MI vs RR: ಮುಂಬೈ ಮಣಿಸಿ 4ನೇ ತಂಡವಾಗಿ ಪ್ಲೇಆಫ್‌ಗೇರಿದ ರಾಜಸ್ಥಾನ್

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದು ಲೀಗ್‌ ಹಂತದಲ್ಲಿ ಎರಡು ತಂಡಗಳ ಕೊನೆಯ ಪಂದ್ಯವಾಗಿತ್ತು. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ರಾಜಸ್ಥಾನ್​ಗೆ ಬಹಳ ಮುಖ್ಯವಾಗಿತ್ತು. ಇಂದಿನ ಪಂದ್ಯದಲ್ಲಿ ಗೆದ್ದರಷ್ಟೇ ರಾಜಸ್ಥಾನ್ ಪ್ಲೇಆಫ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಿತ್ತು. ಅದರಂತೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರಾಜಸ್ಥಾನ್ ರಾಯಲ್ಸ್ ತಂಡ 4ನೇ ತಂಡವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ರಾಜಸ್ಥಾನ್ ಗೆಲುವಿನಿಂದ ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತಂಡಗಳ ಪ್ಲೇಆಫ್‌ಗೇರುವ ಕನಸು ಕಮರಿ ಹೋಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 205 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 175 ರನ್​ಗಳಿಸಲಷ್ಟೇ ಶಕ್ತವಾಗಿ 35 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source link

ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ, ಸಂಕಷ್ಟದಲ್ಲಿ ಸಿಲುಕಿದ್ಯಾ ಗ್ಯಾರಂಟಿ ಯೋಜನೆ? – Kannada News | Beneficiaries faces Problems for Free Rice Under Anna Bhagya Scheme, what happened?

ಬೆಂಗಳೂರು, (ಮೇ 24): ಅನ್ನಭಾಗ್ಯ ಯೋಜನೆ (Anna Bhagya Scheme). ಸಿಎಂ ಸಿದ್ದರಾಮಯ್ಯಗೆ ಅನ್ನರಾಮಯ್ಯ ಅನ್ನೋ ಕೀರ್ತಿ ತಂದು ಕೊಟ್ಟ ಮಹತ್ವದ ಯೋಜನೆ. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಅನ್ನೋ ಧೇಯೋದ್ದೇಶದಿಂದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಆದ್ರೆ ಇದೇ ಯೋಜನೆ ಹಲವು ಗೊಂದಲಗಳಿಗೆ ಕಾರಣವಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ, ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುತ್ತೆ. ಅಂದ್ರೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ, ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಅಕ್ಕಿಯನ್ನ ವಿತರಣೆ ಮಾಡಲಾಗುತ್ತೆ. ಪ್ರತಿ ತಿಂಗಳೂ ಹೀಗೆ ನಡೆದುಕೊಂಡು ಬರ್ತಿದೆ. ಆದ್ರೆ, ಈ ಬಾರಿ ಕೇಂದ್ರ ಸರ್ಕಾರ ಮೇ ಹಾಗೂ ಜೂನ್ ಸೇರಿಸಿ 2 ತಿಂಗಳ ಅಕ್ಕಿಯನ್ನ ಒಟ್ಟಿಗೆ ನೀಡಿದೆ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಂದ್ರದಿಂದ ಬಂದಿರೋ ದವಸ ಧಾನ್ಯಗಳನ್ನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ 2 ತಿಂಗಳ ಅಕ್ಕಿ ಒಟ್ಟಿಗೆ ಕಳಿಸಿರೋದ್ರಿಂದ, ರಾಜ್ಯ ಸರ್ಕಾರ ಮೇ ತಿಂಗಳ ತನ್ನ ಪಾಲಿನ ಅಕ್ಕಿ ಕೊಡದೆ ಕೈ ಎತ್ತಿದೆ. ಹೀಗಾಗಿ ಸದ್ಯ ಫಲಾನುಭವಿಗಳಿಗೆ ಕೇಂದ್ರ ಕೊಟ್ಟಿರೋ 2 ತಿಂಗಳ ರೇಷನ್ ಮಾತ್ರ ವಿತರಣೆ ಮಾಡ್ತಿದ್ದು, ಮುಂದಿನ ತಿಂಗಳು ಅಕ್ಕಿ ಕೊಡ್ತಾರಾ ಇಲ್ವಾ ಅನ್ನೋ ಗೊಂದಲ ಮನೆ ಮಾಡಿದೆ.

ವಿಷ್ಯ ಏನಪ್ಪ ಅಂದ್ರೆ, ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಅಕ್ಕಿ ಖರೀದಿಸಿ ಸಂಗ್ರಹಿಸಿದೆ. ಹೀಗಾಗಿ ಒಟ್ಟಿಗೆ 2 ತಿಂಗಳ ಅಕ್ಕಿ, ರಾಗಿ ಕಳಿಸಿದೆ. ಮುಂದಿನ ತಿಂಗಳು ಕೇಂದ್ರ ತನ್ನ ಪಾಲು ಕಳಿಸಲ್ಲ. ಇದನ್ನರಿತ ರಾಜ್ಯ ಸರ್ಕಾರ, ಮೇ ತಿಂಗಳ ಬಾಕಿ ಅಕ್ಕಿ, ಜೂನ್ ಅಂದ್ರೆ ಮುಂದಿನ ತಿಂಗಳ ಪಡಿತರದ ಜೊತೆ ಸೇರಿಸಿ 2 ತಿಂಗಳ ರೇಷನ್ ಕೊಡಲು ನಿರ್ಧರಿಸಿದೆ. ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಒಟ್ನಲ್ಲಿ ಅನ್ನಭಾಗ್ಯ ಅಕ್ಕಿ ಬಗ್ಗೆ ಯಾವುದೇ ಆತಂಕಬೇಡ. ಮುಂದಿನ ತಿಂಗಳು 2 ತಿಂಗಳ ಅಕ್ಕಿ ಸಿಗುತ್ತೆ ಅಂತಾ ಸರ್ಕಾರ ಭರವಸೆ ನೀಡಿದೆ.

Source link

ಫ್ಯಾಟಿ ಲಿವರ್ ಅನ್ನು ನೈಸರ್ಗಿಕವಾಗಿ ಮತ್ತೆ ಮೊದಲಿನ ಸ್ಥಿತಿಗೆ ತರಬೇಕೇ? ಹಾಗಿದ್ರೆ ತಪ್ಪದೆ ಈ ಕೆಲಸಗಳನ್ನು ಮಾಡಿ – Kannada News | How To Reverse Fatty Liver Naturally

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅನೇಕ ವರದಿಗಳ ಪ್ರಕಾರ, ಪ್ರತಿ ಮೂವರಲ್ಲಿ ಒಬ್ಬರಿಗೆ ಫ್ಯಾಟಿ ಲಿವರ್ ಸಮಸ್ಯೆ ಕಾಣಿಸುತ್ತಿದೆ. ಅಸ್ವಸ್ಥ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಅತಿಯಾದ ತೂಕ ಮತ್ತು ಮದ್ಯಪಾನದ ಅಭ್ಯಾಸಗಳು ಇದರ ಪ್ರಮುಖ ಕಾರಣಗಳಾಗಿವೆ. ಆದರೆ ತಜ್ಞರ ಪ್ರಕಾರ, ಆರಂಭಿಕ ಹಂತದಲ್ಲೇ ಗಮನಿಸಿದರೆ ಫ್ಯಾಟಿ ಲಿವರ್ ಅನ್ನು ಬಹುಮಟ್ಟಿಗೆ ರಿವರ್ಸ್ ಮಾಡಬಹುದು. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಮನೀಷ್ ಹೇಳುವ ಪ್ರಕಾರ, ಲಿವರ್‌ನಲ್ಲಿ ಫೈಬ್ರೋಸಿಸ್ ಉಂಟಾಗುವ ಮುನ್ನವೇ ಸರಿಯಾದ ಜೀವನಶೈಲಿ ಅನುಸರಿಸಿದರೆ ಲಿವರ್ ಮೇಲಿನ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ಸಮಸ್ಯೆ ಗಂಭೀರವಾಗಿ ಸಿರೋಸಿಸ್ ಹಂತಕ್ಕೆ ತಲುಪಿದರೆ ಲಿವರ್ ಟ್ರಾನ್ಸ್‌ಪ್ಲಾಂಟ್ ಅಗತ್ಯವಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ಹಾಗಾದರೆ ಫ್ಯಾಟಿ ಲಿವರ್ ಅನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಎಷ್ಟು ಸಮಯ ಬೇಕಾಗುತ್ತದೆ, ಯಾವ ರೀತಿಯ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಫ್ಯಾಟಿ ಲಿವರ್ ಸುಧಾರಿಸಲು ಎಷ್ಟು ಸಮಯ ಬೇಕು?

ತಜ್ಞರ ಪ್ರಕಾರ, ಸಾಮಾನ್ಯವಾಗಿ ಫ್ಯಾಟಿ ಲಿವರ್ ಸುಧಾರಿಸಲು ಸುಮಾರು ಮೂರು ತಿಂಗಳು ಬೇಕಾಗಬಹುದು. ಈ ಅವಧಿಯಲ್ಲಿ ಆಹಾರ ಪದ್ಧತಿ, ವ್ಯಾಯಾಮ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ಅತ್ಯಂತ ಮುಖ್ಯ. ಮದ್ಯಪಾನ ಮಾಡುವವರು ಅದನ್ನು ನಿಧಾನವಾಗಿ ಕಡಿಮೆ ಮಾಡಬೇಕು. ಜೊತೆಗೆ ತಿಂಗಳಿಗೆ ಒಮ್ಮೆ SGPT ಪರೀಕ್ಷೆ ಮಾಡಿಸಿಕೊಂಡರೆ ಲಿವರ್ ಆರೋಗ್ಯದಲ್ಲಿ ಆಗುತ್ತಿರುವ ಸುಧಾರಣೆಯನ್ನು ತಿಳಿದುಕೊಳ್ಳಬಹುದು.

ವಾಕ್ ಮಾಡುವುದು ಬಹಳ ಮುಖ್ಯ:

ಪ್ರತಿದಿನ ನಡೆಯುವುದು ಬಹಳ ಮುಖ್ಯ. ಡಾ. ಮನೀಷ್ ಅವರ ಪ್ರಕಾರ, ವಾರಕ್ಕೆ ಕನಿಷ್ಠ ಐದು ದಿನ ಬ್ರಿಸ್ಕ್ ವಾಕ್ ಮಾಡುವುದು ಉತ್ತಮ. ಜೊತೆಗೆ ದಿನಕ್ಕೆ 5 ರಿಂದ 7 ಸಾವಿರ ಹೆಜ್ಜೆ ನಡೆಯಿರಿ, 2 ದಿನ ಸ್ಟ್ರೆಂಗ್ತ್ ಟ್ರೈನಿಂಗ್ ಮಾಡಿ, ಊಟದ ನಂತರ 10 ನಿಮಿಷ ನಡೆಯುವ ಅಭ್ಯಾಸ ಬೆಳೆಸಿಕೊಳ್ಳಿ, ಬೆಳಗಿನ ಸೂರ್ಯನ ಬೆಳಕಿನಲ್ಲಿ ನಡೆಯುವುದರಿಂದ ವಿಟಮಿನ್ D ದೊರೆಯುತ್ತದೆ. ಇದು ಲಿವರ್ ಆರೋಗ್ಯಕ್ಕೆ ಸಹಾಯಕವಾಗಿದೆ.

ಇದನ್ನೂ ಓದಿ: ಪ್ರತಿದಿನ ಕಿತ್ತಳೆ ತಿಂದರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ? ಅಧ್ಯಯನ ಏನು ಹೇಳುತ್ತದೆ?

ಸಕ್ಕರೆ ಸೇವನೆ ಕಡಿಮೆ ಮಾಡುವುದು ಅಗತ್ಯ:

ತಜ್ಞರ ಪ್ರಕಾರ, ಹೆಚ್ಚು ಸಕ್ಕರೆ ಇರುವ ಆಹಾರಗಳು ಲಿವರ್‌ಗೆ ಹಾನಿಕಾರಕ. ಆದ್ದರಿಂದ ಸಿಹಿ ಪದಾರ್ಥಗಳು, ಸಕ್ಕರೆ ಹಾಕಿದ ಚಹಾ ಅಥವಾ ಕಾಫಿ, ಬೇಕರಿ ಆಹಾರಗಳು, ಸಿಹಿ ಪಾನೀಯಗಳು ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಸಂಪೂರ್ಣವಾಗಿ ಸಕ್ಕರೆ ಬಿಡುವುದಕ್ಕಿಂತ ನಿಯಂತ್ರಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಹಸಿರು ತರಕಾರಿಗಳು ಲಿವರ್ ಆರೋಗ್ಯಕ್ಕೆ ಉತ್ತಮ:

ಪಾಲಕ್, ಬ್ರೋಕೋಲಿ, ಸೌತೆಕಾಯಿ, ಹೀರೇಕಾಯಿ ಮತ್ತು ಹಾಗಲಕಾಯಿ ಮುಂತಾದ ಹಸಿರು ತರಕಾರಿಗಳು ಲಿವರ್‌ನಲ್ಲಿ ಉಂಟಾಗುವ ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ತಜ್ಞರ ಸಲಹೆಯಂತೆ, ದಿನಕ್ಕೆ ಕನಿಷ್ಠ ಒಂದು ತರಕಾರಿ ಆಹಾರದಲ್ಲಿ ಇರಬೇಕು.

ಪ್ರೋಟೀನ್ ಆಹಾರ ಬಹಳ ಮುಖ್ಯ:

ಫ್ಯಾಟಿ ಲಿವರ್ ಸಮಸ್ಯೆಯಲ್ಲಿ ಪ್ರೋಟೀನ್ ಸಮೃದ್ಧ ಆಹಾರ ಸೇವಿಸುವುದು ಅಗತ್ಯ. ನೀವು ಶಾಕಾಹಾರಿಗಳಾಗಿದ್ದರೆ ಹಸಿರು ಮೂಂಗ್ ದಾಲ್, ಕಡಲೆ, ರಾಜ್ಮಾ, ಸ್ಪ್ರೌಟ್ಸ್,ಪನೀರ್, ಟೋಫು ಸೇವನೆ ಮಾಡಬಹುದು. ನೀವು ಮಾಂಸಾಹಾರಿಗಳಾಗಿದ್ದರೆ ಮೊಟ್ಟೆ, ಗ್ರಿಲ್ ಮಾಡಿದ ಚಿಕನ್ ಮತ್ತು ಮೀನನ್ನು ಸೇವನೆ ಮಾಡಬಹುದು. ಜೊತೆಗೆ ವಿಟಮಿನ್ B12 ಹೊಂದಿರುವ ಆಹಾರಗಳು ಕೂಡ ಲಿವರ್ ಆರೋಗ್ಯ ಸುಧಾರಿಸಲು ಸಹಕಾರಿ.

ತಜ್ಞರು ಹೇಳುವಂತೆ, ಫ್ಯಾಟಿ ಲಿವರ್ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಲಿವರ್ ಆರೋಗ್ಯವನ್ನು ಮತ್ತೆ ಉತ್ತಮ ಸ್ಥಿತಿಗೆ ತರಬಹುದು. ಸಮಯಕ್ಕೆ ಗಮನ ಕೊಟ್ಟರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದೆಂಥಾ ದುರ್ದೈವ! ಕ್ರಿಕೆಟ್ ಆಡುತ್ತಿರುವಾಗಲೇ ಕುಸಿದು ಬಿದ್ದು ಆಟಗಾರ ಸಾವು – Kannada News | Tragedy at KSCA League Match as Ranji Cricketer Dies of Heart Attack

ಬೆಂಗಳೂರು, ಮೇ 24: ರಾಜಧಾನಿಯಲ್ಲಿ ಭಾನುವಾರ ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಕೆಎಸ್​ಸಿಎ (KSCA) ಲೀಗ್ ಪಂದ್ಯಾವಳಿ ವೇಳೆ ರಣಜಿ ಅನುಭವಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ (Heart Attack) ಮೃತಪಟ್ಟಿರುವಂತಹ ಘಟನೆ ಬೆಂಗಳೂರಿನ ಬೊಮ್ಮಸಂದ್ರದ ಎಸ್​​ಎಲ್​​ಎಸ್​ ಮೈದಾನದಲ್ಲಿ ನಡೆದಿದೆ. ಎಸ್.ಎಲ್. ಅಕ್ಷಯ್ (36) ಮೃತ ಕ್ರಿಕೆಟ್ ಆಟಗಾರ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • KSCA ಲೀಗ್ ಪಂದ್ಯದ ವೇಳೆ ಆಘಾತಕಾರಿ ಘಟನೆ
  • ಶಿವಮೊಗ್ಗ ಮೂಲದ ಕ್ರಿಕೆಟ್​​ ಆಟಗಾರನಿಗೆ ಹೃದಯಾಘಾತ
  • ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ನಡೆದಿದ್ದೇನು?

ಬೆಂಗಳೂರಿನ ಬೊಮ್ಮಸಂದ್ರದ ಎಸ್​ಎಲ್​ಎಸ್ ಕ್ರೀಡಾಂಗಣದಲ್ಲಿ ಕೆಎಸ್​ಸಿಎ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ನಡೆಯುತ್ತಿತ್ತು. ಮೂಲತಃ ಶಿವಮೊಗ್ಗದ ಅಕ್ಷಯ್ ಪಂದ್ಯದ ವೇಳೆ ಎಂದಿನಂತೆ ಉತ್ಸಾಹದಿಂದಲೇ ಪಾಲ್ಗೊಂಡು 4 ಓವರ್ ಬೌಲಿಂಗ್ ಮಾಡಿದ್ದರು. ಆದರೆ, ಆ ಬಳಿಕ ತಮಗೆ ಸ್ವಲ್ಪ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿ ಮೈದಾನದಿಂದ ಅರ್ಧಕ್ಕೆ ಹೊರಬಂದಿದ್ದರು. ಕ್ರೀಡಾಂಗಣದ ಹೊರಗೆ ಬಂದು ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು

ತಕ್ಷಣ ಅಕ್ಷಯ್​​ರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ಅವಲಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಣಜಿ ಪಂದ್ಯಾವಳಿಗಳನ್ನು ಆಡಿದ ಉತ್ತಮ ಅನುಭವ ಹೊಂದಿದ್ದ ಪ್ರತಿಭಾವಂತ ಆಟಗಾರನೊಬ್ಬ ಪಂದ್ಯದ ಮಧ್ಯೆಯೇ ಹೀಗೆ ಇಹಲೋಕ ತ್ಯಜಿಸಿರುವುದು ಸದ್ಯ ತೀವ್ರ ಆಘಾತ ಉಂಟುಮಾಡಿದೆ.

ಹೃದಯಾಘಾತದಿಂದ ಉದ್ಯೋಗ ಖಾತ್ರಿ ಕಾರ್ಮಿಕ ಸಾವು

ಹೃದಯಾಘಾತದಿಂದ ಉದ್ಯೋಗ ಖಾತ್ರಿ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ನಾಗಪ್ಪ(51) ಮೃತ ಕಾರ್ಮಿಕ. ನಾಗಪ್ಪ ಇಂದು ಬೆಳಗ್ಗೆ ಎಂದಿನಂತೆ ನರೇಗಾ ಕೆಲಸಕ್ಕೆ ಹೋಗಿದ್ದರು. ಗಿಡಗಂಟಿಗಳನ್ನ ಕಡಿಯುವಾಗ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗ ಬಳಿಕ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ ಜಾಹ್ನವಿ

ಬೆಂಗಳೂರು, (ಮೇ 24): ಕನ್ನಡ ಬಿಗ್ ಬಾಸ್ ಮೂಲಕ ಜನಪ್ರಿಯರಾದ ನಿರೂಪಕಿ ಜಾಹ್ನವಿ ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೌದು… ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗದಿಂದ ಇದೀಗ ಜಾಹ್ನವಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಿಗ್ ಬಾಸ್ ರಿಯಾಲಿ ಶೋಗಳಿಂದ ಜನಪ್ರಿಯತೆ ಗಳಿಸಿರುವ ಜಾಹ್ನವಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇಂದು (ಮೇ 24) ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜಾಹ್ನವಿ ಅಧಿಕೃತವಾಗಿ ಜೆಡಿಎಸ್​ ಸೇರ್ಪಡೆಯಾದರು.ಈ ಮೂಲಕ ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗದಿಂದ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

Source link

ದೇಹದಲ್ಲಿ ಈ ರೀತಿ ಬದಲಾವಣೆ ಕಂಡು ಬಂದ್ರೆ ತಡಮಾಡದೆಯೇ ವೈದ್ಯರನ್ನು ಭೇಟಿ ಮಾಡಿ – Kannada News | Ebola Virus Symptoms: Early Warning Signs & Expert Prevention Tips From WHO

ಇತ್ತೀಚಿನ ದಿನಗಳಲ್ಲಿ ಇಬೋಲಾ (Ebola) ವೈರಸ್‌ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಇದು ಅತ್ಯಂತ ಅಪಾಯಕಾರಿ ವೈರಲ್ ಸೋಂಕುಗಳಲ್ಲಿ ಒಂದಾಗಿ ಪರಿಗಣಿಸಲಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆರಂಭದಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳಂತೆ ಕಾಣುವ ಕಾರಣ, ಅನೇಕರು ಇದನ್ನು ನಿರ್ಲಕ್ಷಿಸುವ ಸಾಧ್ಯತೆ ಇದೆ. ಆದರೆ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಈ ಸೋಂಕು ಗಂಭೀರ ರೂಪ ಪಡೆಯಬಹುದು. ತಜ್ಞರ ಪ್ರಕಾರ, ಇಬೋಲಾ ವೈರಸ್‌ನ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಮತ್ತು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ. ಇಲ್ಲವಾದಲ್ಲಿ ಇದು ಪ್ರಾಣಕ್ಕೆ ಅಪಾಯಕಾರಿಯಾಗಿಬಹುದು.

ಇಬೋಲಾ ವೈರಸ್‌ನ ಆರಂಭಿಕ ಲಕ್ಷಣಗಳು?

ಗೋರಖ್‌ಪುರದ ರೀಜೆನ್ಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ತಜ್ಞ ಡಾ. ವಿಜಯ್ ಕುಮಾರ್ ಶರ್ಮಾ ಅವರ ಪ್ರಕಾರ, ಇಬೋಲಾ ವೈರಸ್‌ನ ಆರಂಭಿಕ ಲಕ್ಷಣಗಳು ಸಾಮಾನ್ಯ ವೈರಲ್ ಜ್ವರದಂತೆಯೇ ಕಾಣುತ್ತವೆ. ಆದರೆ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುವುದು, ತೀವ್ರ ತಲೆನೋವು, ದೇಹ ಮತ್ತು ಸ್ನಾಯು ನೋವು, ಅತಿಯಾದ ಆಯಾಸ ಮತ್ತು ದುರ್ಬಲತೆ, ಗಂಟಲು ನೋವು, ವಾಂತಿ ಮತ್ತು ಅತಿಸಾರ, ಹೊಟ್ಟೆ ನೋವು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಸೋಂಕು ಗಂಭೀರ ಹಂತಕ್ಕೆ ತಲುಪಿದರೆ ಕೆಲವರಲ್ಲಿ ದೇಹದ ಒಳಭಾಗ ಅಥವಾ ಹೊರಭಾಗದಲ್ಲಿ ರಕ್ತಸ್ರಾವ (Bleeding) ಕೂಡ ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಅಗತ್ಯ.

ಇಬೋಲಾ ವೈರಸ್ ಹೇಗೆ ಹರಡುತ್ತದೆ?

ಇಬೋಲಾ ವೈರಸ್ ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ನೇರ ಸಂಪರ್ಕದ ಮೂಲಕ ಹರಡಬಹುದು. ಸೋಂಕಿತ ವ್ಯಕ್ತಿಯನ್ನು ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ ನೋಡಿಕೊಳ್ಳುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ: ಕಾಂಗೋ, ಉಗಾಂಡಾದಲ್ಲಿ ಎಬೋಲಾ ರುದ್ರನರ್ತನ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪ್ರಯಾಣಿಕರಿಗೆ ಮಹತ್ವದ ಸೂಚನೆ

ಇಬೋಲಾ ವೈರಸ್‌ನಿಂದ ಹೇಗೆ ರಕ್ಷಿಸಿಕೊಳ್ಳಬೇಕು?

  • ಸೋಂಕಿತ ವ್ಯಕ್ತಿಯಿಂದ ದೂರವಿರಿ
  • ಮಾಸ್ಕ್, ಗ್ಲೌವ್ಸ್ ಮತ್ತು ಸುರಕ್ಷತಾ ಸಾಧನಗಳನ್ನು ಬಳಸಿ
  • ಕೈಗಳನ್ನು ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ತೊಳೆಯಿರಿ
  • ಸ್ಯಾನಿಟೈಸರ್ ಬಳಸುವ ಅಭ್ಯಾಸ ಬೆಳೆಸಿಕೊಳ್ಳಿ
  • ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
  • ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿ
  • ವಿದೇಶಗಳಿಂದ ಬಂದವರು ವಿಶೇಷ ಎಚ್ಚರಿಕೆ ವಹಿಸಬೇಕು

ಇಬೋಲಾ ಸೋಂಕು ಪ್ರಕರಣಗಳು ಕಂಡುಬಂದಿರುವ ದೇಶಗಳಿಂದ ಬಂದಿರುವವರು ತಮ್ಮ ಆರೋಗ್ಯದ ಮೇಲೆ ವಿಶೇಷ ಗಮನಹರಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಜ್ವರ, ದೌರ್ಬಲ್ಯ ಅಥವಾ ಇತರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ತಜ್ಞರ ಅಭಿಪ್ರಾಯದಂತೆ, ಭಯಪಡುವುದಕ್ಕಿಂತ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅತ್ಯಂತ ಮುಖ್ಯ. ಸಮಯಕ್ಕೆ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ಪಡೆದರೆ ಜೀವ ಉಳಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಕೆಕೆಆರ್​ ತೊರೆದ 18 ಕೋಟಿಯ ಬೌಲರ್ – Kannada News | IPL 2026: KKR’s Do or Die vs DC; matheesha pathirana Injured, Luvnith Sisodia Joins Squad

ಐಪಿಎಲ್ 2026 (IPL 2026) ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಿದೆ. ಲೀಗ್ ಹಂತದಲ್ಲಿ ಅಂತಿಮ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿರುವ ಕೆಕೆಆರ್ ಈ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕು. ಆಗ ಮಾತ್ರ ಪ್ಲೇಆಫ್​ಗೇರುವ ಅವಕಾಶ ಹೊಂದಿರುತ್ತದೆ. ಹೀಗಿರುವಾಗ ಕೆಕೆಆರ್ ಬಲಿಷ್ಠ ಪ್ಲೇಯಿಂಗ್ 11 ಕಟ್ಟಿಕೊಂಡು ಕಣಕ್ಕಿಳಿಯಬೇಕಾಗುತ್ತದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ವೇಗಿ ಮಥಿಶಾ ಪತಿರಾನ ಮಂಡಿರಜ್ಜು ಗಾಯದಿಂದಾಗಿ ತಂಡದಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಬದಲಿ ಆಟಗಾರನಾಗಿ ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲುವ್ನಿತ್ ಸಿಸೋಡಿಯಾ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.

ಕೆಕೆಆರ್ ತೊರೆದ ಮಥಿಶಾ ಪತಿರಾನ

ಇತ್ತೀಚೆಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಮಥಿಶಾ ಪತಿರಾನ ಗಾಯಗೊಂಡಿದ್ದರು. ಕೇವಲ 1.2 ಓವರ್ ಬೌಲಿಂಗ್ ಮಾಡಿದ ನಂತರ ಅವರು ಮೈದಾನದಿಂದ ಹೊರನಡೆಯಬೇಕಾಯಿತು. ಇದು ಕೊಲ್ಕತ್ತಾ ಪರ ಪತಿರಾನ ಅವರ ಚೊಚ್ಚಲ ಪಂದ್ಯವೂ ಆಗಿತ್ತು. ಆದಾಗ್ಯೂ, ಮೊದಲನೇ ಪಂದ್ಯದಲ್ಲೇ ಮತ್ತೆ ಗಾಯಕ್ಕೆ ತುತ್ತಾದ ಪತಿರಾನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯವನ್ನು ಆಡದೆ ತಂಡದಿಂದ ಹೊರಬಿದ್ದಿದ್ದಾರೆ.

ಕಳೆದ ಹರಾಜಿನಲ್ಲಿ ಕೆಕೆಆರ್, ಮಥಿಶಾ ಪತಿರಾನಗೆ 18 ಕೋಟಿ ನೀಡಿ ತಂಡಕ್ಕೆ ಖರೀದಿ ಮಾಡಿತ್ತು. ತಂಡವು ಡೆತ್ ಓವರ್‌ಗಳಲ್ಲಿ ಅವರನ್ನು ಮಾರಕ ಅಸ್ತ್ರವಾಗಿ ಬಳಸಲು ಬಯಸಿತ್ತು. ಆದರೆ ಗಾಯದಿಂದಾಗಿ ಪತಿರಾನ ಇಡೀ ಆವೃತ್ತಿಯಲ್ಲಿ ಒಂದು ಪಂದ್ಯಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್ ಸಮಯದಲ್ಲಿ ಉಂಟಾದ ಎಡಗಾಲಿನ ಗಾಯದಿಂದ ಪತಿರಾನ ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ಇದರ ಪರಿಣಾಮವಾಗಿ, ಮಥಿಶಾ ಪತಿರಾನ ಐಪಿಎಲ್ 2026 ರ ಆರಂಭದಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಎನ್‌ಒಸಿ ಪಡೆಯಲು ಸಾಧ್ಯವಾಗಲಿಲ್ಲ. ಆ ನಂತರ ಎನ್​ಒಸಿ ಪಡೆದು ತಂಡ ಸೇರಿಕೊಂಡಿದ್ದ ಪತಿರಾನ ಒಂದು ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ.

MI vs RR IPL 2026 Live Score: ಮುಂಬೈ 4ನೇ ವಿಕೆಟ್ ಪತನ

ಸಿಸೋಡಿಯಾಗೆ ಅವಕಾಶ

ಲುವ್ನಿತ್ ಸಿಸೋಡಿಯಾ ಎಡಗೈ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದು, ಅವರು ಕರ್ನಾಟಕ ಪರ 15 ಟಿ20 ಪಂದ್ಯಗಳನ್ನು ಆಡಿದ್ದಾರೆ, ಆದರೆ ಇನ್ನೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿಲ್ಲ. ಪತಿರಾನ ಸ್ಥಾನದಲ್ಲಿ ಅವರನ್ನು ಸೇರಿಸಿಕೊಳ್ಳುವುದು ಒಂದೇ ರೀತಿಯ ಬದಲಿಯಲ್ಲ, ಏಕೆಂದರೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವೇಗದ ಬೌಲರ್ ಅನ್ನು ಬದಲಾಯಿಸುತ್ತಿದ್ದಾರೆ. ಸಿಸೋಡಿಯಾ ಈ ಹಿಂದೆ ಆರ್‌ಸಿಬಿ ಮತ್ತು ಕೆಕೆಆರ್ ಎರಡೂ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರ್ನಾಟಕದಲ್ಲಿ ಮುಂದಿನ 7 ದಿನ ಮಳೆ ಅಬ್ಬರ; ಬೆಂಗಳೂರಿಗೂ ಮಳೆ ಎಚ್ಚರಿಕೆ! – Kannada News | Karnataka Weather Forecast: Heavy Rain Likely Across State for Next 7 Days, Bengaluru on Alert

ಬೆಂಗಳೂರು, ಮೇ 24: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ (Rain) ಚುರುಕುಗೊಂಡಿದೆ. ಮುಂದಿನ ಏಳು ದಿನಗಳ ಕಾಲ ಕರ್ನಾಟಕದಲ್ಲಿ ಗುಡುಗು, ಬಿರುಗಾಳಿ ಸಹಿತ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿವೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕು
  • ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
  • ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಮೋಡಗಳು ದಟ್ಟವಾಗುವ ಸಾಧ್ಯತೆಯಿದ್ದು, ನಗರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಮಳೆಯ ಸಮಯದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮುಂದಿನ ಎರಡು ದಿನಗಳ ಕಾಲ ನಗರದ ಗರಿಷ್ಠ ಉಷ್ಣಾಂಶ 32°C ಹಾಗೂ ಕನಿಷ್ಠ ಉಷ್ಣಾಂಶ 22°C ಆಸುಪಾಸಿನಲ್ಲಿ ಇರಲಿದೆ ಎಂದು ತಿಳಿಸಲಾಗಿದೆ.

KSNDMC ಟ್ವೀಟ್​​

ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಹಸಿರು ಅಲರ್ಟ್ ಘೋಷಿಸಲಾಗಿದೆ. ಮೇ 25ರಂದು ಉತ್ತರ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಮೇ 26 ಮತ್ತು 27 ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಮೇ 28 ಮತ್ತು 30ರಂದು ಯಾವುದೇ ಮಳೆಯ ಮುನ್ಸೂಚನೆ ಇಲ್ಲ.

ಇದನ್ನೂ ಓದಿ: Karnataka Weather Forecast: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ! ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು, ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗರೂಕರಾಗಿರಬೇಕು ಮತ್ತು ಸಿಡಿಲು ಬಡಿಯುವ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನಲ್ಲಿ ಮೇ 30ರವರಗೆ ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮೇ 25ರಂದು ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆ ಸುರಿಯುವ ಮುನ್ಸೂಚನೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೇ 26 ಮತ್ತು ಮೇ 27ರಂದು ಮಳೆಯ ಆರ್ಭಟ ಮುಂದುವರಿಯಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು ಮೇ 28ರಿಂದ ಮೇ 30ರವರೆಗೆ ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ಯಾವುದೇ ಮುನ್ನೆಚ್ಚರಿಕೆ ನೀಡಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು? – Kannada News | UK bound flight Jet2 pilot has heart attack in mid air what happens next?

ನವದೆಹಲಿ, ಮೇ 24: ಸ್ಪೇನ್‌ನ ಟೆನೆರೈಫ್‌ನಿಂದ ಯುಕೆಯ ಬರ್ಮಿಂಗ್ಹ್ಯಾಮ್‌ಗೆ ಹೊರಟಿದ್ದ 220 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜೆಟ್2 ಫ್ಲೈಟ್ LS1266, 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಆ ವಿಮಾನದ ಪೈಲಟ್​​ಗೆ ಹೃದಯಾಘಾತವಾಗಿದೆ (Heart Attack). ಇದರಿಂದಾಗಿ ವಿಮಾನವನ್ನು ಪೋರ್ಚುಗಲ್‌ನ ಪೋರ್ಟೊ ವಿಮಾನ ನಿಲ್ದಾಣಕ್ಕೆ ತಿರುಗಿಸಬೇಕಾಯಿತು. ಸಹ ಪೈಲಟ್ ಸಕಾಲಿಕವಾಗಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವು ವೇಗವಾಗಿ ಇಳಿಯಿತು.

ಇದು ವಿಮಾನದಲ್ಲಿ ಅವ್ಯವಸ್ಥೆ ಮತ್ತು ಭೀತಿಯನ್ನು ಉಂಟುಮಾಡಿತು. ಈ ವಿಮಾನದಲ್ಲಿ ಒಟ್ಟು 220 ಪ್ರಯಾಣಿಕರಿದ್ದರು. ಪೈಲಟ್‌ನ ಆರೋಗ್ಯ ಹದಗೆಟ್ಟಿದ್ದರಿಂದ ಕ್ಯಾಬಿನ್ ಸಿಬ್ಬಂದಿ ತೀವ್ರ ಚಿಂತಿತರಾದರು. ಅವರು ಕಣ್ಣೀರು ಸುರಿಸುತ್ತಾ ಪ್ರಯಾಣಿಕರ ನಡುವೆ ಓಡಿಹೋದರು. ಪ್ರಯಾಣಿಕರಲ್ಲಿ ಯಾರಾದರೂ ವೈದ್ಯಕೀಯ ತರಬೇತಿಯನ್ನು ಹೊಂದಿದ್ದಾರೆಯೇ ಅಥವಾ ವೈದ್ಯರೇ ಎಂದು ಮೈಕ್​ನಲ್ಲಿ ಕೇಳಲಾಯಿತು. ವಿಮಾನದಲ್ಲಿನ ಲೈಟ್​​ಗಳು ಮಿನುಗಿದವು. ಇದರಿಂದ ಸಿಬ್ಬಂದಿ ಆತಂಕಕ್ಕೊಳಗಾದರು. ನಿದ್ರಿಸುತ್ತಿದ್ದ ಪ್ರಯಾಣಿಕರು ಎಚ್ಚರಗೊಂಡು ಆತಂಕಕ್ಕೊಳಗಾದರು.

ಇದನ್ನೂ ಓದಿ: ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!

ಪೈಲಟ್ ಅನಾರೋಗ್ಯಕ್ಕೆ ಒಳಗಾದ ನಂತರ ಸಹ-ಪೈಲಟ್ ತಕ್ಷಣ ಪ್ರತಿಕ್ರಿಯಿಸಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ಪೋರ್ಚುಗಲ್‌ನ ಪೋರ್ಟೊಗೆ ತಿರುಗಿಸಲಾಯಿತು. ವಿಮಾನವು ತುಂಬಾ ವೇಗವಾಗಿ ಇಳಿಯುತ್ತಿದ್ದಂತೆ, ಒಳಗಿದ್ದ ಮಕ್ಕಳು ಅಳಲು ಪ್ರಾರಂಭಿಸಿದರು. ಸಹ-ಪೈಲಟ್ ತ್ವರಿತವಾಗಿ ಪೋರ್ಟೊ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ರನ್‌ವೇಯಲ್ಲಿ ಸಿದ್ಧವಾಗಿದ್ದ ತುರ್ತು ವೈದ್ಯಕೀಯ ಸಿಬ್ಬಂದಿ ತಕ್ಷಣ ವಿಮಾನವನ್ನು ಹತ್ತಿ, ಪೈಲಟ್‌ಗೆ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದರು.

ಇದನ್ನೂ ಓದಿ: ಹೃದಯಾಘಾತವಾದಾಗ ಮೊದಲು 10ನಿಮಿಷದಲ್ಲಿ ಏನು ಮಾಡಬೇಕು?

ವಿಮಾನ ಸುರಕ್ಷಿತವಾಗಿ ಇಳಿದರೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲಿಲ್ಲ. ಪ್ರಯಾಣಿಕರಿಗೆ ಇಳಿದ ನಂತರ 1 ಗಂಟೆಗೂ ಹೆಚ್ಚು ಕಾಲ ವಿಮಾನದಿಂದ ಇಳಿಯಲು ಅವಕಾಶ ನೀಡಲಿಲ್ಲ, ಸರಿಯಾದ ವಸತಿ ಸೌಲಭ್ಯಗಳನ್ನು ಒದಗಿಸಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯಿಸಿದ ಜೆಟ್2 ಏರ್ಲೈನ್ಸ್, ಪೈಲಟ್ ಅನಾರೋಗ್ಯದಿಂದಾಗಿ ವಿಮಾನವನ್ನು ಬೇರೆಡೆಗೆ ತಿರುಗಿಸಬೇಕಾಯಿತು ಮತ್ತು ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಮಾನದ ವಿಳಂಬಕ್ಕೆ ಕ್ಷಮೆಯಾಚಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್ – Kannada News | Smart Investment for Beginners: Build Long Term Wealth & Financial Security

ಹಣ ಗಳಿಸುವುದು ಎಷ್ಟು ಮುಖ್ಯವೋ, ಗಳಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ (Investment) ಮಾಡಿ ಅದರಿಂದ ಸಂಪತ್ತನ್ನು ಬೆಳೆಸುವುದು ಮತ್ತು ರಕ್ಷಿಸುವುದು ಅಷ್ಟೇ ಮುಖ್ಯ. ಹೂಡಿಕೆ ಜಗತ್ತಿಗೆ ಹೊಸದಾಗಿ ಕಾಲಿಡುತ್ತಿರುವವರಿಗಾಗಿ (Beginners), ದೀರ್ಘಾವಧಿಯಲ್ಲಿ ಆರ್ಥಿಕ ಭದ್ರತೆ ಪಡೆಯಲು ಸಹಾಯ ಮಾಡುವ ಕೆಲವು ಸರಳ ಮತ್ತು ಪ್ರಮುಖ ಆರ್ಥಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ನೀವು ಒಂದು ಅಥವಾ ಎರಡು ವರ್ಷದವರೆಗೆ ಮಾತ್ರ ಹೂಡಿಕೆ ಮಾಡಿ, ಹಣ ವಿತ್​ಡ್ರಾ ಮಾಡಿಕೊಳ್ಳುತ್ತೇನೆ ಎಂದಿದ್ದರೆ ಆರ್​ಡಿಯಲ್ಲೋ, ಎಫ್​ಡಿಯಲ್ಲೋ ಅಥವಾ ಕೆಲ ಪೋಸ್ಟ್ ಆಫೀಸ್ ಸ್ಕೀಮ್​ಗಳನ್ನೂ ಬಳಸಬಹುದು. ದೀರ್ಘಾವಧಿ ಹೂಡಿಕೆಯಿಂದ ಮಾತ್ರ ಸಂಪತ್ತು ಅಚ್ಚರಿ ರೀತಿಯಲ್ಲಿ ಬೆಳೆಯುತ್ತೆ. ಆ ನಿಟ್ಟಿನಲ್ಲಿ ಒಂದಷ್ಟು ಟಿಪ್ಸ್ ಇಲ್ಲಿದೆ:

ಬೇಗ ಹೂಡಿಕೆ ಆರಂಭಿಸಿ

ಹೂಡಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು. ಕಡಿಮೆ ವಯಸ್ಸಿನಲ್ಲಿ ಸಣ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡಲು ಆರಂಭಿಸಿದರೂ, ದೀರ್ಘಾವಧಿಯಲ್ಲಿ ಅದು ಚಕ್ರ ಬಡ್ಡಿಯ (Power of Compounding) ಬಲದಿಂದಾಗಿ ದೊಡ್ಡ ಮೊತ್ತದ ಸಂಪತ್ತಾಗಿ ಬೆಳೆಯುತ್ತದೆ. ತಡವಾಗಿ ದೊಡ್ಡ ಮೊತ್ತ ಹೂಡುವುದಕ್ಕಿಂತ, ಬೇಗನೆ ಸಣ್ಣ ಮೊತ್ತ ಹೂಡುವುದು ಹೆಚ್ಚು ಲಾಭದಾಯಕ.

ಬಜೆಟ್ ತಯಾರಿ ಮತ್ತು ಉಳಿತಾಯ

ಹೂಡಿಕೆ ಮಾಡುವ ಮುನ್ನ ನಿಮ್ಮ ಆದಾಯ ಮತ್ತು ಖರ್ಚುಗಳ ಬಗ್ಗೆ ಸ್ಪಷ್ಟತೆ ಇರಬೇಕು. ಪ್ರತಿ ತಿಂಗಳು ಸಂಬಳ ಬಂದ ತಕ್ಷಣ ಮೊದಲು ಹೂಡಿಕೆಗಾಗಿ ಒಂದು ನಿರ್ದಿಷ್ಟ ಮೊತ್ತವನ್ನು (ಉದಾಹರಣೆಗೆ 20%) ಪಕ್ಕಕ್ಕೆ ಎತ್ತಿಡಬೇಕು. ಆ ನಂತರ ಉಳಿದ ಹಣದಲ್ಲಿ ತಿಂಗಳ ಖರ್ಚುಗಳನ್ನು ನಿಭಾಯಿಸುವ ಅಭ್ಯಾಸ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ

ತುರ್ತು ನಿಧಿ ಸ್ಥಾಪನೆ

ಯಾವುದೇ ಹೂಡಿಕೆ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ ಕನಿಷ್ಠ 3 ರಿಂದ 6 ತಿಂಗಳ ಖರ್ಚಿಗೆ ಆಗುವಷ್ಟು ಹಣವನ್ನು ತುರ್ತು ನಿಧಿಯಾಗಿ (Emergency Fund) ಬ್ಯಾಂಕ್ ಖಾತೆಯಲ್ಲಿ ಅಥವಾ ಸುಲಭವಾಗಿ ಹಿಂಪಡೆಯಬಹುದಾದ ಲಿಕ್ವಿಡ್ ಫಂಡ್‌ಗಳಲ್ಲಿ ಇಡಬೇಕು. ಇದು ಕೆಲಸ ಕಳೆದುಕೊಂಡಾಗ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಾಗ ನಿಮ್ಮ ದೀರ್ಘಾವಧಿಯ ಹೂಡಿಕೆಗೆ ಧಕ್ಕೆ ಬರದಂತೆ ರಕ್ಷಿಸುತ್ತದೆ.

ಹೂಡಿಕೆಯಲ್ಲಿ ವೈವಿಧ್ಯತೆ

“ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ” ಎಂಬ ಗಾದೆಯಂತೆ, ನಿಮ್ಮ ಸಂಪೂರ್ಣ ಹಣವನ್ನು ಒಂದೇ ಕಡೆ ಹೂಡಿಕೆ ಮಾಡಬಾರದು. ನಿಮ್ಮ ರಿಸ್ಕ್ (Risk Appetite) ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ಷೇರು ಮಾರುಕಟ್ಟೆ (Stocks), ಮ್ಯೂಚುಯಲ್ ಫಂಡ್‌ಗಳು, ಸ್ಥಿರ ಠೇವಣಿ (FD), ಚಿನ್ನ (Gold) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಗಳ ನಡುವೆ ಹಂಚಿ ಹೂಡಿಕೆ (Diversification) ಮಾಡಬೇಕು. ಇದರಿಂದ ನಷ್ಟದ ಸಾಧ್ಯತೆ ಕಡಿಮೆಯಾಗುತ್ತದೆ.

ಸ್ಥಿರತೆ ಮತ್ತು ಶಿಸ್ತು

ಮಾರುಕಟ್ಟೆಯ ಏರಿಳಿತಗಳನ್ನು ನೋಡಿ ಹೆದರದೆ, ಶಿಸ್ತಿನಿಂದ ಹೂಡಿಕೆ ಮಾಡುವುದನ್ನು ಮುಂದುವರಿಸಬೇಕು. ಮ್ಯೂಚುಯಲ್ ಫಂಡ್‌ಗಳಲ್ಲಿ ಎಸ್‌ಐಪಿ (SIP – Systematic Investment Plan) ಮೂಲಕ ಪ್ರತಿ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡುವುದು ಹೊಸಬರಿಗೆ ಅತ್ಯುತ್ತಮ ಅಭ್ಯಾಸವಾಗಿದೆ. ಇದು ಮಾರುಕಟ್ಟೆಯ ಏರಿಳಿತದ ರಿಸ್ಕ್ ಅನ್ನು ಸರಿದೂಗಿಸುತ್ತದೆ (Rupee Cost Averaging).

ಇದನ್ನೂ ಓದಿ: ಅಗ್ಗದ ಇಂಧನ ಮತ್ತು ಸ್ಥಿರ ಪೂರೈಕೆ ಇವತ್ತು ಜಗತ್ತಿಗೆ ಅವಶ್ಯಕ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್, ರುಬಿಯೋ ಹೇಳಿಕೆ

ಅನಗತ್ಯ ಸಾಲಗಳಿಂದ ದೂರವಿರಿ

ಕ್ರೆಡಿಟ್ ಕಾರ್ಡ್ ಸಾಲಗಳು ಮತ್ತು ಹೆಚ್ಚಿನ ಬಡ್ಡಿಯ ವೈಯಕ್ತಿಕ ಸಾಲಗಳು (Personal Loans) ನಿಮ್ಮ ಸಂಪತ್ತನ್ನು ಕರಗಿಸುತ್ತವೆ. ಹೂಡಿಕೆಯಿಂದ ಬರುವ ಲಾಭಕ್ಕಿಂತ ಈ ಸಾಲಗಳ ಬಡ್ಡಿಯೇ ಹೆಚ್ಚಿರುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಇಂತಹ ದುಬಾರಿ ಸಾಲಗಳನ್ನು (Bad Debts) ತೀರಿಸುವುದು ಜಾಣತನ.

ಶ್ರೀಮಂತರಾಗುವುದು ಒಂದೇ ದಿನದ ಪವಾಡವಲ್ಲ, ಅದೊಂದು ನಿರಂತರ ಪ್ರಕ್ರಿಯೆ. ತಾಳ್ಮೆ, ಶಿಸ್ತು ಮತ್ತು ನಿಯಮಿತ ಹೂಡಿಕೆಯ ಅಭ್ಯಾಸಗಳು ಮಾತ್ರ ನಿಮ್ಮನ್ನು ದೀರ್ಘಾವಧಿಯಲ್ಲಿ ಆರ್ಥಿಕವಾಗಿ ಸ್ವತಂತ್ರರನ್ನಾಗಿ (Financial Freedom) ಮಾಡಬಲ್ಲವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version