ಯಾವುದೇ ನಾಯಕನಿಗೂ ಸಾಧ್ಯವಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್

Source link

ಎಷ್ಟೇ ಬ್ಯುಸಿ ಇದ್ದರೂ ಫ್ಯಾನ್ಸ್ ಜೊತೆ ಪ್ರೀತಿಯಿಂದ ನಡೆದುಕೊಂಡ ಐಶ್ವರ್ಯಾ ರೈ – Kannada News | Aishwarya Rai Bachchan wins hearts Cannes 2026 fans interaction viral video

ವಿಶ್ವದ ಅತ್ಯಂತ ಪ್ರತಿಷ್ಠಿತ ‘ಕಾನ್ ಚಲನಚಿತ್ರೋತ್ಸವ’ದಲ್ಲಿ (Cannes Film Festival) ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಎಂದಿನಂತೆ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವರ್ಷದ ಫಿಲ್ಮ್ ಫೆಸ್ಟಿವಲ್​ನ ಕೊನೆಯ ದಿನಗಳಲ್ಲಿ ಭರ್ಜರಿಯಾಗಿ ಎಂಟ್ರಿ ಕೊಟ್ಟ ಐಶ್ವರ್ಯಾ (Aishwarya Rai Bachchan) ಅವರು ಪ್ರಸಿದ್ಧ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ನೀಲಿ ಬಣ್ಣದ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ರಾಜಕುಮಾರಿಯಂತೆ ಹೆಜ್ಜೆ ಹಾಕಿದ್ದರು. ಇದು ದೊಡ್ಡ ಸಂಗತಿ ಅಲ್ಲ. ಆದರೆ ಆ ಬಳಿಕ ಅವರು ಅಭಿಮಾನಿಗಳ ಜೊತೆ ಪ್ರೀತಿಯಿಂದ ನಡೆದುಕೊಂಡ ರೀತಿಯನ್ನು ಕಂಡು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

2003ರಿಂದ ಲೊರಿಯಲ್ ಪ್ಯಾರಿಸ್ ಬ್ರ್ಯಾಂಡ್‌ನ ಜಾಗತಿಕ ರಾಯಭಾರಿಯಾಗಿ ಕಾನ್ ಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಐಶ್ವರ್ಯಾ ರೈ, ರೆಡ್ ಕಾರ್ಪೆಟ್ ಮೇಲೆ ನೆರೆದಿದ್ದ ಛಾಯಾಗ್ರಾಹಕರಿಗೆ ಭಾರತೀಯ ಸಂಪ್ರದಾಯದಂತೆ ನಮಸ್ತೆ ಎಂದು ಕೈಮುಗಿದು ಪೋಸ್ ನೀಡಿದರು. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿರುವುದು ಅವರ ರೆಡ್ ಕಾರ್ಪೆಟ್ ಲುಕ್ ಮಾತ್ರವಲ್ಲ, ಬದಲಾಗಿ ಅಭಿಮಾನಿಗಳ ಕಡೆಗೆ ಅವರು ತೋರಿರುವ ಅಪಾರ ಪ್ರೀತಿ ಮತ್ತು ಗೌರವ ಕೂಡ.

ರೆಡ್ ಕಾರ್ಪೆಟ್ ಮುಗಿಸಿ ಐಶ್ವರ್ಯಾ ರೈ ಅವರು ಬಿಗಿ ಭದ್ರತೆಯ ನಡುವೆ ಹೋಟೆಲ್ ಒಳಗೆ ಹೋಗುತ್ತಿದ್ದಾಗ, ಅವರ ನೂರಾರು ಅಭಿಮಾನಿಗಳು ಒಂದು ಫೋಟೋಗಾಗಿ ಸಾಲಾಗಿ ನಿಂತಿದ್ದರು. ಇದನ್ನು ಗಮನಿಸಿದ ನಟಿ, ಎಷ್ಟೇ ಅವಸರವಿದ್ದರೂ ಭದ್ರತಾ ಸಿಬ್ಬಂದಿಯನ್ನು ಬದಿಗೊತ್ತಿ ಅಭಿಮಾನಿಗಳಿಗಾಗಿ ಸಮಯ ಮೀಸಲಿಟ್ಟರು. ಮೊದಲು ಬಾಲಕಿಯೊಬ್ಬಳು ಅವರ ಬಳಿ ಬಂದಾಗ, ಐಶ್ವರ್ಯಾ ಪ್ರೀತಿಯಿಂದ ಅವಳ ಹೆಗಲ ಮೇಲೆ ಕೈಹಾಕಿ ಫೋಟೋಗೆ ಫೋಸ್ ನೀಡಿದ್ದಲ್ಲದೆ, ಹೋಗುವಾಗ ‘ಗಾಡ್ ಬ್ಲೆಸ್ ಯು, ಟೇಕ್ ಕೇರ್’ ಎಂದು ಹಾರೈಸಿದರು.

ವೈರಲ್ ವಿಡಿಯೋ:

ಅಷ್ಟರಲ್ಲೇ ಅಲ್ಲೇ ಇದ್ದ ಒಬ್ಬ ವಯೋವೃದ್ಧ ಮಹಿಳಾ ಅಭಿಮಾನಿ ಫೋಟೋಗಾಗಿ ವಿನಂತಿಸಿದಾಗ, ಐಶ್ವರ್ಯಾ ಅವರು ಸೆಕ್ಯೂರಿಟಿ ಸಿಬ್ಬಂದಿ ಕಡೆ ತಿರುಗಿ, ‘ನಾನು ಅವರಿಗೆ ಮೊದಲೇ ಪ್ರಾಮಿಸ್ ಮಾಡಿದ್ದೆ. ಕೊಟ್ಟ ಮಾತು ಉಳಿಸಿಕೊಳ್ಳಬೇಕು’ ಎನ್ನುತ್ತಾ ಆ ವೃದ್ಧೆಯ ಕೈ ಹಿಡಿದು ಫೋಟೋಗೆ ಫೋಸ್ ನೀಡಿದರು. ಆ ವೃದ್ಧೆ ಭಾವುಕರಾಗಿ ‘ನೀವು ಈ ಪ್ರಪಂಚದಲ್ಲೇ ಅತ್ಯುತ್ತಮ ವ್ಯಕ್ತಿ’ ಎಂದು ಹೊಗಳಿದಾಗ ಐಶ್ವರ್ಯಾ ವಿನಯದಿಂದ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಮಲಗುವ ಮುನ್ನ ಐಶ್ವರ್ಯಾಗೆ ಮೂರು ಬಾರಿ ಕ್ಷಮೆ ಕೇಳುತ್ತಾರೆ ಅಭಿಷೇಕ್ ಬಚ್ಚನ್

ಐಶ್ವರ್ಯಾ ರೈ ಅವರ ಈ ಹೃದಯವಂತಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಪ್ರೀತಿಯ ಮಳೆ ಹರಿಸುತ್ತಿದ್ದಾರೆ. ‘ವರ್ಷಗಳು ಉರುಳಬಹುದು, ಕ್ಯಾನ್ ಚಿತ್ರೋತ್ಸವಕ್ಕೆ ಸಾವಿರಾರು ತಾರೆಗಳು ಬರಬಹುದು. ಆದರೆ ಐಶ್ವರ್ಯಾ ಕೇವಲ ಒಂದು ಲುಕ್‌ನಿಂದ ನೆನಪಿನಲ್ಲಿ ಉಳಿಯುವವರಲ್ಲ, ಅವರು ಕಾನ್ ಇತಿಹಾಸದ ಒಂದು ಭಾಗ. ಅವರು ನಿಜವಾದ ರಾಣಿ’ ಎಂದು ಅಭಿಮಾನಿಯೊಬ್ಬರು ಕೆಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮಳೆರಾಯನ ಕೃಪೆಯಿಂದ ಬೆಂಗಳೂರಿಗೆ ಸಿಕ್ತು ಶುದ್ಧ ಗಾಳಿ; ರಾಜ್ಯದ ಈ ಜಿಲ್ಲೆಯಲ್ಲಿ ವಾತಾವರಣ ಕ್ಲೀನ್! – Kannada News | Karnataka AQI Today May 24: Bengaluru Air Quality Satisfactory, Kalaburagi Severe

ರಾಜ್ಯದ ಈ ಜಿಲ್ಲೆಯಲ್ಲಿ ವಾತಾವರಣ ಕ್ಲೀನ್!

ಬೆಂಗಳೂರು, ಮೇ 24: ಇಂದು ಕರ್ನಾಟಕದ ಪ್ರಮುಖ ನಗರಗಳು ಮತ್ತು ರಾಜಧಾನಿ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಒಟ್ಟಾರೆಯಾಗಿ ತೃಪ್ತಿಕರ ಮತ್ತು ಉತ್ತಮ ಮಟ್ಟದಲ್ಲಿದೆ. ಇತ್ತೀಚಿನ ಮಳೆ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.

ಮುಖ್ಯಾಂಶಗಳು

  • ಮಳೆಯ ಕಾರಣದಿಂದ ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ತೃಪ್ತಿಕರವಾಗಿದೆ.
  • ಗದಗ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಅತಿ ಶುದ್ಧ ಗಾಳಿ ದಾಖಲಾಗಿದೆ.
  • ಕಲಬುರಗಿಯಲ್ಲಿ ವಾಯು ಮಾಲಿನ್ಯ ಸೂಚ್ಯಂಕವು ತೀವ್ರ ಅಪಾಯಕಾರಿ ಮಟ್ಟ ತಲುಪಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 47 ರಿಂದ 86 ರ ಆಸುಪಾಸಿನಲ್ಲಿದ್ದು, ‘ಉತ್ತಮ’ (Good) ದಿಂದ ‘ಸಾಧಾರಣ’ (Moderate) ವಿಭಾಗದಲ್ಲಿದೆ.

  • ಸಿಲ್ಕ್ ಬೋರ್ಡ್: 97 (ಸಾಧಾರಣ)
  • ಕಡಬೀಸನಹಳ್ಳಿ : 92 (ಸಾಧಾರಣ)
  • ಜಯನಗರ 5ನೇ ಬ್ಲಾಕ್: 84 (ಸಾಧಾರಣ)
  • ಸಿಟಿ ರೈಲ್ವೆ ಸ್ಟೇಷನ್: 82 (ಸಾಧಾರಣ)
  • ಪೀಣ್ಯ: 77 (ಸಾಧಾರಣ)
  • ಹೆಬ್ಬಾಳ: 75 (ಸಾಧಾರಣ)
  • ಬಾಪೂಜಿ ನಗರ: 38 (ಉತ್ತಮ)

ಬೆಂಗಳೂರಿನಲ್ಲಿ ಸದ್ಯಕ್ಕೆ ವಾಯು ಮಾಲಿನ್ಯದ ಭೀತಿ ಇಲ್ಲದಿದ್ದರೂ, ಶ್ವಾಸಕೋಶದ ತೊಂದರೆ ಅಥವಾ ಅಸ್ತಮಾ ಇರುವವರು ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುವಾಗ ಕೊಂಚ ಜಾಗ್ರತೆ ವಹಿಸುವುದು ಸೂಕ್ತ.

ರಾಜ್ಯದ ಇತರ ನಗರಗಳ ವಾಯು ಗುಣಮಟ್ಟದ ಸ್ಥಿತಿ

ಕರ್ನಾಟಕದ ಉಳಿದ ಪ್ರಮುಖ ನಗರಗಳಲ್ಲೂ ಇಂದು ಗಾಳಿಯ ಗುಣಮಟ್ಟವು ಅತ್ಯಂತ ಆರೋಗ್ಯಕರವಾಗಿದೆ. ಕೆಲವು ಪ್ರಮುಖ ನಗರಗಳ ಇಂದಿನ ಅಪ್ಡೇಟ್ ಇಲ್ಲಿದೆ

  • ಗದಗ: 18 (ಉತ್ತಮ)
  • ಬೆಳಗಾವಿ: 22 (ಉತ್ತಮ)
  • ಮೈಸೂರು: 30 (ಉತ್ತಮ)
  • ಮಡಿಕೇರಿ: 38 (ಉತ್ತಮ)

ಇಂದಿನ ಹವಾಮಾನದ ಪ್ರಕಾರ ಕರ್ನಾಟಕದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟವು ನಾಗರಿಕರ ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Tv9 Kannada News Live: ಮಳೆಗೆ ಮಂತ್ರಾಲಯದಲ್ಲಿ ಭಕ್ತರ ಪರದಾಟ, ಶ್ರೀಗಳಿಂದಲೇ ಖುದ್ದು ವಸತಿ ವ್ಯವಸ್ಥೆ; ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು – Kannada News | Tv9 Kannada News Live: Mantralayam Seer Rescues Rain Hit Devotees; Rain Alert for 17 Districts; BJP Core Committee to Meet Today

ಭಕ್ತರಿಗೆ ವಸತಿ ವ್ಯವಸ್ಥೆ ಮಾಡಿದ ಮಂತ್ರಾಲಯ ಶ್ರೀಗಳುImage Credit source: Tv9 Kannada

ಬೆಂಗಳೂರು, ಮೇ 24: ರಾಯಚೂರಿನ ಹಲವೆಡೆ ನಿನ್ನೆ ವರುಣ ಅಬ್ಬರಿಸಿದ್ದು, ತಡರಾತ್ರಿ ಸುರಿದ ಮಳೆ ಹಿನ್ನೆಲೆ ತೊಂದರೆಗೆ ಸಿಲುಕಿದ್ದ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಗೆ ಸ್ವತಃ ಸ್ವಾಮೀಜಿಯೇ ಆಗಮಿಸಿ ವಸತಿ ವ್ಯವಸ್ಥೆ ಕಲ್ಪಿಸಿದ ಪ್ರಸಂಗ ನಡೆದಿದೆ. ಮಂತ್ರಾಲಯ ಮಠದ ಪ್ರಾಂಗಣದಲ್ಲಿ ರಾತ್ರಿ ಮಲಗಿದ್ದ ಭಕ್ತರು ಮಳೆ ಹಿನ್ನೆಲೆ ಕಂಗಾಲಾಗಿದ್ದಾರೆ. ಭಕ್ತರು ನೆನೆದು ಪರದಾಡಿದ್ದು, ಮಾಹಿತಿ ತಿಳಿದು ಪ್ರಾಂಗಣಕ್ಕೆ ಭೇಟಿ ನೀಡಿದ ಮಂತ್ರಾಲಯದ ಶ್ರೀಗಳಾದ ಸುಬುಧೇಂದ್ರ ತೀರ್ಥರು ಭಕ್ತರಿಗೆ ಶ್ರೀಮಠದ ಕಲ್ಯಾಣ‌ ಮಂಟಪಗಳಲ್ಲಿ ವಸತಿ ವ್ಯವಸ್ಥೆ ಮಾಡಿದ್ದಾರೆ.

17 ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದು ಮಳೆಯಾಗುವ ಮುನ್ಸೂಚನೆ ಇದ್ದು, 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮತ್ತು 2 ಜಿಲ್ಲೆಗಳಲ್ಲಿ ಆರೆಂಜ್​​ ಅಲರ್ಟ್​​ನ ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಕೊಪ್ಪಳ ಹಾಗೂ ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದರೆ, ಬೆಂಗಳೂರಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮುಂದಿನ 48 ಗಂಟೆ ಕಾಲ ಬೆಂಗಳೂರಲ್ಲಿ ಸಾಧಾರಣ ಮಳೆ ಸಾಧ್ಯತೆ ಇದ್ದು, ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ! ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಮುಖ್ಯಾಂಶಗಳು

ಇಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ

ಬೆಂಗಳೂರು ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್ ಇಂದು ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಬಿಎಸ್​ವೈ ನಿವಾಸದಲ್ಲಿ ಉಪಾಹಾರ ಸೇವಿಸಲಿರುವ ನಿತಿನ್ ನಬಿನ್, ನಂತರ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಲಿದ್ದಾರೆ. ಆ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಿಜೆಪಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ನಿತಿನ್​ ನಬಿನ್ ನೇತೃತ್ವದಲ್ಲಿ ರಾಜ್ಯ ಕೋರ್ ಕಮಿಟಿ ಸಭೆಯೂ ನಡೆಯಲಿದೆ.

ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ

ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದ್ದು, ಪೆನ್ಸಿಲ್ವೇನಿಯಾ ಅವೆನ್ಯೂ NW ಬಳಿ ಫೈರಿಂಗ್​ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ. ​ಇನ್ನು ದಾಳಿಯ ವೇಳೆ ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡು ಹಾರಿಸಿದ್ದು, ಶಂಕಿತನಿಗೆ ಗುಂಡು ತಗುಲಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ. ಘಟನೆಯಲ್ಲಿ ಓರ್ವ ಪಾದಚಾರಿಗೂ ಗಾಯಗಳಾಗಿವೆ.

ಇದನ್ನೂ ಓದಿ: ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ; ಪ್ರತಿದಾಳಿಗೆ ಆಗಂತುಕ ಸಾವು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುಂಬೈ ಇಂಡಿಯನ್ಸ್ ಸೋತರೆ 2 ತಂಡಗಳು ಔಟ್..!

Source link

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಅವಧಿ 3 ಗಂಟೆ 9 ನಿಮಿಷ? ಹಲವು ಪದಗಳು ಮ್ಯೂಟ್ – Kannada News | Ram Charan Janhvi Kapoor starrer Peddi movie CBFC Censor Board Cuts and Run Time

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಹಾಗೂ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ (Peddi) ಜೂನ್ 4ರಂದು ತೆರೆಕಾಣಲು ಸಜ್ಜಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡ ಸೆನ್ಸಾರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದೆ. ಆದರೆ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಈ ಚಿತ್ರದ ಮೂಲ ತೆಲುಗು ಆವೃತ್ತಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಿದೆ. ಅನೇಕ ಪದಗಳನ್ನು ಮ್ಯೂಟ್ ಮಾಡುವಂತೆ ತಿಳಿಸಿದೆ.

‘ಪೆದ್ದಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ (U/A 16+) ಪ್ರಮಾಣಪತ್ರವನ್ನು ನೀಡಿದೆ. ಆದರೆ ಚಿತ್ರದಲ್ಲಿ ಬಳಕೆಯಾಗಿರುವ ಹಲವು ಆಕ್ಷೇಪಾರ್ಹ ಪದಗಳು, ಸಮುದಾಯದ ಉಲ್ಲೇಖಗಳು ಹಾಗೂ ದೃಶ್ಯಗಳನ್ನು ಬದಲಾಯಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಚಿತ್ರದ ಹಿಟ್ ಗೀತೆ ‘ಚಿಕಿರಿ ಚಿಕಿರಿ’ ಹಾಡಿನಲ್ಲಿ ಬರುವ ‘ಸರುಕು ಸಾಮಾನ್’ ಎಂಬ ಪದಗಳನ್ನು ಸಹ ಬದಲಾಯಿಸಲಾಗಿದೆ.

ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ‘ರಾಜಸ್ಥಾನ’ ಪದ ಹಾಗೂ ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಉಲ್ಲೇಖಗಳನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕಲು ಸೂಚಿಸಲಾಗಿದೆ. ದೃಶ್ಯಗಳ ವಿಚಾರಕ್ಕೆ ಬಂದರೆ, ಚಿತ್ರದಲ್ಲಿ ಪಾತ್ರವೊಂದು ಮಧ್ಯದ ಬೆರಳು ತೋರಿಸುವ ದೃಶ್ಯಕ್ಕೆ ಸಿಜಿ ಎಫೆಕ್ಟ್ ಬಳಸಿ ಮರೆಮಾಚಲು ಹೇಳಲಾಗಿದೆ.

ಚಿತ್ರತಂಡ ಈ ಎಲ್ಲಾ ಬದಲಾವಣೆಗಳನ್ನು ಮಾಡಿದ ನಂತರ ಮೇ 22ರಂದು ಅಧಿಕೃತ ಸೆನ್ಸಾರ್ ಪ್ರಮಾಣಪತ್ರವನ್ನು ಕೈಗೆತ್ತಿಕೊಂಡಿದೆ. ಸೆನ್ಸಾರ್ ಸರ್ಟಿಫಿಕೇಟ್ ಪ್ರಕಾರ ‘ಪೆದ್ದಿ’ ಚಿತ್ರದ ಒಟ್ಟು ಅವಧಿ 189 ನಿಮಿಷಗಳು, ಅಂದರೆ 3 ಗಂಟೆ 9 ನಿಮಿಷ ಇರಲಿದೆ. ಚಿತ್ರದಲ್ಲಿ ಸಾಹಸ ಮತ್ತು ಹಿಂಸಾತ್ಮಕ ದೃಶ್ಯಗಳಿಗೆ ಯಾವುದೇ ವಿಶುವಲ್ ಕಟ್ಸ್ ನೀಡಿಲ್ಲ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.

ಇದನ್ನೂ ಓದಿ: ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ

ಬುಚ್ಚಿ ಬಾಬು ಸನಾ ಕಥೆ ಬರೆದು ನಿರ್ದೇಶಿಸಿರುವ ‘ಪೆದ್ದಿ’ ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ. ಈಶಾನ್ ಸಕ್ಸೇನಾ ಸಹ-ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಜೊತೆಗೆ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ, ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಉತ್ತರ ಭಾರತದಲ್ಲಿ ‘ಜಿಯೋ ಸ್ಟುಡಿಯೋಸ್’ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಈ ಸಿನಿಮಾ ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲೂ ಬಿಡುಗಡೆಯಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ! ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Karnataka Weather Update: Heavy rain in Bengaluru, Orange Alert for 2 Districts

ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮೇ 22: ಇಂದೂ ಸಹ ರಾಜ್ಯದ ಅನೇಕ ಕಡೆ ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ (Weather) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಒಟ್ಟು 17 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಹಾಗೂ 2 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ.
  • ಬೆಂಗಳೂರು ಒಳಗೊಂಡಂತೆ ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುನ್ನೆಚ್ಚರಿಕೆ.
  • ಮೇ 25 ರವರೆಗೆ ಬಿರುಗಾಳಿ ಸಹಿತ ಭಾರಿ ಮಳೆ, ಸಾರ್ವಜನಿಕರಿಗೆ ಎಚ್ಚರಿಕೆ.

ಕೊಪ್ಪಳ, ಗದಗ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

ಉತ್ತರ ಒಳನಾಡಿನ ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ (ಗಂಟೆಗೆ 50-60 ಕಿ.ಮೀ ವೇಗ) ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ಎರಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 17 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​?

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಯಾದಗಿರಿ, ಮತ್ತು ರಾಯಚೂರಿನಲ್ಲೂ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಈ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಗುಡುಗು ಸಿಡಿಲಿನ ಅಬ್ಬರ ಜೋರಾಗಿರಲಿದೆ. ಮೇ 22ರಿಂದ ಮೇ 25, 2026ರ ಅವಧಿಯಲ್ಲಿ ಇಡೀ ಒಳನಾಡು ಭಾಗದಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದ ಗಾಳಿಯೊಂದಿಗೆ ತೀವ್ರ ಸ್ವರೂಪದ ಗುಡುಗು ಸಹಿತ ಮಳೆ (Thunderstorm) ಸಂಭವಿಸುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಮೇ 21ರಿಂದ ಮೇ 25ರವರೆಗೆ ಸಿಡಿಲು ಹಾಗೂ ಮಿಂಚಿನ ಮುನ್ನೆಚ್ಚರಿಕೆ ನೀಡಲಾಗಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿರಲು ಕೋರಲಾಗಿದೆ.

ದಕ್ಷಿಣ ಮತ್ತು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಪ್ರಮುಖವಾಗಿ ಒಣ ಹವಾಮಾನ ಇರಲಿದ್ದು, ಅಲರ್ಟ್ ಘೋಷಿಸಲಾಗಿರುವ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೀನ್ಸ್​​ ಖರೀದಿಯಲ್ಲಿ ಮೋಸ ಆರೋಪ: ಚಿಕ್ಕಮಗಳೂರು APMC ಗೇಟ್​​ ಲಾಕ್​​ ಮಾಡಿ ತಡರಾತ್ರಿ ರೈತರ ಪ್ರೊಟೆಸ್ಟ್​​ – Kannada News | Beans Price Scam Allegation: Farmers Lock Chikkamagaluru APMC Gate in Midnight Protest

ಚಿಕ್ಕಮಗಳೂರು, ಮೇ 24: ಎಪಿಎಂಸಿಯಲ್ಲಿ ಬೀನ್ಸ್ ವ್ಯಾಪಾರಿಗಳಿಂದ ಬೆಲೆಯಲ್ಲಿ ಮೋಸವಾಗಿದೆ ಎಂದು ಆರೋಪಿಸಿ ನೂರಾರು ರೈತರು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರಲ್ಲಿ (Chikkamagaluru) ನಡೆದಿದೆ. ಮೈಸೂರು ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆ ಕೆಜಿಗೆ 85 ರಿಂದ 90 ರೂಪಾಯಿ ಇದ್ದು, ಚಿಕ್ಕಮಗಳೂರಿನಲ್ಲಿ ಕೇವಲ 40 ರೂಪಾಯಿಗೆ ಖರೀದಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಪಿಎಂಸಿ ಗೇಟ್‌ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಾಂಶಗಳು

  • ಬೀನ್ಸ್​​ ದರದಲ್ಲಿ ವ್ಯಾಪಾರಿಗಳಿಂದ ಮೋಸ ಆರೋಪ
  • ಚಿಕ್ಕಮಗಳೂರಲ್ಲಿ ತಡರಾತ್ರಿ ಬೀದಿಗಿಳಿದ ರೈತರು
  • APMC ಗೇಟ್​​ ಲಾಕ್​​ ಮಾಡಿ ರೈತರಿಂದ ಭಾರಿ ಆಕ್ರೋಶ

ರೈತರು ಹೇಳೋದೇನು?

ಬೀನ್ಸ್​​ಗೆ ಈ ಬಾರಿ ಉತ್ತಮ ಬೆಲೆ ಬಂದಿದೆ. ಮೈಸೂರು, ಬೆಂಗಳೂರು APMC ಮಾರುಕಟ್ಟೆಯಲ್ಲಿ 80 ರಿಂದ 90 ರೂಪಾಯಿ ಪ್ರತಿ ಕೆಜಿಗೆ ಮಾರಾಟವಾಗುತ್ತಿದೆ. ಆದರೆ ಚಿಕ್ಕಮಗಳೂರು APMC ಮಾರುಕಟ್ಟೆಯಲ್ಲಿ ಮಾತ್ರ ಇದರ ಅರ್ಧದಷ್ಟು ಬೆಲೆ ಎಂಬುದು ರೈತರ ಆರೋಪ. ಇಲ್ಲಿನ ವ್ಯಾಪಾರಿಗಳು ಕೆಜಿ ಬೀನ್ಸ್​​ನ ಕೇವಲ 40-60 ರೂಪಾಯಿಗೆ ಖರೀದಿಸುತ್ತಿದ್ದಾರೆ ಎಂಬುದು ರೈತರ ಆಕ್ರೋಶದ ಕಟ್ಟೆ ಒಡೆಯಲು ಕಾರಣವಾಗಿದೆ. ಈ ಸಂಬಂಧ ಪೊಲೀಸರ ಜೊತೆಗೆ APMC ಆವರಣದಲ್ಲಿ ಸಭೆ ನಡೆಸಲಾಗಿದೆಯಾದರೂ, ರೈತರು ಮಾತ್ರ ವರ್ತಕರು, APMC ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಕಾಮಗಾರಿ ವಿಚಾರವಾಗಿ ಹೈಡ್ರಾಮ; ಆಣೆ ಪ್ರಮಾಣ ಹಂತಕ್ಕೆ ತಲುಪಿದ ಸಿ.ಟಿ ರವಿ, ತಮ್ಮಯ್ಯ ಫೈಟ್!

ರೈತರ ಆಕ್ರೋಶ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಬಂದ ಚಿಕ್ಕಮಗಳೂರು ತಹಶಿಲ್ದಾರ್ ರೇಷ್ಮಾ, ಎಸಿ ನಟೇಶ್ ರೈತರ ಸಭೆ ನಡೆಸಿದ್ದಾರೆ. ಹೀಗಿದ್ದರೂ APMC ಅಧಿಕಾರಿಗಳು ಮಾತ್ರ ನಾಪತ್ತೆಯಾಗಿದ್ದು, ಸ್ವತಃ ಎಸಿಯೇ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅಧಿಕಾರಿಗಳು ಮಾತಿಗೆ ಸಿಕ್ಕಿಲ್ಲ ಎನ್ನಲಾಗಿದೆ. ಮಧ್ಯರಾತ್ರಿ 12ರ ವರೆಗೆ ರೈತರು ಪ್ರತಿಭಟನೆ ನಡೆಸಿದ್ದು, ಬೀನ್ಸ್​​ ದರ ನಿಗದಿ ಸೇರಿ ಜಿಲ್ಲಾಧಿಕಾರಿಗಳ ಜೊತೆ ರೈತರ ಸಭೆ ನಡೆಸುವ ಭರವಸೆಯನ್ನು ತಹಶೀಲ್ದಾರ್​​ ಮತ್ತು ಎಸಿ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Horoscope Today: ಇಂದು ಈ ರಾಶಿಯವರು ಹಿತಶತ್ರುಗಳಿಂದ ಜಾಗರೂಕರಾಗಿರಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 24, ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು. ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ ಅಷ್ಟಮಿ, ಮಕಾ ನಕ್ಷತ್ರ, ವ್ಯಾಗತ ಯೋಗ ಮತ್ತು ಭಾವ ಕರಣದ ಈ ದಿನವು ಸೂರ್ಯನ ಲಹರಿಗಳಿಂದ ಕೂಡಿದೆ. ಇಂದು ಕಾಮನ್ ವೆಲ್ತ್ ಡೇ ಸಹ ಆಚರಿಸಲಾಗುತ್ತಿದೆ. ರಾಹುಕಾಲವು ಸಂಜೆ 4:49 ರಿಂದ 6:38 ರವರೆಗೆ ಇರಲಿದ್ದು, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು ಮಧ್ಯಾಹ್ನ 1:52 ರಿಂದ 3:28 ರವರೆಗೆ ಇರಲಿದೆ. ಅನಾರೋಗ್ಯ, ಮಾನಸಿಕ ನೆಮ್ಮದಿ ಇಲ್ಲದಿರುವಿಕೆ, ಅಪವಾದಗಳಲ್ಲಿ ಸಿಲುಕಿದವರು ಅಥವಾ ಕೋರ್ಟ್ ಕೇಸುಗಳಿಂದ ತೊಂದರೆ ಅನುಭವಿಸುತ್ತಿರುವವರು ಇಂದು ಸೂರ್ಯ ನಮಸ್ಕಾರ ಮಾಡಿ ಮತ್ತು ಆದಿತ್ಯ ಹೃದಯವನ್ನು ಕೇಳಿಸಿಕೊಳ್ಳುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

 

 

Source link

Daily Devotional: ಸ್ತ್ರೀ ಜಾತಕದಲ್ಲಿ ಯಾವ ಗ್ರಹ ಬಲವಾಗಿದ್ರೆ ಅದೃಷ್ಟ ಗೊತ್ತಾ? – Kannada News | How Planetary Strengths Influence Women’s Personality

ಸ್ತ್ರೀ ಜಾತಕದಲ್ಲಿನ ಗ್ರಹಬಲಗಳು ಮಹಿಳೆಯರ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ. ನಮ್ಮ ಪೂರ್ವಿಕರು ಹೇಳಿದಂತೆ, ಕುಟುಂಬದಲ್ಲಿ ಮಹಿಳೆಯು ಕಾರ್ಯೇಶು ದಾಸಿ, ಕರುಣೇಶು ಮಂತ್ರಿ, ಪೂಜ್ಯೇಶು ಮಾತ, ರೂಪೇಶು ಲಕ್ಷ್ಮಿ, ಕ್ಷಮಯ ಧರಿತ್ರಿ, ಶಯನೇಶು ರಂಭ ಗುಣಗಳನ್ನು ಹೊಂದಿರಬೇಕು. ಮಹಿಳೆಯು ಈ ಗುಣಗಳನ್ನು ಅಳವಡಿಸಿಕೊಂಡರೆ ಕುಟುಂಬದಲ್ಲಿ ಸಾಮರಸ್ಯ ನೆಲೆಸುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

Source link

Exit mobile version