CSK vs SRH: ಸಿಎಸ್ಕೆ ಪ್ಲೇಆಫ್ ಕನಸಿಗೆ ಕೊಳ್ಳಿ ಇಟ್ಟ ಸನ್ರೈಸರ್ಸ್ ಹೈದರಾಬಾದ್ – Kannada News | IPL 2026: SRH Beats CSK, Secures Playoff Spot; Gujarat Also Qualifies
ಐಪಿಎಲ್ 2026 ರ ಪ್ಲೇಆಫ್ನಲ್ಲಿ ಸ್ಥಾನ ಪಡೆಯುವಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿದೆ. ಸಿಎಸ್ಕೆಯ ತವರು ನೆಲವಾದ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಈ ಹೈವೋಲ್ಟೇಜ್ ಕದನಲ್ಲಿ ಸಿಎಸ್ಕೆ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದ ಸನ್ರೈಸರ್ಸ್ ಈ ಆವೃತ್ತಿಯಲ್ಲಿ 8ನೇ ಗೆಲುವು ದಾಖಲಿಸುವ ಮೂಲಕ 16 ಅಂಕಗಳೊಂದಿಗೆ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಸನ್ರೈಸರ್ಸ್ ವಿರುದ್ಧ ಸೋತ ಸಿಎಸ್ಕೆ ಪ್ಲೇಆಫ್ ರೇಸ್ನಿಂದ ಭಾಗಶಃ ಹೊರಬಿದ್ದಿದೆ. ಸನ್ರೈಸರ್ಸ್ ತಂಡದ ಗೆಲುವಿನೊಂದಿಗೆ ಗುಜರಾತ್ ಕೂಡ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಈ…