ಸಿನಿಮಾ ರಂಗದಿಂದ ದೂರಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?

ಸಿನಿಮಾ ರಂಗದಿಂದ ದೂರಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?

ಶ್ರೀಲೀಲಾ (Sreeleela), ಕನ್ನಡದ ನಟಿ. ಈಗ ಅವರು ಪ್ಯಾನ್ ಇಂಡಿಯಾ ನಟಿಯಾಗಿ ಸಖತ್ ಮಿಂಚುತ್ತಿದ್ದಾರೆ. ತೆಲುಗಿನಲ್ಲಂತೂ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಇನ್ನೂ ಕೆಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ. ತಮಿಳಿನಲ್ಲೂ ಸಹ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಆಗಲೇ ಮೂರು ಸಿನಿಮಾಕ್ಕೆ ಎಸ್ ಹೇಳಿದ್ದು, ಒಂದು ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಸ್ಟಾರ್ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ. ಇಷ್ಟು ಯಶಸ್ವಿ ನಟಿ ಆಗಿರುವ ಶ್ರೀಲೀಲಾ, ಕೆಲ ವರ್ಷಗಳ ಹಿಂದೆ ನಟನೆಯನ್ನು ತ್ಯಜಿಸಿ, ಚಿತ್ರರಂಗದಿಂದಲೇ ದೂರಾಗುವ ನಿರ್ಧಾರ ಮಾಡಿದ್ದರಂತೆ.

ಶ್ರೀಲೀಲಾ, ಪವನ್ ಕಲ್ಯಾಣ್ ಜೊತೆಗೆ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದರು. ತೆಲುಗಿನ ಖ್ಯಾತ ನಿರೂಪಕಿ ಸುಮಾ ಕನಕಾಲ ಅವರೊಟ್ಟಿಗೆ ತಮಾಷೆಯ ಸಂದರ್ಶನದಲ್ಲಿ ಶ್ರೀಲೀಲಾ ಭಾಗಿ ಆಗಿದ್ದರು. ಅದೇ ಸಂದರ್ಶನದಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಮತ್ತೊಬ್ಬ ನಾಯಕ ನಟಿ ರಾಶಿ ಖನ್ನಾ ಸಹ ಭಾಗಿ ಆಗಿದ್ದರು.

ಕಾರ್ಯಕ್ರಮದಲ್ಲಿ ಟ್ರೋಲ್​​ಗಳ ಬಗ್ಗೆ ನಿರೂಪಕಿ ಸುಮಾ ಕನಕಾಲ ಅವರು ಶ್ರೀಲೀಲಾಗೆ ಪ್ರಶ್ನೆ ಕೇಳಿದರು. ಅದಕ್ಕೆ ಶ್ರೀಲೀಲಾ, ‘”ನಾನು ಸಿನಿಮಾಗಳಲ್ಲಿ ನಟಿಸುವುದನ್ನು ಆರಂಭಿಸಿದ್ದಾಗ ಟ್ರೋಲ್​​ಗಳ ಬಗ್ಗೆ ಬಹಳ ಭಯ ಆಗುತ್ತಿತ್ತು, ಟ್ರೋಲ್​​ಗಳು ಬಹಳ ಕೆಟ್ಟದು ಅನಿಸುತ್ತಿದ್ದವು. ಹಲವು ಬಾರಿ ಅತ್ತಿದ್ದು ಸಹ ಇದೆ. ಟ್ರೋಲ್​​ಗಳು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತಿದ್ದವು. ಎಷ್ಟರ ಮಟ್ಟಿಗೆಂದರೆ ನಾನು ಚಿತ್ರರಂಗವನ್ನೇ ಬಿಟ್ಟುಬಿಡಲು ತೀರ್ಮಾನಿಸಿದ್ದೆ. ‘ನನಗೆ ನಟಿಸಲು ಸಾಧ್ಯವಾಗುತ್ತದೆ ಎಂದು ಅನಿಸುತ್ತಿಲ್ಲ ಎಂದು ನಾನು ನನ್ನ ತಾಯಿಗೆ ಹೇಳಿದೆ. ನಾನು ಶಾಲೆ ಅಥವಾ ಕಾಲೇಜಿಗೆ ಹಿಂತಿರುಗಿಬಿಡುತ್ತೇನೆ’ ಎಂದಿದ್ದೆ. ನಾನು ತುಂಬಾ ಸೂಕ್ಷ್ಮವಾಗಿದ್ದೆ, ಆದರೆ ಈಗ ಹಾಗಿಲ್ಲ, ಟ್ರೋಲ್​​ಗಳು, ಅವರ ನಿಂದನೆ, ವ್ಯಂಗ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ ನಟಿ.

ಇದನ್ನೂ ಓದಿ:ನಟಿ ರಾಶಿ ಖನ್ನಾ ಜೊತೆಗೆ ಶ್ರೀಲೀಲಾ ಸಖತ್ ಮಸ್ತಿ: ವಿಡಿಯೋ ನೋಡಿ

ಅದೇ ಸಂದರ್ಶನದಲ್ಲಿ ಮುಂದುವರೆದು ಮಾತನಾಡಿ, ‘ಇತ್ತೀಚೆಗೆ ಜನ ತುಸು ಬುದ್ಧಿವಂತರು ಸಂವೇದಶೀಲರು ಆಗಿದ್ದಾರೆ ಅನಿಸುತ್ತದೆ. ಮೊದಲು ಬಹಳ ಒರಟಾಗಿ ಕಮೆಂಟ್ ಮಾಡುತ್ತಿದ್ದರು. ಆದರೆ ಈಗ ನೆಗೆಟಿವಿ ಇದೆಯೆಂದರೆ ತುಸು ಯೋಚಿಸುತ್ತಾರೆ, ಸರಿಯಾ? ತಪ್ಪಾ? ಎಂದು ಅವಲೋಕಿಸುತ್ತಾರೆ’ ಎಂದಿದ್ದಾರೆ ಶ್ರೀಲೀಲಾ. ಅದೇ ಸಂದರ್ಶನದಲ್ಲಿ ಇದ್ದ ರಾಶಿ ಖನ್ನಾ, ಟ್ರೋಲ್​​ಗಳ ಬಗ್ಗೆ ಮಾತನಾಡಿ, ‘ನನಗೆ ಟ್ರೋಲ್​​ಗಳು ಮಾನಸಿಕವಾಗಿ ಹಿಂಸೆ ನೀಡುತ್ತವೆ. ಏಕೆಂದರೆ ನಿಜ ಗೊತ್ತಿಲ್ಲದೇ ಅವರು ನಿರ್ಧಾರಗಳನ್ನು ಪ್ರಕಟಿಸುತ್ತಾರೆ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ನನಗೆ ಅದರ ಬಗ್ಗೆ ಈಗಲೂ ಬೇಸರ ಇದೆ’ ಎಂದಿದ್ದಾರೆ.

ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ‘ಆಶಿಖಿ 3’ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇನ್ನೂ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿ ನಟ ಧನುಶ್ ಜೊತೆಗೆ ಒಂದು ಹಾಗೂ ಶಿವಕಾರ್ತಿಕೇಯನ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಇನ್ನು ತೆಲುಗಿನಲ್ಲಿ ರವಿತೇಜ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಮತ್ತೊಂದು ಹೊಸ ಸಿನಿಮಾವನ್ನು ಸಹ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾರವಾರ: ಪ್ರವಾಸಿಗರು ಹೆಚ್ಚಳದ ಮಧ್ಯೆ ದರ ಸಮರ: ಏಜೆಂಟರು ಮತ್ತು ಕಂಪನಿಗಳ ನಡುವೆ ಬಿಗ್ ಫೈಟ್

ಕಾರವಾರ, ಮಾರ್ಚ್​ 21: ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಇದೆ ಸಂದರ್ಭದಲ್ಲಿ ಟ್ರಾವೆಲ್ ಏಜೆಂಟ್ಸ್​ ಮತ್ತು ಜಲಸಾಹಸ ಕ್ರಿಡಾ ಕಂಪನಿಗಳ ನಡುವೆ ದರ ನಗದಿ ವಿಚಾರವಾಗಿ ಭಾರೀ ಜಟಾಪಟಿ ನಡೆದಿದ್ದು, ಪ್ರವಾಸಿಗರು (Tourists) ಜಾಸ್ತಿ ಬಂದರೂ ನಿರೀಕ್ಷಿಸಿದಷ್ಟು ಲಾಭ ಸಿಗದೆ ಎಜೆಂಟರು ಒದ್ದಾಡುತ್ತಿದ್ದಾರೆ.

ಸದ್ಯ ಒಂದು ಕಡೆ ಸಾಲು ಸಾಲು ಹಬ್ಬ ಹಿನ್ನೆಲೆ ರಜೆ. ಮತ್ತೊಂದು ಕಡೆ ಮಕ್ಕಳ ಪರೀಕ್ಷೆ ಮುಗಿದಿದ್ದು, ಜಾಲಿ ಮಾಡುವ ಸಂದರ್ಭ. ಹೀಗಾಗಿ ಪ್ರವಾಸಿಗರು ವಾಟರ್ ಸ್ಪೋರ್ಟ್ಸ್​ಗಾಗಿ ಉತ್ತರ ಕನ್ನಡ ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ. ಆದರೆ ಇದೆ ಸಂದರ್ಭದಲ್ಲಿ ಜಲಸಾಹಸ ಕ್ರೀಡಾ ಕಂಪನಿಗಳು ಮತ್ತು ಟ್ರಾವೆಲ್ ಏಜೆಂಟ್ಸ್​​​ಗಳ ನಡುವಿನ ಜಟಾಪಟಿ ಕೂಡ ಉಂಟಾಗಿದೆ. ಪರಿಣಾಮ ನಿರೀಕ್ಷಿಸಿದ ಪ್ರಮಾಣದಲ್ಲಿ ಹಣ ಮಾಡುವುದಕ್ಕೆ ಆಗದ ಪರಿಸ್ಥಿತಿ ಉಂಟಾಗಿದೆ.

ಇದನ್ನೂ ಓದಿ: ಬಡವರ ಹತ್ತಿರ ಹಣ ಸುಲಿಗೆ ಮಾಡಿದ್ರೆ ಕೈ-ಕಾಲು ಮುರಿಯುತ್ತೇನೆ: ವೈದ್ಯರಿಗೆ ಚಳಿ ಬಿಡಿಸಿದ ಶಾಸಕ ದೇಶಪಾಂಡೆ

ಜಲಸಾಹಸ ನಡೆಸುವವ ನಡುವಿನ ವ್ಯಾಪಾರವನ್ನು ಏಜೆಂಟ್​ಗಳು  ಬಂಡಾವಳ ಮಾಡಿಕೊಂಡಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಜಲಸಾಹಸ ಕ್ರೀಡೆ ಮಾಡಿಸಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಿಕುತ್ತಿದ್ದಾರೆ. ಆದರೆ ಈಗ ಜಲಸಾಹಸ ಕಂಪನಿಗಳು ಒಂದಾಗಿ ಸಿಂಗಲ್ ವಿಂಡೊ ಸಿಸ್ಟಮ್ ಜಾರಿಗೆ ತಂದಿದ್ದು, ಏಜೆಂಟ್​ಗಳು ಪಡೆಯುತ್ತಿದ್ದ ದೊಡ್ಡ ಮಟ್ಟದ ಕಮಿಷನ್​ಗೆ ಬ್ರೇಕ್ ಬಿದ್ದಂತಾಗಿದೆ.

ವಿಷಯ ಏನೆಂದರೆ ಜೋಯಿಡಾ ತಾಲೂಕಿನ ಗಣೇಶ ಗುಡಿಯ ಅತ್ಯಾಕರ್ಷಣೀಯ ನಿಸರ್ಗತಾಣದಲ್ಲಿ ಹರಿಯುವ ಕಾಳಿ ನದಿಯಲ್ಲಿ ಸುಮಾರು 5 ಕ್ಕೂ ಹೆಚ್ಚು ಬಗೆಯ ಜಲಸಾಹಸ ಕ್ರೀಡೆಗಳನ್ನ ನಡೆಸುತ್ತಾರೆ. ಇದಕ್ಕಾಗಿ ರಾಜ್ಯ ಹೊರರಾಜ್ಯಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇತ್ತೀಚೆಗೆ ಜಲಸಾಹಸ ಕ್ರೀಡೆ ನಡೆಸುವ ಜೆಟ್ಟಿಗಳು ಹೆಚ್ಚಾಗಿದ್ದಾರೆ.

ಈ ಟ್ರಾವೆಲ್ ಏಜೆಂಟ್ಸ್​​ ಮಾತ್ರ ಪ್ರವಾಸಿಗರಿಂದ ತಲಾ 1500 ರೂ ಪಡೆದು ದೊಡ್ಡ ಮಟ್ಟದ ಲಾಭ ಗಳಿಸುತ್ತಿದ್ದರು. ಇತ್ತೀಚೆಗೆ ಜೆಟ್ಟಿ ಮಾಲಿಕರಿಗೆ ಆಗುತ್ತಿರುವ ನಷ್ಟವನ್ನ ಮನಗಂಡು ತಮ್ಮಲ್ಲಿನ ವೈಮನಸ್ಸು ಬದಿಗಿಟ್ಟು, ಕಳೆದ ಒಂದು ತಿಂಗಳಿನಿಂದ ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತಂದಿದ್ದಾರೆ. ಯಾರೇ ಪ್ರವಾಸಿಗರು ಬಂದರು ಒಂದೇ ಕಡೆ ಬುಕ್ಕಿಂಗ ಮಾಡಬೇಕಾಗಿದ್ದು, ತಲಾ 750 ರೂ ದರ ನಿಗದಿ ಮಾಡಿದ್ದಾರೆ. ಇದು ಏಜೆಂಟ್​ಗಳಿಗೆ ನುಂಗಲಾರದ ತುತ್ತಾಗಿದ್ದು, ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ: ಮಲ್ಪೆಯಲ್ಲಿ ಮೀನಿನ ಬೆಲೆ ಪಾತಾಳಕ್ಕೆ! ಮಾಂಜಿ, ಅಂಜಲ್ ಬೆಲೆ ಎಷ್ಟಿದೆ ಗೊತ್ತಾ? : ಮೀನಿನ ದರ ಪಟ್ಟಿ ಇಲ್ಲಿದೆ ನೋಡಿ

ಇನ್ನು ತಮಗಾಗುತ್ತಿರುವ ನಷ್ಟವನ್ನ ಸಹಿಸಲಾರದ ಏಜೆಂಟ್​ಗಳು ದೊಡ್ಡ ಮಟ್ಟದಲ್ಲಿ ಗಲಾಟೆ ಮಾಡಿಕೊಂಡಿದ್ದು, ಸದ್ಯ ಈ ವಿಚಾರ ಜೋಯಿಡಾ ತಹಶೀಲ್ದಾರ್ ಅಂಗಳಕ್ಕೆ ಬಂದು ತಲುಪಿದೆ. ನಿನ್ನೆ ಈ ಬಗ್ಗೆ ಮೂರು ಗಂಟೆಗಳ ಕಾಲ ಸಭೆ ಮಾಡಿದರು ಸಹಿತ, ಇದುವರೆಗೂ ಇಬ್ಬರ ನಡುವಿನ ಜಟಾಪಟಿ ಅಂತ್ಯ ಆಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ರಾಶಿಯವರು ಒಂದು ಧೈರ್ಯದ ನಿರ್ಧಾರ ತೆಗೆದುಕೊಳ್ಳಿ, ಜೀವನವೇ ಬದಲಾಗುತ್ತದೆ

ಮಾರ್ಚ್ 22ರಿಂದ 28ರವರೆಗೆ ನಾಲ್ಕನೇ ವಾರ. ದಶಮಾಧಿಪತಿಗಳ ಸಂಚಾರದಲ್ಲಿ ವ್ಯತ್ಯಾಸ ಆಗುವ ಕಾರಣ ಉದ್ಯೋಗದಲ್ಲಿ ಉದ್ಯಮದಲ್ಲಿ ಏರಿಳಿತಗಳು ಇರಲಿವೆ. ಸೂಕ್ಷ್ಮಮತಿಗಳಾಗಿ ನಿರ್ವಹಣೆ ಮಾಡುವುದು ಇರುತ್ತದೆ.

​ಮೇಷ

​ಅಧಿಪತಿ ಮಂಗಳ ಲಾಭ ಸ್ಥಾನದಲ್ಲಿದ್ದಾನೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಶನಿ ಪ್ರಭಾವದಿಂದ ಕೆಲಸದಲ್ಲಿ ವಿಳಂಬ ಸಾಧ್ಯತೆ ಇದೆ.

ವೃಷಭ

​ಶುಕ್ರನ ಬಲದಿಂದ ಸುಖ, ಸಂತೋಷ ಹೆಚ್ಚಲಿದೆ. ದಶಮಾಧಿಪತಿ ಶನಿ ಹತ್ತನೇ ಮನೆಯಲ್ಲಿ ಇರುವುದರಿಂದ ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಬಹುದು, ಎಚ್ಚರವಿರಲಿ.

ಮಿಥುನ

​ಬುಧನ ಸಂಚಾರದಿಂದ ಬುದ್ಧಿವಂತಿಕೆ ಕೆಲಸ ಮಾಡಲಿದೆ. ವ್ಯಾಪಾರದಲ್ಲಿ ಲಾಭದಾಯಕ ಒಪ್ಪಂದಗಳು ಕೈಗೂಡಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ದಶಮಾಧಿಪತಿ ಗುರು ಹನ್ನೆರಡನೇ ಮನೆಯಲ್ಲಿ ಇರುವುದರಿಂದ ದೂರದ ಪ್ರಯಾಣ ಮತ್ತು ಧಾರ್ಮಿಕ ಕಾರ್ಯಗಳಿಗೆ ಧನವ್ಯಯವಾಗುವ ಸಾಧ್ಯತೆ ಇದೆ.

​ಕರ್ಕಾಟಕ

​ಚಂದ್ರನ ಚಲನೆ ಮಿಶ್ರಫಲ ನೀಡಲಿದೆ. ಮಾನಸಿಕವಾಗಿ ಸ್ವಲ್ಪ ಗೊಂದಲವಿರಬಹುದು. ದಶಮಾಧಿಪತಿ ಮಂಗಳ ಅಷ್ಟಮದಲ್ಲಿ ಇರುವುದರಿಂದ ವಾಹನ ಚಲಾಯಿಸುವಾಗ ಜಾಗ್ರತೆ ಅಗತ್ಯ. ಹಠಾತ್ ಧನಲಾಭದ ಸಾಧ್ಯತೆಯಿದೆ. ಕೆಲಸದಲ್ಲಿ ಸಹೋದ್ಯೋಗಿಗಳ ಸಹಕಾರ ಪಡೆಯುವಿರಿ.

ಸಿಂಹ

​ರವಿ ಎಂಟನೇ ಮನೆಯಲ್ಲಿ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ದಶಮಾಧಿಪತಿ ಶುಕ್ರ ಸಪ್ತಮದಲ್ಲಿದ್ದು, ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿರುತ್ತದೆ. ಸಾರ್ವಜನಿಕ ರಂಗದಲ್ಲಿ ಗೌರವ ಹೆಚ್ಚಾಗಲಿದೆ.

ಕನ್ಯಾ

​ದಶಮಾಧಿಪತಿ ಬುಧ ಎಂಟನೇ ಮನೆಯಲ್ಲಿ ಇರುವುದರಿಂದ ವೃತ್ತಿಯಲ್ಲಿ ಅಡೆತಡೆಗಳು ಎದುರಾಗಬಹುದು. ಶತ್ರುಗಳ ಬಾಧೆ ನಿವಾರಣೆಯಾಗಲಿದೆ. ಸಾಲದ ಹೊರೆ ಕಡಿಮೆಯಾಗುವ ಸಂಭವವಿದೆ. ಸಂವಹನದಲ್ಲಿ ಸ್ಪಷ್ಟತೆ ಇರಲಿ. ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.

ತುಲಾ

​ಶುಕ್ರನ ಅನುಗ್ರಹದಿಂದ ಕಲಾತ್ಮಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದಶಮಾಧಿಪತಿ ಚಂದ್ರನ ಸಂಚಾರದಿಂದ ಮನಸ್ಸು ಚಂಚಲವಾಗಬಹುದು. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಹೂಡಿಕೆ ಮಾಡಲು ಇದು ಸಕಾಲ. ಮಕ್ಕಳ ಸಾಧನೆ ಸಂತಸ ತರಲಿದೆ.

ವೃಶ್ಚಿಕ

​ದಶಮಾಧಿಪತಿ ರವಿ ಐದನೇ ಮನೆಯಲ್ಲಿ ಇರುವುದರಿಂದ ಗೌರವ ಸಿಗಲಿದೆ. ಮಂಗಳನ ಬಲದಿಂದ ಆಸ್ತಿ ಖರೀದಿ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಕೆಲಸದ ಒತ್ತಡ ಹೆಚ್ಚಿದ್ದರೂ ಗುರಿ ತಲುಪುವಿರಿ. ಆತುರದ ನಿರ್ಧಾರ ಬೇಡ.

ಧನು

​ದಶಮಾಧಿಪತಿ ಬುಧನ ಅನುಗ್ರಹದಿಂದ ವ್ಯಾಪಾರ ವೃದ್ಧಿಯಾಗಲಿದೆ. ಸಣ್ಣ ಪ್ರವಾಸಗಳು ಲಾಭದಾಯಕವಾಗಿರಲಿವೆ. ಸಹೋದರರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ಆತ್ಮವಿಶ್ವಾಸದಿಂದ ಹೊಸ ಕೆಲಸಗಳನ್ನು ಆರಂಭಿಸಬಹುದು. ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ.

ಮಕರ

​ಶನಿ ಸ್ವಕ್ಷೇತ್ರದಲ್ಲಿ ಇರುವುದರಿಂದ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದಶಮಾಧಿಪತಿ ಶುಕ್ರ ಎರಡನೇ ಮನೆಯಲ್ಲಿ ಇರುವುದರಿಂದ ಆರ್ಥಿಕವಾಗಿ ಸದೃಢರಾಗುವಿರಿ. ಸಿಹಿ ಮಾತುಗಳಿಂದ ಕೆಲಸ ಸಾಧಿಸಿಕೊಳ್ಳುವಿರಿ. ಕೌಟುಂಬಿಕ ವಾತಾವರಣ ಸುಖಮಯವಾಗಿರಲಿದೆ.

​ಕುಂಭ

​ಲಗ್ನದಲ್ಲೇ ಶನಿ ಇರುವುದರಿಂದ ಜವಾಬ್ದಾರಿಗಳು ಹೆಚ್ಚಲಿವೆ. ದಶಮಾಧಿಪತಿ ಮಂಗಳ ಲಗ್ನದಲ್ಲೇ ಇರುವುದರಿಂದ ಕೋಪದ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ಹರಿವು ಸಾಧಾರಣವಾಗಿರಲಿದೆ. ಹಳೆಯ ಮಿತ್ರರ ಭೇಟಿಯಾಗುವ ಸಾಧ್ಯತೆಯಿದೆ.

ಮೀನ

​ಗುರು ಲಗ್ನದಲ್ಲಿದ್ದು ಜ್ಞಾನ ವೃದ್ಧಿಸಲಿದೆ. ದಶಮಾಧಿಪತಿ ಗುರು ಶುಭ ಸ್ಥಾನದಲ್ಲಿದ್ದಾನೆ. ಹೊಸ ಹೂಡಿಕೆಗಳಿಗೆ ಇದು ಸೂಕ್ತ ಸಮಯವಲ್ಲ. ವಿದೇಶಿ ಸಂಬಂಧಗಳಿಂದ ಲಾಭವಾಗಲಿದೆ. ದಾನ, ಧರ್ಮದಲ್ಲಿ ಆಸಕ್ತಿ ಹೆಚ್ಚಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ.

– ಲೋಹಿತ ಹೆಬ್ಬಾರ್ – 8762924271

Source link

ಎಸಿಯಿಂದ ಹೊರಬಂದ ತಕ್ಷಣ ತಲೆನೋವು, ಸುಸ್ತಾದಂತೆ ಅನಿಸುವುದಕ್ಕೆ ಕಾರಣವೇನು?

ಬೇಸಿಗೆ ಕಾಲದಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಅನೇಕರು ಎಸಿ (AC) ಬಳಕೆ ಮಾಡುತ್ತಾರೆ. ಆದರೆ ಕೆಲವರಿಗೆ ಎಸಿ ಇದ್ದಲ್ಲಿಂದ ಹೊರಬಂದ ಕೂಡಲೇ ತಲೆನೋವು, ಒಂದು ರೀತಿಯ ಸುಸ್ತಾದಂತೆ ಅನುಭವವಾಗುತ್ತದೆ. ಕೆಲವರಿಗೆ ತಲೆಸುತ್ತು, ಕಣ್ಣಿನಲ್ಲಿ ನೋವು, ಮೂಗು ಬ್ಲಾಕ್ ಆಗುವುದು, ಗಂಟಲು ಒಣಗುವುದು ಮತ್ತು ದೇಹದಲ್ಲಿ ಸ್ವಲ್ಪ ದುರ್ಬಲತೆ ಕೂಡ ಕಾಣಿಸಬಹುದು. ತಣ್ಣನೆಯ ವಾತಾವರಣದಿಂದ ಏಕಾಏಕಿ ಬಿಸಿ ವಾತಾವರಣಕ್ಕೆ ಬರುವಾಗ ದೇಹಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಇದರಿಂದ ಅಸಹಜತೆ ಹೆಚ್ಚಾಗುತ್ತದೆ. ಹಲವರು ಈ ರೀತಿ ಆಗುವುದನ್ನು ನಿರ್ಲಕ್ಷಿಸುತ್ತಾರೆ, ಆದರೆ ಈ ರೀತಿ ಪದೇ ಪದೇ ಆಗುತ್ತಿದ್ದರೆ ಅದನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಆದರೆ ಅದಕ್ಕೂ ಮೊದಲು ಈ ರೀತಿ ಆಗುವುದಕ್ಕೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಎಸಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹ ತಣ್ಣಗಿರುವ ತಾಪಮಾನಕ್ಕೆ ಹೊಂದಿಕೊಳ್ಳುತ್ತದೆ. ನಂತರ ಏಕಾಏಕಿ ಹೊರಗಿನ ಬಿಸಿ ಗಾಳಿಗೆ ಬಂದಾಗ ದೇಹಕ್ಕೆ ತಾಪಮಾನ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ತಲೆನೋವು ಮತ್ತು ದೌರ್ಬಲ್ಯ ಉಂಟಾಗಬಹುದು. ತಣ್ಣನೆಯ ಗಾಳಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಷನ್) ಉಂಟಾಗಬಹುದು. ಹಾಗಾದಾಗಲೂ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಎಸಿ ಗಾಳಿ ಸಾಮಾನ್ಯವಾಗಿ ಒಣಗಿದಂತಿರುತ್ತದೆ. ಇದು ಮೂಗು ಮತ್ತು ಗಂಟಲಿನ ಮೇಲೆ ಪರಿಣಾಮ ಬೀರಿ ಅಸಹಜತೆಯನ್ನು ಉಂಟುಮಾಡುತ್ತದೆ. ಜೊತೆಗೆ, ಎಸಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅದರಲ್ಲಿ ಧೂಳು ಅಥವಾ ಅಲರ್ಜಿ ಉಂಟುಮಾಡುವ ಕಣಗಳು ಸಂಗ್ರಹವಾಗುತ್ತವೆ, ಇದು ಸಮಸ್ಯೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ನಿಮ್ಮ ಮಕ್ಕಳು ಕೂಡ ಎಸಿ ಕೊಠಡಿಯಲ್ಲಿ ಮಲಗುತ್ತಾರಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಸಮಸ್ಯೆ ತಡೆಗಟ್ಟಲು ಏನು ಮಾಡಬೇಕು?

  • ಎಸಿಯ ತಾಪಮಾನವನ್ನು ತುಂಬಾ ಕಡಿಮೆ ಮಾಡಬೇಡಿ, ಸಾಮಾನ್ಯ ಮಟ್ಟದಲ್ಲೇ ಇಡಿ.
  • ನಿರಂತರವಾಗಿ ಎಸಿಯಲ್ಲಿ ಹೆಚ್ಚು ಸಮಯ ಕಳೆಯಬೇಡಿ.
  • ಮಧ್ಯೆ ಮಧ್ಯೆ ಹೊರಗಿನ ತಾಜಾ ಗಾಳಿಯನ್ನು ಪಡೆಯಿರಿ.
  • ದಿನಪೂರ್ತಿ ಸಾಕಷ್ಟು ನೀರು ಕುಡಿಯಿರಿ.
  • ಹೊರಗೆ ಹೋಗುವ ಮೊದಲು ಎಸಿಯ ತಾಪಮಾನವನ್ನು ನಿಧಾನವಾಗಿ ಹೆಚ್ಚಿಸಿ.
  • ಸಮಸ್ಯೆ ಪದೇ ಪದೇ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: 42 ಎಸೆತಗಳಲ್ಲಿ 94 ರನ್ ಬಾರಿಸಿದ ಅಭಿಷೇಕ್ ಶರ್ಮಾ

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) 2026 ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲದಿರಬಹುದು, ಆದರೆ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ 2026 ರ ಐಪಿಎಲ್​ನಲ್ಲೂ (IPL 2026) ಅದೇ ಆಟವನ್ನು ಮುಂದುವರೆಸಲು ಅಭಿಷೇಕ್ ಶರ್ಮಾ ಸಜ್ಜಾಗಿದ್ದಾರೆ. ಲೀಗ್​ನ ಮೊದಲ ಪಂದ್ಯದಲ್ಲೇ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ (RCB vs SRH) ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಆದರೆ ಅದಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ 94 ರನ್​ಗಳ ಅಬ್ಬರದ ಇನ್ನಿಂಗ್ಸ್ ಆಡಿದರು.

ಸನ್‌ರೈಸರ್ಸ್ ಹೈದರಾಬಾದ್ ತಂಡವು ಮಾರ್ಚ್ 21 ರ ಶನಿವಾರದಂದು ತಮ್ಮ ತವರು ಮೈದಾನವಾದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಮ್ಮ ಮೊದಲ ಅಭ್ಯಾಸ ಪಂದ್ಯವನ್ನು ಆಡಿತು. ತಂಡದ ಸದಸ್ಯರ ನಡುವೆ ನಡೆದ ಈ ಪಂದ್ಯದಲ್ಲಿ ಅಭಿಷೇಕ್ , ಇಶಾನ್, ಹೆನ್ರಿಕ್ ಕ್ಲಾಸೆನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್‌ರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಎಲ್ಲರೂ ಒಂದೇ ತಂಡದಲ್ಲಿದ್ದರು.

ಅಭಿಷೇಕ್ ಸ್ಫೋಟಕ ಇನ್ನಿಂಗ್ಸ್

ಎಸ್​ಆರ್​ಹೆಚ್​ ಎ ಮತ್ತು ಎಸ್​ಆರ್​ಹೆಚ್ ಬಿ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಎಸ್​ಆರ್​ಹೆಚ್ ಎ ತಂಡದ ಪರ ಇಶಾನ್ ಕಿಶನ್ ಮತ್ತು ಅಭಿಷೇಕ್ ಜೋಡಿ ಇನ್ನಿಂಗ್ಸ್ ಆರಂಭಿಸಿತು. ಆದಾಗ್ಯೂ ಇಶಾನ್ ಕಿಶನ್ 14 ಎಸೆತಗಳಲ್ಲಿ ಕೇವಲ 18 ರನ್‌ಗಳಿಸಿ ಔಟಾದರು. ಇತ್ತ ಅಬ್ಬರದ ಆರಂಭ ಪಡೆದ ಅಭಿಷೇಕ್ ಶರ್ಮಾ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಇದರ ಪರಿಣಾಮವಾಗಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶತಕದಂಚಿನಲ್ಲಿ ಎಡವಿದ ಅಭಿಷೇಕ್ ಕೇವಲ 42 ಎಸೆತಗಳಲ್ಲಿ 94 ರನ್ ಗಳಿಸಿದರು.

ಅಭಿಷೇಕ್ ಶರ್ಮಾ ಜೊತೆಗೆ ಹೆನ್ರಿಕ್ ಕ್ಲಾಸೆನ್ ಕೂಡ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರ ಆಟದಿಂದಾಗಿ ಈ ಎಸ್​ಆರ್​ಹೆಚ್ ಎ ತಂಡವು ಕೇವಲ 13 ಓವರ್‌ಗಳಲ್ಲಿ 160 ಕ್ಕಿಂತ ಹೆಚ್ಚು ಸ್ಕೋರ್ ಕಲೆಹಾಕಿತು. ಅಂತಿಮವಾಗಿ 20 ಓವರ್‌ಗಳಲ್ಲಿ ಎಸ್​ಆರ್​ಹೆಚ್ ಎ ತಂಡ 9 ವಿಕೆಟ್​ಗಳ ನಷ್ಟಕ್ಕೆ 253 ರನ್ ಕಲೆಹಾಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ 11 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

ನವದೆಹಲಿ, ಮಾರ್ಚ್ 21: ಕೇರಳ ವಿಧಾನಸಭಾ ಚುನಾವಣೆಗೆ (Kerala Assembly Elections) ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನೇತೃತ್ವದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಮಾರ್ಚ್ 18ರಂದು ಸಭೆ ಸೇರಿ ಪಟ್ಟಿಗಳನ್ನು ಬಿಡುಗಡೆ ಮಾಡಿತು. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಭೆಯಲ್ಲಿ ಹಾಜರಿದ್ದರು.

ಮಾರ್ಚ್ 16ರಂದು ಬಿಜೆಪಿ ಕೇರಳದ ಮೊದಲ 47 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ನಂತರ ಮಾರ್ಚ್ 19ರಂದು 39 ಹೆಸರುಗಳನ್ನು ಒಳಗೊಂಡ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಇದುವರೆಗೆ ಬಿಜೆಪಿ 97 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.

ಇದನ್ನೂ ಓದಿ: ಕೇರಳ ಚುನಾವಣೆಗೆ ಬಿಜೆಪಿಯ 47 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ನೇಮಮ್​ನಿಂದ ರಾಜೀವ್ ಚಂದ್ರಶೇಖರ್ ಕಣಕ್ಕೆ

ಇಂದು ಘೋಷಿಸಲಾದ ಬಿಜೆಪಿಯ ಪಟ್ಟಿಯ ಪ್ರಕಾರ, ಬಿಜೆಪಿ ತಿರುವನಂತಪುರಂನಿಂದ ಜಿಲ್ಲಾಧ್ಯಕ್ಷ ಕರಮಣ ಜಯನ್ ಅವರನ್ನು ಕಣಕ್ಕಿಳಿಸಿದೆ. ಅವರು ಎಲ್‌ಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟ ಸುಧೀರ್ ಕರಮಣ ಮತ್ತು ಯುಡಿಎಫ್ ನಾಯಕ ಸಿ.ಪಿ ಜಾನ್ ಅವರನ್ನು ಎದುರಿಸಲಿದ್ದಾರೆ. ಎಲ್‌ಡಿಎಫ್ ಮಿತ್ರ ಪಕ್ಷವಾದ ಜನಾಧಿಪತ್ಯ ಕೇರಳ ಕಾಂಗ್ರೆಸ್ (ಜೆಕೆಸಿ)ನ ಹಾಲಿ ಶಾಸಕ ಆಂಥೋನಿ ರಾಜು ಅವರನ್ನು ಸಾಕ್ಷ್ಯ ತಿರುಚುವ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶಿಕ್ಷೆ ವಿಧಿಸಿದ ನಂತರ ಅನರ್ಹಗೊಳಿಸಲಾಯಿತು.

ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಕಣಕ್ಕೆ

ಉದ್ಯಮಿ ಎಸ್ ರಾಜಶೇಖರನ್ ನಾಯರ್ ಅವರನ್ನು ನೆಯ್ಯಟ್ಟಿಂಕರದಿಂದ ಕಣಕ್ಕಿಳಿಸಲಾಗಿದೆ. ಇದಕ್ಕೂ ಮೊದಲು, 2021ರಲ್ಲಿ ಅವರು ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ನಟ ವಿವೇಕ್ ಗೋಪನ್ ಅವರನ್ನು ಪುತ್ತುಪ್ಪಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಕೇರಳ ವಿಧಾನಸಭಾ ಚುನಾವಣೆಗಳು ಏಪ್ರಿಲ್ 9ರಂದು ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ. ಕೇರಳದ ಎಲ್ಲಾ 140 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಶ್ವರ್ಯಾ ರೈ ಬಳಿ ಕ್ಷಮೆ ಕೇಳಿದ್ದ ನಟಿ ಸ್ನೇಹಾ ಉಲ್ಲಾಳ್: ಕಾರಣ?

ಮಂಗಳೂರು ಮೂಲದ ನಟಿ ಸ್ನೇಹಾ ಉಲ್ಲಾಳ್ (Sneha Ullal), ಬಾಲಿವುಡ್​​ನ (Bollywood) ಜನಪ್ರಿಯ ನಟಿಯರಲ್ಲಿ ಒಬ್ಬರು. ಒಮನ್​​ನಲ್ಲಿ ಹುಟ್ಟಿದ್ದರಾದರೂ ಅವರದ್ದು ಮಂಗಳೂರು ಮೂಲ. ಸಲ್ಮಾನ್ ಖಾನ್ ನಟನೆಯ ‘ಲಕ್ಕಿ’ ಸಿನಿಮಾ ಮೂಲಕ ಬಾಲಿವುಡ್​​ಗೆ ಎಂಟ್ರಿ ಕೊಟ್ಟರು. ಅದೂ ಅವರು ಚಿತ್ರರಂಗಕ್ಕೆ ಬರಲು ಐಶ್ವರ್ಯಾ ರೈ ಅವರೊಟ್ಟಿಗಿನ ಹೋಲಿಕೆಯೇ ಕಾರಣ. ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಆರಂಭದ ದಿನಗಳು, ಸಲ್ಮಾನ್ ಖಾನ್ ಅವರೊಂದಿಗಿನ ಒಡನಾಟ ಮತ್ತು ಐಶ್ವರ್ಯ ರೈ ಅವರೊಂದಿಗಿನ ಭೇಟಿಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅವರು ಐಶ್ವರ್ಯಾ ರೈ ಅವರ ಬಳಿ ಕ್ಷಮೆ ಕೇಳಿರುವ ಬಗ್ಗೆ ಹೇಳಿಕೊಂಡಿದ್ದಾರೆ.

2005ರಲ್ಲಿ ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸ್ನೇಹಾ, ಅಂದು ವಿಶ್ವ ಸುಂದರಿ ಐಶ್ವರ್ಯ ರೈ ಅವರಂತೆಯೇ ಕಾಣುತ್ತಿದ್ದರು ಎಂಬ ಕಾರಣಕ್ಕೆ ಭಾರೀ ಸುದ್ದಿಯಾಗಿದ್ದರು. ಮಾಧ್ಯಮಗಳು ತನ್ನನ್ನು ಐಶ್ವರ್ಯ ರೈ ಅವರ ತದ್ರೂಪು ಎಂದು ಕರೆಯುತ್ತಿದ್ದ ಕಾಲದಲ್ಲಿ ಸ್ನೇಹಾ ಅವರು ಐಶ್ವರ್ಯರನ್ನು ಭೇಟಿಯಾಗಿದ್ದರಂತೆ. ಸಂದರ್ಶನದಲ್ಲಿ ಆ ಸಂದರ್ಭವನ್ನು ನೆನಪಿಸಿಕೊಂಡಿರುವ ಸ್ನೇಹಾ ಉಲ್ಲಾಳ್ , ‘ನಾನು ಐಶ್ವರ್ಯರನ್ನು ಭೇಟಿಯಾದಾಗ ಅವರಿಗೆ ಕ್ಷಮೆ ಕೇಳಿದೆ. ಮಾಧ್ಯಮಗಳಲ್ಲಿ ಆಗುತ್ತಿದ್ದ ಹೋಲಿಕೆಗಳಿಂದಾಗಿ ಅವರು ನನ್ನ ಮೇಲೆ ಸಿಟ್ಟಾಗಿರಬಹುದು ಎಂಬ ಭಯ ನನಗಿತ್ತು. ಪ್ಲೀಸ್ ನನ್ನನ್ನು ದ್ವೇಷಿಸಬೇಡಿ ಎಂದು ಅವರಲ್ಲಿ ವಿನಂತಿಸಿದೆ’ ಎಂದು ಹೇಳಿದ್ದಾರೆ. ಆದರೆ ಐಶ್ವರ್ಯ ರೈ ಅವರು ನನ್ನೊಂದಿಗೆ ಅತ್ಯಂತ ಪ್ರೀತಿಯಿಂದ ನಡೆದುಕೊಂಡರು, ‘ಬಾಲಿವುಡ್ ಕುಟುಂಬಕ್ಕೆ ನಿನಗೆ ಸ್ವಾಗತ’ ಎಂದು ಐಶ್ವರ್ಯಾ ಹೇಳಿದರು ಎಂದು ಸ್ನೇಹಾ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ದುಬಾರಿಯಾದ ಸಲ್ಮಾನ್ ಖಾನ್ ಸಿನಿಮಾ; 40 ದಿನ ರೀಶೂಟ್

ಸಲ್ಮಾನ್ ಖಾನ್ ಅವರ ಬಗ್ಗೆ ಮಾತನಾಡಿದ ಸ್ನೇಹಾ, ಚಿತ್ರೀಕರಣದ ಸಮಯದಲ್ಲಿ ಅವರು ತಮಗೆ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ‘ಸಲ್ಮಾನ್, ನನ್ನ ಬಗ್ಗೆ ಎಂದಿಗೂ ಅಸಹನೆ ತೋರಲಿಲ್ಲ. ನಾನು ಆಗ ತಾನೇ ಕಾಲೇಜು ಮುಗಿಸಿ ಬಂದ ಹೊಸಬಳಾಗಿದ್ದೆ. ಸಲ್ಮಾನ್ ಅತ್ಯಂತ ತಾಳ್ಮೆಯಿಂದ ನನಗೆ ಎಲ್ಲವನ್ನೂ ಹೇಳಿಕೊಟ್ಟರು. ನನ್ನ ವಿರುದ್ಧ ಸಿಟ್ಟು ಪ್ರದರ್ಶಿಸಲಿಲ್ಲ, ಅಹಂ ತೋರಿಸಲಿಲ್ಲ’ ಎಂದು ಸ್ನೇಹಾ ತಿಳಿಸಿದ್ದಾರೆ.

ತಮಗೆ ನಟಿಯಾಗುವುದು ಇಷ್ಟವೇ ಇರಲಿಲ್ಲ ಎಂದಿರುವ ಸ್ನೇಹಾ, ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಅವರ ಗೆಳೆಯರು ಸ್ನೇಹಾರನ್ನು ಮೊದಲ ಬಾರಿಗೆ ಕಾಲೇಜಿನಲ್ಲಿ ನೋಡಿದರಂತೆ. ಅದೇ ಸಮಯದಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ರೈ ಅವರ ಸಂಬಂಧ ಮುರಿದುಬಿದ್ದಿತ್ತು. ಸ್ನೇಹಾ ನೋಡಲು ಐಶ್ವರ್ಯಾ ರೈ ರೀತಿ ಇದ್ದ ಕಾರಣದಿಂದಾಗಿಯೇ ಅವರನ್ನು ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಆ ಬಗ್ಗೆತೂ ಪ್ರತಿಕ್ರಿಯಿಸಿದ ಸ್ನೇಹಾ, ‘ಅದೊಂದು ಪ್ರಚಾರ ತಂತ್ರವಾಗಿತ್ತು, ನಾನು ತುಂಬಾ ಚಿಕ್ಕವಳಾಗಿದ್ದರಿಂದ ಆ ಹೋಲಿಕೆಗಳು ನನಗೆ ಎಂದೂ ಬೇಸರ ತರಲಿಲ್ಲ’ ಎಂದಿದ್ದಾರೆ.

ಸಲ್ಮಾನ್ ಖಾನ್ ಜೊತೆಗೆ ಲಾಂಚ್ ಆದರೂ ಸಹ ಸ್ನೇಹಾ ಉಲ್ಲಾಲ್ ಹೆಚ್ಚು ಯಶಸ್ವಿ ಆಗಿದ್ದು ದಕ್ಷಿಣದ ಸಿನಿಮಾಗಳಲ್ಲಿ ಅದರಲ್ಲೂ ತೆಲುಗಿನಲ್ಲಿ ‘ಉಲ್ಲಾಸಂಗಾ, ಉತ್ಸಾಹಂಗ’ ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ದೇವಿ’ ಸಿನಿಮಾನಲ್ಲಿಯೂ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಬ್ಬದ ಸಂದರ್ಭದಲ್ಲಿ ವಾಹನ ಖರೀದಿದಾರರಿಗೆ ಶಾಕ್​! ಕಾರು, ಬೈಕ್ ಬೆಲೆಯಲ್ಲಿ ಏರಿಕೆ ಸಾಧ್ಯತೆ

ಬೆಂಗಳೂರು, ಮಾರ್ಚ್​​ 21: ಗಲ್ಫ್​ ರಾಷ್ಟ್ರಗಳ ಯುದ್ಧದಿಂದಾಗಿ ಕಚ್ಛಾ ತೈಲ ಪೂರೈಕೆಯಲ್ಲಿ ಮಾತ್ರ ಸಮಸ್ಯೆಯಾಗಿಲ್ಲ. ಪ್ಲಾಸ್ಟಿಕ್, ಫೈಬರ್, ಐರನ್​​ ಮತ್ತು ಇತರೆ ಲೋಹಗಳ ಸರಬರಾಜಿನಲ್ಲೂ ವ್ಯತ್ಯಯವಾಗಿದೆ. ಇದ್ರಿಂದ ಆಟೋಮೊಬೈಲ್​​ ಇಂಡಸ್ಟ್ರಿಗೂ ಬಿಸಿ ತಟ್ಟಿದೆ. ಮುಂದಿನ ವಾರದ ಬಳಿಕ ಕಾರು ಹಾಗೂ ಬೈಕ್​​ಗಳ ದರ ಶೇಕಡ 10ರಿಂದ 15ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿ ಕಾರುಗಳ ಮೇಲೆ 40ರಿಂದ 50ಸಾವಿರದಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಮಾರುತಿ ಸುಜಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ, ಮರ್ಸಿಡಿಸ್​​​ ಬೆಂಜ್​ನಂತಹ ಕಂಪನಿಗಳು ಕೂಡ ಬೆಲೆ ಹೆಚ್ಚಿಸಲು ಪ್ಲ್ಯಾನ್ ಮಾಡಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

2027 ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ?

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆದ್ದಿರುವ ಟೀಂ ಇಂಡಿಯಾದ (Team India) ಮುಂದಿನ ಗುರಿ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (2027 World Cup) ಗೆಲ್ಲುವುದಾಗಿದಾಗಿದೆ. ಇದಕ್ಕೆ ಪೂರಕವಾಗಿ ಟಿ20 ವಿಶ್ವಕಪ್ ಗೆದ್ದ ಬಳಿಕ ಮಾತನಾಡಿದ್ದ ಹೆಡ್ ಕೋಚ್ ಗೌತಮ್ ಗಂಭೀರ್, ಐಪಿಎಲ್ ಮುಗಿದ ಬಳಿಕ ಏಕದಿನ ವಿಶ್ವಕಪ್‌ಗೆ ಸಿದ್ಧತೆಗಳು ಪ್ರಾರಂಭವಾಗಲಿವೆ ಎಂದಿದ್ದರು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ, ಐಪಿಎಲ್​ಗೂ ಮುನ್ನವೇ ತನ್ನ ತಯಾರಿಯನ್ನು ಶುರು ಮಾಡಿದೆ. ಅದರಂತೆ ಆಯ್ಕೆ ಸಮಿತಿಯು 2027ರ ಏಕದಿನ ವಿಶ್ವಕಪ್​ಗಾಗಿ 20 ಆಟಗಾರರ ಕಿರುಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಹಾಗಿದ್ದರೆ ಆ 20 ಆಟಗಾರರ ಪಟ್ಟಿಯಲ್ಲಿ ಯಾರ್ಯಾರಿಬಹುದು? ಎಂಬುದನ್ನು ನೋಡುವುದಾದರೆ..

ಮಾರ್ಚ್ 28 ರಂದು ಪ್ರಾರಂಭವಾಗುವ ಐಪಿಎಲ್‌ನಿಂದಾಗಿ ಭಾರತ ತಂಡವು ಎರಡು ತಿಂಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿರಲಿದೆ. ಅದರ ನಂತರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ಇರುವ ಕಾರಣ, ಈ ಮಾದರಿಯ ಸರಣಿಗೆ ಬಿಸಿಸಿಐ ಹೆಚ್ಚು ಒತ್ತು ನೀಡಲಿದೆ. ಆದರೆ, ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಇರಾದೆಯಲ್ಲಿದ್ದ ಆಟಗಾರರಿಗೆ ನಿರಾಸೆ ಎದುರಾಗಿದೆ. ಏಕೆಂದರೆ ಆಯ್ಕೆದಾರರು ಈಗಾಗಲೇ ಏಕದಿನ ವಿಶ್ವಕಪ್‌ಗೆ 20 ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ 20 ಆಟಗಾರರಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರು ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿದ್ದಾರೆ.

ಈ ಆಟಗಾರರಿಗೆ ತಂಡದಲ್ಲಿ ಸ್ಥಾನ?

ಈಗ ಪ್ರಶ್ನೆಯೆಂದರೆ ಆಯ್ಕೆ ಮಂಡಳಿ ಸಿದ್ಧಪಡಿಸಿರುವ 20 ಆಟಗಾರರ ಪಟ್ಟಿಯಲ್ಲಿ ಯಾರ್ಯಾರಿಬಹುದು ಎಂಬುದು. ಸಧ್ಯಕ್ಕೆ ಆ 20 ಆಟಗಾರರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳಿಂದ ಟೀಮ್ ಇಂಡಿಯಾದ ಏಕದಿನ ಸರಣಿ ಮತ್ತು ಈ ಸ್ವರೂಪದಲ್ಲಿರುವ ಸಾಮಾನ್ಯ ಆಟಗಾರರನ್ನು ಪರಿಗಣಿಸಿದರೆ, ಊಹಿಸುವುದು ಕಷ್ಟವೇನಲ್ಲ. ನಾಯಕನಾಗಿರುವ ಶುಭ್​ಮನ್ ಗಿಲ್ ಹಾಗೂ ಉಪನಾಯಕನಾಗಿರುವ ಶ್ರೇಯಸ್ ಅಯ್ಯರ್ ತಂಡದಲ್ಲಿರುವುದು ಖಚಿತ. ಹಾಗೆಯೇ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ತಂಡದಲ್ಲಿ ಇರುತ್ತಾರೆ.

ಇವರಲ್ಲದೆ, ನಿಯಮಿತ ಏಕದಿನ ವಿಕೆಟ್ ಕೀಪರ್ ಕೆಎಲ್ ರಾಹುಲ್, ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಖಚಿತವಾಗಿದೆ. ಇವರ ಜೊತೆಗೆ, ಹರ್ಷಿತ್ ರಾಣಾ, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರರ್ಥ ಕಳೆದ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ ವೃತ್ತಿಜೀವನ ಮುಗಿದಿದೆ ಎನ್ನಬಹುದು.

ಸ್ಪಿನ್ ವಿಭಾಗದಲ್ಲಿ ಯಾರು?

ಸ್ಪಿನ್ ವಿಭಾಗದಲ್ಲಿ, ಕುಲ್ದೀಪ್ ಜೊತೆಗೆ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಂಡದಲ್ಲಿ ಇರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ರವೀಂದ್ರ ಜಡೇಜಾ ಅವರ ಸೇರ್ಪಡೆಯ ಬಗ್ಗೆ ಪ್ರಶ್ನೆ ಉಳಿದಿದೆ. ಆದಾಗ್ಯೂ, ಅವರ ಅನುಭವವನ್ನು ಗಮನಿಸಿದರೆ, ಅವರು 20 ಜನರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಖಚಿತ. ಯಶಸ್ವಿ ಜೈಸ್ವಾಲ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಬ್ಯಾಕಪ್ ಆರಂಭಿಕ ಆಟಗಾರರೆಂದು ಪರಿಗಣಿಸಬಹುದು. ಆದಾಗ್ಯೂ, ಬ್ಯಾಕಪ್ ವಿಕೆಟ್ ಕೀಪರ್​ಗಾಗಿ ಪೈಪೋಟಿ ತೀವ್ರವಾಗಿದ್ದು, ರಿಷಭ್ ಪಂತ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಪಂತ್ ಮತ್ತು ಇಶಾನ್ 20 ಜನರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

2027 ರ ಏಕದಿನ ವಿಶ್ವಕಪ್​ಗೆ ಈಗಲೇ 20 ಆಟಗಾರರ ಪಟ್ಟಿ ಸಿದ್ಧಪಡಿಸಿದ ಬಿಸಿಸಿಐ

ಆ 20 ಆಟಗಾರರು ಇವರೇ..

ಶುಭ್​ಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ರವೀಂದ್ರ ಜಡೇಜಾ, ಸಂಜು ಸ್ಯಾಮ್ಸನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತ USCIRF ವರದಿಗೆ 275 ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳಿಂದ ವಿರೋಧ

ಬೆಂಗಳೂರು, ಮಾರ್ಚ್ 21: ಭಾರತದ ಬಗ್ಗೆ ಅಮೆರಿಕದ ಸ್ವತಂತ್ರ ಸಂಸ್ಥೆಯಾದ USCIRF (ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್) ನೀಡಿದ ವರದಿಯನ್ನು ಭಾರತದ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ ಸೇರಿದಂತೆ ಒಟ್ಟು 275 ಜನರು ತೀವ್ರವಾಗಿ ವಿರೋಧಿಸಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿತವಾಗಿದೆ ಎಂದು USCIRF ಹೇಳಿತ್ತು. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಒತ್ತಡ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು USCIRF ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಹಾಗೇ, USCIRF ಭಾರತದ ಕೆಲವು ಕಾನೂನುಗಳ ಬಗ್ಗೆಯೂ ಪ್ರಶ್ನೆ ಎತ್ತಿತ್ತು. ಮತಾಂತರ ವಿರೋಧಿ ಕಾನೂನುಗಳು (Anti-conversion laws), ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act/ CAA) ಇವುಗಳು ಕೆಲ ಸಮುದಾಯಗಳಿಗೆ ಅನ್ಯಾಯ ಮಾಡಬಹುದು ಎಂದು ಈ ವರದಿ ಹೇಳಿತ್ತು. ಭಾರತದಲ್ಲಿ ಕೆಲವು ಕಡೆ ಹಿಂಸಾಚಾರ ಮತ್ತು ದ್ವೇಷ ಭಾಷಣದ ಘಟನೆಗಳು ಹೆಚ್ಚಾಗಿವೆ. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಲಾಗಿತ್ತು.

ಇದೆಲ್ಲದರ ಜೊತೆಗೆ, ಭಾರತದ ಆರ್​ಎಸ್​ಎಸ್ (RSS)​, ರಾ (RAW)ನಂತಹ ಕೆಲವು ಭಾರತೀಯ ಸಂಸ್ಥೆಗಳ ಮೇಲೆ ನಿಷೇಧ ಹೇರಬೇಕೆಂಬ ಶಿಫಾರಸನ್ನೂ USCIRF ವರದಿ ಮಾಡಿತ್ತು. ಈ USCIRF ಅಮೆರಿಕದ ಒಂದು ಸಲಹಾ ಸಂಸ್ಥೆಯಾಗಿದ್ದು, ಅದರ ವರದಿಯನ್ನು ಭಾರತ ತೀವ್ರವಾಗಿ ವಿರೋಧಿಸಿದೆ. USCIRF ಭಾರತದ ಬಗ್ಗೆ ತಪ್ಪುಚಿತ್ರಣ ನೀಡುತ್ತಿದೆ, ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಭಾರತ ಆರೋಪಿಸಿದೆ.

ಇದನ್ನೂ ಓದಿ: ಟ್ರಂಪ್​ಗೆ ಮುಖಭಂಗ; ಅಮೆರಿಕದ ಯುದ್ಧವಿಮಾನಕ್ಕೆ ನೋ ಎಂಟ್ರಿ ಎಂದ ಶ್ರೀಲಂಕಾ

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಭಾರತದ 275 ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಮಿಲಿಟರಿ ಸಿಬ್ಬಂದಿ USCIRF ವರದಿಯನ್ನು ಖಂಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ಮಾಜಿ ಅಧಿಕಾರಿಗಳು ಮತ್ತು ಮಿಲಿಟರಿ ಪರಿಣತರು ಸೇರಿದಂತೆ 275 ಭಾರತೀಯರ ಗುಂಪು ಇಂದು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ನೀಡಿದ ಭಾರತದ ಕುರಿತ “ಆಫ್-ದಿ-ಮಾರ್ಕ್” ವರದಿಯನ್ನು ಟೀಕಿಸಿದೆ.

“ನಾವು ಕೆಳಗೆ ಸಹಿ ಮಾಡಿರುವವರು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಸಿದ್ಧಪಡಿಸಿದ ಅತ್ಯಂತ ಗೊಂದಲಮಯ ಮತ್ತು ಸಂಪೂರ್ಣವಾಗಿ ಆಫ್-ದಿ-ಮಾರ್ಕ್ ವರದಿಯನ್ನು ನಿಮ್ಮ ಗಮನಕ್ಕೆ ತರುತ್ತೇವೆ” ಎಂದು ಅವರು ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.

ಭಾರತದ ವಿದೇಶಿ ಗುಪ್ತಚರ ಸಂಸ್ಥೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RA&AW) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮೇಲೆ ನಿರ್ಬಂಧಗಳನ್ನು ಶಿಫಾರಸು ಮಾಡುವ USCIRF ವರದಿಗೆ ಈ ಗುಂಪು ಆಕ್ಷೇಪಿಸಿದೆ. ಈ ತಂಡದಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮತ್ತು NGT ಅಧ್ಯಕ್ಷ ಅಧ್ಯಕ್ಷ ಆದರ್ಶ್ ಕುಮಾರ್ ಗೋಯೆಲ್, ಕೇರಳದ ಮಾಜಿ DGP ಪಿ. ಚಂದ್ರಶೇಖರನ್ ಮತ್ತು ಮಾಜಿ ರಾಯಭಾರಿಗಳಾದ ಭಾಸ್ವತಿ ಮುಖರ್ಜಿ ಮತ್ತು ಶ್ಯಾಮಲಾ ಬಿ. ಕೌಸಿಕ್ ಕೂಡ ಸೇರಿದ್ದಾರೆ.

 

ತಮ್ಮ ಬಹಿರಂಗ ಪತ್ರದಲ್ಲಿ ಅಧಿಕೃತ ದತ್ತಾಂಶವನ್ನು ಉಲ್ಲೇಖಿಸಿರುವ ಅವರು, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು 1951ರಲ್ಲಿ ಶೇ. 9.8 ರಷ್ಟಿತ್ತು. 2011ರಲ್ಲಿ ಶೇ. 14.2ಕ್ಕೆ ಏರಿತು. ಕ್ರಿಶ್ಚಿಯನ್ ಜನಸಂಖ್ಯೆಯು 1951ರಲ್ಲಿ ಶೇ. 2.3ರಷ್ಟಿತ್ತು. 2011ರಲ್ಲಿ ಶೇ. 2.3 ರಷ್ಟಿತ್ತು. 1951ರಲ್ಲಿ ಶೇ. 1.79ರಷ್ಟಿದ್ದ ಸಿಖ್ ಜನಸಂಖ್ಯೆಯು 2011ರಲ್ಲಿ ಶೇ 1.72ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ಗೆ ಮತ್ತೊಂದು ಹೊಡೆತ; ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ

“ಈ ಡೇಟಾವನ್ನು ಅಧಿಕೃತ ಜನಗಣತಿ ದತ್ತಾಂಶದಿಂದ ತೆಗೆದುಕೊಳ್ಳಲಾಗಿದೆ. ಇದು ಭಾರತದಲ್ಲಿ 6 ದಶಕಗಳಿಗೂ ಹೆಚ್ಚು ಕಾಲ ಸ್ವತಂತ್ರ ಸಾಂವಿಧಾನಿಕ ಆಡಳಿತದಲ್ಲಿ ಪ್ರಮುಖ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಜನಸಂಖ್ಯಾ ವಿಸ್ತರಣೆ ಅಥವಾ ಸ್ಥಿರತೆಯ ವಿಶಾಲ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

“USCIRFನ ಎಲ್ಲಾ 6 ಆಯುಕ್ತರನ್ನು US ಸರ್ಕಾರವು ನೇಮಿಸುತ್ತದೆ. US ಕಾಂಗ್ರೆಸ್ ಮೂಲಕ ಅಮೇರಿಕನ್ ತೆರಿಗೆದಾರರು ಅವರಿಗೆ ಹಣಕಾಸು ಒದಗಿಸುತ್ತಾರೆ. USCIRFನಲ್ಲಿ ಈ ವರದಿಗೆ ಕೊಡುಗೆ ನೀಡಿದ ಎಲ್ಲರ ಕಟ್ಟುನಿಟ್ಟಿನ ಹಿನ್ನೆಲೆಯನ್ನು ಪರಿಶೀಲನೆ ನಡೆಸುವಂತೆ ನಾವು US ಸರ್ಕಾರವನ್ನು ಒತ್ತಾಯಿಸುತ್ತೇವೆ. ಇದು USCIRF ನಿಂದ ಅತ್ಯಂತ ಪೂರ್ವಾಗ್ರಹ ಪೀಡಿತ ಮತ್ತು ಅಸಮರ್ಥನೀಯ ವರದಿಗಳನ್ನು ತಯಾರಿಸಲು ಬಳಸಲ್ಪಡುತ್ತಿರುವ US ತೆರಿಗೆದಾರರ ಕಣ್ಣು ತೆರೆಸುತ್ತದೆ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಅಲ್ಲಿನ ಪ್ರಜೆಗಳ ಹಣವನ್ನು ಕೆಲವು ಭಾರತ ವಿರೋಧಿ ಹಿತಾಸಕ್ತಿಗಳು ಭಾರತದ ಜನರೊಂದಿಗೆ ಅವರ ಸದ್ಭಾವನೆಯನ್ನು ಹಾಳುಮಾಡಲು ಗುಪ್ತ ಕಾರ್ಯಸೂಚಿಯನ್ನು ಉತ್ತೇಜಿಸಲು ಬಳಸುತ್ತಿವೆ” ಎಂದು ಮಾಜಿ ಐಎಎಸ್ ಅಧಿಕಾರಿಗಳಾದ ಎಂ. ಮದನ್ ಗೋಪಾಲ್, ಒ.ಪಿ. ಪಾಠಕ್ ಮತ್ತು ಸಿ.ಎಸ್. ತಲ್ವಾರ್ ಮತ್ತು ಇತರರು ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.

“ಇತ್ತೀಚಿನ ವರದಿಯನ್ನು ನಾವು ಗಮನಿಸಿದ್ದೇವೆ. ಭಾರತದ ಬಗ್ಗೆ ಮಾಡಲಾದ ಆರೋಪ ಸಂಪೂರ್ಣ ಸುಳ್ಳು. ಹಲವಾರು ವರ್ಷಗಳಿಂದ USCIRF ಭಾರತದ ಕುರಿತು ವಿಕೃತ ಮತ್ತು ಆಯ್ದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಹೇಳಿದ್ದರು.

ಭಾರತದ ಬಗ್ಗೆ ಆಯ್ದ ಟೀಕೆಗಳನ್ನು ಮುಂದುವರಿಸುವ ಬದಲು, USCIRF ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕ ಕೃತ್ಯಗಳು ಮತ್ತು ದಾಳಿಗಳು, ಭಾರತವನ್ನು ಟಾರ್ಗೆಟ್ ಮಾಡುವುದು ಮತ್ತು ಅಮೆರಿಕದಲ್ಲಿ ಭಾರತೀಯ ವಲಸೆಗಾರರ ​​ಸದಸ್ಯರ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಬೆದರಿಕೆಯ ಬಗ್ಗೆ ಚಿಂತಿಸುವುದು ಒಳ್ಳೆಯದು” ಎಂದು ಜೈಸ್ವಾಲ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version