IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೂರು ತಂಡಗಳು ಪ್ಲೇಆಫ್ಗೇರಿದರೆ, ಮೂರು ತಂಡಗಳು ಪ್ಲೇಆಫ್ ರೇಸ್ನಲ್ಲಿದೆ. ಅಂದರೆ ನಾಲ್ಕನೇ ಸ್ಥಾನಕ್ಕಾಗಿ ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನೇರ ಪೈಪೋಟಿ ಇದೆ. (PC: IPL)
ಈ ಪೈಪೋಟಿಯಲ್ಲಿರುವ ಪಂಜಾಬ್ ಕಿಂಗ್ಸ್ ತಂಡವು ಇಂದು (ಮೇ.23) ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಪಂಜಾಬ್ ಪಡೆ ಒಟ್ಟು 15 ಅಂಕಗಳನ್ನು ಪಡೆಯಲಿದೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡ ನೇರವಾಗಿ ಪ್ಲೇಆಫ್ಗೇರುವುದಿಲ್ಲ. ಬದಲಾಗಿ ಇತರೆ ಎರಡು ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಅದರಂತೆ ಪಂಜಾಬ್ ಪಡೆಯ ಪ್ಲೇಆಫ್ ಲೆಕ್ಕಾಚಾರ ಈ ಕೆಳಗಿನಂತಿದೆ… (PC: IPL)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಜಯ ಸಾಧಿಸಿದರೆ, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಫಲಿತಾಂಶವನ್ನು ಎದುರು ನೋಡಬೇಕು. ಅಂದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುವುದು ಪಂಜಾಬ್ ಕಿಂಗ್ಸ್ ಪಾಲಿಗೆ ಅನಿವಾರ್ಯ. (PC: IPL)
ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು, ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದರೆ ಮತ್ತೊಂದು ಪಂದ್ಯದ ಫಲಿತಾಂಶವನ್ನು ಸಹ ಪಂಜಾಬ್ ಪಡೆ ಎದುರು ನೋಡಬೇಕು. ಅಂದರೆ ಐಪಿಎಲ್ನ 69ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲಬೇಕು. (PC: IPL)
ಅಂದರೆ ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದ ಬಳಿಕ, ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೋಲಬೇಕು. ಇಂತಹದೊಂದು ಫಲಿತಾಂಶ ಮೂಡಿಬಂದರೆ ಮಾತ್ರ ಪಂಜಾಬ್ ಕಿಂಗ್ಸ್ ತಂಡವು 15 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ಗೇರಲಿದೆ. ಹೀಗಾಗಿ ಪಂಜಾಬ್ ಪಾಲಿಗೆ ಇಂದಿನ ಮ್ಯಾಚ್ ಅಲ್ಲದೆ, ಇತರೆ ತಂಡಗಳ ಮುಂದಿನ ಪಂದ್ಯಗಳು ಕೂಡ ನಿರ್ಣಾಯಕ. (PC: IPL)
ಒಂದೇ ದಿನದಲ್ಲಿ 1 ಕೋಟಿ ಫಾಲೋವರ್ಸ್Image Credit source: Ai generated
ಬೀಜಿಂಗ್, ಮೇ 23: ಇಂಟರ್ನೆಟ್ ಜಗತ್ತಿನಲ್ಲಿ ಕೆಲವೊಮ್ಮೆ ನಂಬಲು ಅಸಾಧ್ಯವಾದ ಪವಾಡಗಳು ನಡೆದುಬಿಡುತ್ತವೆ. ಸದ್ಯ ಚೀನಾದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ಒಬ್ಬರು ಇಡೀ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದಾಳೆ. ಮೂರು ವರ್ಷಗಳ ಸುದೀರ್ಘ ವಿರಾಮದ ನಂತರ ಇಂಟರ್ನೆಟ್‌ಗೆ ಮರಳಿದ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 1 ಕೋಟಿ (10 Million) ಹೊಸ ಫಾಲೋವರ್ಸ್ ಪಡೆಯುವ ಮೂಲಕ ಈಕೆ ಹೊಸ ಇತಿಹಾಸ ಬರೆದಿದ್ದಾರೆ. ಚೀನಾದಲ್ಲಿ ಅತ್ಯಂತ ಜನಪ್ರಿಯ ಬ್ಯೂಟಿ ಇನ್ಫ್ಲುಯೆನ್ಸರ್ ಆಗಿರುವ ಜಿಯಾಂಗ್ ಚೆಂಗ್ಲಾನ್ (Jiang Chenglan) ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿ.
3 ವರ್ಷಗಳ ಬಳಿಕ ಕಂಬ್ಯಾಕ್:
ಚೀನಾದ ಟಿಕ್‌ಟಾಕ್ ಆವೃತ್ತಿಯಾದ ‘ಡೋಯಿನ್’ (Douyin) ಪ್ಲಾಟ್‌ಫಾರ್ಮ್‌ನಲ್ಲಿ ಜಿಯಾಂಗ್ ಚೆಂಗ್ಲಾನ್ 2023 ರವರೆಗೆ 3 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಳು. ಆದರೆ ಇದ್ದಕ್ಕಿದ್ದಂತೆ ಆಕೆ ಯಾವುದೇ ಅಪ್‌ಡೇಟ್ ನೀಡದೆ ಸೋಷಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ನಾಪತ್ತೆಯಾಗಿದ್ದಳು. ಇದು ಆಕೆಯ ಅಭಿಮಾನಿಗಳಲ್ಲಿ ತೀವ್ರ ಆತಂಕ ಮತ್ತು ಕುತೂಹಲ ಮೂಡಿಸಿತ್ತು.ಇತ್ತೀಚೆಗೆ ಮೇ 13 ರಂದು ಜಿಯಾಂಗ್ ತಮ್ಮ ನಿಜವಾದ ಹೆಸರಿನಲ್ಲಿ ಹೊಸ ಖಾತೆ ತೆರೆಯುವ ಮೂಲಕ ಭರ್ಜರಿ ಕಂಬ್ಯಾಕ್ (Comeback) ಮಾಡಿದ್ದಾಳೆ. ತಾನು ನಾಪತ್ತೆಯಾಗಲು ತಮ್ಮ ಹಳೆಯ ಪ್ರೊಡಕ್ಷನ್ ಏಜೆನ್ಸಿಯೊಂದಿಗೆ ನಡೆದ ಕಾನೂನು ಹೋರಾಟ ಮತ್ತು ವಿವಾದವೇ ಕಾರಣ ಎಂದು ಆಕೆ ಭಾವುಕರಾಗಿ ವೀಡಿಯೋದಲ್ಲಿ ಬಹಿರಂಗಪಡಿಸಿದ್ದಾಳೆ.
“ನನ್ನ ಹಳೆಯ ಸೋಷಿಯಲ್ ಮೀಡಿಯಾ ಖಾತೆ ಮತ್ತು ಆನ್‌ಲೈನ್ ಶಾಪ್‌ಗಳನ್ನು ಏಜೆನ್ಸಿಯೇ ತನ್ನ ಹೆಸರಿಗೆ ಟ್ರೇಡ್‌ಮಾರ್ಕ್ ಮಾಡಿಕೊಂಡಿದೆ. ದಯವಿಟ್ಟು ನನ್ನ ಹಳೆಯ ಹೆಸರನ್ನು ನಂಬಿ ಯಾರೂ ಆ ಶಾಪ್‌ಗಳಲ್ಲಿ ವಸ್ತುಗಳನ್ನು ಖರೀದಿಸಬೇಡಿ” ಎಂದು ಜಿಯಾಂಗ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾಳೆ.
ಜಿಯಾಂಗ್ ಮರಳಿ ಬರುತ್ತಿದ್ದಂತೆ ಆಕೆಯ ಮೊದಲ ಮೇಕಪ್ ಟ್ಯುಟೋರಿಯಲ್ ವೀಡಿಯೋ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದೆ. ಕೇವಲ ಒಂದೇ ದಿನದಲ್ಲಿ 10 ಮಿಲಿಯನ್ ಜನರು ಆಕೆಯನ್ನು ಫಾಲೋ ಮಾಡಲು ಆರಂಭಿಸಿದ್ದು, ಆಕೆಯ ವೀಡಿಯೋಗೆ ಲಕ್ಷಾಂತರ ಲೈಕ್ಸ್ ಮತ್ತು ಕಮೆಂಟ್‌ಗಳು ಹರಿದುಬಂದಿವೆ. ಚೀನಾದ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಕಾಸ್ಮೆಟಿಕ್ ಬ್ರ್ಯಾಂಡ್‌ಗಳು ಕೂಡ ಆಕೆಯ ಕಂಬ್ಯಾಕ್ ಅನ್ನು ಸಂಭ್ರಮಿಸಿದ್ದು, ಆಕೆಯ ಜೊತೆ ಕೆಲಸ ಮಾಡಲು ಸಾಲುಗಟ್ಟಿ ನಿಂತಿವೆ ಎಂದು ವರದಿಯಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಲಬುರಗಿ, ಮೇ 23: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದಾರುಣವಾಗಿ ಮೃತಪಟ್ಟಿದ್ದಾರೆ. ಮಧ್ಯರಾತ್ರಿ ಸಂಭವಿಸಿದ ಈ ದುರ್ಘಟನೆಯಲ್ಲಿ ಕ್ರೂಸರ್ ವಾಹನ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕ್ರೂಸರ್‌ನಲ್ಲಿದ್ದ ಹುಸೇನ್, ಮಹಬೂಬ್, ತೋಲುಸಾಬ್, ರಸೂಲ್ ಬೀ, ಫಾತೀಮಾ ಅಲಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ಚಿತ್ತಾಪುರದ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಮೃತರಲ್ಲೊಬ್ಬರ ತಂದೆಯು ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಪುತ್ರ ಸುಮಾರು ಆರು-ಏಳು ವರ್ಷಗಳಿಂದ ವಾಹನ ಚಲಾಯಿಸುತ್ತಿದ್ದನೆಂದು ತಿಳಿಸಿದ್ದಾರೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫೋನ್ ಮೂಲಕ ತಿಳಿಸಲಾಗಿತ್ತು. ನಂತರ ಮುಂಜಾನೆ ಎರಡು ಗಂಟೆ ಸುಮಾರಿಗೆ ಅಪಘಾತದ ಸುದ್ದಿ ತಿಳಿದಿದೆ ಎಂದು ಹೇಳಿದ್ದಾರೆ. ಸೊಸೆ ಗರ್ಭಿಣಿ, ಈ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡ ಕುಟುಂಬದ ಸ್ಥಿತಿ ಕರುಣಾಜನಕವಾಗಿದೆ.
ಲೇಹ್, ಮೇ 23: ಲಡಾಖ್‌ನ ಲೇಹ್ ಬಳಿಯ ಪರ್ವತ ಪ್ರದೇಶವಾದ ಟ್ಯಾಂಗ್ಸ್ಟೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್(Helicopter) ಒಂದು ಪತನಗೊಂಡಿದ್ದು, ಅದರಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇ 20 ರಂದು ನಡೆದ ಈ ಘಟನೆಯ ವಿವರಗಳನ್ನು ಸೇನಾ ಅಧಿಕಾರಿಗಳು ಇಂದು ಬೆಳಿಗ್ಗೆ ಅಧಿಕೃತವಾಗಿ ದೃಢಪಡಿಸಿದ್ದಾರೆ.
ಸೇನೆಯ ‘ಚೀತಾ’ ಹೆಸರಿನ ಸಿಂಗಲ್-ಎಂಜಿನ್ ಹೆಲಿಕಾಪ್ಟರ್‌ನಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್ ಮತ್ತು ಇಬ್ಬರು ಮೇಜರ್ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬರು ಮೇಜರ್ ಚಲಾಯಿಸುತ್ತಿದ್ದರು. ಇವರೊಂದಿಗೆ 3ನೇ ಪದಾತಿ ದಳದ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಪ್ರಯಾಣಿಕರಾಗಿ ಅದೇ ವಿಮಾನದಲ್ಲಿದ್ದರು.
Be scared…Be very scared of soldiers who survive a chopper crash onto rocks and hostile terrain… and yet emerge calm, composed, smiling, stoic.
No panic…no hysteria….no collapse.
That is what military training does to men. It builds nerves of steel and minds that stay steady… https://t.co/4f7Z1YSa58
ಅಧಿಕಾರಿಗಳು ಸುರಕ್ಷಿತ, ಸೆಲ್ಫಿ ವೈರಲ್
ಹೆಲಿಕಾಪ್ಟರ್ ಪತನಗೊಂಡ ತಕ್ಷಣವೇ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದ್ದು, ಅದೃಷ್ಟವಶಾತ್ ಮೂವರಿಗೂ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಭೀಕರತೆಯಿಂದ ಪ್ರಾಣಾಪಾಯದಿಂದ ಪಾರಾದ ನಂತರ, ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಕ್ಲಿಕ್ಕಿಸಿಕೊಂಡ ಆಶ್ಚರ್ಯಕರ ಸೆಲ್ಫಿ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.
#BREAKING Indian Army Officers Survive Cheetah Helicopter Crash-Landing
Three Indian Army officers, including Major General Sachin Mehta of the 3 Infantry Division, escaped with minor injuries after their Cheetah helicopter crash-landed in the Tangste region near Leh on May 21.… pic.twitter.com/nBM33JEyTG
ಪ್ರಸ್ತುತ ಹೆಲಿಕಾಪ್ಟರ್ ಪತನಕ್ಕೆ ನಿಖರವಾದ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಘಟನೆಗೆ ಕಾರಣವಾದ ತಾಂತ್ರಿಕ ದೋಷ ಅಥವಾ ಹವಾಮಾನದ ಸಂದರ್ಭಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸೇನೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ನಟ ಆರ್. ಮಾಧವನ್ ಅವರ ಮಗ ವೇದಾಂತ್ ತಮ್ಮ ತಂದೆಯ ಹಾದಿಯಲ್ಲಿ ಸಾಗುವ ಬದಲು ತಮ್ಮ ವೃತ್ತಿಜೀವನಕ್ಕಾಗಿ ತುಂಬಾ ವಿಭಿನ್ನವಾದ ಮಾರ್ಗವನ್ನು ಆರಿಸಿಕೊಂಡರು. ವೇದಾಂತ್ ಸ್ವತಃ ಆರಿಸಿಕೊಂಡ ಹಾದಿಗೂ ಚಿತ್ರರಂಗಕ್ಕೂ ಯಾವುದೇ ಸಂಬಂಧವಿಲ್ಲ. ಆರ್. ಮಾಧವನ್ ಮತ್ತು ಅವರ ಪತ್ನಿ ತಮ್ಮ ಮಗನ ವೃತ್ತಿಜೀವನಕ್ಕಾಗಿ ಕೆಲವು ವರ್ಷಗಳ ಹಿಂದೆ ಮುಂಬೈನಿಂದ ದುಬೈಗೆ ತೆರಳಿದರು. ಈಗ, ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಮಗನ ಪಾಲನೆ ಮತ್ತು ಅವರ ವೃತ್ತಿಜೀವನದ ಆಯ್ಕೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದರು.
20 ವರ್ಷದ ವೇದಾಂತ್ ಒಬ್ಬ ಅತ್ಯುತ್ತಮ ಈಜುಗಾರ. ಅವರು ಅನೇಕ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ವೇದಾಂತ್‌ಗೆ ಹೆಚ್ಚಿನ ತರಬೇತಿ ನೀಡಲು ಮಾಧವನ್ ಮತ್ತು ಅವರ ಪತ್ನಿ ಸರಿತಾ ದುಬೈಗೆ ತೆರಳಿದರು. ಇಬ್ಬರೂ ತಮ್ಮ ಮಗನನ್ನು ಚಿತ್ರರಂಗಕ್ಕೆ ಪ್ರವೇಶಿಸಲು ಎಂದಿಗೂ ಒತ್ತಡ ಹೇರಲಿಲ್ಲ ಮತ್ತು ಅದಕ್ಕಾಗಿಯೇ ಅಭಿಮಾನಿಗಳು ಅವರನ್ನು ತುಂಬಾ ಮೆಚ್ಚುತ್ತಾರೆ.
ವೇದಾಂತ್ ಅವರನ್ನು ಹೆಚ್ಚಾಗಿ ಇತರ ಸ್ಟಾರ್ ಮಕ್ಕಳೊಂದಿಗೆ ಹೋಲಿಸಲಾಗುತ್ತದೆ. ಆದಾಗ್ಯೂ, ಮಾಧವನ್ ಈ ಬಗ್ಗೆ ತಮ್ಮ ಸ್ಪಷ್ಟ ಅಸಮಾಧಾನವನ್ನು ವ್ಯಕ್ತಪಡಿಸಿದರು. ‘ನಾನು ಮತ್ತು ಸರಿತಾ ಇದರ ಬಗ್ಗೆ ಸಂತೋಷವಾಗಿಲ್ಲ. ನಮಗೆ ಇದರ ಬಗ್ಗೆ ಕೆಟ್ಟ ಭಾವನೆ ಇದೆ. ಏಕೆಂದರೆ ಒಂದು ಮಗುವನ್ನು ಇನ್ನೊಂದು ಮಗುವಿಗೆ ಹೋಲಿಸುವ ಮೀಮ್‌ಗಳ ಉದ್ದೇಶ ಜನರ ಗಮನ ಸೆಳೆಯುವುದಾಗಿದೆ. ಆದ್ದರಿಂದ, ಅಂತಹ ಮೀಮ್‌ಗಳನ್ನು ವೈರಲ್ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅವರು ಇತರರಿಗೆ ಎಷ್ಟು ನೋವುಂಟು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿರುವುದಿಲ್ಲ. ವೇದಾಂತ್ ಅವರನ್ನು ಉದ್ಯಮದ ಇತರ ಸ್ಟಾರ್ ಮಕ್ಕಳೊಂದಿಗೆ ಹೋಲಿಸಿದಾಗ, ನಾನು ಮತ್ತು ಸರಿತಾ ಅದನ್ನು ಇಷ್ಟಪಡುವುದಿಲ್ಲ. ನಾವು ಅದನ್ನು ಬೆಂಬಲಿಸುವುದಿಲ್ಲ’ ಎಂದು ಮಾಧವನ್ ಹೇಳಿದರು.
ಮಾಧವನ್ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ತಮ್ಮ ಮಗನಲ್ಲಿಯೂ ಅದೇ ಮಧ್ಯಮ ವರ್ಗದ ಮೌಲ್ಯಗಳನ್ನು ತುಂಬಲು ಬಯಸುತ್ತಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಯಶಸ್ಸನ್ನು ಸಾಧಿಸಿರುವ ವೇದಾಂತ್ ಬಗ್ಗೆ ಮಾತನಾಡುತ್ತಾ, ಮಾಧವನ್, ‘ನನ್ನ ಮಗ ಗೆದ್ದ ಎಲ್ಲಾ ಪದಕಗಳಿಗೂ ಶ್ರಮಿಸಿದ್ದಾನೆ. ಸ್ಟಾರ್ ಕಿಡ್ ಆಗುವುದು ಸುಲಭವಲ್ಲ. ವೇದಾಂತ್ ವಯಸ್ಸಿನ ಸ್ನೇಹಿತರು ಹೆಚ್ಚಿನದನ್ನು ಸಾಧಿಸಿರಬಹುದು. ಆದರೆ ಅವನು ಅವರಿಗಿಂತ ಹೆಚ್ಚಿನ ಖ್ಯಾತಿಯನ್ನು ಪಡೆಯುತ್ತಾನೆ. ಆದ್ದರಿಂದ ನಾವು ಇತರರನ್ನು ಸಹ ಪ್ರೋತ್ಸಾಹಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಅವರು ದೇಶದ ಅತ್ಯುತ್ತಮ ಈಜುಗಾರ ಅಲ್ಲದಿರಬಹುದು, ಆದರೆ ಅವರು ಖಂಡಿತವಾಗಿಯೂ ರಾಷ್ಟ್ರೀಯ ದಾಖಲೆ ನಿರ್ಮಿಸಿದ ನಟನ ಮಗ’ ಎಂದಿದ್ದಾರೆ.
ವೇದಾಂತ್ ಪಡೆಯುತ್ತಿರುವ ಖ್ಯಾತಿ ಎರಡು ಅಲಗಿನ ಕತ್ತಿ ಎಂದು ಮಾಧವನ್ ಹೇಳಿದ್ದಾರೆ. ‘ಅವನು ಇಷ್ಟೆಲ್ಲಾ ಖ್ಯಾತಿಗೆ ಅರ್ಹನೆಂದು ಭಾವಿಸಿದರೆ, ಅವನು ಮೂರ್ಖ. ಅವನು ನನ್ನ ಮಗನಲ್ಲದಿದ್ದರೆ, ಅವನಿಗೆ ಇಷ್ಟೊಂದು ಖ್ಯಾತಿ ಸಿಗುತ್ತಿರಲಿಲ್ಲ. ಅದೃಷ್ಟವಶಾತ್, ನನ್ನ ಮಗ ಇದನ್ನೆಲ್ಲ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತ’ ಎಂದು ಮಾಧವನ್ ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ಎರುಮಪೆಟ್ಟಿ ಕುಟ್ಟಂಚೇರಿ ನೆಲ್ಲಿಕುನ್ನು ಎಂಬಲ್ಲಿ ಪಂಚಾಯತ್‌ಗೆ ಸೇರಿದ ಕುಡಿಯುವ ನೀರಿನ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ತಲೆಕೆಳಗಾಗಿ ಉರುಳಿಬಿದ್ದಿದೆ. ಈ ಭೀಕರ ಅಪಘಾತದ ದೃಶ್ಯಗಳು ಅಲ್ಲಿನ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿವೆ. ವಾಹನದ ವೇಗ ಅಥವಾ ತಾಂತ್ರಿಕ ದೋಷವೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ ಎನ್ನಲಾಗಿದೆ. ಸದ್ಯ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ 9ನೇ ಬಾರಿ 200+ ಸ್ಕೋರ್ಗಳಿಸುವ ಮೂಲಕ. ಅಂದರೆ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ 200+ ಸ್ಕೋರ್ಗಳಿಸಿದ ದಾಖಲೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದೆ. (PC: IPL)
ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 255 ರನ್ ಚಚ್ಚಿದರು. ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಬಾರಿ 200+ ಸ್ಕೋರ್ಗಳಿಸಿದ ಭರ್ಜರಿ ದಾಖಲೆ ನಿರ್ಮಿಸಿದರು. (PC: IPL)
ಇದಕ್ಕೂ ಮುನ್ನ ಈ ದಾಖಲೆ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ಹೆಸರಿನಲ್ಲಿತ್ತು. ಪಂಜಾಬ್ ಕಿಂಗ್ಸ್ ತಂಡವು 2025 ರಲ್ಲಿ 8 ಬಾರಿ 200+ ಸ್ಕೋರ್ ಗಳಿಸಿದ್ದರು. ಇನ್ನು ಗುಜರಾತ್ ಟೈಟಾನ್ಸ್ ತಂಡ ಕೂಡ 2025 ರಲ್ಲೇ 8 ಬಾರಿ 200 ಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದರು. (PC: IPL)
ಆದರೆ ಈ ಬಾರಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿರುವ ಸನ್‌ರೈಸರ್ಸ್ ಹೈದರಾಬಾದ್ ದಾಂಡಿಗರು ಒಟ್ಟು 9 ಬಾರಿ 200+ ಸ್ಕೋರ್ಗಳಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ಬಾರಿ 200+ ಸ್ಕೋರ್ಗಳಿಸಿದ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. (PC: IPL)
ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಆರ್ಸಿಬಿ (201/9 ಮತ್ತು 225/4), ರಾಜಸ್ಥಾನ್ ರಾಯಲ್ಸ್ ವಿರುದ್ಧ (229/5 ಮತ್ತು 216/6) ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ (219/6 ಮತ್ತು 235/4) ತಲಾ 2 ಬಾರಿ 200+ ಸ್ಕೋರ್ಗಳಿಸಿದೆ. ಹಾಗೆಯೇ ಕೋಲ್ಕತಾ ನೈಟ್ ರೈಡರ್ಸ್ (226/8), ಮುಂಬೈ ಇಂಡಿಯನ್ಸ್ (249/4) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ (242/2) ತಲಾ ಒಂದೊಂದು ಬಾರಿ 200+ ಸ್ಕೋರ್ ಬಾರಿಸಿದೆ. ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಬಾರಿ 200+ ಸ್ಕೋರ್ಗಳಿಸಿದ ತಂಡವೆಂಬ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನದಾಗಿಸಿಕೊಂಡಿದೆ. (PC: IPL)
ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ರಾಮಾಯಣ: ಪಾರ್ಟ್ 1’ (Ramayana) ಸಿನಿಮಾದ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾ ಬಗ್ಗೆ ಗಾಂಧಿನಗರದಿಂದ ಹಿಡಿದು ಬಾಲಿವುಡ್‌ವರೆಗೂ ಭಾರಿ ಚರ್ಚೆ ಶುರುವಾಗಿದೆ. ಈ ಬಿಗ್ ಬಜೆಟ್ ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ (ನವೆಂಬರ್ 5-6 ಸಮಯದಲ್ಲಿ) ತೆರೆಗೆ ಬರಲಿದೆ ಎಂದು ತಂಡ ಹೇಳಿತ್ತು. ಆದರೆ, ಈಗ ಸಿಗುತ್ತಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಅಂದುಕೊಂಡಿದ್ದಕ್ಕಿಂತ ಒಂದು ವಾರ ಮೊದಲೇ ಅಂದರೆ ಅಕ್ಟೋಬರ್ 30, 2026ರಂದೇ ಸಿನಿಮಾ ಥಿಯೇಟರ್‌ಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.
ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ದೀಪಾವಳಿ ಹಬ್ಬದ ರಜೆಯ ದಿನಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಆದರೆ, ಹಬ್ಬದ ವಾರದಲ್ಲೇ ರಿಲೀಸ್ ಮಾಡುವ ಬದಲು, ಒಂದು ವಾರ ಮೊದಲೇ ಸಿನಿಮಾ ರಿಲೀಸ್ ಮಾಡಿ ಸಿನಿಮಾಗೆ ಬಾಯ್ಮಾತಿನ ಪ್ರಚಾರ ನೀಡಲು ತಂಡ ಪ್ಲಾನ್ ಮಾಡಿಕೊಂಡಿದೆ ಎಂದು ವರದಿ ಆಗಿದೆ.
ಮೊದಲ ವಾರವೇ ಸಿನಿಮಾ ಭದ್ರವಾಗಿ ನೆಲೆಯೂರಿದರೆ, ಎರಡನೇ ವಾರದಲ್ಲಿ ಬರುವ ದೀಪಾವಳಿ ರಜೆಗಳ ಸರಣಿಯಲ್ಲಿ ಚಿತ್ರದ ಕಲೆಕ್ಷನ್ ಮೊದಲ ವಾರಕ್ಕಿಂತ ದುಪ್ಪಟ್ಟಾಗಲಿದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಸದ್ಯ ವಿತರಕರೊಂದಿಗೆ ಬರೋಬ್ಬರಿ 450 ಕೋಟಿ ಬಿಸಿನೆಸ್ ಮಾತುಕತೆ ನಡೆಯುತ್ತಿದ್ದು, ಡೀಲ್ ಕ್ಲೋಸ್ ಆದ ತಕ್ಷಣವೇ ಅಕ್ಟೋಬರ್ 30ರ ಹೊಸ ರಿಲೀಸ್ ಡೇಟ್ ಅಧಿಕೃತವಾಗಿ ಹೊರಬೀಳಲಿದೆ.
‘ಟಾಕ್ಸಿಕ್’ ಚಿತ್ರಕ್ಕೂ ಎದುರಾಯ್ತಾ ರಿಲೀಸ್ ಒತ್ತಡ?
‘ರಾಮಾಯಣ’ ಚಿತ್ರದ ಈ ಹೊಸ ಮಾಸ್ಟರ್ ಪ್ಲಾನ್‌ನಿಂದಾಗಿ ಈಗ ಯಶ್ ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ಮೇಲೂ ಇದರ ಪ್ರಭಾವ ಬೀರುವ ಸಾಧ್ಯತೆ ಇದೆ. ಯಶ್ ಅವರು ‘ರಾಮಾಯಣ’ದಲ್ಲಿ ರಾವಣನ ಪಾತ್ರ ಮಾಡುತ್ತಿರುವುದರಿಂದ, ಒಂದೇ ವರ್ಷ ಅವರ ಎರಡು ಬಿಗ್ ಸಿನಿಮಾಗಳು ಮುಖಾಮುಖಿಯಾಗುತ್ತಿವೆ. ಚಿತ್ರರಂಗದ ನಿಯಮದ ಪ್ರಕಾರ, ‘ರಾಮಾಯಣ’ ಅಕ್ಟೋಬರ್ ಕೊನೆಯಲ್ಲಿ ಬರುವುದರಿಂದ ಅದಕ್ಕೂ ಕನಿಷ್ಠ ಎರಡು ತಿಂಗಳು ಮೊದಲೇ, ಅಂದರೆ ಆಗಸ್ಟ್ ತಿಂಗಳಲ್ಲೇ ‘ಟಾಕ್ಸಿಕ್’ ಸಿನಿಮಾವನ್ನು ರಿಲೀಸ್ ಮಾಡಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಲಿದೆ. ಇಲ್ಲದಿದ್ದರೆ ಎರಡೂ ಚಿತ್ರಗಳ ಕಲೆಕ್ಷನ್ ಹಾಗೂ ಹೈಪ್ ಮೇಲೆ ಹೊಡೆತ ಬೀಳುವ ಆತಂಕವಿದೆ.
ನವದೆಹಲಿ, ಮೇ 23: ಬಿಜೆಪಿ ಅಧಿಕಾರದ ಗದ್ದುಗೆ ಏರಿರುವ ರಾಜ್ಯಗಳಲ್ಲಿ ಮೊದಲಿಗೆ ಸರ್ಕಾರ ಮಾಡುವ ಕೆಲಸವೇ ಗೋ ಹತ್ಯೆ(Cattle Slaughter) ನಿಷೇಧ. ಯಾರ ಒಪ್ಪಿಗೆ ಇರಲಿ ಬಿಡಲಿ ಜಾನುವಾರು ವಧೆಯನ್ನು ತಡೆಯುವುದೇ ಅವರ ಪ್ರಮುಖ ಗುರಿಯಾಗಿದೆ. ಹಾಗೆಯೇ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಜಾನುವಾರು ವಧೆ ನಿಷೇಧವನ್ನು ಜಾರಿಗೆ ತಂದಿದ್ದಾರೆ. ಬೇರೆ ರಾಜ್ಯಗಳಲ್ಲಿ ಮುಸ್ಲಿಮರು ಇದಕ್ಕೆ ಆಕ್ಷೇಪ ಎತ್ತಿದ್ದರೂ ಕೂಡ, ಪಶ್ಚಿಮ ಬಂಗಾಳದಲ್ಲಿ ಇದಕ್ಕೆ ಮುಸ್ಲಿಂ ಸಂಘಟನೆಗಳು ಸೇರಿದಂತೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ತಮ್ಮ ಹಬ್ಬಗಳಲ್ಲಿ ಗೋ ಹತ್ಯೆ ಮಾಡುವುದಿಲ್ಲ ಎಂದು ಹೇಳಿವೆ. ಆದರೆ ಅಚ್ಚರಿ ಎಂಬಂತೆ ಹಿಂದೂಗಳು ಗೋ ಹತ್ಯೆ ನಿಷೇಧದ ವಿರುದ್ಧ ಬೀದಿಗಿಳಿದಿದ್ದಾರೆ ಇದಕ್ಕೆ ಕಾರಣ ಇಲ್ಲಿದೆ.
ಪಶ್ಚಿಮ ಬಂಗಾಳದ ಹೊಸ ಸರ್ಕಾರವು ರಾಜ್ಯದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳ ವಧೆಯನ್ನು ನಿಷೇಧಿಸಿ, 1950ರ ಕಾನೂನು ಮತ್ತು ಕಲ್ಕತ್ತಾ ಹೈಕೋರ್ಟ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಮುಂಬರುವ ಬಕ್ರೀದ್ ಹಬ್ಬದ ಮುನ್ನವೇ ಜಾರಿಯಾಗಿರುವ ಈ ಕಠಿಣ ನಿಯಮಗಳಿಗೆ ತಡೆ ನೀಡಲು ಹೈಕೋರ್ಟ್ ಕೂಡ ನಿರಾಕರಿಸಿದೆ.
ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಆರಾಧ್ಯ ಬಚ್ಚನ್ ಎಂಟ್ರಿ
ಪ್ರತಿಷ್ಠಿತ ‘ಕಾನ್ ಫಿಲ್ಮ್ ಫೆಸ್ಟಿವಲ್ 2026’ರಲ್ಲಿ ಬಾಲಿವುಡ್‌ನ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಬಚ್ಚನ್ (Aaradhya Bachchan) ರೆಡ್ ಕಾರ್ಪೆಟ್ ಮೇಲೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪ್ರತಿ ವರ್ಷ ತಾಯಿಯ ಜೊತೆ ಕಾನ್ಗೆ ಭೇಟಿ ನೀಡುತ್ತಿದ್ದ ಆರಾಧ್ಯ, ಈ ಬಾರಿ ಅಧಿಕೃತವಾಗಿ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಲೊರಿಯಲ್ ಪ್ಯಾರಿಸ್‌ನ ವಾರ್ಷಿಕ ‘ಲೈಟ್ಸ್ ಆನ್ ವುಮೆನ್ಸ್ ವರ್ತ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ತಾಯಿ-ಮಗಳ ಜೋಡಿ ಜಾಗತಿಕ ಮಾಧ್ಯಮಗಳ ಗಮನ ಸೆಳೆದಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಆರಾಧ್ಯ ಬಚ್ಚನ್ ಕೆಂಪು ಬಣ್ಣದ ಗೌನ್ ಧರಿಸಿ ಕಂಗೊಳಿಸಿದರು. ಐಶ್ವರ್ಯಾ ರೈ ಗುಲಾಬಿ ಬಣ್ಣದ ಆಕರ್ಷಕ ಉಡುಪಿನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು. ಐಶ್ವರ್ಯಾ ಅವರ ಡ್ರೆಸ್ ಹೂವಿನ ಅಲಂಕಾರದಿಂದ ಕೂಡಿದ್ದು, ಎಂದಿನ ತಮ್ಮ ಸಿಗ್ನೇಚರ್ ರೆಡ್ ಲಿಪ್ಸ್ಟಿಕ್ ಬದಲಿಗೆ ಈ ಬಾರಿ ಲೈಟ್ ಮೇಕ್ಅಪ್ ಲುಕ್‌ನಲ್ಲಿ ಎಲ್ಲರ ಮನ ಗೆದ್ದರು. ಸದ್ಯ ಇವರಿಬ್ಬರ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.
ವಿರಾಟ್ ಕೊಹ್ಲಿ vs ಟ್ರಾವಿಸ್ ಹೆಡ್ ಜಟಾಪಟಿಗೆ ಇದುವೇ ಅಸಲಿ ಕಾರಣ..!
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ 67ನೇ ಪಂದ್ಯವು ಹೈಡ್ರಾಮಾಗೆ ಸಾಕ್ಷಿಯಾಗಿದೆ. ಈ ಹೈಡ್ರಾಮಾದ ಪಾತ್ರಧಾರಿಗಳು ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್. ಇಬ್ಬರ ನಡುವೆ ಪಂದ್ಯದ ವೇಳೆ ಶುರುವಾದ ವಾಕ್ಸಮರ ಪಂದ್ಯ ಮುಗಿದ ಬಳಿಕ ಕೂಡ ಮುಂದುವರೆದದ್ದು ವಿಪರ್ಯಾಸ. ಅಷ್ಟಕ್ಕೂ ವಿರಾಟ್ ಕೊಹ್ಲಿ – ಟ್ರಾವಿಸ್ ಹೆಡ್ ಜಟಾಪಟಿಗೆ ಕಾರಣವೇನು? ಎಂದು ನೋಡುವುದಾದರೆ.
ವಿರಾಟ್ ಕೊಹ್ಲಿಯ ಸಂಭ್ರಮ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ (26) ರಾಸಿಖ್ ಸಲಾಮ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಔಟಾಗಿ ಹೊರ ನಡೆಯುತ್ತಿದ್ದ ಹೆಡ್ ಅವರ ಮುಂದೆ ಆಕ್ರೋಶಭರಿತರಾಗಿ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಇದಾಗ್ಯೂ ಟ್ರಾವಿಸ್ ಹೆಡ್ ಯಾವುದೇ ತಿರುಗೇಟು ನೀಡಿರಲಿಲ್ಲ.
ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್ನ 67ನೇ ಪಂದ್ಯವು ಕೇವಲ ರನ್‌ಗಳ ಮಳೆಯಿಂದಷ್ಟೇ ಅಲ್ಲ, ಇಬ್ಬರು ಜಾಗತಿಕ ಕ್ರಿಕೆಟ್ ದಿಗ್ಗಜರ ವಾಕ್ಸಮರದಿಂದ ಇಡೀ ವಿಶ್ವದ ಗಮನ ಸೆಳೆದಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಹಾಗೂ ಪಂದ್ಯದ ಬಳಿಕ ಕೊಹ್ಲಿ ನಡೆದುಕೊಂಡು ರೀತಿ ಇದೀಗ ಚರ್ಚಾ ವಿಷಯವಾಗಿದೆ.
ಎಸ್‌ಆರ್‌ಎಚ್ ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್ ಮುಂದೆಯೇ ಅತ್ಯಂತ ಆಕ್ರಮಣಕಾರಿಯಾಗಿ ಕಿರುಚಾಡಿ ಸಂಭ್ರಮಿಸಿದ್ದರು.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ 67ನೇ ಪಂದ್ಯವು ಹೈಡ್ರಾಮಾಗೆ ಸಾಕ್ಷಿಯಾಗಿದೆ. ಈ ಹೈಡ್ರಾಮಾದ ಪಾತ್ರಧಾರಿಗಳು ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್. ಇಬ್ಬರ ನಡುವೆ ಪಂದ್ಯದ ವೇಳೆ ಶುರುವಾದ ವಾಕ್ಸಮರ ಪಂದ್ಯ ಮುಗಿದ ಬಳಿಕ ಕೂಡ ಮುಂದುವರೆದದ್ದು ವಿಪರ್ಯಾಸ. ಅಷ್ಟಕ್ಕೂ ವಿರಾಟ್ ಕೊಹ್ಲಿ – ಟ್ರಾವಿಸ್ ಹೆಡ್ ಜಟಾಪಟಿಗೆ ಕಾರಣವೇನು? ಎಂದು ನೋಡುವುದಾದರೆ…
ವಿರಾಟ್ ಕೊಹ್ಲಿಯ ಸಂಭ್ರಮ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ (26) ರಾಸಿಖ್ ಸಲಾಮ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಔಟಾಗಿ ಹೊರ ನಡೆಯುತ್ತಿದ್ದ ಹೆಡ್ ಅವರ ಮುಂದೆ ಆಕ್ರೋಶಭರಿತರಾಗಿ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಇದಾಗ್ಯೂ ಟ್ರಾವಿಸ್ ಹೆಡ್ ಯಾವುದೇ ತಿರುಗೇಟು ನೀಡಿರಲಿಲ್ಲ.
ಹೆಡ್ ಸವಾಲು: 256 ರನ್‌ಗಳ ಕಠಿಣ ಗುರಿ ಬೆನ್ನತ್ತಲು ಬಂದ ವಿರಾಟ್ ಕೊಹ್ಲಿಗೆ ಆಕ್ರಮಣಕಾರಿಯಾಗಿ ಆಡುವಂತೆ ಟ್ರಾವಿಸ್ ಹೆಡ್ ಸವಾಲು ಹಾಕಿದ್ದಾರೆ. ಅಂದರೆ ಈ ಪಂದ್ಯದಲ್ಲಿ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಈ ವೇಳೆ ಬಿಗ್ ಶಾಟ್ ಆಡು ನೋಡೋಣ ಎಂದು ಹೆಡ್ ಕೆಣಕಿದ್ದಾರೆ.
ಕೊಹ್ಲಿ ತಿರುಗೇಟು:ಟ್ರಾವಿಸ್ ಹೆಡ್ ಸವಾಲಿಗೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ, “ಈಗ ನೀನು ಇಂಪ್ಯಾಕ್ಟ್ ಸಬ್ ಆಟಗಾರ ಅಲ್ಲ, ಬಂದು ಎರಡು ಓವರ್ ಬೌಲಿಂಗ್ ಮಾಡು” ಎಂದು ವ್ಯಂಗ್ಯವಾಡಿದ್ದಾರೆ.
ಹೆಡ್ ಕಿಚಾಯಿಸುವಿಕೆ:ಈ ಮಾತಿನ ಚಕಮಕಿ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ(15) ಔಟ್ ಆಗಿದ್ದಾರೆ. ಇತ್ತ ಕೊಹ್ಲಿ ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಹೆಡ್, “ಫ್ರೆಂಡ್, ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ನೀನು ಔಟ್ ಆಗಿ ಹೋದೆ!” ಎಂದು ಕಿಚಾಯಿಸಿದ್ದಾರೆ.
ಈ ವಾಕ್ಸಮರ ಇಲ್ಲಿಗೆ ಮುಗಿಯಬೇಕಿತ್ತು. ಆದರೆ ವಿರಾಟ್ ಕೊಹ್ಲಿ ಪಂದ್ಯದ ನಂತರ ಕೂಡ ಈ ಕೋಪ-ತಾಪವನ್ನು ಮುಂದುವರೆಸಿದ್ದರು.
ಶೇಕ್ ಹ್ಯಾಂಡ್ ನೀಡದ ಕೊಹ್ಲಿ:
ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ 55 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಲು ಮೈದಾನಕ್ಕೆ ಬಂದರು. ಈ ವೇಳೆ ಟ್ರಾವಿಸ್ ಹೆಡ್ ಕೈ ಚಾಚಿದರೂ, ವಿರಾಟ್ ಕೊಹ್ಲಿ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮುಖ ತಿರುಗಿಸಿಕೊಂಡು ನೇರವಾಗಿ ಪ್ಯಾಟ್ ಕಮಿನ್ಸ್ ಕಡೆಗೆ ನಡೆದು ಹೋದರು. ಅಂದರೆ ಹೆಡ್ಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದರು.
ಇದೀಗ ವಿರಾಟ್ ಕೊಹ್ಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಮೈದಾನದಲ್ಲಿ ಎಷ್ಟೇ ತೀವ್ರವಾದ ಪೈಪೋಟಿ, ವೈಷಮ್ಯ ಅಥವಾ ಸ್ಲೆಡ್ಜಿಂಗ್ ನಡೆದಿದ್ದರೂ, ಪಂದ್ಯ ಮುಗಿದ ತಕ್ಷಣ ಆಟಗಾರರು ಕೈಕುಲುಕುವ ಮೂಲಕ ಆ ಎಲ್ಲ ಕಹಿ ಘಟನೆಗಳನ್ನು ಮೈದಾನದಲ್ಲೇ ಬಿಟ್ಟು ಬರಬೇಕು ಎಂಬುದು ಕ್ರಿಕೆಟ್‌ನ ಅಲಿಖಿತ ನಿಯಮ.
ಟ್ರಾವಿಸ್ ಹೆಡ್ ಪಂದ್ಯದ ನಂತರ ಹಳೆಯದ್ದನ್ನು ಮರೆತು ಕೈ ಚಾಚಿದಾಗ, ಕೊಹ್ಲಿ ಅದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಿದ್ದು ಕ್ರೀಡೆಯ ಮೂಲ ಆಶಯಕ್ಕೆ ಧಕ್ಕೆ ತಂದಿದೆ.
ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ, ಅವರು ಜಾಗತಿಕ ಕ್ರಿಕೆಟ್‌ನ ಅತಿ ದೊಡ್ಡ ಐಕಾನ್. ಕೋಟ್ಯಂತರ ಯುವ ಕ್ರಿಕೆಟಿಗರು ಅವರನ್ನು ರೋಲ್ ಮಾಡೆಲ್ ಆಗಿ ನೋಡುತ್ತಾರೆ.
ಇಂತಹ ಹಿರಿಯ ಆಟಗಾರನೇ ಮೈದಾನದಲ್ಲಿ ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡು ವರ್ತಿಸಿದರೆ, ಅದು ಉದಯೋನ್ಮುಖ ಆಟಗಾರರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ಆವೇಶ, ಆಕ್ರೋಶಗಳು ಸಹಜ. ಆದರೆ ಪಂದ್ಯ ಮುಗಿದ ಬಳಿಕ ಪರಸ್ಪರ ಹಸ್ತಲಾಘವ ಮಾಡುವುದು ಕೇವಲ ಶಿಷ್ಟಾಚಾರವಲ್ಲ, ಅದು ಕ್ರೀಡೆಗೆ ನೀಡುವ ಗೌರವ. ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ಈ ಮುನಿಸು ಐಪಿಎಲ್ ಇತಿಹಾಸದ ಕಹಿ ಘಟನೆಗಳ ಸಾಲಿಗೆ ಸೇರಿದ್ದರೂ, ಮುಂಬರುವ ಪಂದ್ಯಗಳಲ್ಲಿ ಇಬ್ಬರೂ ಹಳೆಯದ್ದನ್ನು ಮರೆತು ಕ್ರೀಡಾ ಸ್ಫೂರ್ತಿ ಮೆರೆಯಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.