ಚಿಕ್ಕಮಗಳೂರು, ಮಾರ್ಚ್ 21: ತಾಲೂಕಿನ ಕೊಡಾಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KSRTC) ಬಸ್ ಪಲ್ಟಿಯಾದ ಘಟನೆ ನಡೆದಿದೆ. ಕುಕನೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಈ ಸರ್ಕಾರಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಘಟನೆಯಲ್ಲಿ 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದಿನ ದಿನಗಳಲ್ಲಿ ಆಧ್ಯಾತ್ಮಿಕ ಮತ್ತು ಆರೋಗ್ಯದ ದೃಷ್ಟಿಯಿಂದ ರುದ್ರಾಕ್ಷಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಇದೇ ಸಂದರ್ಭವನ್ನು ಬಳಸಿಕೊಂಡು ಮಾರುಕಟ್ಟೆಯಲ್ಲಿ ನಕಲಿ ರುದ್ರಾಕ್ಷಿಗಳ ಮಾರಾಟವೂ ಜೋರಾಗಿದೆ. ವಿಶೇಷವಾಗಿ ಏಕಮುಖಿ ರುದ್ರಾಕ್ಷಿ ಅತ್ಯಂತ ಅಪರೂಪ ಮತ್ತು ಬೆಲೆಬಾಳುವಂತದ್ದು, ಹಾಗಾಗಿ ಇದನ್ನು ಖರೀದಿಸುವಾಗ ಮೋಸಹೋಗುವ ಸಾಧ್ಯತೆ ಹೆಚ್ಚು.
ಏಕಮುಖಿ ರುದ್ರಾಕ್ಷಿಯ ಮಹತ್ವ:
ಜ್ಯೋತಿಷ್ಯ ಮತ್ತು ಪುರಾಣಗಳ ಪ್ರಕಾರ, ಏಕಮುಖಿ ರುದ್ರಾಕ್ಷಿಯು ಸಾಕ್ಷಾತ್ ಶಿವನ ಸ್ವರೂಪವೆಂದು ಪರಿಗಣಿಸಲಾಗಿದೆ. ಇದು ಮೋಕ್ಷವನ್ನು ಪಡೆಯಲು ಅತ್ಯುತ್ತಮ ಮಾರ್ಗವೆಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ರುದ್ರಾಕ್ಷಿಯು ಸೂರ್ಯ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಜಾತಕದಲ್ಲಿ ಸೂರ್ಯ ದುರ್ಬಲವಾಗಿರುವವರು ಇದನ್ನು ಧರಿಸುವುದರಿಂದ ಶುಭ ಫಲ ಪಡೆಯಬಹುದು. ವಿಶೇಷವಾಗಿ ಸಿಂಹ ರಾಶಿಯವರು ಇದನ್ನು ಧರಿಸುವುದು ಹೆಚ್ಚು ಪ್ರಯೋಜನಕಾರಿ.
ಆರೋಗ್ಯ ಮತ್ತು ಮಾನಸಿಕ ಲಾಭಗಳು:
ಏಕಮುಖಿ ರುದ್ರಾಕ್ಷಿಯು ರಕ್ತದೊತ್ತಡ (Blood Pressure) ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪೂರಕವಾಗಿದೆ. ಇದನ್ನು ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಮಾನಸಿಕ ಶಾಂತಿ ಸಿಗುತ್ತದೆ. ಇದಲ್ಲದೇ ವಿದ್ಯಾರ್ಥಿಗಳು ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಅವರ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.
ನೀವು ಖರೀದಿಸುತ್ತಿರುವ ರುದ್ರಾಕ್ಷಿ ಅಸಲಿಯೇ ಎಂದು ಪರೀಕ್ಷಿಸಲು ಈ ಸರಳ ಕ್ರಮಗಳನ್ನು ಅನುಸರಿಸಿ:
ಆಕಾರ ಮತ್ತು ರೇಖೆ: ನಿಜವಾದ ಏಕಮುಖಿ ರುದ್ರಾಕ್ಷಿಯು ಸಾಮಾನ್ಯವಾಗಿ ಅರ್ಧಚಂದ್ರಾಕೃತಿ ಅಥವಾ ಗೋಳಾಕಾರದಲ್ಲಿ ಇರುತ್ತದೆ. ಇದರ ಮೇಲೆ ಮೇಲಿನಿಂದ ಕೆಳಕ್ಕೆ ಕೇವಲ ಒಂದು ಸ್ಪಷ್ಟವಾದ ರೇಖೆ ಇರುತ್ತದೆ.
ನೀರಿನ ಪರೀಕ್ಷೆ: ರುದ್ರಾಕ್ಷಿಯನ್ನು ನೀರಿನಲ್ಲಿ ಹಾಕಿದಾಗ ಅದು ಮುಳುಗಬೇಕು. ಅಲ್ಲದೆ, ನೀರಿನಲ್ಲಿ ಕುದಿಸಿದಾಗ ಅದು ಬಣ್ಣವನ್ನು ಬಿಡಬಾರದು. ಒಂದು ವೇಳೆ ಬಣ್ಣ ಮಸುಕಾದರೆ ಅದು ನಕಲಿ ಎಂದು ತಿಳಿಯಿರಿ.
ಹರಳೆಣ್ಣೆ ಪರೀಕ್ಷೆ: ರುದ್ರಾಕ್ಷಿಯನ್ನು ಹರಳೆಣ್ಣೆಯಲ್ಲಿ ಹಾಕಿದಾಗ ಅದು ಮೊದಲಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಂಡರೆ ಅದು ಅಸಲಿ ರುದ್ರಾಕ್ಷಿಯ ಲಕ್ಷಣ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗ, ಮಾರ್ಚ್ 21: ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಇಂಧನ ಕೊರತೆ ಭೀತಿ ಮೂಡಿದ ಹಿನ್ನೆಲೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜನ ಮುಗಿಬಿದ್ದಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಒಟ್ಟು 4 ಪೆಟ್ರೋಲ್ ಬಂಕ್‌ಗಳಿವೆ. ಮೂರು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಖಾಲಿಯಾದ ಹಿನ್ನೆಲೆ ಶಿವಮೊಗ್ಗ ರಸ್ತೆಯ ಹೆಚ್‌ಪಿ ಬಂಕ್‌ನಲ್ಲಿ ವಾಹನ ಸವಾರರು ಸಾಲುಗಟ್ಟಿ ನಿಂತು ಇಂಧನ ಪಡೆದಿದ್ದಾರೆ.
ಮಗುವು ಹೇಗೆಯೇ ಇರಲಿ, ತಾಯಿಗೆ ಅದುವೇ ಪ್ರಪಂಚ. ಆದರೆ ಕೆಲವೊಮ್ಮೆ ಹುಟ್ಟಿದ ಮಗು ಡೌನ್ ಸಿಂಡ್ರೋಮ್ ಸಮಸ್ಯೆಗೆ ಒಳಗಾಗುತ್ತದೆ. ಇದು ಮಗುವಿನ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವ ಸ್ಥಿತಿಯಾಗಿದ್ದು, ಚಿಕಿತ್ಸೆಯಿಂದ ಗುಣಪಡಿಸಲಾಗದು. ಈ ಡೌನ್ ಸಿಂಡ್ರೋಮ್ ಬಗೆಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮಾರ್ಚ್ 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು (World Down Syndrome Day) ಆಚರಿಸಲಾಗುತ್ತಿದೆ.
ವಿಶ್ವ ಡೌನ್ ಸಿಂಡ್ರೋಮ್ ದಿನದ ಇತಿಹಾಸವೇನು?
2005ರಲ್ಲಿ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಡೌನ್ ಸಿಂಡ್ರೋಮ್ ಇಂಟರ್‌ನ್ಯಾಷನಲ್ ಅನ್ನು ಸ್ಥಾಪಿಸಲಾಯಿತು. 2006ರಲ್ಲಿ ಮೊದಲ ಬಾರಿಗೆ ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸಲಾಯಿತು. ಈ ದಿನದ ಆಚರಣೆಯ ಬಳಿಕ ಬ್ರೆಜಿಲಿಯನ್ ಫೆಡರೇಶನ್ ಅಸೋಸಿಯೇಷನ್ ಆಫ್ ಡೌನ್ ಸಿಂಡ್ರೋಮ್ ಇದಕ್ಕೆ ಕೈ ಜೋಡಿಸಿತು. ಅದರೊಂದಿಗೆ ಡಿಎಸ್‌ಐ ಜೊತೆ ಕೆಲಸ ಮಾಡಲು ಮುಂದಾಯಿತು. ಸದಸ್ಯರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲವನ್ನು ಪಡೆಯುವ ಸಲುವಾಗಿ ಕೆಲಸ ಮಾಡಲು ಕೈ ಹಾಕಿದರು. 2011ರ ನವೆಂಬರ್ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸಲು ಒಪ್ಪಿಗೆ ಸಿಕ್ಕಿತು. ಅಂದಿನಿಂದ ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಡೌನ್ ಸಿಂಡ್ರೋಮ್ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದು, ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳ ಸಾಧನೆ ಹಾಗೂ ಕೊಡುಗೆಗಳನ್ನು ಗೌರವಿಸುವುದಾಗಿದೆ. ಈ ಜನರನ್ನು ಬೇಧಭಾವವನ್ನು ಮಾಡದೇ ನಮ್ಮಂತೆಯೇ ನೋಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಈ ವಿಶೇಷ ದಿನದಂದು ಜಗತ್ತಿನಾದಂತ್ಯ ಮಾಹಿತಿ ಕಾರ್ಯಾಗಾರಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಾದಗಿರಿ, ಮಾರ್ಚ್: ಊರಿಗೆ ಹೋಗಲು ವಾಹನ ಸಿಗದಿದ್ದ ಕಾರಣ ಚಾಲಕನೊಬ್ಬ ಬಸ್ಸನ್ನೇ ಕದ್ದೊಯ್ದ ವಿಲಕ್ಷಣ ಘಟನೆಗೆ ಯಾದಗಿರಿ ಜಿಲ್ಲೆ ಸಾಕ್ಷಿಯಾಗಿದೆ. ಯಾದಗಿರಿಯ ಸೈದಾಪುರ ಪಟ್ಟಣದಿಂದ ಬಸ್ ಕದ್ದೊಯ್ಯಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಇದೀಗ ಬಯಲಾಗಿವೆ. ಕೆಕೆಆರ್ಟಿಸಿಗೆ (KKRTC) ಸೇರಿದ ಬಸ್ ಅನ್ನು ಅದೇ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರಾಗಿದ್ದ ಮಹಿಪಾಲರೆಡ್ಡಿ ಕದ್ದೊಯ್ದಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆ ಮಹಿಪಾಲರೆಡ್ಡಿಯನ್ನು ವಜಾಗೊಳಿಸಲಾಗಿತ್ತು.
ಮಾರ್ಚ್ 19ರಂದು ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಅನ್ನು ಮಹಿಪಾಲರೆಡ್ಡಿ ತೆಗೆದುಕೊಂಡು ಹೋಗಿದ್ದಾರೆ. ಸ್ವಗ್ರಾಮ ರಾಚನಳ್ಳಿಗೆ ತೆರಳಲು ಯಾವುದೇ ವಾಹನ ಸಿಗದಿದ್ದರಿಂದ ಈ ಕೃತ್ಯ ಎಸಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಸ್ ಕದ್ದೊಯ್ದ ಬಳಿಕ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ನಿಲ್ಲಿಸಿ, ಅಲ್ಲಿಂದ ತೆರಳಿದ್ದರು. ಬಳಿಕ ಪ್ರಕರಣ ಬೆಳಕಿಗೆ ಬಂದಂತೆ ಪೊಲೀಸರು ತನಿಖೆ ನಡೆಸಿ ಬಸ್ ಅನ್ನು ವಾಪಸ್ ಪಡೆದಿದ್ದಾರೆ. ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಕನ್ನಡದ ವರನಟ ಡಾ. ರಾಜ್ಕುಮಾರ್ (Rajkumar) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನೀಡಿದ ಸಿನಿಮಾಗಳು ಈಗಲೂ ಅನೇಕರಿಗೆ ಮಾದರಿ. ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಕೇವಲ ಕನ್ನಡದ ಮಾತ್ರವಲ್ಲದೆ, ಪರಭಾಷೆಯ ಮಂದಿಗೂ ರಾಜ್ಕುಮಾರ್ ತಿಳಿದಿದ್ದಾರೆ. ರಾಜ್ಕುಮಾರ್ ಅವರ ಹಾಡುಗಳು ಕೂಡ ಅನೇಕರ ಫೇವರಿಟ್. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಜ್ಕುಮಾರ್ ಅವರ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಅಣ್ಣಾವ್ರ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಖುಷಿ ಕೊಟ್ಟಿದೆ.
ರಾಜ್ಕುಮಾರ್ ಅವರು ಬಾಂಡ್ ಸಿನಿಮಾಗಳಿಂದ ಹಿಡಿದು, ಪೌರಾಣಿಕ ಸಿನಿಮಾಗಳವರೆಗೆ, ಆ್ಯಕ್ಷನ್ ಸಿನಿಮಾದಿಂದ ಹಿಡಿದು ಭಕ್ತಿ ಪ್ರಧಾನ ಸಿನಿಮಾವರೆಗೆ ಎಲ್ಲ ರೀತಿಯ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ‘ಶ್ರೀ ಕೃಷ್ಣದೇವರಾಯ’ ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ರಾಜ್ಕುಮಾರ್ ಅವರು ಕೃಷ್ಣದೇವರಾಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ 1970ರಲ್ಲಿ ರಿಲೀಸ್ ಆಯಿತು. ಈ ಚಿತ್ರದ ‘ಶ್ರೀ ಚಾಂಮುಂಡೇಶ್ವರಿ..’ ಹಾಡು ಗಮನ ಸೆಳೆಯಿತು. ಇದನ್ನು ಮೋದಿ ಶೇರ್ ಮಾಡಿಕೊಂಡಿದ್ದಾರೆ.
‘ಶ್ರೀ ಚಾಂಮುಂಡೇಶ್ವರಿ..’ ಹಾಡಿನ ಯೂಟ್ಯೂಬ್ ಲಿಂಕ್ ಶೇರ್ ಮಾಡಿಕೊಂಡಿರೋ ಮೋದಿ, ‘ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ದೈವದ ಭಕ್ತಿ ಸಾರುವ ವಿಡಿಯೋ ಹಂಚಿಕೊಂಡಿದ್ದಾರೆ.
जगतजननी माता पर अटूट विश्वास उनके भक्तों में नई चेतना और स्फूर्ति का संचार करने वाला है।https://t.co/kSHuvxatz9
‘ಶ್ರೀ ಚಾಂಮುಂಡೇಶ್ವರಿ..’ಹಾಡನ್ನು ಪಿ. ಲೀಲಾ, ಎಸ್ ಗೋವಿಂದರಾಜು ಹಾಡಿದ್ದಾರೆ. ಪ್ರಭಾಕರ ಶಾಸ್ತ್ರಿ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಟಿಜಿ ಲಿಂಗಪ್ಪ ಅವರು ಹಾಡಿಗೆ ಸಂಗೀತ ನೀಡಿದ್ದಾರೆ. ರಾಜ್ಕುಮಾರ್ ಹಾಗೂ ಭಾರತಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಅರಣ್ಯಗಳು (Forest) ಭೂಮಿಯ ಜೀವಾಳವಾಗಿದ್ದು, ಈ ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವರಾಶಿಗಳಿಗೂ ಆಮ್ಲಜನಕ, ಆಹಾರ, ಔಷಧ ಮತ್ತು ಜೀವನೋಪಾಯವನ್ನು ಒದಗಿಸುತ್ತಿವೆ. ಜೊತೆಗೆ ಪರಿಸರವನ್ನು ಸಮತೋಲನದಲ್ಲಿಡುವ ಮಹತ್ತರ ಕಾರ್ಯವನ್ನೂ ಮಾಡುತ್ತಿವೆ. ವಿಶ್ವಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಸುಮಾರು 1.6 ಶತಕೋಟಿ ಜನರು ತಮ್ಮ ಆಹಾರ, ಆಶ್ರಯ, ಔಷಧ ಮತ್ತು ಜೀವನೋಪಾಯಕ್ಕಾಗಿ ನೇರವಾಗಿ ಕಾಡುಗಳನ್ನು ಅವಲಂಬಿಸಿದ್ದಾರೆ. ನಾವು ಬಳಸುವ ಔಷಧಿಗಳಲ್ಲಿ ಶೇ. 25 ರಷ್ಟು ಈ ಕಾಡುಗಳಿಂದಲೇ ಬರುತ್ತವೆ. ಇಂದು ಕೈಗಾರಿಕೀಕರಣ, ನಗರೀಕರಣದ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸಲಾಗುತ್ತಿದೆ. ಇದು ನೇರವಾಗಿ ಹವಮಾನ ಬದಲಾವಣೆಗೆ ಕಾರಣವಾಗುತ್ತಿವೆ. ಜೊತೆಗೆ ಕಾಡುಪ್ರಾಣಿಗಳಿಗೂ ಬೆದರಿಕೆಯನ್ನು ತಂದೊಡ್ಡಿದೆ. ಆದ್ದರಿಂದ ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಅರಣ್ಯ ದಿನದ ಇತಿಹಾಸವೇನು?
ವಿಶ್ವ ಅರಣ್ಯ ದಿನವನ್ನು ಪ್ರತಿ ವರ್ಷ ಮಾರ್ಚ್ 21 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲು 1971 ರಲ್ಲಿ ಆಚರಿಸಲಾಯಿತು. 1971 ರಲ್ಲಿ, ಯುರೋಪಿಯನ್ ಕೃಷಿ ಸಂಸ್ಥೆಯು ಅರಣ್ಯ ಸಂರಕ್ಷಣೆಯನ್ನು ಉತ್ತೇಜಿಸಲು ತನ್ನ 23 ನೇ ಸಾಮಾನ್ಯ ಸಭೆಯಲ್ಲಿ ವಿಶ್ವ ಅರಣ್ಯ ದಿನವನ್ನು ಘೋಷಿಸಿತು. ತರುವಾಯ, ಮರಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 28, 2012 ರಂದು ಒಂದು ನಿರ್ಣಯವನ್ನು ಅಂಗೀಕರಿಸಿತು ಮತ್ತು ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ. ಕಾಡುಗಳು ಮತ್ತು ನಮ್ಮ ಜೀವನಕ್ಕೆ ಕಾಡು ಎಷ್ಟು ಮುಖ್ಯ ಎಂದು ಅರಣ್ಯಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಗೂ ಬದುಕಲು ಆಮ್ಲಜನಕದ ಅಗತ್ಯವಿದೆ ಮತ್ತು ಈ ಆಮ್ಲಜನಕವನ್ನು ಮರಗಳಿಂದ ಮಾತ್ರ ಪಡೆಯಲಾಗುತ್ತದೆ. ಆದರೆ ನಿರಂತರವಾಗಿ ಮರಗಳನ್ನು ಕಡಿಯುವುದರಿಂದ, ಅವುಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ಮತ್ತು ಇಂಗಾಲದ ಡೈಆಕ್ಸೈಡ್ ಮತ್ತು ಇಂಗಾಲದ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳು ವಾತಾವರಣದಲ್ಲಿ ಹೆಚ್ಚಾಗುತ್ತಿವೆ. ಈ ಅನಿಲಗಳು ನಮಗೆ ತುಂಬಾ ಅಪಾಯಕಾರಿ. ಅದಕ್ಕಾಗಿಯೇ ನಾವು ಮರಗಳನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬರೂ ಒಂದು ಮರವನ್ನು ನೆಟ್ಟರೂ ಸಹ, ನಮ್ಮ ಭೂಮಿಯನ್ನು ಹಸಿರಾಗಿಸಬಹುದು ಎಂದು ಅರಣ್ಯಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ.
ಈ ದಿನದಂದು ಮರಗಿಡಗಳನ್ನು ನೆಡಲು ಜನರಿಗೆ ಪ್ರೋತ್ಸಾಹಿಸಲಾಗುತ್ತದೆ.
ಪರಿಸರ ಸಮತೋಲನಕ್ಕೆ ಅರಣ್ಯಗಳು ಎಷ್ಟು ಮುಖ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಒಟ್ಟಾರೆಯಾಗಿ ಮಾನವರಿಗೆ ಕಾಡುಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮರಗಳನ್ನು ನೆಡಲು ಜನರಿಗೆ ಅರಿವು ಮೂಡಿಸಲಾಗುತ್ತದೆ.
ಬೆಂಗಳೂರು, ಮಾರ್ಚ್ 21: ಇಂದಿನ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಎಐ (AI) ಅಂದರೆ ಕೃತಕ ಬುದ್ಧಿಮತ್ತೆ ಕಂಟಕ ತರಬಹುದು ಎಂಬ ಆತಂಕದ ಜೊತೆಗೆ ಉದ್ಯೋಗಿಗಳ ಕೆಲಸವನ್ನೂ ಕಸಿದುಕೊಳ್ಳಬಹುದೆಂಬ ಭಯ ಈಗಾಗಲೇ ಸೃಷ್ಟಿಯಾಗಿದೆ. ಇದರ ಜೊತೆಗೆ ಎಐನಿಂದ ನೇಮಕಾತಿ ಪ್ರಕ್ರಿಯೆಯೂ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂಬ ಅಭಿಪ್ರಾಯಗಳು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಮೂಲದ ಟೇಕ್ ಯು ಫಾರ್ವರ್ಡ್ ಸಂಸ್ಥೆಯ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಾಪಿ ಪೇಸ್ಟ್ ಅರ್ಜಿಗಳೇ ಹೆಚ್ಚು ಎಂದ ಸಂಸ್ಥಾಪಕ
ಇತ್ತೀಚೆಗೆ ಯೂಸರ್ ಎಕ್ಸ್‌ಪೀರಿಯನ್ಸ್ (UX) ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಉದಾಹರಿಸಿ ಮಾತನಾಡಿದ ಅವರು, ಹೆಚ್ಚಿನ ಅಭ್ಯರ್ಥಿಗಳ ಅರ್ಜಿಗಳು AI ಮೂಲಕ ತಯಾರಿಸಲಾಗಿವೆ. ಅಲ್ಲದೆ ಅವುಗಳು ಕೇವಲ ತಾಂತ್ರಿಕತೆಯನ್ನು ಹೊಂದಿದ್ದು, ಅರ್ಜಿಯನ್ನು ಉತ್ತಮಗೊಳಿಸುವ ಕನಿಷ್ಠ ಪ್ರಯತ್ನವೂ ಕಂಡುಬಂದಿಲ್ಲವೆಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಗುಣಮಟ್ಟದ ಅಭ್ಯರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
35 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ನಡೆದ ಮೊದಲ ಹಂತದ ಮೌಲ್ಯಮಾಪನದಲ್ಲಿ ಬಹುತೇಕರು ಕಾಪಿ-ಪೇಸ್ಟ್ ಅಥವಾ AI ಆಧಾರಿತ ಉತ್ತರಗಳನ್ನು ಸಲ್ಲಿಸಿದ್ದರೆಂದು ಅವರು ಹೇಳಿದ್ದಾರೆ. ಸಂಶೋಧನೆ, ವೈಯಕ್ತಿಕ ಅಭಿಪ್ರಾಯ ಅಥವಾ ಕೆಲಸದ ಮೇಲೆ ಆಸಕ್ತಿ ತೋರಿದವರ ಸಂಖ್ಯೆ ಕಡಿಮೆ ಇರುವುದು ಸ್ಪಷ್ಟವಾಗಿ ಗೋಚರಿಸಿತು ಎಂದು ತಿಳಿಸಿದ್ದಾರೆ. ಈ 35 ಮಂದಿಯಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಪ್ರಾಮಾಣಿಕ ಪ್ರಯತ್ನ ತೋರಿದ್ದು, ಆತನನ್ನು ನೇಮಕ ಮಾಡಲಾಗಿದೆ. ಉಳಿದವರು ಮೂಲಭೂತ ಸಿದ್ಧತೆಯನ್ನೂ ತೋರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
I’m not saying this out of the blue – talk to anyone who’s hiring, and they’ll tell you the state. Too much noise, quality people are less.
We were hiring for a UX role. All we got in Round 1 (shortlisted from resumes) was AI slop: simple copy-paste, zero effort, zero research… https://t.co/7zJJH8eO1b
— Striver | Building takeUforward (@striver_79) March 19, 2026
ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, AI ಉಪಕರಣಗಳಿಂದ ಸಾಮಾನ್ಯ, ಒಂದೇ ಮಾದರಿಯ ಅರ್ಜಿಗಳು ಹೆಚ್ಚಾಗಿವೆ ಎಂದು ಹಲವರು ಒಪ್ಪಿಕೊಂಡಿದ್ದಾರೆ. ನಿಜವಾದ ಸಾಮರ್ಥ್ಯ ತೋರಿಸಲು ಇಂದಿನ ದಿನಗಳಲ್ಲಿ ಆಳವಾದ ಪರಿಶ್ರಮ ಮತ್ತು ವೈಯಕ್ತಿಕತೆ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಚಾಮರಾಜನಗರ, ಮಾರ್ಚ್ 21: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದ ಆತಂಕ ನಡುವೆ ಚಾಮರಾಜನಗರ ಜಿಲ್ಲೆಯಲ್ಲಿ ಪೆಟ್ರೋಲ್ ಕೊರತೆ ವದಂತಿ ಭಾರೀ ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ಪಟ್ಟಣಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂಬ ವದಂತಿ ಹಬ್ಬಿದ್ದು, ವಾಹನ ಸವಾರರು ಏಕಾಏಕಿ ಪೆಟ್ರೋಲ್ ಬಂಕ್‌ಗಳತ್ತ ಮುಗಿಬಿದ್ದರು. ಇದರಿಂದ ಹಲವು ಬಂಕ್‌ಗಳಲ್ಲಿ ಉದ್ದ ಸಾಲುಗಳು ಕಂಡುಬಂದವು. ಗ್ಯಾಸ್ ಕೊರತೆಯಂತೆಯೇ ಪೆಟ್ರೋಲ್ ಹಾಗೂ ಡೀಸೆಲ್‌ಗೂ ಸಮಸ್ಯೆ ಉಂಟಾಗಬಹುದು ಎಂಬ ಭಯ ಜನರಲ್ಲಿ ಹೆಚ್ಚಾಗಿದ್ದು, ಮುಂಜಾಗ್ರತೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿಸಲು ಜನರು ಹರಸಾಹಸ ಪಟ್ಟರು. ಕೆಲವು ಕಡೆಗಳಲ್ಲಿ ವಾಹನಗಳ ದೀರ್ಘ ಸಾಲುಗಳು ಟ್ರಾಫಿಕ್ ಸಮಸ್ಯೆಯನ್ನೂ ಉಂಟುಮಾಡಿದವು.
ಬಂಕ್ ಸಿಬ್ಬಂದಿ, ‘ಪೆಟ್ರೋಲ್ ಹಾಗೂ ಡೀಸೆಲ್ ಸಾಕಷ್ಟು ಲಭ್ಯವಿದೆ, ಯಾವುದೇ ಕೊರತೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರೂ, ಜನರು ಅದನ್ನು ನಂಬದೇ ಖರೀದಿಸಲು ಮುಂದಾದರು. ಇದರಿಂದ ಕೆಲ ಸಮಯ ತಾತ್ಕಾಲಿಕ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸಾಕಷ್ಟು ನಿರೀಕ್ಷೆಗಳೊಂದಿಗೆ ರಿಲೀಸ್ ಆಯಿತು. ಆದರೆ, ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿತ್ತು. ಈ ಚಿತ್ರದ ಮೊದಲ ದಿನದ ಕಲೆಕ್ಷನ್ 34.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಎರಡನೇ ದಿನ ಚಿತ್ರದ ಗಳಿಕೆ ತೀವ್ರವಾಗಿ ಕುಸಿದಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿದೆ. ಮುಂದಿನ ದಿನಗಳ ಕಲೆಕ್ಷನ್ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗೆ ಪವನ್ ಕಲ್ಯಾಣ್ ಹೀರೋ. ಅವರು ರಾಜಕೀಯಕ್ಕೆ ಸೇರಿದ್ದರಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತವು. ಆದರೆ, ಅವರು ಸಮಯ ಮಾಡಿಕೊಂಡು ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟರು. ಈಗ ಚಿತ್ರ ಮಾರ್ಚ್ 19ರಂದು ರಿಲೀಸ್ ಆಗಿದೆ. ಮೊದಲ ದಿನ ಸಿನಿಮಾ ಅಬ್ಬರಿಸಿತ್ತು. ಭಾರತದಲ್ಲಿ ಸುಮಾರು 35 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಎರಡನೇ ದಿನವಾದ ಶುಕ್ರವಾರ ಸಿನಿಮಾ ಕೇವಲ 9.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಈ ಚಿತ್ರ 4,607 ಶೋ ನೀಡಲಾಗಿತ್ತು. ಎರಡನೇ ದಿನ ಶೋ ಸಂಖ್ಯೆಯನ್ನು 3,447ಕ್ಕೆ ಇಳಿಸಲಾಗಿದೆ. ಇದು ‘ಧುರಂಧರ್ 2’ ಸಿನಿಮಾ ಎಫೆಕ್ಟ್ ಎಂದು ಹೇಳಲಾಗುತ್ತಾ ಇದೆ. ಶನಿವಾರ ಹಾಗೂ ಭಾನುವಾರ ಸಿನಿಮಾದ ಗಳಿಕೆ ಮೇಲೆ ಚಿತ್ರದ ಭವಿಷ್ಯ ನಿರ್ಧಾರ ಆಗಲಿದೆ.
ಬಹಳ ಸಮಯದಿಂದ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಕೆಲಸಗಳು ನಿಂತಿದ್ದವು. ಕೊನೆಗೆ ಸಮಯ ಮಾಡಿಕೊಂಡು ಸಿನಿಮಾದ ಶೂಟ್ನ ಮಾಡಿಕೊಟ್ಟರು ಪವನ್. ಈಗ ಸಿನಿಮಾ ಬಿಡುಗಡೆ ಆಗಿದೆ. ಆದರೆ, ಅಂದುಕೊಂಡ ಮಟ್ಟಕ್ಕೆ ಸಿನಿಮಾ ಗಮನ ಸೆಳೆಯುತ್ತಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.