ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?

ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?

‘ಲವ್ ಮಾಕ್ಟೇಲ್ 3’ ಸಿನಿಮಾ (Love Mocktail 3) ‘ಧುರಂಧರ್ 2’ ಅಬ್ಬರದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮೊದಲು ಏಪ್ರಿಲ್​​ನಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿತ್ತು. ಆದರೆ, ‘ಟಾಕ್ಸಿಕ್’ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡ ಬಳಿಕ ಆ ದಿನಾಂಕಕ್ಕೆ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ತರೋದಾಗಿ ಘೋಷಣೆ ಮಾಡಿದರು. ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’ ಸಿನಿಮಾ ತೆರೆಗೆ ಬಂದಿದೆ. ಡಾರ್ಲಿಂಗ್ ಕೃಷ್ಣ ನಟನೆಯ ಈ ಸಿನಿಮಾ ಗಮನ ಸೆಳೆದಿದೆ.

ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆ ಭಾವನಾತ್ಮಕವಾಗಿ ಸಾಗುತ್ತದೆ. ಮೊದಲು ಹಾಗೂ ಎರಡನೇ ಭಾಗಕ್ಕಿಂತ ಚಿತ್ರ ಭಿನ್ನವಾಗಿಯೇ ಮೂಡಿ ಬಂದಿದೆ. ಈ ಸಿನಿಮಾನ ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಧುರಂಧರ್ 2 ಅಬ್ಬರಿಸುತ್ತಿರುವ ಮಧ್ಯೆಯೂ ‘ಲವ್ ಮಾಕ್ಟೇಲ್ 3’ ಸಿನಿಮಾ ಗಮನ ಸೆಳೆದಿದೆ.

sacnilk ವರದಿ ಪ್ರಕಾರ ಮೊದಲ ದಿನ 1.2 ಕೋಟಿ ರೂಪಾಯಿ, ಎರಡನೇ ದಿನ 1 ಕೋಟಿ ರೂಪಾಯಿ, ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ 1.4 ಕೋಟಿ ರೂಪಾಯಿ ಹಾಗೂ 1.76 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಭಾರತದ ಗಳಿಕೆ 5.36 ಕೋಟಿ ರೂಪಾಯಿ ಆಗಿದೆ. ಇನ್ನು, ವಿಶ್ವ ಮಟ್ಟದಲ್ಲಿ 6.23 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು sacnilk ವರದಿ ತಿಳಿಸಿದೆ. ಇಂದು ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದರೆ ಚಿತ್ರ ಗೆದ್ದಂತೆ.

ಇದನ್ನೂ ಓದಿ: ‘ಧುರಂದರ್ 2’ ಚಿತ್ರದ ಎದುರು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಗಳಿಸಿದ್ದೆಷ್ಟು?

‘ಲವ್ ಮಾಕ್ಟೇಲ್ 3’ ಸಿನಿಮಾ ಸಣ್ಣ ಬಜೆಟ್​​ನಲ್ಲಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ಈಗ ಆಗುತ್ತಿರುವ ಗಳಿಕೆ ನಿರ್ಮಾಪಕರಿಗೆ ಲಾಭವನ್ನೇ ತಂದುಕೊಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಧುರಂಧರ್ 2’ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಿರುವಾಗ ಈ ಚಿತ್ರದ ಕಲೆಕ್ಷನ್ ಇಷ್ಟು ಉತ್ತಮವಾಗಿ ಆಗಿರೋದು ಖುಷಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ

‘ಸರಿಗಮಪ’ ಶೋನಲ್ಲಿ ಪ್ರತಿ ಬಾರಿಯೂ ಸಿಂಪತಿಗಾಗಿ ಅನೇಕರನ್ನು ತರುತ್ತಾರೆ, ಆಡಿಷನ್ ನಡೆಸುವಾಗಲೇ ಆ ರೀತಿಯಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪ ಇದೆ. ಈಗ ಸರಿಗಮಪ ಹೊಸ ಸೀಸನ್ ಬರುತ್ತಿದೆ. ಪ್ರೋಮೋದಲ್ಲೇ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಗಾಯಕ ಹಾಗೂ ಶೋ ಜಡ್ಜ್ ವಿಜಯ್ ಪ್ರಕಾಶ್ ಅವರು ಈ ವಿಷಯವಾಗಿ ಸ್ಪಷ್ಟನೆ ನೀಡುವ ರೀತಿಯಲ್ಲಿ ಪ್ರೋಮೋ ಮಾಡಲಾಗಿದೆ. ಶೀಘ್ರದಲ್ಲಿ ಜೀ ಕನ್ನಡದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಗರ್ಲ್​ಫ್ರೆಂಡ್ ಕೈಯಿಂದಲೇ ಹತ್ಯೆಯಾದ 18 ಮಕ್ಕಳ ತಂದೆ

ಪ್ರತಾಪ್​ಗಢ, ಮಾರ್ಚ್​ 23: ಗಲ್ಫ್ರೆಂಡ್ ಕೈಯಿಂದಲೇ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು ಹತ್ಯೆ(Murder)ಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರತಾಪ್​ಗಢದಲ್ಲಿ ನಡೆದಿದೆ. ಅವರ ಶವವನ್ನು ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದೆ. ಮೃತ ವ್ಯಕ್ತಿಗೆ 18 ಮಂದಿ ಮಕ್ಕಳಿದ್ದರು. ಚೀಲದಲ್ಲಿ ತುಂಬಿಸಿ ಅವರನ್ನು ಕಾಲುವೆಗೆ ಎಸೆಯಲಾಗಿತ್ತು.ಮಾರ್ಚ್ 18 ರಿಂದ ನಾಪತ್ತೆಯಾಗಿದ್ದರು.

ಈ ಕೊಲೆಯನ್ನು ಮೃತ ವ್ಯಕ್ತಿಯ ಗೆಳತಿ ಸುಮನ್ ಮತ್ತು ಆಕೆಯ ಸಹಚರರು ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುಲ್ಶನ್ ತಲೆಗೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಇದು ಅವರ ಸಾವಿಗೆ ಕಾರಣ ಎನ್ನಲಾಗಿದೆ.

ನಂತರ ಆರೋಪಿಗಳು ಅಪರಾಧವನ್ನು ಮರೆಮಾಚುವ ಪ್ರಯತ್ನದಲ್ಲಿ ಶವವನ್ನು ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಮಾಹಿತಿಯ ಮೇರೆಗೆ ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮತ್ತಷ್ಟು ಓದಿ: ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!; ಕಾರಣ ನಿಗೂಢ

 

ಅಂದಿನಿಂದ ಸುಮನ್ ನನ್ನು ಬಂಧಿಸಲಾಗಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ.ಮಾರ್ಚ್ 18 ರಂದು ಗುಲ್ಶನ್ ನಾಪತ್ತೆಯಾದ ನಂತರ ಮಾಂಧಾತಾ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹದ ಪತ್ತೆ ಪ್ರಕರಣವನ್ನು ಈಗ ಕೊಲೆ ತನಿಖೆಯಾಗಿ ಪರಿವರ್ತಿಸಿದೆ.

ಈ ಕೊಲೆ ಗುಲ್ಶನ್ ಕುಟುಂಬವನ್ನು ದುಃಖದ ಮಡುವಿಗೆ ನೂಕಿದೆ. ಮಿಶ್ರಪುರ್ ಮುಸ್ತಾಕ್ ಗ್ರಾಮದ ಮಾಜಿ ಪ್ರಧಾನ ಗುಲ್ಶನ್ ಇಬ್ಬರು ಪತ್ನಿಯರು ಮತ್ತು 18 ಮಕ್ಕಳನ್ನು ಅಗಲಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಅವರು ಎರಡು ಬಾರಿ ವಿವಾಹವಾಗಿದ್ದರು ಅವರ ಮೊದಲ ಪತ್ನಿ ಕಿಸ್ಮತುಲ್ ನಿಶಾ ಅವರಿಗೆ ಒಂಬತ್ತು ಮಕ್ಕಳಿದ್ದಾರೆ, ಅವರ ಎರಡನೇ ಪತ್ನಿ ಅಂಬಿಯಾ ಬಾನೋಗೆ ಸಹ ಒಂಬತ್ತು ಮಕ್ಕಳಿದ್ದಾರೆ. ಎರಡೂ ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದವು. ಪೊಲೀಸರು ಕೊಲೆಯ ತನಿಖೆಯನ್ನು ಮುಂದುವರಿಸುತ್ತಿದ್ದಂತೆ, ಕುಟುಂಬ ಸದಸ್ಯರು ಸ್ಥಳದಲ್ಲಿ ಜಮಾಯಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

 

 

 

 

 

Source link

ನಿರ್ದೇಶಕ ಆದಿತ್ಯ ಧಾರ್ ಮುಂದಿನ ಸಿನಿಮಾ ಯಾವ ಹೀರೋ ಜೊತೆ?

‘ಧುರಂಧರ್ 2’ ಚಿತ್ರದ ಹವಾ ಜೋರಾಗಿದೆ. ಯುಗಾದಿಗೆ ಉಡುಗೊರೆಯಾಗಿ ಬಿಡುಗಡೆಯಾದ ಈ ಚಿತ್ರವು ಬ್ಲಾಕ್‌ಬಸ್ಟರ್‌ನತ್ತ ಸಾಗುತ್ತಿದೆ. ಮೊದಲ ಭಾಗಕ್ಕಿಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಧುರಂಧರ್ ದಿ ರಿವೆಂಜ್ ಕೇವಲ 4 ದಿನಗಳಲ್ಲಿ 450 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರೊಂದಿಗೆ ನಿರ್ದೇಶಕ ಆದಿತ್ಯ ಧಾರ್ ಅವರ ಹೆಸರು ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಅವರ ಮುಂದಿನ ಚಿತ್ರದ ಬಗ್ಗೆಯೂ ಚರ್ಚೆ ಜೋರಾಗಿದೆ.

‘ಉರಿ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದ ಈ ಪ್ರತಿಭಾನ್ವಿತ ನಿರ್ದೇಶಕ ಆದಿತ್ಯ ಧಾರ್, ಈಗ ಧುರಂಧರ್ ಮತ್ತು ಧುರಂಧರ್ ರಿವೆಂಜ್ ಚಿತ್ರಗಳ ಮೂಲಕ ಸ್ಟಾರ್ ನಿರ್ದೇಶಕರ ಪಟ್ಟಿಗೆ ಸೇರಿದ್ದಾರೆ. ಈಗ, ಅವರ ನಿರ್ದೇಶನದಲ್ಲಿ ನಟಿಸಲು ಸ್ಟಾರ್ ಹೀರೋಗಳು ಸಹ ಸರದಿಯಲ್ಲಿದ್ದಾರೆ. ಏತನ್ಮಧ್ಯೆ, ಧುರಂಧರ್ ಫ್ರಾಂಚೈಸಿಯಲ್ಲಿ ಈಗಾಗಲೇ ಎರಡು ಚಿತ್ರಗಳು ಬಿಡುಗಡೆಯಾಗಿವೆ. ಇದರಲ್ಲಿ ಮೂರನೇ ಭಾಗ ಇರುತ್ತದೆ ಎಂಬ ವದಂತಿ ಇದೆ. ಆದಾಗ್ಯೂ, ಈ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ. ಧುರಂಧರ್ ದಿ ರಿವೆಂಜ್ ಮೂರನೇ ಭಾಗದ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಇದರೊಂದಿಗೆ, ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್… ಮುಂದೆ ಯಾವ ಚಿತ್ರ ಮಾಡುತ್ತಾರೆ? ಅವನು ಅದನ್ನು ಯಾರೊಂದಿಗೆ ಮಾಡುತ್ತಾರೆ ಎಂಬುದು ಈಗ ಬಿಸಿ ವಿಷಯವಾಗಿದೆ.

ಕೆಲವು ವರ್ಷಗಳ ಹಿಂದೆ, ‘ಅಶ್ವಧಾಮ’ ತಮ್ಮ ಕನಸಿನ ಯೋಜನೆ ಎಂದು ಆದಿತ್ಯ ಧರ್ ಘೋಷಿಸಿದ್ದರು. ಇದಕ್ಕಾಗಿ ಆದಿತ್ಯ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ವದಂತಿಗಳಿದ್ದವು. ಆದರೆ, ಇದಾದ ನಂತರ ಯಾವುದೇ ಅಪ್ಡೇಟ್ ಬಂದಿಲ್ಲ. ಆದಾಗ್ಯೂ, ಧುರಂಧರ್ 2 ಚಿತ್ರದ ಪ್ರೀಮಿಯರ್ ಶೋ ನೋಡಿದ ನಂತರ, ಅಲ್ಲು ಅರ್ಜುನ್, ಆದಿತ್ಯ ಧಾರ್ ಅವರನ್ನು ಹೊಗಳುತ್ತಾ ಟ್ವೀಟ್ ಮಾಡಿದ್ದಾರೆ.

ಶೀಘ್ರದಲ್ಲೇ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬ ವದಂತಿಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ಬನ್ನಿ ಜೊತೆಗೆ ಈ ಕ್ರೇಜಿ ಪ್ರಾಜೆಕ್ಟ್ ನಲ್ಲಿ ಎನ್ ಟಿ ಆರ್ ಕೂಡ ವಿಶೇಷ ಪಾತ್ರ ವಹಿಸುತ್ತಾರೆ ಎಂಬ ವದಂತಿಗಳು ಬರುತ್ತಿವೆ. ಇದು ನಿಜವಾಗಿದ್ದರೆ, ಬನ್ನಿ ಮತ್ತು ಎನ್ ಟಿ ಆರ್ ಅಭಿಮಾನಿಗಳಿಗೆ ಭರ್ಜರಿ ಖುಷಿ ಸಿಗಲಿದೆ ಎಂದು ಹೇಳಬಹುದು. ಅಲ್ಲದೆ, ಮತ್ತೊಂದು ಬ್ಲಾಕ್ ಬಸ್ಟರ್ ಗ್ಯಾರಂಟಿ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರದ ಬಡೇ ಸಾಬ್ ಪಾತ್ರಕ್ಕೆ ಸಲ್ಲುಗೆ ಬಂದಿತ್ತು ಆಫರ್?

ಏತನ್ಮಧ್ಯೆ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಆದಿತ್ಯ ಧಾರ್ ಅವರ ಸಂಯೋಜನೆಯಲ್ಲಿ ಒಂದು ಕ್ರೇಜಿ ಪ್ರಾಜೆಕ್ಟ್ ನಿರ್ಮಾಣವಾಗಲಿದೆ ಎಂಬ ಮತ್ತೊಂದು ವದಂತಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ, ಸದ್ಯಕ್ಕೆ ಇವು ಕೇವಲ ವದಂತಿಗಳು. ಇದರಲ್ಲಿ ಎಷ್ಟರ ಮಟ್ಟಿಗೆ ನಿಜ ಎಂದು ತಿಳಿಯಲು ಇನ್ನೂ ಕೆಲವು ದಿನಗಳು ಬೇಕಾಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನನ್ನ ನಿಶ್ಚಿತಾರ್ಥ ಆಯ್ತು, ಆದ್ರೆ ನನಗೆ ಹೋಗೋಕೆ ಆಗಿಲ್ಲ’; ವದಂತಿಗೆ ಅನುಪಮಾ ಸ್ಪಷ್ಟನೆ

ಅನುಪಮಾ ಗೌಡ ಅವರು (Anupama Gowda) ನಟಿ ಹಾಗೂ ನಿರೂಪಕಿ. ಕಲರ್ಸ್​​ ಶೋಗಳನ್ನು ಅವರು ಹೋಸ್ಟ್ ಮಾಡುತ್ತಾರೆ. ಈಗ ಅವರು ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಈ ಮೊದಲು ಬಿಗ್ ಬಾಸ್ ಅಲ್ಲೂ ಅನುಪಮಾ ಗೌಡ ಅವರು ಮಿಂಚಿದ್ದರು. ಕಳೆದ ಕೆಲ ದಿನಗಳಿಂದ ಅವರ ನಿಶ್ಚಿತಾರ್ಥ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಅವರ ಗೆಳೆಯ ರಾಘವ್ ಜೊತೆ ಅನುಪಮಾ ಗೌಡ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಅನೇಕರು ಅನುಪಮಾ ಗೌಡ ನಿಶ್ಚಿತಾರ್ಥ ಮಾಡಿಕೊಂಡರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಈ ವಿಷಯದ ಕುರಿತು ಅನುಪಮಾ ಗೌಡ ಅವರು ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವದಂತಿ ಸುಳ್ಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನುಪಮಾ ಗೌಡ ಅಂದಕ್ಕೆ ಸರಿ ಸಾಟಿಯಾರು? ವಿಡಿಯೋ ನೋಡಿ

‘ಒಂದು ಸೀಕ್ರೆಟ್ ಶೇರ್ ಮಾಡಬೇಕಿತ್ತು. ನಾನು ಸಾಮಾನ್ಯವಾಗಿ ಯಾವುದಕ್ಕೂ ರಿಯಾಕ್ಟ್ ಮಾಡಲ್ಲ. ಆದರೆ, ಶೂಟ್​​ಗೆ ಬಂದಾಗ ಎಲ್ಲರೂ ಕಂಗ್ರಾಜ್ಯುಲೇಷನ್ ಎಂದರು. ಮೆಸೇಜ್ ಕೂಡ ಬರುತ್ತಿತ್ತು. ನನ್ನ ಬೆಸ್ಟ್ ಫ್ರೆಂಡ್ ರಾಘವ್ ಜೊತೆ ಎಂಗೇಜ್​​ಮೆಂಟ್ ಆಯ್ತು. ಆದರೆ ಎಂಗೇಜ್​​ಮೆಂಟ್​ಗೆ ಪಾಲ್ಗೊಳ್ಳಲು ನಮಗೆ ಸಾಧ್ಯವಾಗಿಲ್ಲ. ನಮಗೆ ಯಾರೂ ಮಾಹಿತಿಯೇ ನೀಡಿರಲಿಲ್ಲ. ಒಂದಷ್ಟು ಪೇಜ್​​ನವರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ವ್ಯಂಗವಾಗಿ ಅನುಪಮಾ ಮಾತನಾಡಿದ್ದಾರೆ.

‘ಮುಂದಿನ ಬಾರಿ ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿ. ಉಂಗುರು ಹಾಕುವ ರೀತಿಯ ಫೋಟೋ ಸೃಷ್ಟಿ ಮಾಡಿ. ಈಗ ಹೇಗಿದ್ದರೂ ಎಐ ಬಂದಿದೆ. ಆಗ ಇನ್ನೂ ಖುಷಿ ಆಗುತ್ತದೆ. ಇನ್ನೂ ಟೈಮ್ ಇದೆ. ಮದುವೆನ ಈಗಲೇ ಮಾಡಿಸೋಕೆ ಹೋಗಬೇಡಿ. ಎರಡು ತಿಂಗಳು ಬಿಟ್ಟು ಮಾಡಿ. ಆಗ ಜನರು ನೋಡ್ತಾರೆ. ಟ್ರೆಡಿಷಿನಲ್ ಔಟ್​​ಫಿಟ್ ಹಾಕಿ. ನನ್ನ ರಾಘವ್ ಅವರನ್ನು ಮದುವೆಗೆ ಕರೆಯಿರಿ’ ಎಂದು ಅನುಪಮಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಧುರಂಧರ್ 2’ ಚಿತ್ರದ ಬಡೇ ಸಾಬ್ ಪಾತ್ರಕ್ಕೆ ಸಲ್ಲುಗೆ ಬಂದಿತ್ತು ಆಫರ್?

ಡಿಸೆಂಬರ್ 2025ರಲ್ಲಿ ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರವನ್ನು ಪ್ರೇಕ್ಷಕರು ನೋಡಿದಾಗ, ಅದರಲ್ಲಿ ಉಲ್ಲೇಖಿಸಲಾದ ‘ಬಡೆ ಸಹಾಬ್’ ನಿಖರವಾಗಿ ಯಾರು ಎಂಬ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಚರ್ಚೆ ನಡೆದಿದ್ದು, ಬಡೆ ಸಹಾಬ್ ಪಾತ್ರದಲ್ಲಿ ಯಾವ ನಟ ಕಾಣಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಚರ್ಚೆ ನಡೆದವು. ಈಗ, ಮಾರ್ಚ್ 19 ರಂದು ಚಿತ್ರ ಬಿಡುಗಡೆ ಆಗಿದೆ. ಬಡೆ ಸಾಹೇಬ್, ಅಂದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ. ನಟ ಡ್ಯಾನಿಶ್ ಇಕ್ಬಾಲ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ನಂತರ, ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಡ್ಯಾನಿಶ್ ತಮ್ಮ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಜೂಮ್‌ಗೆ ನೀಡಿದ ಸಂದರ್ಶನದಲ್ಲಿ, ಡ್ಯಾನಿಶ್, ಈ ಚಿತ್ರದಲ್ಲಿ ಬಡೇ ಸಾಹೇಬ್ ಪಾತ್ರವನ್ನು ನಿರ್ವಹಿಸುತ್ತೇನೆಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದರು . ಈ ಪಾತ್ರಕ್ಕಾಗಿ ಅವನು ಕಷ್ಟಪಟ್ಟು ಕೆಲಸ ಮಾಡಿದ್ದರು. ಮೇಕಪ್‌ನಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದರು. ಶೂಟಿಂಗ್ ಮುಗಿದ ನಂತರ ಮೇಕಪ್ ಹಾಕಲು ಏಳರಿಂದ ಎಂಟು ಗಂಟೆಗಳು ಮತ್ತು ಮೇಕಪ್ ತೆಗೆಯಲು ಮೂರರಿಂದ ನಾಲ್ಕು ಗಂಟೆಗಳು ಬೇಕಾಗುತ್ತಿದ್ದವು. ‘ದಾವೂದ್ ಬಡೇ ಸಾಹೇಬ್ ಆಗುತ್ತಾನೆ ಎಂದು ನನಗೆ ತಿಳಿದಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಅಂತಹ ಯಾವುದೇ ಚರ್ಚೆ ಇರಲಿಲ್ಲ. ನಾನು ದಾವೂದ್ ಪಾತ್ರವನ್ನು ಮಾಡುತ್ತಿದ್ದೇನೆ ಎಂದು ಮಾತ್ರ ನನಗೆ ಹೇಳಲಾಯಿತು. ಅವನು ಹಾಸಿಗೆ ಹಿಡಿದಿದ್ದಾನೆ ಮತ್ತು ಎಲ್ಲಾ ದೃಶ್ಯಗಳನ್ನು ಒಂದೇ ಸೆಟ್ಟಿಂಗ್‌ನಲ್ಲಿ ಚಿತ್ರೀಕರಿಸಲಾಗುವುದು’ ಎಂದು ಹೇಳಿದರು.

‘ಬಡೆ ಸಾಹೇಬ್ ಪಾತ್ರದ ಬಗ್ಗೆ ನನಗೆ ತಿಳಿದಿರಲಿಲ್ಲ. ಎಲ್ಲರೂ ಬಡೆ ಸಾಹೇಬ್ ಯಾರು ಎಂದು ಯೋಚಿಸಲು ಪ್ರಾರಂಭಿಸಿದರು. ಬಹುಶಃ ಒಸಾಮಾ ಬಿನ್ ಲಾಡೆನ್ ಅಥವಾ ಪರ್ವೇಜ್ ಮುಷರಫ್ ಅವರನ್ನು ಬಡೆ ಸಾಹೇಬ್ ಆಗಿ ತೋರಿಸಬಹುದು ಎಂಬ ಮಾತು ಕೂಡ ಇತ್ತು. ಆಗ ನಾನು ದಾವೂದ್ ಬಡೆ ಸಾಹೇಬ್ ಎಂದು ಭಾವಿಸಿದೆ. ಧುರಂಧರ್‌ನ ಮೊದಲ ಭಾಗವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಮತ್ತು ಬಹೆ ಸಾಹೇಬ್ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆದಾಗ, ನನಗೆ ಭಯವಾಯಿತು’ ಎಂದು ಡ್ಯಾನಿಶ್ ಹೇಳಿದರು.

ಇದನ್ನೂ ಓದಿ: ‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು

‘ಬಡೆ ಸಾಹಬ್’ ಪಾತ್ರಕ್ಕಾಗಿ ವಿವಿಧ ನಟರ ಹೆಸರುಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದ್ದವು. ಸಲ್ಮಾನ್ ಖಾನ್ ಮತ್ತು ಇಮ್ರಾನ್ ಹಶ್ಮಿಯಂತಹ ಹೆಸರುಗಳು ಸುದ್ದಿಯಲ್ಲಿದ್ದವು. ಆ ಸಮಯದಲ್ಲಿ, ಡ್ಯಾನಿಶ್ ಚಿತ್ರದಲ್ಲಿ ತನ್ನ ಪಾತ್ರವನ್ನು ಬದಲಾಯಿಸಲಾಗಿದೆ ಎಂದು ಹೆದರುತ್ತಿದ್ದರು. “ಬಡೆ ಸಾಹಬ್, ಅಂದರೆ ದಾವೂದ್ ಪಾತ್ರಕ್ಕೆ ಹಲವು ಹೆಸರುಗಳು ಬಂದಾಗ, ನಾನು ನಿರ್ದೇಶಕ ಆದಿತ್ಯಗೆ ಕರೆ ಮಾಡಿ ಅವರು ನನ್ನನ್ನು ಬದಲಾಯಿಸಿದ್ದಾರೆಯೇ ಎಂದು ಕೇಳಬೇಕೆಂದು ಭಾವಿಸಿದೆ’ ಎಂದು ಡ್ಯಾನಿಶ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಡಗುಗಳು ಹಾರ್ಮುಜ್ ಜಲಸಂಧಿ ದಾಟಲು 18 ಕೋಟಿ ರೂ. ಟೋಲ್ ಕಟ್ಬೇಕಾ?

ಟೆಹ್ರಾನ್, ಮಾರ್ಚ್​ 23: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮಧ್ಯೆ, ಇರಾನ್(Iran) ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಹೊಸ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿದೆ. ಜಾಗತಿಕ ವ್ಯಾಪಾರ ಮತ್ತು ಕಡಲ ಆರ್ಥಿಕತೆಯ ದಿಕ್ಕನ್ನು ಬದಲಾಯಿಸಬಹುದಾದ ಯೋಜನೆಯಲ್ಲಿ ಇರಾನ್ ಕಾರ್ಯನಿರ್ವಹಿಸುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸುಂಕ ಅಥವಾ ಸಾರಿಗೆ ಶುಲ್ಕ ವಿಧಿಸಲು ಇರಾನ್ ಮುಂದಾಗಿದೆ. ಸುಮಾರು 18 ಕೋಟಿ ರೂ. ಶುಲ್ಕ ಕಟ್ಟಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹಾರ್ಮುಜ್ ನೆಪ ಇಟ್ಟುಕೊಂಡು ಇರಾನ್ ಇಡೀ ಜಗತ್ತನ್ನು ಬ್ಲ್ಯಾಕ್​ಮೇಲ್ ಮಾಡಲು ಮುಂದಾದಂತೆ ಕಾಣುತ್ತಿದೆ.

ಈ ಪ್ರಸ್ತಾಪವು ಜಾರಿಗೆ ಬಂದರೆ, ಜಾಗತಿಕ ತೈಲ, ಅನಿಲ ಮತ್ತು ವ್ಯಾಪಾರ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರಬಹುದು.ವಾಸ್ತವವಾಗಿ, ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸರಿಸುಮಾರು ಶೇ.20 ಇದರ ಮೂಲಕ ಹಾದುಹೋಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿನ ಯಾವುದೇ ಬದಲಾವಣೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಪಶ್ಚಿಮ ಏಷ್ಯಾದಲ್ಲಿ ಇತ್ತೀಚೆಗೆ ಉಂಟಾದ ಉದ್ವಿಗ್ನತೆ, ವಿಶೇಷವಾಗಿ ಇಸ್ರೇಲ್ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಸಂಘರ್ಷದ ನಂತರ ಪರಿಸ್ಥಿತಿ ಹೆಚ್ಚು ಸೂಕ್ಷ್ಮವಾಗಿದೆ. ಕತಾರ್ ಹಾಗೂ ಇರಾನ್ ನಡುವೆ ಇರುವ ಸೌತ್ ಪಾರ್ಸ್​ ಅನಿಲ ಘಟಕವು ಮಹತ್ವದ್ದಾಗಿದೆ. ಇದನ್ನು ವಿಶ್ವದ ಅತಿದೊಡ್ಡ ನೈಸಗರ್ಗಕ ಅನಿಲ ನಿಕ್ಷೇಪವೆಂದು ಪರಿಗಣಿಸಲಾಗಿದೆ.

ಮತ್ತಷ್ಟು ಓದಿ: ಇರಾನ್ ಅಧ್ಯಕ್ಷರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ; ನೌರುಜ್​ನಲ್ಲಿ ಮೂಲಸೌಕರ್ಯದ ಮೇಲಿನ ದಾಳಿಗೆ ಖಂಡನೆ

ಈ ತಂತ್ರವು ಸಾಂಪ್ರದಾಯಿಕ ಯುದ್ಧದಿಂದ ಆರ್ಥಿಕ ಯುದ್ಧಕ್ಕೆ ಬದಲಾಗಬಹುದು ಎಂದು ತಜ್ಞರು ಹೇಳುತ್ತಾರೆ. ನಿರ್ಣಾಯಕ ಜಲಮಾರ್ಗವನ್ನು ನಿಯಂತ್ರಿಸುವ ಹೊಸ ವಿಧಾನವನ್ನು ಗುರುತಿಸುವ ಮೂಲಕ ಭಾರಿ ಪ್ರಮಾಣದ ಸುಂಕವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯರಾಗಿರುವ ಇರಾನಿನ ಶಾಸಕ ಅಲಾಯೆದ್ದೀನ್ ಬೊರೊಜೆರ್ಡಿ ತಿಳಿಸಿದ್ದಾರೆ.

48 ಗಂಟೆಗಳ ಒಳಗೆ ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ, ಅಮೆರಿಕವು ಇರಾನ್‌ನ ವಿದ್ಯುತ್ ಮೂಲಸೌಕರ್ಯವನ್ನು ಗುರಿಯಾಗಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಬೊರೊಜೆರ್ಡಿ ಅವರ ಹೇಳಿಕೆಗಳು ಬಂದಿವೆ. ಇರಾನ್ ವಿರೋಧಿಗಳನ್ನು ಹೊರತುಪಡಿಸಿ ಉಳಿದ ದೇಶಗಳಿಗೆ ಹಾರ್ಮುಜ್ ಜಲಸಂಧಿ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಾಗತಿಕ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗವು ಅದರ ಮೂಲಕ ಹಾದುಹೋಗುತ್ತದೆ, ಆದರೆ ಹಡಗುಗಳ ಮೇಲಿನ ದಾಳಿಗಳು ಬಹುತೇಕ ಎಲ್ಲಾ ಟ್ಯಾಂಕರ್‌ಗಳ ಸಂಚಾರವನ್ನು ನಿಲ್ಲಿಸಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka by-elections: ಕಾಂಗ್ರೆಸ್​ಗೆ ಪೈಲ್ವಾನ್ ಸವಾಲಿನ ಬೆನ್ನಲ್ಲೇ ಹೈಡ್ರಾಮಾಕ್ಕೆ ಸಜ್ಜಾದ ದಾವಣಗೆರೆ ಅಖಾಡ

ದಾವಣಗೆರೆ, ಮಾರ್ಚ್ 23: ದಾವಣಗೆರೆ ನಗರದಲ್ಲಿ ಇಂದು ರಾಜಕೀಯ ಹೈಡ್ರಾಮಾ ನಡೆಯುವ ಸಾಧ್ಯತೆ ತೀವ್ರವಾಗಿದೆ. ದಾವಣಗೆರೆ (Davanagere) ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ (Congress) ಟಿಕೆಟ್ ಅಲ್ಪಸಂಖ್ಯಾತರಿಗೆ ಸಿಗದ ಹಿನ್ನೆಲೆ ಅಸಮಾಧಾನ ಭುಗಿಲೆದ್ದಿದ್ದು, ಹಲವು ಅಭ್ಯರ್ಥಿಗಳು ಸ್ವತಂತ್ರವಾಗಿ ಮತ್ತು ಬೇರೆ ಪಕ್ಷಗಳಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಐಎಂಐಎಂ, ಎಸ್‌ಡಿಪಿಐ, ಆಮ್ ಆದ್ಮಿ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ವಿಶೇಷವಾಗಿ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿರುವುದು ಗಮನ ಸೆಳೆದಿದೆ.

ನಾಮಪತ್ರ ಸಲ್ಲಿಕೆ ಕೊನೆಯ ದಿನ

ಇಂದು (ಮಾರ್ಚ್ 23) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಭಾರೀ ಮೆರವಣಿಗೆಗಳು ನಡೆಯಲಿದ್ದು, ಅದೇ ವೇಳೆ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದಲೂ ನಾಮಪತ್ರ ಸಲ್ಲಿಕೆ ನಡೆಯಲಿದೆ. ಮಾರ್ಚ್ 22ರಂದು ಅಲ್ಪಸಂಖ್ಯಾತ ಯುವಕರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ, ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ‘ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು.

ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ರಾಜಕೀಯ ಹೈಡ್ರಾಮಾ ನಡೆಯಬಹುದಾದ ಸಾಧ್ಯತೆ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶಿವಮೊಗ್ಗ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಯಲಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ನಿಗಾವಹಿಸಿದ್ದಾರೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಮುಖ ಸಚಿವರು ದಾವಣಗೆರೆಗೆ

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಮರ್ಥ್ ಶಾಮನೂರು ಇಂದು ನಾಮಪತ್ರ ಸಲ್ಲಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೆಲವು ಮಂದಿ ಸಚಿವರು ಉಪಸ್ಥಿತರಿರಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಿಎಂ, ಡಿಸಿಎಂ ಹಾಗೂ ಸಚಿವರು ಬೆಂಗಳೂರಿನ ಹೆಚ್​ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಲಿದ್ದಾರೆ. ಬಳಿಕ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ವೇಳೆ ಜತೆಗಿರಲಿದ್ದಾರೆ.

ದಾವಣಗೆರೆ ದಕ್ಷಿಣ ಟಿಕೆಟ್‌ ಅಂತಿಮಗೊಳಿಸುವ ಮುನ್ನ ಅಲ್ಪಸಂಖ್ಯಾತ ಸಚಿವರು, ಶಾಸಕರನ್ನು ಕರೆದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸುರ್ಜೇವಾಲ ಮನವೊಲಿಸಿದ್ದರು. ಹೀಗಾಗಿ, ಕೊನೇ ಕ್ಷಣದಲ್ಲಿ ಕಣದಿಂದ ಬಂಡಾಯ ಅಭ್ಯರ್ಥಿ ಹಿಂದೆ ಸರಿಯುತ್ತಾರೆ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆಂಬ ವಿಶ್ವಾಸದಲ್ಲಿ ನಾಯಕರಿದ್ದಾರೆ. ಆದರೆ, ಸ್ವಪಕ್ಷದ ವಿರುದ್ಧವೇ ತೊಡೆತಟ್ಟಿರುವ ಸಾದಿಕ್ ಪೈಲ್ವಾನ್, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ನೂರಾರು ಬೆಂಬಲಿಗರ ಜೊತೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್​​ನಲ್ಲಿ ಭುಗಿಲೆದ್ದ ಬಂಡಾಯ: ಹೈಕಮಾಂಡ್​ಗೆ ಪೈಲ್ವಾನ್ ಸವಾಲ್

ಒಟ್ಟಿನಲ್ಲಿ ದಾವಣಗೆರೆ ದಕ್ಷಿಣ ಉಪಚುನಾವಣೆ ಅಖಾಡ ರಂಗೇರಿದ್ದು, ಬಹಳಷ್ಟು ಕುತೂಹಲ ಸೃಷ್ಟಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಇಂದು ಒಣ ಹವೆಯ ಮುನ್ಸೂಚನೆ

ಬೆಂಗಳೂರು, ಮಾರ್ಚ್​ 23: ಇತ್ತೀಚಿಗೆ ಕೆಲ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆಯಾಗಿದ್ದು, ಬೆಂಗಳೂರಿನಿಂದ ಬೀದರ್​ವರೆಗೆ ಒಟ್ಟೂ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿತ್ತು. ಆದರೆ ಇಂದು ಮತ್ತೊಮ್ಮೆ ರಾಜ್ಯದೆಲ್ಲೆಡೆ ಶುಷ್ಕ (Weather Forecast) ವಾತಾವರಣ ಆವರಿಸಿದೆ. ಇನ್ನೂ ಎರಡು ದಿನ ಇದೇ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆಯಾಗಬಹುದೆಂಬ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣ ಹವೆ?

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿನ್ ಲ್ಯಾಡನ್​​ನನ್ನು ಬೇಟೆಯಾಡಿದ್ದ ಮಾಜಿ ಸಿಐಎ ಮುಖ್ಯಸ್ಥ ಟ್ರಂಪ್ ಹಾಗೂ ಯುದ್ಧದ ಬಗ್ಗೆ ಹೇಳಿದ್ದೇನು?

ವಾಷಿಂಗ್ಟನ್, ಮಾರ್ಚ್​ 23: ಇರಾನ್ ವಿರುದ್ಧ ಅಮೆರಿಕದ ಯುದ್ಧ ಆರಂಭವಾಗಿ ಮೂರು ವಾರಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ ಅದು ಕೊನೆಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump)​​ಗೆ ಸುಲಭವಾದ ದಾರಿಯೂ ಕೂಡ ಗೋಚರಿಸುತ್ತಿಲ್ಲ. ಯುದ್ಧ ಮುಂದುವರೆದಂತೆ , ತಮ್ಮ ದೇಶದಲ್ಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ಮಾಜಿ ಸಿಐಎ ಮುಖ್ಯಸ್ಥ ಲಿಯಾನ್ ಪನೆಟ್ಟಾ, ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿರುವ ಟ್ರಂಪ್​​ರನ್ನು ಟೀಕಿಸಿದ್ದಾರೆ.

ಬ್ರಿಟಿಷ್ ಪತ್ರಿಕೆ ಗಾರ್ಡಿಯನ್‌ಗೆ ಮಾತನಾಡಿದ ಪನೆಟ್ಟಾ, ಡೊನಾಲ್ಡ್ ಟ್ರಂಪ್ ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದಾರೆ ಮತ್ತು ಅದಕ್ಕೆ ಅವರೇ ಕಾರಣ ಎಂದು ಹೇಳಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಬಹುದು, ಜಾಗತಿಕ ತೈಲ ಪೂರೈಕೆಯನ್ನು ಅಡ್ಡಿಪಡಿಸಬಹುದು ಎಂದು ಅಮೆರಿಕದ ಭದ್ರತಾ ಅಧಿಕಾರಿಗಳಿಗೆ ವರ್ಷಗಳಿಂದ ತಿಳಿದಿದೆ ಎಂದು ಪನೆಟ್ಟಾ ಹೇಳಿದ್ದಾರೆ. ಇದು ತಿಳಿದಿರುವ ಬೆದರಿಕೆಯಾಗಿದ್ದು, ಸಂಘರ್ಷದ ಸಮಯದಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಮೂಲಕ ಇರಾನ್ ಜಾಗತಿಕ ತೈಲ ಸರಬರಾಜನ್ನು ಅಡ್ಡಿಪಡಿಸಬಹುದು ಎಂದು ಅಮೆರಿಕದ ಭದ್ರತಾ ಸಂಸ್ಥೆಗಳು ಬಹಳ ಹಿಂದಿನಿಂದಲೂ ತಿಳಿದಿದ್ದವು, ಆದರೆ ಈ ಬೆದರಿಕೆಯನ್ನು ನಿರ್ಲಕ್ಷಿಸಲಾಗಿತ್ತು. ಆರಂಭಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯ ಪರಿಣಾಮಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ.

ಆರಂಭಿಕ ಮಿಲಿಟರಿ ಕ್ರಮವು ಇರಾನ್​ ಅನ್ನು ದುರ್ಬಲಗೊಳಿಸಲಿಲ್ಲ ಬದಲಾಗಿ ಅದರ ನಾಯಕತ್ವವನ್ನು ಬಲಪಡಿಸಿತು. ಈಗ ಕಠಿಣ ನಾಯಕತ್ವ ಹೊರಹೊಮ್ಮಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಅಮೆರಿಕದಲ್ಲಿ ಟ್ರಂಪ್ ಮೇಲೆ ಒತ್ತಡ ಹೆಚ್ಚುತ್ತಿದೆ.

ಮತ್ತಷ್ಟು ಓದಿ: ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ: ಟ್ರಂಪ್

ಏರುತ್ತಿರುವ ಇಂಧನ ಬೆಲೆಗಳು ಮತ್ತು ಅನಿಶ್ಚಿತತೆಯು ಸಾರ್ವಜನಿಕ ಬೆಂಬಲವನ್ನು ಕಳೆದುಕೊಳ್ಳುತ್ತಿದೆ. ಒಂದು ಸಮೀಕ್ಷೆ ಪ್ರಕಾರ, ಶೇ.59ರಷ್ಟು ಅಮೆರಿಕನ್ನರು ಇರಾನ್ ಮೇಲಿನ ದಾಳಿಯನ್ನು ವಿರೋಧಿಸುತ್ತಿದ್ದಾರೆ.

ಟ್ರಂಪ್ ಹೋಗುತ್ತಿರುವುದು ಸುಲಭದ ಹಾದಿಯೆಂದು ಅನಿಸುತ್ತಿಲ್ಲ, ಯುದ್ಧದಿಂದ ಹಿಂದೆ ಸರಿಯುವುದು ಅವರಿಗೆ ದೌರ್ಬಲ್ಯವೆನಿಸಬಹುದು ಆದರೆ ಅದು ಉಲ್ಬಣಗಗೊಂಡರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಈ ಪರಿಸ್ಥಿತಿಗೆ ಟ್ರಂಪ್ ಸ್ವತಃ ಜವಾಬ್ದಾರರಾಗುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅಮೆರಿಕ ತನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿದರೆ ಅದು ಗಲ್ಫ್​ ರಾಷ್ಟ್ರಗಳ ಇಂಧನ ಮತ್ತು ಜಲ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಇದು ಪ್ರಪಂಚದಾದ್ಯಂತ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು. 2011ರ ಮೇ 2ರಂದು ಒಸಾಮಾ ಬಿನ್ ಲ್ಯಾಡನ್​ನನ್ನು ಅಮೆರಿಕವು ಆಪರೇಷನ್ ನೆಪ್ಚೂನ್ ಸ್ಪಿಯರ್ ಅಡಿ ಹತ್ಯೆ ಮಾಡಿತ್ತು, ಅದರ ನೇತೃತ್ವವನ್ನು ಪನೆಟ್ಟಾ ಹೊತ್ತಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Exit mobile version