ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ – Kannada News | A Bidar Farmer Cultivates World’s Costliest Mango Miyazaki, That’s Worth Rs 2.5 Lakh Per KG

ಬೀದರ್, (ಮೇ 22): ಜಪಾನ್ ಮೂಲದ ಮಿಯಾಜಾಕಿ ಮಾವಿನಹಣ್ಣು (Miyazaki Mango) ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಿನ ತಳಿಗಳಲ್ಲಿ ಒಂದಾಗಿದೆ. ಇದರ ಬೆಲೆ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿಗಳವರೆಗೆ ತಲುಪುತ್ತದೆ. ಇಂತಹ ದುಬಾರಿ ದರದ ಮಾವು ತಳಿಯನ್ನು ಬೀದರ್ ನ (Bidar) ರೈತ ಬೆಳೆದು ಗಮನಸೆಳೆದಿದ್ದಾರೆ. ಹೌದು…ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದ ರೈತ ಹಣಮಂತರಾವ್ ಶ್ರೀಮಾಳೆ ಅವರು ವಿಶ್ವದ ದುಬಾರಿ ಬೆಲೆಯ ಮಾವನ್ನ ಬೀದರ್ ನ ರೈತ ಬೆಳೆಸಿ ಸೈ ಎಣಿಸಿಕೊಂಡಿದ್ದಾರೆ. ವಿದೇಶಿ ತಳಿ ನಮ್ಮ ನೆಲದಲ್ಲಿ ಬೆಳೆಯುತ್ತಾ ಎಂದು ಹಣಮಂತರಾವ್ ಶ್ರೀಮಾಳೆ ಅವರಯ ತೋಟದಲ್ಲಿ ಪ್ರಾಯೋಗಿಕವಾಗಿ ಮಿಯಾಜಾಕಿ ಮಾವು ಬೆಳೆದಿದ್ದು, ಅದು ಇದೀಗ ಉತ್ತಮ ಫಲ ಕೊಟ್ಟಿದೆ.

ಈ ಯಶಸ್ಸಿನಿಂದ ಪ್ರೇರಿತರಾಗಿ ಮುಂದಿನ ದಿನಗಳಲ್ಲಿ ಎರಡು ಎಕರೆ ಪ್ರದೇಶದಲ್ಲಿ ಮಿಯಾಜಾಕಿ ಮಾವು ಬೆಳೆಸಲು ರೈತ ನಿರ್ಧರಿಸಿದ್ದಾರೆ. ಜಪಾನ್ ದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ಮಿಯಾಜಾಕಿ ಮಾವು ತನ್ನ ವಿಶಿಷ್ಟ ರುಚಿ ಮತ್ತು ಗುಣಮಟ್ಟದಿಂದ ವಿಶ್ವದ ಗಮನ ಸೆಳೆದಿದೆ. ಈ ಹಣ್ಣು ಅತ್ಯಂತ ಸಿಹಿಯಾಗಿದ್ದು, ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್‌ಗಳು, ಬೀಟಾ ಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುವುದಾಗಿ ಹೇಳಲಾಗುತ್ತಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಭಾರೀ ಬೇಡಿಕೆ ಇದ್ದು, ಕೆಲವೆಡೆ ಕೆಜಿಗೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತಿದೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೊಸ ತಳಿಗಳ ಬೆಳೆಗಳತ್ತ ರೈತರು ಆಸಕ್ತಿ ತೋರುತ್ತಿರುವುದು ಕೃಷಿಯಲ್ಲಿ ಹೊಸ ಆಶಾಭರವನ್ನ ಮೂಡಿಸಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸುರೇಶ್ ನಾಯಕ ಕೊಟ್ಟಿರುವ ಪ್ರತ್ಯೇಕ್ಷ ವರದಿ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಟ್ರೋಲ್‌ ಆದ ಬೆನ್ನಲ್ಲೇ ನಟ ವರುಣ್ ಧವನ್‌ಗೆ ಹಾಲಿವುಡ್ ಆಫರ್? – Kannada News | Varun Dhawan reportedly gets Hollywood offer after trolled online in India

ಬಾಲಿವುಡ್ ನಟ ವರುಣ್ ಧವನ್ (Varun Dhawan) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್​ಗೆ ಒಳಗಾಗಿದ್ದರು. ಅವರ ನಗು ಚೆನ್ನಾಗಿಲ್ಲ ಎಂದು ಅನೇಕರು ಟ್ರೋಲ್ ಮಾಡಿದ್ದರು. ಅಲ್ಲದೇ, ‘ಬಾರ್ಡರ್ 2’ ಸಿನಿಮಾದಲ್ಲಿ ಅವರ ನಟನೆ ಸರಿಯಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದರು. ಸೈನಿಕನ ಪಾತ್ರಕ್ಕೆ ವರುಣ್ ಧವನ್ ಹೊಂದಿಕೆ ಆಗುವುದಿಲ್ಲ ಎಂದು ಅನೇಕರು ಲೇವಡಿ ಮಾಡಿದ್ದರು. ಆದರೆ, ಈ ಎಲ್ಲಾ ಟ್ರೋಲ್‌ಗಳ ಬೆನ್ನಲ್ಲೇ ವರುಣ್ ಧವನ್ ಅವರು ತಮ್ಮ ವೃತ್ತಿಜೀವನದಲ್ಲಿ ಭಾರಿ ದೊಡ್ಡ ಹೆಜ್ಜೆಯನ್ನಿಡಲು ಸಜ್ಜಾಗಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಹೌದು, ವರುಣ್ ಧವನ್ ಶೀಘ್ರದಲ್ಲೇ ಹಾಲಿವುಡ್‌ಗೆ (Hollywood) ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ನಟನ ಕಡೆಯಿಂದಾಗಲಿ ಅಥವಾ ಅವರ ತಂಡದಿಂದಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ಅಂತಾರಾಷ್ಟ್ರೀಯ ಪ್ರಾಜೆಕ್ಟ್ ಕುರಿತಾದ ಈ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ‘ಪಿಂಕ್‌ವಿಲ್ಲಾ’ ವರದಿಯ ಪ್ರಕಾರ, ಈ ಹಾಲಿವುಡ್ ಚಿತ್ರಕ್ಕೆ ಸಂಬಂಧಿಸಿದ ಮಾತುಕತೆಗಳು ಕಳೆದ ಕೆಲವು ವಾರಗಳಿಂದ ಸರಾಗವಾಗಿ ಮುನ್ನಡೆಯುತ್ತಿವೆ.

‘ವರುಣ್ ಧವನ್‌ಗೆ ಹಾಲಿವುಡ್ ಪ್ರಾಜೆಕ್ಟ್ ಒಂದರ ಆಫರ್ ಬಂದಿದ್ದು, ಅವರು ಇತ್ತೀಚೆಗೆ ಪ್ರಸಿದ್ಧ ಹಾಲಿವುಡ್ ನಿರ್ಮಾಪಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸದ್ಯ ಎರಡೂ ಕಡೆಯಿಂದಲೂ ಮಾತುಕತೆ ಅಂತಿಮ ಹಂತ ತಲುಪಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಪ್ರಾಜೆಕ್ಟ್ ವರುಣ್ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ದೊಡ್ಡ ಮೈಲಿಗಲ್ಲಾಗಲಿದೆ’ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಈ ಹಿಂದೆ ವರುಣ್ ಧವನ್ ಅವರು ತಮಗೆ ಹಾಲಿವುಡ್‌ನಲ್ಲಿ ನಟಿಸುವ ಆಸೆಯಿದೆ ಎಂದು ಹೇಳಿಕೊಂಡಿದ್ದರಿಂದ ಈ ಸುದ್ದಿ ಈಗ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ‘ಬಿ ಎ ಮ್ಯಾನ್, ಯಾರ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ವರುಣ್, ತಮ್ಮ ಆರಂಭದ ದಿನಗಳ ಆಸೆಗಳ ಬಗ್ಗೆ ಬಿಚ್ಚಿಟ್ಟಿದ್ದರು.

‘ನಾನು ಹಲವು ನಟನಾ ತರಗತಿಗಳಿಗೆ ಸೇರಿಕೊಂಡಿದ್ದೆ. ನನ್ನ ತಂದೆಗೆ ಶಾಕ್ ನೀಡಬೇಕು ಎಂಬ ಕಾರಣಕ್ಕೆ ಹಾಲಿವುಡ್ ಮೂಲಕವೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಬೇಕು ಎಂಬುದು ನನ್ನ ಯೋಜನೆಯಾಗಿತ್ತು. ನನ್ನನ್ನು ಸ್ಟೀವನ್ ಸ್ಪೀಲ್ಬರ್ಗ್ ಅಥವಾ ಅನುರಾಗ್ ಕಶ್ಯಪ್ ಲಾಂಚ್ ಮಾಡಬೇಕೆಂದು ಬಯಸಿದ್ದೆ. ಈ ಇಬ್ಬರಲ್ಲಿ ಒಬ್ಬರು ನನ್ನನ್ನು ಲಾಂಚ್ ಮಾಡಿದರೆ ಮಾತ್ರ ನನ್ನ ತಂದೆಗೆ ಭಾರಿ ಆಶ್ಚರ್ಯವಾಗುತ್ತದೆ ಎಂದುಕೊಂಡಿದ್ದೆ. ಆದರೆ, ಕರಣ್ ಜೋಹರ್ ನನ್ನನ್ನು ಬಾಲಿವುಡ್‌ಗೆ ಪರಿಚಯಿಸಿದಾಗಲೂ ನನ್ನ ತಂದೆ ಅಷ್ಟೇ ಆಶ್ಚರ್ಯಪಟ್ಟಿದ್ದರು’ ಎಂದು ವರುಣ್ ಧವನ್ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ

ವರುಣ್ ಧವನ್ ಅವರ ಈಗ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಪೂರ್ಣ ರೊಮ್ಯಾಂಟಿಕ್ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಡೇವಿಡ್ ಧವನ್ ನಿರ್ದೇಶನದ ಈ ಸಿನಿಮಾ ಜೂನ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ನಿಯಂತ್ರಣ ತಪ್ಪಿದ ಬೈಕ್‌; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸೆರೆ!

ಮೇ 19ರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಮನೆಯೊಂದರ ಕಬ್ಬಿಣದ ಗೇಟ್‌ಗೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ತೀವ್ರತೆಗೆ ಗೇಟ್ ಸಂಪೂರ್ಣವಾಗಿ ಮುರಿದು ಕೆಳಗೆ ಬಿದ್ದಿದ್ದು, ಬೈಕ್ ಮತ್ತು ಸವಾರ ಇಬ್ಬರೂ ನೆಲಕ್ಕುರುಳಿರುವುದು ಕಂಡುಬಂದಿದೆ. ಅಪಘಾತದ ಬಳಿಕ ಸ್ಥಳದಲ್ಲೆಲ್ಲಾ ದಟ್ಟವಾದ ಹೊಗೆ ಮತ್ತು ಧೂಳು ಆವರಿಸಿಕೊಂಡಿದ್ದು, ತೀವ್ರವಾಗಿ ಗಾಯಗೊಂಡ ಸವಾರನು ಆಘಾತದಿಂದ ಎದ್ದು ನಿಲ್ಲಲಾರದೆ ಗೇಟ್‌ನ ಭಾಗವನ್ನು ಬದಿಗೆ ಸರಿಸಲು ಯತ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ? ಆಂತರಿಕ ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು? – Kannada News | High command Collects leaders opinion about Karnataka BJP Chief

ಬೆಂಗಳೂರು, (ಮೇ 22): ಕರ್ನಾಟಕ ಬಿಜೆಪಿಯಲ್ಲಿನ (Karnataka BJP) ನಾಯಕತ್ವ ಗೊಂದಲ ನಿವಾರಿಸಲು ಹೈಕಮಾಂಡ್ ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಶಿವಪ್ರಕಾಶ್ ಮತ್ತು ಬೈಜಯಂತ್ ಪಾಂಡಾ ಅವರು ಕೋರ್ ಸಮಿತಿ ಸದಸ್ಯರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂಸದರನ್ನು ಒಳಗೊಂಡ 31 ಆಯ್ದ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ. ಅಲ್ಲದೇ ನಾಯಕರ ಒನ್​ ಟು ಒನ್ ಅಭಿಪ್ರಾಯ ಸಂಗ್ರಹಿಸಿದ್ದಅರೆ. ರಾಜ್ಯ ನಾಯಕತ್ವದ ಕುರಿತು ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸುವ ಈ ಪ್ರಕ್ರಿಯೆ, ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಅನುಸರಿಸುವ ಸಾಮಾನ್ಯ ಕ್ರಮ ಎಂದು ಹೇಳಲಾಗಿದೆ.

ವಿಜಯೇಂದ್ರ ಪರ ಮತ್ತು ವಿರುದ್ಧವಾಗಿದ್ದ ಮುಖಂಡರಿಂದಲೂ ಅಭಿಪ್ರಾಯ ಸಂಗ್ರಹಿಸಿದ್ದು, ಅಭಿಪ್ರಾಯ ಸಂಗ್ರಹ ವೇಳೆ ರಾಜ್ಯ ನಾಯಕರು ವಿವಿಧ ರೀತಿ ಸಲಹೆಗಳನ್ನ ನೀಡಿದ್ದಾರೆ. ಕೆಲವರಿಂದ ಬಿ.ವೈ.ವಿಜಯೇಂದ್ರ ಮುಂದುವರಿಕೆ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ, ಇನ್ನೂ ಕೆಲವರು ಪಕ್ಷದ ನಿರ್ಧಾರಕ್ಕೆ ಒಪ್ಪಿಕೊಳ್ಳುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರಿಂದ ರಾಜ್ಯಾಧ್ಯಕ್ಷರನ್ನು ಬದಲಿಸುವುದು ಸೂಕ್ತ ಎಂಬ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಪ್ರಕ್ರಿಯೆ ಚುರುಕು, ಮಹತ್ವದ ಬದಲಾವಣೆಯ ಸುಳಿವು ಕೊಟ್ಟ ಉಸ್ತುವಾರಿ

Source link

ಡಾಲರ್ ಎದುರು ರುಪಾಯಿ ಹೇಗೆ ಬೇಕಾದರೂ ಕುಸಿಯಲಿ ಬಿಡಿ, ಚಿಂತೆ ಬೇಡ: ಹಣಕಾಸು ಆಯೋಗ ಅಧ್ಯಕ್ಷ ಪನಗರಿಯಾ – Kannada News | Indias rupee value economist panagariya advises rbi against intervention

ನವದೆಹಲಿ, ಮೇ 22: ಡಾಲರ್ ಎದುರು ರುಪಾಯಿ ಮೌಲ್ಯ (Dollar vs Rupee) ಕಳೆದ ಎರಡು ದಿನದಿಂದ ಸ್ವಲ್ಪ ಚೇತರಿಸಿಕೊಂಡಿದೆ. ಆದರೂ ಕೂಡ ಇತ್ತೀಚಿನ ವರ್ಷಗಳಿಂದ ರುಪಾಯಿ ಮೌಲ್ಯ ಸಿಕ್ಕಾಪಟ್ಟೆ ಕುಸಿದಿದೆ. ಇನ್ನೂ ಕೂಡ ಪ್ರತೀ ಡಾಲರ್​ಗೆ ರುಪಾಯಿ ಮೌಲ್ಯ 96ರ ಗಡಿ ಮೇಲೆಯೇ ಇದೆ. ಬಹಳಷ್ಟು ಜನರು ರುಪಾಯಿ ಮೌಲ್ಯ ಕುಸಿತದ ವಿಚಾರದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೇ ವೇಳೆ, ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ (Arvind Panagariya) ಅವರು ರುಪಾಯಿ ಮೌಲ್ಯ ಏರಿಳಿತದ ಬಗ್ಗೆ ಸದ್ಯ ಹೆಚ್ಚು ಚಿಂತೆ ಮಾಡುವ ಪ್ರಮೇಯ ಇಲ್ಲ ಎಂದಿದ್ದಾರೆ. ರುಪಾಯಿ ಕುಸಿತ ತಡೆಯಲು ಆರ್​ಬಿಐ ತನ್ನ ಫಾರೆಕ್ಸ್ ನಿಧಿಯನ್ನು ವ್ಯಯಿಸಲು ಹೋಗಬಾರದು. ರುಪಾಯಿ ಸಹಜವಾಗಿ ಕುಸಿಯಲು ಬಿಡಬೇಕು ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರೂ ಆದ ಅವರು ಸಲಹೆ ನೀಡಿದ್ದಾರೆ.

‘100 ಎಂಬುದು ಕೇವಲ ಒಂದು ಸಂಖ್ಯೆ’

ಸಾಮಾಜಿಕ ಮಾಧ್ಯಮ ಎಕ್ಸ್ (X) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಪನಗರಿಯಾ, “ಪ್ರತಿ ಡಾಲರ್‌ಗೆ 100 ರೂಪಾಯಿ ಆಗುತ್ತದೆ ಎಂಬ ಮಾನಸಿಕ ಆತಂಕ ನಿಮ್ಮ (ಆರ್​ಬಿಐ) ನೀತಿ ನಿರ್ಧಾರಗಳನ್ನು ನಿಯಂತ್ರಿಸಲು ಬಿಡಬೇಡಿ. 99 ಮತ್ತು 101 ರಂತೆ 100 ಸಹ ಕೇವಲ ಒಂದು ಸಂಖ್ಯೆಯಷ್ಟೇ. ಪ್ರಸ್ತುತ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬಿಕ್ಕಟ್ಟು ತಾತ್ಕಾಲಿಕವಾಗಿರಲಿ ಅಥವಾ ದೀರ್ಘಕಾಲದ್ದಾಗಿರಲಿ, ಈ ಕ್ಷಣದಲ್ಲಿ ರೂಪಾಯಿ ಅಪಮೌಲ್ಯಗೊಳ್ಳಲು (Depreciate) ಬಿಡುವುದೇ ಸರಿಯಾದ ಕ್ರಮ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್

ಜಾಗತಿಕ ಇಂಧನ ಮಾರುಕಟ್ಟೆಯ ಏರಿಳಿತಗಳಿಗೆ ಭಾರತೀಯ ಆರ್ಥಿಕತೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಹೀಗೆ ವಿವರಿಸಿದ್ದಾರೆ:

ತಾತ್ಕಾಲಿಕ ಬಿಕ್ಕಟ್ಟಾಗಿದ್ದರೆ (3 ತಿಂಗಳಿಂದ 1 ವರ್ಷ) ರೂಪಾಯಿ ಮೌಲ್ಯ ಈಗ ಕುಸಿದರೂ, ತೈಲ ಆಮದು ವೆಚ್ಚ ಕಡಿಮೆಯಾದ ತಕ್ಷಣ ಮತ್ತು ವಿದೇಶಿ ಹೂಡಿಕೆದಾರರು ‘ಅಗ್ಗದ ರೂಪಾಯಿ’ಯ ಲಾಭ ಪಡೆಯಲು ಭಾರತದತ್ತ ಮುಖ ಮಾಡಿದಾಗ ರೂಪಾಯಿ ಮೌಲ್ಯ ಮತ್ತೆ ಗಣನೀಯವಾಗಿ ಚೇತರಿಸಿಕೊಳ್ಳುತ್ತದೆ.

ದೀರ್ಘಕಾಲದ ಬಿಕ್ಕಟ್ಟಾಗಿದ್ದ (ಒಂದು ವರ್ಷಕ್ಕಿಂತ ಹೆಚ್ಚು) ಪರಿಸ್ಥಿತಿಯಲ್ಲಿ, ರೂಪಾಯಿ ಕುಸಿತವನ್ನು ತಡೆಯಲು ಪ್ರಯತ್ನಿಸುವುದು ತಪ್ಪು ನಿರ್ಧಾರವಾಗುತ್ತದೆ. ಕೃತಕವಾಗಿ ರೂಪಾಯಿಯನ್ನು ರಕ್ಷಿಸಲು ಹೋದರೆ ದೇಶದ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಸಂಪೂರ್ಣವಾಗಿ ಖಾಲಿಯಾಗುವವರೆಗೂ ರಕ್ತಸ್ರಾವ ಮುಂದುವರಿಯುತ್ತದೆ.

ತಾತ್ಕಾಲಿಕ ಪರಿಹಾರಗಳು ಅನಗತ್ಯ: ಅರವಿಂದ್ ಪನಗರಿಯಾ

ಆರ್‌ಬಿಐ ರೂಪಾಯಿ ರಕ್ಷಣೆಗಾಗಿ ಡಾಲರ್ ಬಾಂಡ್‌ಗಳನ್ನು ಬಿಡುಗಡೆ ಮಾಡುವುದು ಅಥವಾ ಅನಿವಾಸಿ ಭಾರತೀಯರ (NRI) ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ನೀಡುವುದನ್ನು ಪರಿಗಣಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇವು ಕೇವಲ ತಾತ್ಕಾಲಿಕ ಮುಲಾಮುಗಳಷ್ಟೇ (Band-aid) ಹೊರತು ಶಾಶ್ವತ ಪರಿಹಾರವಲ್ಲ. ಇವುಗಳಿಂದ ವಿದೇಶಿ ಶ್ರೀಮಂತ ಹೂಡಿಕೆದಾರರಿಗೆ ಮಾತ್ರ ಲಾಭವಾಗುತ್ತದೆ. ಅಂತಿಮವಾಗಿ ರುಪಾಯಿ ಮೌಲ್ಯ 100 ರ ಗಡಿಯನ್ನು ದಾಟಲೇಬೇಕಾಗುತ್ತದೆ ಎಂದು ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷರೂ ಆದ ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ?

2013ರ ಕರೆನ್ಸಿ ಬಿಕ್ಕಟ್ಟಿಗೆ ಹೋಲಿಸಿದರೆ ಪ್ರಸ್ತುತ ಭಾರತದ ಸ್ಥಿತಿ ಅತ್ಯಂತ ಸದೃಢವಾಗಿದೆ. ಅಂದು ದೇಶದಲ್ಲಿ ಹಣದುಬ್ಬರ (Inflation) ಎರಡಂಕಿ ದಾಟಿತ್ತು, ಆದರೆ ಪ್ರಸ್ತುತ ಹಣದುಬ್ಬರ ನಿಯಂತ್ರಣದಲ್ಲಿದೆ. ಆದ್ದರಿಂದ ರೂಪಾಯಿ ಅಪಮೌಲ್ಯದಿಂದ ಎದುರಾಗಬಹುದಾದ ಸಾಧಾರಣ ಹಣದುಬ್ಬರದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಭಾರತದ ಆರ್ಥಿಕತೆಗೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಉದ್ವಿಗ್ನತೆ ಹಾಗೂ ತೈಲ ಬೆಲೆ ಏರಿಕೆಯ ಒತ್ತಡದಿಂದಾಗಿ ಇತ್ತೀಚೆಗೆ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ ದಾಖಲೆಯ 97 ರೂಪಾಯಿಗಳ ಸಮೀಪಕ್ಕೆ ತಲುಪಿತ್ತು. ಆರ್‌ಬಿಐ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ ರೂಪಾಯಿ ಮತ್ತಷ್ಟು ಕುಸಿಯದಂತೆ ತಡೆದಿತ್ತು. ಆದರೆ, ವಾರ್ಷಿಕ ಮುಂಗಡ ಮಾರುಕಟ್ಟೆಯಲ್ಲಿ (Forward Market) ಡಾಲರ್ ಮೌಲ್ಯ ಈಗಾಗಲೇ 100 ರ ಗಡಿಯನ್ನು ದಾಟಿರುವುದನ್ನು ತಜ್ಞರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪನಗರಿಯಾ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುಡು ಬೇಸಿಗೆಯಲ್ಲಿ ನೀರಿನ ಟ್ಯಾಂಕ್​ಗೆ ಅಲ್ಯೂಮಿನಿಯಂ ಫಾಯಿಲ್ ಸುದ್ದಿದರೆ ಏನು ಲಾಭ?

Source link

ಸ್ವಿಚ್ ಆಫ್ ಮಾಡಿದ್ರೂ ಕರೆಂಟ್ ಎಳೆಯುವ ಈ 6 ಉಪಕರಣಗಳು, ಬಿಲ್ ಕಡಿಮೆ ಮಾಡಲು ಸರ್ಕಾರದ ಸಿಂಪಲ್ ಟಿಪ್ಸ್

Source link

TV9 KANNADA NEWS LIVE: ರಾಜ್ಯಸಭಾ ಚುನಾವಣಾ ದಿನಾಂಕ ಘೋಷಣೆ, ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ, ಮಧ್ಯಾಹ್ನದವರೆಗಿನ ಪ್ರಮುಖ ಸುದ್ದಿಗಳು – Kannada News | National News: Rajya Sabha Polls Announced Across 10 States as Big Budget Film Industry Faces Funding Crunch Amid Today’s Major Developments

ನವದೆಹಲಿ, ಮೇ 22: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೊಷಣೆ ಮಾಡಿದೆ. ಜೂನ್ 18ರಂದು ರಾಜ್ಯಸಭಾ ಚುನಾವಣೆ(Rajya Sabha Election) ನಡೆಯಲಿದೆ. ಕರ್ನಾಟಕದ 4 ಸ್ಥಾನ ಸೇರಿ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸೇರಿದಂತೆ ಹಾಲಿ ಶಾಸಕರ ಅವಧಿ ಪೂರ್ಣಗೊಂಡ ನಂತರ ಜೂನ್ ಮತ್ತು ಜುಲೈನಲ್ಲಿ 24 ಸ್ಥಾನಗಳು ತೆರವಾಗಲಿವೆ.

ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಜೂನ್ 1 ರಂದು ಹೊರಡಿಸಲಾಗುವುದು. ಜೂನ್ 1 ರಿಂದ 8 ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಜೂನ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಜೂನ್ 11 ರವರೆಗೆ ಸಮಯವಿರುತ್ತದೆ. ರಾಜ್ಯದಲ್ಲಿ ಜೂನ್ 18 ರಂದು ಮತದಾನ ನಡೆಯಲಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.

ಮಧ್ಯಾಹ್ನದವರೆಗಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಕಿಸ್ತಾನಕ್ಕೆ ಭಾರತದ ಸೈನಿಕರ ಚಲನವಲನಗಳ ಮಾಹಿತಿ ನೀಡ್ತಿದ್ದ ಪಂಜಾಬ್ ವ್ಯಕ್ತಿ ಅರೆಸ್ಟ್​
ಭಾರತೀಯ ರಕ್ಷಣಾ ಪಡೆಗಳ ಚಲನವಲನಗಳ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನ(Pakistan)ದ ಹ್ಯಾಂಡ್ಲರ್‌ಗಳಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಪಠಾಣ್‌ಕೋಟ್ ಪೊಲೀಸರು ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂಬಾತನನ್ನು ಬಂಧಿಸಿದ್ದಾರೆ. ಚಕ್ ಧಾರಿವಾಲ್ ಗ್ರಾಮದ ನಿವಾಸಿಯಾದ ಬಲ್ಜಿತ್ ಸಿಂಗ್, ರಾಷ್ಟ್ರೀಯ ಹೆದ್ದಾರಿ-44ರ ಪಠಾಣ್‌ಕೋಟ್-ಜಮ್ಮು ರಸ್ತೆಯ ಸೇತುವೆಯ ಬಳಿಯ ಅಂಗಡಿಯೊಂದರಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ.
ಈ ಹೆದ್ದಾರಿಯಲ್ಲಿ ಹಾದುಹೋಗುವ ಸೇನೆ ಮತ್ತು ಅರೆಸೈನಿಕ ಪಡೆಗಳ ಚಲನವಲನಗಳನ್ನು ಲೈವ್ ಆಗಿ ಮೇಲ್ವಿಚಾರಣೆ ಮಾಡಿ, ಮಾಹಿತಿಯನ್ನು ಪಾಕಿಸ್ತಾನ ಮತ್ತು ವಿದೇಶಿ ಏಜೆಂಟ್‌ಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸುತ್ತಿದ್ದ. ಈ ಕೆಲಸಕ್ಕಾಗಿ ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯಿಂದ ಈತನಿಗೆ ನಿರ್ದೇಶನಗಳು ಬರುತ್ತಿದ್ದವು ಮತ್ತು ಅದಕ್ಕಾಗಿ 40,000 ರೂ. ಹಣವನ್ನೂ ನೀಡಲಾಗಿತ್ತು. ಸದ್ಯ ಪೊಲೀಸರು ಈತನಿಂದ ಕ್ಯಾಮೆರಾ ಮತ್ತು ವೈಫೈ ರೂಟರ್ ವಶಪಡಿಸಿಕೊಂಡಿದ್ದು, ಜಾಲದಲ್ಲಿದ್ದ ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹೈವೇಯಲ್ಲಿ ಸಿಸಿಟಿವಿ ಹಾಕಿ ಪಾಕಿಸ್ತಾನಕ್ಕೆ ಭಾರತದ ಸೈನಿಕರ ಚಲನವಲನಗಳ ಮಾಹಿತಿ ನೀಡ್ತಿದ್ದ ಪಂಜಾಬ್ ವ್ಯಕ್ತಿ ಅರೆಸ್ಟ್​

ಮಧ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ
ಹಾಸ್ಟೆಲ್ ಮಾಲೀಕನ ಮಗ ಮದ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ಶಿವಕುಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರ ಕೋಣೆಗೆ ಹಾಸ್ಟೆಲ್ ಮಾಲೀಕನ ಮಗ ಶುಭಂ ದ್ವಿವೇದಿ ಎಂಬಾತ ನುಗ್ಗಿದ್ದಾನೆ.
18 ರಂದು ಮಧ್ಯರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಆರೋಪಿ, ವಿದ್ಯಾರ್ಥಿನಿಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಅವರ ಕೂದಲನ್ನು ಹಿಡಿದು ಎಳೆದಾಡಿ ವಿಕೃತ ಅಟ್ಟಹಾಸ ಮೆರೆದಿದ್ದಾನೆ. ಈ ಭೀಕರ ದೃಶ್ಯದ 30 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಕಳೆದ 10 ದಿನಗಳಿಂದ ಆರೋಪಿ ತಮಗೆ ಫೋನ್ ಹಾಗೂ ಸಂದೇಶಗಳ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಮಧ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ, ನಡೆದಿದ್ದೇನು?

ಮೊಬೈಲ್​ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು
ಮೊಬೈಲ್​(Mobile)ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮೂವರು ಅಪ್ರಾಪ್ತ ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಫ್ರೀ ಫೈರ್ ಗೇಮ್ ದಿನವಿಡೀ ಆಡುತ್ತಿದ್ದರು, ಇದಕ್ಕೆ ಕೋಪಗೊಂಡ ತಂದೆ ಗೇಮ್ ಆಡಬೇಡಿ ಎಂದು ಮೊಬೈಲ್ ಕಿತ್ತಿಟ್ಟುಕೊಂಡಿದ್ದರು. ಮೂವರು ಮನೆಯಿಂದ 15,000 ರೂ. ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸಲಾಗಿದೆ. ಅವರು ಮುಂಬೈ ರೈಲು ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರ ಪ್ರಕಾರ ಕಾಣೆಯಾದ ಮಕ್ಕಳ ವಯಸ್ಸು 14, 11 ಮತ್ತು 9 ವರ್ಷ, ಅವರಲ್ಲಿ ಒಬ್ಬ ಬಾಲಕಿ ಕೂಡ ಇದ್ದಾಳೆ. ಮೇ 19ರ ಬೆಳಗಿನ ಜಾವ ಕುಟುಂಬದವರೆಲ್ಲಾ ಮಲಗಿರುವಾಗ ಅವರು ಮನೆಯಿಂದ ಓಡಿ ಹೋಗಿದ್ದಾರೆ.

ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ
ಪ್ರಸ್ತುತ ಭಾರತೀಯ ಚಿತ್ರರಂಗವು ಹೆಚ್ಚುತ್ತಿರುವ ನಿರ್ಮಾಣ ವೆಚ್ಚ ಹಾಗೂ ವ್ಯಾಪಾರ ಒಪ್ಪಂದಗಳ ಕೊರತೆಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಿನಿಮಾಗಳು ಬಿಡುಗಡೆಗೆ ಮುನ್ನವೇ ಹೂಡಿಕೆಯನ್ನು ಮರಳಿ ಪಡೆಯುವುದು ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸಿದೆ. ಚಿತ್ರದ ಸ್ಟಾರ್ ನಟರು ಅಥವಾ ಬಜೆಟ್ ಎಷ್ಟು ದೊಡ್ಡದಾಗಿದ್ದರೂ, ಬಿಡುಗಡೆಯಾಗುವ ಟೀಸರ್ ಮತ್ತು ಟ್ರೈಲರ್‌ಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾದರೆ, ಒಟಿಟಿ ಹಾಗೂ ಥಿಯೇಟ್ರಿಕಲ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವುದು ಕಷ್ಟಸಾಧ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ: ಕುದುರುತ್ತಿಲ್ಲ ಡೀಲ್

ಮಗಳಿಗೆ ಮಾತು ಕೊಟ್ಟಿದ್ದ ತಂದೆ, ಆ ತಂದೆಯ ಮಾತು ಈಡೇರಿಸಿದ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಅಭಿಮಾನಿಗಳ ನಟ. ಇತರೆ ಸ್ಟಾರ್ ನಟರುಗಳಂತೆ ಜನರೊಟ್ಟಿಗೆ ಹೆಚ್ಚು ಅಂತರ ಕಾಯ್ದುಕೊಳ್ಳುವುದಿಲ್ಲ. ಚಿರಂಜೀವಿಯನ್ನು ನೋಡಲು ಕೆಲವರು ಪಾದಯಾತ್ರೆ ಮಾಡುತ್ತಾ, ಕೆಲವರು ನೂರಾರು ಕಿ.ಮೀ ಸೈಕಲ್ ತುಳಿಯುತ್ತ ಬರುತ್ತಾರೆ ಎಲ್ಲರನ್ನೂ ಪ್ರೀತಿಯಿಂದ ಎದುರುಗೊಂಡು ಮನೆಯಲ್ಲಿ ಊಟ ಮಾಡಿಸಿ ಕಳಿಸುತ್ತಾರೆ ನಟ. ಇದೀಗ ತಂದೆಯೊಬ್ಬ ತಮ್ಮ ಮಗಳಿಗೆ ಕೊಟ್ಟಿದ್ದ ಮಾತನ್ನು ಈಡೇರಿಸಲು ಮೆಗಾಸ್ಟಾರ್ ಚಿರಂಜೀವಿ ನೆರವಾಗಿದ್ದಾರೆ.
ತೆಲಂಗಾಣದ ಎಮ್ ರುಶಿ, ಇತ್ತೀಚೆಗೆ ಫಲಿತಾಂಶ ಪ್ರಕಟವಾದ TEGAPCET ಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಂಪಾದಿಸಿದ್ದಾರೆ. ರುಶಿ, ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಪರೀಕ್ಷೆಗೂ ಮುನ್ನ ಅವರ ರುಶಿ ಅವರ ತಂದೆ ಮಗಳಿಗೆ ಮಾತು ಕೊಟ್ಟಿದ್ದರಂತೆ, ‘ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದರೆ ಚಿರಂಜೀವಿ ಅವರನ್ನು ಭೇಟಿ ಮಾಡಿಸುತ್ತೇನೆ’ ಎಂದು. ಆದರಂತೆ ಚೆನ್ನಾಗಿ ಓದಿದ ರುಶಿ, ತೆಲಂಗಾಣ ರಾಜ್ಯ ಎಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕು ಗಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:00 pm, Fri, 22 May 26

Source link

ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?: ಅಸಲಿ ಕಾರಣ ಬಿಚ್ಚಿಟ್ಟ ಪೊನ್ನಣ್ಣ!

ಬೆಂಗಳೂರು, ಮೇ.22: ಸಿಎಂ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ನಡೆಸಲು ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಆಗಸ್ಟ್ 31ರ ಗಡುವಿನೊಳಗೆ ಚುನಾವಣೆ ನಡೆಸುವುದು ಕಷ್ಟಕರವಾಗಿದೆ. ಅಧಿಕಾರಿಗಳು ಈಗಾಗಲೇ ಜನಗಣತಿ (ಸೆನ್ಸಸ್) ಹಾಗೂ ಆಸ್ತಿ ಹಕ್ಕುಗಳ ಸಮೀಕ್ಷೆ (ಎಸ್​ಐಆರ್) ನಂತಹ ಪ್ರಮುಖ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಅಗತ್ಯ ಸಿಬ್ಬಂದಿ ಲಭ್ಯವಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಸಮಯಾವಕಾಶ ನೀಡುವಂತೆ ಮನವಿ ಮಾಡಲಾಗಿದ್ದು, ಆದರೆ ಕೇಳಿದಷ್ಟು ಸಮಯ ಸಿಕ್ಕಿಲ್ಲ. ಸಿಬ್ಬಂದಿ ಇಲ್ಲದೆ ಚುನಾವಣೆ ಹೇಗೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗವೇ ನಿರ್ಧರಿಸಬೇಕು ಎಂದು ಪೊನ್ನಣ್ಣ ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಆದೇಶಗಳಂತೆ ಜನಗಣತಿ ಮತ್ತು ಎಸ್​ಐಆರ್ ಕಾರ್ಯಗಳು ಕಡ್ಡಾಯವಾಗಿ ನಡೆಯುತ್ತವೆ ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಓ ಹೆಣ್ಮಗು… ಸ್ಕೂಟಿಯಲ್ಲಿ ಬಂದು ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ! ಮುಂದೇನಾಯ್ತು ನೋಡಿ – Kannada News | Khatima Highway Accident: Woman’s Scooter Collides with Elephant, Tusk Breaks

ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ

ಖತಿಮಾ, ಮೇ.22: ಹೆದ್ದಾರಿಯಲ್ಲಿ ಚಲಿಸುವಾಗ ಮುಂದೆ ಬರುವ ವಾಹನಗಳಿಗೆ ಅಥವಾ ಸಣ್ಣ-ಪುಟ್ಟ ನಾಯಿ, ಬೆಕ್ಕು, ಧನಗಳಿಗೆ ಡಿಕ್ಕಿ ಹೊಡೆಯುವುದಿರುವ ಸುದ್ದಿಗಳನ್ನು ಕೇಳಿರಬಹುದು. ಆದರೆ, ಉತ್ತರಾಖಂಡ್‌ನ ಖತಿಮಾ ಎಂಬಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ದೈತ್ಯ ಆನೆಗೇ ನೇರವಾಗಿ ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಆನೆಯ ದಂತವೇ ಮುರಿದು ಬಿದ್ದಿದ್ದು, ಗಾಯಗೊಂಡ ಆನೆ ಕಿರುಚುತ್ತಾ ಕಾಡಿನೊಳಗೆ ಓಡಿಹೋಗಿದೆ.

ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಖತಿಮಾದ ‘ಹಿಂದ್ ಪಬ್ಲಿಕ್ ಸ್ಕೂಲ್’ನ ಶಿಕ್ಷಕಿ ನಿಕಿತಾ ಕಪ್ರಿ ಎಂದು ಗುರುತಿಸಲಾಗಿದೆ. ನಿಕಿತಾ ಅವರು ತನಕ್ಪುರದಲ್ಲಿದ್ದ ತಮ್ಮ ತಾಯಿಯ ಸಂಬಂಧಿಕರ ಮನೆಗೆ ಹೋಗಿ, ಮಂಗಳವಾರ ಬೆಳಿಗ್ಗೆ (ಮೇ 19) ಸ್ಕೂಟರ್‌ನಲ್ಲಿ ವಾಪಸ್ ಬರುತ್ತಿದ್ದರು. ಬನ್ಬಾಸಾ ಮತ್ತು ಚಕರ್ಪುರ ನಡುವಿನ ದಟ್ಟ ಅರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಆನೆ ಕಾರಿಡಾರ್‌ (Elephant Corridor) ವಲಯದಲ್ಲಿ ಆನೆಯೊಂದು ಇದ್ದಕ್ಕಿದ್ದಂತೆ ರಸ್ತೆಗೆ ಬಂದಿದೆ. ಹಠಾತ್ ಆನೆಯನ್ನು ಕಂಡು ಗಾಬರಿಗೊಂಡ ಶಿಕ್ಷಕಿ, ಸ್ಕೂಟರ್ ನಿಯಂತ್ರಣ ಸಿಗದೆ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದ್ದಾರೆ.

ಇದನ್ನೂ ಓದಿ: ಮೊಬೈಲ್​ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು

ಇಲ್ಲಿದೆ ನೋಡಿ ವೈರಲ್​ ವಿಡಿಯೋ:

ಅಪಘಾತದ ತೀವ್ರತೆಗೆ ಶಿಕ್ಷಕಿ ನಿಕಿತಾ ಅವರಿಗೂ ಗಂಭೀರ ಗಾಯಗಳಾಗಿದ್ದು, ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ (Forest Department) ಅಧಿಕಾರಿಗಳು ಹೆದ್ದಾರಿಯಲ್ಲಿ ಬಿದ್ದಿದ್ದ ಆನೆಯ ಮುರಿದ ದಂತವನ್ನು ವಶಕ್ಕೆ ಪಡೆದು ಕಚೇರಿಯಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ. ದಂತ ಮುರಿದುಕೊಂಡು ನೋವಿನಿಂದ ಕಾಡಿಗೆ ಓಡಿರುವ ಆನೆಯ ಆರೋಗ್ಯದ ಮೇಲೆ ನಿಗಾ ಇಡಲು ಅರಣ್ಯ ಸಿಬ್ಬಂದಿ ಕಾಡಿನೊಳಗೆ ಎರಡು ‘ಟ್ರ್ಯಾಪ್ ಕ್ಯಾಮೆರಾ’ಗಳನ್ನು (Trap Cameras) ಅಳವಡಿಸಿದ್ದಾರೆ. ಸದ್ಯ ಈ ಅಪಘಾತದ ನಂತರದ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅರಣ್ಯ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಚಾಲಕರಿಗೆ ಮನವಿ ಮಾಡಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version