Headlines

ವಾಹನ ಸವಾರರೇ ಈ ಕಾನೂನಿನ ಬಗ್ಗೆ ಗೊತ್ತಾ?: ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರು ಹೀಗೆ ಮಾಡುವಂತಿಲ್ಲ – Kannada News | Traffic Rules: No Parking Penalties, Your Rights and Illegal Police Actions. Stay Informed!

ನಮ್ಮ ದೇಶದ ಕಾನೂನುಗಳ ಬಗ್ಗೆ ಎಲ್ಲರಿಗೂ ವಿಸ್ತೃತವಾಗಿ ಗೊತ್ತಿರಲ್ಲ, ಆದರೆ ಅದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಅದರಲ್ಲೂ ಈ ಟ್ರಾಫಿಕ್​​ ರೂಲ್ಸ್​​​​ ಬಗ್ಗೆ ಎಲ್ಲರು ತಿಳಿದುಕೊಳ್ಳಲೇಬೇಕು. ಕೆಲವು ಪೊಲೀಸರಿಗೂ ಈ ಟ್ರಾಫಿಕ್​ ರೂಲ್ಸ್​​​ (No-Parking) ಹಾಗೂ ವಾಹನ ಸಂಚಾರದ ಕಾನೂನಿನ ಬಗ್ಗೆ ತಿಳಿದಿಲ್ಲ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ತಿಳಿದುಕೊಂಡು ಸಂಚಾರ ನಿಯಮಗಳು ಹಾಗೂ ಅದಕ್ಕಿರುವ ಕಾನೂನು ಕ್ರಮಗಳೇನು ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಈ ನೋ-ಪಾರ್ಕಿಂಗ್ ಬಗ್ಗೆಯೂ ಒಂದು ಕಾನೂನಿನ ನಿಯಮ ಇದೆ. ನೋ-ಪಾರ್ಕಿಂಗ್…

Read More

‘ವೋಟ್​​​ ನಂಬರ್ ಆಚೆ ಬಂದ್ರೆ ನಾನೇ ವಿನ್ನರ್’; ಅಶ್ವಿನಿ ಗೌಡ ನೇರ ಮಾತು – Kannada News | Ashwini Gowda Alleges Bigg Boss 12 Vote Manipulation, Calls Gilli’s Win Undeserved

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ (Ashwini Gowda) ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿ ನಟ ಅವರು ವಿನ್ನರ್ ಆಗಿದ್ದಾರೆ. ಗಿಲ್ಲಿನೇ ವಿನ್ನರ್ ಎಂಬುದು ಸೀಸನ್ ಆರಂಭದಲ್ಲೇ ಕೆಲವರಿಗೆ ಅನಿಸಿತ್ತು. ಅವರಿಗೆ ಸೃಷ್ಟಿಯಾದ ಅಭಿಮಾನಿ ವರ್ಗವೇ ಇದಕ್ಕೆ ಕಾರಣ. ಆದರೆ, ಗಿಲ್ಲಿ ಗೆಲುವಿನ ಬಗ್ಗೆ ಅಶ್ವಿನಿ ಗೌಡ ಪ್ರಶ್ನೆ ಮಾಡುತ್ತಿದ್ದಾರೆ. ನಿಜವಾದ ವೋಟ್ ಸಂಖ್ಯೆ ಆಚೆ ಬಂದರೆ ವಿನ್ನರ್ ಬದಲಾಗುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಗಿಲ್ಲಿ ನಟನಿಗೆ ವಿನ್ನರ್ ಪಟ್ಟ ಸಿಕ್ಕಿದ್ದನ್ನು ಅಶ್ವಿನಿ…

Read More

ನೈಜೀರಿಯಾದಲ್ಲಿ ಕುಳಿತು ಬೆಂಗಳೂರು ಮೂಲದ ವ್ಯಕ್ತಿಗೆ ದೋಖಾ: 2.16 ಕೋಟಿ ರೂ. ಮರಳಿಸಿದ್ದು ಗೋಲ್ಡನ್​​ ಅವರ್​​! – Kannada News | Cyber Scam: 2.16 Cr Saved by Quick Police Response in Bengaluru

ಬೆಂಗಳೂರು, ಜನವರಿ 20: ಸೈಬರ್​​ ವಂಚನೆ ಪ್ರಕರಣಗಳು ಮಾಮೂಲು ಎಂಬಷ್ಟರ ಮಟ್ಟಿಗೆ ಹೆಚ್ಚಿದ್ದು, ಕೋಟಿ ಕೋಟಿ ಹಣವನ್ನು ವಂಚಕರು ಲಪಟಾಯಿಸುವ ಕೇಸ್​​ಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇವೆ. ಆದ್ರೆ ವಂಚನೆಗೆ ಒಳಗಾದವರು ತುರ್ತಾಗಿ ಈ ಬಗ್ಗೆ ಕೇಸ್​​ ದಾಖಲಿಸಿದಲ್ಲಿ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ ಎಂಬುದನ್ನು ಪ್ರಕರಣವೊಂದು ಸಾಬೀತು ಪಡಿಸಿದೆ. ಗೋಲ್ಡನ್​​ ಅವರ್​​ನಲ್ಲಿ ಕಂಪ್ಲೇಂಟ್​​ ನೀಡಿದ್ದ ಕಾರಣ ವಂಚಕರ ಪಾಲಾಗುತ್ತಿದ್ದ ಬರೋಬ್ಬರಿ 2.16 ಕೋಟಿ ಹಣ ಮರಳಿ ಕೈಸೇರಿದೆ. ಘಟನೆ ಏನು? ಗ್ರೂಪ್ ಫಾರ್ಮ್…

Read More

ಶಾಂತಿ ಪುರಸ್ಕಾರ ಇಲ್ಲ, ಶಾಂತಿ ನನ್ನ ಜವಾಬ್ದಾರಿಯಲ್ಲ ಎನ್ನುತ್ತಾ ಗಾಜಾ ಶಾಂತಿ ಮಂಡಳಿ ತೆರೆದ ಟ್ರಂಪ್, 2 ದಿನಗಳಲ್ಲಿ ಕೊಟ್ಟ ಹೇಳಿಕೆಗಳೇನು? – Kannada News | Trump’s Geopolitical Shake up: Nobel Regret, Gaza Peace and Global Map Redrawn

ವಾಷಿಂಗ್ಟನ್, ಜನವರಿ 20:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ನಿತ್ಯ ಒಂದಲ್ಲಾ ಒಂದು ಹೇಳಿಕೆ ಕೊಡುತ್ತಾ ಸುದ್ದಿಯಲ್ಲಿರುತ್ತಾರೆ. ಕಳೆದ 48 ಗಂಟೆಗಳಲ್ಲಿ ಯಾವೆಲ್ಲಾ ದೇಶಗಳಿಗೆ ಶಾಂತಿ ಪಾಠ ಮಾಡಿದ್ದಾರೆ, ಯಾವೆಲ್ಲಾ ದೇಶಗಳ ಜತೆ ಯುದ್ಧಕ್ಕೆ ಸಜ್ಜಾಗಿದ್ದಾರೆ, ಏನೆಲ್ಲಾ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ನನಗೆ ನೊಬೆಲ್ ಶಾಂತಿ ಪುರಸ್ಕಾರ ಕೊಟ್ಟಿಲ್ಲ, ಶಾಂತಿ ಇನ್ನು ನನ್ನ ಜವಾಬ್ದಾರಿಯಲ್ಲ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರೆ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ…

Read More

ಭಾರತದ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ನ್ಯೂಝಿಲೆಂಡ್​ಗೆ ಆಘಾತ – Kannada News | Michael Bracewell in doubt for India T20Is

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ನಾಳೆಯಿಂದ (ಜ.21) ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಕಿವೀಸ್ ಪಡೆಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮೈಕೆಲ್​ ಬ್ರೇಸ್​ವೆಲ್ ಇಡೀ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಇಂದೋರ್​ನಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮೈಕೆಲ್ ಬ್ರೇಸ್​ವೆಲ್ ಕಾಲು ನೋವಿಗೆ ಒಳಗಾಗಿ ಮೈದಾನ ತೊರೆದಿದ್ದರು. ಇದೀಗ ಈ ಗಾಯದ ಕಾರಣ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮೈಕೆಲ್…

Read More

ಪವಿತ್ರಾ ಮನೆ ಊಟಕ್ಕೆ ಬ್ರೇಕ್: ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದ ಹೈಕೋರ್ಟ್ – Kannada News | Pavithra Gowda’s Jail Home Food Halted: HC Stresses Equality, Ends Special Privilege

ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪಿ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರುಗಳು ನ್ಯಾಯಾಂಗ ಬಂಧನದಲ್ಲಿದ್ದು ಅವರಿಗೆ ವಾರಕ್ಕೊಮ್ಮೆ ಮನೆ ಊಟ ಲಭಿಸುತ್ತಿತ್ತು. ಟ್ರಯಲ್ ಕೋರ್ಟ್​​ಗೆ ಅರ್ಜಿ ಸಲ್ಲಿಸಿ ಈ ಮೂವರು ಜೈಲಿನಲ್ಲೇ ಮನೆ ಊಟ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ಪೊಲೀಸರ ಮೇಲ್ಮನವಿಯ ಬಳಿಕ ಪ್ರತಿದಿನ ಅಲ್ಲ ಬದಲಿಗೆ ವಾರಕ್ಕೆ ಒಮ್ಮೆ ಮನೆ ಊಟ ಕೊಡಬಹುದು, ವೈದ್ಯರು ಸಲಹೆ ಕೊಟ್ಟರೆ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳಿಗೂ ಮನೆ ಊಟ ಕೊಡಬಹುದು ಎಂದಿದ್ದರು. ಆದರೆ…

Read More

ಚಿರಂಜೀವಿ ಕ್ರೇಜ್: ಒಂದೇ ಕುಟುಂಬದ 140 ಮಂದಿಯಿಂದ ಸಿನಿಮಾ ವೀಕ್ಷಣೆ – Kannada News | 140 members of a family watched Chiranjeevi’s Mana Shankara Vara Prasad garu movie

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ಆದರೆ ಕಳೆದ ಐದಾರು ವರ್ಷಗಳಿಂದ ಅವರಿಗೆ ಸೂಕ್ತ ಗೆಲುವು ಸಿಕ್ಕಿರಲೇ ಇಲ್ಲ. ನಟಿಸಿದ ಸಿನಿಮಾಗಳು ಒಂದರ ಹಿಂದೊಂದರಂತೆ ಫ್ಲಾಪ್ ಆಗಿದ್ದವು. ಚಿರಂಜೀವಿ ಎಂದರೆ ಕಲೆಕ್ಷನ್ ಇಲ್ಲದ ನಟ ಎಂಬ ಅಭಿಪ್ರಾಯ ಹೊಸ ತೆಲುಗು ಸಿನಿಮಾ ವೀಕ್ಷಕರಲ್ಲಿ ಮೂಡಿಬಿಟ್ಟಿತ್ತು. ಆದರೆ ನಿಜಕ್ಕೂ ಚಿರಂಜೀವಿಯ ಕ್ರೇಜ್ ಎಂಬುದನ್ನು ಮತ್ತೆ ತೋರಿಸಿದೆ ಅವರ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ…

Read More

ಬೆಂಗಳೂರಲ್ಲಿ ಕುಖ್ಯಾತ ಮನೆಗಳ್ಳ ಅರೆಸ್ಟ್​​: ತಲೆಮರೆಸಿಕೊಂಡವನ ಮೇಲಿದೆ 40ಕ್ಕೂ ಹೆಚ್ಚು ಕೇಸ್​! – Kannada News | Notorious house burglar arrested in Bengaluru; gold worth 42 lakh recovered

ಬೆಂಗಳೂರು/ಬೆಳಗಾವಿ, ಜನವರಿ 20: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಲಗೂರು ಗ್ರಾಮದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಕದ್ದಿದ್ದ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿಯ ಅಂಚೆಪಾಳ್ಯದಲ್ಲಿ ಆರೋಪಿಯನ್ನು ಅರೆಸ್ಟ್​​ ಮಾಡಲಾಗಿದ್ದು, ಶ್ರೀಕಾಂತ್​ ಬಂಧಿತ ವ್ಯಕ್ತಿಯಾಗಿದ್ದಾನೆ. 2 ಪ್ರತ್ಯೇಕ ಪ್ರಕರಣಗಳ ಸಂಬಂಧ ಆರೋಪಿಯಿಂದ 42 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ವಶಪಡಿಸಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಸಿದ್ದುಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ. ಆರೋಪಿಗಳಾದ ಸಿದ್ದು ಮತ್ತು ಶ್ರೀಕಾಂತ್​​ ಸೇರಿ ಸುಮಾರು 248 ಗ್ರಾಂ. ತೂಕದ…

Read More

Viral: ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ? – Kannada News | Bengaluru: NRI asks if it’s possible to live in Bengaluru on a salary of Rs 90 lakh

ಬೆಂಗಳೂರು, ಜನವರಿ 20: ವಿದೇಶದಲ್ಲಿ ಉದ್ಯೋಗಕ್ಕೆಂದು ತೆರಳಿ ಅಲ್ಲಿ ಕೈ ತುಂಬಾ ಸಂಬಳ ಪಡೆದುಕೊಳ್ತಾರೆ. ಆದರೆ ಮತ್ತೆ ಭಾರತಕ್ಕೆ ಮರಳುವ ಸಂದರ್ಭ ಬಂದಾಗ ಮೊದಲು ಯೋಚಿಸುವುದೇ ಸಂಬಳದ ಬಗ್ಗೆ. ಭಾರತದಲ್ಲಿ ಕಡಿಮೆ ಸಂಬಳಕ್ಕೆ ಹೇಗೆ ಹೊಂದಿಕೊಳ್ಳೋದು ಎನ್ನುವ ಆಲೋಚನೆ ಬರುವುದು ಸಹಜ. ಆದರೆ ಇಲ್ಲೊಬ್ಬ ಅನಿವಾಸಿ ಭಾರತೀಯನದ್ದು(NRI) ಅದೇ ಪರಿಸ್ಥಿತಿ. ಅಮೆರಿಕದಲ್ಲಿ ನೆಲೆಸಿರುವ ಎನ್‌ಆರ್‌ಐರೊಬ್ಬರು ಬೆಂಗಳೂರಿನಲ್ಲಿ (Bengaluru) 90 ಲಕ್ಷ ರೂ ಉತ್ತಮ ಸಂಬಳವೇ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ…

Read More

ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು! ಮೂಲಭೂತ ಹಕ್ಕುಗಳಿಲ್ಲದೆ ಗುಡಿಸಲಲ್ಲಿ ಬದುಕುತ್ತಿದೆ ಹಕ್ಕಿಪಿಕ್ಕಿ ಸಮುದಾಯ – Kannada News | Bidar Hakki Pikki: 50 Years Homeless, Denied Basic Rights and Dignity

ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು! ಬೀದರ್, ಜನವರಿ 20: ದಶಕಗಳಿಂದ ಸ್ವಂತ ಸೂರಿಲ್ಲದೆ ಗುಡಿಸಲಿನಲ್ಲೇ ಬದುಕು ಸಾಗಿಸುತ್ತಿರುವ ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದ ಸ್ಥಿತಿ ಮಾನವೀಯತೆ ಪ್ರಶ್ನಿಸುವಂತಾಗಿದೆ. ಬೀದರ್ (Bidar) ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳು ಕಳೆದ 50 ವರ್ಷಗಳಿಂದ ಚಿಕ್ಕ ಚಿಕ್ಕ ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಚಳಿ, ಮಳೆ, ಬೇಸಿಗೆ ಎನ್ನದೆ ಅದೇ ಗುಡಿಸಲುಗಳು ಇವರಿಗೆ ಏಕೈಕ ಆಸರೆಯಾಗಿವೆ. ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು ಮತದಾರರ ಚೀಟಿ, ಆಧಾರ್ ಕಾರ್ಡ್,…

Read More