ಡಾಲರ್ ಎದುರು ರುಪಾಯಿ ಹೇಗೆ ಬೇಕಾದರೂ ಕುಸಿಯಲಿ ಬಿಡಿ, ಚಿಂತೆ ಬೇಡ: ಹಣಕಾಸು ಆಯೋಗ ಅಧ್ಯಕ್ಷ ಪನಗರಿಯಾ – Kannada News | Indias rupee value economist panagariya advises rbi against intervention

ನವದೆಹಲಿ, ಮೇ 22: ಡಾಲರ್ ಎದುರು ರುಪಾಯಿ ಮೌಲ್ಯ (Dollar vs Rupee) ಕಳೆದ ಎರಡು ದಿನದಿಂದ ಸ್ವಲ್ಪ ಚೇತರಿಸಿಕೊಂಡಿದೆ. ಆದರೂ ಕೂಡ ಇತ್ತೀಚಿನ ವರ್ಷಗಳಿಂದ ರುಪಾಯಿ ಮೌಲ್ಯ ಸಿಕ್ಕಾಪಟ್ಟೆ ಕುಸಿದಿದೆ. ಇನ್ನೂ ಕೂಡ ಪ್ರತೀ ಡಾಲರ್​ಗೆ ರುಪಾಯಿ ಮೌಲ್ಯ 96ರ ಗಡಿ ಮೇಲೆಯೇ ಇದೆ. ಬಹಳಷ್ಟು ಜನರು ರುಪಾಯಿ ಮೌಲ್ಯ ಕುಸಿತದ ವಿಚಾರದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೇ ವೇಳೆ, ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ (Arvind Panagariya) ಅವರು ರುಪಾಯಿ ಮೌಲ್ಯ ಏರಿಳಿತದ ಬಗ್ಗೆ ಸದ್ಯ ಹೆಚ್ಚು ಚಿಂತೆ ಮಾಡುವ ಪ್ರಮೇಯ ಇಲ್ಲ ಎಂದಿದ್ದಾರೆ. ರುಪಾಯಿ ಕುಸಿತ ತಡೆಯಲು ಆರ್​ಬಿಐ ತನ್ನ ಫಾರೆಕ್ಸ್ ನಿಧಿಯನ್ನು ವ್ಯಯಿಸಲು ಹೋಗಬಾರದು. ರುಪಾಯಿ ಸಹಜವಾಗಿ ಕುಸಿಯಲು ಬಿಡಬೇಕು ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರೂ ಆದ ಅವರು ಸಲಹೆ ನೀಡಿದ್ದಾರೆ.

‘100 ಎಂಬುದು ಕೇವಲ ಒಂದು ಸಂಖ್ಯೆ’

ಸಾಮಾಜಿಕ ಮಾಧ್ಯಮ ಎಕ್ಸ್ (X) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಪನಗರಿಯಾ, “ಪ್ರತಿ ಡಾಲರ್‌ಗೆ 100 ರೂಪಾಯಿ ಆಗುತ್ತದೆ ಎಂಬ ಮಾನಸಿಕ ಆತಂಕ ನಿಮ್ಮ (ಆರ್​ಬಿಐ) ನೀತಿ ನಿರ್ಧಾರಗಳನ್ನು ನಿಯಂತ್ರಿಸಲು ಬಿಡಬೇಡಿ. 99 ಮತ್ತು 101 ರಂತೆ 100 ಸಹ ಕೇವಲ ಒಂದು ಸಂಖ್ಯೆಯಷ್ಟೇ. ಪ್ರಸ್ತುತ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬಿಕ್ಕಟ್ಟು ತಾತ್ಕಾಲಿಕವಾಗಿರಲಿ ಅಥವಾ ದೀರ್ಘಕಾಲದ್ದಾಗಿರಲಿ, ಈ ಕ್ಷಣದಲ್ಲಿ ರೂಪಾಯಿ ಅಪಮೌಲ್ಯಗೊಳ್ಳಲು (Depreciate) ಬಿಡುವುದೇ ಸರಿಯಾದ ಕ್ರಮ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್

ಜಾಗತಿಕ ಇಂಧನ ಮಾರುಕಟ್ಟೆಯ ಏರಿಳಿತಗಳಿಗೆ ಭಾರತೀಯ ಆರ್ಥಿಕತೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಹೀಗೆ ವಿವರಿಸಿದ್ದಾರೆ:

ತಾತ್ಕಾಲಿಕ ಬಿಕ್ಕಟ್ಟಾಗಿದ್ದರೆ (3 ತಿಂಗಳಿಂದ 1 ವರ್ಷ) ರೂಪಾಯಿ ಮೌಲ್ಯ ಈಗ ಕುಸಿದರೂ, ತೈಲ ಆಮದು ವೆಚ್ಚ ಕಡಿಮೆಯಾದ ತಕ್ಷಣ ಮತ್ತು ವಿದೇಶಿ ಹೂಡಿಕೆದಾರರು ‘ಅಗ್ಗದ ರೂಪಾಯಿ’ಯ ಲಾಭ ಪಡೆಯಲು ಭಾರತದತ್ತ ಮುಖ ಮಾಡಿದಾಗ ರೂಪಾಯಿ ಮೌಲ್ಯ ಮತ್ತೆ ಗಣನೀಯವಾಗಿ ಚೇತರಿಸಿಕೊಳ್ಳುತ್ತದೆ.

ದೀರ್ಘಕಾಲದ ಬಿಕ್ಕಟ್ಟಾಗಿದ್ದ (ಒಂದು ವರ್ಷಕ್ಕಿಂತ ಹೆಚ್ಚು) ಪರಿಸ್ಥಿತಿಯಲ್ಲಿ, ರೂಪಾಯಿ ಕುಸಿತವನ್ನು ತಡೆಯಲು ಪ್ರಯತ್ನಿಸುವುದು ತಪ್ಪು ನಿರ್ಧಾರವಾಗುತ್ತದೆ. ಕೃತಕವಾಗಿ ರೂಪಾಯಿಯನ್ನು ರಕ್ಷಿಸಲು ಹೋದರೆ ದೇಶದ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಸಂಪೂರ್ಣವಾಗಿ ಖಾಲಿಯಾಗುವವರೆಗೂ ರಕ್ತಸ್ರಾವ ಮುಂದುವರಿಯುತ್ತದೆ.

ತಾತ್ಕಾಲಿಕ ಪರಿಹಾರಗಳು ಅನಗತ್ಯ: ಅರವಿಂದ್ ಪನಗರಿಯಾ

ಆರ್‌ಬಿಐ ರೂಪಾಯಿ ರಕ್ಷಣೆಗಾಗಿ ಡಾಲರ್ ಬಾಂಡ್‌ಗಳನ್ನು ಬಿಡುಗಡೆ ಮಾಡುವುದು ಅಥವಾ ಅನಿವಾಸಿ ಭಾರತೀಯರ (NRI) ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ನೀಡುವುದನ್ನು ಪರಿಗಣಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇವು ಕೇವಲ ತಾತ್ಕಾಲಿಕ ಮುಲಾಮುಗಳಷ್ಟೇ (Band-aid) ಹೊರತು ಶಾಶ್ವತ ಪರಿಹಾರವಲ್ಲ. ಇವುಗಳಿಂದ ವಿದೇಶಿ ಶ್ರೀಮಂತ ಹೂಡಿಕೆದಾರರಿಗೆ ಮಾತ್ರ ಲಾಭವಾಗುತ್ತದೆ. ಅಂತಿಮವಾಗಿ ರುಪಾಯಿ ಮೌಲ್ಯ 100 ರ ಗಡಿಯನ್ನು ದಾಟಲೇಬೇಕಾಗುತ್ತದೆ ಎಂದು ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷರೂ ಆದ ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ?

2013ರ ಕರೆನ್ಸಿ ಬಿಕ್ಕಟ್ಟಿಗೆ ಹೋಲಿಸಿದರೆ ಪ್ರಸ್ತುತ ಭಾರತದ ಸ್ಥಿತಿ ಅತ್ಯಂತ ಸದೃಢವಾಗಿದೆ. ಅಂದು ದೇಶದಲ್ಲಿ ಹಣದುಬ್ಬರ (Inflation) ಎರಡಂಕಿ ದಾಟಿತ್ತು, ಆದರೆ ಪ್ರಸ್ತುತ ಹಣದುಬ್ಬರ ನಿಯಂತ್ರಣದಲ್ಲಿದೆ. ಆದ್ದರಿಂದ ರೂಪಾಯಿ ಅಪಮೌಲ್ಯದಿಂದ ಎದುರಾಗಬಹುದಾದ ಸಾಧಾರಣ ಹಣದುಬ್ಬರದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಭಾರತದ ಆರ್ಥಿಕತೆಗೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಉದ್ವಿಗ್ನತೆ ಹಾಗೂ ತೈಲ ಬೆಲೆ ಏರಿಕೆಯ ಒತ್ತಡದಿಂದಾಗಿ ಇತ್ತೀಚೆಗೆ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ ದಾಖಲೆಯ 97 ರೂಪಾಯಿಗಳ ಸಮೀಪಕ್ಕೆ ತಲುಪಿತ್ತು. ಆರ್‌ಬಿಐ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ ರೂಪಾಯಿ ಮತ್ತಷ್ಟು ಕುಸಿಯದಂತೆ ತಡೆದಿತ್ತು. ಆದರೆ, ವಾರ್ಷಿಕ ಮುಂಗಡ ಮಾರುಕಟ್ಟೆಯಲ್ಲಿ (Forward Market) ಡಾಲರ್ ಮೌಲ್ಯ ಈಗಾಗಲೇ 100 ರ ಗಡಿಯನ್ನು ದಾಟಿರುವುದನ್ನು ತಜ್ಞರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪನಗರಿಯಾ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುಡು ಬೇಸಿಗೆಯಲ್ಲಿ ನೀರಿನ ಟ್ಯಾಂಕ್​ಗೆ ಅಲ್ಯೂಮಿನಿಯಂ ಫಾಯಿಲ್ ಸುದ್ದಿದರೆ ಏನು ಲಾಭ?

Source link

ಸ್ವಿಚ್ ಆಫ್ ಮಾಡಿದ್ರೂ ಕರೆಂಟ್ ಎಳೆಯುವ ಈ 6 ಉಪಕರಣಗಳು, ಬಿಲ್ ಕಡಿಮೆ ಮಾಡಲು ಸರ್ಕಾರದ ಸಿಂಪಲ್ ಟಿಪ್ಸ್

Source link

TV9 KANNADA NEWS LIVE: ರಾಜ್ಯಸಭಾ ಚುನಾವಣಾ ದಿನಾಂಕ ಘೋಷಣೆ, ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ, ಮಧ್ಯಾಹ್ನದವರೆಗಿನ ಪ್ರಮುಖ ಸುದ್ದಿಗಳು – Kannada News | National News: Rajya Sabha Polls Announced Across 10 States as Big Budget Film Industry Faces Funding Crunch Amid Today’s Major Developments

ನವದೆಹಲಿ, ಮೇ 22: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೊಷಣೆ ಮಾಡಿದೆ. ಜೂನ್ 18ರಂದು ರಾಜ್ಯಸಭಾ ಚುನಾವಣೆ(Rajya Sabha Election) ನಡೆಯಲಿದೆ. ಕರ್ನಾಟಕದ 4 ಸ್ಥಾನ ಸೇರಿ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸೇರಿದಂತೆ ಹಾಲಿ ಶಾಸಕರ ಅವಧಿ ಪೂರ್ಣಗೊಂಡ ನಂತರ ಜೂನ್ ಮತ್ತು ಜುಲೈನಲ್ಲಿ 24 ಸ್ಥಾನಗಳು ತೆರವಾಗಲಿವೆ.

ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಜೂನ್ 1 ರಂದು ಹೊರಡಿಸಲಾಗುವುದು. ಜೂನ್ 1 ರಿಂದ 8 ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಜೂನ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಜೂನ್ 11 ರವರೆಗೆ ಸಮಯವಿರುತ್ತದೆ. ರಾಜ್ಯದಲ್ಲಿ ಜೂನ್ 18 ರಂದು ಮತದಾನ ನಡೆಯಲಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.

ಮಧ್ಯಾಹ್ನದವರೆಗಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಕಿಸ್ತಾನಕ್ಕೆ ಭಾರತದ ಸೈನಿಕರ ಚಲನವಲನಗಳ ಮಾಹಿತಿ ನೀಡ್ತಿದ್ದ ಪಂಜಾಬ್ ವ್ಯಕ್ತಿ ಅರೆಸ್ಟ್​
ಭಾರತೀಯ ರಕ್ಷಣಾ ಪಡೆಗಳ ಚಲನವಲನಗಳ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನ(Pakistan)ದ ಹ್ಯಾಂಡ್ಲರ್‌ಗಳಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಪಠಾಣ್‌ಕೋಟ್ ಪೊಲೀಸರು ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂಬಾತನನ್ನು ಬಂಧಿಸಿದ್ದಾರೆ. ಚಕ್ ಧಾರಿವಾಲ್ ಗ್ರಾಮದ ನಿವಾಸಿಯಾದ ಬಲ್ಜಿತ್ ಸಿಂಗ್, ರಾಷ್ಟ್ರೀಯ ಹೆದ್ದಾರಿ-44ರ ಪಠಾಣ್‌ಕೋಟ್-ಜಮ್ಮು ರಸ್ತೆಯ ಸೇತುವೆಯ ಬಳಿಯ ಅಂಗಡಿಯೊಂದರಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ.
ಈ ಹೆದ್ದಾರಿಯಲ್ಲಿ ಹಾದುಹೋಗುವ ಸೇನೆ ಮತ್ತು ಅರೆಸೈನಿಕ ಪಡೆಗಳ ಚಲನವಲನಗಳನ್ನು ಲೈವ್ ಆಗಿ ಮೇಲ್ವಿಚಾರಣೆ ಮಾಡಿ, ಮಾಹಿತಿಯನ್ನು ಪಾಕಿಸ್ತಾನ ಮತ್ತು ವಿದೇಶಿ ಏಜೆಂಟ್‌ಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸುತ್ತಿದ್ದ. ಈ ಕೆಲಸಕ್ಕಾಗಿ ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯಿಂದ ಈತನಿಗೆ ನಿರ್ದೇಶನಗಳು ಬರುತ್ತಿದ್ದವು ಮತ್ತು ಅದಕ್ಕಾಗಿ 40,000 ರೂ. ಹಣವನ್ನೂ ನೀಡಲಾಗಿತ್ತು. ಸದ್ಯ ಪೊಲೀಸರು ಈತನಿಂದ ಕ್ಯಾಮೆರಾ ಮತ್ತು ವೈಫೈ ರೂಟರ್ ವಶಪಡಿಸಿಕೊಂಡಿದ್ದು, ಜಾಲದಲ್ಲಿದ್ದ ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹೈವೇಯಲ್ಲಿ ಸಿಸಿಟಿವಿ ಹಾಕಿ ಪಾಕಿಸ್ತಾನಕ್ಕೆ ಭಾರತದ ಸೈನಿಕರ ಚಲನವಲನಗಳ ಮಾಹಿತಿ ನೀಡ್ತಿದ್ದ ಪಂಜಾಬ್ ವ್ಯಕ್ತಿ ಅರೆಸ್ಟ್​

ಮಧ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ
ಹಾಸ್ಟೆಲ್ ಮಾಲೀಕನ ಮಗ ಮದ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ಶಿವಕುಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರ ಕೋಣೆಗೆ ಹಾಸ್ಟೆಲ್ ಮಾಲೀಕನ ಮಗ ಶುಭಂ ದ್ವಿವೇದಿ ಎಂಬಾತ ನುಗ್ಗಿದ್ದಾನೆ.
18 ರಂದು ಮಧ್ಯರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಆರೋಪಿ, ವಿದ್ಯಾರ್ಥಿನಿಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಅವರ ಕೂದಲನ್ನು ಹಿಡಿದು ಎಳೆದಾಡಿ ವಿಕೃತ ಅಟ್ಟಹಾಸ ಮೆರೆದಿದ್ದಾನೆ. ಈ ಭೀಕರ ದೃಶ್ಯದ 30 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಕಳೆದ 10 ದಿನಗಳಿಂದ ಆರೋಪಿ ತಮಗೆ ಫೋನ್ ಹಾಗೂ ಸಂದೇಶಗಳ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಮಧ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ, ನಡೆದಿದ್ದೇನು?

ಮೊಬೈಲ್​ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು
ಮೊಬೈಲ್​(Mobile)ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮೂವರು ಅಪ್ರಾಪ್ತ ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಫ್ರೀ ಫೈರ್ ಗೇಮ್ ದಿನವಿಡೀ ಆಡುತ್ತಿದ್ದರು, ಇದಕ್ಕೆ ಕೋಪಗೊಂಡ ತಂದೆ ಗೇಮ್ ಆಡಬೇಡಿ ಎಂದು ಮೊಬೈಲ್ ಕಿತ್ತಿಟ್ಟುಕೊಂಡಿದ್ದರು. ಮೂವರು ಮನೆಯಿಂದ 15,000 ರೂ. ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸಲಾಗಿದೆ. ಅವರು ಮುಂಬೈ ರೈಲು ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರ ಪ್ರಕಾರ ಕಾಣೆಯಾದ ಮಕ್ಕಳ ವಯಸ್ಸು 14, 11 ಮತ್ತು 9 ವರ್ಷ, ಅವರಲ್ಲಿ ಒಬ್ಬ ಬಾಲಕಿ ಕೂಡ ಇದ್ದಾಳೆ. ಮೇ 19ರ ಬೆಳಗಿನ ಜಾವ ಕುಟುಂಬದವರೆಲ್ಲಾ ಮಲಗಿರುವಾಗ ಅವರು ಮನೆಯಿಂದ ಓಡಿ ಹೋಗಿದ್ದಾರೆ.

ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ
ಪ್ರಸ್ತುತ ಭಾರತೀಯ ಚಿತ್ರರಂಗವು ಹೆಚ್ಚುತ್ತಿರುವ ನಿರ್ಮಾಣ ವೆಚ್ಚ ಹಾಗೂ ವ್ಯಾಪಾರ ಒಪ್ಪಂದಗಳ ಕೊರತೆಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಿನಿಮಾಗಳು ಬಿಡುಗಡೆಗೆ ಮುನ್ನವೇ ಹೂಡಿಕೆಯನ್ನು ಮರಳಿ ಪಡೆಯುವುದು ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸಿದೆ. ಚಿತ್ರದ ಸ್ಟಾರ್ ನಟರು ಅಥವಾ ಬಜೆಟ್ ಎಷ್ಟು ದೊಡ್ಡದಾಗಿದ್ದರೂ, ಬಿಡುಗಡೆಯಾಗುವ ಟೀಸರ್ ಮತ್ತು ಟ್ರೈಲರ್‌ಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾದರೆ, ಒಟಿಟಿ ಹಾಗೂ ಥಿಯೇಟ್ರಿಕಲ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವುದು ಕಷ್ಟಸಾಧ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ: ಕುದುರುತ್ತಿಲ್ಲ ಡೀಲ್

ಮಗಳಿಗೆ ಮಾತು ಕೊಟ್ಟಿದ್ದ ತಂದೆ, ಆ ತಂದೆಯ ಮಾತು ಈಡೇರಿಸಿದ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಅಭಿಮಾನಿಗಳ ನಟ. ಇತರೆ ಸ್ಟಾರ್ ನಟರುಗಳಂತೆ ಜನರೊಟ್ಟಿಗೆ ಹೆಚ್ಚು ಅಂತರ ಕಾಯ್ದುಕೊಳ್ಳುವುದಿಲ್ಲ. ಚಿರಂಜೀವಿಯನ್ನು ನೋಡಲು ಕೆಲವರು ಪಾದಯಾತ್ರೆ ಮಾಡುತ್ತಾ, ಕೆಲವರು ನೂರಾರು ಕಿ.ಮೀ ಸೈಕಲ್ ತುಳಿಯುತ್ತ ಬರುತ್ತಾರೆ ಎಲ್ಲರನ್ನೂ ಪ್ರೀತಿಯಿಂದ ಎದುರುಗೊಂಡು ಮನೆಯಲ್ಲಿ ಊಟ ಮಾಡಿಸಿ ಕಳಿಸುತ್ತಾರೆ ನಟ. ಇದೀಗ ತಂದೆಯೊಬ್ಬ ತಮ್ಮ ಮಗಳಿಗೆ ಕೊಟ್ಟಿದ್ದ ಮಾತನ್ನು ಈಡೇರಿಸಲು ಮೆಗಾಸ್ಟಾರ್ ಚಿರಂಜೀವಿ ನೆರವಾಗಿದ್ದಾರೆ.
ತೆಲಂಗಾಣದ ಎಮ್ ರುಶಿ, ಇತ್ತೀಚೆಗೆ ಫಲಿತಾಂಶ ಪ್ರಕಟವಾದ TEGAPCET ಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಂಪಾದಿಸಿದ್ದಾರೆ. ರುಶಿ, ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಪರೀಕ್ಷೆಗೂ ಮುನ್ನ ಅವರ ರುಶಿ ಅವರ ತಂದೆ ಮಗಳಿಗೆ ಮಾತು ಕೊಟ್ಟಿದ್ದರಂತೆ, ‘ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದರೆ ಚಿರಂಜೀವಿ ಅವರನ್ನು ಭೇಟಿ ಮಾಡಿಸುತ್ತೇನೆ’ ಎಂದು. ಆದರಂತೆ ಚೆನ್ನಾಗಿ ಓದಿದ ರುಶಿ, ತೆಲಂಗಾಣ ರಾಜ್ಯ ಎಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕು ಗಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:00 pm, Fri, 22 May 26

Source link

ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?: ಅಸಲಿ ಕಾರಣ ಬಿಚ್ಚಿಟ್ಟ ಪೊನ್ನಣ್ಣ!

ಬೆಂಗಳೂರು, ಮೇ.22: ಸಿಎಂ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ನಡೆಸಲು ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಆಗಸ್ಟ್ 31ರ ಗಡುವಿನೊಳಗೆ ಚುನಾವಣೆ ನಡೆಸುವುದು ಕಷ್ಟಕರವಾಗಿದೆ. ಅಧಿಕಾರಿಗಳು ಈಗಾಗಲೇ ಜನಗಣತಿ (ಸೆನ್ಸಸ್) ಹಾಗೂ ಆಸ್ತಿ ಹಕ್ಕುಗಳ ಸಮೀಕ್ಷೆ (ಎಸ್​ಐಆರ್) ನಂತಹ ಪ್ರಮುಖ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಅಗತ್ಯ ಸಿಬ್ಬಂದಿ ಲಭ್ಯವಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಸಮಯಾವಕಾಶ ನೀಡುವಂತೆ ಮನವಿ ಮಾಡಲಾಗಿದ್ದು, ಆದರೆ ಕೇಳಿದಷ್ಟು ಸಮಯ ಸಿಕ್ಕಿಲ್ಲ. ಸಿಬ್ಬಂದಿ ಇಲ್ಲದೆ ಚುನಾವಣೆ ಹೇಗೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗವೇ ನಿರ್ಧರಿಸಬೇಕು ಎಂದು ಪೊನ್ನಣ್ಣ ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಆದೇಶಗಳಂತೆ ಜನಗಣತಿ ಮತ್ತು ಎಸ್​ಐಆರ್ ಕಾರ್ಯಗಳು ಕಡ್ಡಾಯವಾಗಿ ನಡೆಯುತ್ತವೆ ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಓ ಹೆಣ್ಮಗು… ಸ್ಕೂಟಿಯಲ್ಲಿ ಬಂದು ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ! ಮುಂದೇನಾಯ್ತು ನೋಡಿ – Kannada News | Khatima Highway Accident: Woman’s Scooter Collides with Elephant, Tusk Breaks

ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ

ಖತಿಮಾ, ಮೇ.22: ಹೆದ್ದಾರಿಯಲ್ಲಿ ಚಲಿಸುವಾಗ ಮುಂದೆ ಬರುವ ವಾಹನಗಳಿಗೆ ಅಥವಾ ಸಣ್ಣ-ಪುಟ್ಟ ನಾಯಿ, ಬೆಕ್ಕು, ಧನಗಳಿಗೆ ಡಿಕ್ಕಿ ಹೊಡೆಯುವುದಿರುವ ಸುದ್ದಿಗಳನ್ನು ಕೇಳಿರಬಹುದು. ಆದರೆ, ಉತ್ತರಾಖಂಡ್‌ನ ಖತಿಮಾ ಎಂಬಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ದೈತ್ಯ ಆನೆಗೇ ನೇರವಾಗಿ ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಆನೆಯ ದಂತವೇ ಮುರಿದು ಬಿದ್ದಿದ್ದು, ಗಾಯಗೊಂಡ ಆನೆ ಕಿರುಚುತ್ತಾ ಕಾಡಿನೊಳಗೆ ಓಡಿಹೋಗಿದೆ.

ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಖತಿಮಾದ ‘ಹಿಂದ್ ಪಬ್ಲಿಕ್ ಸ್ಕೂಲ್’ನ ಶಿಕ್ಷಕಿ ನಿಕಿತಾ ಕಪ್ರಿ ಎಂದು ಗುರುತಿಸಲಾಗಿದೆ. ನಿಕಿತಾ ಅವರು ತನಕ್ಪುರದಲ್ಲಿದ್ದ ತಮ್ಮ ತಾಯಿಯ ಸಂಬಂಧಿಕರ ಮನೆಗೆ ಹೋಗಿ, ಮಂಗಳವಾರ ಬೆಳಿಗ್ಗೆ (ಮೇ 19) ಸ್ಕೂಟರ್‌ನಲ್ಲಿ ವಾಪಸ್ ಬರುತ್ತಿದ್ದರು. ಬನ್ಬಾಸಾ ಮತ್ತು ಚಕರ್ಪುರ ನಡುವಿನ ದಟ್ಟ ಅರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಆನೆ ಕಾರಿಡಾರ್‌ (Elephant Corridor) ವಲಯದಲ್ಲಿ ಆನೆಯೊಂದು ಇದ್ದಕ್ಕಿದ್ದಂತೆ ರಸ್ತೆಗೆ ಬಂದಿದೆ. ಹಠಾತ್ ಆನೆಯನ್ನು ಕಂಡು ಗಾಬರಿಗೊಂಡ ಶಿಕ್ಷಕಿ, ಸ್ಕೂಟರ್ ನಿಯಂತ್ರಣ ಸಿಗದೆ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದ್ದಾರೆ.

ಇದನ್ನೂ ಓದಿ: ಮೊಬೈಲ್​ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು

ಇಲ್ಲಿದೆ ನೋಡಿ ವೈರಲ್​ ವಿಡಿಯೋ:

ಅಪಘಾತದ ತೀವ್ರತೆಗೆ ಶಿಕ್ಷಕಿ ನಿಕಿತಾ ಅವರಿಗೂ ಗಂಭೀರ ಗಾಯಗಳಾಗಿದ್ದು, ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ (Forest Department) ಅಧಿಕಾರಿಗಳು ಹೆದ್ದಾರಿಯಲ್ಲಿ ಬಿದ್ದಿದ್ದ ಆನೆಯ ಮುರಿದ ದಂತವನ್ನು ವಶಕ್ಕೆ ಪಡೆದು ಕಚೇರಿಯಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ. ದಂತ ಮುರಿದುಕೊಂಡು ನೋವಿನಿಂದ ಕಾಡಿಗೆ ಓಡಿರುವ ಆನೆಯ ಆರೋಗ್ಯದ ಮೇಲೆ ನಿಗಾ ಇಡಲು ಅರಣ್ಯ ಸಿಬ್ಬಂದಿ ಕಾಡಿನೊಳಗೆ ಎರಡು ‘ಟ್ರ್ಯಾಪ್ ಕ್ಯಾಮೆರಾ’ಗಳನ್ನು (Trap Cameras) ಅಳವಡಿಸಿದ್ದಾರೆ. ಸದ್ಯ ಈ ಅಪಘಾತದ ನಂತರದ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅರಣ್ಯ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಚಾಲಕರಿಗೆ ಮನವಿ ಮಾಡಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi Rules: ಭಾನುವಾರ ತುಳಸಿ ಗಿಡಕ್ಕೆ ಏಕೆ ನೀರು ಹಾಕಬಾರದು? ಶಾಸ್ತ್ರಗಳು ಹೇಳುವುದೇನು ಗೊತ್ತಾ? – Kannada News | Tulasi Rules: Why Not Water or Pluck on Sundays and Ekadashi? Hindu Beliefs Explained

ಭಾನುವಾರದಂದು ತುಳಸಿಗೆ ಏಕೆ ನೀರು ಹಾಕಬಾರದು?Image Credit source: Pinterest

ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಮತ್ತು ಪೂಜನೀಯ ಸ್ಥಾನವಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಪ್ರತಿಯೊಂದು ಮನೆಯ ಅಂಗಳದಲ್ಲೂ ತುಳಸಿ ಗಿಡವನ್ನು ನೆಟ್ಟು, ನಿತ್ಯವೂ ಅದಕ್ಕೆ ನೀರು ಹಾಕಿ ಪೂಜಿಸುವುದು ಅತ್ಯಂತ ಶುಭ ಹಾಗೂ ಸಮೃದ್ಧಿದಾಯಕ ಎಂದು ನಂಬಲಾಗಿದೆ. ಧಾರ್ಮಿಕ ದೃಷ್ಟಿಕೋನ ಮಾತ್ರವಲ್ಲದೆ, ಆಯುರ್ವೇದದಲ್ಲೂ ತುಳಸಿಗೆ ಅಪಾರವಾದ ಔಷಧೀಯ ಗುಣಗಳಿರುವುದರಿಂದ ಅದಕ್ಕೆ ವಿಶೇಷ ಮಹತ್ವವಿದೆ.

ಆದರೆ, ಶಾಸ್ತ್ರಗಳ ಪ್ರಕಾರ ವಾರದ ಎಲ್ಲಾ ದಿನಗಳಲ್ಲಿ ತುಳಸಿ ಗಿಡವನ್ನು ಸ್ಪರ್ಶಿಸುವುದು ಅಥವಾ ನೀರು ಹಾಕುವುದು ನಿಷೇಧಿಸಲಾಗಿದೆ. ವಿಶೇಷವಾಗಿ ಭಾನುವಾರದಂದು ತುಳಸಿ ಗಿಡಕ್ಕೆ ನೀರು ಹಾಕಬಾರದು ಮತ್ತು ಅದರ ಎಲೆಗಳನ್ನು ಕೀಳಬಾರದು ಎಂಬ ನಿಯಮವಿದೆ. ಇದರ ಹಿಂದಿರುವ ಧಾರ್ಮಿಕ ನಂಬಿಕೆಗಳು ಮತ್ತು ಕಾರಣಗಳು ಇಲ್ಲಿವೆ.

ಭಾನುವಾರ ತುಳಸಿ ದೇವಿಯ ವ್ರತದ ದಿನ:

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ದೇವಿಯು ಭಗವಾನ್ ವಿಷ್ಣುವಿನ ಪರಮ ಭಕ್ತೆ ಹಾಗೂ ಪ್ರಿಯ ಪತ್ನಿ (ಲಕ್ಷ್ಮಿ ಸ್ವರೂಪಿಣಿ). ಭಾನುವಾರದಂದು ತುಳಸಿ ದೇವಿಯು ಭಗವಾನ್ ವಿಷ್ಣುವಿಗಾಗಿ ಅತ್ಯಂತ ಕಠಿಣವಾದ ನಿರ್ಜಲ ಉಪವಾಸವನ್ನು (ನೀರು ಕುಡಿಯದೆ ಮಾಡುವ ವ್ರತ) ಆಚರಿಸುತ್ತಾಳೆ ಎನ್ನಲಾಗುತ್ತದೆ. ಈ ದಿನ ನಾವು ಗಿಡಕ್ಕೆ ನೀರು ಹಾಕುವುದರಿಂದ ತುಳಸಿ ದೇವಿಯ ವ್ರತಕ್ಕೆ ಭಂಗ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದಾಗಿ ದೇವಿಗೆ ಕೋಪ ಬಂದು, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು ಎಂದು ನಂಬಲಾಗಿದೆ.

ಭಾನುವಾರದಂದು ವಿಷ್ಣುವಿನ ಆರಾಧನೆ ಮತ್ತು ವಿಶ್ರಾಂತಿ:

ಭಾನುವಾರವನ್ನು ಭಗವಾನ್ ವಿಷ್ಣುವಿನ ಆರಾಧನೆಗೆ ಪ್ರಶಸ್ತವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ತುಳಸಿ ದೇವಿಯು ಯೋಗ ನಿದ್ರೆಯಲ್ಲಿ ಅಥವಾ ವಿಷ್ಣುವಿನ ಧ್ಯಾನದಲ್ಲಿ ಮುಳುಗಿರುತ್ತಾಳೆ. ಆದ್ದರಿಂದ, ಭಾನುವಾರ ಗಿಡಕ್ಕೆ ನೀರು ಹಾಕುವುದು ಅಥವಾ ಅದರ ಎಲೆಗಳನ್ನು ಕೀಳುವುದರಿಂದ ದೇವಿಯ ಧಾನ್ಯಕ್ಕೆ ಅಡ್ಡಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಏಕಾದಶಿಯಂದೂ ನೀರು ಹಾಕಬಾರದು:

ಭಾನುವಾರದಂತೆಯೇ ಪ್ರತಿಯೊಂದು ಏಕಾದಶಿಯ ದಿನದಂದೂ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ಮತ್ತು ಎಲೆಗಳನ್ನು ಕೀಳುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಏಕಾದಶಿಯಂದು ತುಳಸಿ ದೇವಿಯು ಶ್ರೀಹರಿ (ವಿಷ್ಣು) ಗಾಗಿ ನಿರ್ಜಲ ಏಕಾದಶಿ ವ್ರತವನ್ನು ಕೈಗೊಳ್ಳುತ್ತಾಳೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಎಲೆಗಳನ್ನು ಕೀಳುವುದರಿಂದ ಆಗುವ ದೋಷಗಳು:

ಭಾನುವಾರ ಅಥವಾ ಏಕಾದಶಿಯ ದಿನ ತುಳಸಿ ಎಲೆಗಳನ್ನು ಕೀಳುವುದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ ಮತ್ತು ಆರ್ಥಿಕ ನಷ್ಟ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಕೃಪೆ ದೂರವಾಗಿ, ಕುಟುಂಬದಲ್ಲಿ ಕಲಹಗಳು ಸೃಷ್ಟಿಯಾಗಬಹುದು ಎನ್ನಲಾಗುತ್ತದೆ.

ಜ್ಯೋತಿಷ್ಯ ಮತ್ತು ವಾಸ್ತು ಪರಿಹಾರಗಳು:

ಒಂದು ವೇಳೆ ಧಾರ್ಮಿಕ ಪೂಜೆ ಅಥವಾ ಪ್ರಸಾದಕ್ಕಾಗಿ ಭಾನುವಾರದಂದು ತುಳಸಿ ಎಲೆಗಳು ಅತ್ಯಗತ್ಯವಾಗಿದ್ದರೆ, ಶನಿವಾರದಂದೇ ಎಲೆಗಳನ್ನು ಕಿತ್ತು ಎತ್ತಿಟ್ಟುಕೊಳ್ಳಬೇಕು. ತುಳಸಿ ಎಲೆಗಳು ಒಣಗಿದರೂ ಅವುಗಳ ಪವಿತ್ರತೆ ಕಳೆದುಕೊಳ್ಳುವುದಿಲ್ಲವಾದ್ದರಿಂದ ಮುಂಚಿತವಾಗಿ ಕಿತ್ತಿಟ್ಟುಕೊಂಡ ಎಲೆಗಳನ್ನು ಭಾನುವಾರ ಬಳಸಬಹುದು. ಅಲ್ಲದೆ, ಭಾನುವಾರದಂದು ನೀರು ಹಾಕದಿದ್ದರೂ ಸಂಜೆ ವೇಳೆ ತುಳಸಿ ಕಟ್ಟೆಯ ಬಳಿ ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗೋ, ಉಗಾಂಡಾದಲ್ಲಿ ಎಬೋಲಾ ರುದ್ರನರ್ತನ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪ್ರಯಾಣಿಕರಿಗೆ ಮಹತ್ವದ ಸೂಚನೆ – Kannada News | Ebola Surge in Africa: Health Ministry Issues Travel Advisory

ನವದೆಹಲಿ, ಮೇ 22: ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಅಬ್ಬರದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ ಹಿನ್ನಲೆ ದೇಶದವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅಂತಾರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಸಹಕರಿಸಿ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಏನೆಲ್ಲ ಸೂಚನೆ?

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಹಾಗೂ ದಕ್ಷಿಣ ಸೂಡಾನ್‌ನಿಂದ ಭಾರತಕ್ಕೆ ಬರುವ ಅಥವಾ ಆ ದೇಶಗಳ ಮೂಲಕ ಪ್ರಯಾಣಿಸುವವರು ಜ್ವರ, ದೌರ್ಬಲ್ಯ, ತಲೆನೋವು, ಸ್ನಾಯು ನೋವು, ವಾಂತಿ, ಅತಿಸಾರ, ಗಂಟಲು ನೋವು ಹಾಗೂ ಅಸ್ಪಷ್ಟ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಪಾಸಣೆಗೂ ಮುನ್ನ ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿ ಅಥವಾ ಆರೋಗ್ಯ ಡೆಸ್ಕ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:  ಜಗತ್ತಿಗೆ ಮತ್ತೊಂದು ಮಾರಣಾಂತಿಕ ವೈರಸ್ ಎಂಟ್ರಿ!, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಎಬೋಲಾ ಸೋಂಕು ದೃಢಪಟ್ಟ ಅಥವಾ ಶಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ಸಂಪರ್ಕಕ್ಕೆ ಬಂದಿರುವ ಇತಿಹಾಸವಿರುವವರೂ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಸ್ತುತ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ದಾಖಲಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ (WHO) ಎಬೋಲಾ ಹರಡುವಿಕೆಯನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯೆಂದು ಘೋಷಿಸಿ ಎಚ್ಚರಿಕೆ ನೀಡಿತ್ತು. ಸೋಂಕು ಪತ್ತೆಯಾದ ನಂತರ ಅದರ ವೇಗದ ಹರಡುವಿಕೆ ಬಗ್ಗೆ WHO ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದು, ಒಂದರಲ್ಲಿ ಸಚಿವಾಲಯದ ಅಧಿಕಾರಿಗಳೊಂದಿಗೆ ಮತ್ತು ಮತ್ತೊಂದರಲ್ಲಿ ರಾಜ್ಯಗಳೊಂದಿಗೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ.

ಸೋಂಕು ಹೇಗೆ ಹರಡುತ್ತೆ?

ಎಬೋಲಾ ಎನ್ನುವುದು ವೈರಾಣುಗಳಿಂದ ಉಂಟಾಗುವ ಅತ್ಯಂತ ತೀವ್ರವಾದ ಮತ್ತು ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿದೆ. ಸೋಂಕಿತ ವ್ಯಕ್ತಿಯ ರಕ್ತ, ಎಂಜಲು, ಬೆವರು, ಕಣ್ಣೀರು, ವಾಂತಿ, ಮಲ, ತಾಯಿಯ ಹಾಲು ಸೇರಿದಂತೆ ದೇಹದ ದ್ರವಗಳ ನೇರ ಸಂಪರ್ಕದಿಂದ ಸೋಂಕು ಹರಡುತ್ತದೆ. ಸೋಂಕಿನಿಂದ ಮೃತಪಟ್ಟವರ ದೇಹದ ಸಂಪರ್ಕದಿಂದಲೂ ಇದು ಹರಡಬಹುದು. ಈ ರೋಗದ ಬಹುತೇಕ ಲಕ್ಷಣಗಳು ಜ್ವರದಂತೆಯೇ ಕಂಡುಬರುತ್ತವೆ . ಜ್ವರ, ತಲೆನೋವು, ಸ್ನಾಯು ಮತ್ತು ಸಂಧಿ ನೋವು ಕಾಣಿಸಿಕೊಳ್ಳಬಹುದು. ಆದರೆ ಅಸ್ಪಷ್ಟ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವವು ಎಬೋಲಾದ ವಿಶೇಷ ಲಕ್ಷಣಗಳಲ್ಲಿ ಒಂದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾನ್ ರೆಡ್ ಕಾರ್ಪೇಟ್​​ ಮೇಲೆ ತೆಲಂಗಾಣ ಕೈಮಗ್ಗದ ಉಡುಪು ಪ್ರದರ್ಶಿಸಿದ ಏಷ್ಯಾ ಸುಂದರಿ – Kannada News | Miss Asia Rashmi Thakur wears Ikat Weaver dress at Cannes 2026 red carpet

ಕಾನ್ ಚಿತ್ರೋತ್ಸವ (Cannes 2026) ಚಾಲ್ತಿಯಲ್ಲಿದ್ದು ಭಾರತದ ಹಲವಾರು ನಟ-ನಟಿಯರು, ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಗಳು ಹಲವಾರು ಮಂದಿ ಭಾಗವಹಿಸಿದ್ದಾರೆ. ಒಬ್ಬರಿಗಿಂತಲೂ ಒಬ್ಬರು ಭಿನ್ನವಾಗಿ, ದುಬಾರಿಯಾದ ಮತ್ತು ಆಧುನಿಕವಾದ, ಗ್ಲಾಮರಸ್ ಆದ ಬಟ್ಟೆಗಳನ್ನು ತೊಟ್ಟು ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಾ ಫೋಟೊಗಳಿಗೆ ಫೋಸು ನೀಡುತ್ತಿದ್ದಾರೆ. ಆದರೆ ಏಷ್ಯಾ ಸುಂದರಿ ಎನಿಸಿಕೊಂಡಿರುವ ಭಾರತದ ರಶ್ಮಿಕಾ ಠಾಕೂರ್ ಮಾತ್ರ ಭಾರತೀಯ ಸಂಸ್ಕೃತಿಗ ಉಡುಗೆಗಳ ಪ್ರಚಾರಕ್ಕೆ ವೇದಿಕೆಯಾಗಿ ಕಾನ್ ರೆಡ್ ಕಾರ್ಪೇಟ್ ಅನ್ನು ಬಳಸಿಕೊಂಡಿದ್ದಾರೆ.

ರೆಡ್ ಕಾರ್ಪೆಟ್ ಮೇಲೆ ತೆಲಂಗಾಣದ ಸಾಂಪ್ರದಾಯಿಕ ಪೋಚಂಪಲ್ಲಿ ಇಕ್ಕತ್ ವಸ್ತ್ರಗಳನ್ನು ತೊಟ್ಟು ರಶ್ಮಿ ಠಾಕೂರ್ ಹೆಜ್ಜೆ ಹಾಕಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಪೋಚಂಪಲ್ಲಿ ಇಕ್ಕತ್ ವಸ್ತುಗಳಿಗೆ ಅಂತರಾಷ್ಟ್ರೀಯ ವೇದಿಕೆ ಲಭ್ಯವಾದಂತಾಗಿದೆ. ರಶ್ಮಿ ಅವರು ಮಿಸ್ ಏಷ್ಯಾ ಇಂಟರ್ನ್ಯಾಷನಲ್ ಹಾಗೂ ಇಕ್ಕತ್ ಕೈಮಗ್ಗಗಳ ರಾಯಭಾರಿ ಸಹ ಆಗಿದ್ದು, ಅವರು ಪೋಚಂಪಲ್ಲಿ ಇಕ್ಕತ್ ವಿನ್ಯಾಸದ ವಿಶೇಷ ವಸ್ತ್ರಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ರ್ಯಾಂಪ್ ವಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

‘ಪೋಚಂಪಲ್ಲಿ ಟು ಕಾನ್’ ಎಂಬ ಪರಿಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾದ ಉಡುಪಿನಲ್ಲಿ ತೆಲಂಗಾಣದ ಕೈಮಗ್ಗ ವೈಭವ, ಭಾರತೀಯ ಹಸ್ತಕಲೆಯ ಪ್ರತಿಭೆ, ಸಂಪ್ರದಾಯ ಮತ್ತು ಆಧುನಿಕತೆಯ ಅದ್ಭುತ ಸಮ್ಮಿಲನ ಇದೆಯೆಂದು ರಶ್ಮಿ ಅವರು ಹೇಳಿದ್ದಾರೆ. ಭಾರತ ಸರ್ಕಾರದ ಜವಳಿ ಸಚಿವಾಲಯ ಹಾಗೂ ಸ್ಥಳೀಯ ನೇಯ್ಗೆಗಾರರು ನೂರಾರು ಗಂಟೆಗಳ ಕಾಲ ಶ್ರಮಿಸಿ ಈ ವಿಶೇಷ ಉಡುಪನ್ನು ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ:ರಹಸ್ಯವಾಗಿ ಮದುವೆಯಾದರೇ ನಟಿ ಕಂಗನಾ ರಣಾವತ್? ವೈರಲ್ ವಿಡಿಯೋದ ಅಸಲಿಯತ್ತೇನು?

ರಶ್ಮಿ ಠಾಕೂರ್ ಅವರು ಈ ಕೈಮಗ್ಗದ ಉಡುಪಿಗೆ ಜೊತೆಯಾಗಿ ಹೈದರಾಬಾದ್‌ನ ಪ್ರಸಿದ್ಧ ಮುತ್ತುಗಳ ಆಭರಣಗಳನ್ನು ಧರಿಸಿದ್ದರು. ನಿಜಾಮರ ಕಾಲದ ಪರಂಪರೆಯನ್ನು ನೆನಪಿಸುವ ಈ ಮುತ್ತುಗಳು ಇಕ್ಕತ್ ವಿನ್ಯಾಸಗಳೊಂದಿಗೆ ಜೊತೆಯಾಗಿ ಎದ್ದು ಕಾಣುತ್ತಿದ್ದವು. ಕಾನ್ ರೆಡ್ ಕಾರ್ಪೆಟ್ ಮೇಲೆ ಇಕ್ಕತ್ ವಸ್ತ್ರಗಳನ್ನು ಧರಿಸಿ ಹೆಜ್ಜೆ ಹಾಕಿದ ಬಗ್ಗೆ ರಶ್ಮಿ ಠಾಕೂರ್ ತೀವ್ರ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದು, ‘ಇದು ಕೇವಲ ನನ್ನ ವೈಯಕ್ತಿಕ ಪಾದಾರ್ಪಣೆಯಲ್ಲ, ಬದಲಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತೆಲಂಗಾಣದ ಕೈಮಗ್ಗ ಕಲೆಯ ಪಾದಾರ್ಪಣೆಯಾಗಿದೆ. 200 ವರ್ಷಗಳ ಸುದೀರ್ಘ ಇತಿಹಾಸ ಮತ್ತು ಕಠಿಣ ಶ್ರಮವನ್ನು ತಮ್ಮ ದಾರಗಳಲ್ಲಿ ಪೋಣಿಸಿದ ಪೋಚಂಪಲ್ಲಿಯ ನೇತಾರರ ಕಲಾ ವೈಭವಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಕಲೆ ಈಗ ಜಾಗತಿಕ ಕಲೆಯಾಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:55 pm, Fri, 22 May 26

Source link

ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ ‘ಲ್ಯಾಂಡ್ ಲಾರ್ಡ್​’ ಸಿನಿಮಾ; ಇಲ್ಲಿದೆ ವಿವರ – Kannada News | Zee Kannada Premieres Blockbuster ‘Landlord’ Movie: Duniya Vijay, Rachita Ram and Raj B. Shetty

ಧಾರಾವಾಹಿ ಹಾಗೂ ರಿಯಾಲಿಟಿ ಶೋ ಪ್ರಸಾರ ಮಾಡುವ ಮೂಲಕ ಜೀ ಕನ್ನಡ ವಾಹಿನಿ ಕಿರುತೆರೆ ವೀಕ್ಷಕರ ಮನ ಗೆದ್ದಿದೆ. ಈಗ ಜೀ ಕನ್ನಡದಲ್ಲಿ (Zee Kannada) ಕನ್ನಡದ ಬ್ಲಾಕ್​​ಬಸ್ಟರ್ ಸಿನಿಮಾ ‘ಲ್ಯಾಂಡ್ ಲಾರ್ಡ್ ಪ್ರಸಾರ ಕಾಣುತ್ತಿದೆ. ಶನಿವಾರ (ಮೇ 22) ಸಂಜೆ 4 ಗಂಟೆಗೆ ಸಿನಿಮಾ ಪ್ರಸಾರ ಕಾಣಲಿದೆ. ಥಿಯೇಟರ್ ಹಾಗೂ ಒಟಿಟಿಯಲ್ಲಿ ಮಿಸ್ ಮಾಡಿಕೊಂಡವರು ಟಿವಿಯಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ.

‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ 80ರ ದಶಕದ ಕಥೆ ಇದೆ. ಈ ಸಿನಿಮಾ, ಶೋಷಣೆ, ಸಾಮಾಜಿಕ ಅಸಮಾನತೆ, ಬಡವರ ಮೇಲಿನ ದಬ್ಬಾಳಿಕೆ ಹಾಗೂ ಅದರ ವಿರುದ್ಧ ಧ್ವನಿ ಎತ್ತುವ ಕಥೆಯನ್ನು ಹೊಂದಿದೆ. ಸಮಾಜದಲ್ಲಿನ ಜಾತಿ ತಾರತಮ್ಯದ ಕ್ರೂರ ಮುಖ ಮತ್ತು ಸಾಮಾನ್ಯ ಜನರು ಒಟ್ಟಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದಾಗ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಸಂದೇಶವನ್ನು ಸಿನಿಮಾದಲ್ಲಿ ಹೇಳಲಾಗಿದೆ. ಇಡೀ ಕುಟುಂಬ ಒಟ್ಟಾಗಿ ಕುಳಿತು ಆನಂದಿಸಬಹುದಾದ ಕೌಟುಂಬಿಕ ಚಿತ್ರ ಇದಾಗಿದೆ.

ಶಾಂತಿಯುತ ಬದುಕನ್ನು ಆಶಿಸುವ ರಾಚಯ್ಯ (ದುನಿಯಾ ವಿಜಯ್), ತನ್ನ ಪತ್ನಿ ನಿಂಗವ್ವ (ರಚಿತಾ ರಾಮ್) ಮತ್ತು ಮಗಳೊಂದಿಗೆ ತನ್ನದೇ ಆದ ಪುಟ್ಟ ಜಮೀನನ್ನು ಹೊಂದಬೇಕೆಂಬ ಆಸೆಯಿಂದ ಬದುಕುತ್ತಿರುತ್ತಾನೆ. ಆದರೆ ಆ ಹಳ್ಳಿಯಲ್ಲಿ ಪ್ರಭಾವಶಾಲಿ ಜಮೀನ್ದಾರನಾದ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ತನಗಿರುವ ರಾಜಕೀಯ ಹಾಗೂ ಸಾಮಾಜಿಕ ಬಲದಿಂದ ಇಡೀ ಗ್ರಾಮವನ್ನೇ ತನ್ನ ಹತೋಟಿಯಲ್ಲಿಟ್ಟುಕೊಂಡಿರುತ್ತಾನೆ. ಕಾನೂನು ಹಾಗೂ ನ್ಯಾಯದ ಮೇಲೆ ಅಪಾರ ನಂಬಿಕೆ ಇಟ್ಟಿರುವ ರಾಚಯ್ಯನಿಗೆ, ಗ್ರಾಮಸ್ಥರು ಅನುಭವಿಸುತ್ತಿರುವ ಹಿಂಸೆ ಮತ್ತು ಭಯ ಅರಿವಾಗುತ್ತದೆ. ಯಾವಾಗ ಹಳ್ಳಿಯ ಒಂದು ಮುಗ್ಧ ಕುಟುಂಬ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತದೆಯೋ, ಆಗ ಗ್ರಾಮಸ್ಥರ ತಾಳ್ಮೆ ಗೆಡುತ್ತದೆ. ಅಲ್ಲಿಯವರೆಗೆ ಸೌಮ್ಯನಾಗಿದ್ದ ರಾಚಯ್ಯ, ಧಣಿಯ ದಬ್ಬಾಳಿಕೆಯನ್ನು ಸಹಿಸದೆ ಹಳ್ಳಿಯ ಜನರ ಪರವಾಗಿ ಧ್ವನಿ ಎತ್ತುವ ಜನನಾಯಕನಾಗಿ ಬದಲಾಗುತ್ತಾನೆ.

ಇದನ್ನೂ ಓದಿ: ‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್

ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಕೆಮಿಸ್ಟ್ರಿ ಕೆಲಸ ಮಾಡಿದೆ. ರಚಿತಾ ಅವರು ಡಿ ಗ್ಲಾಮ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಪಾತ್ರ ಗಮನ ಸೆಳೆದಿದೆ. ವಂಚನೆ ಎಸಗುವ ಜಮೀನ್ದಾರನ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಮತ್ತೊಮ್ಮೆ ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಪ್ರೇಕ್ಷಕರನ್ನು ಗಮನ ಸೆಳೆದಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಮಗಳು ಮೋನಿಷಾ ನಟಿಸಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version