Tv9 Kannada News Live: ಕಪ್ಪೆಚಿಪ್ಪು ಹೆಕ್ಕಲು ಹೋಗಿ 10 ಮಂದಿ ಸಾವು, ಮತ್ತೋರ್ವನಿಗಾಗಿ ಶೋಧ, ನಾಗಮಲೆ ಹಾಡಿಯಲ್ಲಿ ಮತ್ತೆ ಚಿರತೆ ದಾಳಿ; ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | Tv9 Kannada News Live: Missing Person Search Ongoing in Bhatkal Shellfish Tragedy; 602 Bags of Illegal Urea Seized in Mysuru

ಕಪ್ಪೆಚಿಪ್ಪು ಹೆಕ್ಕಲು ಹೋಗಿ 10 ಮಂದಿ ಸಾವುImage Credit source: Tv9 Kannada

ಬೆಂಗಳೂರು, ಮೇ 25: ಕಪ್ಪೆಚಿಪ್ಪು ಹೆಕ್ಕಲು ಹೋಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ 10 ಜನ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ನಡೆದಿತ್ತು. ಇವರ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದು, ಮಿಸ್​​ ಆಗಿರುವ ಮಾದೇವ ನಾಯ್ಕ್ ಅವರಿಗಾಗಿ ಇಂದು ಶೋಧಕಾರ್ಯ ನಡೆಯಲಿದೆ. 11 ಜನರ ಪೈಕಿ ನಿನ್ನೆ 10 ಮೃತದೇಹಗಳು ಸಿಕ್ಕಿದ್ದವು. ಆದರೆ ಒಬ್ಬರ ಬಗ್ಗೆ ಮಾತ್ರ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸ್ಥಳೀಯ ಮೀನುಗಾರ ಸಹಾಯದಿಂದ NDRF, ಕರಾವಳಿ ಕಾವಲು ಪಡೆ, ಆಗ್ನಿ ಶಾಮಕ ಹಾಗೂ ಸ್ಥಳೀಯರ ಪೊಲೀಸರಿಂದ ಕಾರ್ಯಾಚರಣೆ ನಡೆಯಲಿದೆ.

ಇದನ್ನೂ ಓದಿ: ಕಪ್ಪೆ ಚಿಪ್ಪುಗಾಗಿ ಹೋದವರು ಜಲಸಮಾಧಿ, ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಬೂದಿ ಮುಚ್ಚಿದ ಕೆಂಡದಂತಿರುವ ಭಟ್ಕಳ

ಮೂರಿನ ಕಟ್ಟೆ ಧ್ವಂಸ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಕಟ್ಟೆ ಧ್ವಂಸ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಹಿಂದೂ ಸಂಘಟನೆ‌‌ಗಳು, ನಿನ್ನೆ ರಾತ್ರಿ ಮೂರಿನ ಕಟ್ಟೆ ಬಳಿ ಪ್ರತಿಭಟನೆ ಮಾಡಿದ್ದರು. ಪೊಲೀಸರು ವಶಕ್ಕೆ ಪಡೆದು ಬಿಟ್ಟುಕಳುಹಿಸಿದ ಬಳಿಕ ಮತ್ತೆ ಹೋರಾಟಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಅವರ ಮನವೊಲಿಸಿ ಕಳುಹಿಸಿದ್ದರು. ಆದರೆ ಇಂದು ಮತ್ತೆ ಅವರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಹೆಚ್ಚುವರಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸರನ್ನು ಕರೆಸಲಾಗಿದೆ.

ಮುಖ್ಯಾಂಶಗಳು

ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ವಶಕ್ಕೆ

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಯೂರಿಯ ಸಂಗ್ರಹಿಸಿದ್ದ ತೋಟದ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಅಧಿಕಾರಿಗಳು, ಬರೋಬ್ಬರಿ 602 ಬ್ಯಾಗ್ ಯೂರಿಯಾ ವಶಕ್ಕೆ ಪಡೆದಿದ್ದಾರೆ. ಕೊಡಗಹಳ್ಳಿಯ ಇದಾಯತ್ ಉಲ್ಲಾ ಎಂಬುವರ ತೋಟದ ಮೇಲೆ ದಾಳಿ ನಡೆಸಲಾಗಿದ್ದು, ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಇದನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕೃಷಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂದುವರಿದ ಚಿರತೆ ದಾಳಿ

ಚಾಮರಾಜನಗರದ ನಾಗಮಲೆ ಹಾಡಿಯಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ತಡರಾತ್ರಿ 1.30ರ ವೇಳೆ ಕೊಟ್ಟಿಗೆಗೆ ನುಗ್ಗಿರುವ ಚಿರತೆ ಮೇಕೆಯನ್ನು ಕೊಂದು ತಿಂದಿದೆ. ನಿನ್ನೆಯಷ್ಟೇ ಇಂಡಿಗನತ್ತದಲ್ಲಿಟ್ಟಿದ್ದ ಪಂಚರದಲ್ಲಿ ಹೆಣ್ಣು ಚಿರತೆ ಸೆರೆಯಾಗಿತ್ತು. ಚಿರತೆ ಸೆರೆಯಾದ ಬೆನ್ನಲ್ಲೆ ನಿಟ್ಟುಸಿರು ಹಾಡಿಯ ಜನತೆ, ಅರಣ್ಯ ಸಿಬ್ಬಂದಿ ಬಿಟ್ಟಿದ್ದರು. ಘಟನೆ ನಡೆದು 2 ಗಂಟೆಗಳ ಒಳಗಾಗಿ ಸೊಪ್ಪು ತರಲು ಹೋದ ರೈತನ ಮೇಲೆ ಮತ್ತೊಂದು ಚಿರತೆ ದಾಳಿಯತ್ನ ನಡೆಸಿತ್ತು.ಈ ಘಟನೆ ಮಾಸುವ ಮುನ್ನವೇ ಮತ್ತೆ ನಾಗಮಲೆ ಹಾಡಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐ ಲವ್ ಇಂಡಿಯಾ, ನಾನು ಪಿಎಂ ಮೋದಿಯ ದೊಡ್ಡ ಅಭಿಮಾನಿ ಎಂದ ಡೊನಾಲ್ಡ್​ ಟ್ರಂಪ್ – Kannada News | Donald Trump: I Love India, Big Fan of PM Modi US India Ties Strengthen

ಡೊನಾಲ್ಡ್​ ಟ್ರಂಪ್-ಮೋದಿImage Credit source: Sputnik India

ವಾಷಿಂಗ್ಟನ್, ಮೇ 25: ಪ್ರಧಾನಿ ಮೋದಿಯನ್ನು ತಮ್ಮ ಆಪ್ತ ಸ್ನೇಹಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಕರೆದಿದ್ದಾರೆ. ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು ತಾನು ಭಾರತವನ್ನು ಪ್ರೀತಿಸುವುದಾಗಿ ಹೇಳಿದ್ದಷ್ಟೇ ಅಲ್ಲದೆ ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿ ಎಂದು ಕರೆದುಕೊಂಡಿದ್ದಾರೆ. ಭಾರತವು ಅಮೆರಿಕದ ಮೇಲೆ ಶೇಕಡಾ 100 ರಷ್ಟು ಭರವಸೆ ಇಡಬಹುದು ಎಂದು ದ್ವಿಪಕ್ಷೀಯ ಬಾಂಧವ್ಯವನ್ನು ಪುನರುಚ್ಚರಿಸಿದ್ದಾರೆ.

ಸಂವಾದದಲ್ಲಿ ಮಾತನಾಡಿದ ಟ್ರಂಪ್, “ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಶ್ರೇಷ್ಠರು, ಅವರು ನನ್ನ ಅತ್ಯಂತ ಆಪ್ತ ಸ್ನೇಹಿತ. ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ” ಎಂದು ಹೆಮ್ಮೆಯಿಂದ ಹೇಳಿದರು. ನಮ್ಮ ನಡುವೆ ಅದ್ಭುತ ಆರ್ಥಿಕತೆ, ದಾಖಲೆಯ ಷೇರು ಮಾರುಕಟ್ಟೆ ಹಾಗೂ ಭಾರತಕ್ಕೆ ಬೇಕಾದ ಎಲ್ಲವೂ ಇದೆ. ಭಾರತ ಏನನ್ನಾದರೂ ಪಡೆಯಲು ಬಯಸಿದರೆ ನೇರವಾಗಿ ಇಲ್ಲಿಗೇ ಕರೆ ಮಾಡಬಹುದು ಎಂದು ಭಾರತದ ಮೇಲಿನ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು. ಇದೇ ವೇಳೆ ಅವರು ಭಾರತ ಪ್ರವಾಸದಲ್ಲಿರುವ ತಮ್ಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ವಿದೇಶಾಂಗ ಕಾರ್ಯದರ್ಶಿ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು, ಭಾರತ-ಯುಎಸ್ ಬಾಂಧವ್ಯವು ಹೊಸ ಯುಗದ ಅಡಿಪಾಯವಾಗಿದೆ ಎಂದರು.ಅಮೆರಿಕ ಮೊದಲು ಎಂದರೆ ಅಮೆರಿಕ ಮಾತ್ರ ಎಂದಲ್ಲ ಎಂದು ಸ್ಪಷ್ಟಪಡಿಸಿದ ಅವರು, ಟ್ರಂಪ್ ತಮ್ಮೊಂದಿಗೆ ಮಾತನಾಡುವ ಪ್ರತಿ ಬಾರಿಯೂ ಮೊದಲು ‘ನನ್ನ ಸ್ನೇಹಿತ ಪ್ರಧಾನಿ ಮೋದಿ ಹೇಗಿದ್ದಾರೆ? ಎಂದು ಕೇಳುತ್ತಾರೆ ಎಂದು ನೆನಪಿಸಿಕೊಂಡರು. ಐದು ತಿಂಗಳ ಹಿಂದಷ್ಟೇ ತಾವು ಭಾರತಕ್ಕೆ ಬಂದ ನಂತರ ಪ್ರಮುಖ ‘ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಸಿದ್ಧಪಡಿಸಲಾಗಿದ್ದು, ಮುಂದಿನ ಕೆಲವು ವಾರಗಳಲ್ಲಿ ಅದಕ್ಕೆ ಸಹಿ ಬೀಳಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಮತ್ತಷ್ಟು ಓದಿ: ಅಮೆರಿಕ ನಂಬಿಕೆಗೆ ಯೋಗ್ಯವಲ್ಲ, ಮತ್ತೆ ಯುದ್ಧ ಆರಂಭವಾಗಬಹುದು; ಇರಾನ್ ಸ್ಫೋಟಕ ಹೇಳಿಕೆ

ಜಾಗತಿಕವಾಗಿ ಅಮೆರಿಕಕ್ಕೆ ಹೂಡಿಕೆ ತರುವಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಭಾರಿ ಸಾಧನೆ ಮಾಡಿದೆ. ಭಾರತದಿಂದ ಅಮೆರಿಕಕ್ಕೆ ಬರೋಬ್ಬರಿ 20.5 ಶತಕೋಟಿ (ಬಿಲಿಯನ್) ಡಾಲರ್ ಹೊಸ ಹೂಡಿಕೆಗಳನ್ನು ತರುವ ಮೂಲಕ ಜಾಗತಿಕ ಮಟ್ಟದಲ್ಲೇ ಭಾರತದ ರಾಯಭಾರ ಕಚೇರಿ ಮೊದಲ ಸ್ಥಾನದಲ್ಲಿದೆ ಎಂದು ಗೋರ್ ಹೆಮ್ಮೆಯಿಂದ ಪ್ರಕಟಿಸಿದರು.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಮೇ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಉನ್ನತ ಮಟ್ಟದ ‘ಕ್ವಾಡ್ (QUAD) ವಿದೇಶಾಂಗ ಸಚಿವರ ಸಭೆ’ಯಲ್ಲಿ ಭಾಗವಹಿಸಲಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ಇಂಡೋ-ಪೆಸಿಫಿಕ್ ಭದ್ರತೆ ಮತ್ತು ಪಶ್ಚಿಮ ಏಷ್ಯಾದ ಪ್ರಸಕ್ತ ಬೆಳವಣಿಗೆಗಳ ಕುರಿತು ಪ್ರಮುಖ ಚರ್ಚೆ ನಡೆಸಲಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:49 am, Mon, 25 May 26

Source link

ಧ್ವನಿ ಕೇಳ್ತಿದೆ ಯಾರೂ ಕಾಣ್ತಿಲ್ಲ, ಸೇಲ್ಸ್​ಗರ್ಲ್​ ಹಾಗೂ ಯುವತಿಯ ಕಣ್ಣಾಮುಚ್ಚಾಲೆ

ವಿಯೆಟ್ನಾಂ, ಮೇ 25: ಯುವತಿಯೊಬ್ಬಳು ಬಟ್ಟೆ ಖರೀದಿಗೆಂದು ಅಂಗಡಿಗೆ ಹೋಗುತ್ತಾಳೆ, ಬಟ್ಟೆ ಬಗ್ಗೆ ಸೇಲ್ಸ್​ಗರ್ಲ್​ ಬಳಿ ವಿಚಾರಿಸುತ್ತಾಳೆ. ಆದರೆ ಸೇಲ್ಸ್​​ಗರ್ಲ್​ಗೆ ಆ ಯುವತಿ ಕಾಣ್ತಿಲ್ಲ ಆ ಯುವತಿಗೆ ಸೇಲ್ಸ್​ಗರ್ಲ್​ ಕಾಣ್ತಿಲ್ಲ, ಬಳಿಕ ಇಬ್ಬರೂ ಐದು ಹತ್ತು ನಿಮಿಷಗಳು ಬಟ್ಟೆಗಳ ನಡುವೆ ಒಬ್ಬರೊನ್ನೊಬ್ಬರು ಹುಡುಕಾಡುತ್ತಾರೆ. ಅಂತಿಮವಾಗಿ ಇಬ್ಬರೂ ಸಿಕ್ಕು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ. ಈ ಹಾಸ್ಯಮಯ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

IPL 2026: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಇಲ್ಲಿದೆ

Source link

ಕಮ್ಮಿ ಬಜೆಟ್, ಕಂಟೆಂಟ್ ಜಾಸ್ತಿ: ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ‘ದೃಶ್ಯಂ 3’ – Kannada News | Drishyam 3 Box Office Collection Day 4: Mohanlal’s Content Driven Film Breaks Records

ಸಾಮಾನ್ಯವಾಗಿ ಮಲಯಾಳಂ ಚಿತ್ರರಂಗ ಎಂದರೆ ತಕ್ಷಣ ನೆನಪಿಗೆ ಬರುವುದು ಕಂಟೆಂಟ್ ಆಧಾರಿತ ಸಿನಿಮಾಗಳು. ಅಲ್ಲಿ ನೂರು-ಇನ್ನೂರು ಕೋಟಿ ರೂಪಾಯಿಗಳ ಬಿಗ್ ಬಜೆಟ್ ಚಿತ್ರಗಳು ಸಿದ್ಧವಾಗುವುದು ತೀರಾ ವಿರಳ. ಬಹುತೇಕ ಸಿನಿಮಾಗಳು ಅತಿ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿ, ಸಾಕಷ್ಟು ಸದ್ದು ಮಾಡುತ್ತವೆ. ಮಾಲಿವುಡ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವುದಿಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ ಈಗ ಬದಲಾಗುತ್ತಿದೆ. ಇದಕ್ಕೆ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ (Drishyam 3) ಹೊಸ ಸೇರ್ಪಡೆ.

ನಿರ್ದೇಶಕ ಜೀತು ಜೋಸೆಫ್ ಮತ್ತು ಮೋಹನ್‌ಲಾಲ್ ಕಾಂಬಿನೇಷನ್‌ನ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕೇವಲ ಕಂಟೆಂಟ್ ಬಲದಿಂದಲೇ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾಗಳೇ ಬಾಕ್ಸ್ ಆಫೀಸ್ ಅಲ್ಲಿ ಸೊರಗುತ್ತಿರುವಾಗ ಜಾರ್ಜ್‌ ಕುಟ್ಟಿ ಬಾಕ್ಸ್ ಆಫೀಸ್​​ನಲ್ಲಿ ಸಂಚಲನ ಸೃಷ್ಟಿಸಿದ್ದಾನೆ.

ಕೇವಲ 4 ದಿನಕ್ಕೆ 141 ಕೋಟಿ ರೂ. ಗಳಿಕೆ

ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ದಾಖಲೆಯ ಗಳಿಕೆ ಮಾಡಿದೆ. 4ನೇ ದಿನವಾದ ಭಾನುವಾರ ಒಂದೇ ದಿನ ಭಾರತದಲ್ಲಿ 5,270 ಶೋಗಳಿಂದ ಬರೋಬ್ಬರಿ 13.95 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 63.34 ಕೋಟಿ ರೂಪಾಯಿ ದಾಟಿದ್ದು, ನೆಟ್ ಕಲೆಕ್ಷನ್ 54.55 ಕೋಟಿ ರೂಪಾಯಿಗೆ ಬಂದು ತಲುಪಿದೆ.

ಕೇರಳ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ‘ದೃಶ್ಯಂ 3’ ಸುನಾಮಿ ಎಬ್ಬಿಸಿದೆ. 4ನೇ ದಿನ ವಿದೇಶದಲ್ಲಿ13.00 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಚಿತ್ರ, ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಅನ್ನು 78.00 ಕೋಟಿ ರೂಪಾಯಿಗೆ ತಲುಪಿದೆ. ಭಾರತ ಮತ್ತು ವಿದೇಶದ ಗಳಿಕೆಯನ್ನು ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಕೇವಲ 4 ದಿನಗಳಲ್ಲಿ ವಿಶ್ವದಾದ್ಯಂತ 141.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ಮೂರೇ ದಿನಕ್ಕೆ 100 ಕೋಟಿ ಬಾಚಿದ ‘ದೃಶ್ಯಂ 3’: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ಸ್ಟಾರ್ ವ್ಯಾಲ್ಯೂ ಜೊತೆಗೆ ಗಟ್ಟಿ ಕಥೆಯಿದ್ದರೆ ಸಾಕು, ದೊಡ್ಡ ಬಜೆಟ್ ಇಲ್ಲದಿದ್ದರೂ ಕೋಟಿ ಕೋಟಿ ಲೂಟಿ ಮಾಡಬಹುದು ಎಂಬುದನ್ನು ಮಲಯಾಳಂನ ಈ ಸಣ್ಣ ಬಜೆಟ್ ಸಿನಿಮಾ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣಾರ್ಭಟ! 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Karnataka Weather Forecast: Heavy Rain Forecast In 7 Districts, Yellow Alert Issued

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣಾರ್ಭಟ!

ಬೆಂಗಳೂರು, ಮೇ 25: ರಾಜ್ಯದ ಹಲವೆಡೆ ಇಂದು ಭಾರೀ ಮಳೆಯ (Weather) ಮುನ್ಸೂಚನೆಯಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ.
  • ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಸಾಧ್ಯತೆ.
  • ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​?

ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಪ್ರಾದೇಶಿಕವಾರು ಮಳೆ ಮುನ್ಸೂಚನೆ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಎಲ್ಲಾ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಸಮಯದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಬಹುದು. ಭಾರಿ ಮಳೆಯ ಮುನ್ಸೂಚನೆ ಇರುವ ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಲಘುವಾಗಿ ಸಾಧಾರಣ ಮಳೆಯಾಗಲಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ವಿಜಯನಗರ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಭಾಗಗಳಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇರಲಿದೆ.

ಮಳೆ ಮತ್ತು ಗುಡುಗು ಸಿಡಿಲಿನ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

11 ದಿನಗಳಲ್ಲಿ 4ನೇ ಬಾರಿ ಇಂಧನ ದರ ಏರಿಕೆ: ಪೆಟ್ರೋಲ್​​, ಡೀಸೆಲ್ ಬೆಲೆ ಮತ್ತೆ ಹೆಚ್ಚಳ – Kannada News | Fuel Price Shock: Petrol Hiked by Rupees 2.61, Diesel by Rupees 2.71 per Litre After 4th Hike in 11 Days

ನವದೆಹಲಿ, ಮೇ 25: ವಾಹನ ಸವಾರರಿಗೆ ಮತ್ತೆ ಪೆಟ್ರೋಲ್​, ಡೀಸೆಲ್ ದರ ಏರಿಕೆ ಶಾಕ್​ ಸಿಕ್ಕಿದ್ದು, ಕೇಂದ್ರ ಸರ್ಕಾರ 11 ದಿನಗಳಲ್ಲಿ 4ನೇ ಬಾರಿ ದರ ಏರಿಕೆ ಮಾಡಿದೆ. ಪೆಟ್ರೋಲ್​ ದರ ಲೀಟರ್​ಗೆ 2.61 ರೂ. ಮತ್ತು ಡೀಸೆಲ್​​​ 2.71 ರೂ. ಹೆಚ್ಚಳವಾಗಿದೆ. ಪರಿಷ್ಕೃತ ಪೆಟ್ರೋಲ್​, ಡೀಸೆಲ್ ದರ ತಕ್ಷಣದಿಂದಲೇ ಜಾರಿಯಾಗಿದ್ದು, ಆ ಮೂಲಕ ದೆಹಲಿಯಲ್ಲಿಯೇ ಲೀಟರ್​ ಪೆಟ್ರೋಲ್​ ದರ 100 ರೂ. ಗಡಿ ದಾಟಿದೆ. ರಾಜಧಾನಿಯಲ್ಲಿಂದು ಲೀಟರ್ ಪೆಟ್ರೋಲ್ ದರ 102.12 ರೂ. ಮತ್ತು ಲೀಟರ್ ಡೀಸೆಲ್ ದರ 95.20 ರೂ. ಆಗಿದೆ.

ಮುಖ್ಯಾಂಶಗಳು

  • ಮತ್ತೆ ಪೆಟ್ರೋಲ್​, ಡೀಸೆಲ್ ದರ ಏರಿಕೆ ಶಾಕ್
  • 11 ದಿನಗಳಲ್ಲಿ 4ನೇ ಬಾರಿ ಇಂಧನ ದರ ಏರಿಕೆ
  • ಸತತ ಬೆಲೆ ಏರಿಕೆಗೆ ವಾಹನ ಸವಾರರು ಕಂಗಾಲು

ಮೇ 15ರಿಂದ ದರ ಪರಿಷ್ಕರಣೆ ಪುನರಾರಂಭವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟು ಸುಮಾರು 7.5 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಈ ದರ ಏರಿಕೆ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಸರ್ಕಾರಿ ಸ್ವಾಮ್ಯದ ಆಯಿಲ್​​ ಆ್ಯಂಡ್​​ ನ್ಯಾಚುರಲ್​​ ಗ್ಯಾಸ್​​ ಕಾರ್ಪೊರೇಷನ್​​ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೆಷನ್​​ ಲಿಮಿಟೆಡ್​​ ಅಧಿಕಾರಿಗಳು, ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ತೈಲ ಕಂಪನಿಗಳ ನಷ್ಟವೇ ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂಧನ ಬೆಲೆ ಮತ್ತಷ್ಟು ಹೆಚ್ಚಳ; ತಜ್ಞರಿಂದ 8ರಿಂದ 10 ರೂಪಾಯಿ ಏರಿಕೆ ಬಗ್ಗೆ ಭವಿಷ್ಯ

ಹಾರ್ಮುಜ್ ಜಲಸಂಧಿಯಲ್ಲಿ ಹಲವು ತಿಂಗಳುಗಳಿಂದ ಉಂಟಾಗಿರುವ ತಡೆ ಮತ್ತು ವ್ಯತ್ಯಯಗಳಿಂದ ಜಾಗತಿಕ ಇಂಧನ ಸಾಗಣೆ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಿದ್ದು, ಮಧ್ಯಪ್ರಾಚ್ಯದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡುವ ದೇಶಗಳ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಸಂಘರ್ಷದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 65-70 ಡಾಲರ್‌ನಿಂದ 110-115 ಡಾಲರ್‌ಗೆ ಏರಿಕೆಯಾಗಿದೆ. ಭಾರತ ತನ್ನ ಅಗತ್ಯದ ಸುಮಾರು ಶೇಕಡಾ 85 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಹೆಚ್ಚಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:10 am, Mon, 25 May 26

Source link

ಸಣ್ಣದೊಂದು ವಿವಾದ, ಕೋಪದ ಭರದಲ್ಲಿ ಟಿವಿಯನ್ನೇ ಎತ್ತಿ ಪತ್ನಿ ತಲೆಗೆ ಹೊಡೆದ ಪತಿ, ಆಕೆ ಸ್ಥಳದಲ್ಲೇ ಸಾವು – Kannada News | Thane: Husband Kills Wife with TV During Argument in Kalyan; Arrested for Murder

ಥಾಣೆ, ಮೇ 25: ಗಂಡ-ಹೆಂಡತಿ ನಡುವಿನ ಸಣ್ಣದೊಂದು ವಿವಾದ ಕೊಲೆ(Murder)ಯಲ್ಲಿ ಅಂತ್ಯಗೊಂಡಿದೆ. ಕೋಪದ ಭರದಲ್ಲಿ ಟಿವಿಯನ್ನೇ ಎತ್ತಿ ಪತ್ನಿ ತಲೆಗೆ ಹೊಡೆದ ಪರಿಣಾಮ ಆಕೆ ಕೂಡಲೇ ಸಾವನ್ನಪ್ಪಿದ್ದಾಳೆ. ಕೊಲೆ ಆರೋಪದ ಮೇಲೆ ಪತಿಯನ್ನು ಬಂಧಿಸಲಾಗಿದೆ. ಆತನಿಗೆ 21 ವರ್ಷ ವಯಸ್ಸು, ಆಕೆಗಿನ್ನು 20 ವರ್ಷ ವಯಸ್ಸಾಗಿತ್ತು.

ಥಾಣೆ ಜಿಲ್ಲೆಯ ಕಲ್ಯಾಣ್ ತಾಲೂಕಿನ ಬಲ್ಯಾನಿ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಕಲ್ಯಾಣ್ ತಾಲೂಕು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮುಖೇಶ್ ಧಾಗೆ ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಸತೀಶ್ ಕಲುರಾಮ್ ವಾಘೆ ಅಲಿಯಾಸ್ ಗುಡ್ಡು (21) ಎಂದು ಗುರುತಿಸಲಾಗಿದೆ. ಈತ ತನ್ನ 20 ವರ್ಷದ ಪತ್ನಿ ಸಾರಿಕಾಳ ನಡತೆಯ ಮೇಲೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದಂಪತಿ ಆಗಾಗ ಜಗಳವಾಡುತ್ತಿದ್ದರು.

ಶನಿವಾರ ತಡರಾತ್ರಿಯೂ ಇಬ್ಬರ ನಡುವೆ ಭಾರಿ ಜಗಳ ನಡೆದಿದೆ. ಈ ವೇಳೆ ತೀವ್ರ ಕೋಪಗೊಂಡ ಆರೋಪಿ ಸತೀಶ್, ಮನೆಯಲ್ಲಿದ್ದ ಟೆಲಿವಿಷನ್ ಸೆಟ್ ಅನ್ನು ಪತ್ನಿ ಸಾರಿಕಾಳ ತಲೆಯ ಮೇಲೆ ಬಲವಾಗಿ ಒಡೆದಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ನೀರಿನ ಪಾತ್ರೆಯಿಂದಲೂ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಾರಿಕಾ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಮತ್ತಷ್ಟು ಓದಿ: ಜೈಲಿನೊಳಗೊಂದು ಲವ್ ಸ್ಟೋರಿ! ಕೊಲೆ ಅಪರಾಧಿಯನ್ನು ಮದುವೆಯಾದ ಜೈಲು ಅಧಿಕಾರಿ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಲ್ಯಾಣ್ ತಾಲೂಕು ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿ ಪತಿ ಸತೀಶ್ ವಾಘೆನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಮಿತಾಭ್ ಬಚ್ಚನ್ ಎದುರೇ ಕುಸಿದು ಬಿದ್ದ ಅಭಿಮಾನಿ; ಆಗಿದ್ದೇನು? – Kannada News | Amitabh Bachchan Fan Faints at Jalsa; Heatwave Incident Sparks Concern

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು (Amitabh Bachchan) ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಮುಂಬೈನಲ್ಲಿರುವ ತಮ್ಮ ಜುಹು ನಿವಾಸದ ಹೊರ ಭಾಗದಲ್ಲಿ ನೆರೆಯೋ ಅಭಿಮಾನಿಗಳತ್ತ ಕೈ ಬೀಸುತ್ತಾರೆ. ಕೆಲವೊಮ್ಮೆ ಗಿಫ್ಟ್ ಕೂಡ ನೀಡುತ್ತಾರೆ. ಆದರೆ, ಕಳೆದ ಭಾನುವಾರ (ಮೇ 24) ಒಂದು ದುಃಖಕರ ಘಟನೆ ನಡೆದಿದೆ. ತೀವ್ರ ಬಿಸಿಲು ಮತ್ತು ಜನದಟ್ಟಣೆಯಿಂದಾಗಿ ಅಮಿತಾಭ್ ನಿವಾಸದ ಮುಂದೆ ಜಮಾಯಿಸಿದ್ದ ಅಭಿಮಾನಿಯೋರ್ವ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆತಂಕ ಮೂಡಿಸಿದೆ.

ಅಮಿತಾಭ್ ಬಚ್ಚನ್ ಅವರು ಮುಂಬೈನಲ್ಲಿದ್ದರೆ ಪ್ರತಿ ಭಾನುವಾರ ತಮ್ಮ ‘ಜಲ್ಸಾ’ ನಿವಾಸದ ಹೊರಗೆ ಬಂದು ಅಭಿಮಾನಿಗಳಿಗೆ ದರ್ಶನ ನೀಡುವುದನ್ನು ವಾಡಿಕೆಯಾಗಿಸಿಕೊಂಡಿದ್ದಾರೆ. ಭಾನುವಾರವೂ ಬಿಗ್ ಬಿ ಬಿಳಿ ಬಣ್ಣದ ಉಡುಪಿನಲ್ಲಿ ಬಂದು ಕೈಬೀಸುತ್ತಿದ್ದಂತೆ, ಅವರನ್ನು ನೋಡಲು ಮುಗಿಬಿದ್ದಿದ್ದ ಜನಸಾಗರದಲ್ಲಿ ಒಬ್ಬ ಅಭಿಮಾನಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ತಕ್ಷಣವೇ ಅಲ್ಲಿದ್ದ ಇತರ ಅಭಿಮಾನಿಗಳು ಅವರನ್ನು ಹಿಡಿದುಕೊಂಡು, ನೀರು ನೀಡಿ ಉಪಚರಿಸಿದ್ದಾರೆ. ನಂತರ ಆಸ್ಪತ್ರೆಗೆ ಕರೆದಯೊಯ್ಯಲಾಗಿದೆ ಎನ್ನಲಾಗಿದೆ. ಸದ್ಯ ಆ ಅಭಿಮಾನಿಯ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ‘ಕಾಗೆಗಳು ಕೂಗುತ್ತಿವೆ’; ಅನಾರೋಗ್ಯ ವದಂತಿ ಹಬ್ಬಿಸಿದವರಿಗೆ ಅಮಿತಾಭ್ ಖಡಕ್ ತಿರುಗೇಟು

ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಅವರು ಮುಂಬೈನ ವಿಐಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಈ ಸುದ್ದಿಯನ್ನು ಅವರ ಆಪ್ತ ಮೂಲಗಳು ಸಂಪೂರ್ಣವಾಗಿ ನಿರಾಕರಿಸಿವೆ. ಅಮಿತಾಭ್ ಅವರು ಪ್ರತಿ ತಿಂಗಳು ನಡೆಸುವ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ನಾನಾವತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಪಾಸಣೆ ಮುಗಿಸಿ ಅಂದೇ ಮನೆಗೆ ಮರಳಿದ್ದಾರೆ ಎಂಬ ಸ್ಪಷ್ಟನೆ ಸಿಕ್ಕಿತ್ತು. ಇದನ್ನು ಕೇಳಿದ ಬಳಿಕ ಅಭಿಮಾನಿಗಳು ನಿರಾಳರಾಗಿದ್ದರು.

‘ಕಲ್ಕಿ’ ಸೀಕ್ವೆಲ್‌ನಲ್ಲಿ ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ ಅವರಿಗೆ ಈಗ ವಯಸ್ಸಾಗುತ್ತಿರುವುದರಿಂದ, ಅವರು ಮೊದಲಿನಂತೆ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಕೆಲಸಗಳನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರದ ಸೀಕ್ವೆಲ್‌ನಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರಗಳ್ಳತನ ಮಾಡಿ ಮದುವೆಯಾಗಿ ಹತ್ತೇ ದಿನಕ್ಕೆ ಜೈಲುಪಾಲಾದ ಶಿವಮೊಗ್ಗದ ನವ ವಿವಾಹಿತ! – Kannada News | Newlywed Groom Arrested for Chain Snatching 10 Days After Wedding in Shivamogga

ಶಿವಮೊಗ್ಗ, ಮೇ 25: ಸರಗಳ್ಳತನ ಪ್ರಕರಣದಲ್ಲಿ ನವ ವಿವಾಹಿತನೋರ್ವ ಅರೆಸ್ಟ್​​ ಆಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮಂಜುನಾಥ್​​ ಬಂಧಿತ ಆರೋಪಿಯಾಗಿದ್ದು, ಕಾರಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಈತ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಓರ್ವ ಹೈಟೆಕ್​​ ಕಳ್ಳ ಎಂಬುದು ಗೊತ್ತಾಗಿದೆ. ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದಲ್ಲಿ ಮೇ 23ರಂದು ನಡೆದಿದ್ದ ಸರಗಳ್ಳತನ ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖ್ಯಾಂಶಗಳು

  • ಸರಗಳ್ಳತನ ಪ್ರಕರಣದಲ್ಲಿ ನವ ವಿವಾಹಿತ ಅರೆಸ್ಟ್​​
  • ಶಿವಮೊಗ್ಗದ ಅಬ್ಬಲಗೇರಿಯಲ್ಲಿ ನಡೆದಿದ್ದ ಕಳ್ಳತನ
  • ಕಾರಲ್ಲಿ ಬಂದು ಯುವತಿ ಸರ ಕದ್ದಿದ್ದ ಆರೋಪಿ

ಅಬ್ಬಲಗೇರಿ ಗ್ರಾಮದಲ್ಲಿ ಕಾರು ನಿಲ್ಲಿಸಿ ಪ್ರೇಮಿಗಳು ಮಾತನಾಡುತ್ತಿದ್ದ ವೇಳೆ ಕಾರಲ್ಲಿ ಬಂದಿದ್ದ ಆರೋಪಿ ಮಂಜುನಾಥ್, ಯುವತಿಯ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ವೇಳೆ ಕಾರಿನ ನಂಬರ್​​ನ ಜೋಡಿ ಗಮನಿಸಿತ್ತು. ಆ ಆಧಾರದಲ್ಲಿ ಪ್ರೇಮಿಗಳು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರ ಕಳ್ಳತನದ ಕುರಿತು ದೂರು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು, ಹೈಟಕ್​​ ಕಳ್ಳ ಮಂಜುನಾಥ್​​ ಮತ್ತು ಆತ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾದ ಚಿನ್ನದ ಸರವನ್ನೂ ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ, ತಿಂಗಳಾದರೂ ಸಿಗದ ಸುಳಿವು

ಇನ್ನು ಆರೋಪಿ ಮಂಜುನಾಥ್​​ ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ನಿವಾಸಿಯಾಗಿದ್ದು, ಕಳೆದ 10 ದಿನಗಳ ಹಿಂದೆಯಷ್ಟೇ ಈತನಿಗೆ ಮದುವೆಯಾಗಿತ್ತು. ಕಳ್ಳತನ ಮಾಡಿ ಶೋಕಿ ಜೀವನ ನಡೆಸುವ ಖಯಾಲಿ ಹೊಂದಿದ್ದ ಈತ ಮದುವೆ ಬಳಿಕವೂ ಅದೇ ಕೆಲಸ ಮುಂದುವರಿಸಿದ್ದ.ಈ ಹಿಂದೆಯೂ ಕೂಡ ಈತ ಇದೇ ರೀತಿ ಪ್ರೇಮಿಗಳನ್ನೇ ಟಾರ್ಗೇಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದ್ದನಂತೆ. ಆದರೆ ಆ ವೇಳೆ ಈತನ ವಿರುದ್ಧ ಯಾವುದೇ ಕೇಸ್ ದಾಖಲಾಗಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಪ್ರೇಮಿಗಳು ನೀಡಿದ್ದ ಕಾರಿನ ನಂಬರ್​​ ಮಾಹಿತಿ ಅಧಾರದಲ್ಲಿ ತನಿಖೆಗಿಳಿದ ಪೊಲೀಸರು ಈತನನ್ನು ಪತ್ತೆ ಮಾಡಿದ್ದು, ಮದುವೆಗೆಂದು ಮಾಡಿದ್ದ ಅಲಂಕಾರ ಕಾರಿಗೆ ಇನ್ನೂ ಹಾಗೇ ಇರುವುದು ಕಂಡು ಪೊಲೀಸರೇ ಶಾಕ್​​ ಆಗಿದ್ದಾರೆ. ಮಾಡಬಾರದ್ದನ್ನು ಮಾಡಲು ಹೋದವನೀಗ ಪತ್ನಿ ಜೊತೆ ಸುಖ ಸಂಸಾರ ನಡೆಸುವ ಬದಲು ಜೈಲು ಪಾಲಾಗಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version