ಮನೆಯ ಅಂಗಳದಲ್ಲಿರುವ ತುಳಸಿ ಗಿಡಕ್ಕೆ ಪ್ರತಿದಿನ ಸಂಜೆ ತುಪ್ಪದ ದೀಪ ಹಚ್ಚಿ ಪ್ರದಕ್ಷಿಣೆ ಹಾಕಿ. ಹೀಗೆ ಮಾಡುವುದರಿಂದ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರ ಆಗಲಿವೆ. ಉದ್ಯೋಗ ಸ್ಥಳದಲ್ಲಿ ಇರುವ ಗೊಂದಲ ಬಗೆಹರಿಯುತ್ತದೆ.
ನಿಮ್ಮಲ್ಲಿ ಕೆಲವರು ದೂರ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಬಹುದು ಅಥವಾ ಹೊರಟು ಬಿಡಬಹುದು. ಇದರಿಂದ ದೀರ್ಘಾವಧಿಯಲ್ಲಿ ಬಹಳ ದೊಡ್ಡ ಮಟ್ಟದ ಅನುಕೂಲ ಇದೆ. ಆದರೆ ಹೊರಡುವ ಮುನ್ನ ಕುಟುಂಬದ ಕಡೆಯಿಂದ ಒತ್ತಡವಂತೂ ಇರುತ್ತದೆ. ಆದರೆ ಅದು ನಿಮ್ಮ ಕೆಲಸ ಯಶಸ್ವಿಯಾದ ಮೇಲೆ ಕರಗಿ ಹೋಗಲಿದೆ.
ನಿಮಗೆ ಚೆನ್ನಾಗಿ ಗೊತ್ತಿರುವಂಥ ವಿಷಯದಲ್ಲೇ ನಿಮ್ಮಿಂದ ಕೆಲವು ತಪ್ಪುಗಳು ಆಗಬಹುದು. ಮುಖ್ಯವಾಗಿ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮನ್ನು ಪ್ರಶ್ನೆ ಕೇಳಿದಲ್ಲಿ ಒಂದು ಸಲ ಪರಿಶೀಲನೆ ಮಾಡಿ, ಆ ನಂತರವೇ ಉತ್ತರವನ್ನು ಹೇಳಿ. ಕೆಲವು ಜವಾಬ್ದಾರಿಗಳನ್ನು ನಿಮಗೆ ವಹಿಸುವುದಕ್ಕೆ ಕುಟುಂಬದಲ್ಲಿ ಹಾಗೂ ಉದ್ಯೋಗ ಸ್ಥಳದಲ್ಲಿ ಕೇಳಲಿದ್ದಾರೆ.
ಉತ್ತಮವಾದ ಸಂಬಳ ಹಾಗೂ ಹುದ್ದೆಯ ಜತೆಗೆ ಆಫರ್ ಬರಲಿದೆ. ಆದ್ದರಿಂದ ಈ ಅವಕಾಶವನ್ನು ಬೇಡ ಅನ್ನುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಆಲೋಚನೆಯನ್ನು ಮಾಡುವುದು ಒಳ್ಳೆಯದು. ಸಾಕು ಪ್ರಾಣಿಗಳನ್ನು ಮನೆಗೆ ತರುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ದಿನದ ಕೊನೆ ಹೊತ್ತಿಗೆ ಮನಸ್ಸಿಗೆ ಹೆಚ್ಚು ಸಂತೋಷ ಎನಿಸುವಂಥ ವ್ಯಕ್ತಿ ಜತೆಗೆ ಮಾತುಕತೆ ಆಡಲಿದ್ದೀರಿ.
ಹಳೇ ವಿಚಾರಗಳನ್ನು ಕೆದಕುವುದಕ್ಕೆ ಹೋಗಬೇಡಿ. ತಂದೆ ಅಥವಾ ತಂದೆ ಸಮಾನರ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ನೀವು ಬಹಳ ಉತ್ಸಾಹದಿಂದ ಮಾಡಿದ ಕೆಲಸಗಳು, ನಿರ್ಧಾರಗಳನ್ನು ಇತರರು ಬಹಳ ಕಡಿಮೆ ಮಾಡಿ ಮಾತನಾಡುವ ಸಾಧ್ಯತೆ ಇದೆ. ಈ ಕೆಲಸದಲ್ಲಿ ನೀವು ಹಾಕಿದ ಶ್ರಮ, ತೋರಿಸಿದ ನಿಷ್ಠೆ ಗೊತ್ತಿರುವ ವ್ಯಕ್ತಿಗಳು ಸಹ ಇಂಥ ಸನ್ನಿವೇಶದಲ್ಲಿ ನಿಮ್ಮ ಬೆಂಬಲಕ್ಕೆ ಬರುವುದಿಲ್ಲ.
ವೃತ್ತಿನಿರತರಿಗೆ ಒಂದು ಬಗೆಯ ನಿರಾಸಕ್ತಿ ಕಾಡಲಿದೆ. ನಿಮ್ಮಲ್ಲಿ ಕೆಲವರಿಗೆ ನಿದ್ದೆಯ ಸಮಸ್ಯೆ ಕೂಡ ಆಗಬಹುದು. ಒಂದು ವೇಳೆ ಇದು ಗಂಭೀರವಾದ ಸಮಸ್ಯೆ ಎಂದೇನಾದರೂ ಎನಿಸಿದಲ್ಲಿ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರ ಮಾಡಿಕೊಳ್ಳುವುದು ಒಳ್ಳೆಯದು. ಲೇವಾದೇವಿ ವ್ಯವಹಾರ ಮಾಡುವಂಥವರಿಗೆ ಕೆಲವು ಬೆಳವಣಿಗೆಗಳಿಂದ ಆತಂಕ ಕಾಡಲು ಆರಂಭ ಆಗುತ್ತದೆ.
ದಿಢೀರನೇ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಬೇಕಾಗಲಿದೆ. ನಿಮ್ಮ ಸ್ನೇಹಿತರಿಗೋ ಅಥವಾ ಆಪ್ತರಿಗೋ ಮಾಡಿಕೊಡಬೇಕು ಎಂದುಕೊಂಡ ವಾಹನ, ಸೈಟು ಅಥವಾ ಮನೆಯನ್ನು ನೀವೇ ಖರೀದಿ ಮಾಡುವಂಥ ಸಾಧ್ಯತೆಗಳಿವೆ. ನೀವು ಇದಕ್ಕಾಗಿ ಬಹಳ ಶ್ರಮ ಪಟ್ಟಿರುತ್ತೀರಿ. ಆದರೆ ನೀವು ಯಾರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಇಷ್ಟೆಲ್ಲ ಶ್ರಮ ಹಾಕಿರುತ್ತೀರೋ ಆ ವ್ಯಕ್ತಿಯೇ ಅದನ್ನು ಸದ್ಯಕ್ಕೆ ಬೇಡ ಎಂದು ಹೇಳುವಂಥ ಸಾಧ್ಯತೆಗಳಿವೆ.
ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ಮಂಗಲ ಕಾರ್ಯಗಳಿಗೆ ಸಂಪತ್ತನ್ನು ವಿನಿಯೋಗ ಮಾಡುವಿರಿ. ಅಧಿಕ ಲಾಭ ಗಳಿಸಬಹುದಾದ ಉತ್ಪಾದನೆಯಿಂದ ಅಲ್ಪ ಲಾಭ. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸಮಯದ ನಿರೀಕ್ಷೆಯಲ್ಲಿ ಇರಿ. ಯಾರ ಸ್ವಭಾವವನ್ನೂ ಆಡಿಕೊಳ್ಳುವುದು ಬೇಡ. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮಗೆ ಆತಂಕವಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವ ಚಿಂತೆಯಲ್ಲಿ ಇರುವಿರಿ.
ವೃಷಭ ರಾಶಿ:
ತೋರಿಕೆಗೆ ಮಾಡುವ ಕೆಲಸದಲ್ಲಿ ಯಾವ ಪರಿಣಾಮ ಕಾಣಿಸದು.ಹೊಸ ಮನೆಯ ಪ್ರವೇಶದಲ್ಲಿ ನೀವು ಭಾಗಿಯಾಗುವಿರಿ. ಕೆಲವು ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳುವಿರಿ. ಸಂಬಂಧಗಳನ್ನು ನೀವು ಬೇಕಾದುದಕ್ಕೆ ಬಳಸಿಕೊಳ್ಳುವಿರಿ. ರಾಜಕಾರಣಿಗಳು ಅಸ್ಥಿರ ಮನಸ್ಸಿನಲ್ಲಿ ಇರುವರು. ಇಂದಿನ ಸೋಲು ನಿಮಗೆ ಪಾಠವಾಗುವುದು. ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮಗೆ ಇಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳುವಿರಿ. ಮೇಲಧಿಕಾರಿಗಳ ಭಯದಿಂದ ಕಾರ್ಯದಲ್ಲಿ ಪ್ರಗತಿ.
ಮಿಥುನ ರಾಶಿ:
ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. ನಿಮ್ಮ ದೌರ್ಬಲ್ಯದ ಜೊತೆ ಆಟವಾಡಬಹುದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ನಕಾರಾತ್ಮಕ ಆಲೋಚನೆಗಳು ಬೆನ್ನು ಹತ್ತಬಹುದು. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ಯಾರನ್ನೂ ಅತಿಯಾಗಿ ಕಾಯಿಸದೇ ಅವರಿಗೆ ಬೇಕಾದುದನ್ನು ಹೇಳಿ, ಕೊಟ್ಟು ಕಳುಹಿಸಿ.
ಕರ್ಕಾಟಕ ರಾಶಿ:
ಇಂದು ನಿಮ್ಮ ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡಿಸುವಿರಿ. ನೀವು ಇಷ್ಟಪಡುವವರ ಭೇಟಿಯಾಗಲಿದೆ. ನಿಮ್ಮ ಗೌಪ್ಯತೆಯನ್ನು ಯಾರ ಜೊತೆಯೂ ಹೇಳಿಕೊಳ್ಳುವುದು ಬೇಡ. ನಿಯಮ ಪಾಲನೆಯಲ್ಲಿ ತಪ್ಪಬಹುದು. ನಿಮ್ಮ ಆಕ್ಷೇಪಗಳು ಹಲವು ಸುಳ್ಳಿನಿಂದ ಇರಲಿದೆ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಜಾಡ್ಯವನ್ನು ಬಿಡಬೇಕಾದೀತು. ನಿಮ್ಮ ವೃತ್ತಿಯು ನಿಮಗೆ ಸಂತೋಷವನ್ನು ಕೊಡದೇ ಇರುವುದು. ಕೆಲಸವನ್ನು ನೀವು ಸರಳವಾಗಿ ಮಾಡಿಕೊಳ್ಳುವುದು ಉತ್ತಮ.
ಸಿಂಹ ರಾಶಿ:
ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು. ಇಂದು ನೀವು ಕೆಲಸವನ್ನು ಹೆಚ್ಚು ಪ್ರಯತ್ನದಿಂದ ಪೂರ್ಣ ಮಾಡುವಿರಿ. ಯಾರಾದರೂ ನಿಮ್ಮ ಸ್ನೇಹಕ್ಕೆ ಕಡ್ಡಿಗೀರಬಹುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು. ವಿವಾಹಕ್ಕೆ ಯೋಗ ಬಂದರೂ ಅದನ್ನು ಮುಂದೂಡುವ ನಿರ್ಧಾರ ಮಾಡುವಿ
ಕನ್ಯಾ ರಾಶಿ:
ಅವಶ್ಯಕ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ಭೂಮಿಯ ಖರೀದಿಗೆ ಹುಡುಕಾಟ ಆರಂಭ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು.
ತುಲಾ ರಾಶಿ:
ಇಂದು ಸಮೂಹವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುವಿರಿ. ಹಿರಿಯರಲ್ಲಿ ಮನಶ್ಶಾಂತಿಗೆ ಭಂಗ ಅಧಿಕ. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಸಹೋದರಿಯರ ಜೊತೆ ವಾಗ್ವಾದವನ್ನು ಮಾಡುವಿರಿ. ದೃಷ್ಟಿಯನ್ನು ಸಂಕುಚಿತ ಮಾಡುವುದು ಬೇಡ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಸ್ವಪ್ನದ ಚಿಂತೆಯಲ್ಲಿಯೇ ಇರಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ:
ಸಾಲವನ್ನು ಹಿಂದಿರುಗಿಸಲು ಸಮಯಮಿತಿಯ ವಿಸ್ತರಣೆ ಮಾಡಿಕೊಳ್ಳುವಿರಿ. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು.
ಧನು ರಾಶಿ:
ಇಷ್ಟದವರು ನಿಮ್ಮನ್ನು ಶುಭಕಾರ್ಯಗಳಿಗೆ ಆಹ್ವಾನಿಸಬಹುದು. ಅಗ್ನಿಯ ಭಯದಿಂದ ಸಾಹಸ ಕಾರ್ಯಗಳಗೆ ಹಿಂದೇಟು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಉದ್ಯೋಗದ ಕಾರಣ ನಿಮ್ಮ ವಾಸವನ್ನು ಬದಲಾಯಿಸಬೇಕಾಗಬಹುದು. ನಿಮ್ಮ ಜೊತೆ ಇರುವವರು ನಿಮ್ಮನ್ನು ಅರ್ಥಮಾಡಿಕೊಂಡ ರೀತಿ ಬೇರೆ ರೀತಿಯಲ್ಲಿ ಇರುವುದು. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು.
ಮಕರ ರಾಶಿ:
ವಿದ್ಯಾರ್ಥಿಗಳು ಪರಿಶ್ರಮದಿಂದ ಪಡೆಯಬೇಕಾದುದನ್ನು ಪಡೆಯುವರು. ಔದ್ಯೋಗಿಕ ಕ್ಷೇತ್ರದಲ್ಲಿ ಇನ್ನಷ್ಟು ಒಪ್ಪಂದವನ್ನು ಮಾಡಿಕೊಂಡು ಲಾಭ ಪಡೆಯುವ ಯೋಜನೆ ರೂಪಿಸುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಹೂಡಕೆಯ ಕ್ಷೇತ್ರವನ್ನು ಬದಲಿಸುವಿರಿ. ನೂತನ ವಾಹನದ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ನಿಮ್ಮ ಬಗ್ಗೆ ಸಲ್ಲದ ದೂರಗಳು ಕೇಳಿ ಬರಬಹುದು.
ಕುಂಭ ರಾಶಿ:
ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಅವಿವಾಹಿತರಿಂದ ವಿವಾಹಕ್ಕೆ ನಿರಂತರ ಪ್ರಯತ್ನ. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಸಮಯೋಚಿತ ಕಾರ್ಯದಿಂದ ಪ್ರಶಂಸೆಯು ಇರಲಿದೆ. ಎಲ್ಲರೆದುರು ಮುಖಭಂಗವನ್ನು ಎದುರಿಸಿಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ.
ಮೀನ ರಾಶಿ:
ಹಣಕಾಸಿನ ಪ್ರಯತ್ನಗಳು ಸಫಲವಾಗಬಹುದು. ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ. ಮಿತ್ರನಿಗೆ ನಿಮ್ಮಿಂದ ಅಲ್ಪ ಧನಸಹಾಯ. ಸಾಮಾಜಿಕ ಬದ್ಧತೆಗಳಿಗೆ ಸ್ಪಂದನೆ. ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವು ಇಂದು ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ರೇವತೀ, ಯೋಗ : ಬ್ರಹ್ಮ, ಕರಣ : ಬವ, ಸೂರ್ಯೋದಯ – 06 – 29 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:01 – 12:32, ಯಮಗಂಡ ಕಾಲ 15:33 – 17:04, ಗುಳಿಕ ಕಾಲ 08:00- 09:31
ಟೆಹ್ರಾನ್, ಮಾರ್ಚ್ 19: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಗಳು ಹೆಚ್ಚಾಗುತ್ತಲೇ ಇದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಂದು ಅಮೆರಿಕದ ಮಿಲಿಟರಿಯ ಎಫ್-35 ಫೈಟರ್ ಜೆಟ್ ಮೇಲೆ ದಾಳಿ ನಡೆಸಿ ಹಾನಿ ಮಾಡಿದೆ. ಈ ಯುದ್ಧವಿಮಾನದ ಮೇಲೆ ಇರಾನ್ (Iran War) ಗುಂಡು ಹಾರಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಇರಾನ್ ಮಾಧ್ಯಮವು ಬಿಡುಗಡೆ ಮಾಡಿದೆ. ಈ ಘಟನೆಯ ಬಳಿಕ ಇರಾನ್ ಮೇಲೆ ಯುದ್ಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ಫೈಟರ್ ಜೆಟ್ ಅನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದ್ದು ಪೈಲಟ್ ಸುರಕ್ಷಿತರಾಗಿದ್ದಾರೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದ ಖ್ಯಾತ ನಟಿ, ‘ದೇವಸೇನಾ’ ಖ್ಯಾತಿಯ ಅನುಷ್ಕಾ ಶೆಟ್ಟಿ (Anushka Shetty) ಅವರ ಮದುವೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆಯಾದರೂ ಈ ಬಾರಿ ತುಸು ಗಟ್ಟಿಯಾಗಿಯೇ ಹರಿದಾಡಿದ್ದವು. ಅನುಷ್ಕಾ ಶೆಟ್ಟಿ ಅವರು ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಆದರೆ ಇದೀಗ ಅನುಷ್ಕಾ ಶೆಟ್ಟಿ ಅವರ ತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಮದುವೆ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅನುಷ್ಕಾ ಶೆಟ್ಟಿಯ ತಂಡ, ಈ ವದಂತಿ ಸುಳ್ಳೆಂದು ಸ್ಪಷ್ಟಪಡಿಸಿದೆ. ಮದುವೆಯ ಬಗ್ಗೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಸಾಮಾಜಿಕ ಜಾಲತಾಣದ ಪೇಜ್‌ಗಳಿಗೆ ತಂಡವು ಎಚ್ಚರಿಕೆ ನೀಡಿದೆ. ‘ಯಾರದ್ದೋ ವೈಯಕ್ತಿಕ ಜೀವನವನ್ನು ದೈನಂದಿನ ಹೆಡ್‌ಲೈನ್ ಮಾಡುವ ಮೊದಲು ಅಧಿಕೃತ ದೃಢೀಕರಣಕ್ಕಾಗಿ ಕಾಯಿರಿ’ ಎಂದು ವಿನಂತಿಸಿದೆ. ವರದಿಗಳಲ್ಲಿ ಪದೇ ಪದೇ ಅನುಷ್ಕಾ ಅವರ ವಯಸ್ಸನ್ನು (44) ಹೈಲೈಟ್ ಮಾಡುತ್ತಿರುವುದಕ್ಕೆ ಸಹ ಅನುಷ್ಕಾ ಅವರ ತಂಡವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ನಟರ ವಯಸ್ಸಿನ ಬಗ್ಗೆ ಚರ್ಚಿಸದ ಮಾಧ್ಯಮಗಳು, ನಟಿಯರ ವಿಷಯ ಬಂದಾಗ ಮಾತ್ರ ವಯಸ್ಸನ್ನು ವಿವಾದಾತ್ಮಕ ಎಂಬಂತೆ ಬಿಂಬಿಸುವುದು ಸರಿಯಲ್ಲ. ಇದು ಪರೋಕ್ಷವಾಗಿ ‘ಏಜ್ ಶೇಮಿಂಗ್’ ಮಾಡಿದಂತೆ’ ಎಂದು ಆಕ್ರೋಶ ಹೊರಹಾಕಿದೆ.
ಅನುಷ್ಕಾ ಅವರು ಯಾವಾಗಲೂ ತಮ್ಮ ಖಾಸಗಿ ಜೀವನವನ್ನು ಗೌಪ್ಯವಾಗಿಡಲು ಇಷ್ಟಪಡುತ್ತಾರೆ. ಮದುವೆ ಎಂಬುದು ಅತ್ಯಂತ ವೈಯಕ್ತಿಕ ವಿಷಯವಾಗಿದ್ದು, ಕೇವಲ ಲೈಕ್ಸ್ ಅಥವಾ ವ್ಯೂಸ್‌ಗಾಗಿ ಇಂತಹ ಸಂವೇದನಾಶೀಲ ಸುದ್ದಿಗಳನ್ನು ಹರಡುವುದು ಸರಿಯಲ್ಲ ಎಂದು ಅನುಷ್ಕಾ ಅವರ ತಂಡ ಹೇಳಿದೆ. ಅನುಷ್ಕಾ ಅವರು ಸದ್ಯ ತಮ್ಮ ವೃತ್ತಿ ಜೀವನದ ಕಡೆಗೆ ಗಮನ ಹರಿಸುತ್ತಿದ್ದಾರೆ. ಅವರು ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ‘ಕಥನಾರ್: ದಿ ವೈಲ್ಡ್ ಸೋರ್ಸೆರರ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.
ಬಹಳ ವರ್ಷಗಳಿಂದ ಅನುಷ್ಕಾ ಅವರ ಹೆಸರು ನಟ ಪ್ರಭಾಸ್ ಜೊತೆ ಕೇಳಿಬರುತ್ತಿತ್ತು. ಆದರೆ ಈ ಬಾರಿ ಬೆಂಗಳೂರಿನ ಉದ್ಯಮಿಯೊಬ್ಬರ ಜೊತೆ ಅವರ ಮದುವೆ ನಿಶ್ಚಯವಾಗಿದೆ ಎಂಬ ಹೊಸ ಸುದ್ದಿ ಹಬ್ಬಿತ್ತು. ಈ ಹಿಂದೆಯೂ 2020ರಲ್ಲಿ ಇಂತಹದೇ ವದಂತಿಗಳು ಕೇಳಿಬಂದಾಗ ಅನುಷ್ಕಾ ಅವರು, ‘ನನ್ನ ಮದುವೆಯನ್ನು ಯಾರು ಕೂಡ ಬಚ್ಚಿಡಲು ಸಾಧ್ಯವಿಲ್ಲ, ಸಮಯ ಬಂದಾಗ ನಾನೇ ತಿಳಿಸುತ್ತೇನೆ’ ಎಂದು ಹೇಳಿದ್ದರು. ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ 2025 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಇದೀಗ ಅನುಷ್ಕಾ ಮಲಯಾಳಂ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
ಹೈದರಾಬಾದ್, ಮಾರ್ಚ್ 19: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಲಾರಿಯಿಂದ ಕೂಲ್ ಡ್ರಿಂಕ್ಸ್ ಬಾಟಲಿಗಳು ರಸ್ತೆಯಲ್ಲಿ ಬಿದ್ದಿತ್ತು. ಕೂಡಲೆ ಓಡೋಡಿ ಬಂದ ಸುತ್ತಮುತ್ತಲಿನ ಮನೆಯ ಜನರು ಕೈಗೆ ಸಿಕ್ಕಷ್ಟು ಆ ಕೂಲ್ ಡ್ರಿಂಕ್ಸ್ ಬಾಟಲಿಗಳನ್ನು ದೋಚಿಕೊಂಡು ಹೋಗಿದ್ದಾರೆ. ಹಲವಾರು ಜನರು ರಸ್ತೆಯಲ್ಲಿ ಬಿದ್ದ ತಂಪು ಪಾನೀಯದ ಬಾಟಲಿಗಳನ್ನು ಹೆಕ್ಕುತ್ತಿರುವ ವಿಡಿಯೋ ವೈರಲ್ ಆಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಬಾಟಲಿಗಳನ್ನು ತೆಗೆದುಕೊಂಡು ಹೋಗದಂತೆ ಮನವಿ ಮಾಡಿದರೂ, ಜನರು ಕೇಳಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 19: ವಿವಾಹಿತ ಮಹಿಳೆಯನ್ನು ಯುವಕನೋರ್ವ ಡ್ಯಾಗರ್ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಫಿರ್ದೋಸ್ ಬಾನು ಕೊಲೆಯಾದ ಎರಡು ಮಕ್ಕಳ ತಾಯಿ. ಹಫೀಸ್ ಎಂಬಾತನಿಂದ ಕೃತ್ಯವೆಸಲಾಗಿದೆ. ಆಟೋಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಹಫೀಸ್, ಕೆಲ ತಿಂಗಳಿಂದ ಫೀರ್ದೋಸ್ ಬಾನು ಹಿಂದೆ ಬಿದ್ದಿದ್ದ. ತನ್ನನ್ನು ಲವ್ ಮಾಡುವಂತೆ ಕಾಟ ಕೊಡುತ್ತಿದ್ದ. ಹಫೀಸ್ ಕಾಟ ತಾಳಲಾರದೆ ಫಿರ್ದೋಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಫೀಸ್ಗೆ ಪೊಲೀಸರು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿ ಕಳಿಸಿದ್ದರು. ಕೆಲ ದಿನ ಸುಮ್ಮನಿದ್ದು ಮತ್ತೆ ಹಿಂದೆ ಬಿದ್ದಿದ್ದ. ಆದರೆ ಹಫೀಸ್ನನ್ನು ಫೀರ್ದೋಸ್ ಅವಾಯ್ಡ್ ಮಾಡಿದ್ದಾರೆ. ಇಂದು ಮಧ್ಯಾಹ್ನ 2ಗಂಟೆಗೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದ ಹಫೀಸ್, ಈ ವೇಳೆ ಜಗಳ ತೆಗೆದು ಫಿರ್ದೋಸ್ ಬಾನುಗೆ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚಂದ್ರಾಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೊಲೆಯಾದ ವಿವಾಹಿತ ಮಹಿಳೆ ಸಂಬಂಧಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ.
ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಅವರೊಟ್ಟಿಗೆ ಬಲು ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಇದು ಅವರಿಗೆ ಮೊದಲ ಹಬ್ಬ. ಆದರೆ ಈ ಯುಗಾದಿ ಹಬ್ಬ ಅವರಿಗೆ ಬಹು ವಿಶೇಷವೂ ಹೌದು. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಮತ್ತು ರಾಮ್ ಚರಣ್ ಅವರು ಜಂಟಿಯಾಗಿ ರಶ್ಮಿಕಾ ಅವರಿಗೆ ಗದರ್ ಅವಾರ್ಡ್ ಅನ್ನು ನೀಡಿದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಖುದ್ದು ಸಿಎಂ ರೇವಂತ್ ರೆಡ್ಡಿ ಅವರು ರಶ್ಮಿಕಾರನ್ನು ತಮ್ಮ ಊರಿನ ಸೊಸೆ ಎಂದರು. ಇದು ರಶ್ಮಿಕಾಗೆ ಸಖತ್ ಖುಷಿ ಕೊಟ್ಟಿತು. ಬಳಿಕ ಮಾತನಾಡಿದ ರಶ್ಮಿಕಾ ಮಂದಣ್ಣ, ‘ಒಂದು ಸಮಯದಲ್ಲಿ ನನ್ನ ನಟನೆಯನ್ನು ಟ್ರೋಲ್ ಮಾಡಿದ್ದರು ಆದರೆ ಈಗ ಸರ್ಕಾರವೊಂದು ನನ್ನ ನಟನೆ ಮೆಚ್ಚಿ ಪ್ರಶಸ್ತಿ ನೀಡಿದೆ’ ಎಂದರು.
ಮುಂದುವರೆದು ಮಾತನಾಡಿ, ‘ಗರ್ಲ್ಫ್ರೆಂಡ್’ ಸಿನಿಮಾಕ್ಕೆ ಈ ಪ್ರಶಸ್ತಿ ಸಿಕ್ಕಿರುವುದು ಹೆಚ್ಚು ಖುಷಿ ಕೊಟ್ಟಿದೆ. ‘ಗರ್ಲ್ಫ್ರೆಂಡ್’ ಸಿನಿಮಾ ನನ್ನ ಪಾಲಿಗೆ ಬಹಳ ವಿಶೇಷ ಸಿನಿಮಾ. ಈ ಸಿನಿಮಾಕ್ಕೆ ಪ್ರಶಸ್ತಿ ನೀಡಿರುವುದು ಇಂಥಹಾ ಇನ್ನೂ ಹಲವು ಸಿನಿಮಾಗಳನ್ನು ಮಾಡಲು, ಪ್ರಯೋಗಗಳನ್ನು ಮಾಡಲು ಸ್ಪೂರ್ತಿ ನೀಡಿದೆ. ದಿಲ್ ರಾಜು ಸೇರಿದಂತೆ ಈ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು. ‘ಗರ್ಲ್ಫ್ರೆಂಡ್’ ಸಿನಿಮಾದ ನಿರ್ದೇಶಕ ರಾಹುಲ್ ರವೀಂದ್ರನ್, ಸಹ ನಟ ದೀಕ್ಷಿತ್, ನಿರ್ಮಾಪಕರಾದ ವಿದ್ಯಾ ಮತ್ತು ಧೀರಜ್ ಇನ್ನೂ ಹಲವರಿಗೆ ಧನ್ಯವಾದ ಹೇಳಿದರು ರಶ್ಮಿಕಾ.
ಬಳಿಕ ತುಸು ಭಾವುಕರಾದ ನಟಿ ರಶ್ಮಿಕಾ, ‘ನಾನು ಕೆಲವು ವರ್ಷಗಳ ಹಿಂದೆ ಮಗಳಾಗಿ ಬಂದಿದ್ದೆ, ಈಗ ಸೊಸೆಯಾಗಿ ಎದುರಿಗೆ ನಿಂತಿದ್ದೀನಿ, ಆ ಬಗ್ಗೆ ನನಗೆ ಹೆಮ್ಮೆಯಿದೆ, ನನ್ನನ್ನು ಸ್ವೀಕರಿಸಿದ್ದಕ್ಕೆ ಬಹಳ ಧನ್ಯವಾದಗಳು. ನನಗೆ ಈಗ ಇರುವ ಆಸೆಯೆಂದರೆ ನನ್ನ ಕುಟುಂಬಕ್ಕೆ ಇದೇ ಪ್ರೀತಿ ಕೊಡಿ, ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದರು ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರು ಪ್ರಶಸ್ತಿ ಸ್ವೀಕರಿಸುವಾಗ ಅವರ ಅತ್ತೆ ಸಮಾರಂಭದಲ್ಲಿ ಹಾಜರಿದ್ದರು. ಜೋರಾಗಿ ಚಪ್ಪಾಳೆ ತಟ್ಟುತ್ತಾ ಸೊಸೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಐಪಿಎಲ್ (IPL 2026) ಸೀಸನ್ ಇನ್ನೂ ಆರಂಭವಾಗಿಲ್ಲ. ಆದಾಗ್ಯೂ ಹಲವು ತಂಡಗಳಿಗೆ ದೊಡ್ಡ ಆಘಾತ ಎದುರಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಮ್ಮ ಸ್ಟಾರ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಇಲ್ಲದೆ ಈ ಆವೃತ್ತಿಯನ್ನು ಆರಂಭಿಸಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಂಡವು ತಮ್ಮ ನಾಯಕ ಪ್ಯಾಟ್ ಕಮ್ಮಿನ್ಸ್ ಇಲ್ಲದೆ ಈ ಪಂದ್ಯಾವಳಿಯ ಮೊದಲ ಕೆಲವು ಪಂದ್ಯಗಳನ್ನು ಆಡಲಿದೆ. ಈ ಇಬ್ಬರು ಅನುಭವಿ ಆಟಗಾರರು ತಂಡಕ್ಕೆ ಮರಳುವ ಸಾಧ್ಯತೆ ಇದ್ದರೂ, ಇತರ ಕೆಲವು ತಂಡಗಳ ಪರಿಸ್ಥಿತಿ ಗಂಭೀರವಾಗಿದೆ. ಏಕೆಂದರೆ ಆ ತಂಡಗಳ ಆಟಗಾರರು ಇಡೀ ಸೀಸನ್ನಿಂದಲೇ ಹೊರಬಿದಿದ್ದಾರೆ. ವಾಸ್ತವವಾಗಿ, ಒಂದೇ ದಿನದಲ್ಲಿ ಮೂವರು ಆಟಗಾರರು ಐಪಿಎಲ್ನಿಂದ ಹೊರಬಿದಿದ್ದಾರೆ.
ಸಿಎಸ್‌ಕೆ ವೇಗಿಗೆ ಇಂಜುರಿ
ಮಾರ್ಚ್ 28 ರಂದು 19 ನೇ ಐಪಿಎಲ್ ಸೀಸನ್ ಆರಂಭವಾಗುವುದಕ್ಕೆ ಕೇವಲ ಒಂಬತ್ತು ದಿನಗಳ ಮೊದಲು , ಚೆನ್ನೈ ಸೂಪರ್ ಕಿಂಗ್ಸ್ , ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಬಿಗ್ ಶಾಕ್ ಎದುರಾಗಿದೆ. ಮೊದಲನೆಯದಾಗಿ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ನಾಥನ್ ಎಲಿಸ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಫ್ರಾಂಚೈಸಿ ಇದನ್ನು ಅಧಿಕೃತವಾಗಿ ಘೋಷಿಸದಿದ್ದರೂ, ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ರಾಜಸ್ಥಾನ್ ತಂಡಕ್ಕೂ ಆಘಾತ
ಇಎಸ್‌ಪಿಎನ್-ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಕೂಡ ಗಾಯದಿಂದಾಗಿ ಈ ಆವೃತ್ತಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ವರದಿಯಾಗಿದೆ. ಕರನ್ ತೊಡೆಸಂದು ಗಾಯದಿಂದ ಬಳಲುತ್ತಿದ್ದು, ಅವರು ಸಕಾಲದಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಸೀಸನ್ ಆರಂಭಕ್ಕೂ ಮುನ್ನ ಸಿಎಸ್‌ಕೆಯಿಂದ ಕರನ್ ಅವರನ್ನು 2.4 ಕೋಟಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಟ್ರೇಡ್ ವಿಂಡ್ ಮೂಲಕ ಖರೀದಿಸಲಾಯಿತು. ಆದಾಗ್ಯೂ, ಅವರು ತಮ್ಮ ಹೊಸ ಫ್ರಾಂಚೈಸಿಗಾಗಿ ಮೈದಾನಕ್ಕಿಳಿಯಲು ಸಾಧ್ಯವಾಗುವುದಿಲ್ಲ.
ಕೆಕೆಆರ್ ತಂಡಕ್ಕೆ ಮತ್ತೊಂದು ಕೆಟ್ಟ ಸುದ್ದಿ
ಈಗಾಗಲೇ ವೇಗದ ಬೌಲರ್‌ಗಳ ಕೊರತೆಯಿಂದ ಬಳಲುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ದೊಡ್ಡ ಹಿನ್ನಡೆ ಅನುಭವಿಸಿದೆ. ಶ್ರೀಲಂಕಾದ ಮಾಧ್ಯಮ ವರದಿಗಳ ಪ್ರಕಾರ, ಕೆಕೆಆರ್ 18 ಕೋಟಿಗೆ ರೂಗೆ ಖರೀದಿಸಿರುವ ವೇಗಿ ಮಥಿಶಾ ಪತಿರಾನಗೆ ಶ್ರೀಲಂಕಾ ಕ್ರಿಕೆಟ್ ಎನ್‌ಒಸಿ ನೀಡಿಲ್ಲ ಎಂದು ವರದಿಯಾಗಿದೆ. ಪತಿರಾನ ತಮ್ಮ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಕಾರಣ ಮಂಡಳಿ ಎನ್‌ಒಸಿ ನೀಡಿಲ್ಲ. ಪರಿಣಾಮವಾಗಿ, ಅವರು ಈಗ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಅಸಂಭವವಾಗಿದೆ.
ಈ ಮೂವರು ಆಟಗಾರರಿಗೆ ಸಂಬಂಧಿಸಿದ ಒಂದು ಕುತೂಹಲಕಾರಿ ಕಾಕತಾಳೀಯವೆಂದರೆ, ಈ ಮೂವರೂ ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. ಈ ವರ್ಷ ಸ್ಯಾಮ್ ಕರನ್ ಅವರನ್ನು ಸಿಎಸ್‌ಕೆ ರಾಜಸ್ಥಾನಕ್ಕೆ ವಿನಿಮಯ ಮಾಡಿಕೊಂಡರೆ, ಪತಿರಾನ ಅವರನ್ನು ಕೆಕೆಆರ್ ಖರೀದಿ ಮಾಡಿತ್ತು. ಈ ಪೈಕಿ, ಪ್ರಸ್ತುತ ಚೆನ್ನೈ ತಂಡದಲ್ಲಿ ಉಳಿದಿರುವ ಏಕೈಕ ಆಟಗಾರ ಎಲಿಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಾದಗಿರಿ, (ಮಾರ್ಚ್ 19): ಜಿಲ್ಲೆಯ ಗೋನಾಳ ಗ್ರಾಮದ ಮಗನಿಂದಲೇ ತಂದೆ ಕೊಲೆ ಪ್ರಕರಣಕ್ಕೆ (Gonal Pampanna Murder Case) ಟ್ವಿಸ್ಟ್ ಸಿಕ್ಕಿದೆ. 75 ವಯಸ್ಸಾಗಿದ್ರೂ ಕಾಮದಾಟಕ್ಕಾಗಿ ಮಹಿಳೆಯರ ಜೊತೆ ಸಂಬಂಧ (illicit relationship )ಇಟ್ಟುಕೊಂಡು, ಸೊಸೆಯನ್ನೂ ಬಿಡದ ತಂದೆಯನ್ನು ಕಂಡು ಮಾರ್ಯಾದೆಗೆ ಹೆದರಿ ಮಗನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ. ಹೌದು… ಗೋನಾಳ ಗ್ರಾಮದಲ್ಲಿ 6 ದಿನಗಳ ಹಿಂದೆ ಅಂದ್ರೆ ಮಾರ್ಚ್ 12 ರ ರಾತ್ರಿ 74 ವರ್ಷದ ಪಂಪಣ್ಣ ಸಜ್ಜನ ಎಂಬಾತನ ಕೊಲೆಯಾಗಿತ್ತು. ಕೊಲೆ ನಡೆದ ಬಳಿಕ ಈ ಹಂಪಣ್ಣ ಸಜ್ಜನ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಗೆ ದೂರು ನೀಡಿದ್ದ.ಬಳಿಕ ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರಂಭದಲ್ಲಿ ಕೊಲೆ ಯಾರು ಮಾಡಿದ್ದಾರೆ ಎಂದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ಕೊಲೆ ನಡೆದ ನಾಲ್ಕು ದಿನಗಳ ಬಳಿಕ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು. ಮೃತ ತಂದೆಯನ್ನು 75 ವರ್ಷದ ಹಂಪಣ್ಣ ಸಜ್ಜನ್ ಹಾಗೂ ಸುಪಾರಿ ಕೊಟ್ಟ ಮಗನನ್ನು ನರಸರೆಡ್ಡಿ, ಹಂತಕರಾದ ರಮೇಶ್, ಜಿ.ವಿರೇಶ್, ಎಂ.ವಿರೇಶ್ ಹಾಗೂ ಕೃಷ್ಟನನ್ನು ವಡಗೇರಾ ಪೊಲೀಸರು ಬಂಧಿಸಿದ್ದಾರೆ.
ಮಗನೇ ತಂದೆ ಹತ್ಯೆಗೆ ಸುಪಾರಿ
ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ ಬಳಿಕ 74 ವರ್ಷ ವೃದ್ದ ಹಂಪಣ್ಣನ ಕೊಲೆ ಹಿಂದಿನ ರಹಸ್ಯ ಬಯಲಿಗೆ ಬಂದಿದೆ. ಕೊಲೆ ಮಾಡಿದ್ದು ಮಾತ್ರ ತಿರುಪತಿ ಮೂಲದ ನಾಲ್ಕು ಜನರು. ಆದ್ರೆ, ಕೊಲೆಗೆ ಸುಪಾರಿ ಕೊಟ್ಟಿದ್ದು ಮಾತ್ರ ಹಂಪಣ್ಣ ಸಜ್ಜನ ಪುತ್ರ ನರಸರೆಡ್ಡಿ. ಮಗನೇ ತಂದೆಯನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದರ ಹಿಂದೆ ಒಂದು ಕಾರಣವೂ ಸಹ ಇದೆ. ಅದನ್ನೂ ಪೊಲೀಸರು ಹಂತಕರಿಂದ ಕಕ್ಕಿಸಿದ್ದಾರೆ. ಮೊದಲು ಆಸ್ತಿಗಾಗಿ ಕೊಲೆ ಮಾಡಿರುವುದಾಗಿ ಶಂಕಿಸಿದ್ದರು. ಆದರೆ ತನಿಖೆ ವೇಳೆ, ಕೊಲೆಯಾದ ತಂದೆಯ ಮೊಬೈಲ್‌ನಲ್ಲಿ ಇಂಟರೆಸ್ಟಿಂಗ್ ಫೋಟೋಗಳು ಸಿಕ್ಕಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮೃತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಜೊತೆ ತೆಗೆದುಕೊಂಡ ಫೋಟೋ ಸಿಕ್ಕಿದ್ದು, ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿ ತನ್ನ ಮಕ್ಕಳ ಜೊತೆ ಊರಲ್ಲಿ ಇರದೇ ಕಾಮದಾಟಕ್ಕಾಗಿ ಹೊಲದಲ್ಲಿ ವಾಸವಾಗಿದ್ದ. 48 ಎಕರೆ ಜಮೀನು ಹೊಂದಿದ್ದು, ಇದರಲ್ಲಿ ತನ್ನ ಮೂರು ಜನ ಮಕ್ಕಳಿಗೆ ತಲಾ 4 ಎಕರೆ ಎಂಬಂತೆ 12 ಎಕರೆ ಜಮೀನು ನೀಡಿದ್ದ. ಇನ್ನುಳಿದ 36 ಎಕರೆ ಜಮೀನು ತನ್ನ ಹೆಸರಿಗೆ ಇಟ್ಟುಕೊಂಡು ಬಂದ ಆದಾಯದಲ್ಲಿ ಶೋಕಿ ಮಾಡುತ್ತಿದ್ದ.
ಸೊಸೆಯನ್ನೂ ಬಿಡದೇ ಸಿಕ್ಕ ಸಿಕ್ಕ ಮಹಿಳೆಯರ ಜತೆ ಕಾಮದಾಟ
ಊರಲ್ಲಿ ಮೂರ ಜನ ಮಕ್ಕಳ ಮನೆ ಇದ್ದರೂ ಸಹ ಕಳೆದ 15 ವರ್ಷಗಳಿಂದ ಜಮೀನಲ್ಲಿ ಶೆಡ್ ಹಾಕಿಕೊಂಡು ಪತ್ನಿ ಜೊತೆ ವಾಸವಾಗಿದ್ದ. ಆದ್ರೆ, ಕಳೆದ 8 ವರ್ಷಗಳ ಹಿಂದೆ ಪತ್ನಿ ಸಾವನ್ನಪ್ಪಿದ್ದ ಬಳಿಕವೂ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ. ಅಲ್ಲದೇ ಮದ್ಯವ್ಯಸನಿಯೂ ಕೂಡ ಆಗಿದ್ದ. ತನ್ನ ಕಾಮತೃಷೆ ಈಡೇರಿಸಿಕೊಳ್ಳಲು ದುಡ್ಡು ಕೊಟ್ಟು ಬೇರೆ ಮಹಿಳೆಯರನ್ನು ಶೆಡ್ಗೆ ಕರೆಸಿಕೊಳ್ಳುತ್ತಿದ್ದ. ಅದೇ ರೀತಿ ಮಗನ ಹೆಂಡ್ತಿ ಅಂದರೆ ಸೊಸೆ, ಜಮೀನಿಗೆ ಕೆಲಸಕ್ಕೆ ಬಂದವರನ್ನೂ ಬಿಡುತ್ತಿರಲಿಲ್ಲ. ಕೊನೆಗೆ ತನ್ನ ಪತ್ನಿಯ ಜೊತೆಗೆ ತಂದೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಗೊತ್ತಾಗಿದ್ದೇ ತಡ ನರಸರೆಡ್ಡಿ ರೊಚ್ಚಿಗೆದ್ದಿದ್ದು, ತಂದೆಯನ್ನೇ ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದ. ಕಾಮಿಷ್ಟ ತಂದೆಯಿಂದ ಬೇಸತ್ತು ಹೋಗಿದ್ದ ಮಗ ನಾಲ್ವರನ್ನು ಕರೆಸಿ, 2 ಲಕ್ಷ ರೂ. ನೀಡಿ ಕೊಲೆ ಮಾಡುವಂತೆ ಸುಪಾರಿ ಕೊಟ್ಟಿದ್ದ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.
ಒಟ್ಟಿನಲ್ಲಿ 74 ವಯಸ್ಸಾಗಿದ್ದರೂ ಸಹ ಹಂಪಣ್ಣ ತನ್ನ ಕಾಮದಾಹ ತೀರಿಸಿಕೊಳ್ಳಲು ಹಣದ ಆಮೀಷ ತೋರಿಸಿ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಸಾಲದಕ್ಕೆ ತನ್ನ ಮಗನ ಪತ್ನಿಯನ್ನೂ ಸಹ ತನ್ನ ಕಾಮದಾಟಕ್ಕೆ ಬಳಸಿಕೊಂಡು ಕೊಲೆಯಾಗಿದ್ದಾನೆ.