ಟ್ರಂಪ್‌ಗೆ ಬಿಗ್ ಶಾಕ್: ಇರಾನ್ ವಿರುದ್ಧದ ಯುದ್ಧ ನಿಲ್ಲಿಸಲು ಅಮೆರಿಕ ಸೆನೆಟ್‌ನಲ್ಲಿ ನಿರ್ಣಯ ಅಂಗೀಕಾರ – Kannada News | US Senate Delivers Blow to Trump: Resolution to Stop Iran War Passes

ವಾಷಿಂಗ್ಟನ್,ಜೂನ್ 24: ಇರಾನ್ ಜತೆಗಿನ ಯುದ್ಧದ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಆಡಳಿತಕ್ಕೆ ಭಾರಿ ರಾಜಕೀಯ ಹಿನ್ನಡೆಯಾಗಿದೆ. ಇರಾನ್ ವಿರುದ್ಧದ ಸಂಘರ್ಷವನ್ನು ಅಧ್ಯಕ್ಷರು ಮುಂದುವರೆಸದಂತೆ ತಡೆಯುವ ಪ್ರಮುಖ ನಿರ್ಣಯವೊಂದನ್ನು ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟ್ ಅಂಗೀಕರಿಸಿದೆ. ಟ್ರಂಪ್ ಅವರ ಪಕ್ಷವಾದ ರಿಪಬ್ಲಿಕನ್ ಪಕ್ಷವೇ ಸೆನೆಟ್​ನಲ್ಲಿ ಬಹುಮತ ಹೊಂದಿದ್ದರೂ, ಅವರದೇ ಪಕ್ಷದ ನಾಲ್ವರು ಶಾಸಕರು ಟ್ರಂಪ್ ವಿರುದ್ಧ ಮತ ಚಲಾಯಿಸಿರುವುದು ಈ ಆಘಾತಕ್ಕೆ ಕಾರಣವಾಗಿದೆ.

ಸೆನೆಟ್‌ನಲ್ಲಿ ಈ ನಿರ್ಣಯವು 50-48 ಮತಗಳ ಅಲ್ಪ ಅಂತರದಿಂದ ಅಂಗೀಕಾರಗೊಂಡಿದೆ. ಇದಕ್ಕೂ ಮುನ್ನ ಕೆಳಮನೆಯಾದ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನಲ್ಲೂ ಇದು 215-208 ಮತಗಳಿಂದ ಪಾಸ್ ಆಗಿತ್ತು.

ಟ್ರಂಪ್ ವಿರುದ್ಧ ಮತ ಹಾಕಿದ ಸ್ವಪಕ್ಷೀಯರು ಯಾರು?
ಸುಸಾನ್ ಕಾಲಿನ್ಸ್, ಲಿಸಾ ಮುರ್ಕೋವ್ಸ್ಕಿ, ಬಿಲ್ ಕ್ಯಾಸಿಡಿ ಮತ್ತು ರಾಂಡ್ ಪಾಲ್ ಎಂಬ ನಾಲ್ವರು ರಿಪಬ್ಲಿಕನ್ ಸೆನೆಟರ್‌ಗಳು ಅಧ್ಯಕ್ಷ ಟ್ರಂಪ್ ನಿಲುವಿನ ವಿರುದ್ಧವಾಗಿ ನಿರ್ಣಯದ ಪರ ಮತ ಚಲಾಯಿಸಿದರು. ಡೇವ್ ಮೆಕ್‌ಕಾರ್ಮಿಕ್ ಮತ್ತು ಮಿಚ್ ಮೆಕ್‌ಕಾನ್ನೆಲ್ ಎಂಬ ಇಬ್ಬರು ಪ್ರಮುಖ ರಿಪಬ್ಲಿಕನ್ ನಾಯಕರು ಸಭೆಗೆ ಗೈರಾಗಿದ್ದು ಬಂಡಾಯ ಬಣಕ್ಕೆ ಜಯ ತಂದುಕೊಟ್ಟಿತು.
ಆದರೆ, ವಿರೋಧ ಪಕ್ಷವಾದ ಡೆಮಾಕ್ರಾಟ್‌ನ ಜಾನ್ ಫೆಟರ್‌ಮ್ಯಾನ್ ಮಾತ್ರ ಟ್ರಂಪ್ ಆಡಳಿತವನ್ನು ಬೆಂಬಲಿಸಿ ನಿರ್ಣಯದ ವಿರುದ್ಧ ಮತ ಹಾಕಿದ್ದು ವಿಶೇಷವಾಗಿತ್ತು.

ಇದರ ಅಸಲಿ ಅರ್ಥವೇನು? ಟ್ರಂಪ್ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ?
ಈ ನಿರ್ಣಯ ಸೆನೆಟ್‌ನಲ್ಲಿ ಅಂಗೀಕಾರವಾಗಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಅಧ್ಯಕ್ಷ ಟ್ರಂಪ್‌ಗೆ ಕೇವಲ ರಾಜಕೀಯ ಮುಜುಗರ ತರಲಿದೆಯೇ ಹೊರತು ಕಾನೂನಾತ್ಮಕವಾಗಿ ಯುದ್ಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ.

ಮತ್ತಷ್ಟು ಓದಿ: ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್

ಅಮೆರಿಕದ ಸಂವಿಧಾನದ ಪ್ರಕಾರ, ಇಂತಹ ‘ಏಕಕಾಲಿಕ ನಿರ್ಣಯಗಳು’ ಅಧ್ಯಕ್ಷರ ಅಂತಿಮ ಅನುಮೋದನೆಗೆ ಹೋಗುವುದಿಲ್ಲ ಮತ್ತು ಇವುಗಳಿಗೆ ಕಡ್ಡಾಯ ಕಾನೂನಿನ ಬಲ ಇರುವುದಿಲ್ಲ. ಇದು ಕೇವಲ ಸರ್ಕಾರದ ನಿರ್ಧಾರದ ವಿರುದ್ಧ ಸಂಸತ್ತು ಹೊಂದಿರುವ ಅಸಮಾಧಾನದ ಪ್ರದರ್ಶನವಷ್ಟೇ ಆಗಿರುತ್ತದೆ.

ಅಮೆರಿಕ ಮತ್ತು ಇರಾನ್ ನಡುವೆ 3 ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದ ಯುದ್ಧವು ಈಗಾಗಲೇ ಕಳೆದ ಏಪ್ರಿಲ್ 7 ರಂದೇ ಕದನ ವಿರಾಮದೊಂದಿಗೆ ಕೊನೆಗೊಂಡಿದೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ ಮತ್ತು ಪರಮಾಣು ಕಿಡಿ
ಇತ್ತೀಚೆಗಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೂ ಇರಾನ್‌ನ ಪರಮಾಣು ಕಾರ್ಯಕ್ರಮದ ವಿವಾದ ಇನ್ನೂ ಜೀವಂತವಾಗಿದೆ. ಇರಾನ್ ತನ್ನ ಪರಮಾಣು ಕೇಂದ್ರಗಳ ತಪಾಸಣೆಗೆ ಒಪ್ಪದಿದ್ದರೆ ಮಾತುಕತೆ ನಿಲ್ಲಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಅಂತಾರಾಷ್ಟ್ರೀಯ ಪರಮಾಣು ಸಂಸ್ಥೆ (IAEA) ಪ್ರಕಾರ, ಇರಾನ್ ಬಳಿ ಬಾಂಬ್ ತಯಾರಿಸಲು ಬೇಕಾದ ಯುರೇನಿಯಂ ಇರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಾಹನ್-4 ಸಾಫ್ಟ್‌ವೇರ್ ತಾಂತ್ರಿಕ ದೋಷ: ಆರ್​ಟಿಒ ಕಚೇರಿಗಳಲ್ಲಿ ವಾರದಿಂದ ಸ್ಥಗಿತಗೊಂಡ ವಾಹನ ನೋಂದಣಿ, ಸವಾರರ ಪರದಾಟ – Kannada News | Karnataka RTO Services Hit As Vahan 4 Software Glitch Halts Vehicle Registration For A Week

ಬೆಂಗಳೂರು, ಜೂನ್ 24: ರಾಜ್ಯದಲ್ಲಿ ವಾಹನ ಸವಾರರು ಹಾಗೂ ಹೊಸದಾಗಿ ವಾಹನ ಖರೀದಿಸಿದ ಮಾಲೀಕರು ಸಾರಿಗೆ ಇಲಾಖೆಯ (RTO) ಸೇವೆಗಳು ಸಿಗದೆ ಕಂಗಾಲಾಗಿದ್ದಾರೆ. ವಾಹನಗಳ ಪ್ರತಿಯೊಂದು ದಸ್ತಾವೇಜು ಹಾಗೂ ನೋಂದಣಿ ಪ್ರಕ್ರಿಯೆಗೆ ಅತ್ಯಗತ್ಯವಾಗಿರುವ ಕೇಂದ್ರ ಸರ್ಕಾರದ ‘ವಾಹನ್-4 (Vahan-4)’ ಸಾಫ್ಟ್‌ವೇರ್‌ನಲ್ಲಿ ಕಳೆದ ಒಂದು ವಾರದಿಂದ ತೀವ್ರ ತಾಂತ್ರಿಕ ದೋಷ ಎದುರಾಗಿದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರು ವೆಬ್‌ಸೈಟ್ ಓಪನ್ ಮಾಡಿ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಂತೆಯೇ ಸಿಸ್ಟಮ್ ಸಂಪೂರ್ಣವಾಗಿ ಹ್ಯಾಂಗ್ ಆಗುತ್ತಿದ್ದು, ಬೆಂಗಳೂರಿನ 10 ಸೇರಿದಂತೆ ರಾಜ್ಯದ ಒಟ್ಟು 70 ಆರ್‌ಟಿಓ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಮುಖ್ಯಾಂಶಗಳು

  • ‘ವಾಹನ್-4’ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ದೋಷ.
  • ರಾಜ್ಯದ 70 ಆರ್‌ಟಿಓಗಳಲ್ಲಿ ಕೆಲಸ ಸ್ತಬ್ಧ.
  • ವಾರದಿಂದ ಸಾರ್ವಜನಿಕರ ನಿರಂತರ ಅಲೆದಾಟ.

ಸಂಪೂರ್ಣವಾಗಿ ಸ್ಥಗಿತಗೊಂಡ ಸಾರಿಗೆ ಇಲಾಖೆಯ ಸೇವೆಗಳು

ಈ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಹೊಸ ವಾಹನಗಳ ನೋಂದಣಿ (Registration) ಪ್ರಕ್ರಿಯೆ ಸಂಪೂರ್ಣವಾಗಿ ನನೆಗುದಿಗೆ ಬಿದ್ದಿದೆ. ಇದರೊಂದಿಗೆ ವಾಹನಗಳ ಮಾಲೀಕತ್ವ ವರ್ಗಾವಣೆ , ಬ್ಯಾಂಕ್ ಲೋನ್ ರದ್ದತಿ ಹಾಗೂ ಎಂಟ್ರಿ, ಎಫ್‌ಸಿ, ವಿಳಾಸ ಬದಲಾವಣೆ ಹಾಗೂ ನಕಲಿ ಆರ್‌ಸಿ (Duplicate RC) ಪಡೆಯುವಿಕೆ ಸೇರಿದಂತೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಇನ್ನು ಹೊರರಾಜ್ಯಗಳಿಗೆ ತುರ್ತಾಗಿ ಸಂಚರಿಸಬೇಕಾದ ವಾಹನಗಳಿಗೆ ಅಗತ್ಯವಿರುವ ಪರ್ಮಿಟ್ ತೆಗೆದುಕೊಳ್ಳಲು ಸಾಧ್ಯವಾಗದೆ ಲಾರಿ, ಟ್ಯಾಕ್ಸಿ ಮಾಲೀಕರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಬಗೆಹರಿಯದ ಸಮಸ್ಯೆ, ಬೆಂಗಳೂರಿನ ಜನ ಹೈರಾಣು

ಸಾಫ್ಟ್‌ವೇರ್ ಸರ್ವರ್ ಸಮಸ್ಯೆಯ ಕುರಿತು ಈಗಾಗಲೇ ನೂರಾರು ವಾಹನ ಮಾಲೀಕರು ಆರ್‌ಟಿಓ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾಂತ್ರಿಕ ದೋಷ ಸರಿಪಡಿಸಲು ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ, ಪ್ರತಿದಿನ ಸಿಲಿಕಾನ್ ಸಿಟಿಯ ನೂರಾರು ನಾಗರಿಕರು ಆರ್‌ಟಿಓ ಕಚೇರಿಗಳಿಗೆ ಬಂದು ಬರಿಗೈಲಿ ವಾಪಸ್ ಹೋಗುತ್ತಿದ್ದಾರೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ; ಬೆಂಗಳೂರು ಮೂಲದ ‘ರಾಜೇಶ್ ಎಕ್ಸ್‌ಪೋರ್ಟ್ಸ್’ ಕಚೇರಿಗಳ ಮೇಲೆ ಇಡಿ ದಾಳಿ

ಕೂಡಲೇ ಉನ್ನತ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯು ಕೇಂದ್ರದ ಎನ್‌ಐಸಿ ತಂಡದೊಂದಿಗೆ ಚರ್ಚಿಸಿ ಈ ಗಂಭೀರ ತಾಂತ್ರಿಕ ಸಮಸ್ಯೆಯನ್ನು ಯುದ್ಧೋಪಾದಿಯಲ್ಲಿ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಕ್ಷಿಣ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ ತಮನ್ನಾ ಭಾಟಿಯಾ? – Kannada News | Tamannaah Slams South Cinema: Patriarchy and Objectification of Female Artists

ಖ್ಯಾತ ನಟಿ ತಮನ್ನಾ ಭಾಟಿಯಾ ಅವರು (Tamannah Bhatia) ಬಾಲಿವುಡ್ ಹಾಗೂ ದಕ್ಷಿಣ ಭಾರತ ಎರಡರಲ್ಲೂ ಕೆಲಸ ಮಾಡಿದ್ದಾರೆ. ಎರಡೂ ಕಡೆಗಳಲ್ಲಿ ಅವರಿಗೆ ಸಾಕಷ್ಟು ಅನುಭವ ಇದೆ. ಅವರು ಈಗ ಚಲನಚಿತ್ರ ರಂಗಗಳ ನಡುವಿನ ವ್ಯತ್ಯಾಸಗಳು ಮತ್ತು ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಸುದೀರ್ಘ ಸಿನಿ ಪಯಣದ ಅನುಭವಗಳನ್ನು ಹಂಚಿಕೊಂಡಿರುವ ಅವರು, ದಕ್ಷಿಣ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇದರಿಂದ ಅವರಿಗೆ ದಕ್ಷಿಣದ ಬಗ್ಗೆ ಬೇಸರ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.

ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿರುವ ತಮನ್ನಾ, ಮಹಿಳಾ ಕಲಾವಿದರನ್ನು ಚಿತ್ರರಂಗದಲ್ಲಿ ಬಿಂಬಿಸುವ ಮತ್ತು ನೋಡುವ ವಿಧಾನದ ಬಗ್ಗೆ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ, ‘ಬಾಲಿವುಡ್ ಚಿತ್ರರಂಗವು ಮಹಿಳಾ ಕಲಾವಿದರಿಗೆ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಲು ಮುಕ್ತ ಅವಕಾಶ ನೀಡುತ್ತದೆ. ಇಲ್ಲಿ ಕೆಲವು ನಟಿಯರು ಕೇವಲ ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳಿಗೆ ಸೀಮಿತವಾದರೆ, ಇನ್ನೂ ಕೆಲವರು ಗ್ಲಾಮರ್ ಮತ್ತು ನಟನೆಯನ್ನು ಸಮನಾಗಿ ನಿಭಾಯಿಸಿಕೊಂಡು ಯಶಸ್ವಿಯಾಗಿದ್ದಾರೆ’ ಎಂದಿದ್ದಾರೆ.

ಆದರೆ, ದಕ್ಷಿಣ ಭಾರತದ ಚಿತ್ರರಂಗದ ಪರಿಸ್ಥಿತಿ ಭಿನ್ನವಾಗಿದೆ ಎಂದಿರುವ ಅವರು, ‘ದಕ್ಷಿಣ ಚಿತ್ರರಂಗದಲ್ಲಿ ಇಂದಿಗೂ ಪಿತೃಪ್ರಧಾನ ಮನಸ್ಥಿತಿ ಹೆಚ್ಚಾಗಿದೆ. ಇಲ್ಲಿ ಮಹಿಳಾ ನಟಿಯರನ್ನು ನೋಡುವ ದೃಷ್ಟಿಕೋನ ಕೆಲವೊಮ್ಮೆ ಗೌರವಯುತವಾಗಿ ಇರುವುದಿಲ್ಲ, ಅದು ಕಲಾವಿದರಿಗೆ ಮುಜುಗರ ಉಂಟುಮಾಡುತ್ತದೆ. ಈ ಐಟಂ ಸಾಂಗ್ ಎನ್ನುವ ಪದವು ಮಹಿಳಾ ನಟಿಯರನ್ನು ಕೇವಲ ಒಂದು ವಸ್ತುವಿನಂತೆ ಬಿಂಬಿಸುತ್ತದೆಯೇ ಹೊರತು, ಒಬ್ಬ ಕಲಾವಿದೆಯಾಗಿ ಅವರ ಕಷ್ಟ ಮತ್ತು ಕೊಡುಗೆಯನ್ನು ಪರಿಗಣಿಸುವುದಿಲ್ಲ. ಇಂತಹ ನೃತ್ಯಗಳನ್ನು ನಾನು ಯಾವಾಗಲೂ ನನ್ನ ಸ್ವಂತ ಇಷ್ಟ ಮತ್ತು ಷರತ್ತುಗಳ ಮೇಲೆಯೇ ಆಯ್ಕೆ ಮಾಡಿಕೊಂಡಿದ್ದೇನೆ. ಇವುಗಳನ್ನು ಕೇವಲ ಮನರಂಜನಾತ್ಮಕ ಪ್ರದರ್ಶನ ಎಂದು ನೋಡಬೇಕೇ ಹೊರತು, ಮಹಿಳೆಯರ ಗೌರವವನ್ನು ಕುಗ್ಗಿಸುವ ಲೇಬಲ್ ಬಳಸಬಾರದು’ ಎಂದಿದ್ದಾರೆ ತಮನ್ನಾ.

ಇದನ್ನೂ ಓದಿ: ಚಿತ್ರರಂಗಕ್ಕೆ ಬಂದು 21 ವರ್ಷ, ಈಗಲೂ ಎಷ್ಟು ಬ್ಯುಸಿ ಗೊತ್ತ ತಮನ್ನಾ

ಸದ್ಯ ಭಾರತೀಯ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಲಿಂಗ ತಾರತಮ್ಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ತಮನ್ನಾ ಭಾಟಿಯಾ ಅವರು ದಕ್ಷಿಣ ಚಿತ್ರರಂಗದ ಒಳಗಿನ ಪರಿಸ್ಥಿತಿಯ ಬಗ್ಗೆ ಮುಕ್ತವಾಗಿ ಧ್ವನಿ ಎತ್ತಿರುವುದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.ದಕ್ಷಿಣ ಭಾರತದ ಕೆಲಸದ ರೀತಿ ಬಗ್ಗೆ ಅವರಿಗೆ ಅಸಮಾಧಾನ ಇರೋದು ಸ್ಪಷ್ಟವಾವಾಗಿ ಕಾಣಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಟ್ರೋ ಸಂಚಾರ ಶುರುವಾಯ್ತಾ? ಬಿಗ್ ಅಪ್​ಡೇಟ್ ಕೊಟ್ಟ ಬಿಎಂಆರ್​ಸಿಎಲ್ – Kannada News | Bengaluru Metro Purple Line Services Fully Restored After Technical Fault Fixed Near Cubbon Park

ಪರ್ಪಲ್ ಲೈನ್ ಮೆಟ್ರೋ ದುರಸ್ತಿ ಕಾರ್ಯ ಅಂತ್ಯImage Credit source: tv9

ಬೆಂಗಳೂರು, ಜೂನ್ 24: ಬೆಂಗಳೂರಿನ ಲಕ್ಷಾಂತರ ಮೆಟ್ರೋ (Namma Metro) ಪ್ರಯಾಣಿಕರ ಆತಂಕಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಉಂಟಾಗಿದ್ದ ಗಂಭೀರ ತಾಂತ್ರಿಕ ದೋಷದಿಂದಾಗಿ ಮಂಗಳವಾರ ಸಂಜೆ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ನೇರಳೆ ಮಾರ್ಗದ (ಕಾಡುಗೋಡಿಯಿಂದ ಚಲ್ಲಘಟ್ಟ) ಸಂಚಾರ ಇಂದು ಮುಂಜಾನೆಯಿಂದ ಎಂದಿನಂತೆ ಯಥಾಸ್ಥಿತಿಗೆ ಮರಳಿದೆ. ಬಿಎಂಆರ್‌ಸಿಎಲ್‌ನ (BMRCL) ತಾಂತ್ರಿಕ ನಿರ್ವಹಣಾ ತಂಡಗಳು ಇಡೀ ರಾತ್ರಿ ಶ್ರಮಿಸಿ ಮುಂಜಾನೆ 3:30ರ ಸುಮಾರಿಗೆ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ನಿಗದಿತ ವೇಳಾಪಟ್ಟಿಯಂತೆ ಬೆಳಗ್ಗೆ 5 ಗಂಟೆಯಿಂದಲೇ ರೈಲುಗಳ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರು ನಿರಾಳರಾಗಿದ್ದಾರೆ.

ಮುಖ್ಯಾಂಶಗಳು

  • ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ.
  • ಬೆಳಗ್ಗೆ 5 ಗಂಟೆಯಿಂದಲೇ ಸೇವೆ ಪುನಾರಂಭ.
  • ಮೆಟ್ರೋ ಪ್ರಯಾಣಿಕರು ನಿರಾಳ

ಇಡೀ ರಾತ್ರಿ ನಡೆದ ದುರಸ್ತಿ ಕಾರ್ಯಾಚರಣೆ

ಮಂಗಳವಾರ ಸಂಜೆ 6:30ರ ಪೀಕ್ ಅವರ್‌ನಲ್ಲಿ ಕಬ್ಬನ್ ಪಾರ್ಕ್ ನಿಲ್ದಾಣದ ಬಳಿ ಮೆಟ್ರೋದ ‘ಥರ್ಡ್ ರೈಲ್ ಸಿಸ್ಟಮ್​ನ ಕರೆಂಟ್​​ ಕಲೆಕ್ಟರ್​ ಶೂ’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದಾಗಿ ಮೆಜೆಸ್ಟಿಕ್‌ನಿಂದ ಎಂ.ಜಿ. ರಸ್ತೆ ನಡುವಿನ ಪ್ರಮುಖ ನಿಲ್ದಾಣಗಳ ಸಂಪರ್ಕ ಕಡಿತಗೊಂಡು ಸಾವಿರಾರು ಪ್ರಯಾಣಿಕರು ಲಾರಿ, ಗೂಡ್ಸ್ ವಾಹನಗಳನ್ನು ಹತ್ತಿ ತೆರಳುವಂತಾಗಿತ್ತು. ರೈಲಿನೊಳಗೆ ಸಿಲುಕಿದ್ದ ಜನರನ್ನು ಅರ್ಧ ಗಂಟೆಯ ಬಳಿಕ ಕೆಳಗಿಳಿಸಲಾಗಿತ್ತು. ರಾತ್ರಿ ಕೊನೆಯ ರೈಲಿನ ಸಮಯ ಮುಗಿದರೂ ದುರಸ್ತಿ ಕಾರ್ಯ ಮುಂದುವರಿದಿತ್ತು. ಪರಿಣಾಮವಾಗಿ ಸಾವಿರಾರು ಸಂಖ್ಯೆಯಲ್ಲಿ ಮೆಟ್ರೋ ಪ್ರಯಾಣಿಕರು ಬಸ್, ಆಟೋ ಮತ್ತು ಕ್ಯಾಬ್‌ಗಳು ಸುಲಭವಾಗಿ ಸಿಗದೆ, ರಸ್ತೆಯಲ್ಲಿ ಲಾರಿಗಳು ಮತ್ತು ಗೂಡ್ಸ್ ವಾಹನಗಳು ಸೇರಿದಂತೆ ಯಾವುದೇ ಲಭ್ಯ ವಾಹನಗಳನ್ನು ಏರಿ ಪ್ರಯಾಣಿಸುವ ದೃಶ್ಯಗಳು ಬೆಂಗಳೂರಿನಲ್ಲಿ ಕಂಡುಬಂದವು.

ಮುಂಜಾನೆ ಕಬ್ಬನ್ ಪಾರ್ಕ್‌ಗೆ ಬಂದ ಮೊದಲ ರೈಲು

ನಿರಂತರ ಕಾರ್ಯಾಚರಣೆಯ ನಂತರ ಮುಂಜಾನೆ 3:30ಕ್ಕೆ ದೋಷ ಮುಕ್ತಗೊಳಿಸಲಾಯಿತು. ತದನಂತರ ಬೆಳಗ್ಗೆ 5 ಗಂಟೆಗೆ ಎಂದಿನಂತೆ ವೇಳಾಪಟ್ಟಿಯಂತೆ ರೈಲುಗಳು ಹಳಿಗೆ ಇಳಿದವು. ಮುಂಜಾನೆ 5:21ಕ್ಕೆ ಕಾಡುಗೋಡಿಯಿಂದ (ವೈಟ್‌ಫೀಲ್ಡ್) ಹೊರಟ ಮೊದಲ ಮೆಟ್ರೋ ರೈಲು ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಯಶಸ್ವಿಯಾಗಿ ಆಗಮಿಸಿತು. ಪ್ರಸ್ತುತ ಕಾಡುಗೋಡಿಯಿಂದ ಚಲ್ಲಘಟ್ಟದವರೆಗಿನ ಇಡೀ ನೇರಳೆ ಮಾರ್ಗದಲ್ಲಿ ಯಾವುದೇ ವ್ಯತ್ಯಯವಿಲ್ಲದೆ ಮೆಟ್ರೋ ಸಂಚರಿಸುತ್ತಿದ್ದು, ಕಚೇರಿ ಹಾಗೂ ದೈನಂದಿನ ಕೆಲಸಗಳಿಗೆ ತೆರಳುವ ಸಾರ್ವಜನಿಕರು ನಿರಾತಂಕವಾಗಿ ಪ್ರಯಾಣಿಸುತ್ತಿದ್ದಾರೆ.

ಇದನ್ನೂ ಓದಿ: ನೇರಳೆ ಮಾರ್ಗದ ರೈಲುಗಳಲ್ಲಿ ತಾಂತ್ರಿಕ ದೋಷ; ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ 30 ನಿಮಿಷ ರೈಲಿನಲ್ಲೇ ಸಿಲುಕಿದ ಪ್ರಯಾಣಿಕರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ಧನಯೋಗ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 24, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ ದಶಮಿ, ಚಿತ್ತಾ ನಕ್ಷತ್ರ, ಪರಿಗ ಯೋಗ ಮತ್ತು ತೈತಲಕರಣ ಇರಲಿದೆ.

ಇಂದು ಮಧ್ಯಾಹ್ನ 12:21 ರಿಂದ 1:57ರ ತನಕ ರಾಹುಕಾಲ ಇರಲಿದ್ದು, ಬೆಳಿಗ್ಗೆ 10:45 ರಿಂದ 12:21ರ ತನಕ ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ ಇರಲಿದೆ. ಇದು ಸಾಕ್ಷಾತ್ ವಿಷ್ಣು, ವಿನಾಯಕ ಮತ್ತು ಕಾಲಭೈರವನ ಲಹರಿಗಳಿರುವ ದಿನ. ದಶಪಾಪಹರ ದಶಮಿ ಎಂದೂ ಕರೆಯಲಾಗುವ ಈ ದಿನ, ಹೊಲಹೊಳಲು ಮತ್ತು ಕೊಳ್ಳೇಗಾಲದಲ್ಲಿ ವಿಶೇಷ ಉತ್ಸವಗಳು ನಡೆಯಲಿವೆ ಎಂದು ಗುರೂಜಿ ತಿಳಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಏನೇ ಮಾಡಿದರೂ ಅದು ಅಲ್ಪವೆನ್ನುವಂತೆ ಅವರಿಗೆ ಅನಿಸುವುದು… – Kannada News | Daily Horoscope for June 24, 2026: Wednesday Astrology Predictions

ಮೇಷ ರಾಶಿ:

ನೀವೇ ಆಯ್ಕೆ‌ ಮಾಡಿಕೊಂಡ ಉದ್ಯೋಗದ ಸ್ಥಳದಿಂದ ನಿಮಗೆ ತೊಂದರೆಯಾಗಿ ಕೆಲಸವನ್ನು ಬಿಡಲಿದಗದೀರಿ. ಸಂಬಂಧಗಳಲ್ಲಿ ಭಾವನಾತ್ಮಕತೆ ಹೆಚ್ಚಿರುತ್ತದೆ. ಬಹಳ‌ದಿನಗಳ ಅನಂತೆ ನಿಶ್ಚಿಂತೆಯಿಂದ ನಿದ್ರಿಸುವಿರಿ. ಮನೆಯವರ ಅಭಿಪ್ರಾಯಕ್ಕೆ ಮೌಲ್ಯ ನೀಡಿ. ದಿನದ ಕೊನೆಯಲ್ಲಿ ಅಚ್ಚರಿಯ ಲಾಭದ ಸೂಚನೆ ಇರುವುದು. ಯಾರನ್ನೂ ಗೆಲ್ಲುವೆನು ಎಂಬ ಹುಂಬುತನ ಬೇಡ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ಸಮಾಧಾನಚಿತ್ತರಾಗಿ ಮಾತನಾಡಿ.

ವೃಷಭ ರಾಶಿ:

ಓದಿನಲ್ಲಿ ಆಸಕ್ತಿ ಕಡಿಮೆ‌ ಇರುವುದು ಸ್ಪಷ್ಟವಾಗಿ ಕಾಣುವುದು. ಕೆಲವರು ನಿಮ್ಮ ವಿಚಾರಗಳನ್ನು ತಿರಸ್ಕರಿಸಬಹುದು. ಆಸೆಗಳನ್ನು ಹರಿಬಿಡುವುದು ನಿಮ್ಮ ಯೋಗ್ಯತೆಯನ್ನು ತಿಳಿಸುವುದು. ಹಣಕಾಸಿನಲ್ಲಿ ಸಣ್ಣ ಮೊತ್ತದ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ. ಕೆಲಸದಲ್ಲಿ ಹೊಸ ಆಯ್ಕೆಗಳತ್ತ ಗಮನ ಹರಿಸಿ. ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌ ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ.

ಮಿಥುನ ರಾಶಿ:

ಎಲ್ಲವನ್ನೂ ಮಾತಿನಿಂದಲೇ ಬಗೆಹರಿಸಲಾಗದು. ನಿಶ್ಚಿತ ಆದಾಯವು ನಂಬಿ ಸಾಲವನ್ನು ಪಡೆಯುವಿರಿ.‌ ಗಮನದಿಂದ ಕಾರ್ಯ ಮಾಡಿದರೆ ಯಶಸ್ಸು ಖಚಿತ. ಹಣಕಾಸಿನಲ್ಲಿ ಉತ್ತಮ ಸುಧಾರಣೆ. ಹಳೆಯ ಸಮಸ್ಯೆಗಳಿಗೆ ಪರಿಹಾರ. ಉದ್ಯೋಗದಲ್ಲಿ ಬೆಳವಣಿಗೆ ಸಾಧ್ಯ. ಸಂಬಂಧಗಳಲ್ಲಿ ನಂಬಿಕೆ ಬಲವಾಗಲಿ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು.

ಕರ್ಕಾಟಕ ರಾಶಿ:

ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಇಂದು ಪತಿಯ ವರ್ತನೆಯು ಬದಲಾದಂತೆ ತೋರುವುದು. ಹಣಕಾಸಿನ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ. ಸಂಬಂಧಗಳಲ್ಲಿ ಗಂಭೀರವಾಗಿ ವರ್ತಿಸಿ. ನಿಮ್ಮ ಶ್ರಮವನ್ನು ಗುರುತಿಸಲಾಗುತ್ತದೆ. ಪ್ರವಾಸ ಯೋಜನೆ ಮುಂದೂಡುವ ಸಾಧ್ಯತೆ. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ.

ಸಿಂಹ ರಾಶಿ:

ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಇದರಿಂದ ಅಪವಾದಗಳು ಬರಬಹುದು.‌ ಒಪ್ಪಂದದ ಕುರಿತು ಯೋಚನೆ ಬೇಡ. ಹಣಕಾಸಿನಲ್ಲಿ ಸ್ಪಷ್ಟತೆ ಇರಲಿ. ಆರೋಗ್ಯದಲ್ಲಿ ಸಾಧಾರಣ ಸ್ಥಿತಿ. ಸಹೋದ್ಯೋಗಿಯ ಜೊತಡ ಸ್ಪರ್ಧೆ ಎದುರಾಗಬಹುದು. ನಿಮ್ಮ ಶ್ರದ್ಧೆ ಹಾಗೂ ಸಮರ್ಥನೆಯಿಂದ ಜಯ ಸಿಗುವುದು ಖಚಿತ. ನಿಮ್ಮ ನಡೆ ಅನುಮಾನವನ್ನು ತರಿಸಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು.

ಕನ್ಯಾ ರಾಶಿ:

ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಇಂದು ಹೆಚ್ಚಿನ ಲಾಭವನ್ನು ನಿರೀಕ್ಷಿತ ಲಾಭವನ್ನು ಕಾಣಬಹುದಾಗಿದೆ. ಹಳೆಯ ಸಾಲ ತೀರಿಸಬಹುದಾದ ಅವಕಾಶ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳು. ಮನಸ್ಸಿನಲ್ಲಿ ದೃಢತೆ ಇಟ್ಟುಕೊಳ್ಳಿ. ಸ್ನೇಹಿತರಿಂದ ಬೆಂಬಲ ನಿರೀಕ್ಷಿಸಬಹುದು. ವಿದೇಶದಿಂದ ಹಣದ ವ್ಯವಹಾರವನ್ನು ಇಟ್ಟುಕೊಂಡರೆ ಕಷ್ಟವಾದೀತು. ಕುಟುಂಬದಿಂದ‌ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಮಕ್ಕಳು ನಿಮ್ಮನ್ನು ಪ್ರೀತಿಸುವರು.

ತುಲಾ ರಾಶಿ:

ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಅವಕಾಶಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ಇಷ್ಟು ದಿನ ಹಿಡಿದಿಟ್ಟುಕೊಂಡ ಕೋಪವು ಸ್ಫೋಟವಾಗಿ ಮನೆಯು ರಣಾಂಗಣದಂತೆ ಕಾಣಬಹುದು. ಬದಲಾವಣೆಯೊಂದಿಗೆ ಹೊಂದಾಣಿಕೆ ಸಾಧಿಸುವ ಕೌಶಲ ಅಗತ್ಯ. ನೀವು ಬದಲಾಗಬೇಕು ಎಂದುಕೊಂಡರೂ ಸ್ನೇಹಿತರ ಬಳಗ ನಿಮ್ಮನ್ನು ಸುಮ್ಮನೆ ಬಿಡದು.‌ ತಂದೆ-ತಾಯಿಗಳು ಮಕ್ಕಳ‌ ಮೇಲೆ ಕಣ್ಣಿಡುವುದು ಒಳ್ಳೆಯದು. ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ.

ವೃಶ್ಚಿಕ ರಾಶಿ:

ಬಂಗಾರದ ವ್ಯಾಪರಿಗಳಿಗೆ ಲಾಭವಾಗಲಿದೆ. ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ಕುಟುಂಬದಿಂದ ಅಶುಭವಾದ ಸುದ್ದಿಯು ನಿಮಗೆ ತಿಳಿಯಲಿದೆ‌. ವೃತ್ತಿಯಲ್ಲಿ ನಿರ್ಣಾಯಕ ದಿನವಾಗಬಹುದು. ಹಣಕಾಸಿನಲ್ಲಿ ಸ್ಥಿರತೆ ಕಾಣಬಹುದು. ವ್ಯವಹಾರದಲ್ಲಿ ಹೊಸ ಅವಕಾಶ ಸಾಧ್ಯತೆ. ಬಂಧುಬಳಗದಲ್ಲಿ ಒಳ್ಳೆಯ ಸುದ್ದಿ ನಿರೀಕ್ಷೆ. ದೇಹದಂಡನೆಗೆ ಸರಿಯಾದ ಮಾರ್ಗವನ್ನು ಅನುಸರಿಸಿ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆ ಸಂಭವ.

ಧನು ರಾಶಿ:

ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಬಗ್ಗೆ ಅಪಪ್ರಚಾರಗಳು ಕೇಳಿ ಬರಬಹುದು. ವ್ಯಕ್ತಿಗತ ಸಮಸ್ಯೆಗಳು ಮನಸ್ಸಿಗೆ ಭಾರವಾಗಬಹುದು. ಆತ್ಮಸ್ಥೆರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದಲ್ಲಿ ಇವಿಶ್ರಾಂತಿ ಅಗತ್ಯ. ಸಂಜೆಯ ವೇಳೆಗೆ ಶಾಂತ ಮನಸ್ಥಿತಿ ಮೂಡಬಹುದು. ವಂಚಿಸುವ ಯೋಚನೆ ಮಾಡಿದ್ದರೆ ಅದನ್ನು ಮರೆತುಬಿಡಿ. ಎಲ್ಲದಕ್ಕೂ ಯಾರನ್ನಾದರೂ ಕಾರಣವಾಗಿಸುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ.

ಮಕರ ರಾಶಿ:

ನಿಮ್ಮ ವಿದ್ಯುದುಪಕರಣದಿಂದ ನಿಮಗೆ ನಷ್ಟವಾಗಲಿದೆ. ನಿಮ್ಮ ಶತ್ರುಗಳನ್ನು ನೀವು ಸಂಪೂರ್ಣವಾಗಿ ಸೋಲಿಸಿದ್ದೇನೆ ಎಂಬ ಭಾವನೆ ಇರಬಹುದು. ನಿಮ್ಮೊಳಗಿನ ಹೊಸ ಸಾಮರ್ಥ್ಯವನ್ನು ಬೆಳಕಿಗೆ ತರುತ್ತದೆ. ಕೆಲಸದಲ್ಲಿ ಹೊಸ ಅವಕಾಶಗಳು ಬರುವ ನಿರೀಕ್ಷೆಯಿದೆ. ಆರೋಗ್ಯದಲ್ಲಿ ಸುಧಾರಣೆಯ ಲಕ್ಷಣ. ನಿಮ್ಮ ಇಂದಿನ ಸಮಯವನ್ನು ನೀವು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ.

ಕುಂಭ ರಾಶಿ:

ಆಪ್ತರ ಜೊತೆ ಉದ್ಯೋಗಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ನಡೆಸುವಿರಿ. ನಿಮ್ಮ ಶತ್ರುಗಳು ನಿಮ್ಮನ್ನು ಸೋಲಿಸಲು ತಯಾರಾಗಿರುವರು. ನಿಮ್ಮ ಬಳಿ ಇರುವ ಕೆಲವು ವಸ್ತುಗಳನ್ನು ಇನ್ನೊಬ್ಬರಿಗೆ ನೀಡುವಿರಿ. ಮನೆಯ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಹಣಕಾಸಿನಲ್ಲಿ ಮಧ್ಯಮ ಸ್ಥಿತಿ ನಿರೀಕ್ಷಿಸಬಹುದು. ನಿಮ್ಮ ಅಂದಾಜು ಮೀರಬಹುದು. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಾರಾಟದ ವಿಷಯದಲ್ಲಿ ಹಿನ್ನಡೆಯಾಗಲಿದೆ.

ಮೀನ ರಾಶಿ:

ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ಇಂದು ವಿದ್ಯಾರ್ಥಿಗಳು ದೂರದ ಊರಿಗೆ ಹೆಚ್ಚಿನ ಹಣಕಾಸಿನಲ್ಲಿ ಸತತ ನಿರೀಕ್ಷೆಗಳಿದ್ದರೂ ಚಿಕ್ಕ ನಷ್ಟವೊಂದು ಸಂಭವಿಸಬಹುದು. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಕಾಣಿಸಬಹುದು. ವೃತ್ತಿಜೀವನದಲ್ಲಿ ಮುಂದುವರಿಯಲು ನೂತನ ಅವಕಾಶಗಳು ನಿಮಗೆ ಸಿಗಲಿವೆ. ಜೀವನದ ಹಾದಿಯಲ್ಲಿ ಹೆಚ್ಚು ಏರಿಳಿತಗಳು ಇರದೇ ಆರಾಮಾಗಿ ಹೋಗುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:22 – 13:58, ಯಮಗಂಡ ಕಾಲ 07:33 – 09:09, ಗುಳಿಕ ಕಾಲ 10:46 – 12:22

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಪ್ರಭಾಕರ್ ಕೋರೆ ಸೇರಿ ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ – Kannada News | Prabhakar kore, shubha venkatesha iyengar And others Total Five Karnataka achievers Gets padma Shre award 2026 from droupadi murmu

ನವದೆಹಲಿ, (ಜೂನ್ 23): ನವದೆಹಲಿಯ ರಾಷ್ಟ್ರಪತಿ ಭವನದಲ್ಲಿಂದು ರಾಷ್ಟ್ರಪತಿ ದ್ರೌಪದಿ ಮುರ್ಮು (droupadi murmu) ಅವರು ದೇಶದ ವಿವಿಧ ರಂಗಗಳ ಸಾಧಕರಿಗೆ ಪ್ರತಿಷ್ಠಿತ ‘ಪದ್ಮ ಪ್ರಶಸ್ತಿ 2026’  (padma award 2026 ) ಪ್ರದಾನ ಮಾಡಿದರು. ಇನ್ನು ಕರ್ನಾಟಕದ ಐವರು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಕೆಎಲ್‌ಇ ಸಂಸ್ಥೆಯ ಮೂಲಕ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಆಸ್ಪತ್ರೆಗಳ ಮೂಲಕ ಬಡವರಿಗೆ ಅತ್ಯಾಧುನಿಕ ಉಚಿತ, ಕಡಿಮೆ ವೆಚ್ಚದ ವೈದ್ಯಕೀಯ ಸೇವೆ ನೀಡುತ್ತಿರುವ ಮಹಾದಾನಿ ಡಾ. ಪ್ರಭಾಕರ್ ಕೋರೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿರುವ ‘ದೃಷ್ಟಿ’ ವ್ಯವಸ್ಥೆಯನ್ನು ಆವಿಷ್ಕರಿಸಿ, ‘ಅಗ್ನಿ’ ಕ್ಷಿಪಣಿಯ ತಾಂತ್ರಿಕ ದೋಷ ನಿವಾರಿಸಿ ಭಾರತೀಯ ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿಸಿದ ವಿಜ್ಞಾನಿ ಡಾ. ಶುಭಾ ವೆಂಕಟೇಶ್ ಅಯ್ಯಂಗಾರ್ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

ಪ್ರೆಸ್ಟೀಜ್ ಸಂಸ್ಥೆಯನ್ನು ಬಿಲಿಯನ್ ಡಾಲರ್ ಉದ್ಯಮವಾಗಿ ಬೆಳೆಸಿ, ಕುಕ್ಕರ್ ಅಪಘಾತ ತಡೆಯುವ ಆವಿಷ್ಕಾರದ ಪೇಟೆಂಟ್ ಹಕ್ಕನ್ನು ದೇಶದ ಜನರ ಜೀವ ರಕ್ಷಣೆಗಾಗಿ ಇಡೀ ಉದ್ಯಮಕ್ಕೆ ಉಚಿತವಾಗಿ ಬಿಟ್ಟುಕೊಟ್ಟ ಉದಾರ ಉದ್ಯಮಿ ಶ್ರೀ ಟಿ.ಟಿ. ಜಗನ್ನಾಥನ್. ಇವರಿಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ್ವತಃ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದರೂ ಅದನ್ನು ಮೆಟ್ಟಿ ನಿಂತು, ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆ ಸಿಗುವಂತೆ ಮಾಡಿದ ಕ್ರಾಂತಿಕಾರಿ ವೈದ್ಯ ಡಾ. ಸುರೇಶ್ ಹನಗವಾಡಿ ಹಾಗೂ ದೂರದರ್ಶನ ಮತ್ತು ಆಕಾಶವಾಣಿಯನ್ನು ಸಂಪೂರ್ಣವಾಗಿ ನವೀಕರಿಸಿ, ಕೋವಿಡ್ ಸಮಯದಲ್ಲಿ ‘ರಾಮಾಯಣ’ ಪ್ರಸಾರದ ಮೂಲಕ ಜಾಗತಿಕ ದಾಖಲೆ ಬರೆದ ಹಾಗೂ ಕೋಟ್ಯಂತರ ವಿದ್ಯಾರ್ಥಿಗಳಿಗೆ ಉಚಿತ ಟಿವಿ ಶಿಕ್ಷಣ ತಲುಪಿಸಿದ ತಂತ್ರಜ್ಞ ಶಶಿ ಶೇಖರ್ ವೇಂಪತಿ ಅವರಿಗೂ ಸಹ ಪದ್ಮಶ್ರೀ ನೀಡಲಾಯ್ತು.

Source link

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2026; ಜುಲೈ 31ರೊಳಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | Pradhan Mantri Rashtriya Bal Puraskar 2026 Celebrating Indias young heroes how to apply

ನವದೆಹಲಿ, ಜೂನ್ 23: ದೇಶದ ಮಕ್ಕಳಲ್ಲಿರುವ ಅಸಾಧಾರಣ ಧೈರ್ಯ, ಸೃಜನಶೀಲತೆ, ನಾವೀನ್ಯತೆ ಮತ್ತು ಅದಮ್ಯ ಚೇತನವನ್ನು ಗೌರವಿಸುವ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಮಕ್ಕಳ ಪ್ರಶಸ್ತಿಯಾದ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP) 2026’ಕ್ಕೆ ಆನ್‌ಲೈನ್ ಮೂಲಕ ನಾಮನಿರ್ದೇಶನ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. 5ರಿಂದ 18 ವರ್ಷದೊಳಗಿನ ಅಸಾಧಾರಣ ಸಾಧನೆ ಮಾಡಿದ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಸ್ತುವಾರಿಯಲ್ಲಿ ನಡೆಯುವ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು 2026ರ ಜುಲೈ 31 ಕೊನೆಯ ದಿನವಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರತಿ ವರ್ಷ ಡಿಸೆಂಬರ್ 26 ರಂದು ‘ವೀರ ಬಾಲ ದಿವಸ್’ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.

ಸಿಖ್ ಧರ್ಮದ 10ನೇ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರ ಕಿರಿಯ ಪುತ್ರರಾದ ಸಾಹಿಬ್‌ಜಾದಾ ಜೊರಾವರ್ ಸಿಂಗ್ (9 ವರ್ಷ) ಮತ್ತು ಸಾಹಿಬ್‌ಜಾದಾ ಫತೇಹ್ ಸಿಂಗ್ (7 ವರ್ಷ) ಅವರು ಧರ್ಮ ರಕ್ಷಣೆಗಾಗಿ ನೀಡಿದ ಬಲಿದಾನದ ನೆನಪಿಗಾಗಿ ಡಿಸೆಂಬರ್ 26 ಅನ್ನು ವೀರ ಬಾಲ ದಿವಸ್ ಎಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಗರಿ

ಈ ಪ್ರಶಸ್ತಿ ವಿಜೇತ ಮಕ್ಕಳಿಗೆ ಒಂದು ವಿಶೇಷ ಪದಕ, ಪ್ರಮಾಣಪತ್ರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. 2019ರಲ್ಲಿ ಈ ಪ್ರಶಸ್ತಿ ಆರಂಭವಾದಾಗಿನಿಂದ ಇದುವರೆಗೆ ದೇಶದ ಒಟ್ಟು 203 ಮಕ್ಕಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರತಿ ವರ್ಷ ದೇಶಾದ್ಯಂತ ಸುಮಾರು 25 ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಯಾವ 6 ಕ್ಷೇತ್ರಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ?:

ಶೌರ್ಯ: ತಮ್ಮ ಜೀವದ ಹಂಗು ತೊರೆದು ಇತರರ ಪ್ರಾಣ ಉಳಿಸಿದ ಅಥವಾ ಪ್ರಕೃತಿ ವಿಕೋಪ/ಮಾನವ ನಿರ್ಮಿತ ಆಪತ್ತಿನ ಸಮಯದಲ್ಲಿ ಅಸಾಧಾರಣ ಧೈರ್ಯ, ಸಮಯಪ್ರಜ್ಞೆ ಮೆರೆದ ಮಕ್ಕಳಿಗೆ.

ಸಾಮಾಜಿಕ ಸೇವೆ: ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಸಮುದಾಯವನ್ನು ಒಟ್ಟುಗೂಡಿಸುವ ನಾಯಕತ್ವ ಗುಣ ಹೊಂದಿರುವ ಮಕ್ಕಳಿಗೆ.

ಪರಿಸರ: ಪರಿಸರ ಸಂರಕ್ಷಣೆಗಾಗಿ ವಿವಿಧ ಹಂತಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮಕ್ಕಳಿಗೆ.

ಕ್ರೀಡೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ನಿರಂತರ ಸಾಧನೆ ಮಾಡುತ್ತಿರುವವರಿಗೆ.

ಕಲೆ ಮತ್ತು ಸಂಸ್ಕೃತಿ: ಸಂಗೀತ (ಗಾಯನ ಮತ್ತು ವಾದನ), ನೃತ್ಯ, ಚಿತ್ರಕಲೆ, ಸಾಹಿತ್ಯ ಅಥವಾ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವಲ್ಲಿ ಅತ್ಯುತ್ತಮ ಪ್ರತಿಭೆ ಹೊಂದಿರುವ ಮಕ್ಕಳಿಗೆ.

ವಿಜ್ಞಾನ ಮತ್ತು ತಂತ್ರಜ್ಞಾನ: ಸಮಾಜದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಂತಹ, ಜನರ ಜೀವನಮಟ್ಟ ಸುಧಾರಿಸುವಂತಹ ಹೊಸ ಆವಿಷ್ಕಾರ ಮಾಡಿದ ಯುವ ವಿಜ್ಞಾನಿಗಳಿಗೆ.

ಪ್ರಶಸ್ತಿಗೆ ಇರುವ ಅರ್ಹತೆಗಳು ಮತ್ತು ನಿಯಮಗಳು:

ಮಗು ಕಡ್ಡಾಯವಾಗಿ ಭಾರತೀಯ ನಾಗರಿಕನಾಗಿರಬೇಕು ಮತ್ತು ಭಾರತದಲ್ಲೇ ವಾಸಿಸುತ್ತಿರಬೇಕು.

ಇದನ್ನೂ ಓದಿ: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಮಂಗಳೂರಿನ ರೆಮೊನಾ; ಬಾಲಕಿಯ ಸಾಧನೆ ಏನು? ಇಲ್ಲಿದೆ ವಿವರ

ವಯೋಮಿತಿ:

2026ರ ಜುಲೈ 31ಕ್ಕೆ ಅನ್ವಯವಾಗುವಂತೆ ಮಗುವಿಗೆ 5 ವರ್ಷ ತುಂಬಿರಬೇಕು ಮತ್ತು 18 ವರ್ಷ ದಾಟಿರಬಾರದು.

ಮಗುವಿನ ಸಾಧನೆ ಅಥವಾ ಶೌರ್ಯದ ಘಟನೆಯು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ (ಜುಲೈ 31, 2026) ಹಿಂದಿನ 2 ವರ್ಷಗಳ ಒಳಗಾಗಿ ನಡೆದಿರಬೇಕು. ಈ ಹಿಂದೆ ಯಾವುದೇ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಸಾಮಾನ್ಯವಾಗಿ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಿಲ್ಲ, ಆದರೆ ತೀರಾ ಅಪರೂಪದ ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?:

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಅರ್ಹ ಮಕ್ಕಳ ಹೆಸರನ್ನು ನಾಮನಿರ್ದೇಶನ ಮಾಡಬಹುದು. ಮಕ್ಕಳು ಸ್ವಯಂ-ನಾಮನಿರ್ದೇಶನಕ್ಕೂ ಅವಕಾಶವಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳ ಮೂಲಕವೂ ಶಿಫಾರಸು ಮಾಡಬಹುದು.

ಅರ್ಜಿದಾರರು ಅಧಿಕೃತ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ https://awards.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಫಾರ್ಮ್ ಭರ್ತಿ ಮಾಡಬೇಕು. ಮಗುವಿನ ಇತ್ತೀಚಿನ ಫೋಟೋ, ಸಾಧನೆಯ ಪೂರಕ ದಾಖಲೆಗಳು ಮತ್ತು ಗರಿಷ್ಠ 1,000 ಪದಗಳ ಒಳಗಿನ ಸಾಧನೆಯ ವಿವರಣೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೂಮಿ ದುಂಡಗಿದೆ, ಎಲ್ಲರ ಲೆಕ್ಕ ಚುಕ್ತಾ ಆಗುತ್ತದೆ; ವಿಧಾನಸಭೆಯಲ್ಲಿ ಟಿಎಂಸಿ ವಿರುದ್ಧ ಗುಡುಗಿದ ಸುವೇಂದು ಅಧಿಕಾರಿ – Kannada News | West Bengal CM Suvendu Adhikari launches attack on TMC government in Assembly Session

ಕೊಲ್ಕತ್ತಾ, ಜೂನ್ 23: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರು ಹಿಂದಿನ ಸರ್ಕಾರದ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ವೈಫಲ್ಯಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. “ಭೂಮಿ ದುಂಡಗಿದೆ, ಇಲ್ಲಿ ಎಲ್ಲದಕ್ಕೂ ಲೆಕ್ಕ ಚುಕ್ತಾ ಆಗೇ ಆಗುತ್ತದೆ” ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ರಾಜ್ಯಪಾಲರ ಬಜೆಟ್ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಟಿಎಂಸಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಸಂಪಾದಿಸಿದ ಆಸ್ತಿಗಳನ್ನು ಹರಾಜು ಹಾಕಿ, ಆ ಹಣವನ್ನು ಸಾರ್ವಜನಿಕರಿಗೆ ಮರಳಿಸುವ ಹೊಸ ಕಾನೂನನ್ನು ತಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ಅವರು ಘೋಷಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸ್ವಚ್ಛತಾ ಕ್ರಾಂತಿ; ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ, ಉಗುಳಿದರೆ ಸೆ. 1ರಿಂದ ಭಾರಿ ದಂಡ!

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಥವಾ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಹರೀಶ್ ಚಟರ್ಜಿ ಸ್ಟ್ರೀಟ್, ಹರೀಶ್ ಮುಖರ್ಜಿ ರಸ್ತೆ ಮತ್ತು ಕಾಳಿಘಾಟ್ ಪ್ರದೇಶಗಳಲ್ಲಿರುವ ಆಸ್ತಿಗಳ ಬಗ್ಗೆ ಅವರು ಉಲ್ಲೇಖ ಮಾಡಿದ್ದಾರೆ. ಇಂತಹ ಅಕ್ರಮ ಆಸ್ತಿಗಳನ್ನು ಹೊಂದಿರುವವರು ಕಠಿಣ ಕಾನೂನು ಕ್ರಮ ಮತ್ತು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ನೇರ ಎಚ್ಚರಿಕೆ ನೀಡಿದ್ದಾರೆ.

ಸುವೇಂದು ಅಧಿಕಾರಿ ಅವರ ಈ ಹೇಳಿಕೆಯು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ. ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ರಾಜಕೀಯ ಹಿಂಸಾಚಾರ ಮತ್ತು ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹಾ ಭೂಕಂಪ: ಟಿಎಂಸಿ ಬಂಡಾಯ ಸಂಸದರಿಂದ ಹೊಸ ಪಕ್ಷ ಸ್ಥಾಪನೆ, ಎನ್‌ಡಿಎ ಜೊತೆ ವಿಲೀನ ಸಾಧ್ಯತೆ

“ಕಳೆದ ಚುನಾವಣಾ ಸಂದರ್ಭಗಳಲ್ಲಿ ಬಂಗಾಳದಲ್ಲಿ ಪ್ರಜಾಪ್ರಭುತ್ವ ಎನ್ನುವುದೇ ಇರಲಿಲ್ಲ. ವಿರೋಧ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲಾಯಿತು, ಮತದಾನದ ಹಕ್ಕನ್ನು ಕಸಿಯಲಾಯಿತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಂಗಾಳದಲ್ಲಿ ಭಯದ ವಾತಾವರಣ ಮುಗಿದಿದ್ದು, ನಂಬಿಕೆಯ ಯುಗ ಆರಂಭವಾಗಿದೆ” ಎಂದರು.

ಅಕ್ರಮಗಳ ತನಿಖೆ:

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಆಡಳಿತಾತ್ಮಕ ಅಕ್ರಮಗಳು ಮತ್ತು ಭ್ರಷ್ಟಾಚಾರದ ಪ್ರತಿಯೊಂದು ಹಗರಣಗಳನ್ನೂ ಪತ್ತೆಹಚ್ಚಿ ಕಾನೂನುಬದ್ಧವಾಗಿ ಶಿಕ್ಷಿಸಲಾಗುವುದು. ಪ್ರತಿಯೊಬ್ಬರ ಲೆಕ್ಕ ಚುಕ್ತಾ ಆಗಲಿದೆ ಎಂದು ಅವರು ಗುಡುಗಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ – Kannada News | Indian Cricket Star Rohit Sharma Awarded Padma Shri for Historic Contributions

ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಶ್ವಕಪ್ ವಿಜೇತ ಬ್ಯಾಟರ್ ರೋಹಿತ್ ಶರ್ಮಾ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಶ್ರೀ’ (Padma Shri) ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ಸಂಜೆ ನಡೆದ ಭವ್ಯ ನಾಗರಿಕ ಗೌರವ ಪ್ರದಾನ ಸಮಾರಂಭದಲ್ಲಿ (Civil Investiture Ceremony) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರೋಹಿತ್ ಶರ್ಮಾಗೆ ಪ್ರಶಸ್ತಿ ನೀಡಿ ಗೌರವಿಸಿದರು. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಹೆಮ್ಮೆಯ ಕ್ಷಣವಾಗಿದೆ. ಕಳೆದ ಕೆಲವು ದಶಕಗಳಿಂದ ಭಾರತೀಯ ಕ್ರಿಕೆಟ್‌ಗೆ ರೋಹಿತ್ ನೀಡಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಪ್ರಕಟಿಸಿತ್ತು. ಅವರ ಅದ್ಭುತ ನಾಯಕತ್ವದಲ್ಲಿ ಭಾರತ ತಂಡವು 2024ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮತ್ತು 2025ರಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಎರಡರಲ್ಲೂ ಐತಿಹಾಸಿಕ ವಿಜಯ ಸಾಧಿಸಿ ಜಗತ್ತಿನಾದ್ಯಂತ ಭಾರತದ ಧ್ವಜವನ್ನು ಎತ್ತಿ ಹಿಡಿದಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version