IND vs NZ: ಸಚಿನ್ ದಾಖಲೆ ಮುರಿದರೂ ಇತಿಹಾಸ ಸೃಷ್ಟಿಸುವ ಅವಕಾಶ ಕೈಚೆಲ್ಲಿದ ವಿರಾಟ್ – Kannada News | Virat Kohli Breaks Sachin’s Record: Most ODI Runs vs New Zealand

ಒಂದು ವೇಳೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 50 ರನ್ ಗಳಿಸಿದ್ದರೆ, ಸತತ ಆರು ಏಕದಿನ ಇನ್ನಿಂಗ್ಸ್‌ಗಳಲ್ಲಿ 50+ ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಆದಾಗ್ಯೂ, ಕೊಹ್ಲಿ ಈ ಇತಿಹಾಸ ನಿರ್ಮಿಸುವ ಅವಕಾಶವನ್ನು ಕಳೆದುಕೊಂಡರು. Source link

Read More

ಆದಷ್ಟು ಬೇಗ ದೇಶ ಬಿಟ್ಟು ಹೊರಡಿ; ಇರಾನ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ, ಸಹಾಯವಾಣಿ ಸಂಖ್ಯೆ ಬಿಡುಗಡೆ – Kannada News | Indian embassy in Iran issues fresh advisory for nationals amid unrest issues helpline numbers

ನವದೆಹಲಿ, ಜನವರಿ 14: ಇರಾನ್‌ನಲ್ಲಿ ಪ್ರತಿಭಟನೆಗಳು (Iran Protests) ಉಲ್ಬಣಗೊಳ್ಳುತ್ತಿದ್ದಂತೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಹೊಸ ಸೂಚನೆಯನ್ನು ನೀಡಿದೆ. ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು, ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು ವಾಣಿಜ್ಯ ವಿಮಾನಗಳು ಸೇರಿದಂತೆ ತಮಗೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಕೂಡಲೇ ಇರಾನ್ ಬಿಟ್ಟು ಹೊರಡುವಂತೆ ಭಾರತೀಯ ರಾಯಭಾರ ಕಚೇರಿಯು ಸೂಚನೆ ನೀಡಿದೆ. ಇರಾನ್​ನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಯಭಾರ ಕಚೇರಿ ಈ ಸೂಚನೆ ನೀಡಿದೆ. ಇರಾನ್‌ನಲ್ಲಿರುವ ಎಲ್ಲಾ ಭಾರತೀಯ…

Read More

ಸಸ್ಯಕಾಶಿಯಲ್ಲಿ ಬಣ್ಣಬಣ್ಣದ ಹೂಗಳ ಚಿತ್ತಾರ: ಲಾಲ್‌ಬಾಗ್‌ನಲ್ಲಿ ‘ತೇಜಸ್ವಿ ವಿಸ್ಮಯ’ ಲೋಕ ಅನಾವರಣ – Kannada News | Bangaluru Lalbagh Flower Show 2026: Tejaswi Vismaya Theme, Flower Show Begins Today

ಗಣರಾಜ್ಯೋತ್ಸವ ಅಂಗವಾಗಿ ಇಂದಿನಿಂದ (ಜ.14) ಲಾಲ್​​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದೆ. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಆಧಾರಿತ “ತೇಜಸ್ವಿ ವಿಸ್ಮಯ” ಥೀಮ್‌ನಲ್ಲಿ ಈ ಬಾರಿ ಗಾಜಿನ ಮನೆ ಅಲಕೃತಗೊಂಡಿದೆ. ಚಂದದ ಹೂಗಳೊಂದಿಗೆ ಅಂದದ ಜೀವನಗಾಥೆ ಹೊತ್ತ ಫಲಪುಷ್ಪ ಪ್ರದರ್ಶನದ ಕಿರು ನೋಟ ಇಲ್ಲಿದೆ. ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜನೆಗೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ತೋಟಗಾರಿಕಾ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್ ಸಸಿಗೆ ನೀರು ಹಾಕುವ ಮೂಲಕ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ….

Read More

ಸತತವಾಗಿ 36 ಗಂಟೆ ಹನುಮಾನ್ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕಿದ ನಾಯಿ! – Kannada News | Dog Circles Hanuman Idol For 36 Hours in Bijnoor Watch Viral Video

ನವದೆಹಲಿ, ಜನವರಿ 14: ದೇವಸ್ಥಾನದ ಬಳಿ ಒಂದು ನಾಯಿ ಹನುಮಾನ್ ದೇವರ ವಿಗ್ರಹದ ಸುತ್ತ 36 ಗಂಟೆಗಳ ಕಾಲ ಸುತ್ತುತ್ತಲೇ ಇತ್ತು. ನಿರಂತರವಾಗಿ ಹನುಮಾನ್​ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಲೇ ಇದ್ದ ಆ ನಾಯಿಯನ್ನು ನೋಡಲು ಜನರು ಸಾಲಗಟ್ಟಿ ನಿಂತಿದ್ದರು. ಈ ದೃಶ್ಯವನ್ನು ಜನರು ಪವಾಡ ಎಂದು ಕರೆದಿದ್ದಾರೆ. ಉತ್ತರ ಪ್ರದೇಶದ ಬಿಜ್ನೋದಲ್ಲಿ ಕೊರೆಯುವ ಚಳಿಯಲ್ಲೂ ನಾಯಿ 36 ಗಂಟೆ ಪ್ರದಕ್ಷಿಣೆ ಹಾಕುತ್ತಲೇ ಇತ್ತು. ಕೆಲವರು ಆ ನಾಯಿಗೆ ಆರೋಗ್ಯ ಸಮಸ್ಯೆ ಇರಬಹುದು ಎಂದು ಕಳವಳ ವ್ಯಕ್ತಪಡಿಸಿ ಕಮೆಂಟ್…

Read More

Chanakya Niti: ತಪ್ಪಿಯೂ ಇಂತಹ ಜನರನ್ನು ನಿಮ್ಮ ಮನೆಗೆ ಆಹ್ವಾನಿಸಬೇಡಿ – Kannada News | Chanakya Niti: If you invite such people to your home, you may face trouble

ಸಂಬಂಧಿಕರು, ಸ್ನೇಹಿತರನ್ನು ಮನೆಗೆ ಆಹ್ವಾನಿಸುವುದು ಸಾಮಾನ್ಯ. ಹಬ್ಬ ಹರಿದಿನಗಳು ಅಥವಾ ಇನ್ಯಾವುದೇ ಕಾರ್ಯಕ್ರಮ ಇರುವ ಸಂದರ್ಭದಲ್ಲಿ ಒಂದಷ್ಟು ಜನರನ್ನು ಮನೆಗೆ ಆಹ್ವಾನಿಸುತ್ತೇವೆ. ಈ ರೀತಿ ಎಲ್ಲರನ್ನೂ ಆಹ್ವಾನಿಸುವುದು ಸರಿಯಲ್ಲ, ಕೆಲವರು ತಮ್ಮೊಂದಿಗೆ ವಿನಾಶವನ್ನೇ ಹೊತ್ತು ತರುತ್ತಾರೆ. ಅಂತಹವರಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು (Acharya Chanakya)  ಹೇಳಿದ್ದಾರೆ. ಹಾಗಿದ್ದರೆ  ಮುಂದಾಗುವ ಅಪಾಯಗಳನ್ನು ತಪ್ಪಿಸಲು ಯಾವ ರೀತಿಯ ಜನರನ್ನು ಮನೆಗೆ ಆಹ್ವಾನಿಸಬಾರದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ. ಇಂತಹ ಜನರನ್ನು ತಪ್ಪಿಯೂ ಮನೆಗೆ ಆಹ್ವಾನಿಸಬೇಡಿ: ಸ್ವಾರ್ಥಿ ಜನರು:…

Read More

ಲಕ್ಕುಂಡಿ ಸಿಕ್ಕ ನಿಧಿಗೆ ಇದೆ 300 ವರ್ಷಗಳ ಇತಿಹಾಸ, ಗ್ರಾಮಸ್ಥರಲ್ಲಿ ಶುರುವಾಯ್ತು ಹೊಸ ಆತಂಕ – Kannada News | Lakkundi Gold Treasure 300 year Old Says Gadag And villagers worried about treasure hunters

ಗದಗ, (ಜನವರಿ 14): ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ನಿಧಿ (Lakkundi Gold Treasure) ಈಗ ಭಾರಿ ಚರ್ಚೆ ಹುಟ್ಟುಹಾಕಿದ್ದು, ಈ ಚಿನ್ನದ ಹಿನ್ನೆಲೆಯ ರಹಸ್ಯ ಬಯಲಾಗಿದೆ. ಹೌದು…ಜಿಲ್ಲಾಡಳಿತ ವಶಕ್ಕೆ ಪಡೆದ ಚಿನ್ನವನ್ನು ಪರಿಶೀಲನೆ ನಡೆಸಿದಾಗ ಚಿನ್ನ ಪುರಾತನ ಕಾಲದ್ದು, ಕಲ್ಯಾಣ ಚಾಳುಕ್ಯರು, ಹಾಗೂ ವಿಜಯನಗರದ ಸಾಮ್ರಾಜ್ಯದ ಆಡಳಿತದ ವೇಳೆಯ ಚಿನ್ನ ಎನ್ನುವುದು ಬಹಿರಂಗವಾಗಿದೆ. ಇನ್ನು ಈ ಬಗ್ಗೆ ಟಿವಿ9ಗೆ ಗದಗ (Gadag) ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಮಾಹಿತಿ ನೀಡಿದ್ದು, ಸಿಕ್ಕಿರುವ ನಿಧಿ ವಿಜಯನಗರ ಸಾಮ್ರಾಜ್ಯ ಅಥವಾ ಚಾಲುಕ್ಯರ ಕಾಲದ್ದು….

Read More

ಅಶ್ವಿನಿ ಗೌಡ ಗೆಲ್ಲಿಸಲು 25 ಲಕ್ಷ ಪೇಮೆಂಟ್ ಆಗಿದ್ಯಾ? ಕರವೇ ಸದಸ್ಯರ ಖಡಕ್ ತಿರುಗೇಟು – Kannada News | Karave members dismiss the allegations of Ashwini Gowda payment to Bigg Boss Kannada Season 12

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ (Ashwini Gowda) ಅವರು ಫಿನಾಲೆ ತಲುಪಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಗೆಲ್ಲಿಸಲು 25 ಲಕ್ಷ ರೂಪಾಯಿ ಪೇಮೆಂಟ್ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆ ಆರೋಪಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ತಿರುಗೇಟು ನೀಡಿದ್ದಾರೆ. ‘ಕರವೇ ಅಧ್ಯಕ್ಷರಾದ ನಾರಾಯಣ ಗೌಡ ಅವರು ಮಗನ ಮದುವೆಯ ಕಾರ್ಡ್ ಕೊಡಲು ಸುದೀಪ್ ಮನೆಗೆ ಹೋಗಿದ್ದರು. ಅದನ್ನು ಗಿಲ್ಲಿ ಫ್ಯಾನ್ಸ್ ಈ ರೀತಿ ತಿರುಗಿಸಿ ಟ್ರೋಲ್…

Read More

ಅಲ್ಲು ಅರ್ಜುನ್ ಜೊತೆ ಹೊಸ ಸಿನಿಮಾ ಘೋಷಿಸಿದ ಮೈತ್ರಿ: ನಿರ್ದೇಶಕ ಯಾರು? – Kannada News | Mytri announce new movie with Allu Arjun, Lokesh Kanagaraj is directing

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ಮೂಲಕ ಅಲ್ಲು ಅರ್ಜುನ್ (Allu Arjun) ಅಂತರಾಷ್ಟ್ರೀಯ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರ ಸಿನಿಮಾಗಳಿಗೆ ಈಗ ಅಮೆರಿಕ, ಅರಬ್ ದೇಶಗಳಲ್ಲಿ ಮಾತ್ರವಲ್ಲದೆ, ರಷ್ಯಾ, ಜಪಾನ್, ಚೀನಾ ಇನ್ನೂ ಕೆಲವು ದೇಶಗಳಲ್ಲಿ ಬೇಡಿಕೆ ಇದೆ. ಅಲ್ಲು ಅರ್ಜುನ್ ಅವರ ಸ್ಟಾರ್ ಗಿರಿಯನ್ನು ಇಂಟರ್ನ್ಯಾಷನಲ್ ಲೆವೆಲ್​​ಗೆ ಕೊಂಡೊಯ್ದ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ ಇದೀಗ ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆಗೆ ಕೈಜೋಡಿಸಿದೆ. ಅಲ್ಲು ಅರ್ಜುನ್ ಜೊತೆಗೆ…

Read More

IND vs NZ: ರಾಹುಲ್ ತಮ್ಮ ಶತಕವನ್ನು ಈ ರೀತಿ ಆಚರಿಸುವುದೇಕೆ? ಇದರ ಹಿಂದಿದೆ ಕಾರಣ – Kannada News | KL Rahul’s Heroic Rajkot Century: Saves Team India, Viral Celebration for Daughter

ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗಲೆಲ್ಲ ತಂಡಕ್ಕೆ ನೆರವಾಗುವ ಆಟಗಾರರ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್​ ಕೂಡ ಒಬ್ಬರು. ಇದಕ್ಕೆ ಉದಾಹರಣೆ ಎಂಬಂತೆ ರಾಜ್‌ಕೋಟ್ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 112 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್​ಗೆ ಬಂದ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇದೀಗ ಶತಕದ ಬಳಿಕ ರಾಹುಲ್ ಮಾಡಿದ ಸಂಭ್ರಮಾಚರಣೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಕ್ಸರ್ ಬಾರಿಸುವ…

Read More

ವಿದೇಶದಿಂದ ಗುಟ್ಟಾಗಿ ಬಂದು ಅಮ್ಮನನ್ನೇ ಕೊಲೆ ಮಾಡಿದ ಮಗ! – Kannada News | Son returns from Abroad hides in cattle shed then kills his mother in Haryana

ನವದೆಹಲಿ, ಜನವರಿ 14: ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಮಹಿಳೆಯ ಕೊಲೆಯಾಗಿತ್ತು. ಈ ಕೊಲೆ (Murder Case) ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಏಕೆಂದರೆ ಎಷ್ಟೇ ತಲೆಕೆಡಿಸಿಕೊಂಡು ಹುಡುಕಾಟ ನಡೆಸಿದ್ದರೂ ಅವರಿಗೆ ಕೊಲೆಗಾರನ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಕೊನೆಗೂ ಈ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆದರೆ, ಆ ಮಹಿಳೆಯ ಕೊಲೆಗಾರ ಬೇರಾರೂ ಅಲ್ಲ, ಆಕೆಯ ಮಗನೇ ಎಂಬುದು ಅಚ್ಚರಿಯ ವಿಷಯ. ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಆ ಯುವಕ ಇದೀಗ ಕಂಬಿ ಎಣಿಸುತ್ತಿದ್ದಾನೆ. ಕೌಟುಂಬಿಕ ಉದ್ವಿಗ್ನತೆಯಿಂದಾಗಿ…

Read More