Karnataka Weather Forecast: ಕರ್ನಾಟಕದಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ, ಎಲ್ಲೆಲ್ಲಿ? – Kannada News | Heavy rain Forecast In Karnataka till May 25. The IMD has issued yellow and orange alerts for several districts

ಬೆಂಗಳೂರು, (ಮೇ 21): ಕರ್ನಾಟಕದಾದ್ಯಂತ ಇಂದಿನಿಂದ 4 ದಿನಗಳ ಕಾಲ ಭಾರೀ ಮಳೆಯಾಗುವ (karnataka Rains) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮುಂಗಾರು ಪೂರ್ವ (pre monsoon) ಮಾರುಗಳ ತೀವ್ರತೆ ಹೆಚ್ಚಾಗಿರುವುದರಿಂದ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು (Bengaluru), ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert)​ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಇಂದಿನಿಂದ ರಾಜ್ಯಾದ್ಯಂತ 4 ದಿನ ಭಾರಿ ಮಳೆಯಾಗುವ ಸಾಧ್ಯತೆ
  • ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮಾಹಿತಿ
  • ಬೆಂಗಳೂರಿನಲ್ಲಿ ಇಂದು ಆರೆಂಜ್ ಅಲರ್ಟ್​, 3 ದಿನ ಯೆಲ್ಲೋ ಅಲರ್ಟ್​
  • 4 ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ
  • ಇಂದು ರಾಜ್ಯದ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಎಲ್ಲೆಲ್ಲಿ ಮಳೆ?

ಬೆಂಗಳೂರಿನಲ್ಲಿ ಇಂದು (ಮೇ 21) ಆರೆಂಜ್ ಹಾಗೂ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಬೆಂಗಳೂರು ನಗರ ಮಾತ್ರವಲ್ಲದೇ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್, ಇನ್ನುಳಿದ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಮೇ 22 ರಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಮೇ 23ರಂದು ಬೀದರ್ ಹಾಗೂ ಕಲಬುರಗಿ ಎರಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಡಲಿಗೆ ಇಳಿಯದಂತೆ ಕರಾವಳಿ ಮೀನುಗಾರರಿಗೆ ಮುನ್ನೆಚ್ಚರಿಕೆ

ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದ ವಿವಿಧ ಭಾಗಗಳಲ್ಲಿ ಬಿರುಗಾಳಿ ಹಿನ್ನೆಲೆಯಲ್ಲಿ ಕಡಲಿಗೆ ಇಳಿಯದಂತೆ ಕರಾವಳಿ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕೆಲವೆಡೆ ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು. ಹೀಗಾಗಿ ಈಗಾಗಲೇ ಕಡಲಿಗೆ ಇಳಿದವರು ತಕ್ಷಣ ತೀರ ಪ್ರದೇಶ ಸೇರಬೇಕೆಂದು ಸೂಚನೆ ನೀಡಲಾಗಿದೆ. ಇದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್​​​ಗಳು ಮಲ್ಪೆ ಹಿನ್ನೀರು ಪರಿಸರದಲ್ಲಿ ವಾಪಸ್ ಆಗುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು? – Kannada News | Elon Musk wants world class engineers and physicists for SpaceXAI

ವಾಷಿಂಗ್ಟನ್, ಮೇ 21: ಇಲಾನ್ ಮಸ್ಕ್ (Elon Musk) ಅವರು ತಮ್ಮ ಸ್ಪೇಸ್ ಎಕ್ಸ್ ಎಐ (SpaceXAI) ಸಂಸ್ಥೆಗೆ ಉದ್ಯೋಗಿಗಳ ಶೋಧ ನಡೆಸುತ್ತಿದ್ದಾರೆ. ತಮ್ಮ ಎಕ್ಸ್ ಅಕೌಂಟ್​ನಲ್ಲಿ ಹೈರಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಇಮೇಲ್ ಐಡಿಯನ್ನೂ ಒದಗಿಸಿದ್ದಾರೆ. ಸ್ಪೇಸ್​ಎಕ್ಸ್ ಎಐ ಸಂಸ್ಥೆಗೆ ಸೇರಬಯಸುವವರು ಎಐನಲ್ಲಿ ಅನುಭವದ ಹಿನ್ನೆಲೆ ಇಲ್ಲದಿದ್ದರೂ ಆದೀತು, ಆದರೆ, ಸ್ಮಾರ್ಟ್ ಆಗಿರಬೇಕು. ವಿಶ್ವ ದರ್ಜೆಯ ಎಂಜಿನಿಯರುಗಳು, ವಿಜ್ಞಾನಿಗಳಾಗಿರಬೇಕಂತೆ.

‘ಸ್ಪೇಸ್​ಎಕ್ಸ್​ಎಐಗೆ ವಿಶ್ವದರ್ಜೆಯ ಎಂಜಿನಿಯರುಗಳು, ಫಿಸಿಸಿಸ್ಟ್​ಗಳನ್ನು (ಭೌತವಿಜ್ಞಾನಿಗಳು) ನೇಮಕಾತಿ ಮಾಡಲಾಗುತ್ತಿದೆ. ಅವರಿಗೆ ಎಐನಲ್ಲಿ ಯಾವುದೇ ಅನುಭವ ಇಲ್ಲದಿದ್ದರೂ ಆಗುತ್ತದೆ. ಸ್ಮಾರ್ಟ್ ವ್ಯಕ್ತಿಗಳು ಬೇಗ ಕಲಿತುಕೊಳ್ಳುತ್ತಾರೆ’ ಎಂದು ಇಲಾನ್ ಮಸ್ಕ್ ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು ತಮ್ಮಲ್ಲಿ ಅಸಾಧಾರಣ ಸಾಮರ್ಥ್ಯವಿರುವುದನ್ನು ತೋರಿಸುವಂತಹ ಅಂಶಗಳನ್ನು 3 ಬುಲೆಟ್ ಪಾಯಿಂಟ್​ಗಳಲ್ಲಿ ಬರೆದು, ai_eng@spacex.com ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. ಹಾಗೆಂದು ಮಸ್ಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಫೋನ್ ಖರೀದಿಸಿ, ಇಎಂಐ ಕಟ್ಟೋಕಾಗ್ತಿಲ್ವಾ? ಸಾಲಗಾರರು ನಿಮ್ಮ ಫೋನ್ ಲಾಕ್ ಮಾಡಬಹುದಾ? ಆರ್​ಬಿಐ ಬಳಿ ಪ್ರಸ್ತಾಪ

ಎಲ್ಲಾ ಇಮೇಲ್​ಗಳನ್ನೂ ಮಸ್ಕ್ ನೋಡುತ್ತಾರಾ?

ಮತ್ತೊಂದು ಟ್ವೀಟ್​ನಲ್ಲಿ ಇಲಾನ್ ಮಸ್ಕ್ ಅವರು, ನೇಮಕಾತಿಗೆ ಕೋರಿ ಬರುವ ಎಲ್ಲಾ ಇಮೇಲ್​ಗಳನ್ನು ಖುದ್ದಾಗಿ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ, ಸ್ಮಾರ್ಟ್ ಜನರು ಪ್ರಯೋಜನವೆನಿಸುವ ಬಹಳ ಸಂಕೀರ್ಣ ಇರುವ ಕೆಲಸವನ್ನು ಮಾಡಿದರೆ ಅವರಿಗೆ ಆದ್ಯತೆ ಸಿಗುವುದು ಎಂದೂ ಮಸ್ಕ್ ಹೇಳಿದ್ದಾರೆ.

ಇಲಾನ್ ಮಸ್ಕ್ ಅವರ ಟ್ವೀಟ್

ಎಕ್ಸ್​ಎಐ ಎಂಬುದು ಇಲಾನ್ ಮಸ್ಕ್ ಇತ್ತೀಚೆಗಷ್ಟೇ ಆರಂಭಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ. ರಾಕೆಟ್, ಸ್ಪೇಸ್​ಶಿಪ್ ತಯಾರಿಸುವ ಸ್ಪೇಸ್​ಎಕ್ಸ್ ಜೊತೆಗೆ ಎಕ್ಸ್​ಎಐ ಅನ್ನು ಸೇರಿಸಲಾಗಿದೆ. ಇದು ಸ್ಪೇಸ್​ಎಕ್ಸ್​ನ ಎಐ ವಿಭಾಗವಾಗಿದ್ದು, ಸ್ಪೇಸ್​ಎಕ್ಸ್​ಎಐ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ತರಕಾರಿ ಮಾರುವ ಹುಡುಗನ ತಲೆಯಲ್ಲಿ ಎಐ ಟೂಲ್; ಗಂಟೆಗೆ 350 ರೂ ಎಕ್ಸ್​ಟ್ರಾ ಇನ್ಕಮ್; ಬೆರಗಾದ ನೆಟ್ಟಿಗರು

ಸ್ಪೇಸ್​ಎಕ್ಸ್​ನ ಕೊಲೋಸಸ್ ಸೂಪರ್ ಕಂಪ್ಯೂಟರ್

ಸ್ಪೇಸ್ ಎಕ್ಸ್ ಸಂಸ್ಥೆ ಕೊಲೋಸಸ್ ಎನ್ನುವ ಬಹಳ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ನಿರ್ಮಿಸಿದೆ. ಇದು ವಿಶ್ವದ ಅತಿದೊಡ್ಡ ಎಐ ಸೂಪರ್ ಕಂಪ್ಯೂಟರ್​ಗಳ ಸಿಸ್ಟಂ ಆಗಿದೆ. ಎನ್​ವಿಡಿಯಾದ 2.2 ಲಕ್ಷಕ್ಕೂ ಅಧಿಕ ಜಿಪಿಯುಗಳನ್ನು ಬಳಸುತ್ತದೆ. ಎಐ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಆಂಥ್ರೋಪಿಕ್ ಸಂಸ್ಥೆಯು ಈ ಕೊಲೋಸಸ್ ಸಿಸ್ಟಂನ ಕಂಪ್ಯೂಟಿಂಗ್​ ಬಳಕೆಗಾಗಿ ಪ್ರತೀ ತಿಂಗಳು 1.25 ಬಿಲಿಯನ್ ಡಾಲರ್ (ಬರೋಬ್ಬರಿ 11,000 ಕೋಟಿ ರೂಗೂ ಅಧಿಕ) ಪಾವತಿ ಮಾಡುತ್ತದಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಟಿ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು; ಚಿತ್ರರಂಗ ತೊರೆಯಲು ಅಸಲಿ ಕಾರಣ ಇಲ್ಲಿದೆ – Kannada News | Twisha Sharma Dowry Death Case co star Dheekshith Shetty reveals why she quit acting

ಮಾಡೆಲ್ ಹಾಗೂ ನಟಿ ಟ್ವಿಶಾ ಶರ್ಮಾ ಅವರ ನಿಗೂಢ ಸಾವು (Twisha Sharma Death) ಸದ್ಯ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಮಧ್ಯಪ್ರದೇಶದ ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ತಮ್ಮ ಪತಿ ಮನೆಯಲ್ಲಿ ಮೇ 12ರಂದು ಟ್ವಿಶಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ವರದಕ್ಷಿಣೆ ಕಿರುಕುಳ ಹಾಗೂ ಪತಿಯ ಮನೆಯವರ ದೈಹಿಕ-ಮಾನಸಿಕ ಹಿಂಸೆಯೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ, ಟ್ವಿಶಾ ಶರ್ಮಾ (Twisha Sharma) ಅವರು ಸಿನಿಮಾರಂಗವನ್ನು ತೊರೆದು ಮತ್ತು ಕಾರ್ಪೊರೇಟ್ ವಲಯಕ್ಕೆ ಕಾಲಿಡಲು ಅಸಲಿ ಕಾರಣ ಏನೆಂಬುದು ಈಗ ತಿಳಿದುಬಂದಿದೆ.

ತೆಲುಗಿನ ‘ಮುಗ್ಗುರು ಮೊನಗಾಳ್ಳು’ (2021) ಚಿತ್ರದಲ್ಲಿ ಟ್ವಿಶಾ ಶರ್ಮಾ ಜೊತೆ ನಟಿಸಿದ್ದ ಕನ್ನಡದ ಖ್ಯಾತ ನಟ ದೀಕ್ಷಿತ್ ಶೆಟ್ಟಿ ಅವರು ಈ ದುರಂತ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ದೀಕ್ಷಿತ್ ಶೆಟ್ಟಿ, ‘ಇದು ಅತ್ಯಂತ ಆಘಾತಕಾರಿ ಸುದ್ದಿ. ಅವರು ಯಾವಾಗಲೂ ಕೆಲಸದ ಬಗ್ಗೆ ಅಪಾರ ಬದ್ಧತೆ ಮತ್ತು ಕಠಿಣ ಪರಿಶ್ರಮ ಹೊಂದಿದ್ದ ಹುಡುಗಿ. ತುಂಬ ಉತ್ಸಾಹದಿಂದ ಬದುಕುತ್ತಿದ್ದ ಅವರು ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಶಾ ಸಿನಿಮಾರಂಗ ತೊರೆದ ಬಗ್ಗೆ ಮಾತನಾಡಿದ ದೀಕ್ಷಿತ್, ‘ನಾನು ಸುಮಾರು ನಾಲ್ಕು ವರ್ಷಗಳ ಹಿಂದೆ ಅವರೊಂದಿಗೆ ಮಾತನಾಡಿದ್ದೆ. ಅವರಿಗೆ ಮದುವೆಯಾಗಿದ್ದ ವಿಷಯವೇ ನನಗೆ ಗೊತ್ತಿರಲಿಲ್ಲ. ನಾವು ಆ ಒಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು, ಆಮೇಲೆ ಅವರು ತಮ್ಮ ಸ್ವಂತ ಊರಿಗೆ ಮರಳಿದರು. ತಮಗೆ ನಟನೆಯಲ್ಲಿ ತಾವು ಅಂದುಕೊಂಡಷ್ಟು ತೃಪ್ತಿ ಸಿಗುತ್ತಿಲ್ಲ, ಹಾಗಾಗಿ ಸ್ನಾತಕೋತ್ತರ ಪದವಿ ಮಾಡಬಯಸುವುದಾಗಿ ಹೇಳಿದ್ದಳು. ಅವರ ಸಹೋದರ ಸೇನೆಯಲ್ಲಿದ್ದಾರೆ. ಚಿತ್ರರಂಗ ತಮಗೆ ಒಗ್ಗುತ್ತಿಲ್ಲ ಎಂದು ಅರಿತುಕೊಂಡ ಅವರು, ಊರಿಗೆ ವಾಪಸ್ ಹೋಗಿ ಕುಟುಂಬದೊಂದಿಗೆ ನೆಲೆಸಲು ಬಯಸಿದ್ದರು’ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಅದೇ ರೀತಿ ‘ಮುಗ್ಗುರು ಮೊನಗಾಳ್ಳು’ ಚಿತ್ರದ ನಿರ್ದೇಶಕ ಅಭಿಲಾಷ್ ರೆಡ್ಡಿ ಕೂಡ ಸಂತಾಪ ಸೂಚಿಸಿದ್ದು, ‘ಚಿತ್ರದ ಸ್ಕ್ರೀನಿಂಗ್ ದಿನ ನಾನು ಅವರ ಪೋಷಕರನ್ನು ಭೇಟಿಯಾಗಿದ್ದೆ, ಅವರು ತುಂಬಾ ಒಳ್ಳೆಯ ವ್ಯಕ್ತಿಗಳು. ಅವರ ಅಗಲಿಕೆಯ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ’ ಎಂದಿದ್ದಾರೆ. ಟ್ವಿಶಾ ಶರ್ಮಾ ಅವರು ಮಾಡೆಲಿಂಗ್ ದಿನಗಳಲ್ಲಿ ‘ಮಿಸ್ ಪುಣೆ’ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದರು.

ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಗಾಯಕಿ ಇಂದರ್ ಕೌರ್ ಅಪಹರಣ; 6 ದಿನದ ಬಳಿಕ ಹೆಣವಾಗಿ ಪತ್ತೆ

ಟ್ವಿಶಾ ಶರ್ಮಾ ಅವರು 2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಸಮರ್ಥ್ ಸಿಂಗ್ ಎಂಬಾತನನ್ನು ಪರಿಚಯ ಮಾಡಿಕೊಂಡು, ಡಿಸೆಂಬರ್ 2025ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇತ್ತ ಪತಿ ಸಮರ್ಥ್ ಸಿಂಗ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಟ್ವಿಶಾ ಮಾದಕ ವ್ಯಸನಿಯಾಗಿದ್ದರು ಮತ್ತು ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪ್ರತಿ-ಆರೋಪ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಕೆಗಳಿಂದ ರೋಸಿಹೋದ ಪ್ರಶಾಂತ್ ನೀಲ್, ಬದಲಾಗುವ ನಿರ್ಧಾರ ಮಾಡಿದ ನಿರ್ದೇಶಕ – Kannada News | Prashanth Neel said he will change his movie making style

ಪ್ರಶಾಂತ್ ನೀಲ್ (Prashanth Neel), ಪ್ರಸ್ತುತ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಈ ವರೆಗೆ ನಾಲ್ಕು ಸಿನಿಮಾಗಳನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಎಲ್ಲವೂ ಸೂಪರ್ ಹಿಟ್. ಪ್ರಶಾಂತ್ ನೀಲ್, ಕಮರ್ಶಿಯಲ್, ಮಾಸ್ ಸಿನಿಮಾಗಳಿಗೆ ಭಿನ್ನ ವ್ಯಾಕರಣ ನೀಡಿದ ನಿರ್ದೇಶಕ. ತಮ್ಮ ಡಾರ್ಕ್ ಕಲರ್ ಗ್ರೇಡಿಂಗ್, ಮೊನಚು ಸಂಭಾಷಣೆ, ಭಿನ್ನವಾಗಿ ಕತೆ ಹೇಳುವ ರೀತಿ, ನಿರೂಪಣಾ ಶೈಲಿಯಿಂದ ತಮ್ಮದೇ ಒಂದು ಭಿನ್ನ ಶೈಲಿಯನ್ನೇ ಅವರು ಸೃಷ್ಟಿಸಿದ್ದಾರೆ. ಆದರೆ ಈಗ ಪ್ರಶಾಂತ್ ನೀಲ್ ತಮ್ಮ ಶೈಲಿಯನ್ನೇ ಕೈಬಿಡುತ್ತಿದ್ದಾರೆ.

ಇದೀಗ ಜೂ ಎನ್​​ಟಿಆರ್ ನಟಿಸಿರುವ ‘ಡ್ರ್ಯಾಗನ್’ ಸಿನಿಮಾ ಅನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಟೀಸರ್ ನಿನ್ನೆಯಷ್ಟೆ (ಮೇ 20) ಬಿಡುಗಡೆ ಆಗಿದೆ. ನೀಲ್ ಅವರ ಈ ಹಿಂದಿನ ಸಿನಿಮಾಗಳಾದ ‘ಸಲಾರ್’, ‘ಕೆಜಿಎಫ್’ ರೀತಿ, ‘ಡ್ರ್ಯಾಗನ್’ ಸಹ ಕಡುಕಪ್ಪು ಬಣ್ಣದ ಥೀಮ್ ಅನ್ನು ಹೊಂದಿದೆ. ಅದೇ ಬ್ಯಾಟಲ್ ಫೀಲ್ಡ್, ಅದೇ ಸ್ಟೋರಿ ನರೇಟರ್ (ಕಥಾ ನಿರೂಪಕನ ಪಾತ್ರ). ಅಬ್ಬರದ ಸಂಗೀತ. ಸಿಂಗಲ್ ವಲ್ರ್ಡ್ ಡೈಲಾಗ್​​ಗಳು ಸಿನಿಮಾನಲ್ಲಿವೆ. ಟೀಸರ್ ಅನ್ನು ಬಹಳ ಜನ ಮೆಚ್ಚಿದ್ದಾರಾದರೂ, ನೀಲ್ ತಮ್ಮ ಹಳೆಯ ಸಿನಿಮಾಗಳ ಮಾದರಿಯನ್ನೇ ಇಲ್ಲೂ ಅನುಸರಿಸಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ಇನ್ನೆರಡು ಸಿನಿಮಾಗಳ ಬಳಿಕ ತಮ್ಮ ಶೈಲಿಯನ್ನು ಬದಲಾವಣೆ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ. ಇನ್ನು ಮುಂದೆ ಡಾರ್ಕ್ ಥೀಮ್​​ಗಳು ಇರುವುದಿಲ್ಲ. ಸಾಕಷ್ಟು ಮಂದಿ ನನ್ನ ಶೈಲಿಯ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಕೆಲವರು ನನ್ನೊಟ್ಟಿಗೆ ನೇರವಾಗಿ ವಾಗ್ವಾದ ಸಹ ಮಾಡಿದ್ದಾರೆ. ಆದರೆ ಇನ್ನು ಮುಂದೆ ನಾನು ನನ್ನ ನೈಜ ಶೈಲಿಯನ್ನು ಬಳಸುವುದಿಲ್ಲ ಎಂದಿದ್ದಾರೆ. ಇದು ನಿಜಕ್ಕೂ ದೊಡ್ಡ ನಿರ್ಧಾರವೇ ಆಗಿದೆ.

ಇದನ್ನೂ ಓದಿ:ಹುಟ್ಟುಹಬ್ಬದ ದಿನ ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್

ಪ್ರಶಾಂತ್ ನೀಲ್ ಅವರು ‘ಸಲಾರ್ 2’, ‘ಡ್ರ್ಯಾಗನ್ 2’ ಸಿನಿಮಾಗಳನ್ನು ನಿರ್ದೇಶಿಸಲಿದ್ದು, ಆ ಎರಡು ಸಿನಿಮಾಗಳ ಬಳಿಕ ನೀಲ್ ಅವರು ತಮ್ಮ ಶೈಲಿಯನ್ನೇ ಬದಲಿಸಲಿದ್ದಾರೆ. ‘ನನ್ನ ಸಿನಿಮಾಗಳಲ್ಲಿ ಇನ್ನು ಮುಂದೆ ಹೆಚ್ಚು ಬಣ್ಣಗಳು ಕಾಣಲಿವೆ. ಇಂಟೆನ್ಸ್ ಕತೆಯ ಹೊರತಾಗಿ ಭಿನ್ನ ಕತೆಗಳು ಸಹ ಇರಲಿವೆ’ ಎಂದಿದ್ದಾರೆ. ‘ಹಾಗಿದ್ದರೆ ನಿಮ್ಮ ಸಿನಿಮಾನಲ್ಲಿ ಪಿಂಕ್ ಬಣ್ಣವನ್ನೂ ನೋಡಬಹುದೇ?’ ಎಂಬ ಪ್ರಶ್ನೆಗೆ, ‘ಖಂಡಿತ ಹೌದು’ ಎಂದಿದ್ದಾರೆ ನೀಲ್.

ಡಾರ್ಕ್ ಥೀಮ್, ಪಾತಕಿಗಳ ಪ್ರಪಂಚವನ್ನು ಸೃಷ್ಟಿಸುವುದು, ಮುಖ್ಯವಾದ ಹಲವು ಪಾತ್ರಗಳ ಸೃಷ್ಟಿಸಿ ಅವರನ್ನು ಕತೆಯಲ್ಲಿ ಕನೆಕ್ಟ್ ಮಾಡುವುದು ಮೂರನೇ ಒಂದು ಪಾತ್ರದ ಮೂಲಕ ಕತೆಯನ್ನು ನರೇಟ್ ಮಾಡಿಸುವುದು ಇವು ಪ್ರಶಾಂತ್ ನೀಲ್ ಅವರ ಶೈಲಿ. ಇದರಿಂದ ನೀಲ್ ಅವರಿಗೆ ಭಾರಿ ಯಶಸ್ಸು ಸಹ ಸಿಕ್ಕಿದೆ. ಆದರೆ ಇನ್ನು ಮುಂದೆ ಆ ಶೈಲಿಯನ್ನೇ ಬಿಡಲಿದ್ದಾರಂತೆ ನೀಲ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಕೋನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ಬದಲಾವಣೆ – Kannada News | India A Squad Update: Anukul Roy Replaces Harssh Dubey for Upcoming Tri Series

ಐಪಿಎಲ್ (IPL 2026) ಮುಗಿದ ಕೂಡಲೇ ಭಾರತ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವೆ ಏಕದಿನ ತ್ರಿಕೋನ ಸರಣಿ ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ (BCCI),  ಭಾರತ ಎ ತಂಡವನ್ನು ಸಹ ಪ್ರಕಟಿಸಿತ್ತು. ಆದರೀಗ ಸರಣಿ ಆರಂಭಕ್ಕೂ ಮುನ್ನವೇ ಬಿಸಿಸಿಐ, ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿದೆ. ವಾಸ್ತವವಾಗಿ ಜೂನ್ 9 ರಿಂದ ಪ್ರಾರಂಭವಾಗಲಿರುವ ತ್ರಿಕೋನ ಸರಣಿಗೆ ಭಾರತ ಎ ತಂಡದಲ್ಲಿ ಹರ್ಷ್ ದುಬೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೀಗ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಅವರ ಸ್ಥಾನದಲ್ಲಿ 27 ವರ್ಷದ ಆಲ್‌ರೌಂಡರ್ ಅನುಕುಲ್ ರಾಯ್ ಅವರನ್ನು ಆಯ್ಕೆ ಮಾಡಲಾಗಿದೆ. ದುಬೆ ಅವರನ್ನು ಭಾರತ ಎ ತಂಡದಿಂದ ಕೈಬಿಡಲು ಕಾರಣವೂ ಇದ್ದು, ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ಅವರನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರನ್ನು ಭಾರತ ಎ ತಂಡದಿಂದ ಕೈಬಿಡಲಾಗಿದೆ.

ಭಾರತ ತಂಡಕ್ಕೆ ಹರ್ಷ್ ದುಬೆ ಎಂಟ್ರಿ

ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಆಯ್ಕೆ ಮಂಡಳಿ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಹರ್ಷ್ ದುಬೆ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಹರ್ಷ್ ದುಬೆ ಅವರನ್ನು ಭಾರತ ಎ ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ಅನುಕುಲ್ ರಾಯ್ ಅವರನ್ನು ಆಯ್ಕೆ ಮಾಡಲಾಗಿದೆ.

ಅನುಕೂಲ್ ರಾಯ್ ಪ್ರದರ್ಶನ

ಹರ್ಷ್ ದುಬೆ ಅವರಂತೆಯೇ, 27 ವರ್ಷದ ಆಲ್‌ರೌಂಡರ್ ಅನುಕುಲ್ ರಾಯ್ ಕೂಡ ಪ್ರಸ್ತುತ ಐಪಿಎಲ್​ನಲ್ಲಿ ಆಡುತ್ತಿದ್ದಾರೆ. ಕೆಕೆಆರ್ ತಂಡದ ಭಾಗವಾಗಿರುವ ರಾಯ್ ಆಡಿರುವ 13 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಬ್ಯಾಟಿಂಗ್‌ನಲ್ಲಿ 43 ರನ್‌ಗಳನ್ನು ಸಹ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ, ರಾಯ್ 48 ಇನ್ನಿಂಗ್ಸ್‌ಗಳಲ್ಲಿ 32.79 ಸರಾಸರಿಯಲ್ಲಿ 1279 ರನ್‌ಗಳನ್ನು ಗಳಿಸಿದ್ದು, 59 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಏಕದಿನ ತ್ರಿಕೋನ ಸರಣಿ ವೇಳಾಪಟ್ಟಿ

  • ಜೂನ್ 9: ಭಾರತ ಎ vs ಶ್ರೀಲಂಕಾ ಎ
  • ಜೂನ್ 11: ಭಾರತ ಎ vs ಅಫ್ಘಾನಿಸ್ತಾನ ಎ
  • ಜೂನ್ 13: ಅಫ್ಘಾನಿಸ್ತಾನ ಎ ವಿರುದ್ಧ ಶ್ರೀಲಂಕಾ ಎ
  • ಜೂನ್ 15: ಭಾರತ ಎ vs ಶ್ರೀಲಂಕಾ ಎ
  • ಜೂನ್ 17: ಭಾರತ ಎ vs ಅಫ್ಘಾನಿಸ್ತಾನ ಎ
  • ಜೂನ್ 19: ಅಫ್ಘಾನಿಸ್ತಾನ ಎ ವಿರುದ್ಧ ಶ್ರೀಲಂಕಾ ಎ
  • ಜೂನ್ 21: ಫೈನಲ್ ಪಂದ್ಯ

ಏಕದಿನ ತ್ರಿಕೋನ ಸರಣಿಗೆ ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೆಡ್ಗೆ, ಪ್ರಭುಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅಂಶುಲ್ ಕಾಂಬೋಜ್, ಅರ್ಷದ್ ಖಾನ್, ಅನುಕೂಲ್ ರಾಯ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಬೆಂಗಳೂರಿಗಿಂತ ಜರ್ಮನಿಯೇ ಬೆಸ್ಟ್; ಬೆಂಗಳೂರಿನ ಟೆಕ್ಕಿ ಹೀಗೆಂದಿದ್ದೇಕೆ ಗೊತ್ತಾ? – Kannada News | Life in Germany is better than in Bengaluru; This is the reason given by a Bengaluru engineer

ಬದುಕಿನಲ್ಲಿ ನಾನಾ ರೀತಿಯ ಅನುಭವವಾಗುತ್ತದೆ. ಬದುಕಿನಲ್ಲಿ ಎಲ್ಲವನ್ನು ಒಪ್ಪಿಕೊಳ್ಳಬೇಕು, ಆದರೆ ಸಣ್ಣ ಪುಟ್ಟ ಬದಲಾವಣೆಗಳು ಅತ್ಯಗತ್ಯ. ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರು ಬೆಂಗಳೂರಿನ (Bengaluru) ದಿನಚರಿಯನ್ನು ಜರ್ಮನಿಯಲ್ಲಿನ ತಮ್ಮ ಜೀವನದೊಂದಿಗೆ ಹೋಲಿಸಿಕೊಂಡಿದ್ದಾರೆ. ಈ ವೇಳೆ ಜರ್ಮನಿಯ ಜೀವನವೇ ಬೆಸ್ಟ್ ಎಂದು ಹೇಳಿದ್ದಾರೆ. ಈ ಟೆಕ್ಕಿ ಮಾಡಿದ ಪೋಸ್ಟ್ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ತನುಜ್ (Tanuj) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಜರ್ಮನಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ದೈನಂದಿನ ವೇಳಾಪಟ್ಟಿಯನ್ನು ಬದಲಾಯಿಸಿದ್ದೇನೆ. ಬೆಂಗಳೂರಿನಲ್ಲಿ, ನಾನು ಕಾರು ಮತ್ತು ಟ್ರಕ್ ಶಬ್ದಕ್ಕೆ ಎಚ್ಚರಗೊಳ್ಳುತ್ತೇನೆ. ಬೆಳಿಗ್ಗೆ ವಾಕಿಂಗ್ ಗೆ ಹೋಗುತ್ತೇನೆ ಇಲ್ಲವಾದರೆ ಗೇಟೆಡ್ ಸೊಸೈಟಿಯೊಳಗೆ ಓಡುತ್ತೇನೆ. ಆಫೀಸಿನಿಂದ ತಲುಪಲು 1.5 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆಯುತ್ತೇನೆ, ಕಡಿಮೆ ವಾಸ್ತವಿಕ ಕೆಲಸದೊಂದಿಗೆ ಹೆಚ್ಚಿನ ಮೀಟಿಂಗ್‌ನಲ್ಲಿ ಹಾಜರಾಗುತ್ತೇನೆ. ಸಹೋದ್ಯೋಗಿಗಳೊಂದಿಗೆ ಊಟ ಮಾಡುತ್ತೇನೆ, ಎಲ್ಲೆಡೆ ಹರಟೆಯೊಂದಿಗೆ ಚಹಾ ಹಾಗೂ ಆಟದ ವಿರಾಮಗಳನ್ನು ಮುಗಿಸುತ್ತೇನೆ. ಮನೆಗೆ ಹಿಂದಿರುಗಿದ ನಂತರವೂ, ಮೀಟಿಂಗ್ ರಾತ್ರಿ 10 ಗಂಟೆಯವರೆಗೆ ಮುಂದುವರಿಯುತ್ತವೆ ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಆದರೆ, ಜರ್ಮನಿಯಲ್ಲಿ, ನಾನು ಸಂಪೂರ್ಣ ಶಾಂತವಾಗಿ ಎಚ್ಚರಗೊಳ್ಳುತ್ತಿದ್ದೆ. ಶುದ್ಧ ಗಾಳಿಯೊಂದಿಗೆ ಪ್ರಕೃತಿಯಲ್ಲಿ ಓಡುತ್ತಿದ್ದೆ.. ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಪ್ರಯಾಣಿಸುತ್ತಿದ್ದೆ. ಕಡಿಮೆ ಮಾತು, ಆದರೆ ಕೆಲಸದ ಮೇಲೆ ಹೆಚ್ಚು ಗಮನ. ಹೆಚ್ಚಿನ ದಿನಗಳಲ್ಲಿ ಒಂಟಿಯಾಗಿ ಊಟ ಹಾಗೂ ಯಾವುದೇ ಯಾದೃಚ್ಛಿಕ ವಿರಾಮಗಳಿಲ್ಲದೆ ಎಲ್ಲೆಡೆ ಮೌನವನ್ನು ಅನುಭವಿಸಿದೆ ಕೆಲಸದ ನಂತರ ನನ್ನ ಲ್ಯಾಪ್‌ಟಾಪ್ ಅನ್ನು ಎಂದಿಗೂ ತೆರೆಯಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

ಮೇ 19 ರಂದು ಮಾಡಲಾದ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜರ್ಮನಿಯಲ್ಲಿ ಕೆಲಸದ ನಿರ್ವಹಣೆ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬದುಕಿನ ಎಲ್ಲಾ ಅನುಭವಗಳನ್ನು ಅನುಭವಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಎರಡು ದೇಶಗಳ ನಡುವಿನ ಹೋಲಿಕೆ ಅದ್ಭುತ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:17 pm, Thu, 21 May 26

Source link

3 ವರ್ಷದ ಮಗುವಿಗೆ ಮರುಜೀವ; ಉಚಿತವಾಗಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು – Kannada News | Madhusudan sai hospital doctor saved 3 year old child by performing rare surgery free of cost

ನವದೆಹಲಿ, ಮೇ 21: ಛತ್ತೀಸ್‌ಗಢದ ಬಾಲಕಿ ಶಿವಾಂಗಿ ಶರ್ಮಾ 2025ರಲ್ಲಿ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ (Heart Surgery) ಒಳಗಾಗಿದ್ದಳು. ಆದರೆ, ಶಸ್ತ್ರಚಿಕಿತ್ಸೆಯು ಆಕೆಯ ಸಮಸ್ಯೆಯನ್ನು ಗುಣಪಡಿಸಿದರೂ, ಅದರ ನಂತರ ಮತ್ತೊಂದು ಸಮಸ್ಯೆ ಪ್ರಾರಂಭವಾಯಿತು. ಉಸಿರಾಟದ ತೊಂದರೆಯಿಂದಾಗಿ ಆಕೆಗೆ ಹಲವಾರು ದಿನಗಳವರೆಗೆ ಶ್ವಾಸನಾಳದ ಕೊಳವೆಯನ್ನು ಸೇರಿಸಬೇಕಾಯಿತು. ಇದರ ಪರಿಣಾಮವಾಗಿ ‘ಸಬ್‌ಗ್ಲೋಟಿಕ್ ಸ್ಟೆನೋಸಿಸ್’ (ಶ್ವಾಸನಾಳವು ಕಿರಿದಾಗಿದ್ದು ಮತ್ತು ಬಹುತೇಕ ಸಂಪೂರ್ಣವಾಗಿ ಬ್ಲಾಕ್ ಆಗಿರುವ ಸ್ಥಿತಿ) ಎಂಬ ಗಂಭೀರ ಸಮಸ್ಯೆ ಉಂಟಾಯಿತು. ಇದರಿಂದಾಗಿ ಆ ಮಗುವಿಗೆ ಉಸಿರಾಡಲು ಕಷ್ಟವಾಯಿತು.

ಹೀಗಾಗಿ, ಚಿಕಿತ್ಸೆಗಾಗಿ ಛತ್ತೀಸ್‌ಗಢದ ಏಮ್ಸ್ ಸೇರಿದಂತೆ ಹಲವಾರು ಆಸ್ಪತ್ರೆಗಳನ್ನು ಸಂಪರ್ಕಿಸಿದರೂ, ಪ್ರಕರಣದ ಸಂಕೀರ್ಣತೆಯಿಂದಾಗಿ ವೈದ್ಯರಿಗೆ ಬೇಗ ಶಸ್ತ್ರಚಿಕಿತ್ಸೆಯನ್ನು ನಡೆಸಲು ಸಾಧ್ಯವಾಗಲಿಲ್ಲ. ಆರ್ಥಿಕವಾಗಿ ದುರ್ಬಲರಾಗಿದ್ದ ಕುಟುಂಬವು ಖಾಸಗಿ ಆಸ್ಪತ್ರೆಗಳಲ್ಲಿ 30ರಿಂದ 40 ಲಕ್ಷ ರೂ.ಗಳವರೆಗೆ ವೆಚ್ಚವಾಗುತ್ತದೆ ಎಂದು ಹೇಳಿದ್ದರಿಂದ ಆ ಕುಟುಂಬ ಬಹಳ ಸಂಕಷ್ಟದಲ್ಲಿದ್ದರು.

ಇದನ್ನೂ ಓದಿ: ಪ್ರಮಾಣವಚನದ ವೇಳೆ ರಾಹುಲ್ ಗಾಂಧಿ ಹೆಸರು ಹೇಳಿ ವಿವಾದಕ್ಕೀಡಾದ ತಮಿಳುನಾಡು ಕಾಂಗ್ರೆಸ್ ಶಾಸಕ

ಕೊನೆಯ ಪ್ರಯತ್ನವೆಂಬಂತೆ ಆ ಬಾಲಕಿಯನ್ನು ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಅಲ್ಲಿನ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ. ಕುಲಭೂಷಣ ಬಾಲಿ ನೇತೃತ್ವದ ತಜ್ಞ ವೈದ್ಯಕೀಯ ತಂಡವು ಈ ಸವಾಲನ್ನು ಸ್ವೀಕರಿಸಿ ಹಂತ ಹಂತವಾಗಿ ಚಿಕಿತ್ಸೆ ನೀಡಿತು. ಲೇಸರ್, ಕೋಬ್ಲೇಷನ್, ಬಲೂನ್ ಹಿಗ್ಗುವಿಕೆ ಮತ್ತು ಸ್ಟೆಂಟ್ ಪ್ಲೇಸ್‌ಮೆಂಟ್‌ನಂತಹ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶ್ವಾಸನಾಳವನ್ನು ಪುನರ್ ನಿರ್ಮಿಸಲಾಯಿತು. ಮೇ 11ರಂದು ಸ್ಟೆಂಟ್ ತೆಗೆಯಲಾಯಿತು. ಮೇ 18ರಂದು ಹಂತ ಹಂತದ ಚಿಕಿತ್ಸೆಯ ಮೂಲಕ ಟ್ರಾಕಿಯೊಸ್ಟೊಮಿ ಟ್ಯೂಬ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಇದರೊಂದಿಗೆ, ಆ ಮಗು ಈಗ ನೈಸರ್ಗಿಕವಾಗಿ ಉಸಿರಾಡಲು ಮತ್ತು ಮಾತನಾಡಲು ಸಾಧ್ಯವಾಯಿತು.

ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಕುಲಭೂಷಣ್ ಬಾಲಿ, ಎಂಡೋಸ್ಕೋಪಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಬಾಲಕಿಯೊಬ್ಬಳಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿರುವ ಶ್ವಾಸನಾಳವನ್ನು ಪುನರ್ನಿರ್ಮಿಸುವುದು ಅಪರೂಪದ ಸಾಧನೆಯಾಗಿದ್ದು, ಈ ಬಾಲಕಿಗೆ 5 ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಹೇಳಿದರು. ವಿಶ್ವದ ಕೆಲವೇ ಆಸ್ಪತ್ರೆಗಳು ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಪರಿಣತಿ ಮತ್ತು ಸೌಲಭ್ಯಗಳನ್ನು ಹೊಂದಿವೆ. ಅವುಗಳಲ್ಲಿಯೂ ಸಹ ಯಶಸ್ಸಿನ ಪ್ರಮಾಣ ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ

ಆಂಧ್ರಪ್ರದೇಶ-ಕರ್ನಾಟಕ ಗಡಿಯಲ್ಲಿರುವ ಸದ್ಗುರು ಶ್ರೀ ಮಧುಸೂಧನ್ ಸಾಯಿ ನೇತೃತ್ವದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್, ಶಿಕ್ಷಣ, ಔಷಧ ಮತ್ತು ಪೌಷ್ಟಿಕಾಂಶ ಕ್ಷೇತ್ರಗಳಲ್ಲಿ ಉಚಿತ ಸೇವೆಗಳನ್ನು ಒದಗಿಸುವಲ್ಲಿ ವಿಶ್ವದಲ್ಲಿಯೇ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಮಿಷನ್‌ನ ಆಶ್ರಯದಲ್ಲಿ 100 ದೇಶಗಳಲ್ಲಿ ಸೇವೆಗಳನ್ನು ಒದಗಿಸಲಾಗುತ್ತಿದೆ. ನಮ್ಮ ದೇಶದಲ್ಲಿ, ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ದೇಶಾದ್ಯಂತದ ಶ್ರೀ ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಗಳು ಕಳೆದ 13 ವರ್ಷಗಳಲ್ಲಿ ಲಕ್ಷಾಂತರ ಜನರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸಿವೆ. ಎಂಬಿಬಿಎಸ್ ಸೇರಿದಂತೆ ವೈದ್ಯಕೀಯ ಶಿಕ್ಷಣದಲ್ಲಿ ಪಿಜಿ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುವ ಏಕೈಕ ಸಂಸ್ಥೆ ಇದಾಗಿದ್ದು, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಆಶ್ರಯದಲ್ಲಿ ನಡೆಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ಬಳಿಕ ಟ್ರೋಲ್‌; ಅದ್ನಾನ್ ಸಮಿ ತಿರುಗೇಟು – Kannada News | Singer Adnan Sami reacts to social media Trolling after RSS Chief Mohan Bhagwat meeting

ಖ್ಯಾತ ಗಾಯಕ ಅದ್ನಾನ್ ಸಮಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನು ಭೇಟಿಯಾದ ಫೋಟೋಗಳನ್ನು ಹಂಚಿಕೊಂಡಿದ್ದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲಿಂಗ್‌ಗೆ ಒಳಗಾಗಿದ್ದರು. ಸದ್ಯ ಈ ವಿಚಾರವಾಗಿ ಮೌನ ಮುರಿದಿರುವ ಅದ್ನಾನ್ ಸಮಿ (Adnan Sami) ಅವರು, ಹೀಯಾಳಿಸುವವರ ಬಗ್ಗೆ ತಾವು ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಮೇಲಿನ ಟ್ರೋಲಿಂಗ್ ಮತ್ತು ವಿವಾದಗಳ ಬಗ್ಗೆ ಮಾತನಾಡಿದ ಅದ್ನಾನ್ ಸಮಿ, ‘ನಾನು ಸ್ವತಂತ್ರ ಮನಸ್ಸಿನ ವ್ಯಕ್ತಿ. ಸದ್ಯ ನನ್ನ ಮನಸ್ಸಿಗೆ ಯಾವುದೇ ಫಿಲ್ಟರ್‌ಗಳಿಲ್ಲ. ನನಗೆ ಏನು ಸರಿ ಅನಿಸುತ್ತದೋ ಅದನ್ನೇ ಮಾಡುತ್ತೇನೆ. ನಾನು ದೇವರಿಗೆ ಮಾತ್ರ ಉತ್ತರ ನೀಡಬೇಕೇ ಹೊರತು ಬೇರೆ ಯಾರಿಗೂ ಅಲ್ಲ’ ಎಂದು ನೇರವಾಗಿ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ‘ಯಾರಾದರೂ ನನ್ನೊಂದಿಗೆ ಚೆನ್ನಾಗಿ ನಡೆದುಕೊಂಡರೆ, ಅವರು ಯಾರೇ ಆಗಿದ್ದರೂ ನಾನು ಅವರೊಂದಿಗೆ ಒಳ್ಳೆಯ ರೀತಿಯಲ್ಲೇ ನಡೆದುಕೊಳ್ಳುತ್ತೇನೆ. ಬೇರೊಬ್ಬರ ಅಭಿಪ್ರಾಯದ ಆಧಾರದ ಮೇಲೆ ನಾನು ಯಾರನ್ನೂ ಅಳೆಯಲು ಹೋಗುವುದಿಲ್ಲ. ಅದರಲ್ಲೂ ವಿಶೇಷವಾಗಿ ನನಗೆ ಯಾರ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲವೋ, ಅವರ ಬಗ್ಗೆ ನಾನು ಖಂಡಿತವಾಗಿಯೂ ಯಾವುದೇ ತೀರ್ಪು ನೀಡುವುದಿಲ್ಲ. ಜನರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಸೋಶಿಯಲ್ ಮೀಡಿಯಾ ಸಂಸ್ಕೃತಿಯೇ ಇಂತಹ ಪರಿಸ್ಥಿತಿಗೆ ಕಾರಣ ಎಂದಿರುವ ಅದ್ನಾನ್, ಜನರು ಹಿನ್ನೆಲೆ ತಿಳಿಯದೆ ತರಾತುರಿಯಲ್ಲಿ ತೀರ್ಮಾನಕ್ಕೆ ಬರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ನನ್ನ ಒಂದು ಫೋಟೋ ಅಥವಾ ಒಂದು ಹಾಡನ್ನು ನೋಡಿ ನಾನು ಯಾರು, ಎಂಥವನು ಎಂದು ನಿರ್ಣಯಿಸಲು ಸಾಧ್ಯ ಎಂದು ಯಾರಾದರೂ ಅಂದುಕೊಂಡಿದ್ದರೆ, ಅವರು ಭ್ರಮೆಯ ಲೋಕದಲ್ಲಿದ್ದಾರೆ ಎಂದರ್ಥ. ನನ್ನನ್ನು ಟ್ರೋಲ್ ಮಾಡುವವರಲ್ಲಿ ಹೆಚ್ಚಿನವರು ನನ್ನ ಅಭಿಮಾನಿಗಳಲ್ಲ, ಅವರು ಕೇವಲ ನೆಗೆಟಿವಿಟಿ ಹರಡಲು ಕಾಯುತ್ತಿರುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ: ‘ಗುಡ್​ ಬೈ’ ಹೇಳಿದ ಖ್ಯಾತ ಗಾಯಕ ಅದ್ನಾನ್ ಸಮಿ: ಫ್ಯಾನ್ಸ್​ ವಲಯದಲ್ಲಿ ಆತಂಕ

ಕಳೆದ ಫೆಬ್ರವರಿ ತಿಂಗಳಲ್ಲಿ ಅದ್ನಾನ್ ಸಮಿ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ‘ಆರ್‌ಎಸ್‌ಎಸ್ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರೊಂದಿಗೆ ಅದ್ಭುತವಾದ ಮಧ್ಯಾಹ್ನವನ್ನು ಕಳೆದಿದ್ದೇನೆ. ಅವರು ಮಾತನಾಡುವುದನ್ನು ಕೇಳುವುದೇ ಒಂದು ಸಂತೋಷ. ಆರ್‌ಎಸ್‌ಎಸ್ ಬಗ್ಗೆ ಇದ್ದ ಹಲವು ತಪ್ಪು ಕಲ್ಪನೆಗಳನ್ನು ಅವರು ತುಂಬಾ ಸರಳವಾಗಿ ಮನವರಿಕೆ ಮಾಡಿಕೊಟ್ಟರು. ಅವರು ಅತ್ಯಂತ ಸುಸಂಸ್ಕೃತ ವ್ಯಕ್ತಿ ಮತ್ತು ಉದಾತ್ತ ಜೀವಿ’ ಎಂದು ಆ ಫೋಟೋಗಳಿಗೆ ಕ್ಯಾಪ್ಷನ್ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 4:12 pm, Thu, 21 May 26

Source link

‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ನಿಜ ಫೈಟ್​​ ಮಾಡಿದ ನಟ – Kannada News | Ram Charan fights with real rustlers in Peddi movie

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆ ಇದೆ. ಸಿನಿಮಾದ ಹಾಡುಗಳು, ಸಿನಿಮಾದ ಟೀಸರ್, ಟ್ರೈಲರ್​​ ಎಲ್ಲವೂ ಈಗಾಗಲೇ ಹಿಟ್ ಆಗಿದೆ. ಚಿತ್ರತಂಡವೂ ಸಹ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದು, ಪ್ರಚಾರಕ್ಕೆಂದೇ ಮೂರು-ನಾಲ್ಕು ಕೋಟಿ ಹಣ ಖರ್ಚು ಮಾಡುತ್ತಿದೆ. ಸತತ ಎರಡು ಸೋಲು ಕಂಡಿರುವ ರಾಮ್ ಚರಣ್ ಸಹ ‘ಪೆದ್ದಿ’ಯನ್ನು ಗೆಲ್ಲಿಸಿಕೊಳ್ಳಲು ನಾನಾ ಕಸರತ್ತು ಮಾಡುತ್ತಿದ್ದು, ‘ಪೆದ್ದಿ’ ಸಿನಿಮಾಕ್ಕಾಗಿ ಭಾರಿ ಶ್ರಮವನ್ನೇ ಹಾಕಿದ್ದಾರೆ. ಆ ಬಗ್ಗೆ ಖುದ್ದು ರಾಮ್ ಚರಣ್ ಮಾತನಾಡಿದ್ದಾರೆ.

ಕೆಲ ದಿನಗಳ ಹಿಂದೆ ರಾಮ್ ಚರಣ್ ಮತ್ತು ‘ಪೆದ್ದಿ’ ಸಿನಿಮಾದ ನಿರ್ದೇಶಕ ಬುಚ್ಚಿ ಬಾಬು ಸನಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ವಿಡಿಯೋನಲ್ಲಿ, ರಾಮ್ ಚರಣ್ ಕಾರು ಡ್ರೈವ್ ಮಾಡಿಕೊಂಡು ಬುಚ್ಚಿ ಬಾಬು ಸನಾ ಅವರನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದರು. ಆ ವೇಳೆ ಇಬ್ಬರೂ ಸಹ ‘ಪೆದ್ದಿ’ ಸಿನಿಮಾದ ಶೂಟಿಂಗ್ ಬಗ್ಗೆ ಮಾತನಾಡಿದ್ದರು. ಅದನ್ನು ಬುಚ್ಚಿ ಬಾಬು ಮೊಬೈಲ್​​ನಲ್ಲಿ ಶೂಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು.

ಬುಚ್ಚಿ ಬಾಬು ಹೇಳಿರುವಂತೆ ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾಕ್ಕಾಗಿ ಮೂರು ಬಾರಿ ದೇಹವನ್ನು ಬದಲಾಯಿಸಿಕೊಳ್ಳಬೇಕಾಯ್ತಂತೆ. ಕ್ರಿಕೆಟಿಗನ ದೇಹಕ್ಕಾಗಿ ತೆಳ್ಳಗೆ ಆದರೆ ಬಲವಾಗಿ ಕಾಣುವಂತೆ ದೇಹವನ್ನು ಹುರಿಗೊಳಿಸಿದ್ದ ರಾಮ್ ಚರಣ್ ಆ ನಂತರ ಕುಸ್ತಿ ಪಟುವಿನ ಪಾತ್ರಕ್ಕಾಗಿ ವಿಪರೀತ ವರ್ಕೌಟ್ ಮಾಡಿದರಂತೆ. ಆ ಬಳಿಕ ಸಿನಿಮಾದಲ್ಲಿ ಬರುವ ಮತ್ತೊಂದು ಪ್ರಮುಖ ದೃಶ್ಯಕ್ಕಾಗಿ ಮತ್ತೆ ಬೇರೆ ರೀತಿಯ ದೇಹದಾರ್ಡ್ಯವನ್ನು ಮಾಡಿಕೊಂಡರಂತೆ.

ಇದನ್ನೂ ಓದಿ:ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

ಇನ್ನು ಸಿನಿಮಾದ ಕುಸ್ತಿ ದೃಶ್ಯದ ಶೂಟಿಂಗ್ ಬಗ್ಗೆ ಮಾತನಾಡಿರುವ ರಾಮ್ ಚರಣ್. ಸಿನಿಮಾ ಶೂಟಿಂಗ್​​​ಗೆ ನಿಜವಾದ ಕುಸ್ತಿ ಪಟುಗಳನ್ನು ಕರೆದುಕೊಂಡು ಬರಲಾಗಿತ್ತು. ಅವರಿಗೆ ನಟನೆ ಗೊತ್ತಿಲ್ಲ, ಕ್ಯಾಮೆರಾ ಎದುರು ಫೇಕ್ ಆಗಿ ಫೈಟ್ ಮಾಡುವುದು ಗೊತ್ತಿಲ್ಲ. ಅವರು ನಿಜವಾಗಿಯೂ ಕುಸ್ತಿ ಮಾಡುತ್ತಿದ್ದರು. ಸಾಕಷ್ಟು ಬಾರಿ ನನ್ನ ಕುತ್ತಿಗೆ, ಕೈ, ಕಾಲುಗಳನ್ನು ಎಳೆದು ಪಟ್ಟುಗಳನ್ನು ಹಾಕುತ್ತಿದ್ದರು’ ಎಂದಿದ್ದಾರೆ. ಅದರಿಂದಲೇ ತಮ್ಮ ಕೈ ನೋವು ಶುರುವಾಗಿದೆ ಎಂದಿದ್ದ ರಾಮ್ ಚರಣ್ ಆ ನಂತರ ಕೈ ನೋವಿಗೆ ಶಸ್ತ್ರಚಿಕಿತ್ಸೆಗೆ ಸಹ ಒಳಗಾದರು.

ಒಟ್ಟಾರೆ ‘ಪೆದ್ದಿ’ ಸಿನಿಮಾಕ್ಕಾಗಿ ರಾಮ್ ಚರಣ್ ಬಹಳ ಶ್ರಮ ಪಟ್ಟಿದ್ದು, ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಕುಸ್ತಿ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೆಡಿಕಲ್ ಆಕಾಂಕ್ಷಿಗಳಿಗೆ ಸಿಇಟಿ ನಡೆಸಲು ರಾಜ್ಯಗಳಿಗೆ ಅವಕಾಶ ಕೊಡಿ: ಸಿದ್ದರಾಮಯ್ಯ ಆಗ್ರಹ – Kannada News | Siddaramaiah urges Central to Allow state Governments for conduct CET for medical aspirants

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More

Source link

Exit mobile version