ನೀಟ್ ಅಭ್ಯರ್ಥಿ ತಡವಾಗಿ ಬಂದಿದ್ದಕ್ಕೆ ಟ್ರಾಫಿಕ್ ಕಾರಣವಲ್ಲ: ಬೆಂಗಳೂರು ಪೊಲೀಸರಿಂದ ಫ್ಯಾಕ್ಟ್‌ ಚೆಕ್‌ – Kannada News | ‘Due to late departure, longer route’: Bengaluru police rule out traffic congestion led to students missing NEET UG re exam

 ಬೆಂಗಳೂರು, (ಜೂನ್ 23):   ಬೆಂಗಳೂರಿನಲ್ಲಿ ವಿದ್ಯಾರ್ಥಿ ನೀಟ್ (NEET)  ಮರು ಪರೀಕ್ಷೆ ಬರೆಯಲು  ಕೇಂದ್ರಕ್ಕೆ ತಡವಾಗಿ ತಲುಪಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದ್ದ ವದಂತಿಗಳಿಗೆ ಬೆಂಗಳೂರು ನಗರ ಪೊಲೀಸ್ (Bengaluru City Police) ಹಾಗೂ ಬೆಂಗಳೂರು ಸಂಚಾರ ಪೊಲೀಸ್ (BTP) ಜಂಟಿಯಾಗಿ ಸ್ಪಷ್ಟನೆ ನೀಡಿವೆ. ಬಿಕೆ ಹರಿಪ್ರಸಾದ್ (BK Hariprasad) ಕಾರ್ಯಕ್ರಮದಿಂದ ಉಂಟಾದ ಟ್ರಾಫಿಕ್ ಜಾಮ್‌ನಿಂದ ತಡವಾಗಿದೆ ಎಂಬ ಆರೋಪವನ್ನು ಪೊಲೀಸರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು, ಅಭ್ಯರ್ಥಿ ಮತ್ತು ಪೋಷಕರೊಂದಿಗಿನ ಸಂಭಾಷಣೆ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ಪೊಲೀಸರು ಅಧಿಕೃತ ಫ್ಯಾಕ್ಟ್ ಚೆಕ್ (Fact Check) ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಫ್ಯಾಕ್ಟ್​ ಚೆಕ್​​​ನಲ್ಲೇನಿದೆ?

ಎಲ್ಲಾ ಆರೋಪಗಳಿಗೆ ಬೆಂಗಳೂರು ಸಂಚಾರಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಯಿಂದ ಹೊರಗುಳಿಯಲು ಟ್ರಾಫಿಕ್ ಕಾರಣ ಅಲ್ಲ. ಸಿಸಿಟಿವಿ ಪರಿಶೀಲನೆ ವೇಳೆ ಪರೀಕ್ಷೆಗೆ ಹೊರಡುವ ಸಮಯದಲ್ಲಿ ಟ್ರಾಫಿಕ್ ಸಾಮನ್ಯವಾಗಿತ್ತು. ಪೊಲೀಸ್ ಸಿಬ್ಬಂದಿ ಅಗತ್ಯವಿರುವ ಕಡೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ಪರೀಕ್ಷಾ ಕೇಂದ್ರಕ್ಕೆ ಹೊರಡಲು ಆಯ್ಕೆ ಮಾಡಿಕೊಂಡ ಮಾರ್ಗದಿಂದ ವಿಳಂಬವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ನೀಟ್​ ಪರೀಕ್ಷೆಯಿಂದ ಮತ್ತೆ ವಂಚಿತರಾದ ಹಲವು ವಿದ್ಯಾರ್ಥಿಗಳು: ಒಬ್ಬೊಬ್ಬರದು ಒಂದೊಂದು ಕಥೆ

ಸಿಸಿಟಿವಿಯ ದೃಶ್ಯಗಳ ಪ್ರಕಾರ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 1:30ಕ್ಕೆ ಕಟ್ ಆಫ್ ಟೈಮ್ ಇತ್ತು. ಆದ್ರೆ, ಈ ವಿದ್ಯಾರ್ಥಿನಿ ತನ್ನ ಆರ್ ಟಿ ನಗರದ ಮನೆಯಿಂದ 12:57ಕ್ಕೆ ಹೊರಟಿದ್ದು, ಪರೀಕ್ಷಾ ಕೇಂದ್ರದ ಬಳಿ 1:33ಕ್ಕೆ ಆಗಮಿಸಿದ್ದಾರೆ ಎನ್ನುವುದು ಪೊಲೀಸರ ಫ್ಯಾಕ್ಟ್​​​ಚೆಕ್​​​ ಮೂಲಕ ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಗಳ ಪ್ರಕಾರ, ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿ, 12:57 PMಕ್ಕೆ ಮನೆಯಿಂದ ಹೊರಟಿದ್ದಾರೆ. 1.30PMಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕಿತ್ತು. ಆದ್ರೆ ವಿದ್ಯಾರ್ಥಿ 1:33 PMಕ್ಕೆ ಪರೀಕ್ಷಾಕೇಂದ್ರ ತಲುಪಿದ್ದಾರೆ. ಆರ್‌ಟಿ ನಗರದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಶಾರ್ಟ್‌ಕಟ್ ಇದ್ರೂ, ವಿದ್ಯಾರ್ಥಿ ಲಾಂಗ್‌ರೂಟ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಮೂವರು ಮಾತ್ರ ನೀಟ್​ ಬರೆದಿಲ್ಲ, ಆರ್.ಟಿ.ನಗರದಿಂದ ಬಂದವರು ಮಧ್ಯಾಹ್ನ 12.57ಕ್ಕೆ ಬಂದಿದ್ದಾರೆ. ಒಬ್ಬರು ಮಾಗಡಿಯಿಂದ ಬಂದವರು ಹಳೇ ಹಾಲ್ ಟಿಕೆಟ್ ತಂದಿದ್ರು. ಇದರಲ್ಲಿ ರಾಜ್ಯ ಸರ್ಕಾರದ ತಪ್ಪೇನಿದೆ? ಯಾವಾಗ ಮನೆ ಬಿಟ್ಟರು, ಯಾವಾಗ ಬಂದ್ರು ಸಿಸಿಟಿವಿ ಫೂಟೇಜ್ ಇದೆ. ಹಳೆಯ ಹಾಲ್​ಟಿಕೆಟ್​ ತಂದರೆ ಅದಕ್ಕೆ ಹರಿಪ್ರಸಾದ್​ ಕಾರಣನಾ? ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಳಿ ದಾಖಲೆ ಇದ್ರೆ ಕೊಡಲಿ ಎಂದು ಸವಾಲು ಹಾಕಿದರು.

ರಾಜಕೀಯ ನಾಯಕರ ವಾಕ್ಸಮರ

ನೀಟ್ ಮರು ಪರೀಕ್ಷೆ ನೀಟ್ ಆಗಿ ಮುಗಿದಿದೆ.  ಆದ್ರೆ, ಬೆಂಗಳೂರಿನಲ್ಲಿ  ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದವರಿಗೆ ಪ್ರವೇಶ ಸಿಕ್ಕಿಲ್ಲ  ಅನ್ನೋದನ್ನ ಹೊರತುಪಡಿಸಿದ್ರೆ. ಯಾವುದೇ ಅಡೆತಡೆ, ಲೋಪದೋಷವಿಲ್ಲದೇ ಪರೀಕ್ಷೆ ಸುಗಮವಾಗಿ ಮುಗಿದೆ. ಆದ್ರೆ ರಾಜ್ಯ ರಾಜಕಾರಣದಲ್ಲಿ ಬಿಕೆ ಹರಿಪ್ರಸಾದ್ ಅವರ ಪದಗ್ರಹಣದ ಸುತ್ತ ವಿದ್ಯಾರ್ಥಿಗಳಿಗೆ ಸಮಸ್ಯೆ ಅನ್ನೋ ಸಮರ ಶುರುವಾಗಿದೆ.

ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಕೆಲ ವಿದ್ಯಾರ್ಥಿಗಳು ತಡವಾಗಿ ಬಂದು ಪರೀಕ್ಷೆಯಿಂದ ವಂಚಿತರಾಗಿ ಗೋಳಾಡಿದ್ದಾರೆ.ಅಷ್ಟಕ್ಕೂ ಯಾಕೆ ಲೇಟ್ ಆಯ್ತು ಅಂತಾ ವಿದ್ಯಾರ್ಥಿಗಳ ಪೋಷಕರನ್ನ ಕೇಳಿದಾಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ಪದಗ್ರಹಣ ಕಾರ್ಯಕ್ರಮ ಇತ್ತು. ಇದರಿಂದ ಮೇಕ್ರಿ ಸರ್ಕಲ್ ಸುತ್ತ ಮುತ್ತ ಫುಲ್ ಜಾಮ್ ಆಗಿತ್ತು. ಹೀಗಾಗಿ ಲೇಟ್ ಆಗಿ ಬಂದ್ವಿ ಅಂತಾ ಪೋಷಕರು ಹೇಳಿದ್ರು.

ಪರೀಕ್ಷೆ ಇದೆ ಅಂತಾ ಮೊದಲೇ ಗೊತ್ತಿತ್ತು. ಬೇರೆ ದಿನ ಪದಗ್ರಹಣ ಕಾರ್ಯಕ್ರಮ ಇಟ್ಟುಕೊಳ್ಳಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ರು. ಇದಕ್ಕೆ ಬಿಜೆಪಿ ನಾಯಕರು ಸಹ ಧ್ವನಿಗೂಡಿಸಿದ್ದು, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದೆ. ಸಾಲು ಸಾಲು ಆರೋಪ ಕೇಳಿಬಂದ ಬೆನ್ನಲ್ಲೇ ಬೆಂಗಳೂರು ಟ್ರಾಫಿಕ್ ಪೊಲೀಸರು, ವಿದ್ಯಾರ್ಥಿನಿ ತಡವಾಗಿ ಬಂದಿದ್ಯಾಕೆ ಎನ್ನುವುದನ್ನು ಪತ್ತೆ ಮಾಡಿದ್ದು, ತಡವಾಗಿದ್ದಕ್ಕೆ ಟ್ರಾಫಿಕ್ ಕಾರಣವನ್ನು ಎನ್ನುವುದನ್ನು ಫ್ಯಾಕ್ಟ್​​ಚೆಕ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:41 pm, Tue, 23 June 26

Source link

ದೀಪದ ಬುಡವೇ ಕತ್ತಲೆ: ವಿದ್ಯುತ್​​ ನೀಡುವ ಹಿಡಕಲ್ ಡ್ಯಾಂನ ನೀರಾವರಿ ನಿಗಮದ ಕಚೇರಿಯಲ್ಲೇ ಕರೆಂಟಿಲ್ಲ! – Kannada News | Darkness Under the Lamp: Power Cut at Hidkal Dam Irrigation Offices Over Pending Bill of Rs 1.98 Crore

ನೀರಾವರಿ ಇಲಾಖೆ ಕಚೇರಿImage Credit source: Tv9 Kannada

ಬೆಳಗಾವಿ, ಜೂನ್​​ 23: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಡಕಲ್ ಡ್ಯಾಂ ನೀರಿನಿಂದ ವಿದ್ಯುತ್ ಉತ್ಪಾದಿಸಿಲಾಗುತ್ತೆ. ಆದರೆ ದುರ್ದೈವ ಅಂದರೆ ಇದೇ ಜಲಾಶಯ ಪ್ರದೇಶದಲ್ಲಿರುವ ನೀರಾವರಿ ಇಲಾಖೆ ಕಚೇರಿಯಲ್ಲಿಯೇ ಕರೆಂಟಿಲ್ಲ. ಹೌದು, 1.98 ಕೋಟಿ‌ ರೂ. ವಿದ್ಯುತ್‌ ಬಿಲ್ ಬಾಕಿ ಹಿನ್ನೆಲೆ ನೀರಾವರಿ‌ ಇಲಾಖೆ ಕಚೇರಿಯ ವಿದ್ಯುತ್​​ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕತ್ತಲಲ್ಲೆ ಕಾಲ‌ ಕಳೆಯುತ್ತಿದ್ದಾರೆ.

2022ರಿಂದ 1 ಕೋಟಿ 98 ಲಕ್ಷ 15 ಸಾವಿರ ಬಾಕಿ ವಿದ್ಯುತ್​​ ಬಿಲ್​​ ಬಂದಿಲ್ಲ. ಈ ಸಂಬಂಧ ನೋಟಿಸ್​​ ಕೊಟ್ಟರೂ  ಹಣ ತುಂಬಿಲ್ಲ. ಹೀಗಾಗಿ ಇಲಾಖೆಗೆ ಸಂಬಂಧಿಸಿದ ಮುಖ್ಯ ಅಭಿಯಂತರರ ಕಚೇರಿಗೆ ವಿದ್ಯುತ್​​ ಸರಬರಾಜನ್ನು ಬಂದ್​​ ಮಾಡಿದ್ದೇವೆ. ಇಷ್ಟು ದೊಡ್ಡ ಮೊತ್ತದ ವಿದ್ಯುತ್​​ ಬಿಲ್​​ನ ಬಾಕಿ ಇರಿಸಿಕೊಂಡಿರುವ ಕಾರಣ ಸಂಘದ ಹಿತದೃಷ್ಟಿಯಿಂದ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಕಸಕೊಪ್ಪ ಡ್ಯಾಂ ಖಾಲಿ ಖಾಲಿ; ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ರಾಜ್ಯದಲ್ಲಿ ವಿದ್ಯುತ್​​ ಸರಬರಾಜು ಮಾಡುವ ಏಕೈಕ ಸಹಕಾರಿ ಸಂಘವಾಗಿದ್ದು, ವಿದ್ಯುತ್​​ ಬಿಲ್​​ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕಳೆದ 4 ವರ್ಷಗಳಿಂದ ನೀರಾವರಿ ಇಲಾಖೆ ಹಲವು ಬಾರಿ ಮಾಹಿತಿ ನೀಡಲಾಗಿದೆ. ಆದರೆ ಕಾರಣ ಹೇಳಿಕೊಂಡು ಇಷ್ಟು ದಿನ ದೂಡಿದ್ದಾರೆ.  ಹೀಗಾಗಿ ಅವರ ವಸತಿ ಪ್ರದೇಶ, ಡ್ಯಾಂ ಇರುವ ಸ್ಥಳ ಸೇರಿ ಯಾವುದಕ್ಕೂ ತೊಂದರೆ ಆಗದಂತೆ ಇಲಾಖೆ ಕಚೇರಿಯ ವಿದ್ಯುತ್​​ ಸಂಪರ್ಕವನ್ನು ಮಾತ್ರ ಕಡಿತಗೊಳಿಸಿದ್ದೇವೆ. ವರ್ಷದಲ್ಲಿ ಕನಿಷ್ಠ 25-50 ಲಕ್ಷ ಹಣವನ್ನಾದರೂ ಅವರು ಕಟ್ಟಬಹುದಿತ್ತು. ಹೀಗಾದರೆ ನಾವು ಸಹಕಾರ ಸಂಘವನ್ನು ನಡೆಸೋದು ಹೇಗೆ? 2022ರ ಸೆಪ್ಟಂಬರ್​​ನಲ್ಲಿ ಅವರು ವಿದ್ಯುತ್​​ ಬಿಲ್​​ ಪಾವತಿಸಿರೋದು. ಆ ಬಳಿಕ ಒಂದು ರೂಪಾಯಿಯನ್ನೂ ಇಲಾಖೆ ಪಾವತಿಸಿಲ್ಲ.  ಈ ಕಾರಣಕ್ಕೆ ಬಿಲ್​​ ಪಾವತಿ ಮಾಡುವವರೆಗೂ ಮರಳಿ ವಿದ್ಯುತ್​​ ಸಂಪರ್ಕ ನೀಡಲ್ಲ ಎಂದು ಸಂಘ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನವಿಲು ಗರಿ ಉಡುಪು ಧರಿಸಿದ ಕಿಶನ್ ಹಾಗೂ ನಿವೇದಿತಾ ಗೌಡಗೆ ಸಂಕಷ್ಟ;ದೂರು ದಾಖಲು – Kannada News | Kishan Bilagali and Niveditha in Peacock Feather Row: Wildlife Act Violation Complaint Filed

ವರ್ತೂರು ಸಂತೋಷ್ ಅವರು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಾಗ ಅವರು ಧರಿಸಿದ್ದ ಹುಲಿ ಉಗುರು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈ ವಿಷಯದಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈಗ ಕನ್ನಡ ಕಿರುತೆರೆಯ ಜನಪ್ರಿಯ ನಟ ಕಿಶನ್ ಬಿಳಗಲಿ ಹಾಗೂ ನಟಿ ನಿವೇದಿತಾ ಗೌಡ ನವಿಲುಗರಿ ಬಳಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ದಾಖಲಾಗಿದೆ. ಇತ್ತೀಚೆಗಷ್ಟೇ ನವಿಲು ಗರಿಗಳನ್ನು ಬಳಸಿ ಸಿದ್ಧಪಡಿಸಲಾಗಿದ್ದ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಂಚಿಕೊಂಡಿದ್ದ ಈ ಜೋಡಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ಹಂಚಿಕೊಂಡಿದ್ದ ರೀಲ್ಸ್:

ನಟ ಕಿಶನ್ ಹಾಗೂ ನಿವೇದಿತಾ ಗೌಡ ಅವರು ನಾಲ್ಕೈದು ದಿನಗಳ ಹಿಂದೆ ನವಿಲು ಗರಿಗಳಿರುವ ಉಡುಪು ಧರಿಸಿ ರೀಲ್ಸ್ ಮಾಡಿದ್ದರು. ಇದನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ನೈಜ ನವಿಲು ಗರಿಗಳನ್ನು ಬಳಸಿ ಉಡುಪು ತಯಾರಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಕ್ಷಣ ತನಿಖೆಗೆ ದಿನೇಶ್ ಕಲ್ಲಹಳ್ಳಿ ಆಗ್ರಹ:

ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಯ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ದಿನೇಶ್ ತಮ್ಮ ದೂರನ್ನು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ. ಅಲ್ಲದೆ, ತನಿಖೆಯ ಅವಧಿಯಲ್ಲಿ ಯಾವುದೇ ರಾಜಕೀಯ ಪ್ರಭಾವ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಪಾರದರ್ಶಕವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೂರಿನಲ್ಲಿರುವ ಪ್ರಮುಖ ಬೇಡಿಕೆಗಳು:

  1. ವೈಜ್ಞಾನಿಕ ಪರಿಶೀಲನೆ: ವೈರಲ್ ಆಗಿರುವ ವಿಡಿಯೋ ಹಾಗೂ ಛಾಯಾಚಿತ್ರಗಳ ತಾಂತ್ರಿಕ ಪರಿಶೀಲನೆ ನಡೆಸಬೇಕು. ಉಡುಪಿನಲ್ಲಿ ಬಳಸಲಾದ ಗರಿಗಳು ನೈಜವಾಗಿವೆಯೇ ಅಥವಾ ಕೃತಕವಾಗಿವೆಯೇ ಎಂಬುದನ್ನು ವೈಜ್ಞಾನಿಕವಾಗಿ ದೃಢೀಕರಿಸಬೇಕು.
  2. ಉಡುಪುಗಳ ವಶ: ಒಂದು ವೇಳೆ ಅವು ನೈಜ ನವಿಲು ಗರಿಗಳಾಗಿರುವುದು ಕಂಡುಬಂದಲ್ಲಿ, ಕಿಶನ್ ಹಾಗೂ ನಿವೇದಿತಾ ಗೌಡ ಬಳಸಿರುವ ಉಡುಪುಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು.
  3. ಮೂಲದ ಪತ್ತೆ: ಆ ನವಿಲು ಗರಿಗಳ ಮೂಲ, ಖರೀದಿ, ಸಾಗಣೆ ಹಾಗೂ ಸಂಗ್ರಹಣೆಯ ಕುರಿತು ಸಮಗ್ರ ತನಿಖೆ ನಡೆಸಬೇಕು.
  4. ಜಾಲದ ವಿರುದ್ಧ ಕ್ರಮ: ಸಂಬಂಧಿತ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಈ ಗರಿಗಳನ್ನು ಪೂರೈಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು.
  5. ವಿಶೇಷ ತನಿಖೆ: ನವಿಲು ಗರಿಗಳನ್ನು ಪಡೆಯುವ ಉದ್ದೇಶದಿಂದ ಯಾವುದಾದರೂ ಅಕ್ರಮ ಬೇಟೆ, ಕಳ್ಳಸಾಗಣೆ ಅಥವಾ ವನ್ಯಜೀವಿ ಅಪರಾಧ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ವಿಶೇಷ ತನಿಖೆ ನಡೆಸಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:12 pm, Tue, 23 June 26

Source link

Video: ಕೆಲಸದಲ್ಲಿನ ಪರಿಪೂರ್ಣತೆ ಬದಿಗಿರಿಸಿ ಮಾನಸಿಕ ಶಾಂತಿ ಕಂಡುಕೊಂಡ ಅಮೆಜಾನ್ ಉದ್ಯೋಗಿ – Kannada News | A Hyderabad Amazon employee finds peace of mind after putting perfectionism aside at work

ವೇಗದ ಜೀವನದಲ್ಲಿ ಸ್ಪರ್ಧೆಗಳೇ ಹೆಚ್ಚು. ಹೀಗಾಗಿ ಕೆಲಸ (job) ಯಾವುದಾದರೂ ಅದರಲ್ಲಿ ಒತ್ತಡ ಇದ್ದೇ ಇರುತ್ತೆ. ಒತ್ತಡವನ್ನು ನಿಭಾಯಿಸಿಕೊಂಡು ಜೀವನ ನಡೆಸುವುದು, ಮಾನಸಿಕ ನೆಮ್ಮದಿ ಕಾಯುವುದು ಒಂದು ಕಲೆ. ಹೈದರಾಬಾದ್‌ನ ಅಮೆಜಾನ್‌ನಲ್ಲಿ ( Amazon) ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ಬಹುತೇಕ ಉದ್ಯೋಗಿಗಳು ಎಲ್ಲಾ ಸಮಯದಲ್ಲೂ ಲಭ್ಯವಿದ್ದು ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ಅನುಭವಿಸುವ ಒತ್ತಡದ ಬಗ್ಗೆ ಮಾತನಾಡಿದ್ದಾರೆ. ಕೆಲಸದ ಸ್ಥಳದಲ್ಲಿ ತನ್ನ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಕೆಲವು ಅಭ್ಯಾಸಗಳನ್ನು ನಿಲ್ಲಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಈ ಉದ್ಯೋಗಿ ಕಂಡುಕೊಂಡ ಮಾರ್ಗವನ್ನು ಮೆಚ್ಚಿಕೊಂಡಿದ್ದಾರೆ.

ದೀಪಿಕಾ (deepika.not.padukone) ತಮ್ಮ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ
ಕೆಲಸದಲ್ಲಿ ನನ್ನ ಮಾನಸಿಕ ಶಾಂತಿಯನ್ನು ಕಾಪಾಡಲು ನಾನು ಮಾಡುವುದನ್ನು ನಿಲ್ಲಿಸಿದ ಕೆಲಸಗಳು ಎಂದು ಬರೆದುಕೊಂಡಿದ್ದಾರೆ. ನನ್ನ ಶಾಂತಿಯನ್ನು ರಕ್ಷಿಸುವುದು, ನನ್ನ ಮೌಲ್ಯವನ್ನು ಸಾಬೀತುಪಡಿಸುವುದು ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈವಿಡಿಯೋದಲ್ಲಿ ಕೆಲಸದಲ್ಲಿ ಪರಿಪೂರ್ಣವಾಗಿರುವುದು ಎಂದರೆ ಎಲ್ಲದಕ್ಕೂ ಹೌದು ಎಂದು ಹೇಳುವುದು. 24/7 ಲಭ್ಯವಿರುವುದು ಎಂದು ನಾನು ಭಾವಿಸುತ್ತಿದ್ದೆ. ಈಗ, ನನ್ನ ವೃತ್ತಿಜೀವನಕ್ಕೆ ನಾನು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ವಾಸ್ತವವಾಗಿ ಅಂಟಿಕೊಳ್ಳುವ ಗಡಿಗಳನ್ನು ಹೊಂದಿಸುವುದು ಎಂದು ನಾನು ಅರಿತುಕೊಂಡಿದ್ದೇನೆ. ಇನ್ನು ಮುಂದೆ ಯಾವುದೇ ಸಂದೇಶಕ್ಕೆ ತ್ವರಿತ ಉತ್ತರಗಳಿಲ್ಲ. ಪ್ರತಿ ಸಂದೇಶ ಬಂದ ತಕ್ಷಣ ಪ್ರತಿಕ್ರಿಯಿಸುವ ಒತ್ತಡವನ್ನು ನಾನು ಅನುಭವಿಸುವುದಿಲ್ಲ ಎಂದಿದ್ದಾರೆ.

ಇನ್ನಷ್ಟು ಕೆಲಸ ಸ್ವೀಕರಿಸುವ ಮೊದಲು ತನ್ನದೇ ಆದ ಬ್ಯಾಂಡ್‌ವಿಡ್ತ್ ಅನ್ನು ಪರಿಶೀಲಿಸಲು ಪ್ರಾರಂಭಿಸಿದ್ದೇನೆ. ಕೈ ತುಂಬಾ ಕೆಲಸವಿರುವಾಗ ನಾನು ಕೆಲಸಗಳಿಗೆ “ಹೌದು” ಎಂದು ಹೇಳುವುದನ್ನು ನಿಲ್ಲಿಸಿದ್ದೇನೆ. ಸಣ್ಣ ವಿಷಯಗಳಿಗೆ ತನ್ನನ್ನು ತಾನು ವಿವರಿಸಿಕೊಳ್ಳುವುದನ್ನು ನಿಲ್ಲಿಸಿದ್ದೇನೆ. ಮೌನ ಕೆಲವೊಮ್ಮೆ ಸ್ವೀಕಾರಾರ್ಹ ಎಂದು ಕಲಿತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಕೆಲಸದ ದಿನ ಮುಗಿದ ನಂತರ, ದೈಹಿಕವಾಗಿ ಮತ್ತು ಮಾನಸಿಕವಾಗಿ ಲಾಗ್ ಔಟ್ ಆಗಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತೇನೆ. ತಮ್ಮ ವೃತ್ತಿಜೀವನದ ಪ್ರಯಾಣವನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿದ್ದೇನೆ. ಸೂಚನೆಗಳನ್ನು ಊಹಿಸಿ ಅವುಗಳ ಮೇಲೆ ಒತ್ತಡ ಹೇರುವ ಬದಲು ಸ್ಪಷ್ಟತೆ ಕೇಳಲು ತಾನು ಇಷ್ಟಪಡುತ್ತೇನೆ. ನನ್ನ ವಿವೇಕವನ್ನು ಹಾಗೆಯೇ ಇಟ್ಟುಕೊಳ್ಳುವುದರ ಜೊತೆಗೆ ಉತ್ತಮವಾಗಿ ಇರಲು ಈ ಪ್ರಯತ್ನಗಳು ಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ನೀಡಿದ್ರೂ ಕಂಪನಿ ಕೆಲಸದ ಕೊನೆಯ ದಿನವನ್ನು ದೃಢಪಡಿಸಿಲ್ಲ; ನೆಟ್ಟಿಗರಲ್ಲಿ ಸಲಹೆ ಕೇಳಿದ ಉದ್ಯೋಗಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ತುಂಬಾ ಯೋಚನೆ ಮಾಡುವ ವಿಷಯವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಾನಸಿಕ ಶಾಂತಿ ಒಪ್ಪಲು ಈ ಬದಲಾವಣೆಗಳು ಅಗತ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Tue, 23 June 26

Source link

ಲಕ್ನೋ ಬೆಂಕಿ ದುರಂತಕ್ಕೆ ತಲೆದಂಡ; ಉತ್ತರ ಪ್ರದೇಶದ 4 ಅಧಿಕಾರಿಗಳ ಅಮಾನತು, ನಾಲ್ವರ ಬಂಧನ – Kannada News | Lucknow fire tragedy 4 government officials suspended in Uttar Pradesh 4 arrested

ಲಕ್ನೋ, ಜೂನ್ 23: ಕನಿಷ್ಠ 15 ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಲಕ್ನೋದ ಅಲಿಗಂಜ್ ಕೋಚಿಂಗ್ ಸೆಂಟರ್​ನಲ್ಲಿ ನಡೆದ ಭೀಕರ ಅಗ್ನಿ ದುರಂತವನ್ನು (Lucknow Fire Accident) ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಮತ್ತು ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಕೋಚಿಂಗ್ ಸೆಂಟರ್ ಮಾಲೀಕರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ದುರಂತದ ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಲಕ್ನೋ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ನಡೆಸಿದ ಉನ್ನತ ಮಟ್ಟದ ಸಭೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ, ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. 7 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ತಂಡಕ್ಕೆ ಸೂಚಿಸಲಾಗಿದೆ. ಪ್ರವಾಸೋದ್ಯಮ, ಧಾರ್ಮಿಕ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮೃತ್ ಅಭಿಜತ್ ಅವರನ್ನು SITಯಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: ಲಕ್ನೋ ಕೋಚಿಂಗ್ ಸೆಂಟರ್​​ನಲ್ಲಿ ಭೀಕರ ಬೆಂಕಿ ದುರಂತ; ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು

ಇದಕ್ಕೂ ಮೊದಲು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದರು. ಗಾಯಗೊಂಡವರಿಗೆ ತಲಾ 50,000 ಆರ್ಥಿಕ ಸಹಾಯವನ್ನೂ ಘೋಷಿಸಿದ್ದರು.

ನಾಲ್ವರು ಅಧಿಕಾರಿಗಳು ಅಮಾನತು:

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ತನಿಖೆ ಚುರುಕುಗೊಳಿಸಿರುವ ಸರ್ಕಾರ, ಕರ್ತವ್ಯ ಲೋಪ ಎಸಗಿದ ವಿವಿಧ ಇಲಾಖೆಗಳ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದರಲ್ಲಿ ಅಗ್ನಿಶಾಮಕ ಇಲಾಖೆ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಅಧಿಕಾರಿಗಳು ಸೇರಿದ್ದಾರೆ. ವಾಣಿಜ್ಯ ಕಟ್ಟಡದಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕೋಚಿಂಗ್ ಸೆಂಟರ್ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ

ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡು ತಕ್ಷಣವೇ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಸಂಸ್ಥೆ ನಡೆಸುತ್ತಿದ್ದ ಕೋಚಿಂಗ್ ಸೆಂಟರ್‌ನ ಮಾಲೀಕರು ಹಾಗೂ ಕಟ್ಟಡದ ವ್ಯವಸ್ಥಾಪಕರು ಸೇರಿದಂತೆ ಒಟ್ಟು 4 ಜನರನ್ನು ಬಂಧಿಸಲಾಗಿದೆ.

ಈ ಭೀಕರ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ರಾಜ್ಯಾದ್ಯಂತ ವಾಣಿಜ್ಯ ಕಟ್ಟಡಗಳಲ್ಲಿ, ಬೇಸ್‌ಮೆಂಟ್‌ಗಳಲ್ಲಿ ಹಾಗೂ ಕಿರಿದಾದ ಜಾಗಗಳಲ್ಲಿ ನಡೆಯುತ್ತಿರುವ ಎಲ್ಲಾ ಕೋಚಿಂಗ್ ಸೆಂಟರ್‌ಗಳು, ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಆಡಳಿತ ಮಂಡಳಿಗೆ ಆದೇಶಿಸಿದೆ. ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ತಕ್ಷಣವೇ ಅಂತಹ ಸಂಸ್ಥೆಗಳನ್ನು ಸೀಲ್ ಮಾಡಲು ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Video: ರಕ್ಷಣಾ ವಲಯದಲ್ಲಿ ಭಾರತದ ಹೊಸ ಇತಿಹಾಸ; ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು! – Kannada News | BrahMos Missile Deal: India Expands Defence Market to the Middle East with UAE Talks

ಭಾರತವು ಈಗ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದು ದೇಶದಿಂದ ಪ್ರಮುಖ ರಫ್ತುದಾರ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ. ಈ ಬೆಳವಣಿಗೆಗೆ ಪೂರಕವಾಗಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತದ ಅತ್ಯಾಧುನಿಕ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಮತ್ತು ಆಕಾಶ್-ತೀರ್ ವಾಯುರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದೆ. ಈ ಕುರಿತು ಉಭಯ ದೇಶಗಳ ನಡುವೆ ಮಾತುಕತೆಗಳು ಆರಂಭವಾಗಿವೆ. ಈ ಒಪ್ಪಂದವು ಅಂತಿಮಗೊಂಡರೆ, ಭಾರತವು ತನ್ನ ರಕ್ಷಣಾ ಉತ್ಪನ್ನಗಳನ್ನು ಮಧ್ಯಪ್ರಾಚ್ಯದ ಕೊಲ್ಲಿ ದೇಶಕ್ಕೆ ರಫ್ತು ಮಾಡಿದ ಮೊದಲ ನಿದರ್ಶನವಾಗಲಿದೆ. ಫಿಲಿಪೈನ್ಸ್, ವಿಯೆಟ್ನಾಂ ಮತ್ತು ಇಂಡೋನೇಷಿಯಾದಂತಹ ದೇಶಗಳು ಈಗಾಗಲೇ ಬ್ರಹ್ಮೋಸ್ ಮತ್ತು ಇತರ ರಕ್ಷಣಾ ತಂತ್ರಜ್ಞಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿವೆ.

ಬ್ರಹ್ಮೋಸ್ ವಿಶ್ವದ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಭೂಮಿ, ಸಮುದ್ರ ಮತ್ತು ವಾಯುನೆಲೆಗಳಿಂದ ಉಡಾಯಿಸಬಹುದಾಗಿದೆ. ಆಕಾಶ್-ತೀರ್ ಸಂಪೂರ್ಣ ಸ್ವಯಂಚಾಲಿತ ವಾಯುರಕ್ಷಣಾ ನಿಯಂತ್ರಣ ವ್ಯವಸ್ಥೆಯಾಗಿದೆ. ಅಮೆರಿಕಾ-ಇರಾನ್ ಯುದ್ಧದ ಸನ್ನಿವೇಶದಲ್ಲಿ ಯುಎಇ ತನ್ನ ಭದ್ರತೆಯನ್ನು ಬಲಪಡಿಸಲು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ದೇಶೀಯ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಿರುವುದು, ಭಾರತದ ರಫ್ತು ಸಾಮರ್ಥ್ಯವನ್ನು ಗಮನಾರ್ಹವಾಗಿ ವೃದ್ಧಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Source link

ಸಿನಿಮಾ ಸ್ಟೈಲ್​​ನಲ್ಲಿ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟ ದಳಪತಿ ವಿಜಯ್ – Kannada News | Thalapathy Vijay did style hand sign in Tamil Nadu assembly

ಸ್ಟಾರ್ ನಟ ಆಗಿದ್ದ ದಳಪತಿ ವಿಜಯ್ (Thalapathy Vijay) ಇದೀಗ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಚುನಾವಣೆಗೆ ಕಾಲಿಡುವ ಮುನ್ನವೇ ಸಿನಿಮಾಗಿಂದ ನಿವೃತ್ತಿ ಪಡೆಯುತ್ತಿರುವುದಾಗಿ ನಟ ವಿಜಯ್ ಘೋಷಿಸಿದ್ದರು. ಈಗ ವಿಜಯ್, ಸಿನಿಮಾ ಬಿಟ್ಟು ರಾಜಕಾರಣಿ ಆಗಿದ್ದಾರೆ. ಆದರೆ ಅವರೊಳಗಿನ ಸೂಪರ್ ಸ್ಟಾರ್ ಇನ್ನೂ ಹಾಗೆಯೇ ಇದ್ದಾರೆ. ಇದಕ್ಕೆ ಸಾಕ್ಷಿ ಇಂದು (ಜೂನ್ 23) ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಮಾಡಿದ ಭಾಷಣ ಮತ್ತು ಭಾಷಣದ ಅಂತ್ಯದಲ್ಲಿ ಅವರು ಮಾಡಿದ ಸ್ಟೈಲ್.

ವಿಜಯ್, ಸಿನಿಮಾಗಳಲ್ಲಿ ತಮ್ಮ ಭಿನ್ನ ಸ್ಟೈಲ್​​ ಮೂಲಕವೇ ಜನಪ್ರಿಯರು. ಅವರು ಕೈ-ಕಾಲು ಕದಲಿಸಿದರೆ ಸಾಕು ಅಭಿಮಾನಿಗಳು ಅಬ್ಬರಿಸಲು ಆರಂಭಿಸುತ್ತಿದ್ದರು. ಇದೀಗ ವಿಜಯ್ ಅವರು ವಿಧಾನಸಭೆಯಲ್ಲಿಯೂ ಸ್ಟೈಲ್ ಮಾಡಿದ್ದಾರೆ. ಆದರೆ ಈ ಬಾರಿ ಅಭಿಮಾನಿಗಳನ್ನು ಮೆಚ್ಚಿಸಲು ಅಲ್ಲ ಬದಲಿಗೆ ಎದುರಾಳಿಗಳಿಗೆ ಖಡಕ್ ಆದ ಪ್ರತ್ಯುತ್ತರ ನೀಡಲು.

ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಿತು. ಈ ವೇಳೆ ವಿಪಕ್ಷಗಳವರು ವಿಜಯ್ ಸೇರಿದಂತೆ ಅವರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಬಳಿಕ ವಿಪಕ್ಷಗಳು ಒಟ್ಟಿಗೆ ಸಭಾತ್ಯಾಗ ಮಾಡಿದರು. ಅಂತಿಮವಾಗಿ ಮಾತನಾಡಿದ ಸಿಎಂ ವಿಜಯ್, ಎದುರಾಳಿಗಳ ಪ್ರಶ್ನೆಗಳಿಗೆ, ಟೀಕೆಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದರು.

ತಮ್ಮ ಪಕ್ಷವನ್ನು ‘ನಟರ ಪಕ್ಷ’ ಎಂದವರಿಗೆ ಹಾಗೂ ‘ಸಿನಿಮಾ ಸೆಟ್​​ನಿಂದ ಬಂದು ಸಿಎಂ ಆದವರು’ ಎಂಬೆಲ್ಲ ವಿಪಕ್ಷಗಳ ಟೀಕೆಗಳಿಗೆ ಉತ್ತರಿಸಿದ ವಿಜಯ್, ಸಕ್ರಿಯವಾಗಿ ರಾಜಕೀಯಕ್ಕೆ ಇಳಿಯುವ ಮುಂಚೆ ಹಾಗೂ ಚುನಾವಣೆ ಎದುರಿಸುವ ಮುಂಚೆ ತಮ್ಮ ಪಕ್ಷ ಯಾವ-ಯಾವ ಹೋರಾಟಗಳನ್ನು, ಸಾಮಾಜಿಕ ಕಾರ್ಯಗಳನ್ನು ಮಾಡಿದೆ ಎಂಬ ಪಟ್ಟಿಯನ್ನು ವಿಜಯ್ ನೀಡಿದರು. ಅಲ್ಲದೆ, ತಮ್ಮದು ‘ರೀಲ್’ ಪಕ್ಷವಲ್ಲ ಬದಲಿಗೆ ‘ರಿಯಲ್’ ಪಕ್ಷ ಎಂದರು.

ಇದನ್ನೂ ಓದಿ:ದಳಪತಿ ವಿಜಯ್​​ ಜನ್ಮದಿನಕ್ಕೆ ವಿಶ್ ಮಾಡಲೇ ಇಲ್ಲ ತ್ರಿಷಾ ಕೃಷ್ಣನ್ 

ಕೊನೆಯದಾಗಿ ವಿಜಯ್ ಅವರು ಸಭಾಧ್ಯಕ್ಷರ ಅನುಮತಿ ಪಡೆದುಕೊಂಡು ಸ್ಟೈಲ್ ಒಂದನ್ನು ಮಾಡಿದರು. ಅದು ನೇರವಾಗಿ ಮಾಜಿ ಸಿಎಂ ಸ್ಟಾಲಿನ್ ಅವರಿಗೆ ನೀಡಿದ ಸಂದೇಶವಾಗಿತ್ತು. ಚುನಾವಣೆಗೆ ಮುಂಚೆ ಸ್ಟಾಲಿನ್ ಅವರು ಮುಖ್ಯವಾದ ರಾಜಕೀಯ ಸಭೆಯೊಂದರ ಬಳಿಕ ‘ಮುಗಿಸಿ’ರುವುದಾಗಿ ಕೈಯಲ್ಲಿ ಅಡ್ಡವಾಗಿ ಆಡಿಸುತ್ತಾ ಸಜ್ಞೆಯೊಂದನ್ನು ಮಾಡಿದ್ದರು. ಸ್ಟಾಲಿನ್ ಅವರ ಆ ಸಂಜ್ಞೆ ಸಖತ್ ವೈರಲ್ ಆಗಿತ್ತು. ಸ್ಟಾಲಿನ್ ಅವರನ್ನು ಸೋಲಿಸಿದ ಟಿವಿಕೆ ಪಕ್ಷದ ಅಭ್ಯರ್ಥಿ ಸಹ ಅದೇ ಸಂಜ್ಞೆ ಮಾಡಿ ಸಂಭ್ರಮಿಸಿದ್ದರು. ಈಗ ವಿಜಯ್, ವಿಧಾನಸಭೆಯಲ್ಲಿಯೂ ಸಹ ಅದೇ ಸಂಜ್ಞೆ ಮಾಡಿದ್ದಾರೆ.

ವಿಜಯ್ ಅವರು ಸಂಜ್ಞೆ ಮಾಡುವ ಮೊದಲು, ತಾವು ಭ್ರಷ್ಟಾಚಾರ ಮಾಡುವುದಿಲ್ಲ, ಮಾಡುವುದಕ್ಕೆ ಬಿಡುವುದಿಲ್ಲ ಹಾಗೂ ಹಿಂದೆ ಮಾಡಿದವರನ್ನೂ ಬಿಡುವುದಿಲ್ಲ ಎಂದು ಹೇಳಿದ ಬಳಿಕ ಆ ಸಂಜ್ಞೆ ಮಾಡಿರುವುದು ಕುತೂಹಲಕರ. ಆ ಮೂಲಕ ತಾವು ಹಿಂದಿನ ಸರ್ಕಾರದ ಭ್ರಷ್ಟಾಚಾರಗಳ ತನಿಖೆ ನಡೆಸುವ ಸೂಕ್ಷ್ಮ ಎಚ್ಚಿರಿಕೆಯನ್ನು ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:12 pm, Tue, 23 June 26

Source link

ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ – Kannada News | Tejasvi Surya Demands White Paper on Bengaluru Road Funds, Alleges Mismanagement

ಬೆಂಗಳೂರು, ಜೂನ್ 23: ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಅವುಗಳ ದುರಸ್ತಿಗೆಂದು ಸರ್ಕಾರ ಘೋಷಿಸಿರುವ ಸಾವಿರಾರು ಕೋಟಿ ರೂಪಾಯಿಗಳ ಅನುದಾನದ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ಸಂಸದರು, ಕಳೆದ ಮೂರು ವರ್ಷಗಳಲ್ಲಿ ರಸ್ತೆ ಕಾಮಗಾರಿ ಮತ್ತು ಗುಂಡಿ ನಿರ್ವಹಣೆಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದರ ಕುರಿತು 30 ದಿನಗಳೊಳಗೆ ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಸಚಿವರು ಬೇರೆ ಬೇರೆ ಸಮಯದಲ್ಲಿ ಘೋಷಿಸಿರುವ ಅನುದಾನಗಳ ಅಂಕಿ-ಅಂಶಗಳಲ್ಲಿ ಸ್ಪಷ್ಟತೆಯಿಲ್ಲ ಎಂದು ಸೂರ್ಯ ದೂರಿದ್ದಾರೆ. 1,225 ಕೋಟಿ, 1,700 ಕೋಟಿ, 1,900 ಕೋಟಿ, 450 ಕೋಟಿ, 7 ಕೋಟಿ, 12 ಕೋಟಿ, 750 ಕೋಟಿ, 1,100 ಕೋಟಿ, 2,200 ಕೋಟಿ, 4,000 ಕೋಟಿ, 1,241 ಕೋಟಿ, 4,800 ಕೋಟಿ, 5,500 ಕೋಟಿಗಳಂತಹ ವಿವಿಧ ಮೊತ್ತಗಳನ್ನು ಉಲ್ಲೇಖಿಸಿ, ಇದೆಲ್ಲವೂ ಒಂದೇ ಯೋಜನೆಯೇ ಅಥವಾ ವಿಭಿನ್ನ ಯೋಜನೆಗಳೇ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟತೆ ಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತೆರಿಗೆದಾರರ ಹಣ ಎಲ್ಲಿಗೆ ಹೋಗಿದೆ ಎಂಬುದಕ್ಕೆ ಉತ್ತರ ನೀಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ರಾಮ ಮಂದಿರ ದೇಣಿಗೆ ಹಗರಣ, ಸಿಬಿಐ ತನಿಖೆಗೆ ಕೋರಿ ಅರ್ಜಿ – Kannada News | Ram Mandir Donation Scam Reaches SC: CBI Probe Demanded for Ayodhya Trust Irregularities

ನವದೆಹಲಿ, ಜೂನ್ 23: ಅಯೋಧ್ಯೆ(Ayodhya)ಯ ಶ್ರೀ ರಾಮ  ಮಂದಿರದಲ್ಲಿ ನಡೆದ ಆರ್ಥಿಕ ಅಕ್ರಮಗಳು ಮತ್ತು ಕಣ್ಮರೆಯಾಗಿರುವ ಕಾಣಿಕೆ ಹಣದ ವಿವಾದ ಈಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ರಾಮ ಮಂದಿರದ ದೇಣಿಗೆ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಮತ್ತು ಕೇಂದ್ರೀಯ ತನಿಖಾ ದಳದ (CBI) ಅಡಿಯಲ್ಲಿ ಹೊಸ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ವಕೀಲರಾದ ಅಜಯ್ ಕುಮಾರ್ ರೈ ಮತ್ತು ದಿನೇಶ್ ಕುಮಾರ್ ಯಾದವ್ ಅವರು ಈ ಜಂಟಿ ಅರ್ಜಿಯನ್ನು ಸಲ್ಲಿಸಿದ್ದಾರೆ. ದೇವಸ್ಥಾನದ ದೇಣಿಗೆ ರಿಜಿಸ್ಟರ್‌ಗಳು, ಆಡಿಟ್ ವರದಿಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಬ್ಯಾಂಕ್ ದಾಖಲೆಗಳು ಸೇರಿದಂತೆ ಎಲ್ಲಾ ಡಿಜಿಟಲ್ ಹಾಗೂ ಭೌತಿಕ ಸಾಕ್ಷ್ಯಗಳನ್ನು ರಾಮ ಮಂದಿರ ಟ್ರಸ್ಟ್ ಮತ್ತು ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು.

ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಆಸ್ತಿ, ಹಣ ಅಥವಾ ಎಲೆಕ್ಟ್ರಾನಿಕ್ ಡೇಟಾವನ್ನು ಯಾರೂ ನಾಶಪಡಿಸದಂತೆ ಅಥವಾ ತಿರುಚದಂತೆ ಕೋರ್ಟ್ ಕಟ್ಟುನಿಟ್ಟಿನ ತಡೆಜ್ಞೆ ನೀಡಬೇಕು.

ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಕೋಟ್ಯಂತರ ಭಕ್ತರು ತಮ್ಮ ಕಷ್ಟದ ಹಣವನ್ನು ದಾನ ಮಾಡಿದ್ದಾರೆ. ಇಂತಹ ಪವಿತ್ರ ನಿಧಿಯ ನಿರ್ವಹಣೆಯಲ್ಲಿ ಪಾರದರ್ಶಕತೆ ತೋರದಿದ್ದರೆ ಅದು ಸಾರ್ವಜನಿಕರ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತರುತ್ತದೆ.

ಮತ್ತಷ್ಟು ಓದಿ:ರಾಮ ಮಂದಿರ ದೇಣಿಗೆ ಹಗರಣ: ಎಣಿಕೆ ಕಾರ್ಯದಿಂದ 40 ಸಿಬ್ಬಂದಿ ವಜಾ, ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ

ಉತ್ತರ ಪ್ರದೇಶ ಸರ್ಕಾರದ ಎಸ್‌ಐಟಿ (SIT) ತನಿಖೆಯ ಮೇಲೆ ಯಾಕೆ ಅನುಮಾನ?
ಎಫ್‌ಐಆರ್ ಇಲ್ಲದೆ ತನಿಖೆ: ಪ್ರಸ್ತುತ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯ ಬಗ್ಗೆ ಅರ್ಜಿದಾರರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಯುಪಿ ಸರ್ಕಾರದ ಎಸ್‌ಐಟಿ ತಂಡವು ಯಾವುದೇ ಪ್ರಥಮ ಮಾಹಿತಿ ವರದಿ (FIR) ಅಥವಾ ನಿಯಮಿತ ಕ್ರಿಮಿನಲ್ ಪ್ರಕರಣ ದಾಖಲಿಸದೆಯೇ ತನ್ನ ವಿಚಾರಣೆಯನ್ನು ಪ್ರಾರಂಭಿಸಿದೆ.

ಎಫ್‌ಐಆರ್ ಇಲ್ಲದೆ ಸಂಗ್ರಹಿಸುವ ಸಾಕ್ಷ್ಯಗಳಿಗೆ ಕೋರ್ಟ್‌ನಲ್ಲಿ ಕಾನೂನು ಮಾನ್ಯತೆ ಸಿಗುವುದಿಲ್ಲ, ಇದು ಭವಿಷ್ಯದಲ್ಲಿ ಆರೋಪಿಗಳು ಸುಲಭವಾಗಿ ಪಾರಾಗಲು ದಾರಿ ಮಾಡಿಕೊಡುತ್ತದೆ. ಅಲ್ಲದೆ, ರಾಜ್ಯ ಮಟ್ಟದ ಎಸ್‌ಐಟಿಯ ಅಧಿಕಾರ ಮತ್ತು ವ್ಯಾಪ್ತಿ ಸ್ಪಷ್ಟವಾಗಿಲ್ಲದ ಕಾರಣ ಈ ಹಗರಣದ ಸಂಕೀರ್ಣತೆಯನ್ನು ಭೇದಿಸಲು ಅದಕ್ಕೆ ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ವಿಳಂಬವಾದರೆ ಸಾಕ್ಷ್ಯ ನಾಶದ ಭೀತಿ
ದೇವಸ್ಥಾನದ ಆಡಳಿತದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಮರಳಿ ಗಳಿಸಲು ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ. ತನಿಖೆ ವಿಳಂಬವಾದರೆ ಹಣಕಾಸಿನ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಅರ್ಜಿದಾರರು ಕೋರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:39 pm, Tue, 23 June 26

Source link

ಸಮಂತಾ ತಾಯಿ ಆಗೋ ವಿಷಯವನ್ನು ಖಚಿಪಡಿಸಿದ ಚಿರಂಜೀವಿ; ಸಿನಿಮಾ ಹಿಟ್ ಆಗಿದ್ದಕ್ಕೆ ವಿಶ್ – Kannada News | Chiranjeevi Confirms Samantha’s Pregnancy Amidst Maa Inti Bangaram Success

‘ಮಾ ಇಂಟಿ ಬಂಗಾರಂ’ ಸಿನಿಮಾ (Maa Inti Bangaram) ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಬಗ್ಗೆ ಎಲ್ಲ ಕಡೆಗಳಲ್ಲಿ ಪಾಸಿಟಿವ್ ಟಾಕ್ ಶುರುವಾಗಿದೆ. ಈ ಸಿನಿಮಾ ನಾಲ್ಕೇ ದಿನಕ್ಕೆ 50 ಕೋಟಿ ರೂಪಾಯಿ ಗಳಿಕೆ ಮಾಡಿರೋದು ವಿಶೇಷ. ಈ ಸಿನಿಮಾ ನೋಡಿದ ಚಿರಂಜೀವಿ ಅವರು ಖುಷಿಪಟ್ಟಿದ್ದಾರೆ. ಹೀಗಾಗಿ, ಸಮಂತಾ ಅವರನ್ನು ಮನೆಗೆ ಕರೆದು ವಿಶೇಷವಾಗಿ ಸತ್ಕಾರ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಮಾ ಇಂಟಿ ಬಂಗಾರಂ ಸಿನಿಮಾ ತುಂಬಾ ಆಸಕ್ತಿದಾಯಕವಾಗಿದೆ. ನಿರ್ದೇಶಕಿ ನಂದಿನಿ ರೆಡ್ಡಿ ಅವರು ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿ ಆಕ್ಷನ್ ಮತ್ತು ಎಮೋಷನ್ಸ್‌ಗಳನ್ನು ಅದ್ಭುತವಾಗಿ ಬೆರೆಸಿ, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಈ ಚಿತ್ರವನ್ನು ಅತ್ಯಂತ ಮನರಂಜನಾತ್ಮಕವಾಗಿ ಮಾಡಿದ್ದಾರೆ. ಸೀರೆಯುಟ್ಟು ನಟಿ ಸಮಂತಾ ಮಾಡಿರುವ ಆಕ್ಷನ್ ದೃಶ್ಯಗಳು ಮತ್ತು ಅವರ ನಟನೆ ಈ ಸಿನಿಮಾದಲ್ಲಿ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯುತ್ತವೆ’ ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಮಾ ಇಂಟಿ ಬಂಗಾರಂ’ ಹಾಗೂ ‘ಕಾಕ್‌ಟೇಲ್ 2’ ಚಿತ್ರಗಳ ಗಳಿಕೆ ಎಷ್ಟು?

‘ತೆಲುಗು ಚಿತ್ರರಂಗಕ್ಕೆ ಇಂತಹ ವೈವಿಧ್ಯಮಯ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳ ಅಗತ್ಯ ತುಂಬಾ ಇದೆ. ಈ ದೊಡ್ಡ ಯಶಸ್ಸಿಗಾಗಿ ಸಮಂತಾ, ನಂದಿನಿ ರೆಡ್ಡಿ, ರಾಜ್ ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ.

ಸಮಂತಾ ಶೀಘ್ರವೇ ತಾಯಿ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈಗ ಚಿರಂಜೀವಿ ಅವರು ವಿಶೇಷವಾಗಿ ಈ ವಿಷಯವನ್ನು ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ‘ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಡುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗೆ ನನ್ನ ವಿಶೇಷ ಶುಭಾಶಯಗಳು’ ಎಂದು ಹೇಳಿದ್ದಾರೆ. ಈ ಮೂಲಕ ಸಮಂತಾ ತಾಯಿ ಆಗುತ್ತಿರುವ ವಿಷಯ ಖಚಿತಪಡಿಸದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version