Karnataka Weather Forecast: ಕರಾವಳಿ, ಮಲೆನಾಡಿನಲ್ಲಿ ವರುಣನ ಆರ್ಭಟ! ರಾಜ್ಯದ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – Kannada News | Karnataka Weather Forecast: Heavy Rain Alert Issued for 13 Districts, Yellow Alert in Coastal and Malnad Regions

ಬೆಂಗಳೂರು, ಜೂನ್ 22: ರಾಜ್ಯದಲ್ಲಿ ಮುಂಗಾರು ಮಳೆ (Weather) ಮತ್ತೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಒಟ್ಟು 13 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ರಾಜ್ಯದ 13 ಜಿಲ್ಲೆಗಳಿಗೆ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯ ಯೆಲ್ಲೋ ಅಲರ್ಟ್.
  • ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ.
  • ಮಲೆನಾಡು ಮತ್ತು ಉತ್ತರ ಒಳನಾಡಿನ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯ ಮುನ್ಸೂಚನೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​?

ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಸಮಯದಲ್ಲಿ ಗುಡುಗು ಮತ್ತು ಬಿರುಗಾಳಿಯ ತೀವ್ರತೆ ಹೆಚ್ಚಿರಲಿದ್ದು, ಸಾರ್ವಜನಿಕರು ಹಾಗೂ ರೈತರು ಸುರಕ್ಷಿತ ಸ್ಥಳಗಳಲ್ಲೇ ಆಶ್ರಯ ಪಡೆಯಲು ಹವಾಮಾನ ಇಲಾಖೆ ಸೂಚಿಸಿದೆ.

ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆ

ಕರಾವಳಿಯ ಜಿಲ್ಲೆಗಳಲ್ಲಿ ಮುಂಗಾರು ಮಾರುತಗಳ ಆರ್ಭಟ ಜೋರಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಉತ್ತರ ಕರ್ನಾಟಕದ ಭಾಗಗಳಲ್ಲೂ ಮಳೆಯ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗಲಿವೆ. ಧಾರವಾಡ, ಹಾವೇರಿ, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಮಲೆನಾಡಿನಲ್ಲೂ ಮಳೆಯಬ್ಬರ

ಮಲೆನಾಡು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣದೊಂದಿಗೆ ಮಳೆ ಮುಂದುವರಿಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಂಪಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತಕ್ಕೊಂದು, ವಿದೇಶಕ್ಕೊಂದು; ಎರಡು ಬೇರೆ ಬೇರೆ ಪ್ರಿಂಟ್​​ಗಳಲ್ಲಿ ‘ಟಾಕ್ಸಿಕ್’ ತೆರೆಗೆ? – Kannada News | Toxic Movie: Yash’s Film to Release in Two Versions; Overseas Uncut

‘ಕೆಜಿಎಫ್’ ಸರಣಿಯ ಅಭೂತಪೂರ್ವ ಗೆಲುವಿನ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ (Toxic Movie) ಸದ್ಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದೀಗ ಈ ಬಹುನಿರೀಕ್ಷಿತ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಆಗಸ್ಟ್ 26ರಂದು ತೆರೆಗೆ ಬರುತ್ತಿದೆ. ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಈ ಚಿತ್ರ ಎರಡು ವರ್ಷನ್​ಗಳಲ್ಲಿ ತೆರೆಗೆ ಬರಲಿದೆಯಂತೆ.

ಚಿತ್ರರಂಗದ ಮೂಲಗಳ ಪ್ರಕಾರ, ‘ಟಾಕ್ಸಿಕ್’ ಚಿತ್ರದ ಭಾರತದ ಪ್ರಿಂಟ್ ಮತ್ತು ವಿದೇಶಿ ಪ್ರಿಂಟ್ ಒಂದೇ ತರ ಇರುವುದಿಲ್ಲ ಎನ್ನಲಾಗುತ್ತಿದೆ. ವಿದೇಶಗಳಲ್ಲಿ ಬಿಡುಗಡೆಯಾಗುವ ವರ್ಷನ್ ಯಾವುದೇ ಕಟ್‌ಗಳಿಲ್ಲದೆ ಪ್ರದರ್ಶನ ಕಾಣಲಿದೆಯಂತೆ. ಆದರೆ, ಭಾರತದಲ್ಲಿ ರಿಲೀಸ್ ಆಗುವ ಪ್ರಿಂಟ್‌ಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಲಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಭಾರತ ಮತ್ತು ಓವರ್‌ಸೀಸ್ ವರ್ಷನ್‌ಗಳ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳು ಇರುವುದು ಸಹಜ. ಆದರೆ ಈ ಬಾರಿ ‘ಟಾಕ್ಸಿಕ್’ ವಿಷಯದಲ್ಲಿ ಈ ಬದಲಾವಣೆ ಎಂದಿಗಿಂತಲೂ ತುಂಬಾ ಹೆಚ್ಚಿರಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದಾಗಿ ಭಾರತದ ಪ್ರೇಕ್ಷಕರು ಮತ್ತು ವಿದೇಶಿ ಪ್ರೇಕ್ಷಕರು ಸಂಪೂರ್ಣವಾಗಿ ಎರಡು ವಿಭಿನ್ನ ಅನುಭವಗಳನ್ನು ಪಡೆಯಲಿದ್ದಾರೆ.

ಸಖತ್ ‘ರಾ’ ಆಗಿದೆಯಾ ಟಾಕ್ಸಿಕ್?

ಈ ರೀತಿಯ ಭಾರಿ ಸೆನ್ಸಾರ್ ಕಟ್‌ಗಳ ಟಾಕ್ ಹುಟ್ಟಿಕೊಳ್ಳಲು ಮುಖ್ಯ ಕಾರಣ ಸಿನಿಮಾದ ಕಥೆ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಅತ್ಯಂತ ರಗಡ್ ಹಾಗೂ ‘ರಾ’ ಆಗಿ ಮೂಡಿಬಂದಿದೆ ಎಂಬ ಬಲವಾದ ಗಾಳಿಸುದ್ದಿ ಇದೆ. ಮಾದಕ ದ್ರವ್ಯದ ಮಾಫಿಯಾ ಹಾಗೂ ಗ್ಯಾಂಗ್​ಸ್ಟರ್ ಹಿನ್ನೆಲೆಯ ಕಥೆ ಹೊಂದಿರುವುದರಿಂದ ಚಿತ್ರದಲ್ಲಿ ತೀವ್ರವಾದ ಆಕ್ಷನ್, ಹಿಂಸಾಚಾರ ಹಾಗೂ ಬೋಲ್ಡ್ ದೃಶ್ಯಗಳು ಹೆಚ್ಚಿರಬಹುದು ಎಂಬುದು ಕೆಲವರ ಊಹೆ. ಅದಕ್ಕಾಗಿಯೇ ಭಾರತೀಯ ಸೆನ್ಸಾರ್ ಮಂಡಳಿಯ ನಿಯಮಗಳಿಗೆ ತಕ್ಕಂತೆ ಇಲ್ಲಿನ ಪ್ರಿಂಟ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಘೋಷಣೆ, ಬಾಕ್ಸ್ ಆಫೀಸ್​​ನಲ್ಲಿ ಎದುರಾಗಲಿರುವ ಸಿನಿಮಾಗಳು ಯಾವುವು?

ಭಾನುವಾರವಷ್ಟೇ ಚಿತ್ರತಂಡ ಅಧಿಕೃತವಾಗಿ ಘೋಷಿಸಿರುವಂತೆ, ಜಗತ್ತಿನಾದ್ಯಂತ ಈ ಹೈ-ವೋಲ್ಟೇಜ್ ಆ್ಯಕ್ಷನ್ ಡ್ರಾಮಾ ಸಿನಿಮಾ ಇದೇ ಆಗಸ್ಟ್ 26ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಯಶ್ ಅವರ ರಾ ಲುಕ್ ಮತ್ತು ಗೀತು ಮೋಹನ್ ದಾಸ್ ಅವರ ವಿಭಿನ್ನ ಮೇಕಿಂಗ್ ನೋಡಲು ಅಭಿಮಾನಿಗಳು ಆಗಸ್ಟ್ 26ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ಒತ್ತಡಗಳಿಂದ ಮುಕ್ತಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 22, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ, ಅಷ್ಟಮಿ, ಉತ್ತರಾ ನಕ್ಷತ್ರ, ವ್ಯತಿಪಾತ ಯೋಗ ಮತ್ತು ಭದ್ರಕರಣ ಇರತಕ್ಕಂತ ಈ ದಿನದ ಪ್ರಮುಖ ಗ್ರಹಗತಿಗಳನ್ನು ವಿವರಿಸಿದ್ದಾರೆ.

ಇಂದು ಬುಧ ಗ್ರಹ ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದು, ರವಿ ಮಿಥುನ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ರಾಹುಕಾಲವು ಬೆಳಗ್ಗೆ 7:31 ರಿಂದ 9:07 ರವರೆಗೆ ಇರಲಿದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲವು ಬೆಳಗ್ಗೆ 9:08 ರಿಂದ 10:44 ರವರೆಗೆ ಇರಲಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸಂಪಾದನೆಯ ಹಾದಿ ಬಹಳ ಕ್ಲಿಷ್ಟ ಎನಿಸುವುದು – Kannada News | Daily Horoscope for June 22, 2026: Monday Astrology Predictions

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಹರ್ಷಣ, ಕರಣ : ಭದ್ರ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:33 – 09:09, ಯಮಗಂಡ ಕಾಲ 10:45 – 12:22, ಗುಳಿಕ ಕಾಲ 13:58 – 15:34.

ಮೇಷ ರಾಶಿ: ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ಅಗಾಧ ಜ್ಞಾನಕ್ಕೆ ಮನ ಸೋಲಬಹುದು. ನಿಮ್ಮ ಸ್ವಂತ ಉದ್ಯೋಗಕ್ಕೆ ವರ್ತಮಾನಕ್ಕೆ ತಕ್ಕಂತೆ ರೂಪವನ್ನು ಬದಲಿಸಿ, ಸತ್ತ್ವನ್ನು ಉಳಿಸಿಕೊಳ್ಳುವುದು ಉತ್ತಮ. ಕಳೆದುಹೋದುದರ ಬಗ್ಗೆ ನೆನೆಯುವುದು ಬೇಡ. ಪಡೆದುಕೊಳ್ಳುವ ವಿಧಾನದ‌‌ ಕಡೆ ಗಮನಿಸಿ. ಕಛೇರಿಯಲ್ಲಿ ಇಂದು ವಾದಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ.

ವೃಷಭ ರಾಶಿ: ಒಂದಾದಮೇಲೊಂದರಂತೆ ಬರುವ ಕೆಲಸಗಳು ನಿಮಗೆ ಒತ್ತಡವಾಗಲಿದೆ. ಕ್ಷಣಕಾಲ ಏನನ್ನೂ ಯೋಚಿಸದೇ ಇರಿ.‌ ಸದ್ಯ ಆಲಸ್ಯವೇ ಮೈತುಂಬಿಕೊಂಡಿರುವ ಕಾರಣ ಯಾವ ಅಂಶವೂ ನಿಮ್ಮೊಳಗೆ ಹೋಗದು. ಕಾಲವನ್ನು ಹಿಂದಕ್ಕೆ ಕಳುಹಿಸುವ ಪ್ರಯತ್ನ ಬೇಡ. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಕೆಲವು ವಿರೋಧವನ್ನು ನೀವು ಸಹಿಸಿಕೊಳ್ಳಲು ತಯಾರಿರಬೇಕು. ಅದರೂ ಅನಿವಾರ್ಯ ಎನಿಸೀತು.

ಮಿಥುನ ರಾಶಿ: ಇಂದು ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಹಣವನ್ನು ಹೂಡಿಕೆ ಮಾಡಲು ಮುಂದಾಲೋಚನೆಯನ್ನು ಇಟ್ಟುಕೊಂಡು ಮಾಡಿ. ನಿಮ್ಮ ಚಿತ್ತ ಬೇರೆಯವರತ್ತ ಸುತ್ತಲಿದೆ. ಮಕ್ಕಳಿಂದ‌ ಸಂತೋಷವನ್ನು ಪಡೆಯುವಿರಿ. ಇಂದು ನೀವು ಯಾರಿಗೋ ಕಾದು ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು. ಸೂಕ್ಷ್ಮ ವಿಚಾರಗಳನ್ನು ಪಕ್ಷಪಾತವಿಲ್ಲದೇ ನಿರ್ಣಯಿಸಬೇಕಾಗುವುದು.

ಕರ್ಕಾಟಕ ರಾಶಿ: ನಿಮ್ಮ ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನಾಳಿನ ಬಗ್ಗೆ ಚಿಂತೆ ನಿಮಗಿರಲಿದೆ. ಪಾಪಪ್ರಜ್ಞೆಯು ನಿಮ್ಮನ್ನು ಕಾಡಿ ಮನಸ್ಸು ದುರ್ಬಲವಾಗಬಹುದು. ಯಾರ ಸ್ಥಾನ, ಬುದ್ಧಿ, ಸ್ಥಳ, ಸಂದರ್ಭ, ವ್ಯಕ್ತಿಗಳನ್ನು ಅಪ್ರಯೋಜಕ ಎಂದು ತಿಳಿಯಬೇಡಿ. ಅಸ್ಪಷ್ಟವಾದ ವಿಚಾರಕ್ಕೆ ಕೈ ಹಾಕಬೇಡಿ. ಸಂಗಾತಿಯು ನಿಮ್ಮ ಬಗ್ಗೆ ತವರಿನಲ್ಲಿ ದೂರು ನೀಡಬಹುದು. ಉಗುರಿನಲ್ಲಿ ಆಗುವ ಕೆಲಸಕ್ಕೆ‌ ಕೊಡಲಿ ತಂದಂತಾಗುವುದು. ಯಾವುದನ್ನೂ ಅತಿಯಾಗಿಸಿಕೊಳ್ಳುವುದು ಬೇಡ.

ಸಿಂಹ ರಾಶಿ: ನಿಮ್ಮಲ್ಲಿ ವಿದ್ಯೆ, ಸಂಪತ್ತು ಎಲ್ಲವೂ ಇದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ನಿಮ್ಮಿಂದ ಮನೆಯು ಕೆಲವನ್ನು ನಿರೀಕ್ಷಿಸುತ್ತದೆ. ಕೇಳಿಕೊಂಡು ಮಾಡಿ ನೀವೂ ಹೇಳಬೇಕಾದುದನ್ನು ಹೇಳುವಲ್ಲಿ ಹೇಳಿ. ಸುಮ್ಮನೇ ಹರಟೆ ಹೊಡೆದು ಪ್ರಯೋಜನವಗಾದು. ಅಧಿಕಾರದ ನೀವೂ ದುರುಪಯೋಗ ಮಾಡಿಕೊಳ್ಳಬೇಡಿ, ಬೇರೆಯವರು ಮಾಡದಂತೆ ಎಚ್ಚರವಹಿಸಿ. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಸಂಗಾತಿಯ ಬೆಂಬಲ ಸಿಗಲಿದೆ.

ಕನ್ಯಾ ರಾಶಿ: ಹಣದ ಆಮಿಷವನ್ನು ತೋರಿಸಿ ನಿಮ್ಮನ್ನು ವಂಚಿಸುವ ಸರಳ ಉಪಾಯವಾಗಿದೆ. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿದೆ ಎಂದು ನಿಮಗಾಗದವರು ಗುಲ್ಲೆಬ್ಬಿಸಬಹುದು. ಇಂದು ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಅದೇ ಒಂದು ದೊಡ್ಡ ಮೊತ್ತವಾಗಲಿದೆ. ನಿಮ್ಮ ಜೀವನವನ್ನು ಲಘುವಾಗಿ ಕಾಣುವುದು ಬೇಡ. ವ್ಯವಸ್ಥೆ ಇರುವುದೇ ಹೀಗೆ ಎಂಬ ನಿರ್ಧಾರದಿಂದ ಸಮಾಧಾನ ಸಿಗಲಿದೆ. ಸುಮ್ಮನೇ ಖರ್ಚಿಗೊಂದು ದಾರಿಯಾಗುದು. ಸಾಮರ್ಥ್ಯವನ್ನು ಬಳಕೆಯಾಗುವಲ್ಲಿ ಉಪಯೋಗಿಸಿ.

ತುಲಾ ರಾಶಿ: ಕೆಲಸದಲ್ಲಿ ಉತ್ಸಾಹ ಕಡಿಮೆ ಎನಿಸಿದಾಗ ಸ್ವಲ್ಪ ಸಮಯ ಬೇರೆ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸಾಮಾಜಿಕ ಸೇವೆಗೆ ಗೌರವವು ಸಿಗಲಿದೆ. ರಾಜಕೀಯ ವ್ಯಕ್ತಿಗಳ ಬಲದ ಪ್ರದರ್ಶನವು ಇಂದಾಗಲಿದೆ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಮೌಲವಾಗಿರುವುದನ್ನು ಅಭ್ಯಾಸ ಮಾಡಿ. ಶ್ರಮವನ್ನು ವ್ಯರ್ಥಮಾಡಬೇಡಿ. ವ್ಯಾಪರಸ್ಥರಿಗೆ ಉತ್ತಮಲಾಭದ ದಿನವಾಗಲಿದೆ. ನಂಬಿಕೆಯನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಿ‌ ಮಾರುಕಟ್ಟೆಯಿಂದ ಹೆಚ್ಚಿನ ಲಾಭವನ್ನು ಪಡೆಯಲು ಆಗುವುದು. ನಿಮ್ಮ ವ್ಯಾಪಾರ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡುವಿರಿ.

ವೃಶ್ಚಿಕ ರಾಶಿ: ನಿಮ್ಮ ಇಂದಿನ ಕಾರ್ಯದ ಒತ್ತಡ ನಿಮ್ಮನ್ನು ಒತ್ತಡಕ್ಕೆ, ಉದ್ವೇಗಕ್ಕೆ ಒಯ್ಯಬಹುದು. ಇಂತಹ ಸಂದರ್ಭಗಳಲ್ಲಿ ಸುಮ್ಮನೆ ಸ್ವಲ್ಪ ಹೊತ್ತು ಮಾಡುವ ಕೆಲಸಗಳತ್ತ ಗಮನಹರಿಸಿ. ನೀವು ಮಾಡಲಿರುವ ಕೆಲಸಗಳು ಪರ್ವತದಷ್ಟು ಇರಲಿದೆ. ದೂರಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ನಿಮ್ಮ ಹಾದಿಯನ್ನು ನೋಡಿಕೊಳ್ಳುವ ಸಮಯವಿದಾಗಿರುತ್ತದೆ. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ.

ಧನು ರಾಶಿ: ಇಂದು ನೀವು ಹೊಸ‌ ಕೆಲಸವನ್ನು ಆರಂಭಿಸಿದರೆ ಕಾರಣಾಂತರಗಳಿಂದ ಸ್ಥಗಿತಗೊಳ್ಳುವುದು ಅಥವಾ ನಿಧಾನವಾಗಿ ಅಭಿವೃದ್ಧಿಯನ್ನು ಹೊಂದುವುದು. ಎಲ್ಲರ ಸಹಬಾಳ್ವೆಯಿಂದ ಇರುವುದು ಸಾಧ್ಯವಾಗದು. ಯಾವುದೇ ವಿಚಾರಚವನ್ನು ತಲೆಗೆ ಏರಿಸಿದಷ್ಟೂ ತೊಂದರೆಯೇ. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು. ಕಾಮಗಾರಿಯ ಬಗ್ಗೆ ಸದ್ಭಾವವಿರದು. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.

ಮಕರ ರಾಶಿ: ಜನರೊಡನೆ ಬಾಂಧವ್ಯವನ್ನು ಚೆನ್ನಾಗಿಸಿಕೊಳ್ಳಿ. ಆತುರಪಟ್ಟು ಅವಗಢಕ್ಕೆ ಸಿಲುಕಬೇಡಿ. ಮಕ್ಕಳಿಂದ ಸಂತೋಷವು ಸಿಗಲಿದೆ. ನಿಮಗೆ ಎಲ್ಲವೂ ತಿಳಿದಿದ್ದರೂ ಬೇಕಾದ ಸಂದರ್ಭದಲ್ಲಿ ಅದು ನೆನಪಾಗದು. ಸ್ವಾಭಿಮಾನದಿಂದ ಬದುಕಲು ಪ್ರಯತ್ನಿಸಿದರೂ ಅದನ್ನು ತಪ್ಪಿಸುವರು. ವಿವಾದವಾಗುವ ಮಾತುಗಳನ್ನು ಆಡಬೇಡಿ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು.

ಕುಂಭ ರಾಶಿ: ಉತ್ತಮರ ಸಹವಾಸ ನಿಮಗೆ ಹೊಸದಾದ ದಿಕ್ಕನ್ನು ತೋರಿಸಬಹುದು. ನಂಬಿಕೆಯನ್ನು ಇಡುವಾಗ ಮುನ್ನೆಚ್ಚರವಿರಲಿ. ಪ್ರಣಯಪ್ರಸಂಗದಲ್ಲಿ ಆಕಸ್ಮಿಕ ತಿರುವುಗಳು ಇರಬಹುದು. ಅಪರಿಚಿತರು ನಿಮ್ಮನ್ನು ವಶಪಡಿಸಿಕೊಳ್ಳಲು ಅನೇಕ ವಿಧವಾದ ಪ್ರಯತ್ನವನ್ನು ಮಾಡುವರು. ನಿಷ್ಠೆಯಿಂದ ಇದ್ದರೂ ನಿಮಗೆ ಅಪವಾದಬರಬಹುದು. ಇಂದು ನೀವು ಸಿಡಿದೇಳುವ ಸಂದರ್ಭವು ಬರಬಹುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು.

ಮೀನ ರಾಶಿ: ಇಂದು ಆತುರದಲ್ಲಿ ಮಾಡಿದ ಕಾರ್ಯವನ್ನೇ ಮತ್ತೆ ಮಾಡಬೇಕಾದೀತು. ಉದ್ವೇಗಕ್ಕೆ ಒಳಗಾಗಬಹುದು‌. ಎಲ್ಲವೂ ಖಾಲಿ ಖಾಲಿ ಅನ್ನಿಸಬಹುದು. ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು. ಪ್ರೇಮಾಂಕುರವು ಆಗಬಹುದು. ನಿಮ್ಮ ಕೆಲಸದ ಮೇಲೆ ಸ್ವಲ್ಪ ಗಮನವಿರಲಿ‌. ಮನೆಯಲ್ಲಿ ನಡೆಯುವ ಘಟನೆಗಳು ಕುತೂಹಲ ತರಿಸಬಹುದು. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು.

ಲೋಹಿತ್ ಹೆಬ್ಬಾರ್ – 8762924271 (what’s app only)

Source link

IND W vs SA W: ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾಕ್ಕೆ ಮೊದಲ ಸೋಲು – Kannada News | India Suffers First Loss to South Africa in Women’s T20 WC 2026 at Old Trafford

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‌ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಆರಂಭ ಪಡೆಯಿತ್ತಾದರೂ ಆ ಬಳಿಕ ತಾನು ಮಾಡಿದ ತಪ್ಪುಗಳಿಂದಲೇ ಸೋಲಿಗೆ ಶರಣಾಯಿತು. ಮೊದಲಿಗೆ ಬ್ಯಾಟಿಂಗ್​ನಲ್ಲಿ ಸಿಕ್ಕ ಉತ್ತಮ ಆರಂಭವನ್ನು ಬಳಸಿಕೊಳ್ಳುವಲ್ಲಿ ಎಡವಿದ ಭಾರತ, ಆ ಬಳಿಕ ಬೌಲಿಂಗ್​ನಲ್ಲೂ ಸಿಕ್ಕ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿತು. ಅದರಲ್ಲೂ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮರಿಜಾನ್ನೆ ಕಪ್ ಅವರ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಟೀಂ ಇಂಡಿಯಾ ಸೋಲಿಗೆ ನೇರ ಆಹ್ವಾನ ನೀಡಿತು. ಇದು ಈ ಪಂದ್ಯಾವಳಿಯಲ್ಲಿ ಭಾರತದ ಮೊದಲ ಸೋಲಾಗಿದ್ದು, ಇತ್ತ ಆಫ್ರಿಕಾ ತಂಡಕ್ಕೆ ಸತತ ಎರಡನೇ ಗೆಲುವಾಗಿದೆ.

ಎಡವಿದ ಬ್ಯಾಟಿಂಗ್ ವಿಭಾಗ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭವೇ ಸಿಕ್ಕಿತು. ಸ್ಮೃತಿ ಹಾಗೂ ಶಫಾಲಿ ಮೊದಲ 3 ಓವರ್​ಗಳಲ್ಲಿ 30 ರನ್ ಕಲೆಹಾಕಿದರು. ಆದರೆ 3ನೇ ಓವರ್​ನ ಕೊನೆಯ ಎಸೆತದಲ್ಲಿ ಬೇಡದ ಶಾಟ್ ಆಡುವ ಯತ್ನದಲ್ಲಿ ಸ್ಮೃತಿ ವಿಕೆಟ್ ಕೈಚೆಲ್ಲಿದರು. ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮೂರನೇ ಕ್ರಮಾಂಕದಲ್ಲಿ ಬಂದ ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್‌ ಮಾಡಲು ಬಂದರಾದರೂ ಅವರ ಆಟ ಕೂಡ ಅಷ್ಟಕಷ್ಟೆ. ಇತ್ತ ಎಂದಿನಂತೆ ಹೊಡಿಬಡಿ ಆಟ ಮುಂದುವರೆಸಿದ ಶಫಾಲಿ ಕೂಡ 31 ರನ್ ಬಾರಿಸಿ ಬೇಡದ ಶಾಟ್ ಆಡಿ ವಿಕೆಟ್‌ ಉಡುಗೊರೆ ನೀಡಿದರು.

ಆರಂಭಿಕರ ವಿಕೆಟ್ ಪತನದ ಎಂದಿನಂತೆ ತಂಡದ ಬ್ಯಾಟಿಂಗ್‌ ವಿಭಾಗ ಪೆವಿಲಿಯನ್ ಪರೇಡ್ ಶುರು ಮಾಡಿತು. ಈ ಪಂದ್ಯಾವಳಿಯಲ್ಲಿ ಇದುವರೆಗೆ ಲಯಕಂಡುಕೊಳ್ಳದ ಜೆಮಿಮಾ ಕೇವಲ 12 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಐತಿಹಾಸಿಕ 200ನೇ ಟಿ20 ಪಂದ್ಯವನ್ನಾಡಿದ ನಾಯಕಿ ಹರ್ಮನ್‌ಪ್ರೀತ್ ಅವರ ಇನ್ನಿಂಗ್ಸ್ ಕೂಡ 24 ರನ್​ಗಳಿಗೆ ಅಂತ್ಯವಾಯಿತು. ಕೊಂಚ ಹೋರಾಟ ತೋರಿದ ದೀಪ್ತ 29 ರನ್​ಗಳಿಗೆ ಸುಸ್ತಾದರೆ, ರಿಚಾ ಘೋಷ್ 15 ರನ್​ಗಳಿಗೆ ಪೆವಿಲಿಯನ್ ದಾರಿ ಹಿಡಿದರು. ಬ್ಯಾಟಿಂಗ್‌ ವಿಭಾಗದಲ್ಲಿ ಎಲ್ಲರೂ ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಬದಲಿಸುವುಲ್ಲಿ ಎಡವಿದರು. ಹೀಗಾಗಿ ಟೀಂ ಇಂಡಿಯಾ ಕೇವಲ 158 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಆರಂಭದಲ್ಲಿ ಭಾರತಕ್ಕೆ ಮೇಲುಗೈ

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು ಪವರ್​ಪ್ಲೇನಲ್ಲೇ ಟೀಂ ಇಂಡಿಯಾದ ಸ್ಪಿನ್ನರ್​ಗಳು ಸಂಪೂರ್ಣವಾಗಿ ಕಟ್ಟಿಹಾಕಿದರು. ತಂಡದ ಮೊದಲೆರಡು ವಿಕೆಟ್​ಗಳು ಕೇವಲ 25 ರನ್​ಗಳಿಗೆ ಉರುಳಿದವು. ಹೀಗಾಗಿ ಆಫ್ರಿಕಾ ತಂಡ ಮೊದಲ 6 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 26 ರನ್. ಆದರೆ ಅಲ್ಲಿಂದ ಜೊತೆಯಾದ ಕಪ್ ಹಾಗೂ ಬ್ರಿಟ್ಸ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಆ ನಂತರ ಹಳಿ ತಪ್ಪಿತು. ಅದರಲ್ಲೂ ತಂಡದ ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಸರಾಗವಾಗಿ ರನ್ ನೀಡಿದ್ದು, ಆಫ್ರಿಕಾದ ಒತ್ತಡವನ್ನು ಕಡಿಮೆ ಮಾಡಿತು.

ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಭಾರತ

ಇದೇ ಹಂತದಲ್ಲಿ ರಾಧಾ ಯಾದವ್, ಕಪ್ ನೀಡಿದ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಆ ಸಮಯದಲ್ಲಿ ಕಪ್ ಅರ್ಧಶತಕವನ್ನು ಬಾರಿಸಿರಲಿಲ್ಲ. ಆದರೆ ಆ ಜೀವದಾನದ ಲಾಭ ಪಡೆದ ಕಪ್ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು. ಹಾಗೆಯೇ ತಂಡದ ಸೋಲಿನಲ್ಲಿ ನಾಯಕಿ ಹರ್ಮನ್‌ಪ್ರೀತ್ ತೆಗೆದುಕೊಂಡ ನಿರ್ಧಾರಗಳು ಕಾರಣವಾದವು. ಈ ಪಂದ್ಯದಲ್ಲಿ ದೀಪ್ತಿ ದುಬಾರಿಯಾಗಿದ್ದರೂ ಅವರಿಂದ 19ನೇ ಓವರ್ ಬೌಲ್ ಮಾಡಿಸಿದರು. ಈ ಓವರ್​ನಲ್ಲಿ 2 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಕಪ್ ತಂಡದ ಗೆಲುವು ಖಚಿತ ಪಡಿಸಿದರು. ಹಾಗೆಯೇ ಶ್ರೇಯಾಂಕ ಬದಲಿಗೆ ಬಂದ ಪ್ರೇಮಾ ದುಬಾರಿಯಾಗಿದ್ದು ಕೂಡ ತಂಡದ ಸೋಲಿಗೆ ಕಾರಣವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:34 pm, Sun, 21 June 26

Source link

ಧುರಂಧರ್​ ಸಿನಿಮಾ ಶೈಲಿಯಲ್ಲಿ ಸ್ಕೆಚ್: ಸ್ಫೋಟಕ ಮಾಹಿತಿ ಬಯಲು – Kannada News | Two Youths from the State Linked to Pakistani Suspect; Key Details Emerge

ತುಮಕೂರು, ಜೂನ್​​ 21: ಪಾಕ್​​ ಶಂಕಿತನ ಜೊತೆ ನಂಟು ಹೊಂದಿದ್ದ ರಾಜ್ಯದ ಇಬ್ಬರು ಯುವಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಧುರಂಧರ್​ ಚಿತ್ರದ ಮಾದರಿಯಲ್ಲಿ ಭಾರತದಲ್ಲಿ ಡಾನ್​​ ಸೃಷ್ಟಿಗೆ ಷಡ್ಯಂತ್ರ ನಡೆದಿತ್ತು ಎಂಬ ಬಗ್ಗೆ ಪೊಲೀಸ್​ ವಿಚಾರಣೆ ವೇಳೆ ಆರೋಪಿ ಅಲ್ಲಾಭಕ್ಷು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದಾನೆ. ಭಾರತದಲ್ಲೇ ಯುವಕರ ಟಾರ್ಗೆಟ್ ಮಾಡಿ ಹೊಸ ಸಂಚಿಗೆ ತಯಾರಿ ನಡೆದಿತ್ತು. ಅದಕ್ಕಾಗಿ ತಮಗೆ ಬೇಕಾದ ರೀತಿ ಕೆಲಸ ಮಾಡುವ ವ್ಯಕ್ತಿಗಾಗಿ ಹುಡುಕಾಟ ನಡೆದಿತ್ತು. ಅರ್ಹತೆ ಹೊಂದಿದ್ದ ವ್ಯಕ್ತಿ ಸಿಕ್ಕರೆ ಆತನನ್ನ ಡಾನ್​ ಮಾಡಲು ತಂತ್ರ ಕೂಡ ರೂಪಿಸಲಾಗಿತ್ತು. ಡಾನ್​ ಮಾಡುವುದಾಗಿ ತುಮಕೂರಿನ ಅಲ್ಲಾಭಕ್ಷುಗೆ ಪಾಕಿಸ್ತಾನದ ರಾಣಾ ಆಫರ್​ ನೀಡಿದ್ದ ಬಗ್ಗೆ ಆರೋಪಿ ಬಾಯ್ಬಿಟ್ಟು, ತುಮಕೂರು ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹಾಲಿವುಡ್ ಸ್ಟಾರ್ ನಟಿಯ ಜೊತೆಗೆ ಪ್ರಿಯಾಂಕಾ ಚೋಪ್ರಾ ಸಿನಿಮಾ – Kannada News | Priyanka Chopra to act with Hollywood actress Angelina jolie

ಹಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹಲವಾರು ಹಾಲಿವುಡ್​​ ಸಿನಿಮಾಗಳಲ್ಲಿ ನಟಿಸಿದ್ದಾರೆ, ನಟಿಸುತ್ತಲೇ ಇದ್ದಾರೆ. ಇತ್ತೀಚೆಗೆ ಸಹ ಪ್ರಿಯಾಂಕಾ ಚೋಪ್ರಾ ನಟನೆಯ ‘ದಿ ಬ್ಲಫ್’ ಹೆಸರಿನ ಹಾಲಿವುಡ್ ಸಿನಿಮಾ ಬಂದಿತ್ತು. ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ಆಗಿದ್ದ ‘ದಿ ಬ್ಲಫ್’ನಲ್ಲಿ ಪ್ರಿಯಾಂಕಾ ಸಖತ್ ಆಕ್ಷನ್​​ ಸೀನ್​​ಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ವಾರಣಾಸಿ’ ಸಿನಿಮಾನಲ್ಲೂ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ, ಇದೀಗ ತಮ್ಮ ಹೊಸ ಹಾಲಿವುಡ್ ಸಿನಿಮಾ ಬಗ್ಗೆ ಘೋಷಣೆ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್​​ನ ಸೂಪರ್ ಸ್ಟಾರ್ ನಟಿಯೊಟ್ಟಿಗೆ ಜೊತೆಯಾಗಿ ನಟಿಸಲಿದ್ದಾರೆ.

‘ಫಾರ್ಚೂನ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ತಾವು, ಹಾಲಿವುಡ್​​ನ ಸೂಪರ್ ಸ್ಟಾರ್ ನಟಿ ಆಂಜೆಲಿನಾ ಜೂಲಿ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ತಾವು ಆಂಜೆಲಿನಾ ಜೂಲಿಯನ್ನು ಸ್ಪೂರ್ತಿಯಾಗಿ ನೋಡುತ್ತೇನೆ ಎಂದಿರುವ ಪ್ರಿಯಾಂಕಾ, ಈಗ ತಾವು ಮೆಚ್ಚುವ ನಟಿಯೊಡನೆ ಸಿನಿಮಾನಲ್ಲಿ ನಟಿಸಲಿದ್ದಾರೆ.

ಆಂಜೆಲಿನಾ ಜೂಲಿ, ಹೆಚ್ಚು ನಟಿಸಿರುವುದು ಆಕ್ಷನ್ ಸಿನಿಮಾಗಳಲ್ಲಿ. ಹಾಲಿವುಡ್​​ನ ಸೂಪರ್ ಸ್ಟಾರ್ ನಟಿಯರಲ್ಲಿ ಪ್ರಮುಖರು ಆಂಜೆಲಿನಾ. ‘ಟೂಂಬ್ ರೈಡರ್’, ‘ಮಿಸ್ಟರ್ ಆಂಡ್ ಮಿಸಸ್ ಸ್ಮಿತ್’, ‘ವಾಂಟೆಡ್’, ‘ಗಾನ್ ಇನ್ 60 ಸೆಕೆಂಡ್ಸ್’ ಇನ್ನೂ ಹಲವಾರು ಆಕ್ಷನ್ ಓರಿಯೆಂಟೆಡ್ ಸಿನಿಮಾಗಳಲ್ಲಿ ಆಂಜೆಲಿನಾ ಜೂಲಿ ನಟಿಸಿದ್ದಾರೆ. ಹಾಲಿವುಡ್​​ನಲ್ಲಿ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳಿಗೆ ಹೊಸ ರೂಪ ಕೊಟ್ಟ ನಟಿ ಇವರು. ಇದೀಗ ಈ ನಟಿಯೊಡನೆ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ.

ಇದನ್ನೂ ಓದಿ:‘ಸಿಟಾಡೆಲ್’ ಮೂಲಕ ಮತ್ತೆ ಬಂದ ಪ್ರಿಯಾಂಕಾ ಚೋಪ್ರಾ: ಹೇಗಿದೆ ಟ್ರೈಲರ್?

ಆಂಜೆಲಿನಾ ಜೂಲಿ ಪ್ರಸ್ತುತ ‘ಆಂಕ್ಸಿಯಸ್ ಪೀಪಲ್’ ಮತ್ತು ‘ಸನ್ನಿ’ ಹೆಸರಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಎರಡರಲ್ಲಿ ಯಾವ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎಂಬುದು ಖಾತ್ರಿ ಆಗಿಲ್ಲ. ಅಥವಾ ಈ ಎರಡನ್ನೂ ಬಿಟ್ಟು ಮತ್ತೊಂದು ಸಿನಿಮಾನಲ್ಲಿ ಆಂಜೆಲಿನಾ ಮತ್ತು ಪ್ರಿಯಾಂಕಾ ಒಟ್ಟಿಗೆ ನಟಿಸಲಿದ್ದಾರೆಯೇ ಎಂಬುದು ಸಹ ಗೊತ್ತಿಲ್ಲ.

ಅಂದಹಾಗೆ ಪ್ರಿಯಾಂಕಾ ಚೋಪ್ರಾ ಪ್ರಸ್ತುತ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಆಮ್ರಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಅನ್ನು ಮೀರಾ ನಾಯರ್ ನಿರ್ಮಿಸಿ, ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾವು ಹಂಗೇರಿಯನ್-ಭಾರತೀಯ ಚಿತ್ರಗಾರ್ತಿ ಅಮ್ರಿತಾ ಶೇರ್ಗಿಲ್ ಅವರ ಜೀವನ ಆಧರಿಸಿದೆ. ಇದರ ಜೊತೆಗೆ ‘ಜಡ್ಜ್​​ಮೆಂಟ್ ಡೇ’ ಹೆಸರಿನ ಪಕ್ಕಾ ಹಾಲಿವುಡ್ ಆಕ್ಷನ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಇದೀಗ ಆಂಜೆಲಿನಾ ಜೂಲಿ ಸಿನಿಮಾ ಸಹ ಸೇರಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಸಿದ್ದರಾಮಯ್ಯಗೆ ಜೋಶಿ ತಿರುಗೇಟು – Kannada News | ‘RSS and BJP Don’t Need to Create a Hindu Rashtra, It Already Exists’: Pralhad Joshi sparks on Siddaramaiah

ಹುಬ್ಬಳ್ಳಿ, ಜೂನ್​ 21: ಆರ್‌ಎಸ್‌ಎಸ್‌ ಮತ್ತು ಬಿಜೆಪಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ. ಆರ್‌ಎಸ್‌ಎಸ್‌, ಬಿಜೆಪಿ ಹಿಂದೂ ರಾಷ್ಟ್ರವನ್ನು ಮಾಡಲು ಹೊರಟಿಲ್ಲ. ಈ ದೇಶ ಹಿಂದೂ ರಾಷ್ಟ್ರನೇ ಇದೆ. ಸಿದ್ದರಾಮಯ್ಯನವರಿಗೆ ಇದು ಗೊತ್ತಿಲ್ಲ ಎಂದಿದ್ದಾರೆ. ಈ ದೇಶ ಹಿಂದೂ ರಾಷ್ಟ್ರ ಇಲ್ಲ ಎಂದು ಅಂದಿದ್ದರೆ, ಈ ದೇಶದಲ್ಲಿ ಪ್ರಜಾಪ್ರಭುತ್ವ ಇರುತ್ತಿರಲಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಉದಾಹರಣೆ ನೀಡಿದ ಅವರು, ಹಿಂದೂ ಬಹುಸಂಖ್ಯಾ ಕಳೆದುಕೊಂಡರೆ ದೇಶದಲ್ಲಿ ಪ್ರಜಾಪ್ರಭುತ್ವವೂ ಇರುವುದಿಲ್ಲ, ಮತದಾನವೂ ಇರುವುದಿಲ್ಲ. ತಮ್ಮ ಮಗನಿಗೆ ಮಂತ್ರಿ ಮಾಡಿದ್ದರೂ, ಇದನ್ನು ಹೇಳ್ಕೊಂಡು ರಾಜಕಾರಣ ಮಾಡುವುದನ್ನು ನಿಲ್ಲಿಸಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ENG: ಬರೋಬ್ಬರಿ 3 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ಗೆ ಮರಳಿದ ಯಾರ್ಕರ್ ಕಿಂಗ್ – Kannada News | Team India Squad for England ODIs Announced: Jasprit Bumrah Back After 3 Years, Record Against Eng

ಇಂಗ್ಲೆಂಡ್ ಸರಣಿಗೆ ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್ (PC-PTI).

Source link

ಉದ್ಧವ್ ಠಾಕ್ರೆಗೆ ಶಾಕ್: ಶಿಂಧೆ ಬಣ ಸೇರಿದ ಧಾರಾಶಿವ್ ಸಂಸದ ಓಂರಾಜೇ ನಿಂಬಾಳ್ಕರ್! – Kannada News | Dharashiv mp omprakash nimbalkar joins eknath shinde led shiv sena operation tiger success

ಓಂಪ್ರಕಾಶ್ ರಾಜೇ ನಿಂಬಾಳ್ಕರ್Image Credit source: tv9 kannada

ಮುಂಬೈ, ಜೂನ್​ 21: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (Shiv Sena) ಪಕ್ಷಕ್ಕೆ ಮತ್ತೆ ಕೈಕೊಡಲು ಸಂಸದರು ಸಜ್ಜಾಗಿದ್ದಾರೆ. ಉದ್ಧವ್ ಬಣದ 9 ಸಂಸದರ ಪೈಕಿ 6 ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ. ಅವರಲ್ಲಿ ಧಾರಾಶಿವ್ ಕ್ಷೇತ್ರದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ (Omprakash Raje Nimbalkar) ಕೂಡ ಒಬ್ಬರು. ಇದೀಗ ಇವರು ಸಿಎಂ ಏಕನಾಥ್ ಶಿಂಧೆ ನಾಯಕತ್ವದಲ್ಲಿ ಮುನ್ನಡೆಯಲಿದ್ದೇವೆ ಎಂದು ತಮ್ಮ ರಾಜಕೀಯ ನಿಲುವನ್ನು ಅಧಿಕೃತವಾಗಿ ಘೊಷಿಸಿದ್ದಾರೆ. ಆ ಮೂಲಕ ಆಪರೇಷನ್ ಟೈಗರ್ ಯಶಸ್ವಿಯಾಗಿದೆ.

ಮುಖ್ಯಾಂಶಗಳು

  • ಮಹಾರಾಷ್ಟ್ರ ರಾಜಕೀಯದಲ್ಲಿ ಆಪರೇಷನ್ ಟೈಗರ್ ಪರಿಣಾಮ
  • ಶಿಂಧೆ ಬಣಕ್ಕೆ ಓಂಪ್ರಕಾಶ್ ನಿಂಬಾಳ್ಕರ್ ಅಧಿಕೃತ ಸೇರ್ಪಡೆ
  • ಅಧಿಕಾರವಿಲ್ಲದೆ ಜನಸೇವೆ ಅಸಾಧ್ಯ ನಿಂಬಾಳ್ಕರ್

ಶನಿವಾರವಷ್ಟೇ ತಾವು ಪಕ್ಷ ಸೇರ್ಪಡೆ ಕುರಿತು ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದ ನಿಂಬಾಳ್ಕರ್, ತಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಬಳಿಕ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದ್ದರು. ಇದು ಶಿವಸೇನೆಯ ಶಿಂಧೆ ಬಣದಲ್ಲಿ ತಳಮಳ ಸೃಷ್ಟಿಸಿತ್ತು. ಆದರೆ, ಇದೀಗ ಓಂರಾಜೇ ನಿಂಬಾಳ್ಕರ್​ ತಮ್ಮ ಅಧಿಕೃತ ನಿಲುವು ಸ್ಪಷ್ಟಪಡಿಸಿದ್ದಾರೆ.

ಓಂರಾಜೇ ನಿಂಬಾಳ್ಕರ್ ಹೇಳಿದ್ದಿಷ್ಟು

ತಮ್ಮ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಓಂರಾಜೇ ನಿಂಬಾಳ್ಕರ್, ‘ನನ್ನ ಮನವಿಗೆ ಓಗೊಟ್ಟು ಲೋಕಸಭಾ ಕ್ಷೇತ್ರದ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಎಲ್ಲರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಅವರ ಅಭಿಪ್ರಾಯಗಳನ್ನು ಪಡೆದಿದ್ದೇನೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್‌ಗೆ ದೂರು

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ತೀವ್ರ ಹೋರಾಟ ನಡೆಸಿದರೂ, ಧಾರಾಶಿವ್‌ನ ಯಾವುದೇ ಪಂಚಾಯತ್ ಸಮಿತಿ ಅಥವಾ ನಗರಸಭೆಯಲ್ಲಿ ನಮಗೆ ಯಶಸ್ಸು ಸಿಗಲಿಲ್ಲ. ನಾವೆಲ್ಲರೂ 24 ಗಂಟೆ ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ಅಧಿಕಾರವಿಲ್ಲದ ಕಾರಣ ಸೋಲು ಅನುಭವಿಸಬೇಕಾಯಿತು. ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಅಧಿಕಾರದ ಬಲ ಬೇಕಾಗಿದೆ. ಆದ್ದರಿಂದ, ಕಾರ್ಯಕರ್ತರ ಒಮ್ಮತದ ತೀರ್ಮಾನದಂತೆ ನಾವು ಶಿವಸೇನೆ ಸೇರಲು ನಿರ್ಧರಿಸಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಾಯಕತ್ವದಲ್ಲಿ ಮುನ್ನಡೆಯಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version