ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ ಋತ್ ಪ್ರಭು? – Kannada News | Samantha Ruth Prabhu and Raj Nidhimoru expecting their first child

ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ. ಇತ್ತೀಚೆಗಷ್ಟೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ತೆರೆಗೆ ಬಂದಿದ್ದು, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಇದೊಂದು ಆಕ್ಷನ್ ಉಳ್ಳ ಫ್ಯಾಮಿಲಿ ಡ್ರಾಮಾ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಮಂತಾ, ಈ ಸಿನಿಮಾನಲ್ಲಿ ಸಖತ್ ಆಗಿ ಆಕ್ಷನ್ ಮಾಡಿದ್ದಾರೆ. ಸಮಂತಾ ಅಭಿಮಾನಿಗಳ ಜೊತೆಗೆ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ನೋಡುತ್ತಿದ್ದಾರೆ. ಈ ಖುಷಿಯ ಸುದ್ದಿಯ ನಡುವೆಯೇ ಸಮಂತಾ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ನಟಿ ಸಮಂತಾ, ಪತಿ ಹಾಗೂ ಚಿತ್ರತಂಡದ ಜೊತೆಗೆ ಆಚರಿಸಿಕೊಂಡರು. ಸಂಭ್ರಾಮಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಅದರ ಬೆನ್ನಲ್ಲೆ ಸಮಂತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಲು ಆರಂಭವಾಗಿದೆ. ಸಂಭ್ರಮಾಚರಣೆಯ ಫೋಟೊ, ವಿಡಿಯೋಗಳಲ್ಲಿ ಸಮಂತಾರ ಬೇಬಿ ಬಂಪ್ ಗಮನಿಸಿರುವ ನೆಟ್ಟಿಗರು, ಸಮಂತಾರ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಇದೀಗ ವೈರಲ್ ಆಗಿರುವ ಚಿತ್ರ, ವಿಡಿಯೋಗಳಲ್ಲಿ ಸಮಂತಾ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿದ್ದು, ಅವರ ‘ಬೇಬಿ ಬಂಪ್’ ಕಾಣಿಸುತ್ತಿದೆ. ಅದು ಮಾತ್ರವೇ ಅಲ್ಲದೆ, ಸಮಂತಾರ ಆಪ್ತರು ಕೆಲವರು ಸಹ ಸಮಂತಾ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಮಾಧ್ಯಮಗಳಿಗೆ ಖಚಿತ ಪಡಿಸಿರುವುದಾಗಿಯೂ ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ:ಸಮಂತಾ ಋತ್ ಪ್ರಭುವನ್ನು ಕೊಂಡಾಡಿದ ಬಾಲಿವುಡ್ ಸ್ಟಾರ್ ನಿರ್ದೇಶಕ

ಸಮಂತಾ ಹಾಗೂ ನಿರ್ದೇಶಕ ರಾಜ್ ನಿದಿಮೋರು ಕೆಲ ವರ್ಷಗಳಿಂದ ಡೇಟಿಂಗ್​​ನಲ್ಲಿದ್ದರು. ಬಳಿಕ ಕಳೆದ ವರ್ಷ ಡಿಸೆಂಬರ್‌ನಲ್ಲಿ ಇವರಿಬ್ಬರೂ ಸರಳವಾಗಿ ಇಶಾ ಸೆಂಟರ್​​ನಲ್ಲಿ ವಿವಾಹವಾದರು. ಇದೀಗ ಈ ಇಬ್ಬರೂ ಪೋಷಕರಾಗುತ್ತಿದ್ದಾರೆ. ಅಂದಹಾಗೆ ಇಬ್ಬರಿಗೂ ಇದು ಎರಡನೇ ಮದುವೆ. ಸಮಂತಾ ಈಗಾಗಲೇ ನಾಗ ಚೈತನ್ಯ ಜೊತೆ ವಿವಾಹವಾಗಿ ಬಳಿಕ ವಿಚ್ಛೇದನ ಪಡೆದುಕೊಂಡರು. ಅವರಿಗೆ ಮಕ್ಕಳಿರಲಿಲ್ಲ. ರಾಜ್ ನಿಧಿಮೋರು ಸಹ ಮದುವೆಯಾಗಿ ಬಹಳ ವರ್ಷಗಳೇ ಆಗಿದ್ದವು. ಇತ್ತೀಚೆಗಷ್ಟೆ ಅವರು ಪತ್ನಿಯಿಂದ ವಿಚ್ಛೇದನ ಪಡೆದುಕೊಂಡರು. ಆದರೆ ಅವರಿಗೂ ಸಹ ಮೊದಲ ಮದುವೆಯಿಂದ ಮಕ್ಕಳಿಲ್ಲ.

ಸಮಂತಾ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಂತೆ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿಯಂತೆ. ನಾಗ ಚೈತನ್ಯ ಜೊತೆಗಿದ್ದಾಗಲೇ ಸಮಂತಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ಅದು ಸುಳ್ಳಾಯ್ತು. ಇದೀಗ ರಾಜ್ ಜೊತೆಗೆ ಇರುವ ಸಮಂತಾ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯಲ್ಲೊಂದು ಬೇಬಿ ಬಜಾರ್! 8 ಲಕ್ಷಕ್ಕೆ ಗಂಡು ಮಗು, 4 ಲಕ್ಷಕ್ಕೆ ಹೆಣ್ಣು ಮಗು ಮಾರಾಟ – Kannada News | Baby Bazaar in Delhi Baby Boys Sold for Rs 8 Lakh and Girls for Rs 4 Lakh Child Trafficking

ನವದೆಹಲಿ, ಜೂನ್ 20: ಹೆತ್ತ ಮಕ್ಕಳನ್ನು ಹಣಕ್ಕೆ ಬೇರೆಯವರಿಗೆ ಮಾರಾಟ ಮಾಡಲು ಯಾರಿಗಾದರೂ ಮನಸು ಬರುತ್ತದೆಯೇ? ಆದರೆ, ದುಡ್ಡಿನ ಆಸೆಗೆ ಇಂತಹ ನೀಚ ಕೃತ್ಯಕ್ಕೆ ದೆಹಲಿಯ (Delhi) ಸುತ್ತಮುತ್ತಲಿನ ಅನೇಕ ರಾಜ್ಯಗಳ ಪೋಷಕರು ಮುಂದಾಗಿದ್ದಾರೆ. ದೆಹಲಿಯಲ್ಲಿ ‘ಬೇಬಿ ಬಜಾರ್’ ಸೃಷ್ಟಿಯಾಗಿದ್ದು, ಇಲ್ಲಿ ಗಂಡು ಮಗುವಿಗೆ 8 ಲಕ್ಷ ರೂ.ವರೆಗೂ ನೀಡಿ ಖರೀದಿಸಲಾಗುತ್ತಿದೆ. ಅದರ ಅರ್ಧ ಬೆಲೆಗೆ ಹೆಣ್ಣು ಮಗುವನ್ನು ಮಾರಾಟ ಮಾಡಲಾಗುತ್ತಿದೆ.

ಪೊಲೀಸ್ ತನಿಖೆಯ ಪ್ರಕಾರ, ಈ ಕರಾಳ ದಂಧೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ದರ ನಿಗದಿಪಡಿಸಲಾಗಿತ್ತು. ಬಡ ಪೋಷಕರಿಂದ ಸುಮಾರು 1 ಲಕ್ಷ ರೂ.ಗೆ ಹೆಣ್ಣು ಮಗುವನ್ನು ಪಡೆದು, ಮಕ್ಕಳಿಲ್ಲದ ದಂಪತಿಗಳಿಗೆ 3ರಿಂದ 4 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಸುಮಾರು 2 ಲಕ್ಷ ರೂ.ಗೆ ಗಂಡು ಮಗುವನ್ನು ಖರೀದಿಸಿ, 6ರಿಂದ 8 ಲಕ್ಷ ರೂಪಾಯಿವರೆಗಿನ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿತ್ತು.

ದೆಹಲಿಯ ಪಹಾರ್‌ಗಂಜ್ ನಿವಾಸಿಯೊಬ್ಬರು ನೀಡಿದ ಸುಳಿವು ಈ ಯಶಸ್ವಿ ಕಾರ್ಯಾಚರಣೆಗೆ ಕಾರಣವಾಯಿತು. ಜ್ಯೋತಿ ಎಂಬ ಮಹಿಳೆ ಪ್ರತಿ ಬಾರಿ ಬೇರೆ ಬೇರೆ ಹಸುಗೂಸುಗಳೊಂದಿಗೆ ಆ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತನಿಖೆ ನಡೆಸಿದಾಗ ಈಕೆ ಹಸುಗೂಸುಗಳ ಮಾರಾಟ ದಂಧೆಯಲ್ಲಿ ತೊಡಗಿರುವುದು ಖಚಿತವಾಯಿತು.

ಇದನ್ನೂ ಓದಿ: ನೀಟ್ ಮರು ಪರೀಕ್ಷೆಗೂ ಮುನ್ನ ‘ಟೆಲಿಗ್ರಾಮ್’ ನಿಷೇಧ ಮುಂದುವರಿಕೆ: ಕೇಂದ್ರದ ನಿರ್ಧಾರ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಹೀಗಾಗಿ, ಈ ದಂಧೆಯನ್ನು ಬಯಲು ಮಾಡಬೇಕೆಂದು ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಮಗು ಬೇಕೆಂದು ನಕಲಿ ಗ್ರಾಹಕಿಯಾಗಿ ಜ್ಯೋತಿಯನ್ನು ಸಂಪರ್ಕಿಸಿದರು. 20,000 ರೂ. ಮುಂಗಡ ಹಣ ನೀಡಿ ಮಗುವನ್ನು ಪಡೆಯುವಾಗ, ಜೂನ್ 5ರಂದು ಆಕೆಯನ್ನು ಸ್ಥಳದಲ್ಲೇ ಬಂಧಿಸಲಾಯಿತು. ಆಕೆಯನ್ನು ವಿಚಾರಣೆ ನಡೆಸಿದಾಗ ಈ ಶಿಶು ಮಾರಾಟ ಜಾಲದ ಬಗ್ಗೆ ಎಲ್ಲವೂ ಬಯಲಾಯಿತು.

ಇದರ ಬೆನ್ನಲ್ಲೇ ಆಕೆಯ ಸಹಚರರಾದ ಶಾಲು, ಲಲಿತ್, ಪ್ರತಿಭಾ ಮತ್ತು ವಿಪಿನ್ ಎಂಬುವವರನ್ನು ಪೊಲೀಸರು ಬಂಧಿಸಿದರು. ಪ್ರತಿಭಾ ಮತ್ತು ವಿಪಿನ್ ಬಂಧನಕ್ಕೊಳಗಾದಾಗ ಅವರ ಬಳಿ 3 ಲಕ್ಷ ರೂಪಾಯಿ ಪತ್ತೆಯಾಯಿತು. ಸತತ ತನಿಖೆಯ ನಂತರ ಪೊಲೀಸರು ಒಂದು ತಿಂಗಳೊಳಗಿನ 5 ಹಸುಗೂಸುಗಳನ್ನು ರಕ್ಷಿಸಿದರು. ಆರೋಪಿಗಳ ವಿಚಾರಣೆಯಿಂದ ರೋಹಿಣಿಯ ಬೇಗಂಪುರದಲ್ಲಿರುವ ‘ಹೀರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ಈ ದಂಧೆಯ ಪ್ರಮುಖ ಕೇಂದ್ರ ಮತ್ತು ಅದರ ಮಾಲೀಕ ಡಾ. ವಿವೇಕಿ ಇದರ ಸೂತ್ರಧಾರಿ ಎಂಬುದು ತಿಳಿದುಬಂದಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ದೆಹಲಿಯ ಡಿಸಿಪಿ ರೋಹಿತ್ ರಾಜ್‌ಬೀರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, “ಖರೀದಿಸಿದ ಮಕ್ಕಳನ್ನು ದಂಪತಿಗಳಿಗೆ ತಲುಪಿಸುವವರೆಗೆ ಇದೇ ಆಸ್ಪತ್ರೆಯಲ್ಲಿ ಇಡಲಾಗುತ್ತಿತ್ತು. ಡಾ. ವಿವೇಕಿ ಮಕ್ಕಳ ನಕಲಿ ಜನನ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಸೃಷ್ಟಿಸಿ, ಮಗು ಆಸ್ಪತ್ರೆಯಲ್ಲೇ ಜನಿಸಿದೆ ಎಂದು ಬಿಂಬಿಸುತ್ತಿದ್ದರು. ಅವರೇ ಈ ದಂಧೆಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು” ಎಂದಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರ ಜಾಲ ಪತ್ತೆ; 7 ಮಂದಿ ಬಂಧನ

ಈ ಪ್ರಕರಣದಲ್ಲಿ ಗುಜರಾತ್‌ನ ಸಬರಕಾಂಠಾದಲ್ಲಿ ಸಬಾಭಾಯ್ ಗಮಾರ್ ಅಲಿಯಾಸ್ ಕಾಲಿಯಾ ಎಂಬಾತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈತ ರಾಜಸ್ಥಾನದ ಪಾಲಿ ಮತ್ತು ಗುಜರಾತ್‌ನ ಬಡ ಕುಟುಂಬಗಳಿಂದ ಮಕ್ಕಳನ್ನು ತಂದು ದೆಹಲಿಯ ಆಸ್ಪತ್ರೆಗೆ ತಲುಪಿಸುತ್ತಿದ್ದ. ಈ ಗ್ಯಾಂಗ್ ಕಳೆದ 1 ವರ್ಷದಲ್ಲಿ ಕನಿಷ್ಠ 30 ಮಕ್ಕಳನ್ನು ಮಾರಾಟ ಮಾಡಿದೆ. ಹರಿಯಾಣದ ಪಾಣಿಪತ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಕ್ಕಳನ್ನು ಖರೀದಿಸಿದ್ದ ದಂಪತಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳನ್ನು ಮಾರಿದ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎನ್​ಡಿಟಿವಿ ವರದಿಯಲ್ಲಿ ತಿಳಿಸಿದೆ.

ಈ ಕಾರ್ಯಾಚರಣೆಯಲ್ಲಿ ರಕ್ಷಿಸಲಾದ 5 ಹಸುಗೂಸುಗಳನ್ನು ಮಕ್ಕಳ ಕಲ್ಯಾಣ ಸಮಿತಿಯ (CWC) ಪಾಲನಾ ಕೇಂದ್ರದಲ್ಲಿ ಸುರಕ್ಷಿತವಾಗಿಡಲಾಗಿದ್ದು, ಕಾನೂನುಬದ್ಧ ದತ್ತು ಪ್ರಕ್ರಿಯೆ ಅಥವಾ ಮಕ್ಕಳ ಹೋಮ್‌ಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯಾಹ್ನ 1 ಗಂಟೆಯಾಯಿತೆಂದು ಹಸಿವಿಲ್ಲದಿದ್ದರೂ ಊಟ ಮಾಡುವವರು ಈ ಸತ್ಯಗಳನ್ನು ತಿಳಿದುಕೊಳ್ಳಬೇಕು! – Kannada News | Hunger vs Clock: What’s the Right Time to Eat for Better Health?

ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಅನೇಕರು ನಿಗದಿತ ಸಮಯಕ್ಕೆ ಊಟ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಸಮಯವಾಯಿತು ಎಂದು ಹಸಿವಿಲ್ಲದಿದ್ದರೂ ಊಟ ಮಾಡುವುದು ಆರೋಗ್ಯಕರವೇ? ಇಂತಹ ಪ್ರಶ್ನೆ ನಿಮಗೂ ಕಾಡಿದ್ದರೆ ಅದಕ್ಕೆ ಉತ್ತರ ಈ ಸ್ಟೋರಿಯಲ್ಲಿದೆ. ಪೌಷ್ಟಿಕ ತಜ್ಞರ ಪ್ರಕಾರ, ಗಡಿಯಾರಕ್ಕಿಂತ ದೇಹ ನೀಡುವ ಹಸಿವಿನ ಸಂಕೇತಗಳಿಗೆ ಹೆಚ್ಚು ಮಹತ್ವ ನೀಡಬೇಕು. ಹೌದು, ಊಟ ಮಾಡಬೇಕು ಎಂದು ಮಾಡುವುದಕ್ಕೂ ಹಸಿವಾದಾಗ ಊಟ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಹಾಗಾದರೆ ದೇಹ ಹಸಿವಾಗದ ಯಾವ ರೀತಿಯ ಸಂಕೇತಗಳನ್ನು ನೀಡುತ್ತದೆ, ಹಸಿವಿಲ್ಲದಿದ್ದಾಗ ಊಟ ಬಿಡಬಹುದೇ ಮತ್ತು ಹಸಿವು (Hunger) ಕಡಿಮೆ ಇದ್ದಾಗ ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹ ನೀಡುವ ಹಸಿವಿನ ಸಂಕೇತಗಳನ್ನು ಗಮನಿಸಿ

ನಮ್ಮ ದೇಹಕ್ಕೆ ಶಕ್ತಿ ಅಗತ್ಯವಾದಾಗ ಅದು ಹಸಿವಿನ ಮೂಲಕ ಸೂಚನೆ ನೀಡುತ್ತದೆ. ಹೊಟ್ಟೆ ತುಂಬಿರುವಾಗ ಅಥವಾ ಜೀರ್ಣಕ್ರಿಯೆ ನಡೆಯುತ್ತಿರುವಾಗ ಬಲವಂತವಾಗಿ ಆಹಾರ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ಇದರಿಂದ ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ಉಬ್ಬರ ಹಾಗೂ ತೂಕ ಹೆಚ್ಚಳದಂತಹ ಸಮಸ್ಯೆಗಳು ಉಂಟಾಗಬಹುದು.

ಹಸಿವಿಲ್ಲವೆಂದು ಊಟವನ್ನು ಸಂಪೂರ್ಣ ಬಿಡಬಹುದೇ?

ಹಸಿವಿಲ್ಲ ಎಂದು ಮಧ್ಯಾಹ್ನದ ಅಥವಾ ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದೂ ಸರಿಯಲ್ಲ. ಹೆಚ್ಚು ಹೊತ್ತು ಹೊಟ್ಟೆ ಖಾಲಿ ಇದ್ದರೆ ನಂತರ ಅತಿಯಾದ ಹಸಿವು ಕಾಣಿಸಿಕೊಂಡು ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತ ಉಂಟುಮಾಡಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಆರೋಗ್ಯಕರ ಜೀವನ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಹಸಿವು ಕಡಿಮೆ ಇದ್ದಾಗ ಏನು ಮಾಡಬೇಕು?

  • ಪೂರ್ಣ ಊಟ ಮಾಡಲು ಮನಸ್ಸಿಲ್ಲದಿದ್ದರೆ ಹಗುರವಾದ ಆಹಾರಗಳನ್ನು ಆಯ್ಕೆ ಮಾಡಬಹುದು.
  • ತಾಜಾ ಹಣ್ಣು, ತರಕಾರಿ ಸಲಾಡ್ ಅಥವಾ ಓಟ್ಸ್ ಸೇವಿಸಬಹುದು.
  • ಮಜ್ಜಿಗೆ ಅಥವಾ ಎಳನೀರನ್ನು ಕುಡಿಯುವುದು ಉತ್ತಮ.
  • ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತವೆ ಮತ್ತು ಜೀರ್ಣಕ್ರಿಯೆಗೆ ಹೆಚ್ಚಿನ ಒತ್ತಡ ನೀಡುವುದಿಲ್ಲ

ಒಂದು ಅಥವಾ ಎರಡು ದಿನ ಹಸಿವು ಕಡಿಮೆಯಾಗುವುದು ಸಾಮಾನ್ಯ. ಆದರೆ ಪ್ರತಿದಿನವೂ ಹಸಿವಾಗದಿದ್ದರೆ ಅಥವಾ ಆಹಾರ ತಿನ್ನುವ ಆಸಕ್ತಿ ಇಲ್ಲದಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಜೀರ್ಣಾಂಗ ಸಮಸ್ಯೆಗಳು, ಯಕೃತ್ತಿನ ತೊಂದರೆಗಳು, ಹಾರ್ಮೋನ್ ಅಸಮತೋಲನ ಅಥವಾ ಮಾನಸಿಕ ಒತ್ತಡ ಇದಕ್ಕೆ ಕಾರಣವಾಗಿರಬಹುದು. ಇಂತಹ ಲಕ್ಷಣಗಳು ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಯಲ್ಲಿ ಮುಂಗಾರು ಚುರುಕು, ಉ.ಕ ಜಿಲ್ಲೆಗಳಲ್ಲಿ ಬಿಸಿ ಗಾಳಿ: 5 ದಿನದ ವರದಿ ಹೀಗಿದೆ – Kannada News | Next 5 days Rainfall forecast In Karnataka, here Is regional weather Report

ಬೆಂಗಳೂರು, (ಜೂನ್ 20)): ಕರ್ನಾಟಕದಲ್ಲಿ  ಮುಂಗಾರು (Monsoon Rain) ದುರ್ಬಲಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು (Karavali And Malenadu)  ಭಾಗದ ಜಿಲ್ಲೆಗಳಲ್ಲೂ ಈ ಬಾರಿ ಮಳೆ ದೂರವಾಗಿದೆ. ಇದರ ಮಧ್ಯೆಯೂ ಸಹ ಮುಂದಿನ ಐದು ಅಂದರೆ ಜೂನ್ 25ರವರೆಗೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಸ್ತುತ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸಾಮಾನ್ಯವಾಗಿದ್ದು, ಮುಂದಿನ ವಾರದಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ

ಮುಂದಿನ 5 ದಿನ ರಾಜ್ಯದ ಹಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ನಂತರ ಗುಡುಗು ಸಹಿತ ಬಿರುಗಾಳಿ ಮಳೆಯಾಗಬಹುದು. ಇನ್ನು ಜೂನ್ 22ರಂದು ಮುಂಗಾರು ಮಾರುತಗಳು ಚುರುಕಾಗುವುದರಿಂದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆ ಇದೆ. ಜೂನ್ 23 ರಿಂದ 25ರಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಪ್ರಾದೇಶಿಕವಾರು ಹವಾಮಾನ ಮುನ್ಸೂಚನೆ

ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂನ್ 22 ರಿಂದ ಈ ಭಾಗಗಳಲ್ಲಿ ಮುಂಗಾರು ತೀವ್ರಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 21ರಿಂದ 24 ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜೂನ್ 22 ಮತ್ತು 23ರಂದು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡು

ಮುಂದಿನ ಎರಡು ದಿನಗಳಲ್ಲಿ ಬೆಳಗಾವಿ, ರಾಯಚೂರು, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆ ನೀಡಲಾಗಿದ್ದು, ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ.

ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಒಂದು ಅಥವಾ ಎರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ) ಜಿಲ್ಲೆಗಳ ಒಂದು ಅಥವಾ ಎರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Father’s Day Special: ವಿಶ್ವ ಅಪ್ಪಂದಿರ ದಿನದಂದು ನಿಮ್ಮ ತಂದೆಗಾಗಿ ಮಾಡಿ ಆರೋಗ್ಯಕರ ರಾಗಿ ಕೇಕ್‌ – Kannada News | Father’s Day Special: Make a healthy Finger millet cake for your dad on Father’s Day

ನಮ್ಮ ಜೀವನದ ನಿಜವಾದ ಸೂಪರ್ ಹೀರೋ ತಂದೆಯೇ (Father) ಎಂಬುದನ್ನು ಅಲ್ಲಗಳೆಯುವಂತಿಲ್ಲ. ತನ್ನ ಆಸೆ ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುವ ಶ್ರಮಜೀವಿ, ತ್ಯಾಗಮಯಿ  ಎಂದರೆ ಅದು ಅಪ್ಪ ಮಾತ್ರ.  ಇಂತಹ ತಂದೆಯ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ತಂದೆಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮಕ್ಕಳು ತಮ್ಮ ತಂದೆಗೆ ಗಿಫ್ಟ್‌ ನೀಡುವ ಮೂಲಕ ಅವರನ್ನು ಖುಷಿ ಪಡಿಸುತ್ತಾರೆ. ಈ ಬಾರಿಯ ಫಾದರ್ಸ್‌ ಡೇಯಂದು ಅಪ್ಪನಿಗೆ ಏನಾದರೂ ವಿಶೇಷವಾದದ್ದನ್ನು ನೀಡಿ ಅಚ್ಚರಿಗೊಳಿಸಬೇಕೆಂದು ಬಯಸಿದರೆ ನೀವು ನಿಮ್ಮ ಕೈಯಾರೇ ಅವರಿಗಾಗಿ ರಾಗಿ ಕೇಕ್‌ ತಯಾರಿಸಿ. ಈ ಕೇಕ್‌ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

ಫಾದರ್ಸ್‌ ಡೇ ಸ್ಪೆಷಲ್‌ ರಾಗಿ ಕೇಕ್‌:

ರಾಗಿ ಕೇಕ್ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.  ಕ್ಯಾಲ್ಸಿಯಂ, ಪ್ರೋಟೀನ್‌ನಿಂದ ಸಮೃದ್ಧವಾಗಿರುವ ರಾಗಿ ಪೋಷಕಾಂಶಗಳ ನಿಧಿಯಾಗಿದೆ. ಇದರಿಂದ ತಯಾರಿಸಿದ ಕೇಕ್‌ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೃತಕ ಸಿಹಿಕಾರಕ ಹಾಗೂ ಕೃತಕ ಬಣ್ಣಗಳನ್ನು ಹೊಂದಿರುವ ಕೇಕ್‌ಗಳನ್ನು ಅಂಗಡಿಯಿಂದ ತರುವ ಬದಲು ಫಾದರ್ಸ್‌ ಡೇ ದಿನ ನಿಮ್ಮ ತಂದೆಗಾಗಿ ನೀವು ಆರೋಗ್ಯಕರ ರಾಗಿ ಕೇಕ್‌ ಅನ್ನು ಮನೆಯನ್ನೇ ತಯಾರಿಸಿ.

ರಾಗಿ ಕೇಕ್ ಮಾಡಲು ಬೇಕಾಗುವ ಸಾಮಗ್ರಿಗಳು:

  • ರಾಗಿ ಹಿಟ್ಟು – 3/4 ಕಪ್
  • ಗೋಧಿ ಹಿಟ್ಟು – 3/4 ಕಪ್
  • 2 ಚಮಚ ಕೋಕೋ ಪುಡಿ
  • ಬೇಕಿಂಗ್ ಪೌಡರ್ – 1.5 ಟೀಸ್ಪೂನ್
  • ಅಡಿಗೆ ಸೋಡಾ – 1/2 ಟೀಸ್ಪೂನ್
  • ಒಂದು ಚಿಟಿಕೆ ಉಪ್ಪು
  • 200 ಗ್ರಾಂ ಬೆಲ್ಲದ ಪುಡಿ
  • ಚೆರ್ರಿ, ಒಣ ಹಣ್ಣುಗಳು
  • ಮೊಸರು – 1/3 ಕಪ್
  • ಹಾಲು – 3/4 ಕಪ್
  • ಅಗತ್ಯಕ್ಕೆ ತಕ್ಕಷ್ಟು ವೆನಿಲ್ಲಾ ಎಸೆನ್ಸ್
  • ಎಣ್ಣೆ / ತುಪ್ಪ / ಬೆಣ್ಣೆ – 1/2 ಕಪ್
  • ಡಾರ್ಕ್ ಚಾಕೊಲೇಟ್

ಇದನ್ನೂ ಓದಿ: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಸ್ಪೆಷಲ್‌ ಉಡುಗೊರೆಗಳನ್ನು ನೀಡಿ

ರಾಗಿ ಕೇಕ್ ತಯಾರಿಸುವ ವಿಧಾನ:

  • ರುಚಿಕರವಾದ ಮತ್ತು ಪೌಷ್ಟಿಕವಾದ ರಾಗಿ ಕೇಕ್ ಮಾಡಲು, ಮೊದಲು ಓವಲ್ ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಕನಿಷ್ಠ 15 ನಿಮಿಷಗಳ ಕಾಲ ಬಿಸಿ ಮಾಡಿ. ನಿಮ್ಮ ಬಳಿ ಮೈಕ್ರೋವೇವ್ ಇಲ್ಲದಿದ್ದರೆ, ನೀವು ಈ ಕೇಕ್ ಅನ್ನು ಪ್ರೆಶರ್ ಕುಕ್ಕರ್‌ನಲ್ಲಿ ತಯಾರಿಸಬಹುದು. ಪ್ರೆಶರ್ ಕುಕ್ಕರ್‌ಗೆ ಒಂದು ಕಪ್ ಉಪ್ಪು ಸೇರಿಸಿ, ಮಧ್ಯಮ-ಹೆಚ್ಚಿನ ಶಾಖಕ್ಕೆ ಹೊಂದಿಸಿ ಮತ್ತು 15 ರಿಂದ 20 ನಿಮಿಷಗಳ ಕಾಲ ಬಿಸಿ ಮಾಡಲು ಬಿಡಿ.
  • ರಾಗಿ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ಒಂದು ಬಟ್ಟಲಿಗೆ ಶೋಧಿಸಿ ಇಡಿ. ಈ ಹಿಟ್ಟಿಗೆ ಬೇಕಿಂಗ್ ಪೌಡರ್, ಅಡಿಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪಕ್ಕಕ್ಕೆ ಇರಿಸಿ.
  • ಈಗ ಇನ್ನೊಂದು ಬಟ್ಟಲನ್ನು ತೆಗೆದುಕೊಂಡು ಪುಡಿ ಮಾಡಿದ ಬೆಲ್ಲ ಮತ್ತು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಮೊಸರನ್ನು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ನಿಧಾನವಾಗಿ ಮಿಶ್ರಣಕ್ಕೆ ಹಾಲನ್ನು ಸೇರಿಸಿ. ಈಗ, ನಿಧಾನವಾಗಿ ಈ ಮಿಶ್ರಣವನ್ನು ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
  • ಕೇಕ್‌ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ಬೇಕಿಂಗ್ ಪ್ಲೇಟ್ ಅಥವಾ ಬೌಲ್‌ಗೆ ಬೆಣ್ಣೆ, ತುಪ್ಪ ಅಥವಾ ಎಣ್ಣೆಯನ್ನು ಗ್ರೀಸ್ ಮಾಡಿ, ಅದರ ಮೇಲೆ ಬಟರ್‌ ಪೇಪರ್‌ ಹಾಕಿ. ಕೇಕ್ ಬ್ಯಾಟರ್ ಹಾಕಿ ಅದರ ಮೇಲೆ ಸಣ್ಣದಾಗಿ ಕಟ್‌ ಮಾಡಿದಂತಹ ಬಾದಮಿ, ಗೋಡಂಬಿ, ಪಿಸ್ತಾ ಸೇರಿದಂತೆ ಒಂದಷ್ಟು ಒಣ ಹಣ್ಣುಗಳನ್ನು ಸೇರಿಸಬಹುದು. ನಂತರ ಅದನ್ನು ಸಮತಟ್ಟಾಗಿಸಲು ಎರಡರಿಂದ ನಾಲ್ಕು ಬಾರಿ ಟ್ಯಾಪ್ ಮಾಡಿ.
  • ಈಗ ಟ್ರೇಯನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟ ಓವನ್‌ ಅಥವಾ ಕುಕ್ಕರ್‌ನಲ್ಲಿ ಇರಿಸಿ ಮತ್ತು 25 ರಿಂದ 30 ನಿಮಿಷಗಳ ಕಾಲ ಬೇಯಿಸಿ. ಕೇಕ್ ಬೇಯಿಸಿದ ನಂತರ, ಅದನ್ನು ತೆಗೆದು 15 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
  • ಕೇಕ್‌ ತಣ್ಣಗಾದ ಬಳಿಕ ಬೇಕಿಂಗ್ ಟ್ರೇನಿಂದ ತೆಗೆದು ಒಂದು ಪ್ಲೇಟ್‌ನಲ್ಲಿ ಇಡಿ. ಈಗ ಡಾರ್ಕ್‌ ಚಾಕೋಲೇಟ್‌ ಅನ್ನು ಕರಗಿಸಿ ಅದನ್ನು ಅದನ್ನು ಕೇಕ್ ಮೇಲೆ ಹರಡಿ. ಚೆರ್ರಿಯಿಂದ ಅಲಂಕರಿಸಿ. ಅದರ ಮೇಲೆ ಬಿಳಿ ಚಾಕೋಲೇಟ್‌ ಬಳಸಿ ಹ್ಯಾಪಿ ಫಾದರ್ಸ್‌ ಡೇ ಅಂತಾನೂ ಬರೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀಕ್ರೆಟ್ ಆಗಿ​​​​​ ಮಾಡಿದ್ದೇವೆ ಅನ್ಕೊಂಡಿದ್ದಾರೆ: ಬಿಜೆಪಿ ಶಾಸಕರ ಅಡ್ಡಮತದಾನದ ಬಗ್ಗೆ ಜೋಶಿ ಸ್ಫೋಟಕ ಹೇಳಿಕೆ – Kannada News | Pralhad Joshi Makes Explosive Statement on BJP MLAs’ Cross Voting in MLC Elections

ಸಚಿವ ಪ್ರಲ್ಹಾದ್​ ಜೋಶಿImage Credit source: tv9 kannada

ಹುಬ್ಬಳ್ಳಿ, ಜೂನ್​ 20: ಬಿಜೆಪಿ (bjp) ಶಾಸಕರಿಂದ ಅಡ್ಡಮತದಾನ ಆಗಿರುವುದು ದುರ್ದೈವದ ಸಂಗತಿ. ದುಡ್ಡಿನ ಆಸೆಗಾಗಿ ಕ್ರಾಸ್​ ವೋಟಿಂಗ್​ ಮಾಡಿದ್ದಾರೆ. ಸದ್ಯ ಕೇಂದ್ರೀಯ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ತನಿಖೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಸೀಕ್ರೆಟ್ ಆಗಿ​​​​​ ಮಾಡಿದ್ದೇವೆ ಅನ್ಕೊಂಡಿದ್ದಾರೆ, ಆದರೆ ಕೆಲವೇ ದಿನಗಳಲ್ಲಿ ಯಾರು ಮಾಡಿದ್ದು ಅಂತಾ ಗೊತ್ತಾಗಲಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಪರಿಷತ್​​ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ
  • ದುಡ್ಡಿನ ಆಸೆಗಾಗಿ ಕ್ರಾಸ್​ ವೋಟಿಂಗ್​ ಎಂದ ಜೋಶಿ
  • ತನಿಖೆ ನಡೆಸಲು ಸತ್ಯಶೋಧನಾ ಸಮಿತಿ ರಚನೆ

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಿಷ್ಟು 

ಪರಿಷತ್​​ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಪಾರ್ಟಿ ಪರವಾಗಿ ಗೆದ್ದ ಮೇಲೆ ಪಾರ್ಟಿ ಪರವಾಗಿ ವೋಟ್ ಹಾಕಬೇಕು. ಅವರ ವಿಶ್ವಾಸವನ್ನು ತೆಗೆದುಕೊಳ್ಳಬೇಕು ಅಂತಿಲ್ಲ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್​.ಅಶೋಕ್ ದೆಹಲಿಗೆ ಬರುವುದಾಗಿ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕತ್ವ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೋಶಿ ತಿರುಗೇಟು

ಆರ್​​ಎಸ್​​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಹೇಳಿಕೆಗಳು ಹಳೇ ಗ್ರಾಮಾಫೋನ್​ ರೀತಿ ಇವೆ. ಅವರ ಪತ್ರಕ್ಕೆ ಯಾವುದೇ ಬೆಲೆಯಿಲ್ಲ. ಡಿಕೆ ಶಿವಕುಮಾರ್​ ನಂತರ ತಾನು ಮುಖ್ಯಮಂತ್ರಿ ಆಗಬೇಕು ಅಂದುಕೊಂಡಿದ್ದಾರೆ. ಆರ್​​ಎಸ್​​ಎಸ್​ಗೆ ಬೈದವರಿಗೆ ಸಿಎಂ ಸ್ಥಾನ ಕೊಡುತ್ತಾರೆ ಅಂತಾ ಅಂದುಕೊಂಡಿದ್ದಾರೆ. ಆರ್​ಎಸ್ಎಸ್​ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಕೇಳುವ ಅಧಿಕಾರ ಇಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯಾಧ್ಯಕ್ಷ ಸ್ಥಾನದ ರೇಸ್​​ನಲ್ಲಿ ನಾನು ಇಲ್ಲ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ರೇಸ್​​ನಲ್ಲಿ ನಾನು ಇಲ್ಲ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜ್ಯದಲ್ಲಿ ಅನೇಕರು ಸಮರ್ಥರು ಇದ್ದಾರೆ ಎಂದು ಹೇಳಿದರು.

ಮಳೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಲ್ಹಾದ್​ ಜೋಶಿ

ಇನ್ನು ಮಳೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಲ್ಹಾದ್​ ಜೋಶಿ, ಶೇಕಡ 40 ರಷ್ಟು ಮಳೆ ಕೊರತೆ ಇದೆ ಅಂತ ಐಎಂಡಿ ವರದಿ ನೀಡಿದೆ. ನಮ್ಮ ಬಳಿ ದೊಡ್ಡ ಮಟ್ಟದ ಆಹಾರ ಧಾನ್ಯದ ಸಂಗ್ರಹವಿದೆ. ಕುಡಿಯುವ ನೀರು, ಮೇವಿಗೆ ತೊಂದರೆ ಆಗಲಿದ್ದು, ಸಿಎಂ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಆದಷ್ಟು ಬೇಗನೆ ಸಂಪುಟ ವಿಸ್ತರಣೆ ಮಾಡಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ. ಬೆಂಗಳೂರು ಅಧೋಗತಿ ಮಾಡಿ ಅವರು ಸಿಎಂ ಆಗಿದ್ದಾರೆ. ಅದನ್ನು ನೋಡಿದರೆ ರಾಜ್ಯವು ಹಾಗೆ ಆಗುವ ರೀತಿ ಕಾಣುತ್ತದೆ. ಈ ಸರ್ಕಾಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ? ಹೆಚ್​ಡಿ ಕುಮಾರಸ್ವಾಮಿ ಏನಂದರು ನೋಡಿ

ಶಿವಸೇನೆ ಮತ್ತು ಟಿಎಂಸಿಯಿಂದ ನಮ್ಮ ಪಕ್ಷಕ್ಕೆ ಬರಲು ಕಾರಣ, ಆ ಪಕ್ಷಗಳಲ್ಲಿ ನಮಗೆ ಭವಿಷ್ಯವಿಲ್ಲಾ ಅಂತ ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಕರ್ನಾಟಕದ ವಿದ್ಯಮಾನಗಳನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಕ್ಕೆ, ಪ್ರಿಯಾಂಕ್ ಖರ್ಗೆ ಮಂತ್ರಿಯಾಗಿದ್ದಾರೆ, ಇಲ್ಲದಿದ್ದರೆ ಅವರು ಮಂತ್ರಿ ಆಗುತ್ತಿರಲಿಲ್ಲ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಾಕಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯವೇ ಇಲ್ಲ; ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಟೀಕೆ – Kannada News | Pakistan Does not Have Press Freedom; US Vice President JD Vance blames for delay in publishing Iran peace MoU

ವಾಷಿಂಗ್ಟನ್, ಜೂನ್ 20: ಅಮೆರಿಕ ಮತ್ತು ಇರಾನ್ (Iran War) ನಡುವೆ ಇತ್ತೀಚೆಗೆ ಸಹಿ ಮಾಡಲಾದ 14 ಅಂಶಗಳ ತಾತ್ಕಾಲಿಕ ಒಪ್ಪಂದದ ವಿವರಗಳನ್ನು ಆರಂಭದಲ್ಲಿ ರಹಸ್ಯವಾಗಿಟ್ಟಿದ್ದರ ಕಾರಣವನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) ಬಹಿರಂಗಪಡಿಸಿದ್ದಾರೆ. “ಪಾಕಿಸ್ತಾನದಂತಹ ದೇಶಗಳಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಅಲ್ಲಿನ ಮಾಧ್ಯಮಗಳು ಸರ್ಕಾರದ ನಿಯಂತ್ರಣದಲ್ಲಿರುತ್ತವೆ. ಹೀಗಾಗಿ, ಸೂಕ್ಷ್ಮ ರಾಜತಾಂತ್ರಿಕ ಮಾತುಕತೆಗಳ ವಿವರಗಳು ಮುಂಚಿತವಾಗಿ ಸೋರಿಕೆಯಾಗಿ ಒಪ್ಪಂದ ಮುರಿದುಬೀಳಬಾರದು ಎಂಬ ಕಾರಣಕ್ಕೆ ವಿವರಗಳನ್ನು ಮುಚ್ಚಿಡಲಾಗಿತ್ತು” ಎಂದು ಜೆಡಿ ವ್ಯಾನ್ಸ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅಮೆರಿಕ-ಇರಾನ್ ಒಪ್ಪಂದದ ರಹಸ್ಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜೆ.ಡಿ. ವ್ಯಾನ್ಸ್, ಜಾಗತಿಕ ರಾಜತಾಂತ್ರಿಕತೆಯ ಸೂಕ್ಷ್ಮತೆಗಳನ್ನು ವಿವರಿಸಿದ್ದಾರೆ. “ನಾವು ಇರಾನ್ ಜೊತೆ ಅತ್ಯಂತ ಸೂಕ್ಷ್ಮವಾದ ಮಾತುಕತೆ ನಡೆಸುತ್ತಿದ್ದೆವು. ಇಂತಹ ಸಮಯದಲ್ಲಿ ಒಪ್ಪಂದದ ಅಂಶಗಳು ಮುಂಚಿತವಾಗಿ ಮಾಧ್ಯಮಗಳಿಗೆ ಲೀಕ್ ಆಗಿದ್ದರೆ, ಇಡೀ ಪ್ರಕ್ರಿಯೆ ಹಳಿ ತಪ್ಪುವ ಅಪಾಯವಿತ್ತು. ಅದಕ್ಕಾಗಿಯೇ ಎಲ್ಲವೂ ಅಂತಿಮವಾಗುವವರೆಗೂ ವಿವರಗಳನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು” ಎಂದಿದ್ದಾರೆ.

ಇದನ್ನೂ ಓದಿ: ‘ಇರಾನ್ ಕತೆ ಮುಗಿಯಿತು, ಅವರಿಗೆ ಒಂದು ಪೈಸೆಯೂ ಸಿಗುವುದಿಲ್ಲ’; ಕಿಡಿಕಾರಿದ ಟ್ರಂಪ್

ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವಾಗ ಪಾಕಿಸ್ತಾನ ಮತ್ತು ಇತರ ಕೆಲವು ಇಸ್ಲಾಮಿಕ್ ರಾಷ್ಟ್ರಗಳ ಮಾಧ್ಯಮ ಸ್ವಾತಂತ್ರ್ಯವನ್ನು ಜೆಡಿ ವ್ಯಾನ್ಸ್ ಟೀಕಿಸಿದ್ದಾರೆ. “ಪಾಕಿಸ್ತಾನದಂತಹ ದೇಶಗಳಲ್ಲಿ ಅಮೆರಿಕ ಅಥವಾ ಇತರ ಪಾಶ್ಚಿಮಾತ್ಯ ದೇಶಗಳಂತೆ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಅಲ್ಲಿ ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಎಲ್ಲವನ್ನೂ ಅಲ್ಲಿನ ಸರ್ಕಾರ ಅಥವಾ ವ್ಯವಸ್ಥೆಯೇ ನಿಯಂತ್ರಿಸುತ್ತದೆ. ಇಂತಹ ಪರಿಸರದಲ್ಲಿ ಮುಕ್ತ ಚರ್ಚೆಗಿಂತ ಸರ್ಕಾರದ ನಿರೂಪಣೆಗಳೇ ಹೆಚ್ಚು ಪ್ರಚಾರ ಪಡೆಯುತ್ತವೆ. ಇಂತಹ ಸೂಕ್ಷ್ಮ ವಲಯಗಳಲ್ಲಿ ನಮ್ಮ ರಾಜತಾಂತ್ರಿಕ ನಡೆಗಳನ್ನು ಅತಿ ಜಾಗರೂಕತೆಯಿಂದ ಇಡಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಆಡಳಿತದ ನಡುವೆ ಇತ್ತೀಚೆಗೆ ಕದನ ವಿರಾಮ ಮತ್ತು ಯುರೇನಿಯಂ ಪುಷ್ಟೀಕರಣ ನಿಯಂತ್ರಣದ ಕುರಿತು ಪ್ರಾಥಮಿಕ ಒಪ್ಪಂದ (MOU) ಏರ್ಪಟ್ಟಿದೆ. ಯುದ್ಧದಿಂದ ಕಂಗೆಟ್ಟಿರುವ ಇರಾನ್ ದೇಶ ಅಮೆರಿಕ ವಿಧಿಸಿರುವ ಕಠಿಣ ಆರ್ಥಿಕ ನಿರ್ಬಂಧಗಳಿಂದ ಮುಕ್ತಿ ಪಡೆಯಲು ಈ ಮಾತುಕತೆಗೆ ಒಪ್ಪಿಕೊಂಡಿದೆ.

ಇದನ್ನೂ ಓದಿ: ಟ್ರಂಪ್ ಭೇಟಿ ವಿಚಾರ; ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕ ಶಶಿ ತರೂರ್

ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ತಗ್ಗಿಸಲು ಮತ್ತು ಹೆಜ್ಬೊಲ್ಲಾ ಸೇರಿದಂತೆ ತನ್ನ ಬೆಂಬಲಿತ ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಲು ಈ ಒಪ್ಪಂದದಲ್ಲಿ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಈ ಒಪ್ಪಂದವನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರಾಜತಾಂತ್ರಿಕ ನಡೆ ಎಂದು ಟ್ರಂಪ್ ಆಡಳಿತ ಬಿಂಬಿಸುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND vs AFG: ಟೀಂ ಇಂಡಿಯಾ ವಿರುದ್ಧ ಸ್ಮರಣೀಯ ಶತಕ ಬಾರಿಸಿದ ಹಶ್ಮತುಲ್ಲಾ ಶಾಹಿದಿ – Kannada News | Hashmatullah Shahidi’s Maiden Century: Lone Battle vs India in Chennai ODI

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಟೀಂ ಇಂಡಿಯಾ ಬೌಲರ್​ಗಳ ಎದುರು ಏಕಾಂಗಿ ಹೋರಾಟ ನೀಡಿ ಸ್ಮರಣೀಯ ಶತಕ ಸಿಡಿಸಿದರು. ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಶತಕ ಬಾರಿಸಿದ ಶಾಹಿದಿ ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲು ಯಶಸ್ವಿಯಾದರು. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 126 ಎಸೆತಗಳನ್ನು ಎದುರಿಸಿದ ಶಾಹಿದಿ 13 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಸುಂದರ್ ಎಸೆದ 44ನೇ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಹಶ್ಮತುಲ್ಲಾ ಶಾಹಿದಿ ತಮ್ಮ ಶತಕದ ಗಡಿ ದಾಟಿದರು. ಭಾರತದ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ ಶಾಹಿದಿಗೆ ಇದು ಅವರ ಏಕದಿನ ವೃತ್ತಿಜೀವನದ ಮೊದಲ ಶತಕವೂ ಆಗಿದೆ.

Source link

Job Alert: ಶಿವಮೊಗ್ಗದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; 31,000 ರೂ. ಸಂಬಳದ ಹುದ್ದೆಗೆ ಅರ್ಜಿ ಆಹ್ವಾನ – Kannada News | Shivamogga Job Alert: Senior Microbiologist Hiring on Outsourcing Basis | Apply by June 30

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್Image Credit source: Facebook

ಶಿವಮೊಗ್ಗ: ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಶಿವಮೊಗ್ಗದ ಡಿ.ಸಿ ಕಚೇರಿ ಆವರಣದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರ ಕಚೇರಿಯು ಖಾಲಿ ಇರುವ ಹುದ್ದೆಯ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯದಲ್ಲಿ ಕಿರಿಯ ಹಾಗೂ ಹಿರಿಯ ತಜ್ಞರ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಹೊರಗುತ್ತಿಗೆ ಆಧಾರದ ಮೇಲೆ ಸೀನಿಯರ್ ಮೈಕ್ರೋಬಯಾಲಜಿಸ್ಟ್ ಹುದ್ದೆ ಭರ್ತಿ:

ನೇಮಕಾತಿ ಪ್ರಕಟಣೆಯ ಪ್ರಕಾರ, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಇಲಾಖಾ ಕಚೇರಿಯಲ್ಲಿ ಸೀನಿಯರ್ ಮೈಕ್ರೋಬಯಾಲಜಿಸ್ಟ್ (Senior Microbiologist) ಹುದ್ದೆಯನ್ನು ತಾತ್ಕಾಲಿಕವಾಗಿ ಹೊರಗುತ್ತಿಗೆ (Outsourcing) ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹತೆ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ. 31,000 ಗಳ ಆಕರ್ಷಕ ಸ್ಥಿರ ವೇತನವನ್ನು ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಕಟ್ಟುನಿಟ್ಟಿನ ಮಾನದಂಡಗಳು:

ಈ ಪ್ರಮುಖ ಹುದ್ದೆಗೆ ಅರ್ಜಿ ಸಲ್ಲಿಸಲು ವಿಜ್ಞಾನ ವಿಭಾಗದ ವಿವಿಧ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶವಿದ್ದು, ವಿಷಯಕ್ಕೆ ಅನುಗುಣವಾಗಿ ಪ್ರತ್ಯೇಕ ಅನುಭವದ ಅಗತ್ಯವಿದೆ:

  • M.Sc ಮೈಕ್ರೋಬಯಾಲಜಿ: ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಕುಡಿಯುವ ನೀರು ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಅದೇ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವವಿರಬೇಕು.
  • M.Sc ಬಯೋಕೆಮಿಸ್ಟ್ರಿ / ಬಯೋಟೆಕ್ನಾಲಜಿ / ಎನ್ವಿರಾನ್‌ಮೆಂಟಲ್ ಸೈನ್ಸ್: ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಸಂಬಂಧಿಸಿದ ಪರೀಕ್ಷಾ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಕಡ್ಡಾಯವಾಗಿದೆ.
  • B.Sc ಮೈಕ್ರೋಬಯಾಲಜಿ: ಕೇವಲ ಪದವಿ (B.Sc) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅದೇ ನೀರಿನ ಗುಣಮಟ್ಟ ಪರೀಕ್ಷಾ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವದ ಅಗತ್ಯವಿರುತ್ತದೆ.
  • B.Sc ಬಯೋಕೆಮಿಸ್ಟ್ರಿ / ಬಯೋಟೆಕ್ನಾಲಜಿ / ಎನ್ವಿರಾನ್‌ಮೆಂಟಲ್ ಸೈನ್ಸ್: ಈ ಪದವೀಧರರು ಅರ್ಜಿ ಸಲ್ಲಿಸಬೇಕಿದ್ದಲ್ಲಿ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರಬೇಕಾದುದು ಅತ್ಯಗತ್ಯ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 45 ವರ್ಷಗಳ ಒಳಗಿರಬೇಕು (Below 45 years) ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯ ಅಧಿಕೃತ ಸರ್ಕಾರಿ ಜಾಲತಾಣವಾದ https://shivamogga.nic.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ:

ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ಕೊನೆಯ ದಿನದ ಗಡುವಿನ ಒಳಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ನೇಮಕಾತಿ ಕುರಿತು ಯಾವುದೇ ಹೆಚ್ಚಿನ ಮಾಹಿತಿ, ಗೊಂದಲ ಅಥವಾ ಅಧಿಕೃತ ವಿಚಾರಣೆಗಳಿಗಾಗಿ ಅಭ್ಯರ್ಥಿಗಳು ಇಲಾಖೆಯ ಕಚೇರಿ ದೂರವಾಣಿ ಸಂಖ್ಯೆ: 08182-248044 ಅಥವಾ ಅಧಿಕೃತ ಇಮೇಲ್ ಐಡಿ: eesmgrdws@gmail.com ಮೂಲಕ ನೇರವಾಗಿ ಸಂಪರ್ಕಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

CCTV ಕಣ್ಗಾವಲು, ಜಾಮರ್ ಅವಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಸೆಕ್ಯೂರಿಟಿ – Kannada News | NEET UG Re Exam On June 21: Mock Drill In bengaluru, NTA Safety Advisory For Re NEET

ಬೆಂಗಳೂರು, (ಜೂನ್ 20): ದೇಶಾದ್ಯಂತ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವತಿಯಿಂದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET UG Re Exam 2026) ನಾಳೆ ಮಧ್ಯಾಹ್ನ 02ರಿಂದ ಸಂಜೆ 05:15ರವರೆಗೆ ನಡೆಯಲಿದೆ. ರಾಜ್ಯದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಹಾಗೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಎಸ್ ಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಗಾಗಲೇ ರೋಲ್ ನಂಬರ್ ಹಾಕಿದ್ದು, ನಾಳೆ ಬೆಳಗ್ಗೆಯಿಂದ‌ ‌CRPF ಮತ್ತು ಸ್ಥಳೀಯ ಪೊಲೀಸರ ಭದ್ರತೆ ಇರಲಿದೆ. ಕಳೆದ ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ದೊಡ್ಡ ರದ್ದಾಂತವೇ ಆಗಿದೆ. ಅಲ್ಲದೇ ಕೆಲ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಬಿಗಿ ಕ್ರಮಕೈಗೊಳ್ಳಲಾಗಿದೆ.

Source link

Exit mobile version