ಗಂಡನ ಮನೆಗಳ್ಳತನಕ್ಕೆ ಪತ್ನಿ ಸಾಥ್​: ಬಂದ ಹಣದಲ್ಲಿ ಗೋವಾದಲ್ಲಿ ಶೋಕಿ; ಸಿಕ್ಕಿಬಿದ್ದ ದಂಪತಿ – Kannada News | Bengaluru Burglars Arrested: Couple’s Goa Casino Lifestyle Exposed After Kunigal House Robbery

ತುಮಕೂರು, ಜೂನ್​​ 22: ಮನೆಗಳ್ಳತನವನ್ನೇ (theft) ಕಾಯಕ ಮಾಡಿಕೊಂಡಿದ್ದ ವ್ಯಕ್ತಿ ಮತ್ತು ಆತನಿಗೆ ಸಾಥ್​ ನೀಡಿದ ಪತ್ನಿ ಇದೀಗ ಕುಣಿಗಲ್ ಪೊಲೀಸರ ಅತಿಥಿ ಆಗಿದ್ದಾರೆ. ಮಂಜುನಾಥ ಅಲಿಯಾಸ್ ಕೋಳಿ ಮಂಜ (30) ಮತ್ತು ಅನಿತಾ (30) ಬಂಧಿತ ಆರೋಪಿಗಳು. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತಿದ್ದರು. ಬಳಿಕ ಬಂದ ಹಣದಲ್ಲಿ ಗೋವಾಗೆ ತೆರಳಿ ದಂಪತಿ ಮೋಜು ಮಸ್ತಿ ಮಾಡುತ್ತಿದ್ದರು. ಸದ್ಯ ಕುಣಿಗಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ಮೂಲದ ದಂಪತಿಯಿಂದ ಮನೆಗಳ್ಳತನ
  • ಕುಣಿಗಲ್​​ನಲ್ಲಿ 30 ಲಕ್ಷ ರೂ ನಗದು ದೋಚಿದ ಖತರ್ನಾಕ್ ಜೋಡಿ
  • ಪೊಲೀಸರ ಬಲೆಗೆ ಬಿದ್ದ ಕಳ್ಳ ದಂಪತಿ

ಮಂಜುನಾಥ್ ಹಾಗೂ ಅನಿತಾ ಮೂಲತಃ ಬೆಂಗಳೂರಿನ ರಾಮಚಂದ್ರಪುರದ ನಿವಾಸಿಗಳು. ಈ ದಂಪತಿ ಸಾಮಾನ್ಯರಲ್ಲ, ಇವರ ಅಸಲಿ ಸಂಗತಿ ತಿಳಿದ ಕುಣಿಗಲ್ ಪೊಲೀಸರೇ ಈಗ ಒಂದು ಕ್ಷಣ ದಂಗಾಗಿದ್ದು, ಕಳ್ಳತನ ಕೃತ್ಯವನ್ನೇ ಕಾಯಕ ಮಾಡಿಕೊಂಡ ಇವರ ಗೋವಾ ಶೋಕಿ ಇದೀಗ ಬಯಲಾಗಿದೆ.

ಗೋವಾದಲ್ಲಿ ಕದ್ದ ಬೈಕ್ ಬಳಸಿ ಕುಣಿಗಲ್​ನಲ್ಲಿ ಮನೆಗಳ್ಳತನ

ಮಂಜುನಾಥ್ ಅಲಿಯಾಸ್ ಕೋಳಿ ಮಂಜನಿಗೆ ಕಳ್ಳತನವೇ ಕಾಯಕ. ಇತನ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳಿವೆ. ಬೀಗ ಹಾಕಿದ ಒಂಟಿ ಮನೆ ಟಾರ್ಗೆಟ್ ಮಾಡುವ ಈತ, ರಾತ್ರಿ ವೇಳೆ ಬಂದು ಕೈಚಳಕ ತೋರಿಸುತ್ತಿದ್ದ. ಇದೇ ರೀತಿ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಪಾಷ ಎಂಬುವವರ ಮನೆಯಲ್ಲಿ ಮೇ 29ರಂದು ಕೈಚಳಕ ತೋರಿಸಿದ್ದ.

30 ಲಕ್ಷ ರೂ ನಗದು ಸಹಿತ ಚಿನ್ನಾಭರಣ ದೋಚಿ ಪರಾರಿ

ಅಂದು ಹಬ್ಬ ಹಿನ್ನಲೆ ಪಾಷ ನೆಲಮಂಗಲದ ಸಂಬಂಧಿಕರ ಮನೆಗೆ ತೆರಳಿದ್ದರು. ಆದರೆ ಈ ವೇಳೆ ಬೀಗ ಮುರಿದು ಎಂಟ್ರಿಕೊಟ್ಟ ಈ ಖದೀಮ‌, ಸೈಟ್ ಖರೀದಿಗೆಂದು ಇಟ್ಟಿದ್ದ 30 ಲಕ್ಷ ರೂ ನಗದು ಸಹಿತ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಳಿಕ ಪಕ್ಕದ ಮನೆಯವರ ಮಾಹಿತಿ ಆಧರಿಸಿ ಪಾಷ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊನೆಗೂ ಆರೋಪಿ ಅಂದರ್ ಆಗಿದ್ದಾನೆ.

ಗೋವಾದಲ್ಲಿ ಮೋಜು, ಮಸ್ತಿ

ಅಸಲಿಗೆ ಮನೆಗಳ್ಳತನ ಕೃತ್ಯ ಬೆನ್ನತ್ತಿದ ಕುಣಿಗಲ್ ಪೊಲೀಸರಿಗೆ ಆರೋಪಿ ಬಳಸಿದ ಬೈಕ್ ಗೋವಾ ಮೂಲದ್ದು ಅನ್ನೊದು ತಲೆಗೆ ಹುಳ ಬಿಟ್ಟಿತ್ತು. ಕಾರ್ಯಾಚರಣೆ ಆರಂಭಿಸಿ ಸಿಸಿಟಿವಿ ಜಾಡು ಹಿಡಿದ ಪೊಲೀಸರಿಗೆ ಕೊನೆಗೂ ಕೊಳಿ ಮಂಜ ಪತ್ತೆಯಾಗಿದ್ದು, ಈತನ ಕೃತ್ಯಕ್ಕೆ ಸಾಥ್ ನೀಡಿದ್ದ ಪತ್ನಿ ಅನಿತಾ ಸಂಗತಿ ಸಹ ಬಯಲಾಗಿದೆ. ಕದ್ದ ಚಿನ್ನಾಭರಣವನ್ನು ಆಕೆಯ ಮುಖಾಂತರವೇ ಅಡವಿರಿಸಿ ಬಂದ ಹಣದಲ್ಲಿ ದಂಪತಿ ಗೋವಾಗೆ ತೆರಳುತ್ತಿದ್ದರು. ಬಳಿಕ ಅಲ್ಲಿ ಕ್ಯಾಸಿನೋ ಅಂತ ಮೋಜು, ಮಸ್ತಿ ಮಾಡುತ್ತಿದ್ದರು.

ಇದನ್ನೂ ಓದಿ: ಗದಗದಲ್ಲಿ ಬಡ್ಡಿ ಬಕಾಸುರರ ಅಟ್ಟಹಾಸ: 17 ಲಕ್ಷ ರೂ. ಸಾಲ ಕೊಟ್ಟು ರೈತನ 5 ಎಕರೆ ಜಮೀನು ನುಂಗಿದ ರೌಡಿಶೀಟರ್ ಗ್ಯಾಂಗ್

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೊ ಹಾಗೆ ಮನೆಗಳ್ಳತನ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ದಂಪತಿಗೆ ಕುಣಿಗಲ್ ಪೊಲೀಸರು ಇದೀಗ ಶಾಕ್ ನೀಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳ ವಶಕ್ಕೆ ಪಡೆದ ಪೊಲೀಸರು ದಂಪತಿಯ ವಿಚಾರಣೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಕೇಂದ್ರದ ಮಾದರಿಯಂತೆ ರಾಜ್ಯದಲ್ಲೂ ಆರೋಗ್ಯ ಭಾಗ್ಯ – Kannada News | Karnataka Governmnet Announces Annual Health Checkup for His above 40 Year Age employees

ಬೆಂಗಳೂರು, (ಜೂನ್.22): ಕೇಂದ್ರ ಸರ್ಕಾರದ ಮಾದರಿಯಂತೆ ಕರ್ನಾಟಕದಲ್ಲೂ ರಾಜ್ಯ ಸರ್ಕಾರಿ ನೌಕರರಿಗೆ (Karnataka Governmnet employees) ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಘೋಷಿಸಲಾಗಿದೆ. ಹೌದು…ಆರೋಗ್ಯ ಸಂಜೀವಿನಿ ಯೋಜನೆ (KASS) ಅಡಿಯಲ್ಲಿ 40 ವರ್ಷ ವಯಸ್ಸು ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಉಚಿತವಾಗಿ ವಾರ್ಷಿಕ ವೈದ್ಯಕೀಯ ತಪಾಸಣೆ (Annual Health Checkup) ಸೌಲಭ್ಯವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ ನೌಕರರಲ್ಲಿ ಹೆಚ್ಚಾಗುತ್ತಿರುವ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮುಖ್ಯಾಂಶಗಳು

  • 40 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ
  • ಕೇಂದ್ರ ಸರ್ಕಾರದ ಮಾದರಿಯಂತೆ ರಾಜ್ಯ ಸರ್ಕಾರದಲ್ಲೂ ಯೋಜನೆ
  • ಆರೋಗ್ಯ ಸಂಜೀವಿನಿ ಅಡಿಯಲ್ಲಿ ವಾರ್ಷಿಕ ತಪಾಸಣೆಗೆ ಮುಂದು
  • ಬಿಪಿ,ಶುಗರ್, ಇಸಿಜಿ, ಮೆಮೋಗ್ರಫಿ, ಇಎನ್ ಟಿ ಸೇರಿದಂತೆ ನಿಗದಿ ಪಡಿಸಿದ ತಪಾಸಣೆಗೆ ಅಸ್ತು

ಯಾವ್ಯಾವ ತಪಾಸಣೆ ಮಾಡಿಸಿಕೊಳ್ಳಬಹುದು?

ವಾರ್ಷಿಕ ವೈದ್ಯಕೀಯ ತಪಾಸಣೆಗಾಗಿ ಸರ್ಕಾರವು ಪುರುಷ ನೌಕರರಿಗೆ ಗರಿಷ್ಠ 2,000 ರೂಪಾಯಿ ಹಾಗೂ ಮಹಿಳಾ ನೌಕರರಿಗೆ ಗರಿಷ್ಠ 2,200 ರೂಪಾಯಿಗಳ ಸಂಚಿತ ದರಗಳನ್ನು ನಿಗದಿಪಡಿಸಿದೆ. ಈ ಯೋಜನೆಯಡಿ ಸಾಮಾನ್ಯ ದೈಹಿಕ ತಪಾಸಣೆ, ರಕ್ತದೊತ್ತಡ, ಕಣ್ಣು ಮತ್ತು ಇಎನ್ಟಿ ತಪಾಸಣೆಗಳ ಜೊತೆಗೆ ರಕ್ತದ ಗ್ಲುಕೋಸ್, ಲಿಪಿಡ್ ಪ್ರೊಫೈಲ್, ಲಿವರ್ ಹಾಗೂ ಕಿಡ್ನಿ ಕಾರ್ಯನಿರ್ವಹಣಾ ಪರೀಕ್ಷೆಗಳು ಸೇರಿದಂತೆ ಹಲವು ಪ್ರಮುಖ ರೋಗನಿರ್ಣಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಮಹಿಳಾ ನೌಕರರಿಗೆ ಹೆಚ್ಚುವರಿಯಾಗಿ ಸ್ತನ ಹಾಗೂ ಗರ್ಭಕಂಠದ ತಪಾಸಣೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ನೌಕರರು ಒಂದೇ ಸಂಸ್ಥೆಯಲ್ಲಿ ತಪಾಸಣೆ ಪಡೆದು ಒಂದೇ ಕ್ಲೈಮ್ನಲ್ಲಿ ಇದನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಡಿಸಿಎಂ ಮಹತ್ವದ ಸಭೆ: ಕಂದಾಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ, ಬಡ್ತಿ ಪ್ರಕ್ರಿಯೆ ಚುರುಕು

ಯಾರ್ಯಾರಿಗೆ ಈ ಸೌಲಭ್ಯ ಅನ್ವಯ?

ಕೇಂದ್ರ ಸರ್ಕಾರದ ಮಾದರಿಯಲ್ಲೇ ಈ ಯೋಜನೆಯನ್ನು ರೂಪಿಸಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಂದು ಈ ಆದೇಶವನ್ನು ಹೊರಡಿಸಿದೆ. ಈ ಸೌಲಭ್ಯವು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟಿರುವ (Opt-in ಆಗಿರುವ) ಎಲ್ಲಾ ಸರ್ಕಾರಿ ನೌಕರರಿಗೆ ಪ್ರತಿ  ವರ್ಷದಲ್ಲಿ ಒಂದು ಬಾರಿ ನಗದು ರಹಿತವಾಗಿ ಲಭ್ಯವಿರಲಿದೆ. ಆದರೆ, ಸ್ವ-ಇಚ್ಛೆಯಿಂದ ಈ ಯೋಜನೆಯಿಂದ ಹೊರಗುಳಿದ (Opt-out ಆದ) ನೌಕರರಿಗೆ ಹಾಗೂ ನೌಕರರ ಕುಟುಂಬದ ಅವಲಂಬಿತ ಸದಸ್ಯರಿಗೆ ಈ ವಾರ್ಷಿಕ ತಪಾಸಣೆಯ ಸೌಲಭ್ಯ ಅನ್ವಯಿಸುವುದಿಲ್ಲ.

ಎಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು?

ಇನ್ನು ಈ ಆರೋಗ್ಯ ತಪಾಸಣೆಯನ್ನು ನೌಕರರು ಸರ್ಕಾರಿ ಆಸ್ಪತ್ರೆಗಳು, ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಅಥವಾ ಯೋಜನೆಯಡಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬಹುದಾಗಿದೆ.

ಇದರ  ಷರತ್ತುಗಳು

  • ಸ್ವ-ಇಚ್ಛೆಯಿಂದ ಯೋಜನೆಗೆ ಒಳಪಡದ (Opt-out ಆದ) ಸರ್ಕಾರಿ ನೌಕರರು ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ.
  • ವಾರ್ಷಿಕ ಆರೋಗ್ಯ ತಪಾಸಣೆ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ಸರ್ಕಾರಿ ನೌಕರರ ಕುಟುಂಬದ ಅವಲಂಬಿತ ಸದಸ್ಯರು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ.
  • ಈ ತಪಾಸಣೆಗಳನ್ನು ಸರ್ಕಾರಿ ಆಸ್ಪತ್ರೆ (ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳನ್ನು ಒಳಗೊಂಡಂತೆ) ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ (KASS) ನೋಂದಾಯಿಸಲ್ಪಟ್ಟಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯತಕ್ಕದ್ದು.
  • ಈ ತಪಾಸಣೆಗಳನ್ನು ಒಂದೇ ಸಂಸ್ಥೆಯಲ್ಲಿ ಪಡೆದು ಒಂದೇ ಕ್ಷೇಮಿನಲ್ಲಿ ಅವುಗಳನ್ನು ಇತ್ಯರ್ಥಪಡಿಸತಕ್ಕದ್ದು.
  • ನಿಗದಿಪಡಿಸಿರುವ ವಾರ್ಷಿಕ ವೈದ್ಯಕೀಯ ತಪಾಸಣೆಗಳಿಗೆ ರೂ. 2000/- (ಪುರುಷ ನೌಕರರಿಗೆ) ರೂ. 2,200- (ಮಹಿಳಾ ನೌಕರರಿಗೆ) ಸಂಚಿತ ದರಗಳನ್ನು (Consolidated Rates) ನಿಗದಿಪಡಿಸಲಾಗಿದೆ. ವಿವಿಧ ತಪಾಸಣೆಗಳಿಗೆ ಸರ್ಕಾರ ನಿಗದಿಪಡಿಸಿದ ಗರಿಷ್ಠ ಮೊತ್ತದ ಮಿತಿಗೊಳಪಟ್ಟು ಮಂಜೂರಾತಿ ನೀಡತಕ್ಕದ್ದು.
  •  ವಾರ್ಷಿಕ ವೈದ್ಯಕೀಯ ತಪಾಸಣೆಗಳನ್ನು KASS ಯೋಜನೆಯಡಿ ಅಳವಡಿಸಿಕೊಳ್ಳಲು ಹಾಗೂ ಈ ಸಂಬಂಧ ನೋಂದಾಯಿತ ಖಾಸಗಿ ಆಸ್ಪತ್ರೆಗಳೊಂದಿಗೆ ಸೂಕ್ತ ಒಡಂಬಡಿಕೆಯನ್ನು ಮಾಡಿಕೊಳ್ಳಲು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:25 pm, Mon, 22 June 26

Source link

‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ – Kannada News | Ayogya 2 movie actor Sathish Ninasam gives clarification about his controversial statement

‘ಅಯೋಗ್ಯ 2’ ಸಿನಿಮಾದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ನಟ ಸತೀಶ್ ನೀನಾಸಂ (Sathish Ninasam) ಅವರು ಮಾತನಾಡುವಾಗ ‘ನಿರ್ಮಾಪಕರು ಎಜುಕೇಟೆಡ್ ಆಗಿರಬೇಕು’ ಎಂದು ಹೇಳಿದ್ದು ವಿವಾದಕ್ಕೆ ಕಾರಣ ಆಗಿದೆ. ಈ ಬಗ್ಗೆ ಸಭೆ ನಡೆಸಲಾಗಿದ್ದು, ಸತೀಶ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಎಜುಕೇಷನ್ ಎಂಬ ಪದ ಬಳಸಿದ್ದಕ್ಕೆ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಹೇಳಿದ ಎಜುಕೇಷನ್ ಎಂದರೆ ಸಿನಿಮಾದ ಜ್ಞಾನ. ನಾನು ಓದಿದ್ದು ಎಸ್​ಎಸ್​ಎಲ್​ಸಿ ಮಾತ್ರ. ನಮ್ಮ ತಾಯಿ ಓದಿಯೇ ಇಲ್ಲ. ಹಾಗಾಗಿ ಆ ರೀತಿ ಯಾರನ್ನೂ ಹೀಯಾಳಿಸುವಂತಹ ಮನಸ್ಥಿತಿ ನನಗೆ ಇಲ್ಲ. ನಾನು ಬಂದಿದ್ದು ಯಾವುದೋ ಕುಗ್ರಾಮದಿಂದ. 200-300 ರೂಪಾಯಿಗೆ ಸೀರಿಯಲ್ ಮಾಡಿಕೊಂಡು ಬಂದವನು. ಈ ನಿರ್ಮಾಪಕರೆಲ್ಲ ಚಿತ್ರರಂಗವನ್ನು ಕಟ್ಟಿದವರು. ಒಬ್ಬ ನಿರ್ಮಾಪಕರು ಚಿತ್ರರಂಗಕ್ಕೆ ಬರುವಾಗ ಸಿನಿಮಾದ ಜ್ಞಾನ ಬಹಳ ಮುಖ್ಯ ಆಗುತ್ತದೆ. ಆ ಬಗ್ಗೆ ನಾನು ಹೇಳಿದ್ದು ಅಷ್ಟೇ. ನಾನು ಕೂಡ ನಿರ್ಮಾಪಕನಾಗಿ 4 ಸಿನಿಮಾ ನಿರ್ಮಾಣ ಮಾಡಿದ್ದೇನೆ’ ಎಂದು ಸತೀಶ್ ನಿನಾಸಂ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸುವುದು ತಿಳಿಯಿರಿ; ಖರ್ಚು ಹೆಚ್ಚದಂತೆ ರಿವಾರ್ಡ್ಸ್ ಪಡೆಯುವ ಸ್ಮಾರ್ಟ್ ಪ್ಲಾನ್ ತಿಳಿದಿರಿ – Kannada News | Credit Card tips, know how to maximise rewards without overspending

ಅನೇಕ ಜನರು ಕ್ರೆಡಿಟ್ ಕಾರ್ಡ್‌ಗಳನ್ನು ಕೇವಲ ಸಾಲದ ಸಾಧನವಾಗಿ ನೋಡುತ್ತಾರೆ, ಆದರೆ ಸರಿಯಾದ ಹಣಕಾಸಿನ ಶಿಸ್ತಿನೊಂದಿಗೆ ಬಳಸಿದರೆ ಇದು ಉಚಿತವಾಗಿ ಹಣ ಅಥವಾ ಉಳಿತಾಯವನ್ನು ತಂದುಕೊಡುವ ಅತ್ಯುತ್ತಮ ಮಾರ್ಗವಾಗಿದೆ. ಆದರೆ, ಹೆಚ್ಚಿನ ರಿವಾರ್ಡ್ಸ್ ಪಡೆಯುವ ಆಸೆಗೆ ಬಿದ್ದು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು (Overspending) ದೊಡ್ಡ ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ, ಸ್ಮಾರ್ಟ್ ಆಗಿ ಕ್ರೆಡಿಟ್ ಬಳಸುವ ಕಲೆ ತಿಳಿದಿರಿ.

ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ನಾವು ಮಾಡುತ್ತಿರುವ ಪ್ರಮುಖ ತಪ್ಪುಗಳು

  • ರಿವಾರ್ಡ್ ಪಾಯಿಂಟ್‌ಗಳಿಗಾಗಿ ಅನಗತ್ಯ ಖರ್ಚು ಮಾಡುವುದು: ಕೆಲವು ಕಾರ್ಡ್‌ಗಳಲ್ಲಿ ಇಂತಿಷ್ಟು ಖರ್ಚು ಮಾಡಿದರೆ ಇಷ್ಟು ಬೋನಸ್ ಪಾಯಿಂಟ್ ಸಿಗುತ್ತದೆ ಎಂಬ ಆಫರ್ ಇರುತ್ತದೆ. ಇದನ್ನು ಪಡೆಯಲು ಜನ ತಮಗೆ ಬೇಡದ ವಸ್ತುಗಳನ್ನು ಖರೀದಿಸಿ ಸಾಲದ ಸುಳಿಗೆ ಸಿಲುಕುತ್ತಾರೆ.
  • ಕೇವಲ ಕನಿಷ್ಠ ಮೊತ್ತವನ್ನು (Minimum Due) ಪಾವತಿಸುವುದು: ಪೂರ್ಣ ಬಿಲ್ ಪಾವತಿಸದೆ ಕೇವಲ ಕನಿಷ್ಠ ಮೊತ್ತ ಪಾವತಿಸಿದರೆ, ಉಳಿದ ಮೊತ್ತದ ಮೇಲೆ ಶೇಕಡಾ 40 ಕ್ಕಿಂತ ಹೆಚ್ಚು ವಾರ್ಷಿಕ ಬಡ್ಡಿ (Interest) ಬೀಳುತ್ತದೆ. ಇದರಿಂದ ನಿಮಗೆ ಸಿಕ್ಕ ರಿವಾರ್ಡ್ಸ್‌ಗಿಂತ ನೀವು ಕಟ್ಟುವ ಬಡ್ಡಿಯೇ ಹೆಚ್ಚಾಗುತ್ತದೆ.
  • ಲೈಫ್‌ಸ್ಟೈಲ್‌ಗೆ ಹೊಂದದ ಕಾರ್ಡ್ ಆರಿಸಿಕೊಳ್ಳುವುದು: ನೀವು ಹೆಚ್ಚಾಗಿ ಶಾಪಿಂಗ್ ಮಾಡದಿದ್ದರೂ ಶಾಪಿಂಗ್ ಕಾರ್ಡ್ ಹೊಂದುವುದು ಅಥವಾ ಹೆಚ್ಚು ಪ್ರಯಾಣ ಮಾಡದಿದ್ದರೂ ದುಬಾರಿ ವಾರ್ಷಿಕ ಶುಲ್ಕವಿರುವ ಟ್ರಾವೆಲ್ ಕಾರ್ಡ್ ಹೊಂದುವುದರಿಂದ ಯಾವುದೇ ಲಾಭವಿಲ್ಲ.

ಇದನ್ನೂ ಓದಿ: ಅಲ್ಪ ಹೂಡಿಕೆ; ಮೆಚ್ಯೂರಿಟಿಗೆ 35 ಲಕ್ಷ ರೂವರೆಗೆ ಗಳಿಕೆ; ಇದು ಪೋಸ್ಟ್ ಆಫೀಸ್ ಆರ್​ಪಿಎಲ್​ಐ ಯೋಜನೆಯ ಕೊಡುಗೆ

ಖರ್ಚು ಹೆಚ್ಚಾಗದಂತೆ ರಿವಾರ್ಡ್ಸ್ ಗರಿಷ್ಠಗೊಳಿಸಲು ಸ್ಮಾರ್ಟ್ ಸೂತ್ರಗಳು ಇಲ್ಲಿ ಕೆಳಕಂಡಂತಿವೆ:

ಸರಿಯಾಗಿ ಕಾರ್ಡ್‌ಗಳನ್ನು ಬಳಸಿ

ನಿಮ್ಮ ಕಾರ್ಡ್​ಗಳನ್ನು ತಂತ್ರಾತ್ಮಕವಾಗಿ (Use Cards Strategically) ಬಳಸಿ. ನಿಮ್ಮ ದೈನಂದಿನ ಮತ್ತು ಅನಿವಾರ್ಯ ಖರ್ಚುಗಳಿಗಾಗಿ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ. ಉದಾಹರಣೆಗೆ, ದಿನಸಿ (Groceries) ಖರೀದಿಗೆ ಕ್ಯಾಶ್‌ಬ್ಯಾಕ್ ನೀಡುವ ಕಾರ್ಡ್, ಇಂಧನ (Fuel) ತುಂಬಿಸಲು ಫ್ಯುಯೆಲ್ ಕಾರ್ಡ್ ಮತ್ತು ಆನ್‌ಲೈನ್ ಬಿಲ್ ಪಾವತಿಗೆ ಹೆಚ್ಚಿನ ಪಾಯಿಂಟ್ ನೀಡುವ ಕಾರ್ಡ್‌ಗಳನ್ನು ಪ್ರತ್ಯೇಕವಾಗಿ ಬಳಸಿ.

ರಿವಾರ್ಡ್‌ಗಳನ್ನು ಸರಿಯಾದ ರೀತಿಯಲ್ಲಿ ರಿಡೆಂಪ್ಷನ್ ಮಾಡುವುದು ತಿಳಿಯರಿ

ರಿವಾರ್ಡ್ ಪಾಯಿಂಟ್‌ಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಉದಾಹರಣೆಗೆ, ಹೆಚ್‌ಡಿಎಫ್‌ಸಿ ಅಥವಾ ಎಸ್‌ಬಿಐ ಕಾರ್ಡ್‌ಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ನೇರವಾಗಿ ಕ್ಯಾಶ್‌ಬ್ಯಾಕ್ ಆಗಿ ಬದಲಾಯಿಸಿಕೊಂಡರೆ ಕಡಿಮೆ ಮೌಲ್ಯ ಸಿಗಬಹುದು. ಅದೇ ಪಾಯಿಂಟ್‌ಗಳನ್ನು ವಿಮಾನ ಟಿಕೆಟ್ ಬುಕಿಂಗ್ ಅಥವಾ ಬ್ರ್ಯಾಂಡೆಡ್ ವೋಚರ್‌ಗಳಿಗೆ ಬಳಸಿಕೊಂಡರೆ ಹೆಚ್ಚಿನ ಮೌಲ್ಯ (Value-back) ಸಿಗುತ್ತದೆ.

ಬಿಲ್ಲಿಂಗ್ ಸೈಕಲ್ ಅನ್ನು ಸರಿಯಾಗಿ ಬಳಸಿ

ನಿಮ್ಮ ಬಿಲ್ ಜನರೇಟ್ ಆದ ತಕ್ಷಣ ದೊಡ್ಡ ಮೊತ್ತದ ಖರೀದಿಗಳನ್ನು ಮಾಡಿದರೆ, ನಿಮಗೆ ಹಣ ಪಾವತಿಸಲು ಸುಮಾರು 45 ರಿಂದ 50 ದಿನಗಳವರೆಗೆ ಬಡ್ಡಿ ರಹಿತ ಅವಧಿ (Interest-free period) ಸಿಗುತ್ತದೆ.

ಖರ್ಚುಗಳ ಮಿತಿ ಮತ್ತು ಅಲರ್ಟ್ ಸೆಟ್ ಮಾಡಿ

ನಿಮ್ಮ ಕ್ರೆಡಿಟ್ ಲಿಮಿಟ್ 2 ಲಕ್ಷ ರೂ. ಇದ್ದರೂ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ಬ್ಯಾಂಕ್ ಆಪ್‌ನಲ್ಲಿ 20,000 ರೂ.ಗಳ ಮಿತಿಯನ್ನು ನೀವೇ ಸೆಟ್ ಮಾಡಿಕೊಳ್ಳಿ. ಇದು ನಿಮ್ಮನ್ನು ಗಡಿ ದಾಟಿ ಖರ್ಚು ಮಾಡದಂತೆ ತಡೆಯುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಹಣ ಇದೆ, ಆದರೆ, ‘ಅದು’ ಇಲ್ಲವಂತೆ; ಅಮೆರಿಕಕ್ಕೆ ವಲಸೆ ಹೋದ ಬೆಂಗಳೂರಿನ ಸ್ಟಾರ್ಟಪ್ ಸಂಸ್ಥಾಪಕಿ

ಈ ಅಂಶಗಳು ಗಣನೆಯಲ್ಲಿರಲಿ

ಕ್ರೆಡಿಟ್ ಕಾರ್ಡ್ ಬಳಕೆಯ ಸುವರ್ಣ ನಿಯಮವೆಂದರೆ — “ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಂದು ನಗದು ಹಣ ಇಲ್ಲದಿದ್ದರೆ, ಆ ವಸ್ತುವನ್ನು ಕ್ರೆಡಿಟ್ ಕಾರ್ಡ್‌ನಲ್ಲೂ ಖರೀದಿಸಬೇಡಿ.”

ಹಾಗೆಯೇ, ಕ್ರೆಡಿಟ್ ಕಾರ್ಡ್ ರಿವಾರ್ಡ್ಸ್ ಆಸೆಗೆ ನಿಮಗೆ ಅಗತ್ಯವೇ ಇಲ್ಲದ ವಸ್ತು ಅಥವಾ ಸೇವೆಗೆ ಹಣ ವ್ಯಯಿಸಬೇಡಿ. ಇದು ಸದಾ ಗಮನದಲ್ಲಿರಲಿ. ಬಿಲ್ ಅನ್ನು ಪ್ರತಿ ತಿಂಗಳು ಪೂರ್ಣವಾಗಿ ಪಾವತಿಸಿದರೆ ಮಾತ್ರ ಕ್ರೆಡಿಟ್ ಕಾರ್ಡ್‌ನ ನಿಜವಾದ ಲಾಭ ಪಡೆಯಲು ಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Viral: ರಾಜೀನಾಮೆ ನೀಡಿದ್ರೂ ಕಂಪನಿ ಕೆಲಸದ ಕೊನೆಯ ದಿನವನ್ನು ದೃಢಪಡಿಸಿಲ್ಲ; ನೆಟ್ಟಿಗರಲ್ಲಿ ಸಲಹೆ ಕೇಳಿದ ಉದ್ಯೋಗಿ – Kannada News | Company hasn’t formally responded to resignation email; Employee posts seeking advice from netizens

ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳು (employee) ಅನುಭವಿಸುವ ಒತ್ತಡ ಹೇಳಲಾಗದು. ಕೆಲ ಕಂಪನಿಗಳು ರಾಜೀನಾಮೆ ನೀಡುವ ಸಂದರ್ಭದಲ್ಲೂ ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತವೆ. ರಾಜೀನಾಮೆ ನೀಡಿ ಒಂದೂವರೆ ತಿಂಗಳಾದರೂ ಕಂಪನಿಯು ತನ್ನ ಕೆಲಸದ ಕೊನೆಯ ದಿನವನ್ನು ಔಪಚಾರಿಕವಾಗಿ ದೃಢಪಡಿಸಿಲ್ಲ. ಹೊಸ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುವ ದಿನಾಂಕ ಹತ್ತಿರ ಬರುತ್ತಿದೆ. ಆದರೆ ಈ ಕಂಪನಿಯ ವಿಳಂಬವು ತಮ್ಮನ್ನು ಆತಂಕಕ್ಕೆ ದೂಡಿದೆ ಎಂದು ಉದ್ಯೋಗಿ ಎಂದು ಹೇಳಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಡೆವಲಪರ್ಸ್ ಇಂಡಿಯಾ (r/developersIndia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಕಂಪನಿ ನನಗೆ ಕೆಲಸದ ಕೊನೆಯ ದಿನವನ್ನು ಖಚಿತ ಪಡಿಸಿಲ್ಲ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಏಳು ತಿಂಗಳ ಹಿಂದೆ ಭಾರತೀಯ ಉತ್ಪನ್ನ ಕಂಪನಿಯನ್ನು ಸೇರಿದ್ದೆವು. ಆದರೆ ಕೆಲಸದ ವಾತಾವರಣ ವೃತ್ತಿಪರವಾಗಿ ಉತ್ತಮವಾಗಿಲ್ಲದ ಕಾರಣ ತ್ಯಜಿಸಲು ನಿರ್ಧರಿಸಿದೆ. ನಾನು ನನ್ನ ಹೊಸ ಉದ್ಯೋಗದಾತರಿಗೆ 90 ದಿನಗಳ ನಂತರ ಕೆಲಸಕ್ಕೆ ಸೇರುವ ದಿನಾಂಕವನ್ನು ಹೇಳಿದೆ. ಅದಕ್ಕೆ ಅವರು ಒಪ್ಪಿಕೊಂಡರು ಎಂದಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

ಹಲವಾರು ಫಾಲೋ-ಅಪ್ ಮೇಲ್‌ಗಳು, ಹೆಚ್ ಆರ್ ಕರೆಗಳು, ಹೆಚ್ ಆರ್ ಬಿಪಿ ಸುತ್ತು ಮತ್ತು ನಿರ್ಗಮನ ಸಂದರ್ಶನಗಳ ಹೊರತಾಗಿಯೂ, ಯಾರೂ ತನ್ನ ರಾಜೀನಾಮೆ ಮೇಲ್‌ಗೆ ಔಪಚಾರಿಕವಾಗಿ ಪ್ರತಿಕ್ರಿಯಿಸಿಲ್ಲ. ನನ್ನ ಕೊನೆಯ ಕೆಲಸದ ದಿನವನ್ನು ದೃಢೀಕರಿಸಿಲ್ಲ ಎಂದು ಬರೆದುಕೊಂಡಿದ್ದಾರೆ.

ನನ್ನ ಮ್ಯಾನೇಜರ್ ವಾಟ್ಸಾಪ್ ಕರೆಯಲ್ಲಿ ನನ್ನ ಬದಲಿಗೆ ಉದ್ಯೋಗಿಯನ್ನು ಹುಡುಕುತ್ತಿದ್ದಾರೆ. ಉದ್ಯೋಗಿ ಸಿಕ್ಕ ಮೂರು ವಾರಗಳ ನಂತರ ಕೆಲಸ ಬಿಡಲು ಹೇಳುತ್ತಾರೆ. ಆದರೆ, ಮುಂದೆ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಹೆಚ್ಚಿನ ಹಾನಿಯಾಗದಂತೆ ಈ ಸಂದರ್ಭವಂನ್ನಿ ಹೇಗೆ ಎದುರಿಸುವುದು ಎಂಬುದರ ಕುರಿತು ಯಾವುದೇ ಸಲಹೆಗಳಿವೆಯೇ? ನಾನು ಹೊಸ ಸಂಸ್ಥೆ ಸೇರುವ ದಿನಾಂಕ ಹತ್ತಿರವಾಗುತ್ತಿದ್ದಂತೆ ನನಗೆ ತುಂಬಾ ಆತಂಕವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಿಂಗಳ ಸಂಬಳ 3.5 ಲಕ್ಷ ರೂಯಿದ್ರೂ ಉಳಿತಾಯ ಮಾತ್ರ ಶೂನ್ಯ; ಬೆಂಗಳೂರಿನ ವ್ಯಕ್ತಿ ಹೀಗೆಂದಿದ್ದೇಕೆ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ರಾಜೀನಾಮೆ ಏಕಪಕ್ಷೀಯ ಪ್ರಕ್ರಿಯೆ. ನೀವು ರಾಜೀನಾಮೆ ನೀಡಿ, ನೋಟಿಸ್ ಅವಧಿಯನ್ನು ಪೂರೈಸಿ ಹಾಗೂ ನೋಟಿಸ್ ಅವಧಿ ಮುಗಿದ ನಂತರ ಹೊರಡಿ. ನಿರ್ಗಮನ ಔಪಚಾರಿಕತೆಗಳನ್ನು ಪೂರ್ಣಗೊಳಿಸದಿದ್ದರೆ, ಸರ್ಕಾರಿ ಪೋರ್ಟಲ್‌ನಲ್ಲಿ ದೂರು ದಾಖಲಿಸಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಅವರ ಗುಲಾಮರಲ್ಲ. ನಿಮ್ಮ ರಾಜೀನಾಮೆ ಇಮೇಲ್ ಕಳುಹಿಸಿದ ದಿನಾಂಕದಿಂದ 90 ದಿನಗಳು ನಿಮ್ಮ ಕೊನೆಯ ಕೆಲಸದ ದಿನವಾಗಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ದಿಕ್​ಗಾಗಿ ಸ್ಫೋಟಕ ಆರಂಭಿಕನನ್ನೇ ಬಿಟ್ಟುಕೊಡಲು ಮುಂದಾದ ರಾಜಸ್ಥಾನ್ ರಾಯಲ್ಸ್ – Kannada News | Mumbai Indians Plans: Hardik Pandya Exit, Yashasvi Jaiswal Entry for IPL Future and Leadership

ಮುಂಬೈ ಇಂಡಿಯನ್ಸ್ (Mumbai Indians) ತಂಡದಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ ತೆರಳಿ ಅಲ್ಲಿ ಸತತ ಎರಡು ಆವೃತ್ತಿಗಳಲ್ಲಿ ತಂಡವನ್ನು ಫೈನಲ್​ಗೇರಿಸಿ, ಒಮ್ಮೆ ಚಾಂಪಿಯನ್‌ ಮಾಡುವಲ್ಲಿ ಯಶಸ್ವಿಯಾಗಿದ್ದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು (Hardik Pandya) ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮತ್ತೆ ತನ್ನ ತೆಕ್ಕೆಗೆ ಹಾಕಿಕೊಂಡಿತು. ಆದರೆ ಹಾರ್ದಿಕ್ ಬಂದ ಬಳಿಕ ತಂಡದ ಪ್ರದರ್ಶನ ಮತ್ತಷ್ಟು ಪಾತಾಳಕ್ಕೆ ಕುಸಿಯಿತು. 2026 ರ ಪಿಎಲ್ ಸೀಸನ್‌ನಲ್ಲಿಯೂ ಹಾರ್ದಿಕ್ ನಾಯಕತ್ವದಲ್ಲಿ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. ತಂಡವು ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನ ಗಳಿಸಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿತ್ತು. ಹೀಗಾಗಿ ಮುಂಬರುವ ಆವೃತ್ತಿಗೂ ಮುನ್ನ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿರುವ ಮುಂಬೈ ಪ್ರಾಂಚೈಸಿ ಹಾರ್ದಿಕ್​ರನ್ನು ತಂಡದಿಂದ ಬಿಟ್ಟುಕೊಟ್ಟು ಬೇರೊಬ್ಬ ಸ್ಟಾರ್ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.

ರಾಜಸ್ಥಾನ್, ಮುಂಬೈ ನಡುವೆ ಟ್ರೇಡಿಂಗ್

ರೆವ್‌ಸ್ಪೋರ್ಟ್ಸ್ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡಿಂಗ್ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಈ ಒಪ್ಪಂದ ಅಂತಿಮ ಹಂತಕ್ಕೂ ಬಂದಿದೆ ಎಂಬ ಮಾತುಗಳಿವೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಟ್ರೇಡ್ ವಿಂಡೋ ಮೂಲಕ ಈ ಉಭಯ ಫ್ರಾಂಚೈಸಿಗಳು ಇಬ್ಬರು ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ನೋಡುತ್ತಿವೆ ಎಂದು ವರದಿಯಾಗಿದೆ. ಅಂದರೆ ಮುಂಬೈ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕಳುಹಿಸಿ, ರಾಜಸ್ಥಾನ್ ರಾಯಲ್ಸ್ ತಂಡದಲಿರುವ ಯಶಸ್ವಿ ಜೈಸ್ವಾಲ್ ಅವರನ್ನು ಮುಂಬೈ ತಂಡಕ್ಕೆ ಸೇರಿಸಿಕೊಳ್ಳಲು ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.

ರೋಹಿತ್ ಸ್ಥಾನಕ್ಕೆ ಜೈಸ್ವಾಲ್

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಈ ನಿರ್ಧಾರದ ಹಿಂದೆ ತಂಡದ ಮುಂದಿನ ಭವಿಷ್ಯ ಅಡಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಪ್ರಸ್ತುತ ಮುಂಬೈ ತಂಡದಲ್ಲಿ ಆರಂಭಿಕರಾಗಿ ಆಡುತ್ತಿರುವ ರೋಹಿತ್ ಶರ್ಮಾ ವೃತ್ತಿಜೀವನದ ಅಂಚಿನಲ್ಲಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಭಾರತದ ಮತ್ತೊಬ್ಬ ಪ್ರತಿಭಾವಂತ ಆಟಗಾರನ ಹುಡುಕಾಟದಲ್ಲಿ ಮುಂಬೈ ಇದೆ. ಅದರಂತೆ ದೇಶಿ ಕ್ರಿಕೆಟ್​ನಲ್ಲಿ ಮುಂಬೈ ಪರ ಆಡುವ ಯಶಸ್ವಿ ಜೈಸ್ವಾಲ್​ಗೆ ಮುಂಬೈ ಗಾಳ ಹಾಕಿದೆ. ಇದಕ್ಕೆ ಪೂರಕವಾಗಿ ಜೈಸ್ವಾಲ್ ಕೂಡ ಆರಂಭಿಕನಾಗಿ ಆಡುತ್ತಿದ್ದಾರೆ. ಹೀಗಾಗಿ ರೋಹಿತ್​ರನ್ನು ಬದಲಿಸಲು ಜೈಸ್ವಾಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಮುಂದಾಗಿದೆ.

IPL 2026: ಮುಂಬೈ ನಾಯಕ ಹಾರ್ದಿಕ್ ಪಾಂಡ್ಯಗೆ ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್

ಹಾರ್ದಿಕ್ ಬದಲು ತಿಲಕ್​ಗೆ ನಾಯಕತ್ವ

ಇನ್ನು ಹಾರ್ದಿಕ್​ ಪಾಂಡ್ಯರನ್ನು ತಂಡದಿಂದ ಬಿಡುಗಡೆ ಮಾಡಲು ಪ್ರಮುಖ ಕಾರಣವೆಂದರೆ ಅವರ ನಾಯಕತ್ವದಲ್ಲಿ ಮುಂಬೈ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಅಲ್ಲದೆ ಆಟಗಾರನಾಗಿಯೂ ಹಾರ್ದಿಕ್ ಪ್ರದರ್ಶನ ಅಷ್ಟಕಷ್ಟೆ ಹೀಗಾಗಿ ಹಾರ್ದಿಕ್​ರನ್ನು ತಂಡದಲ್ಲಿ ಕೇವಲ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳಲು ಮುಂಬೈಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಿ ಅವರ ಸ್ಥಾನದಲ್ಲಿ ಅಂದರೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ತಿಲಕ್ ವರ್ಮಾಗೆ ನೀಡಲು ಮುಂಬೈ ಚಿಂತಿಸಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಕೇಳಿಬರುತ್ತಿರುವ ಈ ವರದಿಗಳನ್ನೆಲ್ಲ ಗಮನಿಸಿದರೆ, ಮುಂಬರುವ ಐಪಿಎಲ್​ನಲ್ಲಿ ಮುಂಬೈ ಫ್ರಾಂಚೈಸಿ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದಂತೂ ಖಚಿತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ? ಅದರ ಪ್ರಯೋಜನಗಳೇನು? – Kannada News | What is the best time to drink coffee? Here’s the information

ಚಹಾದಂತೆ ಕಾಫಿಯೂ (coffee) ಜನಪ್ರಿಯ ಪಾನೀಯವಾಗಿದ್ದು, ಅನೇಕರಿಗೆ ಕಾಫಿ ಕುಡಿಯೋದು ಅಂದ್ರೆ ಸಖತ್‌ ಇಷ್ಟ. ನಮ್ಮಲ್ಲಿ ಅನೇಕರಿಗೆ ಒಂದು ಕಪ್‌ ಸ್ಟ್ರಾಂಗ್ ಕಾಫಿ ಇಲ್ಲದೆ ದಿನವೇ ಆರಂಭವಾಗೋದಿಲ್ಲ. ಅದರಲ್ಲೂ ಕೆಲವರಂತೂ ಬೆಳಗ್ಗೆ, ಮಧ್ಯಾಹ್ನ, ಸಂಜೆ ಅಂತೆಲ್ಲಾ ದಿನದ ಮೂರು ಹೊತ್ತು ಕಾಫಿ ಕುಡಿತಾರೆ. ಕಾಫಿಯ ಮಿತವಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ಆದರೆ ಕಾಫಿ ಕುಡಿಯಲು ಸಮಯದ ಮಿತಿಯೂ ಇದೆ, ಹೊತ್ತಲ್ಲದ ಹೊತ್ತಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಂತೆ. ಹಾಗಿದ್ದರೆ ಯಾವ ಸಮಯದಲ್ಲಿ ಕಾಫಿ ಕುಡಿದರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು?

ಕಾಫಿ ಕುಡಿಯಲು ಉತ್ತಮ ಸಮಯ ಬೆಳಿಗ್ಗೆ 9:30 ರಿಂದ 11:30 ರ ನಡುವೆ. ಈ ಸಮಯದಲ್ಲಿ ದೇಹದ ಕಾರ್ಟಿಸೋಲ್ ಮಟ್ಟಗಳು ಕಡಿಮೆಯಾಗಿರುತ್ತವೆ. ಕಾರ್ಟಿಸೋಲ್ ಅನ್ನು ಒತ್ತಡದ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಕಾರ್ಟಿಸೋಲ್ ಮಟ್ಟಗಳು ಕಡಿಮೆಯಾದಾಗ, ಕಾಫಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಮೆದುಳನ್ನು ಚುರುಕುಗೊಳಿಸುತ್ತದೆ. ಒತ್ತಡದಲ್ಲಿದ್ದಾಗ ಕಾಫಿ ಕುಡಿದರೆ ಕಾರ್ಟಿಸೋಲ್‌ ಮಟ್ಟ ಇನ್ನಷ್ಟು ಹೆಚ್ಚಾಗುತ್ತದೆ. ಮಧ್ಯಾಹ್ನ 2 ರಿಂದ 4 ಗಂಟೆಯ ನಡುವೆ ಕಾಫಿ ಕುಡಿಯುವುದು ಒಳ್ಳೆಯದು. ಇದು ಆಲಸ್ಯವನ್ನು ಕಡಿಮೆ ಮಾಡಲು ಹಾಗೂ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬೇಡಿ: ಅನೇಕ ಜನರು ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ದೇಹದಲ್ಲಿ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ  ಆಮ್ಲೀಯತೆ, ಆಮ್ಲತೆ, ಮಲಬದ್ಧತೆ ಮತ್ತು ಇತರ ಹೊಟ್ಟೆ ಸಂಬಂಧಿತ  ಸಮಸ್ಯೆಗಳಿಗೆ ಕಾರಣವಾಗಬಹುದು.

ಸಂಜೆ ತಡವಾಗಿ ಕಾಫಿ ಕುಡಿಯುವುದು ಒಳ್ಳೆಯದಲ್ಲ: ಸಂಜೆ 4 ಗಂಟೆಯ ನಂತರ ಕಾಫಿ ಕುಡಿಯುವುದು ಅಷ್ಟು ಒಳ್ಳೆಯದಲ್ಲ. ಏಕೆಂದರೆ ಕಾಫಿಯಲ್ಲಿರುವ ಕೆಫೀನ್‌ ಅಂಶ ದೇಹದಲ್ಲಿ 6 ರಿಂದ 8 ಗಂಟೆಗಳ ಕಾಲ ಇರುವುದರಿಂದ ಇದು ನಿದ್ರೆಗೆ ಅಡ್ಡಿಪಡಿಸಬಹುದು. ಅಲ್ಲದೆ ಸಂಜೆ ತಡವಾಗಿ ಕಾಫಿ ಕುಡಿಯುವುದರಿಂದ ನಿಮ್ಮ ಹಸಿವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ನಾನ್‌ವೆಜ್‌ ಊಟ ಸೇವನೆ ಮಾಡಿದ ತಕ್ಷಣವೇ ಆಹಾರಗಳನ್ನು ತಿನ್ನಬಾರದು; ಏಕೆ ಗೊತ್ತಾ?

ಹಿತಮಿತ ಕಾಫಿ ಸೇವನೆಯ ಪ್ರಯೋಜನಗಳೇನು?

  • ಕಾಫಿಯಲ್ಲಿರುವ ಕೆಫೀನ್ ಮೆದುಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಆಯಾಸ ಕಡಿಮೆ ಮಾಡುತ್ತದೆ. ಕೆಫೀನ್ ಮನಸ್ಥಿತಿಯನ್ನು ಸುಧಾರಿಸುತ್ತದೆ.
  • ಮಿತವಾದ ಕಾಫಿ ಸೇವನೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಕಾಫಿ ಕುಡಿಯುವುದರಿಂದ ಅಲ್ಝೈಮರ್‌ ಕಾಯಿಲೆಯನ್ನು ಶೇ 65ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ.
  • ಕಾಫಿಯಲ್ಲಿ ಪ್ರಬಲ ಆಂಟಿಆಕ್ಸಿಡೆಂಟ್‌ ಅಂಶಗಳಿದ್ದು, ಇದು ದೇಹದಲ್ಲಿ ಕ್ಯಾನ್ಸರ್‌ ಜೀವಕೋಶಗಳು ಬೆಳವಣಿಗೆ ಆಗದಂತೆ ತಡೆಯುತ್ತದೆ ಎಂದು ಹೇಳಲಾಗುತ್ತದೆ.
  • ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ.
  • ಮನಸ್ಥಿತಿಯನ್ನು ಸುಧಾರಿಸುತ್ತದೆ.
  • ಖಿನ್ನತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಮಿತವಾದ ಕಾಫಿ ಸೇವನೆ ತೂಕ ನಿಯಂತ್ರಣಕ್ಕೆ ಸಹಕಾರಿ.
  • ಇದು ಟೈಪ್-2‌ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತಂತೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಠಾಕ್ರೆಗೆ ಶಾಕ್; ಶಿವಸೇನೆಯ 6 ಬಂಡಾಯ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆ – Kannada News | Operation Tiger successful 6 Rebel UBT MPs join Shinde led Shiv Sena in Maharashtra

ಮುಂಬೈ, ಜೂನ್ 22: ಮಹಾರಾಷ್ಟ್ರ ರಾಜಕೀಯ ಕೆಲವು ದಿನಗಳಿಂದ ದೇಶಾದ್ಯಂತ ಭಾರೀ ಸುದ್ದಿಯಲ್ಲಿತ್ತು. ಈಗಾಗಲೇ ಇಬ್ಭಾಗವಾಗಿರುವ ಶಿವಸೇನೆಯಲ್ಲಿ ಮತ್ತೊಮ್ಮೆ ಬಿರುಕು ಉಂಟಾಗಿತ್ತು. ಉದ್ಧವ್ ಠಾಕ್ರೆಯಿಂದ (Uddhav Thackeray) ಅಸಮಾಧಾನಗೊಂಡು ಠಾಕ್ರೆ ಬಣದಿಂದ ಹೊರಬಂದಿದ್ದ ಶಿವಸೇನೆಯ (Shiv Sena Crisis) 6 ಸಂಸದರು ಹೊಸ ಪಕ್ಷ ಕಟ್ಟುತ್ತಾರಾ? ಶಿಂಧೆ ಬಣ ಸೇರುತ್ತಾರಾ? ಮರಳಿ ಪಕ್ಷಕ್ಕೆ ಸೇರಿಕೊಳ್ಳುತ್ತಾರಾ? ಎಂಬ ಕುತೂಹಲ ಮನೆಮಾಡಿತ್ತು. ಆ ಕುತೂಹಲಕ್ಕೆ ತೆರೆಬಿದ್ದಿದೆ. ಅಧಿಕೃತವಾಗಿ ಇಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಬಣದ ಆರೂ ಬಂಡಾಯ ಲೋಕಸಭಾ ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಉದ್ಧವ್ ಠಾಕ್ರೆ ಅವರ ಬಣವು ಲೋಕಸಭೆಯಲ್ಲಿ ತನ್ನ ಬಲವನ್ನು ಕಳೆದುಕೊಂಡಂತಾಗಿದೆ.

ಇಂದು ಮುಂಬೈಗೆ ಆಗಮಿಸಿದ್ದ 6 ಸಂಸದರು ಮೊದಲು ಮಲಬಾರ್ ಹಿಲ್ಸ್‌ನಲ್ಲಿರುವ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧಿಕೃತ ನಿವಾಸ ‘ನಂದನವನ’ ಬಂಗಲೆಯಲ್ಲಿ ಮಹತ್ವದ ಸಭೆ ನಡೆಸಿದರು. ಆ ಬಳಿಕ ವೈ.ಬಿ. ಚವಾಣ್ ಕೇಂದ್ರದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಶಿಂಧೆ ನೇತೃತ್ವದ ಶಿವಸೇನೆಯನ್ನು ಅಧಿಕೃತವಾಗಿ ಸೇರುತ್ತಿರುವುದಾಗಿ ಘೋಷಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಹೈಡ್ರಾಮಾ; ಶಿಂಧೆ ಬಣ ಸೇರಲು ಸಜ್ಜಾದ 6 ಬಂಡಾಯ ಸಂಸದರು

ಪಕ್ಷಾಂತರ ಮಾಡಿದ 6 ಸಂಸದರು:

  • ಸಂಜಯ್ ದಿನಾ ಪಾಟೀಲ್ (ಮುಂಬೈ)
  • ಸಂಜಯ್ ಜಾಧವ್ (ಪರಭಣಿ)
  • ಸಂಜಯ್ ದೇಶ್‌ಮುಖ್ (ಯವತ್ಮಾಲ್-ವಾಶಿಮ್)
  • ಓಂ ರಾಜೇ ನಿಂಬಾಳ್ಕರ್ (ಧಾರಾಶಿವ್)
  • ಭೌಸಾಹೇಬ್ ವಾಕಚೌರೆ (ಶಿರಡಿ)
  • ನಾಗೇಶ್ ಪಾಟೀಲ್ ಅಷ್ಟೀಕರ್ (ಹಿಂಗೋಲಿ)

ಆಪರೇಷನ್ ಟೈಗರ್ ಸಕ್ಸಸ್‌ಫುಲ್:

ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವೇ ಈ ರಾಜಕೀಯ ಕಾರ್ಯಾಚರಣೆ ನಡೆಸಲಾಗಿದೆ. ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ತಾವೇ ರೂಪಿಸಿದ್ದ “ಆಪರೇಷನ್ ಟೈಗರ್” ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೆಮ್ಮೆಯಿಂದ ಘೋಷಿಸಿದ್ದಾರೆ.

“ಶಿವಸೇನೆ ಒಂದು ಕುಟುಂಬ. ಅದು ನಿಜಕ್ಕೂ ಒಂದು ಕುಟುಂಬ. ಕಟ್ಟಾ ಶಿವಸೈನಿಕ್ ಸಂಸದರು ನಿಜವಾದ ಶಿವಸೇನಾ ಕುಟುಂಬಕ್ಕೆ, ಬಾಳಾಸಾಹೇಬರ ಸಿದ್ಧಾಂತದ ಶಿವಸೇನಾ ಕುಟುಂಬಕ್ಕೆ ಸೇರಿದ್ದಾರೆ. ನಾನು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ” ಎಂದು ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: ಈಗ ಉಳಿದಿರುವುದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ; ಉದ್ಧವ್ ಠಾಕ್ರೆಗೆ ಅಮಿತ್ ಶಾ ಟಾಂಗ್

ಲೋಕಸಭೆಯಲ್ಲಿ ಉದ್ಧವ್ ಠಾಕ್ರೆ ಬಣವು ಒಟ್ಟು 9 ಸಂಸದರನ್ನು ಹೊಂದಿತ್ತು. ಇದೀಗ 9ರ ಪೈಕಿ 6 ಸಂಸದರು ಒಟ್ಟಿಗೆ ಬಂಡಾಯವೆದ್ದು ಶಿಂಧೆ ಬಣ ಸೇರಿರುವುದರಿಂದ, ಅವರ ಬಳಿ ಮೂರನೇ ಎರಡರಷ್ಟು (2/3) ಬಹುಮತವಿದೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಈ ಸಂಸದರನ್ನು ಅನರ್ಹಗೊಳಿಸಲು ಉದ್ಧವ್ ಬಣಕ್ಕೆ ಸಾಧ್ಯವಾಗುವುದಿಲ್ಲ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ. ಇದು ಉದ್ಧವ್ ಠಾಕ್ರೆ ಅವರ ಕಾನೂನು ಹೋರಾಟಕ್ಕೂ ದೊಡ್ಡ ಹಿನ್ನಡೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಚಾರಣೆಗೆ ಕರೆದು ಪೊಲೀಸರಿಂದ ಹಲ್ಲೆ ಆರೋಪ: ಠಾಣೆಯಲ್ಲೇ ವೃದ್ಧ ಸಾವು – Kannada News | Custodial Death Allegations Surface in Narayanapura Police Station After 70 Year Old Man Dies

ರಾಜೇಸಾಬ್ ವಾಲಿಕಾರ್Image Credit source: tv9 kannada

ಯಾದಗಿರಿ, ಜೂನ್​​ 22: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್​​ (Custodial death) ನಡೆದಿದೆ ಎನ್ನಲಾಗುತ್ತಿದೆ. ವಿಚಾರಣೆಗೆ ಕರೆದು ಪೊಲೀಸರ (police) ಹಲ್ಲೆಯಿಂದ ವೃದ್ಧ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. 70 ವರ್ಷದ ರಾಜೇಸಾಬ್ ವಾಲಿಕಾರ್ ಮೃತ ವೃದ್ಧ. ಸದ್ಯ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಎಎಸ್ಐ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಮುಖ್ಯಾಂಶಗಳು

  • ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್​?
  • ವಿಚಾರಣೆಗೆ ಕರೆದು ವೃದ್ಧನ ಮೇಲೆ ಪೊಲೀಸರಿಂದ ಹಲ್ಲೆ
  • ASI ವಿರುದ್ಧ ಮೃತ ಕುಟುಂಬಸ್ಥರು ಆರೋಪ

ನಡೆದಿದ್ದೇನು?

ರಾಜೇಸಾಬ್​​ ಹುಣಸಗಿ ತಾಲೂಕಿನ ಕರಿಕಲ್ ಗ್ರಾಮದ ವ್ಯಕ್ತಿ. ಜಮೀನು ವ್ಯಾಜ್ಯ ಸಂಬಂಧ ದೂರು ಬಂದಿದ್ದಕ್ಕೆ ಪೊಲೀಸರು ರಾಜೇಸಾಬ್​​ರನ್ನು ಠಾಣೆಗೆ ಕರೆದಿದ್ದರು. ವಿಚಾರಣೆ ವೇಳೆಯೇ ಎಎಸ್ಐ ಸಂಗಪ್ಪ ಹೊಡೆದಿದ್ದಕ್ಕೆ  ವೃದ್ಧ ಕುಸಿದು ಬಿದ್ದಿದ್ದಾರೆ. ಪೊಲೀಸರೇ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.​ ಆದರೆ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಸದ್ಯ ಎಎಸ್ಐ ವಿರುದ್ಧ ಕ್ರಮಕ್ಕೆ ಕುಟುಂಬದವರು ಒತ್ತಾಯಿಸಿದ್ದಾರೆ.

ವಕೀಲನಿಗೆ ಕಪಾಳಮೋಕ್ಷ, ಅವಾಚ್ಯ ಶಬ್ದಗಳಿಂದ ನಿಂದನೆ: ಲೇಡಿ ಇನ್ಸ್‌ಪೆಕ್ಟರ್‌ ವಿರುದ್ಧ ಆರೋಪ

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ತುರುವಿಹಾಳ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಸುಜಾತಾ ವಿರುದ್ಧ ವಕೀಲನಿಗೆ ಕಪಾಳಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿಬಂದಿದೆ.  ತುರುವಿಹಾಳ ಠಾಣೆಯ ಆವರಣದಲ್ಲಿ ವಕೀಲ ಹರಳಯ್ಯಗೆ ಕಪಾಳಮೋಕ್ಷ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಿರುಕುಳ ಆರೋಪ: ನಾಡಿದ್ದು ಹಸೆಮಣೆ ಏರಬೇಕಿದ್ದ ಯುವತಿ ಸೇರಿ ಹೆತ್ತವರ ದಾರುಣ ಅಂತ್ಯ

ವಕೀಲ ಹರಳಯ್ಯ ಸಹೋದರ ಸೋಮನಾಥ ರೌಡಿಶೀಟರ್ ಆಗಿದ್ದು, ಈ ಹಿನ್ನೆಲೆ ಇಂದು ಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪಿಎಸ್‌ಐ ಪರಿಶೀಲಿಸಿದ್ದಾರೆ. ಪರಿಶೀಲನೆ ಬಳಿಕ ಸೋಮನಾಥನ ಸಹಿ ಪಡೆದು ವಾಪಸಾಗಿದ್ದರು. ನೋಟಿಸ್‌ ಪ್ರತಿ, ಸಹಿ ಪಡೆದ ಪ್ರತಿಯನ್ನ ವಕೀಲ ಹರಿದುಹಾಕಿದ್ದು, ಈ ವೇಳೆ ಪಿಎಸ್‌ಐ ಸುಜಾತಾ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಕೇಳಿಬಂದಿದೆ. ಖಾಲಿ ಹಾಳೆಯಲ್ಲಿ ಸಹಿ ಪಡೆದಿರೋದಾಗಿ ವಕೀಲ ಹರಳಯ್ಯ ಆರೋಪಿಸಿದ್ದಾರೆ. ಈ ಹಿನ್ನೆಲೆ ಇಂದು ಸಿಂಧನೂರು ತಾಲೂಕು ವಕೀಲರ ಸಂಘದಿಂದ ಕೋರ್ಟ್ ಕಲಾಪ ಬಹಿಷ್ಕರಿಸಲಾಯಿತು. ಬಳಿಕ ಸಿಂಧನೂರು ಉಪ ವಿಭಾಗ ಡಿವೈಎಸ್​ಪಿ ಚಂದ್ರಶೇಖರ್​ಗೆ ವಕೀಲ ಹರಳಯ್ಯ ದೂರು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಕೇಂದ್ರದ ಮಾದರಿಯಂತೆ ರಾಜ್ಯದಲ್ಲೂ ಆರೋಗ್ಯ ಭಾಗ್ಯ – Kannada News | Karnataka Governmnet Announces Annua Health Checkup for His above 40 Year Age employees

ಬೆಂಗಳೂರು, (ಜೂನ್.22): ಕೇಂದ್ರ ಸರ್ಕಾರದ ಮಾದರಿಯಂತೆ ಕರ್ನಾಟಕದಲ್ಲೂ ರಾಜ್ಯ ಸರ್ಕಾರಿ ನೌಕರರಿಗೆ (Karnataka Governmnet employees) ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಘೋಷಿಸಲಾಗಿದೆ. ಹೌದು…ಆರೋಗ್ಯ ಸಂಜೀವಿನಿ ಯೋಜನೆ (KASS) ಅಡಿಯಲ್ಲಿ 40 ವರ್ಷ ವಯಸ್ಸು ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಉಚಿತವಾಗಿ ವಾರ್ಷಿಕ ವೈದ್ಯಕೀಯ ತಪಾಸಣೆ (Annual Health Checkup) ಸೌಲಭ್ಯವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ ನೌಕರರಲ್ಲಿ ಹೆಚ್ಚಾಗುತ್ತಿರುವ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮುಖ್ಯಾಂಶಗಳು

  • 40 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ
  • ಕೇಂದ್ರ ಸರ್ಕಾರದ ಮಾದರಿಯಂತೆ ರಾಜ್ಯ ಸರ್ಕಾರದಲ್ಲೂ ಯೋಜನೆ
  • ಆರೋಗ್ಯ ಸಂಜೀವಿನಿ ಅಡಿಯಲ್ಲಿ ವಾರ್ಷಿಕ ತಪಾಸಣೆಗೆ ಮುಂದು
  • ಬಿಪಿ,ಶುಗರ್, ಇಸಿಜಿ, ಮೆಮೋಗ್ರಫಿ, ಇಎನ್ ಟಿ ಸೇರಿದಂತೆ ನಿಗದಿ ಪಡಿಸಿದ ತಪಾಸಣೆಗೆ ಅಸ್ತು

ಯಾವ್ಯಾವ ತಪಾಸಣೆ ಮಾಡಿಸಿಕೊಳ್ಳಬಹುದು?

ವಾರ್ಷಿಕ ವೈದ್ಯಕೀಯ ತಪಾಸಣೆಗಾಗಿ ಸರ್ಕಾರವು ಪುರುಷ ನೌಕರರಿಗೆ ಗರಿಷ್ಠ 2,000 ರೂಪಾಯಿ ಹಾಗೂ ಮಹಿಳಾ ನೌಕರರಿಗೆ ಗರಿಷ್ಠ 2,200 ರೂಪಾಯಿಗಳ ಸಂಚಿತ ದರಗಳನ್ನು ನಿಗದಿಪಡಿಸಿದೆ. ಈ ಯೋಜನೆಯಡಿ ಸಾಮಾನ್ಯ ದೈಹಿಕ ತಪಾಸಣೆ, ರಕ್ತದೊತ್ತಡ, ಕಣ್ಣು ಮತ್ತು ಇಎನ್ಟಿ ತಪಾಸಣೆಗಳ ಜೊತೆಗೆ ರಕ್ತದ ಗ್ಲುಕೋಸ್, ಲಿಪಿಡ್ ಪ್ರೊಫೈಲ್, ಲಿವರ್ ಹಾಗೂ ಕಿಡ್ನಿ ಕಾರ್ಯನಿರ್ವಹಣಾ ಪರೀಕ್ಷೆಗಳು ಸೇರಿದಂತೆ ಹಲವು ಪ್ರಮುಖ ರೋಗನಿರ್ಣಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಮಹಿಳಾ ನೌಕರರಿಗೆ ಹೆಚ್ಚುವರಿಯಾಗಿ ಸ್ತನ ಹಾಗೂ ಗರ್ಭಕಂಠದ ತಪಾಸಣೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ನೌಕರರು ಒಂದೇ ಸಂಸ್ಥೆಯಲ್ಲಿ ತಪಾಸಣೆ ಪಡೆದು ಒಂದೇ ಕ್ಲೈಮ್ನಲ್ಲಿ ಇದನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಡಿಸಿಎಂ ಮಹತ್ವದ ಸಭೆ: ಕಂದಾಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ, ಬಡ್ತಿ ಪ್ರಕ್ರಿಯೆ ಚುರುಕು

ಯಾರ್ಯಾರಿಗೆ ಈ ಸೌಲಭ್ಯ ಅನ್ವಯ?

ಕೇಂದ್ರ ಸರ್ಕಾರದ ಮಾದರಿಯಲ್ಲೇ ಈ ಯೋಜನೆಯನ್ನು ರೂಪಿಸಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಂದು ಈ ಆದೇಶವನ್ನು ಹೊರಡಿಸಿದೆ. ಈ ಸೌಲಭ್ಯವು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟಿರುವ (Opt-in ಆಗಿರುವ) ಎಲ್ಲಾ ಸರ್ಕಾರಿ ನೌಕರರಿಗೆ ಪ್ರತಿ  ವರ್ಷದಲ್ಲಿ ಒಂದು ಬಾರಿ ನಗದು ರಹಿತವಾಗಿ ಲಭ್ಯವಿರಲಿದೆ. ಆದರೆ, ಸ್ವ-ಇಚ್ಛೆಯಿಂದ ಈ ಯೋಜನೆಯಿಂದ ಹೊರಗುಳಿದ (Opt-out ಆದ) ನೌಕರರಿಗೆ ಹಾಗೂ ನೌಕರರ ಕುಟುಂಬದ ಅವಲಂಬಿತ ಸದಸ್ಯರಿಗೆ ಈ ವಾರ್ಷಿಕ ತಪಾಸಣೆಯ ಸೌಲಭ್ಯ ಅನ್ವಯಿಸುವುದಿಲ್ಲ.

ಎಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು?

ಇನ್ನು ಈ ಆರೋಗ್ಯ ತಪಾಸಣೆಯನ್ನು ನೌಕರರು ಸರ್ಕಾರಿ ಆಸ್ಪತ್ರೆಗಳು, ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಅಥವಾ ಯೋಜನೆಯಡಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬಹುದಾಗಿದೆ.

ಇದರ  ಷರತ್ತುಗಳು

  • ಸ್ವ-ಇಚ್ಛೆಯಿಂದ ಯೋಜನೆಗೆ ಒಳಪಡದ (Opt-out ಆದ) ಸರ್ಕಾರಿ ನೌಕರರು ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ.
  • ವಾರ್ಷಿಕ ಆರೋಗ್ಯ ತಪಾಸಣೆ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ಸರ್ಕಾರಿ ನೌಕರರ ಕುಟುಂಬದ ಅವಲಂಬಿತ ಸದಸ್ಯರು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ.
  • ಈ ತಪಾಸಣೆಗಳನ್ನು ಸರ್ಕಾರಿ ಆಸ್ಪತ್ರೆ (ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳನ್ನು ಒಳಗೊಂಡಂತೆ) ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ (KASS) ನೋಂದಾಯಿಸಲ್ಪಟ್ಟಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯತಕ್ಕದ್ದು.
  • ಈ ತಪಾಸಣೆಗಳನ್ನು ಒಂದೇ ಸಂಸ್ಥೆಯಲ್ಲಿ ಪಡೆದು ಒಂದೇ ಕ್ಷೇಮಿನಲ್ಲಿ ಅವುಗಳನ್ನು ಇತ್ಯರ್ಥಪಡಿಸತಕ್ಕದ್ದು.
  • ನಿಗದಿಪಡಿಸಿರುವ ವಾರ್ಷಿಕ ವೈದ್ಯಕೀಯ ತಪಾಸಣೆಗಳಿಗೆ ರೂ. 2000/- (ಪುರುಷ ನೌಕರರಿಗೆ) ರೂ. 2,200- (ಮಹಿಳಾ ನೌಕರರಿಗೆ) ಸಂಚಿತ ದರಗಳನ್ನು (Consolidated Rates) ನಿಗದಿಪಡಿಸಲಾಗಿದೆ. ವಿವಿಧ ತಪಾಸಣೆಗಳಿಗೆ ಸರ್ಕಾರ ನಿಗದಿಪಡಿಸಿದ ಗರಿಷ್ಠ ಮೊತ್ತದ ಮಿತಿಗೊಳಪಟ್ಟು ಮಂಜೂರಾತಿ ನೀಡತಕ್ಕದ್ದು.
  •  ವಾರ್ಷಿಕ ವೈದ್ಯಕೀಯ ತಪಾಸಣೆಗಳನ್ನು KASS ಯೋಜನೆಯಡಿ ಅಳವಡಿಸಿಕೊಳ್ಳಲು ಹಾಗೂ ಈ ಸಂಬಂಧ ನೋಂದಾಯಿತ ಖಾಸಗಿ ಆಸ್ಪತ್ರೆಗಳೊಂದಿಗೆ ಸೂಕ್ತ ಒಡಂಬಡಿಕೆಯನ್ನು ಮಾಡಿಕೊಳ್ಳಲು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version