Headlines

‘ಅವರ ಬಗೆಗಿನ ಸತ್ಯ ಬಿಚ್ಚೋಕೆ ಆಗ್ತಿಲ್ಲ’; ಸತೀಶ್​​ಗೆ ಶೇಪ್​​ಔಟ್ ಮಾಡಿದ ಸುದೀಪ್ – Kannada News | Dog Satish Trolled by Sudeep at Bigg Boss Kannada 12 Finale: Viral Video Sparks Laughter

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಅವರು ಕೆಲವೇ ವಾರ ಇದ್ದರು. ದೊಡ್ಮನೆಯಲ್ಲಿ ಸುದ್ದಿ ಆಗಿಲ್ಲ. ಅವರು ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಅವರು ಸಂದರ್ಶನ ನೀಡಿ ಟ್ರೋಲ್ ಆಗುತ್ತಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ಸುದೀಪ್ ಅವರು ಸತೀಶ್ ಅವರ ಕಾಲೆಳೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ಇದಕ್ಕೆ ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಡಾಗ್ ಸತೀಶ್…

Read More

ಸುತ್ತೂರು ಜಾತ್ರೆ ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಸಿಎಂ ಕಾರು: ಅಧಿಕಾರಿಗಳು ಹರಸಾಹಸ – Kannada News | Mysuru: CM Siddaramaiah Car Stuck in Suttur Jatra Traffic; watch video

ಮೈಸೂರು, ಜನವರಿ 18: ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಕಾರು ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಘಟನೆ ನಡೆದಿದೆ. ಸುಮಾರು 3 ಕಿ.ಮೀ ಜಾಮ್​​ ಉಂಟಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ವಾಹನಕ್ಕೆ ದಾರಿ ಮಾಡಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಟ್ಟರು. ಖುದ್ದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ರಸ್ತೆಗಿಳಿದರು. ಈ ವೇಳೆ ಸವಾರನಿಗೆ ಕಾಲಿನಲ್ಲಿ ಒದೆಯಲು ಎಸ್​ಪಿ ಮುಂದ್ದಾಗಿದ್ದು, ದೃಶ್ಯ ಮೊಬೈಲ್‌ನಲ್ಲಿ ಸೆರೆ ಆಗಿದೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು…

Read More

ಶಿವಮೊಗ್ಗ: ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು – Kannada News | Shivamogga Bhadra Canal Tragedy: 4 Family Members Drown

ಶಿವಮೊಗ್ಗ, ಜನವರಿ 18: ಕಾಲುಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲಾದ (death) ಘಟನೆ ಜಿಲ್ಲೆಯ ಭದ್ರಾವತಿ (Bhadravati) ತಾಲೂಕಿನ ಅರಬಿಳಚಿ ಕ್ಯಾಂಪ್​ನ ಭದ್ರಾ ನಾಲೆಯಲ್ಲಿ ನಡೆದಿದೆ. ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದ ದುರಂತ ಸಂಭವಿಸಿದೆ. ನೀಲಾ ಬಾಯಿ(50), ಮಗ ರವಿ(23), ಮಗಳು ಶ್ವೇತಾ(24) ಮತ್ತು ಅಳಿಯ ಪರಶುರಾಮ(28) ಮೃತರು. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಡೆದದ್ದೇನು? ಮಾರಿ ಹಬ್ಬಕ್ಕೆಂದು ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​​ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ…

Read More

BBL: ಕೇವಲ 14.28 ರ ಸ್ಟ್ರೈಕ್ ರೇಟ್; ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ – Kannada News | Big Bash League 2026: Babar Azam’s Batting Woes Continue

ಬಿಗ್ ಬ್ಯಾಷ್ ಲೀಗ್ 2026 ರ 40 ನೇ ಪಂದ್ಯ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ನಡೆಯಿತು. ಈ ಪಂದ್ಯವು ಸಿಡ್ನಿ ಸಿಕ್ಸರ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲೂ ಪಾಕಿಸ್ತಾನಿ ಸೂಪರ್‌ಸ್ಟಾರ್ ಬಾಬರ್ ಆಝಂ ಅವರ ಬ್ಯಾಟಿಂಗ್ ಮತ್ತೊಮ್ಮೆ ಎಲ್ಲರನ್ನೂ ನಿರಾಶೆಗೊಳಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಕಲೆಹಾಕಿತು. ಈ ಗುರಿ…

Read More

30 ವರ್ಷದ ದಾಟಿದ ಬಳಿಕ ಮಹಿಳೆಯರು ಈ ಹಣ್ಣುಗಳನ್ನು ಸೇವನೆ ಮಾಡಲೇಬೇಕು – Kannada News | These are the fruits that women should eat

ಮಹಿಳೆಯರ ದೇಹವು ವಯಸ್ಸಾದಂತೆ ಜೀವನದ ಪ್ರತಿಯೊಂದು ಹಂತದಲ್ಲೂ ವಿವಿಧ ಬದಲಾವಣೆಗಳಿಗೆ ಒಳಗಾಗುತ್ತದೆ. ಆದ್ದರಿಂದ ರೋಗನಿರೋಧಕ ಶಕ್ತಿ, ಬಲವಾದ ಮೂಳೆಗಳು, ಆರೋಗ್ಯಕರ ಚರ್ಮ, ಕೂದಲು ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಆಹಾರವು ನಿರ್ಣಾಯಕವಾಗಿದೆ. ಹಾಗಾಗಿ ಮಹಿಳೆಯರು ಪ್ರತಿನಿತ್ಯ ಈ ಕೆಲವು ಹಣ್ಣುಗಳನ್ನು (fruits) ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಮಹಿಳೆಯರು ತಿನ್ನಬೇಕಾದ ಆ ಹಣ್ಣುಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಮಹಿಳೆಯರು ತಿನ್ನಲೇಬೇಕಾದ ಹಣ್ಣುಗಳಿವು: ದಾಳಿಂಬೆ : ಕಬ್ಬಿಣಾಂಶದಿಂದ…

Read More

ಲಕ್ಕುಂಡಿ: ನಾಗರ ಹೆಡೆ ಕೆತ್ತನೆಯ ಮತ್ತೊಂದು ಕಲಾಕೃತಿ ಪತ್ತೆ; ಉತ್ಖನನ ಕಾರ್ಯ ಮೊದಲೇ ನಿಗದಿಯಾಗಿತ್ತಾ? – Kannada News | Historic Lakkundi Unveils Ancient Secrets as Another Carved Cobra Head Artwork Is Discovered

ಗದಗ, ಜನವರಿ 18: ಲಕ್ಕುಂಡಿ (Lakkundi) ಐತಿಹಾಸಿಕ ನಾಡು. 101 ದೇಗುಲಗಳು, ನೂರೊಂದು ಬಾವಿ ಇರುವ ಬೀಡು. ಚಾಲಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಆಳಿರುವ ರಾಜ ಗಾಂಭಿರ್ಯದ ನೆಲೆ ಲಕ್ಕುಂಡಿ. ಇದೇ ಐತಿಹಾಸಿಕ ನಾಡು ಲಕ್ಕುಂಡಿಯಲ್ಲಿ ಕಳೆದ ಮೂರು ದಿನಗಳಿಂದ ಉತ್ಖನನ (Excavation) ಕಾರ್ಯ ಭರದಿಂದ ಸಾಗಿದೆ. ಶೋಧದ ವೇಳೆ ಭೂಗರ್ಭದಲ್ಲಿ ಶಿವಲಿಂಗ, ಶಿವಲಿಂಗದ ಅವಶೇಷ, ನಾಗರಕಲ್ಲು ಸೇರಿ ಪುರಾತನ ವಸ್ತುಗಳು ಪತ್ತೆಯಾಗಿವೆ. ನಾಗರ ಕಲ್ಲು ಪತ್ತೆ ಉತ್ಖನನದ ವೇಳೆ ನಾಗರ ಕಲ್ಲು ಪತ್ತೆಯಾಗಿದೆ. ನಾಗರ ಹೆಡೆ…

Read More

‘ರಕ್ಷಿತಾ ಶೆಟ್ಟಿ ವಿನ್ನರ್’; ವೀಕ್ಷಕರಿಗೆ ಶಾಕ್ ಕೊಟ್ಟ ವಿಕಿಪೀಡಿಯಾ

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ರಘು, ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಧನುಶ್ ಹಾಗೂ ಅಶ್ವಿನಿ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಇದ್ದಾರೆ. ಇವರ ಪೈಕಿ ಒಬ್ಬರಿಗೆ ಗೆಲುವು ಸಿಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಅವರು ಟಫ್ ಫೈಟ್ ನೀಡುತ್ತಿದ್ದಾರೆ. ಅವರು ಬಂದ ವಾರವೇ ಮನೆಯಿಂದ ಹೊರಹೋಗಿದ್ದರು. ನಂತರ ಅವರನ್ನು ಮತ್ತೆ ಕರೆಸಲಾಯಿತು. ಈಗ ರಕ್ಷಿತಾ ಅವರೇ ವಿನ್ನರ್ ಎಂದು ಘೋಷಣೆ ಆಗಿದೆ. ಇದನ್ನು ಮಾಡಿದ್ದು…

Read More

ಕನ್ನಡದ ಸೂಪರ್ ಹಿಟ್ ಹಾಡು ಬಳಸಿಕೊಂಡ ತೆಲುಗಿನ ಸ್ಟಾರ್ ನಿರ್ದೇಶಕ – Kannada News | Telugu Director Sandeep Vanga Praises Iconic Kannada Song Naguva Nayana

ಕನ್ನಡ ಚಿತ್ರರಂಗದಲ್ಲಿ 80-90ರ ದಶಕದಲ್ಲಿ ಹಲವು ಸೂಪರ್ ಹಿಟ್ ಗೀತೆಗಳು ಬಂದಿವೆ. ಅವುಗಳನ್ನು ಜನರು ಈಗಲೂ ಇಷ್ಟಪಡುತ್ತಾರೆ. ಈ ಹಾಡುಗಳು ಕಿವಿಗೆ ಕೇಳಲು ಇಂಪು. ಈ ಸಾಲಿನಲ್ಲಿ ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಚಿತ್ರದ ‘ನಗುವ ನಯನ..’ ಹಾಡು ಕೂಡ ಒಂದು. ಈ ಹಾಡು ಎಲ್ಲರ ಮೆಚ್ಚುಗೆ ಪಡೆಯಿತು. ಇದು ತೆಲುಗು ನಿರ್ದೇಶಕನಿಗೂ ಇಷ್ಟ ಆಗಿದೆ. ಅವರು ಹಾಡನ್ನು ಬಳಸಿಕೊಂಡಿದ್ದಾರೆ. ಈ ರೀತಿ ಹಾಡು ಬಳಕೆ ಮಾಡಿದ್ದು ಬೇರೆ ಯಾರೂ ಅಲ್ಲ ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್…

Read More

IND vs NZ: ಟೀಂ ಇಂಡಿಯಾ ವಿರುದ್ಧ ಚೊಚ್ಚಲ ಶತಕ ಬಾರಿಸಿದ ಗ್ಲೆನ್ ಫಿಲಿಪ್ಸ್ – Kannada News | NZ Batting Masterclass: Daryl Mitchell and Glenn Phillips Smash Hundreds vs India

ಭಾರತ ಪ್ರವಾಸದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದು, ಮೂರನೇ ಪಂದ್ಯದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂದೋರ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ, ಡ್ಯಾರಿಲ್ ಮಿಚೆಲ್ ಸತತ ಎರಡನೇ ಶತಕ ಬಾರಿಸಿದರೆ, ಗ್ಲೆನ್ ಫಿಲಿಪ್ಸ್ ಕೂಡ ತಮ್ಮ ಏಕದಿನ ವೃತ್ತಿಜೀವನದ ಎರಡನೇ ಶತಕ ಬಾರಿಸಿದ್ದಾರೆ. Source link

Read More

ಈ ಆಹಾರ ಪದಾರ್ಥಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ – Kannada News | Foods that should not be cooked in a pressure cooker

ಈಗಂತೂ ಎಲ್ಲರ ಮನೆಗಳಲ್ಲೂ ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್‌ ಮಾಡುವವರೆಗೆ ಬಹುತೇಕ ಎಲ್ಲಾ ಅಡುಗೆ ಮಾಡಲು ಪ್ರತಿನಿತ್ಯ ಪ್ರೆಶರ್‌ ಕುಕ್ಕರ್‌ (pressure cooker) ಬಳಸಲಾಗುತ್ತದೆ. ಇದು ಆಹಾರವನ್ನು ತ್ವರಿತವಾಗಿ ಬೇಯಿಸುವ ಮೂಲಕ ಸಮಯ ಉಳಿತಾಯ ಮತ್ತು ಗ್ಯಾಸ್‌ ಉಳಿತಾಯ ಮಾಡಲು ಸಹಕಾರಿ ನಿಜ, ಆದರೆ ಅಡುಗೆ ಬೇಗನೇ ಆಗಿ ಹೋಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಬಗೆಯ ಆಹಾರಗಳನ್ನು ಕುಕ್ಕರ್‌ನಲ್ಲಿಯೇ ಬೇಯಿಸುವುದು ಸರಿಯಲ್ಲ. ಹೌದು ಕೆಲವೊಂದು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶ ನಾಶವಾಗುವುದಲ್ಲದೆ  ಅಂತಹ ಆಹಾರವನ್ನು ಸೇವಿಸುವುದರಿಂದ…

Read More