ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್: 27 ಸಾವಿರ ಕೋಟಿ ರೂ. ವಂಚನೆ ಪ್ರಕರಣ, ಬೆಂಗಳೂರು ಸೇರಿ ಹಲವೆಡೆ ದಾಳಿ! – Kannada News | CBI Raids Anil Ambani’s Reliance Group: Rs 27,337 Crore Fraud Probe in Bengaluru, Mumbai

ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್

ಬೆಂಗಳೂರು, ಮೇ 15: ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮತ್ತು ಎಲ್‌ಐಸಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಅನಿಲ್ ಅಂಬಾನಿ (Anil Ambani) ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCom) ವಿರುದ್ಧ ಕೇಂದ್ರೀಯ ತನಿಖಾ ದಳ (CBI) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಮೇ 14) ಬೆಂಗಳೂರು, ಮುಂಬೈ ಮತ್ತು ಗುರುಗ್ರಾಮದ ಏಳು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ಶೋಧ ನಡೆಸಿದ್ದಾರೆ.

ಮುಖ್ಯಾಂಶಗಳು

  • ರಿಲಯನ್ಸ್ ಸಂಸ್ಥೆಯ ಮಾಜಿ ಸಿಇಒ ಮತ್ತು ನಿರ್ದೇಶಕರ ನಿವಾಸಗಳ ಮೇಲೆ ಸಿಬಿಐ ದಾಳಿ.
  • ಬ್ಯಾಂಕ್​ಗಳಿಗೆ 27,337 ಕೋಟಿ ವಂಚಿಸಿದ ಆರೋಪದ ಮೇಲೆ ಏಳು ಪ್ರಕರಣಗಳು ದಾಖಲು.
  • ಬೆಂಗಳೂರು ಸೇರಿ ಏಳು ಕಡೆ ಶೋಧ; ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು.

ಪ್ರಮುಖರ ನಿವಾಸಗಳ ಮೇಲೆ ದಾಳಿ

ರಿಲಯನ್ಸ್ ಕಮ್ಯುನಿಕೇಷನ್ಸ್‌ನಲ್ಲಿ 2015 ರಿಂದ 2017ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಸಿಇಒ (CEO), ಸಿಎಫ್‌ಒ (CFO) ಮತ್ತು ನಿರ್ದೇಶಕರ ವಸತಿ ಆವರಣಗಳ ಮೇಲೆ ಈ ದಾಳಿ ನಡೆದಿದೆ. ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ನೀಡಿದ ಸರ್ಚ್ ವಾರಂಟ್ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.

27 ಸಾವಿರ ಕೋಟಿಗೂ ಅಧಿಕ ವಂಚನೆ

ಅನಿಲ್ ಅಂಬಾನಿ ನೇತೃತ್ವದ ಸಮೂಹ ಸಂಸ್ಥೆಗಳ ವಿರುದ್ಧ ಕಳೆದ ಕೆಲವು ತಿಂಗಳುಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ. ವಿವಿಧ ಬ್ಯಾಂಕ್​ಗಳು ಮತ್ತು ಎಲ್‌ಐಸಿ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು ವಂಚನೆಯ ಮೊತ್ತ ಬರೋಬ್ಬರಿ 27,337 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಹಗರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ಇದನ್ನೂ ಓದಿ ಅನಿಲ್ ಅಂಬಾನಿಗೆ ಇನ್ನಷ್ಟು ಸಂಕಷ್ಟ; ನಿನ್ನೆ 3,716 ಕೋಟಿ ರೂ ಆಸ್ತಿ ಮುಟ್ಟುಗೋಲು; ಈಗ ಸಿಬಿಐನಿಂದ ಹೊಸ ಕೇಸ್ ದಾಖಲು

ಈಗಾಗಲೇ ಇಬ್ಬರ ಬಂಧನ

ಈ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 20ರಂದು ರಿಲಯನ್ಸ್ ಕಮ್ಯುನಿಕೇಷನ್ಸ್‌ನ ಜಂಟಿ ಅಧ್ಯಕ್ಷ ಡಿ. ವಿಶ್ವನಾಥ್ ಮತ್ತು ಉಪಾಧ್ಯಕ್ಷ ಅನಿಲ್ ಕಲ್ಯಾ ಅವರನ್ನು ಸಿಬಿಐ ಬಂಧಿಸಿತ್ತು. ಬ್ಯಾಂಕಿಂಗ್ ಕಾರ್ಯಾಚರಣೆ ಮತ್ತು ಹಣದ ದುರುಪಯೋಗದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪವಿದ್ದು, ಪ್ರಸ್ತುತ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಒಟ್ಟು 31 ಸ್ಥಳಗಳಲ್ಲಿ ತಪಾಸಣೆ ನಡೆಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒರಾಕಲ್ ಲೇಆಫ್; 32,000 ಜನರನ್ನು ಕೆಲಸದಿಂದ ತೆಗೆದಿದ್ದಾಯ್ತು; ಕ್ಯಾಂಪಸ್ ಪ್ಲೇಸ್ಮೆಂಟ್ ನೇಮಕಾತಿಗಳಿಗೆ ಆಫರ್ ವಾಪಸ್ – Kannada News | Oracle Withdraws IIT/NIT Offers After Layoffs: Future of Tech Graduates at Risk

ಒರಾಕಲ್ ಉದ್ಯೋಗ ರದ್ದುImage Credit source: AI/Mediaforge/TV9

ನವದೆಹಲಿ, ಮೇ 15: ಇತ್ತೀಚೆಗಷ್ಟೇ 30,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಅಮೆರಿಕ ಮೂಲದ ಒರಾಕಲ್ ಸಂಸ್ಥೆ (Oracle) ಇದೀಗ ಹೊಸ ನೇಮಕಾತಿಗಳನ್ನು ರದ್ದುಗೊಳಿಸುವ ಕ್ರಮ ತೆಗೆದುಕೊಂಡಿದೆ. ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ (IIT Hyderabad, Kanpur, Kharagpur) ಮತ್ತು ಎನ್‌ಐಟಿ (NIT Warangal ಸೇರಿದಂತೆ) ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ನೀಡಿದ್ದ ಫುಲ್-ಟೈಮ್ ಉದ್ಯೋಗದ ಆಫರ್‌ಗಳನ್ನು ಕೊನೆಯ ಕ್ಷಣದಲ್ಲಿ ವಾಪಸ್ ಪಡೆದಿದೆ.

ಸುಮಾರು 50ಕ್ಕೂ ಹೆಚ್ಚು ಐಐಟಿ ವಿದ್ಯಾರ್ಥಿಗಳು ಮತ್ತು ಹಲವಾರು ಎನ್‌ಐಟಿ ವಿದ್ಯಾರ್ಥಿಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿದ್ಯಾರ್ಥಿಗಳು ಈಗಾಗಲೇ ‘ಒಂದು ವಿದ್ಯಾರ್ಥಿ – ಒಂದು ಆಫರ್’ (one student-one offer) ನೀತಿಯ ಅಡಿಯಲ್ಲಿ ಇತರ ಕಂಪನಿಗಳ ಅವಕಾಶಗಳನ್ನು ನಿರಾಕರಿಸಿದ್ದರು. ಈಗ ಪದವಿ ಮುಗಿಯುವ ಹಂತದಲ್ಲಿ ಆಫರ್ ರದ್ದಾಗಿರುವುದು ಅವರ ವೃತ್ತಿಜೀವನದ ಮೇಲೆ ದೊಡ್ಡ ಹೊಡೆತ ನೀಡಿದೆ.

ಈ ವಿದ್ಯಾರ್ಥಿಗಳಿಗೆ ವಾರ್ಷಿಕ ಸುಮಾರು 35 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ (35+ LPA) ವೇತನದ ಪ್ಯಾಕೇಜ್ ಆಫರ್ ಮಾಡಲಾಗಿತ್ತು.

ಇದನ್ನೂ ಓದಿ: CNG Price Hike: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಿಎನ್​ಜಿ ಕೆಜಿಗೆ 2 ರೂಪಾಯಿ ಹೆಚ್ಚಳ

ಒರಾಕಲ್ ನೇಮಕಾತಿ ಹಿಂಪಡೆಯಲು ಏನು ಕಾರಣ?

ಕಂಪನಿಯ ಆಂತರಿಕ ಪುನರ್ರಚನೆ (internal restructuring) ಮತ್ತು ಬದಲಾಗುತ್ತಿರುವ ವ್ಯಾಪಾರ ಅಗತ್ಯಗಳ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

30,000 ಲೇ-ಆಫ್: ಈ ಘಟನೆಗಿಂತ ಕೆಲವು ವಾರಗಳ ಮುಂಚೆ, ಒರಾಕಲ್ ಜಾಗತಿಕವಾಗಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದರಲ್ಲಿ ಭಾರತದ 12,000 ಉದ್ಯೋಗಿಗಳು ಸೇರಿದ್ದಾರೆ ಎನ್ನಲಾಗಿದೆ.

ಲಿಂಕ್ಡ್‌ಇನ್ ಮತ್ತು ರೆಡ್ಡಿಟ್‌ನಲ್ಲಿ ಚರ್ಚೆ: ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಎನ್‌ಐಟಿ ವಾರಂಗಲ್‌ನ ಪ್ಲೇಸ್‌ಮೆಂಟ್ ಕೋ-ಆರ್ಡಿನೇಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಇತರ ಕಂಪನಿಗಳಿಗೆ ವಿನಂತಿಸಿದ್ದಾರೆ.

ಇದನ್ನೂ ಓದಿ: ಮೋದಿ ಅವರ ಯುಎಇ-ಯೂರೋಪ್ ಪ್ರವಾಸ; 70 ಬಿಲಿಯನ್ ಡಾಲರ್ ವ್ಯಾಪಾರ ಪುಷ್ಟಿ ನಿರೀಕ್ಷೆ

ವರದಿಗಳ ಪ್ರಕಾರ, ಕೆಲವು ಐಐಟಿಗಳು ಇಂತಹ ವಿಶ್ವಾಸದ್ರೋಹದ ಕ್ರಮಕ್ಕಾಗಿ ಒರಾಕಲ್ ಕಂಪನಿಯನ್ನು ಮುಂದಿನ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಿಂದ ಕಪ್ಪುಪಟ್ಟಿಗೆ ಸೇರಿಸುವ (Ban) ಕುರಿತು ಚರ್ಚಿಸುತ್ತಿವೆ.

ಒಟ್ಟಾರೆಯಾಗಿ, ಐಟಿ ಕ್ಷೇತ್ರದಲ್ಲಿನ ಅಸ್ಥಿರತೆಯು ಈಗ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಮೇಲೆಯೂ ಪರಿಣಾಮ ಬೀರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿಎಂ ಹುಟ್ಟುಹಬ್ಬಕ್ಕೆ ಸ್ಪೆಷಲ್​​ ಗಿಫ್ಟ್​: 4 ಸಾವಿರ ಕೆಜಿ ರಂಗೋಲಿಯಲ್ಲಿ ಮೂಡಿದ ಡಿ.ಕೆ. ಶಿವಕುಮಾರ್​​ – Kannada News | Rangoli Portrait of D. K. Shivakumar Created in Mysuru on the Occasion of His Birthday

ಮೈಸೂರು, ಮೇ 15: ಡಿಸಿಎಂ ಡಿ.‌ಕೆ‌. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸಿಎಂ ಸಿದ್ದರಾಮಯ್ಯ ಅವರ ತವರಲ್ಲಿ ವಿನೂತನವಾಗಿ ಆಚರಿಸಲಾಗಿದೆ. ಮೈಸೂರಿನ ಕೋಟೆ ಅಂಜನೇಯಸ್ವಾಮಿ ದೇವಾಲಯದ ಮುಂಭಾಗ 8,125 ಚದರಡಿ ಜಾಗದಲ್ಲಿ ಡಿಕೆಶಿ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ರಚಿಸಲಾಗಿದೆ. 60 ಅಡಿ ಅಗಲ, 135 ಅಡಿ ಉದ್ದವಿರುವ ಈ ಚಿತ್ರವನ್ನು 4 ಸಾವಿರ ಕೆ.ಜಿ. ರಂಗೋಲಿ ಬಳಸಿ ಕಲಾವಿದ ಪುನೀತ್ ಬಿಡಿಸಿದ್ದಾರೆ. ಕನ್ನಡ ಭಾವುಟದ ಒಳಭಾಗದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾವಚಿತ್ರ ಮೂಡಿಬಂದಿರೋದು ನೋಡುಗರ ಗಮನ ಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೇರಳ ಸಿಎಂ ಆಯ್ಕೆಯ ಕಗ್ಗಂಟು ಬಿಡಿಸಿದ ಸೋನಿಯಾ-ಆಂಟನಿ ‘ಮಾಸ್ಟರ್ ಪ್ಲಾನ್’! ರಟ್ಟಾಯ್ತು ವಿಡಿ ಸತೀಶನ್ ಆಯ್ಕೆ ಹಿಂದಿನ ಗುಟ್ಟು – Kannada News | Inside Story: How Sonia Gandhi and AK Antony Resolved Kerala CM Selection Crisis

ಎಕೆ ಆಂಟನಿ, ವಿಡಿ ಸತೀಶನ್ ಹಾಗೂ ಸೋನಿಯಾ ಗಾಂಧಿImage Credit source: tv9

ತಿರುವನಂತಪುರ, ಮೇ 15: ಕೇರಳ (Kerala) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​​ (UDF) ಭರ್ಜರಿ ಗೆಲುವಿನ ಬಳಿಕ ಎದುರಾಗಿದ್ದ ‘ಮುಖ್ಯಮಂತ್ರಿ ಆಯ್ಕೆ’ಯ ಬಿಕ್ಕಟ್ಟನ್ನು ಹೈಕಮಾಂಡ್ ಅಂತಿಮವಾಗಿ ಯಶಸ್ವಿಯಾಗಿ ಬಗೆಹರಿಸಿದೆ. ಈ ಕಗ್ಗಂಟನ್ನು ಬಿಡಿಸಲು ಯುಪಿಎ ಹಿರಿಯ ನಾಯಕ ಮತ್ತು ಸೋನಿಯಾ ಗಾಂಧಿ (Sonia Gandhi) ಪರಮಾಪ್ತ ಎಕೆ ಆಂಟನಿ (AK Antony) ಸಲಹೆಗಳು ಪ್ರಮುಖ ಪಾತ್ರ ವಹಿಸಿವೆ ಎಂಬ ಕುತೂಹಲಕಾರಿ ಮಾಹಿತಿ ಈಗ ತಿಳಿದುಬಂದಿದೆ. ಕೇರಳದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ವಿಡಿ ಸತೀಶನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರು ಸತತ ಒಂಬತ್ತು ದಿನಗಳ ಕಾಲ ಸಮಾಲೋಚನೆಗಳನ್ನು ನಡೆಸಿದರೂ ಅಂತಿಮ ನಿರ್ಧಾರಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.  ಇಂಥ ಪರಿಸ್ಥಿತಿಯಲ್ಲಿ ಬಿಕ್ಕಟ್ಟು ಬಗೆಹರಿಸಲು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಖುದ್ದು ಅಖಾಡಕ್ಕಿಳಿಯಬೇಕಾಯಿತು!

ಆಂಟನಿ ನೀಡಿದ ಆ ಒಂದು ಫೋನ್ ಕರೆಯ ಸಲಹೆ!

ಸೋನಿಯಾ ಗಾಂಧಿ ಅವರು ಕೇರಳ ರಾಜಕಾರಣದ ನಾಡಿಮಿಡಿತ ಬಲ್ಲ ತಮ್ಮ ಹಳೆಯ ಮಿತ್ರ ಎಕೆ ಆಂಟನಿ ಅವರಿಗೆ ಕರೆ ಮಾಡಿ ಚರ್ಚಿಸಿದರು. ಈ ವೇಳೆ ಆಂಟನಿ ಅವರು ನೀಡಿದ ಪ್ರಾಯೋಗಿಕ ಸಲಹೆಗಳು ಇಡೀ ಚಿತ್ರಣವನ್ನೇ ಬದಲಿಸಿದವು ಎಂದು ಉನ್ನತ ಮೂಲಗಳು ತಿಳಿಸಿವೆ.

ಸೋನಿಯಾ ಗಾಂಧಿ ಬಳಿ ಆಂಟನಿ ಹೇಳಿದ್ದೇನಂತೆ ಗೊತ್ತಾ?

ಕೆಸಿ ವೇಣುಗೋಪಾಲ್​ರನ್ನು ಸಿಎಂ ಮಾಡಿದರೆ, ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅಲ್ಲದೆ, ಕೇರಳದ ಯಾರಾದರೊಬ್ಬ ಶಾಸಕರು ಅವರಿಗಾಗಿ ಕ್ಷೇತ್ರ ಬಿಟ್ಟುಕೊಡಬೇಕಾಗುತ್ತದೆ. ಆ ವಿಧಾನಸಭಾ ಕ್ಷತ್ರಕ್ಕೆ ಹಾಗೂ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಾಗುತ್ತದೆ. ವಿಧಾನಸಭೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಎರಡು ಉಪಚುನಾವಣೆಗಳನ್ನು ಎದುರಿಸುವುದು ಪಕ್ಷಕ್ಕೆ ರಿಸ್ಕ್ ಎಂದು ಆಂಟನಿ ಎಚ್ಚರಿಕೆಯ ಮಾತುಗಳನ್ನಾಡಿದ್ದರು ಎಂಬುದು ತಿಳಿದುಬಂದಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜನರು ವಿಡಿ ಸತೀಶನ್ ಅವರ ನಾಯಕತ್ವ ಮತ್ತು ಕಳೆದ ಐದು ವರ್ಷಗಳ ಅವರ ಹೋರಾಟವನ್ನು ಮೆಚ್ಚಿ ಮತ ನೀಡಿದ್ದಾರೆ. ಮೈತ್ರಿಕೂಟದ ಮಿತ್ರಪಕ್ಷಗಳೂ ಕೂಡ ಸತೀಶನ್ ಪರವಾಗಿಯೇ ಇವೆ. ಹೀಗಾಗಿ ದೆಹಲಿಯಿಂದ ಅಭ್ಯರ್ಥಿಯನ್ನು ಹೇರುವುದು ಸರಿಯಲ್ಲ ಎಂದು ಸೋನಿಯಾ ಗಾಂಧಿ ಬಳಿ ಆಂಟನಿ ತಿಳಿಸಿದ್ದರು ಎಂಬುದು ಉನ್ನತ ಮೂಲಗಳಿಂದ ಗೊತ್ತಾಗಿದೆ.

ರಾಹುಲ್-ಪ್ರಿಯಾಂಕಾ ಸಂಧಾನ

ಆಂಟನಿ ಅವರ ಈ ತರ್ಕಬದ್ಧ ಸಲಹೆಯನ್ನು ಒಪ್ಪಿದ ಸೋನಿಯಾ ಗಾಂಧಿ, ಅಂತಿಮ ನಿರ್ಧಾರಕ್ಕೆ ಬಂದರು. ನಂತರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಕೆಸಿ ವೇಣುಗೋಪಾಲ್ ಅವರೊಂದಿಗೆ ಮಾತನಾಡಿ, ರಾಷ್ಟ್ರ ರಾಜಕಾರಣದಲ್ಲಿ ಅವರ ಅಗತ್ಯವ ಇರುವುದನ್ನು ಮನವರಿಕೆ ಮಾಡಿಕೊಟ್ಟರು. ವೇಣುಗೋಪಾಲ್ ದೆಹಲಿಯಲ್ಲೇ ಮುಂದುವರಿಯಲು ಒಪ್ಪಿದ ನಂತರ, ವಿಡಿ ಸತೀಶನ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.

ತೆರೆಮರೆಯಲ್ಲೇ ಕೆಲಸ ಮಾಡಿ ಸೈ ಎನಿಸಿಕೊಂಡ ಸೋನಿಯಾ ಭಂಟ

ಈ ಇಡೀ ಪ್ರಕ್ರಿಯೆಯಲ್ಲಿ ತೆರೆಯ ಮರೆಯಿಂದಲೇ ಸೋನಿಯಾಗೆ ನೆರವಾದ ಎಕೆ ಆಂಟನಿಯ ಪ್ರಾಮಾಣಿಕತೆ ಮತ್ತು ರಾಜಕೀಯ ಚಾಣಾಕ್ಷತೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರವಾಗಿದೆ. ಮೂರು ಬಾರಿ ಕೇರಳದ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಆಂಟನಿ ಹೈಕಮಾಂಡ್​ಗೆ ಸದಾ ನಿಷ್ಠರಾಗಿದ್ದುದಲ್ಲದೆ, ಸರಳತೆಯಿಂದಲೇ ಗುರುತಿಸಿಕೊಂಡಿದ್ದವರು. ಇದೀಗ ಕಷ್ಟಕಾಲದಲ್ಲಿ ಮತ್ತೆ ಹೈಕಮಾಂಡ್​ಗೆ, ಅದರಲ್ಲೂ ಸೋನಿಯಾಗೆ ನೆರವಾಗುವ ಮೂಲಕ ಕೇರಳ ಕಾಂಗ್ರೆಸ್​​ನ ಬಲು ದೊಡ್ಡ ಬಿಕ್ಕಟ್ಟನ್ನು ಸಲೀಸಾಗಿ ಬಗೆಹರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರಿಂದ ಮತಚಲಾವಣೆ?: 10ಕ್ಕೂ ಹೆಚ್ಚು ಮಂದಿ ಬಂಧನ; ಫೇಲ್​​ ಆಯ್ತಾ SIR? – Kannada News | Foreign Nationals Voted in Tamil Nadu Elections?: More Than 10 Arrested

ಚೆನ್ನೈ, ಮೇ 15: ತಮಿಳುನಾಡು (Tamil Nadu) ವಿಧಾನಸಭೆ ಚುನಾವಣಾ ಫಲಿತಾಂಶ (Election Result) ಪ್ರಕಟವಾಗಿ, ನೂತನ ಸರ್ಕಾರ ರಚನೆ ಬೆನ್ನಲ್ಲೇ ಆಘಾತಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಎಲೆಕ್ಷನ್​​ನಲ್ಲಿ ಮತ ಚಲಾಯಿಸಿರುವ ಆರೋಪದ ಮೇಲೆ ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದ ಹಲವರನ್ನು ಚೆನ್ನೈ ಮತ್ತು ಮದುರೈ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತರಲ್ಲಿ ಹೆಚ್ಚಿನವರು ಶ್ರೀಲಂಕಾ ಮೂಲದವರಾಗಿದ್ದು, ಚೆನ್ನೈನಲ್ಲಿ ಕನಿಷ್ಠ 10 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ. ಶ್ರೀಲಂಕಾದ ರಂಜಿನಿ (59), ಸರ್ಫುದೀನ್ (68), ನಿಲಾಂತಿ (44), ಜಯಂತನ್ (40), ಚಾರ್ಲಿ ಬಾಲಚಂದ್ರನ್ (48), ಚಕ್ರವರ್ತಿ ಲೋಗಪ್ರಿಯಾ (50) ಮತ್ತು ಸುನಿತಾ ಚಕ್ರವರ್ತಿ (48) ಬಂಧಿತರಾಗಿದ್ದಾರೆ. ಇನ್ನು ಯುಕೆ ಮೂಲದ ಅಯ್ಯಾದುರೈ (53), ಇಂಡೋನೇಷ್ಯಾದ ಟಿಟ್ಟಿನ್ ಮರಿಯಟ್ಟಿ (47) ಹಾಗೂ ಕೆನಡಾ ಮೂಲದ ಜಿತ್ತೇಂದ್ರನಾಥ್ (38) ಕೂಡ ಬಂಧಿತರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ:  ಅವನತಿಯತ್ತ ಎಐಎಡಿಎಂಕೆ; ಒಳಜಗಳದಿಂದಾಗಿ ಎಂಜಿಆರ್, ಜಯಲಲಿತಾ ಪರಂಪರೆ ಕೊನೆಯಾಗುತ್ತಾ?

ಪ್ರಯಾಣಕ್ಕೂ ಮುನ್ನ ನಡೆದ ತಪಾಸಣೆಯ ವೇಳೆ ಪ್ರಯಾಣಿಕರ ತೋರು ಬೆರಳಿನಲ್ಲಿ ಮತದಾನ ಗುರುತಿನ ಮಸಿ (indelible ink) ಕಂಡುಬಂದ ಹಿನ್ನೆಲೆಯಲ್ಲಿ ಬಂಧನ ನಡೆದಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಶ್ರೀಲಂಕಾ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ವ್ಯಕ್ತಿಗಳ ಬಳಿ ಭಾರತದ ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿಗಳೂ ಪತ್ತೆಯಾಗಿವೆ. ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಭಾರತೀಯ ಮತದಾರರ ಗುರುತಿನ ಚೀಟಿ ಹೊಂದಿರುವುದು ಭಾರತೀಯ ಕಾನೂನು ಪ್ರಕಾರ ಅಕ್ರಮ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಈ ದಾಖಲೆಗಳನ್ನು ಹೇಗೆ ಪಡೆದರು ಹಾಗೂ ಇತ್ತೀಚಿನ ಚುನಾವಣೆಯಲ್ಲಿ ಮತ ಚಲಾಯಿಸಲು ಅದನ್ನು ಬಳಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಇನ್ನು ಒಟ್ಟು ಬಂಧಿತರ ಸಂಖ್ಯೆ ಎಷ್ಟು ಎಂಬ ನಿಖರ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆದಿದ್ದರೂ, ವಿದೇಶಿ ನಾಗರಿಕರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಮುಂದುವರಿದಿರುವುದು ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ನಡೆದ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸುಮಾರು 74 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, 27.5 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿತ್ತು ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್! – Kannada News | Drug Crackdown in Karnataka: Ganja Seized in Mangaluru and Bengaluru Railway Station

ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್!

ಮಂಗಳೂರು/ಬೆಂಗಳೂರು, ಮೇ 15: ರಾಜ್ಯದ ಪ್ರಮುಖ ನಗರಗಳಲ್ಲಿ ಮಾದಕ ವಸ್ತುಗಳ (Drugs) ಹಾವಳಿ ತಡೆಯಲು ಪೊಲೀಸರು ಮತ್ತು ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಕಡೆಗಳಲ್ಲಿ ಒಟ್ಟಾರೆಯಾಗಿ 16 ಕೆಜಿಗೂ ಹೆಚ್ಚು ಮಾದಕ ವಸ್ತುಗಳು ಪತ್ತೆಯಾಗಿವೆ.

ಮುಖ್ಯಾಂಶಗಳು

  • ಮಂಗಳೂರಿನ ಮೇರಿಹಿಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇರ್ಷಾದ್ ಎಂಬಾತನ ಬಂಧನ.
  • ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಾಲೀಕರಿಲ್ಲದ 13.41 ಕೆಜಿ ಗಾಂಜಾ ಚೀಲ ಜಪ್ತಿ.
  •  ಒಟ್ಟು 26 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು.

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ 25 ಲಕ್ಷ ಮೌಲ್ಯದ ಗಾಂಜಾ ಪತ್ತೆ

ರಾಜಧಾನಿ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಅನಾಮಧೇಯವಾಗಿ ಬಿಟ್ಟು ಹೋಗಿದ್ದ ಚೀಲವನ್ನು ತಪಾಸಣೆ ನಡೆಸಿದಾಗ 13.41 ಕೆಜಿ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಅಬಕಾರಿ ಅಧಿಕಾರಿಗಳು ಸಾಮಾನ್ಯ ತಪಾಸಣೆ ನಡೆಸುತ್ತಿದ್ದ ವೇಳೆ ಸಿಕ್ಕಿಬೀಳುವ ಭೀತಿಯಿಂದ ಪೆಡ್ಲರ್‌ಗಳು ಗಾಂಜಾ ಚೀಲವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಗಾಂಜಾ ಎಲ್ಲಿಂದ ಎಲ್ಲಿಗೆ ರವಾನೆಯಾಗುತ್ತಿತ್ತು ಎಂಬುದು ಇನ್ನು ತಿಳಿದುಬಂದಿಲ್ಲ. ಸದ್ಯ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಇದನ್ನೂ ಓದಿ 35 ಲಕ್ಷ ರೂ. ಮೌಲ್ಯದ ಹೈಡ್ರೋವಿಡ್ ಗಾಂಜಾ ಸಾಗಿಸುತ್ತಿದ್ದ ವಿದ್ಯಾರ್ಥಿನಿ ಬಂಧನ!

ಮಂಗಳೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ – ಆರೋಪಿ ಅರೆಸ್ಟ್

ಮಂಗಳೂರಿನ ಮೇರಿಹಿಲ್ ಬಳಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಕಾವೂರು ಠಾಣೆ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಉಳ್ಳಾಲ ಮುಕ್ಕಚೇರಿ ನಿವಾಸಿ ಇರ್ಷಾದ್ ಬಂಧಿತ ಆರೋಪಿ. ಬಂಧಿತನಿಂದ ಅಂದಾಜು 1.56 ಲಕ್ಷ ರೂ. ಮೌಲ್ಯದ 3.13 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಡ್ರಗ್ ಜಾಲದ ಹಿಂದಿರುವವರ ಪತ್ತೆಗೆ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಮ್ಮ ಪ್ಲೀಸ್ ಮಲಗೋಕೆ ಬಿಡಮ್ಮ; ಹಾಯಾಗಿ ಮಲಗಿರುವ ಕಂದಮ್ಮನನ್ನು ಎಬ್ಬಿಸುತ್ತಿರುವ ತಾಯಾನೆ – Kannada News | A mother elephant gently wakes up her baby elephant with her trunk

ಆನೆಗಳು (elephants) ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಮರಿಯಾನೆಗಳ ಆಟ ತುಂಟಾಟ, ತಾಯಾನೆ ತನ್ನ ಮರಿಗಳ ಮೇಲೆ ತೋರುವ ಪ್ರೀತಿಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಹಾಯಾಗಿ ಮಲಗಿ ನಿದ್ರಿಸುತ್ತಿರುವ ಮರಿಯಾನೆಯನ್ನು ತಾಯಾನೆ ಮೆಲ್ಲನೆ ಎಬ್ಬಿಸಲು ಪ್ರಯತ್ನಿಸುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

leezahverse ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಾಯಿ ಪ್ರೀತಿಯನ್ನು ಕಾಣಬಹುದು. ಮರಿಯಾನೆಯೊಂದು ಹಾಯಾಗಿ ನಿದ್ರಿಸುತ್ತಿದೆ. ನಿದ್ರೆಗೆ ಜಾರಿರುವ ಕಂದಮ್ಮನನ್ನು ತಾಯಿ ಆನೆಯು ಮೆಲ್ಲನೆ ಎಬ್ಬಿಸುತ್ತಿದೆ. ಆದರೆ ಆನೆ ಮರಿ ಮಾತ್ರ ಸ್ವಲ್ಪ ಮಲಗುವೆ, ಇರು ಅಮ್ಮ ಎನ್ನುವಂತೆ ಎಚ್ಚರಗೊಳ್ಳದೇ ಗಡದ್ದಾಗಿ ನಿದ್ರಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋದ ಕೊನೆಗೆ ಮರಿಯಾನೆ ಮೆಲ್ಲನೆ ಎದ್ದು ನಿಂತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾನೇ ಮುದ್ದಾಗಿದೆ ಎಂದರೆ, ಮತ್ತೊಬ್ಬರು, ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನ್ನ ಮುಂಜಾನೆ ಇದೇ ರೀತಿ ಇರುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಬಾಗಿಲಿನ ಹಿಂದೆ ಈ ವಸ್ತುಗಳನ್ನು ನೇತುಹಾಕಲೇಬೇಡಿ; ಇದು ಸಂಕಷ್ಟಕ್ಕೆ ಆಹ್ವಾನ! – Kannada News | Vastu Tips: 5 Things You Must Never Keep Behind Doors for Positive Home Energy

ಬಾಗಿಲಿನ ಹಿಂದೆ ಈ ವಸ್ತುಗಳನ್ನು ನೇತುಹಾಕಬೇಡಿ
Image Credit source: Pinterest

ಮನೆಯ ಪ್ರತಿಯೊಂದು ಮೂಲೆಯೂ ಒಂದಲ್ಲ ಒಂದು ರೀತಿಯ ಶಕ್ತಿಯನ್ನು (Energy) ಹೊಂದಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಪ್ರಕಾರ, ಮನೆಯ ಬಾಗಿಲುಗಳು ಕೇವಲ ಓಡಾಟದ ದಾರಿಯಲ್ಲ, ಅವು ಸುಖ-ಸಮೃದ್ಧಿ ಮನೆಗೆ ಪ್ರವೇಶಿಸುವ ದ್ವಾರಗಳು. ಆದರೆ ನಾವು ತಿಳಿಯದೆಯೇ ಬಾಗಿಲಿನ ಹಿಂದೆ ಕೆಲವು ವಸ್ತುಗಳನ್ನು ನೇತುಹಾಕುತ್ತೇವೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಬಾಗಿಲಿನ ಹಿಂಭಾಗದಲ್ಲಿ ಯಾವ 5 ವಸ್ತುಗಳನ್ನು ಇಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬಟ್ಟೆಗಳ ರಾಶಿ:

ಬಾಗಿಲಿನ ಹಿಂದೆ ಕೊಂಡಿಗಳಿಗೆ (Hooks) ಬಟ್ಟೆಗಳನ್ನು ರಾಶಿ ಹಾಕುವುದು ಅನೇಕರ ಅಭ್ಯಾಸ. ಆದರೆ ವಾಸ್ತು ಪ್ರಕಾರ, ಬಟ್ಟೆಗಳ ಈ ಹೊರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದು ಕುಟುಂಬದ ಸದಸ್ಯರಲ್ಲಿ ಮಾನಸಿಕ ಕಿರಿಕಿರಿ, ಅಶಾಂತಿ ಮತ್ತು ಸದಾ ಏನೋ ಒಂದು ರೀತಿಯ ಭಾರವಾದ ಭಾವನೆಯನ್ನು ಉಂಟುಮಾಡುತ್ತದೆ.

ಔಷಧಿಗಳು:

ನೆನಪಿರಲಿ ಎಂಬ ಕಾರಣಕ್ಕೆ ಬಾಗಿಲಿನ ಹಿಂದೆ ಔಷಧಿಗಳ ಚೀಲವನ್ನು ನೇತುಹಾಕಬೇಡಿ. ಔಷಧಿಗಳು ರೋಗ ಮತ್ತು ಸಂಕಟದ ಸಂಕೇತ. ಬಾಗಿಲಿನ ಹಿಂದೆ ಇವುಗಳನ್ನು ಇಡುವುದರಿಂದ ಮನೆಯಲ್ಲಿ ಅನಾರೋಗ್ಯದ ಪ್ರಭಾವ ಹೆಚ್ಚಾಗುತ್ತದೆ ಮತ್ತು ಅನಗತ್ಯ ವೈದ್ಯಕೀಯ ವೆಚ್ಚಗಳು ಬೆಳೆಯುತ್ತವೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಹಳೆಯ ಕ್ಯಾಲೆಂಡರ್‌:

ಸಮಯವು ಪ್ರಗತಿಯ ಸಂಕೇತ. ಹಳೆಯ ವರ್ಷದ ಕ್ಯಾಲೆಂಡರ್‌ಗಳನ್ನು ಬಾಗಿಲಿನ ಹಿಂದೆ ಹಾಗೆಯೇ ಬಿಡುವುದು ನಿಮ್ಮ ಜೀವನದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದು ನಿಮ್ಮನ್ನು ಹಳೆಯ ನೆನಪುಗಳಲ್ಲೇ ಸಿಲುಕಿಸಿ, ಜೀವನದಲ್ಲಿ ಹೊಸ ಅವಕಾಶಗಳು ಬರದಂತೆ ತಡೆಯುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಪಾದರಕ್ಷೆಗಳು:

ಬಾಗಿಲಿನ ಹಿಂದೆ ಚಪ್ಪಲಿ ಅಥವಾ ಬೂಟುಗಳನ್ನು ಇಡುವುದು ವಾಸ್ತು ದೋಷಕ್ಕೆ ಪ್ರಮುಖ ಕಾರಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಾದರಕ್ಷೆಗಳು ರಾಹುವಿಗೆ ಸಂಬಂಧಿಸಿವೆ. ಇವುಗಳನ್ನು ಬಾಗಿಲಿನ ಹಿಂದೆ ಇಟ್ಟಾಗ ರಾಹುವಿನ ನಕಾರಾತ್ಮಕ ಪ್ರಭಾವ ಹೆಚ್ಚಾಗಿ, ಮನೆಯಲ್ಲಿ ದಾರಿದ್ರ್ಯ ಮತ್ತು ಸದಾ ಜಗಳದ ವಾತಾವರಣ ನಿರ್ಮಾಣವಾಗುತ್ತದೆ.

ಒದ್ದೆ ಟವೆಲ್:

ಸ್ನಾನದ ನಂತರ ಒದ್ದೆ ಟವೆಲ್ ಅನ್ನು ಬಾಗಿಲಿನ ಹಿಂದೆ ಒಣಗಲು ಹಾಕುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟುಬಿಡಿ. ಒದ್ದೆಯಾದ ಬಟ್ಟೆಗಳು ನಕಾರಾತ್ಮಕತೆಯನ್ನು ಬೇಗನೆ ಆಕರ್ಷಿಸುತ್ತವೆ. ಇದರಿಂದ ದಂಪತಿಗಳ ನಡುವೆ ಅಥವಾ ಕುಟುಂಬದ ಸದಸ್ಯರ ನಡುವೆ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಕಂಪ್ಯೂಟರ್ ಆಧಾರಿತ ಪರೀಕ್ಷೆ; ಜೂನ್ 21ಕ್ಕೆ ರೀ-ಎಕ್ಸಾಮ್! – Kannada News | Major NEET Changes: Computer Based Test and June 21 Re exam Confirmed by Govt

ದೆಹಲಿ, ಮೇ.15: ನೀಟ್-ಯುಜಿ ಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವಾಲಯವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ (CBT Mode) ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.

ಇನ್ನು ರದ್ದುಗೊಂಡಿದ್ದ ನೀಟ್-ಯುಜಿ 2026ರ ಮರು ಪರೀಕ್ಷೆಯು ಜೂನ್ 21 ರಂದು ನಡೆಯಲಿದೆ.ಜೂನ್ 14 ರೊಳಗೆ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳಲು ಒಂದು ವಾರ ಮುಂಚಿತವಾಗಿ ಅವಕಾಶ ನೀಡಲಾಗುವುದು. ಮರು ಪರೀಕ್ಷೆಗೆ ಯಾವುದೇ ಶುಲ್ಕವಿರುವುದಿಲ್ಲ. ಈ ಹಿಂದೆ ಪಾವತಿಸಿದ್ದ ಪರೀಕ್ಷಾ ಶುಲ್ಕವನ್ನು ಅಭ್ಯರ್ಥಿಗಳಿಗೆ ಮರುಪಾವತಿ ಮಾಡಲಾಗುವುದು.

ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್, “ಪರೀಕ್ಷಾ ವ್ಯವಸ್ಥೆಯಲ್ಲಿ ಅಕ್ರಮ ಎಸಗುವವರ ವಿರುದ್ಧ ನಮ್ಮ ಸರ್ಕಾರವು ‘ಶೂನ್ಯ ಸಹನೆ’ (Zero Tolerance) ನೀತಿಯನ್ನು ಹೊಂದಿದೆ. ಪತ್ರಿಕೆ ಸೋರಿಕೆ ಮಾಡಿದ ‘ಮಾಫಿಯಾ’ಗಳು ಕಷ್ಟಪಟ್ಟು ಓದುವ ವಿದ್ಯಾರ್ಥಿಗಳ ಸೀಟುಗಳನ್ನು ಕಸಿಯಲು ಬಿಡುವುದಿಲ್ಲ,” ಎಂದು ಎಚ್ಚರಿಸಿದ್ದಾರೆ. ಈ ಹಗರಣದ ಬೇರುಗಳನ್ನು ಪತ್ತೆಹಚ್ಚಲು ಸಿಬಿಐ ತನಿಖೆಯನ್ನು ತೀವ್ರಗೊಳಿಸಲಾಗಿದೆ.

ಪೇಪರ್-ಪೆನ್ ಮಾದರಿಯ ಪರೀಕ್ಷೆಯಲ್ಲಿ ಸೋರಿಕೆಯ ಸಾಧ್ಯತೆ ಹೆಚ್ಚಿರುವುದರಿಂದ, ಐಐಟಿ-ಜೆಇಇ ಮಾದರಿಯಲ್ಲಿಯೇ ನೀಟ್ ಪರೀಕ್ಷೆಯನ್ನೂ ಡಿಜಿಟಲ್ ರೂಪಕ್ಕೆ ತರಲಾಗುತ್ತಿದೆ. ಎನ್‌ಟಿಎ (NTA) ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲಾಗುತ್ತಿದೆ.

ಇದನ್ನೂ ಓದಿ: ನೀಟ್ ಆಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್: ಜೂನ್ 21ಕ್ಕೆ ನೀಟ್-ಯುಜಿ ಮರು ಪರೀಕ್ಷೆ ನಿಗದಿ!

ಜೂನ್ 21ಕ್ಕೆ ನೀಟ್-ಯುಜಿ ಮರು ಪರೀಕ್ಷೆ ನಿಗದಿ!

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ ತಡರಾತ್ರಿ ನಡೆಸಿದ ಉನ್ನತ ಮಟ್ಟದ ತುರ್ತು ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ರದ್ದಾಗಿದ್ದ ಪರೀಕ್ಷೆಗೆ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಜೂನ್ 21 ರಂದು ಮರು ಪರೀಕ್ಷೆ ನಡೆಯಲಿದೆ ಎಂದು ಘೋಷಿಸಲಾಗಿದೆ. ಮೇ 3 ರಂದು ನಡೆದಿದ್ದ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ, ಜೂನ್ 21 ರಂದು ದೇಶಾದ್ಯಂತ ಮರು ಪರೀಕ್ಷೆ ನಡೆಸಲು ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಧುರಿ ದೀಕ್ಷಿತ್​ಗೆ ಕನಸಲ್ಲೂ ಬಂದು ಕಾಡುತ್ತಿದ್ದ ಈ ಕ್ರಿಕೆಟಿಗ – Kannada News | Madhuri Dixit’s Birthday: Reveals Crush on Sunil Gavaskar

ಬಾಲಿವುಡ್‌ನ ‘ಧಕ್ ಧಕ್ ಗರ್ಲ್’ ಮಾಧುರಿ ದೀಕ್ಷಿತ್ ಅವರಿಗೆ (Madhuri Dixit) ಇಂದು (ಮೇ 15) 59ನೇ ಜನ್ಮದಿನದ ಸಂಭ್ರಮ. ದಶಕಗಳ ಕಾಲ ತಮ್ಮ ನಟನೆ ಮತ್ತು ನೃತ್ಯದ ಮೂಲಕ ಭಾರತೀಯ ಚಿತ್ರರಂಗವನ್ನು ಆಳಿದ ಮಾಧುರಿ, ಇಂದಿಗೂ ಸೌಂದರ್ಯ ಮತ್ತು ಪ್ರತಿಭೆಯ ವಿಷಯದಲ್ಲಿ ಹೊಸ ತಲೆಮಾರಿನ ನಟಿಯರಿಗೆ ಸ್ಫೂರ್ತಿಯಾಗಿದ್ದಾರೆ. ಮಾಧುರಿ ಅವರ ಜನ್ಮದಿನದ ಈ ಸಂದರ್ಭದಲ್ಲಿ ಅವರ ಹಳೆಯ ಸಂದರ್ಶನವೊಂದು ಸಖತ್ ಸುದ್ದಿಯಾಗುತ್ತಿದೆ. ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾಧುರಿ ಅವರು ತಮಗೆ ಭಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಮೇಲೆ ಕ್ರಶ್ ಇತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು.

ಮಾಧುರಿಗಿಂತ ಗವಾಸ್ಕರ್ ಸುಮಾರು 17 ವರ್ಷ ದೊಡ್ಡವರಾಗಿದ್ದರೂ, ಅವರ ಆಟ ಮತ್ತು ವ್ಯಕ್ತಿತ್ವಕ್ಕೆ ಮಾಧುರಿ ಫಿದಾ ಆಗಿದ್ದರು. ‘ನಾನು ಸುನಿಲ್ ಗವಾಸ್ಕರ್ ಅವರ ಮೇಲೆ ಕ್ರೇಜ್ -ಇದೆ. ಅವರು ತುಂಬಾ ಸುಂದರವಾಗಿದ್ದಾರೆ, ಅವರ ಹಿಂದೆ ಓಡಬೇಕು ಎನಿಸುತ್ತದೆ. ಅವರು ನನ್ನ ಕನಸಿನಲ್ಲೂ ಬರುತ್ತಾರೆ’ ಎಂದು ನಟಿ ಅಂದು ಮುಕ್ತವಾಗಿ ಹೇಳಿಕೊಂಡಿದ್ದರು.

90ರ ದಶಕದಲ್ಲಿ ಮಾಧುರಿ ದೀಕ್ಷಿತ್ ಅವರ ಕ್ರೇಜ್ ಎಷ್ಟಿತ್ತೆಂದರೆ, ಅವರು ಸಂಭಾವನೆ ವಿಷಯದಲ್ಲಿ ಸೂಪರ್‌ಸ್ಟಾರ್ ನಟರನ್ನೇ ಹಿಂದಿಕ್ಕಿದ್ದರು. ಇದಕ್ಕೆ ಅತ್ಯುತ್ತಮ ಉದಾಹರಣೆ ‘ಹಮ್ ಆಪ್ಕೆ ಹೈ ಕೌನ್’ ಸಿನಿಮಾ. 1994ರ ಈ ಬ್ಲಾಕ್‌ಬಸ್ಟರ್ ಚಿತ್ರಕ್ಕಾಗಿ ಮಾಧುರಿ ಬರೋಬ್ಬರಿ 2.7 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ವರದಿಗಳ ಪ್ರಕಾರ, ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಲ್ಮಾನ್ ಖಾನ್ ಅವರಿಗಿಂತಲೂ ಮಾಧುರಿ ಅವರೇ ಹೆಚ್ಚು ಹಣ ಪಡೆದಿದ್ದರು. ಆ ಕಾಲಕ್ಕೆ ಈ ಮೊತ್ತವು ಬಾಲಿವುಡ್‌ನಲ್ಲಿ ಅತಿ ದೊಡ್ಡ ದಾಖಲೆಯಾಗಿತ್ತು.

ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಆದ ಮಾಧುರಿ ದೀಕ್ಷಿತ್; ಹೊಸ ಅವತಾರದಲ್ಲಿ ಧಕ್ ಧಕ್ ಗರ್ಲ್

ಸದ್ಯ ಮಾಧುರಿ ಬೆಳ್ಳಿತೆರೆಯಿಂದ ಸ್ವಲ್ಪ ದೂರವಿದ್ದರೂ, ರಿಯಾಲಿಟಿ ಶೋಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. 59ರ ಪ್ರಾಯದಲ್ಲೂ ಅವರ ಫಿಟ್‌ನೆಸ್ ಮತ್ತು ನಗು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:10 pm, Fri, 15 May 26

Source link

Exit mobile version