‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ – Kannada News | KM Chaithanya remembers Aa Dinagalu movie

‘ಆ ದಿನಗಳು’ (Aa Dinagalu) ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದು. ಕನ್ನಡದಲ್ಲಿ ಒಂದು ಬಲು ಅಪರೂಪದ ಅಂಡರ್ವಲ್ಡ್ ಸಿನಿಮಾ ಎಂದರೆ ‘ಆ ದಿನಗಳು’. ಕೆಎಂ ಚೈತನ್ಯ ನಿರ್ದೇಶಿಸಿದ್ದ ಆ ಸಿನಿಮಾಕ್ಕೆ ದೊಡ್ಡ ಅಭಿಮಾನಿ ವರ್ಗವಿದೆ. ಇದೀಗ ಚೈತನ್ಯ ಅವರು ‘ಬಲರಾಮನ ದಿನಗಳು’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಬಲರಾಮನಾಗಿ ವಿನೋದ್ ಪ್ರಭಾಕರ್ ನಟಿಸಿದ್ದಾರೆ. ಸಿನಿಮಾದ ಪ್ರಚಾರಾರ್ಥ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಕೆಎಂ ಚೈತನ್ಯ ಅವರು ‘ಆ ದಿನಗಳು’ ಸಿನಿಮಾದ ನೆನಪಿಗೆ ಜಾರಿದರು. ಆ ಸಿನಿಮಾ ಕಲ್ಟ್ ಎನಿಸಿಕೊಂಡಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಧಾನಿ ಜನರೇ ಶವರ್ಮ ತಿನ್ನುವ ಮುನ್ನ ಎಚ್ಚರ: ಬೆಚ್ಚಿ ಬೀಳಿಸುವಂತಿದೆ ಆಹಾರ ಸುರಕ್ಷತಾ ಇಲಾಖೆ ರಿಪೋರ್ಟ್​​ – Kannada News | Shocking Food Safety Report: Artificial Colors Found in Bengaluru’s Shawarmas; 8 Samples Declared Unfit for Consumption

ಆಹಾರ ಸುರಕ್ಷತಾ ಇಲಾಖೆಯಿಂದ ಆಘಾತಕಾರಿ ಮಾಹಿತಿImage Credit source: Getty Images

ಬೆಂಗಳೂರು, ಜೂನ್​​ 23: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಗೆ ಬಳಸುವ ಬಣ್ಣ ಬ್ಯಾನ್ ಮಾಡಿದ್ದ ಫುಡ್ ಡಿಪಾರ್ಟ್ಮೆಂಟ್ ಇತ್ತೀಚಿಗಷ್ಟೆ ಕಬಾಬ್ಗೆ ಬಳಸುವ ಕೃತಕ ಕಲರ್​​ಗೂ ನಿಷೇಧ ಹೇರಿತ್ತು. ಬಳಿಕ ಪಾನಿಪುರಿ ಸೇರಿದ್ದಂತೆ ಇನ್ನು ಕೆಲವು ಆಹಾರ ಪಾದಾರ್ಥಗಳಲ್ಲಿ ಸನ್ಸೆಟ್ ಯೆಲ್ಲೋ, ಕಾರ್ಮೋಸಿನ್ ರಾಸಾಯನಿಕಗಳು ಇರುವುದನ್ನು ಪತ್ತೆ ಹಚ್ಚುವ ಮೂಲಕ ಮಾರಾಟಗಾರರಿಗೆ ಬಿಸಿ ಮುಟ್ಟಿಸಿತ್ತು. ಆ ಬಳಿಕ ಕೆಲ ದಿನಗಳಿಂದ ಸೈಲೆಂಟ್​​ ಆಗಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಆಹಾರ ತಯಾರಿಕೆ ವೇಳೆ ಅಶುಚಿತ್ವ ಆರೋಪ ಮತ್ತೆ ಕೇಳಿಬಂದ ಹಿನ್ನೆಲೆ ತಪಾಸಣೆ ನಡೆಸಿದಾಗ ಮತ್ತೊಂದು ಆಘಾತಕಾರಿ ವಿಷಯ ಬಯಲಾಗಿದೆ. ಶವರ್ಮಗಳಲ್ಲಿಯೂ ಕೃತಕ ಬಣ್ಣಗಳ ಬಳಕೆ ಕಂಡುಬಂದಿದೆ.

ಮುಖ್ಯಾಂಶಗಳು

  • ಅಧಿಕಾರಿಗಳ ಎಚ್ಚರಿಕೆಗೂ ವ್ಯಾಪಾರಿಗಳು ಡೋಂಟ್ ಕೇರ್
  • ಚಪ್ಪರಿಸಿ ತಿನ್ನುವ ಶವರ್ಮದಲ್ಲಿ ಕೃತಕ ಬಣ್ಣ ಬಳಕೆ ಪತ್ತೆ
  • ಆಹಾರ ಸುರಕ್ಷತಾ ಇಲಾಖೆ ಪರೀಕ್ಷೆ ವೇಳೆ ವಿಷಯ ಬಯಲು

ಹಳೆ ಮಾಂಸವನ್ನು ಬಳಸಿ ತಯಾರಿಸಿದ ಆಹಾರ ನೀಡುತ್ತಿರುವ ಆರೋಪ ಹಿನ್ನಲೆ ನಗರದ ಅನೇಕ ಕಡೆಗಳಲ್ಲಿ 39 ಶವರ್ಮಾ ಸ್ಯಾಂಪಲ್ಸ್ ಪಡೆದಿದ್ದ ಅಧಿಕಾರಿಗಳು ಆ ಪೈಕಿ 32 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಅದರಲ್ಲಿ 8 ಸ್ಯಾಂಪಲ್​​ಗಳ ವರದಿ ಬೆಚ್ಚಿಬೀಳಿಸುವಂತಿದ್ದು, ಅವು ತಿನ್ನಲೇ ಯೋಗ್ಯವಲ್ಲ ಎಂಬ ರಿಪೋರ್ಟ್​​ ಬಂದಿದೆ. ಶವರ್ಮಾ ತಯಾರಿಕೆ ವೇಳೆ ಕೃತಕ ಬಣ್ಣಗಳ ಬಳಕೆಯೂ ಬಯಲಾಗಿದೆ. ಇದರ ಜೊತೆಗೆ ಇಲಾಖೆ ಪಡೆದಿದ್ದ 19 ಕಬಾಬ್​​ ಸ್ಯಾಂಪಲ್​​ಗಳ ಪೈಕಿ 16ರ ವರದಿ ಬಂದಿದ್ದು, 2 ಮಾದರಿಗಳು ಅಸುರಕ್ಷಿತ ಎಂದು ಗೊತ್ತಾಗಿದೆ.  ಹೀಗಾಗಿ ಈ ಬಗ್ಗೆ ಕಾನೂನು ಕ್ರಮಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಕಳಪೆ ಹಾಲು; ಗಡಿಯಲ್ಲಿ ಎಫ್‌ಎಸ್‌ಎಸ್‌ಎಐ ಭರ್ಜರಿ ಕಾರ್ಯಾಚರಣೆ, 30 ಕ್ಕೂ ಹೆಚ್ಚು ವಾಹನಗಳು ಜಪ್ತಿ!

ಆಹಾರ ತಜ್ಞರ ಆತಂಕ

ಇನ್ನು ಶವರ್ಮಗಳಲ್ಲಿ ಬಳಕೆ ಮಾಡಲಾಗುತ್ತಿರುವ ಕೃತಕ ಬಣ್ಣಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಇರಲಿದ್ದು, ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಕೃತಕ ಬಣ್ಣಗಳ ಶವರ್ಮ ಸೇವನೆ ಒಳ್ಳೆಯದಲ್ಲ. ಕ್ಯಾನ್ಸರ್ ಜೊತೆಗೆ ಹೃದಯ ಸಮಸ್ಯೆ, ಅತಿಯಾದ ಬೊಜ್ಜು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದೆಂಬ ಆತಂಕವನ್ನ ಆಹಾರ ತಜ್ಞರು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ – Kannada News | What happened to Vinod Prabhakar Vinay Gowda gives health update

‘ಬಲರಾಮನ ದಿನಗಳು’ (Balaramana Dinagalu) ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಇದ್ದಕ್ಕಿದ್ದಂತೆ ನಟ ವಿನೋದ್ ಪ್ರಭಾಕರ್ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ವಿನೋದ್ ಅವರನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅವರ ಆರೋಗ್ಯ ಸಂಪೂರ್ಣ ಚೇತರಿಕೆ ಆಗಿಲ್ಲ ಎನ್ನಲಾಗುತ್ತಿದ್ದು, ಸಿನಿಮಾದ ಪ್ರಚಾರದಲ್ಲಿಯೂ ಅವರು ಭಾಗಿ ಆಗುತ್ತಿಲ್ಲ. ಇದೀಗ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ‘ಬಲರಾಮನ ದಿನಗಳು’ ಸಿನಿಮಾದ ಸಹ ನಟ ವಿನಯ್ ಗೌಡ ಅವರು ವಿನೋದ್ ಪ್ರಭಾಕರ್ ಅವರಿಗೆ ಏನಾಗಿತ್ತು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು, ಕರ್ನಾಟಕದ ಕೌಂಟರ್ ಹೇಗಿತ್ತು? ಇಲ್ಲಿದೆ ವಾದ ಪ್ರತಿವಾದ – Kannada News | CWMA not gives Any directs about Cauvery water, here Is Tamil Nadu And Karnataka argument In Meeting

ನವದೆಹಲಿ, (ಜೂನ್ 23): ಕರ್ನಾಟಕದಲ್ಲಿ ಮುಂಗಾರುಮ ಮಳೆ (Karnataka Monsoon)  ಕೈಕೊಟ್ಟಿದ್ದು, ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಇದರಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ಮಂಡ್ಯ,ಬೆಂಗಳೂರು ಭಾಗದ ಜನರ ಜೀವನಾಡಿಯಾಗಿರುವ ಕಾವೇರಿಯಲ್ಲೂ ಸಹ ನೀರಿಲ್ಲ. ಇನ್ನೊಂದೆಡೆ ತಮಿಳುನಾಡು ಮತ್ತೆ ಕಾವೇರಿ ನೀರಿಗೆ (Cauvery Water) ಖ್ಯಾತೆ ತೆಗೆದಿದ್ದು, ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ((Cauvery Water Management Authority)) ಸಭೆಯಲ್ಲಿ ಪಟ್ಟು ಹಿಡಿದಿದೆ. ಆದ್ರೆ, ಎರಡೂ ಕಡೆ ವಾದ ಆಲಿಸಿದಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಬಳಿಕ ಯಾವುದೇ ನಿರ್ದೇಶನ ನೀಡಿಲ್ಲ. ಭವಿಷ್ಯದಲ್ಲಿ ಮಳೆ ಪರಿಸ್ಥಿತಿ ನೋಡಿಕೊಂಡು ನೀರು ನೀಡುವ ಬಗ್ಗೆ ಯೋಜನೆ ಮಾಡೋಣ ಎಂದಿದೆ. ಇದರಿಂದ ಕರ್ನಾಟಕಕ್ಕೆ ರಿಲೀಫ್ ಸಿಕ್ಕಂತಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಬರಗಾಲ ಛಾಯೆ ಇದ್ರೂ ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆ
  • ಕಾವೇರಿ ನೀರಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಪಟ್ಟು
  • ಜೂನ್ ತಿಂಗಳ ಜೊತೆಗೆ ಜುಲೈ ತಿಂಗಳದ್ದು ಹರಿಸಬೇಕು ಎಂದು ತಮಿಳುನಾಡು ವಾದ
  • ವಾಡಿಕೆಯಷ್ಟು ಮಳೆಯಾಗದ ಕಾರಣ ಡ್ಯಾಮ್‌ಗೆ ನೀರು ಬರುತ್ತಿಲ್ಲ ಎಂದ ಕರ್ನಾಟಕ
  • ಅಂತಿಮವಾಗಿ ಎರಡು ಕಡೆ ವಾದ ಆಲಿಸಿ ಮುಂದೆ ನೋಡೋಣ ಎಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ.

ಕರ್ನಾಟಕದ ವಾದವೇನು?

ಇಂದು (ಜೂನ್ 23) ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು, ಕರ್ನಾಟಕ, ಪುದುಚೇರಿ, ಕೇರಳದ ಪ್ರತಿನಿಧಿಗಳು ಭಾಗಿಯಾಗಿದ್ದು, ಈ ವೇಳೆ ಕಾವೇರಿ ನೀರಿಗಾಗಿ ತಮಿಳುನಾಡು ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಕರ್ನಾಟಕದ ಅಧಿಕಾರಿಗಳು, ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗಿಲ್ಲ. ವಾಡಿಕೆಯಷ್ಟು ಮಳೆಯಾಗದ ಕಾರಣ ಡ್ಯಾಮ್‌ಗೆ ನೀರು ಬರುತ್ತಿಲ್ಲ. ಹಾಗಾಗಿ ಈಗ ನಮ್ಮ ಹತ್ತಿರ ನೀರಿಲ್ಲ. ಮಳೆ ಕೈಕೊಟ್ಟರೇ ಮುಂದಿನ ದಿನಗಳಲ್ಲಿ ಕುಡಿಯಲು ಸಹ ನೀರು ಇರಲ್ಲ. ಒಂದು ವೇಳೆ ಒಳಹರಿವು ಹೆಚ್ಚಾದರೇ ತಮಿಳನಾಡಿಗೆ ನೀರು ಹರಿಸಲಾಗುವುದು ಎಂದು ವಾದ ಮಂಡಿಸಿದೆ.

ಇದನ್ನೂ ಓದಿ: Karnataka Weather Forecast: ಕರಾವಳಿಯಲ್ಲಿ ನಾಳೆ ಮಳೆಯಬ್ಬರ, ಈ ಜಿಲ್ಲೆಗಳಲ್ಲಿಯೂ ವರ್ಷಧಾರೆಯ ನಿರೀಕ್ಷೆ

ಕಾವೇರಿ ನೀರಿಗಾಗಿ ಪಟ್ಟು ಹಿಡಿದ ತಮಿಳುನಾಡು

ಆದರೂ ಪಟ್ಟು ಬಿಡದ ತಮಿಳುನಾಡು ನೀರು ಬೇಕೇ ಬೇಕೆಂದು ಹಠಕ್ಕೆ ಬಿದ್ದಿದೆ.  ಜೂನ್ ತಿಂಗಳ 9.19 ಟಿಎಂಸಿ ನೀರು ಹರಿಸಬೇಕಿತ್ತು. ಆದ್ರೆ, ಈವರೆಗೆ ಕೇವಲ 2.6 ಟಿಎಂಸಿ ನೀರು ಮಾತ್ರ ಹರಿಸಲಾಗಿದ್ದು, ಇದರೊಂದಿಗೆ ನಾಲ್ಕು ಟಿಎಂಸಿ ನೀರು ಕಡಿಮೆ ಹರಿಸಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವ ಕರ್ನಾಟಕದ ವಾದ ಒಪ್ಪಲು ಸಾಧ್ಯವಿಲ್ಲ. ಫೆಬ್ರವರಿಯಿಂದ ಮೇ ವರೆಗೂ ಹೆಚ್ಚಿನ ನೀರು ಕರ್ನಾಟಕ ಬಳಕೆ ಮಾಡಿದೆ. ಹೀಗಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಅಷ್ಟೇ. ಇದರಿಂದಾಗಿ ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೇಲೆ ಒತ್ತಡ ಹಾಕಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದ್ದೇನು?

ಎರಡೂ ಕಡೆ ವಾದ ಆಲಿಸಿದ ಮೇಲೆ ಯಾವುದೇ ನಿರ್ದೇಶನ ನಿಡದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಭವಿಷ್ಯದಲ್ಲಿ ಮಳೆ ಪರಿಸ್ಥಿತಿ ನೋಡಿಕೊಂಡು ನೀರು ನೀಡುವ ಬಗ್ಗೆ ಯೋಜನೆ ಮಾಡೋಣ. ಒಂದು ವೇಳೆ ಉತ್ತಮ ಮಳೆಯಾದರೆ ಸುರ್ಪಿಂಕೋರ್ಟ್ ಆದೇಶದಂತೆ ನೀರು ಹರಿಸಿ ಎಂದು ಕರ್ನಾಟಕದ ಅಧಿಕಾರಿಗಳಿಗೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:35 pm, Tue, 23 June 26

Source link

ಟಿಎಂಸಿಯಲ್ಲಿ ಬಂಡಾಯ; ಫಿರ್ಹಾದ್ ಹಕೀಮ್ ಸೇರಿದಂತೆ 8 ಶಾಸಕರನ್ನು ಉಚ್ಛಾಟಿಸಿದ ಮಮತಾ ಬ್ಯಾನರ್ಜಿ – Kannada News | Mamata Banerjee expels Firhad Hakim, 7 rebel MLAs from TMC over secret meet with Ritabrata

ಕೊಲ್ಕತ್ತಾ, ಜೂನ್ 23: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಆಂತರಿಕ ಭಿನ್ನಮತ ಈಗ ತಾರಕಕ್ಕೇರಿದೆ. ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಫಿರ್ಹಾದ್ ಹಕೀಮ್ ಮತ್ತು ಅರೂಪ್ ರಾಯ್ ಸೇರಿದಂತೆ 8 ಹಿರಿಯ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಈಗ ಮತ್ತೆ ಸ್ಫೋಟಗೊಂಡಿದೆ.

ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಬಣವು ಹಿರಿಯ ನಾಯಕ ಹಾಗೂ ಕೊಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್, ಸಚಿವ ಅರೂಪ್ ರಾಯ್ ಸೇರಿದಂತೆ 8 ಬಂಡಾಯ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಚ್ಛಾಟಿಸಿದೆ. ಟಿಎಂಸಿ ನಾಯಕ ರಿತಬ್ರತಾ ಬ್ಯಾನರ್ಜಿ ಅವರೊಂದಿಗೆ ನಡೆಸಿದ ರಹಸ್ಯ ಸಭೆಯ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸೋಮವಾರ ನಡೆದಿದ್ದ ಈ ರಹಸ್ಯ ಸಭೆಯಲ್ಲಿ ಭಾಗವಹಿಸಿದ್ದ ಹಲವು ನಾಯಕರಿಗೆ ಮೊದಲು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ನಂತರ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.

ಫಿರ್ಹಾದ್ ಹಕೀಮ್ ಅವರನ್ನು ಟಿಎಂಸಿ ಪಕ್ಷದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಕೊಲ್ಕತ್ತಾದ ಬಂದರು ಪ್ರದೇಶದ ಶಾಸಕರಾಗಿರುವ ಹಕೀಮ್, 2018ರಿಂದ ಕೊಲ್ಕತ್ತಾ ಮಹಾನಗರ ಪಾಲಿಕೆಯ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಹಲವು ಪ್ರಮುಖ ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರೊಂದಿಗೆ ಹಕೀಮ್ ಅವರ ರಾಜಕೀಯ ಸಂಬಂಧವು ದಶಕಗಳಷ್ಟು ಹಳೆಯದಾಗಿದೆ. ಮತ್ತೊಬ್ಬ ಪ್ರಮುಖ ನಾಯಕ ಅರೂಪ್ ರಾಯ್ ಅವರು 2011ರಿಂದ 2026ರವರೆಗೆ ರಾಜ್ಯದ ಸಹಕಾರ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ

ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು, ಸೋಮವಾರ ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಸಮಿತಿ’ಗೆ ಹೊಸ ನಾಯಕತ್ವದ ರಚನೆಯನ್ನು ಘೋಷಿಸಿ, ಅರೂಪ್ ರಾಯ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿದ ಬೆನ್ನಲ್ಲೇ ಈ ಉಚ್ಛಾಟನೆ ನಡೆದಿದೆ. ಈ ಬಂಡಾಯ ಬಣವು 30 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (NWC) ಸಹ ರಚಿಸಿದೆ.

ಕಟ್ಟುನಿಟ್ಟಿನ ಕ್ರಮ ಕೈಗೊಂಡ ಮಮತಾ ಬಣ:

ಪಕ್ಷದ ಶಿಸ್ತು ಸಮಿತಿಯು ಈ ನಾಯಕರ ವರ್ತನೆಯನ್ನು ಗಂಭೀರ ಶಿಸ್ತು ಉಲ್ಲಂಘನೆ ಮತ್ತು ದ್ರೋಹ ಎಂದು ಪರಿಗಣಿಸಿದೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಯತ್ನಿಸಿದ ಕಾರಣಕ್ಕಾಗಿ ಫಿರ್ಹಾದ್ ಹಕೀಮ್ ಮತ್ತು ಅರೂಪ್ ರಾಯ್ ಅವರೊಂದಿಗೆ ಗುರುತಿಸಿಕೊಂಡಿದ್ದ ಇತರ ಶಾಸಕರನ್ನು ಪಕ್ಷದಿಂದ ಹೊರಹಾಕಲು ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ, ಅಭಿಷೇಕ್ ಬ್ಯಾನರ್ಜಿ ಅಮಾನತು, ಅರೂಪ್ ರಾಯ್ ಹೊಸ ಮುಖ್ಯಸ್ಥ

ಟಿಎಂಸಿ ಇತಿಹಾಸದಲ್ಲೇ ಅತಿ ದೊಡ್ಡ ಬಿಕ್ಕಟ್ಟು:

ಫಿರ್ಹಾದ್ ಹಕೀಮ್ ಅವರು ಮಮತಾ ಬ್ಯಾನರ್ಜಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಯಕರಾಗಿದ್ದರು. ಕೊಲ್ಕತ್ತಾದ ಮೇಯರ್ ಆಗಿ ಮತ್ತು ಸಚಿವರಾಗಿ ಅವರು ಪಕ್ಷದಲ್ಲಿ ಭಾರಿ ಹಿಡಿತ ಹೊಂದಿದ್ದರು. ಅಂತಹ ಹಿರಿಯ ನಾಯಕರೇ ಈಗ ಬಂಡಾಯ ಎದ್ದಿರುವುದು ಮತ್ತು ಅವರನ್ನು ಪಕ್ಷದಿಂದ ಉಚ್ಛಾಟಿಸಿರುವುದು ತೃಣಮೂಲ ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಮುಂದಿನ ರಾಜಕೀಯ ನಡೆ ಏನು?:

ಈ ಉಚ್ಛಾಟನೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಉಚ್ಛಾಟಿತ ನಾಯಕರು ಮುಂದಿನ ದಿನಗಳಲ್ಲಿ ಹೊಸ ಬಣವನ್ನು ರಚಿಸುತ್ತಾರಾ ಅಥವಾ ಪ್ರತಿಪಕ್ಷಗಳೊಂದಿಗೆ ಕೈಜೋಡಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಅವರು ತಮ್ಮ ಸರ್ಕಾರ ಮತ್ತು ಪಕ್ಷದ ಮೇಲಿನ ಹಿಡಿತವನ್ನು ಬಿಗಿಗೊಳಿಸಲು ಶಾಸಕರ ತುರ್ತು ಸಭೆಯನ್ನು ಕರೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುಎಇಯಲ್ಲಿ ಬರಲಿದೆ ಮೊದಲ ಪ್ಯಾಸೆಂಜರ್ ರೈಲು; ಮುಂದುವರಿದ ದೇಶಕ್ಕೆ ತಡವಾಗಿ ಬಂತಾ ರೈಲು? ಇಲ್ಲಿದೆ ವಾಸ್ತವ – Kannada News | UAE to start its first passenger train on 2026 June 30th

ಅಬುಧಾಬಿ, ಜೂನ್ 23: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ‘ಎತಿಹಾದ್ ರೈಲ್’ (Etihad Rail) ಪ್ಯಾಸೆಂಜರ್ ರೈಲು ಸೇವೆಯನ್ನು ಮುಂದಿನ ವಾರ (ಜೂನ್ 30) ಆರಂಭಿಸುತ್ತಿದೆ. ಯುಎಇಯಲ್ಲಿರುವ ಏಳು ಸಂಸ್ಥಾನಗಳ (ಎಮಿರೇಟ್) ಪೈಕಿ ನಾಲ್ಕನ್ನು ಸಂಪರ್ಕಿಸುವ ರೈಲು ಪ್ರಾಜೆಕ್ಟ್​ನ ಮೊದಲ ಹಂತ ಇದಾಗಿದೆ. ಈ ಆರಂಭಿಕ ಹಂತದಲ್ಲಿ ಅಬುಧಾಬಿ ಮತ್ತು ಫುಜೇರಾ ಮಧ್ಯೆ ರೈಲು ಸಂಚಾರ ಇರುತ್ತದೆ. ದುಬೈ ಹಾಗೂ ಶಾರ್ಜಾ ಸ್ಟೇಷನ್​ಗಳು ಮುಂಬರುವ ದಿನಗಳಲ್ಲಿ ಶುರುವಾಗಲಿವೆ. ದುಬೈ ಸ್ಟೇಷನ್ ಸೆಪ್ಟೆಂಬರ್ 30ರಂದು, ಮತ್ತು ಶಾರ್ಜಾ ಸ್ಟೇಷನ್ 2027ರ ಮಾರ್ಚ್ 30ರಂದು ಕಾರ್ಯಾರಂಭಗೊಳ್ಳಬಹುದು.

ಯುಎಇಯಲ್ಲಿ ಏಳು ಸಂಸ್ಥಾನಗಳಿವೆ. ದುಬೈ, ಶಾರ್ಜಾ, ಅಬುಧಾಬಿ, ಅಜ್ಮನ್, ಉಮ್ ಅಲ್ ಖುವೇನ್, ರಸ್ ಅಲ್ ಕೈಮಾಹ್, ಫುಜೇರಾಹ್ ಸಂಸ್ಥಾನಗಳು ಸೇರಿ ಯುಎಇ ಆಗಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿ ಬಹಳ ಖ್ಯಾತವಾಗಿರುವ ಸಂಸ್ಥಾನಗಳು ಮತ್ತು ನಗರಗಳು. ಸದ್ಯ ಎತಿಹಾದ್ ರೈಲು ನೆಟ್ವರ್ಕ್ ಅನ್ನು ನಾಲ್ಕು ನಗರಗಳಲ್ಲಿ ಸ್ಥಾಪಿಸಲಾಗುತ್ತಿದೆಯಾದರೂ, ಉಳಿದ ಮೂರು ಸಂಸ್ಥಾನಗಳಲ್ಲೂ ಅದರ ಅಳವಡಿಕೆ ಆಗಬಹುದು. ಅದಕ್ಕಾಗಿ ಅಧ್ಯಯನಕ್ಕೆ ಆದೇಶಿಸಿ ಸಾಧ್ಯತಾ ವರದಿಯನ್ನು ತರಿಸಿಕೊಳ್ಳುವ ಪ್ಲಾನ್ ಮಾಡಲಾಗಿದೆ.

ಸದ್ಯ ಜೂನ್ 30ರಂದು ಚಾಲನೆಗೊಳ್ಳಲಿರುವ ರೈಲು ನೆಟ್ವರ್ಕ್​ನಲ್ಲಿ 13 ರೈಲುಗಳಿರುತ್ತವೆ. ಪ್ರತಿಯೊಂದು ರೈಲಿನಲ್ಲೂ 400 ಪ್ರಯಾಣಿಕರು ಕೂರಬಹುದು.

ಪ್ಯಾಸೆಂಜರ್ ರೈಲು ವ್ಯವಸ್ಥೆ ಯುಎಇಯಲ್ಲಿ ತಡವಾಗಿ ಬರಲು ಏನು ಕಾರಣ?

ಭಾರತದಂತಹ ದೇಶಗಳಲ್ಲಿ ಶತಮಾನದ ಹಿಂದೆಯೇ ಪ್ಯಾಸೆಂಜರ್ ರೈಲು ವ್ಯವಸ್ಥೆ ನಿರ್ಮಾಣವಾಗಿತ್ತು. ಆದರೆ, ಬಹಳ ಮುಂದುವರಿದಿರುವ ಮತ್ತು ಶ್ರೀಮಂತವಾಗಿರುವ ಗಲ್ಫ್ ದೇಶವಾದ ಯುಎಇಯಲ್ಲಿ ಇದು ಬರಲು ಇಷ್ಟು ಸಮಯ ಯಾಕೆ ಎನ್ನುವ ಪ್ರಶ್ನೆ ಕೆಲವರಿಗೆ ಉದ್ಭವಿಸಬಹುದು. ಗಮನಿಸಬೇಕಾದ ಸಂಗತಿ ಎಂದರೆ, ಇದು ತಂತ್ರಜ್ಞಾನ ಅಳವಡಿಕೆಯಲ್ಲಿ ಉಂಟಾದ ವಿಳಂಬವಲ್ಲ (Delayed), ಬದಲಿಗೆ ಅತ್ಯಂತ ವ್ಯವಸ್ಥಿತವಾಗಿ ಯೋಜಿಸಲಾದ ಹಂತ-ಹಂತದ ಅಭಿವೃದ್ಧಿಯಾಗಿದೆ (Planned Development).

ಇದನ್ನೂ ಓದಿ: ರೇವತಿ ಅದ್ವೈತಿಯಿಂದ ಹಿಡಿದು ಸುಂದರ್ ಪಿಚೈವರೆಗೆ ಜಾಗತಿಕ ದೈತ್ಯ ಸಂಸ್ಥೆಗಳ ಚುಕ್ಕಾಣಿ ಹಿಡಿದ ಭಾರತೀಯರು; ಈಗ ಕುನಾಲ್ ಹೊಸ ಸೇರ್ಪಡೆ

ಯುಎಇ ಮೊದಲಿನಿಂದಲೂ ರಸ್ತೆ ಮತ್ತು ವಾಯು ಸಾರಿಗೆಗೆ ಅತಿ ಹೆಚ್ಚು ಒತ್ತು ನೀಡಿದ್ದರಿಂದ, ಇಡೀ ದೇಶವನ್ನು ಸಂಪರ್ಕಿಸುವ ರೈಲ್ವೆ ಜಾಲವನ್ನು ನಿರ್ಮಿಸಲು ದೀರ್ಘಕಾಲದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿತ್ತು. ಆ ದೇಶಾದ್ಯಂತ ಈಗಾಗಲೇ ರಸ್ತೆ ಮತ್ತು ವಾಯು ಪ್ರದೇಶದಲ್ಲಿ ಬಹಳ ವ್ಯವಸ್ಥಿತವಾದ ಸಾಗಣೆ ವ್ಯವಸ್ಥೆ ಇದೆ. ಸರಕು ಸಾಗಣೆಗೆ ರೈಲಿನ ಬಳಕೆ ಹಲವು ವರ್ಷಗಳ ಹಿಂದೆಯೇ ಶುರುವಾಗಿದೆ. ಮೆಟ್ರೋ ರೈಲುಗಳು ಪ್ರತೀ ನಗರದೊಳಗೆ ಇದೆ. ಈಗ ವಿವಿಧ ಸಂಸ್ಥಾನಗಳನ್ನು ಸಂಪರ್ಕಿಸುವ ಪ್ಯಾಸೆಂಜರ್ ರೈಲು ನೆಟ್ವರ್ಕ್ ಅಳವಡಿಕೆ ಆಗುತ್ತಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯ ಸಂಪೂರ್ಣ ವಿವರಗಳು ಮತ್ತು ಅದು ಜಾರಿಯಾಗುತ್ತಿರುವ ಹಂತಗಳು ಇಲ್ಲಿವೆ:

ಯೋಜನೆ ವಿಳಂಬವಲ್ಲ, ಹಂತ-ಹಂತದ ಜಾರಿ ಏಕೆ?

ಯುಎಇ ತನ್ನ ಇಡೀ ರೈಲ್ವೆ ಯೋಜನೆಯನ್ನು ಸುರಕ್ಷತೆ ಮತ್ತು ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮೂರು ಪ್ರಮುಖ ಹಂತಗಳಲ್ಲಿ ರೂಪಿಸಿದೆ.

ಮೊದಲ ಹಂತ (ಸರಕು ಸಾಗಣೆ): 2016 ರಿಂದಲೇ ಯುಎಇಯಲ್ಲಿ ಕಚ್ಚಾ ವಸ್ತುಗಳು ಮತ್ತು ಗಂಧಕದಂತಹ ಸರಕುಗಳನ್ನು ಸಾಗಿಸಲು ರೈಲ್ವೆ ಹಳಿಗಳನ್ನು ಬಳಸಲಾಗುತ್ತಿದೆ. 2023 ರಲ್ಲಿ ಇದರ ವ್ಯಾಪ್ತಿಯನ್ನು 900 ಕಿಲೋಮೀಟರ್‌ಗೆ ವಿಸ್ತರಿಸಲಾಯಿತು.

ಎರಡನೇ ಹಂತ (ಪ್ರಾಯೋಗಿಕ ಸಂಚಾರ): 2026 ರ ಆರಂಭದಲ್ಲಿ ದೇಶದ ನಿವಾಸಿಗಳನ್ನು ಒಳಗೊಂಡಂತೆ ಯಶಸ್ವಿ ಪ್ರಾಯೋಗಿಕ ಸಂಚಾರ (Trials) ನಡೆಸಿದ ಬಳಿಕವೇ ಈಗ ವಾಣಿಜ್ಯ ಬಳಕೆಗೆ ಹಸಿರು ನಿಶಾನೆ ನೀಡಲಾಗಿದೆ.

ಮೂರನೇ ಹಂತ (ಹಂತ-ಹಂತದ ನಿಲ್ದಾಣಗಳ ಉದ್ಘಾಟನೆ): ಜೂನ್ 30 ರಂದು ಇಡೀ ದೇಶದಲ್ಲಿ ಒಂದೇ ಬಾರಿಗೆ ರೈಲು ಆರಂಭಿಸುತ್ತಿಲ್ಲ. ಹಂತ-ಹಂತವಾಗಿ ವಿವಿಧ ನಗರಗಳನ್ನು ಜೋಡಿಸಲಾಗುತ್ತಿದೆ:

  • ಜೂನ್ 30, 2026: ಮೊದಲ ಹಂತವಾಗಿ ಅಬುಧಾಬಿ (ಮೊಹಮ್ಮದ್ ಬಿನ್ ಜಾಯೆದ್ ಸಿಟಿ) ಮತ್ತು ಫುಜೈರಾ ನಡುವೆ ಸಂಚಾರ ಆರಂಭ. (ರಸ್ತೆ ಮಾರ್ಗದಲ್ಲಿ 3 ಗಂಟೆ ತಗಲುವ ಪ್ರಯಾಣ ಕೇವಲ 1 ಗಂಟೆ 45 ನಿಮಿಷಕ್ಕೆ ಇಳಿಯಲಿದೆ).
  • ಸೆಪ್ಟೆಂಬರ್ 30, 2026: ದುಬೈ ಮತ್ತು ಅಲ್ ಧೈದ್ ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ.
  • ಡಿಸೆಂಬರ್ 30, 2026: ಅಲ್ ದಫ್ರಾ ನಿಲ್ದಾಣ ಮುಕ್ತಾಯ.
  • ಮಾರ್ಚ್ 30, 2027: ಶಾರ್ಜಾ ಮುಖ್ಯ ನಿಲ್ದಾಣ ಆರಂಭವಾಗಲಿದೆ.

ಇದನ್ನೂ ಓದಿ: ಚ್ಯಾಟ್ ಜಿಪಿಟಿಯಲ್ಲಿ ಕೇಳಬಾರದ ಒಂದು ಪ್ರಶ್ನೆ ಯಾವುದು? ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಉತ್ತರ ಕೇಳಿ

ರೈಲಿನ ಪ್ರಮುಖ ವೈಶಿಷ್ಟ್ಯಗಳು ಮತ್ತು ದರಗಳು

  • ವೇಗ ಮತ್ತು ಸಾಮರ್ಥ್ಯ: ಈ ರೈಲುಗಳು ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲವು. ಒಟ್ಟು 13 ರೈಲುಗಳಿದ್ದು, ಪ್ರತಿಯೊಂದು ರೈಲು 400 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
  • ಸೌಲಭ್ಯಗಳು: ರೈಲಿನಲ್ಲಿ ಉಚಿತ ವೈ-ಫೈ, ಪ್ರತಿಯೊಂದು ಸೀಟಿಗೂ ಚಾರ್ಜಿಂಗ್ ಪೋರ್ಟ್‌ಗಳು, ವಿಶಾಲವಾದ ಲೆಗ್‌ರೂಮ್, ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ವಿಶೇಷ ಫ್ಯಾಮಿಲಿ ಕ್ಯಾಬಿನ್‌ಗಳಿವೆ.
  • ಟಿಕೆಟ್ ದರ: ಆರಂಭಿಕ ಅಬುಧಾಬಿ-ಫುಜೈರಾ ಮಾರ್ಗಕ್ಕೆ ಸಾಮಾನ್ಯ ತರಗತಿಗೆ (Comfort Class) 55 ದಿರ್ಹಾಮ್ (ಸುಮಾರು ₹1,250) ಮತ್ತು ಪ್ರೀಮಿಯಂ ತರಗತಿಗೆ 120 ದಿರ್ಹಾಮ್ (ಸುಮಾರು ₹2,720) ನಿಗದಿಪಡಿಸಲಾಗಿದೆ. ಜೂನ್ 23 ರಿಂದಲೇ ಬುಕಿಂಗ್ ಆರಂಭವಾಗಿದೆ.
  • ಜಾಗತಿಕ ಕನೆಕ್ಟಿವಿಟಿ ಪ್ಲಾನ್: ಯುಎಇಯ ಈ ರಾಷ್ಟ್ರೀಯ ರೈಲ್ವೆ ಜಾಲವು ಭವಿಷ್ಯದಲ್ಲಿ ಕೇವಲ ಯುಎಇಗೆ ಮಾತ್ರ ಸೀಮಿತವಾಗಿರದೆ, ಒಮಾನ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಇಡೀ ಗಲ್ಫ್ (GCC) ದೇಶಗಳನ್ನು ಪರಸ್ಪರ ಜೋಡಿಸುವ ಬೃಹತ್ ಯೋಜನೆಯ ಒಂದು ಭಾಗವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತೇ? – Kannada News | Why don’t Jain monks wear clothes? What is the reason behind this?

ಸಾಮಾನ್ಯವಾಗಿ ಸಾಧು, ಸಂತರು, ಸನ್ಯಾಸಿಗಳು (monks) ಕೇಸರಿ ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಜೈನ ಧರ್ಮದಲ್ಲಿನ ದಿಗಂಬರ ಸನ್ಯಾಸಿಗಳು ಬಟ್ಟೆಗಳನ್ನು ಧರಿಸುವುದೇ ಇಲ್ಲ. ಶಾಂತಿ ಮತ್ತು ಅಹಿಂಸೆಯ ತತ್ವವನ್ನು ಪಾಲಿಸುವ ಮೂಲಕ ಕಠಿಣ ನಿಯಮದ, ಶಿಸ್ತಿನ ಜೀವನ ನಡೆಸುವ ದಿಗಂಬರ ಸನ್ಯಾಸಿಗಳು ಮೈ ಮೇಲೆ ಬಟ್ಟೆಗಳನ್ನು ಧರಿಸುವುದಿಲ್ಲ. ಶ್ವೇತಾಂಬರ ಪಂಥದ ಸನ್ಯಾಸಿಗಳು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ದಿಗಂಬರ ಜೈನ ಸನ್ಯಾಸಿಗಳು ತುಂಡು ಬಟ್ಟೆಯನ್ನು ಸಹ ಧರಿಸುವುದಿಲ್ಲ. ಇದು ಕೇವಲ ಸಂಪ್ರದಾಯದ ಒಂದು ಭಾಗವೇ? ಇದರ ಹಿಂದೆ ದೊಡ್ಡ ಕಾರಣವಿದೆಯೇ? ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ?

ದಿಗಂಬರ ಪಂಥದಲ್ಲಿ ಬಟ್ಟೆ ತ್ಯಜಿಸುವುದನ್ನು “ಅಪರಿಗ್ರಹ”ದ ಅಂತಿಮ ತತ್ವವೆಂದು ಪರಿಗಣಿಸಲಾಗುತ್ತದೆ. ದಿಗಂಬರ ಜೈನ ಮುನಿಗಳಿಗೆ ನಾಲ್ಕು ದಿಕ್ಕುಗಳೇ ಅವರ ಬಟ್ಟೆಗಳಂತೆ. ಒಂದು ನಿರ್ದಿಷ್ಟ ಉಡುಪಿನಲ್ಲಿ ತಮ್ಮನ್ನು ತಾವು ಕಟ್ಟಿಕೊಳ್ಳುವ ಬದಲು, ಅವರು ಇಡೀ ಜಗತ್ತನ್ನು ಮತ್ತು ಆಕಾಶವನ್ನು  ತಮ್ಮ ಬಟ್ಟೆಯೆಂದು ಪರಿಗಣಿಸುತ್ತಾರೆ. ಅವರಿಗೆ, ದೇವರು ಸೃಷ್ಟಿಸಿದ ಪ್ರಕೃತಿಯೇ ಅವರ ಮನೆ ಮತ್ತು ಬಟ್ಟೆ. ದಿಗಂಬರ ಸನ್ಯಾಸಿಗಳ ದಿನಚರಿ ಕಠಿಣವಾಗಿರುತ್ತದೆ. ಎಷ್ಟೇ ಚಳಿ ಇದ್ದರೂ ಸರಿ ಯಾವುದೇ ಋತುವಿನಲ್ಲೂ ಅವರು ಬಟ್ಟೆ ಧರಿಸುವುದೇ ಇಲ್ಲ. ಅವರು ಬರೀ ಪಿಂಚಿಕಾ ಅಂದರೆ ನವಿಲು ಗರಿಗಳ ಒಂದು ಗುಚ್ಛವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾರೆ.  ದಿಗಂಬರ ಜೈನ ಸನ್ಯಾಸಿಗಳು ತಮ್ಮ ಮನಸ್ಸುಗಳು ಮತ್ತು ಜೀವನಗಳು ಕಲ್ಮಶಗಳಿಂದ ಮುಕ್ತವಾಗಿವೆ ಎಂದು ನಂಬುತ್ತಾರೆ ಮತ್ತು ಆದ್ದರಿಂದ ಅವರು ಬಟ್ಟೆಗಳನ್ನು ಧರಿಸುವುದಿಲ್ಲ.

ವಾಸ್ತವವಾಗಿ, ಜೈನ ಸನ್ಯಾಸಿಗಳು ಎಲ್ಲಾ ಲೌಕಿಕ ಆಸ್ತಿಗಳನ್ನು ತ್ಯಜಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ದುರ್ಗುಣಗಳಿಂದ ಸುತ್ತುವರೆದಿರುವಾಗ ಬಟ್ಟೆಗಳು ಬೇಕಾಗುತ್ತವೆ ಎಂದು ದಿಗಂಬರ ಸನ್ಯಾಸಿಗಳು ನಂಬುತ್ತಾರೆ. ಅವರ ಪ್ರಕಾರ, ಬಟ್ಟೆಗಳು ದುರ್ಗುಣಗಳನ್ನು ಮರೆಮಾಡಲು ಒಂದು ಸಾಧನವಾಗಿದೆ. ದಿಗಂಬರ ಸನ್ಯಾಸಿಗಳು ತಮ್ಮ ಹೃದಯದಲ್ಲಿ ಯಾವುದೇ ದುಷ್ಟತನವಿಲ್ಲ ಎಂದು ನಂಬುತ್ತಾರೆ, ದಿಗಂಬರ ಜೈನ ಪಂಥದ ಪ್ರಕಾರ, ಪ್ರಪಂಚದ ಬಟ್ಟೆಗಳು ಮತ್ತು ಎಲ್ಲಾ ವಸ್ತುಗಳು ಮೋಕ್ಷವನ್ನು ಪಡೆಯುವ ಹಾದಿಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತವೆ, ಆದ್ದರಿಂದ ಅವರು ನಾಲ್ಕು  ದಿಕ್ಕುಗಳನ್ನೇ ತಮ್ಮ ಬಟ್ಟೆಗಳೆಂದು ಪರಿಗಣಿಸಿದ್ದಾರೆ.

ಸರಳ, ನಿಷ್ಕಳಂಕ ಜೀವನ: ಜೈನ ಧರ್ಮಗ್ರಂಥಗಳ ಪ್ರಕಾರ, ಮೋಕ್ಷವನ್ನು ಪಡೆಯಲು, ಒಬ್ಬರು ಹುಟ್ಟಿನಿಂದಲೇ ಮುಗ್ಧ ಮಗುವಿನಂತೆ ಸರಳ ಮತ್ತು ಮುಗ್ಧರಾಗಿರಬೇಕು. ಚಿಕ್ಕ ಮಗು ಬಟ್ಟೆಯಿಲ್ಲದೆ ಮುಗ್ಧವಾಗಿ ಮತ್ತು ದುರ್ಗುಣಗಳಿಂದ ಮುಕ್ತವಾಗಿರುತ್ತದೆ. ಅದೇ ರೀತಿ, ಸನ್ಯಾಸಿಗಳು ಸಹ ಸರಳವಾಗಿರಬೇಕು, ನಾಚಿಕೆ ಮತ್ತು ಲೌಕಿಕತೆಯ ಬಂಧಗಳನ್ನು ಮುರಿಯಬೇಕು, ಇದಕ್ಕಾಗಿಯೂ ದಿಗಂಬ ಮುನಿಗಳು ಬಟ್ಟೆ ಧರಿಸುವುದಿಲ್ಲ.

ಇದನ್ನೂ ಓದಿ: ಮರಣ ಹೊಂದಿದ ವ್ಯಕ್ತಿಯ ಮೂಗಿಗೆ ಹತ್ತಿಯನ್ನಿಡುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿಯಿರಿ

ಅನಾಸಕ್ತಿ: ಜೈನ ಧರ್ಮದಲ್ಲಿ ಅನಾಸಕ್ತಿ ಮುಖ್ಯ. ಅಂದರೆ ಏನನ್ನೂ ಸಂಗ್ರಹಿಸದಿರುವುದು. ನಿಜವಾದ ಜ್ಞಾನಿಗೆ ಈ ಜಗತ್ತಿನ ಯಾವುದೇ ವಸ್ತುವಿನ ಮೇಲೆಯೂ ಆಸಕ್ತಿ ಇರುವುದಿಲ್ಲ. ಬಟ್ಟೆಗಳನ್ನು ಧರಿಸಿದರೆ, ಅವುಗಳನ್ನು ಒಗೆಯುವುದು, ಒಣಗಿಸುವುದು ಮತ್ತು ಅವುಗಳನ್ನು ಕ್ರಮವಾಗಿ ಇಡುವುದು ಹೇಗೆ ಎಂದು ಯೋಚಿಸುತ್ತಾನೆ. ಈ ಎಲ್ಲಾ ವಸ್ತುಗಳು ಮತ್ತು ಪ್ರಲೋಭನೆಗಳಿಂದ ದೂರವಿರಲು, ಜೈನ ಮುನಿಗಳು ಬಟ್ಟೆಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ.

ಅಹಿಂಸೆ: ಜೈನ ಮುನಿಗಳು ಅಹಿಂಸೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಬಟ್ಟೆಗಳಲ್ಲಿ ಬೆವರು ಅಥವಾ ತೇವಾಂಶವಿದ್ದರೆ, ಸಣ್ಣ ಕೀಟಗಳು ಅಥವಾ ಸೂಕ್ಷ್ಮ ಜೀವಿಗಳು ಸೃಷ್ಟಿಯಾಗಬಹುದು, ಆ ಬಟ್ಟೆಗಳನ್ನು ತೊಳೆದಾಗ, ಆ ಮುಗ್ಧ ಜೀವಿಗಳು ಸಾಯಬಹುದು. ಕೊಲ್ಲುವ ಈ ಪಾಪವನ್ನು ತಪ್ಪಿಸಲು, ದಿಗಂಬರ ಮುನಿಗಳು ಬಟ್ಟೆಗಳನ್ನು ಧರಿಸುವುದಿಲ್ಲ.

ಶೀತ ಮತ್ತು ಶಾಖವನ್ನು ಜಯಿಸುವುದು: ಬಟ್ಟೆ ಇಲ್ಲದೆ ಬದುಕುವುದು ಸರಳ ವಿಷಯವಲ್ಲ. ಇದು ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಡುತ್ತದೆ. ಜೈನ ಮುನಿಗಳು ಇದರ ಮೂಲಕ ತಮ್ಮನ್ನು ತಾವು ಬಲಪಡಿಸಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯ ಮನಸ್ಸು ಬಲವಾಗಿದ್ದರೆ, ನಡವಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದು ಅವರು ನಂಬುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:41 pm, Tue, 23 June 26

Source link

ಕಾರವಾರ-ಬಳ್ಳಾರಿಯಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ರೆಡ್ ಹ್ಯಾಂಡ್ ಲಾಕ್ – Kannada News | Karnataka Lokayukta Cracks Down: Bribe Taking Officials and Illegal Assets Exposed

ಕಾರವಾರ, ಜೂ.23: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಬೇಟೆಯನ್ನು ತೀವ್ರಗೊಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಲಂಚ ಪಡೆಯುತ್ತಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದರೆ, ಇತ್ತ ಬಳ್ಳಾರಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ.

ಮುಂಡಗೋಡಿನಲ್ಲಿ ಇಬ್ಬರು ಅಧಿಕಾರಿಗಳು ರೆಡ್ ಹ್ಯಾಂಡ್ ಲಾಕ್

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಎರಡು ಪ್ರತ್ಯೇಕ ಕಚೇರಿಗಳ ಮೇಲೆ ಕಾರವಾರ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ಧಾರವಾಡ ಮತ್ತು ಕಾರವಾರದ ಡಿವೈಎಸ್‌ಪಿ ಒಳಗೊಂಡ ಜಂಟಿ ತಂಡ ಭರ್ಜರಿ ದಾಳಿ ನಡೆಸಿದೆ. ಹೆಸ್ಕಾಂ ಇಂಜಿನಿಯರ್ ಧರ್ಮರಾಜ್ ಬೆಡಸಗಾಂವ್ ಎಂಬಾತ ಗುತ್ತಿಗೆದಾರ ಶಿವಯೋಗಿ ಕೂಡಲಮಠ ಎಂಬವರಿಂದ 65,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನಾರಾಯಣ ಅರೆಜೋಗಿ ಎಂಬುವರು ನಿರ್ಮಿಸುತ್ತಿದ್ದ ಫಾರ್ಮ್ ಹೌಸ್ ಲೈಸನ್ಸ್ ಮಾಡಿಕೊಡಲು 15,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಬಸವರಾಜ್ ಬಿಸ್ನಾಳ ಎಂಬಾತ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಬಳ್ಳಾರಿಯಲ್ಲಿ ಆರ್‌ಡಿಪಿಆರ್ ಇಂಜಿನಿಯರ್‌ಗೆ ಲೋಕಾ ಶಾಕ್

ಬಳ್ಳಾರಿ ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಸಿರುಗುಪ್ಪ ತಾಲೂಕಿನ RDPR ಇಲಾಖೆಯ AEE ವ್ಯಾಸಗಾರ ತಿಪ್ಪೇಸ್ವಾಮಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಭರ್ಜರಿ ದಾಳಿ ನಡೆಸಲಾಗಿದೆ. ಬಳ್ಳಾರಿಯ ಹನುಮಾನ್ ನಗರ ಮತ್ತು ಕುಡಿತಿನಿ ಪಟ್ಟಣದ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ಇದನ್ನೂ ಓದಿ:ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?: ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​!

ಲೋಕಾ ದಾಳಿಯಲ್ಲಿ ಪತ್ತೆಯಾದ ಅಕ್ರಮ ಆಸ್ತಿ ವಿವರ:

ಮನೆಯಲ್ಲಿ 300 ಗ್ರಾಂ ಚಿನ್ನದ ಆಭರಣ ಹಾಗೂ 800 ಗ್ರಾಂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಇಂಜಿನಿಯರ್ ಒಡೆತನದ ಒಟ್ಟು 6 ನಿವೇಶನಗಳ (Sites) ಪ್ರಮುಖ ದಾಖಲೆಗಳು ಲಭ್ಯವಾಗಿವೆ. ಮನೆಯಲ್ಲಿ 1 ಲಕ್ಷ ರೂಪಾಯಿ ನಗದು ಸಿಕ್ಕಿದ್ದು, ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ತಕ್ಷಣವೇ ಫ್ರೀಜ್ ಮಾಡಿದ್ದಾರೆ. ಮನೆಗಳ ಮೇಲಿನ ದಾಳಿಯ ಬೆನ್ನಲ್ಲೇ ಇಬ್ಬರು ಸಿಪಿಐ ನೇತೃತ್ವದ ತಂಡವು ಸಿರುಗುಪ್ಪ ನಗರದಲ್ಲಿರುವ ಆರ್‌ಡಿಪಿಆರ್ ಕಚೇರಿ ಮೇಲೂ ದಾಳಿ ನಡೆಸಿ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಡತಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಸ್ತ್ರಚಿಕಿತ್ಸೆಯ ಪಿತಾಮಹ ಸುಶ್ರುತರಿಗೆ ಸ್ಕಾಟ್ಲೆಂಡ್‌ನಲ್ಲಿ ಗೌರವ; ರಾಯಲ್ ಕಾಲೇಜ್‌ನಲ್ಲಿ ಪ್ರತಿಮೆ ಅನಾವರಣ – Kannada News | Sushruta’s Legacy Celebrated with Statue Installation in Scotland

Father Of Surgery Sushruta Honoured In ScotlandImage Credit source: News Algebra X account

ಆಚಾರ್ಯ ಸುಶ್ರುತರು ಪ್ರಾಚೀನ ಭಾರತದ ಶ್ರೇಷ್ಠ ವೈದ್ಯ ಮತ್ತು ಶಸ್ತ್ರಚಿಕಿತ್ಸಕರು. ಇವರನ್ನು ಪ್ರಪಂಚದ “ಶಸ್ತ್ರಚಿಕಿತ್ಸೆಯ ಪಿತಾಮಹ” (Father of Surgery) ಮತ್ತು “ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ” ಎಂದು ಕರೆಯಲಾಗುತ್ತದೆ. ಈಗ ಸುಶ್ರುತ ಅವರಿಗೆ ಸ್ಕಾಟ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರಾ ಸಂಸ್ಥೆಯಲ್ಲಿ 90 ಕೆಜಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ವಿಶೇಷ ಗೌರವ ಸಲ್ಲಿಸಲಾಗಿದೆ. ಅಷ್ಟೇಅಲ್ಲ, ಪ್ರತಿಮೆ ಅನಾವರಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಪ್ರತಿಮೆ ಅನಾವರಣವು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಸುಶ್ರುತರು ನೀಡಿದ ಅಪಾರ ಕೊಡುಗೆಯನ್ನು ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಸ್ಮರಿಸುವ ಮಹತ್ವದ ಕ್ಷಣವಾಗಿದೆ.

ಸುಶ್ರುತ ಯಾರು?

ಸುಶ್ರುತರು ಕ್ರಿ.ಪೂ. 6ನೇ ಶತಮಾನದ ಅವಧಿಯಲ್ಲಿ ಬದುಕಿದ್ದರೆಂದು ಇತಿಹಾಸಕಾರರು ನಂಬುತ್ತಾರೆ. ಅವರು ರಚಿಸಿದ “ಸುಶ್ರುತ ಸಂಹಿತೆ” ವಿಶ್ವದ ಅತ್ಯಂತ ಪ್ರಾಚೀನ ವೈದ್ಯಕೀಯ ಗ್ರಂಥಗಳಲ್ಲಿ ಒಂದಾಗಿದೆ. ಈ ಗ್ರಂಥದಲ್ಲಿ 300ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ವಿಧಾನಗಳು, 120ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ಉಪಕರಣಗಳ ವಿವರಣೆ ಹಾಗೂ ದೇಹದ ರಚನೆ ಬಗ್ಗೆ ವಿವರವಾದ ಮಾಹಿತಿಯನ್ನು ದಾಖಲಿಸಲಾಗಿದೆ. ಅಲ್ಲದೆ ಇವರು ರಚಿಸಿದ ವಿಶ್ವಪ್ರಸಿದ್ಧ ವೈದ್ಯಕೀಯ ಗ್ರಂಥ. ಆಯುರ್ವೇದದ ಪ್ರಮುಖ ಮೂರು ಗ್ರಂಥಗಳಲ್ಲಿ (ಬೃಹತ್-ತ್ರಯಿ) ಇದೂ ಒಂದಾಗಿದ್ದು, ಶಸ್ತ್ರಚಿಕಿತ್ಸೆಯ ಬಗ್ಗೆ ಇರುವ ಅತ್ಯಂತ ಹಳೆಯ ಮತ್ತು ಅಧಿಕೃತ ಪಠ್ಯವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮಾನವನ ದೇಹರಚನೆಯನ್ನು ಕಲಿಯಲು ಶವಗಳನ್ನು ಪರೀಕ್ಷಿಸಬೇಕು (Dissection) ಎಂದು ಪ್ರಪಂಚದಲ್ಲಿಯೇ ಮೊದಲು ಪ್ರತಿಪಾದಿಸಿದವರಲ್ಲಿ ಇವರು ಪ್ರಮುಖರು.

ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರಾದಲ್ಲಿ ಸುಶ್ರುತರ ಪ್ರತಿಮೆ ಅನಾವರಣಗೊಂಡ ದೃಶ್ಯಗಳು.

ಯಾಕೆ ಪ್ರತಿಮೆ ಅನಾವರಣ ಮಾಡಲಾಗಿದೆ?

ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರಾ ಸಂಸ್ಥೆಯು ಸುಶ್ರುತರನ್ನು ಗೌರವಿಸುವ ಮೂಲಕ ಆಧುನಿಕ ಶಸ್ತ್ರಚಿಕಿತ್ಸೆಯ ಬೆಳವಣಿಗೆಯಲ್ಲಿ ಅವರ ಐತಿಹಾಸಿಕ ಪಾತ್ರವನ್ನು ಗುರುತಿಸಿದೆ. ವೈದ್ಯಕೀಯ ಇತಿಹಾಸದಲ್ಲಿ ಸುಶ್ರುತರ ಕೊಡುಗೆ ವಿಶ್ವವ್ಯಾಪಿ ಮಾನ್ಯತೆ ಪಡೆದಿದ್ದು, ವಿಶೇಷವಾಗಿ ರೈನೋಪ್ಲ್ಯಾಸ್ಟಿ ಅಂದರೆ ಮೂಗಿನ ಪ್ಲಾಸ್ಟಿಕ್ ಸರ್ಜರಿ (Rhinoplasty) ಸೇರಿದಂತೆ ಹಲವು ಶಸ್ತ್ರಚಿಕಿತ್ಸಾ ತಂತ್ರಗಳು ಇಂದಿನ ವೈದ್ಯಕೀಯ ವಿಜ್ಞಾನಕ್ಕೂ ಪ್ರೇರಣೆಯಾಗಿವೆ.

ಭಾರತದ ವೈದ್ಯಕೀಯ ಪರಂಪರೆಗೆ ಜಾಗತಿಕ ಗೌರವ

ಸುಶ್ರುತನ ಪ್ರತಿಮೆ ಅನಾವರಣವು ಕೇವಲ ಒಬ್ಬ ವೈದ್ಯರಿಗೆ ಸಲ್ಲಿಸಿದ ಗೌರವವಲ್ಲ; ಇದು ಭಾರತದ ಸಾವಿರಾರು ವರ್ಷಗಳ ವೈದ್ಯಕೀಯ ಪರಂಪರೆ ಮತ್ತು ವೈಜ್ಞಾನಿಕ ಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ದೊರೆತ ಮನ್ನಣೆಯಾಗಿದೆ. ಈ ಬೆಳವಣಿಗೆ ಭಾರತೀಯ ವೈದ್ಯಕೀಯ ಇತಿಹಾಸದ ಮಹತ್ವವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಎತ್ತಿಹಿಡಿದಿದ್ದು, ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆ ಎಷ್ಟು ಆಳವಾಗಿದೆ ಎಂಬುದನ್ನು ಸ್ಮರಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್​​​​ ಸಂಘಟನೆಗಳ ಜೊತೆ ನಂಟು, ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್! – Kannada News | One more Uttara Pradesh Based suspected Terrorist Arrested In Davanagere, allegedly he linked to terror outfit

ದಾವಣಗೆರೆ, (ಜೂನ್ 23): ಬೆಣ್ಣೆನಗರಿ ದಾವಣಗೆರೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನವಾಗಿದೆ. ಪಾಕಿಸ್ತಾನ ಉಗ್ರ ಸಂಘಟನೆಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಉತ್ತರ ಪ್ರದೇಶ ಮೂಲದ ಸುಯೇಲ್ (20) ಬಂಧಿತ ಶಂಕಿತ ಉಗ್ರ. ಹರಿಹರದ ಪಕ್ಕದಲ್ಲಿರುವ ಕಾರ್ಖಾನೆಯೊಂದಕ್ಕೆ‌ ಕೆಲಸಕ್ಕೆ ಬಂದಿದ್ದ ಸುಯೇಲ್, ಇನ್ಟಾಗ್ರಾಂ ನಲ್ಲಿ ಪಾಕಿಸ್ತಾನದ ಉಗ್ರರ ಜೊತೆ ನಿರಂತರವಾಗಿ ಸಂಪರ್ಕ ದಲ್ಲಿ ಇದ್ದ ಎನ್ನಲಾಗಿದೆ. ಸುಯೇಲ್ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಿದ್ದ ಕೇಂದ್ರ ಗುಪ್ತಚರ ಇಲಾಖೆ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡದೊಂದಿಗೆ ಕಾರ್ಯಚರಣೆ ನಡೆಸಿ ಬಂಧಿಸಿದೆ.

ಮುಖ್ಯಾಂಶಗಳು

  • ದಾವಣಗೆರೆ ಜಿಲ್ಲೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ
  • ಹರಿಹರ ನಗರದಲ್ಲಿ ವಾಸವಿದ್ದ ಯುಪಿ ಮೂಲದ ಸುಹೇಲ್(20) ಅರೆಸ್ಟ್‌
  • ಇನ್ಸ್ಟಾಗ್ರಾಂನಲ್ಲಿ  ಪಾಕಿಸ್ತಾನ ಉಗ್ರ ಸಂಘಟನೆಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ
  • ಹರಿಹರ ಬಳಿಯ ಕಾರ್ಖಾನೆಯೊಂದಕ್ಕೆ‌ ಕೆಲಸಕ್ಕೆ ಬಂದಿದ್ದ ಸುಹೇಲ್

ಕಳೆದ ಒಂದು ತಿಂಗಳ ಹಿಂದೆ ತುಮಕೂರು ಟೌನ್ ಪೊಲೀಸ್ ಠಾಣೆಯ ಪೊಲೀಸರು ದಾವಣಗೆರೆ ಮೂಲದ ಜಮೀರ್ ಖಾನ್ ಹಾಗೂ ಅಲ್ಲಾಭಕ್ಷಿ ಎನ್ನುವರನ್ನು ಬಂಧನ ಮಾಡಿದ್ದರು. ಅದೇ ಪ್ರಕರಣ ಜಾಡು ಹಿಡಿದು ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಪಾಕಿಸ್ತಾನದ ಉಗ್ರರ ಜೊತೆ ನಂಟು ಹೊಂದಿದ್ದ ಎನ್ನಲಾಗಿದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಪಾಕ್ ಉಗ್ರನ ಜೊತೆ ರಾಜ್ಯದ ಇಬ್ಬರ ಲಿಂಕ್: ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು!

ಈಗಾಗಲೇ ಇಬ್ಬರು ಶಂಕತ ಉಗ್ರರ ಬಂಧನ

ಭಾರತದ ಭದ್ರತೆಗೆ ಧಕ್ಕೆ ತರಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಮೋಸ್ಟ್ ವಾಂಟೆಡ್ ಉಗ್ರ ರಾಣಾ ಉನೇನ್ ನೊಂದಿಗೆ ಸಂಪರ್ಕದಲ್ಲಿದ್ದ ತುಮಕೂರಿನ ಅಲ್ಲಾಬಕ್ಷು ಹಾಗೂ ದಾವಣಗೆರೆಯಲ್ಲಿ ತಲೆಮರೆಸಿಕೊಂಡಿದ್ದ ಜಮೀರ್ ಖಾನ್ ಎಂಬ ಇಬ್ಬರು ಯುವಕರನ್ನು ಉಗ್ರ ನಿಗ್ರಹ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದರು.ಇವರಿಬ್ಬರು ಕಳೆದ ಕೇವಲ 20 ದಿನಗಳಿಂದ ರಾಣಾ ಉನೇನ್ ನ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆಂತರಿಕ ಭದ್ರತೆಗೆ ಕುತ್ತು ತರಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version