Headlines

CSK vs SRH: ಸಿಎಸ್​ಕೆ ಪ್ಲೇಆಫ್‌ ಕನಸಿಗೆ ಕೊಳ್ಳಿ ಇಟ್ಟ ಸನ್‌ರೈಸರ್ಸ್ ಹೈದರಾಬಾದ್ – Kannada News | IPL 2026: SRH Beats CSK, Secures Playoff Spot; Gujarat Also Qualifies

ಐಪಿಎಲ್ 2026 ರ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿದೆ. ಸಿಎಸ್​ಕೆಯ ತವರು ನೆಲವಾದ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಈ ಹೈವೋಲ್ಟೇಜ್ ಕದನಲ್ಲಿ ಸಿಎಸ್​ಕೆ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿದ ಸನ್‌ರೈಸರ್ಸ್ ಈ ಆವೃತ್ತಿಯಲ್ಲಿ 8ನೇ ಗೆಲುವು ದಾಖಲಿಸುವ ಮೂಲಕ 16 ಅಂಕಗಳೊಂದಿಗೆ ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಸನ್‌ರೈಸರ್ಸ್ ವಿರುದ್ಧ ಸೋತ ಸಿಎಸ್​ಕೆ ಪ್ಲೇಆಫ್‌ ರೇಸ್​ನಿಂದ ಭಾಗಶಃ ಹೊರಬಿದ್ದಿದೆ. ಸನ್‌ರೈಸರ್ಸ್ ತಂಡದ ಗೆಲುವಿನೊಂದಿಗೆ ಗುಜರಾತ್ ಕೂಡ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಈ…

Read More

IPL 2026: ‘ಈ ವರ್ಷವೂ ಆರ್‌ಸಿಬಿಯದ್ದೇ ಟ್ರೋಫಿ’; ಭವಿಷ್ಯ ನುಡಿದ ಸೆಹ್ವಾಗ್ – Kannada News | RCB IPL 2026 Playoffs: Sehwag Predicts Champions, GT Major Challenge Ahead

ಹಾಲಿ ಚಾಂಪಿಯನ್ ಆರ್​ಸಿಬಿ 2026 ರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮೊದಲ ತಂಡವಾಗಿ ಪ್ಲೇಆಫ್‌ಗೇರಿದೆ. ಆರ್​ಸಿಬಿ ಕಳೆದ ಐಪಿಎಲ್​ನಂತೆ ಈ ಐಪಿಎಲ್​ನಲ್ಲೂ ಎಲ್ಲಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಆರ್​ಸಿಬಿಯ ಸಾಂಘಿಕ ಹೋರಾಟವನ್ನು ವೀಕ್ಷಿಸಿರುವ ಹಲವಾರು ಮಾಜಿ ಕ್ರಿಕೆಟಿಗರು ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್ ಎನ್ನುತ್ತಿದ್ದಾರೆ. ಈ ರೀತಿಯಾಗಿ ಭವಿಷ್ಯ ನುಡಿದವರಲ್ಲಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು. ಆರ್‌ಸಿಬಿಯದ್ದೇ ಟ್ರೋಫಿ ಕ್ರಿಕ್‌ಬಜ್‌ನಲ್ಲಿ ಆರ್​ಸಿಬಿ ತಂಡದ ಪ್ರದರ್ಶನದ ಕುರಿತು…

Read More

ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು? – Kannada News | Kodagu: Dubare Elephant Camp Tragedy: Karnataka Forest Department Tightens Safety Measures

ಕೊಡಗು, ಮೇ 18: ದುಬಾರೆ ಆನೆ ಶಿಬಿರದಲ್ಲಿರುವ ಸಾಕಾನೆಗಳನ್ನ ನೋಡಲು ರಾಜ್ಯಮಾತ್ರವಲ್ಲ, ತಮಿಳುನಾಡು, ಕೇರಳದಿಂದಲೂ ಪ್ರವಾಸಿಗರು ಬರುತ್ತಾರೆ. ಹೀಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಂದು ಆನೆಗಳ ಕಾಳಗಕ್ಕೆ ಬಲಿ ಆಗಿದ್ದಾರೆ. ಚೆನ್ನೈ ಮೂಲದ ಜೋಯೆಲ್ ತನ್ನ ಪತ್ನಿ ತುಳಸಿ ಹಾಗೂ ಮೂರು ವರ್ಷದ ಮಗಳ ಜೊತೆ ಇಂದು ಬೆಳಗ್ಗೆ ದುಬಾರೆ ಶಿಬಿರಕ್ಕೆ ಬಂದಿದ್ದಾರೆ. ಈ ವೇಳೆ ಮಾರ್ತಾಂಡ ಆನೆ ಜತೆ ನಿಂತಿದ್ದ ದಂಪತಿ ಫೋಟೋ ತೆಗೆಸಿಕೊಳ್ತಿದ್ರು. ಆಗ ಮದವೇರಿದ ಕಂಜನ್ ಆನೆ ಅಲ್ಲಿಗೆ ಬಂದಿದೆ. ನೋಡ ನೋಡ್ತಿದ್ದಂತೆ…

Read More

ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ? – Kannada News | This is what Darshan said when DGP Alok Kumar visits Parappana Agrahara Jail

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರು ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇದ್ದಾರೆ. ಅಲ್ಲಿ ತಮಗೆ ಕೆಲವು ಸೌಕರ್ಯಗಳು ಸಿಗುತ್ತಿಲ್ಲ ಎಂದು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಸ್ವತಃ ದರ್ಶನ್ ಅವರ ಸೆಲ್​ಗೆ ಭೇಟಿ ನೀಡಿದಾಗ ಅವರು ತೊಂದರೆಗಳ ಬಗ್ಗೆ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಆ ಬಗ್ಗೆ ಟಿವಿ9ಗೆ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ‘ಮೇ 15ರಂದು ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಸಮಸ್ಯೆ…

Read More

ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ: ಬಂದ ಆದಾಯದಲ್ಲಿ 85.20 ಕೋಟಿ ರೂ.ವೆಚ್ಚ – Kannada News | Top 11 temples in Karnataka Kukke Subrahmanya earn Rs 602 crore in 2025 26, up Rs 45 cr year after year

ಮಂಗಳೂರು, (ಮೇ 18): ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ (Kukke Subrahmanya temple). ನಾಗದೋಷಕ್ಕೆ ಪರಿಹಾರ ನೀಡುವ ಅತ್ಯಂತ ಪವರ್ ಫುಲ್ ಕ್ಷೇತ್ರ. ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದ ಮೂಲೆ ಮೂಲೆಯಿಂದ ಭಕ್ತರು ಹರಿದು ಬರ್ತಾರೆ. ಈ ಪ್ರಸಿದ್ದ ಪುಣ್ಯಕ್ಷೇತ್ರ ಇದೀಗ ಮತ್ತೊಮ್ಮೆ ಆದಾಯದಲ್ಲಿ ಇತಿಹಾಸ ನಿರ್ಮಿಸಿದೆ. ಮುಜರಾಯಿ ಇಲಾಖೆಯ ಆಧೀನದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ 167 ಕೋಟಿ 89 ಲಕ್ಷ…

Read More

ಮಹಾರಾಷ್ಟ್ರದ ಪಲ್ಘಾರ್ ಹೆದ್ದಾರಿಯಲ್ಲಿ ಭೀಕರ ಅಪಘಾತ; 13 ಜನ ಸಾವು, ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ – Kannada News | 13 people died 20 injured in Maharashtras Palghar highway accident CM announces Rs 5 lakh aid

ಮುಂಬೈ, ಮೇ 18: ಮಹಾರಾಷ್ಟ್ರದ ಪಲ್ಘಾರ್‌ನಲ್ಲಿ ಇಂದು ಭೀಕರ ಅಪಘಾತ (Accident) ಸಂಭವಿಸಿದೆ. ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಮದುವೆಗೆ ಹೋಗುತ್ತಿದ್ದ ಮತ್ತೊಂದು ಸಣ್ಣ ಟ್ರಕ್‌ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ 13 ಜನರು ಸಾವನ್ನಪ್ಪಿದ್ದಾರೆ. ಕಾಸಾದ ಪ್ರದೇಶ ಪೊಲೀಸರ ಪ್ರಕಾರ, 40ಕ್ಕೂ ಹೆಚ್ಚು ಜನರು ಈ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಕಂಟೇನರ್ ಅಪಘಾತ ಸಂಭವಿಸಿ, ಟ್ರಕ್ ನಜ್ಜುಗುಜ್ಜಾಗಿದೆ. ಎರಡೂ ವಾಹನಗಳು ಪಲ್ಟಿಯಾದ ಕಾರಣದಿಂದ ಅನೇಕ ಪ್ರಯಾಣಿಕರು ಅಡಿಗೆ ಸಿಲುಕಿಕೊಂಡರು. ಈ ಘಟನೆಯ ನಂತರ ಪೊಲೀಸರು…

Read More

ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ? ಪರಮೇಶ್ವರ್ ಹೇಳಿದ್ದಿಷ್ಟು – Kannada News | Tumakur: Will Congress Sadhana Samavesh Enter the Guinness Book of Records Here’s What G. Parameshwara Said

ತುಮಕೂರು, ಮೇ 18: ಕಾಂಗ್ರೆಸ್ ಸರ್ಕಾರದ 3ನೇ ವರ್ಷದ ಸಾಧನಾ ಸಮಾವೇಶವು ಮೇ 19 ಬೆಳಗ್ಗೆ 11 ಗಂಟೆಗೆ ತುಮಕೂರಿನ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿರುವುದು ಹಾಗೂ ರಾಜ್ಯದಲ್ಲಿ 13.5 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಿರುವುದು ಸರ್ಕಾರದ ಪ್ರಮುಖ ಸಾಧನೆ ಎಂದು ತಿಳಿಸಿದರು. ತುಮಕೂರು ಜಿಲ್ಲೆಯೊಂದರಲ್ಲೇ 1,52,492 ಜನರಿಗೆ ಹಕ್ಕುಪತ್ರ ನೀಡಲಾಗಿದ್ದು, ಆ…

Read More

ದುಬಾರೆಯಲ್ಲಿ ಆನೆಗಳ ಕಾದಾಟದಲ್ಲಿ ಮಹಿಳೆ ಸಾವು ಬೆನ್ನಲ್ಲೇ ಪ್ರವಾಸಿಗರಿಗೆ ಮಾರ್ಗಸೂಚಿ ಪ್ರಕಟ – Kannada News | Karnataka Forest Department New Guidelines for Tourists after Dubare Camp Tragedy

ಬೆಂಗಳೂರು, (ಮೇ 18): ಕೊಡಗಿನ (Kodagu) ಪ್ರವಾಸಿ ತಾಣ ದುಬಾರಿ ಆನೆ ಶಿಬಿರದಲ್ಲಿ ಆನೆಗಳ (elephants) ಕಾದಾಟದಲ್ಲಿ ಪ್ರವಾಸಿ ಮಹಿಳೆ (Tourist Woman) ಸಿಲುಕಿ ಸಾವನ್ನಪ್ಪಿದ್ದಾಳೆ. ಈ ಆಘಾತಕಾರಿ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ, ಇನ್ಮುಂದೆ ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹೌದು…ಕರ್ನಾಟಕದಲ್ಲಿರುವ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸುವಂತೆ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ…

Read More

IPL 2026: ಒಂದೇ ಒಂದು ಕ್ಯಾಚ್ ಹಿಡಿದಿಲ್ಲ; ವೈಭವ್ ಫೀಲ್ಡಿಂಗ್ ಬಗ್ಗೆ ಕೈಫ್ ಕಳವಳ – Kannada News | Vaibhav Suryavanshi’s IPL 2026 Dilemma: Batting Brilliance vs. Fielding Woes – Kaif Questions RR Star

ಐಪಿಎಲ್ 2026 (IPL 2026) ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಬ್ಯಾಟಿಂಗ್‌ ಬೆನ್ನೆಲುಬಾಗಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ರಾಜಸ್ಥಾನ್ ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ವೈಭವ್ ಅವರ ಫೀಲ್ಡಿಂಗ್‌ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರಶ್ನೆಗಳನ್ನು ಎತ್ತಿದ್ದಾರೆ. ವಾಸ್ತವವಾಗಿ ಸೀಸನ್ ಆರಂಭದಲ್ಲಿ ವೈಭವ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲಾಗುತ್ತಿತ್ತು. ಆದರೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡಿದ್ದ ವೈಭವ್…

Read More

ಪಶ್ಚಿಮ ಏಷ್ಯಾ ಉದ್ವಿಗ್ನತೆಯ ನಡುವೆ ಸೌದಿ ಅರೇಬಿಯಾಕ್ಕೆ 16 ಜೆಟ್, 8,000 ಸೈನಿಕರನ್ನು ಕಳುಹಿಸಿದ ಪಾಕಿಸ್ತಾನ – Kannada News | Pakistan Sends 8,000 Troops, 16 Jets To Saudi arabia Amid West Asia war

ಇಸ್ಲಮಾಬಾದ್, ಮೇ 18: ಇರಾನ್ ಯುದ್ಧದಲ್ಲಿ (Iran War) ಸೌದಿ ಅರೇಬಿಯಾವನ್ನು ರಕ್ಷಿಸಲು ಪಾಕಿಸ್ತಾನ ತನ್ನ ಬೃಹತ್ ಪಡೆಗಳನ್ನು ನಿಯೋಜಿಸಿದೆ. ರಿಯಾದ್ ಜೊತೆಗಿನ ರಕ್ಷಣಾ ಒಪ್ಪಂದದಡಿಯಲ್ಲಿ ಪಾಕಿಸ್ತಾನವು (Pakistan) 16 ಯುದ್ಧ ವಿಮಾನಗಳು, ಒಂದು ರಕ್ಷಣಾ ವ್ಯವಸ್ಥೆ, 50 ಡ್ರೋನ್‌ಗಳು ಮತ್ತು 8,000 ಸೈನಿಕರನ್ನು ಸೌದಿ ಅರೇಬಿಯಾಕ್ಕೆ ನಿಯೋಜಿಸಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನಿನ ದಾಳಿಯಿಂದ ರಕ್ಷಿಸಿಕೊಳ್ಳಲು ಪಾಕಿಸ್ತಾನ ಸೌದಿ ಅರೇಬಿಯಾಕ್ಕೆ 8,000 ಸೈನಿಕರನ್ನು ನಿಯೋಜಿಸಿದೆ….

Read More