Headlines

ತೀವ್ರ ಸ್ವರೂಪ ಪಡೆದ ಕರ್ನಾಟಕ ಯೂತ್ ಕಾಂಗ್ರೆಸ್​ ಗಲಾಟೆ: ಅಧ್ಯಕ್ಷ ವಿರುದ್ಧ ಗಂಭೀರ ಆರೋಪ – Kannada News | Karnataka Youth Congress Row: Deepika Reddy major allegations Against President Manjunath Gowda

ಬೆಂಗಳೂರು, (ಮೇ 18): ಕರ್ನಾಟಕ ಯುವ ಕಾಂಗ್ರೆಸ್​​​ನಲ್ಲಿ (Karnataka Youth Congress) ರಾಜಕೀಯ ಪ್ರಹಸನಗಳು ನಡೆಯುತ್ತಿವೆ. ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನ ವಜಾ ಮಾಡಿರುವುದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಪರಸ್ಪರ ಕೈ- ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಹೌದು…ಕೆಪಿಸಿಸಿ (KPCC) ಕಚೇರಿಯಲ್ಲಿಂದು ನೀಟ್​​​ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಭಟನೆ ನಡೆಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ (Manjunath Gowda) ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ…

Read More

ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು – Kannada News | Dubare Elephant Camp Tragedy: Tourist Killed in Kodagu as Elephants Fight

ಸಾಕಾನೆಗಳ ಕಾದಾಟದ ವೇಳೆ ಮಹಿಳೆ ಸಾವು ಮಡಿಕೇರಿ, ಮೇ 18: ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಶಿಬಿರದಲ್ಲಿ ನಡೆದಿದೆ. ಒಂದು ಆನೆ ಕೊಂಬಿನಿಂದ ತಿವಿದ ಪರಿಣಾಮ ಮತ್ತೊಂದು ಆನೆ ನೆಲಕ್ಕುರಿಳಿದೆ. ಈ ವೇಳೆ ಅಲ್ಲೇ ಇದ್ದ ಮಹಿಳೆ ಆನೆಯಡಿ ಸಿಲುಕಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಮೃತರನ್ನು ಚೆನ್ನೈ ಮೂಲದ ಜಿನ್ಶು(33)…

Read More

ವಿಚ್ಛೇದನದ ಬಳಿಕ ಮೌನಿ ರಾಯ್​​​ಗೆ ಸಿಕ್ಕ ಜೀವನಾಂಶ ಎಷ್ಟು? ಮಾಜಿ ಪತಿ ಹೇಳಿದ್ದಿಷ್ಟು – Kannada News | Mouni Roy Divorce: Suraj Nambiar Denies Alimony, Third Party Rumors and Confirms Separation

ಭಾರತ ಮೂಲದ ದುಬೈ ಉದ್ಯಮಿ ಸೂರಜ್ ನಂಬಿಯಾರ್ ಹಾಗೂ ಬಾಲಿವುಡ್ ನಟಿ ಮೌನಿ ರಾಯ್ ಇಬ್ಬರೂ ಡಿವೋರ್ಸ್ ಪಡೆದಿದ್ದಾರೆ. ಇಬ್ಬರ ಮಧ್ಯೆ ಮೂರನೇ ವ್ಯಕ್ತಿ ಎಂಟ್ರಿ ಆಗಿರುವುದೇ ಡಿವೋರ್ಸ್​​ಗೆ ಕಾರಣ ಎಂಬ ವದಂತಿ ಸೃಷ್ಟಿ ಆಗಿತ್ತು. ಅಲ್ಲದೆ, ನಟಿಗೆ ಸಾಕಷ್ಟು ಜೀವನಾಂಶ ಸಿಕ್ಕಿದೆ ಎಂದು ಕೂಡ ಹೇಳಲಾಗಿತ್ತು. ಈ ಎಲ್ಲಾ ವದಂತಿಗೆ ಸೂರಜ್ ನಂಬಿಯಾರ್ ಸ್ಪಷ್ಟನೆ ನೀಡಿದ್ದಾರೆ. ತಮ್ಮಿಬ್ಬರ ವಿಚ್ಛೇದನದ ಕುರಿತು ವರದಿಯಾಗುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪರಸ್ಪರ…

Read More

ಶಾಲಾ-ಕಾಲೇಜು ಆರಂಭಕ್ಕೂ ಮುನ್ನ ಪೋಷಕರಿಗೆ ಡಬಲ್ ಶಾಕ್! – Kannada News | Karnataka Parents Face Double Shock: School Fees and Bus Fares Due to Fuel Prices

ಶಾಲಾ ವಾಹನಗಳ ದರ ಏರಿಕೆಗೆ ನಿರ್ಧಾರ (ಎಐ ಚಿತ್ರ)Image Credit source: tv9 kannada ಬೆಂಗಳೂರು, ಮೇ 18: ಗಲ್ಫ್​ ಯುದ್ಧದ ಪರಿಣಾಮ ಇದೀಗ ರಾಜ್ಯದ (Karnataka) ಪೋಷಕರಿಗೂ (Parents) ತಟ್ಟಿದೆ. ಹೇಗೆ ಅಂದರೆ ಈ ವರ್ಷ ಖಾಸಗಿ ಶಾಲೆಗಳು ಈಗಾಗಲೇ ಶೇ.10ರಷ್ಟು ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿವೆ. ಈ ಮಧ್ಯೆ ಇದೀಗ ಶಾಲಾ ಬಸ್ ಮತ್ತು ವ್ಯಾನ್ ದರ ಏರಿಕೆಗೆ (School van fare) ಮುಂದಾಗಿವೆ. ಹೀಗಾಗಿ ಶಾಲೆಗಳು ಆರಂಭಕ್ಕೂ ಮುನ್ನವೇ ಪೋಷಕರಿಗೆ ಡಬಲ್ ಡಬಲ್​…

Read More

ಬ್ರಾಹ್ಮಣರ ಬಗ್ಗೆ ಅನುರಾಗ್ ಕಶ್ಯಪ್ ಅವಹೇಳನಕಾರಿ ಹೇಳಿಕೆ: ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ – Kannada News | Anurag Kashyap legal trouble Surat Court orders FIR Brahmin Community Remarks

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಸಮುದಾಯದ (Brahmin Community) ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಟ ಅನುರಾಗ್ ಕಶ್ಯಪ್ (Anurag Kashyap) ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನುರಾಗ್ ಕಶ್ಯಪ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಗುಜರಾತ್‌ನ ಸೂರತ್ ನ್ಯಾಯಾಲಯವು ಪೊಲೀಸರಿಗೆ ಮಹತ್ವದ ಆದೇಶ ನೀಡಿದೆ. ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಸಾರ್ವಜನಿಕ ಶಾಂತಿಗೆ ಭಂಗ ತರುವುದು, ಉದ್ದೇಶಪೂರ್ವಕ ಅವಮಾನ ಮತ್ತು ದಾರಿ ತಪ್ಪಿಸುವ ಮಾಹಿತಿ ಹರಡುವಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳ…

Read More

ಬೆಂಗಳೂರಲ್ಲಿ ಲೇಡಿ ಡಾನ್ ಹಾವಳಿ? ರಿಯಲ್ ಎಸ್ಟೇಟ್ ಉದ್ಯಮಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಮಹಿಳೆ – Kannada News | Bengaluru Real Estate Extortion Case Woman Posing as Youth Wing Chief Threatens Businessman for Rs 10 Lakh Huphta

ಬೆಂಗಳೂರು, ಮೇ 18: ಮಹಿಳೆಯೊಬ್ಬಳು ತಾನು ಸಂಘಟನೆಯೊಂದರ ಪ್ರಮುಖ ನಾಯಕಿ ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕಚೇರಿಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಗೀತ ರಾಮ್ ಎಂಬ ಮಹಿಳೆ ಹಾಗೂ ಆಕೆಯೊಂದಿಗೆ ಬಂದಿದ್ದ ಇಬ್ಬರು ಪುರುಷರು ಸೇರಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ ಈ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿರುವ ವೆಂಕಟರಾಜು…

Read More

ಕೊಟ್ಟಿರೋ 11 ಲಕ್ಷ ರೂ. ಸ್ಕಾರ್ಪಿಯೋ ಕಾರು ಸಾಕಾಗಿಲ್ಲ, ಹೆಚ್ಚು ಹಣ ತರುವಂತೆ ಕಿರುಕುಳ, ಮಹಡಿಯಿಂದ ಬಿದ್ದು ಮಹಿಳೆ ಸಾವು – Kannada News | Family Raises Dowry Harassment Allegations After Greater Noida Woman Found Dead

ನೋಯ್ಡಾ, ಮೇ 18: ಮಗಳ ಮದುವೆ(Marriage)ಗಾಗಿ ಆಕೆಯ ತಂದೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಕೇಳಿದ್ದೆಲ್ಲವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದರು. ಆದರೆ ವರದಕ್ಷಿಣೆಯ ರಕ್ಕಸ ಹಪಾಹಪಿಗೆ ಕೇವಲ 25 ವರ್ಷದ ದೀಪಿಕಾ ನಾರಂಗ್ ಎಂಬಾಕೆ ಪ್ರಾಣ ಕಳೆದುಕೊಂಡಿದ್ದಾಳೆ. ಮದುವೆಯಾಗಿ 17 ತಿಂಗಳಿಗೆ ಮೂರನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ. ಈಕೆಯ ತಂದೆ ಸಂಜಯ್ ನಾರಂಗ್ ಇದು ಆತ್ಮಹತ್ಯೆಯಲ್ಲ, ಇದೊಂದು ಭೀಕರ ಕೊಲೆ ಎಂದು ಕಣ್ಣೀರು ಹಾಕಿದ್ದಾರೆ. 2024ರ ಡಿಸೆಂಬರ್​​ನಲ್ಲಿ…

Read More

ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ – Kannada News | Bharti Airtel briefly edges HDFC Bank to Become India’s 2nd Most Valued Company

ನವದೆಹಲಿ, ಮೇ 18: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ (Bharti Airtel) ಐತಿಹಾಸಿಕ ಸಾಧನೆ ಮಾಡಿದೆ. ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ (HDFC Bank) ಅನ್ನು ಹಿಂದಿಕ್ಕುವ ಮೂಲಕ ಭಾರ್ತಿ ಏರ್‌ಟೆಲ್ ಮಾರುಕಟ್ಟೆ ಬಂಡವಾಳೀಕರಣದಲ್ಲಿ (Market Capitalisation) ಭಾರತದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ಕೆಲವು ದಿನಗಳಿಂದ ಏರ್‌ಟೆಲ್ ಷೇರುಗಳು ಸತತವಾಗಿ ಏರಿಕೆ ಕಾಣುತ್ತಿರುವುದು ಈ ಸಾಧನೆಗೆ ಕಾರಣವಾಗಿದೆ. ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್…

Read More

ದೇಶಕ್ಕೆ ಅನ್ನ ನೀಡುವ ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ – Kannada News | Petrol, Diesel Price Hike Affects Farmers: agricultural machinery Price Rise In Bidar

ಬೀದರ್, (ಮೇ 18): ಮಧ್ಯಪ್ರಾಚ್ಯ ಯುದ್ಧದ (War) ಪರಿಣಾಮ ಕಚ್ಚಾ ತೈಲ ಬೆಲೆ ಏರಿಕೆ, ವಿದೇಶಿ ವಿನಿಮಮ ಕೊರತೆ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳು ಎದುರಾಗಿದೆ. ಪರಿಣಾಮ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ (Petrol, Diesel Price Hike). ಇದರ ಬೆನ್ನಲ್ಲೇ ಅಗತ್ಯ ವಸ್ತಗಳು ಬೆಲೆ ಹೆಚ್ಚಳವಾಗುತ್ತಿದೆ. ಹೌದು…ಈಗಾಗಲೇ ಖಾಸಗಿ ಬಸ್, ಸ್ಕೂಲ್ ಬಸ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಯಾಗುತ್ತಿದ್ದು, ಇದೀಗ ತೈಲ ಬೆಲೆ ಏರಿಕೆ ಬಿಸಿ ಅನ್ನದಾತರಿಗೂ ತಟ್ಟಿದೆ. ಯಂತ್ರೋಪಕರಣಗಳಿಂದ ಕೃಷಿ…

Read More

4,500 ಕೋಟಿ ರೂ. ವಂಚನೆ ಕೇಸ್​​: ಆರೋಪಿ ಶಿವಾನಂದ ನೀಲಣ್ಣವರ್​​ 10 ದಿನ ಸಿಐಡಿ ಕಸ್ಟಡಿಗೆ – Kannada News | Belagavi 4,500 Crore Fraud Case: Accused Shivanand Neelannavar Remanded to 10 Days CID Custody

ಬೆಳಗಾವಿ, ಮೇ 18: 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣ ಸಂಬಂಧ ಆರೋಪಿ ಶಿವಾನಂದ ನೀಲಣ್ಣವರ್​​ನ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಬೆಂಗಳೂರಿನ ಕಚೇರಿಗೆ ಆರೋಪಿ ಕರೆದೊಯ್ದು ವಿಚಾರಣೆ ಮಾಡಬೇಕಿದೆ. ಶಿವಾನಂದ ನೀಲಣ್ಣವರ್ ಬಳಿ 35,000 ಜನ ಹೂಡಿಕೆ ಮಾಡಿದ್ದು, ಒಂದು ಸಾವಿರ ಕೋಟಿಗೂ ಅಧಿಕ ಹಣದ ವ್ಯವಹಾರ ಆಗಿದೆ. ಹೀಗಾಗಿ 10 ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರ್ಟ್​​ಗೆ ಮನವಿ ಮಾಡಿದ್ದರು….

Read More