Headlines

ಸರ್ಕಾರಿ ಮಕ್ಕಳಿಗೆ ‘ಸರ್ಪ್ರೈಸ್’ ಕೊಟ್ಟ ಸಚಿವ ಜಮೀರ್: ಸ್ವಂತ ಖರ್ಚಿನಲ್ಲಿ 60 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ರೈಡ್ – Kannada News | Hampi Utsav Joy: 60 Govt School Kids Experience Helicopter Ride, Thanks to Minister

ಬಳ್ಳಾರಿ, ಫೆ.14: ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಸರ್ಕಾರಿ ಶಾಲಾ ಮಕ್ಕಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿದೆ. ದೂರದಿಂದ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಪುಟಾಣಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಆಕಾಶದಲ್ಲಿ ಹಾರಾಡುವ ಅವಕಾಶ ಮಾಡಿಕೊಡುವ ಮೂಲಕ ದೊಡ್ಡ ‘ಸರ್ಪ್ರೈಸ್’ ನೀಡಿದ್ದಾರೆ. ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ನೋಡಲು ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳು ಕುತೂಹಲದಿಂದ ಬಂದಿದ್ದರು.ಈ ವೇಳೆ ಸ್ಥಳದಲ್ಲಿದ್ದ ಸಚಿವ ಜಮೀರ್ ಅಹಮದ್ ಖಾನ್…

Read More

ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ತೆಲುಗಿನ ಜನಪ್ರಿಯ ಹಾಸ್ಯ ನಟ ನವೀನ್ ಪೋಲಿಶೆಟ್ಟಿ ನಟಿಸಿರುವ ಹಾಸ್ಯಮಯ ಸಿನಿಮಾ ‘ಅನಗನಗ ಒಕ ರಾಜು’ ಇದೇ ವಾರ ಒಟಿಟಿಗೆ ಬಂದಿದೆ. ಅಸಲಿಗೆ ಈ ಸಿನಿಮಾ ಸಹ ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಒಳ್ಳೆಯ ಪ್ರದರ್ಶನ ಕಂಡಿತ್ತು. ಇದೀಗ ಈ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು. ಕಮ್ ಬ್ಯಾಕ್ ಮಾಡಿರುವ ಮಲಯಾಳಂ ಸ್ಟಾರ್ ನಟ ನಿವಿನ್ ಪಾಲಿ ಅವರ ಹೊಸ ಸಿನಿಮಾ ‘ಬೇಬಿ ಗರ್ಲ್’ ಈ ವಾರ ಒಟಿಟಿಗೆ ಬಂದಿದೆ. ಜನವರಿಯಲ್ಲಿ ಬಿಡುಗಡೆ ಆಗಿದ್ದ ಈ…

Read More

ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ – Kannada News | Haveri: Congress Sadhana Convention: 1000 days of celebration; Land guarantee for one lakh families

ಭೂಗ್ಯಾರಂಟಿ ಸಮರ್ಪಣಾ ಸಮಾವೇಶImage Credit source: cm tweet ಹಾವೇರಿ, ಫೆಬ್ರವರಿ 14: ರಾಜ್ಯದಲ್ಲಿ ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದು 1 ಸಾವಿರ ದಿನಗಳು ಕಳೆದಿವೆ. ಹೀಗಾಗಿ ಹಾವೇರಿಯಲ್ಲಿ ಇಂದು ಕಾಂಗ್ರೆಸ್​ ಭೂ ಗ್ಯಾರಂಟಿ ಸಮರ್ಪಣಾ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನ ಸಿಎಂ ಸಿದ್ದರಾಮಯ್ಯ (Siddaramaiah) ವಿತರಣೆ ಮಾಡಿದರು. ಆದರೆ ಇದೇ ಸಮಾವೇಶ ‘ದೋಸ್ತಿ’ಗಳ ವಾಕ್ಸಮರಕ್ಕೆ ವೇದಿಕೆ ಆಗಿತ್ತು. ಸಮಾವೇಶದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ ಸಮಾವೇಶದಲ್ಲಿ…

Read More

ಕಾಂಗ್ರೆಸ್ ಅಸ್ಸಾಂನಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತೇ ವಿನಃ ಅಭಿವೃದ್ಧಿಗೆ ಗಮನ ಕೊಡಲಿಲ್ಲ; ಪ್ರಧಾನಿ ಮೋದಿ ಟೀಕೆ – Kannada News | PM Narendra Modi slams Congress for neglecting Assam in Guwahati poll rally

ಗುವಾಹಟಿ, ಫೆಬ್ರವರಿ 14: ಪ್ರಧಾನಿ ನರೇಂದ್ರ ಮೋದಿ ಇಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ಬೃಹತ್ ಸಾರ್ವಜನಿಕ ರ‍್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸಿತು, ರಕ್ಷಣಾ ಒಪ್ಪಂದಗಳಲ್ಲಿ ಭ್ರಷ್ಟಾಚಾರ ಮಾಡಿತು, ಅಸ್ಸಾಂನಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು, ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡಿತು ಎಂದು ಮೋದಿ (PM Modi in Assam) ಆರೋಪಿಸಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್ ಭಾರತವನ್ನು ವಲಸಿಗರ ಕೈಗೆ ಒಪ್ಪಿಸಲು ಮುಂದಾಗಿತ್ತು….

Read More

ಸುಪ್ರೀಂನಲ್ಲಿ ಯತ್ನಾಳ್‌ಗೆ ಜಯ, ಹಮೀದ್ ಮುಶ್ರೀಫ್‌ಗೆ ಮುಖಭಂಗ: ಹೈಕೋರ್ಟ್ ಆದೇಶ ಎತ್ತಿಹಿಡಿದ ಕೋರ್ಟ್! – Kannada News | Vijayapura Yatnal Wins SC Case: Election Petition Rejected, MLA Position Secured

ವಿಜಯಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಮುಖಭಂಗವಾಗಿದೆ. ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯುವ ಮೂಲಕ ಯತ್ನಾಳ್ ಅವರ ಶಾಸಕ ಸ್ಥಾನದ ಮೇಲಿದ್ದ ತೂಗುಗತ್ತಿ ದೂರವಾಗಿದೆ.ಕಳೆದ ಚುನಾವಣೆಯಲ್ಲಿ ಯತ್ನಾಳ್ ಅವರು ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಅಬ್ದುಲ್ ಹಮೀದ್…

Read More

IND vs PAK: ಸೂಪರ್ ಸಂಡೇಯಂದು ಭಾರತ-ಪಾಕ್ ನಡುವೆ ಎರಡೆರಡು ಪಂದ್ಯ – Kannada News | India vs Pakistan: Feb 15, 2026 Two Epic Cricket Clashes in T20 World Cup and Asia Cup

ಫೆಬ್ರವರಿ 15, 2026 ರ ಭಾನುವಾರದಂದು ಟಿ20 ವಿಶ್ವಕಪ್​ನಲ್ಲಿ (T20 World Cup 2026) ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಈ ದಿನಾಂಕದಂದು, ಭಾರತ ಮತ್ತು ಪಾಕಿಸ್ತಾನ (India vs Pakistan) ಕ್ರಿಕೆಟ್ ತಂಡಗಳು ಮೈದಾನದಲ್ಲಿ ಪರಸ್ಪರ ಮುಖಾಮುಖಿಯಾಗುತ್ತವೆ. ಆದರೆ ವಿಶೇಷವೆಂದರೆ ಕ್ರಿಕೆಟ್ ಅಭಿಮಾನಿಗಳು ಈ ದೇಶಗಳ ನಡುವೆ ಒಂದೇ ದಿನ ಒಂದಲ್ಲ ಎರಡು ಪಂದ್ಯಗಳನ್ನು ನೋಡುವ ಅವಕಾಶ ಪಡೆದಿದ್ದಾರೆ. ಒಂದೆಡೆ 2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಹಿರಿಯ ತಂಡಗಳು…

Read More

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ – Kannada News | Art of Living Mahashivaratri 2026: Gurudev Sri Sri’s Rudra Pooja and Midnight Meditation

ಬೆಂಗಳೂರು, ಫೆಬ್ರವರಿ 13: ಆರ್ಟ್ ಆಫ್ ಲಿವಿಂಗ್​​ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಈ ವರ್ಷವೂ ಮಹಾಶಿವರಾತ್ರಿ ಮಹೋತ್ಸವವನ್ನು ಅತ್ಯಂತ ಭಕ್ತಿಭಾವದಿಂದ ಮತ್ತು ವೈದಿಕ ಸಂಪ್ರದಾಯದಂತೆ ಆಚರಿಸಲಾಗುತ್ತಿದೆ. ರಾತ್ರಿಯಿಡೀ ನಡೆಯಲಿರುವ ಈ ಮಹೋತ್ಸವದಲ್ಲಿ ರುದ್ರಪೂಜೆ, ಭಜನೆ, ಧ್ಯಾನ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಭಾರತದೆಲ್ಲೆಡೆಯಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಗುರುದೇವ ಶ್ರೀ ಶ್ರೀ ರವಿ ಶಂಕರರು ಅವರ ಸಾನ್ನಿಧ್ಯದಲ್ಲಿ ನಡೆಯುವ ಈ ಪವಿತ್ರ ಸಮಾರಂಭವು ಅಂತರಂಗದ ಶಾಂತಿ, ಸಮೂಹ ಪ್ರಾರ್ಥನೆ ಮತ್ತು ಆತ್ಮಪುನಶ್ಚೇತನದ ಅನನ್ಯ ಅನುಭವವನ್ನು ನೀಡಲಿದೆ….

Read More

ನೀರಿನ ಬಾಟಲಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ಸರಳ ಸಲಹೆ ಪಾಲಿಸಿ – Kannada News | This simple tip will help you get rid of bad odors from water bottle

ಬಹುತೇಕ ಎಲ್ಲರೂ ಎಲ್ಲಿಗೇ ಹೋದರೂ ನೀರಿನ ಬಾಟಲಿಯನ್ನು (water bottle) ಜೊತೆಗೆ ಕೊಂಡೊಯ್ಯುತ್ತಾರೆ, ಮನೆಯಲ್ಲೂ ಬಾಟಲಿಯಲ್ಲಿ ತುಂಬಿಸಿದ ನೀರನ್ನೇ ಕುಡಿಯುತ್ತಾರೆ. ಆದ್ರೆ ಅದರ ಸ್ವಚ್ಛತೆಯ ಬಗ್ಗೆ ಹೆಚ್ಚಿನವರು ಕಾಳಜಿಯನ್ನು ವಹಿಸುವುದೇ ಇಲ್ಲ. ಬಾಟಲಿಯನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ ಬ್ಯಾಕ್ಟೀರಿಯಾಗಳು ಶೇಖರಣೆಗೊಂಡು ದುರ್ವಾಸನೆ ಬರಲು ಆರಂಭಿಸುತ್ತದೆ. ಇಂತಹ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ನೀರಿನ ಬಾಟಲಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮುಖ್ಯ. ಹೀಗಿರುವಾಗ ಈ ಕೆಲವೊಂದು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ನೀರಿನ ಬಾಟಲಿಯಿಂದ…

Read More

ರಕ್ಷಿತ್ ಶೆಟ್ಟಿ ಹೇಗಿದ್ದಾರೆ, ಏನು ಮಾಡ್ತಿದ್ದಾರೆ? ಗೆಳೆಯ ಹೇಮಂತ್ ಕೊಟ್ಟರು ಉತ್ತರ – Kannada News | Hemanth Rao talks about Rakshit Shetty says what is he doing

‘ಸಪ್ತ ಸಾಗರದಾಚೆ ಎಲ್ಲೊ-ಸೈಡ್ ಬಿ’ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳಾಗುತ್ತಾ ಬಂದಿದೆ. ಆ ಸಿನಿಮಾದ ಬಿಡುಗಡೆ ವೇಳೆ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ (Rakshit Shetty) ಅದಾದ ಬಳಿಕ ಕಣ್ಮರೆ ಆಗಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾಕ್ಕೆ ಮುಂಚೆಯೇ ‘ರಿಚರ್ಡ್ ಆಂಟೊನಿ’ ಸಿನಿಮಾ ಘೋಷಿಸಿದ್ದ ರಕ್ಷಿತ್ ಶೆಟ್ಟಿ ಅದರ ಶೂಟಿಂಗ್ ಸಹ ಆರಂಭ ಮಾಡಿಲ್ಲ. ರಕ್ಷಿತ್ ಅಭಿಮಾನಿಗಳು ನೆಚ್ಚಿನ ನಟನ ಬಗ್ಗೆ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ರಕ್ಷಿತ್ ಕಾಣೆ ಆಗಿರುವ ಬಗ್ಗೆ ಮೀಮ್​​ಗಳು ಸಹ ಹರಿದಾಡುತ್ತಿರುತ್ತವೆ. ಇದೀಗ…

Read More

RailOne app : ರೈಲು ಪ್ರಯಾಣಿಕರೇ ಗಮನಿಸಿ; ಹಲವು ಆ್ಯಪ್​ಗಳ ಬದಲು ಈ ಒಂದೇ ಆ್ಯಪ್​ನಲ್ಲಿ ಸಿಗಲಿದೆ ಎಲ್ಲ ರೈಲ್ವೆ ಸೇವೆ – Kannada News | Indian Railways newly launched RailOne app for ticket booking replacing UTS

ನವದೆಹಲಿ, ಫೆಬ್ರವರಿ 14: ಪ್ರಯಾಣಿಕರು ದೀರ್ಘಕಾಲ ವೇಂಟಿಂಗ್​ನಲ್ಲಿರಬೇಕಾದ, ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆಯನ್ನು ತಪ್ಪಿಸಲು ಭಾರತೀಯ ರೈಲ್ವೆ (Indian Railways) ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಕಾಯ್ದಿರಿಸದ, ಪ್ಲಾಟ್‌ಫಾರ್ಮ್ ಮತ್ತು ಸೀಸನ್ ಟಿಕೆಟ್‌ಗಳನ್ನು ಖರೀದಿಸಲು ಅನುವು ಮಾಡಿಕೊಡಲು ಭಾರತೀಯ ರೈಲ್ವೆ ಕಾಯ್ದಿರಿಸದ ಟಿಕೆಟಿಂಗ್ ಸಿಸ್ಟಮ್ ಅಥವಾ ಯುಟಿಎಸ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈಗ ಯುಟಿಎಸ್ ಅಪ್ಲಿಕೇಶನ್ ಅನ್ನು ತೆಗೆದುಹಾಕಲಾಗುತ್ತಿದೆ. ರೈಲ್ವೆ ಇಲಾಖೆ ರೈಲ್‌ಒನ್ ಅಪ್ಲಿಕೇಶನ್ ಅನ್ನು ಪರಿಚಯಿಸುತ್ತಿದೆ. ಇದರ ಮೂಲಕ ಎಲ್ಲ…

Read More