ಬಿಹಾರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ 3 ರೈಲುಗಳ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜುಗಳಿಗೆ ಹಾನಿ – Kannada News | Stones hurled at Vande Bharat express and 2 other trains in Bihar Muzaffarpur windows damaged
ಪಾಟ್ನಾ, ಮೇ 18: ಭಾನುವಾರ ಸಂಜೆ ಬಿಹಾರದ ಮುಜಫರ್ಪುರ ಬಳಿ ಮೂರು ಪ್ಯಾಸೆಂಜರ್ ರೈಲುಗಳನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಕಲ್ಲು ತೂರಾಟವು ಪ್ರಯಾಣಿಕರಲ್ಲಿ ಭೀತಿ ಮೂಡಿಸಿದ್ದು, ಈ ಪ್ರದೇಶದಲ್ಲಿ ರೈಲ್ವೆ ಭದ್ರತೆಯ ಬಗ್ಗೆ ಭಾರೀ ಕಳವಳವನ್ನು ಹುಟ್ಟುಹಾಕಿದೆ. ಭಾರತೀಯ ರೈಲ್ವೆಯ ಪ್ರೀಮಿಯಂ ಸೆಮಿ-ಹೈ-ಸ್ಪೀಡ್ ಸೇವೆಗಳಲ್ಲಿ ಒಂದಾದ ಪಾಟಲಿಪುತ್ರ-ಗೋರಖ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ಮೇಲೆ ಕಲ್ಲು ತೂರಾಟ ನಡೆದಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಘಟನೆಯ ಸಮಯದಲ್ಲಿ ರೈಲಿನ ಮೂರು ಬೋಗಿಗಳ ಕಿಟಕಿಗಳು ಛಿದ್ರಗೊಂಡಿವೆ….