Headlines

ಪದೇಪದೇ ಓಆರ್‌ಎಸ್ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಈ ವಿಷಯ ತಿಳಿದುಕೊಳ್ಳುವುದನ್ನು ಮರೆಯಬೇಡಿ – Kannada News | ORS Water Daily Benefits And Risks: Who Should Avoid Drinking It Regularly

ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ತೀವ್ರ ಬಿಸಿಲಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡುವುದು ದೊಡ್ಡ ಸಾಹಸವಾಗಿದೆ. ಈ ಸಮಯದಲ್ಲಿ ಬಿಸಿಲಿನಿಂದ ದೇಹವನ್ನು ಹೈಡ್ರೇಟ್‌ ಇಡಲು ಜನರು ಓಆರ್‌ಎಸ್ (ORS) ಮೊರೆ ಹೋಗುತ್ತಿದ್ದಾರೆ. ಕೆಲವರು ದಿನಪೂರ್ತಿ ನೀರಿನ ಬಾಟಲಿಯಲ್ಲಿ ಓಆರ್‌ಎಸ್ ಮಿಶ್ರಣವನ್ನು ತುಂಬಿಕೊಂಡು ಕುಡಿಯುವ ಅಭ್ಯಾಸವನ್ನೂ ಮಾಡಿಕೊಂಡಿರುತ್ತಾರೆ. ಆದರೆ ಪ್ರತಿದಿನ ಅದರಲ್ಲಿಯೂ ಪದೇಪದೇ ಓಆರ್‌ಎಸ್ ಕುಡಿಯುವುದು ಎಲ್ಲರಿಗೂ ಸೂಕ್ತವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ದೆಹಲಿ ಸಫ್ದರ್ಜಂಗ್ ಆಸ್ಪತ್ರೆಗೆ ಸೇರಿದ ಹಿರಿಯ ವೈದ್ಯ ಡಾ. ದೀಪಕ್…

Read More

Chanakya Niti: ದಾಂಪತ್ಯ ಜೀವನ ಸುಖವಾಗಿರಬೇಕೆಂದರೆ ಗಂಡ-ಹೆಂಡತಿ ಹೀಗಿರಬೇಕೆಂದಿದ್ದಾರೆ ಚಾಣಕ್ಯ – Kannada News | Chanakya Niti: What should a husband and wife be like for a good married life?

ಪ್ರತಿಯೊಬ್ಬರೂ ಸಹ ಸಂತೋಷ ಮತ್ತು ಶಾಂತಿಯುತ ದಾಂಪತ್ಯ ಜೀವನವನ್ನು (married life) ಬಯಸುತ್ತಾರೆ, ಆದರೆ ಇಂದಿನ ಒತ್ತಡದ ಜೀವನದಲ್ಲಿ ಕ್ಷುಲ್ಲಕ ವಿಷಯಗಳಿಗೆ ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿವೆ, ಸಂಬಂಧಗಳು ಮುರಿದು ಬೀಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಗಂಡ ಮತ್ತು ಹೆಂಡತಿ ತಮ್ಮ ಸ್ವಭಾವದಲ್ಲಿ, ಗುಣದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸುಂದರ ಜೀವನವನ್ನು ಸಾಗಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಸಂತೋಷದ ದಾಂಪತ್ಯ ಜೀವನದ ಅಡಿಪಾಯವೆಂದು  ಪರಿಗಣಿಸಿದ ಆ ಮೂರು…

Read More

“ದೇಹ ದಣಿದರೂ ನಾವು ಬಿಡಲ್ಲ”- ಧೋನಿ ಬಗ್ಗೆ ರೈನಾ ಮಾತು – Kannada News | Suresh Raina’s Big Update On Dhoni’s IPL 2027 Future

ಈ ಬಾರಿಯ ಐಪಿಎಲ್ ನಲ್ಲಿ ಒಂದೇ ಒಂದು ಪಂದ್ಯವಾಡದ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಸೀಸನ್- 20 ರಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಧೋನಿಯ ಆಪ್ತ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕಡೆಯಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಸುರೇಶ್ ರೈನಾ,‌ ಮಹೇಂದ್ರ ಸಿಂಗ್ ಧೋನಿ ಮುಂಬರುವ 2027ರ ಐಪಿಎಲ್ ಸೀಸನ್‌ನಲ್ಲಿ ಕಣಕ್ಕಿಳಿಯಬೇಕು ಎಂದು ತಾವು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ. “ನೀನು…

Read More

ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!

ಗಾಜಿಯಾಬಾದ್, ಮೇ 19: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ ಹಿಂದೂ ಯುವ ವಾಹಿನಿಯ ಗಾಜಿಯಾಬಾದ್ (Ghaziabad) ಘಟಕದ ಮುಖ್ಯಸ್ಥ ಸುಶೀಲ್ ಪ್ರಜಾಪತಿ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಎಲ್​ಎಲ್​ಬಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ ಸುಶೀಲ್​ಗೆ ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು. ಕಳೆದ ವರ್ಷ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಅವರು ಸುಮಾರು 9 ತಿಂಗಳು ಜೈಲಿನಲ್ಲಿ ಕಳೆದಿದ್ದರು. ಪ್ರಜಾಪತಿಯನ್ನು ಹಲವಾರು ದೊಡ್ಡ ಹೂವಿನ ಹಾರಗಳಿಂದ ಸ್ವಾಗತಿಸಿ, ಬೆಂಬಲಿಗರು ಹೆಗಲ ಮೇಲೆ ಬೀದಿಗಳಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ…

Read More

ಮನೆ ನಿರ್ಮಿಸದೇ 23 ಕೋಟಿ ರೂ.ಗುಳುಂ:ಕೊಳಚೆ ನಿರ್ಮೂಲನಾ ಮಂಡಳಿ ಮೇಲೆ ಲೋಕಾಯುಕ್ತ ದಾಳಿ – Kannada News | Lokayukta raids On Belagavi Slum Development Board office over money scam

ಬೆಳಗಾವಿ/ಬೆಂಗಳೂರು, (ಮೇ 19): ಕೋಟ್ಯಾಂತರ ರೂಪಾಯಿ ಅನುದಾನ ದುರ್ಬಳಕೆ ಆರೋಪ ಮೇಲೆ ಬೆಳಗಾವಿ (Belagavi) ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾಯಕ್ತ (Lokayukta) ದಾಳಿಯಾಗಿದೆ. 600 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ಕೊಡದೇ 33 ಕೋಟಿ ರೂ. ಅನುದಾನದಲ್ಲಿ 23 ಕೋಟಿ ರೂ.ಲೂಟಿ ಮಾಡಿದ್ದಾರೆ ಎನ್ನುವ ದೂರು ದಾಖಲಾಗಿದ್ದು, ಈ ದೂರಿನ ಮೇರೆಗೆ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಇಂದು (ಮೇ 19) ಬೆಂಗಳೂರು ನಗರ, ಧಾರವಾಡ, ರಾಮದುರ್ಗ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ಬೆಳಗಾವಿ ಕೊಳಚೆ…

Read More

NEET ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿ, ಯಾವುದೇ ರಾಜಿ ಬೇಡ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೂಚನೆ – Kannada News | Union Education Minister Dharmendra Pradhan Chairs High Level Meeting on NEET UG Re Exam

ನವದೆಹಲಿ, ಮೇ 19: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ (NEET Paper Leak Case) ಸಿಬಿಐ ತನಿಖೆಯ ಬಳಿಕ ಈಗಾಗಲೇ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕೋಚಿಂಗ್ ಕ್ಲಾಸ್​​ನಲ್ಲಿಯೇ ಪ್ರಶ್ನೆ ಪೇಪರ್​ಗಳನ್ನು ಹಂಚಲಾಗಿತ್ತು ಎಂಬ ವಿಷಯ ಹೊರಬಿದ್ದಿದೆ. ಇದರ ನಡುವೆ ಕೇಂದ್ರ ಸರ್ಕಾರವು ನೀಟ್ ಮರು ಪರೀಕ್ಷೆಯ ಬಗ್ಗೆ ಗಮನಹರಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪರಿಶೀಲನಾ ಸಭೆಯಲ್ಲಿ ಬಿಗಿ ಭದ್ರತೆ, ಸಿಸಿಟಿವಿ ಕಣ್ಗಾವಲು ಮತ್ತು ಪಾರದರ್ಶಕವಾಗಿ ಪರೀಕ್ಷೆಯ ನಿರ್ವಹಣೆಯ ಕುರಿತು ಪ್ರಮುಖ…

Read More

ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ – Kannada News | China’s dark factories, where no humans work, production happens non stop, here is the future

ಡಾರ್ಕ್ ಫ್ಯಾಕ್ಟರಿImage Credit source: AI/Mediaforge/TV9 ಒಂದು ಕಾರ್ಖಾನೆ. ಲೈಟ್ ಇಲ್ಲ, ಮನುಷ್ಯರ ಸುಳಿವೇ ಇಲ್ಲ ಎಂದರೆ ಅದ್ಯಾವುದೋ ಪಾಳುಬಿದ್ದ ಹಾಂಟೆಡ್ ಪ್ಲೇಸ್ ಎಂದು ನೀವು ಭಾವಿಸಬಹುದು. ಆದರೆ, ಇದರಲ್ಲಿ ಮನುಷ್ಯರ ಬದಲು ರೋಬೋಗಳಿದ್ದರೆ? ಹಾಲಿವುಡ್​ನ ಸ್ಕೈಫೈ ಸಿನಿಮಾಗಳನ್ನು ನೋಡುವವರ ಕಲ್ಪನೆಗಳಿಗೂ ಮೀರಿದಂತಹ ದೃಶ್ಯಗಳನ್ನು ಈ ಕಾರ್ಖಾನೆಯಲ್ಲಿ ಕಾಣಬಹುದು. ಅದುವೇ ಚೀನಾದ ಡಾರ್ಕ್ ಫ್ಯಾಕ್ಟರಿ. ಒಂದಲ್ಲ, ಎರಡಲ್ಲ, ಇಂಥ ಹಲವು ಡಾರ್ಕ್ ಫ್ಯಾಕ್ಟರಿಗಳು ಚೀನಾದಲ್ಲಿವೆ. ಚೀನಾದ ತಂತ್ರಜ್ಞಾನ ಕ್ರಾಂತಿಯ ಅತ್ಯಂತ ರೋಮಾಂಚಕ ಮತ್ತು ಆಘಾತಕಾರಿ ಮುಖವೇ ಈ…

Read More

‘ಪೆದ್ದಿ’ಯ ಪ್ರೀ ರಿಲೀಸ್ ಇವೆಂಟ್ ಸಿನಿಮಾದಷ್ಟೆ ಅದ್ಧೂರಿ, 150 ಕೋಟಿ ಮೌಲ್ಯದ ಸೆಟಪ್ – Kannada News | Ram Charan’s Peddi Movie event in Bhopal is very huge

ರಾಮ್ ಚರಣ್ (Ram Charan) ನಟಿಸಿ, ‘ಉಪ್ಪೆನ’ ಖ್ಯಾತಿಯ ಬುಚ್ಚಿಬಾಬು ಸಾನಾ ನಿರ್ದೇಶನ ಮಾಡಿರುವ ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ ಪ್ರಚಾರದ ವಿಚಾರದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ನಿನ್ನೆಯಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ದೇಶದ ಪ್ರಮುಖ ನಗರಗಳಿಗೆ ತೆರಳಿ ಚಿತ್ರತಂಡ ಪ್ರಚಾರ ಮಾಡಲಿದೆ. ಆದರೆ ಭೋಪಾಲ್ ಮತ್ತು ಹೈದರಾಬಾದ್​​ನಲ್ಲಿ ಮಾತ್ರ ಭಾರಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಚಿತ್ರತಂಡ ಮಾಡಲಿದೆ. ಅದರಲ್ಲೂ ಭೂಪಾಲ್​​ನಲ್ಲಿ ಮಾಡಲಿರುವ ವಿಶೇಷ ಕಾರ್ಯಕ್ರಮಕ್ಕೆ ಸಿನಿಮಾಕ್ಕೆ ಹಾಕಿರುವಷ್ಟೆ ಬೃಹತ್ ಬಂಡವಾಳವನ್ನು ಚಿತ್ರತಂಡ ಹೂಡಿಕೆ…

Read More

ಶರ್ಟ್‌ ಕಾಲರ್‌ನಲ್ಲಿ ಅಂಟಿರುವ ಹಠಮಾರಿ ಕಲೆಯನ್ನು ಸುಲಭವಾಗಿ ತೆಗೆದುಹಾಕಲು ಇಲ್ಲಿವೆ ಮನೆಮದ್ದು – Kannada News | Easily remove shirt collar stains with these home remedies

ಬಟ್ಟೆಗಳ ಮೇಲೆ ಅಂಟಿರುವ ಕಲೆಗಳನ್ನು (stains) ತೆಗೆದುಹಾಕುವುದು ಸುಲಭ.  ಆದರೆ ಶರ್ಟ್‌ ಕಾಲರ್‌ ಮೇಲೆ ಅಂಟಿರುವ ಹಠಮಾರಿ ಕಲೆಗಳನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲ. ಕಾಲರ್ ನಿರಂತರವಾಗಿ ಕುತ್ತಿಗೆಯೊಂದಿಗೆ ಸಂಪರ್ಕದಲ್ಲಿರುವುದರಿಂದ ಬೆವರು, ಚರ್ಮದ ಎಣ್ಣೆ, ಧೂಳು ಮತ್ತು ಕೊಳೆ ಶರ್ಟ್‌ ಕಾಲರ್‌ಗೂ ಅಂಟಿಕೊಳ್ಳುತ್ತದೆ.  ಈ ಕಲೆಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಇನ್ನೂ ಕಲೆಯನ್ನು ತೆಗೆಯುವ ಸಲುವಾಗಿ ಕಾಲರ್‌ ಅನ್ನು ತಿಕ್ಕಿ ತಿಕ್ಕಿ ಉಜ್ಜಿದರೆ ಕಾಲರ್‌ ಸವೆದು ಹೋಗುತ್ತದೆ. ಈ ಕಾರಣದಿಂದ ಬಟ್ಟೆಯೂ ಹಳೆಯದರಂತೆ ಕಾಣುತ್ತದೆ. ಹೀಗಿರುವಾಗ ಈ ಕೆಲವು…

Read More

ಮನೆಯಲ್ಲಿರುವ ಇಲಿಗಳಿಂದ ಹಂಟಾವೈರಸ್ ಬರುತ್ತದೆಯೇ? ಈ ಲಕ್ಷಣಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ – Kannada News | Early Hantavirus Symptoms After Rat Exposure: When To Seek Medical Help

ಪ್ರಪಂಚದ ಹಲವೆಡೆ ಹಂಟಾವೈರಸ್ (Hantavirus) ಬಗ್ಗೆ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಭಯವೂ ಹೆಚ್ಚಾಗಿದೆ. ಸಾಮಾನ್ಯವಾಗಿ ಈ ವೈರಸ್ ಸೋಂಕಿತ ಇಲಿಗಳ ಮಲ, ಮೂತ್ರ ಮತ್ತು ಲಾಲಾರಸದ ಮೂಲಕ ಮಾನವರಿಗೆ ಹರಡಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಮನೆಗಳಲ್ಲಿ ಇಲಿಗಳಿರುವುದು ಸಾಮಾನ್ಯವಾದರೂ, ಇದರಿಂದಲೇ ವೈರಸ್ ಹರಡುತ್ತದೆ ಎಂಬುದಲ್ಲ. ಆದರೆ ಸ್ವಚ್ಛತೆಯ ಕೊರತೆ ಮತ್ತು ಇಲಿಗಳ ಹೆಚ್ಚಳ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ವೈದ್ಯಕೀಯವಾಗಿ “ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್” ಎಂದು ಕರೆಯಲಾಗುವ ಈ ಸೋಂಕು ಮುಖ್ಯವಾಗಿ ಸೋಂಕಿತ ಇಲಿಗಳ ಸಂಪರ್ಕದಿಂದ…

Read More