Headlines

Hamsa Mahapurusha Yoga: 12 ವರ್ಷಗಳ ನಂತರ ಗುರು-ಹಂಸ ಮಹಾ ಪುರುಷ ರಾಜಯೋಗ; ಈ 3 ರಾಶಿಗೆ ಅದೃಷ್ಟದ ಸುರಿಮಳೆ – Kannada News | Hamsa Mahapurusha Yoga: Jupiter Transit Blesses 3 Zodiacs with Immense Luck and Success

12 ವರ್ಷಗಳ ನಂತರ, ಗುರುವಿನ ಸಂಚಾರದಿಂದಾಗಿ, ಹಂಸ ಮಹಾ ಪುರುಷ ಯೋಗವು ರೂಪುಗೊಳ್ಳಲಿದೆ. ಇದರೊಂದಿಗೆ, ಮೂರು ರಾಶಿಗಳ ಜನರು ಹೆಚ್ಚಿನ ಅದೃಷ್ಟವನ್ನು ಪಡೆಯಲಿದ್ದಾರೆ. ಅವರು ಕೈಗೊಳ್ಳುವ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ಜೂನ್ 2026 ರಿಂದ ಈ ಯೋಗವು ಹೆಚ್ಚು ಸಕ್ರಿಯವಾಗಲಿದೆ. ಹನ್ನೆರಡು ರಾಶಿಗಳ ಪೈಕಿ ಆ ಮೂರು ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಹಂಸ ಮಹಾಪುರುಷ ಯೋಗವು ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹದಿಂದ ರೂಪುಗೊಳ್ಳುವ ಒಂದು ಶಕ್ತಿಶಾಲಿ ರಾಜಯೋಗವಾಗಿದ್ದು, ಗುರುವು ತನ್ನ…

Read More

IND vs NZ: ಸಂಕಷ್ಟದಲ್ಲಿದ್ದ ತಂಡಕ್ಕೆ ಅಜೇಯ ಶತಕದ ಮೂಲಕ ಆಸರೆಯಾದ ಕೆಎಲ್ ರಾಹುಲ್ – Kannada News | Rahul’s Unbeaten 112 Rescues India in 2nd ODI vs NZ | Rajkot Match

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೆ ಪ್ರಮುಖ ಆಟಗಾರರ ವಿಕೆಟ್ ಪತನ ಆಘಾತವನ್ನುಂಟು ಮಾಡಿತ್ತು. ಆದರೆ ಈ ಪಂದ್ಯದಲ್ಲಿ ತಂಡದ ಪರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ರಾಹುಲ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು. ಕೊನೆಯವರೆಗೂ ಅಜೇಯರಾಗಿ…

Read More

ಬೆಳಗಾವಿಯಲ್ಲಿ ಶ್ವಾನಗಳ ಅಟ್ಟಹಾಸ: ಒಂದೇ ವರ್ಷದಲ್ಲಿ 10 ಜನರನ್ನು ಬಲಿ ಪಡೆದ ಬೀದಿನಾಯಿಗಳು – Kannada News | Belagavi Dog Menace Escalates: 21K Bites, 10 Deaths in a Year, Public Outcry

ಬೆಳಗಾವಿ, ಜನವರಿ 14: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಬೀದಿ ನಾಯಿಗಳ (Stray Dog) ಅಟ್ಟಹಾಸ ಜೋರಾಗಿದೆ. ಮಕ್ಕಳ ಮೇಲೆ ನಾಯಿಗಳ ದಾಳಿ ಮುಂದುವರೆದಿದ್ದು, ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನೊಂದು ಕಡೆ ಒಂದು ವರ್ಷದ ಅವಧಿಯಲ್ಲಿ ನಾಯಿ ಕಡಿತಕ್ಕೆ 10 ಜನ ಬಲಿಯಾಗಿದ್ದು, ಎಲ್ಲರಲ್ಲಿ ಆತಂಕ ಮೂಡಿಸಿದೆ. ಇನ್ನೂ ಮಹಾನಗರ ಪಾಲಿಕೆಯಲ್ಲಿ ನಾಯಿ ಹಿಡಿಯುವ ಚರ್ಚೆ ಕೂಡ ನಡೆದಿದೆ. ಬೀದಿ ನಾಯಿಗೆ ನಲುಗಿದ ಜನರು  ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ…

Read More

BOM Recruitment 2026: ಬ್ಯಾಂಕ್ ಆಫ್ ಮಹಾರಾಷ್ಟ್ರ 600 ಅಪ್ರೆಂಟಿಸ್ ನೇಮಕಾತಿ; ಪದವೀಧರರು ಅರ್ಹರು – Kannada News | Bank of Maharashtra Apprentice Recruitment 2026: Apply for 600 Posts Online

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡುವ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಗುಡ್​​ ನ್ಯೂಸ್​. ಬ್ಯಾಂಕ್ ಆಫ್ ಮಹಾರಾಷ್ಟ್ರ 600 ಅಪ್ರೆಂಟಿಸ್ ಹುದ್ದೆಗಳನ್ನು ಘೋಷಿಸಿದೆ. ಒಂದು ಸಣ್ಣ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜನವರಿ 15 ರಿಂದ ಪ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಪ್ರೆಂಟಿಸ್‌ಶಿಪ್ ಎಂದರೇನು? ಅಪ್ರೆಂಟಿಸ್‌ಶಿಪ್ ಎನ್ನುವುದು ಒಂದು ರೀತಿಯ ತರಬೇತಿಯಾಗಿದ್ದು, ಇದರಲ್ಲಿ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ತಂತ್ರಗಳನ್ನು ಕಲಿಯುವುದು ಒಳಗೊಂಡಿರುತ್ತದೆ. ಇದು…

Read More

ಉಗುರು ಕಚ್ಚುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | Risks of Biting Nails with Teeth

ಉಗುರು ಕಚ್ಚುವುದು (Biting Nails) ಸಾಮಾನ್ಯ. ಆದರೆ ಇದು ಆರೋಗ್ಯಕ್ಕೆ ಬಹಳ ಹಾನಿಕಾರಕ ಅಭ್ಯಾಸ ಎಂಬುದು ನಿಮಗೆ ತಿಳಿದಿದೆಯೇ, ಹೌದು, ಇದು ಒತ್ತಡ, ಆತಂಕ ಅಥವಾ ಬೇಸರದಿಂದ ಪ್ರಾರಂಭವಾಗುತ್ತದೆ. ಅನೇಕರು ಇದನ್ನು ಸಣ್ಣ ಅಭ್ಯಾಸವೆಂದು ನಿರ್ಲಕ್ಷಿಸುತ್ತಾರೆ, ಆದರೆ ಕಾಲಾನಂತರದಲ್ಲಿ ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಉಗುರು ಕಚ್ಚುವುದರಿಂದ ಅದರಲ್ಲಿನ ಕೊಳಕು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ನೇರವಾಗಿ ದೇಹವನ್ನು ಪ್ರವೇಶಿಸುತ್ತದೆ. ಇದು ಬಾಯಿ, ಹೊಟ್ಟೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು…

Read More

ದೇಗುಲಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಹೆಣವಾಗಿ ಪತ್ತೆ: ಪ್ರಾಣಿ ದಾಳಿಯೋ? ಕೊಲೆಯೋ? – Kannada News | Beltangady Teen Found Dead in Pond; Murder Suspected

ಮಂಗಳೂರು, ಜನವರಿ 14: ಧನುರ್ಮಾಸ ಹಿನ್ನೆಲೆ ದೇಗುಲಕ್ಕೆಂದು ಮುಜಾನೆಯೇ ಮನೆಯಿಂದ ಹೊರಟಿದ್ದ 9ನೇ ತರಗತಿಯ ಬಾಲಕನೊಬ್ಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಸುಮಂತ್​​ (15) ಮೃತ ದುರ್ದೈವಿಯಾಗಿದ್ದು, ಬಾಲಕನ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಕುವೆಟ್ಟು ಸಮೀಪದ ಸಂಬೋಳ್ಯ ಬರಮೇಲು ನಿವಾಸಿಯಾದ ಸುಬ್ರಹ್ಮಣ್ಯ ನಾಯಕ್ ಅವರ ಮಗ ಸುಮಂತ್​​ ಧನುರ್ಮಾಸದ ಹಿನ್ನಲೆಯಲ್ಲಿ ಬೆಳಗ್ಗೆ…

Read More

III Recruitment 2026: ನಿವೃತ್ತಿಯ ನಂತರವೂ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಸುವರ್ಣವಕಾಶ – Kannada News | Retired Professionals: III Faculty Jobs Re enter Insurance Sector Career!

ನಿವೃತ್ತಿಯ ನಂತರ ಮನೆಯಲ್ಲಿ ಸಮಯ ಕಳೆಯುವುದು ನಿಮಗೆ ಕಷ್ಟವಾಗಿದ್ದರೆ, ನೀವು ಮತ್ತೆ ಕೆಲಸ ಮಾಡಲು ಪ್ರಾರಂಭಿಸಬಹುದು. ಭಾರತೀಯ ವಿಮಾ ಸಂಸ್ಥೆ (III) ನಿಮಗೊಂದು ಅವಕಾಶವನ್ನು ನೀಡುತ್ತಿದೆ. ನಿವೃತ್ತ ಉದ್ಯೋಗಿಗಳಿಗಾಗಿ ವಿಮಾ ಸಂಸ್ಥೆಯು ಅಧ್ಯಾಪಕರ ಹುದ್ದೆಗಳನ್ನು ಪ್ರಕಟಿಸಿದೆ. ನೀವು ಅರ್ಹರಾಗಿದ್ದರೆ, ನೀವು ಈ ನೇಮಕಾತಿಗೆ ಸಹ ಅರ್ಜಿ ಸಲ್ಲಿಸಬಹುದು. ಭಾರತೀಯ ವಿಮಾ ಸಂಸ್ಥೆಯು ತನ್ನ ಕೋಲ್ಕತ್ತಾ ಕಚೇರಿಗೆ ಜನರಲ್ ವಿಮಾ ಫ್ಯಾಕಲ್ಟಿ ಹುದ್ದೆಯನ್ನು ಮತ್ತು ತನ್ನ ಮುಂಬೈ ಕಚೇರಿಗೆ ಸಹಾಯಕ ಪ್ರಾಧ್ಯಾಪಕ / ಫ್ಯಾಕಲ್ಟಿ ಹುದ್ದೆಯನ್ನು ಹುಡುಕುತ್ತಿದೆ ….

Read More

‘ಡಿಯರ್ ಹಸ್ಬೆಂಡ್’ ಸಿನಿಮಾಗೆ ಸಿಕ್ತು ಕಿಚ್ಚ ಸುದೀಪ್ ಬೆಂಬಲ; ಟೈಟಲ್ ಟೀಸರ್ ನೋಡಿ.. – Kannada News | Kichcha Sudeep releases Dear Husband Kannada movie Title Teaser

ಟೈಟಲ್ ಟೀಸರ್ ಮೂಲಕ ‘ಡಿಯರ್ ಹಸ್ಬೆಂಡ್’ ಸಿನಿಮಾ ಗಮನ ಸೆಳೆದಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಇತ್ತೀಚೆಗೆ ಬೆಂಗಳೂರಿನ ‘ಫಿನಿಕ್ಸ್ ಮಾಲ್ ಆಫ್ ಏಷ್ಯಾ’ದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ‘ಜಿ9 ಕಮ್ಯುನಿಕೇಶನ್ ಆ್ಯಂಡ್ ಮೀಡಿಯಾ’ ಹಾಗೂ ‘ನಿರಂತರ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಗುರುರಾಜ ಕುಲಕರ್ಣಿ (ನಾಡಗೌಡ) ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ‘ಡಿಯರ್ ಹಸ್ಬೆಂಡ್’ (Dear Husband) ಚಿತ್ರದಲ್ಲಿ ಸೂರಜ್ ಗೌಡ, ಶರಣ್ಯಾ…

Read More

ಮನೆಯಲ್ಲಿ ಹಲ್ಲಿಗಳಿದ್ದರೆ ತುಂಬಾ ಒಳ್ಳೆಯದಂತೆ; ಯಾಕೆ ಗೊತ್ತಾ ? – Kannada News | Do you know what are the benefits of having lizards at home?

ಹಲ್ಲಿಗಳ (lizards) ಕಾಟ ಇಲ್ಲದಿರುವ ಮನೆಯೇ ಇಲ್ಲ. ಮನೆಯ ಗೋಡೆಗಳ ಮೇಲೆ ಇವುಗಳ ಓಡಾಟ ಇದ್ದೇ ಇರುತ್ತದೆ. ಅನೇಕರು ಈ ಪುಟ್ಟ ಜೀವಿಯನ್ನು ಕಂಡು ಸಿಕ್ಕಾಪಟ್ಟೆ ಭಯಪಡುತ್ತಾರೆ. ಅದಕ್ಕಾಗಿಯೇ ಈ ಹಲ್ಲಿಗಳನ್ನು ಓಡಿಸಲು ಹಲವು ಸರ್ಕಸ್‌ಗಳನ್ನು ಮಾಡುತ್ತಾರೆ.  ಆದ್ರೆ ಈ ರೀತಿ ಹಲ್ಲಿಗಳಲ್ಲಿಗೆ ಭಯ ಪಡುವ ಅಥವಾ ಅವುಗಳನ್ನು ಓಡಿಸುವ ಅವಶ್ಯಕತೆಯೇ ಇಲ್ಲ. ಅವುಗಳು ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯಂದೆ. ಹೌದು ಅವು ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡುತ್ತವೆ. ಹಲ್ಲಿ ಮನೆಯಲ್ಲಿದ್ದರೆ ಏನೆಲ್ಲಾ…

Read More

ಬಿಗ್​​ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್: ಯಾರು ಹೊರಕ್ಕೆ? – Kannada News | Bigg Boss Kannada season 12: Mid week eviction video

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ನಡೆಯುತ್ತಿದೆ. ಫಿನಾಲೆ ವಾರದಲ್ಲಿ ಮಜಾ, ಮೋಜು ಮಸ್ತಿಗಳ ಜೊತೆಗೆ ಮಿಡ್ ವೀಕ್ ಎಲಿಮಿನೇಷನ್ ಇದ್ದೇ ಇರುತ್ತದೆ. ಪ್ರಸ್ತುತ ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳಿದ್ದು, ಇವರಲ್ಲಿ ಒಬ್ಬ ಸ್ಪರ್ಧಿ ಫಿನಾಲೆ ವೇದಿಕೆ ಏರುವ ಮುಂಚೆಯೇ ಮನೆಯಿಂದ ನಿರ್ಗಮಿಸಲಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್​​ಗೆ ಬಿಗ್​​ಬಾಸ್ ಚಾನಲೆ ನೀಡಿದ್ದಾರೆ. ಮನೆಯ ಎಲ್ಲ ಸದಸ್ಯರು ಆಕ್ಟಿವಿಟಿ ರೂಂನಲ್ಲಿ ಒಟ್ಟಿಗೆ ಸೇರಿದ್ದು, ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಹೊರಗೆ ಕಳಿಸಲಾಗಿದೆ. ಈ ಹೊರಗೆ ಕಳಿಸಿದವರಲ್ಲಿ…

Read More