Headlines

KSRTC, BMTC Strike: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್ – Kannada News | KSRTC BMTC Strike: Karnataka Bus Services May Stop From Wednesday As Transport Unions Rigid On Wage Hikes

ಬೆಂಗಳೂರು, ಮೇ 18: ಬುಧವಾರದಿಂದ BMTC ಮತ್ತು KSRTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸೇವೆ ಸ್ಥಗಿತಗೊಳ್ಳಲಿದೆ. ವೇತನ ಪರಿಷ್ಕರಣೆ ಮತ್ತು ಬಾಕಿ ಹಣಕ್ಕಾಗಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿರುವುದೇ ಇದಕ್ಕೆ ಕಾರಣ. ನೌಕರರು ಶೇ 25 ರ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದು, 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಸದ್ಯಕ್ಕೆ ಶೇ 12.5 ವೇತನ ಪರಿಷ್ಕರಣೆಗೆ ಒಪ್ಪಿದೆ. ಅಲ್ಲದೆ,…

Read More

ಬಿಹಾರ: ಸಹೋದರನ ಕುಟುಂಬದ ನಾಲ್ವರನ್ನು ಕೊಂದು, ಶವಗಳ ಕತ್ತರಿಸಿ ಸೂಟ್‌ಕೇಸ್‌ಗಳಲ್ಲಿ ತುಂಬಿ ಎಸೆದ ವ್ಯಕ್ತಿ – Kannada News | Family of Four Found Dead in Shocking Case in Bihar

ಪಾಟ್ನಾ, ಮೇ 18: ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ, ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಸಾಕ್ಷ್ಯ ನಾಶಪಡಿಸಲು ನಾಲ್ವರ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ ಹಾಗೂ ಚೀಲಗಳಲ್ಲಿ ತುಂಬಿ ವಿವಿಧ ನದಿ, ಕಾಲುವೆಗಳಿಗೆ ಎಸೆದಿದ್ದಾನೆ. ರಹಸ್ಯ…

Read More

ಮೇ 20ರಂದು ಸಾರಿಗೆ ನೌಕರರ ಮುಷ್ಕರ: ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC – Kannada News | KSRTC Workers Strike on May 20: Corporation Warns Employees with Strict No Work, No Pay Order

ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ನೌಕರರಿಗೆ ಕೆಎಸ್ಆರ್​ಟಿಸಿ ಖಡಕ್ ಎಚ್ಚರಿಕೆ ನೀಡಿದೆ. ಬುಧವಾರ ಮುಷ್ಕರದಲ್ಲಿ ಭಾಗಿಯಾಗದಂತೆ ಸಿಬ್ಬಂದಿಗೆ ಸೂಚಿಸಿದ್ದು, ಯಾವುದೇ ಮುಷ್ಕರ ಮಾಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ ಎಂದಿದೆ. ಬುಧವಾರ ಕೆಲಸಕ್ಕೆ ಹಾಜರಾಗದಿದ್ದರೆ ‘ನೋ ವರ್ಕ್ ನೋ ಪೇ’ ಎಂದು ಸಿಬ್ಬಂದಿಗೆ ತಿಳಿಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆಎಸ್ಆರ್​ಟಿಸಿ ಎಂಡಿ ಅಕ್ರಂಪಾಷಾ ಆದೇಶಿಸಿದ್ದಾರೆ. ಮುಖ್ಯಾಂಶಗಳು ಮೇ 20ರಂದು ಸಾರಿಗೆ…

Read More

ಯಾರೂ ಊಹಿಸದಷ್ಟು ಬೋಲ್ಡ್ ಆಗಿ ಕಾಣಿಸಿದ ಮೌನ ಗುಡ್ಡೇಮನೆ; ಯಾವುದು ಈ ಸಿನಿಮಾ? – Kannada News | Mouna Guddemane’s Bold Avatar in ‘Love Punch’ Micro Series Shocks Fans

ಬಹುತೇಕ ಕಿರುತೆರೆ ನಟಿಯರು ತೆರೆಮೇಲೆ ಹೆಚ್ಚು ಟ್ರೆಡಿಷನಲ್ ಲುಕ್​​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ತೆರೆಯ ಹಿಂದೆ ಅಥವಾ ಬೇರೆ ಸಿನಿಮಾಗಳಲ್ಲಿ ಅವರು ಹಾಗೆಯೇ ಕಾಣಿಸಿಕೊಳ್ಳಬೇಕು ಎಂಬ ಯಾವುದೇ ಕಂಡೀಷನ್ ಇಲ್ಲ. ಈಗ ಮೌನ ಗುಡ್ಡೇಮನೆ ವಿಷಯದಲ್ಲಿ ಹೀಗೆಯೇ ಆಗಿದೆ. ಕಿರುತೆರೆಯಲ್ಲಿ ಸಖತ್ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳೋ ಅವರು, ಮೈಕ್ರೋ ಸರಣಿಗಾಗಿ ಬೋಲ್ಡ್ ಅವತಾರ ತಾಳಿದ್ದಾರೆ. ‘ಲವ್ ಪಂಚ್’ ಹೆಸರಿನ ಮೈಕ್ರೋ ಸರಣಿ ಮಾಡಿದ್ದಾರೆ. ಈ ಸರಣಿಯ ಕ್ಲಿಪ್​​ಗಳು ವೈರಲ್ ಆಗುತ್ತಿವೆ. ಇದನ್ನು ನೋಡಿದ ಫ್ಯಾನ್ಸ್ ಆಶ್ಚರ್ಯಚಕಿತರಾಗಿದ್ದಾರೆ. ಮೌನ ಗುಡ್ಡೇಮನೆ…

Read More

ಜನಸಾಮಾನ್ಯರಿಗೆ ಕಾದಿದೆಯಾ ವಿದ್ಯುತ್ ಆಘಾತ; ನಿಗದಿತ ಶುಲ್ಕ ಏರಿಸಲು ಪ್ರಸ್ತಾಪ – Kannada News | After Petrol and CNG Hike, Electricity Bills Set to Shock Consumers?

ವಿದ್ಯುತ್ ಪ್ರಸರಣImage Credit source: AI/Mediaforge/TV9 ನವದೆಹಲಿ, ಮೇ 18: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ (CNG) ಬೆಲೆಗಳ ಸತತ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಈಗ ಮತ್ತೊಂದು ಆರ್ಥಿಕ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಇಂಧನ ದರಗಳ ಏರಿಕೆಯ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಮನೆಬಾಗಿಲಿಗೆ ಬರುವ ವಿದ್ಯುತ್ ಬಿಲ್ ಕೂಡ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ವಿದ್ಯುತ್​ನ ಮಾಸಿಕ ನಿಗದಿತ ಶುಲ್ಕವನ್ನು ಏರಿಸಲು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (CEA- Central Electricity Authority)…

Read More

ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ! – Kannada News | Yadagiri District Plunged into Drinking Water Crisis: Residents Stage Massive Protest

ಯಾದಗಿರಿ, ಮೇ 18: ಬೇಸಿಗೆಯ ಪರಿಣಾಮವಾಗಿ ಉತ್ತರ ಕರ್ನಾಟಕದ ಹಲವೆಡೆ ನೀರಿನ ಅಭಾವ ಎದುರಾಗಿದ್ದು, ಜಿಲ್ಲೆಯಾದ್ಯಂತ ತೀವ್ರ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿದೆ. ಬಂಡಳ್ಳಿ ಗ್ರಾಮದ ನಿವಾಸಿಗಳು ತಮ್ಮ ಮೂಲಭೂತ ಸೌಕರ್ಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ಇಳಿದಿದ್ದಾರೆ. ಯಾದಗಿರಿ ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ನೂರಾರು ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರವಾಗಿ ವಾಗ್ದಾಳಿ…

Read More

ನಮಗೆ ಅರ್ಹತೆಯೇ ಇಲ್ಲ… ರಿಯಾನ್ ಪರಾಗ್ ಬೇಸರ..! – Kannada News | Riyan Parag Post match interview after RR vs DC Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.2 ಓವರ್​ಗಳಲ್ಲಿ 197 ರನ್ ಬಾರಿಸಿ 5 ವಿಕೆಟ್​ಗಳ ಜಯ ಸಾಧಿಸಿದೆ. ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್…

Read More

ನೀಟ್-ಯುಜಿ ಪೇಪರ್ ಲೀಕ್ ಹಗರಣ: ಸಿಬಿಐ ತನಿಖೆಯಲ್ಲಿ ಬಿಗ್ ಟ್ವಿಸ್ಟ್; ಬ್ಯೂಟಿಷಿಯನ್ ಬಿಚ್ಚಿಟ್ಟ ಸ್ಫೋಟಕ ರಹಸ್ಯವೇನು? – Kannada News | NEET UG Paper Leak Case: CBI Probe Points to Key Role of Beautician

ಪುಣೆ, ಮೇ 18: ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ(NEET – UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ಬೆಚ್ಚಿಬೀಳಿಸುವ ಮಾಹಿತಿಗಳು ಲಭ್ಯವಾಗಿವೆ. ಪುಣೆಯ 46 ವರ್ಷದ ಬ್ಯೂಟಿಷಿಯನ್ ಒಬ್ಬರು ಈ ಇಡೀ ಜಾಲದ “ಪ್ರಮುಖ ಕೊಂಡಿ”ಯಾಗಿ ಕೆಲಸ ಮಾಡಿರುವುದು ಪತ್ತೆಯಾಗಿದೆ. ಈ  ಮೂಲಕ ಪರೀಕ್ಷಾ ಮಂಡಳಿಯ (NTA) ಉನ್ನತ ಮಟ್ಟದ ಅಧಿಕಾರಿಯೇ ಈ ಸೋರಿಕೆಯ ಮಾಸ್ಟರ್‌ಮೈಂಡ್ ಆಗಿರುವುದು ತನಿಖೆಯಲ್ಲಿ ಬಯಲಾಗಿದೆ. ಎನ್‌ಟಿಎ (NTA) ಸಮಿತಿಯ ತಜ್ಞೆಯೇ ಸೂತ್ರಧಾರಿ ನ್ಯಾಷನಲ್ ಟೆಸ್ಟಿಂಗ್…

Read More

ಡಾಲರ್ ಎದುರು 96 ದಾಟಿ ಸಾರ್ವಕಾಲಿಕ ಕೆಳಮಟ್ಟಕ್ಕೆ ಕುಸಿದ ರೂಪಾಯಿ; ಭಾರತೀಯ ಕರೆನ್ಸಿಯ ಐತಿಹಾಸಿಕ ಕಳಪೆ ಸಾಧನೆ – Kannada News | Rupee Hits Record Low: Drops 20 Paise to cross 96 Against US Dollar

ನವದೆಹಲಿ, ಮೇ 18: ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿನ ತಲ್ಲಣಗಳು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಸತತವಾಗಿ ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿರುವುದು ದೇಶೀಯ ಕರೆನ್ಸಿಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು (Indian Rupee value) ತೀವ್ರ ಕುಸಿತವನ್ನು ಕಾಣುವ ಮೂಲಕ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ. ಸೋಮವಾರದ ಫಾರೆಕ್ಸ್ ವಹಿವಾಟು ವೇಳೆ ಡಾಲರ್ ಎದುರು ರುಪಾಯಿ 96.27 ಮಟ್ಟಕ್ಕೆ ಕುಸಿದಿತ್ತು. ಇದು…

Read More

ಕೊಪ್ಪಳದಲ್ಲಿ ಗಾಳಿ ಮಳೆಯಬ್ಬರ: ಬೇರು ಸಮೇತ ನೆಲಕ್ಕುರುಳಿದ ಮರಗಳು, ಕ್ರೇನ್​​ ಧರಾಶಾಹಿ – Kannada News | Karnataka Rain Fury: Trees Uprooted in Kushtagi, Huge Crane Collapses in Tavaragera

ಕೊಪ್ಪಳ, ಮೇ 18: ಕರ್ನಾಟಕ ರಾಜ್ಯದ ಹಲವೆಡೆ ಭಾರಿ ಮಳೆ ಮತ್ತು ಬಿರುಗಾಳಿ ವ್ಯಾಪಕ ಅನಾಹುತಗಳನ್ನು ಸೃಷ್ಟಿಸಿದೆ. ವಿಶೇಷವಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಿನ್ನೆ (ಮೇ 17) ಸಂಜೆ ಸುರಿದ ಭಾರೀ ಮಳೆಯ ಆರ್ಭಟಕ್ಕೆ ಬೃಹತ್ ಮರಗಳು ಬೇರುಸಮೇತ ಧರೆಗುರುಳಿವೆ. ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿತ್ತು. ಮತ್ತೊಂದೆಡೆ ಮಳೆ ಮತ್ತು ಬಿರುಗಾಳಿಯ ಅಬ್ಬರಕ್ಕೆ ಕೊಪ್ಪಳದ ತಾವರಗೇರ ಪಟ್ಟಣದ ಬಳಿ ಬೃಹತ್ ವಿಂಡ್ ಫ್ಯಾನ್ ಅಳವಡಿಕೆಗೆ ಬಳಸುವ ಕ್ರೇನ್ ಪತನಗೊಂಡಿದೆ. ವಿಂಡ್…

Read More