ಅಮೆರಿಕದ ಮಸೀದಿಯೊಳಗೆ ಮನಬಂದಂತೆ ಗುಂಡಿನ ದಾಳಿ, ಮೂವರು ಸಾವು, ಇಬ್ಬರು ಶಂಕಿತರು ಕೂಡ ಶವವಾಗಿ ಪತ್ತೆ – Kannada News | Shooting at Major Mosque in San Diego Leaves Three Dead
ಸ್ಯಾನ್ ಡಿಯಾಗೋ, ಮೇ 19: ಅಮೆರಿಕದ ಸ್ಯಾನ್ ಡಿಯಾಗೋದಲ್ಲಿರುವ ಇಸ್ಲಾಮಿಕ್ ಸೆಂಟರ್ ಮಸೀದಿ(Mosque)ಯೊಳಗೆ ಭೀಕರ ಗುಂಡಿನ ದಾಳಿ ನಡೆದಿದೆ. ಇಬ್ಬರು ಮಸೀದಿಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಮಸೀದಿಯ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಅಮಾಯಕರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇತ್ತ ಪೊಲೀಸರು ನಡೆಸಿದ ತಕ್ಷಣದ ಪ್ರತಿದಾಳಿಯಲ್ಲಿ ಇಬ್ಬರು ಶೂಟರ್ಗಳೂ ಸಹ ಸಾವನ್ನಪ್ಪಿದ್ದಾರೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ತಿಳಿಸಿದ್ದಾರೆ. ಈ ಇಸ್ಲಾಮಿಕ್ ಕೇಂದ್ರವು ಸ್ಯಾನ್ ಡಿಯಾಗೋ ಕೌಂಟಿಯಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿದ್ದು, ಇಲ್ಲಿ…