MI vs RR: ಮೊದಲ ಓವರ್​ನಲ್ಲಿ ಸಿಕ್ಸರ್; ರೋಹಿತ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್ – Kannada News | Yashasvi Jaiswal Shatters Rohit Sharma’s Record Amidst Intense IPL 2026 Playoff Battle

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More

Source link

ಹಾಂಟಾ ವೈರಸ್ ಯಾರಿಗೆ ಹೆಚ್ಚು ಅಪಾಯಕಾರಿ ಗೊತ್ತಾ? ತಜ್ಞರು ಹೇಳಿರುವ ಈ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ – Kannada News | How To Prevent Hantavirus: CDC Backed Guide For Campers, Farmers & Homeowners

ಇತ್ತೀಚಿನ ದಿನಗಳಲ್ಲಿ ಹಾಂಟಾ ವೈರಸ್ (Hantavirus) ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಈ ವೈರಸ್ ಸೋಂಕಿತ ಇಲಿ ಮತ್ತು ಅವುಗಳ ಮಲ, ಮೂತ್ರ ಅಥವಾ ಲಾಲಾರಸ ಸಂಪರ್ಕದಿಂದ ಮನುಷ್ಯರಿಗೆ ಹರಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆರಂಭದಲ್ಲಿ ಸಾಮಾನ್ಯ ಜ್ವರದಂತೆ ಕಾಣುವ ಈ ಸೋಂಕು, ನಂತರ ಗಂಭೀರ ಶ್ವಾಸಕೋಶ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಗೋರಖ್‌ಪುರದ ರೀಜೆನ್ಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ತಜ್ಞ ಡಾ. ವಿಜಯ್ ಕುಮಾರ್ ಶರ್ಮಾ ಅವರು ಹೇಳುವ ಪ್ರಕಾರ, ಸ್ವಚ್ಛತೆ ಕಡಿಮೆ ಇರುವ ಸ್ಥಳಗಳಲ್ಲಿ ಹಾಂಟಾ ವೈರಸ್ ಹರಡುವ ಅಪಾಯ ಹೆಚ್ಚು. ವಿಶೇಷವಾಗಿ ಧೂಳು, ಕಸ ಮತ್ತು ಮುಚ್ಚಿಟ್ಟಿರುವ ಕೊಠಡಿಗಳಲ್ಲಿ ವೈರಸ್ ಕಣಗಳು ಗಾಳಿಯಲ್ಲಿ ಬೆರೆತು ಉಸಿರಾಟದ ಮೂಲಕ ದೇಹಕ್ಕೆ ಪ್ರವೇಶಿಸಬಹುದು.

ಯಾರು ಹೆಚ್ಚಿನ ಅಪಾಯದಲ್ಲಿದ್ದಾರೆ?

ತಜ್ಞರ ಪ್ರಕಾರ, ಗೋದಾಮು, ಹಳೆಯ ಸ್ಟೋರ್ ರೂಂ, ಬೇಸ್‌ಮೆಂಟ್, ಕೃಷಿ ಪ್ರದೇಶಗಳು ಮತ್ತು ದೀರ್ಘಕಾಲ ಸ್ವಚ್ಛಗೊಳಿಸದ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ಅಪಾಯ ಹೆಚ್ಚು. ವಿಶೇಷವಾಗಿ ರೈತರು, ಸ್ವಚ್ಛತಾ ಸಿಬ್ಬಂದಿ, ಇಲಿಗಳ ಸಂಪರ್ಕ ಹೆಚ್ಚಿರುವವರು, ಮುಚ್ಚಿದ ಕೊಠಡಿಗಳನ್ನು ಸ್ವಚ್ಛಗೊಳಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಹಾಂಟಾ ವೈರಸ್‌ನ ಆರಂಭಿಕ ಲಕ್ಷಣಗಳು ಯಾವುವು?

  • ಹೆಚ್ಚು ಜ್ವರ
  • ದೇಹ ಮತ್ತು ಸ್ನಾಯು ನೋವು
  • ತಲೆನೋವು
  • ದುರ್ಬಲತೆ ಮತ್ತು ಆಯಾಸ
  • ಉಸಿರಾಟದ ತೊಂದರೆ
  • ಎದೆ ಬಿಗಿತ
  • ಶ್ವಾಸಕೋಶದ ಸೋಂಕು

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಹಂಟಾವೈರಸ್ ಈಗ ಕಂಡುಬಂದಿದ್ದಲ್ಲ; ಆರೋಗ್ಯ ತಜ್ಞರು ನೀಡಿರುವ ಮಾಹಿತಿಯಲ್ಲಿದೆ ಆತಂಕಕಾರಿ ಅಂಶ

ಹಾಂಟಾ ವೈರಸ್‌ನಿಂದ ಹೇಗೆ ರಕ್ಷಿಸಿಕೊಳ್ಳಬೇಕು?

  • ಹಾಂಟಾ ವೈರಸ್ ತಡೆಯಲು ಸ್ವಚ್ಛತೆ ಅತ್ಯಂತ ಮುಖ್ಯ.
  • ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ.
  • ಇಲಿಗಳು ಮನೆಗೆ ಪ್ರವೇಶಿಸದಂತೆ ಕ್ರಮ ತೆಗೆದುಕೊಳ್ಳಿ.
  • ಧೂಳು ತುಂಬಿರುವ ಸ್ಥಳಗಳನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಮತ್ತು ಗ್ಲೌವ್ಸ್ ಧರಿಸಿ.
  • ಧೂಳನ್ನು ನೇರವಾಗಿ ಮುಖಕ್ಕೆ ಬರುವಂತೆ ಗುಡಿಸಬೇಡಿ.
  • ಮೊದಲು ಕೀಟಾಣುನಾಶಕ ಸಿಂಪಡಿಸಿ ಬಳಿಕ ಸ್ವಚ್ಛಗೊಳಿಸಿ.

ತಜ್ಞರ ಪ್ರಕಾರ, ಎಚ್ಚರಿಕೆ ಮತ್ತು ಸ್ವಚ್ಛತೆ ಪಾಲಿಸಿದರೆ ಹಾಂಟಾ ವೈರಸ್ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ತನ್ನನ್ನು ಕಾಳಜಿ ಮಾಡುವ ಜೀವಕೆ ಮುತ್ತು ನೀಡಿದ ಕರು; ಹೃದಯಸ್ಪರ್ಶಿ ದೃಶ್ಯ ವೈರಲ್‌ – Kannada News | A calf that kissed a woman who cared for it

ಮನುಷ್ಯನಿಗೆ ಹೋಲಿಸಿದರೆ ಒಳ್ಳೆಯ ಗುಣ, ಮಾನವೀಯತೆ, ಸಹಾಯ ಮನೋಭಾವ ಇವೆಲ್ಲವೂ ತುಸು ಹೆಚ್ಚೇ ಪ್ರಾಣಿಗಳಲ್ಲಿದೆ. ಇದಕ್ಕೆ ನಿದರ್ಶನದಂತಿರುವ ಸಾಕಷ್ಟು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ (social media) ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಮನೆಯೊಡತಿಯೊಂದಿಗೆ ಪುಟಾಣಿ ಕರು (calf) ನಡೆದುಕೊಂಡ ರೀತಿ ನೋಡಿದ್ರೆ ನೀವು ಶಾಕ್ ಆಗ್ತೀರಾ. ತನ್ನನ್ನು ಕಾಳಜಿ ಮಾಡುವ ಮನೆಯೊಡತಿಗೆ ಮುತ್ತು ನೀಡಿ ಕರುವೊಂದು ತನ್ನ ಪ್ರೀತಿಯನ್ನು ತೋರ್ಪಡಿಸಿದ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.

Mr. Udburu ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆ ಒಡತಿಯೂ ಕರುವಿನ ಮುಂದೆ ಮುತ್ತು ಕೊಡು ಎಂದು ಕೇಳುತ್ತಿರುವುದನ್ನು ಕಾಣಬಹುದು. ತನ್ನನ್ನು ಕಾಳಜಿ ಮಾಡುವ ಜೀವ ಹೀಗೆನ್ನುತ್ತಿದ್ದಂತೆ ಕರು ಮುತ್ತನ್ನು ನೀಡಿ ಪ್ರೀತಿ ತೋರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಾರದರೇನಂತೆ ತಾಯಿ ಪ್ರೀತಿ ಒಂದೇ ಎಂದರೆ, ಮತ್ತೊಬ್ಬರು, ಮನುಷ್ಯನಿಗೆ ಪ್ರೀತಿ ಕೊಡೋದಕ್ಕಿಂತ ಈ ಮೂಕ ಪ್ರಾಣಿಗಳಿಗೆ ಪ್ರೀತಿ ಕೊಟ್ಟರೆ ನೆಮ್ಮದಿ ಅನ್ಸುತ್ತೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಾತು ಬರುವ ಮನುಷ್ಯರಿಗಿಂತ ಮೂಕ ಪ್ರಾಣಿಗಳೇ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆನ್ನಿಗೆ ಚೂರಿ ಹಾಕಿದವರನ್ನು ಮತ್ತೆ ನಂಬುವುದಿಲ್ಲ; ಕಾಂಗ್ರೆಸ್ ವಿರುದ್ಧ ಉದಯನಿಧಿ ಸ್ಟಾಲಿನ್ ಆಕ್ರೋಶ – Kannada News | Won’t trust them again; Udhayanidhi Stalin lashes out at Congress for supporting TVK

ಚೆನ್ನೈ, ಮೇ 24: ತಮಿಳುನಾಡಿನ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಬೆಳವಣಿಗೆಯೊಂದರಲ್ಲಿ ಡಿಎಂಕೆ (DMK) ಯುವ ಘಟಕದ ಮುಖ್ಯಸ್ಥ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ನಿಲುವನ್ನು ಕಟುವಾಗಿ ಟೀಕಿಸಿರುವ ಅವರು, “ಕಾಂಗ್ರೆಸ್ ನಮ್ಮ ಬೆನ್ನಿಗೆ ಚೂರಿ ಹಾಕಿದೆ, ಇನ್ಮುಂದೆ ಅವರನ್ನು ಎಂದಿಗೂ ನಂಬುವುದಿಲ್ಲ” ಎಂದು ಹೇಳಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

  • ಟಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿಗೆ ಡಿಎಂಕೆ ಆಕ್ರೋಶ
  • ಬೆನ್ನಿಗೆ ಚೂರಿ ಇರಿದಿದೆ ಎಂದ ಉದಯನಿಧಿ ಸ್ಟಾಲಿನ್
  • ಸಿಎಂ ವಿಜಯ್ ವಿರುದ್ಧವೂ ಅಸಮಾಧಾನ

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷವು 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಫಲಿತಾಂಶ ಪ್ರಕಟವಾಗಿ ವಿಜಯ್ ಅವರ ಟಿವಿಕೆ (TVK) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ, ಕಾಂಗ್ರೆಸ್ ತಕ್ಷಣವೇ ಡಿಎಂಕೆ ಜೊತೆಗಿನ ಮೈತ್ರಿಯನ್ನು ಮುರಿದು ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿತು. ಕಾಂಗ್ರೆಸ್‌ನ ಈ ಹಠಾತ್ ನಿರ್ಧಾರ ಡಿಎಂಕೆ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿನ್ನು ವಿಜಯ್​​ vs ಉದಯನಿಧಿ: ವಿಪಕ್ಷ ನಾಯಕನಾಗಿ ಮಾಜಿ ಡಿಸಿಎಂ ಆಯ್ಕೆ

ಇಂದು ನಡೆದ ಡಿಎಂಕೆ ಯುವ ಘಟಕದ ಸಭೆಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್ ಕಾಂಗ್ರೆಸ್ ವಿರುದ್ಧದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. “ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ನಮ್ಮ (ಡಿಎಂಕೆ) ಹೆಗಲ ಮೇಲೆ ಕುಳಿತು ರಾಜಕೀಯ ಲಾಭ ಪಡೆದುಕೊಂಡಿತು. ಆದರೆ ಇಂದು ಅವರು ನಮಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ದ್ರೋಹವನ್ನು ಯಾರೂ ಮರೆಯಬಾರದು. ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅನ್ನು ನಂಬಬೇಡಿ, ಅವರನ್ನು ನಮ್ಮ ಹತ್ತಿರವೂ ಸೇರಿಸಬೇಡಿ” ಎಂದು ಕಿಡಿಕಾರಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕಾರ್ಯತಂತ್ರದಿಂದಾಗಿ ದೇಶದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿದೆ ಎಂದು ನಾನು ಭಾವಿಸಿದ್ದೆ. ಆದರೆ ಅದು ನಿಜವಲ್ಲ. ದೇಶದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ನಿಷ್ಕ್ರಿಯತೆ ಮತ್ತು ಇಂತಹ ದ್ರೋಹದ ರಾಜಕಾರಣವೇ ಪ್ರಮುಖ ಕಾರಣ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಉದಯನಿಧಿ ಸ್ಟಾಲಿನ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೇವಲ ಫೋಟೊಗಾಗಿ ತಿಲಕವೇ? ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ನಡೆಗೆ ಭಾರಿ ಆಕ್ಷೇಪ

“ತಮಿಳುನಾಡಿನಲ್ಲಿ ಜಾತ್ಯತೀತತೆಯನ್ನು ಉಳಿಸಲು ಮತ್ತು ಬಿಜೆಪಿಯನ್ನು ದೂರವಿಡಲು ಡಿಎಂಕೆ ಕಾರ್ಯಕರ್ತರು ರಕ್ತ ಮತ್ತು ಬೆವರಿನ ಜಲ ಹರಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಅಸ್ತಿತ್ವವೇ ಇಲ್ಲದ ಕಾಂಗ್ರೆಸ್ ಕೇವಲ ಡಿಎಂಕೆ ಬೆಂಬಲದಿಂದಾಗಿ 5 ಸೀಟು ಗೆದ್ದಿತು. ಆದರೆ ಗೆದ್ದ ತಕ್ಷಣ, ಸೌಜನ್ಯಕ್ಕೂ ನಮಗೆ ತಿಳಿಸದೇ ಅಧಿಕಾರದಾಸೆಗೆ ಓಡಿಹೋಗಿದ್ದಾರೆ. ಕಾಂಗ್ರೆಸ್‌ಗೆ ಕನಿಷ್ಠ ಕೃತಜ್ಞತೆಯೂ ಇಲ್ಲ” ಎಂದು ಉದಯನಿಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ವಿಜಯ್ ಅವರ ಸರ್ಕಾರದ ಮೇಲೂ ಉದಯನಿಧಿ ದಾಳಿ ಮುಂದುವರಿಸಿದ್ದಾರೆ. ತಂಜಾವೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿವಿಕೆ ಸರ್ಕಾರದ ಅಸಲಿ ಮುಖ ಕೇವಲ ಹತ್ತು ದಿನಗಳಲ್ಲಿ ಜನರಿಗೆ ಗೊತ್ತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಟ್ಟೆಹಕ್ಕಲು ನದಿಯಲ್ಲಿ 8 ಜಲಸಮಾಧಿ: ಓರ್ವ ಪುರುಷ, ಏಳು ಮಹಿಳೆಯರ ಸಾವು: ಅಸಲಿಗೆ ಆಗಿದ್ದೇನು? – Kannada News | Eight Drown In Thatte Hakkalu River Near Bhatkal While Collecting Sea Shell Stones, here Is reasons for incident

ಕಾರವಾರ, (ಮೇ 24): ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ (Hakkalu River incident )ಮುಳುಗಿ 8 ಜನರು ಸಾವನ್ನಪ್ಪಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಒಟ್ಟು 14 ಜನರು ಒಂದಾಗಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದರವರು ನೀರಿಗೆ ಸಿಲುಕಿದ್ದು, ಎಂಟು ಜನರು ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರನ್ನ ರಕ್ಷಣೆ ಮಾಡಿದ್ದರೆ, ನಾಪತ್ತೆಯಾಗಿರುವ ಇನ್ನಿಬ್ಬರ ಪತ್ತೆಯಾಗಿ ಶೋಧ ಕಾರ್ಯ ಮುಂದುವರೆದಿದೆ. ಲಕ್ಷ್ಮೀ ಮಾದೇವ ನಾಯ್ಕ(38), ಲಕ್ಷ್ಮೀ ಶಿವರಾಮ್ ನಾಯ್ಕ(39), ಮಾಲತಿ ಜಟ್ಟಪ್ಪ ನಾಯ್ಕ(38), ಮಾಸ್ತಮ್ಮ ಮಂಜುನಾಥ ನಾಯ್ಕ(43), ಲಕ್ಷ್ಮೀ ನಾಯ್ಕ, ಲಕ್ಷ್ಮೀ ಅಣ್ಣಪ್ಪ ನಾಯ್ಕ(44), ಜ್ಯೋತಿ ನಾಯ್ಕ(37) ಉಮೇಶ್ ಮಂಜುನಾಥ ನಾಯ್ಕ(42) ಮೃತರು. ಮೃತರು ಒಂದೇ ಕುಟುಂಬದ ಪಡುಶಿರಾಲಿ ಶಾರದಹೊಳೆ ನಿವಾಸಿಗಳಾಗಿದ್ದಾರೆ.

ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದುಬಂದಿದ್ದು, ಒಟ್ಟು 14 ಜನರ ಈ ಪೈಕಿ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ನದಿ ಪ್ರದೇಶದಲ್ಲಿ ಅಪಾರ ಜನರು ಸೇರಿದ್ದು, ಉಳಿದವರಾದ್ರೂ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಸಾಮಾನ್ಯವಾಗಿ ಮೀನುಗಾರಿಗೆ ಹೇಗೆ ನಡೆಯುತ್ತೋ ಹಾಗೇ ಕಪ್ಪೆಚಿಪ್ಪು ತೆಗೆಯಲು ನದಿ, ಸಮುದ್ರದ ನೀರು ಬತ್ತಿದಾಗ ಹೋಗುತ್ತಾರೆ. ಇಲ್ಲೂ ಸಹ ಇಡೀ ಕುಟುಂಬ ಕಪ್ಪೆಚಿಪ್ಪು ತೆಗೆಯಲು ತಟ್ಟೆಹಕ್ಕಲು ನದಿಗೆ ತೆರಳಿದ್ದರು. ಆದ್ರೆ, ನೀರಿನ ಆಳ ಗಮನಿಸದೇ ಕಪ್ಪೆಚಿಪ್ಪು ತೆಗೆಯಲು ಹೋಗಿರುವುದೇ ಇಷ್ಟು ದೊಡ್ಡ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತಟ್ಟೆಹಕ್ಕಲು ನದಿಯಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಜನ ಸಾವು, ಇಬ್ಬರು ನಾಪತ್ತೆ

5 ಲಕ್ಷ ರೂಪಾಯಿ ಘೋಷಿಸಿದ ಸಿಎಂ

ಕಪ್ಪೆಚಿಪ್ಪು ತರಲ ನದಿಗೆ ತೆರಳಿದ ಎಂಟು ಜನರು ನೀರುಪಾಲಾಗಿರುವ ಘಟನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಮೃತ ಆತ್ಮಕ್ಕೆ ಶಾಂತಿ ಕೋಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ದುರಂತದ ಬಗ್ಗೆ ಡಿಸಿ ಹೇಳಿದ್ದಿಷ್ಟು

ಇನ್ನು ದುರಂತದ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಪ್ರತಿಕ್ರಿಯಿಸಿದ್ದು, 14 ಜನರ ತಂಡ ತೆರಳಿದ್ದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ 8 ಜನ ಮೃತಪಟ್ಟ ಮಾಹಿತಿ ಇದೆ. ಎನ್​ಡಿಆರ್​ಎಫ್​​ ಸಿಬ್ಬಂದಿಯನ್ನ ಸ್ಥಳಕ್ಕೆ ಕರೆಸಲಾಗಿದೆ. ಸ್ಥಳೀಯ ಪೊಲೀಸರು ಕೂಡ ಕಾರ್ಯಾಚರಣೆ ನಡೆಸ್ತಿದ್ದಾರೆ. ಸಂಜೆ ವೇಳೆಗೆ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದ್ದು, ನಾವು ಶೋಧ ಕಾರ್ಯಾಚರಣೆ ಚುರುಕುಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಹಿಂದೆ ಯಾವತ್ತೂ ಈ ರೀತಿ ಘಟನೆ ನಡೆದಿಲ್ಲ

ಈ ದುರಂತದ ಬಗ್ಗೆ ಟಿವಿ9ಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿದ್ದು, ಈ ದುರಂತ ನಡೆದಿರುವುದು ಇದೇ ಮೊದಲು. ಮಧ್ಯಾಹ್ನ 3 ಗಂಟೆಗೆ ದುರಂತ ಬಗ್ಗೆ ಗೊತ್ತಾಯ್ತು. ಈಗಾಗಲೇ ಮೀನುಗಾರರು, ಸ್ಥಳೀಯರು ಸಹಾಯಕ್ಕೆ ಹೋಗಿದ್ದಾರೆ. ತಟ್ಟೆಹಕ್ಕಲು ನದಿಯಲ್ಲಿ ಇದೇ ಮೊದಲ ಬಾರಿ ದುರಂತ ಸಂಭವಿಸಿದೆ. ನಾನು ನೋಡಿದಂತೆ ಹಿಂದೆ ಯಾವತ್ತೂ ಈ ರೀತಿ ಘಟನೆ ನಡೆದಿರಲಿಲ್ಲ. ತಟ್ಟೆಹಕ್ಕಲು ನದಿ 10 ಕಿ.ಮೀ. ಉದ್ದ ಇದೆ. ರಕ್ಷಣೆಗೊಳಗಾದ ಇಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಕಳೆದ 5 ಆವೃತ್ತಿಗಳ ಫಲಿತಾಂಶ; ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್ – Kannada News | RCB IPL 2026 Championship Prediction: Can Past Trends Crown Royal Challengers Bengaluru?

2026 ರ ಐಪಿಎಲ್‌ನ (IPL 2026) ಲೀಗ್ ಸುತ್ತು ಅಂತ್ಯವಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಹಾಲಿ ಚಾಂಪಿಯನ್ ಆರ್​ಸಿಬಿ (RCB) ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಏಕೆಂದರೆ ಉಭಯ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿತು. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಇದೆ.

ಆರ್​ಸಿಬಿಯೇ ಚಾಂಪಿಯನ್

ಉಭಯ ತಂಡಗಳು ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಹೀಗಾಗಿ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗಲಿದೆ ಎಂದು ಹೇಳುವುದು ಕಷ್ಟಕರ. ಆದರೆ ಕಳೆದ 5 ಐಪಿಎಲ್ ಆವೃತ್ತಿಗಳಲ್ಲಿ ಯಾವ ತಂಡ ಚಾಂಪಿಯನ್ ಆಗಿದೆ ಎಂಬುದನ್ನು ಗಮನಿಸಿದರೆ, ಕಾಕತಾಳೀಯವಾಗಿ ಈ ಬಾರಿ ಆರ್​ಸಿಬಿಯೇ ಚಾಂಪಿಯನ್ ಆಗಲಿದೆ. ಅದು ಹೇಗೆ ಎಂಬುದನ್ನು ವಿವರವಾಗಿ ನೋಡುವುದಾದರೆ..

ಕಳೆದ 5 ವರ್ಷಗಳ ಅಂಕಿ ಅಂಶ ಹೀಗಿದೆ

2020 ರ ಐಪಿಎಲ್‌ನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡ ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಇದಾದ ಬಳಿಕ 2021 ರ ಐಪಿಎಲ್​ನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಸಿಎಸ್​ಕೆ, ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಹಾಗೆಯೇ 2022 ರ ಐಪಿಎಲ್​ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಗುಜರಾತ್ ತಂಡ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.

ಇದಾದ ಬಳಿಕ ನಡೆದಿದ್ದ 2023 ರ ಐಪಿಎಲ್‌ನಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಸಿಎಸ್​ಕೆ, ಗುಜರಾತ್ ತಂಡವನ್ನು ಮಣಿಸಿ ಪ್ರಶಸ್ತಿ ಮೂಡಿಗೇರಿಸಿಕೊಂಡಿತ್ತು. ನಂತರ 2024 ರ ಐಪಿಎಲ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಕೆಕೆಆರ್, ಫೈನಲ್​ನಲ್ಲಿ ಸನ್‌ರೈಸರ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಇನ್ನು 2025 ರ ಆವೃತ್ತಿಯಲ್ಲಿ ಅಂದರೆ ಹಿಂದಿನ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಆರ್​ಸಿಬಿ, ಪಂಜಾಬ್ ತಂಡವನ್ನು ಸೋಲಿಸಿ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿತ್ತು.

IPL 2026: ಆರ್​ಸಿಬಿ- ಗುಜರಾತ್ ಕ್ವಾಲಿಫೈಯರ್ 1 ಪಂದ್ಯ ರದ್ದಾದರೆ ಯಾರಿಗೆ ಫೈನಲ್ ಟಿಕೆಟ್?

ಅಂದರೆ 2020 ರ ಐಪಿಎಲ್​ನಿಂದ ಕಳೆದ ಆವೃತ್ತಿಯವರೆಗೆ ಗಮನಿಸಿದರೆ, 2020, 2022, 2024 ರ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ತಂಡ ಚಾಂಪಿಯನ್ ಆದರೆ, 2021, 2023 ಹಾಗೂ 2025 ರ ಆವೃತ್ತಿಗಳಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ತಂಡಗಳು ಚಾಂಪಿಯನ್ ಆಗಿವೆ. ಇದೀಗ ಇದೇ ಟ್ರೆಂಡ್ ಮುಂದುವರೆದರೆ, 2026 ರ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಆರ್​ಸಿಬಿಯೇ ಚಾಂಪಿಯನ್ ಆಗಲಿದೆ. ಕಳೆದ ಐದು ವರ್ಷಗಳ ಟ್ರೆಂಡ್ ಮುಂದುವರೆದು ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್ ಆಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:27 pm, Sun, 24 May 26

Source link

ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ – Kannada News | Indian Student Startups Pivot to Deep Tech: Campus Fund Report Reveals EdTech Decline

ಸ್ಟುಡೆಂಟ್ ಸ್ಟಾರ್ಟ್‌ಅಪ್‌Image Credit source: AI/Mediaforge/TV9

ನವದೆಹಲಿ, ಮೇ 24: ಭಾರತದ ಯುವಜನರು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಶುರುವಾಗುವ ಸ್ಟಾರ್ಟಪ್​ಗಳು ಡೀಪ್ ಟೆಕ್ ಕ್ಷೇತ್ರದಲ್ಲಿ ಹೆಚ್ಚು ಕೇಂದ್ರಿತವಾಗುತ್ತಿವೆ ಎನ್ನುವ ದತ್ತಾಂಶ ಹೊರಬಂದಿದೆ. ಕ್ಯಾಂಪಸ್ ಫಂಡ್ (Campus Fund) ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಸ್ಟೂಡೆಂಟ್ ಆಂಟ್ರಪ್ರೆನರ್‌ಶಿಪ್ ಇನ್ ಇಂಡಿಯಾ’ (State of Student Entrepreneurship in India) ವರದಿಯ 5ನೇ ಆವೃತ್ತಿಯ ಪ್ರಕಾರ, ಭಾರತೀಯ ಕಾಲೇಜು ವಿದ್ಯಾರ್ಥಿಗಳು ಆರಂಭಿಸುತ್ತಿರುವ ಸ್ಟಾರ್ಟ್‌ಅಪ್‌ಗಳಲ್ಲಿ ಇದೇ ಮೊದಲ ಬಾರಿಗೆ ಡೀಪ್-ಟೆಕ್ (Deep-Tech) ಅತ್ಯಂತ ದೊಡ್ಡ ವಿಭಾಗವಾಗಿ ಹೊರಹೊಮ್ಮಿದೆ. ಇದು ದೇಶದ ಸಾಂಪ್ರದಾಯಿಕ ಸ್ಟಾರ್ಟ್‌ಅಪ್ ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸುತ್ತಿದೆ.

ಕೇವಲ ನಾಲ್ಕು ವರ್ಷಗಳ ಹಿಂದೆ ಡೀಪ್-ಟೆಕ್ ವಿಭಾಗವು ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳ ಟಾಪ್ 5 ಪಟ್ಟಿಯಲ್ಲೂ ಇರಲಿಲ್ಲ. ಆದರೆ ಪ್ರಸ್ತುತ ವಿದ್ಯಾರ್ಥಿ ನೇತೃತ್ವದ ಸ್ಟಾರ್ಟ್‌ಅಪ್‌ಗಳಲ್ಲಿ ಶೇ. 16.87 ರಷ್ಟು ಡೀಪ್-ಟೆಕ್ ವಲಯಕ್ಕೆ ಸೇರಿವೆ. ಇದರಲ್ಲಿ ಪ್ರಮುಖವಾಗಿ ಅಪ್ಲೈಡ್ ಎಐ (Applied AI) ಮತ್ತು ಕ್ರಾಸ್-ಡೊಮೇನ್ ಸಂಶೋಧನೆಗಳು ಸೇರಿವೆ. ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಫೋಟೋನಿಕ್ಸ್‌ನಂತಹ ಸುಧಾರಿತ ತಂತ್ರಜ್ಞಾನಗಳೂ ಮುಂದಿನ ಹಂತದಲ್ಲಿ ಬೆಳೆಯುತ್ತಿವೆ.

ಕುಸಿತ ಕಂಡ EdTech ಮತ್ತು ಸರ್ವಿಸ್ ಸೆಕ್ಟರ್ಸ್

ಜೆನೆರೇಟಿವ್ ಎಐ (Generative AI) ಮತ್ತು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ಗಳ (LLM) ಆಗಮನದಿಂದಾಗಿ, ಹಳೆಯ ಮಾದರಿಯ ಕೋಚಿಂಗ್ ಮತ್ತು ಕಂಟೆಂಟ್ ಕ್ರಿಯೇಷನ್ ಆಧಾರಿತ ಎಡ್-ಟೆಕ್ (ಶಿಕ್ಷಣ ತಂತ್ರಜ್ಞಾನ) ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಶೇ. 36 ರಷ್ಟು ಕುಸಿದಿದೆ. ಅದೇ ರೀತಿ, ಸಾಂಪ್ರದಾಯಿಕ ಸೇವಾ ವಲಯದ (Services) ಸ್ಟಾರ್ಟ್‌ಅಪ್‌ಗಳು ಶೇ. 52 ರಷ್ಟು ಕುಸಿತ ಕಂಡಿವೆ. ವಿದ್ಯಾರ್ಥಿಗಳು ಈಗ ಸುಲಭವಾಗಿ ಕಾಪಿ ಮಾಡಬಹುದಾದ ವ್ಯವಹಾರಗಳ ಬದಲಿಗೆ, ನಕಲು ಮಾಡಲು ಕಷ್ಟವಾಗಿರುವ ಬಲವಾದ ತಂತ್ರಜ್ಞಾನದ (Defensible Technology) ಕಡೆಗೆ ಮುಖ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಗ್ಗದ ಇಂಧನ ಮತ್ತು ಸ್ಥಿರ ಪೂರೈಕೆ ಇವತ್ತು ಜಗತ್ತಿಗೆ ಅವಶ್ಯಕ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್, ರುಬಿಯೋ ಹೇಳಿಕೆ

ಸಂಶೋಧನೆ ಮತ್ತು ಪಿಎಚ್‌ಡಿ (PhD) ಸಂಸ್ಥಾಪಕರ ಹೆಚ್ಚಳ

ಭಾರತದ ಕ್ಯಾಂಪಸ್‌ಗಳಲ್ಲಿ ಕೇವಲ ಪದವಿ ವಿದ್ಯಾರ್ಥಿಗಳು ಮಾತ್ರವಲ್ಲದೆ, ಉನ್ನತ ಸಂಶೋಧನೆ ಮಾಡುವ ಪಿಎಚ್‌ಡಿ (PhD) ವಿದ್ಯಾರ್ಥಿಗಳೂ ಸ್ಟಾರ್ಟ್‌ಅಪ್ ಕ್ಷೇತ್ರಕ್ಕೆ ಧುಮುಕುತ್ತಿದ್ದಾರೆ. ಪಿಎಚ್‌ಡಿ ಸಂಸ್ಥಾಪಕರ ಸಂಖ್ಯೆ 2020-21ರಲ್ಲಿ ಕೇವಲ 35 ಇದ್ದದ್ದು, ಈಗ (2024-25ರಲ್ಲಿ) 237 ಕ್ಕೆ (7 ಪಟ್ಟು) ಏರಿಕೆಯಾಗಿದೆ. ಇವರು ಕಾರ್ಪೊರೇಟ್ ಉದ್ಯೋಗಗಳಿಗೆ ಇಳಿಯದೆ, ಪ್ರಯೋಗಾಲಯದ ಸಂಶೋಧನೆಗಳನ್ನು ನೇರವಾಗಿ ಮಾರುಕಟ್ಟೆಯ ಉತ್ಪನ್ನಗಳನ್ನಾಗಿ ಪರಿವರ್ತಿಸುತ್ತಿರುವ ಕಾಯಕ ನಡೆಸುತ್ತಿದ್ದಾರೆ.

ಸ್ಟುಡೆಂಟ್ ಸ್ಟಾರ್ಟಪ್​ಗಳು ಕರ್ನಾಟಕದಲ್ಲೇ ಹೆಚ್ಚು

ಈ ಹಿಂದೆ ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳ ಪೈಕಿ ಶೇ. 60 ಕ್ಕೂ ಹೆಚ್ಚು ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ನಂತಹ ಮೆಟ್ರೋ ನಗರಗಳಲ್ಲೇ ಕೇಂದ್ರೀಕೃತವಾಗಿದ್ದವು. ಆದರೆ ಈಗ ಅಲ್ಲಿ ಅದು ಶೇ. 40 ಕ್ಕಿಂತ ಕಡಿಮೆಯಾಗಿದೆ.

ನಗರಗಳ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ದೆಹಲಿ (ಶೇ. 13.27) ವಿದ್ಯಾರ್ಥಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯಲ್ಲಿ ಬೆಂಗಳೂರನ್ನು (ಶೇ. 12.99) ಹಿಂದಿಕ್ಕಿದೆ.

ರಾಜ್ಯಗಳ ಮಟ್ಟದಲ್ಲಿ ಕರ್ನಾಟಕ (ಶೇ. 15.29) ಇನ್ನೂ ಮೊದಲ ಸ್ಥಾನದಲ್ಲಿದೆ. ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ತೀವ್ರ ಪೈಪೋಟಿ ನೀಡುತ್ತಿವೆ.

ಕೇವಲ 50,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ರಾಜಸ್ಥಾನದ ಪಿಲಾನಿ (Pilani) ಎಂಬ ಸಣ್ಣ ಪಟ್ಟಣವು ದೇಶದ ಒಟ್ಟು ವಿದ್ಯಾರ್ಥಿ ಸ್ಟಾರ್ಟ್‌ಅಪ್‌ಗಳ ಹರಿವಿನಲ್ಲಿ ಶೇ. 1.02 ರಷ್ಟು ಕೊಡುಗೆ ನೀಡುತ್ತಿದೆ. ಬಿಟ್ಸ್ ಪಿಲಾನಿ (BITS Pilani) ಮತ್ತು ಐಐಟಿ ಮದ್ರಾಸ್‌ನಂತಹ ಶಿಕ್ಷಣ ಸಂಸ್ಥೆಗಳು ಸ್ಟಾರ್ಟ್‌ಅಪ್‌ಗಳ ಪ್ರಮುಖ ಕೇಂದ್ರಗಳಾಗಿವೆ.

ಇದನ್ನೂ ಓದಿ: ನಮ್ಮ ನಿಮ್ಮ ಎಸ್​ಐಪಿಗಳು ವಿದೇಶೀ ಹೂಡಿಕೆದಾರರಿಗೆ ಆಹಾರವಾಗುತ್ತಿವೆಯಾ? ಜೆಫರೀಸ್ ಏಜೆನ್ಸಿ ಬಿಚ್ಚಿಟ್ಟಿದೆ ಘೋರ ಸತ್ಯ

ಕ್ಯಾಂಪಸ್ ಫಂಡ್‌ನ ಸಂಸ್ಥಾಪಕಿ ಮತ್ತು ಸಿಇಒ ರಿಚಾ ಬಾಜಪಾಯಿ ಮಾತನಾಡಿ, “ಐದು ವರ್ಷಗಳ ಹಿಂದೆ ‘ವಿದ್ಯಾರ್ಥಿಗಳು ದೊಡ್ಡ ಕಂಪನಿಗಳನ್ನು ಕಟ್ಟಲು ಸಾಧ್ಯವೇ?’ ಎಂಬ ಪ್ರಶ್ನೆ ಇತ್ತು. ಆದರೆ ಇಂದು ಆ ಪ್ರಶ್ನೆ ಇಲ್ಲ. ಈಗಿರುವ ಪ್ರಶ್ನೆಯೇನೆಂದರೆ, ವಿದ್ಯಾರ್ಥಿಗಳು ಅಭಿವೃದ್ಧಿಪಡಿಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ಭಾರತದ ಬಂಡವಾಳ, ನೀತಿಗಳು ಮತ್ತು ಶೈಕ್ಷಣಿಕ ಮೂಲಸೌಕರ್ಯಗಳು ವೇಗವಾಗಿ ಸ್ಪಂದಿಸಲು ಸಿದ್ಧವಾಗಿವೆಯೇ? ಎಂಬುದಾಗಿದೆ” ಎಂದು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು – Kannada News | BJP National President Nitin Nabin First Reaction about Karnataka after meeting with Party Leader In Bengaluru

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More

Source link

ಬೌರಿಂಗ್ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಜನ ಸಾವಿಗೆ ಸ್ಫೋಟಕ ಕಾರಣ ಬಹಿರಂಗ: ಗುತ್ತಿಗೆದಾರರ ವಿರುದ್ಧ FIR – Kannada News | Bowring Hospital Tragedy: Cause of Death of 7 Revealed, FIR Filed Against Contractor

ಬೌರಿಂಗ್ ಆಸ್ಪತ್ರೆ ದುರಂತImage Credit source: tv9 kannada

ಬೆಂಗಳೂರು, ಮೇ 24: ನಗರದ ಬೌರಿಂಗ್ ಆಸ್ಪತ್ರೆಯ (Bowring Hospital Tragedy) ಕಾಂಪೌಂಡ್ ಕುಸಿದು ಏಳು ಜನ ಅಮಾಯಕರು ಬಲಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ. ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದ್ದ ಚೆನ್ನೈ ಮೂಲದ ಎಎಸ್​​ಆರ್ ಟ್ರೇಡರ್ಸ್ ಕಂಪನಿ ವಿರುದ್ಧ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರ ದೂರು ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು

  • ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ ಪ್ರಕರಣ
  • ಕಮರ್ಷಿಯಲ್ ಸ್ಟ್ರೀಟ್ ಠಾಣೆ ಮೆಟ್ಟಿಲೇರಿದ ಎಕ್ಸಿಕ್ಯೂಟಿವ್ ಇಂಜಿನಿಯರ್​​
  • ಚೆನ್ನೈ ಮೂಲದ ಕಂಪನಿ ವಿರುದ್ಧ ಎಫ್​ಐಆರ್​ ದಾಖಲು

ಚೆನ್ನೈ ಮೂಲದ ಎಎಸ್​​ಆರ್ ಟ್ರೇಡರ್ಸ್ ಕಂಪನಿ ಬೌರಿಂಗ್ ಮತ್ತು ಲೇಡಿ ಕರ್ಝನ್ ಮೆಡಿಕಲ್ ಕಾಲೇಜ್​​ನಿರ್ಮಾಣದ ಗುತ್ತಿಗೆ ಪಡೆದಿತ್ತು. ನೆಲಸಮ ಮಾಡಿದ್ದ ಕಟ್ಟಡದ ಅವಶೇಷ ಹಾಗೂ ಹೆಚ್ಚುವರಿ ತ್ಯಾಜ್ಯಗಳನ್ನು ನಿಯಮಾನುಸಾರ ಸ್ಥಳದಿಂದ ತೆರವುಗೊಳಿಸಿರಲಿಲ್ಲ. ಬದಲಿಗೆ, ಭಾರಿ ಪ್ರಮಾಣದ ತ್ಯಾಜ್ಯವನ್ನು ಕಾಂಪೌಂಡ್​ ಪಕ್ಕದಲ್ಲೇ ರಾಶಿ ಹಾಕಲಾಗಿತ್ತು. ಹೀಗಾಗಿ ಭಾರ ತಡೆಯಲಾರದೆ ಗೋಡೆ ಕುಸಿದು ಬಿದ್ದಿದ್ದರಿಂದ ಏಳು ಜನ ಅಮಾಯಕರು ಜೀವ ಕಳೆದುಕೊಂಡಿದ್ದರು.

ನೋಟಿಸ್​​ಗೆ ಪ್ರತಿಕ್ರಿಯಿಸದ ಗುತ್ತಿಗೆದಾರ ಕಂಪನಿ

ಇನ್ನು ತ್ಯಾಜ್ಯ ತೆರವುಗೊಳಿಸದ ಹಾಗೂ ನಿಯಮ ಉಲ್ಲಂಘಿಸಿದ ಕುರಿತು ಸ್ಪಷ್ಟೀಕರಣ ನೀಡುವಂತೆ ಸರ್ಕಾರದ ವತಿಯಿಂದ ಎಎಸ್‌ಆರ್ ಟ್ರೇಡರ್ಸ್ ಕಂಪನಿಯ ಇಮೇಲ್ ಐಡಿಗೆ ನೋಟಿಸ್ ಕಳುಹಿಸಲಾಗಿತ್ತು. ಮೇ 18ರ ಒಳಗಾಗಿ ಲಿಖಿತ ಸ್ಪಷ್ಟೀಕರಣ ನೀಡಬೇಕೆಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರು ಗಡುವು ನೀಡಿದ್ದರೂ ಗುತ್ತಿಗೆದಾರ ಕಂಪನಿಯು ಇಮೇಲ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Bengaluru Rain Tragedy: ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಘನಘೋರ ದುರಂತ; ಕಾಂಪೌಂಡ್ ಕುಸಿದು 7 ಜನ ಸಾವು

ಸರ್ಕಾರದ ನೋಟಿಸ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಇಂಜಿನಿಯರ್ ಚಂದ್ರು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಘಟನೆ ಹಿನ್ನೆಲೆ

ಏಪ್ರಿಲ್​​ 29ರಂದು ವರುಣಾರ್ಭಟಕ್ಕೆ ಬೆಂಗಳೂರಿನಲ್ಲಿ ಘೋರ ದುರಂತವೇ ನಡೆದು ಹೋಗಿತ್ತು. ಆಲಿಕಲ್ಲು, ಬಿರುಗಾಳಿಯೊಂದಿಗೆ ಅಬ್ಬರಿಸಿದ್ದ ಮಳೆ ಬೃಹತ್‌ ಕಾಂಪೌಂಡನ್ನೇ ಉರುಳಿಸಿತ್ತು. 7 ಜನರನ್ನ ಬಲಿ ಪಡೆದಿತ್ತು. ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಕುಸಿದಿತ್ತು. ಕಾಂಪೌಂಡ್‌ ಬಳಿಯೇ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಐವರು ಹಾಗೂ ಇಬ್ಬರು ಪಾದಚಾರಿಗಳು ಸೇರಿದಂತೆ 7 ಮಂದಿ ಉಸಿರು ನಿಲ್ಲಿಸಿದ್ದರೆ, ಇತರೆ 7 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ವರದಿ: ವಿಕಾಸ್​ ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಳಿ ಶರ್ಟು ಪಂಚೆ ತೊಟ್ಟು ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ, ವಿಶೇಷತೆಯೇನು? – Kannada News | Rakshit Shetty seen wearing traditional dress here is the detail

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಕುರಿತು ಕೆಲ ದಿನಗಳ ಹಿಂದೆ ಟ್ರೋಲ್​ ಒಂದು ಹರಿದಾಡುತ್ತಿತ್ತು, ‘ರಕ್ಷಿತ್ ಕಳೆದ ಹೋಗಿದ್ದಾರೆ ಹುಡುಕಿ ಕೊಡಿ’ ಎಂದು ಕೆಲವರು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದರು. ರಕ್ಷಿತ್ ಸಹ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಬಹುತೇಕ ಕಾಣೆ ಆಗಿದ್ದರು. ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ‘ರಿಚರ್ಡ್ ಆಂಟೊನಿ’ ಸಿನಿಮಾದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಬಿಟ್ಟರೆ ಇನ್ನೇನೂ ಅಪ್​​ಡೇಟ್ ನೀಡಿರಲಿಲ್ಲ. ಇದೀಗ ರಕ್ಷಿತ್ ಶೆಟ್ಟಿ ಹಠಾತ್ತನೆ ಕಾಣಿಸಿಕೊಂಡಿದ್ದಾರೆ. ಅದೂ ಪಂಚೆ ಮತ್ತು ಶರ್ಟು ಧರಿಸಿ.

ರಕ್ಷಿತ್ ಶೆಟ್ಟಿ ಅವರು ಕುಟುಂಬದೊಟ್ಟಿಗೆ ಇರುವ ಕೆಲ ಚಿತ್ರಗಳು ವೈರಲ್ ಆಗಿವೆ. ಚಿತ್ರಗಳಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಬಿಳಿ ಶರ್ಟು, ಪಂಚೆ ತೊಟ್ಟು ಮದುಮಗನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳು ನೋಡಿದವರು ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡರೇ? ರಕ್ಷಿತ್ ಶೆಟ್ಟಿಯ ನಿಶ್ಚಿತಾರ್ಥದ ಚಿತ್ರಗಳು ಇವು ಇರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ನಿಜ ಕತೆ ಬೇರೆಯೇ ಇದೆ.

ರಕ್ಷಿತ್ ಶೆಟ್ಟಿ ಶರ್ಟು, ಪಂಚೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅವರ ಪೋಷಕರ ಕಾರಣಕ್ಕೆ. ರಕ್ಷಿತ್ ಶೆಟ್ಟಿಯ ಪೋಷಕರ 50ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದ್ದು ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ-ಹವನಗಳನ್ನು ಮಾಡಲಾಗಿದೆ. ಆಪ್ತ ಸಂಬಂಧಿಗಳು, ಸ್ನೇಹಿತರನ್ನು ಸಹ ಕಾರ್ಯಕ್ರಮಕ್ಕೆ ಕರೆಯಲಾಗಿತ್ತು. ಈ ವೇಳೆ ನಟ ರಕ್ಷಿತ್ ಶೆಟ್ಟಿ ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು, ಹೋಮ-ಹವನಗಳಲ್ಲಿ ಭಾಗಿ ಆಗಿದ್ದರು. ಅದೇ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ:‘ಉಳಿದವರು ಕಂಡಂತೆ’ಗೆ 12 ವರ್ಷ, ರಕ್ಷಿತ್ ಶೆಟ್ಟಿ ನೆನಪು ಮಾಡಿಕೊಂಡಿದ್ದಕ್ಕೆ ಕಾರಣ ಇದೆ

ರಕ್ಷಿತ್ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾದ ಬಳಿಕ ಇನ್ಯಾವುದೇ ಸಿನಿಮಾನಲ್ಲಿ ನಟಿಸಿಲ್ಲ. ಬಹು ವರ್ಷಗಳಿಂದ ಕತೆ ತಿದ್ದುತಿದ್ದ ‘ರಿಚರ್ಟ್ ಆಂಟೊನಿ’ ಸಿನಿಮಾದ ಚಿತ್ರೀಕರಣವನ್ನು ಶೀಘ್ರವೇ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ. ಅದರ ಜೊತೆಗೆ ‘ಪುಣ್ಯಕೋಟಿ’ ಹಾಗೂ ಇನ್ನೂ ಒಂದು ಸಿನಿಮಾದ ಚಿತ್ರಕತೆಯನ್ನೂ ಸಹ ರೆಡಿ ಮಾಡಿಕೊಂಡಿರುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರೀಕರಣವನ್ನು ಸದ್ದಿಲ್ಲದೆ ಶುರು ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version