೇ ಅಣ್ಣ ಬಲಿ ಪಡೆದಿದ್ದಾನೆ ಎಂದು ತಂಗಿಯರು ಹೇಳುತ್ತಿದ್ದರೆ, ಮತ್ತೊಂದೆಡೆ ಸಹೋದರಿಯರೇ ಅಪ್ಪನ ಸಾವಿಗೆ ಕಾರಣ ಎಂದು ಸಹೋದರ ಹೇಳುತ್ತಿದ್ದಾನೆ. ಈ ಸಂಬಂಧ ದೂರು-ಪ್ರತಿದೂರುಗಳು ದಾಖಲಾಗಿದ್ದು, ಪೊಲೀಸರು ಸತ್ಯದ ಹುಡುಕಾಟದಲ್ಲಿದ್ದಾರೆ.

ಕೋರ್ಟ್​​ ಮೆಟ್ಟಿಲೇರಿದ್ದ ಆಸ್ತಿ ವಿಚಾರ

ಶಿರಬಡಗಿ ಗ್ರಾಮದ 75 ವರ್ಷದ ಗುರುಬಸಪ್ಪ ಬಸಾಪುರ ಎಂಬವರಿಗೆ ಐವರು ಮಕ್ಕಳಿದ್ದು, ಆ ಪೈಕಿ ರವಿ ಬಸಾಪುರ ಎಂಬಾತ ಹಿರಿಯ ಮಗ. ಉಳಿದಂತೆ ರೇಖಾ, ಸುಜಾತಾ, ಗಿರಿಜಾ, ಪಾರ್ವತಿ ಸಹೋದರಿಯರು. 27 ಎಕರೆ ಜಮೀನು ಹೊಂದಿದ್ದ ಗುರಬಸಪ್ಪ, ಈ ಆಸ್ತಿಯನ್ನು ಇತ್ತೀಚೆಗೆ ತನ್ನ ಹೆಣ್ಣು ಮಕ್ಕಳಿಗೆ ಹಂಚಿಕೆ ಮಾಡಿದ್ದರು. ತಂದೆಯ ಈ ನಿರ್ಧಾರದಿಂದ ಮನನೊಂದಿದ್ದ ಹಿರಿಯ ಪುತ್ರ ರವಿ ಬಸಾಪುರ ಆಸ್ತಿ ವಿಚಾರ ಸಂಬಂಧ ಕೋರ್ಟ್​​ ಮೆಟ್ಟಿಲು ಕೂಡ ಏರಿದ್ದರು. ಆದರೆ ಈ ನಡುವೆ ಜೂನ್​​ 15ರಂದು ತಮ್ಮದೇ ತೋಟದಲ್ಲಿ ಗುರುಬಸಪ್ಪ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಇದೇ ವಿಚಾರವೀಗ ಕುಟುಂಬದ ನಡುವೆ ಜಟಾಪಟಿಗೆ ಕಾರಣವಾಗಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಚಿನ್ನ ನಿಕ್ಷೇಪಗಳು ಪತ್ತೆ; ಬಂಗಾರದಂತ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು

ಹೆಣ್ಣು ಮಕ್ಕಳಿಗೆ ಆಸ್ತಿ ಹಂಚಿದ ಎಂಬ ಕಾರಣಕ್ಕೆ ತಂದೆಯನ್ನು ಅಣ್ಣ ರವಿ ಕೊಲೆ ಮಾಡಿದ್ದಾನೆ ಎಂದು ಸಹೋದರಿಯರು ಆರೋಪಿಸಿದ್ದರೆ ಆಸ್ತಿಗಾಗಿ ತಂಗಿಯರೇ ನಮ್ಮ ತಂದೆಯನ್ನು ಕೊಲೆ ಮಾಡಿ ನನ್ನ ಮೇಲೆ ಆರೋಪ ಮಾಡ್ತಿದಾರೆ ಎಂದು ರವಿ ಬಸಾಪುರ ಹೇಳುತ್ತಿದ್ದಾರೆ. ಹೀಗಾಗಿ ಗುರುಬಸಪ್ಪ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ತಹಶಿಲ್ದಾರ ರವಿ ಕೊರವರ ಸಮ್ಮುಖದಲ್ಲಿ ಮೃತ ಗುರುಬಸಪ್ಪ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:07 pm, Wed, 24 June 26

Source link

ಮೋಸ ಹೋಗ್ಬೇಡಿ: ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು – Kannada News | CET Exam: KEA Director H Prasanna gives information to Public about Medical management seats In College

ಬೆಂಗಳೂರು, (ಜೂನ್ 24): ಕಾಲೇಜುಗಳಲ್ಲಿ ಸೀಟ್ ಮಾಫಿಯಾ ನಡೆಯುತ್ತೆ. ಅದರಲ್ಲೂ ಪ್ರಮುಖವಾಗಿ ವೈದ್ಯಕೀಯ ಕೋರ್ಸ್ (Medical Course)  ಸಂಬಂಧಿಸಿದ ಮ್ಯಾನೇಜ್ಮೆಂಟ್ ಹಾಗೂ ಎನ್​​ಆರ್​​​ಐ ಸೀಟ್​​ಗಳನ್ನು ಆಯಾ ಕಾಲೇಜಿನವರೇ ನೀಡುತ್ತಾರೆ ಎಂದು ಕೆಲವರು ಅಂದುಕೊಂಡಿದ್ದು, ಹಣ ಕೊಟ್ಟು ಮೋಸ ಹೋಗಿದವರು ಉಂಟು. ಹೀಗಾಗಿ ಈ ಬಗ್ಗೆ ಕೆಇಎ ನಿರ್ದೇಶಕ H ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದು, ಕೇವಲ ಇಂಜಿನಿಯರಿಂಗ್ ಕೋರ್ಟ್​​​ಗೆ ಸಂಬಂಧಪಟ್ಟಂತೆ ಕೇವಲ 25 ಪರ್ಸೆಂಟ್ ಮ್ಯಾನೇಜ್ಮೆಂಟ್ ಕೋಟಾಕ್ಕೆ ಅವಕಾಶ ಇದೆ. ಆದ್ರೆ, ಮೆಡಿಕಲ್, ಡೆಂಟಲ್, ಆಯುಷ್​​ಗೆ ಸಂಬಂಧಿಸಿದಂತೆ ಎಂಎನ್​​ಸಿ ಪ್ರಕಾರ, ಸುಪ್ರೀಂಕೋರ್ಟ್​​ ನಿರ್ದೇಶನದಂತೆ ನೀಟ್ ರ್ಯಾಂಕ್ ಆಧರಿಸಿ ಕೆಇಎ ಮುಖಾಂತರ ಸೀಟ್ ಅಲರ್ಟ್ ಆಗುತ್ತವೆ. ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟು ಕೊಡಿಸುತ್ತೇನೆ ಎಂದು ಹೇಳುವವರ ಬಗ್ಗೆ ಹುಷಾರ್ ಆಗಿರಿ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೋ ನೋಡಿ: ಸಿಇಟಿ 2026: ಸೀಟ್​​ ಹಂಚಿಕೆ ಹೇಗೆ ನಡೆಯುತ್ತೆ? ಇಲ್ಲಿದೆ ಮಹತ್ವದ ಮಾಹಿತಿ

Source link

ಲಕ್ನೋ ಫ್ರಾಂಚೈಸಿಗೆ ಮೂರೇ ಪದಗಳಲ್ಲಿ ವಿದಾಯ ಹೇಳಿದ ರಿಷಭ್ ಪಂತ್..!

Source link

ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ; ವಿಡಿಯೋ ವೈರಲ್ – Kannada News | Sanitation worker Falls Into Manhole In Front Of Mumbai Mayor Ritu Tawde during Heavy Rainfall

ಮುಂಬೈ, ಜೂನ್ 24: ವಾಣಿಜ್ಯ ನಗರಿ ಮುಂಬೈನಲ್ಲಿ ಮುಂಗಾರು ಮಳೆ (Mumbai Rains) ಆರ್ಭಟ ಮುಂದುವರಿದಿದ್ದು, ನಗರದಾದ್ಯಂತ ರಸ್ತೆಗಳು ಜಲಾವೃತಗೊಂಡಿವೆ. ಇದರ ನಡುವೆಯೇ ಬೃಹನ್ಮುಂಬೈ ಮಹಾನಗರ ಪಾಲಿಕೆಯ (BMC) ನಿರ್ಲಕ್ಷ್ಯವನ್ನು ಎತ್ತಿಹಿಡಿಯುವ ಆಘಾತಕಾರಿ ಘಟನೆಯೊಂದು ನಡೆದಿದೆ. ಮುಂಬೈ ಮೇಯರ್ ರಿತು ತಾವ್ಡೆ ಅವರು ಜಲಾವೃತಗೊಂಡ ಪ್ರದೇಶವನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಅವರ ಕಣ್ಣೆದುರೇ ಪೌರಕಾರ್ಮಿಕರೊಬ್ಬರು ನೀರಿನಲ್ಲಿ ಮುಳುಗಿದ್ದ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದ್ದಾರೆ.

ಈ ಇಡೀ ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಬಿಎಂಸಿ ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆಗಳ ಮೇಲೆ ಮೂರರಿಂದ 4 ಅಡಿ ನೀರು ನಿಂತಿತ್ತು. ಮೇಯರ್ ರಿತು ತಾವ್ಡೆ ಅವರು ಅಧಿಕಾರಿಗಳ ತಂಡ ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಳುಗಡೆಯಾದ ರಸ್ತೆಗಳ ಪರಿಶೀಲನೆ ನಡೆಸುತ್ತಿದ್ದರು. ಮೇಯರ್ ಮಳೆ ನೀರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳದಲ್ಲೇ ಕೆಲವೇ ಅಡಿಗಳ ದೂರದಲ್ಲಿ ರಸ್ತೆಯಲ್ಲಿದ್ದ ಮ್ಯಾನ್‌ಹೋಲ್ ಮುಚ್ಚಳವನ್ನು ತೆಗೆಯಲಾಗಿತ್ತು. ರಸ್ತೆಯ ತುಂಬಾ ನೀರು ತುಂಬಿದ್ದರಿಂದ ಆ ಮ್ಯಾನ್‌ಹೋಲ್ ಪಾದಚಾರಿಗಳಿಗೆ ಕಾಣಿಸುತ್ತಿರಲಿಲ್ಲ.

ಅದೇ ಸಮಯದಲ್ಲಿ ರಸ್ತೆಯಲ್ಲಿ ನಡೆದು ಬರುತ್ತಿದ್ದ ಪೌರಕಾರ್ಮಿಕ ಮ್ಯಾನ್‌ಹೋಲ್ ಇರುವುದನ್ನು ಗಮನಿಸದೆ ನೇರವಾಗಿ ಅದರಲ್ಲಿ ಬಿದ್ದಿದ್ದಾರೆ. ಅವರು ಮ್ಯಾನ್‌ಹೋಲ್‌ಗೆ ಬೀಳುತ್ತಿದ್ದಂತೆ ಅಲ್ಲೇ ಇದ್ದ ಮೇಯರ್ ಭದ್ರತಾ ಸಿಬ್ಬಂದಿ, ಮಾಧ್ಯಮದ ಕ್ಯಾಮೆರಾಮೆನ್‌ಗಳು ಮತ್ತು ಸ್ಥಳೀಯರು ತಕ್ಷಣವೇ ಆತನ ಕೈಗಳನ್ನು ಹಿಡಿದು ಮೇಲಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಒಂದು ದೊಡ್ಡ ದುರಂತ ತಪ್ಪಿದಂತಾಗಿದ್ದು, ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ತಕ್ಷಣವೇ ಆ ಮ್ಯಾನ್‌ಹೋಲ್ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಮುಂದಾಗಿದ್ದಾರೆ.

(Video Source: Siraj Nooranin X Page)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನೀಕಾಂತ್-ಕಮಲ್ ಹಾಸನ್ ಸಿನಿಮಾಕ್ಕೆ ಪದೇ-ಪದೇ ನಿರ್ದೇಶಕರು ಬದಲಾಗಿದ್ದೇಕೆ? – Kannada News | Rajinikanth explains why his movie changed three directors

ರಜನಿಕಾಂತ್ ಮತ್ತು ಕಮಲ್ ಹಾಸನ್ ದಶಕಗಳ ನಂತರ ಒಟ್ಟಾಗಿ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಖುದ್ದು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ. ಆದರೆ ಈ ಸಿನಿಮಾದ ಘೋಷಣೆ ಮಾಡಿ ಬಹಳ ಸಮಯವಾಗಿತ್ತು. ಸಿನಿಮಾದ ನಿರ್ದೇಶಕರು ಪದೇ ಪದೇ ಬದಲಾದರು, ಸಿನಿಮಾದ ಬಗ್ಗೆ ಸಾಕಷ್ಟು ಗೊಂದಲುಗಳು ಸಹ ಮೂಡಿದ್ದವು. ಆದರೆ ಕೊನೆಗೂ ಈಗ ನಿರ್ದೇಶಕರು ಅಂತಿಮಗೊಂಡಿದ್ದು, ಸಿನಿಮಾದ ಹೆಸರು ಸಹ ಬಿಡುಗಡೆ ಮಾಡಲಾಗಿದೆ. ಸಿನಿಮಾದ ಟೈಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಮಲ್ ಹಾಸನ್, ಸಿನಿಮಾಕ್ಕೆ ಪದೇ ಪದೇ ನಿರ್ದೇಶಕರು ಬದಲಾಗಿದ್ದಕ್ಕೆ ಕಾರಣವೇನು ಎಂದು ಸಹ ತಿಳಿಸಿದ್ದಾರೆ.

‘ನಾವು ಮೊದಲು ನಿರ್ದೇಶಕ ರವಿಕುಮಾರ್ ಜೊತೆಗೆ ಸಿನಿಮಾ ಮಾಡೋಣ ಎಂದುಕೊಂಡೆವು ಅದು ವರ್ಕೌಟ್ ಆಗಲಿಲ್ಲ. ಬಳಿಕ ಸಿ ಸುಂದರ್ ಬಂದರು. ಅವರು ತಾವು ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಬೇಕಿದ್ದು ಅದು ತಡವಾಗುತ್ತದೆ ಎಂಬ ಕಾರಣಕ್ಕೆ ಸಿನಿಮಾದಿಂದ ಹಿಂದೆ ಸರಿಯುವುದಾಗಿ ಹೇಳಿದರು. ನಾವು ಬೇರೆ ನಿರ್ದೇಶಕರನ್ನು ನೋಡಲೇ ಬೇಕಾಯ್ತು’ ಎಂದಿದ್ದಾರೆ ರಜನೀಕಾಂತ್.

ಬಳಿಕ ಸಿಬಿಲ್ ಚಕ್ರವರ್ತಿ ಒಂದೊಳ್ಳೆ ಕತೆ ಹೇಳಿದರು. ಅದು, ನ್ಯೂಕ್ಲಿಯರ್ ವಿಜ್ಞಾನಿಯೊಬ್ಬನ ಕುರಿತಾದ ಕತೆ, ಬಹಳ ಸೂಕ್ಷ್ಮವಾದ ಕತೆ, ಆ ಕತೆಗಾಗಿ ನಾವು ಅಫ್ಘಾನಿಸ್ತಾನ ಮತ್ತು ರಷ್ಯಾಗಳಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಚಿತ್ರೀಕರಣಕ್ಕೆ ಹೆಚ್ಚು ಸಮಯ ಮತ್ತು ರಿಸ್ಕ್ ಸಹ ತೆಗೆದುಕೊಳ್ಳಬೇಕಿತ್ತು. ಅದು ತುಂಬಾ ಒಳ್ಳೆಯ ಕತೆಯಾದರೂ ಹೆಚ್ಚು ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ನಾವು ಆ ಸಿನಿಮಾ ಬೇಡ ಎಂದುಕೊಂಡೆವು’ ಎಂದಿದ್ದಾರೆ ರಜನೀಕಾಂತ್.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾನಲ್ಲಿ ‘ಗನ್ ಎಕ್ಸ್​ಪರ್ಟ್’ ಟಿಟಿಯಾನಾ ಹಾಟ್ ಅವತಾರ

ಕೊನೆಗೆ ಅಶ್ವತ್ಥ್ ಮಾರಿಮುತ್ತು ಅವರು ಒಳ್ಳೆಯ ಕತೆ ತಂದರು. ಅದು ವೈದ್ಯನೊಬ್ಬನ ಕುರಿತಾದ ಕತೆ. ಕತೆ ಬಹಳ ಇಷ್ಟವಾಯ್ತು ಸಿನಿಮಾದ ಚಿತ್ರೀಕರಣ ಸಹ ಬೇಗನೆ ಮುಗಿದು ಪ್ರೇಕ್ಷಕರ ಮುಂದೆ ಸಿನಿಮಾ ಬರಲಿದೆ’ ಎಂದು ರಜನೀಕಾಂತ್ ಹೇಳಿದರು. ನಟ ಕಮಲ್ ಹಾಸನ್ ಮಾತನಾಡಿ, ‘ನಾವು ಯಾವುದೇ ಕಾರಣಕ್ಕೂ ಈ ಸಿನಿಮಾದ ಮೂಲಕ ಗೆಲ್ಲಲೇ ಬೇಕು’ ಎಂದರು.

ಸಿನಿಮಾಕ್ಕೆ ‘ಧರ್ಮನ್’ ಎಂದು ಹೆಸರಿಟ್ಟಿದ್ದು ಸಿನಿಮಾನಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಿಮ್ರನ್ ಮತ್ತು ರಾಶಿ ಖನ್ನಾ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಕಮಲ್ ಹಾಸನ್ ಖುದ್ದು ಬಂಡವಾಳ ಹೂಡಿದ್ದಾರೆ. ಕಮಲ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:11 pm, Wed, 24 June 26

Source link

ವಿಜಯ್ ಜನ್ಮದಿನಕ್ಕೆ ರಜನಿಕಾಂತ್ ಸಾರ್ವಜನಿಕವಾಗಿ ವಿಶ್ ಮಾಡಿಲ್ಲ ಯಾಕೆ? ಸಿಕ್ತು ಉತ್ತರ – Kannada News | Rajinikanth reveals reason for not wishing CM Vijay publicly on birthday

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಸಿ. ಜೋಸೆಫ್ ವಿಜಯ್ (CM Vijay) ಜೂನ್ 22ರಂದು ತಮ್ಮ 52ನೇ ಜನ್ಮದಿನವನ್ನು ಆಚರಿಸಿಕೊಂಡರು. ಅಭಿಮಾನಿಗಳು, ಗಣ್ಯರು ಹಾಗೂ ರಾಜಕೀಯ ನಾಯಕರು ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು. ಆದರೆ, ಈ ಸಂಭ್ರಮದ ನಡುವೆ ಇಂಟರ್ನೆಟ್‌ನಲ್ಲಿ ಒಂದು ಪ್ರಶ್ನೆ ಜೋರಾಗಿ ಸದ್ದು ಮಾಡುತ್ತಿತ್ತು; ಅದೇನೆಂದರೆ, ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ವಿಜಯ್‌ಗೆ ಸಾರ್ವಜನಿಕವಾಗಿ ಏಕೆ ಶುಭ ಕೋರಲಿಲ್ಲ? ಈಗ ಈ ಎಲ್ಲಾ ಚರ್ಚೆಗಳಿಗೆ ಸ್ವತಃ ರಜನಿಕಾಂತ್ ಅವರೇ ಉತ್ತರ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬುಧವಾರ (ಜೂನ್ 24) ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಹೊಸ ಚಿತ್ರದ ಅದ್ಧೂರಿ ಲಾಂಚ್ ಈವೆಂಟ್‌ನಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು ‘ಧರ್ಮನ್’ ಎಂದು ಅನಾವರಣಗೊಳಿಸಲಾಯಿತು. ಕಮಲ್ ಹಾಸನ್ ನಿರ್ಮಾಣದ ಈ ಚಿತ್ರದ ಶೀರ್ಷಿಕೆ ಲಾಂಚ್ ಮುಗಿಸಿ ರಜನಿಕಾಂತ್ ಹೊರಡುವಾಗ, ಮಾಧ್ಯಮ ಪ್ರತಿನಿಧಿಗಳು ವಿಜಯ್ ಜನ್ಮದಿನದ ಕುರಿತು ಪ್ರಶ್ನೆ ಕೇಳಿದರು.

ಅನುಮಾನಕ್ಕೆ ತೆರೆ ಎಳೆದ ರಜನಿ:

‘ನಾನು ಈಗಾಗಲೇ ಅವರಿಗೆ ಫೋನ್ ಮಾಡಿ ಶುಭ ಕೋರಿದ್ದೇನೆ’ ಎಂದು ರಜನಿಕಾಂತ್ ಸರಳವಾಗಿ ಉತ್ತರಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಬದಲು ಖುದ್ದಾಗಿ ಕರೆ ಮಾಡಿ ಮಾತನಾಡಿರುವುದಾಗಿ ಹೇಳಿದ ತಲೈವಾ, ಬಳಿಕ ಕೈಮುಗಿದು ಅಲ್ಲಿಂದ ಹೊರಟರು. ರಜನಿಕಾಂತ್ ಪ್ರತಿಕ್ರಿಯೆ ನೀಡಿದ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಮೊದಲು ಸ್ಪಷ್ಟನೆ ನೀಡಿದ್ದ ತಲೈವಾ:

‘ವಿಜಯ್ ಸಿಎಂ ಆಗಬಾರದು ಎಂದು ನಾನು ಹೇಳಿದ್ದೆ ಅಥವಾ ಎರಡು ಪಕ್ಷಗಳನ್ನು ವಿಲೀನಗೊಳಿಸಲು ಪ್ರಯತ್ನಿಸುತ್ತಿದ್ದೆ ಎಂಬಿತ್ಯಾದಿ ವದಂತಿಗಳು ಹರಡಿದ್ದವು. ಅನಗತ್ಯವಾಗಿ ಮಾತನಾಡುವಷ್ಟು ಕೀಳು ಮಟ್ಟದ ವ್ಯಕ್ತಿ ರಜನಿ ಅಲ್ಲ. ವಿಜಯ್ ಮುಖ್ಯಮಂತ್ರಿಯಾದಾಗ ನನಗೆ ಆಶ್ಚರ್ಯ ಮತ್ತು ಸಂತೋಷವಾಗಿತ್ತು. ನಾನು ರಾಜಕೀಯದಲ್ಲೇ ಇಲ್ಲ, ಹಾಗಿರುವಾಗ ನನಗೆ ಅವರ ಮೇಲೆ ಏಕೆ ಅಸೂಯೆ ಇರಬೇಕು? ಒಂದು ವೇಳೆ ಕಮಲ್ ಹಾಸನ್ ಸಿಎಂ ಆದ್ರೆ ನನಗೆ ಅಸೂಯೆ ಆಗಬಹುದು (ನಗು). ವಿಜಯ್ ಮತ್ತು ನನ್ನ ನಡುವೆ 25 ವರ್ಷಗಳ ಜನರೇಷನ್ ಗ್ಯಾಪ್ ಇದೆ. ನಾವು ಸ್ಪರ್ಧಿಸುವುದು ಚೆನ್ನಾಗಿ ಕಾಣುವುದಿಲ್ಲ’ ಎಂದು ಈ ಮೊದಲು ರಜನಿಕಾಂತ್ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ವಿಜಯ್ ಜನ್ಮದಿನಕ್ಕೆ ತಡವಾಗಿಯಾದರೂ ಪ್ರೀತಿಯಿಂದ ವಿಶ್ ಮಾಡಿದ ತ್ರಿಶಾ ಕೃಷ್ಣನ್

‘ರಾಜಕೀಯದ ಅಸೂಯೆ ಇಲ್ಲ’:

52ನೇ ವಯಸ್ಸಿನಲ್ಲೇ ವಿಜಯ್ ಅವರು ಎಂಜಿಆರ್ ಮತ್ತು ಎನ್‌ಟಿಆರ್ ಅವರಿಗಿಂತ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ರಜನಿಕಾಂತ್ ಶ್ಲಾಘಿಸಿದ್ದು, ವಿಜಯ್ ರಾಜಕೀಯ ಭವಿಷ್ಯಕ್ಕೆ ತಮ್ಮ ಹಾರೈಕೆಗಳು ಯಾವಾಗಲೂ ಇರುತ್ತವೆ ಎಂದು ಸ್ಪಷ್ಟಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಓನ್ಲಿ ಇನ್ ನಮ್ಮ ಬೆಂಗಳೂರು’: ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್ – Kannada News | AI Guru: Bengaluru Auto Driver Uses ChatGPT for Book Writing, Goes Viral

ಬೆಂಗಳೂರು, ಜೂ.24: ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಚಾಲಕರು ಮತ್ತು ಅವರ ವಿಶಿಷ್ಟ ಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸದ್ದು ಮಾಡುತ್ತಿರುತ್ತವೆ. ಆದರೆ, ಈ ಬಾರಿ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಆಟೋ ಚಾಲಕರೊಬ್ಬರ ವಿಡಿಯೋ ನೋಡಿದರೆ ನೀವು ನಿಜಕ್ಕೂ ಅಚ್ಚರಿಪಡುತ್ತೀರಿ! ಹೌದು, ಸಾಮಾನ್ಯ ಆಟೋ ಚಾಲಕರೊಬ್ಬರು ಚಾಟ್‌ಜಿಪಿಟಿ (ChatGPT) ಮತ್ತು ಕೃತಕ ಬುದ್ಧಿಮತ್ತೆ (AI) ಬಗ್ಗೆ ತಜ್ಞರಂತೆ ಮಾತನಾಡಿ ನೆಟ್ಟಿಗರ ಮನಗೆದ್ದಿದ್ದಾರೆ. ಗಗನ್ ಸಾಯಿ ಪ್ರಸಾದ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ರೀಲ್ ಈಗ ಸಖತ್ ವೈರಲ್ ಆಗುತ್ತಿದೆ. ಆಟೋದಲ್ಲಿ ಪ್ರಯಾಣಿಸುವಾಗ ಚಾಲಕನೊಂದಿಗೆ ಆರಂಭವಾದ ಸಾಮಾನ್ಯ ಮಾತುಕತೆ, ನೋಡನೋಡುತ್ತಿದ್ದಂತೆ ಹೈಟೆಕ್ ‘ಚಾಟ್‌ಜಿಪಿಟಿ’ ಚರ್ಚೆಯಾಗಿ ಬದಲಾಯಿತು. ಆಟೋ ಚಾಲಕ ಕೇವಲ ಎಐ ಎಂದರೇನು ಎಂದು ತಿಳಿಯುವುದು ಮಾತ್ರವಲ್ಲದೆ, ಚಾಟ್‌ಜಿಪಿಟಿಯಲ್ಲಿ ಹೇಗೆ ಕಮಾಂಡ್ ಕೊಡಬೇಕು, ಅದರಿಂದ ಏನೆಲ್ಲಾ ಲೈಫ್ ಹ್ಯಾಕ್ಸ್ ಪಡೆದುಕೊಳ್ಳಬಹುದು ಎಂಬುದನ್ನು ಅತ್ಯಂತ ಸುಲಭವಾಗಿ ವಿವರಿಸಿದ್ದಾರೆ. ಈ ಇಡೀ ವಿಡಿಯೋದಲ್ಲಿ ಆಕರ್ಷಕ ಅಂಶವೆಂದರೆ ಹೊಸ ತಂತ್ರಜ್ಞಾನವನ್ನು ಕಲಿಯಬೇಕು ಎನ್ನುವ ಆಟೋ ಚಾಲಕನ ಉತ್ಸಾಹ. ಚಾಟ್‌ಜಿಪಿಟಿಯ ನೆರವು ಪಡೆದುಕೊಂಡು ಶೀಘ್ರದಲ್ಲೇ ತಾವೊಂದು ಜ್ಯೋತಿಷ್ಯ ಪುಸ್ತಕವನ್ನು ಬರೆಯಲು ಯೋಜಿಸುತ್ತಿರುವುದಾಗಿ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರ ಮುಖದಲ್ಲಿದ್ದ ಕಲಿಕೆಯ ಆನಂದ ಮತ್ತು ಕ್ಯೂರಿಯಾಸಿಟಿ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವಂತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ICC ODI Rankings: ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ ಗಿಲ್; ಅಗ್ರ ಐವರಲ್ಲಿ ಮೂವರು ಭಾರತೀಯರು – Kannada News | ICC ODI Rankings: Shubman Gill Overtakes Virat Kohli; Team India Dominates List

ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರರ ಪ್ರಾಬಲ್ಯ ಮುಂದುವರೆದಿದೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರರೆಲ್ಲ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಮುಂಬಡ್ತಿ ಪಡೆದಿದ್ದಾರೆ. ಅದರಲ್ಲೂ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಅಫ್ಘಾನಿಸ್ತಾನದ ವಿರುದ್ಧ ಅಬ್ಬರಿಸಿದ್ದ ಶುಭ್​ಮನ್ ಗಿಲ್, ಏಕದಿನ ರ್ಯಾಂಕಿಂಗ್​ನಲ್ಲಿ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ (PC-PTI).

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಕೊಹ್ಲಿ ತಪ್ಪಿಸಿಕೊಂಡಿದ್ದರು. ಹೀಗಾಗಿ ಕೊಹ್ಲಿ ಏಕದಿನ ರ್ಯಾಂಕಿಂಗ್​ನಲ್ಲಿ ಕುಸಿತ ಅನುಭವಿಸಿದ್ದಾರೆ. ಇದರ ಫಲವಾಗಿ ಶುಭ್​ಮನ್ ಗಿಲ್, ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇಶಾನ್ ಕಿಶನ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಮುಂಬಡ್ತಿ ಪಡೆದಿದ್ದಾರೆ (PC-PTI).

ಶುಭ್​ಮನ್ ಗಿಲ್ 791 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ 816ರೇಟಿಂಗ್ ಪಾಯಿಂಟ್‌ ಹೊಂದಿದ್ದಾರೆ. ಅಫ್ಘನ್ ವಿರುದ್ಧದ ಏಕದಿನ ಸರಣಿಗೂ ಮುನ್ನ 5ನೇ ಸ್ಥಾನದಲ್ಲಿದ್ದ ಗಿಲ್, ಮೊದಲ ಏಕದಿನದಲ್ಲಿ 84 ರನ್ ಮತ್ತು ಎರಡನೇ ಏಕದಿನದಲ್ಲಿ 154 ರನ್​ಗಳ ಇನ್ನಿಂಗ್ಸ್ ಆಡಿದ್ದರು (PC-PTI).

ಮತ್ತೊಂದೆಡೆ, ಏಕದಿನ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿರುವ ವಿರಾಟ್ ಕೊಹ್ಲಿ ಈಗ 768 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದು ಟಾಪ್ 5 ರೊಳಗೆ ಕಾಣಿಸಿಕೊಂಡ ಮೂರನೇ ಭಾರತೀಯ ಆಟಗಾರನೆನಿಸಿಕೊಂಡಿದ್ದಾರೆ. ಆದರೆ ಕೆಎಲ್ ರಾಹುಲ್ ಎರಡು ಸ್ಥಾನ ಕುಸಿದು ಟಾಪ್ 10 ರಿಂದ ಹೊರಬಿದ್ದಿದ್ದಾರೆ (PC-PTI).

78 ಎಸೆತಗಳಲ್ಲಿ 125 ರನ್ ಬಾರಿಸಿದ್ದ ಇಶಾನ್ ಕಿಶನ್ 21 ಸ್ಥಾನಗಳ ಜಿಗಿದು 43 ನೇ ಸ್ಥಾನಕ್ಕೆ ತಲುಪಿದ್ದಾರೆ. ಕಳೆದ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಯಶಸ್ವಿ ಜೈಸ್ವಾಲ್ 84 ಸ್ಥಾನಗಳ ಏರಿಕೆ ಕಂಡು 71 ನೇ ಸ್ಥಾನಕ್ಕೆ ತಲುಪಿದ್ದಾರೆ. ಅಜೇಯ 110 ರನ್ ಗಳಿಸಿದ್ದರೂ, ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದೆ (PC-PTI).

Published On – 3:55 pm, Wed, 24 June 26

Source link

Exit mobile version